04.01.26 Avyakt Bapdada
Kannada
Murli 30.11.2008 Om Shanti Madhuban
“ಪೂರ್ಣ ವಿರಾಮ ಇಟ್ಟು
ಸಂಪೂರ್ಣ ಪವಿತ್ರತೆಯ ಧಾರಣೆ ಮಾಡಿ ಮನಸ್ಸಿನ ಸಕಾಶದ (ಶಕ್ತಿ) ಮೂಲಕ ಸುಖ-ಶಾಂತಿಯ ಅಂಚಲಿಯನ್ನು (ಹನಿಯನ್ನು)
ನೀಡುವಂತಹ ಸೇವೆಯನ್ನು ಮಾಡಿ”
ಈ ದಿನ ಬಾಪ್ದಾದಾ ನಾಲ್ಕೂ
ಕಡೆಯ ಮಹಾನ್ ಮಕ್ಕಳನ್ನು ನೋಡುತ್ತಿದ್ದೇವೆ. ಯಾವ ಮಹಾನತೆಯನ್ನು ಮಾಡಿದ್ದೀರಿ? ಯಾವುದನ್ನು
ಪ್ರಪಂಚದವರು ಅಸಂಭವವೆಂದು ಹೇಳುತ್ತಾರೆ ಅದನ್ನು ಸಹಜ ಸಂಭವ ಮಾಡಿ ತೋರಿಸಿದ್ದೀರಿ. ಅದಾಗಿದೆ
ಪವಿತ್ರತೆಯ ವ್ರತ. ತಾವೆಲ್ಲರೂ ಪವಿತ್ರತೆಯ ವ್ರತವನ್ನು ಧಾರಣೆ ಮಾಡಿದ್ದೀರಲ್ಲವೇ!
ಬಾಪ್ದಾದಾರವರಿಂದ ಪರಿವರ್ತನೆಯ ದೃಢ ಸಂಕಲ್ಪದ ವ್ರತವನ್ನು ತೆಗೆದುಕೊಂಡಿದ್ದೀರಿ. ವ್ರತ ಮಾಡುವುದು
ಅರ್ಥಾತ್ ವೃತ್ತಿಯ ಮೂಲಕ ಪರಿವರ್ತನೆ ಮಾಡಿಕೊಳ್ಳುವುದು. ನಿಮ್ಮ ವೃತ್ತಿಯ ಪರಿವರ್ತನೆ ಆಗಿದೆಯೇ?
ಸಂಕಲ್ಪ ಮಾಡಿದಿರಿ ನಾವೆಲ್ಲರೂ ಸಹೋದರ-ಸಹೋದರರು ಎಂದು ಸಂಕಲ್ಪ ಮಾಡಿದಿರಿ. ಈ ವೃತ್ತಿಯ
ಪರಿವರ್ತನೆಯ ಮೂಲಕ ಎಷ್ಟೊಂದು ಮಾತಿನಲ್ಲಿ ಭಕ್ತಿಯಲ್ಲೂ ಸಹ ವ್ರತವನ್ನು ಮಾಡುತ್ತಾರೆ ಆದರೆ
ತಾವೆಲ್ಲರೂ ತಂದೆಯೊಂದಿಗೆ ದೃಢ ಸಂಕಲ್ಪ ಮಾಡಿದಿರಿ ಏಕೆಂದರೆ ಬ್ರಾಹ್ಮಣ ಜೀವನದ ತಳಹದಿಯೇ ಪವಿತ್ರತೆ.
ಮತ್ತು ಪವಿತ್ರತೆಯ ಮೂಲಕ ಪರಮಾತ್ಮ ಪ್ರಿಯರು ಮತ್ತು ಸರ್ವ ಪರಮಾತ್ಮನ ಪ್ರಾಪ್ತಿಗಳು ಆಗುತ್ತಿದೆ.
ಮಹಾತ್ಮರು ಯಾವುದನ್ನು ಕಷ್ಟವೆಂದು ತಿಳಿಯುತ್ತಾರೆ, ಅಸಂಭವವೆಂದು ತಿಳಿಯುತ್ತಾರೆ ಅದನ್ನು ತಾವು
ಪವಿತ್ರತೆ ಸ್ವಧರ್ಮವೆಂದು ತಿಳಿಯುತ್ತೀರಿ. ಕೆಲವು ಒಳ್ಳೊಳ್ಳೆಯ ಮಕ್ಕಳು ಯಾರೆಲ್ಲಾ ಸಂಕಲ್ಪ
ಮಾಡಿದ್ದೀರೋ ಮತ್ತು ದೃಢ ಸಂಕಲ್ಪದ ಮೂಲಕ ಪ್ರಾಕ್ಟಿಕಲ್ನಲ್ಲಿ ಪರಿವರ್ತನೆಯನ್ನು
ತೋರಿಸುತ್ತಿದ್ದಾರೆ ಅದನ್ನು ಬಾಪ್ದಾದಾರವರು ನೋಡುತ್ತಿದ್ದೇವೆ. ಇಂತಹ ನಾಲ್ಕಾರೂ ಕಡೆಯ ಮಹಾನ್
ಮಕ್ಕಳಿಗೆ ಬಾಪ್ದಾದಾ ಬಹಳ-ಬಹಳ ಹೃದಯದಿಂದ ಆಶೀರ್ವಾದವನ್ನು ನೀಡುತ್ತಿದ್ದೇವೆ.
ತಾವೆಲ್ಲರೂ ಸಹ
ಮನ-ವಚನ-ಕರ್ಮ, ವೃತ್ತಿ, ದೃಷ್ಟಿಯ ಮೂಲಕ ಪವಿತ್ರತೆಯ ಅನುಭವವನ್ನು ಮಾಡಿದ್ದೀರಲ್ಲವೇ. ಪವಿತ್ರತೆಯ
ವೃತ್ತಿ ಅರ್ಥಾತ್ ಪ್ರತಿಯೊಂದು ಆತ್ಮನ ಪ್ರತಿ ಶುಭ ಭಾವನೆ, ಶುಭ ಕಾಮನೆಯನ್ನು ಇಡುವುದು. ದೃಷ್ಟಿ
ಪ್ರತಿಯೊಬ್ಬ ಆತ್ಮನನ್ನು ಆತ್ಮಿಕ ಸ್ವರೂಪದಲ್ಲಿ ನೋಡುವುದು. ತನ್ನನ್ನೂ ಸಹ ಸಹಜ ಸದಾ ಆತ್ಮಿಕ
ಸ್ಥಿತಿಯಲ್ಲಿ ಅನುಭವ ಮಾಡುವುದು. ಬ್ರಾಹ್ಮಣ ಜೀವನದ ಮಹತ್ವ ಮನ-ವಚನ-ಕರ್ಮದಿಂದ ಪವಿತ್ರವಾಗಿರುವುದು.
ಸದಾ ಪವಿತ್ರತೆಯ ಬಲದಿಂದ ತಮಗೆ ತಾವೇ ಆಶೀರ್ವಾದವನ್ನು ಕೊಡುವುದು ಎನ್ನುವ ಬ್ರಾಹ್ಮಣ ಜೀವನದ ಯಾವ
ಗಾಯನವಿದೆ, ಪವಿತ್ರತೆ ಇಲ್ಲವೆಂದರೆ ಯಾವ ಆಶೀರ್ವಾದವನ್ನು ಕೊಡುವುದು? ಪವಿತ್ರತೆಯ ಮೂಲಕ ಸದಾ
ಸ್ವಯಂ ಸಹ ಖುಷಿಯ ಅನುಭವ ಮಾಡುತ್ತಾ ಅನ್ಯರಿಗೂ ಸಹ ಖುಷಿಯನ್ನು ಕೊಡುತ್ತಾರೆ. ಪವಿತ್ರ ಆತ್ಮರಿಗೆ
ಮೂರು ವಿಶೇಷ ವರದಾನಗಳು ಸಿಗುತ್ತವೆ - 1. ತಮಗೆ ತಾವೇ ವರದಾನವನ್ನು ನೀಡುವುದು, ಇದರಿಂದ ಸಹಜವಾಗಿ
ತಂದೆಗೆ ಪ್ರಿಯರಾಗುತ್ತಾರೆ. 2. ವರದಾತ ತಂದೆಗೆ ಅತೀ ಸಮೀಪ ಮತ್ತು ಅತೀ ಪ್ರಿಯ ಮಕ್ಕಳಾಗುತ್ತಾರೆ.
ಆದ್ದರಿಂದ ತಂದೆಯ ಆಶೀರ್ವಾದ ಸ್ವತಃವಾಗಿಯೇ ಪ್ರಾಪ್ತಿ ಆಗುತ್ತದೆ ಮತ್ತು ಸದಾ ಪ್ರಾಪ್ತಿ ಆಗುತ್ತದೆ.
3. ಬ್ರಾಹ್ಮಣ ಪರಿವಾರದಲ್ಲಿ ವಿಶೇಷವಾಗಿ ಯಾರೆಲ್ಲಾ ನಿಮಿತ್ತರಾಗಿದ್ದಾರೆ ಅವರ ಮೂಲಕವೂ ಸಹ
ಆಶೀರ್ವಾದ ಸಿಗುತ್ತಿರುತ್ತದೆ. ಈ ಮೂರು ಪ್ರಕಾರದ ಆಶೀರ್ವಾದದಿಂದ ಸದಾ ಹಾರುತ್ತಿರುತ್ತಾರೆ ಮತ್ತು
ಹಾರಿಸುತ್ತಿರುತ್ತಾರೆ. ಅಂದಾಗ ತಾವೆಲ್ಲರೂ ತಮ್ಮನ್ನು ತಾವು ಕೇಳಿಕೊಳ್ಳಿ, ಪವಿತ್ರತೆಯ ಬಲ ಮತ್ತು
ಪವಿತ್ರತೆಯ ಫಲವನ್ನು ಸದಾ ಅನುಭವ ಮಾಡುತ್ತಿದ್ದೇನೆಯೇ? ಎಂದು ತನ್ನನ್ನು ಪರಿಶೀಲನೆ ಮಾಡಿಕೊಳ್ಳಿ.
ಸದಾ ಆತ್ಮೀಯ ನಶೆ ಹೃದಯದಲ್ಲಿ ಹೊಮ್ಮುತ್ತಿದೆಯೇ? ಕೆಲವೊಮ್ಮೆ ಕೆಲವು ಮಕ್ಕಳು ಅಮೃತವೇಳೆಯಲ್ಲಿ
ಮಿಲನ ಮಾಡುತ್ತಿರುವಾಗ ವಾರ್ತಾಲಾಪವನ್ನು ಮಾಡುತ್ತಾರೆ ಆಗ ಏನು ಹೇಳುತ್ತಾರೆ ತಿಳಿದಿದೆಯೇ?
ಪವಿತ್ರತೆಯ ಮೂಲಕ ಯಾವ ಅತೀಂದ್ರಿಯ ಸುಖದ ಫಲ ಸಿಗುತ್ತದೆ ಅದು ಸದಾ ಇರುವುದಿಲ್ಲ. ಕೆಲವೊಮ್ಮೆ
ಇರುತ್ತದೆ, ಕೆಲವೊಮ್ಮೆ ಇರುವುದಿಲ್ಲ. ಏಕೆಂದರೆ ಪವಿತ್ರತೆಯ ಫಲವೇ ಅತೀಂದ್ರಿಯ ಸುಖವಾಗಿದೆ.
ತಮ್ಮನ್ನು ತಾವು ಕೇಳಿಕೊಳ್ಳಿ ನಾನು ಯಾರಿಗಿದ್ದೇನೆ? ಸದಾ ಅತೀಂದ್ರಿಯ ಸುಖದ ಅನುಭೂತಿಯಲ್ಲಿ
ಇರುತ್ತೇನೆಯೋ ಅಥವಾ ಆಗಾಗ ಇರುತ್ತೇನೆಯೋ? ತನ್ನನ್ನು ಏನೆಂದು ಕರೆಸಿಕೊಳ್ಳುತ್ತೀರಿ? ತಾವು ತಮ್ಮ
ಹೆಸರನ್ನು ಬರೆಯುವಾಗ ಏನೆಂದು ಬರೆಯುತ್ತೀರಿ? ಬಿ.ಕೆ......... ಬಿ.ಕೆ........... ಮತ್ತು
ತಮ್ಮನ್ನು ಮಾಸ್ಟರ್ ಸರ್ವ ಶಕ್ತಿವಂತ ಎಂದು ಹೇಳುತ್ತೀರಿ. ಎಲ್ಲರೂ ಇದ್ದೀರಲ್ಲವೇ! ಮಾಸ್ಟರ್ ಸರ್ವ
ಶಕ್ತಿವಂತರಾಗಿದ್ದೀರಾ? ಯಾರು ತನ್ನನ್ನು ಮಾಸ್ಟರ್ ಸರ್ವ ಶಕ್ತಿವಂತ ಆಗಿದ್ದೇನೆ, ಸದಾ ಕೆಲವೊಮ್ಮೆ
ಅಲ್ಲ, ಎನ್ನುವವರು ಕೈ ಎತ್ತಿರಿ, ಸದಾ? ನೋಡಿ ಯೋಚನೆ ಮಾಡಿ, ಸದಾ ಆಗಿದ್ದೀರಾ? ಡಬಲ್ ವಿದೇಶಿಗಳು
ಕೈ ಎತ್ತುತ್ತಿಲ್ಲ, ಕೆಲವರು ಎತ್ತುತ್ತಿದ್ದಾರೆ. ಶಿಕ್ಷಕಿಯರು ಕೈ ಎತ್ತಿ ಸದಾ ಆಗಿದ್ದೀರಾ?
ಹಾಗೆಯೇ ಕೈ ಎತ್ತಬೇಡಿ. ಯಾರು ಸದಾ ಇದ್ದೀರಿ? ಸದಾ ಇರುವವರು ಕೈ ಎತ್ತಿ. ಬಹಳ ಕಡಿಮೆ ಇದ್ದಾರೆ.
ಪಾಂಡವರು ಕೈ ಎತ್ತಿರಿ. ಹಿಂದೆ ಇರುವವರು ಬಹಳ ಕಡಿಮೆ ಇದ್ದಾರೆ. ಇಡೀ ಸಭೆ ಕೈ ಎತ್ತುತ್ತಿಲ್ಲ.
ಮಾಸ್ಟರ್ ಸರ್ವ ಶಕ್ತಿವಂತರೆಂದರೆ ಆ ಸಮಯದಲ್ಲಿ ಶಕ್ತಿಗಳು ಎಲ್ಲಿ ಹೋಗಿ ಬಿಡುತ್ತವೆ? ಮಾಸ್ಟರ್
ಆಗುವುದರ ಅರ್ಥವೇ ಆಗಿದೆ ತಂದೆಗಿಂತಲೂ ಸಹ ಉತ್ತಮರಾಗುವುದಾಗಿದೆ. ಅಂದಾಗ ಪರಿಶೀಲನೆ ಮಾಡಿಕೊಳ್ಳಿ
- ತಮ್ಮ ಪವಿತ್ರತೆಯ ತಳಹದಿಯಲ್ಲಿ ಯಾವುದೋ ಬಲಹೀನತೆ ಇದೆ. ಯಾವ ಬಲಹೀನತೆ ಇದೆ? ಮನಸ್ಸಿನಲ್ಲಿ
ಅರ್ಥಾತ್ ಸಂಕಲ್ಪದಲ್ಲಿ ಬಲಹೀನತೆ ಇದೆ, ಮಾತಿನಲ್ಲಿ ಬಲಹೀನತೆ ಇದೆ ಅಥವಾ ಕರ್ಮದಲ್ಲಿ ಬಲಹೀನತೆ ಇದೆ,
ಅಥವಾ ಸ್ವಪ್ನದಲ್ಲೂ ಸಹ ಬಲಹೀನತೆ ಇದೆ ಏಕೆಂದರೆ ಪವಿತ್ರ ಆತ್ಮನ ಮನ-ವಚನ-ಕರ್ಮ, ಸಂಬಂಧ-ಸಂಪರ್ಕ,
ಸ್ವಪ್ನ ಸ್ವತಃವಾಗಿಯೇ ಶಕ್ತಿಶಾಲಿಯಾಗಿರುತ್ತದೆ. ಯಾವಾಗ ವ್ರತವನ್ನು ಕೈಗೊಂಡಿದ್ದೀರೋ ಆಗಾಗ
ವೃತ್ತಿಯನ್ನು ಏಕೆ ಬದಲಾವಣೆ ಮಾಡುತ್ತೀರಿ? ಸಮಯವನ್ನು ನೋಡುತ್ತಿದ್ದೀರಿ, ಸಮಯದ ಕರೆ, ಭಕ್ತರಕರೆ,
ಆತ್ಮಗಳ ಕರೆ ಕೇಳುತ್ತಿದ್ದೀರಿ ಮತ್ತು ಅಚಾನಕ್ ಪಾಠ ಎಲ್ಲರಿಗೂ ಪಕ್ಕಾ ಆಗಿದೆ. ಆದರೂ ತಳಹದಿಯಲ್ಲಿ
ಬಲಹೀನತೆ ಅರ್ಥಾತ್ ಪವಿತ್ರತೆಯ ಬಲಹೀನತೆ ಇದೆ. ಒಂದುವೇಳೆ ಮಾತಿನಲ್ಲಿಯೂ ಸಹ ಶುಭ ಭಾವನೆ, ಶುಭ
ಕಾಮನೆ ಇಲ್ಲವೆಂದರೆ ಪವಿತ್ರತೆಯ ವಿಪರೀತವಿದ್ದರೆ ಸಂಪೂರ್ಣ ಪವಿತ್ರತೆಯ ಸುಖ ಏನಿದೆ ಅತೀಂದ್ರಿಯ
ಸುಖ, ಅದರ ಅನುಭವವಾಗಲು ಸಾಧ್ಯವಿಲ್ಲ. ಏಕೆಂದರೆ ಬ್ರಾಹ್ಮಣ ಜೀವನದ ಲಕ್ಷ್ಯವೇ ಅಸಂಭವವನ್ನು ಸಂಭವ
ಮಾಡುವುದಾಗಿದೆ. ಇದರಲ್ಲಿ ಎಷ್ಟು ಅಷ್ಟು ಎನ್ನುವ ಶಬ್ದ ಬರುವುದಿಲ್ಲ. ಎಷ್ಟು ಬೇಕೋ ಅಷ್ಟು ಇಲ್ಲ.
ಅಂದಾಗ ನಾಳೆ ಅಮೃತವೇಳೆಯಲ್ಲಿ ವಿಶೇಷವಾಗಿ ಪ್ರತಿಯೊಬ್ಬರು ತನ್ನನ್ನು ಕುರಿತು ಯೋಚಿಸಿ,
ಅನ್ಯರನ್ನಲ್ಲ, ಅನ್ಯರನ್ನು ನೋಡಬೇಡಿ, ತನ್ನನ್ನು ಪರಿಶೀಲನೆ ಮಾಡಿಕೊಳ್ಳಿ - ಎಷ್ಟು % ಪವಿತ್ರತೆಯ
ವ್ರತವನ್ನು ನಿಭಾಯಿಸುತ್ತಿದ್ದೇನೆ? ನಾಲ್ಕು ಮಾತುಗಳನ್ನು ಪರಿಶೀಲನೆ ಮಾಡಿಕೊಳ್ಳಿ. 1. ವೃತ್ತಿ
2. ಸಂಬಂಧ-ಸಂಪರ್ಕದಲ್ಲಿ ಶುಭ ಭಾವನೆ, ಶುಭ ಕಾಮನೆ, ಇವರು ಇರುವುದೇ ಹೀಗೆ ಅಲ್ಲ ಆದರೆ ಆ ಆತ್ಮನ
ಪ್ರತಿಯೂ ಸಹ ಶುಭ ಭಾವನೆ ಇರಲಿ. ತಾವೆಲ್ಲರೂ ತಮ್ಮನ್ನು ವಿಶ್ವ ಪರಿವರ್ತಕರು ಎಂದು ಒಪ್ಪಿಕೊಂಡಿರಿ.
ಹಾಗೆ ಇದ್ದೀರಾ? ನಾನು ವಿಶ್ವ ಪರಿವರ್ತಕನಾಗಿದ್ದೇನೆ ಎಂದು ತಮ್ಮನ್ನು ತಿಳಿದಿದ್ದೀರಾ? ಇದರಲ್ಲಿ
ಕೈ ಎತ್ತುತ್ತೀರಿ. ಇದರಲ್ಲಿ ಬಹಳ ಚೆನ್ನಾಗಿ ಕೈ ಎತ್ತಿದ್ದೀರಿ. ತಮಗೆಲ್ಲರಿಗೂ ಶುಭಾಶಯಗಳು ಆದರೆ
ಬಾಪ್ದಾದಾ ತಮ್ಮೆಲ್ಲರೊಂದಿಗೆ ಒಂದು ಪ್ರಶ್ನೆಯನ್ನು ಕೇಳುವುದೇ? ಪ್ರಶ್ನೆ ಕೇಳುವುದೇ? ತಾವು
ವಿಶ್ವ ಪರಿವರ್ತಕರಾದರು ಎಂದರೆ ವಿಶ್ವ ಪರಿವರ್ತನೆಯಲ್ಲಿ ಈ ಪ್ರಕೃತಿ, 5 ತತ್ವಗಳೂ ಸಹ ಬಂದು
ಬಿಡುತ್ತದೆ. ಅದನ್ನೂ ಸಹ ಪರಿವರ್ತನೆ ಮಾಡಬಹುದು ಮತ್ತು ತನ್ನನ್ನು ಅಥವಾ ಜೊತೆಗಾರರನ್ನು,
ಪರಿವಾರವನ್ನು ಪರಿವರ್ತನೆ ಮಾಡಲು ಸಾಧ್ಯವಿಲ್ಲವೇ? ವಿಶ್ವ ಪರಿವರ್ತಕರು ಅರ್ಥಾತ್ ಆತ್ಮಗಳನ್ನು,
ಪ್ರಕೃತಿಯನ್ನು, ಎಲ್ಲವನ್ನು ಪರಿವರ್ತನೆ ಮಾಡುವುದು. ಅಂದಾಗ ತಮ್ಮ ವಾಯಿದೆಯನ್ನು ನೆನಪು
ಮಾಡಿಕೊಳ್ಳಿ. ತಾವೆಲ್ಲರೂ ತಂದೆಯೊಂದಿಗೆ ಕೆಲವುಬಾರಿ ವಾಯಿದೆ ಮಾಡಿದಿರಿ. ಬಾಪ್ದಾದಾ ಇದನ್ನೇ
ನೋಡುತ್ತಿದ್ದೇವೆ - ಸಮಯ ಬಹಳ ತೀವ್ರವಾಗಿ ಹೋಗುತ್ತಿದೆ, ಎಲ್ಲರ ಕೂಗು ಹೆಚ್ಚುತ್ತಿದೆ ಆದರೆ
ಕೂಗನ್ನು ಕೇಳುವಂತಹವರು ಮತ್ತು ಪರಿವರ್ತನೆ ಮಾಡುವಂತಹವರು, ಉಪಕಾರವನ್ನು ಮಾಡುವಂತಹ ಆತ್ಮರು ಯಾರು?
ತಾವೇ ಅಲ್ಲವೇ!
ಬಾಪ್ದಾದಾ ಈ ಮೊದಲೂ ಸಹ
ತಿಳಿಸಿದ್ದೇವೆ, ಪರೋಪಕಾರಿ ಅಥವಾ ವಿಶ್ವ ಉಪಕಾರಿ ಆಗಲು ಮೂರು ಶಬ್ದವನ್ನು ಸಮಾಪ್ತಿ
ಮಾಡಬೇಕಾಗುತ್ತದೆ - ಅದೇನೆಂದು ತಿಳಿದಿದೆಯೇ? ತಿಳಿಯುವುದರಲ್ಲಿ ಬುದ್ಧಿವಂತರಾಗಿದ್ದೀರಿ, ಇದರಲ್ಲಿ
ಬುದ್ಧಿವಂತರಿದ್ದೀರಿ ಎಂದು ಬಾಪ್ದಾದಾರವರಿಗೆ ತಿಳಿದಿದೆ. ಮೊದಲನೆಯ ಶಬ್ದ ಪರಚಿಂತನೆ ಎರಡನೆಯದು
ಪರದರ್ಶನ ಮತ್ತು ಮೂರನೆಯದು ಪರಮತ ಆಗಿದೆ. ಈ ಮೂರು “ಪರ ಶಬ್ದಗಳನ್ನು” ಸಮಾಪ್ತಿ ಮಾಡಿ. ಆಗ
ಪರ-ಉಪಕಾರಿ ಆಗುತ್ತೀರಿ. ಯಾವುದು ವಿಘ್ನ ರೂಪವಾಗುತ್ತದೆ ಆ ಮೂರು ಶಬ್ದ ನೆನಪಿದೆಯಲ್ಲವೇ! ಇದೇನು
ಹೊಸ ಮಾತಲ್ಲ. ನಾಳೆ ಪರಿಶೀಲನೆ ಮಾಡಿಕೊಳ್ಳಿ. ಅಮೃತವೇಳೆ ಬಾಪ್ದಾದಾರವರೂ ಸಹ ಚಕ್ಕರ್ ಹಾಕುತ್ತೇವೆ.
ಏನು ಮಾಡುತ್ತಿದ್ದೀರಿ ಎಂದು ನೋಡುತ್ತೇವೆ ಏಕೆಂದರೆ ಸಮಯ ಪ್ರಮಾಣ ಈಗ ಅವಶ್ಯಕತೆ ಇದೆ. ಕೂಗಿನ
ಪ್ರಮಾಣ ಪ್ರತಿಯೊಬ್ಬ ದುಃಖಿ ಆತ್ಮನಿಗೆ ಮನಸ್ಸಿನ ಸಕಾಶದ ಮೂಲಕ ಸುಖ-ಶಾಂತಿಯ ಹನಿಯನ್ನು ಕೊಡಿ.
ಕಾರಣ ಏನು? ಬಾಪ್ದಾದಾ ಕೆಲವೊಮ್ಮೆ ಮಕ್ಕಳನ್ನು ಇದ್ದಕಿದ್ದ ಹಾಗೆ (ಅಚಾನಕ್) ನೋಡುತ್ತೇವೆ, ಏನು
ಮಾಡುತ್ತಿದ್ದಾರೆ? ಎಂದು ನೋಡುತ್ತೇವೆ. ಏಕೆಂದರೆ ಮಕ್ಕಳ ಮೇಲೆ ಪ್ರೀತಿ ಇದೆಯಲ್ಲವೇ? ಮತ್ತು
ಮಕ್ಕಳ ಜೊತೆಯಲ್ಲಿ ಹೋಗಬೇಕಾಗಿದೆ. ಒಂಟಿಯಾಗಿ ಹೋಗುವ ಹಾಗಿಲ್ಲ. ಜೊತೆಯಲ್ಲಿ ಹೋಗುತ್ತೀರಲ್ಲವೇ!
ಹೋಗುತ್ತೀರಾ! ಹೋಗುತ್ತೀರಾ! ಜೊತೆಯಲ್ಲಿ ಹೋಗುತ್ತೀರಾ! ಮುಂದಿರುವವರು ಕೈ ಎತ್ತುತ್ತಿಲ್ಲ,
ಹೋಗುವುದಿಲ್ಲವೇ? ಹೋಗಬೇಕಲ್ಲವೇ! ಬಾಪ್ದಾದಾರವರೂ ಸಹ ಮಕ್ಕಳ ಕಾರಣ ಅಡ್ವಾನ್ಸ್ ಪಾರ್ಟಿಯವರೂ ಸಹ
ತಮ್ಮ ದಾದಿಯರು, ತಮ್ಮ ವಿಶೇಷ ಪಾಂಡವರು ತಮ್ಮೆಲ್ಲರ ನಿರೀಕ್ಷಣೆಯಲ್ಲಿ ಇದ್ದಾರೆ. ಅವರೆಲ್ಲರೂ ಸಹ
ಪಕ್ಕಾ ವಾಯಿದೆ ಮಾಡಿದ್ದಾರೆ, ಜೊತೆಯಲ್ಲಿಯೇ ನಾವು ಹೋಗುತ್ತೇವೆ, ಸ್ವಲ್ಪ ಅಲ್ಲ. ಎಲ್ಲರೂ ಒಟ್ಟಿಗೆ
ಹೋಗುತ್ತೇವೆ. ಅಂದಾಗ ನಾಳೆ ಅಮೃತವೇಳೆ ತನ್ನನ್ನು ಪರಿಶಿಲನೆ ಮಾಡಿಕೊಳ್ಳಿ - ಯಾವ ಮಾತಿನ ಕೊರತೆ
ಇದೆ? ಮನಸ್ಸಿನಿಂದ, ವಾಣಿಯಿಂದ ಅಥವಾ ಕರ್ಮದಲ್ಲಿ ಬರುವುದರಲ್ಲಿ ಬಲಹೀನತೆ ಇದೆಯೇ? ಬಾಪ್ದಾದಾರವರು
ಒಮ್ಮೆ ಎಲ್ಲಾ ಸೆಂಟರ್ನ್ನು ಚಕ್ಕರ್ ಹಾಕಿದ್ದೇವೆ, ಏನು ನೋಡಿದ್ದೆವು ಎಂದು ಹೇಳುವುದೇ? ಯಾವ
ಮಾತಿನ ಬಲಹೀನತೆ ಇತ್ತು? ಒಂದು ಸೆಕೆಂಡಿನಲ್ಲಿ ಪರಿವರ್ತನೆ ಮಾಡಿಕೊಂಡು ಫುಲ್ಸ್ಟಾಪ್ (ಪೂರ್ಣ
ವಿರಾಮ) ಇಡುವುದರ ಕೊರತೆ ಇರುವುದು ಕಂಡು ಬಂದಿತ್ತು. ಎಲ್ಲಿಯತನಕ ಫುಲ್ಸ್ಟಾಪ್ ಇಡುವುದರ ಒಳಗೆ
ಏನೇನಾಗುತ್ತದೆ ಎಂದು ಗೊತ್ತಾಗುವುದೇ ಇಲ್ಲ. ಬಾಪ್ದಾದಾರವರು ತಿಳಿಸಿದ್ದೇವೆ ಕೊನೆಯ ಸಮಯದ ಕೊನೆಯ
ಒಂದು ಘಳಿಗೆ ಯಾವುದನ್ನು ಫುಲ್ಸ್ಟಾಪ್ ಹಾಕಬೇಕು ಆದರೆ ಏನನ್ನು ನೋಡಿದೆವು? ಫುಲ್ಸ್ಟಾಪ್
ಹಾಕಬೇಕಿತ್ತು ಆದರೆ ಅದು ಕಾಮಾ (,) ಆಗಿ ಬಿಡುತ್ತದೆ. ಅನ್ಯರ ಮಾತನ್ನು ನೆನಪು ಮಾಡಿಕೊಳ್ಳುತ್ತಾರೆ
ಇದು ಏಕೆ ಆಗುತ್ತಿದೆ? ಅದು ಆಗುತ್ತದೆ, ಇದರಲ್ಲಿ ಆಶ್ಚರ್ಯದ ಚಿನ್ಹೆಯನ್ನು ಹಾಕುತ್ತಾರೆ. ಅದು
ಫುಲ್ಸ್ಟಾಪ್ ಆಗುವುದಿಲ್ಲ ಆದರೆ ಕಾಮಾ, ಆಶ್ಚರ್ಯದ ಗುರುತು ಮತ್ತು ಏನು? ಎಂಬ ಪ್ರಶ್ನೆಗಳ ಕ್ಯೂ
ನಿಲ್ಲುತ್ತದೆ. ಅಂದಾಗ ಇದನ್ನು ಚೆಕ್ ಮಾಡಿಕೊಳ್ಳಿ. ಒಂದುವೇಳೆ ಫುಲ್ಸ್ಟಾಪ್ ಹಾಕುವುದರ
ಅಭ್ಯಾಸವಿಲ್ಲವೆಂದರೆ ಅಂತಿಮ ಗತಿ ಶ್ರೇಷ್ಠವಾಗುವುದಿಲ್ಲ, ಉತ್ತಮವಾಗುವುದಿಲ್ಲ, ಆದ್ದರಿಂದ
ಬಾಪ್ದಾದಾ ಹೋಂವರ್ಕ್ ಕೊಡುತ್ತಿದ್ದೇವೆ - ನಾಳೆ ಅಮೃತವೇಳೆಯಲ್ಲಿ ವಿಶೇಷವಾಗಿ ಪರಿಶೀಲನೆ
ಮಾಡಿಕೊಳ್ಳಿ ಮತ್ತು ಪರಿವರ್ತನೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ವಾರ ಫುಲ್ಸ್ಟಾಪ್ ಸೆಕೆಂಡಿನಲ್ಲಿ
ಇಡುವುದರ ಅಭ್ಯಾಸವನ್ನು ಮತ್ತೆ-ಮತ್ತೆ ಮಾಡಿ ಮತ್ತು 18ನೇ ಜನವರಿಯಲ್ಲಿ, ಜನವರಿ ಮಾಸದಲ್ಲಿ
ಎಲ್ಲರಿಗೂ ತಂದೆಯ ಸಮಾನರಾಗುವ ಉತ್ಸಾಹ ಬರುತ್ತದೆ. ಅಂದಾಗ 18ನೇ ಜನವರಿಯಲ್ಲಿ ಎಲ್ಲರೂ ಚೀಟಿ ಬರೆದು
ಬಾಕ್ಸಿನಲ್ಲಿ ಹಾಕಿ. 18ನೇ ತಾರೀಖು ಯಾವ ಫಲಿತಾಂಶವಿರುತ್ತದೆ? ಎಂದು ಚೀಟಿ ಬರೆದು ಹಾಕಿ.
ಫುಲ್ಸ್ಟಾಪ್ ಹಾಕಿದ್ದೇವೆಯೋ ಅಥವ ಬೇರೆ ಯಾವುದಾದರೂ ಚಿನ್ಹೆ ಬಂದಿತ್ತಾ? ಒಪ್ಪಿಗೆಯೇ? ಒಪ್ಪಿಗೆಯೇ?
ತಲೆ ಅಲ್ಲಾಡಿಸಿ ಏಕೆಂದರೆ ಬಾಪ್ದಾದಾರವರಿಗೆ ಮಕ್ಕಳ ಮೇಲೆ ಬಹಳ ಪ್ರೀತಿ ಇದೆ. ಒಂಟಿಯಾಗಿ ಹೋಗಲು
ಇಷ್ಟವಿಲ್ಲ ಅಂದಾಗ ಏನು ಮಾಡುತ್ತೀರಿ? ಈಗ ಬಹಳ ತೀವ್ರ ಪುರುಷಾರ್ಥವನ್ನು ಮಾಡಿ ಈಗ ಸಾಧಾರಣ
ಪುರುಷಾರ್ಥ ಸಫಲತೆಯನ್ನು ನೀಡಲು ಸಾಧ್ಯವಿಲ್ಲ.
ಪವಿತ್ರತೆಗೆ ಪರ್ಸನಾಲಿಟಿ,
ರಿಯಾಲಿಟಿ, ರಾಯಲ್ಟಿ (ವ್ಯಕ್ತಿತ್ವ, ಸತ್ಯ, ಘನತೆ) ಎಂದು ಕರೆಯಲಾಗುತ್ತದೆ. ತಮ್ಮ ಘನತೆಯನ್ನು
ನೆನಪು ಮಾಡಿಕೊಳ್ಳಿ. ಅನಾದಿ ಸ್ವರೂಪದಲ್ಲೂ ಸಹ ತಾವೆಲ್ಲಾ ಆತ್ಮರು ತಂದೆಯ ಜೊತೆ ತಮ್ಮ ದೇಶದಲ್ಲಿ
ವಿಶೇಷ ಆತ್ಮರಾಗಿದ್ದೀರಿ. ಹೇಗೆ ಆಕಾಶದಲ್ಲಿ ವಿಶೇಷ ನಕ್ಷತ್ರಗಳು ಹೊಳೆಯುತ್ತವೆ ಹಾಗೆಯೇ ತಾವು
ಅನಾದಿ ರೂಪದಲ್ಲಿ ವಿಶೇಷ ನಕ್ಷತ್ರಗಳು ಹೊಳೆಯುತ್ತೀರಿ. ತಮ್ಮ ಆದಿ ಕಾಲದ ರಾಯಲ್ಟಿಯನ್ನು ನೆನಪು
ಮಾಡಿಕೊಳ್ಳಿ. ನಂತರ ಸತ್ಯಯುಗದಲ್ಲಿ ಯಾವಾಗ ಬರುತ್ತೀರಿ, ದೇವತಾ ರೂಪದ ರಾಯಲ್ಟಿಯನ್ನು ನೆನಪು
ಮಾಡಿಕೊಳ್ಳಿ. ಎಲ್ಲರ ತಲೆಯ ಮೇಲೆ ರಾಯಲ್ಟಿಯ ಬೆಳಕಿನ ಕಿರೀಟವಿದೆ. ಅನಾದಿ, ಆದಿ ಎಷ್ಟೊಂದು
ರಾಯಲ್ಟಿ ಇದೆ? ನಂತರ ದ್ವಾಪರದಲ್ಲಿ ಬರುತ್ತೀರೆಂದರೆ ತಮ್ಮ ಚಿತ್ರಗಳಂತಹ ರಾಯಲ್ಟಿ ಬೇರೆ ಯಾರದೂ
ಇರುವುದಿಲ್ಲ. ನೇತಾಗಳು, ಅಭಿನೇತಾಗಳು, ಧರ್ಮ ಆತ್ಮಗಳ ಚಿತ್ರಗಳು ಇರುತ್ತವೆ, ಆದರೆ ತಮ್ಮ
ಚಿತ್ರಗಳ ಪೂಜೆ ಮತ್ತು ತಮ್ಮ ಚಿತ್ರಗಳ ವಿಶೇಷತೆ ಎಷ್ಟೊಂದು ರಾಯಲ್ಟಿಯಾಗಿರುತ್ತದೆ. ಚಿತ್ರಗಳನ್ನು
ನೋಡೇ ಎಲ್ಲರೂ ಖುಷಿ ಪಡುತ್ತಾರೆ. ಚಿತ್ರಗಳ ಮೂಲಕವೂ ಸಹ ಎಷ್ಟೊಂದು ಆಶೀರ್ವಾದಗಳನ್ನು
ತೆಗೆದುಕೊಳ್ಳುತ್ತಾರೆ. ಈ ಎಲ್ಲಾ ಘನತೆ ಪವಿತ್ರತೆಯದ್ದಾಗಿದೆ. ಪವಿತ್ರತೆ ಬ್ರಾಹ್ಮಣ ಜೀವನದ ಜನ್ಮ
ಸಿದ್ಧ ಅಧಿಕಾರವಾಗಿದೆ. ಪವಿತ್ರತೆಯ ಕೊರತೆ ಸಮಾಪ್ತಿ ಆಗಬೇಕು. ಈ ರೀತಿ ಅಲ್ಲ, ಆಗಿ ಬಿಡುತ್ತದೆ,
ಆ ಸಮಯದಲ್ಲಿ ವೈರಾಗ್ಯ ಬಂದಾಗ ಆಗಿ ಬಿಡುತ್ತದೆ. ಈ ರೀತಿ ಬಹಳ ಒಳ್ಳೊಳ್ಳೆಯ ಮಾತುಗಳನ್ನು
ಹೇಳುತ್ತಾರೆ. ಬಾಬಾ ತಾವು ಚಿಂತೆ ಮಾಡಬೇಡಿ, ಆಗಿ ಬಿಡುತ್ತದೆ. ಆದರೆ ಬಾಪ್ದಾದಾರವರಿಗೆ ಈ ಜನವರಿ
ತಿಂಗಳಿನಲ್ಲಿ ವಿಶೇಷವಾಗಿ ಪವಿತ್ರತೆಯಲ್ಲಿ ಪ್ರತಿಯೊಬ್ಬರು ಸಂಪನ್ನ ಮಾಡಬೇಕು. ಪವಿತ್ರತೆ ಕೇವಲ
ಬ್ರಹ್ಮಚರ್ಯವಲ್ಲ, ವ್ಯರ್ಥ ಸಂಕಲ್ಪವೂ ಸಹ ಅಪವಿತ್ರತೆ ಆಗಿದೆ, ವ್ಯರ್ಥ ಮಾತು, ವ್ಯರ್ಥ ರೂಪದ ಮಾತು
ಯಾವುದಕ್ಕೆ ಕ್ರೋಧದ ಅಂಶ ಆವೇಶ ಎಂದು ಹೇಳಲಾಗುತ್ತದೆ. ದೂರದಿಂದಲೇ ತಮ್ಮನ್ನು ನೋಡಿ ಪವಿತ್ರತೆಯ
ವೈಬ್ರೇಶನ್ ಪಡೆದುಕೊಳ್ಳುವ ಹಾಗೆ ಸಂಸ್ಕಾರವನ್ನು ತಯಾರು ಮಾಡಿಕೊಳ್ಳಿ. ಏಕೆಂದರೆ ತಮ್ಮ ಹಾಗೆ
ಪವಿತ್ರತೆ, ಯಾವುದು ಫಲಿತಾಂಶದಲ್ಲಿ ಆತ್ಮಾವೂ ಸಹ ಪವಿತ್ರ, ಶರೀರವೂ ಸಹ ಪವಿತ್ರ, ಡಬಲ್ ಪವಿತ್ರತೆ
ಪ್ರಾಪ್ತಿ ಆಗುತ್ತದೆ.
ಯಾವಾಗ ಯಾವುದೇ ಮಗು
ಮೊದಲು ಬಂದಾಗ ತಂದೆಯ ಯಾವ ವರದಾನ ಸಿಗುತ್ತದೆ? ನೆನಪಿದೆಯೇ? ಪವಿತ್ರ ಭವ, ಯೋಗಿ ಭವ. ಅಂದಾಗ ಎರಡೂ
ಮಾತುಗಳನ್ನು ಒಂದು ಪವಿತ್ರತೆ ಮತ್ತೊಂದು ಫುಲ್ಸ್ಟಾಪ್, ಯೋಗಿ. ಇಷ್ಟವೇ? ಬಾಪ್ದಾದಾ ಅಮೃತವೇಳೆ
ಚಕ್ಕರ್ ಹಾಕುತ್ತಾರೆ, ಸೆಂಟರಿಗೂ ಸಹ ಚಕ್ಕರ್ ಹಾಕುತ್ತಾರೆ. ಬಾಪ್ದಾದಾರವರಂತೂ ಒಂದು
ಸೆಕೆಂಡಿನಲ್ಲಿ ಎಲ್ಲಾ ಕಡೆ ಚಕ್ಕರ್ ಹಾಕಬಹುದು. ಅಂದಾಗ ಈ ಜನವರಿ ಅವ್ಯಕ್ತ ತಿಂಗಳಿನ ಯಾವುದಾದರೂ
ಹೊಸ ಪ್ಲಾನ್ನ್ನು ತಯಾರು ಮಾಡಿ. ಮನಸಾ ಸೇವೆ, ಮನಸಾ ಸ್ಥಿತಿ ಹಾಗೂ ಅವ್ಯಕ್ತ ಕರ್ಮ ಮತ್ತು ಮಾತನ್ನು
ಹೆಚ್ಚಿಸಿಕೊಳ್ಳಿ. ಅಂದಾಗ 18ನೇ ಜನವರಿ ಬಾಪ್ದಾದಾ ಎಲ್ಲರ ಫಲಿತಾಂಶವನ್ನು ನೋಡುತಾರೆ.
ಪ್ರೀತಿಯಿದೆಯಲ್ಲವೇ, 18ನೇ ಜನವರಿ ಅಮೃತವೇಳೆಯಿಂದ ಪ್ರೀತಿಯ ಮಾತುಗಳನ್ನೇ ಆಡುತ್ತೀರಿ. ಬಾಬಾ
ಅವ್ಯಕ್ತ ಏಕೆ ಆಗಿದ್ದಾರೆ? ಎಂದು ಎಲ್ಲರೂ ದೂರು ಕೊಡುತ್ತಾರೆ. ತಂದೆಯೂ ಸಹ, ಸಾಕಾರದಲ್ಲಿ ಇದ್ದರೂ
ತಂದೆಯ ಸಮಾನ ಯಾವಾಗ ಆಗುತ್ತೀರಿ? ಎಂದು ದೂರು ಕೊಡುತ್ತಾರೆ.
ಈ ದಿನ ಸ್ವಲ್ಪ ವಿಶೇಷ
ಅಟೆನ್ಷನ್ ಸೆಳೆಯುತ್ತಿದ್ದೇವೆ. ಪ್ರೀತಿಯನ್ನೂ ಮಾಡುತ್ತಿದ್ದೇವೆ, ಕೇವಲ ಅಟೆನ್ಷನ್
ಸೆಳೆಯುತ್ತಿಲ್ಲ, ಪ್ರೀತಿಯೂ ಸಹ ಇದೆ ಏಕೆಂದರೆ ನನ್ನ ಒಂದು ಮಗುವೂ ಸಹ ಉಳಿದುಕೊಳ್ಳಬಾರದು ಎಂದು
ತಂದೆ ಇದನ್ನೇ ಬಯಸುತ್ತಾರೆ. ಪ್ರತಿಯೊಂದು ಕರ್ಮದ ಶ್ರೀಮತವನ್ನು ಚೆಕ್ ಮಾಡಿಕೊಳ್ಳಬೇಕು,
ಅಮೃತವೇಳೆಯಿಂದ ಹಿಡಿದು ರಾತ್ರಿಯ ತನಕ ಯಾವುದೆಲ್ಲಾ ಪ್ರತಿಯೊಂದು ಕರ್ಮದ ಶ್ರೀಮತ ಸಿಕ್ಕಿದೆ
ಅದನ್ನು ಚೆಕ್ ಮಾಡಿಕೊಳ್ಳಿ. ಶಕ್ತಿಶಾಲಿ ಆಗಿದ್ದೀರಲ್ಲವೇ? ಜೊತೆಯಲ್ಲಿ ಹೋಗಬೇಕಲ್ಲವೇ!
ಹೋಗಬೇಕಲ್ಲವೇ! ಕೈಯನ್ನು ಎತ್ತಿ. ನಡೆಯಬೇಕಲ್ಲವೇ? ಒಳ್ಳೆಯದು. ಶಿಕ್ಷಕಿಯರು? ಒಳ್ಳೆಯದು.
ಹಿಂದಿನವರು ಕೈ ಎತ್ತಿ. ಕುರ್ಚಿಯವರು ಕೈ ಎತ್ತಿ, ಪಾಂಡವರು ಕೈ ಎತ್ತಿ. ಹಾಗಾದರೆ ಸಮಾನ ಆದಾಗ
ಕೈಯಲ್ಲಿ ಕೈಯನ್ನು ಕೊಟ್ಟು ಜೊತೆಯಲ್ಲಿ ಹೋಗುತ್ತೀರಲ್ಲವೇ. ಮಾಡಲೇಬೇಕು, ಆಗಲೇಬೇಕು. ಈ ದೃಢ
ಸಂಕಲ್ಪವನ್ನು ಮಾಡಿ. 15-20 ದಿನಗಳು ಈ ದೃಢತೆ ಇರುತ್ತದೆ ನಂತರ ನಿಧಾನ-ನಿಧಾನವಾಗಿ ಸ್ವಲ್ಪ
ಹುಡುಗಾಟಿಕೆ ಬಂದು ಬಿಡುತ್ತದೆ. ಅಂದಮೇಲೆ ಹುಡುಗಾಟಿಕೆಯನ್ನು ಸಮಾಪ್ತಿ ಮಾಡಿ. ಹೆಚ್ಚು
ನೋಡಿದ್ದೇವೆ - ಒಂದು ತಿಂಗಳಿನಲ್ಲಿ ಪೂರ್ತಿ ಉಮಸ್ಸು ಇರುತ್ತದೆ, ದೃಢತೆ ಇರುತ್ತದೆ ನಂತರ ಒಂದು
ತಿಂಗಳಾದ ನಂತರ ಸ್ವಲ್ಪ-ಸ್ವಲ್ಪ ಹುಡುಗಾಟಿಕೆ ಶುರು ಆಗಿ ಬಿಡುತ್ತದೆ ಹಾಗೆಯೇ ಈ ವರ್ಷ ಸಮಾಪ್ತಿ
ಆಗಿ ಬಿಡುತ್ತದೆ ಅಂದಮೇಲೆ ಏನು ಸಮಾಪ್ತಿ ಮಾಡುತ್ತೀರಿ? ವರ್ಷ ಸಮಾಪ್ತಿ ಮಾಡುತ್ತೀರಾ? ಅಥವಾ
ವರ್ಷದ ಜೊತೆ ಯಾವುದೆಲ್ಲಾ ಯಾವ ಸಂಕಲ್ಪದಲ್ಲೂ ಸಹ, ಧಾರಣೆಯಲ್ಲೂ ಸಹ ಬಲಹೀನತೆ ಇದೆ ಅದನ್ನು
ಸಮಾಪ್ತಿ ಮಾಡುತ್ತೀರಾ? ಮಾಡುತ್ತೀರಲ್ಲವೇ! ಕೈಯನ್ನು ಎತ್ತುತ್ತಿಲ್ಲ? ಸ್ವತಃವಾಗಿ ಹೃದಯದಲ್ಲಿ ಈಗ
ಮನೆಗೆ ಹೋಗಬೇಕು ಎನ್ನುವ ಈ ರಿಕಾರ್ಡ್ ಮೊಳಗಬೇಕು. ಕೇವಲ ಹೋಗುವುದಲ್ಲ ಆದರೆ ರಾಜ್ಯದಲ್ಲೂ ಸಹ
ಬರಬೇಕು. ಒಳ್ಳೆಯದು. ಯಾರು ಬಾಪ್ದಾದಾರವರೊಂದಿಗೆ ಮಿಲನ ಮಾಡಲು ಮೊದಲನೇ ಬಾರಿ ಬಂದಿದ್ದಾರೆ ಅವರು
ಕೈ ಎತ್ತಿ.
ಮೊದಲನೇ ಬಾರಿ
ಬಂದಿರುವವರಿಗೆ ವಿಶೇಷ ಶುಭಾಷಯಗಳನ್ನು ಕೊಡುತ್ತಿದ್ದೇವೆ. ತಡವಾಗಿ ಬಂದಿದ್ದೀರಿ ಆದರೆ ಬಹಳ ತಡವಾಗಿ
ಬರಲಿಲ್ಲ. ಆದರೆ ತೀವ್ರ ಪುರುಷಾರ್ಥದ ವರದಾನ ಸದಾ ನೆನಪು ಇಟ್ಟುಕೊಳ್ಳಬೇಕು, ತೀವ್ರ
ಪುರುಷಾರ್ಥವನ್ನು ಮಾಡಲೇಬೇಕು. ಮಾಡುತ್ತೇವೆ, ಈ ರೀತಿ ಮಾಡುತ್ತೇವೆ (ಗೆ, ಗೆ) ಎಂದು ಹೇಳಬಾರದು.
ಮಾಡಲೇಬೇಕು. ಕೊನೆಯವರು ಮುಂದೆ ಹೋಗಬಹುದು ಫಸ್ಟ್ ಬರಲೇಬೇಕು. ಒಳ್ಳೆಯದು.
ಎಲ್ಲಾ ಕಡೆಯ ಮಹಾನ್
ಪವಿತ್ರ ಆತ್ಮಗಳಿಗೆ ಬಾಪ್ದಾದಾರವರ ವಿಶೇಷ ಹೃದಯದ ಶುಭಾಷಯಗಳು, ಹೃದಯದ ಪ್ರೀತಿ ಹಾಗೂ ಹೃದಯದಲ್ಲಿ
ಸಮಾವೇಶ ಆಗುವ ಶುಭಾಷಯಗಳು, ಯಾವಾಗ ಬಾಬಾ ಬರುತ್ತಾರೋ ಆಗ ಈ-ಮೇಲ್, ಪತ್ರಗಳು, ಭಿನ್ನ-ಭಿನ್ನ
ಸಾಧನಗಳ ಮೂಲಕ ಎಲ್ಲಾ ಕಡೆಯ ಮಕ್ಕಳು ನೆನಪು-ಪ್ರೀತಿಯನ್ನು ಕಳುಹಿಸಿರುವುದು ಬಾಪ್ದಾದರವರಿಗೆ
ಗೊತ್ತಿದೆ ಹಾಗೂ ಬಾಪ್ದಾದಾರವರಿಗೆ ತಿಳಿಸುವ ಮೊದಲೇ ಯಾರಾದರೂ ಕೊಡಲಿ ಅದಕ್ಕಿಂತ ಮೊದಲೇ ಎಲ್ಲರ
ನೆನಪು-ಪ್ರೀತಿ ತಲುಪಿ ಬಿಡುತ್ತದೆ, ಏಕೆಂದರೆ ಅಂತಹ ಅಗಲಿ ಹೋಗಿ ಸಿಕ್ಕಿರುವ ಮಕ್ಕಳು, ನೆನಪು
ಮಾಡುವ ಮಕ್ಕಳಿದ್ದಾರೆ ಅವರ ಸಂಬಂಧ ಬಹಳ ವೇಗವಾಗಿ ತಲುಪಿ ಬಿಡುತ್ತದೆ, ತಾವು 3-4 ದಿನಗಳ ನಂತರ
ಸನ್ಮುಖದಲ್ಲಿ ಮಿಲನ ಮಾಡುತ್ತೀರಿ ಆದರೆ ಅವರ ನೆನಪು-ಪ್ರೀತಿ ಯಾರು ಸತ್ಯ ಪಾತ್ರಧಾರಿ
ಆತ್ಮಗಳಿದ್ದಾರೆ ಅವರದು ಆ ಘಳಿಗೆ ಬಾಪ್ದಾದಾರವರ ಹತ್ತಿರ ನೆನಪು-ಪ್ರೀತಿ ತಲುಪಿ ಬಿಡುತ್ತದೆ.
ಅಂದಾಗ ಯಾರೆಲ್ಲಾ ಹೃದಯದಲ್ಲೂ ಸಹ ನೆನಪು ಮಾಡಿದ್ದಾರೆ, ಸಾಧನ ಸಿಗಲಿಲ್ಲ ಅವರ ನೆನಪು-ಪ್ರೀತಿಯೂ
ಸಹ ತಲುಪಿದೆ. ಮತ್ತೆ ಬಾಪ್ದಾದಾ ಪ್ರತಿಯೊಬ್ಬ ಮಕ್ಕಳಿಗೆ ಪದಮ-ಪದಮ-ಪದಮದಷ್ಟು ನೆನಪು-ಪ್ರೀತಿಯ
ರೆಸ್ಪಾಂಡ್ ಮಾಡುತ್ತಿದ್ದೇವೆ.
ಬಾಕಿ ಎಲ್ಲಾ ಕಡೆ ಈಗ
ಎರಡು ಶಬ್ದದ ತೀವ್ರ ಪುರುಷಾರ್ಥ ಮಾಡಿ, ಒಂದು ಸಂಪೂರ್ಣ ಪವಿತ್ರತೆ, ಪೂರ್ತಿ ಬ್ರಾಹ್ಮಣ
ಪರಿವಾರದಲ್ಲಿ ಹರಡಿಸಬೇಕು. ಯಾರು ಬಲಹೀನವಾಗಿದ್ದಾರೆ, ಅವರಿಗೆ ಸಹಯೋಗ ಕೊಟ್ಟಾದರೂ ತಯಾರು ಮಾಡಿ.
ಇದು ಬಹಳ ಪುಣ್ಯವಾಗಿದೆ, ಬಿಡಬೇಡಿ. ಇವರಂತೂ ಇರುವುದೇ ಹೀಗೆ, ಇವರು ಬದಲಾವಣೆ ಆಗುವುದೇ ಇಲ್ಲ, ಈ
ಶ್ರಾಪವನ್ನು ಕೊಡಬೇಡಿ. ಪುಣ್ಯದ ಕಾರ್ಯವನ್ನು ಮಾಡಿ. ಬದಲಾವಣೆ ಆಗಿ ತೋರಿಸುತ್ತೇವೆ, ಬದಲಾವಣೆ
ಆಗಲೇ ಬೇಕು. ಅವರ ವಿಶ್ವಾಸವನ್ನು ಹೆಚ್ಚಿಸಿ, ಬಿದ್ದಿರುವವವರನ್ನು ಬೀಳಿಸಬೇಡಿ, ಆಶ್ರಯ ಕೊಡಿ,
ಶಕ್ತಿಯನ್ನು ಕೊಡಿ. ಎಲ್ಲಾಕಡೆ ಖುಷಿಯಿಂದ ಸಂಪನ್ನ, ಖುಷಿ ಹಂಚುವ ಮಕ್ಕಳಿಗೆ ಬಹಳ-ಬಹಳ
ನೆನಪು-ಪ್ರೀತಿ ಹಾಗೂ ನಮಸ್ತೆ.
ವರದಾನ:
ಪರಿಶೀಲನೆ
ಮಾಡುವ ವಿಶೇಷತೆಯನ್ನು ತಮ್ಮ ನಿಜ ಸಂಸ್ಕಾರವನ್ನಾಗಿ ಮಾಡಿಕೊಳ್ಳುವಂತಹ ಮಹಾನ್ ಆತ್ಮ ಭವ.
ಯಾವುದೇ ಸಂಕಲ್ಪ ಮಾಡಿ,
ಮಾತನಾಡಿರಿ, ಕರ್ಮ ಮಾಡಿರಿ, ಸಂಬಂಧ ಅಥವ ಸಂಪರ್ಕದಲ್ಲಿ ಬನ್ನಿರಿ, ಕೇವಲ ಇದರ ಪರಿಶೀಲನೆ ಮಾಡಿರಿ
- ಇದೆಲ್ಲವೂ ತಂದೆಯ ಸಮಾನವಾಗಿ ಇದೆಯೇ? ಮೊದಲು ಸಂತುಲನೆ ಮಾಡಿರಿ ನಂತರ ಕಾರ್ಯ ರೂಪಕ್ಕೆ ತನ್ನಿರಿ.
ಹೇಗೆ ಸ್ಥೂಲವಾಗಿಯೂ ಕೆಲವು ಆತ್ಮರಲ್ಲಿ ಮೊದಲು ಪರಿಶೀಲನೆ ಮಾಡಿದ ನಂತರ ಸ್ವೀಕಾರ ಮಾಡುವ
ಸಂಸ್ಕಾರವಿರುತ್ತದೆ. ಅದೇರೀತಿ ತಾವು ಮಹಾನ್ ಪವಿತ್ರ ಆತ್ಮರಾಗಿದ್ದೀರಿ ಅಂದಮೇಲೆ ಪರಿಶೀಲನೆ
ಮಾಡುವ ಯಂತ್ರದ ಗತಿಯನ್ನು ತೀವ್ರಗೊಳಿಸಿರಿ. ಇದನ್ನು ತಮ್ಮ ನಿಜ ಸಂಸ್ಕಾರವನ್ನಾಗಿ ಮಾಡಿಕೊಳ್ಳಿರಿ
- ಇದೇ ಅತಿ ಶ್ರೇಷ್ಠವಾದ ಮಹಾನತೆಯಾಗಿದೆ.
ಸ್ಲೋಗನ್:
ಸಂಪೂರ್ಣ
ಪವಿತ್ರ ಮತ್ತು ಯೋಗಿ ಆಗುವುದೇ ಸ್ನೇಹದ ಪ್ರತ್ಯರ್ಪಣೆ ಕೊಡುವುದಾಗಿದೆ.
ಅವ್ಯಕ್ತ ಸೂಚನೆಗಳು:– ಈ
ಅವ್ಯಕ್ತ ಮಾಸದಲ್ಲಿ ಬಂಧನ ಮುಕ್ತರಾಗಿ ಜೀವನ ಮುಕ್ತ ಸ್ಥಿತಿಯ ಅನುಭವ ಮಾಡಿರಿ.
ಈಗ ಯಾವ ಯಾವ
ಪರಿಸ್ಥಿತಿಗಳು ಬರುತ್ತಿವೆಯೋ, ಅಥವಾ ಮುಂದೆ ಬರಲಿವೆಯೋ–ಪ್ರಕೃತಿಯ ಐದು ತತ್ತ್ವಗಳೇ ಚೆನ್ನಾಗಿ
ಏರುಪೇರು ಮಾಡುವ ಪ್ರಯತ್ನ ಮಾಡುವವು. ಆದರೆ ಜೀವನಮುಕ್ತ, ವಿಧೇಹಿ ಸ್ಥಿತಿಯ ಅಭ್ಯಾಸಿ ಆತ್ಮವು ಅಚಲ–ಅಡೋಲವಾಗಿ,
ಪಾಸ್ ವಿತ್ ಹಾನರ್ ಆಗಿ, ಎಲ್ಲಾ ಪರಿಸ್ಥಿತಿಗಳನ್ನೂ ಸಹಜವಾಗಿ ಪಾಸ್ ಮಾಡಿಕೊಂಡು ಹೋಗುತ್ತದೆ.
ಆದ್ದರಿಂದ ನಿರಂತರ ಕರ್ಮಯೋಗಿ, ನಿರಂತರ ಸಹಜಯೋಗಿ, ನಿರಂತರ ಮುಕ್ತ ಆತ್ಮದ ಸಂಸ್ಕಾರಗಳನ್ನು
ಈಗಿನಿಂದಲೇ ಅನುಭವದಲ್ಲಿ ತರಬೇಕಾಗಿದೆ.