03.07.25 Morning Kannada Murli Om Shanti
BapDada Madhuban
ಮಧುರ ಮಕ್ಕಳೇ- ಈ
ಬೇಹದ್ದಿನ ನಾಟಕದಲ್ಲಿ ನೀವು ವಿಚಿತ್ರ ಪಾತ್ರಧಾರಿಗಳಾಗಿದ್ದೀರಿ, ಇದು ಅನಾದಿ ನಾಟಕವಾಗಿದೆ,
ಇದರಲ್ಲಿ ಸ್ವಲ್ಪವೂ ಬದಲಾವಣೆಯಾಗಲು ಸಾಧ್ಯವಿಲ್ಲ
ಪ್ರಶ್ನೆ:
ಬುದ್ಧಿವಂತ,
ದೂರಾಂದೇಶಿ ಮಕ್ಕಳೇ ಯಾವ ಗುಹ್ಯರಹಸ್ಯವನ್ನು ಅರಿತುಕೊಳ್ಳುತ್ತಾರೆ?
ಉತ್ತರ:
ಮೂಲವತನದಿಂದ
ಹಿಡಿದು ಇಡೀ ನಾಟಕದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ದೂರಾಂದೇಶಿ ಮಕ್ಕಳೆ ಅರಿತುಕೊಳ್ಳುತ್ತಾರೆ.
ಬೀಜ ಮತ್ತು ವೃಕ್ಷದ ಸಂಪೂರ್ಣಜ್ಞಾನವು ಅವರ ಬುದ್ಧಿಯಲ್ಲಿರುತ್ತದೆ. ಅವರೇ ಅರಿತುಕೊಳ್ಳುತ್ತಾರೆ-
ಈ ಬೇಹದ್ದಿನ ನಾಟಕದಲ್ಲಿ ಆತ್ಮರೂಪಿ ನಟ ಈ ಉಡುಪನ್ನು ಧರಿಸಿ ಪಾತ್ರವನ್ನಭಿನಯಿಸುತ್ತಿದೆ. ಇದು
ಸತ್ಯಯುಗದಿಂದ ಹಿಡಿದು ಕಲಿಯುಗದವರೆಗೆ ಪಾತ್ರವನ್ನಭಿನಯಿಸಬೇಕಾಗಿದೆ. ಯಾವುದೇ ಪಾತ್ರಧಾರಿಯು
ಮಧ್ಯದಲ್ಲಿಯೇ ಹಿಂತಿರುಗಿ ಹೋಗಲು ಸಾಧ್ಯವಿಲ್ಲ.
ಗೀತೆ:
ನೀನು
ರಾತ್ರಿಯನ್ನು ಮಲಗುತ್ತಾ ಕಳೆದು, ಹಗಲನ್ನು ತಿನ್ನುತ್ತಾ ಕಳೆದೆ.....
ಓಂ ಶಾಂತಿ.
ಈ ಗೀತೆಯನ್ನು ಮಕ್ಕಳು ಕೇಳಿದಿರಿ. ಇದರಲ್ಲಿ ಕೆಲವು ಶಬ್ಧಗಳು ಸರಿಯಾಗಿದೆ. ಇನ್ನೂ ಕೆಲವು
ತಪ್ಪಾಗಿದೆ. ಬಾಯಿಂದ ಸ್ಮರಣೆ ಮಾಡಲಾಗುವುದಿಲ್ಲ. ದುಃಖವೂ ಸಹ ಅವಶ್ಯವಾಗಿ ಬರಬೇಕಾಗಿದೆ.
ದುಃಖವಾದಾಗಲೇ ಸುಖವನ್ನು ಕೊಡಲು ತಂದೆಯು ಬರಬೇಕಾಗುತ್ತದೆ. ಮಧುರಾತಿ ಮಧುರ ಮಕ್ಕಳಿಗೆ ತಿಳಿದಿದೆ-
ನಾವೀಗ ಸುಖಧಾಮಕ್ಕಾಗಿ ಓದುತ್ತಿದ್ದೇವೆ. ಶಾಂತಿಧಾಮ ಮತ್ತು ಸುಖಧಾಮ. ಮೊದಲು ಮುಕ್ತಿ ನಂತರ
ಜೀವನ್ಮುಕ್ತಿಯಿರುತ್ತದೆ. ಶಾಂತಿಧಾಮವು ಮನೆಯಾಗಿದೆ, ಇಲ್ಲಿ ಪಾತ್ರವನ್ನಭಿನಯಿಸುವುದಿಲ್ಲ. ಹೇಗೆ
ಪಾತ್ರಧಾರಿಗಳು ಮನೆಗೆ ಹೊರಟುಹೋಗುತ್ತಾರೆ, ಅಲ್ಲೇನೂ ಪಾತ್ರವನ್ನಭಿನಯಿಸುವುದಿಲ್ಲ. ಸ್ಟೇಜಿನ ಮೇಲೆ
ಪಾತ್ರವನ್ನಭಿನಯಿಸಲಾಗುತ್ತದೆ. ಇದೂ ಸಹ ಸ್ಟೇಜ್ ಆಗಿದೆ. ಹೇಗೆ ಹದ್ದಿನ ನಾಟಕವಿರುತ್ತದೆಯೋ ಹಾಗೆಯೇ
ಇದು ಬೇಹದ್ದಿನ ನಾಟಕವಾಗಿದೆ. ಇದರ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಂದೆಯ ವಿನಃ ಮತ್ತ್ಯಾರೂ
ತಿಳಿಸಲು ಸಾಧ್ಯವಿಲ್ಲ. ವಾಸ್ತವದಲ್ಲಿ ಈ ಯಾತ್ರೆ ಅಥವಾ ಯುದ್ಧ ಎಂಬ ಶಬ್ಧವು ಕೇವಲ ತಿಳಿಸಿಕೊಡಲು
ಕೆಲಸದಲ್ಲಿ ತರಬೇಕಾಗುತ್ತದೆ ಆದರೆ ಇದರಲ್ಲಿ ಯುದ್ಧವೇನೂ ಇಲ್ಲ, ಯಾತ್ರೆಯ ಶಬ್ಧವಿದೆ. ಬಾಕಿ ಇದು
ನೆನಪಾಗಿದೆ. ನೆನಪು ಮಾಡುತ್ತಾ-ಮಾಡುತ್ತಾ ಪಾವನರಾಗಿಬಿಡುತ್ತೀರಿ. ಈ ಯಾತ್ರೆಯು ಇಲ್ಲಿಯೇ
ಪೂರ್ಣವಾಗುವುದು. ಎಲ್ಲಿಯೂ ಹೋಗಬೇಕಾಗಿಲ್ಲ. ಮಕ್ಕಳು ಪಾವನರಾಗಿ ತಮ್ಮ ಮನೆಗೆ ಹೋಗಬೇಕಾಗಿದೆ ಆದರೆ
ಅಪವಿತ್ರರಂತೂ ಹೋಗಲು ಸಾಧ್ಯವಿಲ್ಲ ಆದ್ದರಿಂದ ತಮ್ಮನ್ನು ಆತ್ಮನೆಂದು ತಿಳಿಯಬೇಕಾಗಿದೆ.
ನಾನಾತ್ಮನಲ್ಲಿ ಇಡೀ ಚಕ್ರದ ಪಾತ್ರವಿದೆ. ಈಗ ಆ ಪಾತ್ರವು ಪೂರ್ಣವಾಗಿದೆ. ಮಕ್ಕಳೇ, ನನ್ನನ್ನು
ನೆನಪು ಮಾಡಿ ಎಂದು ತಂದೆಯು ಬಹಳ ಸಹಜವಾದ ಸಲಹೆಯನ್ನು ಕೊಡುತ್ತಾರೆ. ನೀವು ಕುಳಿತಿರುವುದೂ ಇಲ್ಲಿಯೇ,
ಎಲ್ಲಿಯೂ ಹೋಗುವಂತಿಲ್ಲ. ತಂದೆಯು ಬಂದು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡುವುದರಿಂದ ನೀವು
ಪಾವನರಾಗಿಬಿಡುತ್ತೀರಿ. ಯುದ್ಧವೇನೂ ಇಲ್ಲ. ತಮ್ಮನ್ನು ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ
ಮಾಡಿಕೊಳ್ಳಬೇಕಾಗಿದೆ. ಮಾಯೆಯ ಮೇಲೆ ಜಯಗಳಿಸಬೇಕಾಗಿದೆ. ಈಗ 84 ಜನ್ಮಗಳ ಚಕ್ರವು
ಪೂರ್ಣವಾಗುವುದೆಂದು ಮಕ್ಕಳಿಗೆ ಗೊತ್ತಿದೆ. ಭಾರತವೇ ಸತೋಪ್ರಧಾನವಾಗಿತ್ತು, ಅದರಲ್ಲಿ ಅವಶ್ಯವಾಗಿ
ಮನುಷ್ಯರೇ ಇರುತ್ತಾರೆ. ಭೂಮಿಯು ಬದಲಾಗುವುದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ- ನಾವು
ಸತೋಪ್ರಧಾನರಾಗಿದ್ದೆವು ನಂತರ ತಮೋಪ್ರಧಾನರಾದೆವು, ಈಗ ಮತ್ತೆ ಸತೋಪ್ರಧಾನರಾಗಬೇಕಾಗಿದೆ.
ಪತಿತ-ಪಾವನನೇ ಬಂದು ನಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡಿ ಎಂದು ಮನುಷ್ಯರು ಕರೆಯುತ್ತಾರೆ
ಆದರೆ ಅವರು ಯಾರು? ಹೇಗೆ ಬರುತ್ತಾರೆ? ಏನನ್ನೂ ತಿಳಿದುಕೊಂಡಿಲ್ಲ. ಈಗ ತಂದೆಯು ನಿಮ್ಮನ್ನು
ಬುದ್ಧಿವಂತರನ್ನಾಗಿ ಮಾಡಿದ್ದಾರೆ. ನೀವು ಎಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತೀರಿ!
ಸತ್ಯಯುಗದಲ್ಲಿ ಬಡವರೂ ಸಹ ಇಲ್ಲಿನ ಸಾಹುಕಾರರಿಗಿಂತ ಶ್ರೇಷ್ಠವಾಗಿರುತ್ತಾರೆ. ಭಲೆ ಎಷ್ಟು
ದೊಡ್ಡ-ದೊಡ್ಡ ರಾಜರಿದ್ದರು, ಬಹಳ ಹಣವಿತ್ತು ಆದರೆ ವಿಕಾರಿಗಳಲ್ಲವೆ. ಇವರಿಗಿಂತಲೂ ಸತ್ಯಯುಗದಲ್ಲಿ
ಸಾಧಾರಣ ಪ್ರಜೆಗಳೂ ಸಹ ಬಹಳ ಶ್ರೇಷ್ಠರಾಗುತ್ತಾರೆ. ತಂದೆಯು ಅಂತರವನ್ನು ತಿಳಿಸುತ್ತಾರೆ. ರಾವಣನ
ನೆರಳು ಬೀಳುವುದರಿಂದಲೇ ಪತಿತರಾಗಿಬಿಡುತ್ತಾರೆ. ನಿರ್ವಿಕಾರಿ ದೇವತೆಗಳ ಮುಂದೆ ತಮ್ಮನ್ನು
ಪತಿತರೆಂದು ಹೇಳಿ ತಲೆಬಾಗುತ್ತಾರೆ. ತಂದೆಯು ಇಲ್ಲಿ ಬರುತ್ತಾರೆಂದರೆ ಬಹಳ ಬೇಗನೆ ಎಲ್ಲರನ್ನು
ಮೇಲೆತ್ತುತ್ತಾರೆ. ಇದು ಸೆಕೆಂಡಿನ ಮಾತಾಗಿದೆ. ಈಗ ತಂದೆಯು ಜ್ಞಾನದ ಮೂರನೆಯ ನೇತ್ರವನ್ನು
ಕೊಟ್ಟಿದ್ದಾರೆ. ನೀವು ಮಕ್ಕಳು ದೂರಾಂದೇಶಿಗಳಾಗಿಬಿಡುತ್ತೀರಿ. ಮೇಲೆ ಮೂಲವತನದಿಂದ ಹಿಡಿದು ಇಡೀ
ಡ್ರಾಮಾದ ಚಕ್ರವು ನಿಮಗೆ ನೆನಪಿದೆ. ಹೇಗೆ ಹದ್ದಿನ ನಾಟಕವನ್ನು ನೋಡಿ ಬಂದು ಏನೇನು ನೋಡಿದೆವೆಂದು
ತಿಳಿಸುತ್ತಾರಲ್ಲವೆ. ಬುದ್ಧಿಯಲ್ಲಿ ತುಂಬಿರುತ್ತದೆ ಅದನ್ನು ವರ್ಣನೆ ಮಾಡುತ್ತಾರೆ. ಆತ್ಮದಲ್ಲಿ
ತುಂಬಿಕೊಂಡು ಬಂದು ಅದನ್ನು ಹಂಚಿಕೊಳ್ಳುತ್ತಾರೆ. ಹಾಗೆಯೇ ಇವು ಬೇಹದ್ದಿನ ಮಾತುಗಳಾಗಿವೆ. ನೀವು
ಮಕ್ಕಳ ಬುದ್ಧಿಯಲ್ಲಿ ಈ ಬೇಹದ್ದಿನ ನಾಟಕದ ಆದಿ-ಮಧ್ಯ-ಅಂತ್ಯದ ರಹಸ್ಯವಿರಬೇಕು. ಇದು
ಪುನರಾವರ್ತನೆಯಾಗುತ್ತಿರುತ್ತದೆ. ಆ ಹದ್ದಿನ ನಾಟಕದಲ್ಲಂತೂ ಒಬ್ಬ ಪಾತ್ರಧಾರಿಯು ಹೊರಟುಹೋದರೆ
ಅವರಿಗೆ ಬದಲಾಗಿ ಇನ್ನೊಬ್ಬರು ಬರಬಹುದು. ಯಾರಾದರೂ ಖಾಯಿಲೆಗೊಳಗಾದರೆ ಅವರಿಗೆ ಬದಲು
ಇನ್ನೊಬ್ಬರನ್ನು ಸೇರಿಸಿಕೊಳ್ಳುತ್ತಾರೆ ಆದರೆ ಇದಂತೂ ಚೈತನ್ಯ ನಾಟಕವಾಗಿದೆ. ಇದರಲ್ಲಿ ಸ್ವಲ್ಪವೂ
ಅದಲು ಬದಲಾಗಲು ಸಾಧ್ಯವಿಲ್ಲ. ನೀವು ಮಕ್ಕಳಿಗೆ ತಿಳಿದಿದೆ- ನಾವಾತ್ಮರಾಗಿದ್ದೇವೆ, ಇದು ಶರೀರರೂಪಿ
ವಸ್ತ್ರವಾಗಿದೆ, ಇದನ್ನು ಧರಿಸಿ ನಾವು ಬಹುರೂಪಿ ಪಾತ್ರವನ್ನಭಿನಯಿಸುತ್ತೇವೆ. ನಾಮ, ರೂಪ, ದೇಶ,
ಲಕ್ಷಣಗಳು ಬದಲಾಗುತ್ತಾ ಹೋಗುತ್ತವೆ. ಪಾತ್ರಧಾರಿಗಳಿಗೆ ತಮ್ಮ ಪಾತ್ರದ ಬಗ್ಗೆ
ತಿಳಿದಿರುತ್ತದೆಯಲ್ಲವೆ. ತಂದೆಯು ಮಕ್ಕಳಿಗೆ ಈ ಚಕ್ರದ ರಹಸ್ಯವನ್ನಂತೂ ತಿಳಿಸುತ್ತಲೇ ಇರುತ್ತಾರೆ.
ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೆ ಬರುತ್ತಾರೆ ಮತ್ತು ಹೋಗುತ್ತಾರೆ. ಪುನಃ ಹೊಸದಾಗಿ
ಬಂದು ಪಾತ್ರವನ್ನಭಿನಯಿಸುತ್ತಾರೆ. ಇದನ್ನು ವಿಸ್ತಾರದಲ್ಲಿ ತಿಳಿಸುವುದರಲ್ಲಿ ಸಮಯ ಹಿಡಿಸುತ್ತದೆ.
ಬೀಜದಲ್ಲಿ ಭಲೆ ಜ್ಞಾನವಿದೆ ಆದರೆ ತಿಳಿಸಲು ಸಮಯ ಹಿಡಿಸುತ್ತದೆಯಲ್ಲವೆ. ನಿಮ್ಮ ಬುದ್ಧಿಯಲ್ಲಿಯೂ
ಬೀಜ ಮತ್ತು ವೃಕ್ಷದ ಪೂರ್ಣಜ್ಞಾನವಿದೆ. ಅದರಲ್ಲಿಯೂ ಯಾರು ಮೇಲಿದ್ದಾರೆ, ಇದರ ಉತ್ಪತ್ತಿ, ಪಾಲನೆ
ಮತು ಸಂಹಾರ ಹೇಗಾಗುತ್ತದೆ, ಆದ್ದರಿಂದ ತ್ರಿಮೂರ್ತಿಗಳನ್ನು ತೋರಿಸಿದ್ದಾರೆ. ತಂದೆಯು ಕೊಡುವ ಈ
ತಿಳುವಳಿಕೆಯನ್ನು ಮತ್ತ್ಯಾವ ಮನುಷ್ಯರೂ ಕೊಡಲು ಸಾಧ್ಯವಿಲ್ಲ. ಯಾವಾಗ ಇಲ್ಲಿಗೆ ಬರುವರೋ ಆಗ ಅವರಿಗೆ
ಅರ್ಥವಾಗುತ್ತದೆ ಆದ್ದರಿಂದ ನೀವು ಎಲ್ಲರಿಗೆ ಇಲ್ಲಿ ಬಂದು ತಿಳಿದುಕೊಳ್ಳಿ ಎಂದು ಹೇಳುತ್ತೀರಿ.
ಕೆಲಕೆಲವರು ಬಹಳ ಒರಟು ಮನುಷ್ಯರಿರುತ್ತಾರೆ. ನಾವೇನೂ ಕೇಳಬೇಕಾಗಿಲ್ಲ, ನಮಗೆ ಬೇಕಿಲ್ಲವೆಂದು
ಹೇಳಿಬಿಡುತ್ತಾರೆ. ಇನ್ನೂ ಕೆಲವರು ಕೇಳುತ್ತಾರೆ, ಪುಸ್ತಕಗಳನ್ನು ತೆಗೆದುಕೊಳ್ಳುತ್ತಾರೆ, ಕೆಲವರು
ತೆಗೆದುಕೊಳ್ಳುವುದಿಲ್ಲ. ನಿಮ್ಮ ಬುದ್ಧಿಯು ಈಗ ವಿಶಾಲ, ದೂರಾಂದೇಶಿಯಾಗಿಬಿಟ್ಟಿದೆ. ನೀವು
ಮೂರುಲೋಕಗಳನ್ನು ತಿಳಿದುಕೊಂಡಿದ್ದೀರಿ. ಮೂಲವತನಕ್ಕೆ ನಿರಾಕಾರಿ ಪ್ರಪಂಚವೆಂದು ಹೇಳಲಾಗುತ್ತದೆ
ಬಾಕಿ ಸೂಕ್ಷ್ಮವತನದ್ದು ಏನೂ ಇಲ್ಲ. ಸಂಬಂಧವೆಲ್ಲವೂ ಮೂಲವತನ ಮತ್ತು ಸ್ಥೂಲವತನದೊಂದಿಗೆ ಇದೆ.
ಸೂಕ್ಷ್ಮವತನವು ಸ್ವಲ್ಪಸಮಯಕ್ಕಾಗಿ ಇದೆ. ಎಲ್ಲಾ ಆತ್ಮಗಳು ಮೇಲಿಂದ ಪಾತ್ರವನ್ನಭಿನಯಿಸಲು ಇಲ್ಲಿಗೆ
ಬರುತ್ತಾರೆ. ಈ ವೃಕ್ಷದಲ್ಲಿ ಎಲ್ಲಾ ಧರ್ಮದವರು ನಂಬರ್ವಾರ್ ಇದ್ದಾರೆ. ಇದು ಮಾನವ ವಂಶವೃಕ್ಷವಾಗಿದೆ,
ಬಹಳ ಆಕ್ಯೂರೇಟ್ ಆಗಿದೆ, ಸ್ವಲ್ಪವೂ ಹಿಂದೆ-ಮುಂದೆಯಾಗಲು ಸಾಧ್ಯವಿಲ್ಲ. ಆತ್ಮಗಳು ತಮ್ಮ
ಸ್ಥಾನವನ್ನು ಬಿಟ್ಟು ಮತ್ತೆಲ್ಲಿಯೂ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆತ್ಮಗಳು ಬ್ರಹ್ಮ್ತತ್ವದಲ್ಲಿ
ವಿರಾಜಮಾನರಾಗಿರುತ್ತಾರೆ. ಹೇಗೆ ನಕ್ಷತ್ರಗಳು ಆಕಾಶದಲ್ಲಿ ನಿಂತಿರುವಂತೆ. ಈ ನಕ್ಷತ್ರಗಳಂತೂ
ದೂರದಿಂದಲೇ ಚಿಕ್ಕ-ಚಿಕ್ಕರೂಪದಲ್ಲಿ ಕಾಣಿಸುತ್ತದೆ. ದೊಡ್ಡ ನಕ್ಷತ್ರಗಳಾದರೆ ದೂರಕ್ಕೆ ಚಿಕ್ಕದಾಗಿ
ಕಾಣಿಸುತ್ತವೆ ಆದರೆ ಆತ್ಮವು ಚಿಕ್ಕದು, ದೊಡ್ಡದಿರುವುದಿಲ್ಲ, ವಿನಾಶವನ್ನೂ ಹೊಂದುವುದಿಲ್ಲ. ನೀವು
ಸತ್ಯಯುಗದಲ್ಲಿ ಹೋಗುತ್ತೀರಿ ನಂತರ ಕಲಿಯುಗದಲ್ಲಿ ಬರುತ್ತೀರಿ. ಮಕ್ಕಳಿಗೆ ಗೊತ್ತಿದೆ, ನಾವು
ಸತೋಪ್ರಧಾನ ಪ್ರಪಂಚದಲ್ಲಿ ಇದ್ದೆವು, ಈಗ ಕಲಿಯುಗದಲ್ಲಿ ಬಂದುಬಿಟ್ಟಿದ್ದೇವೆ. ಏನೂ ಬೆಲೆಯಿಲ್ಲ.
ಭಲೆ ಮಾಯೆಯ ಹೊಳಪು ಬಹಳಷ್ಟಿದೆ ಆದರೆ ಇದು ರಾವಣನ ಸ್ವರ್ಣೀಮಯುಗ, ಅದು ಈಶ್ವರೀಯ ಸ್ವರ್ಣೀಮಯುಗ
6-7 ವರ್ಷಗಳಲ್ಲಿ ಇಷ್ಟೊಂದು ಆಹಾರ-ಧಾನ್ಯಗಳು ಉತ್ಪನ್ನವಾಗುವುದೆಂದು ಮನುಷ್ಯರು
ಹೇಳುತ್ತಿರುತ್ತಾರೆ ಆದರೆ ಅದರ ಮಾತೇ ಕೇಳಬೇಡಿ. ನೋಡಿ, ಅವರ ಪ್ಲಾನ್ ಹೇಗಿದೆ ಮತ್ತು ನೀವು
ಮಕ್ಕಳದು ಹೇಗಿದೆ? ತಂದೆಯು ತಿಳಿಸುತ್ತಾರೆ- ನನ್ನ ಪ್ಲಾನ್ ಹಳೆಯ ಪ್ರಪಂಚವನ್ನು ಹೊಸದನ್ನಾಗಿ
ಮಾಡುವುದಾಗಿದೆ. ನಿಮ್ಮದು ಒಂದೇ ಪ್ಲಾನ್ ಆಗಿದೆ. ನಿಮಗೆ ಗೊತ್ತಿದೆ, ತಂದೆಯ ಶ್ರೀಮತದಂತೆ ನಾವು
ನಮ್ಮ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ತಂದೆಯು ಮಾರ್ಗವನ್ನು ತಿಳಿಸುತ್ತಾರೆ, ಶ್ರೀಮತ
ಕೊಡುತ್ತಾರೆ. ನೆನಪಿನಲ್ಲಿರುವ ಸಲಹೆ ಕೊಡುತ್ತಾರೆ. ಮತ ಎಂಬ ಶಬ್ಧವಂತೂ ಇದೆಯಲ್ಲವೆ. ಸಂಸ್ಕೃತದ
ಶಬ್ಧವನ್ನು ತಂದೆಯು ಹೇಳುವುದಿಲ್ಲ. ತಂದೆಯಂತೂ ಹಿಂದಿಭಾಷೆಯಲ್ಲಿಯೇ ತಿಳಿಸುತ್ತಾರೆ. ಅನೇಕ
ಭಾಷೆಗಳಿವೆಯಲ್ಲವೆ. ಅನುವಾದಕರೂ ಇರುತ್ತಾರೆ, ಹೇಳಿ ಮತ್ತೆ ಅವರ ಭಾಷೆಗಳಲ್ಲಿ ತಿಳಿಸಿಕೊಡುತ್ತಾರೆ.
ಹಿಂದಿ ಮತ್ತು ಇಂಗ್ಲೀಷನ್ನು ಬಹಳ ಜನರು ತಿಳಿದಿದ್ದಾರೆ, ಓದುತ್ತಾರೆ. ಬಾಕಿ ಮಾತೆಯರು
ಮನೆಯಲ್ಲಿರುವ ಕಾರಣ ಅಷ್ಟೊಂದು ಓದಿರುವುದಿಲ್ಲ. ಇತ್ತೀಚೆಗೆ ವಿದೇಶದಲ್ಲಿ ಆಂಗ್ಲಭಾಷೆಯನ್ನು
ಕಲಿಯುತ್ತಾರೆ ನಂತರ ಇಲ್ಲಿ ಬಂದು ತಾಯಿಯೊಂದಿಗೆ ಆಂಗ್ಲಭಾಷೆಯಲ್ಲಿಯೇ ಮಾತನಾಡತೊಡಗುತ್ತಾರೆ. ಪಾಪ!
ಅವರು ಆಂಗ್ಲಭಾಷೆ ನಮಗೇನು ತಿಳಿಯುತ್ತದೆಯೆಂದು ತಬ್ಬಿಬ್ಬಾಗುತ್ತಾರೆ ಮತ್ತೆ ಅವರು ಅಲ್ಪಸ್ವಲ್ಪ
ಹಿಂದಿಯನ್ನು ಕಲಿಯಬೇಕಾಗುತ್ತದೆ. ಸತ್ಯಯುಗದಲ್ಲಂತೂ ಒಂದುರಾಜ್ಯ, ಒಂದು ಭಾಷೆಯಿತ್ತು, ಅದನ್ನು ಈಗ
ಮತ್ತೆ ಸ್ಥಾಪನೆ ಮಾಡುತ್ತಿದ್ದಾರೆ. ಪ್ರತೀ 5000 ವರ್ಷಗಳ ನಂತರ ಈ ಸೃಷ್ಟಿಚಕ್ರವು ಹೇಗೆ
ಸುತ್ತುತ್ತದೆಯೆಂದು ಬುದ್ಧಿಯಲ್ಲಿರಬೇಕು. ಈಗ ಒಬ್ಬ ತಂದೆಯ ನೆನಪಿನಲ್ಲಿರಬೇಕಾಗಿದೆ. ಇಲ್ಲಿ ನಿಮಗೆ
ಬಹಳ ಅವಕಾಶವಿರುತ್ತದೆ. ಮುಂಜಾನೆ ಸ್ನಾನ ಇತ್ಯಾದಿಗಳನ್ನು ಮುಗಿಸಿ ಹೊರಗಡೆ ಸುತ್ತಾಡುವುದರಲ್ಲಿ
ಬಹಳ ಆನಂದವಾಗುತ್ತದೆ. ಒಳಗೆ ಇದೇ ನೆನಪಿರಲಿ- ನಾವೆಲ್ಲರೂ ಪಾತ್ರಧಾರಿಗಳಾಗಿದ್ದೇವೆ, ಇದೂ ಸಹ
ನಿಮಗೆ ಈ ಸ್ಮೃತಿಬಂದಿದೆ. ತಂದೆಯು ನಮಗೆ 84 ಜನ್ಮಗಳ ಚಕ್ರದ ರಹಸ್ಯವನ್ನು ತಿಳಿಸಿದ್ದಾರೆ. ನಾವು
ಸತೋಪ್ರಧಾನರಾಗಿದ್ದೆವು, ಇದು ಬಹಳ ಖುಷಿಯ ಮಾತಾಗಿದೆ. ಮನುಷ್ಯರು ತಿರುಗಾಡುತ್ತಾರೆ ಆದರೆ
ಅವರಿಗೇನೂ ಸಂಪಾದನೆಯಿಲ್ಲ. ನೀವಂತೂ ತಿರುಗಾಡುವಾಗಲೂ ಬಹಳ ಸಂಪಾದನೆ ಮಾಡಿಕೊಳ್ಳುತ್ತೀರಿ.
ಬುದ್ಧಿಯಲ್ಲಿ ಚಕ್ರವೂ ನೆನಪಿರಲಿ ಮತ್ತು ತಂದೆಯನ್ನೂ ನೆನಪು ಮಾಡುತ್ತಾ ಇರಿ. ಸಂಪಾದನೆಯನ್ನು
ಮಾಡಿಕೊಳ್ಳುವ ಯುಕ್ತಿಗಳನ್ನು ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ. ಯಾವ ಮಕ್ಕಳು ಜ್ಞಾನದ
ವಿಚಾರ ಸಾಗರ ಮಂಥನ ಮಾಡುವುದಿಲ್ಲವೋ ಅವರ ಬುದ್ಧಿಯಲ್ಲಿ ಮಾಯೆಯು ಕಿರಿಕಿರಿ ಮಾಡುತ್ತದೆ. ಅವರಿಗೇ
ಮಾಯೆಯು ತೊಂದರೆ ಕೊಡುತ್ತದೆ. ಆಂತರ್ಯದಲ್ಲಿ ಈ ವಿಚಾರ ಮಾಡಿ- ನಾವು ಈ ಚಕ್ರವನ್ನು ಹೇಗೆ
ಸುತ್ತಿದೆವು? ಸತ್ಯಯುಗದಲ್ಲಿ ಎಷ್ಟು ಜನ್ಮಗಳನ್ನು ತೆಗೆದುಕೊಂಡು ನಂತರ ಕೆಳಗಿಳಿದು ಬಂದೆವು, ಈಗ
ಮತ್ತೆ ಸತೋಪ್ರಧಾನರಾಗಬೇಕಾಗಿದೆ. ತಂದೆಯು ತಿಳಿಸಿದ್ದಾರೆ- ನನ್ನನ್ನು ನೆನಪು ಮಾಡಿದರೆ
ಸತೋಪ್ರಧಾನರಾಗಿಬಿಡುತ್ತೀರಿ. ನಡೆದಾಡುತ್ತಾ-ತಿರುಗಾಡುತ್ತಾ ತಂದೆಯ ನೆನಪಿರಲಿ ಆಗ ಮಾಯೆಯ
ಕಿರಿಕಿರಿ ಸಮಾಪ್ತಿಯಾಗುವುದು. ನಿಮಗೆ ಬಹಳ-ಬಹಳ ಸಂಪಾದನೆಯಾಗುವುದು. ಭಲೆ ಸ್ತ್ರೀ-ಪುರುಷರು
ಜೊತೆಯಲ್ಲಿ ಹೋಗುತ್ತೀರಿ. ಪ್ರತಿಯೊಬ್ಬರೂ ತಮ್ಮ ಶ್ರೇಷ್ಠಪದವಿಯನ್ನು ಪಡೆಯಲು ತಮಗಾಗಿ ಪರಿಶ್ರಮ
ಪಡಬೇಕಾಗಿದೆ. ಒಂಟಿಯಾಗಿ ಹೋಗುವುದರಲ್ಲಂತೂ ಬಹಳ ಮಜಾ ಇದೆ. ತಮ್ಮದೇ ಗುಂಗಿನಲ್ಲಿರುತ್ತಾರೆ.
ಇನ್ನೊಬ್ಬರ ಜೊತೆಯಲ್ಲಿದ್ದರೆ ಬುದ್ಧಿಯು ಅಲ್ಲಿ-ಇಲ್ಲಿ ಹೋಗುವುದು. ನೆನಪು ಬಹಳ ಸಹಜವಾಗಿದೆ.
ಎಲ್ಲಾ ಕಡೆ ಉದ್ಯಾನವನಗಳಿವೆ. ಯಾರಾದರೂ ಇಂಜಿನಿಯರ್ ಆಗಿದ್ದರೆ ಇದನ್ನು ಕಟ್ಟಿಸಬೇಕು, ಅದನ್ನು
ಕಟ್ಟಿಸಬೇಕೆಂದು ಬುದ್ಧಿಯಲ್ಲಿ ಉಪಾಯಗಳು ಹೊಳೆಯುತ್ತಿರುತ್ತವೆ. ನೀವೂ ಸಹ ಮನೆಯಲ್ಲಿ
ಕುಳಿತಿದ್ದೀರಿ ಆದರೂ ಬುದ್ಧಿಯು ತಂದೆಯಕಡೆ ತೊಡಗಿರಲಿ. ಈ ಹವ್ಯಾಸವನ್ನಿಟ್ಟುಕೊಳ್ಳಿ ಆಗ
ನಿಮ್ಮಲ್ಲಿ ಇದೇ ಚಿಂತನೆಯು ನಡೆಯುತ್ತಿರುವುದು. ಓದಲೂ ಬೇಕಾಗಿದೆ, ಉದ್ಯೋಗ-ವ್ಯವಹಾರಗಳನ್ನೂ
ಮಾಡಬೇಕಾಗಿದೆ. ಮಕ್ಕಳು, ಯುವಕರು, ವೃದ್ಧರು ಎಲ್ಲರೂ ಪಾವನರಾಗಬೇಕಾಗಿದೆ. ಆತ್ಮಕ್ಕೆ ತಂದೆಯಿಂದ
ಆಸ್ತಿಯನ್ನು ಪಡೆಯುವ ಅಧಿಕಾರವಿದೆ. ಮಕ್ಕಳಿಗೂ ಸಹ ಬಾಲ್ಯದಲ್ಲಿಯೇ ಈ ಬೀಜವನ್ನು ಬಿತ್ತನೆ ಮಾಡಿದರೆ
ಒಳ್ಳೆಯದು. ಆಧ್ಯಾತ್ಮಿಕ ವಿದ್ಯೆಯನ್ನು ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ.
ನಿಮ್ಮ ಈ ಆಧ್ಯಾತ್ಮಿಕ
ವಿದ್ಯೆಯನ್ನು ನಿಮಗೆ ತಂದೆಯೇ ಓದಿಸುತ್ತಾರೆ. ಆ ಶಾಲೆಗಳಲ್ಲಿ ಲೌಕಿಕ ವಿದ್ಯೆಯು ಸಿಗುತ್ತದೆ ಮತ್ತು
ಅದು ಶಾಸ್ತ್ರಗಳ ವಿದ್ಯೆಯಾಗಿದೆ ಆದರೆ ಇದು ಆತ್ಮಿಕ ವಿದ್ಯೆಯಾಗಿದೆ. ಇದನ್ನು ಭಗವಂತನೇ
ಕಲಿಸುತ್ತಾರೆ, ಇದರ ಬಗ್ಗೆ ಯಾರಿಗೂ ತಿಳಿದಿಲ್ಲ. ಇದಕ್ಕೆ ಆಧ್ಯಾತ್ಮಿಕ ಜ್ಞಾನವೆಂದು
ಹೇಳಲಾಗುತ್ತದೆ. ಈ ವಿದ್ಯೆಯನ್ನು ಪರಮಾತ್ಮನೇ ಬಂದು ಓದಿಸುತ್ತಾರೆ ಅವರಿಗೆ ಮತ್ತ್ಯಾವ ಹೆಸರನ್ನೂ
ಇಡಲಾಗುವುದಿಲ್ಲ. ಸ್ವಯಂ ತಂದೆಯೇ ಬಂದು ಓದಿಸುತ್ತಾರೆ. ಭಗವಾನುವಾಚ ಇದೆಯಲ್ಲವೆ- ಭಗವಂತನು ಒಂದೇ
ಬಾರಿ ಈ ಸಮಯದಲ್ಲಿ ಬಂದು ತಿಳಿಸಿಕೊಡುತ್ತಾರೆ. ಇದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ, ಆ
ಶಾಸ್ತ್ರಗಳ ವಿದ್ಯೆಯು ಬೇರೆಯಾಗಿದೆ. ನಿಮಗೆ ತಿಳಿದಿದೆ- ಸ್ಥೂಲ ಕಾಲೇಜು ಇತ್ಯಾದಿಗಳು ಒಂದಾಗಿದೆ,
ಇನ್ನೊಂದು ಶಾಸ್ತ್ರಗಳ ವಿದ್ಯೆಯಾಗಿದೆ. ಮೂರನೆಯದು ಈ ಆತ್ಮಿಕ ವಿದ್ಯೆಯಾಗಿದೆ. ಅವರು ಭಲೆ ಎಷ್ಟೇ
ದೊಡ್ಡ-ದೊಡ್ಡ ತತ್ವಜ್ಞಾನಿಗಳಿರಲಿ ಆದರೆ ಅವರ ಬಳಿಯೂ ಶಾಸ್ತ್ರಗಳ ಮಾತಿದೆ. ನಿಮ್ಮ ಈ ಜ್ಞಾನವೇ
ಸಂಪೂರ್ಣ ಭಿನ್ನವಾಗಿದೆ. ಈ ಆಧ್ಯಾತ್ಮಿಕ ಜ್ಞಾನವನ್ನು ಯಾರು ಆತ್ಮಿಕ ತಂದೆ, ಎಲ್ಲಾ ಆತ್ಮಗಳ
ತಂದೆಯಾಗಿದ್ದಾರೆ ಅವರೇ ಓದಿಸುತ್ತಾರೆ. ಅವರ ಮಹಿಮೆಯಾಗಿದೆ- ಶಾಂತಿಯ ಸಾಗರ, ಸುಖದ ಸಾಗರ.....
ಕೃಷ್ಣನ ಮಹಿಮೆಯೇ ಬೇರೆಯಾಗಿದೆ. ಗುಣ-ಅವಗುಣಗಳು ಮನುಷ್ಯರಲ್ಲಿರುತ್ತವೆ ಹಾಗೆಯೇ
ಮಾತನಾಡುತ್ತಿರುತ್ತಾರೆ. ತಂದೆಯ ಮಹಿಮೆಯನ್ನೂ ಸಹ ಯಥಾರ್ಥರೀತಿಯಿಂದ ನೀವೇ ತಿಳಿದುಕೊಂಡಿದ್ದೀರಿ.
ಅವರಂತೂ ಕೇವಲ ಗಿಳಿಯ ಪಾಠದಂತೆ ಹಾಡುತ್ತಾರೆ, ಅರ್ಥವೇನೂ ಗೊತ್ತಿಲ್ಲ. ಆದ್ದರಿಂದ ತಮ್ಮ ಉನ್ನತಿ
ಹೇಗೆ ಮಾಡಿಕೊಳ್ಳುವುದೆಂದು ತಂದೆಯು ಮಕ್ಕಳಿಗೆ ಸಲಹೆ ಕೊಡುತ್ತಾರೆ. ಪುರುಷಾರ್ಥ ಮಾಡುತ್ತಾ
ಇದ್ದಾಗ ಪಕ್ಕಾ ಆಗುತ್ತಾ ಹೋಗುವಿರಿ ನಂತರ ಆಫೀಸಿನಲ್ಲಿ ಕೆಲಸ ಮಾಡುವ ಸಮಯದಲ್ಲಿಯೂ ಈ ಸ್ಮೃತಿ
ಬರುವುದು. ಈಶ್ವರನ ಸ್ಮೃತಿ ಬರುವುದು. ಮಾಯೆಯ ಸ್ಮೃತಿಯಂತೂ ಅರ್ಧಕಲ್ಪ ನಡೆದಿದೆ ಈಗ ತಂದೆಯು
ಯಥಾರ್ಥ ರೀತಿ ಕುಳಿತು ತಿಳಿಸುತ್ತಾರೆ. ತಮ್ಮನ್ನು ನೋಡಿಕೊಳ್ಳಿ, ನಾವು ಏನಾಗಿದ್ದೆವು. ಈಗ
ಏನಾಗಿದ್ದೇವೆ! ಮತ್ತೆ ನಮ್ಮನ್ನು ತಂದೆಯು ಇಂತಹ ದೇವತೆಗಳನ್ನಾಗಿ ಮಾಡುತ್ತಾರೆ. ಇದನ್ನು ಸಹ ನೀವು
ಮಕ್ಕಳೇ ನಂಬರ್ವಾರ್ ಪುರುಷಾರ್ಥಾನುಸಾರ ತಿಳಿದುಕೊಳ್ಳುವಿರಿ. ಮೊಟ್ಟಮೊದಲು ಭಾರತವೇ ಇತ್ತು,
ಭಾರತದಲ್ಲಿಯೇ ತಂದೆಯು ಪಾತ್ರವನ್ನಭಿನಯಿಸಲು ಬರುತ್ತಾರೆ. ನೀವೂ ಸಹ ಆದಿಸನಾತನ ದೇವಿ-ದೇವತಾ
ಧರ್ಮದವರಾಗಿದ್ದಿರಲ್ಲವೆ. ನೀವೀಗ ಪವಿತ್ರರಾಗಬೇಕಾಗಿದೆ ಇಲ್ಲದಿದ್ದರೆ ಕೊನೆಯಲ್ಲಿ ಬರುತ್ತೀರಿ
ಅಂದಮೇಲೆ ಏನು ಸುಖವನ್ನು ಪಡೆಯುವಿರಿ! ಹೆಚ್ಚು ಭಕ್ತಿ ಮಾಡದೇ ಇರುವವರು ಬರುವುದಿಲ್ಲ. ಇವರು
ಅಷ್ಟೊಂದು ಜ್ಞಾನವನ್ನು ತೆಗೆದುಕೊಳ್ಳುವವರಲ್ಲವೆಂದು ಅರ್ಥವಾಗುತ್ತದೆ. ಪ್ರತಿಯೊಬ್ಬರನ್ನೂ ನೋಡಿಯೇ
ತಿಳಿದುಕೊಳ್ಳಬಹುದಲ್ಲವೆ. ಬಹಳ ಪರಿಶ್ರಮಪಟ್ಟರೂ ಸಹ ಕೆಲವರೇ ವಿರಳ ಬರುತ್ತಾರೆ ಆದರೆ
ಸುಸ್ತಾಗಬಾರದು, ಪರಿಶ್ರಮ ಪಡಬೇಕಾಗುವುದು. ಪರಿಶ್ರಮವಿಲ್ಲದೆ ಏನೂ ಸಿಗುವುದಿಲ್ಲ. ಪ್ರಜೆಗಳಂತೂ
ಬಹಳಮಂದಿ ತಯಾರಾಗುತ್ತಿರುತ್ತಾರೆ. ತಂದೆಯು ಮಕ್ಕಳ ಉನ್ನತಿಗಾಗಿ ಯುಕ್ತಿಯನ್ನು ತಿಳಿಸುತ್ತಾರೆ-
ಮಕ್ಕಳೇ, ತಮ್ಮ ಉನ್ನತಿ ಮಾಡಿಕೊಳ್ಳಬೇಕೆಂದರೆ ಬೆಳಗ್ಗೆ-ಬೆಳಗ್ಗೆ ಸ್ನಾನ ಇತ್ಯಾದಿಗಳನ್ನು ಮುಗಿಸಿ
ಏಕಾಂತದಲ್ಲಿ ಹೋಗಿ ತಿರುಗಾಡಿ ಮತ್ತು ಕುಳಿತು ನೆನಪು ಮಾಡಿ. ಆರೋಗ್ಯಕ್ಕಾಗಿ ತಿರುಗಾಡುವುದು ಬಹಳ
ಒಳ್ಳೆಯದು. ಓಡಾಡುವಾಗಲೂ ತಂದೆಯ ನೆನಪಿರುವುದು ಮತ್ತು ನಾಟಕದ ರಹಸ್ಯವೂ ಬುದ್ಧಿಯಲ್ಲಿರುತ್ತದೆ
ಅಂದಾಗ ಎಷ್ಟು ಸಂಪಾದನೆಯಿದೆ! ಇದು ಸತ್ಯಸಂಪಾದನೆಯಾಗಿದೆ. ಆ ಸಂಪಾದನೆಯು ಪೂರ್ಣವಾಯಿತೆಂದರೆ ಮತ್ತೆ
ಈ ಸಂಪಾದನೆಯ ಚಿಂತನೆ ಮಾಡಿ. ಇಲ್ಲಿ ಕಷ್ಟವಾದದ್ದೇನೂ ಇಲ್ಲ. ಬ್ರಹ್ಮಾತಂದೆಯು ನೋಡಿದ್ದಾರೆ,
ಕೆಲವರು ತಮ್ಮ ಪೂರ್ಣ ಜೀವನಕಥೆಯನ್ನು ಬರೆಯುತ್ತಾರೆ- ಇಂದು ಇಷ್ಟು ಗಂಟೆಗೆ ಎದ್ದೆನು ನಂತರ ಇದನ್ನು
ಮಾಡಿದೆನು....... ನಂತರ ಬರುವವರು ಓದಿ ಕಲಿಯುತ್ತಾರೆಂದು ತಿಳಿಯುತ್ತಾರೆ. ದೊಡ್ಡ-ದೊಡ್ಡ
ವ್ಯಕ್ತಿಗಳ ಜೀವನಚರಿತ್ರೆಯನ್ನು ಓದುತ್ತಾರಲ್ಲವೆ. ಮಕ್ಕಳಿಗಾಗಿ ಬರೆಯುತ್ತಾರೆ ಮತ್ತು ಮಕ್ಕಳೂ ಸಹ
ಮನೆಯಲ್ಲಿ ಇಂತಹ ಒಳ್ಳೆಯ ಸ್ವಭಾವದವರಾಗುತ್ತಾರೆ. ಈಗ ನೀವು ಮಕ್ಕಳು ಪುರುಷಾರ್ಥ ಮಾಡಿ
ಸತೋಪ್ರಧಾನರಾಗಬೇಕಾಗಿದೆ. ಪುನಃ ಸತೋಪ್ರಧಾನ ಪ್ರಪಂಚದ ರಾಜ್ಯವನ್ನು ತೆಗೆದುಕೊಳ್ಳಬೇಕಾಗಿದೆ.
ನಿಮಗೆ ತಿಳಿದಿದೆ- ಕಲ್ಪ-ಕಲ್ಪವೂ ರಾಜ್ಯವನ್ನು ತೆಗೆದುಕೊಂಡಿದ್ದೀರಿ ಮತ್ತು ಕಳೆದುಕೊಳ್ಳುವಿರಿ.
ಇದೆಲ್ಲವೂ ನಿಮ್ಮ ಬುದ್ಧಿಯಲ್ಲಿದೆ, ಇದು ಹೊಸಪ್ರಪಂಚ, ಹೊಸಧರ್ಮಕ್ಕಾಗಿ, ಹೊಸಜ್ಞಾನಕ್ಕಾಗಿ ಈ
ಜ್ಞಾನವಿದೆ ಆದ್ದರಿಂದ ಮಧುರಾತಿ ಮಧುರ ಮಕ್ಕಳಿಗೆ ಪುನಃ ತಿಳಿಸುತ್ತೇನೆ- ಬೇಗ-ಬೇಗನೆ ಪುರುಷಾರ್ಥ
ಮಾಡಿ, ಶರೀರದ ಮೇಲೆ ಯಾವುದೇ ಭರವಸೆಯಿಲ್ಲ. ಇತ್ತೀಚೆಗಂತೂ ಮೃತ್ಯುವು ಬಹಳ ಸಹಜವಾಗಿಬಿಟ್ಟಿದೆ.
ಅಮರಲೋಕದಲ್ಲಿ ಇಂತಹ ಮೃತ್ಯುವೆಂದೂ ಆಗುವುದಿಲ್ಲ. ಇಲ್ಲಂತೂ ಕುಳಿತು-ಕುಳಿತಿದ್ದಂತೆಯೇ
ಶರೀರಬಿಡುತ್ತಾರೆ ಆದ್ದರಿಂದ ತಮ್ಮ ಪುರುಷಾರ್ಥ ಮಾಡುತ್ತಾ ಇರಿ, ಜಮಾ ಮಾಡಿಕೊಳ್ಳುತ್ತಾ ಇರಿ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಬುದ್ಧಿಯನ್ನು
ಜ್ಞಾನಚಿಂತನೆಯಲ್ಲಿ ಬ್ಯುಜಿûಯಾಗಿಟ್ಟುಕೊಳ್ಳುವ ಹವ್ಯಾಸ ಮಾಡಿಕೊಳ್ಳಬೇಕಾಗಿದೆ. ಸಮಯ ಸಿಕ್ಕಿದಾಗ
ಏಕಾಂತದಲ್ಲಿ ಕುಳಿತು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ತಂದೆಯನ್ನು ನೆನಪು ಮಾಡಿ
ಸತ್ಯಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕು.
2. ದೂರಾಂದೇಶಿಗಳಾಗಿ ಈ
ಬೇಹದ್ದಿನ ನಾಟಕವನ್ನು ಯಥಾರ್ಥರೀತಿಯಿಂದ ತಿಳಿದುಕೊಳ್ಳಬೇಕಾಗಿದೆ. ಎಲ್ಲಾ ಪಾತ್ರಧಾರಿಗಳ
ಪಾತ್ರವನ್ನು ಸಾಕ್ಷಿಯಾಗಿ ನೋಡಬೇಕಾಗಿದೆ.
ವರದಾನ:
ಮಧುರತೆಯ ದ
ಮೂಲಕ ಸದಾ ಮುಂದುವರೆಯುವಂತಹವರು ಶ್ರೇಷ್ಠ ಆತ್ಮ ಭವ
ಮಧುರತೆ ಇಂತಹ ವಿಶೇಷ
ಧಾರಣೆಯಾಗಿದೆ ಯಾವುದು ಕಠಿಣ ಧರಣಿಯನ್ನೂ ಸಹ ಮಧುರವನ್ನಾಗಿ ಮಾಡಿಬಿಡುವುದು.ಯಾರಿಗೇ ಆಗಲಿ ಎರಡು
ಘಳಿಗೆ ಮಧುರ ದೃಷ್ಠಿ ಕೊಡಿ, ಮಧರ ಮಾತು, ಮಾತನಾಡಿದರೆ ಯಾವುದೇ ಆತ್ಮವನ್ನು ಸದಾಕಾಲಕ್ಕಾಗಿ
ಸಂಪನ್ನರನ್ನಾಗಿ ಮಾಡಿಬಿಡುವುದು. ಎರಡು ಘಳಿಗೆಯ ಮಧುರ ದೃಷ್ಠಿ ಅಥವಾ ಮಾತು ಆ ಆತ್ಮದ ಸೃಷ್ಠಿಯನ್ನು
ಬದಲಾಯಿಸಿಬಿಡುವುದು. ತಮ್ಮ ಎರಡು ಮಧುರ ಮಾತು ಸಹ ಸದಾಕಾಲಕ್ಕಾಗಿ ಅವರನ್ನು ಬದಲಾಯಿಸಲು
ನಿಮಿತ್ತವಾಗಿಬಿಡುವುದು ಆದ್ದರಿಂದ ಮಧುರತೆಯ ವರದಾನವನ್ನು ಸದಾ ಜೊತೆಯಲ್ಲಿಟ್ಟುಕೊಳ್ಳಿ. ಸದಾ
ಮಧುರವಾಗಿರಬೇಕು ಮತ್ತು ಸರ್ವರನ್ನು ಮಧುರರನ್ನಾಗಿ ಮಾಡಬೇಕು.
ಸ್ಲೋಗನ್:
ಎಲ್ಲಾ
ಪರಿಸ್ಥಿತಿಯಲ್ಲೂ ರಾಜಿóಯಾಗಿರಿ ಆಗ ರಹಸ್ಯಯುಕ್ತರಾಗಿಬಿಡುವಿರಿ.
ಅವ್ಯಕ್ತ ಸೂಚನೆ:
ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ
ಯಾವಾಗ ಬೇರೆ ಎಲ್ಲಾ
ಸಂಕಲ್ಪಗಳು ಶಾಂತವಾಗಿ ಬಿಡುತ್ತದೆ, ಕೇವಲ ಒಬ್ಬ ತಂದೆ ಹಾಗೂ ತಾವು- ಈ ಮಿಲನದ ಅನುಭೂತಿಯ ಸಂಕಲ್ಪ
ಇರುತ್ತದೆ ಎಂದಾಗ ಸಂಕಲ್ಪ ಶಕ್ತಿ ಜಮಾ ಆಗುತ್ತದೆ ಹಾಗೂ ಯೋಗ ಶಕ್ತಿಶಾಲಿಯಾಗುತ್ತದೆ, ಇದಕ್ಕಾಗಿ
ಸಮಾವೇಶ ಮಾಡಿಕೊಳ್ಳುವ ಅಥವಾ ಎಲ್ಲವನ್ನು ಒಟ್ಟುಗೂಡಿಸುವ ಶಕ್ತಿಯನ್ನು ಧಾರಣೆ ಮಾಡಿ. ಸಂಕಲ್ಪಗಳ
ಮೇಲೆ ಫುಲ್ ಬ್ರೇಕ್ ಹಾಕಿ, ಸಡಿಲವಾಗಿ ಬಿಡಬೇಡಿ, ಒಂದು ವೇಳೆ ಒಂದು ಸೆಕೆಂಡಿನ ಬದಲಾಗಿ ಜಾಸ್ತಿ
ಸಮಯ ಹಿಡಿಸುತ್ತದೆ ಎಂದರೆ ಸಮಾವೇಶ ಮಾಡುವ ಶಕ್ತಿ ಬಲಹೀನವಾಗಿದೆ.