03.09.25         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ನಿಮಗೆ ಸತ್ಯ-ಸತ್ಯವಾದ ಯಾತ್ರೆಯನ್ನು ಕಲಿಸಲು ಸತ್ಯ ಮಾರ್ಗದರ್ಶಕನು ಬಂದಿದ್ದಾರೆ, ನಿಮ್ಮ ಯಾತ್ರೆಯಲ್ಲಿ ಮುಖ್ಯವಾದುದು ಪವಿತ್ರತೆಯಾಗಿದೆ, ನೆನಪು ಮಾಡಿ ಮತ್ತು ಪವಿತ್ರರಾಗಿ".

ಪ್ರಶ್ನೆ:
ನೀವು ಮೆಸೆಂಜರ್ ಹಾಗೂ ಪೈಗಂಬರ್ನ ಮಕ್ಕಳು ಯಾವ ಒಂದು ಮಾತನ್ನು ಬಿಟ್ಟು ಮತ್ತ್ಯಾವುದೇ ಮಾತಿನಲ್ಲಿ ವಾದ-ವಿವಾದ ಮಾಡಬಾರದು?

ಉತ್ತರ:
ನೀವು ಮೆಸೆಂಜರ್ನ ಮಕ್ಕಳು ಎಲ್ಲರಿಗೆ ಇದೇ ಮೆಸೇಜನ್ನು ಕೊಡಿ - ತನ್ನನ್ನು ಆತ್ಮನೆಂದು ತಿಳಿಯಿರಿ ಮತ್ತು ತಂದೆಯನ್ನು ನೆನಪು ಮಾಡಿ ಆಗ ಈ ಯೋಗಾಗ್ನಿಯಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ. ಇದೇ ಚಿಂತನೆಯಿರಲಿ ಬಾಕಿ ಅನ್ಯ ಮಾತುಗಳಲ್ಲಿ ಹೋಗುವುದರಿಂದ ಯಾವುದೇ ಲಾಭವಿಲ್ಲ. ನೀವು ಕೇವಲ ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ, ಇದರಿಂದ ಅವರು ಆಸ್ತಿಕರಾಗಲಿ. ಯಾವಾಗ ರಚಯಿತ ತಂದೆಯನ್ನು ಅರಿತುಕೊಳ್ಳುವರೋ ಆಗ ರಚನೆಯನ್ನು ಅರಿತುಕೊಳ್ಳುವುದೂ ಸಹಜವಾಗುವುದು.

ಗೀತೆ:
ನಮ್ಮ ತೀರ್ಥ ಸ್ಥಾನವು ಭಿನ್ನವಾಗಿದೆ.................

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ತಿಳಿದಿದೆ - ನಾವು ಸತ್ಯವಾದ ತೀರ್ಥವಾಸಿಗಳಾಗಿದ್ದೇವೆ. ತಂದೆಯು ಸತ್ಯವಾದ ಮಾರ್ಗದರ್ಶಕನಾಗಿದ್ದಾರೆ ಮತ್ತು ಅವರ ಮಕ್ಕಳಾದ ನಾವೂ ಸಹ ಸತ್ಯವಾದ ತೀರ್ಥ ಸ್ಥಾನಕ್ಕೆ ಹೋಗುತ್ತಿದ್ದೇವೆ. ಇದು ಅಸತ್ಯ ಖಂಡ ಅಥವಾ ಪತಿತ ಖಂಡವಾಗಿದೆ, ಈಗ ಸತ್ಯ ಖಂಡ ಅಥವಾ ಪಾವನ ಖಂಡದಲ್ಲಿ ಹೋಗುತ್ತಿದ್ದೀರಿ. ಮನುಷ್ಯರು ತೀರ್ಥ ಯಾತ್ರೆಗೆ ಹೋಗುತ್ತಾರಲ್ಲವೆ. ಕೆಲಕೆಲವರು ಕೆಲಕೆಲವು ಸ್ಥಾನಗಳು ವಿಶೇಷವಾದ ಯಾತ್ರಾ ಸ್ಥಾನಗಳೆನಿಸುತ್ತವೆ. ಎಲ್ಲಿಗೆ ಯಾರು ಯಾವಾಗ ಬೇಕಾದರೂ ಹೋಗಬಹುದು, ಇದೂ ಸಹ ಯಾತ್ರೆಯಾಗಿದೆ. ಯಾವಾಗ ಸತ್ಯ ಮಾರ್ಗದರ್ಶಕನೇ ಬರುವರೋ ಆಗ ಈ ತೀರ್ಥ ಯಾತ್ರೆಯಲ್ಲಿ ಹೋಗಬಹುದು. ಅವರು ಕಲ್ಪ-ಕಲ್ಪದ ಸಂಗಮಯುಗದಲ್ಲಿ ಬರುತ್ತಾರೆ, ಇದರಲ್ಲಿ ಚಳಿ-ಬಿಸಿಲಿನ ಮಾತಿಲ್ಲ ಅಥವಾ ಅಲೆದಾಡುವ ಮಾತಿಲ್ಲ, ಇದು ನೆನಪಿನ ಯಾತ್ರೆಯಾಗಿದೆ. ಆ ಯಾತ್ರೆಗಳಲ್ಲಿ ಸನ್ಯಾಸಿಗಳೂ ಹೋಗುತ್ತಾರೆ, ಸತ್ಯ-ಸತ್ಯವಾಗಿ ಯಾತ್ರೆ ಮಾಡುವವರು ಪವಿತ್ರರಾಗಿರುತ್ತಾರೆ. ನಿಮ್ಮಲ್ಲಿಯೂ ಎಲ್ಲರೂ ಯಾತ್ರೆಯಲ್ಲಿದ್ದೀರಿ, ನೀವು ಬ್ರಾಹ್ಮಣರಾಗಿದ್ದೀರಿ ಅಂದಮೇಲೆ ಸತ್ಯ-ಸತ್ಯವಾದ ಬ್ರಹ್ಮಾಕುಮಾರ-ಕುಮಾರಿಯರು ಯಾರು? ಯಾರು ಎಂದೂ ವಿಕಾರದಲ್ಲಿ ಹೋಗುವುದಿಲ್ಲವೊ ಅವರೇ ಸತ್ಯ-ಸತ್ಯವಾದ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರೆ. ಅವಶ್ಯವಾಗಿ ಪುರುಷಾರ್ಥಿಗಳಾಗಿದ್ದೀರಿ, ಮನಸ್ಸಿನಲ್ಲಿ ಭಲೆ ಸಂಕಲ್ಪವು ಬರಬಹುದು, ಮುಖ್ಯವಾದುದು ವಿಕಾರದ ಮಾತಾಗಿದೆ. ನಿರ್ವಿಕಾರಿ ಬ್ರಾಹ್ಮಣರು ತಮ್ಮ ಬಳಿ ಎಷ್ಟು ಮಂದಿ ಇದ್ದಾರೆಂದು ಯಾರಾದರೂ ಪ್ರಶ್ನಿಸಿದರೆ ತಿಳಿಸಿ, ಇದನ್ನು ಕೇಳುವ ಅವಶ್ಯಕತೆಯಿಲ್ಲ. ಈ ಮಾತುಗಳಿಂದ ತಮ್ಮ ಹೊಟ್ಟೆಯು ತುಂಬುವುದಿಲ್ಲ. ನೀವು ಯಾತ್ರಿಕರಾಗಿ. ಯಾತ್ರೆ ಮಾಡುವವರು ಎಷ್ಟು ಮಂದಿಯಿದ್ದಾರೆ ಎಂದು ಕೇಳುವುದರಿಂದ ಯಾವುದೇ ಲಾಭವಿಲ್ಲ. ಬ್ರಾಹ್ಮಣರಂತೂ ಕೆಲವರು ಸತ್ಯವಂತರೂ ಇದ್ದಾರೆ, ಅಸತ್ಯವಾದವರೂ ಇದ್ದಾರೆ. ಇಂದು ಸತ್ಯವಾಗಿರುತ್ತಾರೆ, ನಾಳೆ ಸುಳ್ಳಾಗಿ ಬಿಡುತ್ತಾರೆ. ವಿಕಾರದಲ್ಲಿ ಹೋದರೆ ಬ್ರಾಹ್ಮಣರಾಗಲಿಲ್ಲ ಮತ್ತೆ ಶೂದ್ರರಾಗಿಯೇ ಉಳಿಯುವರು. ಇಂದು ಪ್ರತಿಜ್ಞೆ ಮಾಡುತ್ತಾರೆ ಮತ್ತು ನಾಳೆ ವಿಕಾರದಲ್ಲಿ ಬಿದ್ದು ಅಸುರರಾಗಿ ಬಿಡುತ್ತಾರೆ. ಈಗ ಈ ಮಾತುಗಳನ್ನು ಎಲ್ಲಿಯವರೆಗೆ ತಿಳಿಸುವುದು! ಇದರಿಂದ ಹೊಟ್ಟೆಯಂತೂ ತುಂಬುವುದಿಲ್ಲ ಅಥವಾ ಮುಖವು ಮಧುರವಾಗುವುದಿಲ್ಲ, ಇಲ್ಲಿ ನಾವು ತಂದೆಯನ್ನು ನೆನಪು ಮಾಡುತ್ತೇವೆ ಮತ್ತು ತಂದೆಯ ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇವೆ ಬಾಕಿ ಅನ್ಯ ಮಾತುಗಳಲ್ಲಿ ಏನೂ ಇಲ್ಲವೆಂದು ತಿಳಿಸಿ, ಇಲ್ಲಿ ತಂದೆಯ ನೆನಪು ಮಾಡುವುದನ್ನು ಕಲಿಸಲಾಗುತ್ತದೆ ಮತ್ತು ಪವಿತ್ರತೆಯು ಮುಖ್ಯವಾಗಿದೆ. ಯಾರು ಇಂದು ಪವಿತ್ರರಾಗಿ ಮತ್ತೆ ಅಪವಿತ್ರಳಾಗಿ ಬಿಡುವರೋ ಅವರು ಬ್ರಾಹ್ಮಣರೇ ಆಗಲಿಲ್ಲ. ಆ ಲೆಕ್ಕವನ್ನು ಎಲ್ಲಿಯವರೆಗೆ ನಿಮಗೆ ಕುಳಿತು ತಿಳಿಸುವುದು! ಹೀಗೆ ಮಾಯೆಯ ಬಿರುಗಾಳಿಗಳಲ್ಲಿ ಅನೇಕರು ಬೀಳುತ್ತಾರೆ, ಆದ್ದರಿಂದ ಬ್ರಾಹ್ಮಣರ ಮಾಲೆಯಾಗಲು ಸಾಧ್ಯವಿಲ್ಲ. ನಾವಂತೂ ಪೈಗಂಬರನ ಮಕ್ಕಳು ಪೈಗಾಮ್ನ್ನು ತಿಳಿಸುತ್ತೇವೆ, ಮೆಸೆಂಜರ್ನ ಮಕ್ಕಳು ಮೆಸೇಜನ್ನು ತಿಳಿಸುತ್ತಾರೆ. ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ, ಈ ಯೋಗಾಗ್ನಿಯಿಂದ ವಿಕರ್ಮಗಳು ವಿನಾಶವಾಗುತ್ತವೆ. ಇದೇ ಚಿಂತನೆಯನ್ನಿಟ್ಟುಕೊಳ್ಳಿ ಬಾಕಿ ಪ್ರಶ್ನೆಗಳನ್ನಂತೂ ಮನುಷ್ಯರು ಬಹಳಷ್ಟು ಕೇಳುತ್ತಾರೆ. ಒಂದು ಮಾತನ್ನು ಬಿಟ್ಟು ಮತ್ತ್ಯಾವುದೇ ಮಾತುಗಳಲ್ಲಿ ಹೋಗುವುದರಿಂದ ಲಾಭವೇನೂ ಇಲ್ಲ. ಇಲ್ಲಂತೂ ಮೊದಲು ಇದನ್ನು ತಿಳಿದುಕೊಳ್ಳಬೇಕಾಗಿದೆ - ನಾಸ್ತಿಕರಿಂದ ಆಸ್ತಿಕರು, ಅನಾಥರಿಂದ ಸನಾಥರು ಹೇಗಾದೆವು, ಮಾಲೀಕನಿಂದ ಆಸ್ತಿಯನ್ನು ಪಡೆದೆವು - ಇದನ್ನು ಕೇಳಿರಿ. ಉಳಿದಂತೆ ಎಲ್ಲರೂ ಪುರುಷಾರ್ಥಿಗಳಾಗಿದ್ದಾರೆ, ವಿಕಾರದ ಮಾತಿನಲ್ಲಿಯೂ ಅನೇಕರು ಅನುತ್ತೀರ್ಣರಾಗುತ್ತಾರೆ. ಬಹಳ ದಿನಗಳ ನಂತರ ಸ್ತ್ರೀಯನ್ನು ನೋಡುತ್ತಾರೆಂದರೆ ಮಾತೇ ಕೇಳಬೇಡಿ. ಕೆಲವರಿಗೆ ಮಧ್ಯಪಾನ ಮಾಡುವ ಹವ್ಯಾಸವಿರುತ್ತದೆ, ತೀರ್ಥ ಸ್ಥಾನಗಳಿಗೆ ಹೋಗುತ್ತಾರೆಂದರೆ ಮಧ್ಯಪಾನ ಅಥವಾ ಯಾರಿಗೆ ಧೂಮಪಾನ ಮಾಡುವ ಹವ್ಯಾಸವಿರುವುದೋ ಅವರಿಗೆ ಅದು ಇಲ್ಲದೇ ಇರಲು ಸಾಧ್ಯವಾಗುವುದಿಲ್ಲ. ಮುಚ್ಚಿಟ್ಟುಕೊಂಡು ಸೇವಿಸುತ್ತಾರೆ. ಏನು ಮಾಡಲು ಸಾಧ್ಯ! ಬಹಳ ಮಕ್ಕಳು ಸತ್ಯವನ್ನೇ ಹೇಳುವುದಿಲ್ಲ, ಮುಚ್ಚಿಡುತ್ತಾ ಇರುತ್ತಾರೆ.

ತಂದೆಯು ಮಕ್ಕಳಿಗೆ ಹೇಗೆ ಯುಕ್ತಿಯಿಂದ ಉತ್ತರ ಕೊಡಬೇಕೆಂದು ಯುಕ್ತಿಗಳನ್ನು ತಿಳಿಸುತ್ತಾರೆ. ಒಬ್ಬ ತಂದೆಯ ಪರಿಚಯವನ್ನೆ ಕೊಡಬೇಕಾಗಿದೆ, ಇದರಿಂದಲೇ ಮನುಷ್ಯರು ಆಸ್ತಿಕರಾಗುವರು. ಎಲ್ಲಿಯವರೆಗೆ ಮೊದಲು ತಂದೆಯನ್ನು ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ಪ್ರಶ್ನೆಯನ್ನು ಕೇಳುವುದೂ ಸಹ ವ್ಯರ್ಥವಾಗಿದೆ. ಹೀಗೆ ಅನೇಕರು ಬರುತ್ತಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ, ಕೇವಲ ಕೇಳುತ್ತಿರುತ್ತಾರೆ ಲಾಭವೇನೂ ಇಲ್ಲ. ಬಾಬಾ, ಒಂದು ಸಾವಿರ, ಎರಡು ಸಾವಿರ ಮಂದಿ ಬಂದರೂ ಅವರಿಂದ ಒಬ್ಬಿಬ್ಬರು ತಿಳಿದುಕೊಳ್ಳಲು ಬರುತ್ತಿದ್ದಾರೆ, ಇಂತಿಂತಹ ದೊಡ್ಡ ವ್ಯಕ್ತಿಗಳು ಬರುತ್ತಾರೆ ಎಂದು ತಂದೆಗೆ ಬರೆಯುತ್ತಾರೆ ಆದರೆ ನಾನು ತಿಳಿದುಕೊಳ್ಳುತ್ತೇನೆ, ಅವರಿಗೆ ಯಾವ ಪರಿಚಯ ಸಿಗಬೇಕೋ ಅದು ಸಿಕ್ಕಿಲ್ಲ. ಪೂರ್ಣ ಪರಿಚಯ ಸಿಕ್ಕಿದರೆ ಇವರು ಸರಿಯಾಗಿ ಹೇಳುತ್ತಾರೆ - ನಾವಾತ್ಮಗಳ ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆ, ಅವರು ನಮಗೆ ಓದಿಸುತ್ತಾರೆ ಎಂಬುದನ್ನು ಅರಿತುಕೊಳ್ಳುವರು. ತಂದೆಯು ತಿಳಿಸುತ್ತಾರೆ - ತನ್ನನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ, ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಿ. ಯಾರು ಪವಿತ್ರರಾಗಿರುವುದಿಲ್ಲವೋ ಅವರು ಬ್ರಾಹ್ಮಣರಲ್ಲ, ಶೂದ್ರರಾಗಿದ್ದಾರೆ. ಯುದ್ಧದ ಮೈದಾನವಾಗಿದೆ, ವೃಕ್ಷವು ವೃದ್ಧಿಯಾಗುತ್ತಾ ಹೋದಂತೆ ಬಿರುಗಾಳಿಗಳೂ ಬರುತ್ತವೆ. ಬಹಳ ಎಲೆಗಳು ಬೀಳುತ್ತಿರುತ್ತವೆ. ಸತ್ಯ ಬ್ರಾಹ್ಮಣರು ಯಾರು ಎಂಬುದನ್ನು ಕುಳಿತು ಎಣಿಸುವವರು ಯಾರು! ಯಾರು ಎಂದೂ ಶೂದ್ರರಾಗುವುದಿಲ್ಲವೋ, ಸ್ವಲ್ಪವೂ ದೃಷ್ಟಿಯು ಕೆಡುವುದಿಲ್ಲವೋ ಅವರೇ ಸತ್ಯ ಬ್ರಾಹ್ಮಣರು. ಅಂತಿಮದಲ್ಲಿ ಕರ್ಮಾತೀತ ಸ್ಥಿತಿಯಾಗುತ್ತದೆ, ಇದು ಉನ್ನತ ಗುರಿಯಾಗಿದೆ. ಮನಸ್ಸಿನಲ್ಲಿ ಸಂಕಲ್ಪವು ಬರುತ್ತದೆ, ಆ ಸ್ಥಿತಿಯು ಅಂತಿಮದಲ್ಲಿಯೇ ಆಗುವುದು. ಈ ಸಮಯದಲ್ಲಿ ಯಾರೊಬ್ಬರಿಗೂ ಆ ಸ್ಥಿತಿಯು ಬಂದಿಲ್ಲ. ಈ ಸಮಯದಲ್ಲಿ ಎಲ್ಲರೂ ಪುರುಷಾರ್ಥಿಗಳಾಗಿದ್ದಾರೆ. ಏರಿಳಿತವಾಗುತ್ತಿರುತ್ತದೆ. ಮುಖ್ಯವಾಗಿ ಕಣ್ಣುಗಳ ಮಾತಾಗಿದೆ. ನಾವಾತ್ಮರಾಗಿದ್ದೇವೆ, ಈ ಶರೀರದ ಮೂಲಕ ಪಾತ್ರವನ್ನಭಿನಯಿಸುತ್ತೇವೆ. ಇದು ಪಕ್ಕಾ ಅಭ್ಯಾಸವಿರಬೇಕು. ಎಲ್ಲಿಯವರೆಗೆ ರಾವಣ ರಾಜ್ಯವಿರುವುದೋ ಅಲ್ಲಿಯವರೆಗೆ ಯುದ್ಧವು ನಡೆಯುತ್ತಿರುವುದು. ಕೊನೆಯಲ್ಲಿಯೇ ಕರ್ಮಾತೀತ ಸ್ಥಿತಿಯಾಗುತ್ತದೆ. ಮುಂದೆ ಹೋದಂತೆ ನಿಮಗೆ ಎಲ್ಲವೂ ಭಾಸವಾಗುತ್ತದೆ. ತಿಳಿದುಕೊಳ್ಳುತ್ತಾ ಹೋಗುತ್ತೀರಿ. ವೃಕ್ಷವು ಬಹಳ ಚಿಕ್ಕದಾಗಿದೆ, ಬಿರುಗಾಳಿಗಳು ಬರುತ್ತವೆ, ಎಲೆಗಳು ಬಿದ್ದು ಹೋಗುತ್ತವೆ. ಯಾರು ಕಚ್ಚಾ ಆಗಿರುವರೋ ಅವರು ಬೀಳುತ್ತಾರೆ. ಪ್ರತಿಯೊಬ್ಬರೂ ತಮ್ಮೊಂದಿಗೆ ಕೇಳಿಕೊಳ್ಳಿ - ನನ್ನ ಸ್ಥಿತಿಯು ಹೇಗಿದೆ? ಬಾಕಿ ಯಾರು ಪ್ರಶ್ನಿಸುವರೋ ಅವರ ಮಾತುಗಳಲ್ಲಿ ಹೆಚ್ಚಿನದಾಗಿ ಹೋಗಲೇಬೇಡಿ. ತಿಳಿಸಿ, ನಾವು ತಂದೆಯ ಶ್ರೀಮತದಂತೆ ನಡೆಯುತ್ತಿದ್ದೇವೆ. ಆ ಬೇಹದ್ದಿನ ತಂದೆಯು ಬಂದು ಬೇಹದ್ದಿನ ಸುಖವನ್ನು ಕೊಡುತ್ತಾರೆ ಅಥವಾ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಾರೆ. ಅಲ್ಲಿ ಸುಖವೇ ಇರುತ್ತದೆ. ಎಲ್ಲಿ ಮನುಷ್ಯರಿರುವರೋ ಅದಕ್ಕೇ ಪ್ರಪಂಚವೆಂದು ಹೇಳಲಾಗುತ್ತದೆ. ನಿರಾಕಾರಿ ಪ್ರಪಂಚದಲ್ಲಿ ಆತ್ಮಗಳಿದ್ದಾರಲ್ಲವೆ. ಆತ್ಮ ಬಿಂದು ಹೇಗೆ ಎಂಬುದು ಯಾರ ಬುದ್ಧಿಯಲ್ಲಿಯೂ ಇಲ್ಲ. ಇದನ್ನು ಮೊದಲು ಹೊಸಬರಿಗೆ ತಿಳಿಸಬಾರದು. ಮೊಟ್ಟ ಮೊದಲಿಗೆ ತಿಳಿಸಿ - ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಭಾರತವು ಪಾವನವಾಗಿತ್ತು, ಈಗ ಪತಿತವಾಗಿದೆ. ಕಲಿಯುಗದ ನಂತರ ಮತ್ತೆ ಸತ್ಯಯುಗವು ಬರುತ್ತದೆ. ಇದನ್ನು ನೀವು ಬಿ.ಕೆ.ಗಳ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಇದು ಹೊಸ ರಚನೆಯಾಗಿದೆ. ತಂದೆಯು ಓದಿಸುತ್ತಿದ್ದಾರೆ, ಈ ತಿಳುವಳಿಕೆಯು ಬುದ್ಧಿಯಲ್ಲಿರಲಿ. ಇದೇನೂ ಕಷ್ಟದ ಮಾತಲ್ಲ ಆದರೆ ಮಾಯೆಯು ಮರೆಸುತ್ತದೆ, ವಿಕರ್ಮಗಳನ್ನು ಮಾಡಿಸುತ್ತದೆ. ಅರ್ಧ ಕಲ್ಪದಿಂದ ವಿಕರ್ಮ ಮಾಡುವ ಹವ್ಯಾಸವಾಗಿ ಬಿಟ್ಟಿದೆ. ಈಗ ಅವೆಲ್ಲಾ ಆಸುರೀ ಹವ್ಯಾಸಗಳನ್ನು ಕಳೆಯಬೇಕಾಗಿದೆ. ಈ ತಂದೆಯೂ (ಬ್ರಹ್ಮಾ) ಹೇಳುತ್ತಾರೆ - ಎಲ್ಲರೂ ಪುರುಷಾರ್ಥಿಗಳಾಗಿದ್ದಾರೆ. ಕರ್ಮಾತೀತ ಸ್ಥಿತಿಯನ್ನು ಹೊಂದುವುದರಲ್ಲಿ ಬಹಳ ಸಮಯ ಹಿಡಿಸುತ್ತದೆ. ಬ್ರಾಹ್ಮಣರೆಂದೂ ವಿಕಾರದಲ್ಲಿ ಹೋಗುವುದಿಲ್ಲ. ಯುದ್ಧದ ಮೈದಾನದಲ್ಲಿ ನಡೆಯುತ್ತಾ-ನಡೆಯುತ್ತಾ ಸೋಲನ್ನನುಭವಿಸುತ್ತಾರೆ. ಈ ಪ್ರಶ್ನೆಗಳಿಂದ ಯಾವುದೇ ಲಾಭವಿಲ್ಲ. ಮೊದಲು ತಮ್ಮ ತಂದೆಯನ್ನು ನೆನಪು ಮಾಡಿ. ನಮಗೆ ಶಿವ ತಂದೆಯು ಕಲ್ಪದ ಹಿಂದಿನ ತರಹ ಆದೇಶ ನೀಡಿದ್ದಾರೆ - ತನ್ನನ್ನು ಆತ್ಮವೆಂದು ತಿಳಿದು ನನ್ನನ್ನು ನೆನಪು ಮಾಡಿ. ಇದು ಅದೇ ಯುದ್ಧವಾಗಿದೆ. ತಂದೆಯು ಒಬ್ಬರೇ ಆಗಿದ್ದಾರೆ, ಕೃಷ್ಣನಿಗೆ ತಂದೆಯೆಂದು ಹೇಳುವುದಿಲ್ಲ ಆದರೆ ಕೃಷ್ಣನ ಹೆಸರನ್ನು ಹಾಕಿದ್ದಾರೆ. ತಪ್ಪನ್ನು ಸರಿ ಪಡಿಸುವವರು ತಂದೆಯಾಗಿದ್ದಾರೆ ಆದ್ದರಿಂದಲೇ ಅವರಿಗೆ ಸತ್ಯವೆಂದು ಹೇಳಲಾಗುತ್ತದೆಯಲ್ಲವೆ. ಈ ಸಮಯದಲ್ಲಿ ನೀವು ಮಕ್ಕಳೇ ಇಡೀ ಸೃಷ್ಟಿಯ ರಹಸ್ಯವನ್ನು ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ದೈವೀ ರಾಜಧಾನಿಯಿರುತ್ತದೆ ಮತ್ತೆ ರಾವಣ ರಾಜ್ಯದಲ್ಲಿ ಆಸುರೀ ರಾಜ್ಯವಿದೆ. ಇದು ಪುರುಷೋತ್ತಮ ಸಂಗಮಯುಗವೆಂದು ಸಂಗಮಯುಗವನ್ನು ಸ್ಪಷ್ಟ ಮಾಡಿ ತೋರಿಸಬೇಕಾಗಿದೆ. ಅತ್ತ ಕಡೆ ದೇವತೆಗಳು, ಈ ಕಡೆ ಅಸುರರು ಬಾಕಿ ಅಸುರರ-ದೇವತೆಗಳ ಯುದ್ಧವಾಗಲಿಲ್ಲ. ವಾಸ್ತವದಲ್ಲಿ ವಿಕಾರಗಳೊಂದಿಗೆ ನೀವು ಬ್ರಾಹ್ಮಣರ ಯುದ್ಧವಾಗಿದೆ. ಇದಕ್ಕೂ ಯುದ್ಧವೆಂದು ಹೇಳುವುದಿಲ್ಲ. ಎಲ್ಲದಕ್ಕಿಂತ ದೊಡ್ಡದು ಕಾಮ ವಿಕಾರವಾಗಿದೆ, ಇದು ಮಹಾಶತ್ರುವಾಗಿದೆ. ಇದರ ಮೇಲೆ ಜಯ ಗಳಿಸುವುದರಿಂದಲೇ ನೀವು ಜಗತ್ಜೀತರಾಗುತ್ತೀರಿ. ಈ ವಿಷ (ವಿಕಾರ) ಕ್ಕಾಗಿಯೇ ಬಹಳ ಪೆಟ್ಟನ್ನು ತಿನ್ನುತ್ತಾರೆ. ಅನೇಕ ಪ್ರಕಾರದ ವಿಘ್ನಗಳು ಬರುತ್ತದೆ, ಮೂಲ ಮಾತು ಪವಿತ್ರತೆಯದಾಗಿದೆ. ಪುರುಷಾರ್ಥ ಮಾಡುತ್ತಾ-ಮಾಡುತ್ತಾ, ಬಿರುಗಾಳಿಗಳು ಬರುತ್ತಾ-ಬರುತ್ತಾ ನಿಮಗೆ ಜಯವಾಗಿ ಬಿಡುವುದು. ಮಾಯೆಯು ಸುಸ್ತಾಗಿ ಬಿಡುತ್ತದೆ. ಮಲ್ಲ ಯುದ್ಧದಲ್ಲಿ ಯಾರು ಶಕ್ತಿಶಾಲಿಗಳಾಗಿರುವರೋ ಅವರು ಬಹು ಬೇಗನೆ ಹೋರಾಡುತ್ತಾರೆ. ಅವರ ಕರ್ತವ್ಯವೇ ಆಗಿದೆ - ಚೆನ್ನಾಗಿ ಹೊಡೆದಾಡಿ ಜಯ ಗಳಿಸುವುದು. ಶಕ್ತಿಶಾಲಿಗಳ ಹೆಸರು ಪ್ರಖ್ಯಾತವಾಗುತ್ತದೆ, ಬಹುಮಾನವು ಸಿಗುತ್ತದೆ. ನಿಮ್ಮದು ಇದು ಗುಪ್ತ ಮಾತಾಗಿದೆ.

ನೀವು ತಿಳಿದುಕೊಂಡಿದ್ದೀರಿ - ನಾವಾತ್ಮಗಳು ಪವಿತ್ರರಾಗಿದ್ದೆವು, ಈಗ ಅಪವಿತ್ರರಾಗಿದ್ದೇವೆ ಪುನಃ ಪವಿತ್ರರಾಗಬೇಕಾಗಿದೆ. ಇದೇ ಸಂದೇಶವನ್ನು ಎಲ್ಲರಿಗೂ ಕೊಡಬೇಕಾಗಿದೆ ಮತ್ತು ಯಾರಾದರೂ ಪ್ರಶ್ನಿಸಿದರೆ ನೀವು ಈ ಮಾತುಗಳಲ್ಲಿ ಹೋಗಲೇಬಾರದು. ನಿಮ್ಮದು ಆತ್ಮಿಕ ಸೇವೆಯಾಗಿದೆ, ನಾವಾತ್ಮಗಳಲ್ಲಿ ತಂದೆಯು ಜ್ಞಾನವನ್ನು ತುಂಬಿದ್ದರು ನಂತರದಲ್ಲಿ ಪ್ರಾಲಬ್ಧವನ್ನು ಪಡೆದೆವು, ಜ್ಞಾನವು ಸಮಾಪ್ತಿಯಾಯಿತು. ಈಗ ಮತ್ತೆ ತಂದೆಯು ಜ್ಞಾನವನ್ನು ತುಂಬುತ್ತಿದ್ದಾರೆ ಅಂದಾಗ ನಶೆಯಲ್ಲಿರಿ - ತಿಳಿಸಿ, ತಂದೆಯ ಸಂದೇಶ ಕೊಡುತ್ತೇವೆ - ತಂದೆಯನ್ನು ನೆನಪು ಮಾಡುವುದರಿಂದ ನಿಮ್ಮ ಕಲ್ಯಾಣವಾಗುವುದು. ನಿಮ್ಮದು ಈ ಆತ್ಮಿಕ ವ್ಯವಹಾರವಾಗಿದೆ, ಮೊಟ್ಟ ಮೊದಲ ಮಾತೇನೆಂದರೆ ತಂದೆಯನ್ನು ಅರಿತುಕೊಳ್ಳುವುದು. ತಂದೆಯೇ ಜ್ಞಾನ ಸಾಗರನಾಗಿದ್ದಾರೆ, ಅವರು ಪುಸ್ತಕವನ್ನಿಡಿದು ತಿಳಿಸುವುದಿಲ್ಲ. ಅಲ್ಲಿ ಯಾರೂ ಡಾಕ್ಟರ್ ಆಫ್ ಫಿಲಾಸಫಿ ಇತ್ಯಾದಿ ಆಗುತ್ತಾರೆಯೋ ಅವರು ಪುಸ್ತಕಗಳನ್ನು ಓದುತ್ತಾರೆ. ಭಗವಂತನಂತು ಜ್ಞಾನಪೂರ್ಣನಾಗಿದ್ದಾರೆ, ಅವರಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಅವರೇನಾದರೂ ಓದಿದ್ದಾರೆಯೇ? ಅವರಂತು ಎಲ್ಲಾ ವೇದ-ಶಾಸ್ತ್ರ ಇತ್ಯಾದಿಗಳನ್ನು ತಿಳಿದುಕೊಂಡಿರುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನ ಪಾತ್ರವೇ ನಿಮಗೆ ಜ್ಞಾನವನ್ನು ತಿಳಿಸುವುದಾಗಿದೆ. ಜ್ಞಾನ ಮತ್ತು ಭಕ್ತಿಯ ಅಂತರವನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಇದು ಜ್ಞಾನದ ವಿದ್ಯೆಯಾಗಿದೆ, ಭಕ್ತಿಗೆ ಜ್ಞಾನವೆಂದು ಹೇಳಲಾಗುವುದಿಲ್ಲ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ವಿಶ್ವದ ಇತಿಹಾಸವು ಅವಶ್ಯವಾಗಿ ಪುನರಾವರ್ತನೆಯಾಗುವುದು. ಹಳೆಯ ಪ್ರಪಂಚದ ನಂತರ ಮತ್ತೆ ಹೊಸ ಪ್ರಪಂಚವು ಖಂಡಿತವಾಗಿ ಬರಲಿದೆ, ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ಪುನಃ ಓದಿಸುತ್ತಿದ್ದಾರೆ, ನನ್ನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಇದರ ಮೇಲೆ ಒತ್ತುಕೊಟ್ಟು ಹೇಳುತ್ತಾರೆ ಏಕೆಂದರೆ ತಂದೆಗೆ ಗೊತ್ತಿದೆ. ಅನೇಕ ಒಳ್ಳೊಳ್ಳೆಯ ಹೆಸರುವಾಸಿಯಾದ ಮಕ್ಕಳೂ ಸಹ ಈ ನೆನಪಿನ ಯಾತ್ರೆಯಲ್ಲಿ ಬಹಳ ನಿರ್ಬಲರಾಗಿದ್ದಾರೆ ಮತ್ತು ಯಾರು ಹೆಸರುವಾಸಿಯಲ್ಲವೋ, ಬಂಧನದಲ್ಲಿದ್ದಾರೆಯೋ, ಬಡವರಾಗಿದ್ದಾರೆಯೋ ಅವರು ಬಹಳ ಚೆನ್ನಾಗಿ ನೆನಪಿನ ಯಾತ್ರೆಯಲ್ಲಿರುತ್ತಾರೆ. ಪ್ರತಿಯೊಬ್ಬರೂ ತಮ್ಮ ಹೃದಯದಿಂದ ಕೇಳಿಕೊಳ್ಳಿ - ನಾನು ತಂದೆಯನ್ನು ಎಷ್ಟು ಸಮಯ ನೆನಪು ಮಾಡುತ್ತೇನೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಎಷ್ಟು ಸಾಧ್ಯವೋ ಅಷ್ಟೂ ನನ್ನನ್ನು ನೆನಪು ಮಾಡಿ. ಆಂತರಿಕವಾಗಿ ಬಹಳ ಹರ್ಷಿತರಾಗಿರಿ. ಭಗವಂತನು ಓದಿಸುತ್ತಾರೆಂದ ಮೇಲೆ ಎಷ್ಟೊಂದು ಖುಷಿಯಿರಬೇಕು! ತಂದೆಯು ತಿಳಿಸುತ್ತಾರೆ - ನೀವು ಪವಿತ್ರ ಆತ್ಮಗಳಾಗಿದ್ದೀರಿ ನಂತರ ಶರೀರವನ್ನು ಧಾರಣೆ ಮಾಡಿ ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಪತಿತರಾಗಿದ್ದೀರಿ. ಈಗ ಮತ್ತೆ ಪವಿತ್ರರಾಗಬೇಕಾಗಿದೆ. ಮತ್ತೆ ಅದೇ ದೈವೀ ಪಾತ್ರವನ್ನು ಅಭಿನಯಿಸಬೇಕಾಗಿದೆ. ನೀವು ದೈವೀ ಧರ್ಮದವರಲ್ಲವೆ. ನೀವೇ 84 ಜನ್ಮಗಳ ಚಕ್ರವನ್ನು ಸುತ್ತುತ್ತೀರಿ. ಎಲ್ಲಾ ಸೂರ್ಯವಂಶಿಯರು 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಕೊನೆಯಲ್ಲಿ ಬರುತ್ತಾ ಇರುತ್ತಾರಲ್ಲವೆ. ಎಲ್ಲರೂ ಒಮ್ಮೆಲೆ ಬಂದು ಬಿಡುವುದಿಲ್ಲ. ಮುಂಜಾನೆಯೆದ್ದು ಬುದ್ಧಿಯಿಂದ ಕೆಲಸ ತೆಗೆದುಕೊಂಡರೆ ಬಹಳ ಚೆನ್ನಾಗಿ ತಿಳಿದುಕೊಳ್ಳಬಹುದು. ಮಕ್ಕಳೇ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ, ಶಿವ ತಂದೆಯಂತೂ ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ - ಡ್ರಾಮಾನುಸಾರ ಏನೆಲ್ಲವನ್ನೂ ತಿಳಿಸುತ್ತೇನೆಯೋ, ಅದೇರೀತಿ ತಿಳಿದುಕೊಳ್ಳಿ - ಕಲ್ಪದ ಹಿಂದೆ ಏನನ್ನು ತಿಳಿಸಿದ್ದೆನೋ ಅದನ್ನೇ ತಿಳಿಸುವೆನು. ನೀವು ಮಕ್ಕಳು ಮಂಥನ ಮಾಡುತ್ತೀರಿ, ನೀವೇ ತಿಳಿಸಬೇಕು, ಜ್ಞಾನವನ್ನು ಕೊಡಬೇಕಾಗಿದೆ. ಈ ಬ್ರಹ್ಮಾ ತಂದೆಯೂ ಮಂಥನ ಮಾಡುತ್ತಾರೆ. ಬ್ರಹ್ಮಾಕುಮಾರ-ಕುಮಾರಿಯರು ಮಂಥನ ಮಾಡಬೇಕಾಗಿದೆ, ಶಿವ ತಂದೆ ಅಲ್ಲ. ಮೂಲ ಮಾತು - ಯಾರೊಂದಿಗೂ ಹೆಚ್ಚಿನದಾಗಿ ಮಾತನಾಡಬಾರದು. ಶಾಸ್ತ್ರವಾದಿಗಳು ಪರಸ್ಪರ ಬಹಳ ವಾದ-ವಿವಾದ ಮಾಡುತ್ತಾರೆ ಆದರೆ ನೀವು ವಾದ-ವಿವಾದ ಮಾಡಬಾರದು, ಕೇವಲ ಸಂದೇಶವನ್ನು ಕೊಡಬೇಕಾಗಿದೆ. ಮೊಟ್ಟ ಮೊದಲು ಮುಖ್ಯವಾಗಿ ಒಂದು ಮಾತನ್ನು ತಿಳಿಸಿ ಮತ್ತೆ ಬರೆಸಿಕೊಳ್ಳಿ – ಮೊಟ್ಟ ಮೊದಲಿನ ಈ ಪಾಠವನ್ನು ಹೇಳಿ, ಇದನ್ನು ಯಾರು ತಿಳಿಸುತ್ತಾರೆ, ಎಂಬುದನ್ನು ಬರೆಯಿರಿ. ಈ ಮಾತನ್ನು ನೀವು ಕೊನೆಗೆ ತೆಗೆದುಕೊಂಡು ಹೋಗುತ್ತೀರಿ ಆದ್ದರಿಂದ ಸಂಶಯವು ಬರುತ್ತಿರುತ್ತದೆ. ನಿಶ್ಚಯಬುದ್ಧಿಯವರಲ್ಲದ ಕಾರಣ ತಿಳಿದುಕೊಳ್ಳುವುದಿಲ್ಲ, ಕೇವಲ ಇದು ಸರಿಯೆಂದು ಹೇಳುತ್ತಾರೆ. ಮೊಟ್ಟ ಮೊದಲು ಮುಖ್ಯವಾದ ಮಾತೇ ಇದಾಗಿದೆ - ರಚಯಿತ ತಂದೆಯನ್ನು ತಿಳಿದುಕೊಳ್ಳಿ ನಂತರ ರಚನೆಯ ರಹಸ್ಯವನ್ನು ತಿಳಿದುಕೊಳ್ಳಿ. ಮುಖ್ಯ ಮಾತು - ಗೀತೆಯ ಭಗವಂತ ಯಾರು? ಇದರಲ್ಲಿಯೇ ನಿಮ್ಮ ವಿಜಯವಾಗಬೇಕಾಗಿದೆ. ಮೊಟ್ಟ ಮೊದಲು ಯಾವ ಧರ್ಮವು ಸ್ಥಾಪನೆಯಾಯಿತು? ಹಳೆಯ ಪ್ರಪಂಚವನ್ನು ಹೊಸ ಪ್ರಪಂಚವನ್ನಾಗಿ ಯಾರು ಮಾಡುತ್ತಾರೆ? ತಂದೆಯೇ ಆತ್ಮಗಳಿಗೆ ಹೊಸ ಜ್ಞಾನವನ್ನು ತಿಳಿಸುತ್ತಾರೆ. ಇದರಿಂದ ಹೊಸ ಪ್ರಪಂಚವು ಸ್ಥಾಪನೆಯಾಗುತ್ತದೆ. ನಿಮಗೆ ತಂದೆ ಮತ್ತು ರಚನೆಯ ಪರಿಚಯವು ಸಿಗುತ್ತದೆ. ಮೊಟ್ಟ ಮೊದಲಿಗೆ ತಂದೆಯ ಪರಿಚಯವನ್ನು ಪಕ್ಕಾ ಮಾಡಿಸಿ ನಂತರ ಆಸ್ತಿಯು ಇದ್ದೇ ಇದೆ. ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ತಂದೆಯನ್ನು ಅರಿತುಕೊಂಡರೆ ಆಸ್ತಿಗೆ ಹಕ್ಕುದಾರರಾದರು. ಮಗು ಜನ್ಮ ಪಡೆಯಿತೆಂದರೆ ತಂದೆ-ತಾಯಿಯನ್ನು ನೋಡಿದ ತಕ್ಷಣ ಪಕ್ಕಾ ಆಗಿ ಬಿಡುತ್ತದೆ. ತಂದೆ-ತಾಯಿಯ ವಿನಃ ಯಾರ ಬಳಿಯೂ ಹೋಗುವುದೇ ಇಲ್ಲ. ತಾಯಿಯಿಂದ ಹಾಲು ಸಿಗುತ್ತದೆ. ಇಲ್ಲಿಯೂ ಜ್ಞಾನದ ಹಾಲು ಸಿಗುತ್ತದೆ, ಇವರು ಮಾತಾಪಿತರಲ್ಲವೆ. ಬಹಳ ಗುಹ್ಯ ಮಾತುಗಳನ್ನು ತಿಳಿಸುತ್ತಾರೆ, ಈ ಮಾತುಗಳನ್ನು ತಕ್ಷಣ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸತ್ಯ-ಸತ್ಯ ಪವಿತ್ರ ಬ್ರಾಹ್ಮಣರಾಗಬೇಕಾಗಿದೆ. ಎಂದೂ ಶೂದ್ರ (ಪತಿತ) ರಾಗುವ ಸಂಕಲ್ಪವು ಮನಸ್ಸಿನಲ್ಲಿಯೂ ಬರಬಾರದು. ಸ್ವಲ್ಪವೂ ದೃಷ್ಟಿಯು ಕೆಡಬಾರದು. ಇಂತಹ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ.

2. ತಂದೆಯು ಏನನ್ನು ಓದಿಸುತ್ತಾರೆಯೋ ಆ ತಿಳುವಳಿಕೆಯನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕಾಗಿದೆ. ವಿಕರ್ಮ ಮಾಡುವ ಯಾವ ಆಸುರೀ ಹವ್ಯಾಸಗಳಿವೆಯೋ ಅವನ್ನು ಕಳೆಯಬೇಕಾಗಿದೆ. ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಸಂಪೂರ್ಣ ಪವಿತ್ರತೆಯ ಉನ್ನತ ಗುರಿಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ.

ವರದಾನ:
ಕಾರಣವನ್ನು ನಿವಾರಣೆ ಮಾಡಿ ಚಿಂತೆ ಮತ್ತು ಭಯದಿಂದ ಮುಕ್ತರಾಗಿರುವಂತಹ ಮಾಸ್ಟರ್ ಸರ್ವಶಕ್ತಿವಾನ್ ಭವ.

ವರ್ತಮಾನ ಸಮಯ ಅಲ್ಪಕಾಲದ ಸುಖದ ಜೊತೆ ಚಿಂತೆ ಮತ್ತು ಭಯವಂತೂ ಇದ್ದೇ ಇದೆ. ಎಲ್ಲಿ ಚಿಂತೆಯಿದೆ ಅಲ್ಲಿ ನೆಮ್ಮದಿ ಇರಲು ಸಾಧ್ಯವಿಲ್ಲ. ಎಲ್ಲಿ ಭಯವಿದೆ ಅಲ್ಲಿ ಶಾಂತಿ ಇರಲು ಸಾಧ್ಯವಿಲ್ಲ. ಆದ್ದರಿಂದ ಸುಖದ ಜೊತೆ ಇಲ್ಲಿ ದುಃಖ ಅಶಾಂತಿಯ ಕಾರಣವೂ ಸಹಾ ಇದ್ದೇ ಇದೆ. ಆದರೆ ತಾವು ಸರ್ವ ಶಕ್ತಿಗಳ ಖಜಾನೆಯಿಂದ ಸಂಪನ್ನ ಮಾಸ್ಟರ್ ಸರ್ವ ಶಕ್ತಿವಾನ್ ಮಕ್ಕಳು ದುಃಖದ ಕಾರಣವನ್ನು ನಿವಾರಣೆ ಮಾಡುವವರಾಗಿರುವಿರಿ, ಎಲ್ಲಾ ಸಮಸ್ಯೆಯ ಸಮಾಧಾನ ಮಾಡುವಂತಹ ಸಮಾಧಾನ ಸ್ವರೂಪರಾಗಿರುವಿರಿ ಆದ್ದರಿಂದ ಚಿಂತೆ ಮತ್ತು ಭಯದಿಂದ ಮುಕ್ತರಾಗಿರುವಿರಿ. ಯಾವುದೇ ಸಮಸ್ಯೆ ನಿಮ್ಮ ಮುಂದೆ ಆಟವಾಡಲು ಬರುವುದೇ ವಿನಹ ನಿಮ್ಮನ್ನು ಭಯ ಬೀಳಿಸಲು ಅಲ್ಲ.

ಸ್ಲೋಗನ್:
ತಮ್ಮ ವೃತ್ತಿಯನ್ನು ಶ್ರೇಷ್ಠ ಮಾಡಿಕೊಳ್ಳಿ ಆಗ ತಮ್ಮ ಪ್ರವೃತ್ತಿ ಸ್ವತಃ ಶ್ರೇಷ್ಠವಾಗಿ ಬಿಡುವುದು.

ಅವ್ಯಕ್ತ ಸೂಚನೆ: - ಈಗ ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.

ಸಮಯ ಪ್ರಮಾಣ ಈಗ ಸರ್ವ ಬ್ರಾಹ್ಮಣ ಆತ್ಮರನ್ನು ಸಮೀಪ ತರುತ್ತ ಜ್ವಾಲಾ ಸ್ವರೂಪದ ವಾಯುಮಂಡಲವನ್ನು ತಯಾರಿ ಮಾಡುವ ಸೇವೆಯನ್ನು ಮಾಡಿರಿ, ಅದಕ್ಕಾಗಿ ಭಟ್ಟಿಗಳನ್ನು ಮಾಡಿರಿ ಅಥವಾ ಪರಸ್ಪರದಲ್ಲಿ ಸಂಘಟಿತರಾಗಿ ಆತ್ಮಿಕ ವಾರ್ತಾಲಾಪ ಮಾಡಿ ಆದರೆ ಜ್ವಾಲಾ ಸ್ವರೂಪದ ಅನುಭವ ಮಾಡಿ ಮತ್ತು ಮಾಡಿಸಿ, ಈ ಸೇವೆಯಲ್ಲಿ ತೊಡಗಿ ಆಗ ಚಿಕ್ಕ-ಚಿಕ್ಕ ಮಾತುಗಳು ಸಹಜವಾಗಿ ಪರಿವರ್ತನೆಯಾಗುತ್ತವೆ.