04.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಈಗ ಈ ಛೀ-ಛೀ ಕೊಳಕು ಪ್ರಪಂಚಕ್ಕೆ ಬೆಂಕಿ ಹತ್ತಿಕೊಳ್ಳುವುದಿದೆ ಆದ್ದರಿಂದ ಶರೀರ ಸಹಿತವಾಗಿ ಯಾವುದನ್ನು ನೀವು ನನ್ನದು-ನನ್ನದು ಎಂದು ಹೇಳುತ್ತೀರಿ ಇದನ್ನು ಮರೆತುಬಿಡಬೇಕು ಅದರೊಂದಿಗೆ ಮನಸ್ಸನ್ನಿಡಬಾರದು”

ಪ್ರಶ್ನೆ:
ತಂದೆಯು ನಿಮಗೆ ಈ ದುಃಖಧಾಮದೊಂದಿಗೆ ಏಕೆ ತಿರಸ್ಕಾರ ತರಿಸುತ್ತಾರೆ?

ಉತ್ತರ:
ಏಕೆಂದರೆ ನೀವು ಶಾಂತಿಧಾಮ-ಸುಖಧಾಮಕ್ಕೆ ಹೋಗಬೇಕಾಗಿದೆ. ಈ ಕೊಳಕು ಪ್ರಪಂಚದಲ್ಲಿ ಈಗ ಇರಲೇಬಾರದು. ನೀವು ತಿಳಿದುಕೊಂಡಿದ್ದೀರಿ- ಆತ್ಮವು ಶರೀರದಿಂದ ಬೇರೆಯಾಗಿ ಮನೆಗೆ ಹೋಗುತ್ತದೆ ಆದ್ದರಿಂದ ಈ ಶರೀರವನ್ನೇಕೆ ನೋಡುವುದು! ಯಾರದೇ ನಾಮ-ರೂಪದ ಕಡೆಯೂ ಬುದ್ಧಿಯು ಹೋಗಬಾರದು. ಕೊಳಕು (ವ್ಯರ್ಥ) ವಿಚಾರಗಳು ಬರುತ್ತವೆ ಎಂದರೆ ಪದವಿ ಭ್ರಷ್ಠವಾಗುವುದು.

ಓಂ ಶಾಂತಿ.
ಶಿವತಂದೆಯು ತನ್ನ ಮಕ್ಕಳು ಆತ್ಮಗಳೊಂದಿಗೆ ಮತನಾಡುತ್ತಿದ್ದಾರೆ. ಆತ್ಮವೇ ಕೇಳುತ್ತದೆ- ತಮ್ಮನ್ನು ಆತ್ಮವೆಂದು ನಿಶ್ಚಯ ಮಾಡಬೇಕಾಗಿದೆ. ನಿಶ್ಚಯ ಮಾಡಿಕೊಂಡು ನಂತರ ಬೇಹದ್ದಿನ ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗುವುದಕ್ಕಾಗಿ ಬಂದಿದ್ದಾರೆಂದು ತಿಳಿಸಬೇಕಾಗಿದೆ. ದುಃಖದ ಬಂಧನದಿಂದ ಬಿಡಿಸಿ ಸುಖದ ಸಂಬಂಧದಲ್ಲಿ ಕರೆದುಕೊಂಡು ಹೋಗುತ್ತಾರೆ. ಸಂಬಂಧ ಸುಖವೆಂದು, ಬಂಧನವು ದುಃಖವೆಂದು ಹೇಳಲಾಗುತ್ತದೆ. ಈಗ ಇಲ್ಲಿ ಯಾರದೇ ನಾಮ-ರೂಪ ಮುಂತಾದವುದರಲ್ಲಿ ಮನಸ್ಸನ್ನಿಡಬಾರದು. ತಮ್ಮ ಮನೆಗೆ ಹೋಗುವುದಕ್ಕೆ ತಯಾರಿ ಮಾಡಿಕೊಳ್ಳಬೇಕಾಗಿದೆ. ಎಲ್ಲಾ ಆತ್ಮಗಳನ್ನು ಕರೆದುಕೊಂಡು ಹೋಗಲು ಬೇಹದ್ದಿನ ತಂದೆಯು ಬಂದಿದ್ದಾರೆ ಆದ್ದರಿಂದ ಇಲ್ಲಿ ಯಾವುದರೊಂದಿಗೂ ಮನಸ್ಸಿಡಬಾರದು. ಇದೆಲ್ಲವೂ ಕೊಳಕು ಬಂಧನವಾಗಿದೆ. ನೀವು ತಿಳಿದುಕೊಂಡಿದ್ದೀರಿ- ನಾವು ಈಗ ಪವಿತ್ರರಾಗುತ್ತೇವೆ ಆದರೆ ನಮ್ಮ ಶರೀರವನ್ನು ಯಾವುದೇ ಕೊಳಕು ವಿಚಾರಗಳಿಂದ ಮುಟ್ಟಬಾರದು. ಆ ವಿಚಾರಗಳೇ ಹೊರಟುಹೋಗುತ್ತವೆ. ಪವಿತ್ರರಾಗದ ವಿನಃ ಹಿಂತಿರುಗಿ ಮನೆಗೆ ಹೋಗಲು ಸಾಧ್ಯವಿಲ್ಲ ನಂತರ ಒಂದುವೇಳೆ ಸುಧಾರಣೆ ಆಗಲಿಲ್ಲವೆಂದರೆ ಶಿಕ್ಷೆಯನ್ನನುಭವಿಸಬೇಕು. ಈ ಸಮಯದಲ್ಲಿ ಎಲ್ಲಾ ಆತ್ಮಗಳು ಅಸುಧಾರಿತರಾಗಿ. ಶರೀರದ ಜೊತೆ ಕೆಟ್ಟಕಾರ್ಯ ಮಾಡುತ್ತಾರೆ. ಕೊಳಕು ದೇಹಧಾರಿಗಳ ಜೊತೆ ಮನಸ್ಸು ಸಿಲುಕಿಹಾಕಿಕೊಂಡಿದೆ. ಈ ಎಲ್ಲಾ ಕೊಳಕು ವಿಚಾರಗಳನ್ನು ಬಿಟ್ಟುಬಿಡಿ ಎಂದು ತಂದೆಯು ಬಂದು ತಿಳಿಸುತ್ತಿದ್ದಾರೆ. ಆತ್ಮವು ಶರೀರದಿಂದ ಬೇರೆಯಾಗಿ ಮನೆಗೆ ಹೋಗಬೇಕಾಗಿದೆ. ಇದು ಬಹಳ ಕೊಳಕು ಪ್ರಪಂಚವಾಗಿದೆ. ಇದರಲ್ಲಿ ನಾವು ಇರಬಾರದಾಗಿದೆ. ಯಾರನ್ನೂ ನೋಡಲು ಮನಸ್ಸಾಗುವುದಿಲ್ಲ. ಈಗಂತೂ ತಂದೆಯು ಸ್ವರ್ಗದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿಯಿರಿ. ಪವಿತ್ರರಾಗಲು ತಂದೆಯನ್ನು ನೆನಪು ಮಾಡಿ. ಯಾವುದೇ ದೇಹಧಾರಿಯ ಜೊತೆ ಮನಸ್ಸನ್ನಿಡಬಾರದು. ಮಮತ್ವವಂತೂ ಸಂಪೂರ್ಣವಾಗಿ ಅಳಿಸಿಹಾಕಬೇಕಾಗಿದೆ. ಸ್ತ್ರೀ-ಪುರುಷರಲ್ಲಿ ಬಹಳ ಪ್ರೀತಿಯಿರುತ್ತದೆ. ಒಬ್ಬರನ್ನು ಬಿಟ್ಟು ಒಬ್ಬರು ಅಗಲುವುದೇ ಇಲ್ಲ. ಈಗ ಇದು ಆತ್ಮ ಸಹೋದರ-ಸಹೋದರ ಎಂದು ತಿಳಿಯಬೇಕು. ಕೊಳಕು ಆಲೋಚನೆಗಳಿರಬಾರದು. ಈಗ ಇದು ವೇಶ್ಯಾಲಯವಾಗಿದೆ. ವಿಕಾರಗಳ ಕಾರಣವೇ ನೀವು ಆದಿ-ಮಧ್ಯ-ಅಂತ್ಯ ದುಃಖವನ್ನು ಪಡೆದಿರಿ. ತಂದೆಯು ಈಗ ತಿರಸ್ಕಾರ ತರಿಸುತ್ತಾರೆ. ಈಗ ನೀವು ಹೋಗುವುದಕ್ಕಾಗಿ ಸ್ಟೀಮರ್ನಲ್ಲಿ ಕುಳಿತುಕೊಂಡಿದ್ದೀರಿ. ಈಗ ನಾವು ತಂದೆಯ ಬಳಿಗೆ ಹೋಗುತ್ತಿದ್ದೇವೆಂದು ಆತ್ಮವೇ ತಿಳಿದಿದೆ. ಈ ಇಡೀ ಹಳೆಯ ಪ್ರಪಂಚದೊಂದಿಗೆ ವೈರಾಗ್ಯವಿದೆ. ಈ ಛೀ ಛೀ ಪ್ರಪಂಚ, ನರಕ, ವೇಶ್ಯಾಲಯದಲ್ಲಿ ನಾವು ಇರಬಾರದು. ಹೀಗೆ ಯೋಚಿಸಿದ ನಂತರ ಮತ್ತೆ ವಿಕಾರದ ಕೆಟ್ಟಸಂಕಲ್ಪಗಳು ಬರುವುದು ಬಹಳ ಕೆಟ್ಟದ್ದಾಗಿದೆ, ಪದವಿಯೂ ಭ್ರಷ್ಟವಾಗಿಬಿಡುತ್ತದೆ. ತಂದೆಯು ತಿಳಿಸುತ್ತಾರೆ- ನಾನು ನಿಮ್ಮನ್ನು ಸುಂದರ ಪ್ರಪಂಚದಲ್ಲಿ, ಸುಖಧಾಮದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ. ನಾನು ನಿಮ್ಮನ್ನು ಈ ವೇಶ್ಯಾಲಯದಿಂದ ತೆಗೆದು ಶಿವಾಲಯಕ್ಕೆ ಕರೆದುಕೊಂಡು ಹೋಗುತ್ತೇನೆ ಅಂದಮೇಲೆ ಈಗ ಬುದ್ಧಿಯೋಗವು ಹೊಸಪ್ರಪಂಚದಲ್ಲಿರಬೇಕು. ಎಷ್ಟೊಂದು ಖುಷಿಯಿರಬೇಕು. ಬೇಹದ್ದಿನ ತಂದೆಯು ನಮಗೆ ಓದಿಸುತ್ತಾರೆ, ಈ ಬೇಹದ್ದಿನ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದಂತೂ ಬುದ್ಧಿಯಲ್ಲಿದೆ. ಸೃಷ್ಟಿಚಕ್ರವು ಅರಿತುಕೊಳ್ಳುವುದರಿಂದ ಅರ್ಥಾತ್ ಸ್ವದರ್ಶನ ಚಕ್ರಧಾರಿಗಳಾಗುವುದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ. ಒಂದುವೇಳೆ ದೇಹಧಾರಿಗಳೊಂದಿಗೆ ಬುದ್ಧಿಯೋಗವನ್ನಿಟ್ಟರೆ ಪದವಿಯು ಭ್ರಷ್ಟವಾಗಿಬಿಡುವುದು. ಯಾವುದೇ ದೇಹದ ಸಂಬಂಧವು ನೆನಪಿಗೆ ಬರಬಾರದು. ಇದಂತೂ ದುಃಖದ ಪ್ರಪಂಚವಾಗಿದೆ. ಇದರಲ್ಲಿ ಎಲ್ಲರೂ ದುಃಖ ಕೊಡುವವರೇ ಇದ್ದಾರೆ.

ತಂದೆಯು ಈ ಕೊಳಕು ಪ್ರಪಂಚದಿಂದ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ ಆದ್ದರಿಂದ ಈಗ ಬುದ್ಧಿಯೋಗವನ್ನು ತಮ್ಮ ಮನೆಯೊಂದಿಗೆ ಜೋಡಿಸಬೆಕು. ಮನುಷ್ಯರು ಮುಕ್ತಿಯಲ್ಲಿ ಹೋಗುವುದಕ್ಕಾಗಿ ಭಕ್ತಿ ಮಾಡುತ್ತಾರೆ. ನೀವೂ ಸಹ ಹೇಳುತ್ತೀರಿ- ನಾವಾತ್ಮಗಳು ಇಲ್ಲಿರಬಾರದು. ನಾವು ಈ ಛೀ ಛೀ ಶರೀರವನ್ನು ಬಿಟ್ಟು ನಮ್ಮ ಮನೆಗೆ ಹೋಗುತ್ತೇವೆ. ಇದಂತೂ (ಶರೀರ) ಹಳೆಯ ಪಾದರಕ್ಷೆಯಾಗಿದೆ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಈ ಶರೀರವೂ ಸಹ ಬಿಟ್ಟುಹೋಗುವುದು. ಅಂತ್ಯಕಾಲದಲ್ಲಿ ತಂದೆಯ ವಿನಃ ಮತ್ತ್ಯಾವುದೇ ವಸ್ತು ನೆನಪಿರಬಾರದು. ಈ ಶರೀರವನ್ನೂ ಸಹ ಇಲ್ಲಿಯೇ ಬಿಡಬೇಕಾಗಿದೆ. ಶರೀರ ಹೋಯಿತೆಂದರೆ ಎಲ್ಲವೂ ಹೋಯಿತು. ದೇಹ ಸಹಿತ ಏನೆಲ್ಲವೂ ಇದೆಯೋ ಯಾವುದನ್ನು ನೀವು ನನ್ನದು-ನನ್ನದು ಎಂದು ಹೇಳುತ್ತೀರೋ ಇದೆಲ್ಲವನ್ನೂ ಮರೆಯಬೇಕಾಗಿದೆ. ಈ ಛೀ ಛೀ ಪ್ರಪಂಚಕ್ಕೆ ಬೆಂಕಿ ಬೀಳುವುದಿದೆ ಆದ್ದರಿಂದ ಈಗ ಇದರೊಂದಿಗೆ ಮನಸ್ಸನ್ನಿಡಬಾರದು ಆದ್ದರಿಂದಲೇ ತಂದೆಯು ತಿಳಿಸಿಕೊಡುತ್ತಾರೆ- ಮಧುರಾತಿ ಮಧುರ ಮಕ್ಕಳೇ, ನಾನು ನಿಮಗಾಗಿ ಸ್ವರ್ಗಸ್ಥಾಪನೆ ಮಾಡುತ್ತಿದ್ದೇನೆ. ಅಲ್ಲಿ ನೀವೇ ಹೋಗಿ ಇರುತ್ತೀರಿ. ಈಗ ನಿಮ್ಮ ಮುಖದ ಅದರಕಡೆ ಇದೆ. ತಂದೆಯನ್ನೂ, ಮನೆಯನ್ನೂ, ಸ್ವರ್ಗವನ್ನೂ ನೆನಪು ಮಾಡಬೇಕು. ದುಃಖಧಾಮದಿಂದ ತಿರಸ್ಕಾರವು ಬರುತ್ತದೆ. ಈ ಶರೀರಗಳಿಂದಲೂ ತಿರಸ್ಕಾರ ಬರುತ್ತದೆ ಅಂದಮೇಲೆ ವಿವಾಹ ಮಾಡಿಕೊಳ್ಳುವ ಅವಶ್ಯಕತೆಯಾದರೂ ಏನಿದೆ! ವಿವಾಹ ಮಾಡಿಕೊಳ್ಳುವುದರಿಂದ ಶರೀರದೊಂದಿಗೆ ಮನಸ್ಸು ತೊಡಗಿಬಿಡುತ್ತದೆ. ತಂದೆಯು ಹೇಳುತ್ತಾರೆ- ಈ ಹಳೆಯ ಪಾದರಕ್ಷೆಗಳೊಂದಿಗೆ ಸ್ನೇಹವನ್ನಿಡಬೇಡಿ. ಇದಂತೂ ವೇಶ್ಯಾಲಯವಾಗಿದೆ, ಎಲ್ಲರೂ ಪತಿತರೇ-ಪತಿತರಾಗಿದ್ದಾರೆ, ರಾವಣರಾಜ್ಯವಾಗಿದೆ. ಇಲ್ಲಿ ಒಬ್ಬ ತಂದೆಯ ವಿನಃ ಮತ್ತ್ಯಾರ ಜೊತೆಯೂ ಮನಸ್ಸನ್ನಿಡಬಾರದು. ತಂದೆಯನ್ನು ನೆನಪು ಮಾಡದಿದ್ದರೆ ಜನ್ಮ-ಜನ್ಮಾಂತರದ ಪಾಪಗಳು ಪರಿಹಾರವಾಗುವುದಿಲ್ಲ ಮತ್ತು ಶಿಕ್ಷೆಯೂ ಬಹಳ ಕಠಿಣವಾಗಿರುತ್ತದೆ ಮತ್ತು ಪದವಿಯೂ ಭ್ರಷ್ಟವಾಗಿಬಿಡುತ್ತದೆ ಅಂದಮೇಲೆ ಈ ಕಲಿಯುಗೀ ಬಂಧನವನ್ನು ಏಕೆ ಬಿಡಬಾರದು! ತಂದೆಯು ಎಲ್ಲರಿಗಾಗಿ ಈ ಬೇಹದ್ದಿನ ಮಾತನ್ನು ತಿಳಿಸುತ್ತಾರೆ. ಯಾವಾಗ ರಜೋಪ್ರಧಾನ ಸನ್ಯಾಸಿಗಳಿದ್ದರೋ ಆಗ ಪ್ರಪಂಚವು ಇಷ್ಟು ಕೊಳಕಾಗಿರಲಿಲ್ಲ. ಸನ್ಯಾಸಿಗಳು ಅರಣ್ಯದಲ್ಲಿ ಇರುತ್ತಿದ್ದರು, ಎಲ್ಲರಿಗೂ ಆಕರ್ಷಣೆಯಾಗುತ್ತಿತ್ತು. ಮನುಷ್ಯರು ಆಹಾರ ಮೊದಲಾದವುಗಳನ್ನು ಅಲ್ಲಿಗೇ ಹೋಗಿ ಕೊಟ್ಟು ಬರುತ್ತಿದ್ದರು. ಸನ್ಯಾಸಿಗಳು ನಿರ್ಭಯರಾಗಿರುತ್ತಿದ್ದರು, ನೀವೂ ಸಹ ನಿರ್ಭಯರಾಗಬೇಕು. ಇದರಲ್ಲಿ ಬಹಳ ವಿಶಾಲಬುದ್ಧಿಯಿರಬೇಕು. ತಂದೆಯ ಬಳಿ ಬರುತ್ತಾರೆಂದರೆ ಮಕ್ಕಳಿಗೆ ಖುಷಿಯಿರುತ್ತದೆ- ನಾವು ಬೇಹದ್ದಿನ ತಂದೆಯಿಂದ ಸುಖಧಾಮದ ಆಸ್ತಿಯನ್ನು ಪಡೆಯುತ್ತೇವೆ. ಇಲ್ಲಂತೂ ಎಷ್ಟೊಂದು ದುಃಖವಿದೆ, ಕೆಲವು ಬಹಳ ಕೊಳಕಾದ ರೋಗಗಳು ಬರುತ್ತವೆ. ತಂದೆಯಂತೂ ಗ್ಯಾರಂಟಿ ಕೊಡುತ್ತಾರೆ- ಮಕ್ಕಳೇ, ಎಲ್ಲಿ ದುಃಖ-ಅಶಾಂತಿ, ರೋಗದ ಹೆಸರೇ ಇರುವುದಿಲ್ಲವೋ ಅಲ್ಲಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. ಅರ್ಧಕಲ್ಪಕ್ಕೆ ನಿಮ್ಮನ್ನು ಆರೋಗ್ಯವಂತರನ್ನಾಗಿ ತಂದೆಯು ಮಾಡುತ್ತಾರೆ ಅಂದಾಗ ಇಲ್ಲಿ ಯಾರಲ್ಲಾದರೂ ಪ್ರೀತಿಯನ್ನಿಟ್ಟರೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು.

ನೀವು ಇದನ್ನು ತಿಳಿಸಬಹುದು- ಅವರು ಮೂರು ನಿಮಿಷ ಸೈಲೆನ್ಸ್ ಎಂದು ಹೇಳುತ್ತಾರೆ ಅದಕ್ಕೆ ನೀವು ತಿಳಿಸಿ, ಕೇವಲ ಸೈಲೆನ್ಸ್ ನಿಂದ (ಮೌನ) ಏನಾಗುತ್ತದೆ? ಇಲ್ಲಂತೂ ತಂದೆಯನ್ನು ನೆನಪು ಮಾಡಬೇಕು ಇದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಶಾಂತಿಯ ವರದಾನವನ್ನು ಕೊಡುವವರು ತಂದೆಯಾಗಿದ್ದಾರೆ. ಅವರನ್ನು ನೆನಪು ಮಾಡದಿದ್ದರೆ ಶಾಂತಿ ಹೇಗೆ ಸಿಗುವುದು? ಅವರನ್ನು ನೆನಪು ಮಾಡಿದಾಗಲೇ ಆಸ್ತಿಯು ಸಿಗುವುದು. ಶಿಕ್ಷಕರಿಗೂ ಸಹ ಬಹಳ ಪಾಠವನ್ನು ಓದಿಸಬೇಕು. ಎಲ್ಲರೂ ಎದ್ದು ನಿಲ್ಲಬೇಕು ಆಗ ಯಾರೂ ಏನೂ ಹೇಳುವುದಿಲ್ಲ. ತಂದೆಗೆ ಅರ್ಪಣೆಯಾಗಿದ್ದೀರೆಂದರೆ ಹೊಟ್ಟೆಗಂತೂ ಖಂಡಿತ ಸಿಗುತ್ತದೆ ಶರೀರ ನಿರ್ವಹಣೆಗಂತೂ ಬಹಳ ಸಿಗುತ್ತದೆ. ಹೇಗೆ ವೇದಾಂತಿ ಮಗು (ವೇದಾಂತಿ ಬೆಹೆನ್) ಪರೀಕ್ಷೆಯನ್ನು ಬರೆಯಬೇಕಾದರೆ ಆ ಪ್ರಶ್ನೆ ಪತ್ರಿಕೆಯಲ್ಲಿ ಗೀತೆಯ ಭಗವಂತ ಯಾರು? ಎಂಬ ಪ್ರಶ್ನೆಯಿತ್ತು. ಅದಕ್ಕೆ ಅವರು ಪರಮಪಿತ ಪರಮಾತ್ಮ ಶಿವ ಎಂದು ಬರೆದುಬಿಟ್ಟರು ಆದ್ದರಿಂದ ಅವರನ್ನು ಅನುತ್ತೀರ್ಣ ಮಾಡಿಬಿಟ್ಟರು ಮತ್ತು ಯಾರು ಗೀತೆಯ ಭಗವಂತ ಕೃಷ್ಣನೆಂದು ಬರೆದಿದ್ದರು ಅವರನ್ನು ತೇರ್ಗಡೆ ಮಾಡಿದರು. ಈ ಮಗುವು ಸತ್ಯವನ್ನು ತಿಳಿಸಿದ್ದರಿಂದ ಅವರಿಗೆ ಅದರು ತಿಳಿಯದ ಕಾರಣ ಅನುತ್ತೀರ್ಣ ಮಾಡಿದರು. ಈ ಮಗುವು ಸತ್ಯ-ಸತ್ಯವಾಗಿ ಬರೆದೆನೆಂದು ಅವರನ್ನು ಕೇಳಬೇಕಿತ್ತು ಏಕೆಂದರೆ ಗೀತೆಯ ಭಗವಂತ ನಿರಾಕಾರ ಪರಮಪಿತ ಪರಮಾತ್ಮನೇ ಆಗಿದ್ದಾರೆಯೇ ಹೊರತು ದೇಹಧಾರಿ ಕೃಷ್ಣನಾಗಿರಲು ಸಾಧ್ಯವಿಲ್ಲ ಆದರೆ ಮಗುವಿಗೆ ಮುಂದೆ ಓದಲು ಇಷ್ಟವಿಲ್ಲದಿದ್ದ ಕಾರಣ ಈ ಆತ್ಮಿಕ ಸೇವೆ ಮಾಡುವ ಮನಸ್ಸಿದ್ದ ಕಾರಣ ಆ ವಿದ್ಯೆಯನ್ನೇ ಬಿಟ್ಟರು.

ನಿಮಗೆ ತಿಳಿದಿದೆ- ಈಗ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ನಮ್ಮ ಈ ಶರೀರವನ್ನೂ ಬಿಟ್ಟು ಶಾಂತಿಧಾಮಕ್ಕೆ ಹೋಗಬೇಕಾಗಿದೆ. ನೆನಪು ಮಾಡುವುದರಿಂದ ಆರೋಗ್ಯ-ಐಶ್ವರ್ಯ ಎರಡೂ ಸಿಗುತ್ತದೆ. ಭಾರತದಲ್ಲಿ ಸುಖ-ಶಾಂತಿಯಿತ್ತಲ್ಲವೆ! ಇಂತಿಂತಹ ಮಾತುಗಳು ನೀವು ಕುಮಾರಿಯರು ಕುಳಿತು ತಿಳಿಸುತ್ತೀರೆಂದರೆ ಯಾರೂ ಮಾತನಾಡುವುದಿಲ್ಲ. ಒಂದುವೇಳೆ ಯಾರೇ ಹೆದರಿಸಿದರೆ ಖಾಯಿದೆಯನುಸಾರ ನೀವೂ ಸಹ ಮಾತನಾಡಿ, ದೊಡ್ಡ-ದೊಡ್ಡ ಅಧಿಕಾರಿಗಳ ಬಳಿ ಹೋಗಿ ಏನು ಮಾಡುತ್ತಾರೆ? ನೀವು ಹಸಿವಿನಿಂದ ಸಾಯಬೇಕೆಂದಲ್ಲ. ಬಾಳೆಹಣ್ಣು ಅಥವಾ ಮೊಸರಿನೊಂದಿಗಾದರೂ ರೊಟ್ಟಿಯನ್ನು ತಿನ್ನಬಹುದು. ಮನುಷ್ಯರು ಹೊಟ್ಟೆಗಾಗಿ ಎಷ್ಟೊಂದು ಪಾಪ ಮಾಡುತ್ತಾರೆ! ತಂದೆಯು ಬಂದು ಎಲ್ಲರನ್ನೂ ಪಾಪಾತ್ಮರಿಂದ ಪುಣ್ಯಾತ್ಮರನ್ನಾಗಿ ಮಾಡುತ್ತಾರೆ. ಇದರಲ್ಲಿ ಪಾಪ ಮಾಡುವ, ಸುಳ್ಳು ಹೇಳುವ ಅವಶ್ಯಕತೆಯೇನಿಲ್ಲ. ನಿಮಗಂತೂ 3/4 ಭಾಗ ಸುಖ ಸಿಗುತ್ತದೆ. ಉಳಿದಂತೆ 1/4 ಭಾಗ ದುಃಖವನ್ನು ಭೋಗಿಸುತ್ತೀರಿ. ಈಗ ತಂದೆಯು ತಿಳಿಸುತ್ತಾರೆ- ಮಧುರ ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗುತ್ತವೆ ಮತ್ತ್ಯಾವುದೇ ಉಪಾಯವಿಲ್ಲ. ಭಕ್ತಿಮಾರ್ಗದಲ್ಲಂತೂ ಬಹಳ ಪೆಟ್ಟನ್ನು ತಿನ್ನುತ್ತೀರಿ. ಶಿವನ ಪೂಜೆಯಂತೂ ಮನೆಯಲ್ಲಿಯೂ ಮಾಡಬಹುದು ಆದರೆ ಹೊರಗಡೆ ಮಂದಿರಕ್ಕೆ ಅವಶ್ಯವಾಗಿ ಹೋಗುತ್ತಾರೆ. ಇಲ್ಲಂತೂ ನಿಮಗೆ ತಂದೆಯು ಸಿಕ್ಕಿದ್ದಾರೆ. ನಿಮಗೆ ಚಿತ್ರವನ್ನಿಟ್ಟುಕೊಳ್ಳುವ ಅವಶ್ಯಕತೆಇಲ್ಲ, ನೀವು ತಂದೆಯನ್ನು ತಿಳಿದುಕೊಂಡಿದ್ದೀರಿ ಅವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಮಕ್ಕಳಿಗೆ ಸ್ವರ್ಗದ ರಾಜ್ಯಭಾಗ್ಯದ ಆಸ್ತಿಯನ್ನು ಕೊಡುತ್ತಿದ್ದಾರೆ. ನೀವು ತಂದೆಯಿಂದ ಆಸ್ತಿಯನ್ನು ಪಡೆಯಲು ಬರುತ್ತೀರಿ ಅಂದಮೇಲೆ ಇಲ್ಲಿ ಯಾವುದೇ ಶಾಸ್ತ್ರಗಳನ್ನು ಓದುವ ಮಾತಿಲ್ಲ. ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ - ಬಾಬಾ, ನಾವು ಈಗ ಬಂದೆವೆಂದರೆ ಬಂದೆವು ನೀವು ಮನೆಯನ್ನು ಬಿಟ್ಟು ಎಷ್ಟು ಸಮಯವಾಯಿತು? ಸುಖಧಾಮವನ್ನು ಬಿಟ್ಟು 63 ಜನ್ಮಗಳಾಯಿತು, ಈಗ ತಂದೆ ಹೇಳುತ್ತಾರೆ ಈಗ ಶಾಂತಿಧಾಮ, ಸುಖಧಾಮಕ್ಕೆ ನಡೆಯಿರಿ. ಈ ದುಃಖಧಾಮವನ್ನು ಮರೆತುಹೋಗಿ. ಶಾಂತಿಧಾಮ-ಸುಖಧಾಮವನ್ನು ನೆನಪು ಮಾಡಿ ಮತ್ತ್ಯಾವುದೇ ಕಷ್ಟದ ಮಾತಿಲ್ಲಶಿವಬಾಬಾನಿಗೆ ಯಾವುದೇ ಶಾಸ್ತ್ರಮೊದಲಾದುವುಗಳನ್ನು ಓದುವ ಅವಶ್ಯಕತೆ ಇಲ್ಲ. ಈ ಬ್ರಹ್ಮಾ ಓದಿದ್ದಾರೆ ನಿಮಗಂತೂ ಈ ಶಿವಬಾಬಾ ಓದಿಸುತ್ತಾರೆ. ಈ ಬ್ರಹ್ಮಾರವರೂ ಸಹ ಓದಿಸಬಹುದು ಆದರೆ ನೀವು ಸದಾ ಶಿವತಂದೆಯೇ ಓದಿಸುತ್ತಾರೆಂದು ತಿಳಿಯಿರಿ. ಅವರನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುತ್ತದೆ. ಮಧ್ಯದಲ್ಲಿ ಇವರೂ ಇದ್ದಾರೆ.

ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಸಮಯ ಕಡಿಮೆಯಿದೆ ಹೆಚ್ಚು ಇಲ್ಲ. ಅದೃಷ್ಟದಲ್ಲಿ ಏನಿದ್ದರೆ ಅದು ಸಿಗುತ್ತದೆಯೆಂಬ ವಿಚಾರ ಮಾಡಬೇಡಿ. ಶಾಲೆಯಲ್ಲಿ ವಿದ್ಯಾಭ್ಯಾಸದ ಪುರುಷಾರ್ಥ ಮಾಡುತ್ತಾರಲ್ಲವೆ. ಅವರು ಅದೃಷ್ಠದಲ್ಲಿದ್ದಂತೆ ಆಗುತ್ತದೆಯೆಂದು ತಿಳಿದು ಕುಳಿತುಬಿಡುವುದಲ್ಲ. ಹಾಗೆಯೇ ಇಲ್ಲಿ ಒಂದುವೇಳೆ ಓದದಿದ್ದರೆ ಅಲ್ಲಿ ಜನ್ಮ-ಜನ್ಮಾಂತರ ನೌಕರಿ-ಚಾಕರಿ ಮಾಡುತ್ತಿರುತ್ತೀರಿ, ರಾಜ್ಯವು ಸಿಗುವುದಿಲ್ಲ. ಎಲ್ಲಾ ಮುಗಿದನಂತರ ಕೊನೆಯಲ್ಲಿ ಒಮ್ಮೆ ರಾಜನಿಗೆ ಕಿರೀಟವನ್ನಿಟ್ಟುಕೊಳ್ಳಬಹುದು ಅದೂ ತ್ರೇತಾದಲ್ಲಿ, ಮೂಲಮಾತು ಪವಿತ್ರರನ್ನಾಗಿ ಅನ್ಯರನ್ನೂ ಮಾಡುವುದಾಗಿದೆ. ಸತ್ಯನಾರಾಯಣನ ಸತ್ಯವಾದ ಕಥೆಯನ್ನು ತಿಳಿಸುವುದು ಸಹಜವಾಗಿದೆ. ಮೊಟ್ಟಮೊದಲು ಎಲ್ಲರಿಗೂ ತಿಳಿಸಿ ನಿಮಗೆ ಇಬ್ಬರು ತಂದೆಯರಿದ್ದಾರೆ- ಲೌಕಿಕ ತಂದೆಯಿಂದ ಕ್ಷಣಿಕ ಆಸ್ತಿಯು ಸಿಗುತ್ತದೆ, ಪಾರಲೌಕಿಕ ತಂದೆಯಿಂದ ಅಪರಿಮಿತವಾದ ಆಸ್ತಿಯು ಸಿಗುವುದು. ಬೇಹದ್ದಿನ ತಂದೆಯನ್ನು ನೆನಪು ಮಾಡುವುದರಿಂದ ದೇವತೆಗಳಾಗುತ್ತೀರಿ ಆದರೆ ಅದರಲ್ಲಿಯೂ ಶ್ರೇಷ್ಠಪದವಿಯನ್ನೇ ಪಡೆಯಬೇಕು. ಪದವಿಯನ್ನು ಪಡೆಯುವುದಕ್ಕಾಗಿಯೇ ಎಷ್ಟೊಂದು ಹೊಡೆದಾಟ ಮಾಡುತ್ತಾರೆ. ಅಂತಿಮದಲ್ಲಿ ಪರಸ್ಪರ ಬಾಂಬುಗಳ ಸಹಯೋಗ ನೀಡುತ್ತಾರೆ. ಇಷ್ಟೊಂದು ಧರ್ಮಗಳು ಮೊದಲೂ ಇರಲಿಲ್ಲ, ಕೊನೆಯಲ್ಲಿಯೂ ಇರುವುದಿಲ್ಲ. ನೀವು ರಾಜ್ಯ ಮಾಡುವವರಾಗಿದ್ದೀರಿ ಅಂದಮೇಲೆ ತಮ್ಮಮೇಲೆ ದಯೆ ತೋರಿಸಿಕೊಳ್ಳಿ- ಕೊನೆಪಕ್ಷ ಶ್ರೇಷ್ಠಪದವಿಯನ್ನಾದರೂ ಪಡೆಯಿರಿ. ಮಕ್ಕಳು ನಮ್ಮ ಒಂದು ಇಟ್ಟಿಗೆಯನ್ನಾದರೂ ಹಾಕಿ ಎಂದು ಎಂಟಾಣೆಯನ್ನು ಕೊಡುತ್ತಾರೆ. ಸುಧಾಮನ ಉದಾಹರಣೆಕೇಲಿದ್ದೀರಲ್ಲವೆ, ಹಿಡಿ ಅವಲಕ್ಕಿಗೆ ಬದಲಾಗಿ ಮಹಲು ಸಿಕ್ಕಿಬಿಟ್ಟಿತು, ಬಡವರ ಬಳಿ ಇರುವುದೇ ಎಂಟಾಣೆ ಅಂದಮೇಲೆ ಅದನ್ನೇ ಕೊಡುವರಲ್ಲವೆ. ಬಾಬಾ ನಾವು ಬಡವರು ಎಂದು ಹೇಳುತ್ತಾರೆ. ಈಗ ನೀವು ಮಕ್ಕಳು ಸತ್ಯಸಂಪಾದನೆ ಮಾಡಿಕೊಳ್ಳುತ್ತೀರಿ. ಇಲ್ಲಿ ಎಲ್ಲರದೂ ಅಸತ್ಯ ಸಂಪಾದನೆಯಾಗಿದೆ. ದಾನ-ಪುಣ್ಯ ಇತ್ಯಾದಿ ಏನೆಲ್ಲಾ ಮಾಡುತ್ತಾರೆಈ ಪಾಪಾತ್ಮರಿಗೇ ಮಾಡುತ್ತಾರೆ ಆದ್ದರಿಂದ ಪುಣ್ಯದ ಬದಲು ಪಾಪವಾಗಿಬಿಡುತ್ತದೆ. ಹಣ ಕೊಡುವವರ ಮೇಲೂ ಪಾಪವಾಗಿಬಿಡುತ್ತದೆ. ಹೀಗೆ ಮಾಡುತ್ತಾ-ಮಾಡುತ್ತಾ ಎಲ್ಲರೂ ಪಾಪಾತ್ಮರಾಗಿಬಿಡುತ್ತಾರೆ. ಸತ್ಯಯುಗದಲ್ಲೇ ಪುಣ್ಯಾತ್ಮರಿರುತ್ತಾರೆ. ಅದು ಪುಣ್ಯಾತ್ಮರ ಪ್ರಪಂಚವಾಗಿದೆ, ಅದನ್ನಂತೂ ತಂದೆಯೇ ಮಾಡುತ್ತಾರೆ. ಪಾಪಾತ್ಮರನ್ನಾಗಿ ರಾವಣ ಮಾಡುತ್ತಾನೆ, ಅದರಿಂದ ಕೊಳಕಾಗಿಬಿಡುತ್ತಾರೆ ಈಗ ತಂದೆ ಹೇಳುತ್ತಾರೆ- ಮಕ್ಕಳೇ, ಕೊಳಕು ಕರ್ಮವನ್ನು ಮಾಡಬೇಡಿ. ಹೊಸ ಪ್ರಪಂಚದಲ್ಲಿ ಈ ಕೊಳಕಿರುವುದಿಲ್ಲ. ಹೆಸರೇ ಆಗಿದೆ ಸ್ವರ್ಗ ಅಂದಮೇಲೆ ಮತ್ತೇನು! ಸ್ವರ್ಗವೆಂದು ಹೇಳುವುದರಿಂದಲೇ ಬಾಯಲ್ಲಿ ನೀರು ಬರುತ್ತದೆ. ದೇವತೆಗಳು ಇದ್ದು ಹೋಗಿದ್ದಾರೆ ಆದ್ದರಿಂದಲೇ ನೆನಪಾರ್ಥವಿದೆ. ಆತ್ಮವು ಅವಿನಾಶಿಯಾಗಿದೆ. ಎಷ್ಟೊಂದು ಪಾತ್ರಧಾರಿಗಳಿದ್ದಾರೆ, ಎಲ್ಲಿಯೋ ಕುಳಿತಿರಬೇಕು, ಅಲ್ಲಿಂದ ಪಾತ್ರವನ್ನಭಿನಯಿಸಲು ಬರುತ್ತಾರೆ. ಈಗ ಕಲಿಯುಗದಲ್ಲಿ ಎಷ್ಟೋಂದು ಮನುಷ್ಯರಿದ್ದಾರೆ. ದೇವಿ-ದೇವತೆಗಳ ರಾಜ್ಯವು ಇಲ್ಲವೇ ಇಲ್ಲ. ಯಾರಿಗಾದರೂ ತಿಳಿಸುವುದು ಬಹಳ ಸಹಜವಾಗಿದೆ. ಈಗ ಪುನಃ ಒಂದು ಧರ್ಮದ ಸ್ಥಾಪನೆಯಾಗುತ್ತಿದೆ, ಉಳಿದೆಲ್ಲಾ ಧರ್ಮಗಳು ಸಮಾಪ್ತಿಯಾಗುತ್ತವೆ. ನೀವು ಸ್ವರ್ಗದಲ್ಲಿದ್ದಾಗ ಮತ್ತ್ಯಾವುದೆ ಧರ್ಮವಿರಲಿಲ್ಲ. ಚಿತ್ರದಲ್ಲಿ ರಾಮನಿಗೆ ಬಾಣವನ್ನು ತೋರಿಸಿದ್ದಾರೆ ಆದರೆ ಅಲ್ಲಿ ಬಾಣಗಳ ಮಾತೇ ಇಲ್ಲ. ಇದೂ ಸಹ ನಿಮಗೆ ತಿಳಿದಿದೆ- ಕಲ್ಪದ ಹಿಂದೆ ಯಾರೆಷ್ಟು ಸರ್ವೀಸ್ ಮಾಡಿದ್ದಾರೆಯೋ ಅವರೇ ಈಗ ಮಾಡುತ್ತಾರೆ. ಯಾರು ಬಹಳ ಸರ್ವೀಸ್ ಮಾಡುವರೋ ಅವರು ತಂದೆಗೂ ಬಹಳ ಪ್ರಿಯರಾಗುತ್ತಾರೆ, ಲೌಕಿಕ ತಂದೆಗೂ ಸಹ ಯಾವ ಮಕ್ಕಳು ಚೆನ್ನಾಗಿ ಓದುತ್ತಾರೆ ಅವರಪ್ರತಿ ತಂದೆಗೆ ಬಹಳ ಪ್ರೀತಿಯಿರುತ್ತದೆ. ಯಾರು ಹೊಡೆದಾಡುತ್ತಾ-ಜಗಳವಾಡುತ್ತಾ, ತಿನ್ನುತ್ತಾ ಓಡಾಡಿದರೆ ಅವರನ್ನು ಪ್ರೀತಿ ಮಾಡುತ್ತಾರೆಯೇ! ಸರ್ವೀಸ್ ಮಾಡುವವರು ಬಹಳ ಪ್ರಿಯರಾಗುತ್ತಾರೆ.

ಒಂದು ಕಥೆಯಿದೆ- ಎರಡು ಬೆಕ್ಕುಗಳು ಕಚ್ಚಾಡಿದವು, ಬೆಣ್ಣೆಯನ್ನು ಕೃಷ್ಣನು ತಿಂದುಬಿಟ್ಟನು. ಇಡೀ ವಿಶ್ವರಾಜ್ಯರೂಪಿ ಬೆಣ್ಣೆಯು ನಿಮಗೆ ಸಿಗುತ್ತದೆ ಅಂದಾಗ ಈಗ ತಪ್ಪು ಮಾಡಬಾರದು, ಪತಿತರಾಗಬಾರದು. ಇದರಹಿಂದೆ ರಾಜ್ಯಭಾಗ್ಯವನ್ನು ಕಳೆದುಕೊಳ್ಳಬೇಡಿ. ತಂದೆಯ ಆದೇಶ ಸಿಗುತ್ತದೆ, ನೆನಪು ಮಾಡದಿದ್ದರೆ ಪಾಪದ ಹೊರೆಯು ಏರುತ್ತಾಹೋಗುವುದು ಮತ್ತೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ತುಂಬಾ-ತುಂಬಾ ಅಳುತ್ತೀರಿ. 21 ಜನ್ಮಗಳ ರಾಜ್ಯಭಾಗ್ಯವು ಸಿಗುತ್ತದೆ. ಒಂದುವೇಳೆ ಇದರಲ್ಲಿ ಅನುತ್ತೀರ್ಣರಾದರೆ ಬಹಳ ಅಳುತ್ತೀರಿ. ತಂದೆಯು ತಿಳಿಸುತ್ತಾರೆ- ಅತ್ತೆಯ ಮನೆಯನ್ನಾಗಲಿ, ತಂದೆಯ ಮನೆಯನ್ನಾಗಲಿ ನೆನಪು ಮಾಡಬಾರದು ಭವಿಷ್ಯ ಹೊಸ ಮನೆಯನ್ನೇ ನೆನಪು ಮಾಡಬೇಕು.

ತಂದೆಯು ತಿಳಿಸುತ್ತಾರೆ- ಯಾರನ್ನಾದರೂ ನೋಡಿ ಅವರ ಹಿಂದೆ ಸಿಕ್ಕಿಕೊಳ್ಳಬಾರದು, ಹೂವುಗಳಾಗಬೇಕು. ದೇವತೆಗಳು ಹೂವಾಗಿದ್ದರು, ಕಲಿಯುಗದಲ್ಲಿ ಮುಳ್ಳಾಗಿದ್ದರು. ಈಗ ನೀವು ಸಂಗಮದಲ್ಲಿ ಹೂಗಳಾಗುತ್ತಿದ್ದೀರಿ ಅಂದ ಮೇಲೆ ಯಾರಿಗೂ ದುಃಖವನ್ನು ಕೊಡಬಾರದು. ಇಲ್ಲಿ ಈ ರೀತಿಯಾದಾಗ ಸತ್ಯಯುಗದಲ್ಲಿ ಹೋಗುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅಂತ್ಯ ಕಾಲದಲ್ಲಿ ಒಬ್ಬ ತಂದೆಯ ವಿನಃ ಮತ್ತ್ಯಾರೂ ನೆನಪಿಗೆ ಬರಬಾರದು ಅದಕ್ಕಾಗಿ ಈ ಪ್ರಪಂಚದಲ್ಲಿ ಯಾರೊಂದಿಗೂ ಮನಸ್ಸನ್ನು ಇಡಬಾರದು. ಪತಿತ ಶರೀರಗಳೊಂದಿಗೆ ಪ್ರೀತಿ ಮಾಡಬಾರದು. ಕಲಿಯುಗೀ ಬಂಧನವನ್ನು ಕತ್ತರಿಸಬೇಕು.

2. ವಿಶಾಲಬುದ್ಧಿಯವರಾಗಿ ನಿರ್ಭಯರಾಗಬೇಕು. ಪುಣ್ಯಾತ್ಮರಾಗುವುದಕ್ಕಾಗಿ ಈಗ ಯಾವುದೇ ಪಾಪವನ್ನು ಮಾಡಬಾರದು. ಹೊಟ್ಟೆಗಾಗಿ ಸುಳ್ಳು ಹೇಳಬಾರದು. ಹಿಡಿ ಅವಲಕ್ಕಿಯನ್ನು ಸಫಲ ಮಾಡಿ ಸತ್ಯ-ಸತ್ಯ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ, ತಮ್ಮ ಮೇಲೆ ದಯೆತೋರಿಸಿಕೊಳ್ಳಬೇಕಾಗಿದೆ.

ವರದಾನ:
ಪರಮಾತ್ಮನ ಲಗನ್ ನಿಂದ ಸ್ವಯಂನ್ನು ಮತ್ತು ವಿಶ್ವವನ್ನು ನಿರ್ವಿಘ್ನವನ್ನಾಗಿ ಮಾಡುವಂತಹ ತಪಸ್ವೀಮೂರ್ತಿ ಭವ.

ಒಬ್ಬ ಪರಮಾತ್ಮನ ಲಗನ್ ನಲ್ಲಿರುವುದೇ ತಪಸ್ಯಾ ಆಗಿದೆ. ಈ ತಪಸ್ಯೆಯ ಬಲದಿಂದ ಸ್ವಯಂನ್ನು ಮತ್ತು ವಿಶ್ವವನ್ನು ಸದಾ ಕಾಲಕ್ಕೆ ನಿರ್ವಿಘ್ನ ಮಾಡಬಹುದು. ನಿರ್ವಿಘ್ನರಾಗಿರುವುದು ಮತ್ತು ನಿರ್ವಿಘ್ನರನ್ನಾಗಿ ಮಾಡುವುದೇ ನಿಮ್ಮ ಸತ್ಯ ಸೇವೆಯಾಗಿದೆ, ಯಾವುದು ಅನೇಕ ಪ್ರಕಾರದ ವಿಘ್ನಗಳಿಂದ ಸರ್ವ ಆತ್ಮರನ್ನು ಮುಕ್ತ ಮಾಡಿಬಿಡುತ್ತದೆ. ಇಂತಹ ಸೇವಾಧಾರಿ ಮಕ್ಕಳು ತಪಸ್ಯದ ಆಧಾರದಿಂದ ತಂದೆಯಿಂದ ಜೀವನ್ಮುಕ್ತಿಯ ವರದಾನ ಪಡೆದು ಅನ್ಯರಿಗೂ ಕೊಡಿಸಲು ನಿಮಿತ್ತರಾಗುವಿರಿ.

ಸ್ಲೋಗನ್:
ಚದುರಿಹೋಗಿರುವ ಸ್ನೇಹವನ್ನು ಒಟ್ಟುಗೂಡಿಸಿ ಒಬ್ಬ ತಂದೆಯ ಜೊತೆ ಸ್ನೇಹವಿಟ್ಟಿದ್ದೇ ಆದರೆ ಪರಿಶ್ರಮದಿಂದ ಬಿಡಿಸಿಕೊಳ್ಳುವಿರಿ.