04.10.26 Avyakt Bapdada
Kannada
Murli 31.12.2011 Om Shanti Madhuban
“ಹೊಸ ವರ್ಷದಲ್ಲಿ ತೀವ್ರ
ಪುರುಷಾರ್ಥಿ ಭವದ ವರದಾನದ ಮೂಲಕ ತಮ್ಮ ಚಹರೆಯಿಂದ ಫರಿಶ್ತಾ ರೂಪವನ್ನು ತೋರಿಸಿ, ಲೈಟ್ಮೈಟ್
ಸ್ವರೂಪ ಜ್ವಾಲಾಮುಖಿ ಯೋಗದಿಂದ ವ್ಯರ್ಥವನ್ನು ಭಸ್ಮ ಮಾಡಿ, ದುಃಖಿ-ಅಶಾಂತ ಆತ್ಮರಿಗೆ ಶಕ್ತಿಗಳ
ದಾನ ಕೊಡಿ”
ಇಂದು ಬ್ರಾಹ್ಮಣ
ಪರಿವಾರದ ರಚಯಿತ ನಾಲ್ಕೂ ಕಡೆಯ ತಮ್ಮ ಪರಿವಾರವನ್ನು ನೋಡುತ್ತಿದ್ದಾರೆ. ಇರುವುದಂತು ಚಿಕ್ಕದಾದ
ಪರಿವಾರ, ಚಿಕ್ಕದಾದ ಸಂಸಾರವಾಗಿದೆ ಆದರೆ ಬಹಳ ಪ್ರಿಯವಾಗಿದೆ ಏಕೆಂದರೆ ಕೋಟಿಯಲ್ಲಿಯೂ
ಕೆಲವರಿದ್ದಾರೆ. ಏಕೆ ಪ್ರಿಯರಾಗಿದ್ದಾರೆ? ಏಕೆಂದರೆ ತಂದೆಯನ್ನು ಗುರುತಿಸಿದ್ದಾರೆ. ತಂದೆಯಿಂದ
ಆಸ್ತಿಯ ಅಧಿಕಾರಿಗಳಾಗಿದ್ದೀರಿ. ಅಂದಮೇಲೆ ಹೇಗೆ ತಂದೆಯು ಪ್ರಿಯವಾಗಿದ್ದಾರೆ ಹಾಗೆಯೇ ಈ ಬ್ರಾಹ್ಮಣ
ಪರಿವಾರವೂ ಸಹ ಪ್ರಿಯವಾಗಿದೆ. ಬಾಪ್ದಾದಾರವರು ಜನ್ಮವಾದ ಕೂಡಲೇ ಪ್ರತಿಯೊಂದು ಮಗುವಿನ ಮಸ್ತಕದಲ್ಲಿ
ಭಾಗ್ಯದ ನಕ್ಷತ್ರವನ್ನು ಪ್ರಕಾಶಿತಗೊಳಿಸಿದರು ಆದ್ದರಿಂದ ಈ ಚಿಕ್ಕದಾದ ಸಂಸಾರ ಅತಿ ಪ್ರಿಯವಾಗಿದೆ.
ತಾವೆಲ್ಲರೂ ಸಹ ತಮ್ಮ ಇಷ್ಟೆಲ್ಲಾ ಸ್ವಮಾನವನ್ನು ತಿಳಿದುಕೊಂಡಿದ್ದೀರಲ್ಲವೇ! ಬಾಪ್ದಾದಾರವರೂ ಸಹ
ಒಂದೊಂದು ಮಗುವನ್ನು ನೋಡಿ ಖುಷಿ ಪಡುತ್ತಿದ್ದಾರೆ ಮತ್ತು ಯಾವ ಗೀತೆಯನ್ನು ಹಾಡುತ್ತಾರೆ? ವಾಹ್
ಮಕ್ಕಳೇ ವಾಹ್!
ಈ ದಿನವಂತು ಎಲ್ಲರೂ ಈ
ಶ್ರೇಷ್ಠ ದಿನದಂದು ತಂದೆಯೊಂದಿಗೆ ಮಿಲನ ಮಾಡಲು ಬಂದಿದ್ದೀರಿ. ಇಂದಿನ ದಿನ ಸಂಗಮದ ದಿನವಾಗಿದೆ.
ವಿದಾಯಿಯೂ ಇದೆ ಮತ್ತು ಬದಾಯಿ (ಶುಭಾಷಯಗಳು) ಸಹ ಇದೆ. ಅದೇ ರೀತಿ ಸಂಗಮದ ಮಹತ್ವಿಕೆಯಿದೆ.
ಎಲ್ಲಿಯಾದರೂ ಸಾಗರ ಮತ್ತು ನದಿಯ ಸಂಗಮವಾಗುವುದು ಅದರ ಮಹತ್ವಿಕೆ ಬಹಳ ಇದೆ ಅಂದಮೇಲೆ ಇಂದಿನದಿನದ
ಮಹತ್ವಿಕೆಯೂ ಸಹ ಬಹಳ ಗಾಯನ ಯೋಗ್ಯವಾಗಿದೆ. ಹಳೆಯ ವರ್ಷದ ಸಮಾಪ್ತಿ ಮತ್ತು ಹೊಸ ವರ್ಷದ
ಆರಂಭವಾಗಬೇಕಾಗಿದೆ. ಇಂದು ಎಲ್ಲರ ಹೃದಯದಲ್ಲಿ ಮುಂದೆ ಬರುವ ವರ್ಷಕ್ಕಾಗಿ ಎಷ್ಟು ಉಮ್ಮಂಗವಿದೆ!
ಪ್ರತಿಯೊಬ್ಬರೂ ತಮ್ಮ-ತಮ್ಮ ಹೃದಯದಲ್ಲಿ ಯೋಜನೆ (ಪ್ಲಾನ್) ಮಾಡಿದ್ದೀರಾ - ಏನನ್ನು ಬಿಡಬೇಕು ಮತ್ತು
ಏನಾಗಬೇಕು, ಎರಡರ ಪ್ಲಾನ್ ತಯಾರು ಮಾಡಿದ್ದೀರಾ? ತಯಾರು ಮಾಡಿದ್ದೀರಾ? ಬರುವಂತಹ ವರ್ಷಕ್ಕಾಗಿ ಯಾರು
ಸ್ವಯಂನ್ನು ಮುಂದುವರೆಸುವ ತೀವ್ರ ಪುರುಷಾರ್ಥದ ಪ್ಲಾನ್ ತಯಾರು ಮಾಡಿದ್ದೀರಿ ಅವರು ಕೈಯೆತ್ತಿರಿ.
ತಯಾರು ಮಾಡಿದ್ದೀರಾ! ಶುಭಾಶಯಗಳು. ಏಕೆಂದರೆ ಬಾಪ್ದಾದಾರವರು ಪ್ರತಿಯೊಂದು ಮಗುವಿಗಾಗಿ ಏನನ್ನು
ಬಯಸುತ್ತಾರೆ ಎಲ್ಲರೂ ತಿಳಿದಿದ್ದೀರಿ. ಬಾಪ್ದಾದಾರವರು ಪ್ರತಿಯೊಂದು ಮಗುವಿಗಾಗಿ ಇದೇ ಶುಭ
ಭಾವನೆಯನ್ನಿಡುತ್ತಾರೆ - ಪ್ರತಿಯೊಂದು ಮಗು ಬಾಪ್ ಸಮಾನ ಸಂಪನ್ನ ಮತ್ತು ಸಂಪೂರ್ಣರಾಗಲಿ. ಈಗಂತು
ಸಮಯವೂ ಸಹ ಜೊತೆ ಕೊಡುತ್ತಿದೆ ಅಂದಮೇಲೆ ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿ ತಮ್ಮ ಪ್ರತಿ ಹೊಸ
ಯೋಜನೆಯನ್ನು ಮಾಡಿದ್ದೀರಲ್ಲವೆ! ಸ್ವಲ್ಪ ಬಿಡಬೇಕು ಮತ್ತು ಸ್ವಲ್ಪ ಮುಂದುವರೆಯಬೇಕಾಗಿದೆ. ಅಂದಮೇಲೆ
ಏನನ್ನು ಬಿಡಬೇಕು? ಬಾಪ್ದಾದಾರವರು ನೋಡಿದರು - ಹಳೆಯ ಸಂಸಾರ ಮತ್ತು ಹಳೆಯ ಸಂಬಂಧವನ್ನು ಬಿಡುವ
ಪುರುಷಾರ್ಥದಲ್ಲಿ ಎಲ್ಲರಿಗೆ ಗಮನವೂ ಇದೆ. ಆದ್ದರಿಂದ ಬಾಪ್ದಾದಾರವರು ಇದನ್ನೇ ಬಯಸುತ್ತಾರೆ - ಈ
ಹೊಸ ವರ್ಷದಲ್ಲಿ ಪ್ರತಿಯೊಂದು ಮಗು ತನ್ನ ನಿಜ ಸಂಸ್ಕಾರದ ಸಂಸ್ಕಾರ ಮಾಡಿರಿ. ತಾವೆಲ್ಲರೂ ಸಹ ಇದೇ
ಸಂಕಲ್ಪವನ್ನು ಪೂರ್ಣಗೊಳಿಸಲು ಬಯಸುತ್ತೀರಲ್ಲವೆ. ಏಕೆಂದರೆ ಯಾವುದನ್ನು ತಾವು ಇದು ನನ್ನ ನೇಚರ್
ಎಂದು ಹೇಳುತ್ತೀರಿ, ಭಾವವಿಲ್ಲ ಆದರೆ ನೇಚರ್ ಆಗಿದೆ ಎಂದು ಯಾವ ಹಳೆಯ ಸಂಸ್ಕಾರಕ್ಕೆ ಹೇಳುತ್ತೀರಿ
ಆ ನೇಚರ್ ಈ ಜನ್ಮದ ಬ್ರಾಹ್ಮಣರದಲ್ಲ ಆದರೆ ಹಳೆಯದಾಗಿದೆ ಅಂದಮೇಲೆ ಆ ಹಳೆಯ ಸಂಸ್ಕಾರವನ್ನು ಇಂದು
ಪ್ರತಿಯೊಬ್ಬರೂ ತಮ್ಮನ್ನು ತಿಳಿದುಕೊಂಡಿದ್ದೀರಿ ಅಂದಮೇಲೆ ಇಂದು ವರ್ಷದ ವಿದಾಯಿಯ ಜೊತೆ ಜೊತೆಯಲ್ಲಿ
ಆ ಹಳೆಯ ಸಂಸ್ಕಾರವನ್ನು ಬಿಡುವಂತಹ ಧೃಡ ಸಂಕಲ್ಪ ಮಾಡಲು ಸಾಧ್ಯವೇ? ಮಾಡಲು ಸಾಧ್ಯವೇ? ಬಯಸುತ್ತೀರಿ,
ಬಯಸುವುದಿಲ್ಲ ಎನ್ನುವಂತಲ್ಲ ಆದರೆ ಅದು ಪುರುಷಾರ್ಥದಲ್ಲಿ ತೀವ್ರತೆಯನ್ನು ತರುವುದರಲ್ಲಿ ಅದೇ
ಸಂಸ್ಕಾರವು ಪದೇ-ಪದೇ ಭಿನ್ನ-ಭಿನ್ನರೂಪದಿಂದ ವಿಘ್ನವನ್ನು ಹಾಕುತ್ತಿರುತ್ತದೆ ಆದ್ದರಿಂದ
ಬಾಪ್ದಾದಾರವರು ಇದನ್ನೇ ಬಯಸುತ್ತಾರೆ - ವರ್ಷಕ್ಕೆ ವಿದಾಯಿ ಕೊಡುವುದರ ಜೊತೆಗೆ ಇಂದು
ಅದಕ್ಕೂ(ಹಳೆಯ ಸಂಸ್ಕಾರ) ವಿದಾಯಿ ಕೊಡಿ. ಇದಕ್ಕಾಗಿ ತಯಾರಾಗಿದ್ದೀರಾ, ಯಾರು ತಯಾರಿದ್ದೀರಿ ಅವರು
ಕೈಯೆತ್ತಿರಿ. ಇದಕ್ಕಾಗಿ ಏನು ಮಾಡುವಿರಿ? ತಮಗಾಗಿ ಯಾವುದಾದರೂ ಪ್ಲಾನ್ ಯೋಚಿಸಿದ್ದೀರಾ? ಇದಕ್ಕಾಗಿ
ಎಲ್ಲದಕ್ಕಿಂತ ಒಳ್ಳೆಯ ಮಾತಾಗಿದೆ – ಧೃಡ ಸಂಕಲ್ಪ. ಆಗಬೇಕು ಎಂಬ ಸಂಕಲ್ಪವಿದೆ ಆದರೆ ಸಂಕಲ್ಪದಲ್ಲಿ
ತೀವ್ರತೆಯಿರಬೇಕಾಗಿದೆ. ಹೇಗೆ ಬ್ರಾಹ್ಮಣರಾಗುವುದರ ಜೊತೆ ಜೊತೆಗೆ ಈ ಪ್ರತಿಜ್ಞೆ ಮಾಡಿದಿರಿ -
ಯಾವುದೇ ಅಶುದ್ಧ ಭೋಜನವನ್ನು ಸ್ವೀಕರಿಸುವುದಿಲ್ಲ. ಅಂದಮೇಲೆ ಬಾಪ್ದಾದಾರವರು ನೋಡಿದರು - ಇದರಲ್ಲಿ
ಧೃಡ ಸಂಕಲ್ಪದ ಮೂಲಕ ಮೆಜಾರಿಟಿ ಉತ್ತೀರ್ಣರಾಗಿದ್ದಾರೆ. ಹೇಗೆ ತನುವಿಗಾಗಿ ಶುದ್ಧ ಭೋಜನದ ಸಂಕಲ್ಪ
ಮಾಡಿದಿರಿ ಮತ್ತು ಪ್ರಾಕ್ಟಿಕಲ್ ಮಾಡುತ್ತಿದ್ದೀರಿ, ಹಾಗೆಯೇ ಮನಸ್ಸಿಗಾಗಿ ಈ ಧೃಡ ಸಂಕಲ್ಪ
ಮಾಡಬೇಕಾಗಿದೆ - ಎಂದೂ ಯಾರದೇ ಪ್ರತಿ ಸಹ ಯಾವುದೇ ಪರಿಸ್ಥಿತಿಯ ಕಾರಣ ಯಾವುದೇ ವ್ಯರ್ಥ ಸಂಕಲ್ಪ
ಮಾಡದೇ ಪ್ರತಿಯೊಂದು ಆತ್ಮನ ಪ್ರತಿ ಸದಾ ಶುಭ ಭಾವನೆ, ಶುಭ ಕಾಮನೆಯನ್ನು ಇಡಲೇಬೇಕಾಗಿದೆ. ಮನಸ್ಸಿನ
ಭೋಜನವಾಗಿದೆ - ಸಂಕಲ್ಪ ಅಂದಮೇಲೆ ಹೇಗೆ ತನುವಿಗಾಗಿ ಮೆಜಾರಿಟಿ ಮಕ್ಕಳು ಧೃಡ ಸಂಕಲ್ಪ ಮಾಡಿದಿರಿ
ಹಾಗೆಯೇ ಮನಸ್ಸಿಗಾಗಿ ವ್ಯರ್ಥ ಸಂಕಲ್ಪ, ಅಶುದ್ಧ ಭಾವನೆಯನ್ನು ಸಮಾಪ್ತಿ ಮಾಡಲು ಸಾಧ್ಯವಿಲ್ಲವೇ?
ಪ್ರತಿಯೊಂದು ಆತ್ಮನ ಪ್ರತಿ ಹೃದಯದ ಸ್ನೇಹ ಮತ್ತು ಸಹಯೋಗವನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಲು
ಸಾಧ್ಯವಿಲ್ಲವೇ?
ಅಂದಮೇಲೆ ಇಂದು
ಬಾಪ್ದಾದಾರವರು ಪ್ರತಿಯೊಂದು ಮಗುವಿನಿಂದ ಈ ಹಳೆಯ ವರ್ಷದ ಜೊತೆ ಈ ವೃತ್ತಿ ಹಾಗೂ ದೃಷ್ಟಿಯ
ವಿದಾಯಿಯನ್ನು ಬಯಸುತ್ತಾರೆ. ಈ ಧೃಡ ಸಂಕಲ್ಪ ಮಾಡುವಿರಾ? ಮಾಡಲು ಸಾಧ್ಯವಿದೆಯೇ? ಹೇಳಿ, ಮಾತೆಯರು,
ಟೀಚರ್ಸ್, ಎಲ್ಲಾ ಸಹೋದರರೂ ಬಯಸುತ್ತೀರಿ. ಕೈಯೆತ್ತಿರಿ. ನಾಳೆಯಿಂದ ಒಂದುವೇಳೆ ಯಾವುದೇ ಆತ್ಮನ
ಪ್ರತಿ ಯಾವುದೇ ವ್ಯರ್ಥವಿದೆ, ವ್ಯರ್ಥ ಭಾವನೆ ಅಥವಾ ವ್ಯರ್ಥ ಭಾವವಿದೆ ಅದರ ಸಮಾಪ್ತಿ ಸಮಾರೋಹವನ್ನು
ಇಂದು ಆಚರಿಸಲು ಬಯಸುತ್ತೇವೆ. ಹೇಳಿ, ಟೀಚರ್ಸ್ ತಯಾರಾಗಿದ್ದೀರಾ? ಟೀಚರ್ಸ್ ಎರಡೆರಡು
ಕೈಯನ್ನೆತ್ತಿರಿ. ಒಳ್ಳೆಯದು - ಯಾರು ಕೈಯೆತ್ತಲಿಲ್ಲ ಅವರು ಕೈಯನ್ನೆತ್ತಿ. ಯಾರು ಕೈಯೆತ್ತಲಿಲ್ಲ
ಅವರು ಸ್ವಲ್ಪ ಎದ್ದುನಿಲ್ಲಿರಿ. ಒಳ್ಳೆಯದು! ಪುರುಷಾರ್ಥವನ್ನು ಮಾಡುತ್ತೀರಿ ಆದರೆ ಧೃಡ ಸಂಕಲ್ಪ
ಮಾಡುವುದಿಲ್ಲ, ಈ ರೀತಿಯಿದೆಯೇ? ಯಾರು ಎದ್ದು ನಿಂತಿದ್ದೀರಿ ಅವರು ಲಕ್ಷ್ಯ ಮತ್ತು
ಪುರುಷಾರ್ಥವನ್ನು ಮಾಡುತ್ತೀರೆಂದರೆ ಕೈಯನ್ನೆತ್ತಿ. ಏಕೆಂದರೆ ಸಮಯದ ಗಮನವನ್ನಿಡಬೇಕು, ಇದನ್ನು
ಯೋಚಿಸಿ - ಎಲ್ಲರೂ ಈ ಸಂಗಮದ ಸಮಯದಲ್ಲಿ ಭವಿಷ್ಯದ ಬಹಳಸಮಯದ ಸಫಲತೆಯನ್ನು ಪ್ರಾಪ್ತಿ
ಮಾಡಿಕೊಳ್ಳಬೇಕಾಗಿದೆ. 21 ಜನ್ಮಗಳ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ ಅಂದಮೇಲೆ ಒಂದು ಜನ್ಮ
ಎಲ್ಲಿ! ಮತ್ತು 21 ಜನ್ಮಗಳ ಪ್ರಾಲಬ್ಧ ಎಲ್ಲಿ! ಅದಕ್ಕಾಗಿ ಈ ಒಂದು ಜನ್ಮದಲ್ಲಿಯೂ ಸಹ ಬಹಳ
ಸಮಯದಲ್ಲಿ ತಮ್ಮ ಪುರುಷಾರ್ಥವನ್ನು ತೀವ್ರ ಮಾಡಿಕೊಳ್ಳಬೇಕಾಗಿದೆ ಆಗಲೇ ಬಹಳ ಸಮಯದ ಪ್ರಾಪ್ತಿ
ಮಾಡಿಕೊಳ್ಳಬಹುದು, ತಂದೆಯೊಂದಿಗೆ ಪ್ರೀತಿಯಿದೆಯಲ್ಲವೆ ಅಂದಮೇಲೆ ಜೊತೆಯಿರಬೇಕಲ್ಲವೆ! ಸಮೀಪದಲ್ಲಿ
ಇರಬೇಕಾಗಿದೆಯಲ್ಲವೆ! ಬ್ರಹ್ಮಾ ತಂದೆಯ ಜೊತೆಗಾರರಾಗಿ ರಾಜ್ಯಾಧಿಕಾರಿ ಆಗಬೇಕಲ್ಲವೆ! ಅಂದಮೇಲೆ ಈಗಲೂ
ಸಹ ಇಷ್ಟು ಸಮಯದಲ್ಲಿ ತಂದೆಯ ಸಮಾನರಾಗಬೇಕಾಗುತ್ತದೆ. ಬ್ರಹ್ಮಾ ತಂದೆಗೆ ಒಂದೊಂದು ಮಗುವಿನೊಂದಿಗೆ
ಎಷ್ಟು ಪ್ರೀತಿಯಿದೆ ಎನ್ನುವುದನ್ನಂತು ತಿಳಿದುಕೊಂಡಿದ್ದೀರಿ. ಪ್ರತಿಯೊಬ್ಬರೂ ನನ್ನ ಬಾಬಾ ಎಂದು
ಹೇಳುತ್ತಾರೆ. ತಂದೆಗೆ ನನ್ನೊಂದಿಗೆ ಎಷ್ಟು ಪ್ರೀತಿಯಿದೆ ಅಷ್ಟು ಇನ್ನ್ಯಾರೊಂದಿಗೂ ಇಲ್ಲ,
ನನ್ನೊಂದಿಗೇ ಪ್ರೀತಿಯಿದೆ ಅಂದಮೇಲೆ ಈ ಪ್ರೀತಿ, ಬಾಪ್ದಾದಾ ಇಬ್ಬರ ಪ್ರೀತಿಯು ಈ ಜನ್ಮದಲ್ಲಿಯೇ
ಅನುಭವ ಮಾಡುತ್ತೀರಿ ಮತ್ತು ಯಾರೊಂದಿಗೆ ಪ್ರೀತಿಯಿರುತ್ತದೆ ಅವರ ಮಾತನ್ನು ಎಂದೂ ಸಹ
ನಿರ್ಲಕ್ಷಿಸುವುದಿಲ್ಲ. ಅಂದಮೇಲೆ ಬ್ರಹ್ಮಾ ತಂದೆಯೊಂದಿಗೆ ಎಲ್ಲರಿಗೂ ಪ್ರೀತಿಯಿದೆ, ಎಷ್ಟು
ಪ್ರೀತಿಯಿದೆ? ಬಹಳ ಪ್ರೀತಿಯಿದೆ. ಭಲೆ ತೋರಿಸುವುದಕ್ಕೆ ಆಗುವುದಿಲ್ಲ ಆದರೆ ತಂದೆಯು ತಿಳಿದಿದ್ದಾರೆ
- ಎಲ್ಲಾ ಮಕ್ಕಳಿಗೂ ಪ್ರೀತಿಯಿದೆ, ನಂಬರ್ವಾರ್ ಇದೆ ಆದರೆ ಪ್ರೀತಿಯಿದೆ ಇದರಲ್ಲಿ ಬಾಪ್ದಾದಾರವರೂ
ಸಹ ಎಲ್ಲಾ ಮಕ್ಕಳಿಗೆ ಪ್ರೀತಿಯಿದೆ ಎನ್ನುವ ಸರ್ಟಿಫಿಕೇಟ್ ಕೊಡುತ್ತಾರೆ. ಪ್ರೀತಿಯಂತು ಇದೆ ಆದರೆ
ಬಾಬಾ ನೋಡಿದರು - ಕೆಲವೊಮ್ಮೆ ತುಂಟರಾಗಿ ಬಿಡುವರು, ಅಂದಮೇಲೆ ತಂದೆಯು ಆ ಸಮಯದಲ್ಲಿ ಏನು
ಮಾಡುತ್ತಾರೆ? ತಂದೆಯು ನೋಡಿ-ನೋಡಿ ವಿಶೇಷವಾಗಿ ಶಕ್ತಿಯನ್ನು ಕೊಡುತ್ತಿರುತ್ತಾರೆ ಏಕೆಂದರೆ ತಂದೆಯು
ಇದನ್ನೇ ಬಯಸುತ್ತಾರೆ - ಪ್ರತಿಯೊಂದು ಮಗು ರಾಜಾ ಮಗು ಆಗಿದ್ದಾರೆ ಆದರೆ ತಾವೆಲ್ಲರೂ
ಬಾಪ್ದಾದಾರವರಿಗೆ ಈಗಲೂ ಸಹ ರಾಜಾ ಮಕ್ಕಳಾಗಿದ್ದೀರಿ ಮತ್ತು ಭವಿಷ್ಯದಲ್ಲಿಯೂ ಸಹ ರಾಜಾ
ಮಕ್ಕಳಾಗಿರುತ್ತೀರಿ. ಈಗ ಸ್ವಮಾನವಿದೆ, ಸ್ವರಾಜ್ಯವಿದೆ. ಈಗ ಆತ್ಮನ ರಾಜ್ಯವು ಸರ್ವ
ಕರ್ಮೇಂದ್ರಿಯಗಳ ಮೇಲೆ ರಾಜ್ಯಾಡಳಿತವಿದೆ ಅಂದಮೇಲೆ ಸ್ವರಾಜ್ಯಧಾರಿ ಈಗಲೂ ಆಗಿದ್ದೀರಿ ಮತ್ತು
ವಿಶ್ವ ರಾಜ್ಯಧಿಕಾರಿ ಭವಿಷ್ಯದಲ್ಲಿ ಆಗುವಿರಿ ಅಂದಮೇಲೆ ರಾಜಾ ಮಕ್ಕಳಲ್ಲವೇ! ಆಗಿದ್ದೀರೆಂದರೆ
ಕುತ್ತಿಗೆ ಅಲುಗಾಡಿಸಿ.
ಅಂದಮೇಲೆ ಬಾಪ್ದಾದರವರು
ಇಂದು ಅಮೃತವೇಳೆಯಲ್ಲಿ ನಾಲ್ಕೂ ಕಡೆ, ಭಲೆ ವಿದೇಶವಾಗಿರಬಹುದು, ದೇಶವಿರಬಹುದು ನಾಲ್ಕೂ ಕಡೆ
ಪರಿಕ್ರಮಿಸಿದರು ಆಗ ಏನು ನೋಡಿದರು? ಅಮೃತವೇಳೆ ಯೋಗದಲ್ಲಿ ಕುಳಿತುಕೊಳ್ಳುವುದಂತು
ಮೆಜಾರಿಟಿಯಿದ್ದಾರೆ ಆದರೆ ಸ್ನೇಹದಲ್ಲಿ ಕುಳಿತಿರುತ್ತಾರೆ, ಬಾಪ್ದಾದಾರವರೊಂದಿಗೆ ವಾರ್ತಾಲಾಪವನ್ನೂ
ಮಾಡುತ್ತಿರುತ್ತಾರೆ, ಆತ್ಮಿಕ ಸ್ಮೃತಿಯಲ್ಲಿಯೂ ಕುಳಿತಿರುತ್ತಾ, ಬಾಪ್ದಾದಾರವರಿಂದ ಶಕ್ತಿಯನ್ನು
ತೆಗೆದುಕೊಳ್ಳುತ್ತಾರೆ ಆದರೆ ಈಗ ಬಾಪ್ದಾದಾರವರು ಬರುವಂತಹ ಹೊಸ ವರ್ಷದಲ್ಲಿ ನವೀನತೆಯನ್ನು
ಬಯಸುತ್ತಾರೆ ಏಕೆಂದರೆ ಈಗ ಸಮಯವು ದಿನ-ಪ್ರತಿದಿನ ನಾಜೂಕಾಗುತ್ತಲೇ ಬರುವುದು. ಆದ್ದರಿಂದ ಇಂತಹ
ಸಮಯದಲ್ಲಿ ಈಗಿನ ಜ್ವಾಲಾಮುಖಿ ಯೋಗವು ಬೇಕಾಗುವುದು. ಆ ಜ್ವಾಲಾಮುಖಿ ಯೋಗದ ಅವಶ್ಯಕತೆಯು ಈಗ
ಅವಶ್ಯವಾಗಿದೆ. ಜ್ವಾಲಾಮುಖಿ ಯೋಗ ಎಂದರೆ ಲೈಟ್ಮೈಟ್ ಸ್ವರೂಪ ಶಕ್ತಿಶಾಲಿಯಾಗಿರುವುದು ಏಕೆಂದರೆ
ಸಮಯ ಪ್ರಮಾಣ ಈಗ ದುಃಖ, ಅಶಾಂತಿ, ಏರುಪೇರುಗಳು ಹೆಚ್ಚಾಗಲೇಬೇಕಾಗಿದೆ ಆದ್ದರಿಂದ ತಮ್ಮ
ದುಃಖಿ-ಬೇಸರವಾಗಿರುವ ಆತ್ಮರಿಗೆ ಜ್ವಾಲಾಮುಖಿ ಯೋಗದ ಮೂಲಕ ವಿಶೇಷವಾಗಿ ಶಕ್ತಿಗಳನ್ನು ಕೊಡುವ
ಅವಶ್ಯಕತೆಯುಂಟಾಗುತ್ತದೆ. ದುಃಖ-ಅಶಾಂತಕ್ಕೆ ಬದಲಾಗಿ ಸ್ವಲ್ಪ ಶಕ್ತಿ, ಶಾಂತಿಯನ್ನು ತಮ್ಮ ಮನಸ್ಸಾ
ಸೇವೆಯ ಮೂಲಕ ಕೊಡಬೇಕಾಗುವುದು. ಈ ಸಮಯದಲ್ಲಿ ತಾವು ಒಂದುಪರಿವಾರ ಎಂಬ ಯಾವ ಟಾಪಿಕ್ ಇಟ್ಟಿದ್ದೀರಿ
ಅದರಂತೆಯೇ ಯಾವಾಗ ಒಂದು ಪರಿವಾರವಾಗಿದೆ ಅಂದಮೇಲೆ ಅಶಾಂತ ಆತ್ಮರಿಗೆ ಸ್ವಲ್ಪ ಅಂಚಲಿಯನ್ನು
ಕೊಡುವಿರಿ. ಆದ್ದರಿಂದ ಬಾಪ್ದಾದಾರವರು ಮುಂದಿನವರ್ಷ ಯಾವುದು ಈಗ ಬಂದಿತೆಂದರೆ ಬಂದಿತು ಅದಕ್ಕಾಗಿ
ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ - ಈಗ ಜ್ವಾಲಾಮುಖಿ ಯೋಗದ ಅವಶ್ಯಕತೆಯಿದೆ. ಜ್ವಾಲಾಮುಖಿ
ಯೋಗದ ಮೂಲಕವೇ ಯಾವುದೆಲ್ಲಾ ಸಂಸ್ಕಾರಗಳು ಉಳಿದುಕೊಂಡಿದೆ ಅದೂ ಸಹ ಭಸ್ಮವಾಗಬೇಕಾಗಿದೆ.
ಈಗ ತಮ್ಮ ಅಡ್ವಾನ್ಸ್
ಪಾರ್ಟಿಯ ಜೊತೆಗಾರರು ತಮ್ಮೆಲ್ಲರಿಂದ ಇದನ್ನೇ ಬಯಸುತ್ತಾರೆ - ಈಗ ಸಮಯವನ್ನು, ಸಮಾಪ್ತಿಯ ಸಮಯವನ್ನು
ಮುಂದೆತನ್ನಿರಿ. ಈಗ ರಿಟರ್ನ್ ಜರ್ನಿ ಆಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ತಮ್ಮ ದೀದಿ
ನೆನಪು ತರಿಸುತ್ತಿದ್ದರು, ನನಗೆ ಸದಾ ಇದೇ ನೆನಪಿರುತ್ತಿತ್ತು - “ಈಗ ಮನೆಗೆ ಹೋಗಬೇಕಾಗಿದೆ”, ಈಗ
ಮನೆಗೆ ಹೋಗಬೇಕಾಗಿದೆ. ತಮ್ಮ ದಾದಿ ಇದನ್ನೇ ನೆನಪು ತರಿಸುತ್ತಿದ್ದರು - ಹೇಗೆ ನಮಗೆ ನೆನಪಿತ್ತು -
ಈಗ ಸಂಪನ್ನರಾಗಬೇಕು, ಸಂಪೂರ್ಣರಾಗಬೇಕು, ಗುಂಗಿರುತ್ತಿತ್ತು. ಅಂದಮೇಲೆ ಇಂದು ವಿಶೇಷವಾಗಿ
ಅಮೃತವೇಳೆ ವತನದಲ್ಲಿ ಬಾಪ್ದಾದಾರವರೊಂದಿಗೆ ಮಿಲನ ಮಾಡುತ್ತಾ ಹೇಳುತ್ತಿದ್ದರು - ಈಗ ನಮ್ಮಕಡೆಯಿಂದ,
ಯಾರೆಲ್ಲಾ ದಾದಿಯರು ಹೋಗಿದ್ದಾರೆ ಎಲ್ಲರೂ ಸೇರಿ ಹೇಳುತ್ತಿದರು - ಈಗ ಜ್ವಾಲಾಮುಖಿ ಯೋಗದ
ಅವಶ್ಯಕತೆಯು ಬಹಳ ಇದೆ, ಭಲೆ ಅನ್ಯರಿಗೆ ಶಕ್ತಿಯನ್ನು ಕೊಡುವುದಕ್ಕಾಗಿರಬಹುದು, ತಮ್ಮ ಬ್ರಾಹ್ಮಣ
ಪರಿವಾರದವರನ್ನು ಸಂಪನ್ನ ಮಾಡುವುದಕ್ಕಾಗಿ ಇರಬಹುದು. ಈಗ ಸಮಯವನ್ನು ಸಮೀಪ ತರುವುದಕ್ಕೆ ತಾವು
ನಿಮಿತ್ತರಾಗಿದ್ದೀರಿ ಆದ್ದರಿಂದ ಬರುವಂತಹ ವರ್ಷದಲ್ಲಿ ಏನು ಮಾಡುವಿರಿ? ವಿಶೇಷವಾಗಿ ಏನು ಮಾಡುವಿರಿ?
ಪರಸ್ಪರದಲ್ಲಿ ಸ್ನೇಹಿ-ಸಹಯೋಗಿಯಾಗಿ ಪ್ರತಿಯೊಂದು ಸೇವಾಕೇಂದ್ರಗಳು, ಸೇವಾಸ್ಥಾನದಲ್ಲಿ ಜ್ವಾಲಾಮುಖಿ
ಯೋಗದ ವೈಬ್ರೇಷನ್ ಮತ್ತು ಕರ್ಮದಲ್ಲಿ ಪರಸ್ಪರ ಸ್ನೇಹಿ-ಸಹಯೋಗಿಯಾಗಿ ಪ್ರತಿಯೊಬ್ಬರಲ್ಲಿ ತಾವು
ಗಮನವಿಡುತ್ತಾ ಏನೆಲ್ಲಾ ಕೊರತೆಗಳಿವೆ ಅದರಲ್ಲಿ ಸಹಯೋಗ ಕೊಡಿ. ಮನಸ್ಸಾ ಮೂಲಕ ಅನ್ಯ ಆತ್ಮರ ಸೇವೆ
ಮಾಡಿ ಮತ್ತು ತಮ್ಮ ಸಹಯೋಗದ ಮೂಲಕ ಬ್ರಾಹ್ಮಣ ಜೊತೆಗಾರರ ಸೇವೆಯನ್ನು ವಿಶೇಷವಾಗಿ ಮಾಡಿ, ಆಗಲೇ
ನಮ್ಮೆಲ್ಲರ ಹೃದಯದ ಆಸೆಯು ಪೂರ್ಣವಾಗುವುದು.
ಅಂದಮೇಲೆ ಇಂದು ವತನದಲ್ಲಿ
ಅಡ್ವಾನ್ಸ್ ಪಾರ್ಟಿಯವರು ಮುಂದಿನ ವರ್ಷಕ್ಕಾಗಿ ತಮ್ಮೆಲ್ಲರಿಗೆ ನೆನಪುಗಳನ್ನೂ ಕೊಡುತ್ತಿದ್ದರು
ಮತ್ತು ತಮ್ಮ ಹೃದಯದ ಆಸೆಗಳನ್ನು ತಿಳಿಸುತ್ತಿದ್ದರು. ಅಂದಮೇಲೆ ಹೇಳಿ, ಬಾಪ್ದಾದಾರವರು
ಸಂಕಲ್ಪವನ್ನಂತು ತಿಳಿಸಿದ್ದಾರೆ ಆದರೆ ಜೊತೆಯಲ್ಲಿ ತಮ್ಮ ದಾದಿಯರೂ ಸಹ ಮುಂದಿನ ವರ್ಷಕ್ಕಾಗಿ ಶುಭ
ಭಾವನೆಯನ್ನೂ ತಿಳಿಸಿದ್ದಾರಲ್ಲವೆ! ಬಾಪ್ದಾದಾರವರಂತು ಎಲ್ಲಾ ಮಕ್ಕಳಿಗೆ ಭಲೆ ಯಾರು
ಬಲಹೀನರಾಗಿರಬಹುದು ಅಥವಾ ತೀವ್ರ ಪುರುಷಾರ್ಥಿಯಾಗಿದ್ದಾರೆ ಎಲ್ಲರಿಗೂ ಮೂರು ಶುಭಾಷಯಗಳನ್ನು
ಕೊಡುತ್ತಿದ್ದೇವೆ - ಒಂದು ನವ ಜೀವನದ ಶುಭಾಷಯಗಳು, ಇನ್ನೊಂದು ನವ ವರ್ಷದ ಶುಭಾಷಯಗಳು ಮತ್ತು
ಮತ್ತೊಂದು ನವ ಪ್ರಪಂಚದಲ್ಲಿ ಜೊತೆಗಾರರಾಗಿ ಹೋಗುವುದಕ್ಕಾಗಿ ಶುಭಾಷಯಗಳು.
ಬಾಪ್ದಾದಾರವರು ಇದನ್ನೂ
ಹೇಳಿದ್ದಾರೆ - ಎಲ್ಲರೂ ತಮ್ಮ ಆಂತರ್ಯದಲ್ಲಿ ತಮಗಾಗಿ ಸಮಯವನ್ನು ನಿಗಧಿ ಪಡಿಸಿ - ಎಲ್ಲಿಯವರೆಗೆ
ತಮ್ಮನ್ನು ಬಾಪ್ಸಮಾನ್ ಮಾಡಿಕೊಳ್ಳುತ್ತೀರಿ. ತಮ್ಮ ಆಂತರ್ಯದಲ್ಲಿ ತಮಗಾಗಿ ಸಮಯವನ್ನು ನಿಶ್ಚಿತ
ಮಾಡಿಕೊಳ್ಳಿ. ಅದಕ್ಕಾಗಿ ನಿಶ್ಚಿತ ಮಾಡುವುದು ಬರುತ್ತದೆಯಲ್ಲವೆ? ಬಾಪ್ದಾದಾರವರಂತು ಇಂದು
ಪ್ರತಿಯೊಂದು ಮಗುವನ್ನು ನೋಡಿ ಇದೇ ವರದಾನವನ್ನು ಕೊಡುತ್ತಿದ್ದಾರೆ - ಮುಂದಿನ ವರ್ಷದಲ್ಲಿ
ಪ್ರತಿಯೊಂದು ಮಗು ತೀವ್ರ ಪುರುಷಾರ್ಥಿ ಭವ. ಅಮೃತವೇಳೆ ಯಾವಾಗ ನೆನಪಿನಲ್ಲಿ ಕುಳಿತುಕೊಳ್ಳುತ್ತೀರಿ
ಮತ್ತು ಯಾವಾಗ ಏಳುವ ಸಮಯವಾಗುತ್ತದೆ ಆ ಸಮಯದಲ್ಲಿ ಬಾಪ್ದಾದಾರವರ ಈ ವರದಾನವನ್ನು ತಮ್ಮ ಹೃದಯದಲ್ಲಿ
ನೆನಪಿಡುವುದರಲ್ಲಿ ತೀವ್ರ ಪುರುಷಾರ್ಥಿಗಳಾಗಿರಿ. ಹೇಗೆ ಬಾಪ್ದಾದಾರವರು ಎರಡು ಮಾತುಗಳನ್ನು
ಮೊದಲಿನಿಂದಲೇ ಗಮನ ತರಿಸಿದ್ದಾರೆ ಏಕೆಂದರೆ ಸಂಗಮದ ಸಮಯವು ಅಚಾನಕ್ ಸಮಾಪ್ತಿಯಾಗುತ್ತದೆ. ಅಂದಮೇಲೆ
ಒಂದು ಸಮಯ ಮತ್ತು ಇನ್ನೊಂದು ಸಂಕಲ್ಪ, ಇವರೆಡರಲ್ಲಿ ಪ್ರತೀಕ್ಷಣ ಗಮನವನ್ನಿಡಿ. ಪ್ರತಿಯೊಂದು
ಮಕ್ಕಳ ಪ್ರತಿ ಇದೇ ಶುಭ ಭಾವನೆಯು ಬಾಪ್ದಾದಾರವರಿಗಿದೆ - ಪ್ರತಿಯೊಬ್ಬರೂ ಈ ವರ್ಷದಲ್ಲಿ ಏನಾಗುವಿರಿ?
ಏನಾಗುತ್ತೀರಿ? ತಮ್ಮ ಚಹರೆಯನ್ನು ಯಾರೇ ನೋಡಿದರೂ ತಮ್ಮ ಚಹರೆಯಿಂದ ಫರಿಶ್ತಾ ರೂಪ ಕಾಣಿಸಬೇಕಾಗಿದೆ.
ಇಂತಹವನಾಗಿದ್ದೇನೆ, ಇಂತಹವರಾಗಿದ್ದೇವೆ, ಈ ರೀತಿಯಲ್ಲ. ಫರಿಶ್ತಾ ಎಂಬುದು ಅನುಭವದಲ್ಲಿ ಬರಲಿ.
ಇದಕ್ಕಾಗಿ ಜ್ವಾಲಾಮುಖಿ ಯೋಗವಿರಲಿ, ಯಾವುದೇ ವ್ಯರ್ಥವಿರಬಾರದು. ಲೈಟ್ ಮತ್ತು ಮೈಟ್ ಸ್ವರೂಪದ
ಯೋಗದಿಂದ ವ್ಯರ್ಥವನ್ನು ಭಸ್ಮ ಮಾಡಿ. ಯಾರೇ ನೋಡಿದರೂ ಸಮರ್ಥ ಫರಿಶ್ತಾ ಕಂಡುಬರಬೇಕು ಏಕೆಂದರೆ
ತಂದೆಯ ಅಗಲಿ ಮರಳಿ ಸಿಕ್ಕಿರುವ ಮಕ್ಕಳಾಗಿದ್ದೀರಿ. ತಂದೆಯು ತಮ್ಮನ್ನು ಎಲ್ಲೆಲ್ಲಿಂದ ಆಯ್ಕೆಮಾಡಿ
ತನ್ನವರನ್ನಾಗಿ ಮಾಡಿಕೊಂಡ್ದಿದಾರೆ. ಅಂದಮೇಲೆ ಲಕ್ಷ್ಯವನ್ನಿಡಿ - ನಾನು ಬ್ರಾಹ್ಮಣ ಸೊ ಫರಿಶ್ತಾ
ಆಗಿದ್ದೇನೆ. ಅಂದಮೇಲೆ ಅಮೃತವೇಳೆ ತಮ್ಮ ದಿನಚರಿಯಲ್ಲಿ ಇದನ್ನು ನೆನಪಿಡಬೇಕಾಗಿದೆ - ನಾನು
ಬ್ರಾಹ್ಮಣ ಸೋ ಫರಿಶ್ತಾ ಆಗಿದ್ದೇನೆ. ನಡೆಯುತ್ತಾ-ತಿರುಗಾಡುತ್ತಾ ಫರಿಶ್ತಾ ರೂಪ, ಫರಿಶ್ತಾ
ಸ್ವರೂಪವಂತು ಚೆನ್ನಾಗಿರುತ್ತದೆಯಲ್ಲವೆ! ಬ್ರಹ್ಮಾ ತಂದೆಯು ಫರಿಶ್ತಾ ಆದರು, ಫಾಲೋ ಫಾದರ್.
ಈ ವರ್ಷದ ವರದಾನವಾಗಿ
ಏನನ್ನು ಕೊಡಲಾಗಿದೆ - ತೀವ್ರ ಪುರುಷಾರ್ಥಿ, ಸಾಧಾರಣ ಪುರುಷಾರ್ಥವಲ್ಲ, ಸಾಧಾರಣ
ಪುರುಷಾರ್ಥವಿದೆಯೆಂದರೆ ರಾಜ್ಯದ ಜೊತೆಗಾರರಾಗುವುದಿಲ್ಲ ಮತ್ತು ತಂದೆಯು ಇದನ್ನೇ ಬಯಸುತ್ತಾರೆ -
ವಿದ್ಯಾರ್ಥಿಗಳು ಎಷ್ಟಾದರೂ ಇರಲಿ, ಬಾಪ್ದಾದಾರವರ ಮುರುಳಿಯನ್ನು ಅಧ್ಯಯನ ಮಾಡುವವರಾಗಿರುತ್ತಾರೆ,
ಗಾಡ್ಲೀ ಸ್ಟೂಡೆಂಟ್ ಆಗಿದ್ದಾರೆ ಅವರೆಲ್ಲರೂ ಏನಾಗುವಿರಿ? ಫರಿಶ್ತಾ. ಎಲ್ಲಾ ಹೊರೆಗಳು
ಸಮಾಪ್ತಿಯಾಗಿ ಬಿಡುತ್ತದೆ. ಯಾವುದೇ ಸಂಸ್ಕಾರದ ಹೊರೆಯಿರಲಿ ಸಮಾಪ್ತಿಯಾಗಿ ಬಿಡುವುದು. ಅಂದಮೇಲೆ ಈ
ವರ್ಷದ ಹೋಮ್ವರ್ಕ್ ಏನಾಗಿದೆ? ಫರಿಶ್ತಾ ಸ್ವರೂಪದಲ್ಲಿ ಇರುವುದು, ಇದನ್ನೇ ತೀವ್ರ ಪುರುಷಾರ್ಥ ಎಂದು
ಹೇಳಲಾಗುತ್ತದೆ. ಈಗ ಪ್ರತಿಯೊಂದು ಸೇವಾಕೇಂದ್ರದಲ್ಲಿ ಪ್ರತೀ ವಾರದಲ್ಲಿ, ಪ್ರತಿಯೊಬ್ಬ
ವಿದ್ಯಾರ್ಥಿಯ ಫಲಿತಾಂಶವನ್ನು ನೋಡಬೇಕಾಗಿದೆ – ತೀವ್ರ ಪುರುಷಾರ್ಥಿ ಆಗಿದ್ದಾರೆಯೇ? ಒಂದುವೇಳೆ
ಯಾವುದೇ ಮಾತು ಬರಲಿ, ಅದರಲ್ಲಿ ಸಹಯೋಗಿಯಾಗಿ, ಸ್ನೇಹದಿಂದ ಅವರಿಗೆ ಸಾಹಸವನ್ನು ಕೊಡಿ ಮತ್ತು ತಮ್ಮ
ಸೇವಾಕೇಂದ್ರವನ್ನು, ವಿದ್ಯಾರ್ಥಿಗಳನ್ನು ತೀವ್ರ ಪುರುಷಾರ್ಥಿಯನ್ನಾಗಿ ಮಾಡಿರಿ, ಪ್ರತೀ ವಾರದಲ್ಲಿ
ಫಲಿತಾಂಶವನ್ನು ನೋಡಿ ಏಕೆಂದರೆ ಏರುಪೇರಿನ ಸಮಯವಾಗಲೇಬೇಕಾಗಿದೆ.
ಅಂದಮೇಲೆ ಇಂದು ಸಂಗಮದ
ದಿನದಲ್ಲಿ ವಿದಾಯಿ ಮತ್ತು ಬದಾಯಿ(ಶುಭಾಷಯಗಳು)ಯ ದಿನದಲ್ಲಿ ನಾಲ್ಕೂ ಕಡೆಯಲ್ಲಿ ಯಾರು ಎಲ್ಲಿಯಾದರೂ
ಕುಳಿತಿದ್ದೀರಿ, ಬಾಪ್ದಾದಾರವರು ನೋಡುತ್ತಿದ್ದಾರೆ, ಹೇಗೆ ಎಲ್ಲರೂ ವಿಜ್ಞಾನದ ಸಾಧನಗಳ ಮೂಲಕ
ನೋಡುತ್ತಿದ್ದೀರಿ ಮತ್ತು ನೋಡಿ-ನೋಡಿ ಎಷ್ಟು ಖುಷಿಯಾಗುತ್ತಿದ್ದೀರಿ. ಬಾಪ್ದಾದಾರವರು ನಾಲ್ಕೂ
ಕಡೆಯ ಮಕ್ಕಳಿಗೆ ವಿಶೇಷವಾಗಿ ವರದಾನವನ್ನು ಕೊಡುತ್ತಿದ್ದಾರೆ - ಸದಾ ಸಂತುಷ್ಟ ಮಣಿ ಭವ.
ಸಂತುಷ್ಟರಾಗಿರಿ, ಸಂತುಷ್ಟ ಪಡಿಸಿರಿ. ಒಳ್ಳೆಯದು.
ಈಗ ದಾದಿಗಳೂ ಸಹ ಸೇರಿ
ಯಾವುದಾದರೂ ಹೊಸ ಪ್ಲಾನ್ ಮಾಡಿ. ಏನು ಮಾಡುತ್ತೀರಿ? (ದಾದಿ ಜಾನಕಿಯವರು ಹೇಳಿದರು - ಬಾಬಾ ಜನವರಿ
ತಿಂಗಳದು ಬಹಳ ಮಹತ್ವಿಕೆ ಇದೆ. ಜನವರಿ ತಿಂಗಳಿನಲ್ಲಿ ಒಂದುವೇಳೆ ಎಲ್ಲರೂ ಸೇರಿ ಪುರುಷಾರ್ಥ ಮಾಡಲಿ,
ಈ ರೀತಿ ಸೇವೆಗಾಗಿ ಯಾವುದಾದರೂ ಪ್ಲಾನ್ ಮಾಡಿ ಯಾವುದರಿಂದ ಎಲ್ಲರ ಹೃದಯದಿಂದ, ಪ್ರೀತಿಯಿಂದ ನನ್ನ
ಬಾಬಾ ಎಂದು ಬರಲಿ, ಈ ರೀತಿ ನನ್ನ ಭಾವನೆ ಇದೆ.)
ಬಾಪ್ದಾದರವರು ಹೊಸ
ವರ್ಷದಲ್ಲಿ ನವೀನತೆಯನ್ನು ಬಯಸುತ್ತಾರೆ. ಅದೇ ಸಂಸ್ಕಾರವನ್ನು ಬಯಸುವುದಿಲ್ಲ. ಒಬ್ಬೊಬ್ಬ ಮಗು
ತಂದೆಯ ಸಮಾನ ಕಾಣಿಸಬೇಕು. ಬ್ರಹ್ಮಾ ತಂದೆಯನ್ನು ಅನುಕರಣೆ ಮಾಡಿ. ಪರಿಸ್ಥಿತಿಗಳು, ಮಾತುಗಳು ಎಲ್ಲಾ
ತಂದೆಯ ಮುಂದೆ ಬಂದಿತ್ತು ಆದರೆ ಫರಿಸ್ಥಾ ಆಗಿ ಬಿಟ್ಟರು ಅಂದಾಗ ಫರಿಸ್ಥಾ ಆಗಲೇಬೇಕು. ಈ ದೃಢ
ಸಂಕಲ್ಪ ಪ್ರತಿಯೊಬ್ಬರು ತಮ್ಮೊಂದಿಗೆ ತಾವು ಮಾಡಿಕೊಳ್ಳಿ ಏಕೆಂದರೆ ತಮ್ಮೊಂದಿಗೆ ತಾವು
ಮಾಡಿಕೊಂಡಾಗ ಅಟೆನ್ಷನ್ ಇರುತ್ತದೆ. ನಾನು ಆಗಲೇಬೇಕು ಮತ್ತು ತಮ್ಮವರಾಗುವುದರಿಂದ ಸ್ವತಃವಾಗಿ
ವೈಬ್ರೇಷನ್ಸ್ ಹರಡುತ್ತದೆ ಅಂದಾಗ ಈಗ ಯಾವ ಲಕ್ಷ್ಯವನ್ನು ಇಟ್ಟುಕೊಂಡಿದ್ದೀರಿ? ಫರಿಸ್ಥಾ ಆಗಲೇಬೇಕು.
ಹೇಳಿ ಪಕ್ಕಾ ಅಲ್ಲವೇ! ಹಿಂದಿನವರು ಆಗಲೇಬೇಕು. ಈ ದಿನ 12 ಗಂಟೆಗೆ ಎಲ್ಲಾ ಇಲ್ಲಿ ಬಿಟ್ಟು ಹೋಗಬೇಕು.
ಯಾವುದೆಲ್ಲಾ ಕೊರತೆಗಳು ಇದೆ ಅದನ್ನು ಬಿಟ್ಟು ಹೋಗಬೇಕು. ಒಳ್ಳೆಯದು. ಎಲ್ಲರಿಗೆ ಬಹಳ-ಬಹಳ
ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ವರದಾನ:
ಸರ್ವ ಖಾತೆ
ಮತ್ತು ಸಂಬಂಧ ಒಬ್ಬ ತಂದೆಯೊಂದಿಗೆ ಇಡುವಂತಹ ಡಬ್ಬಲ್ ಲೈಟ್ ಫರಿಶ್ತಾ ಭವ.
ಡಬ್ಬಲ್ ಲೈಟ್ ಫರಿಶ್ತೆ
ಆಗ ಬೇಕಾದರೆ ದೇಹದ ಭಾನದಿಂದಲೂ ಸಹ ದೂರ ಇರಬೇಕು ಏಕೆಂದರೆ ದೇಹಭಾನ ಮಣ್ಣಾಗಿದೆ, ಒಂದುವೇಳೆ ಇದರ
ಹೊರೆಯೂ ಸಹ ಇದ್ದಲ್ಲಿ ಭಾರೀತನ ಬರುತ್ತೆ. ಫರಿಷ್ತಾ ಅರ್ಥಾತ್ ತಮ್ಮ ದೇಹದ ಜೊತೆಯೂ ಸಹ ಸಂಬಂಧ
ಇಲ್ಲ. ತಂದೆ ಕೊಟ್ಟಿರುವಂತಹ ಶರೀರವೂ ಸಹ ತಂದೆಗೇ ಕೊಟ್ಟಿರುವೆ. ತನ್ನ ವಸ್ತು ಬೇರೆಯವರಿಗೆ ಕೊಟ್ಟ
ಮೇಲೆ ಅದರ ಮೇಲೆ ನನ್ನ ಸಂಬಂಧ ಸಮಾಪ್ತಿಯಾಯಿತು. ಎಲ್ಲ ಲೆಕ್ಕಾಚಾರ, ಎಲ್ಲಾ
ಕೊಡುವುದು-ತೆಗೆದುಕೊಳ್ಳುವುದು ತಂದೆಯಿಂದ ಬಾಕಿ ಎಲ್ಲ ಹಳೆಯ ಲೆಕ್ಕಾಚಾರ ಮತ್ತು ಸಂಬಂಧ ಸಮಾಪ್ತಿ
- ಹೀಗೆ ಸಂಪೂರ್ಣ ಭಿಕ್ಷುಕರೇ ಡಬ್ಬಲ್ ಲೈಟ್ ಫರಿಶ್ತೆ ಆಗಿದ್ದಾರೆ.
ಸ್ಲೋಗನ್:
ತಮ್ಮ
ವಿಶೇಷತೆಗಳನ್ನು ಪ್ರಯೋಗದಲ್ಲಿ ತನ್ನಿ ಆಗ ಪ್ರತಿ ಹೆಜ್ಜೆಯಲ್ಲಿ ಪ್ರಗತಿಯ ಅನುಭವ ಮಾಡುವಿರಿ.
ಅವ್ಯಕ್ತ ಸೂಚನೆ:-
ಪರೋಪಕಾರದ ಭಾವನೆಯಿಂದ ಸಂಪನ್ನರಾಗಿ ಅಪಕಾರಿ ಮೇಲೆಯೂ ಉಪಕಾರ ಮಾಡಿ.
ಯಾವುದೇ ಆತ್ಮನೊಂದಿಗೆ
ಏನಾದರೂ ತೆಗೆದುಕೊಂಡು ಕೊಡುವ ಇಚ್ಛೆಯಿರಬಾರದು. ಸಂಕಲ್ಪದಲ್ಲಿಯೂ ಇವರು ಮಾಡಿದರೆ ನಾನು ಮಾಡುವೆ,
ಇವರು ಬದಲಾದರೆ ನಾನು ಬದಲಾಗುವೆ, ಅವರು ಸ್ವಲ್ಪ ಬದಲಾಗಲಿ, ನಾನು ಸ್ವಲ್ಪ ಬದಲಾಗುವೆ...
ಭಿಕಾರಿಯನ್ನು ಸಂಪನ್ನ ಮಾಡುವಂತಹ ಅಪಕಾರಿಯ ಮೇಲೂ ಉಪಕಾರ ಮಾಡುವವರೇ ಪರೋಪಕಾರಿ ಭಾವನೆಯಿಂದ
ಸಂಪನ್ನರಾಗಿದ್ದಾರೆ.