04.12.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಎಲ್ಲಾ ಆಧಾರವು ನೆನಪಿನ ಮೇಲಿದೆ, ನೆನಪಿನಿಂದಲೇ ನೀವು ಮಧುರರಾಗುತ್ತೀರಿ, ಈ ನೆನಪಿನಲ್ಲಿಯೇ ಮಾಯೆಯ ಯುದ್ಧವು ನಡೆಯುತ್ತದೆ”

ಪ್ರಶ್ನೆ:
ಈ ನಾಟಕದಲ್ಲಿ ಯಾವ ರಹಸ್ಯವು ಬಹಳ ವಿಚಾರ ಮಾಡುವಂತಹದಾಗಿದೆ? ಯಾವುದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ?

ಉತ್ತರ:
ನಿಮಗೆ ತಿಳಿದಿದೆ, ನಾಟಕದಲ್ಲಿ ಒಂದು ಪಾತ್ರವನ್ನು ಎರಡು ಸಲ ಅಭಿನಯಿಸಲು ಸಾಧ್ಯವಿಲ್ಲ. ಇಡೀ ಪ್ರಪಂಚದಲ್ಲಿ ಯಾವುದೆಲ್ಲಾ ಪಾತ್ರವನ್ನು ಅಭಿನಯಿಸಲಾಗುತ್ತದೆಯೋ ಅದು ಒಂದು ಇನ್ನೊಂದಕ್ಕಿಂತಲೂ ಹೊಸದಾಗಿರುತ್ತದೆ. ನೀವು ವಿಚಾರ ಮಾಡುತ್ತೀರಿ - ಸತ್ಯಯುಗದಿಂದ ಹಿಡಿದು ಇಲ್ಲಿಯವರೆಗೆ ಹೇಗೆ ದಿನಗಳು ಬದಲಾಗುತ್ತಾ ಹೋಗುತ್ತಿವೆ. ಎಲ್ಲಾ ಚಟುವಟಿಕೆಗಳು ಬದಲಾಗುತ್ತವೆ. ಆತ್ಮದಲ್ಲಿ 5000 ವರ್ಷಗಳ ಪೂರ್ಣ ಪಾತ್ರದ ರೆಕಾರ್ಡ್ ತುಂಬಲ್ಪಟ್ಟಿದೆ ಅದು ಎಂದಿಗೂ ಬದಲಾಗಲು ಸಾಧ್ಯವಿಲ್ಲ. ಈ ಚಿಕ್ಕದಾದ ಮಾತು ನೀವು ಮಕ್ಕಳ ವಿನಃ ಮತ್ತ್ಯಾರ ಬುದ್ಧಿಯಲ್ಲಿಯೂ ಬರಲು ಸಾಧ್ಯವಿಲ್ಲ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮೀಯ ಮಕ್ಕಳೊಂದಿಗೆ ಪ್ರಶ್ನಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನೀವು ತಮ್ಮ ಭವಿಷ್ಯದ ಪುರುಷೋತ್ತಮ ಮುಖ, ಪುರುಷೋತ್ತಮ ವಸ್ತ್ರ (ಶರೀರ) ವನ್ನು ನೋಡುತ್ತೀರಾ? ಇದು ಪುರುಷೋತ್ತಮ ಸಂಗಮಯುಗವಾಗಿದೆಯಲ್ಲವೆ. ನೀವು ಇದನ್ನು ಅನುಭವ ಮಾಡುತ್ತೀರಿ - ನಾವು ಪುನಃ ಹೊಸಪ್ರಪಂಚ ಸತ್ಯಯುಗದಲ್ಲಿ ಇವರ ವಂಶಾವಳಿಯಲ್ಲಿ ಹೋಗುತ್ತೇವೆ ಅದಕ್ಕೆ ಸುಖಧಾಮವೆಂದು ಕರೆಯಲಾಗುತ್ತದೆ. ಅಲ್ಲಿಗಾಗಿಯೇ ನೀವೀಗ ಪುರುಷೋತ್ತಮರಾಗುತ್ತಿದ್ದೀರಿ. ಕುಳಿತು-ಕುಳಿತಿದ್ದಂತೆಯೇ ಈ ವಿಚಾರಗಳು ಬರಬೇಕಾಗಿದೆ. ವಿದ್ಯಾರ್ಥಿಗಳು ಓದುವಾಗ ಅವರ ಬುದ್ಧಿಯಲ್ಲಿ ನಾಳೆ ನಾವು ಈ ರೀತಿ ಆಗುವವರಿದ್ದೇವೆಂದು ಅವಶ್ಯವಾಗಿ ಇರುತ್ತದೆ ಹಾಗೆಯೇ ನೀವೂ ಸಹ ಇಲ್ಲಿ ಕುಳಿತುಕೊಂಡಿದ್ದೀರೆಂದರೆ ನಿಮಗೂ ತಿಳಿದಿದೆ - ನಾವು ವಿಷ್ಣುವಿನ ರಾಜಧಾನಿಯಲ್ಲಿ ಹೋಗುತ್ತೇವೆ ಎಂದು. ನಿಮ್ಮ ಬುದ್ಧಿಯು ಈಗ ಅಲೌಕಿಕವಾಗಿದೆ ಮತ್ತ್ಯಾವ ಮನುಷ್ಯರ ಬುದ್ಧಿಯಲ್ಲಿಯೂ ಈ ಮಾತುಗಳ ಚಿಂತನೆಯು ನಡೆಯುವುದಿಲ್ಲ. ಇದು ಸಾಮಾನ್ಯವಾದ ಸತ್ಸಂಗವಲ್ಲ. ನೀವಿಲ್ಲಿ ಕುಳಿತಿದ್ದೀರಿ, ನಿಮಗೆ ತಿಳಿದಿದೆ-ಸತ್ಯತಂದೆ ಯಾರಿಗೆ ಶಿವನೆಂದು ಕರೆಯುವರೋ ಅವರ ಸಂಗದಲ್ಲಿ ನಾವು ಕುಳಿತಿದ್ದೇವೆ. ಶಿವತಂದೆಯೇ ರಚಯಿತನಾಗಿದ್ದಾರೆ, ಅವರಿಗೆ ಈ ರಚನೆಯ ಆದಿ-ಮಧ್ಯ-ಅಂತ್ಯವು ತಿಳಿದಿದೆ, ಅವರೇ ಈ ಜ್ಞಾನವನ್ನು ನೀಡುತ್ತಾರೆ. ಹೇಗೆ ಇದು ನೆನ್ನೆಯ ಮಾತು ಎಂದು ತಿಳಿಸುತ್ತಾರೆ. ನೀವಿಲ್ಲಿ ಕುಳಿತಿದ್ದೀರಿ, ನಾವು ಪರಿವರ್ತನೆಯಾಗಲು ಅರ್ಥಾತ್ ಈ ಶರೀರವನ್ನು ಬದಲಾಯಿಸಿ ದೈವೀ ಶರೀರವನ್ನು ಪಡೆಯಲು ಬಂದಿದ್ದೇವೆ ಎಂಬುದು ನಿಮಗೆ ನೆನಪಿರುವುದಲ್ಲವೆ. ನಮ್ಮದು ಇದು ತಮೋಪ್ರಧಾನ ಹಳೆಯ ಶರೀರವಾಗಿದೆ, ಇದನ್ನು ಬಿಟ್ಟು ಇಂತಹ ಹೊಸಶರೀರವನ್ನು ಪಡೆಯಬೇಕೆಂದು ಆತ್ಮವು ಹೇಳುತ್ತದೆ. ಎಷ್ಟು ಸಹಜವಾದ ಗುರಿ-ಧ್ಯೇಯವಾಗಿದೆ. ಓದಿಸುವ ಶಿಕ್ಷಕರು ಅವಶ್ಯವಾಗಿ ಓದುವಂತಹ ವಿದ್ಯಾರ್ಥಿಗಳಿಗಿಂತಲೂ ಬುದ್ಧಿವಂತರಿರುತ್ತಾರಲ್ಲವೆ! ಓದಿಸುತ್ತಾರೆ ಮತ್ತು ಒಳ್ಳೆಯ ಕರ್ಮವನ್ನೂ ಕಲಿಸುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ, ನಮಗೆ ಶ್ರೇಷ್ಠಾತಿಶ್ರೇಷ್ಠ ಭಗವಂತನು ಓದಿಸುತ್ತಾರೆಂದರೆ ಅವಶ್ಯವಾಗಿ ದೇವಿ-ದೇವತೆಗಳನ್ನಾಗಿಯೇ ಮಾಡುತ್ತಾರೆ. ಈ ವಿದ್ಯೆಯು ಹೊಸ ಪ್ರಪಂಚಕ್ಕಾಗಿಯೇ ಇದೆ. ನಿಮ್ಮ ವಿನಃ ಮತ್ತ್ಯಾರಿಗೂ ಹೊಸ ಪ್ರಪಂಚದ ಬಗ್ಗೆ ಸ್ವಲ್ಪವೂ ತಿಳಿದಿಲ್ಲ. ಈ ಲಕ್ಷ್ಮಿ-ನಾರಾಯಣರು ಹೊಸ ಪ್ರಪಂಚದ ಮಾಲೀಕರಾಗಿದ್ದರು, ದೇವಿ-ದೇವತೆಗಳಲ್ಲಿಯೂ ನಂಬರ್ವಾರ್ ಇದ್ದರಲ್ಲವೆ! ಎಲ್ಲರೂ ಒಂದೇ ರೀತಿಯಿರಲು ಸಾಧ್ಯವಿಲ್ಲ ಏಕೆಂದರೆ ರಾಜಧಾನಿಯಲ್ಲವೆ! ನಿಮ್ಮಲ್ಲಿ ಈ ವಿಚಾರಗಳು ನಡೆಯುತ್ತವೆ. ನಾವಾತ್ಮರು ಈಗ ಪತಿತರಿಂದ ಪಾವನರಾಗಲು ಪಾವನ ತಂದೆಯನ್ನು ನೆನಪು ಮಾಡುತ್ತೇವೆ. ಆತ್ಮವು ತನ್ನ ಮಧುರ ತಂದೆಯನ್ನು ನೆನಪು ಮಾಡುತ್ತದೆ. ತಂದೆಯೂ ಹೇಳುತ್ತಾರೆ - ಮಕ್ಕಳೇ, ನೀವು ನನ್ನನ್ನು ನೆನಪು ಮಾಡಿದರೆ ಪಾವನ ಸತೋಪ್ರಧಾನರಾಗಿಬಿಡುತ್ತೀರಿ. ಎಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ಮಕ್ಕಳೇ, ನೀವು ನನ್ನನ್ನು ಎಷ್ಟು ಸಮಯ ನೆನಪು ಮಾಡುತ್ತೀರಿ ಎಂದು ಕೇಳುತ್ತಾರೆ ಏಕೆಂದರೆ ನೆನಪಿನಲ್ಲಿಯೇ ಮಾಯೆಯ ಯುದ್ಧವು ನಡೆಯುತ್ತದೆ. ಆ ಯುದ್ಧವನ್ನೂ ನೀವು ತಿಳಿದುಕೊಂಡಿದ್ದೀರಿ. ಇದು ಯಾತ್ರೆಯಲ್ಲ, ಯುದ್ಧವಾಗಿದೆ. ಇದರಲ್ಲಿಯೇ ಬಹಳ ಎಚ್ಚರಿಕೆಯಿಂದಿರಬೇಕಾಗಿದೆ. ಜ್ಞಾನದಲ್ಲಿ ಮಾಯೆಯ ಬಿರುಗಾಳಿಯ ಮಾತು ಬರುವುದಿಲ್ಲ, ನೆನಪಿನಲ್ಲಿಯೇ ಬರುತ್ತದೆ ಆದ್ದರಿಂದ ಮಕ್ಕಳು ಹೇಳುತ್ತಾರೆ - ಬಾಬಾ, ನಾವು ತಮ್ಮನ್ನು ನೆನಪು ಮಾಡುತ್ತೇವೆ ಆದರೆ ಮಾಯೆಯ ಒಂದೇ ಬಿರುಗಾಳಿಯು ಕೆಳಗೆ ಬೀಳಿಸುತ್ತದೆ. ನಂಬರ್ವನ್ ಬಿರುಗಾಳಿಯು ದೇಹಾಭಿಮಾನದ್ದಾಗಿದೆ ನಂತರ ಕಾಮ, ಕ್ರೋಧ, ಲೋಭ, ಮೋಹ. ಬಾಬಾ, ನಾವು ನಿಮ್ಮ ನೆನಪಿನಲ್ಲಿರಲು ಬಹಳ ಪ್ರಯತ್ನಿಸುತ್ತೇವೆ, ಯಾವುದೇ ವಿಘ್ನವು ಬರಬಾರದೆಂದು ತಿಳಿಯುತ್ತೇವೆ ಆದರೂ ಸಹ ಬಿರುಗಾಳಿಗಳು ಬಂದುಬಿಡುತ್ತವೆ. ಇಂದು ಕ್ರೋಧ, ನಾಳೆ ಲೋಭದ ಬಿರುಗಾಳಿಯು ಬರುತ್ತದೆ. ಬಾಬಾ, ಇಂದು ನಮ್ಮ ಸ್ಥಿತಿಯು ಬಹಳ ಚೆನ್ನಾಗಿತ್ತು, ಇಡೀ ದಿನದಲ್ಲಿ ಯಾವುದೇ ಬಿರುಗಾಳಿ ಬರಲಿಲ್ಲ, ಬಹಳ ಖುಷಿಯಿತ್ತು, ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡುತ್ತಿದ್ದೆವು, ಆನಂದಭಾಷ್ಫಗಳೂ ಬರುತ್ತಿತ್ತು ಎಂದು ಮಕ್ಕಳು ಹೇಳುತ್ತಿದ್ದರು. ತಂದೆಯ ನೆನಪಿನಿಂದಲೇ ನೀವು ಮಧುರರಾಗಿಬಿಡುತ್ತೀರಿ.

ಮಕ್ಕಳು ಇದನ್ನೂ ಸಹ ತಿಳಿದುಕೊಂಡಿದ್ದೀರಿ - ನಾವು ಮಾಯೆಯಿಂದ ಸೋಲನ್ನನುಭವಿಸುತ್ತಾ-ಅನುಭವಿಸುತ್ತಾ ಎಲ್ಲಿಗೆ ಬಂದು ತಲುಪಿದ್ದೇವೆ! ಇದನ್ನು ಮನುಷ್ಯರ್ಯಾರೂ ತಿಳಿದುಕೊಂಡಿಲ್ಲ. ಮನುಷ್ಯರು ಲಕ್ಷಾಂತರ ವರ್ಷಗಳು ಅಥವಾ ಪರಂಪರೆಯಿಂದ ನಡೆಯುತ್ತಾ ಬರುತ್ತಿದೆ ಎಂದು ಹೇಳಿಬಿಡುತ್ತಾರೆ. ನಾವು ಪುನಃ ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆ, ಈ ಜ್ಞಾನವನ್ನು ತಂದೆಯೇ ಬಂದು ಕೊಡುತ್ತಾರೆ ಎಂದು ನೀವು ಹೇಳುತ್ತೀರಿ. ವಿಚಿತ್ರ ತಂದೆಯು ವಿಚಿತ್ರ ಜ್ಞಾನವನ್ನು ತಿಳಿಸುತ್ತಾರೆ. ನಿರಾಕಾರನಿಗೆ ವಿಚಿತ್ರ ಎಂದು ಹೇಳಲಾಗುತ್ತದೆ ಅಂದಾಗ ನಿರಾಕಾರ ತಂದೆಯು ಹೇಗೆ ಈ ಜ್ಞಾನವನ್ನು ತಿಳಿಸುತ್ತಾರೆ! ಹೇಗೆ ಈ ತನುವಿನಲ್ಲಿ ಬರುತ್ತಾರೆ ಎಂಬುದನ್ನು ಸ್ವಯಂ ತಂದೆಯೇ ತಿಳಿಸುತ್ತಾರೆ ಆದರೂ ಸಹ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಇವರೊಬ್ಬರ ತನುವಿನಲ್ಲಿಯೇ ಬರುವರೇ ಎಂದು ಕೇಳುತ್ತಾರೆ ಆದರೆ ನಾಟಕದಲ್ಲಿ ಇದೊಂದೇ ಶರೀರವು ನಿಮಿತ್ತವಾಗುತ್ತದೆ. ಸ್ವಲ್ಪವೂ ಬದಲಾಗಲು ಸಾಧ್ಯವಿಲ್ಲ. ಈ ಮಾತುಗಳನ್ನು ನೀವೇ ಅರಿತುಕೊಂಡು ಅನ್ಯರಿಗೂ ತಿಳಿಸಿಕೊಡುತ್ತೀರಿ. ಆತ್ಮವೇ ಓದುತ್ತದೆ, ಆತ್ಮವೇ ಕಲಿತು-ಕಲಿಸುತ್ತದೆ. ಆತ್ಮವು ಬಹಳ ಅಮೂಲ್ಯವಾಗಿದೆ, ಆತ್ಮವು ಅವಿನಾಶಿಯಾಗಿದೆ ಕೇವಲ ಶರೀರವು ಮಾತ್ರ ಸಮಾಪ್ತಿಯಾಗುತ್ತದೆ. ನಾವಾತ್ಮಗಳು ನಮ್ಮ ಪರಮಪಿತ ಪರಮಾತ್ಮನಿಂದ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ 84 ಜನ್ಮಗಳ ಜ್ಞಾನವನ್ನು ಪಡೆಯುತ್ತಿದ್ದೇವೆ. ಜ್ಞಾನವನ್ನು ಯಾರು ತೆಗೆದುಕೊಳ್ಳುತ್ತಾರೆ? ನಾವಾತ್ಮಗಳು. ಆತ್ಮಗಳೇ ಜ್ಞಾನಸಾಗರ ತಂದೆಯಿಂದ ಮೂಲವತನ-ಸೂಕ್ಷ್ಮವತನವನ್ನು ಅರಿತಿದ್ದೀರಿ. ನಾವು ನಮ್ಮನ್ನು ಆತ್ಮನೆಂದು ತಿಳಿಯಬೇಕು ಎಂಬುದು ಮನುಷ್ಯರಿಗೆ ತಿಳಿದೇ ಇಲ್ಲ. ಮನುಷ್ಯರಂತೂ ತಮ್ಮನ್ನು ಶರೀರವೆಂದು ತಿಳಿದು ತಲೆಕೆಳಕಾಗಿ ನಿಂತಿದ್ದಾರೆ. ಆತ್ಮವು ಸತ್ಚಿತ್ ಆನಂದಸ್ವರೂಪವೆಂದು ಗಾಯನವಿದೆ. ಎಲ್ಲರಿಗಿಂತ ಹೆಚ್ಚಿನ ಮಹಿಮೆಯು ಪರಮಾತ್ಮನದಾಗಿದೆ. ಒಬ್ಬ ತಂದೆಗೆ ಎಷ್ಟೊಂದು ಮಹಿಮೆಯಿದೆ, ಅವರೇ ದುಃಖಹರ್ತ-ಸುಖಕರ್ತನಾಗಿದ್ದಾರೆ. ಸೊಳ್ಳೆ ಇತ್ಯಾದಿಗಳಿಗಂತೂ ದುಃಖಹರ್ತ-ಸುಖಕರ್ತ, ಜ್ಞಾನಸಾಗರ ಎಂದು ಗಾಯನ ಮಾಡಲಾಗುವುದಿಲ್ಲ, ಇದು ತಂದೆಯ ಮಹಿಮೆಯೇ ಆಗಿದೆ. ನೀವು ಮಾಸ್ಟರ್ ದುಃಖಹರ್ತ-ಸುಖಕರ್ತರಾಗಿದ್ದೀರಿ. ನೀವು ಮಕ್ಕಳಿಗೂ ಈ ಜ್ಞಾನ ತಿಳಿದಿರಲಿಲ್ಲ, ಹೇಗೆ ಚಿಕ್ಕಮಕ್ಕಳಂತಿದ್ದಿರಿ. ಮಕ್ಕಳಲ್ಲಿ ಜ್ಞಾನವೂ ಇರುವುದಿಲ್ಲ ಮತ್ತು ಯಾವುದೇ ಅವಗುಣವೂ ಇರುವುದಿಲ್ಲ ಆದ್ದರಿಂದ ಅವರಿಗೆ ಮಹಾತ್ಮರೆಂದು ಕರೆಯಲಾಗುತ್ತದೆ ಏಕೆಂದರೆ ಪವಿತ್ರರಾಗಿರುತ್ತಾರೆ. ಎಷ್ಟು ಚಿಕ್ಕಮಗುವೋ ಅಷ್ಟು ನಂಬರ್ವನ್ ಹೂವಿನ ಸಮಾನವಾಗಿರುತ್ತದೆ. ಹೇಗೆ ಅವರ ಸ್ಥಿತಿಯು ಕರ್ಮಾತೀತ ಸ್ಥಿತಿಯಂತಿರುತ್ತದೆ ಅವರಿಗೆ ಕರ್ಮ, ಅಕರ್ಮ, ವಿಕರ್ಮದ ಬಗ್ಗೆ ಏನೂ ತಿಳಿದಿರುವುದಿಲ್ಲ ಆದ್ದರಿಂದ ಮಕ್ಕಳು ಹೂಗಳಾಗಿರುತ್ತಾರೆ. ಎಲ್ಲರನ್ನು ಆಕರ್ಷಿಸುತ್ತಾರೆ. ಹೇಗೆ ಒಬ್ಬ ತಂದೆಯು ಎಲ್ಲರನ್ನೂ ಆಕರ್ಷಣೆ ಮಾಡುತ್ತಾರೆ. ತಂದೆಯು ಬಂದಿರುವುದೇ ಎಲ್ಲರನ್ನೂ ಆಕರ್ಷಣೆ ಮಾಡಿ ಸುಗಂಧಭರಿತ ಹೂಗಳನ್ನಾಗಿ ಮಾಡಲು. ಕೆಲವರಂತೂ ಮುಳ್ಳುಗಳಾಗಿಯೇ ಉಳಿಯುತ್ತಾರೆ, ಪಂಚವಿಕಾರಗಳಿಗೆ ವಶೀಭೂತರಾಗುವವರನ್ನು ಮುಳ್ಳುಗಳೆಂದು ಹೇಳಲಾಗುವುದು. ಮೊಟ್ಟಮೊದಲ ಮುಳ್ಳು ದೇಹಾಭಿಮಾನವಾಗಿದೆ, ಇದರಿಂದಲೇ ಅನ್ಯ ಮುಳ್ಳುಗಳ ಜನ್ಮವಾಗುತ್ತದೆ. ಮುಳ್ಳಿನ ಕಾಡು ಬಹಳ ದುಃಖ ಕೊಡುತ್ತದೆ, ಕಾಡಿನಲ್ಲಿ ಭಿನ್ನ-ಭಿನ್ನ ಪ್ರಕಾರದ ಮುಳ್ಳುಗಳು ಇರುತ್ತವೆಯಲ್ಲವೆ ಆದ್ದರಿಂದ ಇದಕ್ಕೆ ದುಃಖಧಾಮವೆಂದು ಕರೆಯಲಾಗುತ್ತದೆ. ಹೊಸಪ್ರಪಂಚದಲ್ಲಿ ಮುಳ್ಳುಗಳಿರುವುದಿಲ್ಲ ಆದ್ದರಿಂದ ಅದಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ಶಿವತಂದೆಯು ಹೂದೋಟವನ್ನಾಗಿ ಮಾಡುತ್ತಾರೆ, ರಾವಣನು ಮುಳ್ಳಿನ ಕಾಡನ್ನಾಗಿ ಮಾಡುತ್ತಾನೆ ಆದ್ದರಿಂದಲೇ ರಾವಣನನ್ನು ಮುಳ್ಳುಗಳ ಸೌದೆಯಿಂದ ಸುಡುತ್ತಾರೆ ಮತ್ತು ಶಿವತಂದೆಯ ಮೇಲೆ ಹೂಗಳನ್ನು ಇಡುತ್ತಾರೆ. ಈ ಮಾತುಗಳು ತಂದೆಗೆ ಗೊತ್ತು ಮತ್ತು ಮಕ್ಕಳಿಗೇ ಗೊತ್ತು, ಮತ್ತ್ಯಾರಿಗೂ ಗೊತ್ತಿಲ್ಲ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾಟಕದಲ್ಲಿ ಒಂದು ಪಾತ್ರವನ್ನು ಎರಡು ಬಾರಿ ಅಭಿನಯಿಸಲು ಸಾಧ್ಯವಿಲ್ಲ. ಬುದ್ಧಿಯಲ್ಲಿದೆ - ಇಡೀ ಪ್ರಪಂಚದಲ್ಲಿ ಯಾವುದೆಲ್ಲಾ ಪಾತ್ರಗಳು ಅಭಿನಯಿಸಲ್ಪಡುತ್ತವೆಯೋ ಅವು ಒಂದು ಇನ್ನೊಂದಕ್ಕಿಂತಲೂ ಹೊಸದಾಗಿರುತ್ತದೆ. ನೀವು ವಿಚಾರ ಮಾಡಿ - ಸತ್ಯಯುಗದಿಂದ ಹಿಡಿದು ಇಲ್ಲಿಯವರೆಗೆ ಹೇಗೆ ಬದಲಾಗುತ್ತವೆ! ಪೂರ್ಣ ಚಟುವಟಿಕೆಗಳೇ ಬದಲಾಗುತ್ತವೆ. ಇಂದಿಗೆ 5000 ವರ್ಷಗಳ ಎಲ್ಲಾ ಚಟುವಟಿಕೆಗಳ ರೆಕಾರ್ಡ್ ತುಂಬಲ್ಪಟ್ಟಿದೆ. ಅದು ಎಂದಿಗೂ ಬದಲಾಗಲು ಸಾಧ್ಯವಿಲ್ಲ. ಪ್ರತಿಯೊಂದು ಆತ್ಮನಲ್ಲಿ ತನ್ನ-ತನ್ನ ಪಾತ್ರವು ತುಂಬಲ್ಪಟ್ಟಿದೆ. ಈ ಅತಿಚಿಕ್ಕ ಮಾತೂ ಸಹ ಯಾರ ಬುದ್ಧಿಯಲ್ಲಿಯೂ ಬರಲು ಸಾಧ್ಯವಿಲ್ಲ. ಈ ನಾಟಕದ ಆದಿ-ಮಧ್ಯ-ಅಂತ್ಯವನ್ನು ನೀವು ಅರಿತುಕೊಂಡಿದ್ದೀರಿ. ಇದು ಶಾಲೆಯಾಗಿದೆಯಲ್ಲವೆ. ಪವಿತ್ರರಾಗಿ ತಂದೆಯನ್ನು ನೆನಪು ಮಾಡುವ ವಿದ್ಯೆಯನ್ನು ತಂದೆಯು ಓದಿಸುತ್ತಾರೆ. ಸ್ವಯಂ ತಂದೆಯೇ ಬಂದು ಹೇಗೆ ಪತಿತರಿಂದ ಪಾವನರಾಗುವ ವಿದ್ಯೆಯನ್ನು ಓದಿಸುತ್ತಾರೆ, ಈ ವಿದ್ಯೆಯಿಂದಲೇ ನಾವು ವಿಶ್ವದ ಮಾಲೀಕರಾಗುತ್ತೇವೆ ಎಂಬ ಮಾತುಗಳನ್ನು ಎಂದೂ ಯಾರೂ ಯೋಚಿಸಿಯೂ ಇಲ್ಲ. ಭಕ್ತಿಮಾರ್ಗದ ಪುಸ್ತಕಗಳೇ ಬೇರೆಯಾಗಿವೆ, ಅದಕ್ಕೆ ಎಂದೂ ವಿದ್ಯೆಯೆಂದು ಹೇಳಲಾಗುವುದಿಲ್ಲ. ಜ್ಞಾನವಿಲ್ಲದೆ ಸದ್ಗತಿಯಾಗುವುದಾದರೂ ಹೇಗೆ? ಸದ್ಗತಿಯಾಗಲು ತಂದೆಯಿಲ್ಲದೆ ಜ್ಞಾನವೆಲ್ಲಿಂದ ಬರುತ್ತದೆ! ಯಾವಾಗ ನೀವು ಸದ್ಗತಿಯಲ್ಲಿರುತ್ತೀರೋ ಆಗ ಭಕ್ತಿಮಾಡುತ್ತೀರೇನು? ಇಲ್ಲ. ಅಲ್ಲಿ ಅಪಾರ ಸುಖವಿರುತ್ತದೆ ಅಂದಾಗ ಭಕ್ತಿಮಾಡುವುದಾದರೂ ಏತಕ್ಕಾಗಿ? ಈ ಜ್ಞಾನವು ಈ ಸಮಯದಲ್ಲಿಯೇ ನಿಮಗೆ ಸಿಗುತ್ತದೆ. ಆತ್ಮದಲ್ಲಿ ಪೂರ್ಣ ಜ್ಞಾನವಿರುತ್ತದೆ. ಆತ್ಮಕ್ಕೆ ಯಾವುದೇ ಧರ್ಮವಿರುವುದಿಲ್ಲ. ಯಾವಾಗ ಆತ್ಮವು ಶರೀರಧಾರಣೆ ಮಾಡುತ್ತದೆಯೋ ಆಗ ಇವರು ಇಂತಿಂತಹ ಧರ್ಮದವರೆಂದು ಹೇಳುತ್ತಾರೆ. ಆತ್ಮದ ಧರ್ಮ ಯಾವುದು? ಒಂದಂತೂ ಆತ್ಮವು ಬಿಂದು ರೂಪವಾಗಿದೆ ಮತ್ತು ಶಾಂತ ಸ್ವರೂಪವಾಗಿದೆ, ಶಾಂತಿಧಾಮದಲ್ಲಿರುತ್ತದೆ.

ಈಗ ತಂದೆಯು ತಿಳಿಸುತ್ತಾರೆ - ಎಲ್ಲಾ ಮಕ್ಕಳಿಗೆ ತಂದೆಯ ಮೇಲೆ ಅಧಿಕಾರವಿದೆ. ಬಹಳ ಮಂದಿ ಮಕ್ಕಳು ಬೇರೆ-ಬೇರೆ ಧರ್ಮಗಳಲ್ಲಿ ಸೇರಿಹೋಗಿದ್ದಾರೆ. ಅವರು ಮತ್ತೆ ಅದರಿಂದ ಹೊರಬಂದು ತಮ್ಮ ಮೂಲಧರ್ಮದಲ್ಲಿ ಬಂದುಬಿಡುತ್ತಾರೆ. ಯಾರು ದೇವಿ-ದೇವತಾಧರ್ಮವನ್ನು ಬಿಟ್ಟು ಅನ್ಯಧರ್ಮದಲ್ಲಿ ಹೋಗಿದ್ದಾರೆಯೋ ಅವರೆಲ್ಲರೂ ಮತ್ತೆ ತಮ್ಮ ಸ್ಥಾನದಲ್ಲಿ ಬಂದುಬಿಡುತ್ತಾರೆ ಆದ್ದರಿಂದ ನೀವು ಮೊಟ್ಟಮೊದಲಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಈ ಮಾತುಗಳಲ್ಲಿಯೇ ಎಲ್ಲರೂ ತಬ್ಬಿಬ್ಬಾಗಿದ್ದಾರೆ. ಈಗ ನಮಗೆ ಯಾರು ಓದಿಸುತ್ತಾರೆಂಬುದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಸ್ವಯಂ ಪಾರಲೌಕಿಕ ತಂದೆಯು ಓದಿಸುತ್ತಾರೆ, ಕೃಷ್ಣನಂತೂ ದೇಹಧಾರಿಯಾಗಿದ್ದಾನೆ, ಇವರಿಗೂ (ಬ್ರಹ್ಮಾತಂದೆ) ಸಹ ದಾದಾ ಎಂದು ಹೇಳುತ್ತಾರೆ ಅಂದಮೇಲೆ ನೀವೆಲ್ಲರೂ ಸಹೋದರ-ಸಹೋದರರಾಗಿದ್ದೀರಲ್ಲವೆ. ಸಹೋದರಿಯ ಶರೀರವೇ ಬೇರೆ, ಸಹೋದರನ ಶರೀರವೇ ಬೇರೆಯಾಗಿದೆ, ಆತ್ಮನಂತೂ ಅತಿಸೂಕ್ಷ್ಮ ನಕ್ಷತ್ರವಾಗಿದೆ. ಇಷ್ಟೆಲ್ಲಾ ಜ್ಞಾನವು ಒಂದು ಸೂಕ್ಷ್ಮ ನಕ್ಷತ್ರದಲ್ಲಿ(ಆತ್ಮ)ದೆ. ಈ ನಕ್ಷತ್ರವು ಶರೀರವಿಲ್ಲದೆ ಮಾತನಾಡುವುದಕ್ಕೂ ಸಾಧ್ಯವಿಲ್ಲ. ನಕ್ಷತ್ರಕ್ಕೆ ಪಾತ್ರವನ್ನಭಿನಯಿಸಲು ಇಷ್ಟೆಲ್ಲಾ ಕರ್ಮೇಂದ್ರಿಯಗಳು ಸಿಕ್ಕಿವೆ. ನೀವು ಆತ್ಮ ನಕ್ಷತ್ರಗಳ ಪ್ರಪಂಚವೇ ಬೇರೆಯಾಗಿದೆ. ಆತ್ಮವು ಇಲ್ಲಿ ಬಂದು ಶರೀರಧಾರಣೆ ಮಾಡುತ್ತದೆ. ಶರೀರದ ಗಾತ್ರವು ಚಿಕ್ಕದು-ದೊಡ್ಡದಿರುತ್ತದೆ. ಆತ್ಮವೇ ತನ್ನ ತಂದೆಯನ್ನು ನೆನಪು ಮಾಡುತ್ತದೆ, ಅದೂ ಸಹ ಈ ಶರೀರದಲ್ಲಿದ್ದಾಗ ಮಾತ್ರ. ಮನೆಯಲ್ಲಿ ಆತ್ಮವು ತಂದೆಯನ್ನು ನೆನಪು ಮಾಡುವುದೇ? ಇಲ್ಲ. ನಾವು ಎಲ್ಲಿದ್ದೇವೆ ಎಂಬುದೂ ಸಹ ತಿಳಿದಿರುವುದಿಲ್ಲ. ಆತ್ಮ ಮತ್ತು ಪರಮಾತ್ಮ ಇಬ್ಬರೂ ಶರೀರದಲ್ಲಿದ್ದಾಗ ಮಾತ್ರ ಆತ್ಮ ಮತ್ತು ಪರಮಾತ್ಮನ ಮೇಳವೆಂದು ಹೇಳಲಾಗುತ್ತದೆ. ಆತ್ಮಗಳು ಪರಮಾತ್ಮನಿಂದ ಅಗಲಿಹೋಗಿದ್ದರೆಂದು ಗಾಯನವಿದೆ. ಎಷ್ಟು ಸಮಯ ಅಗಲಿದ್ದಾರೆ? ಎಷ್ಟು ಸಮಯ ಅಗಲಿಹೋಗಿದ್ದೇವೆಂದು ನೆನಪಿಗೆ ಬರುತ್ತಿದೆಯೇ? ಕ್ಷಣಗಳು ಕಳೆಯುತ್ತಾ-ಕಳೆಯುತ್ತಾ 5000 ವರ್ಷಗಳು ಕಳೆದವು ಮತ್ತೆ ಈಗ ದಿನಾಂಕವು ಒಂದರಿಂದ ಪ್ರಾರಂಭಿಸಬೇಕಾಗಿದೆ. ನಿಖರವಾದ ಲೆಕ್ಕವಿದೆ. ಇವರು ಯಾವಾಗ ಜನ್ಮ ತೆಗೆದುಕೊಂಡಿದ್ದರು ಎಂದು ಈಗ ನಿಮ್ಮೊಂದಿಗೆ ಯಾರಾದರೂ ಪ್ರಶ್ನಿಸಿದರೆ ನೀವು ನಿಖರವಾಗಿ ತಿಳಿಸಬಹುದು. ಶ್ರೀಕೃಷ್ಣನು ಮೊದಲನೇ ಜನ್ಮ ತೆಗೆದುಕೊಳ್ಳುತ್ತಾನೆ. ಶಿವನಿಗೆ ನಿಮಿಷ-ಸೆಕೆಂಡುಗಳನ್ನು ಲೆಕ್ಕವಿಡಲು ಸಾಧ್ಯವಿಲ್ಲ. ಕೃಷ್ಣನ ತಿಥಿ-ತಾರೀಖು ಎಲ್ಲವನ್ನೂ ಲೆಕ್ಕವಿಡಬಹುದು. ಮನುಷ್ಯರ ಗಡಿಯಾರದಲ್ಲಿ ಅಂತರವಾಗಬಹುದು, ಶಿವತಂದೆಯ ಅವತರಣೆಯಲ್ಲಿ ಸ್ವಲ್ಪವೂ ವ್ಯತ್ಯಾಸವಾಗಲು ಸಾಧ್ಯವಿಲ್ಲ ಆದರೆ ಅವರು ಯಾವಾಗ ಬಂದರೆಂದು ಯಾರಿಗೂ ತಿಳಿಯುವುದೇ ಇಲ್ಲ ಅಂದರೆ ಸಾಕ್ಷಾತ್ಕಾರವಾಯಿತು ಆಗ ಬಂದರು ಎಂದಲ್ಲ. ನೀವು ಅಂದಾಜು ಮಾಡಬಹುದು. ನಿಮಿಷ, ಸೆಕೆಂಡುಗಳ ಲೆಕ್ಕ ತೆಗೆಯಲು ಸಾಧ್ಯವಿಲ್ಲ. ಅವರು ಬೇಹದ್ದಿನ ರಾತ್ರಿಯ ಸಮಯದಲ್ಲಿಯೇ ಬರುತ್ತಾರೆ, ಉಳಿದಂತೆ ಮತ್ತ್ಯಾವುದೆಲ್ಲಾ ಅವತರಣೆಯಾಗುತ್ತದೆಯೋ ಅದು ತಿಳಿಯುತ್ತದೆ. ಆತ್ಮವು ಶರೀರದಲ್ಲಿ ಪ್ರವೇಶ ಮಾಡುತ್ತದೆ. ಚಿಕ್ಕ ಶರೀರವನ್ನು ಧಾರಣೆ ಮಾಡುತ್ತದೆ ನಂತರ ನಿಧಾನ-ನಿಧಾನವಾಗಿ ಬೆಳವಣಿಗೆಯಾಗುತ್ತಾ ಹೋಗುತ್ತದೆ. ಶರೀರದ ಜೊತೆ ಆತ್ಮವು ಹೊರಬರುತ್ತದೆ. ಇವೆಲ್ಲಾ ಮಾತುಗಳನ್ನು ವಿಚಾರಸಾಗರ ಮಥನ ಮಾಡಿ ಮತ್ತೆ ಅನ್ಯರಿಗೂ ತಿಳಿಸಬೇಕಾಗಿದೆ. ಎಷ್ಟೊಂದು ಜನಸಂಖ್ಯೆಯಿದೆ, ಆದರೆ ಒಬ್ಬರು ಇನ್ನೊಬ್ಬರಿಗೆ ಹೋಲುವುದಿಲ್ಲ. ಇದು ಎಷ್ಟು ದೊಡ್ಡ ಮಂಟಪವಾಗಿದೆ. ಅತಿದೊಡ್ಡ ಹಾಲ್ ಆಗಿದೆ, ಇದರಲ್ಲಿ ಬೇಹದ್ದಿನ ನಾಟಕವು ನಡೆಯುತ್ತದೆ.

ನೀವು ಮಕ್ಕಳು ನರನಿಂದ ನಾರಾಯಣರಾಗಲು ಬರುತ್ತೀರಿ. ತಂದೆಯು ಯಾವ ಹೊಸ ಸೃಷ್ಟಿಯನ್ನು ರಚಿಸುತ್ತಾರೆಯೋ ಅದರಲ್ಲಿ ಶ್ರೇಷ್ಠಪದವಿಯನ್ನು ಪಡೆಯಲು ಬರುತ್ತೀರಿ. ಬಾಕಿ ಈ ಹಳೆಯ ಪ್ರಪಂಚವಂತೂ ವಿನಾಶವಾಗಲಿದೆ, ತಂದೆಯ ಮೂಲಕ ಹೊಸಪ್ರಪಂಚದ ಸ್ಥಾಪನೆಯಾಗುತ್ತಿದೆ, ತಂದೆಯು ಪಾಲನೆಯನ್ನೂ ಮಾಡಬೇಕಾಗಿದೆ. ಯಾವಾಗ ಇವರು (ಬ್ರಹ್ಮಾ) ಇಲ್ಲಿ ಶರೀರವನ್ನು ಬಿಡುವರೋ ಆಗಲೇ ಮತ್ತೆ ಸತ್ಯಯುಗದಲ್ಲಿ ಹೊಸ ಶರೀರವನ್ನು ಪಡೆದು ಪಾಲನೆ ಮಾಡಲು ಸಾಧ್ಯ. ಅದಕ್ಕೆ ಮುಂಚೆ ಈ ಹಳೆಯ ಪ್ರಪಂಚದ ವಿನಾಶವು ಆಗಬೇಕಾಗಿದೆ. ಈ ಬಿದುರಿನ ಕಾಡಿಗೆ ಬೆಂಕಿಬೀಳುವುದಿದೆ. ಕೊನೆಯಲ್ಲಿ ಎಲ್ಲಾ ಖಂಡಗಳು ಸಮಾಪ್ತಿಯಾಗಿ ಭಾರತವೇ ಉಳಿಯುತ್ತದೆ. ಭಾರತದಲ್ಲಿಯೂ ಕೆಲವರೇ ಉಳಿಯುತ್ತಾರೆ, ವಿನಾಶದ ನಂತರ ಶಿಕ್ಷೆಗಳನ್ನನುಭವಿಸಬಾರದೆಂದು ನೀವೀಗ ಪರಿಶ್ರಮಪಡುತ್ತಿದ್ದೀರಿ. ಒಂದುವೇಳೆ ಈಗ ವಿಕರ್ಮ ವಿನಾಶವಾಗಲಿಲ್ಲವೆಂದರೆ ಶಿಕ್ಷೆಯನ್ನನುಭವಿಸುತ್ತೀರಿ ಮತ್ತೆ ಪದವಿಯೂ ಸಿಗುವುದಿಲ್ಲ. ನೀವು ಯಾರ ಬಳಿ ಹೋಗುತ್ತೀರಿ ಎಂದು ನಿಮ್ಮೊಂದಿಗೆ ಯಾರಾದರೂ ಕೇಳಿದಾಗ ತಿಳಿಸಿ, ಬ್ರಹ್ಮಾತಂದೆಯ ಶರೀರದಲ್ಲಿ ಬಂದಿರುವ ಶಿವತಂದೆಯ ಬಳಿ ನಾವು ಬಂದಿದ್ದೇವೆ. ಈ ಬ್ರಹ್ಮಾತಂದೆಯೇ ಶಿವನಲ್ಲ. ನೀವು ತಂದೆಯನ್ನು ಎಷ್ಟು ಅರಿತುಕೊಳ್ಳುವಿರೋ ಅಷ್ಟು ತಂದೆಯ ಜೊತೆ ಪ್ರೀತಿಯೂ ಇರುವುದು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಮತ್ತ್ಯಾರನ್ನೂ ಪ್ರೀತಿ ಮಾಡಬೇಡಿ, ಅನ್ಯಸಂಗಗಳಿಂದ ಪ್ರೀತಿಯನ್ನು ತೆಗೆದು ಒಬ್ಬ ತಂದೆಯ ಜೊತೆ ಇಡಿ. ಹೇಗೆ ಪ್ರಿಯತಮ-ಪ್ರಿಯತಮೆಯರಿರುತ್ತಾರಲ್ಲವೆ. ಇಲ್ಲಿಯೂ ಹಾಗೆಯೇ, 108 ಮಂದಿ ಸತ್ಯಪ್ರಿಯತಮೆಯರಾಗುತ್ತಾರೆ, ಅದರಲ್ಲಿಯೂ 8 ಮಂದಿ ಸಂಪೂರ್ಣ ಸತ್ಯವಂತರಾಗುತ್ತಾರೆ. 8 ಮಣಿಗಳ ಮಾಲೆಯಿರುತ್ತದೆಯಲ್ಲವೆ. ನವರತ್ನಗಳ ಗಾಯನವಿದೆ, 8 ರತ್ನಗಳು ನಂತರ 9ನೆಯವರು ಶಿವತಂದೆ. ಮುಖ್ಯವಾಗಿ 8 ಮಂದಿ ದೇವತೆಗಳು ನಂತರ ತ್ರೇತಾದವರೆಗೆ 16,108 ಮಂದಿ ರಾಜಕುಮಾರ-ಕುಮಾರಿಯರ ಕುಟುಂಬವಾಗುತ್ತದೆ. ತಂದೆಯಂತೂ ಅಂಗೈಯಲ್ಲಿ ಸ್ವರ್ಗವನ್ನು ತೋರಿಸುತ್ತಾರೆ. ನಾವಂತೂ ಸೃಷ್ಟಿಯ ಮಾಲೀಕರಾಗುತ್ತೇವೆ, ತಂದೆಯಿಂದ ಇಂತಹ ವ್ಯಾಪಾರವನ್ನು ಮಾಡಬೇಕೆನ್ನುವ ನಶೆಯಿದೆ. ಕೆಲವರೇ ವಿರಳ ವ್ಯಾಪಾರಿಗಳು ಈ ವ್ಯಾಪಾರವನ್ನು ಮಾಡುತ್ತಾರೆ. ಇಂತಹ ವ್ಯಾಪಾರಿಗಳು ಯಾರಾದರೂ ಇರುತ್ತಾರೆಯೇ? ಆದ್ದರಿಂದ ಮಕ್ಕಳು ನಾವೀಗ ತಂದೆಯ ಬಳಿ ಹೋಗುತ್ತೇವೆಂಬ ಉತ್ಸಾಹದಲ್ಲಿರಿ. ಮೇಲಿರುವ ತಂದೆಯ ಬಗ್ಗೆ ಪ್ರಪಂಚದವರು ತಿಳಿದುಕೊಂಡಿಲ್ಲ. ಅವರಂತೂ ಅಂತಿಮದಲ್ಲಿ ಬರುತ್ತಾರೆಂದು ಮನುಷ್ಯರು ಹೇಳುತ್ತಾರೆ ಆದರೆ ಈಗ ಅದೇ ಕಲಿಯುಗ ಅಂತಿಮವಾಗಿದೆ, ಅದೇ ಮಹಾಭಾರತದ ಅಂತಿಮ ಸಮಯವಾಗಿದೆ. ಯಾದವರು ಅಣ್ವಸ್ತ್ರಗಳನ್ನು ತಯಾರು ಮಾಡಿದ್ದಾರೆ. ಕೌರವರ ರಾಜ್ಯ ಮತ್ತು ನೀವು ಪಾಂಡವರು ನಿಂತಿದ್ದೀರಿ.

ನೀವು ಮಕ್ಕಳು ಈಗ ಮನೆಯಲ್ಲಿ ಕುಳಿತಿದ್ದಂತೆಯೇ ತಮ್ಮ ಸಂಪಾದನೆ ಮಾಡಿಕೊಳ್ಳುತ್ತಿದ್ದೀರಿ. ಮನೆಯಲ್ಲಿ ಕುಳಿತಿದ್ದಂತೆಯೇ ಭಗವಂತನು ಬಂದಿದ್ದಾರೆ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ತಮ್ಮ ಸಂಪಾದನೆ ಮಾಡಿಕೊಳ್ಳಿ. ಇದೇ ವಜ್ರಸಮಾನ ಜನ್ಮ, ಅಮೂಲ್ಯ ಜನ್ಮವೆಂದು ಗಾಯನವಿದೆ, ಈಗ ಇದನ್ನು ಕವಡೆಗಾಗಿ ಕಳೆದುಕೊಳ್ಳಬಾರದು. ಈಗ ನೀವು ಈ ಇಡೀ ಪ್ರಪಂಚವನ್ನು ರಾಮರಾಜ್ಯವನ್ನಾಗಿ ಮಾಡುತ್ತೀರಿ. ನಿಮಗೆ ಶಿವನಿಂದ ಶಕ್ತಿಯು ಸಿಗುತ್ತಿದೆ ಬಾಕಿ ಇಂದಿನ ದಿನಗಳಲ್ಲಂತೂ ಕೆಲವರಿಗೆ ಅಕಾಲಮೃತ್ಯುವೂ ಆಗಿಬಿಡುತ್ತದೆ. ತಂದೆಯು ಬುದ್ಧಿಯ ಬೀಗವನ್ನು ತೆರೆಯುತ್ತಾರೆ ಮತ್ತು ಮಾಯೆಯು ಬುದ್ಧಿಗೆ ಬೀಗ ಹಾಕುತ್ತದೆ. ಈಗ ನೀವು ಮಾತೆಯರಿಗೇ ಜ್ಞಾನದ ಕಳಶವು ಸಿಕ್ಕಿದೆ. ಅಬಲೆಯರಿಗೆ ಬಲ ನೀಡುವವರು ಅವರಾಗಿದ್ದಾರೆ, ಇದೇ ಜ್ಞಾನಾಮೃತವಾಗಿದೆ. ಶಾಸ್ತ್ರಗಳ ಜ್ಞಾನಕ್ಕೆ ಅಮೃತವೆಂದು ಹೇಳಲಾಗುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ತಂದೆಯ ಆಕರ್ಷಣೆಯಲ್ಲಿದ್ದು ಸುಗಂಧಭರಿತ ಹೂಗಳಾಗಬೇಕಾಗಿದೆ. ತಮ್ಮ ಮಧುರ ತಂದೆಯನ್ನು ನೆನಪು ಮಾಡಿ ದೇಹಾಭಿಮಾನದ ಮುಳ್ಳುಗಳನ್ನು ಸುಟ್ಟುಹಾಕಬೇಕಾಗಿದೆ.

2. ಈ ವಜ್ರಸಮಾನ ಜನ್ಮದಲ್ಲಿ ಅವಿನಾಶಿ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ. ಕವಡೆಗಳಿಗಾಗಿ ಇದನ್ನು ಕಳೆದುಕೊಳ್ಳಬಾರದು. ಒಬ್ಬ ತಂದೆಯನ್ನು ಸತ್ಯವಾಗಿ ಪ್ರೀತಿ ಮಾಡಬೇಕಾಗಿದೆ, ಒಬ್ಬರ ಸಂಗದಲ್ಲಿರಬೇಕಾಗಿದೆ.

ವರದಾನ:
ಬ್ರಾಹ್ಮಣ ಜೀವನದಲ್ಲಿ ಸದಾ ಖುಷಿಯ ಟಾನಿಕ್ ತೆಗೆದುಕೊಳ್ಳುವವರು ಮತ್ತು ಖುಷಿಯನ್ನು ಹಂಚುವವರು ಅದೃಷ್ಠಶಾಲಿ ಭವ.

ಈ ಪ್ರಪಂಚದಲ್ಲಿ ನೀವು ಬ್ರಾಹ್ಮಣರಷ್ಟು ಅದೃಷ್ಠಶಾಲಿ ಯಾರೂ ಇರಲು ಸಾಧ್ಯವಿಲ್ಲ, ಏಕೆಂದರೆ ಈ ಜೀವನದಲ್ಲಿಯೇ ನೀವು ಎಲ್ಲರಿಗೂ ಬಾಪ್ದಾದಾರವರ ಹೃದಯ ಸಿಂಹಾಸನ ದೊರಕುವುದು. ಸದಾ ಖುಷಿಯ ಟಾನಿಕ್ ತೆಗೆದುಕೊಳ್ಳುವಿರಿ ಮತ್ತು ಖುಷಿಯನ್ನು ಹಂಚುವಿರಿ. ಈ ಸಮಯದಲ್ಲಿ ನಿಶ್ಚಿಂತ ಚಕ್ರವರ್ತಿಗಳಾಗಿರುವಿರಿ. ಇಂತಹ ನಿಶ್ಚಿಂತ ಜೀವನ ಇಡೀ ಕಲ್ಪದಲ್ಲಿ ಬೇರೆ ಯಾವುದೇ ಯುಗದಲ್ಲಿ ಇರುವುದಿಲ್ಲ. ಸತ್ಯಯುಗದಲ್ಲಿ ನಿಶ್ಚಿಂತರಾಗಿರುವಿರಿ ಆದರೆ ಅಲ್ಲಿ ಜ್ಞಾನವಿರುವುದಿಲ್ಲ, ಈಗ ನಿಮಗೆ ಜ್ಞಾನವಿದೆ. ಆದ್ದರಿಂದ ಹೃದಯದಿಂದ ಹೊಮ್ಮುತ್ತದೆ ನನ್ನಂತಹ ಅದೃಷ್ಠಶಾಲಿ ಬೇರೆ ಯಾರೂ ಇಲ್ಲ.

ಸ್ಲೋಗನ್:
ಸಂಗಮಯುಗದ ಸ್ವರಾಜ್ಯ ಅಧಿಕಾರಿಯೇ ಭವಿಷ್ಯದ ವಿಶ್ವ ರಾಜ್ಯ ಅಧಿಕಾರಿಗಳಾಗುತ್ತಾರೆ.