04.03.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಯಾರು
ಆರಂಭದಿಂದ ಭಕ್ತಿ ಮಾಡಿದ್ದಾರೆ, 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರು ಈ ಜ್ಞಾನವನ್ನು
ಬಹಳ ರುಚಿಯಿಂದ ಕೇಳುತ್ತಾರೆ, ಸನ್ನೆಯಿಂದಲೇ ತಿಳಿದುಕೊಳ್ಳುತ್ತಾರೆ”
ಪ್ರಶ್ನೆ:
ದೇವಿ-ದೇವತಾ
ಮನೆತನಕ್ಕೆ ಸಮೀಪದ ಆತ್ಮಗಳೇ ಅಥವಾ ದೂರದವರೇ ಎಂಬುದನ್ನು ಪರಿಶೀಲನೆ ಮಾಡುವುದು ಹೇಗೆ?
ಉತ್ತರ:
ಯಾರು ನಿಮ್ಮ
ದೇವತಾ ಮನೆತನದ ಆತ್ಮಗಳಿರುವರೋ ಅವರಿಗೆ ಜ್ಞಾನದ ಎಲ್ಲಾ ಮಾತುಗಳು ಕೇಳುತ್ತಿದ್ದಂತೆಯೇ
ಸರಿಯೆನಿಸುತ್ತದೆ. ಅವರು ತಬ್ಬಿಬ್ಬಾಗುವುದಿಲ್ಲ. ಎಷ್ಟು ಹೆಚ್ಚಿನ ಭಕ್ತಿ ಮಾಡಿರುವರೋ ಅಷ್ಟು
ಹೆಚ್ಚು ಜ್ಞಾನವನ್ನು ಕೇಳುವ ಪ್ರಯತ್ನ ಪಡುತ್ತಾರೆ ಅಂದಾಗ ಮಕ್ಕಳು ನಾಡಿಯನ್ನು ನೋಡಿ ಸೇವೆ
ಮಾಡಬೇಕು.
ಓಂ ಶಾಂತಿ.
ಆತ್ಮೀಯ ತಂದೆಯು ಕುಳಿತು ಆತ್ಮೀಯ ಮಕ್ಕಳಿಗೆ ತಿಳಿಸುತ್ತಾರೆ. ಇದನ್ನು ಮಕ್ಕಳು
ತಿಳಿದುಕೊಂಡಿದ್ದೀರಿ - ತಂದೆಯು ನಿರಾಕಾರನಾಗಿದ್ದಾರೆ, ಈ ಶರೀರದ ಮೂಲಕ ಕುಳಿತು ತಿಳಿಸುತ್ತಾರೆ,
ನಾವಾತ್ಮಗಳೂ ಸಹ ನಿರಾಕಾರಿಯಾಗಿದ್ದೇವೆ, ಈ ಶರೀರದಿಂದ ಕೇಳುತ್ತೇವೆ. ಅಂದಾಗ ಈಗ ಇಬ್ಬರೂ ತಂದೆಯರು
ಒಟ್ಟಿಗೆ ಇದ್ದಾರಲ್ಲವೆ. ಇಬ್ಬರೂ ತಂದೆಯರು ಇಲ್ಲಿದ್ದಾರೆಂಬುದು ಮಕ್ಕಳಿಗೆ ತಿಳಿದಿದೆ. ಮೂರನೇ
ತಂದೆಯನ್ನಂತೂ ಅರಿತುಕೊಂಡಿದ್ದೀರಿ ಆದರೆ ಅವರಿಗಿಂತಲೂ ಇವರೇ (ಬ್ರಹ್ಮಾ) ಒಳ್ಳೆಯವರಾಗಿದ್ದಾರೆ.
ಇವರಿಗಿಂತಲೂ ಶಿವತಂದೆಯು ಇನ್ನೂ ಒಳ್ಳೆಯವರಾಗಿದ್ದಾರೆ. ನಂಬರ್ವಾರ್ ಇದ್ದಾರಲ್ಲವೆ. ಆದ್ದರಿಂದ ಆ
ಲೌಕಿಕದಿಂದ ಸಂಬಂಧವು ತುಂಡಾಗಿ ಇವರಿಬ್ಬರೊಂದಿಗೆ ಸಂಬಂಧ ಸೇರ್ಪಡುತ್ತದೆ. ಮನುಷ್ಯರಿಗೆ ಹೇಗೆ
ತಿಳಿಸಿಕೊಡಬೇಕು ಎಂಬುದು ತಂದೆಯು ತಿಳಿಸುತ್ತಾರೆ. ನಿಮ್ಮ ಬಳಿ ಮೇಳ, ಪ್ರದರ್ಶನಿಯಲ್ಲಿ ಅನೇಕರು
ಬರುತ್ತಾರೆ. ಇದೂ ಸಹ ನಿಮಗೆ ಅರ್ಥವಾಗಿದೆ, ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ.
ಅಂದಾಗ ಇವರು 84 ಜನ್ಮಗಳನ್ನು ತೆಗೆದುಕೊಳ್ಳುವವರೇ ಅಥವಾ 10 ಜನ್ಮಗಳನ್ನು ತೆಗೆದುಕೊಳ್ಳುವವರೇ
ಅಥವಾ 20 ಜನ್ಮಗಳನ್ನು ತೆಗೆದುಕೊಳ್ಳುವವರೇ ಎಂದು ಹೇಗೆ ತಿಳಿಯುತ್ತದೆ? ಈಗ ನೀವು ಮಕ್ಕಳಂತೂ
ತಿಳಿದುಕೊಂಡಿರುವಿರಿ ಯಾರು ಆರಂಭದಿಂದ ಹೆಚ್ಚಿನ ಭಕ್ತಿ ಮಾಡಿರುವರೋ ಅವರಿಗೆ ಫಲವೂ ಸಹ ಅಷ್ಟೇ
ಬೇಗನೆ ಮತ್ತು ಒಳ್ಳೆಯ ಫಲವು ಸಿಗುವುದು. ಭಕ್ತಿಯನ್ನು ಸ್ವಲ್ಪ ಮಾಡಿದರೆ ಮತ್ತು ತಡವಾಗಿ ಮಾಡಿದರೆ
ಫಲವೂ ಸಹ ಅಷ್ಟೇ ಕಡಿಮೆ ಮತ್ತು ತಡವಾಗಿ ಸಿಗುವುದು. ಇದನ್ನು ತಂದೆಯು ಸೇವೆ ಮಾಡುವ ಮಕ್ಕಳಿಗಾಗಿ
ತಿಳಿಸುತ್ತಾರೆ. ತಿಳಿಸಿ, ನೀವು ಭಾರತವಾಸಿಯರಾಗಿದ್ದೀರಿ ಅಂದಮೇಲೆ ನೀವು ದೇವಿ-ದೇವತೆಗಳನ್ನು
ಒಪ್ಪುತ್ತೀರಾ? ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ. ಯಾರು 84 ಜನ್ಮಗಳನ್ನು
ತೆಗೆದುಕೊಳ್ಳುವವರೋ, ಆರಂಭದಿಂದ ಭಕ್ತಿ ಮಾಡಿರುವರೋ ಅವರು ಅವಶ್ಯವಾಗಿ ಆದಿಸನಾತನ ದೇವಿ-ದೇವತಾ
ಧರ್ಮವಿತ್ತು ಎಂಬುದು ಬಹಳ ಬೇಗನೆ ಅರ್ಥಮಾಡಿಕೊಳ್ಳುತ್ತಾರೆ. ಬಹಳ ರುಚಿಯಿಂದ ಕೇಳತೊಡಗುತ್ತಾರೆ.
ಕೆಲವರಂತೂ ಹಾಗೆಯೇ ನೋಡಿಕೊಂಡು ಹೊರಟುಹೋಗುತ್ತಾರೆ. ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲವೇನೋ
ಎನ್ನುವಂತೆ ಏನನ್ನೂ ಕೇಳದೆಯೇ ಹೊರಟುಹೋಗುತ್ತಾರೆ. ಅಂತಹವರು ಇಲ್ಲಿಯವರಲ್ಲವೆಂದು
ಅರ್ಥಮಾಡಿಕೊಳ್ಳಬೇಕು. ಮುಂದೆ ಹೋದಂತೆ ಅವರು ತಿಳಿದುಕೊಳ್ಳಲೂಬಹುದು. ಕೆಲವರಿಗೆ ತಿಳಿಸಿದ ತಕ್ಷಣ
ತಲೆಯನ್ನಲುಗಾಡಿಸುತ್ತಿರುತ್ತಾರೆ. ಅವಶ್ಯವಾಗಿ ಈ ಲೆಕ್ಕದಿಂದ ಅವರದು 84 ಜನ್ಮಗಳು ಸರಿಯಾಗಿದೆ
ಎಂದು ತಿಳಿಯುತ್ತದೆ. ಒಂದುವೇಳೆ ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂಬುದನ್ನು ನಾವು
ಹೇಗೆ ನಂಬುವುದು ಎಂದು ಕೇಳುತ್ತಾರೆಂದರೆ ಆಗ ತಿಳಿಸಿ, ಎಂಬತ್ನಾಲ್ಕು ಜನ್ಮಗಳು
ತೆಗೆದುಕೊಂಡಿಲ್ಲವೆಂದರೆ ಎಂಬತ್ತೆರಡೇ ಇರಲಿ. ದೇವತಾ ಧರ್ಮದಲ್ಲಂತೂ ಬಂದಿರುತ್ತೀರಿ. ನೋಡಿ,
ಬುದ್ಧಿಯಲ್ಲಿ ಅವರಿಗೆ ಇದು ಸರಿಯೆನಿಸಲಿಲ್ಲವೆಂದರೆ ಇವರು 84 ಜನ್ಮಗಳನ್ನು ತೆಗೆದುಕೊಳ್ಳುವವರಲ್ಲ
ಎಂದು ತಿಳಿಯಿರಿ. ದೂರದವರು ಕಡಿಮೆ ಕೇಳುತ್ತಾರೆ. ಯಾರು ಬಹಳ ಭಕ್ತಿ ಮಾಡಿರುವರೋ ಅವರು
ಹೆಚ್ಚಿನದಾಗಿ ಕೇಳುವ ಪ್ರಯತ್ನ ಪಡುತ್ತಾರೆ. ಬಹಳ ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ. ಕಡಿಮೆ
ಅರ್ಥಮಾಡಿಕೊಳ್ಳುತ್ತಾರೆಂದರೆ ಇವರು ತಡವಾಗಿ ಬರುವವರೆಂದು ತಿಳಿಯಿರಿ. ಭಕ್ತಿಯನ್ನೂ ಸಹ ಅವರು
ತಡವಾಗಿಯೇ ಮಾಡಿರುತ್ತಾರೆ. ಬಹಳ ಭಕ್ತಿ ಮಾಡುವವರು ಸನ್ನೆಯಿಂದಲೇ ತಿಳಿಯುತ್ತಾರೆ. ನಾಟಕವು
ಪುನರಾವರ್ತನೆಯಾಗುತ್ತದೆಯಲ್ಲವೆ. ಎಲ್ಲವೂ ಭಕ್ತಿಯ ಮೇಲೆ ಆಧಾರಿತವಾಗಿದೆ. ಇವರು (ಬ್ರಹ್ಮಾ)
ಎಲ್ಲರಿಗಿಂತ ಹೆಚ್ಚು ಭಕ್ತಿ ಮಾಡಿದ್ದಾರಲ್ಲವೆ. ಕಡಿಮೆ ಭಕ್ತಿ ಮಾಡಿದರೆ ಫಲವು ಕಡಿಮೆ ಸಿಗುವುದು.
ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಮಂಧಬುದ್ಧಿಯವರು ಧಾರಣೆ ಮಾಡಲು ಸಾಧ್ಯವಿಲ್ಲ. ಈ ಮೇಳ,
ಪ್ರದರ್ಶನಿಗಳು ಆಗುತ್ತಿರುತ್ತವೆ, ಎಲ್ಲಾ ಭಾಷೆಗಳಲ್ಲಿ ಹೊರಬರುತ್ತವೆ. ಇಡೀ ಪ್ರಪಂಚಕ್ಕೆ
ತಿಳಿಸಬೇಕಾಗಿದೆಯಲ್ಲವೆ - ನೀವು ಸತ್ಯ-ಸತ್ಯವಾದ ಪೈಗಂಬರರು ಮತ್ತು ಸಂದೇಶ ಪುತ್ರರಾಗಿದ್ದೀರಿ. ಆ
ಧರ್ಮಸ್ಥಾಪಕರಂತೂ ಏನೂ ಮಾಡುವುದಿಲ್ಲ. ಅವರು ಗುರುಗಳೂ ಅಲ್ಲ. ಗುರುವೆಂದು ಹೇಳುತ್ತಾರೆ ಆದರೆ
ಅವರೇನು ಸದ್ಗತಿ ದಾತನಾಗಿದ್ದಾರೆಯೇ? ಅವರು ಪಾತ್ರವನ್ನಭಿನಯಿಸಲು ಬಂದಾಗ ಅವರ ಸಂಸ್ಥೆಯೇ
ಇರುವುದಿಲ್ಲ ಅಂದಮೇಲೆ ಯಾರ ಸದ್ಗತಿ ಮಾಡುತ್ತಾರೆ? ಯಾರು ಸದ್ಗತಿ ನೀಡುವರೋ, ದುಃಖಧಾಮದಿಂದ
ಶಾಂತಿಯಲ್ಲಿ ಕರೆದುಕೊಂಡು ಹೋಗುವರೋ ಅವರೇ ಗುರುಗಳಾಗಿದ್ದಾರೆ. ಕ್ರೈಸ್ಟ್ ಮೊದಲಾದವರು ಗುರುಗಳಲ್ಲ,
ಅವರು ಕೇವಲ ಧರ್ಮಸ್ಥಾಪಕರಾಗಿದ್ದಾರೆ. ಅನ್ಯ ಯಾವುದೇ ಸ್ಥಾನಮಾನವಿಲ್ಲ, ಯಾರು ಮೊಟ್ಟಮೊದಲು
ಸತೋಪ್ರಧಾನತೆಯಲ್ಲಿದ್ದು ನಂತರ ಸತೋ, ರಜೋ, ತಮೋದಲ್ಲಿ ಬರುವರೋ ಅವರಿಗೆ ಸ್ಥಾನಮಾನವಿರುತ್ತದೆ.
ಧರ್ಮಸ್ಥಾಪಕರಂತೂ ತಮ್ಮ ಧರ್ಮಸ್ಥಾಪನೆ ಮಾಡಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ.
ಮತ್ತೆ ಯಾವಾಗ ಎಲ್ಲರದು ತಮೋಪ್ರಧಾನ ಸ್ಥಿತಿಯಾಗುವುದೋ ಆಗ ತಂದೆಯು ಬಂದು ಎಲ್ಲರನ್ನೂ
ಪವಿತ್ರರನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತಾರೆ. ಪಾವನರಾದ ಮೇಲೆ ಮತ್ತೆ ಈ ಪತಿತ
ಪ್ರಪಂಚದಲ್ಲಿರುವುದಿಲ್ಲ. ಪವಿತ್ರ ಆತ್ಮಗಳು ಮುಕ್ತಿಯಲ್ಲಿ ಹೊರಟುಹೋಗುತ್ತಾರೆ ನಂತರ
ಜೀವನ್ಮುಕ್ತಿಯಲ್ಲಿ ಬರುತ್ತಾರೆ. ಭಗವಂತನು ಮುಕ್ತಿದಾತನಾಗಿದ್ದಾರೆ, ಮಾರ್ಗದರ್ಶಕನಾಗಿದ್ದಾರೆಂದು
ಹೇಳುತ್ತಾರೆ ಆದರೆ ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ಅರ್ಥವನ್ನು ತಿಳಿದುಕೊಂಡರೆ ಅವರನ್ನೂ
ತಿಳಿದುಕೊಳ್ಳುವರು. ಸತ್ಯಯುಗದಲ್ಲಿ ಭಕ್ತಿಮಾರ್ಗದ ಶಬ್ಧಗಳೇ ಇರುವುದಿಲ್ಲ.
ಎಲ್ಲರೂ ತಮ್ಮ-ತಮ್ಮ
ಪಾತ್ರವನ್ನು ಅಭಿನಯಿಸುವುದೂ ಸಹ ನಾಟಕದಲ್ಲಿ ನಿಗಧಿಯಾಗಿದೆ, ಯಾರೊಬ್ಬರೂ ಸದ್ಗತಿಯನ್ನು ಹೊಂದಲು
ಸಾಧ್ಯವಿಲ್ಲ. ಈಗ ನಿಮಗೆ ಈ ಜ್ಞಾನವು ಸಿಗುತ್ತಿದೆ. ತಂದೆಯೂ ಸಹ ಹೇಳುತ್ತಾರೆ - ನಾನು
ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ, ಇದಕ್ಕೆ ಕಲ್ಯಾಣಕಾರಿ ಸಂಗಮಯುಗವೆಂದು
ಕರೆಯಲಾಗುತ್ತದೆ. ಮತ್ತ್ಯಾವುದೇ ಯುಗವು ಕಲ್ಯಾಣಕಾರಿಯಲ್ಲ. ಸತ್ಯಯುಗ ಮತ್ತು ತ್ರೇತಾಯುಗದ
ಸಂಗಮಕ್ಕೆ ಯಾವುದೇ ಮಹತ್ವವಿಲ್ಲ. ಸೂರ್ಯವಂಶಿಯರು ಕಳೆದಮೇಲೆ ಚಂದ್ರವಂಶಿ ರಾಜ್ಯವು ನಡೆಯುತ್ತದೆ.
ಮತ್ತೆ ಚಂದ್ರವಂಶಿಯರಿಂದ ವೈಶ್ಯವಂಶಿಯರಾದಾಗ ಚಂದ್ರವಂಶವು ಕಳೆದುಹೋಗುತ್ತದೆ. ಅದರ ನಂತರ ಏನಾದೆವು
ಎಂಬುದೇ ತಿಳಿದಿರುವುದಿಲ್ಲ. ಚಿತ್ರಗಳಿರುತ್ತವೆ, ಅದರಿಂದ ಈ ಸೂರ್ಯವಂಶಿಯರು ನಮ್ಮ
ಹಿರಿಯರಾಗಿದ್ದರು, ಈ ಚಂದ್ರವಂಶಿಯರಿದ್ದರು ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇವರು (ಸತ್ಯಯುಗದಲ್ಲಿ)
ಮಹಾರಾಜ, ಇವರು ರಾಜ, ಹಿರಿಯ ಧನವಂತರಾಗಿದ್ದರು ಆದರೂ ಸಹ ಅವರು ಅನುತ್ತೀರ್ಣರಾದರಲ್ಲವೆ. ಈ
ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ಈ ಸಮಯದಲ್ಲಿ ತಂದೆಯು ತಿಳಿಸಿಕೊಡುತ್ತಾರೆ. ಹೇ ತಂದೆಯೇ
ನಮ್ಮನ್ನು ಮುಕ್ತಗೊಳಿಸಿ, ಪತಿತರಿಂದ ಪಾವನರನ್ನಾಗಿ ಮಾಡಿ ಎಂದು ಎಲ್ಲರೂ ಕೇಳುತ್ತಾರೆ. ಸುಖವನ್ನು
ಕೊಡಿ ಎಂದು ಹೇಳುವುದಿಲ್ಲ ಏಕೆಂದರೆ ಸುಖಕ್ಕಾಗಿ ‘ಸುಖವು ಕಾಗವಿಷ್ಟ ಸಮಾನ’ ಎಂದು ಸನ್ಯಾಸಿಗಳು
ಶಾಸ್ತ್ರಗಳಲ್ಲಿ ನಿಂದನೆ ಮಾಡಿಬಿಟ್ಟಿದ್ದಾರೆ. ಮನಃಶ್ಯಾಂತಿ ಹೇಗೆ ಸಿಗುವುದೆಂದು ಎಲ್ಲರೂ
ಕೇಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಿಮಗೆ ಸುಖ-ಶಾಂತಿ ಎರಡೂ ಸಿಗುತ್ತವೆ.
ಎಲ್ಲಿ ಶಾಂತಿಯಿರುವುದು ಅಲ್ಲಿ ಸುಖವಿರುತ್ತದೆ. ಎಲ್ಲಿ ಅಶಾಂತಿಯಿರುವುದೋ ಅಲ್ಲಿ ದುಃಖವಿರುತ್ತದೆ.
ಸತ್ಯಯುಗದಲ್ಲಿ ಸುಖ-ಶಾಂತಿಯಿರುತ್ತದೆ, ಇಲ್ಲಿ ಅಶಾಂತಿಯಿದೆ. ಇದನ್ನು ತಂದೆಯೇ ತಿಳಿಸುತ್ತಾರೆ -
ನಿಮ್ಮನ್ನು ಮಾಯಾರಾವಣನು ಎಷ್ಟೊಂದು ತುಚ್ಛಬುದ್ಧಿಯವರನ್ನಾಗಿ ಮಾಡಿಬಿಟ್ಟಿದ್ದಾನೆ. ಇದೂ ಸಹ
ನಾಟಕದಲ್ಲಿ ಮಾಡಲ್ಪಟ್ಟಿದೆ. ತಂದೆಯು ತಿಳಿಸುತ್ತಾರೆ - ನಾನೂ ಸಹ ನಾಟಕದ ಬಂಧನದಲ್ಲಿ
ಬಂಧಿತನಾಗಿದ್ದೇನೆ, ನನ್ನ ಪಾತ್ರವೇ ಈ ಸಮಯದಲ್ಲಿದೆ, ಅದನ್ನು ನಾನು ಅಭಿನಯಿಸುತ್ತಿದ್ದೇನೆ. ಬಾಬಾ,
ಕಲ್ಪ-ಕಲ್ಪವೂ ತಾವೇ ಬಂದು ಭ್ರಷ್ಟಾಚಾರಿ ಪತಿತರಿಂದ ಶ್ರೇಷ್ಠಾಚಾರಿ ಪಾವನರನ್ನಾಗಿ ಮಾಡುತ್ತೀರೆಂದು
ಹೇಳುತ್ತೀರಿ. ನೀವು ರಾವಣನ ಮೂಲಕವೇ ಭ್ರಷ್ಟಾಚಾರಿಗಳಾಗಿದ್ದೀರಿ, ಈಗ ತಂದೆಯು ಬಂದು ಮನುಷ್ಯರಿಂದ
ದೇವತೆಗಳನ್ನಾಗಿ ಮಾಡುತ್ತಾರೆ. ಇದರ ಯಾವ ಗಾಯನವಿದೆಯೋ ಅದರ ಅರ್ಥವನ್ನು ತಂದೆಯೇ ಬಂದು
ತಿಳಿಸುತ್ತಾರೆ. ಆ ಸಿಖ್ಖರೂ ಸಹ ತಿಳಿದುಕೊಂಡಿಲ್ಲ. ಅಕಾಲ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೆ
ಆದರೆ ಅರ್ಥವೇನನ್ನೂ ತಿಳಿದುಕೊಂಡಿಲ್ಲ. ತಂದೆಯು ನಿಮಗೆ ಇದರ ಅರ್ಥವನ್ನು ತಿಳಿಸಿದ್ದಾರೆ -
ಆತ್ಮಗಳು ಅಕಾಲಮೂರ್ತರಾಗಿದ್ದೀರಿ. ಆತ್ಮಕ್ಕೆ ಈ ಶರೀರವು ರಥವಾಗಿದೆ, ಇದರ ಮೇಲೆ ಅಕಾಲ ಅರ್ಥಾತ್
ಯಾವುದನ್ನು ಕಾಲವು ಕಬಳಿಸುವುದಿಲ್ಲವೋ ಅಂತಹ ಆತ್ಮವು ವಿರಾಜಮಾನವಾಗಿದೆ. ಸತ್ಯಯುಗದಲ್ಲಿ
ನಿಮ್ಮನ್ನು ಕಾಲವು (ಮೃತ್ಯು) ಕಬಳಿಸುವುದಿಲ್ಲ, ಎಂದಿಗೂ ಅಕಾಲ ಮೃತ್ಯುವಾಗುವುದಿಲ್ಲ, ಅದು
ಅಮರಲೋಕವಾಗಿದೆ, ಇದು ಮೃತ್ಯುಲೋಕವಾಗಿದೆ. ಅಮರಲೋಕ, ಮೃತ್ಯುಲೋಕದ ಅರ್ಥವನ್ನು ಯಾರೂ
ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಬಹಳ ಸಹಜಮಾತನ್ನು ತಿಳಿಸುತ್ತೇನೆ,
ಕೇವಲ ನನ್ನೊಬ್ಬನನ್ನೇ ನೆನಪು ಮಾಡಿ ಅದರಿಂದ ನೀವು ಪಾವನರಾಗಿಬಿಡುತ್ತೀರಿ. ಪತಿತ-ಪಾವನ..... ಎಂದು
ಸಾಧು-ಸಂತರೂ ಸಹ ಹಾಡುತ್ತಾರೆ. ಪತಿತ-ಪಾವನ ತಂದೆಯನ್ನು ಕರೆಯುತ್ತಾರೆ. ನೀವು ಎಲ್ಲಿಯಾದರೂ ಹೋಗಿ
ಅಲ್ಲಿ ಪತಿತ-ಪಾವನ...... ಎಂದು ಅವಶ್ಯವಾಗಿ ಹೇಳುತ್ತಾರೆ. ಸತ್ಯವನ್ನೆಂದೂ ಮುಚ್ಚಿಡಲು
ಸಾಧ್ಯವಿಲ್ಲ. ನೀವು ಈಗ ತಿಳಿದುಕೊಂಡಿದ್ದೀರಿ - ಈಗ ಪತಿತ-ಪಾವನ ತಂದೆಯು ಬಂದಿದ್ದಾರೆ, ನಮಗೆ
ಮಾರ್ಗವನ್ನು ತಿಳಿಸುತ್ತಿದ್ದಾರೆ. ಕಲ್ಪದ ಹಿಂದೆಯೂ ಸಹ ತಿಳಿಸಿದ್ದರು ತಮ್ಮನ್ನು ಆತ್ಮವೆಂದು
ತಿಳಿದು ನನ್ನೊಬ್ಬನನ್ನೇ ನೆನಪು ಮಾಡಿದರೆ ನೀವು ಸತೋಪ್ರಧಾನರಾಗುತ್ತೀರಿ. ನೀವೆಲ್ಲರೂ ನಾನು
ಪ್ರಿಯತಮನ ಪ್ರಿಯತಮೆಯರಾಗಿದ್ದೀರಿ. ಆ ಲೌಕಿಕ ಪ್ರಿಯತಮ-ಪ್ರಿಯತಮೆಯರು ಕೇವಲ ಒಂದು ಜನ್ಮಕ್ಕಾಗಿಯೇ
ಇರುತ್ತಾರೆ. ಆದರೆ ನೀವು ಜನ್ಮ-ಜನ್ಮಾಂತರದ ಪ್ರಿಯತಮೆಯರಾಗಿದ್ದೀರಿ. ಹೇ ಪ್ರಭು ಎಂದು ನೆನಪು
ಮಾಡುತ್ತಾ ಬಂದಿದ್ದೀರಿ. ನೀಡುವವರು ಒಬ್ಬರೆ ತಂದೆಯಲ್ಲವೆ. ಮಕ್ಕಳು ಎಲ್ಲವನ್ನೂ ತಂದೆಯಿಂದಲೇ
ಕೇಳುತ್ತಾರೆ, ಆತ್ಮವು ದುಃಖಿಯಾದಾಗಲೂ ತಂದೆಯನ್ನೇ ನೆನಪು ಮಾಡುತ್ತದೆ. ಸುಖದಲ್ಲಿ ಯಾರೂ ನೆನಪು
ಮಾಡುವುದಿಲ್ಲ. ಬಾಬಾ, ಬಂದು ಸದ್ಗತಿಯನ್ನು ಕೊಡಿ ಎಂದು ದುಃಖದಲ್ಲಿಯೇ ನೆನಪು ಮಾಡುತ್ತಾರೆ. ಹೇಗೆ
ಗುರುಗಳ ಬಳಿ ನಮಗೆ ಮಕ್ಕಳನ್ನು ದಯಪಾಲಿಸಿ ಎಂದು ಹೇಳುತ್ತಾರೆ. ಒಳ್ಳೆಯದು, ಮಗುವಾಯಿತೆಂದರೆ ಬಹಳ
ಖುಷಿಯಾಗುವರು, ಮಕ್ಕಳಾಗಲಿಲ್ಲವೆಂದರೆ ಇದು ಈಶ್ವರನ ಇಚ್ಛೆಯೆಂದು ಹೇಳುತ್ತಾರೆ. ಡ್ರಾಮಾವನ್ನು
ಅವರು ಅರಿತುಕೊಂಡೇ ಇಲ್ಲ. ಒಂದುವೇಳೆ ಅವರು ಡ್ರಾಮವೆಂದು ಹೇಳಿದ್ದೇ ಆದರೆ ಮತ್ತೆಲ್ಲವೂ
ಅರ್ಥವಾಗಬೇಕು. ನೀವು ಡ್ರಾಮವನ್ನು ಚೆನ್ನಾಗಿ ಅರಿತುಕೊಂಡಿದ್ದೀರಿ ಮತ್ತ್ಯಾರೂ ಅರಿತುಕೊಂಡಿಲ್ಲ.
ಇದು ಯಾವುದೇ ಶಾಸ್ತ್ರಗಳಲ್ಲಿಯೂ ಇಲ್ಲ, ಡ್ರಾಮವೆಂದರೆ ಡ್ರಾಮ. ಅದರ ಆದಿ-ಮಧ್ಯ-ಅಂತ್ಯದ ಬಗ್ಗೆ
ತಿಳಿದಿರಬೇಕು. ತಂದೆಯು ತಿಳಿಸುತ್ತಾರೆ - ನಾನು ಪ್ರತೀ 5000 ವರ್ಷಗಳ ನಂತರ ಬರುತ್ತೇನೆ, ಈ
ನಾಲ್ಕೂ ಯುಗಗಳು ಸರಿಸಮನಾಗಿದೆ. ಸ್ವಸ್ತಿಕ್ ಚಿತ್ರಕ್ಕೆ ಬಹಳ ಮಹತ್ವಿಕೆಯಿದೆಯಲ್ಲವೆ.
ಖಾತೆಯಲ್ಲಿಯೂ ಸಹ ಈ ಸ್ವಸ್ತಿಕ್ ಚಿತ್ರವನ್ನು ಬಿಡಿಸುತ್ತಾರೆ. ಇದೂ ಸಹ ಖಾತೆಯಾಗಿದೆಯಲ್ಲವೆ.
ನಮ್ಮದು ಲಾಭವು ಹೇಗಾಗುತ್ತದೆ ಮತ್ತು ನಷ್ಟವು ಹೇಗಾಗುತ್ತದೆ, ನಷ್ಟವಾಗುತ್ತಾ-ಆಗುತ್ತಾ ಈಗ
ಸಂಪೂರ್ಣ ನಷ್ಟವಾಗಿಬಿಟ್ಟಿದೆ. ಇದು ಸೋಲು-ಗೆಲುವಿನ ಆಟವಾಗಿದೆ. ಹಣ ಮತ್ತು ಆರೋಗ್ಯವಿದ್ದಾಗ
ಸುಖವಿರುತ್ತದೆ, ಹಣ-ಆರೋಗ್ಯವಿಲ್ಲವೆಂದರೆ ಸುಖವೂ ಇಲ್ಲ. ನಿಮಗೆ ಆರೋಗ್ಯ-ಐಶ್ವರ್ಯ ಎರಡನ್ನೂ
ಕೊಡುತ್ತೇನೆ, ಆಗ ಸಂತೋಷವು ಇದ್ದೇ ಇರುತ್ತದೆ.
ಯಾರಾದರೂ ಶರೀರಬಿಟ್ಟರೆ
ಇಂತಹವರು ಸ್ವರ್ಗಸ್ಥರಾದರೆಂದು ಹೇಳುತ್ತಾರೆ. ಆದರೆ ಒಳಗೆ ದುಃಖಿಯಾಗುತ್ತಿರುತ್ತಾರೆ. ಅರೆ! ಇದರಲಿ
ಇನ್ನೂ ಹೆಚ್ಚು ಖುಷಿಯಾಗಬೇಕಲ್ಲವೆ. ಅವರ ಆತ್ಮವನ್ನು ಮತ್ತೆ ನರಕದಲ್ಲಿ ಏಕೆ ಕರೆಯುತ್ತೀರಿ? ಏನೂ
ತಿಳುವಳಿಕೆಯಿಲ್ಲ. ಈಗ ತಂದೆಯು ಬಂದು ಇವೆಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಬೀಜ ಮತ್ತು ವೃಕ್ಷದ
ರಹಸ್ಯವನ್ನು ತಿಳಿಸಿಕೊಡುತ್ತಾರೆ. ಈ ರೀತಿ ವೃಕ್ಷವನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಈ
ಚಿತ್ರವನ್ನು ಈ ಬ್ರಹ್ಮಾರವರು ಮಾಡಲಿಲ್ಲ. ಇವರಿಗೆ ಯಾರೂ ಗುರುವಿರಲಿಲ್ಲ. ಒಂದುವೇಳೆ ಇವರಿಗೆ
ಗುರುವಿದ್ದರೆ ಅನ್ಯ ಶಿಷ್ಯರೂ ಇರುತ್ತಿದ್ದರಲ್ಲವೆ. ಇವರಿಗೆ ಯಾವುದೋ ಗುರುವು ಕಲಿಸಿದ್ದಾರೆ ಅಥವಾ
ಪರಮಾತ್ಮನ ಶಕ್ತಿಯು ಪ್ರವೇಶ ಮಾಡುತ್ತದೆ ಎಂದು ಮನುಷ್ಯರು ತಿಳಿಯುತ್ತಾರೆ. ಅರೆ! ಪರಮಾತ್ಮನು
ಪ್ರವೇಶಿಸುತ್ತಾರೆಯೇ ಹೊರತು ಪರಮಾತ್ಮನ ಶಕ್ತಿಯು ಹೇಗೆ ಪ್ರವೇಶ ಮಾಡುತ್ತದೆ! ಪಾಪ ಏನನ್ನೂ
ತಿಳಿದುಕೊಂಡಿಲ್ಲ. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ಸಾಧಾರಣ ವೃದ್ಧನ ತನುವಿನಲ್ಲಿ
ಬರುತ್ತೇನೆ, ಬಂದು ನಿಮಗೆ ಓದಿಸುತ್ತೇನೆ ಎಂದು ಹಿಂದೆಯೂ ನಿಮಗೆ ತಿಳಿಸಿದ್ದೆನು. ಇದನ್ನು ಇವರೂ (ಬ್ರಹ್ಮಾ)
ಸಹ ಕೇಳುತ್ತಾರೆ, ಗಮನವೆಲ್ಲವೂ ನನ್ನ ಮೇಲಿದೆ. ಇವರೂ ಸಹ ವಿದ್ಯಾರ್ಥಿಯಾಗಿದ್ದಾರೆ. ಇವರು ತಮಗೆ
ಮತ್ತೇನೂ ಹೇಳಿಕೊಳ್ಳುವುದಿಲ್ಲ. ಪ್ರಜಾಪಿತನಾದರೂ ವಿದ್ಯಾರ್ಥಿಯಾಗಿದ್ದಾರೆ, ಭಲೆ ಇವರು
ವಿನಾಶವನ್ನೂ ನೋಡಿದ್ದಾರೆ ಆದರೆ ಏನೂ ಅರ್ಥವಾಗಲಿಲ್ಲ. ನಿಧಾನ-ನಿಧಾನವಾಗಿ ಎಲ್ಲವನ್ನೂ
ಅರ್ಥಮಾಡಿಕೊಂಡರು. ಹೇಗೆ ನೀವೀಗ ತಿಳಿದುಕೊಳ್ಳುತ್ತಾ ಹೋಗುತ್ತಿದ್ದೀರಿ. ತಂದೆಯು ನಿಮಗೆ
ತಿಳಿಸುತ್ತಾರೆ ಆಗ ಮಧ್ಯದಲ್ಲಿ ಇವರೂ (ಬ್ರಹ್ಮಾ) ಸಹ ತಿಳಿದುಕೊಳ್ಳುತ್ತಾ ಹೋಗುತ್ತಾರೆ,
ಓದುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯು ಓದುವ ಪುರುಷಾರ್ಥ ಮಾಡುತ್ತಾರೆ. ಬ್ರಹ್ಮಾ, ವಿಷ್ಣು,
ಶಂಕರನು ಸೂಕ್ಷ್ಮವತನವಾಸಿಗಳಾಗಿದ್ದಾರೆ. ಅವರ ಪಾತ್ರವೇನೆಂಬುದನ್ನು ಯಾರೂ ತಿಳಿದುಕೊಂಡಿಲ್ಲ.
ತಂದೆಯು ಪ್ರತಿಯೊಂದು ಮಾತನ್ನು ತಾವಾಗಿಯೇ ತಿಳಿಸುತ್ತಾರೆ. ನೀವು ಯಾವುದೇ ಪ್ರಶ್ನೆಯನ್ನು ಕೇಳುವ
ಅವಶ್ಯಕತೆಯಿಲ್ಲ. ಮೇಲೆ ಶಿವಪರಮಾತ್ಮನಿದ್ದಾರೆ, ಅವರ ನಂತರ ದೇವತೆಗಳು ಅಂದಮೇಲೆ ಅವರನ್ನು ಸೇರಿಸಲು
ಹೇಗೆ ಸಾಧ್ಯ! ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಬಂದು ಇವರಲ್ಲಿ ಪ್ರವೇಶ
ಮಾಡುತ್ತಾರೆ ಆದ್ದರಿಂದ ಬಾಪ್ದಾದಾ ಎಂದು ಹೇಳಲಾಗುತ್ತದೆ. ತಂದೆಯು ಬೇರೆ, ಈ ದಾದಾ
ಬೇರೆಯಾಗಿದ್ದಾರೆ. ಶಿವನು ತಂದೆ, ಈ ದಾದಾರವರು ಬ್ರಹ್ಮನಾಗಿದ್ದಾರೆ. ಆಸ್ತಿಯು ಶಿವತಂದೆಯಿಂದ
ಸಿಗುತ್ತದೆಯಲ್ಲವೆ! ಬ್ರಹ್ಮನ ಮಕ್ಕಳೇ ನೀವೆಲ್ಲರೂ ಬ್ರಾಹ್ಮಣರಾದಿರಿ. ನಾಟಕದನುಸಾರ ತಂದೆಯು ದತ್ತು
ಮಾಡಿಕೊಂಡಿದ್ದಾರೆ, ತಿಳಿಸುತ್ತಾರೆ - ಇವರು ನಂಬರ್ವನ್ ಭಕ್ತನಾಗಿದ್ದಾರೆ, 84 ಜನ್ಮಗಳನ್ನೂ ಸಹ
ಇವರೇ ತಿಳಿದುಕೊಂಡಿದ್ದಾರೆ ಮತ್ತು ಇವರಿಗೇ ಶ್ಯಾಮಸುಂದರನೆಂದು ಹೇಳುತ್ತಾರೆ. ಸತ್ಯಯುಗದಲ್ಲಿ
ಕೃಷ್ಣನಾಗಿದ್ದಾಗ ಇವರು ಸುಂದರನಾಗಿದ್ದರು, ಈ ಕಲಿಯುಗದಲ್ಲಿ ಶ್ಯಾಮನಾಗಿದ್ದಾರೆ.
ಪತಿತನಾಗಿದ್ದಾರಲ್ಲವೆ. ಈಗ ಪುನಃ ಪಾವನನಾಗುತ್ತಾರೆ, ನೀವೂ ಸಹ ಇದೇ ರೀತಿ ಪಾವನರಾಗುತ್ತೀರಿ. ಇದು
ಕಬ್ಬಿಣದ ಸಮಾನ ಪ್ರಪಂಚ, ಅದು ಚಿನ್ನದ ಸಮಾನ ಪ್ರಪಂಚವಾಗಿದೆ. ಈ ಏಣಿಯ ಚಿತ್ರದ ಬಗ್ಗೆ ಯಾರಿಗೂ
ತಿಳಿದಿಲ್ಲ. ಕೊನೆಯಲ್ಲಿ ಯಾರು ಬರುವರೋ ಅವರು 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಅವರು
ಅವಶ್ಯವಾಗಿ ಕಡಿಮೆ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಅಂದಮೇಲೆ ಅವರನ್ನು ಏಣಿಯ ಚಿತ್ರದಲ್ಲಿ
ತೋರಿಸಲು ಹೇಗೆ ಸಾಧ್ಯ. ತಂದೆಯು ತಿಳಿಸುತ್ತಾರೆ - ಎಲ್ಲರಿಗಿಂತ ಹೆಚ್ಚಿನ ಜನ್ಮಗಳನು ಯಾರು
ತೆಗೆದುಕೊಳ್ಳುತ್ತಾರೆ? ಎಲ್ಲರಿಗಿಂತ ಕಡಿಮೆ ಜನ್ಮಗಳನ್ನು ಯಾರು ತೆಗೆದುಕೊಳ್ಳುತ್ತಾರೆ? ಇದು
ಜ್ಞಾನವಾಗಿದೆ, ತಂದೆಯೇ ಜ್ಞಾನಪೂರ್ಣ, ಪತಿತ-ಪಾವನನಾಗಿದ್ದಾರೆ. ಆದಿ-ಮಧ್ಯ-ಅಂತ್ಯದ ಜ್ಞಾನವನ್ನು
ತಿಳಿಸುತ್ತಿದ್ದಾರೆ. ಸನ್ಯಾಸಿಗಳೆಲ್ಲರೂ ನೇತಿ-ನೇತಿ (ನಮಗೆ ಗೊತ್ತಿಲ್ಲ) ಎಂದು ಹೇಳುತ್ತಾ
ಬಂದಿದ್ದಾರೆ. ತಮ್ಮ ಆತ್ಮವನ್ನೇ ತಿಳಿದುಕೊಂಡಿಲ್ಲವೆಂದರೆ ಮತ್ತೆ ತಂದೆಯನ್ನು ಹೇಗೆ
ತಿಳಿದುಕೊಳ್ಳುತ್ತಾರೆ? ಕೇವಲ ನಾಮಮಾತ್ರ ಹೇಳುತ್ತಾರೆ, ಈಗ ಆತ್ಮವೆಂದರೇನೆಂದು ತಿಳಿದುಕೊಂಡಿಲ್ಲ.
ಈಗ ನಿಮಗೆ ಅರ್ಥವಾಗಿದೆ - ಆತ್ಮವು ಅವಿನಾಶಿಯಾಗಿದೆ, ಅದರಲ್ಲಿ 84 ಜನ್ಮಗಳ ಅವಿನಾಶಿ ಪಾತ್ರವು
ನಿಗಧಿಯಾಗಿದೆ. ಇಷ್ಟು ಸೂಕ್ಷ್ಮವಾದ ಆತ್ಮದಲ್ಲಿ ಎಷ್ಟೊಂದು ಪಾತ್ರವು ನಿಗಧಿಯಾಗಿದೆ, ಯಾರು
ಒಳ್ಳೆಯ ರೀತಿಯಲ್ಲಿ ಕೇಳುತ್ತಾರೆ ಮತ್ತು ತಿಳಿದುಕೊಳ್ಳುತ್ತಾರೆಯೋ ಅವರು ಸಮೀಪದವರೆಂದು
ತಿಳಿಯಲಾಗುತ್ತದೆ. ಬುದ್ಧಿಯಲ್ಲಿ ಕುಳಿತುಕೊಳ್ಳಲಿಲ್ಲವೆಂದರೆ ಅವರು ತಡವಾಗಿ ಬರುವವರಾಗಿರುವರು.
ತಿಳಿಸುವ ಸಮಯದಲ್ಲಿ ನಾಡಿ (ಪಾತ್ರ) ನೋಡಬೇಕಾಗಿದೆ. ತಿಳಿಸುವವರೂ ಸಹ ನಂಬರ್ವಾರ್ ಇದ್ದಾರಲ್ಲವೆ.
ನಿಮ್ಮದು ಇದು ವಿದ್ಯೆಯಾಗಿದೆ, ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಇದರಲ್ಲಿ ಕೆಲವರು
ಶ್ರೇಷ್ಠಾತಿಶ್ರೇಷ್ಠ ರಾಜ್ಯಪದವಿಯನ್ನು ಪಡೆಯುತ್ತಾರೆ. ಇನ್ನೂ ಕೆಲವರು ಪ್ರಜೆಗಳಲ್ಲಿ
ನೌಕರ-ಚಾಕರರಾಗುತ್ತಾರೆ ಆದರೆ ವಿಚಿತ್ರವೇನೆಂದರೆ ಸತ್ಯಯುಗದಲ್ಲಿ ಯಾವುದೇ ದುಃಖವಿರುವುದಿಲ್ಲ.
ಅದಕ್ಕೆ ಸುಖಧಾಮ, ಸ್ವರ್ಗವೆಂದು ಕರೆಯಲಾಗುತ್ತದೆ. ಸ್ವರ್ಗವಿತ್ತು ಅದು ಕಳೆದುಹೋಗಿದೆ ಆದ್ದರಿಂದಲೇ
ನೆನಪು ಮಾಡುತ್ತಾರಲ್ಲವೆ. ಸ್ವರ್ಗವು ಮೇಲಿರಬೇಕೆಂದು ಮನುಷ್ಯರು ತಿಳಿಯುತ್ತಾರೆ. ದಿಲ್ವಾಡಾ
ಮಂದಿರದಲ್ಲಿ ನಿಮ್ಮ ಸಂಪೂರ್ಣ ನೆನಪಾರ್ಥವಿದೆ, ಆದಿದೇವ ಮತ್ತು ಆದಿದೇವಿ ಹಾಗೂ ಮಕ್ಕಳು ಕೆಳಗೆ
ತಪಸ್ಸಿನಲ್ಲಿ ಕುಳಿತಿದ್ದಾರೆ, ಮೇಲೆ ರಾಜಧಾನಿಯು ನಿಂತಿದೆ. ಮನುಷ್ಯರು ಅದನ್ನು ದರ್ಶನ
ಮಾಡುತ್ತಾರೆ, ಹಣ ಇಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ನೀವು ಮಕ್ಕಳಿಗೆ ಜ್ಞಾನದ ಮೂರನೆಯ
ನೇತ್ರವು ಸಿಕ್ಕಿದೆ, ನೀವು ಎಲ್ಲದಕ್ಕಿಂತ ಮೊದಲನೆಯದಾಗಿ ತಂದೆಯ ಚರಿತ್ರೆಯನ್ನು
ತಿಳಿದುಕೊಂಡಿದ್ದೀರಿ ಅಂದಮೇಲೆ ಮತ್ತೇನು ಬೇಕು! ತಂದೆಯನ್ನು ಅರಿತುಕೊಳ್ಳುವುದರಿಂದ ಮತ್ತೆಲ್ಲವೂ
ಅರ್ಥವಾಗುತ್ತದೆ. ಅಂದಮೇಲೆ ಖುಷಿಯಾಗಬೇಕು ಏಕೆಂದರೆ ನಿಮಗೆ ತಿಳಿದಿದೆ - ನಾವೀಗ ಹೋಗಿ ಚಿನ್ನದ
ಮಹಲುಗಳನ್ನು ಕಟ್ಟುತ್ತೇವೆ, ಅಲ್ಲಿ ರಾಜ್ಯ ಮಾಡುತ್ತೇವೆ. ಈ ಆತ್ಮಿಕ ಜ್ಞಾನವನ್ನು ಆತ್ಮಿಕ ತಂದೆಯೇ
ಕೊಡುತ್ತಾರೆಂದು ಸೇವಾಧಾರಿ ಮಕ್ಕಳ ಬುದ್ಧಿಯಲ್ಲಿರುತ್ತದೆ. ಆತ್ಮಗಳ ತಂದೆಯನ್ನೇ ಪಾರಲೌಕಿಕ
ತಂದೆಯೆಂದು ಹೇಳಲಾಗುತ್ತದೆ. ಅವರೇ ಸದ್ಗತಿದಾತನಾಗಿದ್ದಾರೆ, ಸುಖ-ಶಾಂತಿಯ ಆಸ್ತಿಯನ್ನು
ಕೊಡುತ್ತಾರೆ. ನೀವು ತಿಳಿಸಿಕೊಡಬಹುದು - ಈ ಏಣಿಯು ಭಾರತವಾಸಿಗಳಿಗಾಗಿ ಮಾಡಲ್ಪಟ್ಟಿದೆ,
ಭರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ನೀವು ಅರ್ಧದಲ್ಲಿಯೇ ಬರುತ್ತೀರಿ, ಅಂದಮೇಲೆ
ನೀವು 84 ಜನ್ಮಗಳನ್ನು ತೆಗೆದುಕೊಳ್ಳಲು ಹೇಗೆ ಸಾಧ್ಯ? ಎಲ್ಲರಿಗಿಂತ ಹೆಚ್ಚಿನ ಜನ್ಮಗಳನ್ನು ನಾವೇ
ತೆಗೆದುಕೊಳ್ಳುತ್ತೇವೆ. ಇವು ಬಹಳ ತಿಳಿದುಕೊಳ್ಳುವಂತಹ ಮಾತಾಗಿದೆ. ಮುಖ್ಯ ಮಾತೇನೆಂದರೆ ಪತಿತರಿಂದ
ಪಾವನರಾಗಲು ಬುದ್ಧಿಯೋಗವನ್ನು ಜೋಡಿಸಬೇಕಾಗಿದೆ. ಪಾವನರಾಗುವ ಪ್ರತಿಜ್ಞೆ ಮಾಡಿ ನಂತರ ಒಂದುವೇಳೆ
ಪತಿತರಾಗುತ್ತಾರೆಂದರೆ ಮೂಳೆಗಳು ಒಮ್ಮೆಲೆ ಪುಡಿಪುಡಿಯಾಗುತ್ತವೆ. ಹೇಗೆ 5 ಅಂತಸ್ತಿನ ಮಹಡಿಯಿಂದ
ಬಿದ್ದಂತಾಗುತ್ತದೆ. ಬುದ್ಧಿಯೇ ಮಲಿನವಾಗಿಬಿಡುತ್ತದೆ, ಮನಸ್ಸು ತಿನ್ನುತ್ತಿರುತ್ತದೆ. ಮುಖದಿಂದ
ಏನೂ ಹೇಳುವುದಿಲ್ಲ ಆದ್ದರಿಂದ ಬಹಳ ಎಚ್ಚರಿಕೆಯಿಂದಿರಿ ಎಂದು ತಂದೆಯು ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.ಈ ನಾಟಕವನ್ನು
ಯಥಾರ್ಥ ರೀತಿಯಲ್ಲಿ ಅರಿತುಕೊಂಡು ಮಾಯೆಯ ಬಂಧನಗಳಿಂದ ಮುಕ್ತರಾಗಬೇಕಾಗಿದೆ. ಸ್ವಯಂನ್ನು
ಅಕಾಲಮೂರ್ತ ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಪಾವನರಾಗಬೇಕಾಗಿದೆ.
2.ಸತ್ಯ-ಸತ್ಯವಾದ
ಪೈಗಂಬರರು ಮತ್ತು ಸಂದೇಶಪುತ್ರರಾಗಿ ಎಲ್ಲರಿಗೂ ಶಾಂತಿಧಾಮ, ಸುಖಧಾಮ ಮಾರ್ಗವನ್ನು ತಿಳಿಸಬೇಕಾಗಿದೆ.
ಈ ಕಲ್ಯಾಣಕಾರಿ ಸಂಗಮಯುಗದಲ್ಲಿ ಎಲ್ಲಾ ಆತ್ಮಗಳ ಕಲ್ಯಾಣ ಮಾಡಬೇಕಾಗಿದೆ.
ವರದಾನ:
ತಂದೆ ಮತ್ತು
ಸೇವೆಯ ಸ್ಮೃತಿಯಿಂದ ಏಕರಸ ಸ್ಥಿತಿಯ ಅನುಭವ ಮಾಡುವಂತಹ ಸರ್ವ ಆಕರ್ಷಣಮೂರ್ತಿ ಭವ.
ಹೇಗೆ ಸೇವಕನಿಗೆ ಸದಾ
ಸೇವೆ ಮತ್ತು ಮಾಸ್ಟರ್ನ ನೆನಪಿರುತ್ತದೆ. ಹಾಗೆ ವಿಶ್ವ ಸೇವಕ, ಸತ್ಯ ಸೇವಾಧಾರಿ ಮಕ್ಕಳಿಗೂ ಸಹ ತಂದೆ
ಮತ್ತು ಸೇವೆಯ ವಿನಃ ಯಾವುದೂ ನೆನಪಿರುವುದಿಲ್ಲ, ಇದರಿಂದಲೇ ಏಕರಸ ಸ್ಥಿತಿಯಲ್ಲಿರುವ
ಅನುಭವವಾಗುತ್ತದೆ. ಅವರಿಗೆ ಒಬ್ಬ ತಂದೆಯ ರಸದ ವಿನಃ ಬೇರೆಲ್ಲಾ ರಸ ನೀರಸವೆನಿಸುತ್ತದೆ. ಒಬ್ಬ
ತಂದೆಯ ರಸದ ಅನುಭವವಾಗುವ ಕಾರಣ ಎಲ್ಲೂ ಸಹ ಆಕರ್ಷಣೆಯಾಗಲು ಸಾಧ್ಯವಿಲ್ಲ, ಈ ಏಕರಸ ಸ್ಥಿತಿಯ ತೀವ್ರ
ಪುರುಷಾರ್ಥವೇ ಸರ್ವ ಆಕರ್ಷಣೆಗಳಿಂದ ಮುಕ್ತರನ್ನಾಗಿ ಮಾಡುತ್ತದೆ. ಇದೇ ಶ್ರೇಷ್ಠ ಗುರಿಯಾಗಿದೆ.
ಸ್ಲೋಗನ್:
ನಾಜೂಕಾದ
ಪರಿಸ್ಥಿತಿಗಳ ಪೇಪರ್ನಲ್ಲಿ ಪಾಸ್ ಆಗಬೇಕಾದರೆ ನಿಮ್ಮ ದೃಷ್ಟಿಯನ್ನು ಶಕ್ತಿಶಾಲಿಯನ್ನಾಗಿ
ಮಾಡಿಕೊಳ್ಳಿ.
ಅವ್ಯಕ್ತ ಸೂಚನೆ - ಸತ್ಯ
ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ
ಯಾವಾಗ ಯಾವುದೇ ಅಸತ್ಯ
ಮಾತನ್ನು ನೋಡುತ್ತೀರಿ ಎಂದರೆ, ಕೇಳುತ್ತೀರಿ ಎಂದರೆ ಅಸತ್ಯ ವಾಯುಮಂಡಲವನ್ನು ಹರಡಬೇಡಿ. ಕೆಲವರು
ಹೇಳುತ್ತಾರೆ ಇದು ಪಾಪಕರ್ಮವಾಗಿದೆ ಅಲ್ಲವೇ, ಪಾಪ ಕರ್ಮವನ್ನು ನೋಡಲು ಆಗುವುದಿಲ್ಲ ಆದರೆ
ವಾಯುಮಂಡಲದಲ್ಲಿ ಅಸತ್ಯತೆಯ ಮಾತನ್ನು ಹರಡಿಸುವುದು, ಇದು ಸಹ ಪಾಪವಾಗಿದೆ. ಲೌಕಿಕ ಪರಿವಾರದಲ್ಲಿಯೂ
ಸಹ ಒಂದುವೇಳೆ ಯಾವುದೇ ಇಂತಹ ಮಾತನ್ನು ನೋಡುತ್ತೀರಿ, ಕೇಳುತ್ತೀರಿ ಎಂದರೆ ಅದನ್ನು ಹರಡುವುದಿಲ್ಲ.
ಕಿವಿಗಳು ಕೇಳಿದವು ಹಾಗೂ ಹೃದಯ ಬಚ್ಚಿಟ್ಟಿತು. ಒಂದು ವೇಳೆ ಯಾರೇ ವ್ಯರ್ಥ ಮಾತುಗಳನ್ನು
ಹರಡಿಸುತ್ತಾರೆ ಎಂದರೆ, ಈ ಚಿಕ್ಕ ಚಿಕ್ಕ ಮಾತುಗಳು ಹಾರುವ ಕಲೆಯ ಅನುಭವವನ್ನು ಸಮಾಪ್ತಿ
ಮಾಡಿಬಿಡುತ್ತದೆ, ಆದ್ದರಿಂದ ಈ ಕರ್ಮದ ಗುಹೆ ಗತಿಯನ್ನು ತಿಳಿದುಕೊಂಡು ಯಥಾರ್ಥ ರೀತಿಯಲ್ಲಿ
ಸತ್ಯತೆಯ ಶಕ್ತಿಯನ್ನು ಧಾರಣೆ ಮಾಡಿ.