05.01.25 Avyakt Bapdada
Kannada
Murli 17.10.2003 Om Shanti Madhuban
ಪೂರ್ಣ ವರ್ಷ
ಸಂತುಷ್ಟಮಣಿಯಾಗಿ ಸದಾ ಸಂತುಷ್ಟರಾಗಿ ಹಾಗೂ ಸರ್ವರನ್ನು ಸಂತುಷ್ಟ ಪಡಿಸಿ
ಇಂದು ಹೃದಯರಾಮ ಬಾಪ್ದಾದಾ
ತನ್ನ ಎಲ್ಲಾ ಕಡೆಯ, ಸಮ್ಮುಖದಲ್ಲಿರುವ ಹಾಗೂ ದೂರವಿದ್ದರೂ ಸಮೀಪ ಇರುವವರನ್ನು ಪ್ರತಿಯೊಬ್ಬ ರಾಜಾ
ಮಗು ಅತೀ ಪ್ರಿಯ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಪ್ರತಿಯೊಂದು ಮಗು ರಾಜನಾಗಿದೆ,
ಆದ್ದರಿಂದ ಪ್ರಿಯವಾಗಿದ್ದಾರೆ. ಈ ಪರಮಾತ್ಮನ ಪ್ರೀತಿ ವಿಶ್ವದಲ್ಲಿ ಕೆಲವು ಆತ್ಮಗಳಿಗಷ್ಟೇ
ಪ್ರಾಪ್ತಿಯಾಗುತ್ತದೆ. ಆದರೆ ತಾವೆಲ್ಲರೂ ಪರಮಾತ್ಮನ ಪ್ರೀತಿಗೆ ಅಧಿಕಾರಿಗಳಾಗಿದ್ದೀರಿ. ಪ್ರಪಂಚದ
ಆತ್ಮಗಳು ಬನ್ನಿ, ಬನ್ನಿ ಎಂದು ಕರೆಯುತ್ತಿದ್ದಾರೆ ಆದರೆ ತಾವೆಲ್ಲರೂ ಪರಮಾತ್ಮನ ಪ್ರೀತಿಯ ಅನುಭವ
ಮಾಡುತ್ತಿದ್ದೀರಿ. ಪರಮಾತ್ಮನ ಪಾಲನೆಯಲ್ಲಿ ಬೆಳೆಯುತ್ತಿದ್ದೀರಿ. ಈ ರೀತಿ ತಮ್ಮ ಭಾಗ್ಯದ ಅನುಭವ
ಮಾಡುತ್ತೀರಾ? ಮಾಡುತ್ತೀರಾ? ಬಾಪ್ದಾದಾ ಸರ್ವ ಡಬಲ್ ರಾಜ್ಯಾಧಿಕಾರಿ ಮಕ್ಕಳನ್ನು ನೋಡುತ್ತಿದ್ದಾರೆ.
ಈಗಲೂ ಸ್ವರಾಜ್ಯದ ಅಧಿಕಾರಿ ರಾಜರಾಗಿದ್ದೀರಿ ಹಾಗೂ ಭವಿಷ್ಯದಲ್ಲಿ ರಾಜ್ಯ ತಮ್ಮ ಜನ್ಮ ಸಿದ್ಧ
ಅಧಿಕಾರವಾಗಿದೆ ಅಂದಮೇಲೆ ಡಬಲ್ ರಾಜರಲ್ಲವೇ. ಎಲ್ಲರೂ ರಾಜರಲ್ಲವೇ, ಪ್ರಜೆಗಳಲ್ಲ. ರಾಜಯೋಗಿಗಳೋ
ಅಥವಾ ಕೆಲವರು ಪ್ರಜಾಯೋಗಿಗಳಾಗಿದ್ದೀರೋ? ಯಾರಾದರೂ ಪ್ರಜಾಯೋಗಿಗಳಿದ್ದೀರಾ, ಹಿಂದೆ ಇರುವವರು
ರಾಜಯೋಗಿಗಳಾಗಿದ್ದೀರಾ? ಯಾರೂ ಸಹ ಪ್ರಜಾಯೋಗಿಗಳು ಇಲ್ಲ ತಾನೇ. ಪಕ್ಕಾ? ಯೋಚನೆ ಮಾಡಿ ಹೌದು
ಎನ್ನಬೇಕು! ರಾಜ್ಯಾಧಿಕಾರಿ ಅರ್ಥಾತ್ ಸರ್ವ ಸೂಕ್ಷ್ಮ, ಸ್ಥೂಲ ಕಮೇರ್ಂದ್ರಿಯಗಳ ಅಧಿಕಾರಿಗಳು
ಏಕೆಂದರೆ ಸ್ವರಾಜ್ಯವಲ್ಲವೇ? ಅಂದಮೇಲೆ ಒಮ್ಮೊಮ್ಮೆ ರಾಜರಾಗುತ್ತೀರಾ ಅಥವಾ ಸದಾ ರಾಜರಾಗುತ್ತೀರೋ?
ಮೂಲವಾಗಿ ತಮ್ಮ ಮನ-ಬುದ್ಧಿ-ಸಂಸ್ಕಾರಗಳಿಗೂ ಸಹ ಅಧಿಕಾರಿಗಳಾಗಿದ್ದೀರಾ? ಸದಾ ಅಧಿಕಾರಿಗಳೋ ಅಥವಾ
ಕೆಲವೊಮ್ಮೆ ಮಾತ್ರ ಇದೆಯೋ? ಸ್ವ - ರಾಜ್ಯ ಅಂದಮೇಲೆ ಸದಾ ಸ್ವರಾಜ್ಯವಾಗಿರುತ್ತದೆಯೋ ಅಥವಾ ಒಂದು
ದಿನ ಇದು ಇನ್ನೊಂದು ದಿನ ಇರುವುದಿಲ್ಲ - ಈ ರೀತಿ ಇರುತ್ತದೆಯೇ? ರಾಜ್ಯ ಎಂದಮೇಲೆ ಸದಾ ಇರುತ್ತದೆ
ಅಲ್ಲವೇ? ಅಂದಮೇಲೆ ಸದಾ ಸ್ವರಾಜ್ಯಾಧಿಕಾರಿ ಅರ್ಥಾತ್ ಸದಾ ಮನ-ಬುದ್ಧಿ-ಸಂಸ್ಕಾರದ ಮೇಲೆ ಅಧಿಕಾರ.
ಸದಾ ಇದೆಯೇ? ಸದಾ ಎನ್ನುವುದರಲ್ಲಿ ಹೌದು ಎನ್ನುವುದಿಲ್ಲವೇ? ಕೆಲವೊಮ್ಮೆ ಮನಸ್ಸು ತಮ್ಮನ್ನು
ನಡೆಸುವುದೋ ಅಥವಾ ತಾವು ಮನಸ್ಸನ್ನು ನಡೆಸುತ್ತೀರೋ? ಕೆಲವೊಮ್ಮೆ ಮನಸ್ಸು ಮಾಲೀಕನಾಗುತ್ತದೆಯೇ?
ಆಗುತ್ತದೆಯಲ್ಲವೇ! ಅಂದಮೇಲೆ ಸದಾ ಸ್ವರಾಜ್ಯಾಧಿಕಾರಿಗಳೇ ವಿಶ್ವರಾಜ್ಯಾಧಿಕಾರಿಗಳು, ಸದಾ ಪರಿಶೀಲನೆ
ಮಾಡಿಕೊಳ್ಳಿ -ಎಷ್ಟು ಸಮಯ ಹಾಗೂ ಎಷ್ಟು ಶಕ್ತಿಯಿಂದ ತಮ್ಮ ಕಮೇರ್ಂದ್ರಿಯಗಳು,
ಮನ-ಬುದ್ಧಿ-ಸಂಸ್ಕಾರದ ಮೇಲೆ ಈಗ ಅಧಿಕಾರಿಗಳಾಗುತ್ತೀರೋ ಅಷ್ಟೇ ಭವಿಷ್ಯದಲ್ಲಿ ರಾಜ್ಯಾಧಿಕಾರವು
ಪ್ರಾಪ್ತಿ ಆಗುತ್ತದೆ. ಒಂದುವೇಳೆ ಈಗ ಪರಮಾತ್ಮನ ಪಾಲನೆ, ಪರಮಾತ್ಮನ ಶ್ರೀಮತದ ಆಧಾರದ ಮೇಲೆ ಈ ಒಂದು
ಸಂಗಮಯುಗದ ಜನ್ಮ ಸದಾ ಅಧಿಕಾರಿಗಳಾಗದಿದ್ದರೆ 21 ಜನ್ಮಗಳು ಹೇಗೆ ರಾಜ್ಯಾಧಿಕಾರಿಗಳಾಗುತ್ತೀರಿ?
ಲೆಕ್ಕವಿದೆ ಅಲ್ಲವೇ! ಈ ಸಮಯದ ಸ್ವರಾಜ್ಯ, ಸ್ವಯಂಗೆ ರಾಜರಾಗುವುದರಿಂದಲೇ 21 ಜನ್ಮದ ಗ್ಯಾರಂಟಿ ಇದೆ.
ನಾನು ಯಾರು ಮತ್ತು ಏನಾಗುತ್ತೇನೆ, ತಮ್ಮ ಭವಿಷ್ಯವನ್ನು ವರ್ತಮಾನದ ಅಧಿಕಾರದ ಮೂಲಕ ತಾವೇ
ತಿಳಿದುಕೊಳ್ಳಬಹುದು. ಯೋಚಿಸಿ, ತಾವು ವಿಶೇಷ ಆತ್ಮಗಳ ಅನಾದಿ ಆದಿ, ವ್ಯಕ್ತಿತ್ವ ಹಾಗೂ ಘನತೆ ಎಷ್ಟು
ಶ್ರೇಷ್ಠವಾಗಿದೆ. ಅನಾದಿ ರೂಪದಲ್ಲಿಯು ನೋಡಿ - ಯಾವಾಗ ತಾವು ಆತ್ಮಗಳು ಪರಮಧಾಮದಲ್ಲಿ ಇರುತ್ತೀರಿ
ಆಗ ಎಷ್ಟೊಂದು ಹೊಳೆಯುತ್ತಿರುವ ಆತ್ಮಗಳಾಗಿ ಕಾಣಿಸುತ್ತೀರಿ. ಆ ಹೊಳಪಿನ ಘನತೆ, ವ್ಯಕ್ತಿತ್ವ ಎಷ್ಟು
ದೊಡ್ಡದಿದೆ, ಕಾಣಿಸುತ್ತದೆಯೇ? ಹಾಗೂ ತಂದೆಯ ಜೊತೆ ಜೊತೆ ಆತ್ಮರೂಪದಲ್ಲಿ ಇರುತ್ತೀರಿ, ಸಮೀಪವೂ
ಇರುತ್ತೀರಿ. ಹೇಗೆ ಆಕಾಶದಲ್ಲಿ ಕೆಲವು-ಕೆಲವು ನಕ್ಷತ್ರಗಳು ಬಹಳ ಹೊಳೆಯುತ್ತಿರುತ್ತವೆಯಲ್ಲವೇ!
ಹಾಗೆಯೇ ತಾವು ಆತ್ಮಗಳೂ ಸಹ ವಿಶೇಷವಾಗಿ ತಂದೆಯ ಜೊತೆ ಹಾಗು ವಿಶೇಷವಾಗಿ ಹೊಳೆಯುತ್ತಿರುವಂತಹ
ನಕ್ಷತ್ರಗಳಾಗಿರುತ್ತೀರಿ. ಪರಮಧಾಮದಲ್ಲಿಯೂ ಸಹ ತಾವು ತಂದೆಯ ಸಮೀಪವಿದ್ದೀರಿ ಮತ್ತೆ ಆದಿ
ಸತ್ಯಯುಗದಲ್ಲಿಯೂ ಸಹ ತಾವು ದೇವಾತ್ಮಗಳ ವ್ಯಕ್ತಿತ್ವ ಹಾಗೂ ಘನತೆ ಎಷ್ಟು ಶ್ರೇಷ್ಠವಾಗಿದೆ. ಇಡೀ
ಕಲ್ಪದಲ್ಲಿ ನೋಡಿ ಧರ್ಮಾತ್ಮರು, ಮಹಾತ್ಮರು, ಧರ್ಮ ಪಿತರು, ನೇತಾರರು, ಯಾರೆಲ್ಲಾ ಇದ್ದು
ಹೋಗಿದ್ದಾರೆ ಅವರಾರಿಗೂ ತಾವು ಸತ್ಯಯುಗದಲ್ಲಿ ದೇವಾತ್ಮಗಳಿಗೆ ಇದ್ದಂತಹ ವ್ಯಕ್ತಿತ್ವ ಇಲ್ಲ. ತಮ್ಮ
ದೈವ ಸ್ವರೂಪ ಸಮ್ಮುಖದಲ್ಲಿ ಬರುತ್ತಿದೆಯಲ್ಲವೇ? ಬರುತ್ತಿದೆಯೋ ಅಥವಾ ನಾವು ಆಗುತ್ತೇವೆಯೋ ಅಥವಾ
ಇಲ್ಲವೋ. ಪಕ್ಕಾ ತಾನೇ! ಹಿಂದೆ ಇರುವವರು ಪಕ್ಕಾ? ತಮ್ಮ ದೇವ ಸ್ವರೂಪವನ್ನು ಮುಂದೆ ತನ್ನಿ ಮತ್ತು
ನೋಡಿ, ವ್ಯಕ್ತಿತ್ವ ಮುಂದೆ ಬಂತೇ? ಎಷ್ಟು ಘನತೆ ಇದೆ, ಪ್ರಕೃತಿಯೂ ಸಹ ವ್ಯಕ್ತಿತ್ವ
ಇರುವಂತಹದ್ದಾಗುತ್ತದೆ. ಪಕ್ಷಿ, ವೃಕ್ಷ, ಹೂವು, ಹಣ್ಣು ಎಲ್ಲವೂ ರಾಯಲ್. ಸರಿ ಮತ್ತೆ ಕೆಳಗೆ ಬನ್ನಿ,
ಅಂದಮೇಲೆ ತಮ್ಮ ಪೂಜ್ಯ ರೂಪವನ್ನು ನೋಡಿದ್ದೀರಾ. ತಮ್ಮ ಪೂಜೆ ಆಗುತ್ತದೆ. ಡಬಲ್ ವಿದೇಶಿಗಳು
ಪೂಜ್ಯರಾಗುತ್ತೀರೋ ಭಾರತದವರು ಆಗುತ್ತೀರೋ? ತಾವು ದೇವೀ-ದೇವತೆಗಳು ಆಗುತ್ತೀರಾ? ಸೊಂಡಿಲು ಇರುವ,
ಬಾಲ ಇರುವವರಲ್ಲ. ದೇವಿಯರೂ ಸಹ ಆ ಕಾಳಿ ರೂಪವಲ್ಲ ಆದರೆ ದೇವತೆಗಳ ಮಂದಿರದಲ್ಲಿ ನೋಡಿ, ತಮ್ಮ
ಪೂಜ್ಯ ಸ್ವರೂಪದ ಎಷ್ಟೊಂದು ಘನತೆ ಇದೆ. ಎಷ್ಟೊಂದು ವ್ಯಕ್ತಿತ್ವ ಇದೆ. 4 ಅಥವಾ 5 ಅಡಿಯ ಮೂರ್ತಿಗೆ
ಎಷ್ಟು ದೊಡ್ಡ ಮಂದಿರವನ್ನು ಮಾಡುತ್ತಾರೆ, ಇದು ಘನತೆ ಹಾಗೂ ವ್ಯಕ್ತಿತ್ವ ಆಗಿದೆ. ವರ್ತಮಾನದಲ್ಲಿ
ಪ್ರಧಾನಮಂತ್ರಿಯ ಅಥವಾ ರಾಜನ ಚಿತ್ರವನ್ನು ಮಾಡಿ ಬಿಸಿಲಿನಲ್ಲಿ ಇಡುತ್ತಾರೆ. ಆದರೆ ತಮ್ಮ ಪೂಜ್ಯ
ಸ್ವರೂಪದ ವ್ಯಕ್ತಿತ್ವ ಎಷ್ಟು ದೊಡ್ಡದಾಗಿದೆ. ತಮ್ಮದು ಹೆಚ್ಚಲ್ಲವೇ! ಕುಮಾರಿಯರು
ಕುಳಿತಿದ್ದೀರಲ್ಲವೇ. ತಮ್ಮದು ಘನತೆ ಇದೆಯಲ್ಲವೇ? ನಂತರ ಅಂತಿಮದಲ್ಲಿ ಸಂಗಮಯುಗದಲ್ಲಿಯೂ ಸಹ
ತಾವೆಲ್ಲರ ಘನತೆ ಎಷ್ಟು ಶ್ರೇಷ್ಠವಾಗಿದೆ. ಬ್ರಾಹ್ಮಣ ಜೀವನದ ವ್ಯಕ್ತಿತ್ವ ಎಷ್ಟು ದೊಡ್ಡದಾಗಿದೆ!
ಸ್ವಯಂ ಭಗವಂತನೇ ತಮ್ಮ ಬ್ರಾಹ್ಮಣ ಜೀವನದಲ್ಲಿ ವ್ಯಕ್ತಿತ್ವ ಹಾಗೂ ಘನತೆಯನ್ನು ತುಂಬಿದ್ದಾರೆ.
ಬ್ರಾಹ್ಮಣ ಜೀವನದ ಚಿತ್ರಕಾರ ಯಾರು? ಸ್ವಯಂ ತಂದೆ. ಬ್ರಾಹ್ಮಣ ಜೀವನದ ವ್ಯಕ್ತಿತ್ವ, ಘನತೆ ಯಾವುದು?
ಪವಿತ್ರತೆ. ಪವಿತ್ರತೆಯೇ ಘನತೆಯಾಗಿದೆ. ಹೌದಲ್ಲವೇ! ಬ್ರಾಹ್ಮಣ ಆತ್ಮಗಳು ಯಾರೆಲ್ಲಾ ಕುಳಿತಿದ್ದೀರೋ
ತಮ್ಮೆಲ್ಲರ ಪವಿತ್ರತೆಯೇ ಘನತೆಯಲ್ಲವೇ! ಹೌದು, ತಲೆ ಅಲುಗಾಡಿಸಿ. ಹಿಂದೆ ಇರುವವರು ಕೈ
ಎತ್ತುತ್ತಿದ್ದಾರೆ. ತಾವು ಹಿಂದೆ ಇಲ್ಲ, ಸಮ್ಮುಖದಲ್ಲಿ ಇದ್ದೀರಿ. ನೋಡಿ ದೃಷ್ಟಿ ಹಿಂದೆ
ಹೋಗುತ್ತದೆ. ಹಿಂದೆ ಸಹಜವಾಗಿ ದೃಷ್ಟಿ ಹೋಗುತ್ತದೆ.
ಅಂದಮೇಲೆ ಪರಿಶೀಲನೆ
ಮಾಡಿಕೊಳ್ಳಿ ಪವಿತ್ರತೆಯ ವ್ಯಕ್ತಿತ್ವ ಸದಾ ಇರುತ್ತದೆಯೇ? ಮನಸಾ-ವಾಚಾ-ಕರ್ಮಣಾ, ವೃತ್ತಿ, ದೃಷ್ಟಿ
ಹಾಗೂ ಕೃತಿ ಎಲ್ಲದರಲ್ಲಿಯೂ ಪವಿತ್ರತೆ ಇದೆಯೇ? ಮನಸಿನ ಪವಿತ್ರತೆ ಅಂದರೆ ಸದಾ ಹಾಗೂ ಸರ್ವರ ಪ್ರತಿ
ಶುಭಭಾವನೆ, ಶುಭಕಾಮನೆ - ಸರ್ವರ ಪ್ರರ್ತಿ. ಆ ಆತ್ಮ ಹೇಗೇ ಇರಲಿ ಆದರೆ ಪವಿತ್ರತೆಯ ಘನತೆಯ ಮನಸ್ಸು
ಎಂದರೆ ಸರ್ವರ ಪ್ರತಿ ಶುಭಭಾವನೆ, ಶುಭಕಾಮನೆ, ಕಲ್ಯಾಣದ ಭಾವನೆ, ದಯೆಯ ಭಾವನೆ, ದಾತಾತನದ ಭಾವನೆ.
ಹಾಗೂ ದೃಷ್ಟಿಯಲ್ಲಿ ಸದಾ ಹಾಗೂ ಪ್ರತಿಯೊಬ್ಬರ ಬಗ್ಗೆ ಆತ್ಮಿಕ ಸ್ವರೂಪ ಕಾಣಬೇಕು ಹಾಗೂ ಫರಿಶ್ತಾ
ರೂಪ ಕಾಣಿಸಬೇಕು. ಭಲೆ ಅವರ ಫರಿಸ್ಥೆಗಳು ಆಗಿಲ್ಲ ಆದರೆ ನನ್ನ ದೃಷ್ಟಿಯಲ್ಲಿ ಫರಿಶ್ತಾ ರೂಪ ಹಾಗೂ
ಆತ್ಮಿಕ ರೂಪವೇ ಇರಲಿ ಹಾಗೂ ಕೃತಿ ಎಂದರೆ ಅರ್ಥ ಸಂಬಂಧ-ಸಂಪರ್ಕದಲ್ಲಿ, ಕರ್ಮದಲ್ಲಿ ಬರಬೇಕು,
ಅದರಲ್ಲಿ ಸದಾ ಸರ್ವರ ಪ್ರತಿ ಸ್ನೇಹ ಕೊಡಬೇಕು, ಸುಖ ಕೊಡಬೇಕು. ಭಲೆ ಬೇರೆಯವರು ಸ್ನೇಹ ಕೊಡಲಿ,
ಕೊಡದೆ ಇದಲಿ ಆದರೆ ನನ್ನ ಕರ್ತವ್ಯವಾಗಿದೆ ಸ್ನೇಹ ಕೊಟ್ಟು ಸ್ನೇಹಿಗಳನ್ನಾಗಿ ಮಾಡುವುದು. ಸುಖ
ಕೊಡಬೇಕು. ಸ್ಲೋಗನ್ ಇದೆಯಲ್ಲವೇ - ದುಃಖ ಕೊಡಬೇಡಿ, ದುಃಖವನ್ನು ಪಡೆಯಬೇಡಿ. ಕೊಡಲೂಬಾರದು,
ಪಡೆಯಲೂಬಾರದು. ನೀಡುವವರು ತಮಗೆ ಕೆಲವೊಮ್ಮೆ ದುಃಖವೇ ಕೊಡಲಿ ಆದರೆ ತಾವು ಅವರನ್ನು ಸುಖದ
ಸ್ಕøತಿಯಿಂದಲೇ ನೋಡಿ. ಬಿದ್ದಿರುವವರನ್ನು ಬೀಳಿಸುವುದಲ್ಲ, ಬಿದ್ದಿರುವವರನ್ನು ಸದಾ
ಮೇಲೆತ್ತಲಾಗುತ್ತದೆ. ಅವರು ಪರವಶರಾಗಿ ದುಃಖ ಕೊಡುತ್ತಿದ್ದಾರೆ. ಬಿದ್ದು ಹೋಗಿದ್ದಾರಲ್ಲವೇ!
ಅಂದಮೇಲೆ ಅವರನ್ನು ಬೀಳಿಸಬಾರದು. ಇನ್ನಷ್ಟು ಹೊಡೆದು ಕೆಳಗೆ ಬೀಳಿಸುವುದಲ್ಲ. ಅವರನ್ನು
ಸ್ನೇಹದಿಂದ ಮೇಲೆತ್ತಿ. ಅದರಲ್ಲಿಯೂ ಸಹ ಮೊದಲು ನಮ್ಮಿಂದಲೇ ಪ್ರಾರಂಭವಾಗಬೇಕು. ತಮ್ಮ ಸರ್ವ
ಜೊತೆಗಾರರು, ಸೇವೆಯ ಜೊತೆಗಾರರು, ಬ್ರಾಹ್ಮಣ ಪರಿವಾರದ ಜೊತೆಗಾರರು ಪ್ರತಿಯೊಬ್ಬರನ್ನು ಮೇಲೆತ್ತಿ.
ಅವರು ತಮ್ಮ ಅವಗುಣವನ್ನೇ ತೋರಿಸಲಿ ಆದರೆ ತಾವು ಅವರ ವಿಶೇಷತೆಯನ್ನು ನೋಡಿ. ನಂಬರ್ವಾರ್ ಇದೆಯಲ್ಲವೇ!
ನೋಡಿ ನಿಮ್ಮ ನೆನಪಿನಾರ್ಥ ಮಾಲೆ ಇದೆ. ಎಲ್ಲರೂ ಒಂದೇ ನಂಬರ್ನವರು ಇಲ್ಲ ತಾನೇ! 108 ನಂಬರ್
ಇದೆಯಲ್ಲವೇ! ನಂಬರ್ವಾರ್ ಇದೆ ಹಾಗೂ ಇರುತ್ತಾರೆ ಆದರೆ ನನ್ನ ಕರ್ತವ್ಯವೇನು? ಇದನ್ನು ಯೋಚಿಸಬಾರದು
ಸರಿ ನಾನಂತೂ 8ರಲ್ಲಿ ಇಲ್ಲ. 108ರಲ್ಲಿ ಬರಬಹುದು ಅಂದಮೇಲೆ 108ರಲ್ಲಿಯೂ ಕೊನೆಯಲ್ಲಿ ಇರಬಹುದು,
ನನ್ನಲ್ಲಿ ಕೆಲವು ಸಂಸ್ಕಾರ ಇದೆಯಲ್ಲವೇ, ಆದರೆ ಇಲ್ಲ. ಅನ್ಯರಿಗೆ ಸುಖ ಕೊಡುತ್ತಾ-ಕೊಡುತ್ತಾ,
ಸ್ನೇಹ ಕೊಡುತ್ತಾ-ಕೊಡುತ್ತಾ ತಮ್ಮ ಸಂಸ್ಕಾರವೂ ಸಹ ಸ್ನೇಹಿ, ಸುಖ ಆಗಲೇಬೇಕು. ಇದು ಸೇವೆ ಆಗಿದೆ.
ಹಾಗೂ ಈ ಸೇವೆ ಮೊದಲು ನಿಮ್ಮಿಂದಲೇ ಪ್ರಾರಂಭವಾಗಬೇಕು...
ಬಾಪ್ದಾದಾರವರಿಗೆ ಇಂದು
ಒಂದು ಮಾತಿನ ಮೇಲೆ ನಗು ಬರುತ್ತಿತ್ತು, ಹೇಳುವುದೇ. ನೋಡಿ ನಿಮಗೂ ಸಹ ನಗು ಬರುತ್ತದೆ. ಬಾಪ್ದಾದಾ
ಮಕ್ಕಳ ಆಟವನ್ನು ನೋಡುತ್ತಿರುತ್ತಾರಲ್ಲವೇ! ಬಾಪ್ದಾದಾ ಒಂದು ಸೆಕೆಂಡಿನಲ್ಲಿ ಕೆಲವೊಮ್ಮೆ
ಯಾವುದಾದರೂ ಸೇವಾಕೇಂದ್ರದ ಟಿ.ವಿಯನ್ನು ತೆರೆಯುತ್ತಾರೆ. ಕೆಲವೊಮ್ಮೆ ಯಾವುದೋ ಸೇವಾಕೇಂದ್ರದ,
ಕೆಲವೊಮ್ಮೆ ವಿದೇಶದ, ಕೆಲವೊಮ್ಮೆ ಭಾರತದ ಸ್ವಿಚ್ ಆನ್ ಮಾಡುತ್ತಾರೆ. ಇವರು ಏನು ಮಾಡುತ್ತಿದ್ದಾರೆ
ಎಂದು ಗೊತ್ತಾಗಿಬಿಡುತ್ತದೆ ಏಕೆಂದರೆ ತಂದೆಗೆ ಮಕ್ಕಳ ಜೊತೆ ಪ್ರೀತಿ ಇದೆಯಲ್ಲವೇ. ಮಕ್ಕಳೂ ಸಹ
ಸಮಾನರಾಗಲೇಬೇಕು ಎಂದು ಹೇಳುತ್ತಾರೆ. ಪಕ್ಕಾ ತಾನೇ, ಸಮಾನರಾಗಲೇಬೇಕು. ಕುಮಾರಿಯರು ಸಮಾನರಾಗಬೇಕೇ
ಅಥವಾ ಡ್ರಾಮಾದಲ್ಲಿ ಏನಾದರೂ ಆಗಲಿ, ಅದೇ ಸರಿ! ಇಲ್ಲ. ಸಮಾನರಾಗಬೇಕು, ಎಲ್ಲಾ ಕುಮಾರಿಯರು
ಆಗಲೇಬೇಕು. ಸಾಯಬೇಕಾಗಿರಲಿ, ಏನೇ ಮಾಡ ಬೇಕಾಗಿರಲಿ. ಯೋಚಿಸಿ ಕೈ ಎತ್ತಿ. ಸಾಯಬೇಕಾಗುತ್ತದೆ,
ಬಾಗಬೇಕಾಗುತ್ತದೆ. ಸಹನೆ ಮಾಡಬೇಕಾಗುತ್ತದೆ, ಕೇಳಬೇಕಾಗುತ್ತದೆ ಎಂದೆಲ್ಲಾ ಯಾರು ತಿಳಿದು
ಕೊಂಡಿದ್ದೀರೋ ಅವರು ಕೈ ಎತ್ತಿ. ಕುಮಾರಿಯರು ಯೋಚಿಸಿ ಕೈ ಎತ್ತಬೇಕು. ಇವರ ಫೋಟೋ ತೆಗೆಯಿರಿ. ಬಹಳ
ಕುಮಾರಿಯರು ಇದ್ದಾರೆ. ಸಾಯ ಬೇಕಾಗುತ್ತದೆಯೇ? ಬಾಗಬೇಕಾಗುತ್ತದೆಯೇ? ಪಾಂಡವರು ಕೈ ಎತ್ತಿ.
ಕೇಳಿದಿರಾ ಸಮಾನರಾಗಲೇಬೇಕು. ಸಮಾನರಾಗದಿದ್ದರೆ ಮಜಾ ಬರುವುದಿಲ್ಲ. ಪರಮ ಧಾಮದಲ್ಲಿಯೂ ಸಹ ಸಮೀಪ
ಇರುವುದಿಲ್ಲ. ಪೂಜ್ಯ ಆಗುವುದರಲ್ಲಿಯೂ ವ್ಯತ್ಯಾಸ ಆಗಿಬಿಡುತ್ತದೆ, ಸತ್ಯಯುಗದ ರಾಜ್ಯಭಾಗ್ಯದಲ್ಲಿಯೂ
ವ್ಯತ್ಯಾಸ ಆಗಿಬಿಡುತ್ತದೆ. ಬ್ರಹ್ಮಾತಂದೆಯ ಜೊತೆ ತಮಗೆ ಪ್ರೀತಿ ಇದೆಯಲ್ಲವೇ, ಡಬಲ್ ವಿದೇಶಿಗಳಿಗೆ
ಎಲ್ಲರಿಗಿಂತ ಜಾಸ್ತಿ ಪ್ರೀತಿ. ಯಾರಿಗೆ ಬ್ರಹ್ಮಾ ತಂದೆಯ ಜೊತೆ ಅಂತರಾಳದ ಅಪಾರ ಪ್ರೀತಿ ಇದೆ ಅವರು
ಕೈ ಎತ್ತಿ. ಡಬಲ್ ವಿದೇಶಿಗಳಿಗೆ ಅಂತರಾಳ ಪ್ರೀತಿ ಇದೆಯೇ? ಒಳ್ಳೆಯದು. ಪಕ್ಕಾ ಪ್ರೀತಿ ಇದೆಯಲ್ಲವೇ?
ಈಗ ಪ್ರಶ್ನೆ ಕೇಳುತ್ತಾರೆ, ಯಾರ ಜೊತೆ ಪ್ರೀತಿ ಇರುತ್ತದೆಯೋ ಆ ಪ್ರೀತಿಯ ಲಕ್ಷಣ ಅವರಿಗೆ ಯಾವುದು
ಇಷ್ಟವಾಗುತ್ತದೆಯೋ ಅದು ಪ್ರೀತಿ ಮಾಡುವವರಿಗೂ ಸಹ ಇಷ್ಟವಾಗುತ್ತದೆ. ಇಬ್ಬರ
ಸಂಸ್ಕಾರ-ಸಂಕಲ್ಪ-ಸ್ವಭಾವ ಹೊಂದಿಕೊಂಡರೆ ಆಗ ಅವರು ಪ್ರಿಯರಾಗುತ್ತಾರೆ. ಅಂದಮೇಲೆ ಬ್ರಹ್ಮಾತಂದೆಯ
ಜೊತೆ ಪ್ರೀತಿ ಇದೆ ಎಂದರೆ 21 ಜನ್ಮ, ಮೊದಲ ಜನ್ಮದಿಂದಲೂ, ಎರಡು-ಮೂರನೆಯದರಲ್ಲಿ ಬಂದರೆ
ಚೆನ್ನಾಗಿರುವುದಿಲ್ಲ. ಆದರೆ ಮೊದಲ ಜನ್ಮದಿಂದ ಕೊನೆಯ ಜನ್ಮದ ತನಕ ಜೊತೆಯಲ್ಲಿಯೇ ಇರುತ್ತಾರೆ.
ಭಿನ್ನ-ಭಿನ್ನ ರೂಪದಲ್ಲಿ ಜೊತೆಯಲ್ಲಿ ಇರುತ್ತಾರೆ. ಅಂದಮೇಲೆ ಜೊತೆಯಲ್ಲಿ ಯಾರು ಇರಲು ಸಾಧ್ಯ?
ಸಮಾನರಾಗುವಂತಹವರು. ಅವರು ನಂಬರ್ವನ್ ಆತ್ಮ ಅಂದಮೇಲೆ ಜೊತೆಯಲ್ಲಿ ಹೇಗೆ ಇರುತ್ತೀರಿ? ನಂಬರ್ವನ್
ಆದಾಗಲೇ ಜೊತೆ ಇರುತ್ತೀರಿ, ಎಲ್ಲದರಲ್ಲೂ ನಂಬರ್ವನ್. ಮನಸ್ಸಿನಲ್ಲಿ, ವಚನದಲ್ಲಿ, ಕರ್ಮದಲ್ಲಿ,
ವೃತ್ತಿಯಲ್ಲಿ, ದೃಷ್ಟಿಯಲ್ಲಿ, ಕೃತಿಯಲ್ಲಿ, ಎಲ್ಲದರಲ್ಲಿ. ಅಂದಮೇಲೆ ನಂಬರ್ವನ್ ಆಗಿದ್ದೀರೋ ಅಥವಾ
ನಂರ್ಬವಾರ್ ಆಗಿದ್ದೀರೋ? ಒಂದುವೇಳೆ ಪ್ರೀತಿ ಇದ್ದರೆ ಪ್ರೀತಿಗಾಗಿ ಏನೇ ಅರ್ಪಣೆ ಮಾಡಬೇಕಾಗಿರಲಿ
ಕಷ್ಟವಾಗುವುದಿಲ್ಲ. ಅಂತಿಮ ಜನ್ಮ, ಕಲಿಯುಗ ಅಂತಿಮದಲ್ಲಿಯೂ ಸಹ ದೇಹಾಭಿಮಾನದ ಪ್ರೀತಿ ಇರುವವರು
ಪ್ರಾಣವನ್ನೇ ಬೇಕಾದರೂ ಅರ್ಪಣೆ ಮಾಡುತ್ತಾರೆ ಅಂದಮೇಲೆ ತಾವು ಒಂದುವೇಳೆ ಬ್ರಹ್ಮಾಬಾಬಾನ
ಪ್ರೀತಿಯಲ್ಲಿ ತಮ್ಮ ಸಂಸ್ಕಾರವನ್ನು ಪರಿವರ್ತನೆ ಮಾಡಿಕೊಂಡರೆ ಅದೇನು ದೊಡ್ಡ ವಿಚಾರ! ದೊಡ್ಡ
ವಿಚಾರವೇನು? ಇಲ್ಲ ಅಂದಮೇಲೆ ಇಂದಿನಿಂದ ಎಲ್ಲರ ಸಂಸ್ಕಾರ ಪರಿವರ್ತನೆ ಆಯಿತು! ಪಕ್ಕಾ? ರಿಪೋರ್ಟ್
ಬರುತ್ತದೆ, ತಮ್ಮ ಜೊತೆಯವರು ಬರೆಯುತ್ತಾರೆ, ಪಕ್ಕಾ? ದಾದಿಯರೇ ಕೇಳುತ್ತಿದ್ದೀರಾ? ಸಂಸ್ಕಾರ
ಬದಲಾಯಿತು ಎಂದು ಹೇಳುತ್ತಾರೆ. ಅಥವಾ ಸಮಯ ಹಿಡಿಸುತ್ತದೆಯೋ? ಏನು? ಮೋಹಿನಿ ಹೇಳು
ಬದಲಾಗುತ್ತಾರಲ್ಲವೇ? ಇವರೆಲ್ಲರೂ ಪರಿವರ್ತನೆ ಆಗುತ್ತಾರಲ್ಲವೇ. ಅಮೆರಿಕಾದವರಂತೂ ಪರಿವರ್ತನೆ
ಆಗುತ್ತಾರೆ. ನಗುವಿನ ಮಾತು ಹಾಗೆಯೇ ಉಳಿದು ಹೋಯಿತು.
ನಗುವಿನ ಮಾತು ಇದಾಗಿದೆ,
ಎಲ್ಲರೂ ಹೇಳುತ್ತಾರೆ ಪುರುಷಾರ್ಥವನ್ನೂ ಬಹಳ ಮಾಡುತ್ತಾರೆ, ಬಾಪ್ದಾದಾರವರಿಗೂ ಸಹ ನೋಡಿ ಬಹಳ
ಪುರುಷಾರ್ಥ ಮಾಡುತ್ತಾರೆಂದು ದಯೆ ಬರುತ್ತದೆ, ಕೆಲವೊಮ್ಮೆ ಬಹಳ ಕಷ್ಟ ಪಡುತ್ತಾರೆ ಮತ್ತೆ ಏನು
ಹೇಳುತ್ತಾರೆ - ಏನು ಮಾಡುವುದು ನನ್ನ ಸಂಸ್ಕಾರವೇ ಹಾಗಿದೆ. ಸಂಸ್ಕಾರದ ಮೇಲೆ ಹೇಳಿ ತಮ್ಮನ್ನು
ಹಗುರ ಮಾಡಿಕೊಳ್ಳುತ್ತಾರೆ. ಆದರೆ ಬಾಪ್ದಾದಾ ಇಂದು ನೋಡಿದರು ನನ್ನ ಸಂಸ್ಕಾರ ಎಂದು ತಾವು
ಹೇಳುತ್ತೀರಿ, ಏನು ಇದು ತಮ್ಮ ಸಂಸ್ಕಾರವೇ? ತಾವು ಆತ್ಮವಾಗಿದ್ದೀರಿ, ಆತ್ಮವಲ್ಲವೇ! ದೇಹವಂತೂ
ಅಲ್ಲ ತಾನೇ! ಅಂದಮೇಲೆ ಆತ್ಮದ ಸಂಸ್ಕಾರವೇನು? ತಮ್ಮ ಸಂಸ್ಕಾರವೇನು? ಆತ್ಮದ ನಿಜ ಸಂಸ್ಕಾರವೇನು?
ಯಾವುದನ್ನು ತಾವು ಇಂದು ನನ್ನದು ಎಂದು ಹೇಳುತ್ತೀರಿ ಅದು ತನ್ನದೋ ಅಥವಾ ರಾವಣನದೋ? ಯಾರದು?
ತಮ್ಮದೇನು, ಅಲ್ಲವೇ? ಅಂದಮೇಲೆ ನನ್ನದು ಎಂದು ಏಕೆ ಹೇಳುತ್ತೀರಿ, ಹಾಗೆಯೇ ನನ್ನ ಸಂಸ್ಕಾರ ಹಾಗಿದೆ
ಎಂದು ತಾವೇ ಹೇಳುತ್ತೀರಿ. ಇಂದಿನಿಂದ ನನ್ನ ಸಂಸ್ಕಾರ ಎಂದು ಹೇಳಬಾರದು. ಇಲ್ಲ. ಎಲ್ಲಾ ಕಡೆಯಿಂದ
ಕಸ ಹಾರಿಕೊಂಡು ಕೆಲವೊಮ್ಮೆ ಬಂದುಬಿಡುತ್ತದೆ ಅಂದಮೇಲೆ ಇದು ರಾವಣನ ವಸ್ತು ಬಂದುಬಿಟ್ಟಿದೆ ಅದನ್ನು
ನನ್ನದು ಎಂದು ಹೇಗೆ ಹೇಳುತ್ತೀರಿ? ನನ್ನದೇನು? ಇಲ್ಲ ತಾನೇ? ಅಂದಮೇಲೆ ಇನ್ನೆಂದೂ ಹೇಳಬಾರದು,
ಯಾವಾಗ ನನ್ನದು ಎಂಬ ಶಬ್ದ ಹೇಳುತ್ತೀರಿ ಆಗ ನೆನಪು ಮಾಡಿಕೊಳ್ಳಿ - ನಾನು ಯಾರು ಹಾಗೂ ನನ್ನ
ಸಂಸ್ಕಾರ ಏನು? ದೇಹಾಭಿಮಾನದಲ್ಲಿ ನನ್ನ ಸಂಸ್ಕಾರ, ಆತ್ಮಾಭಿಮಾನಿಯಲ್ಲಿ ಈ ಸಂಸ್ಕಾರ ಇಲ್ಲ ಅಂದಮೇಲೆ
ಈಗ ಈ ಭಾಷೆಯನ್ನೂ ಸಹ ಪರಿವರ್ತನೆ ಮಾಡಿಕೊಳ್ಳಬೇಕು. ನನ್ನ ಸಂಸ್ಕಾರ ಎಂದು ಹೇಳಿ
ಹುಡುಗಾಟಿಕೆಯವರಾಗುತ್ತೀರಿ. ಭಾವವಿರಲಿಲ್ಲ ಸಂಸ್ಕಾರ ಎಂದು ಹೇಳುತ್ತೀರಿ. ಸರಿ ಇನ್ನೊಂದು ಶಬ್ದ
ಏನು ಹೇಳುತ್ತೀರಿ? ನನ್ನ ಸ್ವಭಾವ. ಈಗ ಸ್ವಭಾವ ಎನ್ನುವ ಶಬ್ದ ಎಷ್ಟು ಚೆನ್ನಾಗಿದೆ. ಸ್ವ ಎಂದರೆ
ಸದಾ ಚೆನ್ನಾಗಿರುತ್ತದೆ. ನನ್ನ ಸ್ವಭಾವ, ಸ್ವಯಂನ ಭಾವ ಒಳ್ಳೆಯದಾಗಿರುತ್ತದೆ, ಕೆಟ್ಟದಾಗಿ
ಇರುವುದಿಲ್ಲ. ಅಂದಮೇಲೆ ನನ್ನ ಸ್ವಭಾವ, ನನ್ನ ಸಂಸ್ಕಾರ ಯಾವ ಶಬ್ದವನ್ನು ಉಪಯೋಗಿಸುತ್ತೀರಿ ಆ
ಭಾಷೆಯನ್ನು ಪರಿವರ್ತನೆ ಮಾಡಿಕೊಳ್ಳಿ, ನನ್ನ ಎಂಬ ಶಬ್ದವನ್ನು ಯಾವಾಗ ಉಪಯೋಗಿಸಿದರೂ ನನ್ನ ನಿಜ
ಸಂಸ್ಕಾರ ಯಾವುದು? ಇದನ್ನು ಯಾರು ಹೇಳುತ್ತಾರೆ? ಇದು ನನ್ನ ಸಂಸ್ಕಾರ ಎಂದು ಆತ್ಮ ಹೇಳುತ್ತದೆಯೇ?
ಯಾವಾಗ ಇದನ್ನು ಯೋಚಿಸುತ್ತೀರಿ ಆಗ ತಮ್ಮ ಮೇಲೆ ನಗು ಬರುತ್ತದೆ, ನಗು ಬರುತ್ತದೆಯಲ್ಲವೇ. ನಗು
ಬಂದಾಗ ಯಾವ ಹೆಚ್ಚು-ಕಡಿಮೆ ಮಾಡುತ್ತೀರೋ ಅದು ಸಮಾಪ್ತಿ ಆಗುತ್ತದೆ. ಇದಕ್ಕೆ ಹೇಳುತ್ತಾರೆ ಭಾಷೆಯ
ಪರಿವರ್ತನೆ ಮಾಡಿಕೊಳ್ಳುವುದು ಅಂದರೆ ಅರ್ಥ ಪ್ರತಿಯೊಂದು ಆತ್ಮದ ಬಗ್ಗೆ ಸ್ವಮಾನ ಹಾಗೂ
ಸಮ್ಮಾನದಲ್ಲಿ ಇರುವುದು. ಸ್ವಯಂ ಸದಾ ಸ್ವಮಾನದಲ್ಲಿ ಇರಿ. ಅನ್ಯರನ್ನೂ ಸಹ ಸ್ವಮಾನದಿಂದ ನೋಡಿ
ಸ್ವಮಾನದಿಂದ ನೋಡಿದಾಗ ಯಾವುದೇ ಮಾತು ಬಂದರೆ, ಅದು ತಮಗೆ ಇಷ್ಟವಿಲ್ಲ, ಎಂದಾದರೂ ಯಾವುದೇ ಹೆಚ್ಚು
ಕಡಿಮೆಯಾದರೆ ತಮಗೆ ಇಷ್ಟವಾಗುತ್ತದೆಯೇ? ಇಷ್ಟವಾಗುವುದಿಲ್ಲ ಅಲ್ಲವೇ? ಅಂದಾಗ ಒಬ್ಬರಿನ್ನೊಬ್ಬರನ್ನು
ನೋಡಿದರೂ ಸ್ವಮಾನದಿಂದ ನೋಡಿ. ಇವರು ವಿಶೇಷ ಆತ್ಮನಾಗಿದ್ದಾರೆ. ಇವರು ತಂದೆಯ ಪಾಲನೆಯನ್ನು
ಪಡೆಯುತ್ತಿರುವ ಬ್ರಾಹ್ಮಣ ಆತ್ಮನಾಗಿದ್ದಾರೆ. ಇವರು ಕೋಟಿಯಲ್ಲಿಯೂ ಕೆಲವರು, ಕೆಲವರಲ್ಲಿಯೇ
ಕೆಲವರಾದ ಆತ್ಮನಾಗಿದ್ದಾರೆ. ಕೇವಲ ಒಂದು ಮಾತನ್ನಾಡಿ ಆದರೆ ತಮ್ಮ ನಯನಗಳಲ್ಲಿ ಬಿಂದುವನ್ನು
ಸಮಾವೇಶ ಮಾಡಿಕೊಳ್ಳಿ ಸಾಕು. ಒಂದು ಬಿಂದುವಿನಿಂದಂತೂ (ಆತ್ಮ) ನೋಡುತ್ತೀರಿ, ಇನ್ನೊಂದು
ಬಿಂದುವನ್ನು ಸಮಾವೇಶ ಮಾಡಿಕೊಂಡಾಗ ಏನೂ ಆಗುವುದಿಲ್ಲ ಅಂದರೆ ಪರಿಶ್ರಮಪಡಬೇಕಾಗುವುದಿಲ್ಲ. ಹೇಗೆ
ಆತ್ಮವು ಆತ್ಮವನ್ನು ನೋಡುತ್ತಿದೆ, ಆತ್ಮವು ಆತ್ಮದೊಂದಿಗೆ ಮಾತನಾಡುತ್ತಿದೆ, ಹೀಗೆ ಆತ್ಮಿಕ ವೃತ್ತಿ,
ಆತ್ಮಿಕ ದೃಷ್ಟಿ ಮಾಡಿಕೊಳ್ಳಿ. ಏನು ಮಾಡಬೇಕೆಂದು ತಿಳಿಯಿತೆ? ಇನ್ನು ಮುಂದೆ ಎಂದೂ ಸಹ ನನ್ನ
ಸಂಸ್ಕಾರವೆಂದು ಹೇಳಬಾರದು. ಸ್ವಭಾವವೆಂದು ಹೇಳುತ್ತೀರೆಂದರೂ ಸಹ ಸ್ವಯಂನ ಭಾವದಲ್ಲಿರಬೇಕು. ಸರಿಯೇ?
ಬಾಪ್ದಾದಾರವರು ಈ
ಸೀಜನ್ನಿನ ಮೊದಲ ಟರ್ನ್ನಲ್ಲಿ, ಮೊದಲ ಟನರ್ಂತೂ ತಮ್ಮೆಲ್ಲರದೂ ಆಗಿದೆಯಲ್ಲವೆ. ಅಂದಮೇಲೆ ಯಾವಾಗ
ಮೊದಲ ಟರ್ನ್ ಪಡೆದುಕೊಂಡಿದ್ದೀರೆಂದರೆ ಮೊದಲ ನಂಬರಿನ ರಿಟರ್ನ್ ಅಂದರೆ ಪ್ರತಿಯಾಗಿ
ಕೊಡಬೇಕಾಗುತ್ತದೆಯಲ್ಲವೆ! ಮತ್ತು ಡಬಲ್ ವಿದೇಶಿಯರ ಈ ವಿಶೇಷತೆಯಂತೂ ಜನ್ಮತಃ ಬಂದಿದೆ. ಏನೇ
ಮಾಡುತ್ತಾರೆಂದರೆ ಅದು ಪೂರ್ಣ ಆಗಿಯೇ ಮಾಡುತ್ತಾರೆ, ಅಧರ್ಂಬರ್ಧ ಮಾಡುವುದಿಲ್ಲ. ಹೌದೋ ಅಥವಾ
ಅಲ್ಲವೋ ಎಂಬುದರ ಮಧ್ಯೆ ಸಿಲುಕಿಹಾಕಿಕೊಳ್ಳುವುದಿಲ್ಲ ಅಂದಮೇಲೆ ಮೊದಲು ಟರ್ನಿಗೆ ರಿಟರ್ನ್
ಕೊಡಬೇಕಲ್ಲವೆ! ಈ ಸೀಜನ್ನಿನಲ್ಲಿ ಅಂದರೆ ಪೂರ್ಣ ಸೀಜûನ್ನಲ್ಲಿ ಇಂದಿನಿಂದ ಮೊದಲ ಅವಕಾಶವಿದೆ.
ಬಾಪ್ದಾದಾರವರು ಇದನ್ನೇ ಬಯಸುತ್ತಾರೆ - ಈ ಪೂರ್ಣ ವರ್ಷದಲ್ಲಿ ಭಲೆ 6 ತಿಂಗಳೇ ನಡೆಯಬಹುದು ಆದರೆ
ಪೂರ್ಣ ವರ್ಷದಲ್ಲಿ ಎಲ್ಲರೂ ಯಾವಾಗಲೇ ಮಿಲನ ಮಾಡುತ್ತೀರಿ. ಯಾರೊಂದಿಗೇ ಮಿಲನ ಮಾಡುತ್ತೀರಿ. ಭಲೆ
ಪರಸ್ಪರವಾಗಿರಬಹುದು, ಅನ್ಯ ಆತ್ಯಗಳೊಂದಿಗೆ ಇರಬಹುದು. ಯಾವಾಗಲೇ ಯಾರೊಂದಿಗೇ ಮಿಲನ
ಮಾಡುತ್ತಿರೇಂದರೆ ಅವರಿಗೆ ಸಂತುಷ್ಟತೆಯ ಸಹಯೋಗ ನೀಡಿ, ತಾವೂ ಸಂತುಷ್ಟರಾಗಿ, ಅನ್ಯರನ್ನೂ
ಸಂತುಷ್ಟರನ್ನಾಗಿ ಮಾಡಿ. ಈ ಸೀಜನ್ನಿನ ಸ್ವಮಾನವಾಗಿದೆ - ಸಂತುಷ್ಟಮಣಿ, ಸದಾ ಸಂತುಷ್ಟ ಮಣಿಗಳು.
ಸಹೋದರರೂ ಸಹ ಮಣಿಗಳಾಗಿದ್ದೀರಿ. ಮಣಗಳಲ್ಲಿ ಮಣಿಗಳು. ಒಂದೊಂದು ಆತ್ಮವು ಪ್ರತಿಯೊಂದು ಸಮಯದಲ್ಲಿ
ಸಂತುಷ್ಟಮಣಿಯಾಗಿದೆ ಮತ್ತು ಸ್ವಯಂ ಸಂತುಷ್ಟರಾಗಿರುತ್ತೀರೆಂದರೆ ಅನ್ಯರನ್ನೂ ಸಂತುಷ್ಟರನ್ನಾಗಿ
ಮಾಡುತ್ತೀರಿ. ತಾವು ಸಂತುಷ್ಟರಾಗಬೇಕು, ಸಂತುಷ್ಟರನ್ನಾಗಿ ಮಾಡಬೇಕು ಸರಿಯೆ? ಇಷ್ಟವಿದೆಯೇ?
ಕುಮಾರಿಯರಿಗೆ ಇಷ್ಟವಿದೆಯೆ? ಯಾರಿಗೆ ಇಷ್ಟವಿದೆಯೋ ಅವರು ಮಾಡುವರು. ಕೇವಲ ಕೇಳುವುದರಲ್ಲಿ
ಇಷ್ಟವಲ್ಲ, ಮಾಡುವುದರಲ್ಲಿ ಯಾರಿಗೆ ಇಷ್ಟವಿದೆಯೋ ಅವರೆಲ್ಲರೂ ಕೈಯೆತ್ತಿರಿ. ಎಲ್ಲರೂ
ಕೈಯೆತ್ತಿರುವುದನ್ನು ನೋಡಿ ಬಾಪ್ದಾದಾರವರು ಖುಷಿಯಾಗಿಬಿಟ್ಟರು. ಬಹಳ ಒಳ್ಳೆಯದು, ಶುಭಾಷಯಗಳು,
ಶುಭಾಷಯಗಳು. ಏನೇ ಆಗಿಬಿಡಲಿ ತಮ್ಮ ಸ್ವಮಾನದ ಆಸನದ ಮೇಲೆ ಸ್ಥಿತರಾಗಿರಿ, ಅಲೆದಾಡಬೇಡಿ. ಒಮ್ಮೆ
ಒಂದು ಆಸನದ ಮೇಲೆ, ಇನ್ನೊಮ್ಮೆ ಇನ್ನೊಂದು ಆಸನದ ಮೇಲೆ ಕುಳಿತುಕೊಳ್ಳುವುದಲ್ಲ. ತಮ್ಮ ಸ್ವಮಾನದ
ಅಸನದ ಮೇಲೆ ಏಕಾಗ್ರವಾಗಿರಿ ಮತ್ತು ಏಕಾಗ್ರ ಆಸನದ ಮೇಲೆ ಸ್ಥಿತರಾಗಿ. ಒಂದುವೇಳೆ ಯಾವುದೇ ಮಾತು
ಬರುತ್ತದೆಯೆಂದರೆ ಅದನ್ನು ಕಾರ್ಟೂನ್ ಶೋನ ರೂಪದಲ್ಲಿ ನೋಡಿ, ಕಾರ್ಟೂನ್ ಶೋ ನೋಡಲು
ಚೆನ್ನಾಗಿರುತ್ತದೆಯಲ್ಲವೆ. ಅಂದಮೇಲೆ ಇದು ಸಮಸ್ಯೆಯಲ್ಲ, ಕಾರ್ಟೂನ್ ಶೋ ನಡೆಯುತ್ತಿದೆ ಎಂದು
ತಿಳಿಯಿರಿ. ಯಾವುದೇ ಹುಲಿ ಬರುತ್ತದೆ, ಮೇಕೆ ಬರುತ್ತದೆ, ಚೇಳು ಬರುತ್ತದೆ, ಕೊಳಕು ಹಲ್ಲಿಯೂ ಬರಲಿ
- ಇದು ಕೊಳಕು ಕಾರ್ಟೂನ್ ಶೋ ಆಗಿದೆ, ಆದರೆ ತಮ್ಮ ಆಸನದಿಂದ ಇಳಿಯಬೇಡಿ ಆಗ ಮಜಾ ಇರುವುದು.
ನಾಲ್ಕೂ ಕಡೆಯ ಪ್ರೀತಿಯ
ಮಕ್ಕಳಿಗೆ, ಸರ್ವಸ್ನೇಹಿ, ಸಹಯೋಗಿ, ಸಮಾನರಾಗುವ ಮಕ್ಕಳಿಗೆ ಸದಾ ತಮ್ಮ ಶ್ರೇಷ್ಠ ಸ್ವ-ಭಾವ ಮತ್ತು
ಸಂಸ್ಕಾರವನ್ನು ಸ್ವರೂಪದಲ್ಲಿ ಇಮರ್ಜ್ ಮಾಡುವ ಮಕ್ಕಳಿಗೆ, ಸದಾ ಸುಖ ನೀಡುವ, ಸರ್ವರಿಗೆ
ಸ್ನೇಹವನ್ನು ಕೊಡುವ ಮಕ್ಕಳಿಗೆ, ಸದಾ ಸಂತುಷ್ಟಮಣಿಗಳಾಗಿ, ಸದಾ ಸಂತುಷ್ಟತೆಯ ಕಿರಣಗಳನ್ನು
ಹರಡಿಸುವಂತಹ ಮಕ್ಕಳಿಗೆ ನೆನಪು, ಪ್ರೀತಿ ಹಾಗೂ ನಮಸ್ತೆ.
ವರದಾನ:
ಶುಭಚಿಂತನೆ
ಮತ್ತು ಶುಭಚಿಂತಕ ಸ್ಥಿತಿಯ ಅನುಭವದ ಮೂಲಕ ಬ್ರಹ್ಮಾ ತಂದೆಯ ಸಮಾನ ಮಾಸ್ಟರ್ ದಾತಾ ಭವ
ಬ್ರಹ್ಮಾ ತಂದೆಯ ಸಮಾನ
ಮಾಸ್ಟರ್ ದಾತಾರಾಗುವುದಕ್ಕಾಗಿ ಈರ್ಷ್ಯೆ, ತಿರಸ್ಕಾರ ಮತ್ತು ಅವಹೇಳನ – ಈ ಮೂರು ಮಾತುಗಳಿಂದ
ಮುಕ್ತರಾಗಿ ಸರ್ವರ ಪ್ರತಿ ಶುಭಚಿಂತಕರಾಗಿ ಮತ್ತು ಶುಭಚಿಂತನೆ ಸ್ಥಿತಿಯ ಅನುಭವ ಮಾಡಿ ಏಕೆಂದರೆ
ಯಾರಲ್ಲಿ ಈರ್ಷ್ಯೆಯ ಅಗ್ನಿ ಇರುತ್ತದೆ ಅವರು ಸ್ವಯಂ ಸುಟ್ಟು ಹೋಗುತ್ತಾರೆ, ಬೇರೆಯವರಿಗೆ ತೊಂದರೆ
ಕೊಡುತ್ತಾರೆ, ತಿರಸ್ಕಾರದವರು ಸ್ವಯಂ ಬೀಳುತ್ತಾರೆ ಅನ್ಯರನ್ನೂ ಬೀಳಿಸುತ್ತಾರೆ ಮತ್ತು
ನಗುವುದರಲ್ಲಿಯೂ ಅವಹೇಳನ ಮಾಡುವವರು, ಆತ್ಮವನ್ನು ಸಾಹಸಹೀನ ದುಃಖಿಯನ್ನಾಗಿ ಮಾಡುತ್ತಾರೆ ಇದಕ್ಕಾಗಿ
ಈ ಮೂರು ಮಾತುಗಳಿಂದ ಮುಕ್ತರಾಗಿ ಶುಭಚಿಂತಕ ಸ್ಥಿತಿಯ ಅನುಭವ ಮೂಲಕ ದಾತಾನ ಮಕ್ಕಳು ಮಾಸ್ಟರ್
ದಾತಾರಾಗಿ.
ಸ್ಲೋಗನ್:
ಮನಸ್ಸು-ಬುದ್ಧಿ
ಮತ್ತು ಸಂಸ್ಕಾರಗಳ ಮೇಲೆ ಸಂಪೂರ್ಣ ರಾಜ್ಯ ಮಾಡುವವಂತಹ ಸ್ವರಾಜ್ಯ ಅಧಿಕಾರಿಗಳಾಗಿ.
ತಮ್ಮ ಶಕ್ತಿಶಾಲಿ ಮನಸ್ಸಾ
ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ
ನೀವು ಬ್ರಾಹ್ಮಣ ಮಕ್ಕಳು
ಬುಡವಾಗಿದ್ದೀರಿ. ಬುಡದಿಂದ ಇಡೀ ವೃಕ್ಷವನ್ನು ಸಕಾಶ ತಲುಪುತ್ತದೆ. ಈಗ ವಿಶ್ವಕ್ಕೆ ಸಕಾಶ
ಕೊಡವವರಾಗಿದ್ದೀರಿ. ಒಂದುವೇಳೆ 20 ಸೆಂಟರ್, 30 ಸೆಂಟರ್ ಅಥವಾ ಇನ್ನೂರೈವತ್ತು ಅಥವಾ ಜೋನ್, ಇದು
ಬುದ್ಧಿಯಲ್ಲಿದ್ದರೆ ಬೇಹದ್ದಿನಲ್ಲಿ ಸಕಾಶ ಕೊಡಲು ಸಾಧ್ಯವಿಲ್ಲ ಇದಕ್ಕಾಗಿ ಹದ್ದಿನಿಂದ ಹೊರಬಂದು
ಈಗ ಬೇಹದ್ದಿನ ಸೇವೆಯ ಪಾತ್ರ ಆರಂಭ ಮಾಡಿ. ಬೇಹದ್ದಿನಲ್ಲಿ ಹೋಗುವುದರಿಂದ ಹದ್ದಿನ ಮಾತುಗಳು
ಸ್ವತಃವಾಗಿ ಬಿಟ್ಟು ಹೋಗುತ್ತದೆ. ಬೇಹದ್ದಿನ ಸಕಾಶದಿಂದ ಪರಿವರ್ತನೆಯಾಗುತ್ತದೆ – ಇದು ಫಾಸ್ಟ್
ಸೇವೆಯ ಫಲಿತಾಂಶವಾಗಿದೆ.