03.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಕಳಂಗೀಧರರಾಗಲು ತಮ್ಮ ಸ್ಥಿತಿಯನ್ನು ಅಚಲ, ಅಡೋಲ ಮಾಡಿಕೊಳ್ಳಿ, ಎಷ್ಟು ನಿಮ್ಮ ಮೇಲೆ ಕಳಂಕ ಬರುವುದೋ ಅಷ್ಟು ನೀವು ಕಳಂಗೀಧರರಾಗುತ್ತೀರಿ”

ಪ್ರಶ್ನೆ:
ತಂದೆಯ ಆಜ್ಞೆಯೇನಾಗಿದೆ? ಯಾವ ಮುಖ್ಯ ಆಜ್ಞೆಯಂತೆ ನಡೆಯುವ ಮಕ್ಕಳು ಹೃದಯ ಸಿಂಹಾಸನಾಧಿಕಾರಿ ಆಗುತ್ತಾರೆ?

ಉತ್ತರ:
ತಂದೆಯ ಆಜ್ಞೆಯಾಗಿದೆ- ಮಧುರ ಮಕ್ಕಳೇ, ನೀವು ಯಾರೊಂದಿಗೂ ಕಿರಿಕಿರಿ ಮಾಡಬಾರದು. ಶಾಂತಿಯಲ್ಲಿರಬೇಕು, ಒಂದುವೇಳೆ ಯಾರಿಗಾದರೂ ನಿಮ್ಮ ಮಾತು ಇಷ್ಟವಾಗದಿದ್ದರೆ ನೀವು ಮೌನವಾಗಿರಿ, ಪರಸ್ಪರ ತೊಂದರೆ ಕೊಡಬೇಡಿ. ಯಾವಾಗ ನಿಮ್ಮಲ್ಲಿ ಯಾವುದೇ ಭೂತವಿರುವುದಿಲ್ಲವೋ, ಮುಖದಿಂದ ಕಠಿಣಮಾತುಗಳು ಬರುವುದಿಲ್ಲವೋ, ಮಧುರವಾಗಿ ಮಾತನಾಡುವುದು ಜೀವನದ ಧಾರಣೆಯಾಗುವುದೋ, ಆಗ ಬಾಪ್ದಾದಾರವರ ಹೃದಯ ಸಿಂಹಾಸನಾಧಿಕಾರಿ ಆಗುತ್ತೀರಿ.

ಓಂ ಶಾಂತಿ.
ಭಗವಾನುವಾಚ, ಆತ್ಮಾಭಿಮಾನಿಭವ- ಮೊಟ್ಟಮೊದಲು ಇದನ್ನು ಅವಶ್ಯವಾಗಿ ತಿಳಿಸಬೇಕು. ಇದು ಮಕ್ಕಳಿಗಾಗಿ ಎಚ್ಚರಿಕೆಯಾಗಿದೆ. ತಂದೆಯು ತಿಳಿಸುತ್ತಾರೆ- ನಾನು ಮಕ್ಕಳೇ, ಮಕ್ಕಳೇ ಎಂದರೆ ಆತ್ಮಗಳನ್ನೇ ನೋಡುತ್ತೇನೆ. ಈ ಶರೀರವು ಹಳೆಯ ಪಾದರಕ್ಷೆಯ ಸಮಾನವಾಗಿದೆ, ಇದು ಸತೋಪ್ರಧಾನವಾಗಲು ಸಾಧ್ಯವಿಲ್ಲ. ಸತೋಪ್ರಧಾನ ಶರೀರವು ಸತ್ಯಯುಗದಲ್ಲಿಯೇ ಸಿಗುವುದು, ಈಗ ನಿಮ್ಮ ಆತ್ಮವು ಸತೋಪ್ರಧಾನವಾಗುತ್ತಾ ಇದೆ. ಶರೀರವು ಹಳೆಯದಾಗಿದೆ, ಈಗ ನೀವು ಆತ್ಮವನ್ನು ಸುಧಾರಣೆ ಮಾಡಿಕೊಳ್ಳಬೇಕಾಗಿದೆ, ಪವಿತ್ರವಾಗಬೇಕಾಗಿದೆ. ಸತ್ಯಯುಗದಲ್ಲಿ ಪವಿತ್ರ ಶರೀರವು ಸಿಗುವುದು, ಆತ್ಮವನ್ನು ಶುದ್ಧ ಮಾಡಿಕೊಳ್ಳಲು ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗುತ್ತದೆ. ತಂದೆಯೂ ಸಹ ಆತ್ಮವನ್ನೇ ನೋಡುತ್ತಾರೆ. ಕೇವಲ ನೋಡುವುದರಿಂದ ಆತ್ಮವು ಶುದ್ಧವಾಗುವುದಿಲ್ಲ. ಎಷ್ಟು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ಶುದ್ಧವಾಗುತ್ತಾ ಹೋಗುತ್ತದೆ. ಇದಂತೂ ನಿಮ್ಮ ಕೆಲಸವಾಗಿದೆ, ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಸತೋಪ್ರಧಾನವಾಗಬೇಕಾಗಿದೆ. ತಂದೆಯು ಬಂದಿರುವುದೇ ಮಾರ್ಗವನ್ನು ತಿಳಿಸುವುದಕ್ಕಾಗಿ. ಈ ಶರೀರವಂತೂ ಅಂತ್ಯದವರೆಗೂ ಹಳೆಯದಾಗಿಯೇ ಇರುವುದು. ಇವಂತೂ ಕೇವಲ ಕರ್ಮೇಂದ್ರಿಯಗಳಾಗಿವೆ, ಇದರೊಂದಿಗೆ ಆತ್ಮದ ಸಂಬಂಧವಿದೆ, ಆತ್ಮವು ಹೂವಿನ ಸಮಾನವಾಗುತ್ತದೆ ಎಂದರೆ ಕರ್ತವ್ಯವನ್ನು ಚೆನ್ನಾಗಿಯೇ ಮಾಡುತ್ತದೆ. ಸತ್ಯಯುಗದಲ್ಲಿ ಪ್ರಾಣಿ, ಪಕ್ಷಿಗಳೂ ಸಹ ಬಹಳ ಚೆನ್ನಾಗಿರುತ್ತವೆ. ಹೇಗೆ ಇಲ್ಲಿ ಪಕ್ಷಿಗಳು ಮನುಷ್ಯರನ್ನು ನೋಡಿ ಓಡಿಹೋಗುತ್ತವೆ ಆದರೆ ಅಲ್ಲಂತೂ ಇಂತಹ ಒಳ್ಳೆಯ ಪಕ್ಷಿಗಳು ನಿಮ್ಮ ಹಿಂದೆ-ಮುಂದೆ ಓಡಾಡುತ್ತಿರುತ್ತವೆ, ಅದೂ ನಿಯಮದನುಸಾರವಾಗಿದೆ. ಹಾಗೆಂದು ಹೇಳಿ ಮನೆಯೊಳಗೆ ನುಗ್ಗಿ ಕೊಳಕು ಮಾಡಿಹೋಗುವುದಿಲ್ಲ. ಸತ್ಯಯುಗವು ಬಹಳ ನಿಯಮಬದ್ಧವಾಗಿರುತ್ತದೆ. ಮುಂದೆಹೋದಂತೆ ನಿಮಗೆ ಎಲ್ಲಾ ಸಾಕ್ಷಾತ್ಕಾರವಾಗುತ್ತಾ ಇರುತ್ತದೆ. ಇನ್ನು ಬಹಳಷ್ಟು ಅವಕಾಶವಿದೆ, ಸ್ವರ್ಗದ ಮಹಿಮೆಯು ಅಪರಮಪಾರವಾಗಿದೆ. ತಂದೆಯ ಮಹಿಮೆಯೂ ಅಪರಮಪಾರವಾಗಿದೆ. ಹಾಗೆಯೇ ತಂದೆಯ ಆಸ್ತಿಯ ಮಹಿಮೆಯೂ ಸಹಾ ಅಪರಮಪಾರವಾಗಿದೆ ಮಕ್ಕಳಿಗೆ ಎಷ್ಟೊಂದು ನಶೆಯೇರಬೇಕು. ತಂದೆಯು ತಿಳಿಸುತ್ತಾರೆ- ನಾನು ಅಂತಹ ಆತ್ಮರನ್ನು ನೆನಪು ಮಾಡುತ್ತೇನೆ ಯಾರು ಸೇವೆ ಮಾಡುತ್ತಾರೆಯೋ ಅವರು ತಾನಾಗಿಯೇ ನೆನಪಿಗೆ ಬರುತ್ತಾರೆ. ಆತ್ಮದಲ್ಲಿ ಮನಸ್ಸು-ಬುದ್ಧಿಯಿದೆಯಲ್ಲವೆ. ನಾವು ನಂಬರ್ವನ್ ಸರ್ವೀಸ್ ಮಾಡುತ್ತೇವೆಯೇ ಅಥವಾ ಎರಡನೆಯ ನಂಬರಿನ ಸರ್ವೀಸ್ ಮಾಡುತ್ತೇವೆಂದು ತಿಳಿಯುತ್ತಾರೆ. ಇದೆಲ್ಲವನ್ನೂ ನಂಬರ್ವಾರಾಗಿ ತಿಳಿದುಕೊಳ್ಳುತ್ತಾರೆ. ಕೆಲವರು ಮ್ಯೂಸಿಯಮ್ ಮಾಡುತ್ತಾರೆ, ರಾಷ್ಟ್ರಪತಿ, ರಾಜ್ಯಪಾಲರು ಮುಂತಾದವರ ಬಳಿ ಹೋಗುತ್ತಾರೆ. ಅವಶ್ಯವಾಗಿ ಚೆನ್ನಾಗಿಯೇ ತಿಳಿಸಬಹುದು. ಎಲ್ಲರಲ್ಲಿಯೂ ತಮ್ಮ-ತಮ್ಮ ಗುಣಗಳಿವೆ. ಯಾರಲ್ಲಾದರೂ ಒಳ್ಳೆಯ ಗುಣಗಳಿದ್ದರೆ ಇವರು ಎಷ್ಟು ಗುಣವಂತರಾಗಿದ್ದಾರೆಂದು ಹೇಳುತ್ತಾರೆ. ಯಾರು ಸೇವಾಧಾರಿ ಆಗಿರುತ್ತಾರೆಯೋ ಅವರು ಸದಾ ಮಧುರವಾಗಿ ಮಾತನಾಡುತ್ತಾರೆ, ಎಂದೂ ಕಠಿಣ ಮಾತುಗಳನ್ನು ಮಾತನಾಡುವುದಿಲ್ಲ. ಕಠಿಣವಾಗಿ ಮಾತನಾಡುವವರಲ್ಲಿ ಭೂತವಿರುತ್ತದೆ. ದೇಹಾಭಿಮಾನವು ಮೊದಲನೆಯದಾಗಿದೆ ಅದರ ನಂತರ ಮತ್ತೆಲ್ಲಾ ಭೂತಗಳು ಪ್ರವೇಶ ಮಾಡುತ್ತದೆ.

ಮನುಷ್ಯರು ಬಹಳ ಚಾರಿತ್ರ್ಯಹೀನರಾಗಿ ನಡೆಯುತ್ತಾರೆ. ತಂದೆಯು ತಿಳಿಸುತ್ತಾರೆ- ಪಾಪ! ಇವರದೇನು ದೋಷವಿಲ್ಲ. ಕಲ್ಪದ ಹಿಂದೆ ಯಾವ ಪರಿಶ್ರಮಪಟ್ಟಿದ್ದೀರೋ ಅಂತಹದ್ದನ್ನೇ ಪಡಬೇಕು. ತಮ್ಮನ್ನು ಆತ್ಮವೆಂದು ತಿಳಿದು ತಂದೆಅನ್ನು ನೆನಪು ಮಾಡಿ ನಂತರ ನಿಧಾನ-ನಿಧಾನವಾಗಿ ಇಡೀ ವಿಶ್ವದ ಅಧಿಕಾರವು ನಿಮ್ಮ ಕೈಯಲ್ಲಿ ಬರುವುದಿದೆ. ಇದು ನಾಟಕದ ಚಕ್ರವಾಗಿದೆ, ತಂದೆಯು ಸಮಯವನ್ನೂ ಸಹ ಸರಿಯಾಗಿ ತಿಳಿಸುತ್ತಾರೆ. ಇನ್ನು ಸ್ವಲ್ಪವೇ ಸಮಯ ಉಳಿದಿದೆ. ಅವರು ಪರಸ್ಪರ ಸ್ವಾತಂತ್ರ್ಯವನ್ನು ಕೊಡುತ್ತಾ ಮಧ್ಯಪ್ರವೇಶ ಮಾಡಿ ಪರಸ್ಪರ ಹೊಡೆದಾಡುತ್ತಿರಲೆಂದು ಎರಡು ಭಾಗಗಳಾಗಿ ಮಾಡಿಬಿಡುತ್ತಾರೆ. ಇಲ್ಲವೆಂದರೆ ಅವರ ಸಿಡಿಮದ್ದುಗಳನ್ನು ಯಾರು ತೆಗೆದುಕೊಳ್ಳುತ್ತಾರೆ! ಇದೂ ಸಹ ಅವರ ವ್ಯಾಪಾರವಾಗಿದೆಯಲ್ಲವೆ. ನಾಟಕದನುಸಾರ ಇದೂ ಸಹ ಅವರ ಬುದ್ಧಿವಂತಿಕೆಯಾಗಿದೆ. ಇಲ್ಲಿಯೂ ಸಹ ತುಂಡು-ತುಂಡು ಮಾಡಿಕೊಟ್ಟಿದ್ದಾರೆ. ಈ ಭಾಗವು ನಮಗೆ ಸಿಗಲೆಂದು ಹೇಳುತ್ತಾರೆ. ಸರಿಯಾಗಿ ಭಾಗ ಮಾಡಿಲ್ಲ, ಈ ಕಡೆ ನೀರೂ ಹೆಚ್ಚಿನದಾಗಿ ಹೋಗುತ್ತದೆ, ಹೊಲಗಳು ಜಾಸ್ತಿ ಇರುತ್ತದೆ ಬಹಳ ಜನರಿಗೆ ಈ ಕಡೆ ನೀರು ಕಡಿಮೆಯಿದೆ, ಹೀಗೆ ಪರಸ್ಪರ ಹೊಡೆದಾಡುತ್ತಾರೆ ನಂತರ ಯುದ್ಧವು ಪ್ರಾರಂಭವಾಗಿಬಿಡುತ್ತದೆ. ಬಹಳ ಜಗಳವಾಗುತ್ತದೆ ನೀವು ತಂದೆಯ ಮಕ್ಕಳಾಗಿದ್ದೀರೆಂದರೆ ನಿಮಗೂ ಸಹ ನಿಂದನೆಯಾಗುತ್ತದೆ. ತಂದೆಯು ತಿಳಿಸಿದ್ದರು- ಈಗ ನೀವು ಕಳಂಗೀಧರರಾಗುತ್ತೀರಿ. ಹೇಗೆ ತಂದೆಗೆ ಕಳಂಕವನ್ನು ಹೊರಿಸುತ್ತಾರೆಯೋ ಹಾಗೆಯೇ ನಿಮಗೂ ಕಳಂಕವಾಗುತ್ತದೆ. ಇದಂತೂ ನಿಮಗೆ ಗೊತ್ತಿದೆ, ಪಾಪ! ಇವರು ವಿಶ್ವದ ಮಾಲೀಕರಾಗುತ್ತಾರೆಂದು ಅವರಿಗೆ ಗೊತ್ತಿಲ್ಲ. 84 ಜನ್ಮಗಳ ಮಾತಂತೂ ಬಹಳ ಸಹಜವಾಗಿದೆ. ತಾವೇ ಪೂಜ್ಯ, ತಾವೇ ಪೂಜಾರಿಗಳೂ ಸಹ ನೀವೇ ಆಗುತ್ತೀರಿ. ಕೆಲವರ ಬುದ್ಧಿಯಲ್ಲಿ ಧಾರಣೆಯಾಗುವುದಿಲ್ಲ. ಇದೂ ಸಹ ನಾಟಕದಲ್ಲಿ ಅವರದು ಇಂತಹದ್ದೇ ಪಾತ್ರವಿದೆ. ಏನು ಮಾಡಲು ಸಾಧ್ಯ! ಎಷ್ಟೇ ತಲೆಕೆಡಿಸಿಕೊಳ್ಳಿ ಆದರೆ ಅವರು ಮೇಲೇರಲು ಸಾಧ್ಯವಿಲ್ಲ. ಪುರುಷಾರ್ಥವನ್ನಂತೂ ಮಾಡಿಸಲಾಗುತ್ತದೆ ಆದರೆ ಅವರ ಅದೃಷ್ಟದಲ್ಲಿಲ್ಲ, ರಾಜಧಾನಿಯೂ ಸ್ಥಾಪನೆಯಾಗುತ್ತದೆಯೆಂದರೆ ಅದರಲ್ಲಿ ಎಲ್ಲವೂ ಬೇಕು. ಈ ರೀತಿ ತಿಳಿದುಕೊಂಡು ಶಾಂತವಾಗಿರಬೇಕು, ಯಾರೊಂದಿಗೂ ವಿವಾದದ ಮಾತಿಲ್ಲ. ಈ ರೀತಿ ಮಾಡಬೇಡಿ ಎಂದು ಪ್ರೀತಿಯಿಂದ ತಿಳಿಸಿಕೊಡಬೇಕು. ಇದನ್ನು ಆತ್ಮವು ಕೇಳುತ್ತದೆ, ಇದರಿಂದ ಇನ್ನೂ ಪದವಿಯು ಕಡಿಮೆಯಾಗಿಬಿಡುತ್ತದೆ. ಕೆಲಕೆಲವರಿಗೆ ಒಳ್ಳೆಯ ಮಾತನ್ನು ತಿಳಿಸಿದರೂ ಸಹ ಅಶಾಂತರಾಗಿಬಿಡುತ್ತಾರೆ ಅಂದಾಗ ಬಿಟ್ಟುಬಿಡಬೇಕು. ತಾವೇ ಆ ರೀತಿಯಿರುತ್ತಾರೆಂದರೆ ಪರಸ್ಪರ ತೊಂದರೆ ಕೊಡುತ್ತಾ ಇರುತ್ತಾರೆ, ಇದು ಅಂತ್ಯದವರೆಗೂ ಆಗುತ್ತದೆ. ಮಾಯೆಯೂ ಸಹ ದಿನ-ಪ್ರತಿದಿನ ಕಠಿಣವಾಗುತ್ತಾ ಹೋಗುತ್ತದೆ. ಮಹಾರಥಿಗಳೊಂದಿಗೆ ಮಾಯೆಯೂ ಮಹಾರಥಿಯಾಗಿ ಹೋರಾಡುತ್ತದೆ. ಮಾಯೆಯ ಬಿರುಗಾಳಿಗಳು ಬರುತ್ತವೆ. ತಂದೆಯನ್ನು ನೆನಪು ಮಾಡುವ ಅಭ್ಯಾಸವಾಗಿಬಿಟ್ಟರೆ ಅಚಲ-ಅಡೋಲರಾಗಿರುತ್ತೀರಿ. ಮಾಯೆಯು ಬೇಸರಪಡಿಸುತ್ತದೆಯೆಂದು ತಿಳಿಯುತ್ತಾರೆ ಆದರೆ ಹೆದರಬಾರದು. ಕಳಂಗೀಧರರಾಗುವವರಿಗೆ ಕಳಂಕ ಬರುತ್ತದೆ. ಇದರಲ್ಲಿ ಬೇಸರಪಡಬಾರದು. ಪತ್ರಿಕೆಯವರು ಏನು ಬೇಕಾದರೂ ವಿರುದ್ಧವಾಗಿ ಬರೆಯುತ್ತಾರೆ ಏಕೆಂದರೆ ಪವಿತ್ರತೆಯ ಮಾತಾಗಿದೆ. ಅಬಲೆಯರ ಮೇಲೆ ಅತ್ಯಾಚಾರವಾಗುತ್ತದೆ. ಅಕಾಸುರ-ಬಕಾಸುರರೆಂಬ ಹೆಸರುಗಳೂ ಇವೆ. ಪೂತನ, ಶೂರ್ಪನಖಿ ಎಂದು ಸ್ತ್ರೀಯರ ಹೆಸರುಗಳೂ ಸಹ ಇವೆ.

ಈಗ ಮಕ್ಕಳು ಮೊಟ್ಟಮೊದಲು ತಂದೆಯ ಮಹಿಮೆಯನ್ನೇ ತಿಳಿಸುತ್ತೀರಿ, ಬೇಹದ್ದಿನ ತಂದೆಯು ತಿಳಿಸುತ್ತಾರೆ- ನೀವು ಆತ್ಮರಾಗಿದ್ದೀರಿ. ಈ ಜ್ಞಾನವನ್ನು ಒಬ್ಬ ತಂದೆಯ ವಿನಃ ಯಾರೂ ಕೊಡಲು ಸಾಧ್ಯವಿಲ್ಲ. ರಚಯಿತ ಮತ್ತು ರಚನೆಯ ಜ್ಞಾನವು ಈ ವಿದ್ಯೆಯಾಗಿದೆ, ಇದರಿಂದ ನೀವು ಸ್ವದರ್ಶನಚಕ್ರಧಾರಿಗಳಾಗಿ ಚಕ್ರವರ್ತಿ ರಾಜರಾಗುತ್ತೀರಿ. ಅಲಂಕಾರಗಳು ನಿಮ್ಮದೇ ಆಗಿದೆ ಆದರೆ ನೀವು ಬ್ರಾಹ್ಮಣರು ಇನ್ನೂ ಪುರುಷಾರ್ಥಿಯಾಗಿದ್ದೀರಿ ಆದ್ದರಿಂದ ವಿಷ್ಣುವಿಗೆ ತೋರಿಸಲಾಗಿದೆ. ಆತ್ಮವೆಂದರೇನು, ಪರಮಾತ್ಮ ಯಾರು? ಇವೆಲ್ಲಾ ಮಾತುಗಳನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಆತ್ಮವು ಎಲ್ಲಿಂದ ಬಂದಿತು ಮತ್ತೆ ಹೇಗೆ ಹೋಗುತ್ತದೆ? ಕೆಲವರು ಕಣ್ಣುಗಳಿಂದ ಹೋಯಿತೆಂದು, ಕೆಲವರು ಭೃಕುಟಿಯಿಂದ ಹೋಯಿತು, ತಲೆಯಿಂದ ಹೋಯಿತೆಂದು ಹೇಳುತ್ತಾರೆ. ಇದನ್ನಂತೂ ಯಾರು ಅರಿತುಕೊಳ್ಳಲು ಸಾಧ್ಯವಿಲ್ಲ. ಈಗ ನಿಮಗೆ ತಿಳಿದಿದೆ - ಆತ್ಮವು ಶರೀರವನ್ನು ಈ ರೀತಿ ಬಿಡುತ್ತದೆ ಕುಳಿತು-ಕುಳಿತಿದ್ದಂತೆಯೇ ತಂದೆಯ ನೆನಪಿನಲ್ಲಿ ದೇಹತ್ಯಾಗ ಮಾಡಿಬಿಡುತ್ತೀರಿ. ತಂದೆಯ ಬಳಿಯಂತೂ ಖುಷಿಯಿಂದ ಹೋಗಬೇಕಾಗಿದೆ. ಹಳೆಯ ಶರೀರವನ್ನು ಖುಷಿಯಿಂದ ಬಿಡಬೇಕಾಗಿದೆ, ಹೇಗೆ ಸರ್ಪದ ಉದಾಹರಣೆಯಿದೆ. ಪ್ರಾಣಿಗಳಲ್ಲಿಯೂ ಸಹ ಯಾವ ಬುದ್ಧಿವಂತಿಕೆಯಿರುವುದೋ ಅದು ಮನುಷ್ಯರಲ್ಲಿಲ್ಲ. ಆ ಸನ್ಯಾಸಿಗಳು ಕೇವಲ ಉದಾಹರಣೆಯನ್ನು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಹೇಗೆ ಭ್ರಮರಿಯು ಕೀಟವನ್ನು ಪರಿವರ್ತನೆ ಮಾಡುತ್ತದೆಯೋ ಹಾಗೆಯೆ ನೀವೂ ಸಹ ಮನುಷ್ಯರೂಪಿ ಕೀಟಗಳನ್ನು ಪರಿವರ್ತನೆ ಮಾಡಿಬಿಡಬೇಕಾಗಿದೆ. ಕೇವಲ ಉದಾಹರಣೆ ಕೊಡಬಾರದು, ಇದನ್ನು ಪ್ರತ್ಯಕ್ಷದಲ್ಲಿ ಮಾಡಬೇಕಾಗಿದೆ. ಈಗ ನೀವು ಮಕ್ಕಳು ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ನೀವು ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೀರೆಂದರೆ ಆಂತರಿಕವಾಗಿ ಖುಷಿಯಿರಬೇಕು. ಅವರಂತೂ ಆಸ್ತಿಯನ್ನು ತಿಳಿದುಕೊಂಡೇ ಇಲ್ಲ, ಶಾಂತಿಯಂತೂ ಎಲ್ಲರಿಗೂ ಸಿಗುತ್ತದೆ, ಎಲ್ಲರೂ ಶಾಂತಿಧಾಮಕ್ಕೆ ಹೋಗುತ್ತಾರೆ. ಒಬ್ಬ ತಂದೆಯ ವಿನಃ ಯಾರೂ ಸರ್ವರ ಸದ್ಗತಿ ಮಾಡುವುದಿಲ್ಲ. ಇದನ್ನೂ ಸಹ ತಿಳಿಸಬೇಕಾಗುತ್ತದೆ- ನಿಮ್ಮದು ನಿವೃತ್ತಿಮಾರ್ಗವಾಗಿದೆ, ನೀವು ಬ್ರಹ್ಮ್ತತ್ವದಲ್ಲಿ ಲೀನವಾಗುವ ಪುರುಷಾರ್ಥ ಮಾಡುತ್ತೀರಿ. ತಂದೆಯು ಪ್ರವೃತ್ತಿಮಾರ್ಗದವರ್ನನಾಗಿ ಮಾಡುತ್ತಾರೆ. ನೀವು ಸತ್ಯಯುಗದಲ್ಲಿ ಬರಲು ಸಾಧ್ಯವಿಲ್ಲ. ಈ ಜ್ಞಾನವನ್ನು ನೀವು ಯಾರಿಗೂ ತಿಳಿಸಲೂ ಸಾಧ್ಯವಿಲ್ಲ. ಇವು ಬಹಳ ಗುಪ್ತವಾದ ಮಾತುಗಳಾಗಿವೆ. ಮೊಟ್ಟಮೊದಲು ಹೊಸಬರಿಗೆ ತಂದೆ ಮತ್ತು ಆಸ್ತಿಯ ಬಗ್ಗೆ ಓದಿಸಬೇಕಾಗುತ್ತದೆ. ಹೇಳಿ, ನಿಮಗೆ ಇಬ್ಬರು ತಂದೆಯರಿದ್ದಾರೆ- ಒಬ್ಬರು ಲೌಕಿಕ ಮತ್ತು ಅಲೌಕಿಕ ತಂದೆ. ಲೌಕಿಕ ತಂದೆಯ ಬಳಿ ವಿಕಾರದಿಂದ ಜನ್ಮ ಪಡೆಯುತ್ತೀರಿ, ಎಷ್ಟು ಅಪಾರ ದುಃಖವಿದೆ ಆದರೆ ಸತ್ಯಯುಗದಲ್ಲಿ ಅಪಾರ ಸುಖವಿದೆ. ಅಲ್ಲಿ ಜನ್ಮವೇ ಬೆಣ್ಣೆಯ ತರಹ ಆಗಿಬಿಡುತ್ತದೆ ಯಾವುದೇ ದುಃಖದ ಮಾತಿಲ್ಲ. ಹೆಸರೇ ಆಗಿದೆ ಸ್ವರ್ಗ. ಬೇಹದ್ದಿನ ತಂದೆಯಿಂದ ಬೇಹದ್ದಿನ ರಾಜಧಾನಿಯ ಆಸ್ತಿಯು ಸಿಗುತ್ತದೆ. ಮೊದಲು ಸುಖವಿರುತ್ತದೆ, ಕೊನೆಯಲ್ಲಿ ದುಃಖ. ಮೊದಲು ದುಃಖದ ನಂತರ ಸುಖವೆಂದು ಹೇಳುವುದು ತಪ್ಪಾಗಿದೆ. ಮೊದಲು ಹೊಸ ಪ್ರಪಂಚವು ಸ್ಥಾಪನೆಯಾಗುತ್ತದೆ. ಹಳೆಯದು ಸ್ಥಾಪನೆಯಾಗುವುದಿಲ್ಲ. ಎಂದಾದರೂ ಹಳೆಯ ಮನೆಯನ್ನು ನಿರ್ಮಿಸುತ್ತಾರೆಯೇ? ಹೊಸ ಪ್ರಪಂಚದಲ್ಲಂತೂ ರಾವಣನಿರಲು ಸಾಧ್ಯವಿಲ್ಲ. ಇದನ್ನೂ ಸಹ ತಂದೆಯು ತಿಳಿಸುತ್ತಾರೆ ಅಂದಮೇಲೆ ಬುದ್ಧಿಯಲ್ಲಿ ಯುಕ್ತಿಗಳಿರಲ್ಲಿ ಬೇಹದ್ದಿನ ತಂದೆಯು ಬೇಹದ್ದಿನ ಸುಖವನ್ನು ಕೊಡುತ್ತಾರೆ. ಹೇಗೆ ಕೊಡುತ್ತಾರೆಂಬುದು ನೀವು ಬಂದರೆ ತಿಳಿಸಿಕೊಡುತ್ತೇನೆ. ಹೇಳುವುದಕ್ಕೂ ಯುಕ್ತಿ ಬೇಕು. ದುಃಖಧಾಮದ ಸಾಕ್ಷಾತ್ಕಾರವನ್ನೂ ನೀವು ಮಾಡಿಸಿ. ಎಷ್ಟೊಂದು ದುಃಖವಿದೆ, ಅಪರಮಪಾರ ದುಃಖವಿದೆ. ಹೆಸರೇ ಆಗಿದೆ ದುಃಖಧಾಮ, ಇದಕ್ಕೆ ಸುಖಧಾಮವೆಂದು ಯಾರೂ ಹೇಳಲು ಸಾಧ್ಯವಿಲ್ಲ. ಸುಖಧಾಮದಲ್ಲಿ ಶ್ರೀಕೃಷ್ಣನಿರುತ್ತಾನೆ. ಶ್ರೀಕೃಷ್ಣನ ಮಂದಿರವನ್ನೂ ಸಹ ಸುಖಧಾಮವೆಂದು ಹೇಳುತ್ತಾರೆ. ಅವನು ಸುಖಧಾಮದ ಮಾಲೀಕನಾಗಿದ್ದನು, ಅವರ ಮಂದಿರಗಳಲ್ಲಿ ಈಗ ಪೂಜೆಯಾಗುತ್ತದೆ. ಈಗ ಈ ಬಾಬಾ ಲಕ್ಷ್ಮೀ-ನಾರಾಯಣರ ಮಂದಿರದಲ್ಲಿ ಹೋದರೆ ಓಹೋ! ನಾನೇ ಈ ರೀತಿ ಆಗುತ್ತೇನೆ ಎಂದು ಹೇಳುತ್ತಾರೆ. ಇವರ ಪೂಜೆ ಮಾಡುತ್ತಾರೇನು? ಇವರೇ ಸತ್ಯಯುಗದಲ್ಲಿ ಮೊದಲಿಗರಾಗುತ್ತಾರೆಂದರೆ ಎರಡನೇ, ಮೂರನೇ ದರ್ಜೆಯಲ್ಲಿರುವವರಿಗೆ ಪೂಜೆಯನ್ನು ಏಕೆ ಮಾಡಬೇಕು? ನಾವಂತೂ ಸೂರ್ಯವಂಶಿಯರಾಗುತ್ತೇವೆ, ಮನುಷ್ಯರಿಗೆ ಇದು ಗೊತ್ತಿಲ್ಲ ಆದ್ದರಿಂದ ಎಲ್ಲರಿಗೆ ಭಗವಂತನೆಂದು ಹೇಳುತ್ತಿರುತ್ತಾರೆ, ಬಹಳ ಅಂಧಕಾರವಿದೆ. ನೀವು ಬಹಳ ಚೆನ್ನಾಗಿ ತಿಳಿಸಿಕೊಡುತ್ತೀರಿ. ಇದರಲ್ಲಿ ಸಮಯ ಹಿಡಿಸುತ್ತದೆ, ಕಲ್ಪದ ಹಿಂದೆ ಎಷ್ತು ಸಮಯವು ಹಿಡಿಸಿತ್ತೋ ಈಗಲೂ ಅಷ್ಟೇ ಆಗುವುದು. ಸಮಯಕ್ಕಿಂತ ಮೊದಲೇ ಏನೂ ಮಾಡಲು ಸಾಧ್ಯವಿಲ್ಲ. ನಿಮ್ಮ ಈಗಿನ ಜನ್ಮವು ವಜ್ರಸಮಾನವಾದ ಜನ್ಮವಾಗಿದೆ. ದೇವತೆಗಳಿಗೆ ವಜ್ರಸಮಾನ ಜನ್ಮವೆಂದು ಹೇಳುವುದಿಲ್ಲ. ಅವರೇನೂ ಈಶ್ವರೀಯ ಪರಿವಾರದಲ್ಲಿಲ್ಲ. ನಿಮ್ಮದು ಈಶ್ವರೀಯ ಪರಿವಾರವಾಗಿದೆ. ಅದು ದೈವೀ ಪರಿವಾರವಾಗಿರುತ್ತದೆ, ಎಷ್ಟು ಹೊಸಮಾತುಗಳಾಗಿವೆ. ಗೀತೆಯಲ್ಲಿ ಹಿಟ್ಟಿನಲ್ಲಿ ಉಪ್ಪಿನಷ್ಟು ಸತ್ಯವಿದೆ. ಕೃಷ್ಣನ ಹೆಸರನ್ನು ಹಾಕಿ ಎಷ್ಟೊಂದು ತಪ್ಪನ್ನು ಮಾಡಿಬಿಟ್ಟಿದ್ದಾರೆ. ತಿಳಿಸಿ, ನೀವು ದೇವತೆಗಳಿಗೆ ದೇವತೆಯೆಂದು ಹೇಳುತ್ತೀರಿ ಮತ್ತೆ ಕೃಷ್ಣನಿಗೆ ಏಕೆ ಭಗವಂತನೆಂದು ಹೇಳುತ್ತೀರಿ! ವಿಷ್ಣು ಯಾರು? ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಮನುಷ್ಯರಂತೂ ಜ್ಞಾನವಿಲ್ಲದೆ ಪೂಜೆ ಮಾಡುತ್ತಿರುತ್ತಾರೆ. ಬಹಳ ಪ್ರಾಚೀನರೂ ಸಹ ದೇವಿ-ದೇವತೆಗಳಾಗಿದ್ದಾರೆ, ಅವರು ಇದ್ದುಹೋಗಿದ್ದಾರೆ. ಸತೋ, ರಜೋ, ತಮೋದಲ್ಲಿ ಎಲ್ಲರೂ ಬರಬೇಕಾಗಿದೆ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ತಂದೆಯು ಮಕ್ಕಳಿಗೆ ಬಹಳಷ್ಟು ವಿಚಾರಗಳನ್ನು ತಿಳಿಸುತ್ತಾರೆ. ನೀವು ಈ ಬ್ಯಾಡ್ಜ್ ನ ಮೇಲೂ ಸಹ ಬಹಳಷ್ಟು ಜ್ಞಾನವನ್ನು ತಿಳಿಸಬಹುದು. ತಂದೆ ಮತ್ತು ಓದಿಸುವ ಶಿಕ್ಷಕರನ್ನು ನೆನಪು ಮಾಡಬೇಕಾಗುತ್ತದೆ ಆದರೆ ಮಾಯೆಯ ಎಷ್ಟೊಂದು ಹೋರಾಟವು ನಡೆಯುತ್ತದೆ. ತಂದೆಯು ಬಹಳ ಒಳ್ಳೊಳ್ಳೆಯ ಅಂಶಗಳನ್ನು ತಿಳಿಸುತ್ತಿರುತ್ತಾರೆ. ಒಂದುವೇಳೆ ಕೇಳದೇ ಇದ್ದರೆ ಮತ್ತೆ ಹೇಗೆ ತಿಳಿಸುತ್ತೀರಿ? ಒಳ್ಳೊಳ್ಳೆಯವರೂ ಸಹ ಅಲ್ಲಿ-ಇಲ್ಲಿ ಹೋಗುತ್ತಾರೆಂದರೆ ಮುರುಳಿಯನ್ನು ತಪ್ಪಿಸಿಬಿಡುತ್ತಾರೆ, ಮತ್ತೆ ಓದುವುದೇ ಇಲ್ಲ. ಹೊಟ್ಟೆ ತುಂಬಿದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಾನು ಎಷ್ಟು ಗುಹ್ಯ-ಗುಹ್ಯವಾದ ಮಾತುಗಳನ್ನು ತಿಳಿಸುತ್ತೇನೆ. ಅದನ್ನು ಕೇಳಿ ಧಾರಣೆ ಮಾಡಬೇಕು. ಧಾರಣೆಯಾಗದಿದ್ದರೆ ಪರಿಪಕ್ವ ಆಗುವುದಿಲ್ಲ, ಹಸಿಯಾಗಿಯೇ ಉಳಿಯುತ್ತೀರಿ. ಅನೇಕ ಮಕ್ಕಳು ವಿಚಾರಸಾಗರ ಮಂಥನ ಮಾಡಿ ಒಳ್ಳೊಳ್ಳೆಯ ಅಂಶಗಳನ್ನು ತೆಗೆಯುತ್ತಾರೆ. ಯಾವ ಅಂಶಗಳನ್ನು ಇವರು ಎಂದೂ ತಿಳಿಸಿಲ್ಲವೋ ಅಂತಹದ್ದನ್ನು ಸೇವಾಧಾರಿ ಮಕ್ಕಳು ತೆಗೆಯುತ್ತಾರೆ. ಸೇವೆಯಲ್ಲಿಯೇ ತೊಡಗಿರುತ್ತಾರೆ. ಮಾಸಪತ್ರಿಕೆಗಳಲ್ಲಿಯೂ ಒಳ್ಳೊಳ್ಳೆಯ ವಿಚಾರಗಳನ್ನು ಬರೆಯುತ್ತಾರೆ.

ಅಂದಾಗ ನೀವು ಮಕ್ಕಳು ವಿಶ್ವದ ಮಾಲೀಕರಾಗುತ್ತೀರಿ. ತಂದೆಯು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ! ಗೀತೆಯಲ್ಲಿಯೂ ಸಹ ಇಡೀ ವಿಶ್ವದ ಲಗಾಮು ನಿಮ್ಮ ಕೈಯಲ್ಲಿರುವುದೆಂದು ಇದೆಯಲ್ಲವೆ. ಯಾರು ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರಲ್ಲವೆ. ಅವರಿಗೆ ಓದಿಸುವವರು ಅವಶ್ಯವಾಗಿ ತಂದೆಯೇ ಆಗಿರುವರು ಇದನ್ನೂ ಸಹ ನೀವು ತಿಳಿಸಬಹುದು. ಅವರು ಈ ರಾಜ್ಯವನ್ನು ಹೇಗೆ ಪಡೆದರು? ಮಂದಿರದ ಪೂಜಾರಿಗಳಿಗೆ ಗೊತ್ತಿಲ್ಲ, ನಿಮಗಂತೂ ಅಪಾರ ಖುಷಿಯಿರಬೇಕು. ಇದನ್ನೂ ನೀವು ತಿಳಿಸಿ- ಈಶ್ವರ ಸರ್ವವ್ಯಾಪಿಯಲ್ಲ, ಈ ಸಮಯದಲ್ಲಂತೂ ಪಂಚಭೂತಗಳು ಸರ್ವವ್ಯಾಪಿಯಾಗಿದೆ, ಪ್ರತಿಯೊಬ್ಬರಲ್ಲಿಯೂ ಈ ವಿಕಾರಗಳಿವೆ, ಮಾಯೆಯ 5 ಭೂತಗಳಿವೆ, ಮಾಯೆಯು ಸರ್ವವ್ಯಾಪಿಯಾಗಿದೆ. ಅಂದಮೇಲೆ ನೀವು ಮತ್ತೆ ಈಶ್ವರ ಸರ್ವವ್ಯಾಪಿ ಎಂದು ಹೇಳುತ್ತೀರಿ, ಇದು ತಪ್ಪಲ್ಲವೆ? ಈಶ್ವರನ್ನು ಸರ್ವವ್ಯಾಪಿಯಾಗಲು ಹೇಗೆ ಸಾಧ್ಯ. ಅವರಂತೂ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ. ಮಕ್ಕಳು ತಿಳಿಸುವಂತಹ ಅಭ್ಯಾಸವನ್ನೂ ಮಾಡಿಕೊಳ್ಳಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಂದುವೇಳೆ ಯಾರಾದರೂ ಅಶಾಂತಿಯನ್ನು ಹರಡುತ್ತಾರೆ ಅಥವಾ ತೊಂದರೆ ಕೊಡುತ್ತಾರೆಂದರೆ ನೀವು ಶಾಂತವಾಗಿರಬೇಕು. ಒಂದುವೇಳೆ ತಿಳುವಳಿಕೆ ಸಿಗುತ್ತಿದ್ದರೂ ಯಾರಾದರೂ ತಮ್ಮ ಸುಧಾರಣೆ ಮಾಡಿಕೊಳ್ಳದೇ ಇದ್ದರೆ ಇವರ ಅದೃಷ್ಟವೇ ಅಷ್ಟೇ ಎಂದು ಹೇಳುತ್ತಾರೆ ಏಕೆಂದರೆ ರಾಜಧಾನಿಯು ಸ್ಥಾಪನೆಯಾಗುತ್ತಾ ಇದೆ.

2. ವಿಚಾರಸಾಗರ ಮಂಥನ ಮಾಡಿ ಜ್ಞಾನದ ಹೊಸ-ಹೊಸ ಅಂಶಗಳನ್ನು ತೆಗೆದು ಸರ್ವೀಸ್ ಮಾಡಬೇಕಾಗಿದೆ. ತಂದೆಯು ಮುರುಳಿಯಲ್ಲಿ ಪ್ರತಿನಿತ್ಯವೂ ಯಾವ ಗುಹ್ಯಮಾತುಗಳನ್ನು ತಿಳಿಸುತ್ತಾರೆಯೋ ಅದನ್ನೆಂದೂ ತಪ್ಪಿಸಬಾರದು.

ವರದಾನ:
ಪವಿತ್ರತೆಯನ್ನು ಆದಿ ಅನಾದಿ ವಿಶೇಷ ಗುಣದ ರೂಪದಲ್ಲಿ ಸಹಜವಾಗಿ ತನ್ನದನ್ನಾಗಿಮಾಡುವ ಪೂಜ್ಯ ಆತ್ಮ ಭವ.

ಪೂಜ್ಯನೀಯರಾಗುವ ವಿಶೇಷ ಆಧಾರ ಪವಿತ್ರತೆಯ ಮೇಲಿದೆ. ಎಷ್ಟೇಷ್ಟು ಸರ್ವ ಪ್ರಕಾರದ ಪವಿತ್ರತೆಯನ್ನು ತನ್ನದನ್ನಾಗಿಸಿ ಕೊಳ್ಳುವಿರೋ ಅಷ್ಟೂ ಸರ್ವ ಪ್ರಕಾರದಿಂದ ಪೂಜ್ಯನೀಯರಾಗು ವಿರಿ. ಯಾರು ವಿಧಿಪೂರ್ವಕವಾಗಿ ಆದಿ ಅನಾದಿ ವಿಶೇಷ ಗುಣದರೂಪದಿಂದ ಪವಿತ್ರತೆಯನ್ನು ತನ್ನದನ್ನಾಗಿಸಿಕೊಳ್ಳುತ್ತಾರೆ ಅವರೇ ವಿಧಿ ಪೂರ್ವಕವಾಗಿ ಪೂಜೆ ಮಾಡಲ್ಪಡುತ್ತಾರೆ. ಯಾರು ಜ್ಞಾನಿ ಮತ್ತು ಅಜ್ಞಾನಿ ಆತ್ಮಗಳ ಸಂಪರ್ಕದಲ್ಲಿ ಬರುತ್ತಾ ಪವಿತ್ರ ವೃತ್ತಿ, ದೃಷ್ಟಿ, ವೈಬ್ರೇಷನ್ನಿಂದ ಯರ್ಥಾಥ ಸಂಪರ್ಕ-ಸಂಬಂಧ ನಿಭಾಯಿಸುತ್ತಾರೆ. ಸ್ವಪ್ನದಲ್ಲೂ ಯಾರ ಪವಿತ್ರತೆಯಲ್ಲಿ ಬಿರುಕುಂಟಾಗುವುದಿಲ್ಲ ಅವರೇ ವಿಧಿಪೂರ್ವಕ ಪೂಜ್ಯರಾಗುತ್ತಾರೆ.

ಸ್ಲೋಗನ್:
ವ್ಯಕ್ತದಲ್ಲಿರುತ್ತಾ ಅವ್ಯಕ್ತ ಫರಿಶ್ತಾ ಆಗಿ ಸೇವೆ ಮಾಡಿದಾಗ ವಿಶ್ವಕಲ್ಯಾಣದ ಕಾರ್ಯ ತೀವ್ರಗತಿಯಿಂದ ಸಂಪನ್ನವಾಗುತ್ತದೆ.