04.09.25         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಸಂಗಮಯುಗದಲ್ಲಿ ಪ್ರೀತಿಯ ಸಾಗರ ತಂದೆಯು ನಿಮಗೆ ಪ್ರೀತಿಯ ಆಸ್ತಿಯನ್ನೇ ಕೊಡುತ್ತಾರೆ ಆದ್ದರಿಂದ ನೀವು ಎಲ್ಲರಿಗೆ ಪ್ರೀತಿಯನ್ನು ಕೊಡಿ, ಕ್ರೋಧದಲ್ಲಿ ಬರಬೇಡಿ".

ಪ್ರಶ್ನೆ:
ತಮ್ಮ ರಿಜಿಸ್ಟರನ್ನು ಸರಿಯಾಗಿಟ್ಟುಕೊಳ್ಳಲು ತಂದೆಯು ನಿಮಗೆ ಯಾವ ಮಾರ್ಗವನ್ನು ತಿಳಿಸಿದ್ದಾರೆ?

ಉತ್ತರ:
ತಂದೆಯು ನಿಮಗೆ ಪ್ರೀತಿಯ ಮಾತುಗಳನ್ನೇ ತಿಳಿಸುತ್ತಾರೆ, ಶ್ರೀಮತ ಕೊಡುತ್ತಾರೆ - ಮಕ್ಕಳೇ, ಪ್ರತಿಯೊಬ್ಬರ ಜೊತೆ ಪ್ರೀತಿಯಿಂದಿರಿ, ಯಾರಿಗೂ ದುಃಖವನ್ನು ಕೊಡಬೇಡಿ, ಕರ್ಮೇಂದ್ರಿಯಗಳಿಂದ ಎಂದೂ ಯಾವುದೇ ಉಲ್ಟಾ ಕರ್ಮವನ್ನು ಮಾಡಬೇಡಿ. ಸದಾ ಇದನ್ನೇ ಪರಿಶೀಲನೆ ಮಾಡಿಕೊಳ್ಳಿ - ನನ್ನಲ್ಲಿ ಯಾವುದೇ ಆಸುರೀ ಗುಣವಿಲ್ಲವೆ? ಮೂಡಿಯಾಗಿಲ್ಲವೆ? ಯಾವುದೇ ಮಾತಿನಲ್ಲಿ ಕೋಪಿಸಿಕೊಳ್ಳುತ್ತಿಲ್ಲವೆ?

ಗೀತೆ:
ಈ ಸಮಯವು ಕಳೆಯುತ್ತಿದೆ...................

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ, ದಿನ-ಪ್ರತಿದಿನ ತಮ್ಮ ಮನೆ ಅಥವಾ ಗುರಿ ಸಮೀಪಿಸುತ್ತಾ ಹೋಗುತ್ತಿದೆ. ಈಗ ಶ್ರೀಮತವು ಏನೆಲ್ಲವನ್ನೂ ಹೇಳುತ್ತದೆಯೋ ಅದರಲ್ಲಿ ಉದಾಸೀನ ಮಾಡಬೇಡಿ. ತಂದೆಯ ಆದೇಶವೂ ಸಿಗುತ್ತದೆ - ಎಲ್ಲರಿಗೆ ಸಂದೇಶವನ್ನು ಕೊಡಿ. ಮಕ್ಕಳಿಗೆ ತಿಳಿದಿದೆ, ಲಕ್ಷಾಂತರ-ಕೋಟ್ಯಾಂತರ ಮಂದಿಗೆ ಸಂದೇಶವನ್ನು ಕೊಡಬೇಕಾಗಿದೆ. ಒಂದಲ್ಲ ಒಂದು ಸಮಯದಲ್ಲಿ ಬಂದೇ ಬರುತ್ತಾರೆ. ಯಾವಾಗ ಬಹಳಷ್ಟು ಮಂದಿಯಾಗುವರೋ ಆಗ ಅನೇಕರಿಗೆ ಸಂದೇಶವನ್ನು ಕೊಡುವರು. ತಂದೆಯ ಸಂದೇಶವು ಎಲ್ಲರಿಗೆ ಸಿಗಬೇಕಾಗಿದೆ. ಇದು ಬಹಳ ಸಹಜವಾದ ಸಂದೇಶವಾಗಿದೆ. ಕೇವಲ ಇಷ್ಟನ್ನೇ ತಿಳಿಸಿ - ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಯಾವುದೇ ಕರ್ಮೇಂದ್ರಿಯಗಳಿಂದ ಮನಸ್ಸಾ-ವಾಚಾ-ಕರ್ಮಣಾದಿಂದ ಕೆಟ್ಟ ಕರ್ಮ ಮಾಡಬೇಡಿ. ಮೊದಲು ಮನಸ್ಸಿನಲ್ಲಿ ಬರುತ್ತದೆ ಆದ್ದರಿಂದಲೇ ವಾಚಾದಲ್ಲಿ ಬಂದು ಬಿಡುತ್ತದೆ. ಇದು ಪುಣ್ಯದ ಕೆಲಸವಾಗಿದೆ, ಇದನ್ನು ಮಾಡಬೇಕೆಂದು ಈಗ ನಿಮಗೆ ಸರಿ-ತಪ್ಪನ್ನು ಅರಿತುಕೊಳ್ಳುವ ಬುದ್ಧಿಯು ಬೇಕು. ಮನಸ್ಸಿನಲ್ಲಿ ಮೊದಲು ಕ್ರೋಧದ ಸಂಕಲ್ಪ ಬರುತ್ತದೆ. ಒಂದುವೇಳೆ ಕ್ರೋಧ ಮಾಡಿದರೆ ಪಾಪವಾಗುವುದೆಂದು ನಿಮಗೆ ಅರ್ಥವಾಗಿದೆ. ತಂದೆಯನ್ನು ನೆನಪು ಮಾಡುವುದರಿಂದ ಪುಣ್ಯಾತ್ಮರಾಗಿ ಬಿಡುತ್ತೀರಿ. ಈಗಂತೂ ಆಗಿಹೋಯಿತು. ಮತ್ತೆಂದೂ ಮಾಡುವುದಿಲ್ಲ ಎಂದಲ್ಲ. ಇದೇ ರೀತಿ ಮತ್ತೆ-ಮತ್ತೆ ಹೇಳುತ್ತಿದ್ದರೆ ಹವ್ಯಾಸವಾಗಿ ಬಿಡುವುದು. ಮನುಷ್ಯರು ಅಂತಹ ಕರ್ಮ ಮಾಡಿದರೆ ಇದು ಪಾಪವಲ್ಲ ಎಂದು ತಿಳಿದುಕೊಳ್ಳುತ್ತಾರೆ. ವಿಕಾರವನ್ನು ಪಾಪವೆಂದು ತಿಳಿಯುವುದಿಲ್ಲ. ಈಗ ತಂದೆಯು ತಿಳಿಸಿದ್ದಾರೆ - ಇದು ದೊಡ್ಡದಕ್ಕಿಂತ ದೊಡ್ಡ ಪಾಪವಾಗಿದೆ, ಇದರ ಮೇಲೆ ಜಯ ಗಳಿಸಬೇಕಾಗಿದೆ ಮತ್ತು ಎಲ್ಲರಿಗೆ ತಂದೆಯ ಸಂದೇಶವನ್ನು ಕೊಡಿ - ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿ, ಮೃತ್ಯು ಸನ್ಮುಖದಲ್ಲಿ ನಿಂತಿದೆ. ಯಾರಾದರೂ ಮರಣ ಹೊಂದುವ ಸ್ಥಿತಿಯಲ್ಲಿದ್ದಾಗ ಅವರಿಗೆ ಭಗವಂತನನ್ನು ನೆನಪು ಮಾಡಿ, ರಿಮೆಂಬರ್ ಗಾಡ್ಫಾದರ್ ಎಂದು ಹೇಳುತ್ತಾರೆ. ಇವರು ಭಗವಂತನ ಬಳಿ ಹೋಗುತ್ತಾರೆಂದು ತಿಳಿಯುತ್ತಾರೆ ಆದರೆ ಅವರಿಗೆ ಇದು ತಿಳಿದೇ ಇಲ್ಲ - ಗಾಡ್ಫಾದರನ್ನು ನೆನಪು ಮಾಡುವುದರಿಂದ ಏನಾಗುವುದು? ಎಲ್ಲಿ ಹೋಗುತ್ತಾರೆ? ಎಂದು. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಯಾರೂ ಭಗವಂತನ ಬಳಿ ಹೋಗಲು ಸಾಧ್ಯವಿಲ್ಲ. ಅಂದಾಗ ನೀವು ಮಕ್ಕಳಿಗೆ ಈಗ ಅವಿನಾಶೀ ತಂದೆಯ ಅವಿನಾಶೀ ನೆನಪಿರಬೇಕು. ಯಾವಾಗ ತಮೋಪ್ರಧಾನ ದುಃಖಿಯಾಗಿ ಬಿಡುವರೋ ಆಗ ಭಗವಂತನನ್ನು ನೆನಪು ಮಾಡಿ ಎಂದು ಒಬ್ಬರು ಇನ್ನೊಬ್ಬರಿಗೆ ಹೇಳುತ್ತಾರೆ. ಎಲ್ಲಾ ಆತ್ಮಗಳು ಒಬ್ಬರು ಇನ್ನೊಬ್ಬರಿಗೆ ಹೇಳುತ್ತಾರೆ. ಹೇಳುವುದು ಆತ್ಮವಲ್ಲವೆ? ಪರಮಾತ್ಮನು ಹೇಳುತ್ತಾರೆಂದಲ್ಲ. ತಂದೆಯನ್ನು ನೆನಪು ಮಾಡಿ ಎಂದು ಆತ್ಮವು ಆತ್ಮಕ್ಕೇ ಹೇಳುತ್ತದೆ. ಇದೊಂದು ಸಾಮಾನ್ಯ ಪದ್ಧತಿಯಾಗಿದೆ. ಸಾಯುವ ಸಮಯದಲ್ಲಿ ಈಶ್ವರನನ್ನು ನೆನಪು ಮಾಡುತ್ತಾರೆ, ಈಶ್ವರನ ಭಯವಿರುತ್ತದೆ. ಒಳ್ಳೆಯ ಅಥವಾ ಕೆಟ್ಟ ಕರ್ಮಗಳ ಫಲವನ್ನು ಈಶ್ವರನೇ ಕೊಡುತ್ತಾರೆ, ಕೆಟ್ಟ ಕರ್ಮವನ್ನು ಮಾಡಿದರೆ ಈಶ್ವರನು ಧರ್ಮರಾಜನ ಮೂಲಕ ಬಹಳ ಶಿಕ್ಷೆಯನ್ನು ಕೊಡಿಸುತ್ತಾರೆಂದು ತಿಳಿಯುತ್ತಾರೆ ಆದ್ದರಿಂದ ಭಯವಿರುತ್ತದೆ. ಕರ್ಮ ಭೋಗವನ್ನಂತು ಅವಶ್ಯವಾಗಿ ಭೋಗಿಸಬೇಕಾಗುವುದಲ್ಲವೆ. ನೀವು ಮಕ್ಕಳು ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ತಿಳಿದಿದ್ದೀರಿ. ನಿಮಗೆ ತಿಳಿದಿದೆ - ಈ ಕರ್ಮವು ಅಕರ್ಮವಾಯಿತು, ನೆನಪಿನಲ್ಲಿದ್ದು ಯಾರು ಕರ್ಮ ಮಾಡುವರೋ ಅವರು ಚೆನ್ನಾಗಿ ಮಾಡುವರು. ರಾವಣ ರಾಜ್ಯದಲ್ಲಿ ಮನುಷ್ಯರು ಕೆಟ್ಟ ಕರ್ಮವನ್ನೇ ಮಾಡುತ್ತಾರೆ. ರಾಮ ರಾಜ್ಯದಲ್ಲಿ ಕೆಟ್ಟ ಕರ್ಮವೆಂದೂ ಆಗುವುದಿಲ್ಲ. ಈಗ ಶ್ರೀಮತವಂತೂ ಸಿಗುತ್ತಿರುತ್ತದೆ. ಎಲ್ಲಿಂದಲಾದರೂ ನಿಮಂತ್ರಣ ಸಿಕ್ಕಿದರೆ ಇದನ್ನು ಮಾಡಬೇಕೇ ಅಥವಾ ಮಾಡಬಾರದೇ ಎಂದು ಪ್ರತಿಯೊಂದು ಮಾತಿನಲ್ಲಿ ಕೇಳುತ್ತಾರೆ. ತಿಳಿದುಕೊಳ್ಳಿ, ಯಾರಾದರೂ ಪೋಲಿಸ್ ನೌಕರಿಯನ್ನು ಮಾಡುತ್ತಾರೆಂದರೆ ಅವರಿಗೂ ಸಹ ನೀವು ಪ್ರೀತಿಯಿಂದ ತಿಳಿಸಿ ಕೊಡಿ ಎಂದು ಹೇಳಲಾಗುತ್ತದೆ. ಸತ್ಯವನ್ನು ಹೇಳದಿದ್ದರೆ ನಂತರ ಏಟು ಕೊಡುವುದು. ಪ್ರೀತಿಯಿಂದ ತಿಳಿಸಿದರೆ ಕೈಗೆ ಬರುತ್ತಾರೆ. ಆದರೆ ಆ ಪ್ರೀತಿಯಲ್ಲಿಯೂ ಯೋಗಬಲವು ತುಂಬಿದ್ದಾಗ ಆ ಪ್ರೀತಿಯ ಶಕ್ತಿಯಿಂದ ಯಾರಿಗೆ ತಿಳಿಸಿದರೂ ತಿಳಿದುಕೊಳ್ಳುತ್ತಾರೆ. ಹೇಗೆ ಈಶ್ವರನೇ ತಿಳಿಸುತ್ತಾರೆ ಎನಿಸುತ್ತದೆ. ನೀವು ಈಶ್ವರನ ಮಕ್ಕಳು ಯೋಗಿಗಳಲ್ಲವೆ. ನಿಮ್ಮಲ್ಲಿಯೂ ಈಶ್ವರೀಯ ಶಕ್ತಿಯಿದೆ, ಈಶ್ವರನು ಪ್ರೀತಿಯ ಸಾಗರನಾಗಿದ್ದಾರೆ ಅವರಲ್ಲಿ ಶಕ್ತಿಯಿದೆಯಲ್ಲವೆ. ಎಲ್ಲರಿಗೆ ಆಸ್ತಿಯನ್ನು ಕೊಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಸ್ವರ್ಗದಲ್ಲಿ ಬಹಳ ಪ್ರೀತಿಯಿರುತ್ತದೆ. ನೀವೀಗ ಪ್ರೀತಿಯ ಪೂರ್ಣಆಸ್ತಿಯನ್ನು ಪಡೆಯುತ್ತಿದ್ದೀರಿ. ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ, ನಂಬರ್ವಾರ್ ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಪ್ರಿಯರಾಗಿ ಬಿಡುತ್ತೀರಿ.

ತಂದೆಯು ತಿಳಿಸುತ್ತಾರೆ - ಯಾರಿಗೂ ದುಃಖವನ್ನು ಕೊಡಬಾರದು. ದುಃಖವನ್ನು ಕೊಟ್ಟರೆ ದುಃಖಿಯಾಗಿಯೇ ಸಾಯುವಿರಿ. ತಂದೆಯು ಪ್ರೀತಿಯ ಮಾರ್ಗವನ್ನು ತಿಳಿಸುತ್ತಾರೆ. ಮನಸ್ಸಿನಲ್ಲಿ ಬಂದರೆ ಅದು ಚಹರೆಯಲ್ಲಿಯೂ ಬಂದು ಬಿಡುತ್ತದೆ, ಕರ್ಮೇಂದ್ರಿಯಗಳಿಂದ ಮಾಡಿದರೆ ಅದರಿಂದ ರಿಜಿಸ್ಟರ್ ಹಾಳಾಗುವುದು. ದೇವತೆಗಳ ಚಲನೆ-ವಲನೆಯು ಹಾಳಾಗುತ್ತದೆಯಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ದೇವತೆಗಳ ಪೂಜಾರಿಗಳಿಗೆ ತಿಳಿಸಿಕೊಡಿ. ತಾವು ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರೆಂದು ಅವರು ದೇವತೆಗಳನ್ನು ಮಹಿಮೆ ಮಾಡುತ್ತಾರೆ ಮತ್ತು ತಮ್ಮ ಚಲನೆಯ ಬಗ್ಗೆಯೂ ತಿಳಿಸುತ್ತಾರೆ ಆದ್ದರಿಂದ ಅವರಿಗೆ ತಿಳಿಸಿ, ನೀವೇ ಈ ರೀತಿಯಿದ್ದಿರಿ, ಈಗ ಇಲ್ಲ. ಈಗ ಪುನಃ ಅವಶ್ಯವಾಗಿ ಆಗುವಿರಿ. ನೀವು ಇಂತಹ ದೇವತೆಗಳಾಗಬೇಕೆಂದರೆ ತಮ್ಮ ಚಲನೆಯನ್ನು ಈ ರೀತಿ ಇಟ್ಟುಕೊಂಡಾಗ ನೀವು ಈ ರೀತಿಯಾಗಿ ಬಿಡುವಿರಿ. ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ - ನಾವು ಸಂಪೂರ್ಣ ನಿರ್ವಿಕಾರಿಗಳಾಗಿದ್ದೇವೆಯೇ? ನಮ್ಮಲ್ಲಿ ಯಾವುದೇ ಆಸುರೀ ಗುಣವಂತೂ ಇಲ್ಲವೆ? ಯಾವುದೇ ಮಾತಿನಲ್ಲಿ ಮುನಿಸಿಕೊಳ್ಳುತ್ತಿಲ್ಲವೆ, ಮೂಡಿಯಾಗುತ್ತಿಲ್ಲವೆ? ಅನೇಕ ಬಾರಿ ನೀವು ಪುರುಷಾರ್ಥ ಮಾಡಿದ್ದೀರಿ. ನೀವೇ ಈ ರೀತಿ (ದೇವಿ-ದೇವತೆ) ಯಾಗಬೇಕೆಂದು ತಂದೆಯು ತಿಳಿಸುತ್ತಾರೆ. ನಿಮ್ಮನು ಮಾಡುವಂತಹವರೂ ಈಗ ಸನ್ಮುಖದಲ್ಲಿದ್ದಾರೆ. ತಿಳಿಸುತ್ತಾರೆ - ಮಕ್ಕಳೇ, ಕಲ್ಪ-ಕಲ್ಪವೂ ನಿಮ್ಮನ್ನು ದೇವಿ-ದೇವತೆಗಳನ್ನಾಗಿ ಮಾಡುತ್ತೇನೆ. ಕಲ್ಪದ ಹಿಂದೆ ಯಾರು ಜ್ಞಾನವನ್ನು ಪಡೆದುಕೊಂಡಿದ್ದರೋ ಅವರು ಅವಶ್ಯವಾಗಿ ಬಂದು ತಿಳಿದುಕೊಳ್ಳುತ್ತಾರೆ. ಪುರುಷಾರ್ಥವನ್ನು ಮಾಡಿಸಲಾಗುತ್ತದೆ ಮತ್ತು ನಿಶ್ಚಿಂತರೂ ಆಗಿರುತ್ತಾರೆ. ಡ್ರಾಮಾದ ನಿಗಧಿಯೇ ಹೀಗಿದೆ. ಡ್ರಾಮಾದಲ್ಲಿ ನಿಗಧಿಯಾಗಿದ್ದರೆ ಅವಶ್ಯವಾಗಿ ಮಾಡುತ್ತೇವೆ ಎಂದು ಕೆಲವರು ಹೇಳುತ್ತಾರೆ. ಒಳ್ಳೆಯ ಚಾರ್ಟ್ ಇದ್ದರೆ ಡ್ರಾಮಾ ಮಾಡಿಸುವುದು. ಆಗ ಇವರ ಅದೃಷ್ಟದಲ್ಲಿಲ್ಲವೆಂದು ತಿಳಿಯಲಾಗುತ್ತದೆ. ಮೊದಲೂ ಸಹ ಈ ರೀತಿ ಒಬ್ಬರು ಮುನಿಸಿಕೊಂಡಿದ್ದರು, ಅವರ ಅದೃಷ್ಟದಲ್ಲಿರಲಿಲ್ಲ ಆದ್ದರಿಂದ ಡ್ರಾಮಾದಲ್ಲಿದ್ದರೆ ಅದು ನಮ್ಮಿಂದ ಪುರುಷಾರ್ಥ ಮಾಡಿಸುತ್ತದೆಯೆಂದು ಹೇಳಿದರು ಅಷ್ಟೆ, ಬಿಟ್ಟು ಬಿಟ್ಟರು. ಹೀಗೆ ನಿಮಗೂ ಸಹ ಬಹಳ ಮಂದಿ ಸಿಗುತ್ತಾರೆ. ನಿಮ್ಮ ಗುರಿ-ಧ್ಯೇಯವೂ ನಿಂತಿದೆ. ಬ್ಯಾಡ್ಜ್ ನಿಮ್ಮ ಬಳಿಯಿದೆ. ಹೇಗೆ ತಮ್ಮ ಲೆಕ್ಕವನ್ನು ನೋಡಿಕೊಳ್ಳುತ್ತೀರೋ ಹಾಗೆಯೇ ನಿಮ್ಮ ಬ್ಯಾಡ್ಜ್ನ್ನು ನೋಡಿಕೊಳ್ಳಿ. ತಮ್ಮ ಚಲನೆ-ವಲನೆಯನ್ನೂ ನೋಡಿಕೊಳ್ಳಿ. ಎಂದೂ ಕುದೃಷ್ಟಿಯಾಗಬಾರದು. ಬಾಯಿಂದ ಯಾವುದೇ ಕೆಟ್ಟ ಮಾತುಗಳು ಬರಬಾರದು. ಕೆಟ್ಟದಾಗಿ ಮಾತನಾಡುವವರೇ ಇಲ್ಲವೆಂದರೆ ಕಿವಿಗಳು ಹೇಗೆ ಕೇಳುತ್ತವೆ? ಸತ್ಯಯುಗದಲ್ಲಿ ಎಲ್ಲರೂ ದೈವೀ ಗುಣವಂತರಿರುತ್ತಾರೆ. ಯಾವುದೇ ಕೆಟ್ಟ ಮಾತಿರುವುದಿಲ್ಲ. ಇವರೂ ಸಹ ತಂದೆಯ ಮೂಲಕವೇ ಪ್ರಾಲಬ್ಧವನ್ನು ಪಡೆದಿದ್ದಾರೆ ಅಂದಾಗ ಇದನ್ನು ಎಲ್ಲರಿಗೆ ತಿಳಿಸಿ - ತಂದೆಯನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಇದರಲ್ಲಿ ಯಾವುದೇ ನಷ್ಟದ ಮಾತಿಲ್ಲ. ಆತ್ಮವೇ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ಸನ್ಯಾಸಿಗಳಾಗಿದ್ದರೆ ಮತ್ತೆ ಸನ್ಯಾಸ ಧರ್ಮದಲ್ಲಿಯೇ ಬರುವರು. ವೃಕ್ಷವಂತೂ ವೃದ್ಧಿಯಾಗುತ್ತಾ ಇರುತ್ತದೆಯಲ್ಲವೆ. ಈ ಸಮಯದಲ್ಲಿ ನೀವು ಪರಿವರ್ತನೆಯಾಗುತ್ತಾ ಇದ್ದೀರಿ, ಮನುಷ್ಯರೇ ದೇವತೆಗಳಾಗುತ್ತೀರಿ. ಎಲ್ಲರೂ ಒಟ್ಟಿಗೆ ಬಂದು ಬಿಡುವುದಿಲ್ಲ. ನಂಬರ್ವಾರ್ ಆಗಿ ಬರುವಿರಿ. ನಾಟಕದಲ್ಲಿ ಯಾರಾದರೂ ಅವರ ಸಮಯಕ್ಕೆ ಮೊದಲೇ ಸ್ಟೇಜಿನಲ್ಲಿ ಬಂದು ಬಿಡುವುದಿಲ್ಲ, ಒಳಗೇ ಕುಳಿತ್ತಿರುತ್ತಾರೆ. ಯಾವಾಗ ಸಮಯವು ಬರುವುದೋ ಆಗ ಪಾತ್ರವನ್ನಭಿನಯಿಸಲು ಹೊರಗೆ ಸ್ಟೇಜಿನ ಮೇಲೆ ಬರುತ್ತಾರೆ, ಅದು ಹದ್ದಿನ ನಾಟಕ, ಇದು ಬೇಹದ್ದಿನ ನಾಟಕವಾಗಿದೆ. ಬುದ್ಧಿಯಲ್ಲಿದೆ, ನಾವು ಪಾತ್ರಧಾರಿಗಳು ನಮ್ಮ ಸಮಯದಲ್ಲಿ ಬಂದು ತಮ್ಮ ಪಾತ್ರವನ್ನಭಿನಯಿಸುತ್ತಾರೆ. ಇದು ಬೇಹದ್ದಿನ ವೃಕ್ಷವಾಗಿದೆ, ನಂಬರ್ವಾರ್ ಬರುತ್ತಾ ಇರುತ್ತಾರೆ. ಮೊಟ್ಟ ಮೊದಲಿಗೆ ಒಂದೇ ಧರ್ಮವಿತ್ತು, ಎಲ್ಲಾ ಧರ್ಮದವರಂತೂ ಮೊಟ್ಟ ಮೊದಲಿಗೆ ಬರಲು ಸಾಧ್ಯವಿಲ್ಲ.

ಮೊದಲಿಗೆ ದೇವಿ-ದೇವತಾ ಧರ್ಮದವರೇ ಪಾತ್ರವನ್ನಭಿನಯಿಸಲು ಬರುತ್ತಾರೆ, ಅದೂ ನಂಬರ್ವಾರ್ ಆಗಿ. ವೃಕ್ಷದ ರಹಸ್ಯವನ್ನೂ ತಿಳಿಯಬೇಕಾಗಿದೆ. ತಂದೆಯು ಬಂದು ಇಡೀ ಕಲ್ಪವೃಕ್ಷದ ಜ್ಞಾನವನ್ನು ತಿಳಿಸುತ್ತಾರೆ. ಇದನ್ನು ನಿರಾಕಾರಿ ವೃಕ್ಷದೊಂದಿಗೂ ಹೋಲಿಸಲಾಗಿದೆ. ನಾನು ಮನುಷ್ಯ ಸೃಷ್ಟಿರೂಪಿ ವೃಕ್ಷದ ಬೀಜವಾಗಿದ್ದೇನೆಂದು ಒಬ್ಬ ತಂದೆಯೇ ಹೇಳುತ್ತಾರೆ. ಬೀಜದಲ್ಲಿ ವೃಕ್ಷವು ಸಮಾವೇಶವಾಗಿರುವುದಿಲ್ಲ ಆದರೆ ವೃಕ್ಷದ ಜ್ಞಾನವು ಸಮಾವೇಶವಾಗಿದೆ. ಪ್ರತಿಯೊಬ್ಬರದೂ ತಮ್ಮ-ತಮ್ಮ ಪಾತ್ರವಿದೆ, ಚೈತನ್ಯ ವೃಕ್ಷವಲ್ಲವೆ. ವೃಕ್ಷದ ಎಲೆಗಳೂ ಸಹ ನಂಬರ್ವಾರ್ ಬರುತ್ತದೆ. ಈ ವೃಕ್ಷವನ್ನು ಯಾರೂ ತಿಳಿದುಕೊಂಡಿಲ್ಲ. ಇದರ ಬೀಜವು ಮೇಲಿದೆ ಆದ್ದರಿಂದ ಇದಕ್ಕೆ ಉಲ್ಟಾ ವೃಕ್ಷವೆಂದು ಹೇಳಲಾಗುತ್ತದೆ. ರಚಯಿತ ತಂದೆಯು ಮೇಲಿದ್ದಾರೆ. ನಿಮಗೆ ತಿಳಿದಿದೆ - ನಾವೀಗ ಮನೆಗೆ ಹೋಗಬೇಕಾಗಿದೆ, ಎಲ್ಲಿ ಆತ್ಮಗಳಿರುತ್ತಾರೆ. ನಾವೀಗ ಪವಿತ್ರರಾಗಿ ಹೋಗಬೇಕಾಗಿದೆ. ನಿಮ್ಮ ಮೂಲಕ ಯೋಗಬಲದಿಂದ ಇಡೀ ವಿಶ್ವವು ಪವಿತ್ರವಾಗಿ ಬಿಡುತ್ತದೆ. ನಿಮಗಾಗಿ ಪವಿತ್ರ ಸೃಷ್ಟಿಯೂ ಬೇಕಲ್ಲವೆ. ನೀವು ಪವಿತ್ರರಾಗುತ್ತೀರೆಂದರೆ ಪವಿತ್ರ ಪ್ರಪಂಚವನ್ನು ಸ್ಥಾಪನೆ ಮಾಡಬೇಕಾಗುತ್ತದೆ. ಎಲ್ಲರೂ ಪವಿತ್ರರಾಗಿ ಬಿಡುತ್ತಾರೆ. ನಿಮ್ಮ ಬುದ್ಧಿಯಲ್ಲಿದೆ - ಆತ್ಮದಲ್ಲಿಯೇ ಮನಸ್ಸು-ಬುದ್ಧಿಯಿದೆಯಲ್ಲವೆ. ಆತ್ಮವು ಚೈತನ್ಯವಾಗಿದೆ, ಆತ್ಮವೇ ಜ್ಞಾನವನ್ನು ಧಾರಣೆ ಮಾಡಿಕೊಳ್ಳುತ್ತದೆ ಅಂದಮೇಲೆ ಮಧುರಾತಿ ಮಧುರ ಮಕ್ಕಳಿಗೆ ಈ ರಹಸ್ಯವೆಲ್ಲವೂ ಬುದ್ಧಿಯಲ್ಲಿರಬೇಕು - ಹೇಗೆ ನಾವು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತೇವೆ. 84 ಜನ್ಮಗಳ ನಿಮ್ಮ ಚಕ್ರವು ಪೂರ್ಣವಾದರೆ ಎಲ್ಲರದೂ ಪೂರ್ಣವಾಗುತ್ತದೆ. ಎಲ್ಲರೂ ಪಾವನರಾಗಿ ಬಿಡುತ್ತಾರೆ. ಇದು ಅನಾದಿ ಮಾಡಲ್ಪಟ್ಟ ನಾಟಕವಾಗಿದೆ. ಒಂದು ಘಳಿಗೆಯೂ ನಿಲ್ಲುವುದಿಲ್ಲ. ಕ್ಷಣ-ಪ್ರತಿಕ್ಷಣ ಏನೆಲ್ಲವೂ ಆಗುವುದೋ ಅದು ಮತ್ತೆ ಕಲ್ಪದ ನಂತರವೇ ಆಗುವುದು. ಪ್ರತಿಯೊಂದು ಆತ್ಮನಲ್ಲಿ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ. ಆ ಪಾತ್ರಧಾರಿಗಳು ಹೆಚ್ಚೆಂದರೆ 2-4 ಗಂಟೆಗಳ ಸಮಯ ಪಾತ್ರವನ್ನಭಿನಯಿಸುತ್ತಾರೆ ಆದರೆ ಇಲ್ಲಂತೂ ಆತ್ಮಕ್ಕೆ ಸ್ವಾಭಾವಿಕ ಪಾತ್ರವು ಸಿಕ್ಕಿದೆ ಅಂದಾಗ ಮಕ್ಕಳಿಗೆ ಎಷ್ಟು ಖುಷಿಯಿರಬೇಕು! ಅತೀಂದ್ರಿಯ ಸುಖವು ಈ ಸಂಗಮಯುಗದ್ದೇ ಗಾಯನವಿದೆ. ತಂದೆಯು ಬರುತ್ತಾರೆ 21 ಜನ್ಮಗಳಿಗಾಗಿ ನಾವು ಸದಾ ಸುಖಿಯಾಗುತ್ತೇವೆ. ಖುಷಿಯ ಮಾತಲ್ಲವೆ. ಯಾರು ಚೆನ್ನಾಗಿ ತಿಳಿದುಕೊಳ್ಳುವರು ಮತ್ತು ತಿಳಿಸುವರು ಅವರು ಸರ್ವೀಸಿನಲ್ಲಿ ತೊಡಗಿರುತ್ತಾರೆ. ಕೆಲವು ಮಕ್ಕಳು ಒಂದುವೇಳೆ ತಾನೇ ಕ್ರೋಧಿಯಾಗಿದ್ದರೆ ಅನ್ಯರಲ್ಲಿಯೂ ಪ್ರವೇಶತೆಯಾಗಿ ಬಿಡುತ್ತದೆ. ಎರಡೂ ಕೈಯಿಂದಲೇ ಚಪ್ಪಾಳೆಯಾಗುತ್ತದೆಯಲ್ಲವೆ, ಅಲ್ಲಿ ಈ ರೀತಿಯಾಗುವುದಿಲ್ಲ. ಇಲ್ಲಿ ನಿಮಗೆ ಶಿಕ್ಷಣ ಸಿಗುತ್ತದೆ - ಯಾರಾದರೂ ಕ್ರೋಧ ಮಾಡಿದರೆ ನೀವು ಅವರ ಮೇಲೆ ಹೂಗಳನ್ನು ಹಾಕಿರಿ, ಪ್ರೀತಿಯಿಂದ ತಿಳಿಸಿ - ಈ ಕ್ರೋಧವು ಭೂತವಾಗಿದೆ, ಬಹಳ ನಷ್ಟಮಾಡುತ್ತದೆ ಆದ್ದರಿಂದ ಎಂದೂ ಕ್ರೋಧ ಮಾಡಬಾರದು. ಕಲಿಸಿಕೊಡುವವರಲ್ಲಂತೂ ಕ್ರೋಧವಿರಲೇಬಾರದು. ನಂಬರ್ವಾರ್ ಪುರುಷಾರ್ಥ ಮಾಡುತ್ತಿರುತ್ತಾರೆ. ಕೆಲವರದು ತೀವ್ರ ಪುರುಷಾರ್ಥವಿರುತ್ತದೆ, ಇನ್ನೂ ಕೆಲವರದು ತಣ್ಣಗಾಗಿಬಿ ಡುತ್ತದೆ. ಪುರುಷಾರ್ಥದಲ್ಲಿ ತಣ್ಣಗಾಗುವವರು ತಮ್ಮ ಹೆಸರನ್ನು ಕೆಡಿಸಿಕೊಳ್ಳುತ್ತಾರೆ. ಯಾರಲ್ಲಿ ಕ್ರೋಧವಿದೆಯೋ ಅವರು ಎಲ್ಲಿಗೆ ಹೋಗುವರೋ ಅಲ್ಲಿಂದ ತೆಗೆದು ಬಿಡುತ್ತಾರೆ. ಯಾರೂ ಕೆಟ್ಟ ಚಲನೆಯವರಿರಲು ಸಾಧ್ಯವಿಲ್ಲ. ಪರೀಕ್ಷೆಯು ಪೂರ್ಣವಾದಾಗ ಎಲ್ಲರಿಗೆ ತಿಳಿಯುವುದು. ಯಾರ್ಯಾರು ಏನಾಗುವರು ಎಂಬುದೆಲ್ಲವೂ ಸಾಕ್ಷಾತ್ಕಾರವಾಗುವುದು. ಯಾರು ಎಂತಹ ಕೆಲಸ ಮಾಡುವರೋ ಅವರಿಗೆ ಅಂತಹ ಮಹಿಮೆಯಾಗುತ್ತದೆ.

ನೀವು ಮಕ್ಕಳು ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ನೀವೆಲ್ಲರೂ ಅಂತರ್ಯಾಮಿಯಾಗಿದ್ದೀರಿ. ಆತ್ಮಕ್ಕೆ ಒಳಗೆ ತಿಳಿದಿದೆ - ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ? ಇಡೀ ಸೃಷ್ಟಿಯ ಮನುಷ್ಯರ ಚಲನ-ವಲನೆಯ ಎಲ್ಲಾ ಧರ್ಮಗಳ ಜ್ಞಾನವು ನಿಮಗಿದೆ, ಅದಕ್ಕೇ ಅಂತರ್ಯಾಮಿಯೆಂದು ಹೇಳಲಾಗುವುದು. ಆತ್ಮಕ್ಕೆ ಎಲ್ಲವೂ ಅರ್ಥವಾಯಿತು. ಭಗವಂತನು ಕಣಕಣದಲ್ಲಿಯೂ ವಾಸಿಸುವರು ಎಂದಲ್ಲ. ಅವರಿಗೆ ತಿಳಿದುಕೊಳ್ಳುವ ಅವಶ್ಯಕತೆಯಾದರೂ ಏನಿದೆ? ತಂದೆಯಂತೂ ಈಗಲೂ ತಿಳಿಸುತ್ತಾರೆ - ಯಾರು ಎಂತಹ ಪುರುಷಾರ್ಥವನ್ನು ಮಾಡುವರೋ ಅಂತಹ ಫಲವನ್ನು ಪಡೆಯುತ್ತಾರೆ. ನನಗೆ ಎಲ್ಲರ ಹೃದಯವನ್ನು ಅರಿತುಕೊಳ್ಳುವ ಅವಶ್ಯಕತೆಯೇನಿದೆ? ಏನು ಮಾಡುವರೋ ಅದರ ಶಿಕ್ಷೆಯನ್ನು ತಾವೇ ಪಡೆಯುತ್ತಾರೆ. ಅಂತಹ ನಡವಳಿಕೆಯಲ್ಲಿ ನಡೆದರೆ ಪದಮ ಗತಿಯನ್ನು ಪಡೆಯುವರು, ಪದವಿಯು ಬಹಳ ಕಡಿಮೆಯಾಗುವುದು. ಆ ಶಾಲೆಯಲ್ಲಿಯೂ ಅನುತ್ತೀರ್ಣರಾದರೆ ಮತ್ತೆ ಇನ್ನೊಂದು ವರ್ಷ ಓದುತ್ತಾರೆ ಆದರೆ ಈ ವಿದ್ಯೆಯು ಕಲ್ಪ-ಕಲ್ಪಾಂತರಕ್ಕಾಗಿ ಇದೆ. ಈಗ ಓದದಿದ್ದರೆ ಕಲ್ಪ-ಕಲ್ಪಾಂತರವೂ ಓದುವುದಿಲ್ಲ. ಈಶ್ವರೀಯ ಲಾಟರಿಯನ್ನು ಪೂರ್ಣ ರೂಪದಲ್ಲಿ ತಿಳಿದುಕೊಳ್ಳಬೇಕಲ್ಲವೆ. ಈ ಮಾತುಗಳನ್ನು ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ. ಯಾವಾಗ ಭಾರತವು ಸುಖಧಾಮವಾಗಿರುವುದೋ ಆಗ ಉಳಿದೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ಈಗ ನಮ್ಮ ಸುಖದ ದಿನಗಳು ಬರುತ್ತಿವೆಯೆಂದು ಮಕ್ಕಳಿಗೆ ಖುಷಿಯಾಗಬೇಕು. ದೀಪಾವಳಿಯ ದಿನವು ಸಮೀಪಿಸಿದಂತೆ ಇನ್ನು ಇಷ್ಟು ದಿನಗಳು ಉಳಿದಿವೆ, ನಾವು ಹೊಸ ಬಟ್ಟೆಯನ್ನು ಧರಿಸುತ್ತೇವೆಂದು ಹೇಳುತ್ತಾರಲ್ಲವೆ. ನೀವೂ ಸಹ ಹೇಳುತ್ತೀರಿ - ಸ್ವರ್ಗವು ಬರುತ್ತಿದೆ, ನಾವು ನಮ್ಮ ಶೃಂಗಾರ ಮಾಡಿಕೊಂಡು ಹೋಗಿ ಸ್ವರ್ಗದಲ್ಲಿ ಒಳ್ಳೆಯ ಸುಖವನ್ನು ಪಡೆಯುತ್ತೇವೆ. ಸಾಹುಕಾರರಿಗಂತೂ ತನ್ನ ಶ್ರೀಮಂತಿಕೆಯ ನಶೆಯಿದೆ. ಮನುಷ್ಯರು ಸಂಪೂರ್ಣ ಘೋರ ನಿದ್ರೆಯಲ್ಲಿದ್ದಾರೆ, ಕೊನೆಯಲ್ಲಿ ಇವರು ಸತ್ಯವನ್ನು ಹೇಳುತ್ತಿದ್ದರು, ಆಕಸ್ಮಿಕವಾಗಿ ತಿಳಿಯುವುದು. ಯಾವಾಗ ಸತ್ಯಸಂಗವು ಸಿಗುವುದೋ ಆಗಲೇ ಸತ್ಯವನ್ನು ಅರಿತುಕೊಳ್ಳುವರು. ನೀವೀಗ ಸತ್ಯ ಸಂಗದಲ್ಲಿದ್ದೀರಿ, ತಂದೆಯ ಮೂಲಕ ಸತ್ಯವಂತರಾಗುತ್ತೀರಿ. ಆ ಮನುಷ್ಯರೆಲ್ಲರೂ ಅಸತ್ಯವಂತರ ಮೂಲಕ ಅಸತ್ಯವಂತರೇ ಆಗುತ್ತಾರೆ. ಭಗವಂತನು ಏನು ಹೇಳುತ್ತಾರೆ ಮತ್ತು ಮನುಷ್ಯರು ಏನು ಹೇಳುತ್ತಾರೆ ಎಂಬ ವ್ಯತ್ಯಾಸದ ಪತ್ರಿಕೆಯನ್ನು ಮುದ್ರಿಸಲಾಗುತ್ತಿದೆ. ಅದನ್ನು ಮ್ಯಾಗಜಿನ್ನಲ್ಲಿಯೂ ಹಾಕಬಹುದು. ಕೊನೆಗೆ ವಿಜಯವಂತೂ ನಿಮ್ಮದೇ ಆಗಿದೆ. ಯಾರು ಕಲ್ಪದ ಹಿಂದೆ ಪದವಿಯನ್ನು ಪಡೆದಿದ್ದರೋ ಅವರು ಅವಶ್ಯವಾಗಿ ಪಡೆಯುತ್ತಾರೆ. ಇದು ನಿಶ್ಚಿತವಾಗಿದೆ. ಸತ್ಯಯುಗದಲ್ಲಿ ಅಕಾಲಮೃತ್ಯುವಾಗುವುದಿಲ್ಲ. ಧೀರ್ಘಾಯಸ್ಸಿರುತ್ತದೆ. ಪವಿತ್ರತೆಯಿದ್ದಾಗ ಧೀರ್ಘಾಯಸ್ಸಿತ್ತು. ಪತಿತ-ಪಾವನನು ಪರಮಾತ್ಮ ತಂದೆಯಾಗಿದ್ದಾರೆ ಅಂದಮೇಲೆ ಅವರೇ ಪಾವನರನ್ನಾಗಿ ಮಾಡಿರುವರು. ಕೃಷ್ಣನ ಮಾತು ಶೋಭಿಸುವುದಿಲ್ಲ. ಪುರುಷೋತ್ತಮ ಸಂಗಮಯುಗದಲ್ಲಿ ಕೃಷ್ಣನೆಲ್ಲಿಂದ ಬರುವನು? ಅದೇ ರೂಪವುಳ್ಳ ಮನುಷ್ಯನಂತೂ ಮತ್ತ್ಯಾರೂ ಇರುವುದಿಲ್ಲ. 84 ಜನ್ಮಗಳು, 84 ಮುಖ-ಲಕ್ಷಣಗಳು, 84 ಚಟುವಟಿಕೆಗಳು - ಇದು ಮಾಡಿ-ಮಾಡಲ್ಪಟ್ಟ ಆಟವಾಗಿದೆ. ಅದರಲ್ಲಿ ಅಂತರವಾಗಲು ಸಾಧ್ಯವಿಲ್ಲ. ನಾಟಕವು ಹೇಗೆ ಅದ್ಭುತವಾಗಿ ಮಾಡಲ್ಪಟ್ಟಿದೆ! ಆತ್ಮವು ಚಿಕ್ಕಬಿಂದುವಾಗಿದೆ, ಅದರಲ್ಲಿ ಅನಾದಿ ಪಾತ್ರವು ತುಂಬಲ್ಪಟ್ಟಿದೆ, ಇದಕ್ಕೆ ಸೃಷ್ಟಿಯೆಂದು ಹೇಳುತ್ತಾರೆ. ಮನುಷ್ಯರು ಕೇಳಿ ಆಶ್ಚರ್ಯಚಕಿತರಾಗುತ್ತಾರೆ ಆದರೆ ಮೊದಲು ಈ ಸಂದೇಶವನ್ನು ಕೊಡಬೇಕಾಗಿದೆ - ತಂದೆಯನ್ನು ನೆನಪು ಮಾಡಿ, ಅವರೇ ಪತಿತ-ಪಾವನ, ಸರ್ವರ ಸದ್ಗತಿದಾತನಾಗಿದ್ದಾರೆ. ಸತ್ಯಯುಗದಲ್ಲಿ ದುಃಖದ ಮಾತಿರುವುದಿಲ್ಲ. ಕಲಿಯುಗದಲ್ಲಿ ಎಷ್ಟೊಂದು ದುಃಖವಿದೆ! ಆದರೆ ಈ ಮಾತುಗಳನ್ನು ತಿಳಿದುಕೊಳ್ಳುವವರು ನಂಬರ್ವಾರ್ ಇದ್ದಾರೆ. ತಂದೆಯು ನಿತ್ಯವೂ ತಿಳಿಸುತ್ತಿರುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಶಿವ ತಂದೆಯು ನಮಗೆ ಓದಿಸಲು ಬಂದಿದ್ದಾರೆ ಮತ್ತೆ ಜೊತೆ ಕರೆದುಕೊಂಡು ಹೋಗುತ್ತಾರೆ. ಜೊತೆಯಲ್ಲಿ ಇರುವವರಿಗಿಂತಲೂ ಬಂಧನದಲ್ಲಿರುವವರು ಹೆಚ್ಚು ನೆನಪು ಮಾಡುತ್ತಾರೆ. ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಇದೂ ಸಹ ತಿಳುವಳಿಕೆಯ ಮಾತಲ್ಲವೆ. ಬಂಧನದಲ್ಲಿರುವವರ ತಂದೆಯ ನೆನಪಿನಲ್ಲಿ ಬಹಳ ಕಾತರಿಸುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೆನಪಿನ ಯಾತ್ರೆಯಲ್ಲಿರಿ, ದೈವೀ ಗುಣಗಳನ್ನೂ ಧಾರಣೆ ಮಾಡಿ. ಆಗ ಬಂಧನಗಳು ಕಳೆಯುತ್ತವೆ. ಪಾಪದ ಗಡಿಗೆಯು ಸಮಾಪ್ತಿಯಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಚಲನೆ-ವಲನೆಯನ್ನು ದೇವತೆಗಳ ತರಹ ಮಾಡಿಕೊಳ್ಳಬೇಕಾಗಿದೆ. ಯಾವುದೇ ಕೆಟ್ಟ ಮಾತು ಬಾಯಿಂದ ಬರಬಾರದು. ಈ ಕಣ್ಣುಗಳೆಂದೂ ಕುದೃಷ್ಟಿಯಾಗಬಾರದು.

2. ಕ್ರೋಧದ ಭೂತವು ಬಹಳ ನಷ್ಟ ಮಾಡುತ್ತದೆ. ಎರಡೂ ಕೈಗಳಿಂದಲೇ ಚಪ್ಪಾಳೆಯಾಗುತ್ತದೆ ಆದ್ದರಿಂದ ಯಾರಾದರೂ ಕ್ರೋಧ ಮಾಡಿದರೆ ಅವರಿಂದಲೂ ದೂರ ಸರಿಯಬೇಕು, ಅವರಿಗೆ ಪ್ರೀತಿಯಿಂದ ತಿಳಿಸಬೇಕು.

ವರದಾನ:
ತ್ಯಾಗ,ತಪಸ್ಯಾ ಮತ್ತು ಸೇವಾ ಭಾವದ ವಿಧಿಯ ಮೂಲಕ ಸದಾ ಸಫಲತಾ ಸ್ವರೂಪ ಭವ.

ತ್ಯಾಗ ಮತ್ತು ತಪಸ್ಯೆಯೇ ಸಫಲತೆಗೆ ಆಧಾರವಾಗಿದೆ. ತ್ಯಾಗದ ಭಾವನೆ ಉಳ್ಳವರೇ ಸತ್ಯ ಸೇವಾಧಾರಿಗಳಾಗಲು ಸಾಧ್ಯ. ತ್ಯಾಗದಿಂದಲೇ ಸ್ವಯಂನ ಮತ್ತು ಬೇರೆಯವರ ಭಾಗ್ಯ ರೂಪುಗೊಳ್ಳುತ್ತೆ. ನಂತರ ದೃಢ ಸಂಕಲ್ಪ ಮಾಡುವುದು - ಇದೂ ಸಹಾ ತಪಸ್ಯಾ ಆಗಿದೆ. ಆದ್ದರಿಂದ ತ್ಯಾಗ, ತಪಸ್ಯಾ ಮತ್ತು ಸೇವಾಭಾವದಿಂದ ಅನೇಕ ಪರಿಮಿತ ಭಾವ ಸಮಾಪ್ತಿಯಾಗಿ ಬಿಡುವುದು. ಸಂಗಟನೆ ಶಕ್ತಿಶಾಲಿಯಾಗುವುದು. ಒಬ್ಬರು ಹೇಳಿದನ್ನು ಇನ್ನೊಬ್ಬರು ಮಾಡುವರು, ಎಂದೂ ಸಹಾ ನೀನು, ನಾನು, ನಿನ್ನದು, ನನ್ನದು ಬರಬಾರದು ಆಗ ಸಫಲತಾ ಸ್ವರೂಪ, ನಿರ್ವಿಘ್ನರಾಗಿ ಬಿಡುವಿರಿ.

ಸ್ಲೋಗನ್:
ಸಂಕಲ್ಪದ ಮೂಲಕವೂ ಸಹಾ ಯಾರಿಗೂ ದುಃಖ ಕೊಡಬಾರದು - ಇದೇ ಸಂಪೂರ್ಣ ಅಹಿಂಸೆಯಾಗಿದೆ.

ಅವ್ಯಕ್ತ ಸೂಚನೆ:- ಈಗ ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.

ಯೋಗವನ್ನು ಜ್ವಾಲಾರೂಪ ಮಾಡಿಕೊಳ್ಳಲು ಸೆಕೆಂಡಿನಲ್ಲಿ ಬಿಂದು ಸ್ವರೂಪರಾಗಿ ಮನಸ್ಸು-ಬುದ್ಧಿಯನ್ನು ಏಕಾಗ್ರ ಮಾಡುವಂತಹ ಅಭ್ಯಾಸವನ್ನು ಪದೇ ಪದೇ ಮಾಡಿ. ನಿಲ್ಲು ಎಂದು ಹೇಳಿ ಮತ್ತು ಸೆಕೆಂಡಿನಲ್ಲಿ ವ್ಯರ್ಥ ದೇಹಭಾನದಿಂದ ಮನಸ್ಸು-ಬುದ್ಧಿ ಏಕಾಗ್ರವಾಗಲಿ. ಇಂತಹ ನಿಯಂತ್ರಣ ಶಕ್ತಿಯನ್ನು ಇಡೀ ದಿನ ಉಪಯೋಗಿಸಿ. ಶಕ್ತಿಶಾಲಿಯಾದ ಬ್ರೇಕ್ ಮುಖಾಂತರ ಮನಸ್ಸು- ಬುದ್ಧಿಯನ್ನು ನಿಯಂತ್ರಣಗೋಳಿಸಿ, ಎಲ್ಲಿ ಮನಸ್ಸು-ಬುದ್ಧಿಯನ್ನು ತೊಡಗಿಸಬೇಕು ಅಲ್ಲಿ ಸೆಕೆಂಡಿನಲ್ಲಿ ತೊಡಗಿ ಬಿಡಲಿ.