04.09.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನೀವು
ಬೇಹದ್ದಿನ ತಂದೆಯ ಬಳಿ ವಿಕಾರಿಗಳಿಂದ ನಿರ್ವಿಕಾರಿಗಳಾಗಲು ಬಂದಿದ್ದೀರಿ. ಆದ್ದರಿಂದ ನಿಮ್ಮಲ್ಲಿ
ಯಾವುದೇ ಭೂತವಿರಬಾರದು.
ಪ್ರಶ್ನೆ:
ಈಗ ತಂದೆಯು
ನಿಮಗೆ ಇಂತಹ ಯಾವು ವಿದ್ಯೆಯನ್ನು ಓದಿಸುತ್ತಾರೆ. ಅದನ್ನು ಇಡೀ ಕಲ್ಪದಲ್ಲಿ ಓದಿಸುವುದಿಲ್ಲ?
ಉತ್ತರ:
ಹೊಸ
ರಾಜಧಾನಿಯನ್ನು ಸ್ಥಾಪನೆ ಮಾಡುವ ವಿದ್ಯೆ. ಮನುಷ್ಯನಿಗೆ ರಾಜ್ಯಪದವಿಯನ್ನು ಕೊಡಿಸುವ ವಿದ್ಯೆಯು ಈ
ಸಮಯದಲ್ಲಿ ಪಾರಲೌಕಿಕ ತಂದೆಯೇ ಓದಿಸುತ್ತಾರೆ. ಇಂತಹ ವಿದ್ಯೆಯನ್ನು ಇಡೀ ಕಲ್ಪದಲ್ಲಿಯೇ
ಓದಿಸಲಾಗುವುದಿಲ್ಲ. ಈ ವಿದ್ಯೆಯಿಂದಲೇ ಸತ್ಯಯುಗದ ರಾಜಧಾನಿಯು ಸ್ಥಾಪನೆಯಾಗುತ್ತಿದೆ.
ಓಂ ಶಾಂತಿ.
ಇದನ್ನು ಮಕ್ಕಳು ತಿಳಿದುಕೊಂಡಿದ್ದೀರಿ - ನಾವಾತ್ಮಗಳಾಗಿದ್ದೇವೆ, ಶರೀರವಲ್ಲ. ಇದಕ್ಕೇ
ದೇಹಿ-ಅಭಿಮಾನಿ ಸ್ಥಿತಿ ಎಂದು ಹೇಳಲಾಗುತ್ತದೆ. ಮನುಷ್ಯರೆಲ್ಲರೂ ದೇಹಾಭಿಮಾನಿ ಗಳಾಗಿದ್ದಾರೆ.
ಇದಂತೂ ಪಾಪಾತ್ಮರ ಪ್ರಪಂಚ ಅಥವಾ ವಿಕಾರಿ ಪ್ರಪಂಚವಾಗಿದೆ. ರಾವಣರಾಜ್ಯ ವಾಗಿದೆ. ಸತ್ಯಯುಗವು
ಕಳೆದುಹೋಗಿದೆ. ಅಲ್ಲಿ ಎಲ್ಲರೂ ನಿರ್ವಿಕಾರಿಗಳಿದ್ದರು. ಮಕ್ಕಳಿಗೆ ಗೊತ್ತಿದೆ, ನಾವು ಪವಿತ್ರ
ದೇವಿದೇವತೆಗಳಾಗಿದ್ದೇವು. 84 ಜನ್ಮಗಳ ನಂತರ ಮತ್ತೆ ಪತಿತರಾಗಿ ದ್ದೇವೆ. ಎಲ್ಲರೂ 84 ಜನ್ಮಗಳನ್ನು
ತೆಗೆದುಕೊಳ್ಳುವುದಿಲ್ಲ. ಭಾರತವಾಸಿಗಳೇ ದೇವಿದೇವತೆಗಳಾಗಿ ದ್ದರು. ಅವರೇ 82, 83, 84 ಜನ್ಮಗಳನ್ನು
ತೆಗೆದುಕೊಂಡಿದ್ದಾರೆ. ಈಗ ಅವರೇ ಪತಿತರಾಗಿದ್ದಾರೆ. ಭಾರತವೇ ಅವಿನಾಶಿ ಖಂಡವೆಂದು ಗಾಯನವಿದೆ.
ಭಾರತದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಇದನ್ನು ಹೊಸ ಪ್ರಪಂಚ, ಹೊಸ ಭಾರತವೆಂದು
ಹೇಳಲಾಗುತ್ತಿತ್ತು. ಈಗ ಹಳೆಯ ಪ್ರಪಂಚ, ಹಳೆಯ ಭಾರತವಾಗಿದೆ. ಸತ್ಯಯುಗದಲ್ಲಂತೂ ಅವರು ಸಂಪೂರ್ಣ
ನಿರ್ವಿಕಾರಿಗಳಾಗಿದ್ದರು. ಯಾವುದೇ ವಿಕಾರವಿರಲಿಲ್ಲ. ಆ ದೇವತೆಗಳೇ 84 ಜನ್ಮಗಳನ್ನು ತೆಗೆದುಕೊಂಡು
ಪತಿತರಾಗಿದ್ದಾರೆ. ಕಾಮದ ಭೂತ, ಕ್ರೋಧದ ಭೂತ, ಲೋಭದ ಭೂತ ಇವೆಲ್ಲವೂ ಕಠಿಣವಾದ ಭೂತಗಳಾಗಿವೆ.
ಇವೆಲ್ಲದರಲ್ಲಿ ಮುಖ್ಯವಾದುದು ದೇಹಾಭಿಮಾನದ ಭೂತವಾಗಿದೆ. ರಾವಣರಾಜ್ಯವಾಗಿದೆ ಅಲ್ಲವೆ. ಈ ರಾವಣನು
ಭಾರತದ ಅರ್ಧಕಲ್ಪದ ಶತ್ರುವಾಗಿದ್ದಾನೆ. ಈ ಸಮಯದಲ್ಲಿಯೇ ಮನುಷ್ಯನಲ್ಲಿ ಪಂಚವಿಕಾರಗಳು ಪ್ರವೇಶ
ಮಾಡುತ್ತವೆ. ಈ ದೇವತೆಗಳಲ್ಲಿ ಈ ಭೂತಗಳಿರಲಿಲ್ಲ. ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ -
ತೆಗೆದುಕೊಳ್ಳುತ್ತ ಇವರ (ಬ್ರಹ್ಮ) ಆತ್ಮವೂ ಸಹ ವಿಕಾರಗಳಲ್ಲಿ ಬಂದುಬಿಟ್ಟಿತು. ನಿಮಗೆ ತಿಳಿದಿದೆ
- ಯಾವಾಗ ನಾವು ದೇವಿದೇವತೆಗಳಾಗಿದ್ದೇವೋ ಆಗ ಯಾವುದೇ ವಿಕಾರದ ಭೂತವಿರಲಿಲ್ಲ.
ಸತ್ಯಯುಗ-ತ್ರೇತಾಯುಗಕ್ಕೆ ರಾಮರಾಜ್ಯವೆಂದು ಹೇಳಲಾಗುತ್ತದೆ. ದ್ವಾಪರ-ಕಲಿಯುಗಕ್ಕೆ
ರಾವಣರಾಜ್ಯವೆಂದು ಹೇಳಲಾಗುತ್ತದೆ. ಇಲ್ಲಿ ಪ್ರತಿಯೊಬ್ಬ ನರ-ನಾರಿಯಲ್ಲಿ ಪಂಚವಿಕಾರಗಳಿವೆ.
ದ್ವಾಪರದಿಂದ ಕಲಿಯುಗದವರೆಗೂ 5 ವಿಕಾರಗಳು ನಡೆಯುತ್ತವೆ. ಈಗ ನೀವು ಪುರುಷೋತ್ತಮ ಸಂಗಮಯುಗದಲ್ಲಿ
ಕುಳಿತಿದ್ದೀರಿ. ಬೇಹದ್ದಿನ ತಂದೆಯ ಬಳಿ ನೀವು ಬಂದಿರುವುದು ವಿಕಾರಿಗಳಿಂದ ನಿರ್ವಿಕಾರಿಗಳಾಗಲು.
ನಿರ್ವಿಕಾರಿಗಳಾಗಿ ಒಂದುವೇಳೆ ವಿಕಾರದಲ್ಲಿ ಬೇಳುತ್ತಾ ರೆಂದರೆ ನೀವು ಮುಖಕಪ್ಪು ಮಾಡಿಕೊಂಡಿರಿ.
ಈಗ ಮತ್ತೆ ಪವಿತ್ರರಾಗುವುದು ಕಷ್ಟವೆಂದು ತಂದೆಯು ಬರೆಯುತ್ತಾರೆ. ವಿಕಾರವನ್ನು ಬೀಳುವುದೆಂದರೆ 5
ಅಂತಸ್ತಿನ ಮಹಡಿಯ ಮೇಲಿಂದ ಬೀಳುವುದಾಗಿದೆ. ಮೂಳೆಗಳು ಪುಡಿಪುಡಿಯಾಗುತ್ತವೆ. ಗೀತೆಯಲ್ಲಿಯೂ
ಭಗವಾನುವಾಚವಿದೆ. ಕಾಮ ಮಹಾಶತ್ರವಾಗಿದೆ. ಭಾರತದ ವಾಸ್ತವಿಕ ಧರ್ಮಶಾಸ್ತ್ರವೇ ಗೀತೆಯಾಗಿದೆ.
ಪ್ರತಿಯೊಂದು ಧರ್ಮಕ್ಕೂ ಒಂದೇ ಶಾಸ್ತ್ರವಾಗಿದೆ. ಭಾರತವಾಸಿಗಳಿಗೆ ಅನೇಕ ಶಾಸ್ತ್ರಗಳಿವೆ. ಇದಕ್ಕೆ
ಭಕ್ತಿಯೆಂದು ಹೇಳಲಾಗುತ್ತದೆ. ಹೊಸಪ್ರಪಂಚವು ಸತೋಪ್ರಧಾನ, ಸ್ವರ್ಣೀಮಯುಗವಾಗಿದೆ. ಅಲ್ಲಿ ಯಾವುದೇ
ಜಗಳ-ಕಲಹಗಳಿರಲಿಲ್ಲ. ದೀರ್ಘಾಯಸ್ಸಿತ್ತು. ಸದಾ ಆರೋಗ್ಯವಂತರು - ಐಶ್ವರ್ಯವಂತರಾಗಿದ್ದೀರಿ. ಈಗ
ನಿಮಗೆ ಸ್ಮೃತಿಯು ಬಂದಿದೆ - ನಾವು ಆತ್ಮಗಳು ಬಹಳ ಸುಖಿಯಾಗಿದ್ದೆವು. ಅಲ್ಲಿ
ಅಕಾಲಮೃತ್ಯುವಿರಲಿಲ್ಲ. ಮೃತ್ಯುವಿನ ಭಯವೂ ಇರಲಿಲ್ಲ. ಅಲ್ಲಿ ಸಂತೋಷ, ಆರೋಗ್ಯ, ಐಶ್ವರ್ಯ ಎಲ್ಲವೂ
ಇರುತ್ತದೆ, ನರಕದಲ್ಲಿ ಸಂತೋಷವಿರುವುದಿಲ್ಲ. ಯಾವುದಾದರೊಂದು ಶರೀರದ ರೋಗವೇ ಇರುತ್ತದೆ. ಇದು ಅಪಾರ
ದುಃಖದ ಪ್ರಪಂಚವಾಗಿದೆ. ಸತ್ಯಯುಗವು ಅಪಾರ ಸುಖದ ಪ್ರಪಂಚವಾಗಿದೆ. ಬೇಹದ್ದಿನ ತಂದೆಯು ದುಃಖದ
ಪ್ರಪಂಚವನ್ನು ರಚಿಸುತ್ತಾರೆಯೇ! ತಂದೆಯಂತೂ ಸುಖದ ಪ್ರಪಂಚವನ್ನು ರಚಿಸಿದರು. ನಂತರ ರಾವಣರಾಜ್ಯವು
ಬಂದಾಗ ರಾವಣನಿಂದ ದುಃಖ-ಅಶಾಂತಿಯು ಸಿಕ್ಕಿತು. ಸತ್ಯಯುಗವು ಸುಖಧಾಮವಾಗಿದೆ. ಕಲಿಯುಗವು
ದುಃಖಧಾಮವಾಗಿದೆ. ವಿಕಾರದಲ್ಲಿ ಹೋಗುವುದೆಂದರೆ ಒಬ್ಬರು ಇನ್ನೊಬ್ಬರ ಮೇಲೆ ಕಾಮದ ಕತ್ತಿಯನ್ನು
ನಡೆಸುವುದು. ಇದಂತೂ ಭಗವಂತನ ರಚನೆಯಾಗಿದೆ. ಭಗವಂತನಂತೂ ಸ್ವರ್ಗವನ್ನು ರಚಿಸಿದರು. ಅಲ್ಲಿ
ಕಾಮವಿಕಾರವಿರುವುದಿಲ್ಲ. ಸುಖ-ದುಃಖವನ್ನು ಭಗವಂತನೇ ಕೊಡುತ್ತಾರೆಂದಲ್ಲ. ಭಗವಂತನು ಬೇಹದ್ದಿನ
ಮಕ್ಕಳಿಗೆ ದುಃಖವನ್ನು ಹೇಗೆ ಕೊಡುವರು! ತಂದೆಯಂತೂ ಹೇಳುತ್ತಾರೆ-ನಾನು ಸುಖದ ಆಸ್ತಿಯನ್ನು
ಕೊಡುತ್ತೇನೆ ಮತ್ತು ಅರ್ಧಕಲ್ಪದ ನಂತರ ರಾವಣನು ಶಾಪಗ್ರಸ್ತರನ್ನಾಗಿ ಮಾಡುತ್ತಾನೆ. ಸತ್ಯಯುಗದಲ್ಲಿ
ಅಪಾರ ಸುಖವಿತ್ತು. ಸಂಪನ್ನರಾಗಿದ್ದರು. ಒಂದೇ ಸೋಮನಾಥ ಮಂದಿರದಲ್ಲಿ ಎಷ್ಟೊಂದು
ವಜ್ರ-ವೈಡೂರ್ಯಗಳಿತ್ತು. ಭಾರತವು ಇಷ್ಟು ಸಂಪತ್ತಿವಂತನಾಗಿತ್ತು. ಈಗಂತೂ ಬಡಭಾರತವಾಗಿದೆ.
ಸತ್ಯಯುಗದಲ್ಲಿ 100% ಸಂಪತ್ತಿವಾನ್, ಕಲಿಯುಗದಲ್ಲಿ 100% ಬಡಭಾರತವಾಗಿದೆ. ಈ ಆಟವು ಮಾಡಲ್ಪಟ್ಟಿದೆ.
ಈಗ ಕಲಿಯುಗವಿದೆ. ತುಕ್ಕು ಹಿಡಿಯುತ್ತಾ-ಹಿಡಿಯುತ್ತಾ ಸಂಪೂರ್ಣ ತಮೋಪ್ರಧಾನರಾಗಿಬಿಟ್ಟಿದ್ದಾರೆ.
ಎಷ್ಟೊಂದು ದುಃಖವಿದೆ. ಈ ವಿಮಾನ ಇತ್ಯಾದಿಗಳೆಲ್ಲವೂ ಈ 100 ವರ್ಷಗಳಲ್ಲಿ ಬಂದಿವೆ. ಇದಕ್ಕೆ ಮಾಯೆಯ
ಆಡಂಬರವೆಂದು ಹೇಳಲಾಗುತ್ತದೆ. ಇದರಿಂದ ಮನುಷ್ಯರು ವಿಜ್ಞಾನದವರು ವಿಶ್ವವನ್ನು ಸ್ವರ್ಗವನ್ನಾಗಿ
ಮಾಡಿಬಿಟ್ಟಿದ್ದಾರೆಂದು ತಿಳಿಯುತ್ತಾರೆ. ಆದರೆ ಇದು ರಾವಣನ ಸ್ವರ್ಗವಾಗಿದೆ. ಕಲಿಯುಗದಲ್ಲಿ ಮಾಯೆಯ
ಆಡಂಬರವನ್ನು ನೋಡಿ, ನಿಮ್ಮ ಬಳಿ ಬರುವುದೇ ಕಷ್ಟ. ನಮ್ಮ ಬಳಿಯೇ ಮಹಲು ಮೋಟಾರು ಎಲ್ಲವೂ ಇದೆ. ಇದೇ
ಸ್ವರ್ಗವೆಂದು ತಿಳಿಯುತ್ತಾರೆ. ಆದರೆ ತಂದೆಯು ತಿಳಿಸುವುದೇನೆಂದರೆ ಸತ್ಯಯುಗಕ್ಕೆ ಸ್ವರ್ಗ ವೆಂದು
ಹೇಳಲಾಗುತ್ತದೆ. ಆಗ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಈಗಂತೂ ಈ ಲಕ್ಷ್ಮೀ-ನಾರಾಯಣರ
ರಾಜ್ಯವಿಲ್ಲ. ಕಲಿಯುಗದ ನಂತರ ಮತ್ತೆ ಇವರ ರಾಜ್ಯವು ಬರುವುದು. ಮೊದಲು ಭಾರತವು ಬಹಳ
ಚಿಕ್ಕದಾಗಿತ್ತು. ಹೊಸ ಪ್ರಪಂಚದಲ್ಲಿ ಕೇವಲ 9 ಲಕ್ಷ ದೇವತೆಗಳಷ್ಟೇ ಇರುತ್ತಾರೆ. ನಂತರದಲ್ಲಿ
ವೃದ್ಧಿಹೊಂದುತ್ತಾ ಇರುತ್ತಾರೆ. ಇಡೀ ಸೃಷ್ಟಿಯು ವೃದ್ಧಿಯಾಗುತ್ತದೆಯಲ್ಲವೆ. ಮೊಟ್ಟಮೊದಲು ಕೇವಲ
ದೇವಿದೇವತೆಗಳಿದ್ದರು. ಅಂದಾಗ ಬೇಹದ್ದಿನ ತಂದೆಯು ವಿಶ್ವದ ಇತಿಹಾಸ-ಭೂಗೋಳವನ್ನು ತಿಳಿಸುತ್ತಾರೆ.
ತಂದೆಯ ವಿನಃ ಮತ್ತ್ಯಾರು ತಿಳಿಸಲು ಸಾಧ್ಯವಿಲ್ಲ. ಅವರಿಗೆ ಜ್ಞಾನಸಾಗರ ಪರಮಪಿತ ಪರಮಾತ್ಮನೆಂದು
ಹೇಳಲಾಗುತ್ತದೆ. ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಆತ್ಮಗಳೆಲ್ಲರೂ ಸಹೋದರರಾಗಿದ್ದಾರೆ.
ನಂತರ ಸಕಾಲದಲ್ಲಿ ಸಹೋದರ-ಸಹೋದರಿಯಾಗುತ್ತಾರೆ. ನೀವೆಲ್ಲರೂ ಒಬ್ಬ ಪ್ರಜಾಪಿತ ಬ್ರಹ್ಮನ ದತ್ತು
ಮಕ್ಕಳಾಗಿದ್ದೀರಿ. ಎಲ್ಲರೂ ಅವರ ಸಂತಾನರಾಗಿದ್ದೀರಿ. ಆತ್ಮಗಳ ತಂದೆಯೇ ಪರಮಪಿತನೆಂದು
ಹೇಳಲಾಗುತ್ತದೆ. ಅವರ ಹೆಸರಾಗಿದೆ-ಶಿವ. ತಂದೆಯು ತಿಳಿಸುತ್ತಾರೆ-ನನ್ನ ಹೆಸರು ಒಂದೇ ಆಗಿದೆ ಶಿವ.
ನಂತರ ಭಕ್ತಿಮಾರ್ಗದಲ್ಲಿ ಮನುಷ್ಯರು ಅನೇಕ ಮಂದಿರಗಳನ್ನು ಮಾಡಿರುವುದರಿಂದ ಅನೇಕ
ಹೆಸರುಗಳನ್ನಿಟ್ಟಿದ್ದಾರೆ. ಭಕ್ತಿಯ ಸಾಮಗ್ರಿ ಬಹಳಷ್ಟಿದೆ. ಅದಕ್ಕೆ ವಿದ್ಯೆಯೆಂದು
ಹೇಳಲಾಗುವುದಿಲ್ಲ. ಅದರಲ್ಲಿ ಗುರಿ-ಧ್ಯೇಯವೇನೂ ಇಲ್ಲ. ಇದು ಭಕ್ತಿಯೆಂದರೆ ಕೆಳಗಿಳಿಯುವುದಾಗಿದೆ.
ಕೆಳಗಿಳಿಯುತ್ತಾ-ಇಳಿಯುತ್ತಾ ತಮೋಪ್ರಧಾನರಾಗಿ ಬಿಡುತ್ತಾರೆ. ಪುನಃ ಎಲ್ಲರೂ
ಸತೋಪ್ರಧಾನರಾಗಬೇಕಾಗಿದೆ. ನೀವು ಸತೋಪ್ರಧಾನರಾಗಿ ಸ್ವರ್ಗದಲ್ಲಿ ಬರುತ್ತೀರಿ. ಉಳಿದೆಲ್ಲರೂ
ಸತೋಪ್ರಧಾನರಾಗಿ ಶಾಂತಿಧಾಮದಲ್ಲಿರುತ್ತಾರೆ. ಇದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ತಂದೆಯು
ತಿಳಿಸುತ್ತಾರೆ-ಬಾಬಾ, ನಾವು ಪತಿತರನ್ನು ಪಾವನರನ್ನಾಗಿ ಮಾಡಿ ಎಂದು ನನ್ನನ್ನು ಕರೆದಿರಿ ಅಂದಾಗ
ಈಗ ನಾನು ಇಡೀ ಪ್ರಪಂಚವನ್ನು ಪಾವನ ಮಾಡಲು ಬಂದಿದ್ದೇನೆ. ಗಂಗೆಯಲ್ಲಿ ಸ್ನಾನ ಮಾಡುವುದರಿಂದ
ಪಾವನರಾಗಿಬಿಡುತ್ತೇವೆಂದು ಮನುಷ್ಯರು ತಿಳಿಯುತ್ತಾರೆ. ಗಂಗೆಯನ್ನು ಪತಿತ-ಪಾವನಿಯೆಂದು
ತಿಳಿಸುತ್ತಾರೆ. ಬಾವಿಯಿಂದ ಬಂದಂತಹ ನೀರನ್ನೂ ಸಹ ಪಾವನ ಗಂಗೆಯೆಂದು ತಿಳಿದು ಸ್ನಾನ ಮಾಡುತ್ತಾರೆ.
ಗುಪ್ತಗಂಗೆಯೆಂದು ತಿಳಿಯುತ್ತಾರೆ. ತೀರ್ಥಯಾತ್ರೆಗೆ ಅಥವಾ ಯಾವುದಾದರೂ ಬೆಟ್ಟದ ಮೇಲೆ ಹೋಗುತ್ತಾರೆ.
ಅದನ್ನೂ ಗುಪ್ತಗಂಗೆಯೆಂದು ತಿಳಿಯುತ್ತಾರೆ. ಇದಕ್ಕೆ ಅಸತ್ಯವೆಂದು ಹೇಳಲಾಗುತ್ತದೆ. ಭಗವಂತನಿಗೆ
ಸತ್ಯವೆಂದು ಹೇಳಲಾಗುತ್ತದೆ. (ಗಾಡ್ ಈಸ್ ಟ್ರೂಥ್). ಉಳಿದಂತೆ ರಾವಣರಾಜ್ಯದಲ್ಲಿ ಎಲ್ಲರೂ
ಅಸತ್ಯವನ್ನೇ ಹೇಳುವವರಿದ್ದಾರೆ. ಭಗವಂತನೇ ಸತ್ಯಖಂಡವನ್ನು ಸ್ಥಾಪನೆ ಮಾಡುತ್ತಾರೆ. ಅಲ್ಲಿ ಅಸತ್ಯದ
ಮಾತಿರುವುದಿಲ್ಲ. ದೇವತೆಗಳಿಗೆ ಶುದ್ಧವಾದ ನೈವೇದ್ಯವನ್ನಿಡುತ್ತಾರೆ. ಈಗಂತೂ ಅಸುರೀ ರಾಜ್ಯವಾಗಿದೆ.
ಸತ್ಯಯುಗ-ತ್ರೇತಾಯುಗವು ಈಶ್ವರೀಯ ರಾಜ್ಯವಾಗಿದೆ. ಅದು ಈಗ ಸ್ಥಾಪನೆಯಾಗುತ್ತದೆ. ಈಶ್ವರನೇಬಂದು
ಎಲ್ಲರನ್ನೂ ಪಾವನರನ್ನಾಗಿ ಮಾಡುತ್ತಾರೆ. ದೇವತೆಗಳಲ್ಲಿ ಯಾವುದೇ ವಿಕಾರವಿರುವುದಿಲ್ಲ.
ಯಥಾರಾಜ-ರಾಣಿ ತಥಾ ಪ್ರಜಾ. ಎಲ್ಲರೂ ಪವಿತ್ರರಾಗಿರುತ್ತಾರೆ. ಇಲ್ಲಿ ಎಲ್ಲರೂ ಪಾಪಿಗಳು, ಕಾಮಿಗಳು,
ಕ್ರೋಧಿಗಳಾಗಿದ್ದಾರೆ. ಹೊಸ ಪ್ರಪಂಚಕ್ಕೆ ಸ್ವರ್ಗ ಮತ್ತು ಇದಕ್ಕೆ ನರಕವೆಂದು ಹೇಳಲಾಗುತ್ತದೆ.
ನರಕವನ್ನು ಸ್ವರ್ಗವನ್ನಾಗಿ ತಂದೆಯ ಹೊರತು ಯಾರೂ ಮಾಡಲು ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ನರಕವಾಸಿ
ಪತಿತರಾಗಿದ್ದಾರೆ. ಸತ್ಯಯುಗದಲ್ಲಿ ಪಾವನರಿರುತ್ತಾರೆ. ನಾವು ಪತಿತರಿಂದ ಪಾವನರಾಗುವುದಕ್ಕಾಗಿ
ಸ್ನಾನ ಮಾಡಲು ಹೋಗುತ್ತೇವೆಂದು ಸತ್ಯಯುಗದಲ್ಲಿ ಹೇಳುವುದಿಲ್ಲ.
ಇದು ವಿಭಿನ್ನ ಮನುಷ್ಯ
ಸೃಷ್ಟಿರೂಪಿ ವೃಕ್ಷವಾಗಿದೆ. ಭಗವಂತನು ಬೀಜರೂಪನಾಗಿದ್ದಾರೆ. ಅವರೇ ರಚನೆಯನ್ನು ರಚಿಸುತ್ತಾರೆ.
ಮೊದಲು ದೇವಿ-ದೇವತೆಗಳನ್ನು ರಚಿಸುತ್ತಾರೆ. ನಂತರ ವೃದ್ಧಿಯನ್ನು ಹೊಂದುತ್ತಾ-ಹೊಂದುತ್ತಾ ಇಷ್ಟೊಂದು
ಧರ್ಮಗಳಾಗಿಬಿಡುತ್ತವೆ. ಮೊದಲು ಒಂದು ಧರ್ಮ, ಒಂದು ರಾಜ್ಯವಿತ್ತು. ಸುಖವೇ ಸುಖವಿತ್ತು.
ವಿಶ್ವದಲ್ಲಿ ಶಾಂತಿಯು ಬೇಕೆಂದು ಮನುಷ್ಯರು ಬಯಸುತ್ತಾರೆ. ಈಗ ಅದನ್ನು ನೀವು ಸ್ಥಾಪನೆ
ಮಾಡುತ್ತಿದ್ದೀರಿ. ಎಲ್ಲರೂ ಸಮಾಪ್ತಿಯಾಗಿ ಕೆಲವರೇ ಉಳಿಯುತ್ತಾರೆ. ಈ ಚಕ್ರವು ಸುತ್ತುತ್ತಾ
ಇರುತ್ತದೆ. ಈಗ ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ನಡುವಿನ ಪುರುಷೋತ್ತಮ ಸಂಗಮಯುಗವಾಗಿದೆ.
ಇದಕ್ಕೆ ಕಲ್ಯಾಣಕಾರಿ ಪುರುಷೋತ್ತಮ ಸಂಗಮಯುಗವೆಂದು ಹೇಳಲಾಗುತ್ತದೆ. ಕಲಿಯುಗದ ನಂತರ ಸತ್ಯಯುಗವು
ಸ್ಥಾಪನೆಯಾಗುತ್ತಾ ಇದೆ. ನೀವು ಸಂಗಮದಲ್ಲಿ ಓದುತ್ತೀರಿ. ಇದರ ಫಲವು ಸತ್ಯಯುಗದಲ್ಲಿ ಸಿಗುತ್ತದೆ.
ಇಲ್ಲಿ ಎಷ್ಟು ಪವಿತ್ರರಾಗುತ್ತೀರಿ ಮತ್ತು ಓದುತ್ತೀರೋ ಅಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತೀರಿ.
ಇಂತಹ ವಿದ್ಯೆಯು ಮತ್ತೆಲ್ಲಿಯೂ ಇರುವುದಿಲ್ಲ. ನಿಮಗೆ ಈ ವಿದ್ಯೆಯ ಸುಖವು ಹೊಸ ಪ್ರಪಂಚದಲ್ಲಿ
ಸಿಗುತ್ತದೆ. ಒಂದುವೇಳೆ ಯಾವುದೇ ಭೂತವಿದ್ದರೆ ಒಂದನೇಯದಾಗಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಎರಡನೇಯದಾಗಿ ಕಡಿಮೆ ಪದವಿಯನ್ನು ಪಡೆಯುತ್ತೀರಿ. ಯಾರು ಸಂಪೂರ್ಣರಾಗಿ ಅನ್ಯರಿಗೂ ಓದಿಸುವಿರೋ ಅವರು
ಉತ್ತಮ ಪದವಿಯನ್ನೇ ಪಡೆಯುತ್ತಾರೆ. ಎಷ್ಟೊಂದು ಸೇವಾಕೇಂದ್ರಗಳಿಗೆ, ಮುಂದೆ ಇನ್ನೂ ಲಕ್ಷಾಂತರ
ಸೇವಾಕೇಂದ್ರಗಳಾಗಿ ಬಿಡುತ್ತವೆ. ಇಡೀ ವಿಶ್ವದಲ್ಲಿಯೇ ಸೇವಾಕೇಂದ್ರಗಳು ತೆರೆಯುತ್ತಾ ಹೋಗುತ್ತವೆ.
ಪಾಪಾತ್ಮರಿಂದ ಪುಣ್ಯಾತ್ಮರಾಗಲೇಬೇಕಾಗಿದೆ. ನಿಮಗೆ ಗುರಿ-ಧ್ಯೇಯವೂ ಇದೆ. ಓದಿಸುವವರು ಒಬ್ಬ
ಶಿವತಂದೆಯಾಗಿದ್ದಾರೆ. ಅವರು ಜ್ಞಾನದ ಸಾಗರ, ಸುಖದ ಸಾಗರನಾಗಿದ್ದಾರೆ. ಅವರೇ ಬಂದು ಓದಿಸುತ್ತಾರೆ.
ಈ ಬ್ರಹ್ಮರವರು ಓದಿಸುವುದಿಲ್ಲ. ಇವರ ಮೂಲಕ ಶಿವತಂದೆಯು ಓದಿಸುತ್ತಾರೆ. ಇವರಿಗೆ ಭಗವಂತನ ರಥ,
ಭಾಗ್ಯಶಾಲಿ ರಥವೆಂದು ಗಾಯನ ಮಾಡಲಾಗುತ್ತದೆ. ತಂದೆಯು ನಿಮ್ಮನ್ನು ಎಷ್ಟು ಪದಮಾಪದಮ
ಭಾಗ್ಯಶಾಲಿಗಳನ್ನಾಗಿ ಮಾಡುತ್ತಾರೆ. ನೀವು ಬಹಳ ಸಾಹುಕಾರರಾಗುತ್ತೀರಿ. ಎಂದಿಗೂ
ರೋಗಿಗಳಾಗುವುದಿಲ್ಲ. ಆರೋಗ್ಯ-ಐಶ್ವರ್ಯ-ಸಂತೋಷ ಎಲ್ಲದೂ ಸಿಕ್ಕಿಬಿಡುತ್ತದೆ. ಇಲ್ಲಿ ಭಲೆ ಹಣವಿದೆ.
ಆದರೆ ರೋಗಗಳಿವೆ. ಅಲ್ಲಿನ ಸಂತೋಷವು ಇಲ್ಲಿರಲು ಸಾಧ್ಯವಿಲ್ಲ. ಯಾವುದಾದರೊಂದು ದುಃಖವಿರುತ್ತದೆ.
ಅಲ್ಲಂತೂ ಅದರ ಹೆಸರೇ ಆಗಿದೆ - ಸುಖಧಾಮ, ಸ್ವರ್ಗ, ಪ್ಯಾರಡೈಸ್. ಈ ಲಕ್ಷ್ಮೀ-ನಾರಾಯಣರಿಗೆ
ರಾಜ್ಯವನ್ನು ಯಾರು ಕೊಟ್ಟರು? ಇದು ಯಾರಿಗೂ ಗೊತ್ತಿಲ್ಲ. ಈ ದೇವತೆಗಳು ಭಾರತದಲ್ಲಿದ್ದರು. ವಿಶ್ವದ
ಮಾಲೀಕರಾಗಿದ್ದರು. ಯಾವುದೇ ವಿಭಾಗಗಳಿರಲಿಲ್ಲ. ಈಗಂತೂ ಎಷ್ಟು ವಿಂಗಡಣೆಯಾಗಿದೆ. ರಾವಣರಾಜ್ಯವಿದೆ.
ಎಷ್ಟು ಕತ್ತರಿಸಿಹೋಗಿದೆ, ಹೊಡೆದಾಡುತ್ತಿರುತ್ತಾರೆ. ಸತ್ಯಯುದಲ್ಲಂತೂ ಇಡೀ ಭಾರತದಲ್ಲಿ ಈ
ದೇವಿ-ದೇವತೆಗಳ ರಾಜ್ಯವಿತ್ತು. ಅಲ್ಲಿ ಮಂತ್ರಿ ಮೊದಲಾದವರಿರುವುದಿಲ್ಲ. ಇಲ್ಲಂತೂ ನೋಡಿ, ಎಷ್ಟೊಂದು
ಮಂತ್ರಿಗಳಿದ್ದಾರೆ. ಏಕೆಂದರೆ ಬುದ್ಧಿಹೀನರಾಗಿದ್ದಾರೆ. ಆದ್ದರಿಂದ ಮಂತ್ರಿಗಳೂ ಸಹ ತಮೋಪ್ರಧಾನ,
ಪತಿತರೇ ಆಗಿದ್ದಾರೆ. ಪತಿತರಿಗೆ ಪತಿತರು ಸಿಗುವುದೆಂದರೆ ಕೈಗೆ ಕೈ ಜೋಡಿಸಿದ ಹಾಗೆ..... ಇನ್ನೂ
ಭ್ರಷ್ಟಾಚಾರವು ಹೆಚ್ಚುತ್ತಾ ಹೋಗುತ್ತದೆ. ಕಂಗಾಲಾಗುತ್ತಾ ಹೋಗುತ್ತಾರೆ. ಸಾಲವನ್ನು
ತೆಗೆದುಕೊಳ್ಳುತ್ತಾ ಇರುತ್ತಾರೆ. ಸತ್ಯಯುಗದಲ್ಲಿ ದವಸ-ಧಾನ್ಯ, ಫಲ ಇತ್ಯಾದಿಗಳನ್ನು ಬಹಳಷ್ಟು
ಸ್ವಾದೀಷ್ಟವಾಗಿರುತ್ತವೆ. ನೀವು ಅಲ್ಲಿ ಹೋಗಿ ಎಲ್ಲವನ್ನೂ ಅನುಭವ ಮಾಡಿ ಬರುತ್ತೀರಿ.
ಸೂಕ್ಷ್ಮವತನದಲ್ಲಿ ಹೋಗುತ್ತೀರಿ. ಸ್ವರ್ಗದಲ್ಲಿಯೂ ಹೋಗುತ್ತೀರಿ. ತಂದೆಯು ತಿಳಿಸುತ್ತಾರೆ -
ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ. ಮೊದಲು ಭಾರತದಲ್ಲಿ ಒಂದೇ ದೇವಿದೇವತಾ ಧರ್ಮವಿತ್ತು. ಅನ್ಯ
ಯಾವುದೇ ಧರ್ಮವಿರಲಿಲ್ಲ. ನಂತರ ದ್ವಾಪರದಲ್ಲಿ ರಾವಣರಾಜ್ಯವು ಆರಂಭವಾಗುತ್ತದೆ. ಈಗ ವಿಕಾರಿ
ಪ್ರಪಂಚವಾಗಿದೆ. ನಂತರ ನೀವು ಪವಿತ್ರರಾಗಿ ನಿರ್ವಿಕಾರಿ ದೇವತೆಗಳಾಗುತ್ತೀರಿ. ಇದು ಶಾಲೆಯಾಗಿದೆ.
ಭಗವಾನುವಾಚ - ನಾನು ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತೇನೆ. ತಾವು ಭವಿಷ್ಯದಲ್ಲಿ ಇಂತಹ
ದೇವತೆಗಳಾಗುವಿರಿ. ರಾಜವಿದ್ಯೆಯು ಮತ್ತೆಲ್ಲಿಯೂ ಸಿಗುವುದಿಲ್ಲ. ತಂದೆಯೇ ಓದಿಸಿ ಹೊಸ ಪ್ರಪಂಚದ
ರಾಜಧಾನಿ ಯನ್ನು ಕೊಡುತ್ತಾರೆ. ಪಾರಲೌಕಿಕ ತಂದೆ-ಶಿಕ್ಷಕ-ಸದ್ಗುರು ಒಬ್ಬರೇ ಶಿವತಂದೆಯಾಗಿದ್ದಾರೆ.
ತಂದೆಯೆಂದರೆ ಅವಶ್ಯವಾಗಿ ಆಸ್ತಿಯು ಸಿಗಬೇಕು. ಭಗವಂತನು ಅವಶ್ಯವಾಗಿ ಸ್ವರ್ಗದ ಆಸ್ತಿಯನ್ನೇ
ಕೊಡುತ್ತಾರೆ. ಯಾವ ರಾವಣನನ್ನು ಪ್ರತಿವರ್ಷವು ಸುಡುತ್ತಾರೆಯೋ ಇವನು ಭಾರತದ ಮೊದಲನೇ
ಶತ್ರುವಾಗಿದ್ದಾನೆ. ರಾವಣನು ಹೇಗೆ ಅಸುರರನ್ನಾಗಿ ಮಾಡಿಬಿಟ್ಟಿದ್ದಾನೆ. ರಾವಣರಾಜ್ಯವು 2500
ವರ್ಷಗಳು ನಡೆಯುತ್ತದೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಸುಖಧಾಮದ ಮಾಲೀಕರನ್ನಾಗಿ
ಮಾಡುತ್ತೇನೆ. ರಾವಣನು ನಿಮ್ಮನ್ನು ದುಃಖಧಾಮದಲ್ಲಿ ಕರೆದುಕೊಂಡು ಹೋಗುತ್ತಾನೆ. ನಿಮ್ಮ ಆಯಸ್ಸೂ ಸಹ
ಕಡಿಮೆಯಾಗಿಬಿಡುತ್ತದೆ. ಆಕಸ್ಮಿಕವಾಗಿ ಅಕಾಲ ಮೃತ್ಯುವಾಗುತ್ತದೆ. ಅನೇಕ ರೋಗಗಳು ಬರುತ್ತವೆ.
ಸತ್ಯಯುಗದಲ್ಲಿ ಈ ರೀತಿ ಮಾತುಗಳಿರುವುದಿಲ್ಲ. ಹೆಸರೇ ಆಗಿದೆ- ಸ್ವರ್ಗ. ಈಗ ತಮ್ಮನ್ನು
ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ. ಏಕೆಂದರೆ ಪತಿತರಾಗಿದ್ದಾರೆ. ಆದುದರಿಂದ ದೇವತೆಗಳೆಂದು
ಕರೆಸಿಕೊಳ್ಳಲು ಯೋಗ್ಯರಲ್ಲ. ತಂದೆಯು ಈ ರಥದ ಮೂಲಕ ತಿಳಿಸಿಕೊಡು ತ್ತಾರೆ. ನಾನು ನಿಮಗೆ ಓದಿಸಲು
ಇವರ (ಬ್ರಹ್ಮ) ಪಕ್ಕದಲ್ಲಿ ಬಂದು ಕುಳಿತುಕೊಳ್ಳುತ್ತೇನೆ. ಅಂದಾಗ ಇವರೂ ಸಹ ಓದುತ್ತಾರೆ.
ನೀವೆಲ್ಲರೂ ವಿದ್ಯಾರ್ಥಿಗಳಾಗಿದ್ದೀರಿ. ಒಬ್ಬ ತಂದೆಯೇ ಶಿಕ್ಷಕನಾಗಿದ್ದಾರೆ. ಈಗ ತಂದೆಯು
ಓದಿಸುತ್ತಾರೆ ಮತ್ತೆ 5000 ವರ್ಷಗಳ ನಂತರ ಪುನಃ ಓದಿಸುತ್ತಾರೆ. ಈ ಜ್ಞಾನ, ವಿದ್ಯೆಯು ನಂತರ
ಪ್ರಾಯಲೋಪವಾಗಿ ಬಿಡುತ್ತದೆ. ಓದಿ ನೀವು ದೇವತೆಗಳಾದಿರಿ. 2500 ವರ್ಷಗಳು ಸುಖದ ಆಸ್ತಿಯನ್ನು
ಪಡೆದಿರಿ ನಂತರ ದುಃಖ, ರಾವಣನ ಶಾಪವು ಆರಂಭವಾಯಿತು. ಈಗ ಭಾರತವು ಬಹಳಷ್ಟು ದುಃಖಿಯಾಗಿದೆ. ಇದು
ದುಃಖಧಾಮ ವಾಗಿದೆ. ಪತಿತ-ಪಾವನ ಬನ್ನಿ, ಬಂದು ಪಾವನರನ್ನಾಗಿ ಮಾಡಿ ಎಂದು ಕರೆಯುತ್ತಾರಲ್ಲವೆ.
ಅಂದಾಗ ಈಗ ನಿಮ್ಮಲ್ಲಿ ಯಾವ ವಿಕಾರವೂ ಇರಬಾರದು. ಆದರೆ ಅರ್ಧಕಲ್ಪದ ರೋಗವು ಅಷ್ಟು ಬೇಗ ಬಿಟ್ಟು
ಹೋಗುತ್ತದೆಯೇ! ಆ ಲೌಕಿಕ ವಿದ್ಯೆಯಲ್ಲಿಯೂ ಸಹ ಯಾರು ಚೆನ್ನಾಗಿ ಓದುವುದಿಲ್ಲವೋ ಅವರು
ಅನುತ್ತೀರ್ಣರಾಗುತ್ತಾರೆ. ಯಾರು ಗೌರವಪೂರ್ಣವಾಗಿ ತೇರ್ಗಡೆಯಾಗುವರೋ ಅವರು ವಿದ್ಯಾರ್ಥಿವೇತನವನ್ನು
ಪಡೆಯುತ್ತಾರೆ. ಹಾಗೆಯೇ ನಿಮ್ಮಲ್ಲಿಯೂ ಸಹ ಯಾರು ಚೆನ್ನಾಗಿ ಪವಿತ್ರರಾಗಿ ಮತ್ತೆ ಅನ್ಯರನ್ನೂ
ಮಾಡುತ್ತಾರೆಯೋ ಅವರು ಈ ಬಹುಮಾನವನ್ನು ತೆಗೆದುಕೊಳ್ಳುತ್ತಾರೆ. 8ರ ಮಾಲೆಯಿದೆ, 8 ಮಂದಿಯೇ
ಗೌರವಪೂರ್ಣವಾಗಿ ತೇರ್ಗಡೆಯಾಗುತ್ತಾರೆ. ನಂತರ 108ರ ಮಾಲೆಯಾಗುತ್ತದೆ. ಆ ಮಾಲೆಯೂ ಸ್ಮರಣೆ
ಮಾಡಲ್ಪಡುತ್ತದೆ. ಮನುಷ್ಯರು ಇದರ ರಹಸ್ಯವನ್ನು ತಿಳಿದುಕೊಂಡಿಲ್ಲ. ಮಾಲೆಯಲ್ಲಿ ಮೇಲೆ ಹೂವಿರುತ್ತದೆ.
ಅದರ ನಂತರ ಎರಡು ಜೋಡಿಮಣಿಗಳು. ಸ್ತ್ರೀ ಮತ್ತು ಪುರುಷರಿಬ್ಬರೂ ಪವಿತ್ರರಾಗಿರುತ್ತಾರೆ. ಇವರು (ಲಕ್ಷ್ಮೀ-ನಾರಾಯಣ)
ಪವಿತ್ರರಾಗಿದ್ದರಲ್ಲವೆ. ಸ್ವರ್ಗವಾಸಿಗಳೆಂದು ಕರೆಸಿಕೊಳ್ಳುತ್ತಿದ್ದರು. ಇದೇ ಆತ್ಮಗಳು
ಪುನರ್ಜನ್ಮ ವನ್ನು ತೆಗೆದುಕೊಳ್ಳುತ್ತಾ-ತೆಗದುಕೊಳ್ಳುತ್ತಾ ಈಗ ಪತಿತರಾಗಿಬಿಟ್ಟಿದ್ದಾರೆ ಮತ್ತೆ
ಪವಿತ್ರರಾಗಿ ಇಲ್ಲಿಂದ ಪಾವನಪ್ರಪಂಚಕ್ಕೆ ಹೋಗುತ್ತಾರೆ. ವಿಶ್ವದ ಇತಿಹಾಸ-ಭೂಗೋಳವು
ಪುನರಾವರ್ತನೆಯಾಗುತ್ತದೆ ಅಲ್ಲವೆ. ವಿಕಾರಿ ರಾಜರು ನಿರ್ವಿಕಾರಿ ರಾಜರ ಮಂದಿರವನ್ನು ಕಟ್ಟಿಸಿ
ಅವರನ್ನು ಪೂಜಿಸುತ್ತಾರೆ. ಪೂಜ್ಯರಾಗಿದ್ದವರೇ ನಂತರ ಪೂಜಾರಿಗಳಾಗುತ್ತಾರೆ. ವಿಕಾರಿಗಳಾಗುವ ಕಾರಣ
ಆ ಪ್ರಕಾಶತೆಯ ಕಿರೀಟವೂ ಇಲ್ಲದಿರುವುದನ್ನು ನೊಡುತ್ತೇವೆ. ಈ ಆಟವು ಮಾಡಲ್ಪಟ್ಟಿದೆ. ಇದು
ಬೇಹದ್ದಿನ ವಿಚಿತ್ರವಾದ ಆಟವಾಗಿದೆ. ಮೊಟ್ಟಮೊದಲಿಗೆ ಒಂದೇ ಧರ್ಮವಿರುತ್ತದೆ. ಅದಕ್ಕೆ
ರಾಮರಾಜ್ಯವೆಂದು ಹೇಳಲಾಗುತ್ತದೆ. ನಂತರ ಬೇರೆ-ಬೇರೆ ಧರ್ಮದವರು ಬರುತ್ತಾರೆ. ಈ ಸೃಷ್ಟಿಚಕ್ರವು
ಹೇಗೆ ಸುತ್ತುತ್ತಿರುತ್ತದೆ ಎಂಬುದನ್ನೂ ಸಹ ಒಬ್ಬ ತಂದೆಯೇ ತಿಳಿಸುತ್ತಾರೆ. ಭಗವಂತನು ಒಬ್ಬರೇ
ಆಗಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿಹೋಗಿ
ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸ್ವಯಂ
ಭಗವಂತನೇ ಶಿಕ್ಷಕನಾಗಿ ಓದಿಸುತ್ತಾರೆ. ಆದ್ದರಿಂದ ಬಹಳ ಚೆನ್ನಾಗಿ ಓದಬೇಕಾಗಿದೆ.
ವಿದ್ಯಾರ್ಥಿವೇತನವನ್ನು ಪಡೆಯಲು ಪವಿತ್ರರಾಗಿ ಅನ್ಯರನ್ನೂ ಪವಿತ್ರರನ್ನಾಗಿ ಮಾಡುವ ಸೇವೆ
ಮಾಡಬೇಕಾಗಿದೆ.
2. ಒಳಗೆ ಕಾಮ-ಕ್ರೋಧ
ಇತ್ಯಾದಿ ಯಾವುದೆಲ್ಲಾ ಭೂತಗಳು ಪ್ರವೇಶವಾಗಿದೆಯೋ ಅದನ್ನು ತೆಗೆಯಬೇಕಾಗಿದೆ. ಗುರಿ-ಧ್ಯೇಯವನ್ನು
ಸಮ್ಮುಖದಲ್ಲಿಟ್ಟುಕೊಂಡು ಪುರುಷಾರ್ಥ ಮಾಡಬೇಕಾಗಿದೆ.
ವರದಾನ:
ಮಾಯೆಯ
ನೆರಳಿನಿಂದ ಹೊರ ಬಂದು ನೆನಪಿನ ಛತ್ರಛಾಯೆಯಲ್ಲಿರುವಂತಹ ನಿಶ್ಚಿಂತ ಚಕ್ರವರ್ತಿ ಭವ.
ಯಾರು ಸದಾ ತಂದೆಯ
ನೆನಪಿನ ಛತ್ರಛಾಯೆಯ ಒಳಗೆ ಇರುತ್ತಾರೆ ಅವರು ಸ್ವಯಂ ಸದಾ ಸುರಕ್ಷಿತತೆಯ ಅನುಭವ ಮಾಡುತ್ತಾರೆ.
ಮಾಯೆಯ ನೆರಳಿನಿಂದ ಸುರಕ್ಷಿತರಾಗಿರಲು ಸಾಧನವಾಗಿದೆ ತಂದೆಯ ಛತ್ರಛಾಯೆ. ಛತ್ರಛಾಯೆಯ ಕೆಳಗೆ
ಇರುವವರು ಸದಾ ನಿಶ್ಚಿಂತ ಚಕ್ರವರ್ತಿಗಳಾಗಿರುತ್ತಾರೆ. ಒಂದು ವೇಳೆ ಏನಾದರೂ ಚಿಂತೆ ಇದ್ದರೆ ಖುಷಿ
ಕಳೆದು ಹೋಗುವುದು. ಖುಷಿ ಕಳೆದುಹೋದರೆ, ಬಲಹೀನವಾದರೆ ಮಾಯೆಯ ನೆರಳಿನ ಫ್ರಭಾವ ಬಿದ್ದು ಬಿಡುವುದು.
ಏಕೆಂದರೆ ಬಲಹೀನತೆಯೆ ಮಾಯೆಯನ್ನು ಆಹ್ವಾನ ಮಾಡುವುದು. ಮಾಯೆಯ ಛಾಯೆ ಸ್ವಪ್ನದಲ್ಲಿಯೂ ಸಹ
ಬಿದ್ದಿದ್ದೇ ಆದರೆ ಬಹಳ ತೊಂದರೆ ಮಾಡುತ್ತದೆ. ಆದ್ದರಿಂದ ಸದಾ ಛತ್ರಛಾಯೆಯ ಕೆಳಗೆ ಇರಿ.
ಸ್ಲೋಗನ್:
ತಿಳುವಳಿಕೆ
ಎನ್ನುವ ಸ್ಕ್ರೂ ಡ್ರೈವರ್ ನಿಂದ ಹುಡುಗಾಟಿಕೆ ಎನ್ನುವ ಲೂಸ್ ಸ್ಕ್ರೂ ವನ್ನು ಟೈಟ್ ಮಾಡಿ ಸದಾ
ಎಚ್ಚರಿಕೆಯಿಂದಿರಿ.