04.07.25         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ಬಂಧನಮುಕ್ತರಾಗಿ ಸರ್ವೀಸಿನಲ್ಲಿ ತತ್ಪರರಾಗಿರಿ ಏಕೆಂದರೆ ಈ ಸರ್ವೀಸಿನಲ್ಲಿ ಬಹಳ ಶ್ರೇಷ್ಠಸಂಪಾದನೆಯಿದೆ, 21 ಜನ್ಮಗಳಿಗಾಗಿ ನೀವು ವೈಕುಂಠದ ಮಾಲೀಕರಾಗುತ್ತೀರಿ

ಪ್ರಶ್ನೆ:
ಪ್ರತಿಯೊಂದು ಮಗು ಯಾವ ಹವ್ಯಾಸವನ್ನಿಟ್ಟುಕೊಳ್ಳಬೇಕಾಗಿದೆ?

ಉತ್ತರ:
ಮುರುಳಿಯ ವಿಷಯದ ಬಗ್ಗೆ ತಿಳಿಸುವ ಹವ್ಯಾಸ ಮಾಡಿಕೊಳ್ಳಬೇಕು. ಒಂದುವೇಳೆ ಬ್ರಾಹ್ಮಿಣಿಯು ಎಲ್ಲಾದರೂ ಹೋಗುತ್ತಾರೆಂದರೆ ಪರಸ್ಪರ ಸೇರಿ ತರಗತಿಯನ್ನು ನಡೆಸಬೇಕು. ಒಂದುವೇಳೆ ಮುರುಳಿ ಹೇಳುವುದನ್ನು ಕಲಿಯಲಿಲ್ಲವೆಂದರೆ ತಮ್ಮ ಸಮಾನರನ್ನಾಗಿ ಹೇಗೆ ಮಾಡಿಕೊಳ್ಳುತ್ತೀರಿ? ಬ್ರಾಹ್ಮಿಣಿ ಇಲ್ಲದಿದ್ದರೆ ತಬ್ಬಿಬ್ಬಾಗಬಾರದು. ವಿದ್ಯೆಯಂತೂ ಸಹಜವಾಗಿದೆ ಆದ್ದರಿಂದ ತರಗತಿಯನ್ನು ನಡೆಸುತ್ತಾ ಇರಿ. ಈ ಅಭ್ಯಾಸವನ್ನು ಮಾಡಿಕೊಳ್ಳಬೇಕಾಗಿದೆ.

ಗೀತೆ:
ಮುಖವನ್ನು ನೋಡಿಕೋ ಪ್ರಾಣಿ.................

ಓಂ ಶಾಂತಿ.
ಮಕ್ಕಳು ಇದನ್ನು ಕೇಳಿದಾಗ ತಮ್ಮನ್ನು ಆತ್ಮನಿಶ್ಚಯ ಮಾಡಿಕೊಂಡು ಕುಳಿತುಕೊಳ್ಳಿ ಮತ್ತು ಈ ನಿಶ್ಚಯ ಮಾಡಿಕೊಳ್ಳಿ- ಪರಮಾತ್ಮ ತಂದೆಯು ನಮಗೆ ತಿಳಿಸುತ್ತಿದ್ದಾರೆ. ಈ ಆದೇಶವನ್ನು ಒಬ್ಬ ತಂದೆಯೇ ಕೊಡುತ್ತಾರೆ ಅದಕ್ಕೆ ಶ್ರೀಮತವೆಂದು ಹೇಳಲಾಗುತ್ತದೆ. ಶ್ರೀ ಶ್ರೀ ಅರ್ಥಾತ್ ಶ್ರೇಷ್ಠಾತಿಶ್ರೇಷ್ಠ, ಅವರು ಬೇಹದ್ದಿನ ತಂದೆಯಾಗಿದ್ದಾರೆ. ಅವರಿಗೆ ಶ್ರೇಷ್ಠಾತಿಶ್ರೇಷ್ಠ ಭಗವಂತನೆಂದು ಕರೆಯಲಾಗುತ್ತದೆ. ಅನೇಕರು ಇಂತಹ ಮನುಷ್ಯರಿದ್ದಾರೆ ಅವರು ಅಷ್ಟು ಪರಮಾತ್ಮ ತಂದೆಯನ್ನು ತಿಳಿದುಕೊಳ್ಳುವುದೂ ಇಲ್ಲ. ಭಲೆ ಶಿವನ ಭಕ್ತಿ ಮಾಡುತ್ತಾರೆ, ಬಹಳ ಪ್ರೀತಿಯಿಂದ ನೆನಪು ಮಾಡುತ್ತಾರೆ ಆದರೆ ಮನುಷ್ಯರು ಎಲ್ಲರಲ್ಲಿ ಪರಮಾತ್ಮನಿದ್ದಾರೆಂದು ಹೇಳಿಬಿಟ್ಟಿದ್ದಾರೆ ಆದ್ದರಿಂದ ಆ ಪ್ರೀತಿಯನ್ನು ಯಾರ ಜೊತೆಯಿಡುವುದು. ಆದ್ದರಿಂದಲೇ ತಂದೆಯೊಂದಿಗೆ ವಿಪರೀತ ಬುದ್ಧಿಯವರಾಗಿಬಿಟ್ಟಿದ್ದಾರೆ. ಭಕ್ತಿಯಲ್ಲಿ ಯಾವುದೇ ದುಃಖ ಅಥವಾ ರೋಗವು ಬರುತ್ತದೆಯೆಂದರೆ ಆಗ ಪ್ರೀತಿ ತೋರಿಸುತ್ತಾರೆ. ಭಗವಂತನೇ ರಕ್ಷಿಸಿ ಎಂದು ಪ್ರಾರ್ಥಿಸುತ್ತಾರೆ. ಮಕ್ಕಳಿಗೆ ತಿಳಿದಿದೆ- ಗೀತೆಯಾಗಿದೆ, ಶ್ರೀಮತವು ಭಗವಂತನ ಮುಖದಿಂದ ಉಚ್ಛರಿಸಲ್ಪಟ್ಟಿದೆ, ಭಗವಂತನು ರಾಜಯೋಗವನ್ನು ಕಲಿಸಿರುವ ಹಾಗೂ ಶ್ರೀಮತವನ್ನು ಕೊಟ್ಟಿರುವಂತಹ ಶಾಸ್ತ್ರವು ಗೀತೆಯ ಹೊರತು ಮತ್ತ್ಯಾವುದೂ ಇಲ್ಲ. ಭಾರತದ್ದು ಒಂದೇ ಗೀತೆಯಾಗಿದೆ, ಇದರ ಪ್ರಭಾವವೂ ಬಹಳ ಇದೆ. ಇದೊಂದು ಭಗವದ್ಗೀತೆಯೇ ಭಗವಂತನು ಹೇಳಿರುವುದಾಗಿದೆ. ಭಗವಂತನೆಂದು ಹೇಳಿದಾಗ ಒಬ್ಬ ನಿರಾಕಾರನ ಕಡೆಯೇ ದೃಷ್ಟಿಯು ಹೋಗುತ್ತದೆ. ಬೆರಳಿನಿಂದಲೂ ಮೇಲೆ ಸೂಚಿಸುತ್ತಾರಲ್ಲವೆ. ಕೃಷ್ಣನಿಗೆ ಈ ರೀತಿ ಎಂದೂ ಹೇಳುವುದಿಲ್ಲ ಏಕೆಂದರೆ ಅವನಂತೂ ದೇಹಧಾರಿಯಲ್ಲವೆ. ಈಗ ನಿಮಗೆ ಅವರ ಜೊತೆಯ ಸಂಬಂಧದ ಬಗ್ಗೆ ಅರ್ಥವಾಗಿದೆ ಆದ್ದರಿಂದ ತಂದೆಯನ್ನು ನೆನಪು ಮಾಡಿ ಅವರೊಂದಿಗೆ ಪ್ರೀತಿಯನ್ನಿಡಿ ಎಂದು ಹೇಳಲಾಗುತ್ತದೆ. ಆತ್ಮವು ತನ್ನ ತಂದೆಯನ್ನು ನೆನಪು ಮಾಡುತ್ತದೆ, ಈಗ ಅದೇ ಭಗವಂತನು ಮಕ್ಕಳಿಗೆ ಓದಿಸುತ್ತಿದ್ದಾರೆ ಅಂದಮೇಲೆ ಆ ನಶೆಯಿರಬೇಕಲ್ಲವೆ ಮತ್ತು ನಶೆಯೂ ಸ್ಥಿರವಾಗಿ ನಿಲ್ಲಬೇಕು. ಕೇವಲ ಬ್ರಾಹ್ಮಿಣಿಯು ಸನ್ಮುಖದಲ್ಲಿದ್ದಾಗ ನಶೆಯೇರುವುದು, ಬ್ರಾಹ್ಮಿಣಿಯಿಲ್ಲವೆಂದರೆ ನಶೆಯು ಹಾರುವಂತಾಗಬಾರದು. ಬ್ರಾಹ್ಮಿಣಿಯು ಇಲ್ಲದಿದ್ದರೆ ನಾವು ತರಗತಿಯನ್ನು ನಡೆಸಲು ಸಾಧ್ಯವಿಲ್ಲ ಎನ್ನುವಂತಾಗಬಾರದು. ಕೆಲಕೆಲವು ಸೇವಾಕೇಂದ್ರಗಳಿಗಾಗಿ ತಂದೆಯು ತಿಳಿಸುತ್ತಾರೆ, ಕೆಲವೊಮ್ಮೆ ಬ್ರಾಹ್ಮಣಿಯು 5-6 ತಿಂಗಳಿನವರೆಗೆ ಎಲ್ಲಿಗಾದರೂ ಹೋಗುತ್ತಾರೆಂದರೆ ಪರಸ್ಪರ ಸೇರಿ ಸೇವಾಕೇಂದ್ರವನ್ನು ಸಂಭಾಲನೆ ಮಾಡುತ್ತಾರೆ ಏಕೆಂದರೆ ವಿದ್ಯೆಯಂತೂ ಸಹಜವಾಗಿದೆ. ಕೆಲವರಂತೂ ಬ್ರಾಹ್ಮಿಣಿಯಿಲ್ಲವೆಂದರೆ ಹೇಗೆ ಕುರುಡರು, ಕುಂಟರಾಗಿಬಿಡುತ್ತಾರೆ. ಬ್ರಾಹ್ಮಿಣಿಯು ಎಲ್ಲಿಯಾದರೂ ಹೋದರೆಂದರೆ ಸಾಕು ಸೇವಾಕೇಂದ್ರಕ್ಕೆ ಹೋಗುವುದನ್ನೇ ಬಿಟ್ಟುಬಿಡುತ್ತಾರೆ. ಅರೆ! ಇಷ್ಟೊಂದು ಮಂದಿ ಕುಳಿತಿದ್ದೀರಿ, ತರಗತಿಯನ್ನು ನಡೆಸುವುದಕ್ಕೆ ಆಗುವುದಿಲ್ಲವೇ? ಗುರುಗಳು ಹೊರಗಡೆ ಹೋಗುತ್ತಾರೆಂದರೆ ಶಿಷ್ಯರು ಸಂಭಾಲನೆ ಮಾಡುತ್ತಾರಲ್ಲವೆ. ಮಕ್ಕಳು ಸರ್ವೀಸ್ ಮಾಡಬೇಕಾಗಿದೆ. ವಿದ್ಯಾರ್ಥಿಗಳಲ್ಲಿಯೂ ನಂಬರ್ವಾರ್ ಇದ್ದಾರೆ, ಬಾಪ್ದಾದಾರವರಿಗೆ ಗೊತ್ತಿದೆ, ಎಲ್ಲಿ ಫಸ್ಟ್ಕ್ಲಾಸ್ ಆದವರನ್ನು ಕಳುಹಿಸಬೇಕು ಎಂದು. ಮಕ್ಕಳು ಇಷ್ಟೊಂದು ವರ್ಷಗಳವರೆಗೆ ಕಲಿತಿದ್ದಾರೆಂದರೆ ಸ್ವಲ್ಪವಾದರೂ ಧಾರಣೆಯಾಗಿರುವುದು ಅಂದಮೇಲೆ ಸೇವಾಕೇಂದ್ರವನ್ನು ಪರಸ್ಪರ ಸೇರಿ ನಡೆಸಿರಿ. ಮುರುಳಿಯಂತೂ ಅವಶ್ಯವಾಗಿ ಸಿಗುತ್ತದೆ. ಮುರುಳಿಯ ಅಂಶಗಳ ಆಧಾರದ ಮೇಲೆಯೇ ತಿಳಿಸುತ್ತಾರೆ. ಕೇಳುವ ಹವ್ಯಾಸವಾಗಿಬಿಟ್ಟಿದೆ ಆದರೆ ಅನ್ಯರಿಗೆ ಹೇಳುವ ಹವ್ಯಾಸವಾಗುವುದಿಲ್ಲ. ನೆನಪಿನಲ್ಲಿದ್ದಾಗ ಧಾರಣೆಯೂ ಆಗುವುದು. ಸೇವಾಕೇಂದ್ರಗಳಲ್ಲಿ ಯಾರಾದರೂ ಇಂತಹವರಿರಬೇಕು- ಬ್ರಾಹ್ಮಿಣಿಯು ಎಲ್ಲಿಯಾದರೂ ಹೋದಾಗ ನಾವು ಸೇವಾಕೇಂದ್ರವನ್ನು ಸಂಭಾಲನೆ ಮಾಡುತ್ತೇವೆ ಎನ್ನುವಂತೆ ಇರಬೇಕು. ತಂದೆಯು ಬ್ರಾಹ್ಮಿಣಿಯನ್ನು ಎಲ್ಲಿಯೋ ಒಳ್ಳೆಯ ಸೇವಾಕೇಂದ್ರಕ್ಕೆ ಸರ್ವೀಸಿಗಾಗಿ ಕಳುಹಿಸಿದ್ದಾರೆ, ಹೊಸ ಸೇವಾಕೇಂದ್ರದಲ್ಲಿ ಸೇವೆಗಾಗಿ ಕಳುಹಿಸಿದ್ದಾರೆ ಆದ್ದರಿಂದ ಬ್ರಾಹ್ಮಿಣಿಯರಿಲ್ಲದಿದ್ದರೆ ತಬ್ಬಿಬ್ಬಾಗಬಾರದು. ಬ್ರಾಹ್ಮಿಣಿಯ ತರಹ ಆಗಲಿಲ್ಲವೆಂದರೆ ಅನ್ಯರನ್ನು ತಮ್ಮ ಸಮಾನ ಹೇಗೆ ಮಾಡಿಕೊಳ್ಳುವಿರಿ? ಪ್ರಜೆಗಳನ್ನು ಹೇಗೆ ತಯಾರು ಮಾಡುತ್ತೀರಿ? ಮುರುಳಿಯಂತೂ ಎಲ್ಲರಿಗೂ ಸಿಗುತ್ತದೆ ಅಂದಮೇಲೆ ನಾವು ಗದ್ದುಗೆಯ ಮೇಲೆ ಕುಳಿತು ತಿಳಿಸಿಕೊಡಬೇಕೆಂದು ಮಕ್ಕಳಿಗೆ ಖುಷಿಯಿರಬೇಕು. ಅಭ್ಯಾಸ ಮಾಡಿದ್ದೇ ಆದರೆ ಸರ್ವೀಸೇಬುಲ್ ಆಗಬಲ್ಲಿರಿ. ಸರ್ವೀಸೇಬುಲ್ ಆಗಿದ್ದೀರಾ ಎಂದು ತಂದೆಯು ಕೇಳುತ್ತಾರೆ? ಯಾರೂ ಹೊರಬರುವುದಿಲ್ಲ. ಸರ್ವೀಸಿಗಾಗಿ ರಜೆ ತೆಗೆದುಕೊಳ್ಳಬೇಕು. ಎಲ್ಲಿಯಾದರೂ ಸರ್ವೀಸಿಗಾಗಿ ನಿಮಂತ್ರಣ ಬಂದರೆ ಸಾಕು ರಜೆ ತೆಗೆದುಕೊಂಡು ಅಲ್ಲಿಗೆ ಹೊರಟುಹೋಗಬೇಕು. ಯಾರು ಬಂಧನಮುಕ್ತ ಮಕ್ಕಳಿದ್ದಾರೆಯೋ ಅವರು ಇಂತಹ ಸರ್ವೀಸ್ ಮಾಡಬಹುದಾಗಿದೆ. ಆ ಸರ್ಕಾರಕ್ಕಿಂತಲೂ ಈ ಸರ್ಕಾರದ ಸಂಪಾದನೆಯು ಬಹಳ ಉತ್ತಮವಾಗಿದೆ. ಭಗವಂತನೇ ಓದಿಸುತ್ತಾರೆ, ಇದರಿಂದ ನೀವು 21 ಜನ್ಮಗಳಿಗಾಗಿ ವೈಕುಂಠದ ಮಾಲೀಕರಾಗುತ್ತೀರಿ. ಇದು ಎಷ್ಟು ಭಾರಿ ಸಂಪಾದನೆಯಾಗಿದೆ! ಆ ಸಂಪಾದನೆಯಿಂದ ಏನೂ ಸಿಗುತ್ತದೆ? ಅಲ್ಪಕಾಲದ ಸುಖ. ಇಲ್ಲಂತೂ ನೀವು ವಿಶ್ವದ ಮಾಲೀಕರಾಗುತ್ತೀರಿ. ಯಾರಿಗೆ ಪಕ್ಕಾ ನಿಶ್ಚಯವಿದೆಯೋ ಅವರಿಗೆ ಇದೇ ಸೇವೆಯಲ್ಲಿ ನಾವು ತೊಡಗುತ್ತೇವೆಂದು ಹೇಳುತ್ತಾರೆ. ಆದರೆ ಪೂರ್ಣ ನಶೆಯಿರಬೇಕು. ನಾವು ಅನ್ಯರಿಗೆ ತಿಳಿಸಿಕೊಡಲು ತಯಾರಾಗಿದ್ದೇವೆಯೇ ಎಂದು ನೋಡಿಕೊಳ್ಳಬೇಕು. ಇದು ಬಹಳ ಸಹಜವಾಗಿದೆ. ಕಲಿಯುಗದ ಅಂತ್ಯದಲ್ಲಿ ಎಷ್ಟು ಕೋಟ್ಯಾಂತರ ಮನುಷ್ಯರಿದ್ದಾರೆ ಆದರೆ ಸತ್ಯಯುಗದಲ್ಲಿ ಕೆಲವರೇ ಇರುತ್ತಾರೆ. ಅದರ ಸ್ಥಾಪನೆಗಾಗಿ ತಂದೆಯು ಸಂಗಮದಲ್ಲಿಯೇ ಬರುತ್ತಾರೆ. ಹಳೆಯ ಪ್ರಪಂಚದ ವಿನಾಶವಾಗಬೇಕಾಗಿದೆ. ಮಹಾಭಾರತ ಯುದ್ಧವೂ ಪ್ರಸಿದ್ಧವಾಗಿದೆ, ಯಾವಾಗ ಭಗವಂತನು ಬಂದು ಸತ್ಯಯುಗಕ್ಕಾಗಿ ರಾಜಯೋಗವನ್ನು ಕಲಿಸಿ ರಾಜರಿಗೂ ರಾಜರನ್ನಾಗಿ ಮಾಡುವರೋ ಆಗಲೇ ಈ ಯುದ್ಧವಾಗುತ್ತದೆ. ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಸುತ್ತಾರೆ. ತಂದೆಯು ತಿಳಿಸುತ್ತಾರೆ- ದೇಹಸಹಿತವಾಗಿ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ ಆಗ ಪಾಪಗಳು ಕಳೆಯುತ್ತವೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದೇ ಪರಿಶ್ರಮವಾಗಿದೆ. ಯೋಗದ ಅರ್ಥವನ್ನು ಒಬ್ಬ ಮನುಷ್ಯನೂ ತಿಳಿದುಕೊಂಡಿಲ್ಲ.

ತಂದೆಯು ತಿಳಿಸುತ್ತಾರೆ- ಭಕ್ತಿಮಾರ್ಗವೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಭಕ್ತಿಮಾರ್ಗವು ನಡೆಯಲೇಬೇಕಾಗಿದೆ. ಜ್ಞಾನ, ಭಕ್ತಿ, ವೈರಾಗ್ಯದ ಮೇಲೆ ಆಟವು ಮಾಡಲ್ಪಟ್ಟಿದೆ. ವೈರಾಗ್ಯವೂ ಸಹ ಎರಡು ಪ್ರಕಾರವಾಗಿದೆ- ಒಂದು ಹದ್ದಿನ ವೈರಾಗ್ಯ, ಇನ್ನೊಂದು ಬೇಹದ್ದಿನ ವೈರಾಗ್ಯವಾಗಿದೆ. ನೀವು ಮಕ್ಕಳು ಈಗ ಇಡೀ ಪ್ರಪಂಚವನ್ನೇ ಮರೆಯುವ ಪುರುಷಾರ್ಥ ಮಾಡುತ್ತೀರಿ ಏಕೆಂದರೆ ನಿಮಗೆ ತಿಳಿದಿದೆ- ನಾವೀಗ ಶಿವಾಲಯ ಪಾವನ ಪ್ರಪಂಚಕ್ಕೆ ಹೋಗುತ್ತಿದ್ದೇವೆ. ನೀವೆಲ್ಲಾ ಬ್ರಹ್ಮಾಕುಮಾರ-ಕುಮಾರಿಯರು ಸಹೋದರ-ಸಹೋದರಿಯರಾಗಿದ್ದೀರಿ ಅಂದಮೇಲೆ ವಿಕಾರದ ದೃಷ್ಟಿಯಿರಬಾರದು. ಈಗಂತೂ ಎಲ್ಲರ ದೃಷ್ಟಿಯು ವಿಕಾರಿಯಾಗಿಬಿಟ್ಟಿದೆ, ತಮೋಪ್ರಧಾನವಲ್ಲವೆ. ಇದರ ಹೆಸರೇ ಆಗಿದೆ- ನರಕ. ಆದರೆ ತನ್ನನ್ನು ನರಕವಾಸಿಗಳೆಂದು ತಿಳಿದುಕೊಳ್ಳುವುದಿಲ್ಲ. ಸ್ವಯಂನ ಬಗ್ಗೆಯೂ ತಿಳಿದಿಲ್ಲ ಆದ್ದರಿಂದ ಸ್ವರ್ಗ-ನರಕ ಇಲ್ಲಿಯೇ ಇದೆ ಎಂದು ಹೇಳಿಬಿಡುತ್ತಾರೆ. ಯಾರಿಗೆ ಏನು ತೋಚಿತೋ ಅದನ್ನು ಹೇಳಿಬಿಟ್ಟಿದ್ದಾರೆ. ಇದೇನೂ ಸ್ವರ್ಗವಲ್ಲ, ಸ್ವರ್ಗದಲ್ಲಂತೂ ರಾಜಧಾನಿಯಿತ್ತು. ಧರ್ಮಾತ್ಮರು-ಸತ್ಯವಂತರು ಇದ್ದರು, ಎಷ್ಟು ಬಲವಿತ್ತು! ನೀವೀಗ ಮತ್ತೆ ಪುರುಷಾರ್ಥ ಮಾಡುತ್ತಿದ್ದೀರಿ. ವಿಶ್ವದ ಮಾಲೀಕರಾಗಿಬಿಡುತ್ತೀರಿ. ನೀವಿಲ್ಲಿಗೆ ಬರುವುದೇ ವಿಶ್ವದ ಮಾಲೀಕರಾಗಲು. ಹೆವೆನ್ಲೀ ಗಾಡ್ಫಾದರ್ ಯಾರಿಗೆ ಶಿವಪರಮಾತ್ಮನೆಂದು ಹೇಳಲಾಗುತ್ತದೆಯೋ ಅವರೇ ನಿಮಗೆ ಓದಿಸುತ್ತಾರೆ. ಅಂದಾಗ ನೀವು ಮಕ್ಕಳಲ್ಲಿ ಎಷ್ಟೊಂದು ನಶೆಯಿರಬೇಕಾಗಿದೆ. ಇದು ಸಂಪೂರ್ಣ ಸಹಜವಿದ್ಯೆಯಾಗಿದೆ. ನೀವು ಮಕ್ಕಳಲ್ಲಿ ಏನೆಲ್ಲಾ ಹಳೆಯ ಸಂಸ್ಕಾರಗಳಿವೆಯೋ ಅವೆಲ್ಲವನ್ನು ಬಿಡಬೇಕಾಗಿದೆ. ಈಷ್ರ್ಯೆಯ ಸಂಸ್ಕಾರವೂ ಸಹ ಬಹಳ ನಷ್ಟವನ್ನುಂಟು ಮಾಡುತ್ತದೆ. ನಿಮ್ಮ ಇಡೀ ಆಧಾರವು ಮುರುಳಿಯ ಮೇಲಿದೆ. ನೀವು ಯಾರಿಗೆ ಬೇಕಾದರೂ ಮುರುಳಿಯನ್ನು ತಿಳಿಸಬಲ್ಲಿರಿ ಆದರೆ ಒಳಗೆ ಈಷ್ರ್ಯೆಯಿರುತ್ತದೆ- ಇವರೇನು ಬ್ರಾಹ್ಮಿಣಿಯೇ? ಇವರಿಗೇನು ಗೊತ್ತೆಂದು ಹೇಳಿ ಮಾರನೆಯ ದಿನ ಬರುವುದೇ ಇಲ್ಲ. ಇಂತಹ ಸಂಸ್ಕಾರವು ಹಳೆಯದಾಗಿಬಿಟ್ಟಿದೆ. ಇದರ ಕಾರಣವೇ ಸೇವಾಭಂಗವೂ ಆಗುತ್ತದೆ. ಜ್ಞಾನವು ಬಹಳ ಸಹಜವಾಗಿದೆ, ಕುಮಾರಿಯರಿಗಂತೂ ಯಾವುದೇ ಉದ್ಯೋಗ-ವ್ಯವಹಾರವು ಇಲ್ಲ, ಅಂತಹವರನ್ನು ಕೇಳಲಾಗುತ್ತದೆ- ಆ ವಿದ್ಯೆಯು ಒಳ್ಳೆಯದೋ? ಅಥವಾ ಈ ವಿದ್ಯೆಯು ಒಳ್ಳೆಯದೋ? ಆಗ ಇದೇ ಒಳ್ಳೆಯದೆಂದು ಹೇಳುತ್ತಾರೆ. ಬಾಬಾ, ನಾವಿನ್ನು ಆ ವಿದ್ಯೆಯನ್ನು ಓದುವುದಿಲ್ಲ, ಅದು ಇಷ್ಟವಾಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ಲೌಕಿಕ ತಂದೆಯು ಜ್ಞಾನದಲ್ಲಿ ನಡೆಯಲಿಲ್ಲವೆಂದರೆ ಬಹಳ ಪೆಟ್ಟನ್ನು ತಿನ್ನುತ್ತಾರೆ. ಇನ್ನೂ ಕೆಲವು ಕುಮಾರಿಯರು ನಿರ್ಬಲರಾಗಿರುತ್ತಾರೆ. ಅಂತಹವರು ತಿಳಿಸಬೇಕಲ್ಲವೆ- ಈ ವಿದ್ಯೆಯಿಂದ ನಾವು ಮಹಾರಾಣಿಯರಾಗುತ್ತೇವೆ. ಆ ವಿದ್ಯೆಯಿಂದ ನಯಾಪೈಸೆಯ ನೌಕರಿ ಮಾಡುತ್ತೇವೆ. ಈ ವಿದ್ಯೆಯಂತೂ ಭವಿಷ್ಯ 21 ಜನ್ಮಗಳಿಗಾಗಿ ಮಾಲೀಕರನ್ನಾಗಿ ಮಾಡುತ್ತದೆ. ಪ್ರಜೆಗಳೂ ಸಹ ಸ್ವರ್ಗವಾಸಿಗಳಾಗುತ್ತಾರೆ ಅಲ್ಲವೆ. ಈಗ ಎಲ್ಲರೂ ನರಕವಾಸಿಗಳಾಗಿದ್ದಾರೆ.

ಈಗ ತಂದೆಯು ತಿಳಿಸುತ್ತಾರೆ- ನೀವು ಸರ್ವಗುಣ ಸಂಪನ್ನರಾಗಿದ್ದಿರಿ, ನೀವೇ ಈಗ ಎಷ್ಟು ತಮೋಪ್ರಧಾನರಾಗಿಬಿಟ್ಟಿದ್ದೀರಿ! ಏಣಿಯನ್ನು ಕೆಳಗಿಳಿಯುತ್ತಾ ಬಂದಿದ್ದೀರಿ. ಯಾವ ಭಾರತವನ್ನು ಚಿನ್ನದ ಪಕ್ಷಿಯೆಂದು ಹೇಳುತ್ತಿದ್ದಿರೋ ಅದು ಈಗ ಕಲ್ಲಿಗಿಂತಲೂ ಕಡೆಯಾಗಿದೆ. ಭಾರತವು 100% ಸಾಹುಕಾರನಾಗಿತ್ತು, ಈಗ 100% ಬಡಭಾರತವಾಗಿದೆ. ನಿಮಗೆ ತಿಳಿದಿದೆ- ನಾವು ವಿಶ್ವದ ಮಾಲೀಕರು, ಪಾರಸನಾಥರಾಗಿದ್ದೆವು ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಕಲ್ಲಿನ ಸಮಾನರಾಗಿಬಿಟ್ಟಿದ್ದೇವೆ. ಮನುಷ್ಯರೇ ಆಗಿದ್ದಾರೆ ಆದರೆ ಪಾರಸನಾಥ, ಪತ್ತರ್ನಾಥ (ಕಲ್ಲುಬುದ್ಧಿ) ರೆಂದು ಹೇಳಲಾಗುತ್ತದೆ. ಗೀತೆಯನ್ನು ಕೇಳಿದಿರಿ- ತಮ್ಮೊಳಗೆ ನೋಡಿಕೊಳ್ಳಿ, ನಾವು ಎಲ್ಲಿಯವರೆಗೆ ಯೋಗ್ಯರಾಗಿದ್ದೇವೆ? ನಾರದನ ದೃಷ್ಟಾಂತವಿದೆಯಲ್ಲವೆ. ದಿನ-ಪ್ರತಿದಿನ ಇನ್ನೂ ಇಳಿಯುತ್ತಲೇ ಹೋಗುತ್ತಾರೆ. ಕೆಳಗೆ ಬೀಳುತ್ತಾ-ಬೀಳುತ್ತಾ ಒಮ್ಮೆಲೇ ಕೆಸರಿನಲ್ಲಿ ಕುತ್ತಿಗೆಯವರೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ನೀವು ಬ್ರಾಹ್ಮಣರು ಈಗ ಎಲ್ಲರ ಜುಟ್ಟನ್ನು ಹಿಡಿದು ಆ ಕೆಸರಿನಿಂದ ಹೊರತೆಗೆಯುತ್ತೀರಿ. ಹಿಡಿದುಕೊಳ್ಳಲು ಮತ್ಯಾವುದೇ ಅಂಗವು ಉಳಿದಿಲ್ಲ ಆದ್ದರಿಂದ ಜುಟ್ಟನ್ನು ಹಿಡಿದು ಮೇಲೆತ್ತುವುದು ಸಹಜವಾಗುತ್ತದೆ. ಕೆಸರಿನಿಂದ ಹೊರತೆಗೆಯಲು ಜುಟ್ಟನ್ನೇ ಹಿಡಿದುಕೊಳ್ಳುತ್ತಾರೆ. ಅಂದಾಗ ಕೆಸರಿನಲ್ಲಿ ಈ ರೀತಿ ಸಿಕ್ಕಿಹಾಕಿಕೊಂಡಿದ್ದಾರೆ ಅದರ ಮಾತೇ ಕೇಳಬೇಡಿ. ಭಕ್ತಿಯ ರಾಜ್ಯವಲ್ಲವೆ. ಬಾಬಾ, ನಾವು ಕಲ್ಪದ ಹಿಂದೆಯೂ ಸಹ ರಾಜ್ಯಭಾಗ್ಯವನ್ನು ಪಡೆಯಲು ತಮ್ಮ ಬಳಿ ಬಂದಿದ್ದೆವೆಂದು ಹೇಳುತ್ತೀರಿ. ಲಕ್ಷ್ಮೀ-ನಾರಾಯಣರ ಮಂದಿರಗಳನ್ನು ಭಲೆ ಕಟ್ಟಿಸುತ್ತಿರುತ್ತಾರೆ ಆದರೆ ಈ ಲಕ್ಷ್ಮೀ-ನಾರಾಯಣರು ಹೇಗೆ ವಿಶ್ವದ ಮಾಲೀಕರಾದರೆಂದು ಅವರಿಗೆ ತಿಳಿದಿಲ್ಲ. ನೀವೀಗ ಎಷ್ಟೊಂದು ಬುದ್ಧಿವಂತರಾಗಿದ್ದೀರಿ. ಅವರು ಹೇಗೆ ರಾಜ್ಯಭಾಗ್ಯವನ್ನು ಪಡೆದರು ಮತ್ತು 84 ಜನ್ಮಗಳನ್ನು ತೆಗೆದುಕೊಂಡರೆಂದು ನಿಮಗೆ ತಿಳಿದಿದೆ. ಬಿರ್ಲಾದವರು ಎಷ್ಟೊಂದು ಮಂದಿರಗಳನ್ನು ಕಟ್ಟಿಸುತ್ತಾರೆ. ಹೇಗೆ ಗೊಂಬೆಗಳಂತೆ ಮಾಡಿಬಿಡುತ್ತಾರೆ. ಹೇಗೆ ಆ ಚಿಕ್ಕ-ಚಿಕ್ಕ ಗೊಂಬೆಗಳಿರುತ್ತವೆಯೋ ಹಾಗೆಯೇ ಇವರೂ ಸಹ ದೊಡ್ಡ ಗೊಂಬೆಗಳನ್ನು ಮಾಡುತ್ತಾರೆ. ಚಿತ್ರಗಳನ್ನು ಮಾಡಿಸಿ ಪೂಜೆ ಮಾಡುತ್ತಾರೆ. ಅವರ ಪರಿಚಯವೇ ಗೊತ್ತಿಲ್ಲವೆಂದರೆ ಇದು ಗೊಂಬೆಯ ಪೂಜೆಯಾಯಿತಲ್ಲವೆ. ನೀವೀಗ ತಿಳಿದುಕೊಂಡಿದ್ದೀರಿ- ತಂದೆಯು ನಮ್ಮನ್ನು ಎಷ್ಟು ಸಾಹುಕಾರರನ್ನಾಗಿ ಮಾಡಿದ್ದರು, ಈಗ ಎಷ್ಟೊಂದು ಕಂಗಾಲರಾಗಿಬಿಟ್ಟಿದ್ದಾರೆ. ಯಾರು ಪೂಜ್ಯರಾಗಿದ್ದರೋ ಅವರೇ ಈಗ ಪೂಜ್ಯ, ಪೂಜಾರಿಗಳಾಗಿಬಿಟ್ಟಿದ್ದಾರೆ. ಭಕ್ತರಂತೂ ಭಗವಂತನಿಗೆ ತಾವೇ ಪೂಜ್ಯ, ತಾವೇ ಪೂಜಾರಿ ಎಂದು ಹೇಳಿಬಿಡುತ್ತಾರೆ. ತಾವೇ ಸುಖವನ್ನು ಕೊಡುತ್ತೀರಿ, ತಾವೇ ದುಃಖವನ್ನೂ ಕೊಡುತ್ತೀರಿ, ಎಲ್ಲವನ್ನೂ ನೀವೇ ಮಾಡುತ್ತೀರಿ ಎಂದು ಹೇಳಿಬಿಡುತ್ತಾರೆ. ಇದರಲ್ಲಿ ಮಸ್ತರಾಗಿಬಿಡುತ್ತಾರೆ. ಆತ್ಮವು ನಿರ್ಲೇಪವಾಗಿದೆ, ಏನಾದರೂ ತಿನ್ನಿ, ಕುಡಿಯಿರಿ ಮಜಾ ಮಾಡಿ, ಶರೀರಕ್ಕೆ ಲೇಪಚೇಪವು ಅಂಟುತ್ತದೆ, ಅದು ಗಂಗಾಸ್ನಾನದಿಂದ ಶುದ್ಧವಾಗಿಬಿಡುತ್ತದೆ ಆದ್ದರಿಂದ ಏನು ಬೇಕೋ ಅದನ್ನು ತಿನ್ನಿರಿ ಎಂದು ಹೇಳಿಬಿಡುತ್ತಾರೆ. ಎಂತೆಂತಹ ಫ್ಯಾಷನ್ ಇದೆ! ಯಾರು ಯಾವ ಪದ್ಧತಿ ಮಾಡಿಕೊಂಡರೋ ಅದೇ ನಡೆದುಬರುತ್ತದೆ. ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ವಿಷಯಸಾಗರದಿಂದ ಶಿವಾಲಯಕ್ಕೆ ನಡೆಯಿರಿ. ಸತ್ಯಯುಗಕ್ಕೆ ಕ್ಷೀರಸಾಗರವೆಂದು ಹೇಳಲಾಗುತ್ತದೆ. ಇದು ವಿಷಯಸಾಗರವಾಗಿದೆ. ನಿಮಗೆ ತಿಳಿದಿದೆ- ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಪತಿತರಾಗಿದ್ದೇವೆ ಆದ್ದರಿಂದಲೇ ಪತಿತ-ಪಾವನ ತಂದೆ ಎಂದು ಕರೆಯುತ್ತೇವೆ. ಚಿತ್ರಗಳನ್ನು ಕುರಿತು ತಿಳಿಸಬೇಕು ಆಗ ಮನುಷ್ಯರು ಸಹಜವಾಗಿ ತಿಳಿದುಕೊಳ್ಳುತ್ತಾರೆ. ಏಣಿಯ ಚಿತ್ರದಲ್ಲಿ 84 ಜನ್ಮಗಳ ಪೂರ್ಣ ವೃತ್ತಾಂತವಿದೆ. ಇಷ್ಟು ಸಹಜಮಾತನ್ನೂ ಸಹ ಯಾರೂ ತಿಳಿಸಿಕೊಡುವುದಿಲ್ಲ. ಇದರಿಂದ ತಂದೆಯು ತಿಳಿದುಕೊಳ್ಳುತ್ತಾರೆ- ಮಕ್ಕಳೇ, ಪೂರ್ಣ ಓದುವುದಿಲ್ಲ, ಉನ್ನತಿ ಮಾಡಿಕೊಳ್ಳುತ್ತಿಲ್ಲ.

ಭ್ರಮರಿಯ ತರಹ ಕೀಟಗಳಿಗೆ ಜ್ಞಾನದ ಧ್ವನಿ ಮಾಡಿ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವುದು ನೀವು ಬ್ರಾಹ್ಮಣರ ಕರ್ತವ್ಯವಾಗಿದೆ ಮತ್ತು ಸರ್ಪದ ತರಹ ಹಳೆಯ ಪೆÇರೆಯನ್ನು ಬಿಟ್ಟು ಹೊಸಪೆÇರೆಯನ್ನು ತೆಗೆದುಕೊಳ್ಳುವುದೂ ನಿಮ್ಮ ಪುರುಷಾರ್ಥವಾಗಿದೆ. ನೀವು ತಿಳಿದುಕೊಂಡಿದ್ದೀರಿ- ಇದು ಹಳೆಯದಾದ ಹರಿದುಹೋಗಿರುವ ಶರೀರವಾಗಿದೆ. ಇದನ್ನು ಈಗ ಬಿಡಬೇಕಾಗಿದೆ. ಶರೀರವು ಹಳೆಯದಾಗಿದೆ, ಈ ಪ್ರಪಂಚವೇ ಹಳೆಯದಾಗಿಬಿಟ್ಟಿದೆ. ಇದನ್ನು ಬಿಟ್ಟು ಈಗ ಹೊಸಪ್ರಪಂಚದಲ್ಲಿ ಹೋಗಬೇಕಾಗಿದೆ. ನಿಮ್ಮ ಈ ವಿದ್ಯೆಯು ಹೊಸ ಪ್ರಪಂಚ, ಸ್ವರ್ಗಕ್ಕೋಸ್ಕರ ಇದೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ಸಾಗರದ ಒಂದೇ ಅಲೆಯಿಂದ ಇಡೀ ಪ್ರಪಂಚವೇ ಅಲ್ಲೋಲ-ಕಲ್ಲೋಲವಾಗಿಬಿಡುತ್ತದೆ. ವಿನಾಶವಂತೂ ಆಗಲೇಬೇಕಲ್ಲವೆ. ಪ್ರಾಕೃತಿಕ ವಿಕೋಪಗಳು ಯಾರನ್ನೂ ಬಿಡುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಳಗೆ ಯಾವ ಈಷ್ರ್ಯೆ ಮೊದಲಾದ ಹಳೆಯ ಸಂಸ್ಕಾರಗಳಿವೆಯೋ ಅವನ್ನು ಬಿಟ್ಟು ಪರಸ್ಪರ ಬಹಳ ಪ್ರೀತಿಯಿಂದ ಹೊಂದಿಕೊಂಡು ಇರಬೇಕಾಗಿದೆ. ಈಷ್ರ್ಯೆಯ ಕಾರಣ ವಿದ್ಯೆಯನ್ನು ಬಿಟ್ಟುಬಿಡಬಾರದು.

2. ಈ ಹಳೆಯ ಹರಿದುಹೋಗಿರುವ ಶರೀರದ ಅಭಿಮಾನವನ್ನು ಬಿಟ್ಟುಬಿಡಬೇಕಾಗಿದೆ. ಭ್ರಮರಿಯ ತರಹ ಜ್ಞಾನದ ಧ್ವನಿ ಮಾಡಿ ಕೀಟಗಳನ್ನು ತಮ್ಮಸಮಾನ ಮಾಡುವ ಸೇವೆ ಮಾಡಬೇಕಾಗಿದೆ. ಈ ಆತ್ಮಿಕ ವ್ಯಾಪಾರದಲ್ಲಿ ತೊಡಗಬೇಕಾಗಿದೆ.

ವರದಾನ:
ಮನಸ್ಸಾ ಬಂಧನಗಳಿಂದ ಮುಕ್ತ, ಅತೀಂದ್ರಿಯ ಸುಖದ ಅನುಭೂತಿ ಮಾಡುವಂತಹ ಮುಕ್ತಿದಾತಾ ಭವ

ಅತೀಂದ್ರಿಯ ಸುಖದಲ್ಲಿ ತೂಗುವುದು- ಇದು ಸಂಗಮಯುಗೀ ಬ್ರಾಹ್ಮಣ ವಿಶೇಷತೆಯಾಗಿದೆ. ಆದರೆ ಮನಸ್ಸಾ ಸಂಕಲ್ಪಗಳ ಬಂಧನವು ಆಂತರಿಕ ಖುಷಿ ಹಾಗೂ ಅತೀಂದ್ರಿಯ ಸುಖದ ಅನುಭವವನ್ನು ಮಾಡುವುದಕ್ಕೆ ಬಿಡುವುದಿಲ್ಲ. ವ್ಯರ್ಥಸಂಕಲ್ಪಗಳಲ್ಲಿ, ಈರ್ಷ್ಯೆ, ಹುಡುಗಾಟಿಕೆ ಅಥವ ಆಲಸ್ಯದ ಸಂಕಲ್ಪಗಳ ಬಂಧನದಲ್ಲಿ ಬಂಧಿಸುವುದೇ ಮನಸ್ಸಾ ಬಂಧನವಾಗಿದೆ. ಇಂತಹ ಆತ್ಮವು ಅಭಿಮಾನಕ್ಕೆ ವಶವಾಗಿ ಅನ್ಯರದೇ ದೋಷವನ್ನು ಯೋಚಿಸುತ್ತಿರುತ್ತಾರೆ, ಅವರಲ್ಲಿ ಅನುಭೂತಿಯ ಶಕ್ತಿಯು ಸಮಾಪ್ತಿಯಾಗಿಬಿಡುತ್ತದೆ. ಆದ್ದರಿಂದ ಈ ಸೂಕ್ಷ್ಮಬಂಧನಗಳಿಂದ ಮುಕ್ತವಾದಾಗಲೇ ಮುಕ್ತಿದಾತಾ ಆಗಲು ಸಾಧ್ಯವಾಗುವುದು.

ಸ್ಲೋಗನ್:
ಹೀಗೆ ಖುಷಿಗಳ ಗಣಿಯಿಂದ ಸಂಪನ್ನವಾಗಿರಿ, ಅದರಿಂದ ತಮ್ಮಬಳಿ ದುಃಖದ ಪ್ರಕಂಪನಗಳೂ ಸಹ ಬರಬಾರದು.

ಅವ್ಯಕ್ತ ಸೂಚನೆ: ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ

ಯಾವುದೇ ಶ್ರೇಷ್ಠ ಸಂಕಲ್ಪ ರೂಪಿ ಬೀಜವನ್ನು ಫಲಿ ಭೂತ ಮಾಡುವ ಸಹಜ ಸಾಧನ ಒಂದೇ ಆಗಿದೆ- ಅದಾಗಿದೆ ತಂದೆಯಿಂದ ಪ್ರತಿ ಸಮಯ ಸರ್ವ ಶಕ್ತಿಗಳ ಬಲವನ್ನು ಆ ಬೀಜದಲ್ಲಿ ತುಂಬುತ್ತಾ ಇರುವುದು. ಬೀಜರೂಪ ಮೂಲಕ ತಮ್ಮ ಸಂಕಲ್ಪ ರೂಪಿ ಬೀಜ ಸಹಜ ಹಾಗೂ ಸ್ವತಃವಾಗಿ ವೃದ್ದಿಯನ್ನು ಪಡೆಯುತ್ತದೆ ಹಾಗೂ ಫಲಿ ಭೂತ ವಾಗುತ್ತದೆ. ಸಂಕಲ್ಪ ಶಕ್ತಿ ಜಮಾ ಆಗುತ್ತದೆ.