03.09.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನೀವು
ಯಾವುದೇ ಪತಿತ ದೇಹಧಾರಿಗಳೊಂದಿಗೆ ಪ್ರೀತಿಯನ್ನಿಡಬಾರದು. ಏಕೆಂದರೆ ನೀವು ಪಾವನ ಪ್ರಪಂಚದಲ್ಲಿ
ಹೋಗುತ್ತಿದ್ದೀರಿ, ಒಬ್ಬ ತಂದೆಯೊಂದಿಗೆ ಪ್ರೀತಿ ಮಾಡಬೇಕಾಗಿದೆ.”
ಪ್ರಶ್ನೆ:
ನೀವು ಮಕ್ಕಳು
ಯಾವುದರಿಂದ ಬೇಸರವಾಗಬಾರದು?
ಉತ್ತರ:
ನೀವು ತಮ್ಮ ಈ
ಹಳೆಯ ಶರೀರದೊಂದಿಗೆ ಸ್ವಲ್ಪವೂ ಬೇಸರವಾಗಬಾರದು. ಏಕೆಂದರೆ ಈ ಶರೀರವು ಬಹಳ-ಬಹಳ ಅಮೂಲ್ಯವಾಗಿದೆ.
ಆತ್ಮವು ಈ ಶರೀರದಲ್ಲಿ ಕುಳಿತು ತಂದೆಯನ್ನು ನೆನಪು ಮಾಡಿ ಬಹಳ ದೊಡ್ಡ ಲಾಟರಿಯನ್ನು
ತೆಗೆದುಕೊಳ್ಳುತ್ತದೆ. ತಂದೆಯ ನೆನಪಿನಲ್ಲಿದ್ದಾಗ ಖುಷಿಯ ಔಷಧಿಯು ಸಿಗುತ್ತಾ ಇರುತ್ತದೆ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮೀಯ ಮಕ್ಕಳೇ, ಈಗ ದೂರದೇಶದ ನಿವಾಸಿಗಳು ಮತ್ತು ದೂರದೇಶದ ಪ್ರಯಾಣಿಕರಾಗಿದ್ದೀರಿ.
ನಾವಾತ್ಮಗಳಾಗಿದ್ದೇವೆ ಮತ್ತು ಈಗ ಬಹಳ ದೂರದೇಶಕ್ಕೆ ಹೋಗುವ ಪುರುಷಾರ್ಥ ಮಾಡುತ್ತಿದ್ದೇವೆ.
ನಾವಾತ್ಮಗಳು ದೂರದೇಶದ ನಿವಾಸಿಯಾಗಿದ್ದೇವೆ ಮತ್ತು ದೂರದೇಶದಲ್ಲಿರುವ ತಂದೆಯನ್ನೂ ಸಹ ಬಂದು
ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ಕರೆಯುತ್ತೀರಿ. ಈಗ ದೂರದೇಶದ ನಿವಾಸಿ ತಂದೆಯೇ ನೀವು
ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ನೀವು ಆತ್ಮೀಯ ಮಕ್ಕಳು ಪ್ರಾಮಾಣಿಕರಾಗಿದ್ದೀರಿ.
ಏಕೆಂದರೆ ಈ ಶರೀರದ ಜೊತೆ ಇದ್ದೀರಲ್ಲವೆ. ಶರೀರವಂತೂ ಇಲ್ಲಿಯೇ ಬಿಟ್ಟುಹೋಗುತ್ತದೆ. ಬಾಕಿ ಆತ್ಮವೇ
ಪ್ರಯಾಣ ಮಾಡುತ್ತದೆ. ಆತ್ಮವು ಎಲ್ಲಿಗೆ ಹೋಗುತ್ತದೆ? ತಮ್ಮ ಆತ್ಮಿಕ ಪ್ರಪಂಚದಲ್ಲಿ ಇದು
ಸ್ಥೂಲಪ್ರಪಂಚವಾಗಿದೆ, ಅದು ಆತ್ಮಗಳ ಪ್ರಪಂಚವಾಗಿದೆ. ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ- ಈಗ
ಎಲ್ಲಿಂದ ಪಾತ್ರವನ್ನಭಿನಯಿಸಲು ಬಂದಿದ್ದೀರೋ ಆ ಮನೆಗೆ ಹಿಂತಿರುಗಿ ಹೋಗಬೇಕಾಗಿದೆ. ಇದು ಬಹಳ
ದೊಡ್ಡ ರಂಗಮಂಟಪ ಅಥವಾ ಸ್ಟೇಜ್ ಆಗಿದೆ. ಸ್ಟೇಜ್ ಮೇಲೆ ನಟನೆ ಮಾಡಿ ಪಾತ್ರವನ್ನಭಿನಯಿಸಿದ ನಂತರ
ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ನಾಟಕವು ಪೂರ್ಣವಾದಾಗಲೇ ಹೋಗುತ್ತಾರಲ್ಲವೇ. ಈಗ ನೀವಿಲ್ಲಿ
ಕುಳಿತಿದ್ದೀರಿ. ನಿಮ್ಮ ಬುದ್ಧಿಯೋಗವು ಮನೆ ಮತ್ತು ರಾಜಧಾನಿಯಲ್ಲಿದೆ. ಇದಂತೂ ಪಕ್ಕಾ-ಪಕ್ಕಾ
ನೆನಪಿಟ್ಟುಕೊಳ್ಳಿ. ಏಕೆಂದರೆ ಅಂತ್ಯಮತಿ ಸೋಗತಿಯೆಂದು ಗಾಯನವಿದೆ. ಈಗ ನೀವಿಲ್ಲಿ ಓದುತ್ತಿದ್ದೀರಿ.
ಭಗವಂತನೇ ನಮಗೆ ಓದಿಸುತ್ತಾರೆಂದು ನಿಮಗೆ ತಿಳಿದಿದೆ. ಭಗವಂತನಂತೂ ಈ ಪುರುಷೋತ್ತಮ ಸಂಗಮಯುಗದ ಹೊರತು
ಮತ್ತೆಂದೂ ಓದಿಸುವುದಿಲ್ಲ. ಪೂರ್ಣ 5000 ವರ್ಷಗಳಲ್ಲಿ ನಿರಾಕಾರ ಭಗವಂತನು ಒಂದೇಬಾರಿ ಬಂದು
ಓದಿಸುತ್ತಾರೆ. ಇದಂತೂ ನಿಮಗೆ ಪಕ್ಕಾ ನಿಶ್ಚಯವಿದೆ. ವಿದ್ಯೆಯೂ ಸಹ ಎಷ್ಟೊಂದು ಸಹಜವಾಗಿದೆ. ಈಗ
ಮನೆಗೆ ಹೋಗಬೇಕಾಗಿದೆ. ಆ ಮನೆಯೊಂದಿಗೆ ಇಡೀ ಪ್ರಪಂಚದವರಿಗೇ ಪ್ರೀತಿಯಿದೆ. ಮುಕ್ತಿಧಾಮಕ್ಕೆ ಹೋಗಲು
ಎಲ್ಲರೂ ಇಚ್ಛಿಸುತ್ತಾರೆ. ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಮನುಷ್ಯರ ಬುದ್ಧಿಯು ಈ
ಸಮಯದಲ್ಲಿ ಹೇಗಿದೆ ಮತ್ತು ಈಗ ನಿಮ್ಮ ಬುದ್ಧಿಯು ಹೇಗಿದೆ, ಇದರಲ್ಲಿ ಎಷ್ಟೊಂದು ಅಂತರವಿದೆ.
ನಂಬರ್ವಾರ್ ಪುರುಷಾರ್ಥದನುಸಾರ ಸ್ವಚ್ಛ ಬುದ್ಧಿಯಾಗಿದೆ. ಇಡೀ ವಿಶ್ವದ ಆದಿ-ಮಧ್ಯ-ಅಂತ್ಯದ ಜ್ಞಾನವು
ನಿಮ್ಮ ಬುದ್ಧಿಯಲ್ಲಿ ಬಹಳ ಒಳ್ಳೆಯ ರೀತಿಯಲ್ಲಿದೆ. ನಾವೀಗ ಪುರುಷಾರ್ಥ ಮಾಡಿ ನರನಿಂದ ನಾರಾಯಣರು
ಅವಶ್ಯವಾಗಿ ಆಗಬೇಕೆಂದು ನಿಮ್ಮ ಹೃದಯದಲ್ಲಿದೆ. ಇಲ್ಲಿಂದ ಮೊದಲು ತಮ್ಮ ಮನೆಗೆ ಹೋಗುತ್ತೀರಲ್ಲವೆ
ಅಂದಮೇಲೆ ಖುಷಿ-ಖುಷಿಯಿಂದ ಹೋಗಬೇಕಾಗಿದೆ. ಹೇಗೆ ಸತ್ಯಯುಗದಲ್ಲಿ ದೇವತೆಗಳು ಖುಷಿಯಿಂದ ಒಂದು
ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆಯೋ ಹಾಗೆಯೇ ಈ ಹಳೆಯ ಶರೀರವನ್ನು ಸಹ
ಖುಷಿಯಿಂದ ಬಿಡಬೇಕಾಗಿದೆ. ಇದರೊಂದಿಗೆ ಬೇಸರವಾಗಬಾರದು. ಏಕೆಂದರೆ ಇದು ಬಹಳ ಅಮೂಲ್ಯವಾದ
ಶರೀರವಾಗಿದೆ. ಈ ಶರೀರದಿಂದಲೇ ಆತ್ಮಕ್ಕೆ ತಂದೆಯಿಂದ ಲಾಟರಿ ಸಿಗುತ್ತದೆ. ಎಲ್ಲಿಯವರೆಗೆ ನಾವು
ಪವಿತ್ರರಾಗುವುದಿಲ್ಲವೋ ಅಲ್ಲಿಯವರೆಗೆ ಮನೆಗೆ ಹೋಗಲು ಸಾಧ್ಯವಿಲ್ಲ. ತಂದೆಯನ್ನು ನೆನಪು
ಮಾಡುತ್ತಿದ್ದಾಗಲೇ ಆ ಯೋಗಬಲದಿಂದ ಪಾಪಗಳ ಹೊರೆಯು ಇಳಿಯುತ್ತದೆ. ಇಲ್ಲದಿದ್ದರೆ ಬಹಳಷ್ಟು
ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಆದ್ದರಿಂದ ಪವಿತ್ರರಂತೂ ಅವಶ್ಯವಾಗಿ ಆಗಬೇಕು. ಲೌಕಿಕ
ಸಂಬಂಧದಲ್ಲಿಯೂ ಮಕ್ಕಳು ಯಾರಾದರೂ ಕೊಳಕು, ಪತಿತ ಕೆಲಸ ಮಾಡುತ್ತಾರೆಂದರೆ ತಂದೆಯು ಕೋಪದಲ್ಲಿ ಬಂದು
ಕೋಲಿನಿಂದಲೂ ಹೊಡೆದುಬಿಡುತ್ತಾರೆ. ಏಕೆಂದರೆ ಕಾನೂನಿಗೆ ವಿರುದ್ಧ, ಪತಿತರಾಗುತ್ತಾರೆ. ಯಾರ
ಜೊತೆಯಾದರೂ ಕಾನೂನು ಬಾಹಿರವಾದ ಪ್ರೀತಿಯನ್ನು ಇಟ್ಟುಕೊಳ್ಳುತ್ತಾರೆಂದರೂ ಸಹ ಅದು ತಂದೆ-ತಾಯಿಗೆ
ಇಷ್ಟವಾಗುವುದಿಲ್ಲ. ಇಲ್ಲಿ ಬೇಹದ್ದಿನ ತಂದೆಯು ತಿಳಿಸುತ್ತಾರೆ- ನೀವು ಮಕ್ಕಳು ಇಲ್ಲಿರುವಂತಿಲ್ಲ.
ಈಗ ನೀವು ಹೊಸಪ್ರಪಂಚದಲ್ಲಿ ಹೋಗಬೇಕಾಗಿದೆ. ಅಲ್ಲಿ ವಿಕಾರಿ, ಪತಿತರು ಯಾರೂ ಇರುವುದಿಲ್ಲ. ಒಬ್ಬರೇ
ಪತಿತ-ಪಾವನ ತಂದೆಯು ಬಂದು ನಿಮ್ಮನ್ನು ಇಂತಹ ಪಾವನರನ್ನಾಗಿ ಮಾಡುತ್ತಾರೆ. ಸ್ವಯಂ ತಂದೆಯೇ
ಹೇಳುತ್ತಾರೆ- ನನ್ನ ಜನ್ಮವು ದಿವ್ಯ ಮತ್ತು ಅಲೌಕಿಕವಾಗಿದೆ. ಮತ್ತ್ಯಾವ ಆತ್ಮವೂ ಸಹ ನನ್ನ ಸಮಾನ
ಶರೀರದಲ್ಲಿ ಪ್ರವೇಶ ಮಾಡಲು ಸಾಧ್ಯವಿಲ್ಲ. ಭಲೇ ಧರ್ಮಸ್ಥಾಪಕರು ಬರುತ್ತಾರೆ. ಅವರ ಆತ್ಮವು ಪ್ರವೇಶ
ಮಾಡುತ್ತದೆ. ಆದರೆ ಆ ಮಾತೇ ಬೇರೆಯಾಗಿದೆ. ನಾನಂತೂ ಎಲ್ಲರನ್ನೂ ಹಿಂತಿರುಗಿ ಕರೆದುಕೊಂಡು
ಹೋಗುವುದಕ್ಕಾಗಿಯೇ ಬರುತ್ತೇನೆ. ಅವರು ತಮ್ಮ ಪಾತ್ರವನ್ನಭಿನಯಿಸಲು ಮೇಲಿಂದ ಕೆಳಗಿಳಿಯುತ್ತಾರೆ.
ಆದರೆ ನಾನು ಎಲ್ಲರನ್ನೂ ಕರೆದುಕೊಂಡು ಹೋಗಲು ಬರುತ್ತೇನೆ ಹಾಗೂ ನೀವು ಹೇಗೆ ಮೊಟ್ಟಮೊದಲು ಹೊಸ
ಪ್ರಪಂಚದಲ್ಲಿ ಇಳಿಯುತ್ತೀರೆಂದು ತಿಳಿಸುತ್ತೇನೆ. ಆ ಹೊಸಪ್ರಪಂಚ ಸತ್ಯಯುಗದಲ್ಲಿ ಕೊಕ್ಕರೆಗಳು ಯಾರೂ
ಇರುವುದಿಲ್ಲ. ತಂದೆಯು ಬರುವುದೇ ಕೊಕ್ಕರೆಗಳ ಮಧ್ಯದಲ್ಲಿ ಮತ್ತೆ ನಿಮ್ಮನ್ನು ಹಂಸಗಳನ್ನಾಗಿ
ಮಾಡುತ್ತಾರೆ. ನೀವೀಗ ಹಂಸಗಳಾಗಿದ್ದೀರಿ. ಮುತ್ತುಗಳನ್ನೇ ಆರಿಸಿಕೊಳ್ಳುತ್ತೀರಿ. ಸತ್ಯಯುಗದಲ್ಲಿ
ನಿಮಗೆ ಈ ರತ್ನಗಳು ಸಿಗುವುದಿಲ್ಲ. ಇಲ್ಲಿ ನೀವು ಈ ಜ್ಞಾನರತ್ನಗಳನ್ನು ಆರಿಸಿಕೊಂಡು
ಹಂಸಗಳಾಗುತ್ತೀರಿ. ನೀವು ಕೊಕ್ಕರೆಗಳಿಂದ ಹೇಗೆ ಹಂಸಗಳಾಗುತ್ತೀರಿ ಎಂಬುದನ್ನು ತಂದೆಯು ಕುಳಿತು
ತಿಳಿಸುತ್ತಾರೆ. ಈಗ ನಿಮ್ಮನ್ನು ಹಂಸಗಳನ್ನಾಗಿ ಮಾಡುತ್ತಾರೆ. ದೇವತೆಗಳಿಗೆ ಹಂಸಗಳೆಂದೂ, ಅಸುರರಿಗೆ
ಕೊಕ್ಕರೆಗಳೆಂದೂ ಹೇಳುತ್ತಾರೆ. ಈಗ ನೀವು ಕೊಳಕನ್ನು ಬಿಡಿಸಿ ಮುತ್ತುಗಳನ್ನೇ ಆರಿಸುತ್ತೀರಿ.
ನಿಮಗೆ ಪದಮಾಪದಮ
ಭಾಗ್ಯಶಾಲಿಗಳೆಂದು ಹೇಳುತ್ತಾರೆ. ನಿಮ್ಮ ಪಾದಗಳಲ್ಲಿ ಪದುಮಗಳ ಮುದ್ರೆಯು ಬೀಳುತ್ತದೆ.
ಶಿವತಂದೆಗಂತೂ ಪದುಮದಷ್ಟಾಗಲು ಪಾದಗಳೇ ಇಲ್ಲ. ಅವರಂತೂ ನಿಮ್ಮನ್ನು ಪದಮಾಪದಮ ಭಾಗ್ಯಶಾಲಿಗಳನ್ನಾಗಿ
ಮಾಡುತ್ತಾರೆ. ನಾನು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆಂದು ತಂದೆಯು
ತಿಳಿಸುತ್ತಾರೆ. ಇವೆಲ್ಲಾ ಮಾತುಗಳು ಬಹಳ ಚೆನ್ನಾಗಿ ಅರಿತುಕೊಳ್ಳುವಂತದ್ದಾಗಿದೆ. ಮನುಷ್ಯರು
ಸ್ವರ್ಗವಿತ್ತೆಂಬುದಂತೂ ತಿಳಿಯುತ್ತಾರಲ್ಲವೆ! ಆದರೆ ಯಾವಾಗ ಇತ್ತು ಮತ್ತೆ ಹೇಗೆ ಸ್ಥಾಪನೆಯಾಗುವುದು
ಎಂಬುದನ್ನು ತಿಳಿದುಕೊಂಡಿಲ್ಲ. ನೀವು ಮಕ್ಕಳು ಈಗ ಬೆಳಕಿನಲ್ಲಿ ಬಂದಿದ್ದೀರಿ. ಅವರೆಲ್ಲರೂ
ಅಂಧಕಾರದಲ್ಲಿದ್ದಾರೆ. ಈ ಲಕ್ಷ್ಮೀ-ನಾರಾಯಣರು ಹೇಗೆ ವಿಶ್ವದ ಮಾಲೀಕರಾದರೆಂದು ಗೊತ್ತೇ ಇಲ್ಲ. ಇದು
5000 ವರ್ಷಗಳ ಮಾತಾಗಿದೆ. ತಂದೆಯು ಕುಳಿತು ತಿಳಿಸುತ್ತಾರೆ- ಹೇಗೆ ನೀವು ಪಾತ್ರವನ್ನಭಿನಯಿಸಲು
ಬರುತ್ತೀರೋ ಹಾಗೆಯೇ ನಾನೂ ಬರುತ್ತೇನೆ. ಹೇ ತಂದೆಯೇ, ಬಂದು ನಾವು ಪತಿತರನ್ನು ಪಾವನ ಮಾಡಿ ಎಂದು
ನೀವು ನಿಮಂತ್ರಣವನ್ನು ಕೊಟ್ಟು ಕರೆಯುತ್ತೀರಿ. ಮತ್ತ್ಯಾರಿಗೂ ಎಂದೂ ಈ ರೀತಿ ಹೇಳುವುದಿಲ್ಲ. ಬಂದು
ನೀವು ಪಾವನ ಮಾಡಿ ಎಂದು ಯಾವುದೇ ಧರ್ಮಸ್ಥಾಪಕರಿಗೆ ಹೇಳುವುದಿಲ್ಲ. ಕ್ರೈಸ್ಟ ಅಥವಾ ಬುದ್ಧನಿಗೆ
ಪತಿತ-ಪಾವನ ಎಂದು ಹೇಳುತ್ತಾರೆಯೇ? ಸದ್ಗತಿ ಮಾಡುವವರೇ ಗುರುಗಳಾಗಿದ್ದಾರೆ. ಅವರಂತೂ ಬರುತ್ತಾರೆ.
ಅವರ ಹಿಂದೆ ಎಲ್ಲರೂ ಕೆಳಗಿಳಿಯಬೇಕಾಗಿದೆ. ಇಲ್ಲಿಂದ ಹಿಂತಿರುಗಿ ಕರೆದುಕೊಂಡು ಹೋಗುವ ಮಾರ್ಗವನ್ನು
ತಿಳಿಸುವ, ಸರ್ವರ ಸದ್ಗತಿ ಮಾಡುವ ಅಕಾಲಮೂರ್ತಿ ತಂದೆಯು ಒಬ್ಬರೇ ಆಗಿದ್ದಾರೆ. ವಾಸ್ತವದಲ್ಲಿ
ಸದ್ಗುರು ಅಕ್ಷರವೇ ಸರಿಯಾಗಿದೆ. ನಿಮ್ಮೆಲ್ಲರಿಗಿಂತ ಸರಿಯಾದ ಅಕ್ಷರವನ್ನು ಸಿಖ್ಖರು ಹೇಳುತ್ತಾರೆ.
ಬಹಳ ದೊಡ್ಡ ಧ್ವನಿಯಿಂದ ಸದ್ಗುರು ಅಕಾಲ್ ಎಂದು ಹೇಳುತ್ತಾರೆ. ಬಹಳ ಜೋರಾಗಿ ಸದ್ಗುರು ಅಕಾಲಮೂರ್ತಿ
ಎಂದು ಹೇಳುತ್ತಾ ಹೋಗುತ್ತಾರೆ. ಮೂರ್ತಿಯೇ ಆಗದಿದ್ದರೆ ಅವರು ಹೇಗೆ ಸದ್ಗುರುವಾಗುತ್ತಾರೆ. ಹೇಗೆ
ಸದ್ಗತಿ ಮಾಡುತ್ತಾರೆ? ಸ್ವಯಂ ಸದ್ಗುರುವೇ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ. ನಾನು ನಿಮ್ಮ
ಹಾಗೆ ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ಮತ್ತೆಲ್ಲರೂ ಶರೀರಧಾರಿಗಳೇ ಕುಳಿತು ತಿಳಿಸುತ್ತಾರೆ.
ಆದರೆ ನಿಮಗೆ ಅಶರೀರಿ ಆತ್ಮಿಕ ತಂದೆಯು ಕುಳಿತು ತಿಳಿಸುತ್ತಾರೆ- ಇದರಲ್ಲಿ ರಾತ್ರಿ-ಹಗಲಿನ
ಅಂತರವಿದೆ. ಈ ಸಮಯದಲ್ಲಿ ಮನುಷ್ಯರು ಏನೆಲ್ಲವನ್ನೂ ಮಾಡುತ್ತಾರೆಯೋ ತಪ್ಪನ್ನೇ ಮಾಡುತ್ತಾರೆ.
ಏಕೆಂದರೆ ರಾವಣನ ಮತದಲ್ಲಿದ್ದಾರಲ್ಲವೆ! ಪ್ರತಿಯೊಬ್ಬರಲ್ಲಿ ಪಂಚವಿಕಾರಗಳಿವೆ. ಈ ಚಕ್ರವು ಹೇಗೆ
ಸುತ್ತುತ್ತದೆ ಎಂದು ತಿಳಿಯಬೇಕಲ್ಲವೆ. ತಂದೆಯೇ ತಿಳಿಸಿ ಎಂದೂ ಸಹ ನೀವು ಹೇಳುವುದಿಲ್ಲ. ತಾನಾಗಿಯೇ
ತಂದೆಗೆ ತಿಳಿಸುತ್ತಿರುತ್ತಾರೆ. ನಿಮಗೆ ಕೇಳುವಂತಹ ಒಂದು ಪ್ರಶ್ನೆಯೂ ಸಹ ಉಳಿಯುವುದಿಲ್ಲ.
ಭಗವಂತನಂತೂ ತಂದೆಯಾಗಿದ್ದಾರೆ. ಎಲ್ಲವನ್ನೂ ತಾವಾಗಿಯೇ ತಿಳಿಸುವುದು ತಾವೇ ಎಲ್ಲವನ್ನು ಮಾಡುವುದು
ತಂದೆಯ ಕೆಲಸವಾಗಿದೆ. ಮಕ್ಕಳನ್ನು ಶಾಲೆಯಲ್ಲಿ ತಂದೆಯು ತಾವಾಗಿಯೇ ಕುಳ್ಳರಿಸುತ್ತಾರೆ. ನೌಕರಿಗೆ
ಸೇರಿಸುತ್ತಾರೆ ಮತ್ತೆ 60 ವರ್ಷಗಳ ನಂತರ ಇದೆಲ್ಲವನ್ನೂ ಬಿಟ್ಟು ಭಗವಂತನ ಭಜನೆ ಮಾಡಬೇಕು,
ವೇದಶಾಸ್ತ್ರಗಳನ್ನು ಓದಬೇಕು, ಪೂಜೆ ಮಾಡಬೇಕೆಂದು ಅವರಿಗೆ ತಿಳಿಸುತ್ತಾರೆ. ನೀವು ಅರ್ಧ ಕಲ್ಪ
ಪೂಜಾರಿಗಳಾದಿರಿ ನಂತರ ಅರ್ಧಕಲ್ಪಕ್ಕಾಗಿ ಪೂಜ್ಯರಾಗುತ್ತೀದ್ದೀರಿ. ಹೇಗೆ ಪವಿತ್ರರಾಗುವುದು!
ಎಂಬುದಕ್ಕೆ ಎಷ್ಟು ಸಹಜವಾಗಿ ತಿಳಿಸಲಾಗುತ್ತದೆ. ನಂತರ ಭಕ್ತಿಯು ಬಿಟ್ಟು ಹೋಗುತ್ತದೆ. ಅವರೆಲ್ಲರೂ
ಭಕ್ತಿ ಮಾಡುತ್ತಿದ್ದಾಗ ನೀವು ಜ್ಞಾನವನ್ನು ಪಡೆಯುತ್ತಿದ್ದೀರಿ. ಅವರು ರಾತ್ರಿಯಲ್ಲಿ ನೀವು
ದಿನದಲ್ಲಿ ಅರ್ಥಾತ್ ಸ್ವರ್ಗದಲ್ಲಿ ಹೋಗುತ್ತಿದ್ದೀರಿ. ಮನ್ಮನಾಭವ ಎಂದು ಗೀತೆಯಲ್ಲಿ ಬರೆದಿದೆ. ಈ
ಅಕ್ಷರವಂತೂ ಪ್ರಸಿದ್ಧವಾಗಿದೆ. ಗೀತೆಯನ್ನು ಓದುವವರು ಅರಿತುಕೊಳ್ಳಬಹುದು. ಬಹಳ ಸಹಜವಾಗಿ
ಬರೆಯಲಾಗಿದೆ. ಪೂರ್ಣ ಆಯಸ್ಸು ಗೀತೆಯನ್ನು ಓದುತ್ತಲೇ ಬಂದಿದ್ದಾರೆ, ಏನನ್ನೂ
ತಿಳಿದುಕೊಳ್ಳುವುದಿಲ್ಲ. ಈಗ ಅದೇ ಗೀತೆಯ ಭಗವಂತನು ಕುಳಿತು ಕಲಿಸುತ್ತಾರೆ. ಅಂದರೆ ಪತಿತರಿಂದ
ಪಾವನರಾಗಿಬಿಡುತ್ತಾರೆ. ಈಗ ನಾವು ಭಗವಂತನಿಂದ ಗೀತೆಯನ್ನು ಕೇಳುತ್ತೇವೆ ಮತ್ತು ಅನ್ಯರಿಗೂ
ತಿಳಿಸುತ್ತೇವೆ ಮತ್ತು ಪಾವನರಾಗುತ್ತೇವೆ.
ತಂದೆಯ
ಮಹಾವಾಕ್ಯವಿದೆಯಲ್ಲವೆ- ಇದು ಅದೇ ಸಹಜ ರಾಜಯೋಗವಾಗಿದೆ. ಮನುಷ್ಯರು ಎಷ್ಟೊಂದು ಅಂಧಶ್ರದ್ಧೆಯಲ್ಲಿ
ಮುಳುಗಿದ್ದಾರೆ, ನಿಮ್ಮ ಮಾತೇ ಕೇಳುವುದಿಲ್ಲ. ನಾಟಕದನುಸಾರ ಅವರ ಅದೃಷ್ಟವು ಯಾವಾಗ ಜಾಗೃತವಾಗುವುದೋ
ಆಗಲೇ ನಿಮ್ಮ ಬಳಿ ಬರುತ್ತಾರೆ. ನಿಮ್ಮಂತಹ ಶ್ರೇಷ್ಠ ಅದೃಷ್ಟವು ಮತ್ತ್ಯಾವ ಧರ್ಮದವರಿಗೂ
ಇರುವುದಿಲ್ಲ. ತಂದೆಯು ತಿಳಿಸಿದ್ದಾರೆ- ಈ ನಿಮ್ಮ ದೇವಿ-ದೇವತಾಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ.
ಮೊದಲು ನೀವು ಮನೆಗೆ ಹೋಗುತ್ತೀರಿ ನಂತರ ಪಾತ್ರಧಾರಿಗಳಾಗಿ ಬರುತ್ತೀರಿ. ಈಗ ಇದು ಹೊಸ ಆತ್ಮವೋ ಅಥವಾ
ಹಳೆಯ ಆತ್ಮವೋ ಎಂದು ಯಾರಿಗೂ ತಿಳಿಯುವುದಿಲ್ಲ. ಹೊಸ ಆತ್ಮಕ್ಕೆ ಅವಶ್ಯವಾಗಿ ಮಹಿಮೆಯಾಗುತ್ತದೆ.
ಈಗಲೂ ಸಹ ನೋಡಿ, ಕೆಲಕೆಲವರ ಹೆಸರು ಪ್ರಸಿದ್ಧವಾಗುತ್ತದೆ. ಅನೇಕ ಮನುಷ್ಯರು ಬರುತ್ತಾರೆ.
ಕುಳಿತು-ಕುಳಿತಿದ್ದಂತೆಯೇ ಬಂದುಬಿಡುತ್ತಾರೆ. ಆಗ ಅದರ ಪ್ರಭಾವ ಬೀರುತ್ತದೆ. ತಂದೆಯೂ ಸಹ ಇವರಲ್ಲಿ
ಅನಾಯಾಸವಾಗಿಯೇ ಬರುತ್ತಾರೆ. ಆದ್ದರಿಂದ ಆ ಪ್ರಭಾವ ಬೀರುತ್ತದೆ. ಅವರೂ ಸಹ ಹೊಸ ಆತ್ಮವು ಬಂದಾಗ
ಹಳಬರ ಮೇಲೆ ಪ್ರಭಾವವಾಗುತ್ತದೆ. ರೆಂಬೆ-ಕೊಂಬೆಗಳು ಬಂದಾಗ ಅವರ ಮಹಿಮೆಯಾಗುತ್ತದೆ. ಇವರೇಕೆ ಇಷ್ಟು
ಪ್ರಸಿದ್ಧವಾಗಿದ್ದಾರೆಂಬುದು ಯಾರಿಗೂ ತಿಳಿಯುವುದಿಲ್ಲ. ಹೊಸ ಆತ್ಮವಾಗಿರುವ ಕಾರಣ ಅವರ್ಗದಲ್ಲಿ
ಆಕರ್ಷಣೆಯಿರುತ್ತದೆ. ಈಗಂತೂ ನೋಡಿ, ಎಷ್ಟೊಂದು ಮಂದಿ ಸುಳ್ಳು ಭಗವಂತರಾಗಿದ್ದಾರೆ! ಆದ್ದರಿಂದಲೇ
ಸತ್ಯದ ದೋಣಿಯು ಅಲುಗಾಡುತ್ತದೆ. ಮೇಲೆ-ಕೆಳಗೆ ಆಗುತ್ತದೆ. ಆದರೆ ಮುಳುಗುವುದಿಲ್ಲ. ಬಹಳಷ್ಟು
ಬಿರುಗಾಳಿಗಳು ಮುಂತಾದವುದರ ಮಾತಿಲ್ಲ. ಆದರೆ ಅಬಲೆಯರ ಮೇಲೆ ಬಹಳಷ್ಟು ಹತ್ಯಾಚಾರವಾಗುತ್ತದೆ. ಆದರೂ
ಸಹ ಸ್ಥಾಪನೆಯಂತೂ ಆಗಲೇಬೇಕಾಗಿದೆ. ತಂದೆಯು ತಿಳಿಸುತ್ತಾರೆ- ಹೇ ಆತ್ಮಗಳೇ, ನೀವು ಎಷ್ಟೊಂದು
ಕಾಡಿನ ಮುಳ್ಳುಗಳಾಗಿಬಿಟ್ಟಿದ್ದೀರಿ. ಅನ್ಯರಿಗೆ ಮುಳ್ಳನ್ನು ಚುಚ್ಚುತ್ತೀರೆಂದರೆ ನಿಮಗೂ ಮುಳ್ಳು
ತಗಲುತ್ತದೆ. ಪ್ರತಿಯೊಂದು ಮಾತಿನ ಪ್ರತ್ಯುತ್ತರವು ಸಿಗುತ್ತದೆ. ಸತ್ಯಯುಗದಲ್ಲಿ ದುಃಖದ ಛೀ ಛೀ
ಮಾತುಗಳ್ಯಾವುದೂ ಸಹ ಇರುವುದಿಲ್ಲ. ಆದ್ದರಿಮದ ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಮನುಷ್ಯರು
ಸ್ವರ್ಗ ಮತ್ತು ನರಕವೆಂದು ಹೇಳುತ್ತಾರೆ. ಆದರೆ ತಿಳಿದುಕೊಂಡಿಲ್ಲ. ಇಂತಹವರು ಸ್ವರ್ಗಸ್ಥರಾದರೆಂದು
ಹೇಳುತ್ತಾರೆ. ಆದರೆ ಈ ರೀತಿ ಹೇಳುವುದೂ ಸಹ ವಾಸ್ತವದಲ್ಲಿ ತಪ್ಪಾಗಿದೆ. ನಿರಾಕಾರಿ ಪ್ರಪಂಚಕ್ಕೆ
ಸ್ವರ್ಗವೆಂದು ಹೇಳುವುದಿಲ್ಲ. ಅದು ಮುಕ್ತಿಧಾಮವಾಗಿದೆ. ಅವರು ಅದಕ್ಕೆ ಸ್ವರ್ಗದಲ್ಲಿ ಹೋದರೆಂದು
ಹೇಳುತ್ತಾರೆ.
ಈಗ ನೀವು
ತಿಳಿದುಕೊಂಡಿದ್ದೀರಿ- ಈ ಮುಕ್ತಿಧಾಮವು ಆತ್ಮಗಳ ಮನೆಯಾಗಿದೆ. ಹೇಗೆ ಇಲ್ಲಿ ಮನೆಯಿರುತ್ತದೆ. ಭಕ್ತಿ
ಮಾರ್ಗದಲ್ಲಿ ಯಾರು ಬಹಳ ಧನವಂತರಿರುತ್ತಾರೆ. ಅವರು ಎಷ್ಟೊಂದು ದೊಡ್ಡ ಮಂದಿರವನ್ನು ಕಟ್ಟಿಸುತ್ತಾರೆ.
ಶಿವನ ಮಂದಿರವನ್ನು ನೋಡಿ, ಹೇಗೆ ಮಾಡಲ್ಪಟ್ಟಿದೆ! ಲಕ್ಷ್ಮೀ-ನಾರಾಯಣರ ಮಂದಿರವನ್ನು
ಕಟ್ಟಿಸುತ್ತಾರೆಂದರೆ ಸತ್ಯವಾದ ಆಭರಣ ಇತ್ಯಾದಿಗಳು ಎಷ್ಟೊಂದಿರುತ್ತವೆ. ಬಹಳಷ್ಟು ಹಣವಿರುತ್ತದೆ.
ಈಗಂತೂ ಎಲ್ಲವರೂ ಅಸತ್ಯವಾಗಿಬಿಟ್ಟಿದೆ! ನೀವೂ ಸಹ ಮೊದಲು ಎಷ್ಟು ಸತ್ಯವಾದ ಆಭರವಣಗಳನ್ನು
ಧರಿಸುತ್ತಿದ್ದೀರಿ. ಈಗಂತೂ ಸರ್ಕಾರಕ್ಕೆ ಹೆದರಿ ಶುದ್ಧ ಆಭರಣಗಳನ್ನು ಮುಚ್ಚಿಟ್ಟು ನಕಲಿ
ಆಭರಣಗಳನ್ನು ಧರಿಸುತ್ತಿರುತ್ತಾರೆ. ಅಲ್ಲಂತೂ ಸತ್ಯವೇ ಸತ್ಯವಾಗಿರುತ್ತದೆ. ಯಾವುದೇ
ಅಸತ್ಯವಿರುವುದಿಲ್ಲ. ಇಲ್ಲಿ ಸತ್ಯ ಆಭರಣಗಳಿದ್ದರೂ ಸಹ ಮುಚ್ಚಿಟ್ಟುಬಿಡುತ್ತಾರೆ. ದಿನ-ಪ್ರತಿದಿನ
ಚಿನ್ನವು ಬೆಲೆಯೇರಿಕೆ ಆಗುತ್ತಾ ಇರುತ್ತದೆ. ಅಲ್ಲಂತೂ ಸ್ವರ್ಗವೇ ಸ್ವರ್ಗವಾಗಿದೆ. ನಿಮಗೆ ಎಲ್ಲವೂ
ಹೊಸದೇ ಹೊಸದು ಸಿಗುತ್ತದೆ. ಹೊಸಪ್ರಪಂಚದಲ್ಲಿ ಎಲ್ಲವೂ ಹೊಸದೇ ಇತ್ತು. ಅಪಾರ ಹಣವಿತ್ತು. ಈಗಂತೂ
ನೋಡಿ ಪ್ರತಿಯೊಂದು ವಸ್ತುವು ಎಷ್ಟೊಂದು ಬೆಲೆಯೇರಿದೆ. ಈಗ ನೀವು ಮಕ್ಕಳಿಗೆ ಮೂಲವತನದಿಂದ ಹಿಡಿದು
ಎಲ್ಲಾ ರಹಸ್ಯವನ್ನು ತಿಳಿಸಿದ್ದಾರೆ. ತಂದೆಯ ವಿನಃ ಮತ್ತು ಆರೂ ಮೂಲವತನದ ರಹಸ್ಯವನ್ನು
ತಿಳಿಸುವುದಿಲ್ಲ. ನೀವೂ ಸಹ ಶಿಕ್ಷಕರಾಗಬೇಕಾಗಿದೆ. ಭಲೇ ಗೃಹಸ್ಥ ವ್ಯವಹಾರದಲ್ಲಿಯೂ ಇದೆ.
ಕಮಲಪುಷ್ಪ ಸಮಾನ ಪವಿತ್ರವಾಗಿದೆ. ಅನ್ಯರನ್ನೂ ತಮ್ಮ ಸಮಾನ ಮಾಡಿದಾಗಲೇ ಶ್ರೇಷ್ಠಪದವಿಯನ್ನು
ಪಡೆಯುತ್ತೀರಿ. ಇಲ್ಲಿರುವವರಿಗಿಂತಳೂ ಅಂತಹವರು ಉತ್ತಮ ಪದವಿಯನ್ನು ಪಡೆಯಬಹುದು. ನಂಬರ್ವಾರಂತೂ
ಇದ್ದೇ ಇದೆ. ಹೊರಗಿದ್ದರೂ ಸಹ ವಿಜಯಮಾಲೆಯಲ್ಲಿ ಪೋಣಿಸಲ್ಪಡಬಹುದು. ಒಂದುವಾರದ ಕೋರ್ಸನ್ನು
ತೆಗೆದುಕೊಂಡು ನಂತರ ಭಲೇ ವಿದೇಶಕ್ಕೆ ಹೋಗಿ ಅಥವಾ ಎಲ್ಲಿಗಾದರೂ ಹೋಗಿ ಆದರೆ ಇಡೀ ಪ್ರಪಂಚಕ್ಕೆ
ಸಂದೇಶ ಸಿಗಬೇಕು. ತಂದೆಯು ಬಂದಿದ್ದಾರೆ- ಕೇವಲ ನನ್ನೊಬ್ಬನನ್ನು ನೆನಪು ಮಾಡಿ ಎಂದು ಹೇಳುತ್ತಾರೆ.
ಆ ತಂದೆಯೇ ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ. ಅಲ್ಲಿ ನೀವು ಹೋಗುತ್ತೀರೆಂದರೆ
ಪತ್ರಿಕೆಗಳಲ್ಲಿಯೂ ಬಹಳಷ್ಟು ಹೆಸರುವಾಸಿಯಾಗುವುದು. ಆತ್ಮ ಮತ್ತು ಶರೀರ ಎರಡು ವಸ್ತುಗಳಿದೆಯೆಂದು
ಅನ್ಯರಿಗೂ ಬಹಳ ಸಹಜ ಮಾತೆನಿಸುತ್ತದೆ. ಆತ್ಮದಲ್ಲಿಯೇ ಮನಸ್ಸು-ಬುದ್ಧಿಯಿದೆ. ಶರೀರವಂತೂ ಜಡವಾಗಿದೆ.
ಆತ್ಮವೇ ಪಾತ್ರಧಾರಿಯಾಗುತ್ತದೆ. ವಿಶೇಷತೆಯುಳ್ಳ ವಸ್ತು ಆತ್ಮವಾಗಿದೆ. ಆದ್ದರಿಂದ ಈಗ ತಂದೆಯನ್ನು
ನೆನಪು ಮಾಡಬೇಕಾಗಿದೆ. ಹೊರಗಿನವರು ನೆನಪು ಮಾಡುವಷ್ಟು ಸಮೀಪದಲ್ಲಿರುವವರು ಮಾಡುವುದಿಲ್ಲ. ಯಾರು
ಬಹಳ ನೆನಪು ಮಾಡುತ್ತಾರೆ ಮತ್ತು ಅನ್ಯರನ್ನೂ ತಮ್ಮ ಸಮಾನ ಮಾಡಿಕೊಳ್ಳುತ್ತಾ ಇರುತ್ತಾರೆ.
ಮುಳ್ಳುಗಳನ್ನು ಹೂಗಳನ್ನಾಗಿ ಮಾಡಿಕೊಳ್ಳುತ್ತಾರೆಯೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ.
ನಿಮಗೆ ಗೊತ್ತಿದೆ- ಮೊದಲು ನಾವೂ ಸಹ ಮುಳ್ಳುಗಳಾಗಿದ್ದೇವು. ಈಗ ತಂದೆಯು ಆದೇಶ ನೀಡಿದ್ದಾರೆ-
ಕಾಮಮಹಾಶತ್ರುವಾಗಿದೆ. ಇದರ ಮೇಲೆ ಜಯಗಳಿಸುವುದರಿಂದಲೇ ನೀವು ಜಗತ್ಜೀತರಾಗಿಬಿಡುತ್ತೀರಿ ಆದರೆ
ಬರವಣಿಗೆಯಿಂದ ಯಾರೂ ಅರಿತುಕೊಳ್ಳುವುದಿಲ್ಲ. ಈಗ ತಂದೆಯೇ ತಿಳಿಸಿದ್ದಾರೆ. ಒಳ್ಳೆದಯ.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ
ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸದಾ
ಜ್ಞಾನರತ್ನಗಳನ್ನು ಆರಿಸುವಂತಹ ಹಂಸಗಳಾಗಬೇಕಾಗಿದೆ. ಮುತ್ತುಗಳನ್ನೇ ಆರಿಸಿಕೊಳ್ಳಬೇಕಾಗಿದೆ.
ಕೊಳಕನ್ನು ಬಿಟ್ಟುಬಿಡಬೇಕಾಗಿದೆ. ಪ್ರತಿಯೊಂದು ಹೆಜ್ಜೆಯಲ್ಲಿ ಪದುಮಗಳ ಸಂಪಾದನೆಯನ್ನು ಜಮಾ
ಮಾಡಿಕೊಂಡು ಪದಮಾಪದಮ ಭಾಗ್ಯಶಾಲಿಗಳಾಬೇಕಾಗಿದೆ.
2. ಶ್ರೇಷ್ಠ ಪದವಿಯನ್ನು
ಪಡೆಯಲು ಶಿಕ್ಷಕರಾಗಿ ಅನೇಕರ ಸೇವೆ ಮಾಡಬೇಕಾಗಿದೆ. ಕಮಲಪುಷ್ಪ ಸಮಾನ ಪವಿತ್ರರಾಗಿ ತಮ್ಮ
ಸಮಾನರನ್ನಾಗಿ ಮಾಡಿಕೊಳ್ಳಬೇಕಾಗಿದೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡಬೇಕಾಗಿದೆ.
ವರದಾನ:
ನಿನ್ನದು ನನ್ನದು
ಎನ್ನುವ ಹಲ್ ಚಲ್ ಅನ್ನು ಸಮಾಪ್ತಿ ಮಾಡಿ ದಯಾ ಭಾವನೆಯನ್ನು ಇಮರ್ಜ್ ಮಾಡುವಂತಹ ದಯಾ ಸ್ವರೂಪ ಭವ.
ಸಮಯ ಪ್ರತಿ ಸಮಯ ಎಷ್ಟೋ
ಆತ್ಮಗಳು ದುಃಖದ ಅಲೆಯಲ್ಲಿ ಬರುತ್ತವೆ. ಪ್ರಕೃತಿಯ ಸ್ವಲ್ಪವೇ ಹಲ್ ಚಲ್ ಆದಾಗ, ಆಪತ್ತು ಬರುತ್ತದೆ
ಎಂದಾಗ ಅನೇಕ ಆತ್ಮಗಳು ಚಡಪಡಿಸುತ್ತವೆ, ದಯೆ, ಕರುಣೆಯನ್ನು ಬೇಡುತ್ತವೆ. ಆದ್ದರಿಂದ ಇಂತಹ ಆತ್ಮಗಳ
ಕೂಗನ್ನು ಕೇಳಿ ದಯೆಯ ಭಾವನೆಯನ್ನು ಇಮರ್ಜ್ ಮಾಡಿಕೊಳ್ಳಿ. ಪೂಜ್ಯ ಸ್ವರೂಪ, ದಯಾ ಸ್ವರೂಪವನ್ನು
ಧಾರಣೆ ಮಾಡಿಕೊಳ್ಳಿ. ಸ್ವಯಂ ಅನ್ನು ಸಂಪನ್ನವನ್ನಾಗಿ ಮಾಡಿಕೊಳ್ಳಿ ಆಗ ಈ ದುಃಖದ ಪ್ರಪಂಚ
ಸಮಾಪ್ತಿಯಾಗಲಿದೆ. ಈಗ ಪರಿವರ್ತನೆಯ ಶುಭ ಭಾವನೆಯ ಅಲೆ ತೀವ್ರ ಗತಿಯಿಂದ ಹರಡಿ ಆಗ ನಿನ್ನದು ನನ್ನದು
ಎನ್ನವ ಹಲ್ಚಲ್ ಸಮಾಪ್ತಿಯಾಗಿ ಬಿಡುವುದು.
ಸ್ಲೋಗನ್:
ವ್ಯರ್ಥ
ಸಂಕಲ್ಪಗಳ ಸುತ್ತಿಗೆಯಿಂದ ಸಮಸ್ಯಾ ರೂಪಿ ಬಂಡೆಯನ್ನು ಹೊಡೆಯುವ ಬದಲು ಹೈ ಜಂಪ್ ಹಾಕಿ ಸಮಸ್ಯೆ ರೂಪಿ
ಬೆಟ್ಟವನ್ನು ಪಾರು ಮಾಡುವಂತಹವರಾಗಿ.