04.11.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಮ್ಮ ಬಲಹೀನತೆಗಳನ್ನು ತೆಗೆಯಬೇಕೆಂದರೆ ಸತ್ಯಹೃದಯದಿಂದ ತಂದೆಗೆ ಹೇಳಿ, ತಂದೆಯು ನಿಮಗೆ ಬಲಹೀನತೆಗಳನ್ನು ತೆಗೆಯುವಂತಹ ಉಪಾಯವನ್ನು ತಿಳಿಸುತ್ತಾರೆ”

ಪ್ರಶ್ನೆ:
ತಂದೆಯಿಂದ ಯಾವ ಮಕ್ಕಳಿಗೆ ಶಕ್ತಿಸಿಗುತ್ತದೆ?

ಉತ್ತರ:
ಯಾವ ಮಕ್ಕಳು ಪ್ರಾಮಾಣಿಕತೆಯಿಂದ ಸರ್ಜನ್ನೊಂದಿಗೆ ತಮ್ಮ ಖಾಯಿಲೆಯನ್ನು ಹೇಳಿಬಿಡುತ್ತಾರೆ, ತಂದೆಯು ಅಂತಹವರಿಗೆ ದೃಷ್ಟಿ ಕೊಡುತ್ತಾರೆ. ತಂದೆಗೆ ಅಂತಹ ಮಕ್ಕಳ ಬಗ್ಗೆ ಬಹಳ ದಯೆಬರುತ್ತದೆ. ತಂದೆಯ ಮನಸ್ಸಿನಲ್ಲಿ ಈ ಮಗುವಿನ ಭೂತವು ಹೊರಟುಹೋಗಲಿ ಎಂದು ಬರುತ್ತದೆ. ಅಂತಹವರಿಗೆ ತಂದೆಯು ಶಕ್ತಿಯನ್ನು ಕೊಡುತ್ತಾರೆ.

ಓಂ ಶಾಂತಿ.
ತಂದೆಯು ಮಕ್ಕಳೊಂದಿಗೆ ಕೇಳುತ್ತಿರುತ್ತಾರೆ. ಪ್ರತಿಯೊಂದು ಮಗುವು ತನ್ನನ್ನು ತಾನೇ ಕೇಳಿಕೊಳ್ಳಬೇಕು - ತಂದೆಯಿಂದ ನನಗೆ ಏನು ದೊರೆಕಿದೆ? ಯಾವ-ಯಾವ ವಸ್ತುವಿನ ಕೊರತೆಯಿದೆ? ಪ್ರತಿಯೊಬ್ಬರೂ ತಮ್ಮ ಆಂತರ್ಯವನ್ನು ತಾವೇ ಪರಿಶೀಲನೆ ಮಾಡಿಕೊಳ್ಳಬೇಕು. ನಾರದನ ಉದಾಹರಣೆಯಿದೆಯಲ್ಲವೆ! ನಾರದನಿಗೆ ಲಕ್ಷ್ಮಿಯನ್ನು ವರಿಸಲು ನಿನ್ನ ಮುಖವು ಯೋಗ್ಯವಿದೆಯೇ ಎಂದುಕನ್ನಡಿಯಲ್ಲಿ ನೋಡಿಕೋ ಎಂದು ಹೇಳಲಾಯಿತು. ಆದ್ದರಿಂದ ತಂದೆಯು ನೀವು ಮಕ್ಕಳನ್ನು ಕೇಳುತ್ತಾರೆ - ನೀವು ತಂದೆಯನ್ನು ವರಿಸಲು ಯೋಗ್ಯರಿದ್ದೀರಾ? ಏನೆಂದು ತಿಳಿದಿದ್ದೀರಿ. ಒಂದುವೇಳೆ ಇಲ್ಲದಿದ್ದರೆ ಏನೇನು ಕಡಿಮೆಗಳಿವೆ? ಅದನ್ನು ತೆಗೆಯುವ ಸಲುವಾಗಿ ಮಕ್ಕಳು ಪುರುಷಾರ್ಥ ಮಾಡುತ್ತಾರೆ. ಬಲಹೀನತೆಗಳನ್ನು ತೆಗೆಯುವಂತಹ ಪುರುಷಾರ್ಥ ಮಾಡುತ್ತಾರೆಯೇ ಅಥವಾ ಇಲ್ಲವೆ? ಕೆಲವರು ಪುರುಷಾರ್ಥ ಮಾಡುತ್ತಿರುತ್ತಾರೆ. ಹೊಸ-ಹೊಸಮಕ್ಕಳಿಗೆ ತಿಳಿಸಲಾಗುವುದು - ನನ್ನಲ್ಲಿ ಯಾವುದೇ ಬಲಹೀನತೆಯಿಲ್ಲವೆ? ತಮ್ಮ ಆಂತರ್ಯವನ್ನು ನೋಡಿಕೊಳ್ಳಿ ಏಕೆಂದರೆ ನೀವೆಲ್ಲರೂ ಪರ್ಫೆಕ್ಟ್ ಆಗಬೇಕಲ್ಲವೆ. ತಂದೆಯು ಬರುವುದೇ ಪರ್ಫೆಕ್ಟ್ ಮಾಡಲು ಆದುದರಿಂದ ನಿಮ್ಮ ಗುರಿಯ ಚಿತ್ರವನ್ನು ಮುಂದೆ ಇಡಲಾಗಿದೆ. ತಮ್ಮ ಆಂತರ್ಯವನ್ನು ಕೇಳಿಕೊಳ್ಳಿ - ನಾವು ಇವರಂತೆ ಪರ್ಫೆಕ್ಟ್ ಆಗಿದ್ದೇವೆಯೇ? ಆ ಭೌತಿಕ ವಿದ್ಯೆಯನ್ನು ಓದಿಸುವಂತಹವರು ಮೊದಲಾದವರು ಈ ಸಮಯದಲ್ಲಿ ವಿಕಾರಿಗಳಾಗಿದ್ದಾರೆ. ಇವರು (ಲಕ್ಷ್ಮಿ-ನಾರಾಯಣ) ಸಂಪೂರ್ಣ ನಿರ್ವಿಕಾರಿಗಳ ಸ್ಯಾಂಪಲ್ ಆಗಿದ್ದಾರೆ. ಅರ್ಧಕಲ್ಪ ನೀವು ಇವರ ಮಹಿಮೆಯನ್ನು ಹಾಡಿದ್ದೀರಿ. ಈಗ ತಮ್ಮನ್ನು ತಾವು ಕೇಳಿಕೊಳ್ಳಿ - ನಮ್ಮಲ್ಲಿ ಏನೇನು ಬಲಹೀನತೆಗಳಿವೆ, ಅವನ್ನು ತೆಗೆದು ನಮ್ಮ ಉನ್ನತಿಯನ್ನು ಮಾಡಿಕೊಳ್ಳಬೇಕಾಗಿದೆ ಹಾಗೂ ನಮ್ಮಲ್ಲಿರುವಂಥಹ ಬಲಹೀನತೆಗಳನ್ನೂ ಸಹ ತಂದೆಗೆ ಹೇಳಬೇಕು. ಯಾವುದು ನಮ್ಮಿಂದ ಹೋಗುವುದಿಲ್ಲವೋ ಅದಕ್ಕಾಗಿ ಉಪಾಯವನ್ನು ಕೇಳಬೇಕು. ಖಾಯಿಲೆಯು ಸರ್ಜನ್ನ ಮೂಲಕವೇ ಹೊರಹೋಗುತ್ತದೆ. ಕೆಲವರು ಸಹಾಯಕ ಸರ್ಜನ್ ಸಹ ಬುದ್ಧಿವಂತರಾಗಿದ್ದಾರೆ. ವೈದ್ಯರಿಂದ ಕಾಂಪೌಂಡರ್ ಕಲಿತು ಬುದ್ಧಿವಂತ ವೈದ್ಯರಾಗಿಬಿಡುತ್ತಾರೆ. ಬುದ್ಧಿವಂತಿಕೆಯಿಂದ ನಮ್ಮನ್ನು ನಾವೇ ಪರಿಶೀಲನೆ ಮಾಡಿಕೊಳ್ಳಬೇಕು - ನಮ್ಮಲ್ಲಿ ಏನೇನು ಬಲಹೀನತೆಗಳಿವೆ? ಯಾವ ಬಲಹೀನತೆಗಳ ಕಾರಣ ನಾನು ಪದವಿಯನ್ನು ತೆಗೆದುಕೊಳ್ಳಲಾರೆನೆಂದು ತಿಳಿದುಕೊಳ್ಳುತ್ತೇನೆ. ತಂದೆಯಂತೂ ನೀವು ಈ ರೀತಿಯಾಗುತ್ತೀರೆಂದು ಹೇಳುತ್ತಾರಲ್ಲವೆ. ಬಲಹೀನತೆಗಳನ್ನು ಹೇಳಿದಾಗ ತಂದೆಯು ಸಲಹೆ ಕೊಡುತ್ತಾರೆ. ತುಂಬಾ ರೋಗಗಳಿವೆ, ಬಹಳಷ್ಟು ಮಂದಿಯಲ್ಲಿ ಕಡಿಮೆಗಳಿವೆ. ಕೆಲವರಲ್ಲಿ ಬಹಳ ಕ್ರೋಧವಿದೆ, ಲೋಭವಿದೆ...... ಅಂತಹವರಿಗೆ ಜ್ಞಾನಧಾರಣೆಯಾಗುವುದಿಲ್ಲ. ಹಾಗೂ ಯಾರಿಗೂ ಸಹ ಧಾರಣೆ ಮಾಡಿಸಲು ಆಗುವುದಿಲ್ಲ. ತಂದೆಯು ಪ್ರತಿನಿತ್ಯ ತಿಳಿಸುತ್ತಿರುತ್ತಾರೆ. ವಾಸ್ತವಿಕವಾಗಿ ಅಷ್ಟೊಂದು ತಿಳಿಸಿಕೊಡುವ ಅವಶ್ಯಕತೆಯೂ ಕಂಡುಬರುವುದಿಲ್ಲ. ಮಂತ್ರದ ಅರ್ಥವನ್ನು ತಂದೆಯು ತಿಳಿಸಿಕೊಡುತ್ತಾರೆ. ತಂದೆಯಂತೂ ಒಬ್ಬರೇ ಆಗಿದ್ದಾರೆ. ಬೇಹದ್ದಿನ ತಂದೆಯನ್ನು ನೆನಪು ಮಾಡಬೇಕಾಗಿದೆ ಮತ್ತು ಅವರಿಂದ ಆಸ್ತಿಯನ್ನು ಪಡೆದು ನಾವು ಹಾಗೆಯೇ ಆಗಬೇಕು. ಅನ್ಯಶಾಲೆಗಳಲ್ಲಿ ಪಂಚವಿಕಾರಗಳನ್ನು ಗೆಲ್ಲುವ ಮಾತಿರುವುದಿಲ್ಲ, ಈ ಮಾತುಗಳನ್ನು ಈಗಷ್ಟೆ ತಂದೆಯು ಬಂದು ತಿಳಿಸಿಕೊಡುತ್ತಾರೆ. ನಿಮ್ಮಲ್ಲಿ ಯಾವ ಭೂತಗಳಿವೆ, ದುಃಖ ಕೊಡುತ್ತವೆ, ಅವುಗಳನ್ನು ವರ್ಣಿಸಿದಾಗ ಅವನ್ನು ತೆಗೆಯುವಂತಹ ಉಪಾಯವನ್ನು ತಂದೆಯು ತಿಳಿಸುತ್ತಾರೆ. ಬಾಬಾ, ಇಂತಿಂತಹ ಭೂತಗಳು ನಮಗೆ ತೊಂದರೆ ಕೊಡುತ್ತವೆ. ಭೂತ ಬಿಡಿಸುವಂತಹವರ ಮುಂದೆ ಇದನ್ನು ವರ್ಣಿಸಲಾಗುತ್ತದೆಯಲ್ಲವೆ. ನಿಮ್ಮಲ್ಲಿ ಅಂತಹ ಭೂತವಿಲ್ಲ. ನಿಮಗೆ ಗೊತ್ತಿದೆ, ಈ ಪಂಚವಿಕಾರಗಳೆಂಬ ಭೂತಗಳು ಜನ್ಮ-ಜನ್ಮಾಂತರದ್ದಾಗಿದೆ. ನಮ್ಮಲ್ಲಿ ಯಾವ ಭೂತಗಳಿವೆಯೆಂಬುದನ್ನು ನೋಡಿಕೊಳ್ಳಬೇಕು. ಅವುಗಳನ್ನು ತೆಗೆಯಲು ಸಲಹೆಯನ್ನೂ ತೆಗೆದುಕೊಳ್ಳಬೇಕು. ಕಣ್ಣುಗಳೂ ಸಹ ಬಹಳ ಮೋಸ ಮಾಡುವಂತಹದ್ದಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ನಿಮ್ಮನ್ನು ಆತ್ಮನೆಂದು ತಿಳಿದು ಅನ್ಯರನ್ನೂ ಆತ್ಮನೆಂದು ತಿಳಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಈ ಯುಕ್ತಿಯಿಂದ ನಿಮ್ಮ ರೋಗಗಳು ಬಿಡುಗಡೆಯಾಗುತ್ತವೆ. ನಾವೆಲ್ಲಾ ಆತ್ಮಗಳಂತೂ ಸಹೋದರ-ಸಹೋದರರಾಗಿದ್ದೇವೆ. ಶರೀರವಂತೂ ಇಲ್ಲವೇ ಇಲ್ಲ. ಇದೂ ಸಹ ತಿಳಿದಿದೆ, ನಾವೆಲ್ಲಾ ಆತ್ಮಗಳು ಈಗ ಮನೆಗೆ ಹಿಂತಿರುಗುವವರಾಗಿದ್ದೇವೆ. ನಮ್ಮನ್ನು ನಾವು ನೋಡಿಕೊಳ್ಳಬೇಕು - ನಾವು ಸರ್ವಗುಣ ಸಂಪನ್ನರಾಗಿದ್ದೇವೆಯೇ? ಇಲ್ಲವೆಂದರೆ ನಮ್ಮಲ್ಲಿ ಯಾವ ಅವಗುಣವಿದೆ? ತಂದೆಯು ಆ ಆತ್ಮನನ್ನು ಕುಳಿತು ನೋಡುತ್ತಾರೆ. ಅಂತಹ ಬಲಹೀನತೆಯಿದ್ದಾಗ ಅವರಿಗೆ ಶಕ್ತಿಯನ್ನು ಕೊಡುತ್ತಾರೆ. ಈ ಮಗುವಿನ ವಿಘ್ನವು ಹೊರಟುಹೋಗಲಿ ಎಂದು ತಿಳಿಯುತ್ತಾರೆ. ಒಂದುವೇಳೆ ಸರ್ಜನ್ನಿಂದ ಬಚ್ಚಿಟ್ಟುಕೊಂಡರೆ ಏನು ಮಾಡಲು ಸಾಧ್ಯ? ನೀವು ತಮ್ಮ ಅವಗುಣಗಳನ್ನು ಹೇಳುತ್ತಿದ್ದರೆ ತಂದೆಯೂ ಸಹ ಅದಕ್ಕೆ ಸಲಹೆಯನ್ನು ನೀಡುತ್ತಿರುತ್ತಾರೆ. ಹೇಗೆ ನೀವು ಆತ್ಮಗಳು ತಂದೆಯನ್ನು ನೆನಪು ಮಾಡುತ್ತಿರುತ್ತೀರಿ - ಬಾಬಾ, ತಾವು ಎಷ್ತೊಂದು ಮಧುರರಾಗಿದ್ದೀರಿ! ನಮ್ಮನ್ನು ಹೇಗಿದ್ದವರನ್ನು ಹೇಗೆ ಮಾಡುತ್ತಿದ್ದೀರಿ! ಹೀಗೆ ತಂದೆಯನ್ನು ನೆನಪು ಮಾಡುತ್ತಿದ್ದಾಗ ಭೂತವು ಓಡಿಹೋಗುತ್ತದೆ. ಒಂದಲ್ಲ ಒಂದು ಭೂತವು ಅಗತ್ಯವಾಗಿ ಇದೆ. ತಂದೆ ಸರ್ಜನ್ಗೆ ಹೇಳಿ - ಬಾಬಾ, ಇವುಗಳನ್ನು ತೆಗೆಯುವಂತಹ ಉಪಾಯವನ್ನು ಹೇಳಿ ಇಲ್ಲವೆಂದರೆ ಬಹಳ ನಷ್ಟವಾಗಿಬಿಡುತ್ತದೆ. ಹೇಳುವುದರಿಂದ ತಂದೆಗೂ ಸಹ ದಯೆಬರುತ್ತದೆ - ಈ ಮಾಯೆಯ ಭೂತಗಳು ಇವರಿಗೆ ತೊಂದರೆ ಕೊಡುತ್ತವೆ. ಭೂತಗಳನ್ನು ಓಡಿಸುವಂತಹವರು ತಂದೆಯೊಬ್ಬರೇ ಆಗಿದ್ದಾರೆ, ಅದು ಉಪಾಯದಿಂದ ಓಡಿಸುತ್ತಾರೆ. ಈ ಪಂಚಭೂತಗಳನ್ನು ಓಡಿಸುವಂತೆ ತಿಳಿಸುತ್ತಾರೆ ಆದರೂ ಸಹ ಎಲ್ಲಾ ಭೂತಗಳು ಓಡಿಹೋಗುವುದಿಲ್ಲ ಅಥವಾ ಬಿಟ್ಟುಹೋಗುವುದಿಲ್ಲ. ಕೆಲವರಲ್ಲಿ ಹೆಚ್ಚಿನ ರೂಪದಲ್ಲಿರುತ್ತವೆ, ಕೆಲವರಲ್ಲಿ ಕಡಿಮೆಯಿರುತ್ತದೆ. ಅಂತೂ ಅವಶ್ಯವಾಗಿ ಇರುತ್ತವೆ. ತಂದೆಯೂ ಸಹ ಇವರಲ್ಲಿ ಭೂತವಿದೆಯೆಂದು ನೋಡುತ್ತಾರೆ. ದೃಷ್ಟಿ ಕೊಡುವಂತಹ ಸಮಯದಲ್ಲಿ ಆಂತರ್ಯದಲ್ಲಿ ಸಂಕಲ್ಪವು ನಡೆಯುತ್ತದೆಯಲ್ಲವೆ! ಇವರು ಬಹಳ ಒಳ್ಳೆಯ ಮಗುವಾಗಿದ್ದಾರೆ ಹಾಗೂ ಇವರಲ್ಲಿ ಎಲ್ಲವೂ ಒಳ್ಳೊಳ್ಳೆಯ ಗುಣಗಳಿವೆ ಆದರೆ ಯಾರಿಗೂ ಹೇಳುವುದಿಲ್ಲ, ಯಾರಿಗೂ ತಿಳಿಸಿಕೊಡುವುದಿಲ್ಲ. ಮಾಯೆಯು ಇವರ ಗಂಟಲನ್ನು ಕಟ್ಟಿಸಿರುತ್ತದೆ. ಇವರ ಗಂಟಲು ತೆರೆಯಲ್ಪಟ್ಟಾಗ ಅನ್ಯರ ಸೇವೆಯನ್ನು ಮಾಡಲು ತೊಡಗುತ್ತಾರೆ. ಅನ್ಯರ ಸೇವೆಯಲ್ಲಿ ತಮ್ಮ ಸೇವೆಯನ್ನು ಮಾಡುತ್ತಾರೆ ಶಿವತಂದೆಯ ಸೇವೆಯನ್ನು ಮಾಡುವುದಿಲ್ಲ. ಸ್ವಯಂ ಶಿವತಂದೆಯೇ ಸೇವೆಯನ್ನು ಮಾಡಲು ಬಂದಿದ್ದಾರೆ. ಶಿವತಂದೆಯು ಹೇಳುತ್ತಾರೆ - ಈ ಜನ್ಮ-ಜನ್ಮಾಂತರಗಳ ಭೂತಗಳನ್ನು ಓಡಿಸಬೇಕು.

ತಂದೆಯು ಕುಳಿತು ತಿಳಿಸುತ್ತಾರೆ - ನೀವು ಇದನ್ನೂ ಸಹ ತಿಳಿದುಕೊಂಡಿದ್ದೀರಿ, ವೃಕ್ಷವು ನಿಧಾನ-ನಿಧಾನವಾಗಿ ವೃದ್ಧಿಹೊಂದುತ್ತಿರುತ್ತದೆ, ಎಲೆಗಳು ಬರುತ್ತಿರುತ್ತವೆ. ಮಾಯೆಯು ವಿಘ್ನವನ್ನು ಹಾಕಿಬಿಡುತ್ತದೆ. ಕುಳಿತಕಡೆಯೇ ವಿಚಾರಗಳು ಬದಲಾವಣೆಯಾಗುತ್ತದೆ. ಸನ್ಯಾಸಿಗಳು ಹೇಗೆ ಬೇಸರವಾದಾಗ ಒಂದೇ ಸಾರಿ ಮರೆಯಾಗಿಬಿಡುತ್ತಾರೆ. ಯಾವುದೇ ಕಾರಣವೂ ಇರುವುದಿಲ್ಲ, ಯಾವುದೇ ಮಾತುಕಥೆಯೂ ಇರುವುದಿಲ್ಲ, ಎಲ್ಲದರ ಸಂಬಂಧವೂ ತಂದೆಯೊಂದಿಗೆ ಇರುತ್ತದೆ. ಮಕ್ಕಳಂತೂ ನಂಬರ್ವಾರ್ ಇದ್ದಾರೆ. ಅದನ್ನೂ ಸಹ ತಂದೆಗೆ ಸತ್ಯವನ್ನೇ ತಿಳಿಸಿದರೆ ಆ ಬಲಹೀನತೆಗಳನ್ನು ತೆಗೆದು ಶ್ರೇಷ್ಠಪದವಿಯನ್ನು ಪಡೆಯಬಹುದು. ತಂದೆಯು ತಿಳಿದುಕೊಂಡಿದ್ದಾರೆ - ಕೆಲವರು ತಿಳಿಸದ ಕಾರಣ ತಮಗೆ ಬಹಳ ನಷ್ಟವನ್ನು ಮಾಡಿಕೊಳ್ಳುತ್ತಾರೆ. ಎಷ್ಟೇ ಹೇಳಿದರೂ ಸಹ ಅವರು ಅದೇ ಕೆಲಸವನ್ನು ಮಾಡಲು ತೊಡಗುತ್ತಾರೆ, ಅಂತಹವರನ್ನು ಮಾಯೆಯು ಹಿಡಿದುಕೊಂಡುಬಿಡುತ್ತದೆ. ಮಾಯೆಯು ಮೊಸಳೆಯಾಗಿದೆ, ಎಲ್ಲರನ್ನೂ ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡುಬಿಡುತ್ತದೆ. ಕೆಸರಿನಲ್ಲಿ ಕೊರಳಿನವರೆಗೂ ಸಿಕ್ಕಿಕೊಂಡಿದ್ದಾರೆ. ತಂದೆಯು ಎಷ್ಟೊಂದು ತಿಳಿಸುತ್ತಾರೆ! ಇನ್ನು ಯಾವ ಮಾತುಗಳೂ ಇಲ್ಲ, ಕೇವಲ ಇಷ್ಟನ್ನೇ ಹೇಳಿ - ಇಬ್ಬರು ತಂದೆಯರಿದ್ದಾರೆ, ಒಬ್ಬರು ಲೌಕಿಕತಂದೆ ಅವರು ಸದಾ ಸಿಗುತ್ತಾರೆ. ಅವರು ಸತ್ಯಯುಗದಲ್ಲಿಯೂ ಸಿಗುತ್ತಾರೆ, ಕಲಿಯುಗದಲ್ಲಿಯೂ ಸಿಗುತ್ತಾರೆ. ಸತ್ಯಯುಗದಲ್ಲಿ ಪಾರಲೌಕಿಕ ತಂದೆಯು ಸಿಗುತ್ತಾರೆಂದು ತಿಳಿದುಕೊಳ್ಳಬಾರದು. ಪಾರಲೌಕಿಕ ತಂದೆಯಂತೂ ಒಮ್ಮೆ ಮಾತ್ರವೇ ಬರುತ್ತಾರೆ. ಪಾರಲೌಕಿಕ ತಂದೆಯು ಬಂದು ನರಕವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಅವರಿಗೆ ಭಕ್ತಿಮಾರ್ಗದಲ್ಲಿ ಎಷ್ಟೊಂದು ಪೂಜೆ ಮಾಡುತ್ತಾರೆ, ನೆನಪು ಮಾಡುತ್ತಾರೆ. ಬಹಳ ಶಿವನ ಮಂದಿರಗಳಿವೆ! ಮಕ್ಕಳು ಸೇವೆಯೇ ಇಲ್ಲವೆಂದು ಹೇಳುತ್ತಾರೆ. ಅರೆ! ಎಲ್ಲೆಲ್ಲಿ ಶಿವನ ಮಂದಿರಗಳಿವೆಯೋ ಅಲ್ಲಿಗೆ ಹೋಗಿ ಇವರಿಗೆ ಏಕೆ ಪೂಜೆ ಮಾಡುತ್ತೀರೆಂದು ಕೇಳಬಹುದು. ಇವರಂತೂ ಶರೀರಧಾರಿಯಲ್ಲ, ಇವರು ಯಾರು? ಪರಮಾತ್ಮನೆಂದು ಹೇಳುತ್ತಾರೆ. ಇದರ ವಿನಃ ಬೇರೇನೂ ಹೇಳುವುದಿಲ್ಲ. ಆಗ ಹೇಳಿ, ಈ ಪರಮಾತ್ಮನು ತಂದೆಯಾಗಿದ್ದಾರಲ್ಲವೆ. ಅವರಿಗೆ ಈಶ್ವರನೆಂದೂ ಹೇಳುತ್ತಾರೆ, ಪರಮಾತ್ಮನೆಂದೂ ಹೇಳುತ್ತಾರೆ. ವಿಶೇಷವಾಗಿ ಪರಮಪಿತ ಪರಮಾತ್ಮನೆಂದು ಕರೆಯಲಾಗುವುದು. ಅವರಿಂದ ಏನು ಸಿಗುತ್ತದೆ? ಇದೇನಾದರೂ ತಿಳಿದಿದೆಯೇ? ಭಾರತದಲ್ಲಿ ಶಿವನ ಹೆಸರನ್ನು ಬಹಳಷ್ಟು ತೆಗೆದುಕೊಳ್ಳುತ್ತಾರೆ, ಶಿವಜಯಂತಿಯ ಹಬ್ಬವನ್ನೂ ಆಚರಿಸುತ್ತಾರೆ. ಯಾರಿಗಾದರೂ ತಿಳಿಸಿಕೊಡಲು ಇದು ಬಹಳ ಸಹಜವಾಗಿದೆ. ತಂದೆಯಂತೂ ಭಿನ್ನ-ಭಿನ್ನ ರೀತಿಯಾಗಿ ಬಹಳಷ್ಟು ತಿಳಿಸಿಕೊಡುತ್ತಿರುತ್ತಾರೆ. ನೀವು ಯಾರ ಬಳಿ ಬೇಕಾದರೂ ಹೋಗಬಹುದು ಆದರೆ ಬಹಳ ಶಾಂತಿಯಿಂದ, ನಮ್ರತೆಯಿಂದ ಮಾತನಾಡಬೇಕು. ನಿಮ್ಮ ಹೆಸರು ಭಾರತದಲ್ಲಿ ಬಹಳ ಹರಡಿದೆ. ಸ್ವಲ್ಪ ಹೇಳಿದರೂ ಸಾಕು ತಕ್ಷಣ ಇವರು ಬ್ರಹ್ಮಾಕುಮಾರ-ಕುಮಾರಿಯರೆಂದು ತಿಳಿದುಕೊಳ್ಳುತ್ತಾರೆ. ಹಳ್ಳಿ ಮೊದಲಾದಕಡೆ ಬಹಳ ಮುಗ್ಧರಿರುತ್ತಾರೆ. ಅಂತಹಕಡೆ ಮಂದಿರಗಳಿಗೆ ಹೋಗಿ ಸೇವೆ ಮಾಡುವುದು ಬಹಳ ಸಹಜವಾಗಿರುತ್ತದೆ. ನೀವು ಬಂದರೆ ನಾವು ನಿಮಗೆ ಶಿವತಂದೆಯ ಜೀವನಕಥೆಯನ್ನು ತಿಳಿಸುತ್ತೇವೆ. ನೀವು ಶಿವನ ಪೂಜೆಯನ್ನು ಮಾಡುತ್ತೀರಿ, ಅಂದಾಗ ಅವರಿಂದ ಏನು ಬೇಡುತ್ತೀರಿ? ನಾವಂತೂ ನಿಮಗೆ ಅವರ ಪೂರ್ಣ ಜೀವನಕಥೆಯನ್ನು ತಿಳಿಸುತ್ತೇವೆ. ನಂತರ ಎರಡನೆಯ ದಿನ ಲಕ್ಷ್ಮಿ-ನಾರಾಯಣನ ಮಂದಿರಕ್ಕೆ ಹೋಗಿ. ನಿಮ್ಮೊಳಗೆ ಬಹಳ ಖುಷಿಯಿರುತ್ತದೆ. ಮಕ್ಕಳೂ ಸಹ ಹಳ್ಳಿಯ ಸೇವೆ ಮಾಡೋಣವೆಂದು ಇಷ್ಟಪಡುತ್ತಾರೆ. ಪ್ರತಿಯೊಬ್ಬರಿಗೂ ತಮ್ಮತಮ್ಮದೇ ತಿಳುವಳಿಕೆಯಿದೆ. ಮೊಟ್ಟಮೊದಲು ಶಿವತಂದೆಯ ಮಂದಿರಕ್ಕೆ ಹೋಗಿ ಎಂದು ತಂದೆಯು ತಿಳಿಸುತ್ತಾರೆ. ನಂತರ ಲಕ್ಷ್ಮಿ-ನಾರಾಯಣನ ಮಂದಿರಕ್ಕೆ ಹೋಗಿ ಕೇಳಿ, ಇವರಿಗೆ ಈ ಆಸ್ತಿಯು ಹೇಗೆ ಸಿಕ್ಕಿತು? ಬಂದರೆ ನಾವು ನಿಮಗೆ ಈ ದೇವಿ-ದೇವತೆಗಳ 84 ಜನ್ಮಗಳ ಕಥೆಯನ್ನು ತಿಳಿಸುತ್ತೇವೆ. ಹಳ್ಳಿಯವರನ್ನು ಎಚ್ಚರಿಸಬೇಕು. ನೀವು ಹೋಗಿ ಪ್ರೀತಿಯಿಂದ ಈ ರೀತಿ ತಿಳಿಸಿಕೊಡಿ. ನೀವು ಆತ್ಮಗಳಾಗಿದ್ದೀರಿ. ಆತ್ಮವೇ ಮಾತನಾಡುತ್ತದೆ, ಈ ಶರೀರವಂತೂ ನಾಶವಾಗಿಬಿಡುತ್ತದೆ. ಈಗ ನಾವಾತ್ಮಗಳು ಪಾವನರಾಗಿ ತಂದೆಯ ಬಳಿ ಹೋಗಬೇಕಾಗಿದೆ ಅದಕ್ಕಾಗಿ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ. ಈ ರೀತಿ ಹೇಳುವುದರಿಂದ ಅವರಿಗೆ ಆಕರ್ಷಣೆಯಾಗುತ್ತದೆ. ನೀವು ಎಷ್ಟು ದೇಹೀ-ಅಭಿಮಾನಿಯಾಗಿರುತ್ತೀರಿ ಅಷ್ಟೂ ಆಕರ್ಷಣೆಯಿರುತ್ತದೆ. ಈಗಿನ್ನೂ ಈ ದೇಹ ಮೊದಲಾದುವುಗಳಿಂದ, ಹಳೆಯ ಪ್ರಪಂಚದಿಂದ ಸಂಪೂರ್ಣ ವೈರಾಗ್ಯವು ಬಂದಿಲ್ಲ. ಈ ಹಳೆಯ ವಸ್ತ್ರವನ್ನಂತೂ ಬಿಡಬೇಕು. ಇದರೊಂದಿಗೆ ಯಾವ ಮಮತೆಯನ್ನಿಟ್ಟುಕೊಳ್ಳಬೇಕೆಂದು ನೀವು ತಿಳಿದುಕೊಂಡಿದ್ದೀರಿ. ಶರೀರವಿದ್ದರೂ ಶರೀರದ ಮೇಲೆ ಮಮತೆಯಿರಬಾರದಾಗಿದೆ. ಆಂತರ್ಯದಲ್ಲಿ ಸದಾ ಇದೇ ಚಿಂತೆಯಿರಬೇಕು - ಈಗ ನಾವಾತ್ಮಗಳು ಪಾವನರಾಗಿ ನಮ್ಮ ಮನೆಗೆ ಹೋಗೋಣ. ನಂತರ ಈ ರೀತಿ ಮನಸ್ಸಾಗುತ್ತದೆ - ಇಂತಹ ತಂದೆಯನ್ನು ಹೇಗೆ ಬಿಡುವುದು! ಇಂತಹ ತಂದೆಯು ಮತ್ತೆಲ್ಲಿಯೂ ಸಿಗುವುದಿಲ್ಲ. ಈ ರೀತಿಯಾಗಿ ಚಿಂತನೆ ಮಾಡುವುದರಿಂದ ತಂದೆ ಹಾಗೂ ಮನೆಯ ನೆನಪು ಬರುತ್ತದೆ. ಈಗ ನಾವು ಮನೆಗೆ ಹೋಗುತ್ತೇವೆ, 84 ಜನ್ಮಗಳು ಪೂರ್ಣವಾಯಿತು. ಹಗಲಿನಲ್ಲಿ ನಿಮ್ಮ ವ್ಯಾಪಾರ-ವ್ಯವಹಾರವನ್ನು ಮಾಡಿ. ಗೃಹಸ್ಥವ್ಯವಹಾರದಲ್ಲಂತೂ ಇರಲೇಬೇಕು. ಅದರಲ್ಲಿ ಇರುತ್ತಾ ಎಲ್ಲವೂ ನಾಶವಾಗುವುದಾಗಿದೆ, ಈಗ ನಾವು ಮನೆಗೆ ಹಿಂತಿರುಗಬೇಕಾಗಿದೆ ಎಂದು ಬುದ್ಧಿಯಲ್ಲಿಟ್ಟುಕೊಳ್ಳಬೇಕು. ತಂದೆಯು ಹೇಳುತ್ತಾರೆ - ಗೃಹಸ್ಥವ್ಯವಹಾರದಲ್ಲಿ ಅಗತ್ಯವಾಗಿ ಇರಬೇಕು ಇಲ್ಲವೆಂದರೆ ಎಲ್ಲಿಗೆ ಹೋಗುತ್ತೀರಿ? ವ್ಯಾಪಾರವನ್ನು ಮಾಡಿ ಆದರೆ ಇದೆಲ್ಲವೂ ವಿನಾಶವಾಗುವುದಾಗಿದೆ ಎಂದು ಬುದ್ಧಿಯಲ್ಲಿರಬೇಕು. ಮೊದಲು ನಾವು ಸುಖಧಾಮದಲ್ಲಿ ಹೋಗುತ್ತೇವೆ. ಸಮಯ ಸಿಕ್ಕಿದಾಗ ತಮಗೆ ತಾವೇ ಈ ರೀತಿ ಮಾತನಾಡಿಕೊಳ್ಳಬೇಕು. ಬಹಳ ಸಮಯವೂ ಇದೆ 8 ಗಂಟೆಗಳ ಕಾಲ ವ್ಯಾಪಾರ-ವ್ಯವಹಾರವನ್ನೂ ಮಾಡಿ, 8 ಗಂಟೆಗಳಕಾಲ ಆರಾಮವಾಗಿರಿ. ಇನ್ನುಳಿದ 8 ಗಂಟೆಗಳು ತಂದೆಯ ಜೊತೆ ಆತ್ಮಿಕವಾರ್ತಾಲಾಪ ಮಾಡಿ ನಂತರ ಹೋಗಿ ಆತ್ಮಿಕ ಸೇವೆಯನ್ನು ಮಾಡಬೇಕು. ಸಮಯ ಸಿಕ್ಕಿದಾಗಲೆಲ್ಲಾ ಶಿವತಂದೆಯ ಮಂದಿರದಲ್ಲಿ, ಲಕ್ಷ್ಮಿ-ನಾರಾಯಣನ ಮಂದಿರದಲ್ಲಿ ಹೋಗಿ ಸೇವೆ ಮಾಡಬೇಕು. ತುಂಬಾ ಮಂದಿರಗಳು ನಿಮಗೆ ಸಿಗುತ್ತದೆ. ನೀವು ಎಲ್ಲಿಗೇ ಹೋದರೂ ಶಿವನ ಮಂದಿರಗಳಿರುತ್ತವೆ. ನೀವು ಮಕ್ಕಳಿಗಾಗಿ ನೆನಪಿನ ಯಾತ್ರೆಯು ಮುಖ್ಯವಾಗಿದೆ. ನೆನಪಿನಲ್ಲಿದ್ದಾಗ ನಿಮಗೆ ಏನು ಬೇಕೋ ಅದು ಸಿಗುತ್ತದೆ, ಪ್ರಕೃತಿಯು ದಾಸಿಯಾಗುತ್ತದೆ. ಅವರ ಚಹರೆಯು ಆಕರ್ಷಣೆಯಿಂದ ಕೂಡಿರುತ್ತದೆ, ಏನೂ ಸಹ ಬೇಡುವಂತಹ ಅವಶ್ಯಕತೆಯಿರುವುದಿಲ್ಲ. ಸನ್ಯಾಸಿಗಳಲ್ಲಿಯೂ ಸಹ ಕೆಲವರು ಪಕ್ಕಾ ಇರುತ್ತಾರೆ. ನಾವು ಬ್ರಹ್ಮ್ನಲ್ಲಿ ಹೋಗಿ ಲೀನವಾಗುತ್ತೇವೆಂದು ನಿಶ್ಚಯ ಮಾಡಿ ಕುಳಿತುಕೊಳ್ಳುತ್ತಾರೆ. ಈ ನಿಶ್ಚಯದಲ್ಲಿ ಬಹಳ ಪಕ್ಕಾ ಇರುತ್ತಾರೆ. ಅವರಿಗೆ ನಾವು ಈ ಶರೀರವನ್ನು ಬಿಟ್ಟುಹೋಗುತ್ತೇವೆಂದು ಅಭ್ಯಾಸವಿರುತ್ತದೆ, ಆದರೆ ಅವರು ತಪ್ಪುದಾರಿಯಲ್ಲಿದ್ದಾರೆ. ಬ್ರಹ್ಮ್ನಲ್ಲಿ ಲೀನವಾಗಲು ಬಹಳ ಕಷ್ಟಪಡುತ್ತಾರೆ. ಸಾಕ್ಷಾತ್ಕಾರಕ್ಕಾಗಿ ಭಕ್ತಿಯಲ್ಲಿ ಎಷ್ಟೊಂದು ಶ್ರಮಪಡುತ್ತಾರೆ, ಜೀವನವನ್ನೇ ಅರ್ಪಣೆ ಮಾಡುತ್ತಾರೆ. ಆತ್ಮಘಾತವಾಗುವುದಿಲ್ಲ, ಜೀವಘಾತವಾಗುತ್ತದೆ. ಆತ್ಮವಂತೂ ಇದ್ದೇ ಇರುತ್ತದೆ ಆದರೆ ನಂತರ ಹೋಗಿ ಮತ್ತೊಂದು ಜೀವ ಅರ್ಥಾತ್ ಶರೀರವನ್ನು ತೆಗೆದುಕೊಳ್ಳುತ್ತದೆ.

ಈ ರೀತಿ ನೀವು ಮಕ್ಕಳಿಗೆ ಆಸಕ್ತಿಯಿದ್ದಾಗ ತಂದೆಯ ನೆನಪು ಬರುತ್ತದೆ. ಇಲ್ಲಿಯೂ ಸಹ ಬಹಳ ಮಂದಿರಗಳಿವೆ! ನೀವು ನೆನಪಿನಲ್ಲಿದ್ದು ಯಾರಿಗಾದರೂ ಸ್ವಲ್ಪ ತಿಳಿಸಿದರೂ ಅವರಿಗೆ ಯಾವ ವಿಚಾರವೂ ಬರುವುದಿಲ್ಲ ನೆನಪಿನಲ್ಲಿರುವಂತಹವರ ಬಾಣವು ಸಂಪೂರ್ಣವಾಗಿ ನಾಟುತ್ತದೆ. ಹೀಗೆ ನೀವು ಬಹಳ ಸೇವೆಯನ್ನು ಮಾಡಬಹುದು. ನೀವು ಪ್ರಯತ್ನಪಟ್ಟು ನೋಡಿ ಆದರೆ ಮೊದಲು ತಮ್ಮ ಆಂತರ್ಯವನ್ನು ನೋಡಿಕೊಳ್ಳಬೇಕು - ನಮ್ಮಲ್ಲಿ ಯಾವುದೇ ಮಾಯೆಯ ಭೂತವಿಲ್ಲವೆ? ಮಾಯೆಯ ಭೂತವುಳ್ಳಂತಹವರು ಸಫಲತೆಯನ್ನು ಹೊಂದುತ್ತಾರೆಯೇ? ಬಹಳ ಸೇವೆಯಿದೆ, ತಂದೆ (ಬ್ರಹ್ಮಾ) ಯಂತೂ ಸೇವೆ ಮಾಡಲು ಹೋಗಲು ಸಾಧ್ಯವಿಲ್ಲ ಏಕೆಂದರೆ ಶಿವತಂದೆಯು ಜೊತೆಯಲ್ಲಿದ್ದಾರೆ. ತಂದೆಯನ್ನು ನಾವು ಹೇಗೆ ಕೊಳಕಿನಲ್ಲಿ ಕರೆದುಕೊಂಡು ಹೋಗುವುದು! ಯಾರ ಜೊತೆ ಮಾತನಾಡುವುದು! ತಂದೆಯಂತೂ ಮಕ್ಕಳೊಂದಿಗೇ ಮಾತನಾಡಲು ಇಷ್ಟಪಡುತ್ತಾರೆ. ಆದುದರಿಂದ ಮಕ್ಕಳು ಒಳ್ಳೆಯ ಸೇವೆ ಮಾಡಬೇಕಾಗಿದೆ. ಗಾಯನವೂ ಇದೆ - ಸನ್ ಶೋಜ್ ಫಾದರ್. ತಂದೆಯಂತೂ ಮಕ್ಕಳನ್ನು ಬಹಳ ಬುದ್ಧಿವಂತರನ್ನಾಗಿ ಮಾಡಿದ್ದಾರೆ. ಒಳ್ಳೊಳ್ಳೆಯ ಮಕ್ಕಳಿಗೆ ಸೇವೆಯಲ್ಲಿ ಬಹಳ ಆಸಕ್ತಿಯಿದೆ. ಅಂತಹ ಮಕ್ಕಳು ಬಾಬಾ, ನಾವು ಹೋಗಿ ಹಳ್ಳಿಗಳ ಸೇವೆ ಮಾಡುತ್ತೇವೆಂದು ಹೇಳುತ್ತಾರೆ. ತಂದೆಯೂ ಸಹ ಮಾಡಿ ಎಂದು ಹೇಳುತ್ತಾರೆ. ಕೇವಲ ಫೆÇೀಲ್ಡಿಂಗ್ ಚಿತ್ರವು ಜೊತೆಯಲ್ಲಿರಲಿ. ಚಿತ್ರಗಳಿಲ್ಲದೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಹಗಲು-ರಾತ್ರಿ ನಾವು ಜೀವನವನ್ನು ಹೇಗೆ ಮಾಡಬೇಕೆಂಬ ಚಿಂತೆಯಿರುತ್ತದೆ? ಯಾವ ಬಲಹೀನತೆಗಳಿವೆಯೋ ಅದನ್ನು ತೆಗೆದು ಉನ್ನತಿಯನ್ನೂ ಪಡೆಯಬೇಕು. ನಿಮಗೆ ಖುಷಿಯೂ ಆಗುತ್ತದೆ. ಬಾಬಾ, ಇವರು 8-9 ತಿಂಗಳಿನ ಮಗುವಾಗಿದ್ದಾರೆ, ಇಂತಹ ಮಕ್ಕಳು ತಂದೆಗೆ ಬಹಳಷ್ಟು ಪ್ರಿಯರಾಗುತ್ತಾರೆ, ಅತಿಬೇಗನೆ ಸೇವೆಗೆ ಯೋಗ್ಯರಾಗಿಬಿಡುತ್ತಾರೆ. ಪ್ರತಿಯೊಬ್ಬರಿಗೂ ತಮ್ಮ ಗ್ರಾಮದವರನ್ನು ಮೇಲೆತ್ತುವ, ತಮ್ಮ ಸ್ನೇಹಿತನ ಸೇವೆ ಮಾಡುವ ಚಿಂತೆಯಿರುತ್ತದೆ. ಚಾರಿಟಿ ಬಿಗಿನ್ಸ್ ಅಟ್ ಹೋಮ್ ಮನೆಯೇ ಮೊದಲ ಪಾಠಶಾಲೆ(ಮೊದಲು ತಮ್ಮ ಸ್ನೇಹಿತ, ಬಂಧುವರ್ಗದವರ ಸೇವೆ ಮಾಡಬೇಕು). ಸೇವೆಯಲ್ಲಿ ಬಹಳ ಆಸಕ್ತಿಯಿರಬೇಕು, ಸದಾ ಒಂದೇ ಸ್ಥಾನದಲ್ಲಿ ಕುಳಿತುಕೊಳ್ಳಬಾರದು. ಸೇವೆಗಾಗಿ ಸುತ್ತುತ್ತಿರಬೇಕು. ಸಮಯವು ಬಹಳ ಕಡಿಮೆಯಿದೆ. ಎಷ್ಟು ದೊಡ್ಡ-ದೊಡ್ಡ ಮಕ್ಕಳು ತಂದೆಯ ಮಕ್ಕಳಾಗಿಬಿಡುತ್ತಾರೆ. ಇಂತಹ ಆತ್ಮವು ಬಂದು ಪ್ರವೇಶ ಮಾಡುತ್ತಾರೆಂದರೆ ಒಂದಲ್ಲ ಒಂದು ಶಿಕ್ಷಣವು ಅವರ ಬುದ್ಧಿಯಲ್ಲಿ ಕುಳಿತು ಹೆಸರು ಬೆಳಗುವಂತಾಗುತ್ತದೆ. ಇಲ್ಲಂತೂ ಬೇಹದ್ದಿನ ತಂದೆಯು ಕಲ್ಪದ ಹಿಂದಿನಂತೆ ಶಿಕ್ಷಣವನ್ನು ನೀಡುತ್ತಿದ್ದಾರೆ. ನಿರಾಕಾರ ವೃಕ್ಷದಿಂದ ನಂಬರ್ವಾರ್ ಆತ್ಮಗಳು ಬರುತ್ತವೆ. ಶಿವತಂದೆಯದು ಅತಿದೊಡ್ಡ ಮಾಲೆ ಅಥವಾ ವೃಕ್ಷವು ಮಾಡಲ್ಪಟ್ಟಿದೆ. ಈ ಎಲ್ಲಾ ಮಾತುಗಳನ್ನು ನೆನಪು ಮಾಡುವುದರಿಂದ ತಂದೆಯ ನೆನಪು ಬರುತ್ತದೆ, ಬೇಗ ಉನ್ನತಿಯೂ ಆಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಕೊನೆಪಕ್ಷ 8 ಗಂಟೆಗಳು ತಂದೆಯೊಂದಿಗೆ ಆತ್ಮಿಕ ವಾರ್ತಾಲಾಪ ಮಾಡಿ ಬಹಳ ಶಾಂತ ಹಾಗೂ ನಮ್ರತೆಯಿಂದ ಆತ್ಮಿಕ ಸೇವೆ ಮಾಡಬೇಕಾಗಿದೆ. ಸೇವೆಯಲ್ಲಿ ಸಫಲರಾಗಲು ಆಂತರ್ಯದಲ್ಲಿ ಯಾವುದೇ ಭೂತಗಳಿರಬಾರದು.

2. ತಮ್ಮೊಂದಿಗೆ ತಾವೇ ಈ ರೀತಿ ಮಾತನಾಡಿಕೊಳ್ಳಬೇಕು - ನಾವೇನು ನೋಡುತ್ತಿದ್ದೇವೆಯೋ ಇದೆಲ್ಲವೂ ವಿನಾಶವಾಗುವುದಾಗಿದೆ. ನಾವು ನಮ್ಮ ಮನೆಗೆ ಹೋಗುತ್ತೇವೆ ನಂತರ ಸುಖಧಾಮದಲ್ಲಿ ಬರುತ್ತೇವೆ.

ವರದಾನ:
ಅಟಲ ನಿಶ್ಚಯದ ಮೂಲಕ ಸಹಜ ವಿಜಯದ ಅನುಭವ ಮಾಡುವಂತಹ ಸದಾ ಹರ್ಷಿತ, ನಿಶ್ಚಿಂತ ಭವ.

ನಿಶ್ಚಯದ ನಿಶಾನಿಯಾಗಿದೆ ಸಹಜ ವಿಜಯ. ಆದರೆ ನಿಶ್ಚಯ ಎಲ್ಲಾ ಮಾತುಗಳಲ್ಲಿಯೂ ಬೇಕು. ಕೇವಲ ತಂದೆಯಲ್ಲಿ ನಿಶ್ಚಯ ಇರುವುದಲ್ಲ, ನಿಮ್ಮ ಮೇಲೆ ನಿಮಗೆ, ಬ್ರಾಹ್ಮಣ ಪರಿವಾರದಲ್ಲಿ ಮತ್ತು ಡ್ರಾಮದ ಪ್ರತೀ ದೃಷ್ಯದಲ್ಲಿ ಸಂಪೂರ್ಣ ನಿಶ್ಚಯವಿರಬೇಕು, ಸ್ವಲ್ಪ ಮಾತಿನಲ್ಲಿ ನಿಶ್ಚಯ ಅಲುಗಾಡುವಂತಹುದಲ್ಲ. ಸದಾ ಇದೇ ಸ್ಮೃತಿ ಇರಲಿ ವಿಜಯದ ಭವಿಷ್ಯ ಅಲುಗಾಡಿಸಲು ಸಾಧ್ಯವಿಲ್ಲ, ಇಂತಹ ನಿಶ್ಚಯ ಬುದ್ಧಿ ಮಕ್ಕಳು, ಏನಾಯಿತು? ಏಕಾಯಿತು?.... ಈ ಎಲ್ಲಾ ಪ್ರಶ್ನೆಗಳಿಂದ ಸಹ ದೂರ ಸದಾ ನಿಶ್ಚಿಂತ, ಸದಾ ಹರ್ಷಿತರಾಗಿರುತ್ತಾರೆ.

ಸ್ಲೋಗನ್:
ಸಮಯವನ್ನು ವ್ಯರ್ಥ ಮಾಡುವುದರ ಬದಲು ತಕ್ಷಣ ನಿರ್ಣಯ ಮಾಡಿ ನಿರ್ಧಾರ ಮಾಡಿ.