03.12.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೆನಪಿನ ಯಾತ್ರೆಯಲ್ಲಿ ಆಲಸಿಗಳಾಗಬೇಡಿ, ನೆನಪಿನಿಂದಲೇ ಆತ್ಮವು ಪಾವನವಾಗುವುದು, ತಂದೆಯು ಎಲ್ಲಾ ಆತ್ಮಗಳ ಸೇವೆ ಮಾಡಿ ಅವರನ್ನು ಶುದ್ಧ ಮಾಡಲು ಬಂದಿದ್ದಾರೆ”

ಪ್ರಶ್ನೆ:
ಯಾವ ಸ್ಮೃತಿಯು ಸದಾ ಇದ್ದಾಗ ಆಹಾರ-ಪದಾರ್ಥಗಳು ಶುದ್ಧವಾಗಿಬಿಡುತ್ತದೆ?

ಉತ್ತರ:
ನಾವು ಸತ್ಯಖಂಡದಲ್ಲಿ ಹೋಗುವುದಕ್ಕಾಗಿ ಹಾಗೂ ಮನುಷ್ಯರಿಂದ ದೇವತೆಗಳಾಗಲು ತಂದೆಯ ಬಳಿ ಬಂದಿದ್ದೇವೆ ಎಂದು ಒಂದುವೇಳೆ ಸ್ಮೃತಿಯಿದ್ದಿದ್ದೇ ಆದರೆ ಆಹಾರ ಪದಾರ್ಥಗಳು ಶುದ್ಧವಾಗಿಬಿಡುವುದು ಏಕೆಂದರೆ ದೇವತೆಗಳೆಂದೂ ಅಶುದ್ಧ ಪದಾರ್ಥಗಳನ್ನು ಸೇವಿಸುವುದಿಲ್ಲ. ಯಾವಾಗ ನಾವು ಸತ್ಯಖಂಡ, ಪಾವನ ಪ್ರಪಂಚದ ಮಾಲೀಕರು ಬಂದಿದ್ದೇವೆಂದರೆ ಪತಿತ (ಅಶುದ್ಧ) ರಾಗಲು ಸಾಧ್ಯವಿಲ್ಲ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳನ್ನು ಕೇಳುತ್ತಾರೆ - ಮಕ್ಕಳೇ, ನೀವಿಲ್ಲಿ ಕುಳಿತುಕೊಂಡಾಗ ಯಾರನ್ನು ನೆನಪು ಮಾಡುತ್ತೀರಿ? ತಮ್ಮ ಬೇಹದ್ದಿನ ತಂದೆಯನ್ನು. ಅವರು ಎಲ್ಲಿದ್ದಾರೆ? ಹೇ ಪತಿತ-ಪಾವನ ಎಂದು ಅವರನ್ನು ಕರೆಯಲಾಗುತ್ತದೆಯಲ್ಲವೆ. ಇತ್ತೀಚಿನ ಸನ್ಯಾಸಿಗಳೂ ಸಹ ಪತಿತ-ಪಾವನ ಸೀತಾರಾಂ ಅರ್ಥಾತ್ ಪತಿತರನ್ನು ಪಾವನ ಮಾಡುವಂತಹ ರಾಮನೇ ಬನ್ನಿ ಎಂದು ಹೇಳುತ್ತಿರುತ್ತಾರೆ. ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ಪಾವನ ಪ್ರಪಂಚವೆಂದು ಸತ್ಯಯುಗಕ್ಕೂ, ಪತಿತಪ್ರಪಂಚವೆಂದು ಕಲಿಯುಗಕ್ಕೂ ಹೇಳಲಾಗುತ್ತದೆ. ಈಗ ನೀವು ಎಲ್ಲಿ ಕುಳಿತಿದ್ದೀರಿ? ಕಲಿಯುಗದ ಅಂತ್ಯದಲ್ಲಿ. ಆದ್ದರಿಂದ ತಂದೆಯೇ ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತೀರಿ. ಅಂದಮೇಲೆ ನೀವು ಯಾರು? ಆತ್ಮಗಳು. ಆತ್ಮವೇ ಪವಿತ್ರವಾಗಬೇಕಾಗಿದೆ, ಆತ್ಮವು ಪವಿತ್ರವಾದಾಗ ಶರೀರವೂ ಪವಿತ್ರವಾದದ್ದೇ ಸಿಗುತ್ತದೆ. ಆತ್ಮವು ಪತಿತವಾಗುವುದರಿಂದ ಪತಿತ ಶರೀರವೇ ಸಿಗುತ್ತದೆ. ಈ ಶರೀರವಂತೂ ಮಣ್ಣಿನ ಗೊಂಬೆಯಾಗಿದೆ. ಆತ್ಮವು ಅವಿನಾಶಿಯಾಗಿದೆ, ಆತ್ಮವು ಈ ಕರ್ಮೇಂದ್ರಿಯಗಳ ಮೂಲಕ ಹೇಳುತ್ತದೆ, ನಾವು ಬಹಳ ಪತಿತರಾಗಿಬಿಟ್ಟಿದ್ದೇವೆ, ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತದೆ. ತಂದೆಯು ಪಾವನರನ್ನಾಗಿ ಮಾಡುತ್ತಾರೆ. ಪಂಚವಿಕಾರಗಳಿಂದ ರಾವಣನು ಪತಿತರನ್ನಾಗಿ ಮಾಡುತ್ತಾನೆ, ತಂದೆಯು ಈಗ ಸ್ಮೃತಿ ತರಿಸಿದ್ದಾರೆ - ನಾವು ಪಾವನರಾಗಿದ್ದೆವು, ಮತ್ತೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಅಂತಿಮಜನ್ಮದಲ್ಲಿದ್ದೇವೆ. ತಂದೆಯು ತಿಳಿಸುತ್ತಾರೆ - ಈ ಮನುಷ್ಯಸೃಷ್ಟಿರೂಪಿ ವೃಕ್ಷಕ್ಕೆ ನಾನು ಬೀಜರೂಪನಾಗಿದ್ದೇನೆ. ಹೇ ಪರಮಪಿತ ಪರಮಾತ್ಮ, ಓ ಗಾಡ್ ಫಾದರ್ ನನ್ನನ್ನು ಮುಕ್ತಮಾಡು ಎಂದು ನನ್ನನ್ನೇ ಕರೆಯುತ್ತಾರೆ. ಪ್ರತಿಯೊಬ್ಬರೂ ನನ್ನನ್ನು ಬಿಡಿಸು ಮತ್ತು ಮಾರ್ಗದರ್ಶಕನಾಗಿ ಶಾಂತಿಧಾಮ ಮನೆಗೆ ಕರೆದುಕೊಂಡು ಹೋಗು ಎಂದು ತನಗಾಗಿ ಹೇಳುತ್ತಾರೆ. ಸನ್ಯಾಸಿಗಳು ಮೊದಲಾದವರೂ ಸಹ ಸ್ಥಿರವಾದ ಶಾಂತಿಯು ಹೇಗೆ ಸಿಗುತ್ತದೆ ಎಂದು ಕೇಳುತ್ತಾರೆ. ಶಾಂತಿಧಾಮವು ಮನೆಯಾಗಿದೆ, ಅಲ್ಲಿಂದ ಆತ್ಮಗಳು ಪಾತ್ರವನ್ನಭಿನಯಿಸಲು ಬರುತ್ತಾರೆ. ಅಲ್ಲಿ ಕೇವಲ ಆತ್ಮಗಳೇ ಇರುತ್ತಾರೆ ಶರೀರವಿರುವುದಿಲ್ಲ. ಆತ್ಮಗಳು ಅಶರೀರಿ ಅರ್ಥಾತ್ ಶರೀರವಿಲ್ಲದೇ ಇರುತ್ತಾರೆ. ಅಶರೀರಿ ಎಂದರೆ ವಸ್ತ್ರಗಳನ್ನು ಹಾಕಿಕೊಳ್ಳದೇ ಇರುವುದು ಎಂದಲ್ಲ. ಶರೀರವಿಲ್ಲದೆ ಆತ್ಮಗಳು ಅಶರೀರಿಯಾಗಿರುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವಾತ್ಮಗಳು ಅಲ್ಲಿ ಮೂಲವತನದಲ್ಲಿ ಅಶರೀರಿಯಾಗಿರುತ್ತೀರಿ, ಅದನ್ನು ನಿರಾಕಾರಿ ಪ್ರಪಂಚವೆಂದು ಕರೆಯಲಾಗುತ್ತದೆ.

ಮಕ್ಕಳಿಗೆ ಏಣಿಚಿತ್ರದ ಬಗ್ಗೆ ತಿಳಿಸಲಾಗಿದೆ - ಹೇಗೆ ನಾವು ಏಣಿಯನ್ನು ಕೆಳಗಿಳಿಯುತ್ತಾ ಬಂದಿದ್ದೇವೆ, ಗರಿಷ್ಠ 84 ಜನ್ಮಗಳು ಹಿಡಿಸಿದೆ ಮತ್ತು ಕೆಲವರು ಒಂದೆರಡು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಆತ್ಮಗಳು ಮೇಲಿಂದ ಬರುತ್ತಲೇ ಇರುತ್ತಾರೆ. ನಾನು ಪಾವನರನ್ನಾಗಿ ಮಾಡಲು ಬಂದಿದ್ದೇನೆಂದು ತಂದೆಯು ತಿಳಿಸುತ್ತಾರೆ. ಶಿವತಂದೆಯು ಬ್ರಹ್ಮಾರವರ ಮೂಲಕ ನಿಮಗೆ ತಿಳಿಸುತ್ತಾರೆ. ಶಿವತಂದೆಯು ಎಲ್ಲಾ ಆತ್ಮಗಳ ಪಿತನಾಗಿದ್ದಾರೆ ಮತ್ತು ಬ್ರಹ್ಮಾರವರಿಗೆ ಆದಿದೇವನೆಂದು ಹೇಳುತ್ತಾರೆ. ಈ ದಾದಾರವರಲ್ಲಿ ತಂದೆಯು ಹೇಗೆ ಬರುತ್ತಾರೆ ಎಂಬುದನ್ನು ನೀವೇ ತಿಳಿದುಕೊಂಡಿದ್ದೀರಿ. ಹೇ ಪತಿತ-ಪಾವನ ಬನ್ನಿ ಎಂದು ನನ್ನನ್ನು ಕರೆಯುತ್ತೀರಿ. ಆತ್ಮಗಳು ಈ ಶರೀರದ ಮೂಲಕ ಕರೆದಿದ್ದಾರೆ. ಮುಖ್ಯವಾದುದು ಆತ್ಮವಲ್ಲವೆ. ಇದಂತೂ ದುಃಖಧಾಮವಾಗಿದೆ, ಈ ಕಲಿಯುಗದಲ್ಲಿ ನೋಡಿ - ಕುಳಿತು-ಕುಳಿತಿದ್ದಂತೆಯೇ ಮೃತ್ಯುವು ಬಂದುಬಿಡುತ್ತದೆ. ಸತ್ಯಯುಗದಲ್ಲಿ ಈ ರೀತಿ ಯಾವುದೇ ರೋಗಗಳೇ ಇರುವುದಿಲ್ಲ, ಹೆಸರೇ ಆಗಿದೆ - ಸ್ವರ್ಗ. ಎಷ್ಟು ಒಳ್ಳೆಯ ಹೆಸರಾಗಿದೆ! ಹೇಳಿದತಕ್ಷಣವೇ ಖುಷಿಯಾಗಿಬಿಡುತ್ತದೆ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಸ್ವರ್ಗವಿತ್ತು ಎಂಬುದನ್ನು ಕ್ರಿಶ್ಚಿಯನ್ನರೂ ಹೇಳುತ್ತಾರೆ. ಇಲ್ಲಿ ಭಾರತವಾಸಿಗಳಿಗಂತೂ ಸ್ವಲ್ಪವೂ ತಿಳಿದಿಲ್ಲ ಏಕೆಂದರೆ ಅವರು ಬಹಳ ಸುಖವನ್ನು ನೋಡಿರುವುದರಿಂದ ದುಃಖವನ್ನು ಬಹಳ ನೋಡುತ್ತಾರೆ, ತಮೋಪ್ರಧಾನರಾಗಿದ್ದಾರೆ. 84 ಜನ್ಮಗಳೂ ಸಹ ಭಾರತವಾಸಿಗಳದೇ ಆಗಿದೆ. ಅರ್ಧಕಲ್ಪದ ನಂತರ ಅನ್ಯಧರ್ಮದವರು ಬರುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ಅರ್ಧಕಲ್ಪ ದೇವಿ-ದೇವತೆಗಳಿದ್ದಾಗ ಮತ್ತ್ಯಾವುದೇ ಧರ್ಮವಿರಲಿಲ್ಲ ನಂತರ ತ್ರೇತಾದಲ್ಲಿ ರಾಮನಿದ್ದಾಗಲೂ ಸಹ ಇಸ್ಲಾಮಿ, ಬೌದ್ಧಿಯರಿರಲಿಲ್ಲ. ಮನುಷ್ಯರು ಈಗ ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. ಪ್ರಪಂಚದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ ಆದ್ದರಿಂದ ಕಲಿಯುಗ ಇನ್ನೂ ಚಿಕ್ಕಮಗುವಾಗಿದೆ ಎಂದು ಹೇಳಿ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಆದರೆ ನೀವೀಗ ತಿಳಿದುಕೊಂಡಿದ್ದೀರಿ - ಕಲಿಯುಗವು ಮುಕ್ತಾಯವಾಗಿ ಈಗ ಸತ್ಯಯುಗವು ಬರುವುದು ಆದ್ದರಿಂದ ಈಗ ನೀವು ತಂದೆಯಿಂದ ಸ್ವರ್ಗದ ಆಸ್ತಿಯನ್ನು ಪಡೆಯಲು ತಾವಿಲ್ಲಿ ಬಂದಿದ್ದೀರಿ. ನೀವೆಲ್ಲರೂ ಸ್ವರ್ಗವಾಸಿಗಳಾಗಿದ್ದಿರಿ, ತಂದೆಯು ನಿಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡಲು ಬರುತ್ತಾರೆ. ನೀವೇ ಸ್ವರ್ಗದಲ್ಲಿ ಬರುತ್ತೀರಿ, ಉಳಿದೆಲ್ಲರೂ ಮನೆಯಾದ ಶಾಂತಿಧಾಮಕ್ಕೆ ಹೋಗುತ್ತಾರೆ. ಅದು ಮಧುರಮನೆಯಾಗಿದೆ, ಅಲ್ಲಿ ಆತ್ಮಗಳ ನಿವಾಸಸ್ಥಾನವಾಗಿದೆ ಮತ್ತೆ ಇಲ್ಲಿ ಬಂದು ಪಾತ್ರಧಾರಿಗಳಾಗುತ್ತಾರೆ. ಶರೀರವಿಲ್ಲದೆ ಆತ್ಮವು ಮಾತನಾಡುವುದಕ್ಕೂ ಸಾಧ್ಯವಿಲ್ಲ, ಅಲ್ಲಿ ಶರೀರವಿಲ್ಲದಕಾರಣ ಆತ್ಮಗಳು ಶಾಂತಿಯಲ್ಲಿರುತ್ತಾರೆ ನಂತರ ಅರ್ಧಕಲ್ಪ ದೇವಿ-ದೇವತೆಗಳು ಸೂರ್ಯವಂಶಿ-ಚಂದ್ರವಂಶಿಯರಿರುತ್ತಾರೆ ಮತ್ತೆ ದ್ವಾಪರ-ಕಲಿಯುಗದಲ್ಲಿ ಮನುಷ್ಯರಿದ್ದಾರೆ. ದೇವತೆಗಳ ರಾಜ್ಯವಿತ್ತು, ಮತ್ತೆ ಅವರೀಗ ಎಲ್ಲಿಗೆ ಹೋದರು? ಇದು ಯಾರಿಗೂ ತಿಳಿದಿಲ್ಲ. ಈ ಜ್ಞಾನವು ಈಗ ನಿಮಗೆ ತಂದೆಯಿಂದ ಸಿಗುತ್ತದೆ, ಮತ್ತ್ಯಾವ ಮನುಷ್ಯರಲ್ಲಿ ಈ ಜ್ಞಾನವಿರುವುದಿಲ್ಲ. ತಂದೆಯೇ ಬಂದು ಮನುಷ್ಯರಿಗೆ ಈ ಜ್ಞಾನವನ್ನು ತಿಳಿಸುತ್ತಾರೆ. ಇದರಿಂದಲೇ ಮನುಷ್ಯರಿಂದ ದೇವತೆಗಳಾಗುತ್ತೀರಿ. ಮನುಷ್ಯರಿಂದ ದೇವತೆಗಳಾಗುವುದಕ್ಕಾಗಿಯೇ ನೀವಿಲ್ಲಿಗೆ ಬಂದಿದ್ದೀರಿ. ದೇವತೆಗಳ ಆಹಾರ-ಪದಾರ್ಥಗಳು ಅಶುದ್ಧವಾಗಿರುವುದಿಲ್ಲ, ಅವರೆಂದೂ ಬೀಡಿ ಇತ್ಯಾದಿಗಳನ್ನು ಸೇದುವುದಿಲ್ಲ. ಇಲ್ಲಿಯ ಪತಿತ ಮನುಷ್ಯರ ಮಾತೇ ಕೇಳಬೇಡಿ, ಏನೇನನ್ನೋ ಸೇವಿಸುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಈ ಭಾರತವು ಮೊದಲು ಸತ್ಯಖಂಡವಾಗಿತ್ತು, ಅವಶ್ಯವಾಗಿ ಸತ್ಯತಂದೆಯೇ ಸ್ಥಾಪನೆ ಮಾಡಿರಬೇಕು, ತಂದೆಗೆ ಸತ್ಯವೆಂದು ಹೇಳಲಾಗುತ್ತದೆ. ಆ ತಂದೆಯೇ ತಿಳಿಸುತ್ತಾರೆ - ಮಕ್ಕಳೇ, ಈ ಭಾರತವನ್ನು ನಾನೇ ಸತ್ಯಖಂಡವನ್ನಾಗಿ ಮಾಡುತ್ತೇನೆ, ನೀವು ಹೇಗೆ ಸತ್ಯದೇವತೆಗಳಾಗಬಲ್ಲಿರಿ ಎಂಬುದನ್ನೂ ಸಹ ನಿಮಗೆ ಕಲಿಸುತ್ತೇನೆ. ಎಷ್ಟೊಂದು ಮಂದಿ ಮಕ್ಕಳು ಇಲ್ಲಿಗೆ ಬರುತ್ತೀರಿ ಆದ್ದರಿಂದ ಈ ಮನೆ ಇತ್ಯಾದಿಗಳನ್ನು ಕಟ್ಟಿಸಬೇಕಾಗುತ್ತದೆ. ಅಂತ್ಯದವರೆಗೂ ಇವು ಆಗುತ್ತಲೇ ಇರುತ್ತದೆ, ಬಹಳಷ್ಟು ನಿರ್ಮಾಣವಾಗುತ್ತದೆ. ಮನೆಗಳನ್ನು ಖರೀದಿ ಮಾಡುತ್ತಾರೆ. ಶಿವತಂದೆಯು ಬ್ರಹ್ಮಾರವರ ಮೂಲಕ ಕಾರ್ಯಮಾಡುತ್ತಾರೆ. ಬ್ರಹ್ಮಾರವರು ಶ್ಯಾಮನಾದರು ಏಕೆಂದರೆ ಇದು ಬಹಳ ಜನ್ಮಗಳ ಅಂತಿಮ ಜನ್ಮವಲ್ಲವೆ! ಇವರೇ ಮತ್ತೆ ಸುಂದರನಾಗುವರು. ಕೃಷ್ಣನ ಶ್ಯಾಮ ಮತ್ತು ಸುಂದರನ ಚಿತ್ರವಿದೆಯಲ್ಲವೆ. ಮ್ಯೂಸಿಯಂನಲ್ಲಿ ದೊಡ್ಡ-ದೊಡ್ಡ ಒಳ್ಳೆಯ ಚಿತ್ರಗಳಿವೆ. ಇದರ ಮೇಲೆ ನೀವು ಯಾರಿಗಾದರೂ ಬಹಳ ಚೆನ್ನಾಗಿ ತಿಳಿಸಬಹುದು. ಇಲ್ಲಿ (ಮಧುಬನದಲ್ಲಿ) ತಂದೆಯು ಮ್ಯೂಸಿಯಂನ್ನು ಮಾಡಿಸುವುದಿಲ್ಲ ಏಕೆಂದರೆ ಇದಕ್ಕೆ ಶಾಂತಿಯ ಶಿಖರ (ಮಧುಬನಕ್ಕೆ) ವೆಂದು ಹೇಳಲಾಗುತ್ತದೆ. ನಿಮಗೆ ತಿಳಿದಿದೆ - ನಾವು ನಮ್ಮ ಮನೆಯಾದ ಶಾಂತಿಧಾಮಕ್ಕೆ ಹೋಗುತ್ತೇವೆ, ನಾವು ಅಲ್ಲಿನ ನಿವಾಸಿಗಳಾಗುತ್ತೇವೆ ಮತ್ತೆ ಇಲ್ಲಿ ಬಂದು ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತೇವೆ. ಇಲ್ಲಿ ಯಾವುದೇ ಸಾಧು-ಸಂತರು ಓದಿಸುವುದಿಲ್ಲ ಎಂಬುದು ಮಕ್ಕಳಿಗೆ ಮೊಟ್ಟಮೊದಲಿಗೆ ನಿಶ್ಚಯವಾಗಬೇಕು. ಈ ದಾದಾರವರಂತೂ ಸಿಂಧ್ನಲ್ಲಿದ್ದರು ಆದರೆ ಇವರಲ್ಲಿ ಯಾರು ಪ್ರವೇಶ ಮಾಡಿ ಮಾತನಾಡುವರೋ ಅವರು ಜ್ಞಾನಸಾಗರನಾಗಿದ್ದಾರೆ. ಅವರನ್ನು ಯಾರೂ ತಿಳಿದುಕೊಂಡೇ ಇಲ್ಲ. ಗಾಡ್ ಫಾದರ್ ಎಂದು ಹೇಳುತ್ತಾರೆ ಆದರೆ ಅವರಿಗೆ ನಾಮ-ರೂಪವೇ ಇಲ್ಲವೆಂದು ಹೇಳಿಬಿಡುತ್ತಾರೆ. ಅವರು ನಿರಾಕಾರನಾಗಿದ್ದಾರೆ, ಅವರಿಗೆ ಯಾವುದೇ ಆಕಾರವಿಲ್ಲ ಎಂದು ಹೇಳಿ ಮತ್ತೆ ಅವರು ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಅರೆ! ಪರಮಾತ್ಮನು ಎಲ್ಲಿದ್ದಾರೆಂದು ಕೇಳಿದರೆ ಅವರು ಸರ್ವವ್ಯಾಪಿಯಾಗಿದ್ದಾರೆ, ಎಲ್ಲರಲ್ಲಿಯೂ ಇದ್ದಾರೆಂದು ಹೇಳುತ್ತಾರೆ. ಅರೆ! ಪ್ರತಿಯೊಬ್ಬರಲ್ಲಿಯೂ ಆತ್ಮವು ಕುಳಿತಿದೆ, ಎಲ್ಲರೂ ಸಹೋದರ-ಸಹೋದರರಾಗಿದ್ದಾರಲ್ಲವೆ, ಪ್ರತಿಯೊಬ್ಬರಲ್ಲಿಯೂ ಪರಮಾತ್ಮನೆಲ್ಲಿಂದ ಬಂದರು? ಪರಮಾತ್ಮನೂ ಇದ್ದಾರೆ ಮತ್ತೆ ಆತ್ಮವೂ ಇದೆ ಎಂದು ಹೇಳುವುದಿಲ್ಲ. ಬಾಬಾ, ಬಂದು ನಾವು ಪತಿತರನ್ನು ಪಾವನ ಮಾಡಿ ಎಂದು ಪರಮಾತ್ಮ ತಂದೆಯನ್ನು ಕರೆಯುತ್ತಾರೆ. ನೀವು ಈ ವ್ಯಾಪಾರ, ಈ ಸೇವೆ ಮಾಡುವುದಕ್ಕಾಗಿಯೇ ಕರೆಯುತ್ತೀರಿ. ನಮ್ಮೆಲ್ಲರನ್ನು ಶುದ್ಧಗೊಳಿಸಿ ಎಂದು ಪತಿತಪ್ರಪಂಚದಲ್ಲಿ ನೀವು ನಿಮಂತ್ರಣ ನೀಡುತ್ತೀರಿ. ಬಾಬಾ, ನಾವು ಪತಿತರಾಗಿದ್ದೇವೆ ಎಂದು ಹೇಳುತ್ತೀರಿ. ತಂದೆಯು ಪಾವನಪ್ರಪಂಚವನ್ನಂತೂ ನೋಡುವುದಿಲ್ಲ, ಪತಿತಪ್ರಪಂಚದಲ್ಲಿ ನಿಮ್ಮ ಸೇವೆ ಮಾಡುವುದಕ್ಕಾಗಿಯೇ ಬಂದಿದ್ದಾರೆ. ಈಗ ರಾವಣರಾಜ್ಯವು ವಿನಾಶವಾಗಿಬಿಡುವುದು. ನಿಮ್ಮಲ್ಲಿ ಯಾರು ರಾಜಯೋಗವನ್ನು ಕಲಿಯುವರೋ ಅವರು ಹೋಗಿ ರಾಜಾಧಿರಾಜರಾಗುತ್ತೀರಿ. ನಿಮಗೆ ಲೆಕ್ಕವಿಲ್ಲದಷ್ಟು ಬಾರಿ ಓದಿಸಿದ್ದೇನೆ ಮತ್ತೆ 5000 ವರ್ಷಗಳ ನಂತರವೂ ನಿಮಗೇ ಓದಿಸುತ್ತೇನೆ. ಸತ್ಯಯುಗ-ತ್ರೇತಾಯುಗದ ರಾಜಧಾನಿಯು ಈಗ ಸ್ಥಾಪನೆಯಾಗುತ್ತಿದೆ. ಮೊದಲು ಬ್ರಾಹ್ಮಣಕುಲವಾಗಿದೆ, ಪ್ರಜಾಪಿತ ಬ್ರಹ್ಮನೆಂದು ಗಾಯನವಿದೆಯಲ್ಲವೆ. ಇವರಿಗೆ ಆಡಂ, ಆದಿದೇವನೆಂದು ಹೇಳುತ್ತಾರೆ. ಇದು ಯಾರಿಗೂ ತಿಳಿದಿಲ್ಲ. ಅನೇಕರು ಇಲ್ಲಿ ಬಂದು ಕೇಳಿ ಮತ್ತೆ ಮಾಯೆಗೆ ವಶರಾಗಿಬಿಡುತ್ತೀರಿ. ಪುಣ್ಯಾತ್ಮರಾಗುತ್ತಾ-ಆಗುತ್ತಾ ಪಾಪಾತ್ಮರಾಗಿಬಿಡುತ್ತಾರೆ. ಮಾಯೆಯು ಬಹಳ ಶಕ್ತಿಶಾಲಿಯಾಗಿದೆ, ಎಲ್ಲರನ್ನೂ ಪಾಪಾತ್ಮರನ್ನಾಗಿ ಮಾಡಿಬಿಡುತ್ತದೆ. ಇಲ್ಲಿ ಯಾರು ಪವಿತ್ರ ಆತ್ಮ, ಪುಣ್ಯಾತ್ಮರಿಲ್ಲ. ಪವಿತ್ರ ಆತ್ಮಗಳು ದೇವಿ-ದೇವತೆಗಳೇ ಆಗಿದ್ದರು. ಯಾವಾಗ ಎಲ್ಲರೂ ಪತಿತರಾಗಿಬಿಡುವರೋ ಆಗ ತಂದೆಯನ್ನು ಕರೆಯುತ್ತಾರೆ. ಇದು ರಾವಣರಾಜ್ಯ, ಪತಿತಪ್ರಪಂಚವಾಗಿದೆ. ಇದಕ್ಕೆ ಮುಳ್ಳಿನ ಕಾಡೆಂದು ಕರೆಯಲಾಗುತ್ತದೆ. ಸತ್ಯಯುಗಕ್ಕೆ ಹೂದೋಟವೆಂದು ಹೇಳಲಾಗುತ್ತದೆ. ಮೊಗಲ್ ಗಾರ್ಡನ್ನಲ್ಲಿ ಎಷ್ಟೊಂದು ಸುಂದರವಾದ ಒಳ್ಳೊಳ್ಳೆಯ ಹೂಗಳಿರುತ್ತವೆ. ಎಕ್ಕದ ಹೂಗಳೂ ಸಿಗುತ್ತವೆ ಆದರೆ ಶಿವನ ಮೇಲೆ ಎಕ್ಕದ ಹೂಗಳನ್ನು ಏಕೆ ಇಡುತ್ತಾರೆ ಎಂಬುದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಇದನ್ನೂ ಸಹ ತಂದೆಯೇ ತಿಳಿಸುತ್ತಾರೆ. ನಾನು ಓದಿಸುತ್ತೇನೆಂದಾಗ ಅವರಲ್ಲಿ ಕೆಲವರು ಸುಂದರ ಮುತ್ತುರತ್ನಗಳೂ ಇದ್ದಾರೆ, ಇನ್ನೂ ಕೆಲವರು ಎಕ್ಕದ ಹೂಗಳೂ ಇರುತ್ತಾರೆ. ನಂಬರ್ವಾರಂತೂ ಇದ್ದಾರಲ್ಲವೆ. ಇದಕ್ಕೆ ದುಃಖಧಾಮ, ಮೃತ್ಯುಲೋಕ ಎಂದು ಹೇಳಲಾಗುತ್ತದೆ. ಸತ್ಯಯುಗವು ಅಮರಲೋಕವಾಗಿದೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ಶಾಸ್ತ್ರಗಳನ್ನು ಈ ದಾದಾರವರು ಓದಿದ್ದಾರೆ, ತಂದೆಯು ಶಾಸ್ತ್ರಗಳನ್ನು ಓದಿಸುವುದಿಲ್ಲ. ತಂದೆಯಂತೂ ಸ್ವಯಂ ಸದ್ಗತಿದಾತನಾಗಿದ್ದಾರೆ. ಭಲೆ ಗೀತೆಯನ್ನು ತಿಳಿಸುತ್ತಾರೆ - ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆಯನ್ನು ಭಗವಂತನು ತಿಳಿಸಿದ್ದಾರೆಂದು ಗಾಯನವಿದೆ ಆದರೆ ಯಾರಿಗೆ ಭಗವಂತನೆಂದು ಹೇಳಲಾಗುತ್ತದೆಯೆಂದು ಭಾರತವಾಸಿಗಳಿಗೆ ತಿಳಿದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಷ್ಕಾಮಸೇವೆ ಮಾಡುತ್ತೇನೆ, ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ ಆದರೆ ನಾನಾಗುವುದಿಲ್ಲ. ಸ್ವರ್ಗದಲ್ಲಿ ನೀವು ನನ್ನನ್ನು ನೆನಪು ಮಾಡುವುದಿಲ್ಲ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ಮಾಡುವುದಿಲ್ಲ. ಇದಕ್ಕೆ ದುಃಖ ಮತ್ತು ಸುಖದ ಆಟವೆಂದು ಹೇಳಲಾಗುತ್ತದೆ. ಸ್ವರ್ಗದಲ್ಲಿ ಅನ್ಯ ಮತ್ತ್ಯಾವುದೇ ಧರ್ಮವಿರುವುದೇ ಇಲ್ಲ. ಅವರೆಲ್ಲರೂ ನಂತರದಲ್ಲಿ ಬರುತ್ತಾರೆ. ನಿಮಗೆ ತಿಳಿದಿದೆ - ಈಗ ಈ ಹಳೆಯ ಪ್ರಪಂಚದ ವಿನಾಶವಾಗುವುದು, ಪ್ರಾಕೃತಿಕ ವಿಕೋಪಗಳು, ಬಿರುಗಾಳಿಗಳು ಬಹಳ ತೀವ್ರವಾಗಿ ಬರುತ್ತದೆ. ಎಲ್ಲವೂ ಸಮಾಪ್ತಿಯಾಗಿಬಿಡುತ್ತದೆ.

ತಂದೆಯು ಈಗ ಬಂದು ಬುದ್ಧಿಹೀನರಿಂದ ಬುದ್ಧಿವಂತರನ್ನಾಗಿ ಮಾಡುತ್ತಾರೆ. ತಂದೆಯು ಎಷ್ಟೊಂದು ಧನ, ಸಂಪತ್ತನ್ನು ಕೊಟ್ಟಿದ್ದರು, ಎಲ್ಲವೂ ಎಲ್ಲಿ ಹೋಯಿತು? ಈಗ ಎಷ್ಟೊಂದು ಬಡವರಾಗಿಬಿಟ್ಟಿದ್ದೀರಿ! ಯಾವ ಭಾರತವು ಚಿನ್ನದ ಪಕ್ಷಿಯಾಗಿತ್ತು, ಅದು ಈಗ ಏನಾಗಿಬಿಟ್ಟಿದೆ? ಈಗ ಮತ್ತೆ ಪತಿತ-ಪಾವನ ತಂದೆಯು ಬಂದಿದ್ದಾರೆ, ರಾಜಯೋಗವನ್ನು ಕಲಿಸುತ್ತಿದ್ದಾರೆ. ಇದು ರಾಜಯೋಗ, ಅದು ಹಠಯೋಗವಾಗಿದೆ. ಈ ರಾಜಯೋಗವು ಇಬ್ಬರಿಗಾಗಿಯೂ ಇದೆ. ಆ ಹಠಯೋಗವು ಕೇವಲ ಪುರುಷರಷ್ಟೇ ಕಲಿಯುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪುರುಷಾರ್ಥ ಮಾಡಿ ವಿಶ್ವದ ಮಾಲೀಕರಾಗಿ ತೋರಿಸಿ. ಈಗ ಈ ಹಳೆಯ ಪ್ರಪಂಚದ ವಿನಾಶವಂತೂ ಅವಶ್ಯವಾಗಿ ಆಗಲಿದೆ. ಇನ್ನು ಸ್ವಲ್ಪವೇ ಸಮಯವಿದೆ, ಈ ಯುದ್ಧವು ಅಂತಿಮ ಯುದ್ಧವಾಗಿದೆ. ಈ ಯುದ್ಧವು ಆರಂಭವಾದರೆ ಮತ್ತೆ ನಿಲ್ಲುವುದಿಲ್ಲ. ಯಾವಾಗ ನೀವು ಕರ್ಮಾತೀತ ಸ್ಥಿತಿಯನ್ನು ಪಡೆಯುವಿರೋ ಮತ್ತು ಸ್ವರ್ಗದಲ್ಲಿ ಹೋಗಲು ಯೋಗ್ಯರಾಗುವಿರೋ ಆಗಲೇ ಈ ಯುದ್ಧವು ಆರಂಭವಾಗುವುದು. ತಂದೆಯು ಪುನಃ ಹೇಳುತ್ತಾರೆ - ಮಕ್ಕಳೇ, ನೆನಪಿನ ಯಾತ್ರೆಯಲ್ಲಿ ಆಲಸಿಗಳಾಗಬೇಡಿ, ಇದರಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಮೂಲಕ ಚೆನ್ನಾಗಿ ಓದಿ ಸುಂದರ ಹೂಗಳಾಗಬೇಕಾಗಿದೆ. ಈ ಮುಳ್ಳುಗಳ ಕಾಡನ್ನು ಹೂದೋಟವನ್ನಾಗಿ ಮಾಡುವುದರಲ್ಲಿ ತಂದೆಗೆ ಪೂರ್ಣ ಸಹಯೋಗ ನೀಡಬೇಕಾಗಿದೆ.

2. ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಹಾಗೂ ಸ್ವರ್ಗದಲ್ಲಿ ಶ್ರೇಷ್ಠಪದವಿಯ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳಲು ನೆನಪಿನ ಯಾತ್ರೆಯಲ್ಲಿ ತತ್ಫರರಾಗಿರಬೇಕು, ಆಲಸಿಗಳಾಗಬಾರದು.

ವರದಾನ:
ತಮ್ಮ ಮಸ್ತಕದ ಮೇಲೆ ಸದಾ ತಂದೆಯ ಆಶೀರ್ವಾದದ ಹಸ್ತ ಅನುಭವ ಮಾಡುವಂತಹ ಮಾಸ್ಟರ್ ವಿಘ್ನ-ವಿನಾಶಕ ಭವ.

ಗಣೇಶನಿಗೆ ವಿಘ್ನ-ವಿನಾಶಕ ಎಂದು ಕರೆಯುತ್ತಾರೆ. ವಿಘ್ನವಿನಾಶಕರು ಅವರೇ ಆಗುತ್ತಾರೆ ಯಾರಲ್ಲಿ ಸರ್ವ ಶಕ್ತಿಗಳಿವೆ. ಸರ್ವ ಶಕ್ತಿಗಳನ್ನು ಸಮಯ ಪ್ರಮಾಣ ಕಾರ್ಯದಲ್ಲಿ ಉಪಯೋಗಿಸಿದಾಗ ವಿಘ್ನವು ಉಳಿಯಲು ಸಾಧ್ಯವಿಲ್ಲ. ಮಾಯೆ ಎಷ್ಟೇ ರೂಪದಲ್ಲಿ ಬರಲಿ ಆದರೆ ನೀವು ಜ್ಞಾನ ಪೂರ್ಣರಾಗಿ. ಜ್ಞಾನ ಪೂರ್ಣ ಆತ್ಮ ಎಂದೂ ಮಾಯೆಯಿಂದ ಸೋಲನ್ನನ್ನುಭವಿಸುವುದಿಲ್ಲ. ಯಾವಾಗ ಮಸ್ತಕದ ಮೇಲೆ ಬಾಪ್ದಾದಾರವರ ಆಶೀರ್ವಾದದ ಹಸ್ತವಿದ್ದು ವಿಜಯದ ತಿಲಕ ಧರಿಸಿದಾಗ. ಪರಮಾತ್ಮನ ಹಸ್ತ ಮತ್ತು ಜೊತೆ ವಿಘ್ನ ವಿನಾಶಕರನ್ನಾಗಿ ಮಾಡಿ ಬಿಡುವುದು.

ಸ್ಲೋಗನ್:
ಸ್ವಯಂನಲ್ಲಿ ಗುಣಗಳನ್ನು ಧಾರಣೆ ಮಾಡಿ ಅನ್ಯರಿಗೆ ಗುಣ ದಾನ ಮಾಡುವಂತಹವರೇ ಗುಣಮೂರ್ತಿಯಾಗಿದ್ದಾರೆ.