04.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಸಹೋದರ-ಸಹೋದರಿಯ ಪರಿವೆಯಿಂದಲೂ ಹೊರಬಂದು ಸಹೋದರ-ಸಹೋದರನೆಂದು ತಿಳಿಯಿರಿ, ಆಗ ದೃಷ್ಟಿಯು ನಿರ್ವಿಕಾರಿಯಾಗುವುದು, ಯಾವಾಗ ಆತ್ಮವು ನಿರ್ವಿಕಾರಿಯಾಗುವುದೋ ಆಗ ಕರ್ಮಾತೀತರಾಗಲು ಸಾಧ್ಯ”

ಪ್ರಶ್ನೆ:
ತಮ್ಮ ಬಲಹೀನತೆಗಳನ್ನು ತಿಳಿಯಲು ಯಾವ ಯುಕ್ತಿಗಳನ್ನು ರಚಿಸಬೇಕು?

ಉತ್ತರ:
ತಮ್ಮ ನಡವಳಿಕೆಯ ರಿಜಿಸ್ಟರ್ ಇಡಿ, ಇದರಲ್ಲಿ ಪ್ರತಿನಿತ್ಯದ ಲೆಕ್ಕವನ್ನು ಬರೆದು ಇಟ್ಟುಕೊಳ್ಳಿ. ರಿಜಿಸ್ಟರ್ ಇಡುವುದರಿಂದ ತಮ್ಮ ಕೊರತೆಗಳು ಗೊತ್ತಾಗುವುದು ನಂತರ ಸಹಜವಾಗಿಯೇ ಅದನ್ನು ತೆಗೆಯಬಹುದು. ಬಲಹೀನತೆಗಳನ್ನು ತೆಗೆಯುತ್ತಾ-ತೆಗೆಯುತ್ತಾ ಒಬ್ಬ ತಂದೆಯ ವಿನಃ ಬೇರೆ ಯಾರ ನೆನಪೂ ಇರದಂತಹ ಸ್ಥಿತಿಯವರೆಗೆ ತಲುಪಬೇಕಾಗಿದೆ. ಯಾವುದೇ ಹಳೆಯ ವಸ್ತುವಿನೊಂದಿಗೆ ಮಮತ್ವವಿರಬಾರದು. ಒಳಗೆ ಏನನ್ನೂ ಬೇಡುವ ಆಸೆಯಿರಬಾರದು.

ಓಂ ಶಾಂತಿ.
ಒಂದು ಮಾನವ ಬುದ್ಧಿಯಾಗಿದೆ, ಇನ್ನೊಂದು ಈಶ್ವರೀಯ ಬುದ್ಧಿಯಾಗಿದೆ ನಂತರ ದೈವೀ ಬುದ್ಧಿಯಾಗುತ್ತದೆ. ಮಾನವ ಬುದ್ಧಿಯು ಆಸುರೀ ಬುದ್ಧಿಯಾಗಿದೆ, ವಿಕಾರಿ ದೃಷ್ಟಿಯಿದೆಯಲ್ಲವೆ. ಒಂದು ಪ್ರಕಾರದವರು ನಿರ್ವಿಕಾರಿ ದೃಷ್ಟಿಯವರು, ಇನ್ನೊಬ್ಬರು ವಿಕಾರಿ ದೃಷ್ಟಿಯವರು. ದೇವತೆಗಳು ನಿರ್ವಿಕಾರಿಗಳು ಸಭ್ಯದೃಷ್ಠಿ ಉಳ್ಳವರಾಗಿದ್ದಾರೆ ಮತ್ತು ಇಲ್ಲಿ ಕಲಿಯುಗೀ ಮನುಷ್ಯರು ವಿಕಾರಿಗಳು ಅಸಭ್ಯದೃಷ್ಠಿಉಳ್ಳವರಾಗಿದ್ದಾರೆ, ಅವರ ವಿಚಾರಗಳೇ ವಿಕಾರದ್ದಾಗಿರುತ್ತದೆ. ವಿಕಾರಿ ಧೃಷ್ಠಿಉಳ್ಳವರು ಮನುಷ್ಯರು ರಾವಣನ ಜೈಲಿನಲ್ಲಿರುತ್ತಾರೆ, ರಾವಣರಾಜ್ಯದಲ್ಲಿ ಎಲ್ಲರೂ ವಿಕಾರಿದೃಷ್ಠಿಯವರಾಗಿದ್ದಾರೆ. ಒಬ್ಬರೂ ನಿರ್ವಿಕಾರಿದೃಷ್ಠಿಯವರಿಲ್ಲ. ಈಗ ನೀವು ಪುರುಷೋತ್ತಮ ಸಂಗಮಯುಗದಲ್ಲಿದ್ದೀರಿ. ಈಗ ತಂದೆಯು ನಿಮ್ಮನ್ನು ವಿಕಾರಿ ದೃಷ್ಟಿಯಿಂದ ಪರಿವರ್ತನೆ ಮಾಡಿ ನಿರ್ವಿಕಾರಿ ದೃಷ್ಠಿಯವರನ್ನಾಗಿ ಮಾಡುತ್ತಿದ್ದಾರೆ. ವಿಕಾರಿದೃಷ್ಠಿಯವರಲ್ಲಿಯೂ ಅನೇಕ ಪ್ರಕಾರದವರಿರುತ್ತಾರೆ- ಕೆಲವರು ಅರ್ಧವಿಕಾರಿ ದೃಷ್ಠಿಯವರು,ಕೆಲವರು ಸ್ವಲ್ಪ ವಿಕಾರಿ ದೃಷ್ಠಿಯವರು. ಯಾವಾಗ ನಿರ್ವಿಕಾರಿ ದೃಷ್ಟಿಯವರಾಗಿಬಿಡುತ್ತೀರೋ ಆಗ ಕರ್ಮಾತೀತ ಸ್ಥಿತಿಯಾಗುವುದು ಮತ್ತೆ ಸಹೋದರ-ಸಹೋದರಿಯ ಪರಿವೆಯಿಂದಲೂ ತೆಗೆಯುತ್ತಾ ಆತ್ಮವು ಆತ್ಮವನ್ನು ನೋಡುತ್ತದೆ ಶರೀರವಂತು ಇರುವುದೇ ಇಲ್ಲವೆಂದಾಗ ವಿಕಾರಿ ದೃಷ್ಟಿಯವರು ಹೇಗಾಗುತ್ತೀರಿ? ಆದ್ದರಿಂದ ತಂದೆಯು ತಿಳಿಸುತ್ತಾರೆ- ತಮ್ಮನ್ನು ಸಹೋದರ-ಸಹೋದರಿಯ ಪರಿವೆಯಿಂದಲೂ ತೆಗೆಯುತ್ತಾ ಹೋಗಿ. ಸಹೋದರ-ಸಹೋದರರೆಂದು ತಿಳಿಯಿರಿ. ಇದೂ ಸಹ ಬಹಳ ಗುಹ್ಯವಾದ ಮಾತಾಗಿದೆ. ನಿರ್ವಿಕಾರಿ ದೃಷ್ಟಿಯ ಅರ್ಥವು ಯಾರ ಬುದ್ಧಿಯಲ್ಲಿಯೂ ಬರಲು ಸಾಧ್ಯವಿಲ್ಲ. ಒಂದುವೇಳೆ ಬಂದುಬಿಟ್ಟರೆ ಅವರು ಶ್ರೇಷ್ಠಪದವಿಯನ್ನು ಪಡೆಯಬೇಕು. ತಂದೆಯು ತಿಳಿಸುತ್ತಾರೆ- ತಮ್ಮನ್ನು ಆತ್ಮವೆಂದು ತಿಳಿಯಿರಿ, ಶರೀರವನ್ನು ಮರೆಯಬೇಕಾಗಿದೆ. ಈ ಶರೀರವನ್ನೂ ಸಹ ತಂದೆಯ ನೆನಪಿನಲ್ಲಿಯೇ ಬಿಡಬೇಕಾಗಿದೆ- ವಿಕಾರಿ ದೃಷ್ಟಿ ಇದ್ದಾಗ ಅವಶ್ಯವಾಗಿ ಒಳಗೆ ತಿನ್ನುತ್ತಾ ಇರುತ್ತದೆ, ಗುರಿಯು ಉನ್ನತವಾಗಿದೆ. ಭಲೆ ಯಾರಾದರೂ ಒಳ್ಳೊಳ್ಳೆಯ ಮಕ್ಕಳೇ ಆಗಿರಬಹುದು ಆದರೂ ಸಹ ಒಂದಲ್ಲ ಒಂದು ತಪ್ಪುಗಳು ಅವಶ್ಯವಾಗಿ ಆಗುತ್ತವೆ ಏಕೆಂದರೆ ಮಾಯೆಯಿದೆಯಲ್ಲವೆ. ಕರ್ಮಾತೀತರಂತೂ ಯಾರೂ ಆಗಿರಲು ಸಾಧ್ಯವಿಲ್ಲ. ಕರ್ಮಾತೀತ ಸ್ಥಿತಿಯನ್ನು ಅಂತಿಮದಲ್ಲಿ ಪಡೆಯುತ್ತಾರೆ. ಆಗ ನಿರ್ವಿಕಾರಿ ದೃಷ್ಟಿ ಯವರಾಗಿಬಿಡುತ್ತಾರೆ ಮತ್ತೆ ಅದೇ ಸಹೋದರತ್ವದ ಪ್ರೀತಿಯಿರುತ್ತದೆ. ಆತ್ಮಿಕ ಸಹೋದರತ್ವದ ಪ್ರೀತಿಯು ಬಹಳ ಚೆನ್ನಾಗಿರುತ್ತದೆ ನಂತರ ವಿಕಾರಿ ದೃಷ್ಟಿಯಾಗುವುದಿಲ್ಲ ಆಗಲೇ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ತಂದೆಯು ಪೂರ್ಣ ಗುರಿ-ಉದ್ದೇಶವನ್ನಂತೂ ತಿಳಿಸುತ್ತಾರೆ. ಮಕ್ಕಳೂ ಸಹ ತಿಳಿದುಕೊಳ್ಳುತ್ತೀರಿ ನಮ್ಮಲ್ಲಿ ಇಂತಿಂತಹ ಬಲಹೀನತೆಯಿದೆ, ಯಾವಾಗ ರಿಜಿಸ್ಟರನ್ನು ಇಡುತ್ತೀರೋ ಆಗ ಬಲಹೀನತೆಗಳ ಬಗ್ಗೆ ತಿಳಿಯುತ್ತದೆ. ಕೆಲವರು ರಿಜಿಸ್ಟರ್ ಇಡದಿದ್ದರೂ ಸುಧಾರಣೆಯಾಗಲು ಸಾಧ್ಯವಿದೆ ಆದರೆ ಯಾರು ಕಚ್ಚಾ ಆಗಿರುವರೋ ಅವರು ಅವಶ್ಯವಾಗಿ ರಿಜಿಸ್ಟರ್ ಇಡಬೇಕು. ಕಚ್ಚಾ ಇರುವವರು ಅನೇಕರಿದ್ದಾರೆ. ಕೆಲಕೆಲವರಿಗಂತೂ ಬರೆಯುವುದೇ ಬರುವುದಿಲ್ಲ. ನಿಮ್ಮ ಸ್ಥಿತಿಯು ಈ ರೀತಿಯಿರಬೇಕು- ತಂದೆಯ ವಿನಃ ಮತ್ತ್ಯಾರ ನೆನಪೂ ಬರಬಾರದು. ನಾನಾತ್ಮನು ಅಶರೀರಿಯಾಗಿ ಬಂದೆನು, ಈಗ ಅಶರೀರಿಯಾಗಿ ಹೋಗಬೇಕಾಗಿದೆ. ಇದನ್ನು ಕುರಿತು ಒಂದು ಕಥೆಯೂ ಇದೆ. ಅವರು ಹೇಳಿದರು- ನೀವು ಈ ಊರುಗೋಲನ್ನೂ ಸಹ ತೆಗೆದುಕೊಳ್ಳಬೇಡಿ, ಅದು ಅಂತಿಮದಲ್ಲಿ ನೆನಪಿಗೆ ಬರುತ್ತದೆ. ತಂದೆಯ ವಿನಃ ಮತ್ತೇನೂ ನೆನಪಿಗೆ ಬರಬಾರದು, ಎಷ್ಟು ಉನ್ನತ ಗುರಿಯಾಗಿದೆ! ಕ್ಷಣಿಕ ವಸ್ತುಗಳೆಲ್ಲಿ, ಶಿವತಂದೆಯ ನೆನಪೆಲ್ಲಿ! ಬೇಡುವ ಇಚ್ಛೆಯೂ ಸಹ ಬರಬಾರದು. ಪ್ರತಿಯೊಬ್ಬರೂ ಕೊನೆಪಕ್ಷ 6 ಗಂಟೆಯಾದರೂ ಸೇವೆ ಮಾಡಬೇಕು. ಹಾಗೆ ನೋಡಿದರೆ ಸರ್ಕಾರದ ಸೇವೆಯು 8 ಗಂಟೆಗಳಿರುತ್ತದೆ ಆದರೆ ಪಾಂಡವಸರ್ಕಾರದ ಸೇವೆಯನ್ನು ಕೊನೆಪಕ್ಷ 5-6 ಗಂಟೆಯಾದರೂ ಅವಶ್ಯವಾಗಿ ಮಾಡಿ. ವಿಕಾರಿ ಮನುಷ್ಯರೆಂದೂ ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ನಿರ್ವಿಕಾರಿ ಪ್ರಪಂಚವಾಗಿರುತ್ತದೆ. ಅಂದಾಗ ನೀವು ಮಕ್ಕಳ ಸ್ಥಿತಿಯು ಎಷ್ಟೊಂದು ಉಪರಾಂ ಆಗಿರಬೇಕು. ಯಾವುದೇ ಛೀ ಛೀ ವಸ್ತುವಿನಲ್ಲಿ ಮಮತ್ವವಿರಬಾರದು, ಶರೀರದಲ್ಲಿಯೂ ಸಹ ಮಮತ್ವವಿರಬಾರದು, ಅಷ್ಟು ಯೋಗಿಗಳಾಗಬೇಕಾಗಿದೆ. ಯಾವಾಗ ಇಂತಹ ಸತ್ಯ-ಸತ್ಯ ಯೋಗಿಗಳಾಗುತ್ತೀರೋ ಆಗ ಫ್ರೆಷ್ ಆಗಿರುತ್ತೀರಿ. ಎಷ್ಟು ನೀವು ಸತೋಪ್ರಧಾನರಾಗುತ್ತಾ ಹೋಗುತ್ತೀರಿ ಅಷ್ಟು ಖುಷಿಯ ನಶೆಯೇರುತ್ತಾ ಹೋಗುತ್ತದೆ. 5000 ವರ್ಷಗಳ ಮೊದಲು ಇದೇ ಖುಷಿಯಿತ್ತು, ಸತ್ಯಯುಗದಲ್ಲಿಯೂ ಅದೇ ಖುಷಿಯಿರುವುದು. ಇಲ್ಲಿಯೂ ಖುಷಿಯಿರುವುದು ಮತ್ತೆ ಇದೇ ಖುಷಿಯನ್ನು ಜೊತೆ ತೆಗೆದುಕೊಂಡು ಹೋಗುತ್ತೀರಿ. ಅಂತ್ಯಮತಿ ಸೋ ಗತಿಯೆಂದು ಹೇಳಲಾಗುತ್ತದೆಯಲ್ಲವೆ. ಈಗಿನದು ಮತವಾಗಿದೆ ಮತ್ತೆ ಸತ್ಯಯುಗದಲ್ಲಿ ಗತಿಯಾಗುವುದು. ಇದನ್ನು ವಿಚಾರಸಾಗರ ಮಂಥನ ಮಾಡಬೇಕಾಗುತ್ತದೆ.

ತಂದೆಯಂತೂ ದುಃಖಹರ್ತ-ಸುಖಕರ್ತನಾಗಿದ್ದಾರೆ, ನಾವು ಅಂತಹ ತಂದೆಯ ಮಕ್ಕಳಾಗಿದ್ದೇವೆಂದು ನೀವು ಹೇಳುತ್ತೀರಿ ಅಂದಮೇಲೆ ಯಾರಿಗೂ ದುಃಖವನ್ನು ಕೊಡಬಾರದು, ಎಲ್ಲರಿಗೆ ಸುಖದ ಮಾರ್ಗವನ್ನು ತಿಳಿಸಬೇಕು. ಒಂದುವೇಳೆ ಸುಖ ಕೊಡುವುದಿಲ್ಲವೆಂದರೆ ಅವಶ್ಯವಾಗಿ ದುಃಖ ಕೊಡುತ್ತೀರೆಂದರ್ಥ. ಇದು ಪುರುಷೋತ್ತಮ ಸಂಗಮಯುಗವಾಗಿದೆ. ಈಗ ನೀವು ಸತೋಪ್ರಧಾನರಾಗಲು ಪುರುಷಾರ್ಥ ಮಾಡುತ್ತೀರಿ. ಪುರುಷಾರ್ಥಿಗಳೂ ಸಹ ನಂಬರ್ವಾರ್ ಇರುತ್ತಾರೆ. ಒಳ್ಳೆಯ ಮಕ್ಕಳು ಒಳ್ಳೆಯ ಸೇವೆ ಮಾಡುತ್ತಾರೆಂದರೆ ಇಂತಹ ಮಗು ಯೋಗಿಮಗುವೆಂದು ತಂದೆಯು ಅವರ ಮಹಿಮೆ ಮಾಡುತ್ತಾರೆ. ಯಾರು ಸೇವಾಧಾರಿ ಮಕ್ಕಳಾಗಿರುವರೋ ಅವರು ನಿರ್ವಿಕಾರಿ ಜೀವನದಲ್ಲಿದ್ದಾರೆ. ಅವರಿಗೆ ಸ್ವಲ್ಪವೂ ಅಂತಿಂತಹ ವಿಚಾರಗಳು ಬರುವುದಿಲ್ಲ, ಅವರೇ ಅಂತಿಮದಲ್ಲಿ ಕರ್ಮಾತೀತ ಸ್ಥಿತಿಯನ್ನು ಪಡೆಯುತ್ತಾರೆ. ನೀವು ಬ್ರಾಹ್ಮಣರೇ ನಿರ್ವಿಕಾರಿ ದೃಷ್ಟಿಯವರಾಗುತ್ತಿದ್ದೀರಿ. ಮನುಷ್ಯರಿಗೆಂದೂ ದೇವತೆಗಳೆಂದು ಹೇಳಲು ಸಾಧ್ಯವಿಲ್ಲ. ಯಾರು ವಿಕಾರಿದೃಷ್ಠಿಯಾಗಿರುವರೋ ಅವರೇ ಅವಶ್ಯವಾಗಿ ಪಾಪ ಮಾಡುವರು. ಸತ್ಯಯುಗೀ ಪ್ರಪಂಚವು ಪವಿತ್ರ ಪ್ರಪಂಚವಾಗಿದೆ, ಇದು ಪತಿತ ಪ್ರಪಂಚವಾಗಿದೆ. ಈ ಅರ್ಥವನ್ನೂ ಸಹ ತಿಳಿದುಕೊಂಡಿಲ್ಲ. ಯಾವಾಗ ಬ್ರಾಹ್ಮಣರಾಗುವರೋ ಆಗಲೇ ಅರಿತುಕೊಳ್ಳುವರು. ಹೇಳುತ್ತಾರೆ- ಜ್ಞಾನವಂತೂ ಬಹಳ ಚೆನ್ನಾಗಿದೆ ಆದರೆ ಸಮಯವಿದ್ದಾಗ ಬರುತ್ತೇನೆ, ಅದಕ್ಕೆ ತಂದೆಯು ತಿಳಿಯುತ್ತಾರೆ ಎಂದೂ ಬರುವುದಿಲ್ಲ. ಇದಂತೂ ತಂದೆಯ ನಿಂದನೆಯಾಯಿತು. ಮನುಷ್ಯರಿಂದ ದೇವತೆಗಳಾಗುತ್ತಾರೆಂದರೆ ಅಂತಹ ವಿದ್ಯೆಯನ್ನು ಬೇಗನೆ ತಿಳಿದುಕೊಳ್ಳಬೇಕಲ್ಲವೆ. ಒಂದುವೇಳೆ ನಾಳೆ ಎಂದು ಹೇಳಿ ನಾಳೆಯ ಮೇಲೆ ಹಾಕಿದರೆ ಮಾಯೆಯು ಮೂಗನ್ನು ಹಿಡಿದು ಚರಂಡಿಯಲ್ಲಿ ಹಾಕಿಬಿಡುತ್ತದೆ. ನಾಳೆ-ನಾಳೆ ಎನ್ನುತ್ತಾ ಕಾಲವು ಕಬಳಿಸಿಬಿಡುತ್ತದೆ ಆದ್ದರಿಂದ ಶುಭಕಾರ್ಯದಲ್ಲೆಂದೂ ತಡಮಾಡಬಾರದು. ಮೃತ್ಯುವಂತೂ ತಲೆಯ ಮೇಲೆ ನಿಂತಿದೆ. ಎಷ್ಟೊಂದು ಮನುಷ್ಯರು ಆಕಸ್ಮಿಕವಾಗಿ ಶರೀರವನ್ನು ಬಿಡುತ್ತಾರೆ. ಈಗ ಬಾಂಬು ಬಿದ್ದರೆ ಎಷ್ಟೊಂದು ಮನುಷ್ಯರು ಸಾಯುತ್ತಾರೆ. ಭೂಕಂಪವಾಗುತ್ತದೆ ಅಲ್ಲವೆ. ಅಂದಮೇಲೆ ಮೊದಲೇ ತಿಳಿಯುತ್ತದೆಯೇನು! ನಾಟಕದನುಸಾರ ಪ್ರಾಕೃತಿಕ ವಿಕೋಪಗಳೂ ಸಹ ಆಗಬೇಕಾಗಿದೆ, ಇದನ್ನಂತೂ ಯಾರೂ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಬಹಳಷ್ಟು ನಷ್ಟವಾಗಿಬಿಡುತ್ತದೆ ನಂತರ ಸರ್ಕಾರವು ರೈಲಿನ ಪ್ರಯಾಣದ ಧರವನ್ನು ಹೆಚ್ಚಿಸಿಬಿಡುತ್ತದೆ. ಮನುಷ್ಯರು ಹೋಗಲೇಬೇಕಾಗುತ್ತದೆ, ಮನುಷ್ಯರು ಕೊಡಲು ಸಾಧ್ಯವಾಗುವಹಾಗೆ ಹೇಗೆ ಲಾಭವನ್ನು ಹೆಚ್ಚಿಸುವುದು ಎಂದು ವಿಚಾರ ಮಾಡುತ್ತಿರುತ್ತಾರೆ. ದಾನ್ಯಗಳು ಎಷ್ಟೊಂದು ಬೆಲೆಯೇರಿದೆ! ಆದ್ದರಿಂದ ತಂದೆಯು ಕುಳಿತು ತಿಳಿಸಿಕೊಡುತ್ತಾರೆ- ನಿರ್ವಿಕಾರಿ ದೃಷ್ಟಿಯವರಿಗೆ ಪವಿತ್ರ ಆತ್ಮರೆಂದು ಹೇಳಲಾಗುತ್ತದೆ. ಈ ಪ್ರಪಂಚವೇ ವಿಕಾರಿ ದೃಷ್ಠಿಯುಳ್ಳವರದಾಗಿದೆ, ನೀವೀಗ ನಿರ್ವಿಕಾರಿ ದೃಷ್ಟಿಯುಳ್ಳವರಾಗುತ್ತಿರುವಿರಿ,ಪರಿಶ್ರಮವಿದೆ ಶ್ರೇಷ್ಠ ಪದವಿ ಪಡೆಯುವುದಂತೂ ಚಿಕ್ಕಮ್ಮನ ಮನೆಯಂತಲ್ಲ. ಯಾರು ಬಹಳ ನಿರ್ವಿಕಾರಿ ದೃಷ್ಠಿಯವರಾಗುವರೋ ಅವರೇ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ನೀವಿಲ್ಲಿ ನರನಿಂದ ನಾರಾಯಣನಾಗಲು ಬಂದಿದ್ದೀರಿ, ಆದರೆ ಯಾರು ನಿರ್ವಿಕಾರಿ ದೃಷ್ಟಿಯವರಾಗುವುದಿಲ್ಲವೋ, ಜ್ಞಾನವನ್ನು ತಿಳಿದುಕೊಳ್ಳುವುದಿಲ್ಲವೋ ಅವರು ಪದವಿಯನ್ನೂ ಕಡಿಮೆ ಪಡೆಯುತ್ತಾರೆ. ಈ ಸಮಯದಲ್ಲಿ ಎಲ್ಲಾ ಮನುಷ್ಯರದು ವಿಕಾರಿ ದೃಷ್ಟಿಯಾಗಿದೆ, ಸತ್ಯಯುಗದಲ್ಲಿ ನಿರ್ವಿಕಾರಿ ದೃಷ್ಟಿಯಿರುತ್ತದೆ.

ತಂದೆಯು ತಿಳಿಸುತ್ತಾರೆ- ಮಧುರ ಮಕ್ಕಳೇ, ನೀವು ದೇವಿ-ದೇವತೆಗಳು ಸ್ವರ್ಗದ ಮಾಲೀಕರಾಗಬೇಕೆಂದರೆ ಬಹಳ-ಬಹಳ ನಿರ್ವಿಕಾರಿ ದೃಷ್ಟಿಯವರಾಗಿ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಆಗ 100% ಆತ್ಮಾಭಿಮಾನಿಗಳಾಗುತ್ತೀರಿ. ಯಾರಿಗೆ ಬೇಕಾದರೂ ಅರ್ಥವನ್ನು ತಿಳಿಸಬೇಕಾಗಿದೆ. ಸತ್ಯಯುಗದಲ್ಲಿ ಪಾಪದ ಯಾವುದೇ ಮಾತಿರುವುದಿಲ್ಲ. ಅವರು ಸರ್ವಗುಣ ಸಂಪನ್ನ, ಸಂಪೂರ್ಣ ನಿರ್ವಿಕಾರಿ ದೃಷ್ಟಿಯವರಾಗಿರುತ್ತಾರೆ, ಚಂದ್ರವಂಶಿಯರಿಗೂ 2 ಕಲೆಗಳು ಕಡಿಮೆಯಾಗುತ್ತದೆ, ಚಂದ್ರಮನಿಗೂ ಕೊನೆಯಲ್ಲಿ ಬಂದು ಒಂದು ಚಿಕ್ಕಗೆರೆಯಷ್ಟೇ ಉಳಿಯುತ್ತದೆ. ಒಮ್ಮೆಲೆ ಇಲ್ಲದಂತಾಗಿಬಿಡುವುದಿಲ್ಲ. ಆ ರೀತಿಯಾದರೆ ಪ್ರಾಯಲೋಪವಾಯಿತೆಂದು ತಿಳಿಯುತ್ತಾರೆ ಆದರೆ ಮೋಡಗಳಲ್ಲಿ ಕಾಣಿಸುವುದಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ- ನಿಮ್ಮ ಜ್ಯೋತಿಯೂ ಸಹ ಸಂಪೂರ್ಣ ನಂದಿಹೋಗುವುದಿಲ್ಲ. ಅತಿಸ್ವಲ್ಪ ಪ್ರಕಾಶವಿರುತ್ತದೆ. ಮತ್ತೆ ನೀವು ಸುಪ್ರೀಂ ಬ್ಯಾಟರಿಯಿಂದ ಶಕ್ತಿಯನ್ನು ಪಡೆದುಕೊಳ್ಳುತ್ತೀರಿ. ಸ್ವಯಂ ತಂದೆಯೇ ಬಂದು ನನ್ನ ಜೊತೆ ಬುದ್ಧಿಯೋಗವನ್ನು ಹೇಗೆ ಇಡುವುದೆಂಬುದನ್ನು ಕಲಿಸುತ್ತಾರೆ. ಶಿಕ್ಷಕರು ಓದಿಸುತ್ತಾರೆಂದರೆ ಬುದ್ಧಿಯೋಗವು ಶಿಕ್ಷಕರ ಜೊತೆಯಿರುತ್ತದೆಯಲ್ಲವೆ. ಶಿಕ್ಷಕರು ಯಾವ ಮತವನ್ನು ಕೊಡುತ್ತಾರೆಯೋ ಅದರಂತೆ ಅವರು ಓದುತ್ತಾರೆ. ನಾವೂ ಓದಿ ಶಿಕ್ಷಕ ಅಥವಾ ಬ್ಯಾರಿಸ್ಟರ್ ಆಗುತ್ತೇವೆಂದು ತಿಳಿಯುತ್ತಾರೆ. ಇದರಲ್ಲಿ ಕೃಪೆ ಅಥವಾ ಆಶೀರ್ವಾದದ ಮಾತಿರುವುದಿಲ್ಲ. ಮತ್ತು ತಲೆಬಾಗುವ ಅವಶ್ಯಕತೆಯೂ ಇರುವುದಿಲ್ಲ. ಹಾ! ಯಾರಾದರೂ ಹರಿಓಂ ಇಲ್ಲವೆ ರಾಮ-ರಾಮ ಎಂದು ಹೇಳುತ್ತಾರೆಂದರೆ ಅದಕ್ಕೆ ಪ್ರತಿಯಾಗಿ ನಾವು ನಮಸ್ಕಾರ ಮಾಡಬೇಕಾಗುತ್ತದೆ. ಈ ರೀತಿ ಗೌರವ ಕೊಡಬೇಕಾಗುತ್ತದೆ, ಅಹಂಕಾರವನ್ನು ತೋರಿಸಬಾರದು. ನಿಮಗೆ ತಿಳಿದಿದೆ- ನಾವಂತೂ ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಯಾರಾದರೂ ಭಕ್ತಿಬಿಡುತ್ತಾರೆಂದರೂ ಸಹ ಜಗಳವಾಗುತ್ತದೆ. ಭಕ್ತಿಬಿಡುವವರನ್ನು ನಾಸ್ತಿಕರೆಂದು ತಿಳಿಯುತ್ತಾರೆ, ಅವರು ನಾಸ್ತಿಕರೆಂದು ಹೇಳುವುದರಲ್ಲಿ ಮತ್ತು ನೀವು ಹೇಳುವುದರಲ್ಲಿ ಎಷ್ಟೊಂದು ಅಂತರವಿದೆ. ನೀವು ಹೇಳುತ್ತೀರಿ- ಅವರು ತಂದೆಯನ್ನೇ ಅರಿತುಕೊಂಡಿಲ್ಲ ಆದ್ದರಿಂದ ನಾಸ್ತಿಕರು ನಿರ್ಧನಿಕರಾಗಿದ್ದಾರೆ ಆದ್ದರಿಂದಲೇ ಎಲ್ಲರೂ ಹೊಡೆದಾಡುತ್ತಾ ಜಗಳವಾಡುತ್ತಿರುತ್ತಾರೆ. ಮನೆ-ಮನೆಯಲ್ಲಿ ಜಗಳ-ಅಶಾಂತಿಯಿರುತ್ತದೆ. ಕ್ರೋಧದ ಚಿಹ್ನೆ ಅಶಾಂತಿಯಾಗಿದೆ. ಸತ್ಯಯುಗದಲ್ಲಿ ಎಷ್ಟೊಂದು ಅಪಾರ ಶಾಂತಿಯಿರುತ್ತದೆ. ಭಕ್ತಿಯಲ್ಲಿ ಬಹಳ ಶಾಂತಿ ಸಿಗುತ್ತದೆಯೆಂದು ಮನುಷ್ಯರು ಹೇಳುತ್ತಾರೆ ಆದರೆ ಅದು ಅಲ್ಪಕಾಲಕ್ಕಾಗಿ, ಸದಾಕಾಲಕ್ಕಾಗಿ ಶಾಂತಿ ಬೇಕಲ್ಲವೆ. ನೀವು ಧನಿಕರಿಂದ ನಿರ್ಧನಿಕರಾಗಿಬಿಡುತ್ತೀರಿ ಆಗ ಶಾಂತಿಯಿಂದ ಮತ್ತೆ ಅಶಾಂತಿಯಲ್ಲಿ ಬಂದುಬಿಡುತ್ತೀರಿ, ಬೇಹದ್ದಿನ ತಂದೆಯು ಬೇಹದ್ದಿನ ಸುಖದ ಆಸ್ತಿಯನ್ನು ಕೊಡುತ್ತಾರೆ. ಹದ್ದಿನ ತಂದೆಯಿಂದ ಹದ್ದಿನ ಆಸ್ತಿಯು ಸಿಗುತ್ತದೆ. ವಾಸ್ತವದಲ್ಲಿ ಅದು ದುಃಖದ ಆಸ್ತಿಯಾಗಿದೆ. ಕಾಮ ಕಠಾರಿಯ ಆಸ್ತಿಯಾಗಿದೆ. ಅದರಲ್ಲಿ ದುಃಖವೇ ದುಃಖವಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ಆದಿ-ಮಧ್ಯ-ಅಂತ್ಯ ದುಃಖವನ್ನೇ ಪಡೆಯುತ್ತೀರಿ.

ತಂದೆಯು ತಿಳಿಸುತ್ತಾರೆ- ನಾನು ಪತಿತ-ಪಾವನ ತಂದೆಯನ್ನು ನೆನಪು ಮಾಡಿ, ಇದಕ್ಕೆ ಸೃಷ್ಠಿಚಕ್ರದ ಸಹಜ ಜ್ಞಾನ ಮತ್ತು ಸಹಜ ನೆನಪೆಂದು ಹೇಳಲಾಗುತ್ತದೆ. ನೀವು ತಮ್ಮನ್ನು ಆದಿಸನಾತನ ದೇವಿದೇವತಾ ಧರ್ಮದವರೆಂದು ತಿಳಿಯುತ್ತೀರಿ. ಅಂದಾಗ ಅವಶ್ಯವಾಗಿ ಸ್ವರ್ಗದಲ್ಲಿ ಬರುತ್ತೀರಿ. ಸ್ವರ್ಗದಲ್ಲಿ ಎಲ್ಲರೂ ನಿರ್ವಿಕಾರಿ ದೃಷ್ಟಿಯವರಾಗಿದ್ದರು, ದೇಹಾಭಿಮಾನದವರನ್ನು ವಿಕಾರಿ ದೃಷ್ಟಿಯವರೆಂದು ಕರೆಯಲಾಗುವುದು. ನಿರ್ವಿಕಾರಿ ದೃಷ್ಟಿಯವರಲ್ಲಿ ಯಾವುದೇ ವಿಕಾರವಿರುವುದಿಲ್ಲ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ ಆದರೆ ಮಕ್ಕಳಿಗೆ ಇದೂ ಸಹ ನೆನಪಿರುವುದಿಲ್ಲ ಏಕೆಂದರೆ ವಿಕಾರಿ ದೃಷ್ಟಿಯಿದೆ. ಅಂದಾಗ ಛೀ ಛೀ ಪ್ರಪಂಚವನ್ನೇ ಅವರು ನೆನಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ- ಈ ಪ್ರಪಂಚವನ್ನು ಮರೆತುಬಿಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾರ ಶರೀರದಲ್ಲಿ ಅಂಶಮಾತ್ರವೂ ಮಮತ್ವವಿರದಂತಹ ಯೋಗಿಗಳಾಗಬೇಕಾಗಿದೆ. ಯಾವುದೇ ಛೀ ಛೀ ವಸ್ತುವಿನಲ್ಲಿ ಆಸಕ್ತಿಯಿರಬಾರದು. ಸ್ಥಿತಿಯು ಇಷ್ಟು ಉಪರಾಂ ಆಗಿರಲಿ ಖುಷಿಯ ನಶೆಯೇರಿರಲಿ.

2. ಮೃತ್ಯುವು ತಲೆಯ ಮೇಲೆ ನಿಂತಿದೆ ಆದ್ದರಿಂದ ಶುಭಕಾರ್ಯದಲ್ಲಿ ನಿಧಾನಿಸಬಾರದು. ನಾಳೆಯ ಮೇಲೆ ಹಾಕಬಾರದು.

ವರದಾನ:
ಚತುರಾತಿಚತುರ ತಂದೆಯ ಜೊತೆ ಚತುರತೆ ತೋರಿಸುವ ಬದಲು ಅರಿತುಕೊಳ್ಳುವಂತಹ ಶಕ್ತಿಯ ಮುಖಾಂತರ ಪಾಪಗಳಿಂದ ಮುಕ್ತ ಭವ.

ಕೆಲವು ಮಕ್ಕಳು ಚತುರಾತಿ ಚತುರ ತಂದೆಯ ಜೊತೆಯೂ ಕೂಡ ತಮ್ಮ ಚತುರತೆಯನ್ನು ತೋರಿಸುತ್ತಾರೆ- ತಮ್ಮ ಕೆಲಸ ಸಿದ್ಧಮಾಡಲು ತಮ್ಮ ಹೆಸರು ಪ್ರಸಿದ್ದ ಮಾಡಲು ಆ ಸಮಯದಲ್ಲಿ ಅರಿತುಕೊಂಡುಬಿಡುತ್ತಾರೆ ಆದರೆ ಆ ರೀತಿ ಅರಿತುಕೊಳ್ಳುವುದರಲ್ಲಿ ಶಕ್ತಿಯಿರುವುದಿಲ್ಲ ಇದರಿಂದ ಪರಿವರ್ತನೆಯಾಗುವುದಿಲ್ಲ. ಕೆಲವರು ಯಾರು ತಿಳಿಯುತ್ತಾರೆ ಇದು ಸರಿಯಿಲ್ಲ ಎಂದು ಆದರೆ ಯೋಚಿಸುತ್ತಾರೆ ಎಲ್ಲಿ ನನ್ನ ಹೆಸರು ಕೆಡಬಾರದು ಎಂದು ಇದರಿಂದ ತಮ್ಮ ವಿವೇಕದ ಕೊಲೆಮಾಡುತ್ತಾರೆ. ಇದೂ ಸಹ ಪಾಪದ ಖಾತೆಯಲ್ಲಿ ಜಮಾ ಆಗುತ್ತದೆ ಆದ್ದರಿಂದ ಚತುರಾಯಿಯನ್ನು ಬಿಟ್ಟು ಸತ್ಯ ಹೃದಯದ ಅರಿವಿನಿಂದ ಸ್ವಯಂ ಪರಿವರ್ತನೆಯಾಗಿ ಪಾಪಗಳಿಂದ ಮುಕ್ತರಾಗಿ.

ಸ್ಲೋಗನ್:
ಜೀವನದಲ್ಲಿರುತ್ತಾ ಭಿನ್ನ-ಭಿನ್ನ ಬಂಧನಗಳಿಂದ ಮುಕ್ತರಾಗಿರುವುದೇ ಜೀವನಮುಕ್ತಿಯ ಸ್ಥಿತಿ.