03.11.24 Avyakt Bapdada
Kannada
Murli 25.10.2002 Om Shanti Madhuban
“ಬ್ರಾಹ್ಮಣ ಜೀವನದ ಆಧಾರ
- ಪವಿತ್ರತೆಯ ಘನತೆ”
ಇಂದು ಸ್ನೇಹದ ಸಾಗರ
ತಂದೆಯು ತನ್ನ ಸ್ನೇಹಿ ಮಕ್ಕಳನ್ನು ನೋಡಲು ಹೊಂದಿದ್ದೇವೆ. ನಾಲ್ಕಾರು ಕಡೆಯ ಸ್ನೇಹಿ ಮಕ್ಕಳು
ಆತ್ಮೀಯ ಸೂಕ್ಷ್ಮವಾದ ಎಳೆಗಳಲ್ಲಿ ಬಂಧಿಸಿಕೊಂಡು ತಮ್ಮ ಸಿಹಿಯಾದ ಮನೆಗೆ ಬಂದು ತಲುಪಿದ್ದೀರಿ. ಹೇಗೆ
ಮಕ್ಕಳು ಸ್ನೇಹಕ್ಕೆ ಆಕರ್ಷಿತರಾಗಿ ಬಂದು ತಲುಪಿದ್ದಾರೆ. ಅದೇ ರೀತಿ ತಂದೆಯು ಮಕ್ಕಳ ಸ್ನೇಹದ
ಹಗ್ಗದಲ್ಲಿ ಬಂಧಿತರಾಗಿ ಮಕ್ಕಳ ಸಮ್ಮುಖದಲ್ಲಿ ಬಂದು ತಲುಪಿದ್ದಾರೆ. ಬಾಪ್ದಾದಾ ಸಾಲ್ಕಾರು ಕಡೆಯ
ಮಕ್ಕಳು ದೂರದಲ್ಲಿ ಕುಳಿತಿದ್ದರೂ ತಂದೆಯ ಸ್ನೇಹದಲ್ಲಿ ಸಮಾವೇಶವಾಗಿರುವುದನ್ನು ನೋಡುತ್ತಿದ್ದಾರೆ.
ಸಮ್ಮುಖದಲ್ಲಿರುವ ಮಕ್ಕಳನ್ನೂ ಸಹ ನೋಡುತ್ತಿದ್ದಾರೆ ಮತ್ತು ದೂರದಲ್ಲಿ ಕುಳಿತಿರುವ ಮಕ್ಕಳನ್ನು
ನೋಡುತ್ತಾ ನೋಡುತ್ತಾ ಹರ್ಷಿತರಾಗುತ್ತಿದ್ದಾರೆ. ಇಂತಹ ಆತ್ಮೀಯ ಅವಿನಾಶಿ ಸ್ನೇಹ, ಪರಮಾತ್ಮನ
ಸ್ನೇಹ, ಅಸ್ಮಿಕ ಸ್ನೇಹ ಇಡೀ ಕಲ್ಪದಲ್ಲಿ ಈಗ ಅನುಭವ ಮಾಡುತ್ತಿದ್ದೀರಲ್ಲವೇ?
ಬಾಪ್ದಾದಾ ಪ್ರತಿಯೊಬ್ಬ
ಮಕ್ಕಳ ಪವಿತ್ರತೆಯ ಶ್ರೇಷ್ಠತೆಯನ್ನು ನೋಡುತ್ತಿದ್ದಾರೆ. ಪವಿತ್ರತೆಯು ಬ್ರಾಹ್ಮಣ ಜೀವನದ
ಶ್ರೇಷ್ಠತೆಯಾಗಿದೆ. ಅಂದಾಗ ಪ್ರತಿಯೊಬ್ಬ ಮಕ್ಕಳ ತಲೆಯ ಮೇಲೆ ಆತ್ಮೀಯ ಶ್ರೇಷ್ಠತೆಯ ಗುರುತನ್ನು
ಮತ್ತು ಪವಿತ್ರತೆಯ ಪ್ರಕಾಶತೆಯ ಕಿರೀಟವನ್ನು ನೋಡುತ್ತಿದ್ದಾರೆ. ತಾವೆಲ್ಲರೂ ತಮ್ಮ ಪವಿತ್ರತೆಯ
ಕಿರೀಟ ಹಾಗೂ ಆತ್ಮೀಯ ಶ್ರೇಷ್ಠತೆಯ ಕಿರೀಟವನ್ನು ನೋಡುತ್ತಿದ್ದೀರಾ? ಹಿಂದೆ ಕುಳಿತಿರುವಂತಹವರೂ ಸಹ
ನೋಡುತ್ತಿದ್ದೀರಾ? ಇದು ಎಷ್ಟೊಂದು ಸುಂದರವಾದ ಕಿರೀಟಧಾರಿಗಳ ಸಭೆಯಾಗಿದೆ. ಪಾಂಡವರೇ ಹೌದಲ್ಲವೇ?
ಕಿರೀಟಗಳು ಹೊಳೆಯುತ್ತಿವೆಯಲ್ಲವೇ? ಇಂತಹ ಸಭೆಯನ್ನು ನೋಡುತ್ತಿದ್ದೀರಲ್ಲವೇ! ಕುಮಾರಿಯರು,
ಕಿರೀಟಧಾರಿ ಕುಮಾರಿಯರಾಗಿದ್ದಾರೆ. ಮಕ್ಕಳ ಗೌರವಾನ್ವಿತ ಪರಿವಾರ ಎಷ್ಟೊಂದು ಶ್ರೇಷ್ಠವಾಗಿದೆ ಎಂದು
ಬಾಪ್ದಾದಾ ನೋಡುತ್ತಿದ್ದಾರೆ. ತಮ್ಮ ಅನಾದಿ ಶ್ರೇಷ್ಠತೆಯನ್ನು ನೆನಪು ಮಾಡಿಕೊಳ್ಳಿ - ಯಾವಾಗ ತಾವು
ಆತ್ಮಗಳು ಪರಂಧಾಮದಲ್ಲಿರುತ್ತೀರಿ ಆಗ ಆತ್ಮರೂಪದಲ್ಲಿ ತಮ್ಮ ಆತ್ಮೀಯ ಶ್ರೇಷ್ಠತೆ ವಿಶೇಷವಾಗಿದೆ.
ಸರ್ವ ಆತ್ಮಗಳು ಪ್ರಕಾಶ ರೂಪದಲ್ಲಿರುತ್ತಾರೆ. ಆದರೆ ತಮ್ಮ ಹೊಳಪು ಸರ್ವ ಆತ್ಮಗಳಿಗಿಂತಲೂ
ಶ್ರೇಷ್ಠವಾಗಿದೆ. ಪರಂಧಾಮ ನೆನಪಿಗೆ ಬರುತ್ತಿದೆಯಲ್ಲವೇ? ಅನಾದಿಕಾಲದಿಂದ ತಮ್ಮ ಹೊಳಪು ಮತ್ತು
ನಶೆಯು ಭಿನ್ನವಾಗಿದೆ. ಹೇಗೆ ಆಕಾಶದಲ್ಲಿ ಎಲ್ಲಾ ನಕ್ಷತ್ರಗಳು ಹೊಳೆಯುತ್ತಿರುತ್ತದೆ ಮತ್ತು ಎಲ್ಲವೂ
ಪ್ರಕಾಶವಾಗಿಯೇ ಇರುತ್ತದೆ, ಆದರೆ ಸರ್ವ ನಕ್ಷತ್ರಗಳಲ್ಲಿ ಕೆಲವೊಂದು ವಿಶೇಷ ನಕ್ಷತ್ರಗಳ ಹೊಳಪು
ಭಿನ್ನ ಮತ್ತು ಪ್ರಿಯವಾಗಿರುತ್ತವೆ. ಅದೇ ರೀತಿ ಸರ್ವ ಆತ್ಮಗಳ ಮಧ್ಯದಲ್ಲಿ ತಾವು ಆತ್ಮಗಳ ಹೊಳಪು
ಆತ್ಮೀಯ ಶ್ರೇಷ್ಠತೆ, ಪವಿತ್ರತೆಯ ಹೊಳಪು ಭಿನ್ನವಾಗಿರುತ್ತದೆ, ನೆನಪಿಗೆ ಬರುತ್ತಿದೆಯಲ್ಲವೆ? ಪುನಃ
ಆದಿಕಾಲದಲ್ಲಿ ಬನ್ನಿರಿ. ಆದಿಕಾಲವನ್ನು ನೆನಪು ಮಾಡಿಕೊಂಡಾಗ ಆದಿಕಾಲದ ದೇವತಾ ಸ್ವರೂಪದಲ್ಲಿ
ಆತ್ಮೀಯ ಶ್ರೇಷ್ಠತೆಯ ವ್ಯಕ್ತಿತ್ವವು ಎಷ್ಟು ವಿಶೇಷವಾಗಿದೆ? ಇಡೀ ಕಲ್ಪದಲ್ಲಿ ದೇವತಾ ಸ್ವರೂಪದ
ಶ್ರೇಷ್ಠತೆಯು ಇಲ್ಲಿಯವರೆಗೆ ಯಾರಲ್ಲಿದೆ? ಆತ್ಮೀಯ ಶ್ರೇಷ್ಠತೆ, ಪವಿತ್ರತೆಯ ವ್ಯಕ್ತಿತ್ವವು
ನೆನಪಿದೆಯಲ್ಲವೇ, ನೆನಪಿದೆಯಲ್ಲವೇ? ಪಾಂಡವರಿಗೆ ನೆನಪಿದೆಯೇ? ನೆನಪಿಗೆ ಬಂದಿತೇ? ಪುನಃ ಮಧ್ಯದಲ್ಲಿ
ಬಂದಾಗಿ ಮಧ್ಯಕಾಲ ದ್ವಾಪರದಿಂದ ತಮ್ಮ ಯಾವ ಪೂಜ್ಯಚಿತ್ರಗಳನ್ನು ಮಾಡುತ್ತಾರೆ, ಆ ಚಿತ್ರಗಳ
ಶ್ರೇಷ್ಠತೆ ಮತ್ತು ಪೂಜೆಯ ಶ್ರೇಷ್ಠತೆ ದ್ವಾಪರದಿಂದ ಇಲ್ಲಿಯವರೆಗೆ ಯಾರ ಚಿತ್ರವಾಗಿದೆ? ಅನೇಕರ
ಚಿತ್ರಗಳಿದೆ. ಹಾಗೆಯೇ ವಿಧಿಪೂರ್ವಕ ಪೂಜೆಯು ಯಾವ ಆತ್ಮಗಳಿಗಿದೆ? ಚಿತ್ರಗಳಂತೂ ಎಲ್ಲರದ್ದೂ ಇದೆ.
ಅದರಲ್ಲಿ ಕೆಲವರು ಧರ್ಮಗುರುಗಳಿದ್ದಾರೆ. ಕೆಲವರು ರಾಜಕೀಯ ವ್ಯಕ್ತಿಗಳಿದ್ದಾರೆ. ಚಲನಚಿತ್ರದಲ್ಲಿ
ಅಭಿನಯಿಸುವವರಿದ್ದಾರೆ. ಆದರೆ ಚಿತ್ರಗಳಲ್ಲಿ ಶ್ರೇಷ್ಠತೆ ಮತ್ತು ಪೂಜೆಯ ಶ್ರೇಷ್ಠತೆ ಯಾರದನ್ನು
ನೋಡಿದಿರಿ? ಡಬಲ್ ವಿದೇಶಿಯರು ತಮ್ಮ ಪೂಜೆಯನ್ನು ನೋಡಿದ್ದೀರೇನು? ತಾವೆಲ್ಲರೂ ನೋಡಿದ್ದೀರಾ ಅಥವಾ
ಕೇವಲ ಕೇಳಿದ್ದೀರಾ? ಈ ರೀತಿ ವಿಧಿಪೂರ್ವಕ ಪೂಜೆ ಮತ್ತು ಚಿತ್ರಗಳ ಹೊಳಪು, ಆತ್ಮೀಯತೆ ಯಾರಲ್ಲಿಯೂ
ಇಲ್ಲ ಹಾಗೂ ಇರುವುದಿಲ್ಲ. ಏಕೆ? ಪವಿತ್ರತೆಯೇ ಶ್ರೇಷ್ಠತೆಯಾಗಿದೆ. ಪವಿತ್ರತೆಯೇ
ವ್ಯಕ್ತಿತ್ವವಾಗಿದೆ. ಒಳ್ಳೆಯದು. ತಮ್ಮ ಪೂಜೆಯನ್ನು ನೋಡಿದಿರಲ್ಲವೆ. ನೋಡಿಲ್ಲವೆಂದರೆ ಈಗ
ನೋಡಿಕೊಳ್ಳಿ. ಈಗ ಅಂತ್ಯದಲ್ಲಿ ಸಂಗಮಯುಗಕ್ಕೆ ಬಂದಾಗ ಸಂಗಮದಲ್ಲಿ ಇಡೀ ವಿಶ್ವದಲ್ಲಿ ಪವಿತ್ರತೆಯ
ಶ್ರೇಷ್ಠತೆ ಬ್ರಾಹ್ಮಣ ಜೀವನದ ಆಧಾರವಾಗಿದೆ. ಪವಿತ್ರತೆಯಿಲ್ಲದಿದ್ದರೆ ಪ್ರಭುವಿನ ಪ್ರೀತಿಯ ಅನುಭವ
ಆಗುವುದಿಲ್ಲ. ಪರಮಾತ್ಮನ ಸರ್ವ ಪ್ರಾಪ್ತಿಗಳ ಅನುಭವವಾಗುವುದಿಲ್ಲ. ಬ್ರಾಹ್ಮಣ ಜೀವನದ
ವ್ಯಕ್ತಿತ್ವವು ಪವಿತ್ರತೆಯಾಗಿದೆ ಮತ್ತು ಪವಿತ್ರತೆಯೇ ಆತ್ಮೀಯ ಶ್ರೇಷ್ಠತೆಯಾಗಿದೆ. ಹಾಗಾದರೆ ಆದಿ,
ಅನಾದಿ ಮತ್ತು ಆದಿ-ಮಧ್ಯ-ಅಂತ್ಯವು ಇಡೀ ಕಲ್ಪದಲ್ಲಿ ಈ ಆತ್ಮೀಯ ಶ್ರೇಷ್ಠತೆಯು ನಡೆಯುತ್ತಿರುತ್ತದೆ.
ದರ್ಪಣದಲ್ಲಿ ತಮ್ಮನ್ನು ತಾವು ನೋಡಿಕೊಳ್ಳಿ. ದರ್ಪಣ ತಮ್ಮೆಲ್ಲರ ಬಳಿ ಇದೆಯಲ್ಲವೇ?
ನೋಡಿಕೊಳ್ಳಬಹುದಲ್ಲವೇ? ಹಾಗಾದರೆ ನೋಡಿಕೊಳ್ಳಿ. ನಮ್ಮ ಅಂತರ್ಯದಲ್ಲಿ ಪವಿತ್ರತೆಯ ಶ್ರೇಷ್ಠತೆಯು
ಎಷ್ಟು ಪರ್ಸೆಂಟ್ ನಲ್ಲಿದೆ? ನಮ್ಮ ಚಹರೆಯಿಂದ ಪವಿತ್ರತೆಯ ಹೊಳಪು ಕಂಡುಬರುತ್ತದೆಯೇ?
ನಡವಳಿಕೆಯಲ್ಲಿ ಪವಿತ್ರತೆಯ ನಶೆ ಕಂಡುಬರುತ್ತದೆಯೇ? ಫಲಕ್ ಅರ್ಥಾತ್ ನಶೆಯಾಗಿದೆ. ನಡವಳಿಕೆಯಲ್ಲಿ
ಆ ನಶೆ ಅರ್ಥಾತ್ ಆತ್ಮೀಯ ನಶೆ ಕಂಡುಬರುತ್ತದೆ. ಹಾಗಾದರೆ ತಮ್ಮನ್ನು ನೋಡಿಕೊಂಡಿದ್ದೀರಾ?
ನೋಡಿಕೊಳ್ಳುವುದರಲ್ಲಿ ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಸೆಕೆಂಡ್ ಸಾಕಲ್ಲವೇ? ಹಾಗಾದರೆ ಎಲ್ಲರೂ
ತಮ್ಮನ್ನು ನೋಡಿಕೊಳ್ಳಿ?
ಕುಮಾರಿಯರ ಪ್ರತಿ:
ಹೊಳಪು ಮತ್ತು ನಶೆಯಿದೆಯೇ?
ಒಳ್ಳೆಯದು. ಆ ಎಲ್ಲರು ಎದ್ದೇಳಿ. ಎದ್ದು ನಿಂತುಕೊಳ್ಳಿ. (ಕುಮಾರಿಯರು ಕೆಂಪುಪಟ್ಟಿಯನ್ನು
ಹಾಕಿಕೊಂಡು ಕುಳಿತಿದ್ದಾರೆ. ಆ ಪಟ್ಟಿಯ ಮೇಲೆ ಏಕವ್ರತವೆಂದು ಬರೆಯಲ್ಪಟ್ಟಿದೆ)
ಸುಂದರವಾಗಿದೆಯಲ್ಲವೇ? ಏಕವ್ರತದ ಅರ್ಥವಾಗಿದೆ ಪವಿತ್ರತೆಯ ಶ್ರೇಷ್ಠತೆಯಾಗಿದೆ. ಏಕವ್ರತದ ಪಾಠವನ್ನು
ಪಕ್ಕಾ ಮಾಡಿಕೊಂಡಿದ್ದೀರಾ. ಇಲ್ಲಿಂದ ಹಿಂತಿರುಗಿದ ನಂತರ ಪಾಠವನ್ನು ಕಚ್ಚಾ ಮಾಡಿಕೊಳ್ಳಬೇಡಿ.
ಮತ್ತೆ ಕುಮಾರರ ಗ್ರೂಪ್ ಚೆನ್ನಾಗಿದೆ. ಕುಮಾರರು ಹೃದಯದಲ್ಲಿ ಪ್ರತಿಜ್ಞತೆಯ ಪಟ್ಟಿಯನ್ನು
ಬಂಧಿಸಿಕೊಂಡಿದ್ದೀರಾ? ಇವರು ಹೊರಗಡೆಯಿಂದ ಬಂಧಿಸಿಕೊಂಡಿದ್ದಾರೆ. ಮತ್ತೆ ಪ್ರತಿಜ್ಞತೆಯ
ಪಟ್ಟಿಯನ್ನು ಬಂಧಿಸಿಕೊಂಡಿದ್ದೀರಾ? ಸದಾ ಅರ್ಥಾತ್ ನಿರಂತರ ಪವಿತ್ರತೆಯ ವ್ಯಕ್ತಿತ್ವದಲ್ಲಿರುವಂತಹ
ಕುಮಾರರಾಗಿದ್ದೀರಿ. ಈ ರೀತಿ ಆಗಿದ್ದೀರಾ? ಹೌದು ಅಥವಾ ಇಲ್ಲವೆಂದು ಹೇಳಿರಿ. ಅಥವಾ ಹಿಂತಿರುಗಿದ
ನಂತರ ಪತ್ರ ಬರೆಯುತ್ತೀರೋ ಇಲ್ಲವೆಂದರೆ ಏರು-ಪೇರು ಆಗುತ್ತೀರೋ. ಎಲ್ಲಿಯತನಕ ಬ್ರಾಹ್ಮಣ ಜೀವನದಲ್ಲಿ
ಜೀವಿಸಿರುತ್ತೀರೋ ಅಲ್ಲಿಯತನಕ ಸಂಪೂರ್ಣ ಪವಿತ್ರರಾಗಲೇಬೇಕಾಗಿದೆ. ಈ ರೀತಿ ಪ್ರತಿಜ್ಞೆಯನ್ನು
ಮಾಡಿದ್ದೀರಾ? ಪಕ್ಕಾ ಪ್ರತಿಜ್ಞೆಯನ್ನು ಮಾಡಿದ್ದೀರೆಂದರೆ ಕೈಯನ್ನು ಎತ್ತಿ. ದೂರದರ್ಶನದಲ್ಲಿ (ಟಿ.ವಿ)
ತಮ್ಮ ಫೋಟೊ ಬರುತ್ತಿದೆ. ಯಾರು ಪ್ರತಿಜ್ಞೆಯಲ್ಲಿ ಸಡಿಲವಾಗುತ್ತೀರೋ, ಅವರ ಚಿತ್ರವನ್ನು
ಕಳುಹಿಸಲಾಗುತ್ತದೆ. ಅದಕ್ಕೋಸ್ಕರ ಸಡಿಲವಾಗಬೇಡಿ, ಪಕ್ಕಾ ಆಗಿ. ಹೌದು ಪಕ್ಕಾ ಆಗಿದ್ದೀರಾ,
ಪಾಂಡವರಂತೂ ಪಕ್ಕಾ ಆಗಿರುತ್ತಾರೆ. ಪಕ್ಕಾ ಪಾಂಡವರು ಬಹಳ ಒಳ್ಳೆಯವರು. ಶುಭಭಾವನೆ, ಶುಭಕಾಮನೆಯು
ಪವಿತ್ರತೆ ವೃತ್ತಿಯಾಗಿದೆ. ಯಾರು ಹೇಗಾದರೂ ಇರಲಿ ಆದರೆ ಪವಿತ್ರ ವೃತ್ತಿ, ಶುಭಭಾವನೆ ಮತ್ತು
ಶುಭಕಾಮನೆಯಿರಲಿ ಮತ್ತು ಪವಿತ್ರ ದೃಷ್ಟಿ ಅರ್ಥಾತ್ ಸದಾ ಪ್ರತಿಯೊಬ್ಬರನ್ನು ಅತ್ಮಿಕ ರೂಪದಲ್ಲಿ
ನೋಡಿರಿ ಅಥವಾ ಫರಿಶ್ತೆಗಳ ರೂಪದಲ್ಲಿ ನೋಡಿ, ವೃತ್ತಿ, ದೃಷ್ಟಿ ಮತ್ತು ಮೂರನೆಯದಾಗಿದೆ –ಕೃತಿ
ಅರ್ಥಾತ್ ಕರ್ಮದಲ್ಲಿ ಅಂದರೆ ಕರ್ಮದಲ್ಲಿಯೂ ಸದಾ ಪ್ರತಿಯೊಂದು ಆತ್ಮಗಳಿಗೆ ಸುಖವನ್ನ ಕೊಡಿ ಮತ್ತು
ತೆಗೆದುಕೊಳ್ಳಿ. ಇದು ಪವಿತ್ರತೆಯ ಗುರುತಾಗಿದೆ. ವೃತ್ತಿ, ದೃಷ್ಟಿ ಮತ್ತು ಕೃತಿ ಮೂರರಲ್ಲಿಯೂ
ಧಾರಣೆ ಇರಬೇಕು. ಯಾರು ಏನೇ ಮಾಡಲಿ ದುಃಖ ಕೊಡುತ್ತಾರೆ, ನಿಂದನೆ ಮಾಡುತ್ತಾರೆ ಆದರೂ ಸಹ ನಮ್ಮ
ಕರ್ತವ್ಯವೇನಾಗಿದೆ? ದುಃಖವನ್ನು ಕೊಡುವವರನ್ನು ಅನುಸರಣೆ ಮಾಡಬೇಕೋ? ತಂದೆಯನ್ನು ಅನುಸರಣೆ
ಮಾಡುವವರಾಗಿದ್ದೀರಲ್ಲವೇ? ಬ್ರಹ್ಮಾ ತಂದೆಯು ದುಃಖ ಕೊಟ್ಟರೋ ಅಥವಾ ಸುಖ ಕೊಟ್ಟರೋ? ಸುಖ
ಕೊಟ್ಟರಲ್ಲವೇ? ತಾವೂ ಬ್ರಹ್ಮಾ ಅರ್ಥಾತ್ ಬ್ರಾಹ್ಮಣ ಆತ್ಮಗಳು ಏನು ಮಾಡಬೇಕಾಗಿದೆ? ಯಾರೇ ದುಃಖ
ಕೊಟ್ಟರೂ ನೀವು ಏನು ಮಾಡುತ್ತೀರಿ? ದುಃಖ ಕೊಡುತ್ತೀರಾ? ಕೊಡುವುದಿಲ್ಲವೇ? ಒಂದುವೇಳೆ ಬಹಳ
ದುಃಖಕೊಟ್ಟರೆ? ಬಹಳ ನಿಂದನೆ ಮಾಡಿದರೆ ಅಥವಾ ಅಪಮಾನ ಮಾಡಿದರೆ ಅಥವಾ ನಿಂದನೆ ಮಾಡಿದರೆ ಸ್ವಲ್ಪ
ಬೇಸರ ಮಾಡಿತ್ತಿಕೊಳ್ಳುತ್ತೀರೋ ಅಥವಾ ಇಲ್ಲವೋ? ಕುಮಾರಿಯರು ಬೇಜಾರು ಮಾಡಿಕೊಳ್ಳುತ್ತೀರಾ? ಸ್ವಲ್ಪ
ಮಾಡಿಕೊಳ್ಳುತ್ತೀರಾ? ಹಾಗಾದರೆ ತಂದೆಯನ್ನು ಅನುಸರಣೆ ಮಾಡಿರಿ. ನನ್ನ ಕರ್ತವ್ಯ ಏನಾಗಿದೆಯೆಂದು
ಯೋಚನೆ ಮಾಡಿ. ಅವರ ಕರ್ತವ್ಯವನ್ನು ನೋಡಿ ತಮ್ಮ ಕರ್ತವ್ಯವನ್ನು ಮರೆಯಬೇಡಿ. ಅವರು ನಿಂದನೆ
ಮಾಡುತ್ತಿದ್ದರೆ ಅಥವಾ ಗ್ಲಾನಿ ಮಾಡುತ್ತಿದ್ದರೂ ಸಹ ತಾವು ಸಹನಶೀಲ ದೇವಿ, ಸಹನಶೀಲ ದೇವ ಆಗಿಬಿಡಿ.
ತಮ್ಮ ಸಹನಶೀಲತೆಯಿಂದ ನಿಂದನೆ ಮಾಡುವಂತಹವರನ್ನು ತಮ್ಮ ಕೊರಳಿನ ಹಾರವನ್ನಾಗಿ ಮಾಡಿಕೊಳ್ಳಿ.
ಸಹನಶೀಲತೆಯಲ್ಲಿ ಬಹಳಷ್ಟು ಶಕ್ತಿಯಿದೆ. ಆದರೆ ಸ್ವಲ್ಪ ಸಮಯ ಸಹನೆ ಮಾಡಿಕೊಳ್ಳಬೇಕಾಗುತ್ತದೆ. ನೀವು
ಸಹನಶೀಲತೆಯ ದೇವ ಅಥವಾ ದೇವಿಯರಾಗಿದ್ದೀರಲ್ಲವೇ? ಆಗಿದ್ದೀರಾ? ನಾನು ಸಹನಶೀಲ ದೇವತೆ ಅಥವಾ ದೇವಿ
ಆಗಿದ್ದೀನಿ ಎನ್ನುವ ಸ್ಮೃತಿಯು ಸದಾ ಇರಲಿ. ದೇವತಾ ಅರ್ಥಾತ್ ಕೊಡುವಂತಹ ದಾತಾ ಆಗಿದ್ದಾರೆ. ಯಾರೇ
ಗ್ಲಾನಿ ಮಾಡಲಿ, ಗೌರವ ಕೊಡಲಿಲ್ಲವೆಂದರೆ ಇದೆಲ್ಲಾ ಕೆಲಸಕ್ಕೆ ಬರದೆ ಇರುವ ವಸ್ತು [ಕೊಳಕು) ಆಗಿದೆ.
ಒಳ್ಳೆಯ ವಸ್ತುವಲ್ಲ ತಾನೇ? ಅಂದರೆ ಏಕೆ ತೆಗೆದುಕೊಳ್ಳುತ್ತೀರಾ? ಕೊಳಕನ್ನು ತೆಗೆದುಕೊಳ್ಳುತ್ತೀರಾ?
ತೆಗೆದುಕೊಳ್ಳುವುದಿಲ್ಲ ತಾನೆ? ಅಪಮಾನ ಮಾಡುತ್ತಾರೆ. ನಿಂದನೆ ಮಾಡುತ್ತಾರೆ, ನಿಮಗೆ ತೊಂದರೆ
ಕೊಡುತ್ತಾರೆ. ಗೌರವವನ್ನು ಕೊಡಲಿಲ್ಲವೆಂದರೆ ಇದೆಲ್ಲವೂ ಏನಾಗಿದೆ? ಒಳ್ಳೆಯ ವಸ್ತುವಾಗಿದೆಯೇ?
ಹಾಗಾದರೆ ಏಕೆ ತೆಗೆದುಕೊಳ್ಳುತ್ತೀರಿ? ಸ್ವಲ್ಪವನ್ನು ತೆಗೆದುಕೊಳ್ಳುತ್ತೀರಿ, ನಂತರ ಯೋಚಿಸುತ್ತೀರಿ
- ತೆಗೆದುಕೊಳ್ಳಬಾರದಿತ್ತೆಂದು. ಹಾಗಾದರೆ ಈಗ ತೆಗೆದುಕೊಳ್ಳಬೇಡಿ. ತೆಗೆದುಕೊಳ್ಳುವುದು ಅರ್ಥಾತ್
ಮನಸ್ಸಿನಲ್ಲಿ ಧಾರಣೆ ಮಾಡುವುದು, ಬೇಜಾರು ಮಾಡಿಕೊಳ್ಳುವುದು ಅಂದರೆ ಮನಸ್ಸಿನಲ್ಲಿ ಧಾರಣೆ
ಮಾಡುವುದು, ಫೀಲ್ ಆಗುವುದು. ತಮ್ಮ ಅನಾದಿಕಾಲ, ಆದಿ-ಮಧ್ಯ-ಸಂಗಮದ ಕಾಲ, ಇಡೀ ಕಲ್ಪದ ಪವಿತ್ರತೆಯ
ಶ್ರೇಷ್ಠತೆ ಮತ್ತು ವ್ಯಕ್ತಿತ್ವವನ್ನು ನೆನಪು ಮಾಡಿ. ಯಾರು ಏನೇ ಮಾಡಲಿ, ತಮ್ಮ ವ್ಯಕ್ತಿತ್ವವನ್ನು
ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆತ್ಮೀಯ ನಶೆ ಇದೆಯಲ್ಲವೇ? ಡಬಲ್ ವಿದೇಶಿಗಳಿಗಂತೂ ಡಬಲ್ ನಶೆ
ಇದೆಯಲ್ಲವೆ. ಡಬಲ್ ನಶೆಯಿದೆಯಲ್ಲವೇ? ಎಲ್ಲಾ ಮಾತಿನಲ್ಲೂ ಡಬಲ್ ನಶೆ ಇರಲಿ. ಪವಿತ್ರತೆಯ ಡಬಲ್
ನಶೆಯಿರಲಿ. ಸಹನಶೀಲ ದೇವಿ, ದೇವತಾ ಆಗುವುದರಲ್ಲಿಯೂ ಡಬಲ್ ನಶೆಯಿರಲಿ. ಡಬಲ್ ನಶೆ ಇದೆಯಲ್ಲೆವೇ?
ಕೇವಲ ಅಮರರಾಗಿರಿ, ಅಮರಭವದ ವರದಾನವನ್ನು ಎಂದೂ ಮರೆಯಬೇಡಿ.
ಒಳ್ಳೆಯದು. ಯಾರು ಯುಗಲ್
ಅರ್ಥಾತ್ ಪ್ರವೃತ್ತಿಯಲ್ಲಿರುವವರು ಆಗಿದ್ದಾರೆ. ಅವರೇ ಒಂಟಿಯಾಗಿರುತ್ತಾರೆ. ಹೇಳುವುದರಲ್ಲಿ ಯುಗಲ್
ಎಂದು ಹೇಳಲಾಗುತ್ತದೆ. ಪ್ರವೃತ್ತಿಯಲ್ಲಿರುವವರು ಎದ್ದು ನಿಂತುಕೊಳ್ಳಿ. ಬಹಳಷ್ಟು ಯುಗಲ್
ಆಗಿರುವವರು ಇದ್ದಾರೆ. ಕುಮಾರ-ಕುಮಾರಿಯರು ಬಹಳ ಕಡಿಮೆ ಇದ್ದಾರೆ. ಕುಮಾರರಿಗಿಂತಲೂ ಯುಗಲ್
ಬಹಷ್ಟಿದ್ದಾರೆ. ಯುಗಲ್ ಮೂರ್ತಿ ಬಾಪ್ದಾದಾರವರು ತಾವೆಲ್ಲರು ಪ್ರವೃತ್ತಿಯಲ್ಲಿರಲು ಏಕೆ ಸಲಹೆ (ಡೈರೆಕ್ಷನ್)
ಕೊಟ್ಟಿದ್ದಾರೆ? ವೃತ್ತಿಯಲ್ಲಿರಲು ಏಕೆ ಅವಕಾಶ ಕೊಟ್ಟಿದ್ದಾರೆ? ಗೊತ್ತಿದೆಯೇ? ಏಕೆಂದರೆ
ಪ್ರವೃತ್ತಿಯಲ್ಲಿರುವವರಿಗೆ ಮಹಾಮಂಡಲೇಶ್ವರರು ತಮ್ಮ ಚರಣಗಳಿಗೆ ಬಾಗಬೇಕು. ಇಷ್ಟೊಂದು ಧೈರ್ಯವಿದೆಯೇ?
ಗೃಹಸ್ಯದಲ್ಲಿದ್ದೂ ಪವಿತ್ರವಾಗಿರುವುದು ಕಷ್ಟವಿದೆಯೆಂದು ಪ್ರಪಂಚದವರು ಹೇಳುತ್ತಾರೆ ಆದರ ತಾವು ಏನು
ಹೇಳುತ್ತೀರಾ? ಕಷ್ಟವಿದೆಯೇ? ಅಥವಾ ಸಹಜವಾಗಿದೆಯೇ (ಬಹಳ ಸಹಜವಾಗಿದೆ) ಪಕ್ಕಾ ಆಗಿದ್ದೀರಾ ಅಥವಾ
ಕೆಲವೊಮ್ಮೆ ಸಹಜ ಕೆಲವೊಮ್ಮೆ ಸೋಮಾರಿ (ಲೇಜಿ) ಆಗುತ್ತೀರಾ? ಬಾಪ್ದಾದಾ ತಮ್ಮನ್ನೆಲ್ಲಾ ಪ್ರಪಂಚದ
ಮುಂದೆ ಉದಾಹರಣಾ ಮೂರ್ತಿಯನ್ನಾಗಿ ಮಾಡಿದ್ದಾರೆ. ಚಾಲೆಂಜ್ ಮಾಡಲು ಪ್ರವೃತ್ತಿಯಲ್ಲಿರುತ್ತಾ
ನಿವೃತ್ತರು ಅಪವಿತ್ರತೆಯಿಂದ ನಿವೃತ್ತರಾಗಿರಬಹುದು. ಅಂದರೆ ತಾವು ಚಾಲೆಂಜ್ ಮಾಡುವಂತಹವರಲ್ಲವೇ?
ಎಲ್ಲರೂ ಚಾಲೆಂಜ್ ಮಾಡುವಂತಹವರಾಗಿದ್ದೀರಿ, ಸ್ವಲ್ಪ ಸ್ವಲ್ಪ ಭಯಪಡುತ್ತಿಲ್ಲ ತಾನೆ? ಚಾಲೆಂಜ್
ಮಾಡುತ್ತೀರಾ ಆದರೆ ಏನಾಗುತ್ತದೆ ಎಂದು ಗೊತ್ತಿಲ್ಲ. ವಿಶ್ವದವರ ಜೊತೆ ಚಾಲೆಂಜ್ ಮಾಡಿ ಏಕೆಂದರೆ
ಹೊಸ ವಿಚಾರವಾಗಿದೆ. ಜೊತೆಯಲ್ಲಿದ್ದರೂ ಸ್ವಪ್ನದಲ್ಲಿಯೂ ಆಪವಿತ್ರತೆಯ ಸಂಕಲ್ಪ ಬರುವುದಿಲ್ಲ. ಇದೇ
ಸಂಗಮಯುಗದ ಬ್ರಾಹ್ಮಣ ಜೀವನದ ವಿಶೇಷತೆಯಾಗಿದೆ. ಅದೇ ರೀತಿ ವಿಶ್ವದ ಶೋಕೇಸ್ನಲ್ಲಿ ತಾವು
ಉದಾಹರಣೆಯಾಗಿದ್ದೀರಿ. ಮಾದರಿಯೆಂದಾದರೂ ಹೇಳಿ ಅಥವಾ ಉದಾಹರಣೆಯೆಂದಾದರೂ ಹೇಳಿ. ನಿಮ್ಮನ್ನು ನೋಡಿ
ಎಲ್ಲರಲ್ಲೂ ಶಕ್ತಿ ಬರುತ್ತದೆ ಮತ್ತು ನಾವೂ ಸಹ ಆಗಬಹುದು. ಸರಿಯಾಗಿದೆಯಲ್ಲವೆ? ಶಕ್ತಿಯರು
ಚೆನ್ನಾಗಿದ್ದೀರಾ? ಪಕ್ಕಾ ಆಗಿದ್ದೀರಲ್ಲವೆ? ಅರ್ಧವಲ್ಲ ತಾನೆ? ಪಕ್ಕಾ. ನಿಮ್ಮೆಲ್ಲರನ್ನು ನೋಡಿ
ಬಾಪ್ದಾದಾ ಖುಷಿಯಾಗುತ್ತಿದ್ದಾರೆ. ಶುಭಾಷಯಗಳು, ನೋಡಿ ಎಷ್ಟೊಂದು ಮಕ್ಕಳಿದ್ದಾರೆ. ಬಹಳ ಒಳ್ಳೆಯದು.
ಶಿಕ್ಷಕಿಯರು
ಉಳಿದುಕೊಂಡಿದ್ದಾರೆ. ಶಿಕ್ಷಕಿಯರಿಲ್ಲದೇ ಮುಕ್ತಿಯಿಲ್ಲ. ಶಿಕ್ಷಕಿಯರು ಎದ್ದೇಳಿ. ಒಳ್ಳೆಯದು.
ಪಾಂಡವರೂ ಒಳೊಳ್ಳೆಯವರಿದ್ದಾರೆ. ವಾಹ್! ಶಿಕ್ಷಕಿಯರ ವಿಶೇಷತೆಯಾಗಿದೆ - ಪ್ರತಿಯೊಬ್ಬ ಶಿಕ್ಷಕಿಯರ
ಚಿತ್ರದಿಂದ ಭವಿಷ್ಯವು ಕಾಣಿಸಬೇಕು ಹಾಗೂ ಪ್ರತಿಯೊಬ್ಬ ಶಿಕ್ಷಕಿಯರ ಚಹರೆಯಿಂದ ಫರಿಸ್ತಾ ಸ್ವರೂಪ
ಕಾಣಿಸಬೇಕು. ಈ ರೀತಿಯಲ್ಲಿ ಶಿಕ್ಷಕಿಯರಾಗಿದ್ದೀರಲ್ಲವೇ! ತಾವು ಫರಿಸ್ತೆಗಳನ್ನು ನೋಡಿ ಅನೇಕರು
ಫರಿಸ್ತೆಗಳಾಗುತ್ತಾರೆ. ನೋಡಿ ಎಷ್ಟೊಂದು ಶಿಕ್ಷಕಿಯರಿದ್ದಾರೆ. ವಿದೇಶದವರು ಬಹಳಷ್ಟು
ಶಿಕ್ಷಕಿಯರಿದ್ದಾರೆ. ವಿದೇಶದ ಗ್ರೂಪ್ನಲ್ಲಿ ಬಹಳಷ್ಟು ಶಿಕ್ಷಕಿಯರಿದ್ದಾರೆ. ಈಗ ಸ್ವಲ್ಪವೇ
ಶಿಕ್ಷಕಿಯರು ಬಂದಿದ್ದಾರೆ. ಯಾರೆಲ್ಲಾ ಬಂದಿಲ್ಲ ಅವರನ್ನು ಬಾಪ್ದಾದಾ ನೆನಪು
ಮಾಡಿಕೊಳ್ಳುತ್ತಿದ್ದಾರೆ. ಒಳ್ಳೆಯದು. ಈಗ ಎಲ್ಲಾ ಶಿಕ್ಷಕಿಯರು ಒಂದುಗೂಡಿ ಯೋಜನೆಯನ್ನು ಮಾಡಿ.
ತಂದೆಯನ್ನು ನಿಮ್ಮ ನಡುವಳಿಕೆ ಮತ್ತು ಚಹರೆಯಿಂದ ಹೇಗೆ ಪ್ರತ್ಯಕ್ಷ ಮಾಡುವುದು? ಪರಮಾತ್ಮ
ಸರ್ವವ್ಯಾಪಿಯಾಗಿದ್ದಾರೆ ಎಂದು ಪ್ರಪಂಚದವರು ಹೇಳುತ್ತಾರೆ ಮತ್ತು ಸರ್ವವ್ಯಾಪಿ ಅಲ್ಲವೆಂದು ನೀವು
ಹೇಳುತ್ತೀರಿ. ಆದರೆ ಬಾಪ್ದಾದಾ ಹೇಳುತ್ತಾರೆ - ಈಗ ಸಮಯದ ಪ್ರಮಾಣ ಪ್ರತಿಯೊಬ್ಬ ಶಿಕ್ಷಕಿಯರಲ್ಲಿ
ತಂದೆಯು ಪ್ರತ್ಯಕ್ಷವಾಗಿ ಕಂಡುಬರಬೇಕು. ಆಗ ಸರ್ವವ್ಯಾಪಿಯಾಗಿ ಕಂಡುಬರುತ್ತಾರಲ್ಲವೆ!! ಯಾರನ್ನು
ನೋಡಿದರೂ ಅವರಲ್ಲಿ ತಂದೆಯೇ ಕಂಡುಬರಬೇಕು. ಆತ್ಮ, ಪರಮಾತ್ಮನ ಮುಂದೆ ಮುಚ್ಚಿಹೋಗಿ ಪರಮಾತ್ಮ ಮಾತ್ರ
ಕಂಡುಬರುತ್ತಾರೆ. ಇದಾಗುತ್ತದೆಯೇ? ಆಗುತ್ತದೆಯೇ? ಒಳ್ಳೆಯದು. ಇದರ ದಿನಾಂಕ ಏನಾಗಿದೆ? ದಿನಾಂಕವಂತೂ
ನಿಗದಿ ಮಾಡಬೇಕಲ್ಲವೇ? ಇದರ ದಿನಾಂಕ ಯಾವುದಾಗಿದೆ? ಎಷ್ಟು ಸಮಯ ಬೇಕಾಗುತ್ತದೆ? (ಈಗಿನಿಂದಲೇ
ಮಾಡುತ್ತೇವೆ) ಮಾಡುತ್ತೇವೆ ಎನ್ನುವುದು ಒಳ್ಳೆಯ ಧೈರ್ಯವೇ ಆಗಿದೆ. ಎಷ್ಟು ಸಮಯ ಬೇಕಾಗುತ್ತದೆ!
2002ನೇ ವರ್ಷ ನಡೆಯುತ್ತಿದೆ. ಇನ್ನೂ 2000 ವರ್ಷ ಎಲ್ಲಿಯತನಕ ಇದೆ? ಈಗ ಶಿಕ್ಷಕಿಯರು ತಂದೆಯ
ಅಂತರಾಳದಲ್ಲಿ ಸಮಾವೇಶವಾಗಿರುವುದು ಕಂಡುಬರಬೇಕು ಮತ್ತು ನನ್ನ ಮುಖಾಂತರ ತಂದೆಯು ಕಂಡುಬರಬೇಕು.
ಯೋಜನೆ ಮಾಡುತ್ತೀರಲ್ಲವೇ! ಡಬಲ್ ವಿದೇಶಿಯರು ಮೀಟಿಂಗ್ ಮಾಡುವುದರಲ್ಲಿ ತುಂಬಾ
ಬುದ್ಧಿವಂತರಾಗಿದ್ದಾರೆಯೇ? ಈಗ ಈ ಮೀಟಿಂಗ್ ಮಾಡಬೇಕಾಗಿದೆ, ಹೇಗೆ ನಾವು ಒಬ್ಬೊಬ್ಬರು ತಂದೆಯನ್ನು
ಪ್ರತ್ಯಕ್ಷ ಮಾಡುವುದೆಂದು ಮೀಟಿಂಗ್ ಮಾಡದೇ ಹಿಂತಿರುಗುವ ಹಾಗಿಲ್ಲ. ಈಗ ಬ್ರಹ್ಮಕುಮಾರಿಯರೇ
ಕಂಡುಬರುತ್ತಿದ್ದಾರೆ ಮತ್ತು ಬ್ರಹ್ಮಾಕುಮಾರಿಯರು ಬಹಳ ಚೆನ್ನಾಗಿದ್ದಾರೆ. ಇನ್ನು ಇವರ ತಂದೆಯು
ಎಷ್ಟು ಚೆನ್ನಾಗಿರಬೇಕೆಂದು ಅವರೇ ನೋಡಲಿ. ಆಗ ವಿಶ್ವ ಪರಿವರ್ತನೆ ಆಗುತ್ತದೆಯಲ್ಲವೆ? ಡಬಲ್
ವಿದೇಶಿಯರು ಈ ಯೋಜನೆಯನ್ನು ಪ್ರಾಕ್ಟಿಕಲ್ ಆಗಿ ಪ್ರಾರಂಭ ಮಾಡುತ್ತೀರಲ್ಲವೇ? ಮಾಡುತ್ತೀರಾ? ಪಕ್ಕಾ.
ಒಳ್ಳೆಯದು. ನಿಮ್ಮ ದಾದಿ ಇದ್ದಾರಲ್ಲವೇ? ಅವರ ಆಸೆ ಪೂರ್ಣವಾಗುತ್ತದೆ. ಸರಿಯಾಗಿದೆಯಲ್ಲವೇ?
ಒಳ್ಳೆಯದು.
ಡಬಲ್ ವಿದೇಶಿಯರು ನೋಡಿ
ಎಷ್ಟೊಂದು ಸೇವಾಧಾರಿಗಳಾಗಿದ್ದಾರೆ, ನಿಮ್ಮೆಲ್ಲರ ಕಾರಣ ಎಲ್ಲರಿಗೂ ನೆನಪು ಪ್ರೀತಿ ಸಿಗುತ್ತಿದೆ.
ಬಾಪ್ದಾದಾರವರಿಗೂ ಡಬಲ್ ವಿದೇಶಿಯರ ಜೊತೆ ಜಾಸ್ತಿ ಎಂದು ಹೇಳುವುದಿಲ್ಲ, ಆದರೆ ಪ್ರತ್ಯೇಕ ಪ್ರೀತಿ
ಇದೆ. ಏಕೆ ಪ್ರೀತಿ ಇದೆ? ಏಕೆಂದರೆ ಡಬಲ್ ವಿದೇಶಿ ಆತ್ಮಗಳು ಯಾರು ಸೇವೆಗೆ ನಿಮಿತ್ತರಾಗಿದ್ದಾರೆ,
ಅವರು ವಿಶ್ವದ ಮೂಲೆ-ಮೂಲೆಯಲ್ಲೂ ತಂದೆಯ ಸಂದೇಶವನ್ನು ತಲುಪಿಸಲು ನಿಮಿತ್ತರಾಗಿದ್ದಾರೆ.
ಇಲ್ಲದಿದ್ದರೆ ವಿದೇಶಿ ಆತ್ಮಗಳು ನಾಲ್ಕಾರೂ ಕಡೆ ಬಾಯಾರಿಕೊಂಡು ಇರುತ್ತಾರೆ. ಈಗ ಭಾರತದಲ್ಲಿ ಬಂದರು
ಎಂದು ತಂದೆಗೆ ದೂರು ಮಾಡುವುದಿಲ್ಲ ತಾನೆ, ವಿದೇಶದಲ್ಲಿ ಏಕೆ ಸಂದೇಶ ಕೊಟ್ಟಿಲ್ಲ ಎಂದು ತಂದೆಗೆ
ದೂರನ್ನು ಪೂರ್ಣ ಮಾಡುವುದರಲ್ಲಿ ನಿಮಿತ್ತರಾಗಿದ್ದೀರಿ ಮತ್ತು ಜಾನಕಿದಾದಿಯವರಿಗೆ ಯಾವುದೇ ದೇಶ
ಉಳಿದುಕೊಳ್ಳಬಾರದು ಎಂದು ಬಹಳಷ್ಟು ಉತ್ಸಾಹ ಇದೆ. ಒಳ್ಳೆಯದು. ತಂದೆಯ ದೂರನ್ನು ಪೂರ್ಣ
ಮಾಡುತ್ತಿದ್ದೀರಲ್ಲವೇ! ಆದರೆ ನೀವೆಲ್ಲಾ ಜೊತೆಗಾರರಿಗೆ ಬಹಳ ಸುಸ್ತು ಮಾಡುತ್ತಾರೆ! ಸುಸ್ತು
ಮಾಡಿಸುತ್ತಾರಲ್ಲವೇ. ಜಯಂತಿ, ಸುಸ್ತಾಗಿಲ್ಲವೇ? ಆದರೆ ಈ ಸುಸ್ತಿನಲ್ಲೂ ಮೋಜು ಸಮಾವೇಶವಾಗಿದೆ. ಇದು
ಪದೆ-ಪದೆ ಏಕೆ ಎಂದು ಪ್ರಶ್ನೆ ಬರುತ್ತಿತ್ತು, ಆದರೆ ಯಾವಾಗ ಭಾಷಣ ಮಾಡಿ ಆಶೀರ್ವಾದಗಳನ್ನು
ಪಡೆದುಕೊಳ್ಳುತ್ತೀರೋ ಆಗ ಚೆಹರೆ ಬದಲಾಗುತ್ತದೆ. ಒಳ್ಳೆಯದು. ಇಬ್ಬರೂ ದಾದಿಯರಲ್ಲಿ ಒಲವು
ಉತ್ಸಾಹವನ್ನು ಹೆಚ್ಚಿಸುವಂತಹ ವಿಶೇಷತೆ ಇದೆ. ಇವರು ಶಾಂತವಾಗಿ ಕುಳಿತುಕೊಳ್ಳುವುದಿಲ್ಲ. ಸೇವೆಯಂತೂ
ಇನ್ನೂ ಉಳಿದಿದೆಯಲ್ಲವೇ? ಒಂದುವೇಳೆ ಭೂಪಟವನ್ನು ತೆಗೆದು ನೋಡಿ. ಭಾರತದಲ್ಲಿಯೇ ಆಗಲಿ ಅಥವಾ
ದೇಶದಲ್ಲಿಯೇ ಆಗಲಿ ಭೂಪಟದಲ್ಲಿ ಒಂದೊಂದು ಸ್ಥಾನವನ್ನು ಗುರುತು ಮಾಡುತ್ತಾ ಹೋದಲ್ಲಿ ಇನ್ನೂ
ಉಳಿದಿರುವ ಸ್ಥಾನಗಳು ಕಂಡುಬರುತ್ತವೆ ಆದ್ದರಿಂದ ಬಾಪ್ದಾದಾ ಖುಷಿಪಡುತ್ತಾರೆ ಮತ್ತು ಹೆಚ್ಚು
ಸುಸ್ತಾಗಬೇಡಿರೆಂದೂ ಸಹ ಹೇಳುತ್ತಾರೆ. ನೀವೆಲ್ಲರೂ ಸೇವೆಯಲ್ಲಿ ಖುಷಿಯಾಗಿದ್ದೀರಲ್ಲವೇ? ಈಗ ಈ
ಎಲ್ಲಾ ಕುಮಾರಿಯರೂ ಸಹ ಶಿಕ್ಷಕಿಯರಾಗುತ್ತಾರಲ್ಲವೇ? ಯಾರು ಶಿಕ್ಷಕಿಯರಿದ್ದಾರೆ, ಅವರು ಆಗಿಯೇ
ಇದ್ದಾರೆ ಆದರೆ ಯಾರು ಶಿಕ್ಷಕಿಯರಾಗಿಲ್ಲ, ಅವರು ಶಿಕ್ಷಕಿಯರಾಗಿ ಒಂದಲ್ಲ ಒಂದು ಸೇವಾಕೇಂದ್ರವನ್ನು
ಸಂಭಾಲನೆ ಮಾಡುತ್ತಾರಲ್ಲವೇ. ಭುಜಗಳಾಗುತ್ತಾರಲ್ಲವೇ. ಡಬಲ್ ವಿದೇಶಿ ಮಕ್ಕಳಿಗೆ ಎರಡೂ ಕೆಲಸವನ್ನು
ಮಾಡಿ ಅಭ್ಯಾಸವಿದ್ದೇ ಇದೆ. ನೌಕರಿಯನ್ನೂ ಸಹ ಮಾಡುತ್ತಾರೆ ಮತ್ತು ಸೇವಾಕೇಂದ್ರವನ್ನೂ ಸಹ ಸಂಭಾಲನೆ
ಮಾಡುತ್ತಾರೆ. ಆದ್ದರಿಂದ ಬಾಪ್ದಾದಾ ಡಬಲ್ ಅಭಿನಂದನೆಗಳನ್ನು ಕೊಡುತ್ತಾರೆ. ಒಳ್ಳೆಯದು.
ನಾಲ್ಕೂ
ಕಡೆಯಲ್ಲಿರುವಂತಹ ಅತೀ ಸ್ನೇಹೀ, ಅತೀ ಸಮೀಪ ಸದಾ ಆದಿಕಾಲದಿಂದ ಇದುವರೆವಿಗೂ ಘನತೆಯ ಅಧಿಕಾರಿಗಳು,
ಸದಾ ತನ್ನ ಚಹರೆ ಮತ್ತು ನಡತೆಯಿಂದ ಪವಿತ್ರತೆಯ ಹೊಳಪನ್ನು ತೋರಿಸುವಂತಹ, ಸದಾ ಸ್ವಯಂನ್ನು ಸೇವೆ
ಮತ್ತು ನೆನಪಿನಲ್ಲಿ ತೀವ್ರ ಪುರುಷಾರ್ಥದ ಮೂಲಕ ನಂಬರ್ವನ್ ಆಗುವಂತಹ, ಸದಾ ತಂದೆಯ ಸಮಾನ ಸರ್ವಶಕ್ತಿ,
ಸರ್ವಗುಣ ಸಂಪನ್ನ ಸ್ವರೂಪದಲ್ಲಿರುವಂತಹ, ಇಂತಹ ಎಲ್ಲಾ ಕಡೆಯ ಪ್ರತಿಯೊಂದು ಮಗುವಿಗೆ ಬಾಪ್ದಾದಾರವರ
ನೆನಪು, ಪ್ರೀತಿ ಹಾಗೂ ನಮಸ್ತೆ.
ವಿದೇಶದ ಮುಖ್ಯ ಶಿಕ್ಷಕಿ
ಸಹೋದರಿಯರೊಂದಿಗೆ: ಎಲ್ಲರೂ ಸೇವೆಯ ಯೋಜನೆ ಒಳ್ಳೊಳ್ಳೆಯದನ್ನು ಮಾಡಿದ್ದೀರಲ್ಲವೆ ಏಕೆಂದರೆ ಸೇವೆ
ಸಮಾಪ್ತಿಯಾಗಲಿ. ಆಗ ನಿಮ್ಮ ರಾಜ್ಯ ಬರುತ್ತದೆ. ಸೇವೆಯ ಸಾಧನವೂ ಸಹ ಅವಶ್ಯಕವಾಗಿದೆ. ಆದರೆ ಮನಸ್ಸು
ಮತ್ತು ಮಾತು ಎರಡೂ ಜೊತೆಜೊತೆಯಿರಲಿ ಸೇವೆ ಮತ್ತು ಸ್ವ ಉನ್ನತಿ ಜೊತೆಯಿರಲಿ. ಇಂತಹ ಸೇವೆ
ಸಫಲತೆಯನ್ನು ಸಮೀಪ ತರುತ್ತದೆ. ಸೇವೆಗಂತೂ ನಿಮಿತ್ತರಿದ್ದೇ ಇದ್ದೀರಿ ಮತ್ತು ತಾವೆಲ್ಲರೂ ತಮ್ಮ
ತಮ್ಮ ಸೇವಾಕೇಂದ್ರದಲ್ಲಿ ಚೆನ್ನಾಗಿ ಸೇವೆಯನ್ನು ಮಾಡುತ್ತೀದ್ದಿರಿ. ಈ ಉಳಿದ ಯಾವ ಸೇವೆಯ
ಕೆಲಸವನ್ನು ನೀಡಲಾಗಿದೆ ಅದರ ಯೋಜನೆಯನ್ನು ಮಾಡಿ. ಅದಕ್ಕಾಗಿ ಸ್ವಯಂನಲ್ಲಿ ಏನೇನು ಅಥವಾ ಸೇವೆಯಲ್ಲಿ
ಯಾವ ರೀತಿಯ ವೃದ್ಧಿಯಾಗಬೇಕು, ಅದರ ಯೋಜನೆಯನ್ನು ಮಾಡಿ. ಬಾಕಿ ಬಾಪ್ದಾದಾರವರು ಸೇವಾಧಾರಿಗಳನ್ನು
ನೋಡಿ ಖುಷಿಪಡುತ್ತಿದ್ದಾರೆ. ಎಲ್ಲರೂ ಒಳ್ಳೆಯ ಸೇವಾಕೇಂದ್ರದ ಉನ್ನತಿಯನ್ನು ಪಡೆಯುತ್ತಿದ್ದೀರಲ್ಲವೇ.
ಈಗಂತೂ ಬೇರೆ ಬೇರೆ ಕಡೆ ಚಲ್ಲಾಪಿಲ್ಲಿಯಾಗಿದ್ದಾರೆ. ಅವರ ಸಂಘಟನೆಯನ್ನು ಮಾಡಿ. ಅವರನ್ನು ಪಕ್ಕಾ
ಮಾಡಿ. ಪ್ರಾಕ್ಟಿಕಲ್ ಪ್ರೂಫ್ನ್ನು ಎಲ್ಲರ ಮುಂದೆ ತೋರಿಸಿ, ಮುಂದುವರೆಸಿ ಭಲೆ ಯಾವುದೇ ಸೇವೆಯನ್ನು
ಮಾಡುತ್ತಿರಬಹುದು ಒಳ್ಳೆಯದಾಯಿತು, ಒಳ್ಳೆಯದಾಗಿದೆ, ಒಳ್ಳೆಯದಾಗುವುದಿದೆ. ಓಂ ಶಾಂತಿ.
ವರದಾನ:
ಮೂರು ಸ್ಮೃತಿಗಳ
ತಿಲಕದ ಮೂಲಕ ಶ್ರೇಷ್ಠ ಸ್ಥಿತಿ ಮಾಡಿಕೊಳ್ಳುವಂತಹ ಅಚಲ-ಅಡೋಲ ಭವ.
ಬಾಪ್ದಾದಾರವರು ಎಲ್ಲಾ
ಮಕ್ಕಳಿಗೂ ಮೂರು ಸ್ಮೃತಿಯ ತಿಲಕವನ್ನು ನೀಡಿದ್ದಾರೆ, ಒಂದು ಸ್ವಯಂನ ಸ್ಮೃತಿ, ನಂತರ ತಂದೆಯ ಸ್ಮೃತಿ
ಮತ್ತು ಶ್ರೇಷ್ಠ ಕರ್ಮಕ್ಕಾಗಿ ಡ್ರಾಮದ ಸ್ಮೃತಿ. ಯಾರಿಗೆ ಈ ಮೂರೂ ಸ್ಮೃತಿಗಳು ಸದಾ ಇರುವುದು ಅವರ
ಸ್ಥಿತಿಯೂ ಸಹ ಶ್ರೇಷ್ಠವಾಗಿರುವುದು. ಆತ್ಮದ ಸ್ಮೃತಿಯ ಜೊತೆಗೆ ತಂದೆಯ ಸ್ಮೃತಿ ಮತ್ತು ತಂದೆಯ ಜೊತೆ
ಡ್ರಾಮಾದ ಸ್ಮೃತಿ ಅತೀ ಅವಶ್ಯಕವಾಗಿದೆ. ಏಕೆಂದರೆ ಕರ್ಮದಲ್ಲಿ ಒಂದು ವೇಳೆ ಡ್ರಾಮದ ಜ್ಞಾನ
ಇದ್ದಲ್ಲಿ ಮೇಲೆ ಕೆಳಗೆ ಆಗುವುದಿಲ್ಲ. ಯಾವುದೇ ಭಿನ್ನ-ಭಿನ್ನ ಪರಿಸ್ಥಿತಿಗಳು ಬಂದರೂ, ಅದರಲ್ಲಿ
ಅಚಲ-ಅಡೋಲರಾಗಿರುವಿರಿ.
ಸ್ಲೋಗನ್:
ದೃಷ್ಠಿಯನ್ನು
ಅಲೌಕಿಕ, ಮನಸ್ಸನ್ನು ಶೀತಲ ಮತ್ತು ಬುದ್ಧಿಯನ್ನು ದಯಾಹೃದಯಿಯಾಗಿ ಮಾಡಿಕೊಳ್ಳಿ.