03.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ವಿಶ್ವದ ಮಾಲೀಕರನ್ನಾಗಿ ಮಾಡುವಂತಹ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಿರಿ, ನೆನಪಿನಿಂದಲೇ ನೀವು ಸತೋಪ್ರಧಾನರಾಗುವಿರಿ”

ಪ್ರಶ್ನೆ:
ಯಾವ ಒಂದು ಮಾತಿನ ಮೇಲೆ ಪೂರ್ಣ ಗಮನ ಇದ್ದಾಗ ಬುದ್ಧಿಯ ಕಪಾಟು ತೆರೆಯುತ್ತದೆ?

ಉತ್ತರ:
ವಿದ್ಯೆಯ ಮೇಲೆ. ಸ್ವಯಂ ಭಗವಂತನೇ ಓದಿಸುತ್ತಾರೆ ಆದ್ದರಿಂದ ವಿದ್ಯಾಭ್ಯಾಸವನ್ನೆಂದೂ ತಪ್ಪಿಸಬಾರದು. ಎಲ್ಲಿಯತನಕ ಜೀವಿಸಬೇಕಾಗಿದೆಯೊ ಅಲ್ಲಿಯವರೆಗೆ ಅಮೃತವನ್ನು ಕುಡಿಯಬೇಕು. ವಿದ್ಯೆಗೆ ಗಮನ ಕೊಡಬೇಕು. ಗೈರುಹಾಜರಿಯಾಗಬಾರದು. ಎಲ್ಲಿಯಾದರೂ ಹುಡುಕಿ, ತರಿಸಿಕೊಂಡು ಮುರಳಿ ಅವಶ್ಯ ಓದಬೇಕು. ಮುರಳಿಯಲ್ಲಿ ನಿತ್ಯ ಹೊಸ ಹೊಸ ಅಂಶಗಳು ಬರುತ್ತವೆ. ಅದರಿಂದ ನಿಮ್ಮ ಬುದ್ಧಿಯ ಕಪಾಟು ತೆರೆಯುತ್ತದೆ.

ಓಂ ಶಾಂತಿ.
ಶಿವಭಗವಾನುವಾಚ ಸಾಲಿಗ್ರಾಮಗಳ ಪ್ರತಿ. ಭಗವಾನುವಾಚ ಇಡೀ ಕಲ್ಪದಲ್ಲಿ ಒಂದೇ ಬಾರಿ ನಡೆಯುತ್ತದೆ. ಇದು ನಿಮಗೆ ಮಾತ್ರ ಗೊತ್ತಿದೆ ಬೇರೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಮನುಷ್ಯರು ಈ ರಚಯಿತ ಮತ್ತು ರಚನೆಯ ಜ್ಞಾನವನ್ನು ತಿಳಿದುಕೊಂಡೇ ಇಲ್ಲ. ನೀವು ಮಕ್ಕಳಿಗೆ ತಿಳಿದಿದೆ - ಸ್ಥಾಪನೆಯಲ್ಲಿ ವಿಘ್ನಗಳಂತೂ ಬರಲೇಬೇಕು, ಇದಕ್ಕೆ ಜ್ಞಾನ ಯಜ್ಞ ವೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಹಳೆಯ ಪ್ರಪಂಚದಲ್ಲಿ ನೀವು ಯಾವುದೆಲ್ಲವನ್ನೂ ನೋಡುತ್ತೀರಿ ಅದೆಲ್ಲವೂ ಸ್ವಾಹಾ ಆಗಬೇಕಾಗಿದೆ, ಅಂದ ಮೇಲೆ ಅದರಲ್ಲಿ ಮಮತ್ವವನ್ನಿಡಬಾರದು. ತಂದೆಯು ಬಂದು ಹೊಸ ಪ್ರಪಂಚಕ್ಕಾಗಿಯೇ ಓದಿಸುತ್ತಾರೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ. ಇದು ವಿಕಾರಿ ಮತ್ತು ನಿರ್ವಿಕಾರಿಯ ಸಂಗಮ, ಈಗಲೇ ಪರಿವರ್ತನೆ ಆಗಬೇಕಾಗಿದೆ. ಹೊಸ ಪ್ರಪಂಚಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳುತ್ತಾರೆ ಆಗ ಆದಿ ಸನಾತನ ದೇವಿ ದೇವತಾ ಧರ್ಮವೇ ಇತ್ತು. ಇದಂತೂ ಮಕ್ಕಳಿಗೆ ಗೊತ್ತಿದೆ, ಈ ಅಂಶಗಳು ತಿಳಿದುಕೊಳ್ಳುವಂತಹದಾಗಿದೆ. ತಂದೆಯು ಹಗಲು ರಾತ್ರಿ ಹೇಳುತ್ತಿರುತ್ತಾರೆ- ಮಕ್ಕಳೇ, ನಿಮಗೆ ಗುಹ್ಯಾತಿ ಗುಹ್ಯ ಮಾತುಗಳನ್ನು ತಿಳಿಸುತ್ತೇನೆ. ಎಲ್ಲಿಯವರೆಗೆ ತಂದೆ ಇರುವರೋ ಅಲ್ಲಿಯವರೆಗೆ ವಿದ್ಯಾಭ್ಯಾಸವು ನಡೆಯಲೇಬೇಕಾಗಿದೆ. ಆನಂತರ ವಿದ್ಯೆಯೂ ನಿಂತು ಹೋಗುತ್ತದೆ. ಈ ಮಾತುಗಳನ್ನು ನಿಮ್ಮ ವಿನಃ ಯಾರೂ ಅರಿತುಕೊಂಡಿಲ್ಲ. ನಿಮ್ಮಲ್ಲಿಯೂ ಸಹ ನಂಬರವಾರ್ ಇದ್ದಾರೆ. ಇದು ಬಾಪ್ದಾದಾರವರಿಗೆ ತಿಳಿದಿದೆ- ಎಷ್ಟೊಂದು ಜನರು ಬೀಳುತ್ತಾರೆ. ಎಷ್ಟು ಶ್ರಮವಾಗುತ್ತದೆ. ಎಲ್ಲರೂ ಸದಾ ಪವಿತ್ರರಾಗಿರುತ್ತಾರೆ ಎಂದಲ್ಲ, ಪವಿತ್ರರಾಗಿರದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಮಾಲೆಯ ಮಣಿಗಳೇ ಪಾಸ್ ವಿಥ್ ಆನರ್ ಆಗುತ್ತಾರೆ ಮತ್ತೆ ಪ್ರಜೆಗಳೂ ಆಗುತ್ತಾರೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ನೀವು ಯಾರಿಗೇ ತಿಳಿಸಿದರೂ ಅವರು ತಿಳಿದುಕೊಳ್ಳುತ್ತಾರೆನು? ಸಮಯ ಹಿಡಿಸುತ್ತದೆ. ಅದರಲ್ಲಿಯೂ ಎಷ್ಟು ತಂದೆಯು ತಿಳಿಸುತ್ತಾರೆಯೋ ಅಷ್ಟು ನೀವು ತಿಳಿಸುವುದಿಲ್ಲ. ಇಂಥಹವರು ವಿಕಾರದಲ್ಲಿ ಹೋದರು, ಇದಾಯಿತು ಎಂದು ಯಾವ ವರದಿಗಳು ಬರುತ್ತವೆಯೋ ಅದು ತಂದೆಗೆ ಗೊತ್ತಿದೆ. ಹೆಸರನ್ನು ತಿಳಿಸುವುದಿಲ್ಲ, ಹೆಸರು ಹೇಳಿದರೆ ಅವರೊಂದಿಗೆ ಯಾರೂ ಮಾತನಾಡಲು ಇಚ್ಛಿಸುವುದಿಲ್ಲ. ಎಲ್ಲರೂ ತಿರಸ್ಕಾರದ ದೃಷ್ಟಿಯಿಂದ ನೋಡುತ್ತಾರೆ. ಮಾಡಿದ ಸಂಪಾದನೆಯಲ್ಲವೂ ಸಮಾಪ್ತಿ ಆಗುತ್ತದೆ. ಯಾರು ಪೆಟ್ಟು ತಿಂದರೋ ಅವರಿಗೆ ಗೊತ್ತು, ಅಥವಾ ತಂದೆಗೆ ಗೊತ್ತಿದೆ. ಇವು ಬಹಳ ಗುಪ್ತ ಮಾತುಗಳಾಗಿವೆ.

ಬಾಬಾ, ಇಂಥವರು ಸಿಕ್ಕಿದರು ಅವರಿಗೆ ಬಹಳ ಚೆನ್ನಾಗಿ ತಿಳಿಸಿದೆವು ಅವರು ಸೇವೆಯಲ್ಲಿ ಸಹಯೋಗ ನೀಡುವಂತಹವರಾಗಿದ್ದಾರೆ ಎಂದು ನೀವು ಹೇಳುತ್ತೀರಿ ಆದರೆ ಅದು ಸನ್ಮುಖದಲ್ಲಿದ್ದಾಗ ಮಾತ್ರ. ತಿಳಿದುಕೊಳ್ಳಿ, ರಾಜ್ಯಪಾಲರಿಗೆ ನೀವು ಚೆನ್ನಾಗಿ ತಿಳಿಸಿಕೊಡುತ್ತೀರಿ ಆದರೆ ಅವರು ಅನ್ಯರಿಗೆ ತಿಳಿಸಿಕೊಡುತ್ತಾರೆಯೇ! ಯಾರಿಗಾದರೂ ತಿಳಿಸಿದರೆ ಒಪ್ಪುವುದಿಲ್ಲ. ಯಾರು ತಿಳಿದುಕೊಳ್ಳಬೇಕೊ ಅವರೇ ತಿಳಿದುಕೊಳ್ಳುತ್ತಾರೆ. ಅನ್ಯರಿಗೆ ತಿಳಿಸುತ್ತಾರೆಯೇ! ನೀವು ಮಕ್ಕಳು ತಿಳಿಸುತ್ತೀರಿ – ಇದಂತೂ ಮುಳ್ಳಿನ ಕಾಡಾಗಿದೆ, ನಾವಿದನ್ನು ಮಂಗಳ (ಹೂದೋಟ)ವನ್ನಾಗಿ ಮಾಡುತ್ತೇವೆ. ಮಂಗಳಂ ಭಗವಾನ್ ವಿಷ್ಣು ಎಂದು ಹೇಳುತ್ತಾರಲ್ಲವೆ. ಇವು ಭಕ್ತಿ ಮಾರ್ಗದ ಶ್ಲೋಕಗಳಾಗಿವೆ. ವಿಷ್ಣುವಿನ ರಾಜ್ಯವಿರುವಾಗ ಮಂಗಳವಾಗಿರುತ್ತದೆ. ವಿಷ್ಣು ಅವತರಣೆಯನ್ನು ತೋರಿಸುತ್ತಾರೆ. ಬಾಬಾರವರು ಎಲ್ಲವನ್ನೂ ನೋಡಿದ್ದಾರೆ. ಅನುಭವವಿದೆಯಲ್ಲವೆ! ಎಲ್ಲ ಧರ್ಮದವರನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ತಂದೆಯು ಯಾವ ತನುವಿನಲ್ಲಿ ಬರುತ್ತಾರೆ ಅವರ ವ್ಯಕ್ತಿತ್ವವು ಬೇಕಲ್ಲವೆ ಆದ್ದರಿಂದ ಹೇಳುತ್ತಾರೆ - ನಾನು ಬಹಳ ಜನ್ಮಗಳ ಅಂತಿಮದಲ್ಲಿ, ಇಲ್ಲಿನ ಅನುಭವ ಬಹಳ ಇರುತ್ತದೊ ಆಗ ನಾನು ಪ್ರವೇಶ ಮಾಡುತ್ತೇನೆ. ಅದೂ ಸಾಧಾರಣ ಮಾನವನಲ್ಲಿ, ವ್ಯಕ್ತಿತ್ವದ ಅರ್ಥ ಅವರು ರಾಜ-ಮಹಾರಾಜರಾಗಿರಬೇಕೆಂದಲ್ಲ, ಇವರಿಗಂತೂ ಬಹಳ ಅನುಭವವಿದೆ. ಬಹಳ ಜನ್ಮಗಳ ಅಂತಿಮದಲ್ಲಿ ಇವರ ರಥದಲ್ಲಿ ಬರುತ್ತೇನೆ.

ನೀವು ತಿಳಿಸಬೇಕು, ಈ ರಾಜಧಾನಿಯು ಸ್ಥಾಪನೆಯಾಗುತ್ತದೆ, ಮಾಲೆಯಾಗುತ್ತದೆ. ಈ ರಾಜಧಾನಿಯು ಹೇಗೆ ಸ್ಥಾಪನೆಯಾಗುತ್ತಿದೆ, ಯಾರು ರಾಜ ರಾಣಿ, ಯಾರು ಏನಾಗುತ್ತಾರೆ, ಇವೆಲ್ಲ ಮಾತುಗಳನ್ನು ಒಂದೇ ದಿನದಲ್ಲಿ ಯಾರೂ ತಿಳಿದುಕೊಳ್ಳಲುಸಾಧ್ಯವಿಲ್ಲ. ಬೇಹದ್ದಿನ ತಂದೆಯೇ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಭಗವಂತನೇ ಬಂದು ತಿಳಿಸುತ್ತಾರೆ. ಆದರೂ ಸಹ ಕೆಲವರೇ ವಿರಳವಾಗಿ ಪವಿತ್ರರಾಗಿರುತ್ತಾರೆ. ಇದನ್ನೂ ಸಹ ತಿಳಿದುಕೊಳ್ಳುವುದರಲ್ಲಿ ಸಮಯ ಬೇಕು, ಎಷ್ಟೊಂದು ಶಿಕ್ಷೆಗಳನ್ನು ಅನುಭವಿಸುತ್ತಾರೆ, ಶಿಕ್ಷೆಗಳನ್ನು ಅನುಭವಿಸಿಯೂ ಪ್ರಜೆಗಳಾಗುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಬಹಳ ಬಹಳ ಅನುಭವಿಗಳಾಗಬೇಕು, ಯಾರಿಗೂ ದುಃಖ ಕೊಡಬಾರದು. ತಂದೆಯು ಎಲ್ಲರಿಗೂ ಸುಖದ ಮಾರ್ಗ ತಿಳಿಸಲು, ದುಃಖದಿಂದ ಮುಕ್ತರನ್ನಾಗಿ ಮಾಡುವ ಸಲುವಾಗಿಯೇ ಬರುತ್ತಾರೆ ಅಂದ ಮೇಲೆ ನೀವು ಅನ್ಯರಿಗೆ ಹೇಗೆ ದುಃಖ ಕೊಡುತ್ತೀರಿ? ಇವೆಲ್ಲ ಮಾತುಗಳು ನೀವು ಮಕ್ಕಳಿಗೆ ಗೊತ್ತಿದೆ. ಹೊರಗಿನವರಂತೂ ತಿಳಿದುಕೊಳ್ಳುವುದು ಬಹಳ ಕಠಿಣ.

ಯಾರೆಲ್ಲಾ ಸಂಬಂಧಿಗಳಿದ್ದಾರೆ ಅವರಿಂದ ಮಮತ್ವವನ್ನು ತೆಗೆಯಬೇಕಾಗಿದೆ. ಮನೆಯಲ್ಲಿರಬೇಕು ಆದರೆ ನಿಮಿತ್ತ ಮಾತ್ರ. ಇದಂತೂ ಬುದ್ಧಿಯಲ್ಲಿದೆ - ಇಡೀ ಪ್ರಪಂಚವು ಸಮಾಪ್ತಿಯಾಗುವುದು ಆದರೆ ಈ ವಿಚಾರವೂ ಸಹ ಯಾರಿಗೂ ಇರುವುದಿಲ್ಲ. ಯಾರು ಅನನ್ಯ ಮಕ್ಕಳಿದ್ದಾರೆ ಅವರೇ ತಿಳಿದುಕೊಳ್ಳುತ್ತಾರೆ. ಅವರೂ ಸಹ ಇನ್ನೂ ಕಲಿಯುವ ಪುರುಷಾರ್ಥ ಮಾಡುತ್ತಿರುತ್ತಾರೆ. ಅನೇಕರು ಅನುತ್ತೀರ್ಣರೂ ಆಗಿಬಿಡುತ್ತಾರೆ. ಮಾಯೆಯ ಆಟವೂ ಬಹಳ ನಡೆಯುತ್ತದೆ. ಅದೂ ಸಹ ಬಹಳ ಶಕ್ತಿಶಾಲಿಯಾಗಿದೆ. ಆದರೆ ಈ ಮಾತುಗಳನ್ನು ಅನ್ಯರಿಗೆ ತಿಳಿಸಲು ಸಾಧ್ಯವೇ! ನಿಮ್ಮ ಬಳಿ ಅನೇಕರು ಬರುತ್ತಾರೆ, ಇಲ್ಲಿ ಏನು ನಡೆಯುತ್ತದೆ ಎಂದು ತಿಳಿದುಕೊಳ್ಳಲು ಇಚ್ಛಿಸುತ್ತಾರೆ. ಇಷ್ಟೊಂದು ವರದಿಗಳು ಏಕೆ ಬರುತ್ತವೆ? ಈಗ ಇವರ ಬದಲಾವಣೆಯಾಗುತ್ತಿರುತ್ತದೆ ಅಂದ ಮೇಲೆ ಒಬ್ಬೊಬ್ಬರಿಗೂ ಕುಳಿತು ತಿಳಿಸಿಕೊಡಬೇಕಾಗುತ್ತದೆ. ಆಗ ಹೇಳುತ್ತಾರೆ - ಇದಂತೂ ಬಹಳ ಒಳ್ಳೆಯ ಸಂಸ್ಥೆಯಾಗಿದೆ. ರಾಜಧಾನಿಯ ಸ್ಥಾಪನೆಯ ಮಾತುಗಳು ಬಹಳ ಮುಖ್ಯ ಗುಹ್ಯ ಗೋಪನೀಯವಾಗಿದೆ. ಬೇಹದ್ದಿನ ತಂದೆ ಮಕ್ಕಳಿಗೆ ಸಿಕ್ಕಿದ್ದಾರೆ. ಎಂದಾಗ ಎಷ್ಟೊಂದು ಹರ್ಷಿತರಾಗಬೇಕು, ನಾವು ವಿಶ್ವದ ಮಾಲಿಕರು ದೇವತೆಗಳಾಗುತ್ತೇವೆ ಅಂದಾಗ ನಮ್ಮಲ್ಲಿ ಅವಶ್ಯ ದೈವೀ ಗುಣಗಳಿರಬೇಕು. ಗುರಿ-ಧ್ಯೇಯವಂತೂ ಸನ್ಮುಖದಲ್ಲಿ ನಿಂತಿದೆ. ಇವರು ಹೊಸ ಪ್ರಪಂಚದ ಮಾಲಿಕರಾಗಿದ್ದಾರೆ, ಇದನ್ನು ನೀವೇ ತಿಳಿದುಕೊಳ್ಳಿರಿ, ನಾವು ಓದುತ್ತೇವೆ. ಜ್ಞಾನಸಾಗರನಾದ ಬೇಹದ್ದಿನ ತಂದೆಯು ನಮ್ಮನ್ನು ಅಮರಪುರಿ ಅಥವಾ ಸ್ವರ್ಗದಲ್ಲಿ ಕರೆದುಕೊಂಡು ಹೋಗುವ ಸಲುವಾಗಿ ಓದಿಸುತ್ತಾರೆ. ನಮಗೆ ಈ ಜ್ಞಾನಸಿಗುತ್ತದೆ.ಯಾರು ಕಲ್ಪ ಕಲ್ಪ ರಾಜ್ಯ ಪಡೆದು ಕೊಂಡಿದ್ದಾರೋ ಅವರೇ ಬರುತ್ತಾರೆ. ನಾವು ಕಲ್ಪದ ಹಿಂದಿನ ತರಹ ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ಈ ಮಾಲೆಯು ನಂಬರವಾರ್ ತಯಾರ ಆಗುತ್ತಿದೆ. ಹೇಗೆ ಶಾಲೆಯಲ್ಲಿಯೂ ಸಹ ಯಾರು ಚೆನ್ನಾಗಿ ಓದುವರೋ ಅವರಿಗೆ ವಿದ್ಯಾರ್ಥಿ ವೇತನವೂ ಸಿಗುತ್ತದೆ. ಅವು ಹದ್ದಿನ ಮಾತುಗಳಾಗಿವೆ. ನಿಮಗೆ ಬೇಹದ್ದಿನ ಮಾತುಗಳು ಸಿಗುತ್ತವೆ. ನಿಮ್ಮಲ್ಲಿ ಯಾರು ತಂದೆಗೆ ಸಹಯೋಗ ಕೊಡುತ್ತೀರಿ ಅವರೇ ಶ್ರೇಷ್ಠ ಪದವಿ ಪಡೆಯುತ್ತೀರಿ. ವಾಸ್ತವದಲ್ಲಿ ಮೊದಲು ನಿಮಗೆ ನೀವು ಸಹಯೋಗಿ ಆಗಬೇಕು, ಪವಿತ್ರರಾಗಬೇಕಾಗಿದೆ. ಸತೋಪ್ರಧಾನರಾಗಿದ್ದಿರಿ, ಈಗ ಪುನಃ ಅವಶ್ಯವಾಗಿ ಸತೋಪ್ರಧಾನರಾಗಬೇಕು. ತಂದೆಯನ್ನು ನೆನಪು ಮಾಡಬೇಕು. ಏಳುತ್ತಾ, ಕೂರುತ್ತಾ ನಡೆಯುತ್ತಾ ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಬಹುದಾಗಿದೆ. ಯಾವ ತಂದೆಯು ನಮ್ಮನ್ನು ವಿಶ್ವದ ಮಾಲಿಕರನ್ನಾಗಿ ಮಾಡುತ್ತಾರೆ ಅವರನ್ನು ಬಹಳ ಪ್ರೀತಿಯಿಂದ ನೆನಪು ಮಡಬೇಕು. ಆದರೆ ಮಾಯೆಯು ವಿಕಲ್ಪಗಳು ಬರುತ್ತವೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯುದ್ಧದ ಮೈದಾನವಾಗಿದೆಯಲ್ಲವೆ. ಪಂಚ ವಿಕಾರಗಳ ಮೇಲೆ ಜಯಗಳಿಸಬೇಕು, ತಂದೆಯನ್ನು ನೆನಪು ಮಾಡುವುದರಿಂದ ನಾವು ಸತೋಪ್ರಧಾನರಾಗುತ್ತೇವೆಂದು ತಿಳಿಯುತ್ತೀರಿ. ತಂದೆಯು ಬಂದು ತಿಳಿಸುತ್ತಾರೆ, ಭಕ್ತಿಮಾರ್ಗದವರು ಏನನ್ನೂ ತಿಳಿದುಕೊಂಡಿಲ್ಲ. ಇದಂತೂ ವಿದ್ಯೆಯಾಗಿದೆ. ನೀವು ಪಾವನರು ಹೇಗಾಗುತ್ತೀರಿ! ನೀವು ಪಾವನರಾಗಿದ್ದಿರಿ, ಪುನಃ ಪಾವನರಾಗುತ್ತಿರಿ. ದೇವತೆಗಳು ಪಾವನರಲ್ಲವೆ! ಮಕ್ಕಳಿಗೆ ಗೊತ್ತಿದೆ - ನಾವು ವಿಧ್ಯಾರ್ಥಿಗಳು ಓದುತ್ತಿದ್ದೇವೆ, ಭವಿಷ್ಯದಲ್ಲಿಸೂರ್ಯ ವಂಶೀ ರಾಜ್ಯದಲ್ಲಿ ಬರುತ್ತೇವೆ ಅದಕ್ಕಾಗಿ ಬಹಳ ಒಳ್ಳೆಯ ಪುರುಷಾರ್ಥವನ್ನೇ ಮಾಡಬೇಕು. ಎಲ್ಲವೂ ಅಂಕಗಳ ಮೇಲೆ ಅವಲಂಬಿಸಿದೆ. ಯುದ್ಧದ ಮೈದಾನದಲ್ಲಿ ಅನುತ್ತೀರ್ಣರಾದರೆ ಚಂದ್ರವಂಶದಲ್ಲಿ ಹೋಗುತ್ತೀರಿ. ಅವರು ಯುದ್ಧದ ಹೆಸರನ್ನು ಕೇಳಿ ಚಂದ್ರವಂಶಿಯರಿಗೆ ಬಿಲ್ಲು ಬಾಣವನ್ನು ತೋರಿಸಿದ್ದಾರೆ. ಬಿಲ್ಲು ಬಾಣಗಳನ್ನು ಉಪಯೋಗಿಸಲು ಅಲ್ಲಿ ಬಾಹುಬಲದ ಯುದ್ಧವಿತ್ತೇನು! ಅಂಥಹ ಮಾತಿಲ್ಲ. ಮೊದಲು ಬಾಣಗಳ ಯುದ್ಧ ಬಹಳ ನಡೆಯುತ್ತಿತ್ತು. ಈ ಸಮಯದವರೆಗೂ ಸಾಕ್ಷಿಗಳಿವೆ. ಕೆಲವರು ಬಾಣವನ್ನು ಹೊಡೆಯುವುದರಲ್ಲಿ ಬಹಳ ಚತುರರಿರುತ್ತಾರೆ. ಈಗ ಈ ಜ್ಞಾನದಲ್ಲಿ ಯುದ್ಧಮೊದಲಾದುವುಗಳ ಮಾತೇ ಇಲ್ಲ. ಮಕ್ಕಳಿಗೆ ತಿಳಿದಿದೆ - ಶಿವತಂದೆಯೇ ಜ್ಞಾನಸಾಗರನಾಗಿದ್ದಾರೆ, ಅವರಿಂದ ನಾವು ಈ ಪದವಿಯನ್ನು ಪಡೆಯುತ್ತೇವೆ, ಈಗ ತಂದೆಯು ತಿಳಿಸುತ್ತಾರೆ - ದೇಹ ಸಹಿತ ದೇಹದ ಎಲ್ಲ ಸಂಬಂಧಗಳಿಂದ ಮಮತ್ವವನ್ನು ತೆಗೆಯಿರಿ. ಇದೆಲ್ಲವೂ ಹಳೆಯದಾಗಿದೆ. ಹೊಸ ಪ್ರಪಂಚವು ಸ್ವರ್ಣಿಮ ಭಾರತವಾಗಿದೆ. ಹೆಸರು ಎಷ್ಟು ಪ್ರಸಿದ್ಧವಾಗಿದ್ದು ಪ್ರಾಚೀನ ರಾಜಯೋಗವನ್ನು ಯಾರು ಮತ್ತು ಯಾವಾಗ ಕಲಿಸಿದರು? ಇದು ಯಾರಿಗೂ ತಿಳಿದಿಲ್ಲ. ಎಲ್ಲಿಯವರೆಗೆ ತಂದೆಯೇ ಬಂದು ತಿಳಿಸುವುದಿಲ್ಲವೋ ಅಲ್ಲಿಯವರೆಗೆ ತಿಳಿಯುವುದಿಲ್ಲ. ಇದು ಹೊಸ ಜ್ಞಾನವಾಗಿದ್ದು ಕಲ್ಪ ಕಲ್ಪವೂ ಏನಾಗುತ್ತಾ ಬಂದಿದೆಯೋ ಅದೇ ಪುನರಾವರ್ತನೆಯಾಗುತ್ತಾ ಇರುವುದು, ಅದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗುವುದಿಲ್ಲ. ತಂದೆಯು ತಿಳಿಸುತ್ತಾರೆ – ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಿರುವುದರಿಂದ ಮುಂದೆ 21 ಜನ್ಮಗಳು ನೀವೆಂದೂ ಅಪವಿತ್ರರಾಗುವುದಿಲ್ಲ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ ಆದರೂ ಸಹ ಎಲ್ಲರೂ ಏಕರಸವಾಗಿ ಓದುತ್ತಾರೆಯೇ! ರಾತ್ರಿ ಹಗಲಿನ ಅಂತರವಿದೆ, ಓದುವುದಕ್ಕಾಗಿ ಬರುತ್ತಾರೆ. ಸ್ವಲ್ಪ ಓದಿ ಮತ್ತೆ ಮರೆಯಾಗುತ್ತಾರೆ. ಯಾರು ಚೆನ್ನಾಗಿ ಅರಿತುಕೊಳ್ಳುತ್ತಾರೆ ಅವರು ನಾವು ಹೇಗೆ ಬಂದೆವು ಮತ್ತು ಹೇಗೆ ಪವಿತ್ರತೆಯ ಪ್ರತಿಜ್ಞೆ ಮಾಡಿದೆವು ಎಂದು ತಮ್ಮ ಅನುಭವ ಹೇಳುತ್ತಾರೆ. ತಂದೆಯು ಹೇಳುತ್ತಾರೆ - ಪವಿತ್ರತೆಯ ಪ್ರತಿಜ್ಞೆ ಮಾಡಿ ಒಂದು ಬಾರಿ ಪತಿತರಾದರೂ ಸಹ ಮಾಡಿರುವ ಸಂಪಾದನೆಯಲ್ಲವೂ ಸಮಾಪ್ತಿಯಾಗುತ್ತದೆ ಮತ್ತು ಮನಸ್ಸು ತಿನ್ನುತ್ತದೆ. ಆಗ ತಂದೆಯನ್ನು ನೆನಪು ಮಾಡಿ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಮೂಲ ಮಾತಂತೂ ವಿಕಾರದ ಬಗ್ಗೆ ಕೇಳುತ್ತಾರೆ. ನೀವು ಮಕ್ಕಳು ಈ ವಿದ್ಯೆಯನ್ನು ನಿತ್ಯವೂ ಓದಬೇಕು. ತಂದೆಯು ತಿಳಿಸುತ್ತಾರೆ- ನಾನು ನಿಮಗೆ ಹೊಸ ಹೊಸ ಮಾತುಗಳನ್ನು ತಿಳಿಸುತ್ತೇನೆ. ನೀವು ವಿದ್ಯಾರ್ಥಿಗಳಾಗಿದ್ದೀರಿ, ನಿಮಗೆ ಭಗವಂತನೇ ಓದಿಸುತ್ತಾರೆ! ನೀವು ಭಗವಂತನ ವಿದ್ಯಾರ್ಥಿಗಳಾಗಿದ್ದೀರಿ. ಅಂದ ಮೇಲೆ ಇಂತಹ ಸರ್ವ ಶ್ರೇಷ್ಠ ವಿದ್ಯೆಯನ್ನು ಒದು ದಿನವೂ ತಪ್ಪಿಸಬಾರದು. ಒಂದು ದಿನ ಮುರಳಿ ಕೇಳದಿದ್ದರೂ ಸಹ ಗೈರುಹಾಜರಿಯಾಗಿಬಿಡುತ್ತದೆ, ಒಳ್ಳೆ ಒಳ್ಳೆ ಮಹಾರಥಿಗಳೂ ಮುರಳಿ ತಪ್ಪಿಸಿಕೊಂಡುಬಿಡುತ್ತಾರೆ, ಅವರು ಅಂದು ಕೊಳ್ಳುತ್ತಾರೆ ನಾವಂತೂ ಎಲ್ಲವನ್ನೂ ತಿಳಿದುಕೊಂಡಿದ್ದೇವೆ, ಮುರಳೀಯನ್ನು ಓದಲಿಲ್ಲವೆಂದರೆ ಏನೀಗ? ಅರೆ ಗೈರುಹಾಜರಾಗುತ್ತದೆ ಅನುತ್ತೀರ್ಣರಾಗಿಬಿಡುತ್ತಾರೆ. ಸ್ವಯಂ ತಂದೆಯೇ ಹೇಳುತ್ತಾರೆ - ನಾನು ಪ್ರತಿನಿತ್ಯವೂ ಇಂತಹ ಒಳ್ಳೊಳ್ಳೆಯ ಅಂಶಗಳನ್ನು ತಿಳಿಸುತ್ತೇನೆ, ಅವು ಸಮಯದಲ್ಲಿ ತಿಳಿಸುವುದರಿಂದ ಬಹಳ ಉಪಯೋಗವಾಗುತ್ತವೆ. ಒಂದು ವೇಳೆ ಮುರಳಿಯನ್ನೇ ಕೇಳದಿದ್ದರೆ ಮತ್ತೆ ಹೇಗೆ ಉಪಯೋಗವಾಗುತ್ತದೆ! ಎಲ್ಲಿಯವರೆಗೆ ಜೀವಿಸಿರುತ್ತೀರಿ ಅಲ್ಲಿಯವರೆಗೆ ಅಮೃತವನ್ನು ಕುಡಿಯಬೆಕು, ಶಿಕ್ಷಣವನ್ನು ಧಾರಣೆ ಮಾಡಬೇಕು. ಎಂದೂ ಗೈರುಹಾಜರಿಯಾಗಬಾರದು. ಎಲ್ಲಿಂದಲಾದರೂ ಮುರಳಿಯನ್ನು ತರಿಸಿಕೊಂಡು, ಇಲ್ಲವೇ ಹುಡುಕಿಕೊಂಡು ಓದಲೇಬೇಕು. ಇದರಲ್ಲಿ ತನ್ನ ಅಭಿಮಾನವಿರಬಾರದು. ಅರೆ! ಭಗವಂತ ತಂದೆಯು ಓದಿಸುತ್ತಾರೆ, ಅಂದಾಗ ಇದರಲ್ಲಿ ಒಂದು ದಿನವೂ ತಪ್ಪಿಸಬಾರದು. ಮುರಳಿಯಲ್ಲಿ ಇಂತಿಂತಹ ಅಂಶಗಳು ಬರುತ್ತವೆ, ಅದರಿಂದ ನಿಮ್ಮ ಅಥವಾ ಯಾರದೇ ಬುದ್ಧಿಯ ಕಪಾಟು ತೆರೆಯಬಹುದು. ಆತ್ಮ ಎಂದರೆ ಏನು? ಪರಮಾತ್ಮ ಯಾರು? ಹೇಗೆ ಪಾತ್ರ ನಡೆಯುತ್ತದೆ? ಇದನ್ನು ತಿಳಿದುಕೊಳ್ಳುವುದರಲ್ಲಿ ಸಮಯ ಬೇಕು. ಅಂತಿಮದಲ್ಲಿ ಕೇವಲ ನೆನಪಿರುತ್ತದೆ - ತಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡಿರಿ. ಆದರೆ ಈಗ ತಮ್ಮನ್ನು ಆತ್ಮ ಎಂದು ತಿಳಿಯಿರಿ ಎಂದು ಪದೇ ಪದೇ ಹೇಳಬೇಕಾಗುತ್ತದೆ. ಅಂತ್ಯದಲ್ಲಿ ಇದೇ ಸ್ಥಿತಿಯಲ್ಲಿರುತ್ತೀರಿ. ತಂದೆಯನ್ನು ನೆನಪು ಮಾಡುತ್ತಾ ಮಾಡುತ್ತಾ ಹೊರಟುಹೋಗಬೇಕು ನೆನಪಿನಿಂದಲೇ ನೀವು ಪವಿತ್ರರಾಗುತ್ತೀರಿ. ಎಷ್ಟು ಪವಿತ್ರರಾಗಿದ್ದಿರಿ ಎಂದು ನೀವೇ ತಿಳಿದುಕೊಳ್ಳಬಹುದು. ಅಪವಿತ್ರರಿಗೆ ಅವಶ್ಯವಾಗಿ ಕಡಿಮೆ ಬಲ ಸಿಗುತ್ತದೆ. ಮುಖ್ಯವಾಗಿ 8 ರತ್ನಗಳೇ ಪಾಸ್ ವಿಥ್ ಆನರ್ ಆಗುತ್ತಾರೆ. ಅವರು ಒಂದು ಸ್ವಲ್ಪವೂ ಶಿಕ್ಷೆಯನ್ನು ಅನುಭವಿಸುವುದಿಲ್ಲ. ಇವು ಬಹಳ ಸೂಕ್ಷ್ಮವಾದ ಮಾತುಗಳಾಗಿವೆ ಎಷ್ಟು ಶ್ರೇಷ್ಠ ವಿದ್ಯೆಯಾಗಿದೆ, ನಾವು ದೇವತೆಗಳಾಗಬಹುದು ಎಂದು ಸ್ವಪ್ನದಲ್ಲಿಯೂ ಇರಲಿಲ್ಲ. ತಂದೆಯನ್ನು ನೆನಪು ಮಾಡುವುದರಿಂದಲೇ ನೀವು ಪದ್ಮಾ ಪದ್ಮ ಭಾಗ್ಯಶಾಲಿಗಳಾಗುತ್ತಿರಿ. ಇದರ ಮುಂದೆ ಆ ವ್ಯಾಪಾರ ವ್ಯವಹಾರ ಮುಂತಾದುವು ಯಾವ ಕೆಲಸಕ್ಕು ಬರುವುದಿಲ್ಲ. ಆದರೂ ಸಹ ಎಲ್ಲವನ್ನೂ ಮಾಡಲೇ ಬೇಕಾಗುತ್ತದೆ. ನಾವು ಶಿವ ತಂದೆಗೆ ಕೊಡುತ್ತೇವೆ ಎನ್ನುವ ಸಂಕಲ್ಪವೂ ಬರಬಾರದು ಏಕೆಂದರೆ ನೀವು ಪದ್ಮಾ ಪದ್ಮಪತಿಗಳಾಗುತ್ತೀರಿ. ಕೊಡುತ್ತೇವೆನ್ನುವ ಸಂಕಲ್ಪ ಬಂದರೆ ಶಕ್ತಿ ಕಡಿಮೆ ಆಗುತ್ತದೆ. ಮನುಷ್ಯರು ಈಶ್ವರಾರ್ಥವಾಗಿ ದಾನ ಪುಣ್ಯ ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಪಡೆಯುವುದಕ್ಕೋಸ್ಕರ. ಅಂದ ಮೇಲೆ ಅದು ಕೊಟ್ಟಂತಾಯಿತೆ! ಭಗವಂತನು ದಾತಾ ಆಗಿದ್ದಾರಲ್ಲವೆ! ಈ ಜನ್ಮದ ದಾನ ಪುಣ್ಯದಿಂದ ಇನ್ನೊಂದು ಜನ್ಮದಲ್ಲಿ ಎಷ್ಟೊಂದು ಕೊಡುತ್ತಾರೆ. ಇದೂ ನಾಟಕದಲ್ಲಿ ನಿಗದಿಯಾಗಿದೆ, ಭಕ್ತಿಮಾರ್ಗದಲ್ಲಿ ಅಲ್ಪಕಾಲದ ಸುಖವಿದೆ, ನೀವು ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು ಪಡೆಯುತ್ತೀರಿ. ಒಳ್ಲೆಯದು

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಜೀವಿಸುವವರಿಗೆ ಅಮೃತವನ್ನು ಕುಡಿಯಬೇಕಾಗಿದೆ, ಶಿಕ್ಷಣವನ್ನು ಧಾರಣೆ ಮಾಡಬೇಕು, ಭಗವಂತನೇ ಓದಿಸುತ್ತಾರೆ ಆದ್ದರಿಂದ ಒಂದು ದಿನವೂ ಮುರಳಿಯನ್ನು ತಪ್ಪಿಸಬಾರದು.

2. ಪದ್ಮಗಳ ಸಂಪಾದನೆಯನ್ನು ಜಮಾ ಮಾಡಿಕೊಳ್ಳಲು ನಿಮಿತ್ತ ಮಾತ್ರವಾಗಿ ಮನೆಯಲ್ಲಿರುತ್ತಾ, ಕೆಲಸ ಕಾರ್ಯಗಳನ್ನು ಮಾಡುತ್ತಾ ಒಬ್ಬ ತಂದೆಯ ನೆನಪಿನಲ್ಲಿರಬೇಕು.

ವರದಾನ:
ಪ್ರಸನ್ನತೆಯ ಆತ್ಮಿಕ ಘನತೆಯ ಮೂಲಕ ಸರ್ವರನ್ನೂ ಅಧಿಕಾರಿಯನ್ನಾಗಿ ಮಾಡುವಂತಹ ಗಾಯನ ಮತ್ತು ಪೂಜೆಗೆ ಯೋಗ್ಯ ಭವ

ಯಾರು ಸರ್ವರ ಸಂತುಷ್ಟತೆಯ ಸರ್ಟಿಫಿಕೇಟ್ನ್ನು ತೆಗೆದುಕೊಳ್ಳುತ್ತಾರೆಯೋ ಅವರು ಸದಾ ಪ್ರಸನ್ನವಾಗಿರುತ್ತಾರೆ ಮತ್ತು ಇದೇ ಪ್ರಸನ್ನತೆಯ ಆತ್ಮಿಕ ಘನತೆಯ ಕಾರಣದಿಂದ ಹೆಸರುವಾಸಿ ಅಂದರೆ ಗಾಯನ ಮತ್ತು ಪೂಜೆಗೆ ಯೋಗ್ಯರಾಗಿಬಿಡುತ್ತಾರೆ. ತಾವು ಶುಭಚಿಂತಕ, ಪ್ರಸನ್ನಚಿತ್ತರಾಗಿರುವಂತಹ ಆತ್ಮರ ಮೂಲಕ ಯಾವ ಸರ್ವರ ಖುಷಿಯ, ಆಶ್ರಯದ, ಸಾಹಸದ ರೆಕ್ಕೆಯ, ಉಮ್ಮಂಗ-ಉತ್ಸಾಹದ ಪ್ರಾಪ್ತಿಯಾಗುತ್ತದೆ- ಈ ಪ್ರಾಪ್ತಿಯು ಕೆಲವರನ್ನು ಅಧಿಕಾರಿಯನ್ನಾಗಿ ಮಾಡಿಬಿಡುತ್ತದೆ, ಕೆಲವರು ಭಕ್ತರಾಗಿಬಿಡುತ್ತಾರೆ.

ಸ್ಲೋಗನ್:
ತಂದೆಯಿಂದ ವರದಾನವನ್ನು ಪ್ರಾಪ್ತಿ ಮಾಡಿಕೊಳ್ಳುವ ಸಹಜ ಸಾಧನವಾಗಿದೆ- ಹೃದಯದ ಸ್ನೇಹ.