05.03.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಖುಷಿಯಂತಹ ಟಾನಿಕ್ ಇಲ್ಲ, ನೀವು ಖುಷಿಯಲ್ಲಿ ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿ ಆಗ ಪಾವನರಾಗಿಬಿಡುತ್ತೀರಿ”

ಪ್ರಶ್ನೆ:
ಯಾವುದೇ ಕರ್ಮವು ವಿಕರ್ಮವಾಗಬಾರದು, ಅದರ ಯುಕ್ತಿಯೇನಾಗಿದೆ?

ಉತ್ತರ:
ವಿಕರ್ಮಗಳಿಂದ ಪಾರಾಗುವ ಸಾಧನವು ಶ್ರೀಮತವಾಗಿದೆ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂದು ತಂದೆಯ ಯಾವ ಶ್ರೀಮತವಿದೆಯೋ ಅದರಂತೆ ನಡೆಯಿರಿ ಆಗ ನೀವು ವಿಕರ್ಮಾಜೀತರಾಗಿಬಿಡುತ್ತೀರಿ.

ಓಂ ಶಾಂತಿ.
ಆತ್ಮಿಕ ಮಕ್ಕಳು ಇಲ್ಲಿಯೂ ಕುಳಿತಿದ್ದಾರೆ ಮತ್ತು ಎಲ್ಲಾ ಸೇವಾಕೇಂದ್ರಗಳಲ್ಲಿಯೂ ಇದ್ದಾರೆ. ಎಲ್ಲಾ ಮಕ್ಕಳಿಗೆ ತಿಳಿದಿದೆ - ಈಗ ಆತ್ಮಿಕ ತಂದೆಯು ಬಂದಿದ್ದಾರೆ, ಅವರು ನಮ್ಮನ್ನು ಈ ಹಳೆಯ, ಪತಿತಪ್ರಪಂಚದಿಂದ ಪುನಃ ಮನೆಗೆ ಕರೆದುಕೊಂಡು ಹೋಗುತ್ತಾರೆ. ತಂದೆಯು ಪಾವನರನ್ನಾಗಿ ಮಾಡುವುದಕ್ಕಾಗಿಯೇ ಬಂದಿದ್ದಾರೆ ಮತ್ತು ಆತ್ಮಗಳೊಂದಿಗೇ ಮಾತನಾಡುತ್ತಾರೆ. ಆತ್ಮವೇ ಕಿವಿಗಳ ಮೂಲಕ ಕೇಳುತ್ತದೆ ಏಕೆಂದರೆ ತಂದೆಗೆ ತಮ್ಮದೇ ಆದ ಶರೀರವಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಶರೀರದ ಆಧಾರದಿಂದ ನನ್ನ ಪರಿಚಯವನ್ನು ಕೊಡುತ್ತೇನೆ. ನಾನು ಈ ಸಾಧಾರಣ ತನುವಿನಲ್ಲಿ ಬಂದು ನೀವು ಮಕ್ಕಳಿಗೆ ಪಾವನರಾಗುವ ಯುಕ್ತಿಯನ್ನು ತಿಳಿಸುತ್ತೇನೆ. ಪ್ರತೀ ಕಲ್ಪವೂ ಬಂದು ನಿಮಗೆ ಈ ಯುಕ್ತಿಯನ್ನು ತಿಳಿಸುತ್ತೇನೆ. ಈ ರಾವಣರಾಜ್ಯದಲ್ಲಿ ನೀವು ಎಷ್ಟೊಂದು ದುಃಖಿಯಾಗಿಬಿಟ್ಟಿದ್ದೀರಿ. ನೀವು ರಾವಣರಾಜ್ಯ, ಶೋಕವಾಟಿಕೆಯಲ್ಲಿದ್ದೀರಿ. ಕಲಿಯುಗಕ್ಕೆ ದುಃಖಧಾಮವೆಂದು ಹೇಳಲಾಗುತ್ತದೆ. ಸುಖಧಾಮವು ಕೃಷ್ಣಪುರಿ, ಸ್ವರ್ಗವಾಗಿದೆ. ಅದಂತೂ ಈಗ ಇಲ್ಲ. ಮಕ್ಕಳು ಇದನ್ನು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ - ತಂದೆಯು ಈಗ ನಮಗೆ ಓದಿಸುವುದಕ್ಕಾಗಿ ಬಂದಿದ್ದಾರೆ.

ತಂದೆಯು ತಿಳಿಸುತ್ತಾರೆ - ನೀವು ಮನೆಯನ್ನೂ ಸಹ ಶಾಲೆಯನ್ನಾಗಿ ಮಾಡಬಹುದು. ಪಾವನರಾಗಬೇಕು ಮತ್ತು ಅನ್ಯರನ್ನೂ ಮಾಡಬೇಕಾಗಿದೆ. ನೀವು ಪಾವನರಾದರೆ ಮತ್ತೆ ಪ್ರಪಂಚವೂ ಪಾವನವಾಗುವುದು. ಈಗಂತೂ ಇದು ಭ್ರಷ್ಟಾಚಾರ, ಪತಿತ ಪ್ರಪಂಚ ವಾಗಿದೆ, ಇದು ರಾವಣನ ರಾಜಧಾನಿಯಾಗಿದೆ. ಈ ಮಾತುಗಳನ್ನು ಯಾರು ಬಹಳ ಚೆನ್ನಾಗಿ ಅರಿತುಕೊಳ್ಳುವರೋ ಅವರು ಅನ್ಯರಿಗೂ ತಿಳಿಸಿಕೊಡುತ್ತಾರೆ. ತಂದೆಯಂತೂ ಇಷ್ಟೇ ತಿಳಿಸುತ್ತಾರೆ - ಮಕ್ಕಳೇ, ತಮ್ಮನ್ನು ಆತ್ಮವೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ, ಅನ್ಯರಿಗೂ ಸಹ ಈ ರೀತಿಯಾಗಿ ತಿಳಿಸಿಕೊಡಿ - ತಂದೆಯು ಬಂದಿದ್ದಾರೆ, ನೀವು ನನ್ನನ್ನು ನೆನಪು ಮಾಡಿದರೆ ಪಾವನರಾಗಿಬಿಡುತ್ತೀರೆಂದು ತಿಳಿಸುತ್ತಾರೆ. ಅಂದಾಗ ಯಾವುದೇ ಆಸುರೀ ಕರ್ಮವನ್ನು ಮಾಡಬೇಡಿ. ಮಾಯೆಯು ನಿಮ್ಮಿಂದ ಯಾವ ಪತಿತಕರ್ಮವನ್ನು ಮಾಡಿಸುವುದೋ ಅದು ಅವಶ್ಯವಾಗಿ ವಿಕರ್ಮವೇ ಆಗುವುದು. ಮೊಟ್ಟಮೊದಲನೆಯದಾಗಿ ಈಶ್ವರನು ಸರ್ವವ್ಯಾಪಿಯೆಂದು ಯಾವ ಮಾತನ್ನು ಹೇಳಿದರೋ ಇದನ್ನೂ ಸಹ ಮಾಯೆಯೇ ಹೇಳಿಸಿತಲ್ಲವೆ. ಮಾಯೆಯು ನಿಮ್ಮಿಂದ ಪ್ರತಿಯೊಂದು ಮಾತಿನಲ್ಲಿ ವಿಕರ್ಮವನ್ನು ಮಾಡಿಸುತ್ತದೆ. ಕರ್ಮ, ಅಕರ್ಮ, ವಿಕರ್ಮದ ರಹಸ್ಯವನ್ನೂ ತಿಳಿಸಲಾಗಿದೆ. ಶ್ರೀಮತದನುಸಾರ ನೀವು ಅರ್ಧಕಲ್ಪ ಸುಖವನ್ನನುಭವಿಸಿದ್ದೀರಿ, ಇನ್ನರ್ಧಕಲ್ಪ ರಾವಣನ ಮತದ ಮೇಲೆ ದುಃಖವನ್ನು ಭೋಗಿಸುತ್ತೀರಿ. ಈ ರಾವಣರಾಜ್ಯದಲ್ಲಿ ನೀವು ಯಾವ ಭಕ್ತಿ ಮಾಡುತ್ತೀರಿ ಅದರಿಂದ ಕೆಳಗಿಳಿಯುತ್ತಲೇ ಬರುತ್ತೀರಿ. ನೀವು ಈ ಮಾತುಗಳನ್ನು ಅರಿತುಕೊಂಡಿರಲಿಲ್ಲ. ಸಂಪೂರ್ಣ ಕಲ್ಲುಬುದ್ಧಿಯವರಾಗಿದ್ದಿರಿ. ಕಲ್ಲುಬುದ್ಧಿ ಮತ್ತು ಪಾರಸಬುದ್ಧಿಯೆಂದು ಹೇಳುತ್ತಾರಲ್ಲವೆ. ಭಕ್ತಿ ಮಾರ್ಗದಲ್ಲಿಯೂ ಹೇ ಈಶ್ವರ, ಇವರಿಗೆ ಸದ್ಬುದ್ಧಿಯನ್ನು ನೀಡು, ಅದರಿಂದ ಈ ಯುದ್ಧ ಮೊದಲಾದುವುಗಳನ್ನು ನಿಲ್ಲಿಸಲಿ ಎಂದು ಬೇಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ತಂದೆಯು ಈಗ ಬಹಳ ಒಳ್ಳೆಯ ಬುದ್ಧಿಯನ್ನು ಕೊಡುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ನಿಮ್ಮ ಆತ್ಮವು ಯಾವುದು ಪತಿತವಾಗಿದೆಯೋ ಅದನ್ನು ನೆನಪಿನ ಯಾತ್ರೆಯಿಂದ ಪಾವನ ಮಾಡಿಕೊಳ್ಳಬೇಕಾಗಿದೆ. ಭಲೆ ಓಡಾಡಿ, ತಿರುಗಾಡಿ ತಂದೆಯ ನೆನಪಿನಲ್ಲಿದ್ದು ನೀವು ಎಷ್ಟು ದೂರ ಕಾಲ್ನಡಿಗೆಯಲ್ಲಿ ಹೋದರೂ ಸಹ ನಿಮಗೆ ಶರೀರವು ಸಹ ಮರೆತುಹೋಗುತ್ತದೆ. ಖುಷಿಯಂತಹ ಟಾನಿಕ್ ಬೇರೆ ಇಲ್ಲವೆಂದು ಗಾಯನ ಮಾಡುತ್ತಾರೆ. ಮನುಷ್ಯರು ಹಣ ಸಂಪಾದನೆಗಾಗಿ ಎಷ್ಟೊಂದು ದೂರದೂರದವರೆಗೆ ಹೋಗುತ್ತಾರೆ. ಇಲ್ಲಿ ನೀವು ಎಷ್ಟೊಂದು ಧನವಂತರು, ಸಂಪತ್ತಿವಂತರಾಗುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಬಂದು ನೀವಾತ್ಮಗಳಿಗೆ ನನ್ನ ಪರಿಚಯವನ್ನು ಕೊಡುತ್ತೇನೆ, ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ, ಪಾವನರನ್ನಾಗಿ ಮಾಡಲು ಬನ್ನಿ ಎಂದು ತಂದೆಯನ್ನು ಕರೆಯುತ್ತಿರುತ್ತಾರೆ. ಆತ್ಮವೇ ತಂದೆಯನ್ನು ಕರೆಯುತ್ತದೆ. ಈ ರಾವಣರಾಜ್ಯದಲ್ಲಿ, ಶೋಕವಾಟಿಕೆಯಲ್ಲಿ ಎಲ್ಲರೂ ದುಃಖಿಯಾಗಿದ್ದಾರೆ. ಇಡೀ ವಿಶ್ವದಲ್ಲಿಯೇ ರಾವಣರಾಜ್ಯವಿದೆ, ಈ ಸಮಯದಲ್ಲಿ ಇರುವುದೇ ತಮೋಪ್ರಧಾನ ಸೃಷ್ಟಿ. ಸತೋಪ್ರಧಾನ ದೇವತೆಗಳ ಚಿತ್ರಗಳೂ ಇವೆ, ಅವರ ಗಾಯನವೂ ಇದೆ. ಶಾಂತಿಧಾಮ, ಸುಖಧಾಮಕ್ಕೆ ಹೋಗುವುದಕ್ಕಾಗಿ ಮನುಷ್ಯರು ಎಷ್ಟೊಂದು ತಲೆಕೆಡಿಸಿಕೊಳ್ಳುತ್ತಾರೆ ಆದರೆ ಭಗವಂತನು ಹೇಗೆ ಬಂದು ಭಕ್ತಿಯ ಫಲವನ್ನು ಕೊಡುವರೆಂದು ಯಾರೂ ಅರಿತುಕೊಂಡಿಲ್ಲ. ನೀವೀಗ ತಿಳಿದುಕೊಳ್ಳುತ್ತೀರಿ, ನಮಗೆ ಭಗವಂತನಿಂದ ಫಲವು ಸಿಗುತ್ತಿದೆ. ಭಕ್ತಿಯ ಎರಡು ಫಲಗಳಿವೆ - ಒಂದು ಮುಕ್ತಿ, ಇನ್ನೊಂದು ಜೀವನ್ಮುಕ್ತಿ. ಇವು ಬಹಳ ತಿಳಿದುಕೊಳ್ಳುವಂತಹ ಸೂಕ್ಷ್ಮ ಮಾತುಗಳಾಗಿವೆ. ಯಾರು ಆರಂಭದಿಂದ ಹಿಡಿದು ಬಹಳ ಭಕ್ತಿ ಮಾಡಿರುವರೋ ಅವರು ಜ್ಞಾನವನ್ನೂ ಸಹ ತಿಳಿದುಕೊಳ್ಳುತ್ತಾರೆ ಅದರಿಂದ ಒಳ್ಳೆಯ ಫಲವನ್ನು ಪಡೆಯುತ್ತಾರೆ. ಕಡಿಮೆ ಭಕ್ತಿ ಮಾಡಿದ್ದರೆ ಕಡಿಮೆ ಜ್ಞಾನವನ್ನು ತೆಗೆದುಕೊಳ್ಳುತ್ತಾರೆ, ಕಡಿಮೆ ಫಲವನ್ನೇ ಪಡೆಯುತ್ತಾರೆ. ಲೆಕ್ಕಚಾರವಿದೆಯಲ್ಲವೆ. ನಂಬರ್ವಾರ್ ಪದವಿಗಳಿದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಒಂದುವೇಳೆ ನನ್ನವರಾದ ಮೇಲೂ ವಿಕಾರದಲ್ಲಿ ಬಿದ್ದರೆಂದರೆ ನನ್ನನ್ನು ಬಿಟ್ಟರೆಂದರ್ಥ. ಒಮ್ಮೆಲೇ ಕೆಳಗೆ ಹೋಗಿಬಿಡುತ್ತಾರೆ. ಕೆಲವರಂತೂ ಬಿದ್ದು ಮತ್ತೆ ಎದ್ದು ನಿಲ್ಲುತ್ತಾರೆ. ಇನ್ನೂ ಕೆಲವರು ಸಂಪೂರ್ಣ ಕಂದಕದಲ್ಲಿ ಬೀಳುತ್ತಾರೆ, ಬುದ್ಧಿಯು ಮತ್ತೆ ಸುಧಾರಣೆಯಾಗುವುದೇ ಇಲ್ಲ. ಕೆಲವರಿಗೆ ಒಳಗೆ ಮನಸ್ಸು ತಿನ್ನುತ್ತದೆ, ದುಃಖವಾಗುತ್ತದೆ - ನಾವು ಭಗವಂತನೊಂದಿಗೆ ಪ್ರತಿಜ್ಞೆ ಮಾಡಿದ್ದೆವು, ಆದರೆ ಮತ್ತೆ ಅವರಿಗೆ ಮೋಸ ಮಾಡಿಬಿಟ್ಟೆವು, ವಿಕಾರದಲ್ಲಿ ಬಿದ್ದುಹೋದೆವು. ತಂದೆಯ ಕೈಯನ್ನು ಬಿಟ್ಟು ಮಾಯೆಗೆ ವಶೀಭೂತರಾಗಿಬಿಟ್ಟೆವು. ಅಂತಹವರು ಮತ್ತೆ ವಾಯುಮಂಡಲವನ್ನೇ ಹಾಳು ಮಾಡುತ್ತಾರೆ, ಶಾಪಗ್ರಸ್ತರಾಗುತ್ತಾರೆ. ತಂದೆಯ ಜೊತೆ ಧರ್ಮರಾಜನೂ ಇದ್ದಾರಲ್ಲವೆ. ನಾವು ಏನು ಮಾಡುತ್ತಿದ್ದೇವೆಂದು ಆ ಸಮಯದಲ್ಲಿ ತಿಳಿಯುವುದಿಲ್ಲ, ನಂತರದಲ್ಲಿ ಪಶ್ಚಾತಾಪವಾಗುತ್ತದೆ. ಹೀಗೆ ಅನೇಕರಿರುತ್ತಾರೆ. ಅನ್ಯರ ಕೊಲೆ ಮಾಡುತ್ತಾರೆಂದರೆ ಜೈಲಿಗೆ ಹೋಗಬೇಕಾಗುತ್ತದೆ. ನಂತರ ಪಾಪ ನಿರಪರಾಧಿಯನ್ನು ಕೊಂದೆವೆಂದು ಪಶ್ಚಾತ್ತಾಪವಾಗುತ್ತದೆ. ಕೋಪದಲ್ಲಿ ಬಂದು ಬಹಳಷ್ಟು ಮಂದಿ ಹೊಡೆಯುತ್ತಾರೆ. ಅನೇಕ ಸಮಾಚಾರಗಳನ್ನು ಪತ್ರಿಕೆಗಳಲ್ಲಿ ನೋಡುತ್ತೇವೆ. ನೀವಂತೂ ಪತ್ರಿಕೆಗಳನ್ನು ನೋಡುವುದಿಲ್ಲ. ಪ್ರಪಂಚದಲ್ಲಿ ಏನೇನಾಗುತ್ತಿದೆಯೆಂದು ನಿಮಗೆ ತಿಳಿಯುವುದಿಲ್ಲ. ದಿನ-ಪ್ರತಿದಿನ ಪರಿಸ್ಥಿತಿಯು ಹದಗೆಡುತ್ತಾ ಹೋಗುತ್ತದೆ. ಏಣಿಯನ್ನು ಕೆಳಗಿಳಿಯಲೇಬೇಕಾಗಿದೆ. ನೀವು ಈ ನಾಟಕದ ರಹಸ್ಯವನ್ನು ಅರಿತುಕೊಂಡಿದ್ದೀರಿ. ನಾವು ತಂದೆಯನ್ನೇ ನೆನಪು ಮಾಡಬೇಕೆಂಬುದೂ ಬುದ್ಧಿಯಲ್ಲಿದೆ. ರಿಜಿಸ್ಟರ್ ಹಾಳಾಗುವಂತಹ ಯಾವುದೇ ಅಂತಹ ಛೀ ಛೀ ಕರ್ತವ್ಯವನ್ನು ಮಾಡಬಾರದು. ನಾನು ನಿಮ್ಮ ಶಿಕ್ಷಕನಾಗಿದ್ದೇನೆ, ಶಿಕ್ಷಕರ ಬಳಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮತ್ತು ನಡುವಳಿಕೆಯ ಎಲ್ಲಾ ರೆಕಾರ್ಡ್ಗಳೂ ಇರುತ್ತವೆಯಲ್ಲವೆ. ಕೆಲವರ ನಡವಳಿಕೆಯು ಬಹಳ ಚೆನ್ನಾಗಿರುತ್ತದೆ. ಕೆಲವರದು ಕಡಿಮೆ, ಇನ್ನೂ ಕೆಲವರದು ಬಹಳ ಕೆಟ್ಟಚಲನೆಯಿರುತ್ತದೆ. ನಂಬರ್ವಾರ್ ಇರುತ್ತಾರಲ್ಲವೆ. ಇಲ್ಲಿಯೂ ಸಹ ಪಾರಲೌಕಿಕ ತಂದೆಯು ಎಷ್ಟೊಂದು ಚೆನ್ನಾಗಿ ಓದಿಸುತ್ತಾರೆ, ಅವರು ಪ್ರತಿಯೊಬ್ಬರ ಚಲನ-ವಲನವನ್ನು ಅರಿತಿದ್ದಾರೆ. ನಮ್ಮಲ್ಲಿ ಈ ಹವ್ಯಾಸವಿದೆ, ಇದರ ಕಾರಣವೇ ನಾವು ಅನುತ್ತೀರ್ಣರಾಗುತ್ತೇವೆಂದು ತಾವೂ ತಿಳಿದುಕೊಳ್ಳಬಹುದು. ಪ್ರತಿಯೊಂದು ಮಾತನ್ನು ತಂದೆಯು ಸ್ಪಷ್ಟ ಮಾಡಿ ತಿಳಿಸುತ್ತಾರೆ. ಪೂರ್ಣರೀತಿಯಿಂದ ವಿದ್ಯೆಯನ್ನು ಓದುವುದಿಲ್ಲ, ಅನ್ಯರಿಗೆ ದುಃಖ ಕೊಡುತ್ತೀರೆಂದರೆ ದುಃಖಿಯಾಗಿಯೇ ಸಾಯುವಿರಿ, ಪದವಿಯೂ ಭ್ರಷ್ಟವಾಗುವುದು, ಬಹಳ ಶಿಕ್ಷೆಯನ್ನೂ ಅನುಭವಿಸುತ್ತೀರಿ.

ಮಧುರ ಮಕ್ಕಳೇ, ತಮ್ಮ ಮತ್ತು ಅನ್ಯರ ಭಾಗ್ಯವನ್ನು ರೂಪಿಸಬೇಕೆಂದರೆ ದಯಾಹೃದಯಿಯ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳಿ. ಹೇಗೆ ತಂದೆಯು ದಯಾಹೃದಯಿಯಾಗಿದ್ದಾರೆ ಆದ್ದರಿಂದಲೇ ಶಿಕ್ಷಕನಾಗಿ ನಿಮಗೆ ಓದಿಸುತ್ತಾರೆ. ಅದನ್ನು ಕೆಲವು ಮಕ್ಕಳು ಚೆನ್ನಾಗಿ ಓದುತ್ತಾರೆ ಮತ್ತು ಓದಿಸುತ್ತಾರೆ. ಇದರಲ್ಲಿ ದಯಾಹೃದಯಿಗಳಾಗಬೇಕಾಗಿದೆ. ಶಿಕ್ಷಕರು ದಯಾಹೃದಯಿಯಾಗಿದ್ದಾರಲ್ಲವೆ. ಹೇಗೆ ನೀವು ಒಳ್ಳೆಯ ಸ್ಥಾನಮಾನವನ್ನು ಪಡೆಯಬಹುದು ಎಂಬ ಸಂಪಾದನೆಯ ಮಾರ್ಗವನ್ನು ತಿಳಿಸುತ್ತಾರೆ, ಆ ವಿದ್ಯೆಯಲ್ಲಾದರೂ ಅನೇಕ ಪ್ರಕಾರದ ಶಿಕ್ಷಕರಿರುತ್ತಾರೆ ಆದರೆ ಇಲ್ಲಿ ಒಬ್ಬರೇ ಶಿಕ್ಷಕನಾಗಿದ್ದಾರೆ. ಮನುಷ್ಯರಿಂದ ದೇವತೆಗಳಾಗುವ ವಿದ್ಯೆಯು ಒಂದೇ ಆಗಿದೆ. ಇದರಲ್ಲಿ ಮುಖ್ಯವಾದುದು ಪವಿತ್ರತೆಯ ಮಾತಾಗಿದೆ. ಪವಿತ್ರತೆಯನ್ನೇ ಎಲ್ಲರೂ ಬಯಸುತ್ತಾರೆ. ತಂದೆಯಂತೂ ಮಾರ್ಗವನ್ನು ತಿಳಿಸುತ್ತಿದ್ದಾರೆ ಆದರೆ ಯಾರ ಅದೃಷ್ಟದಲ್ಲಿಲ್ಲವೋ ಅವರು ಪುರುಷಾರ್ಥವನ್ನೂ ಸಹ ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಅಂಕಗಳನ್ನು ಪಡೆಯುವುದು ಅವರ ಅದೃಷ್ಟದಲ್ಲಿ ಇಲ್ಲವೆಂದರೆ ಶಿಕ್ಷಕರು ತಾನೇ ಏನು ಮಾಡುವುದು! ಇವರು ಬೇಹದ್ದಿನ ಶಿಕ್ಷಕನಲ್ಲವೆ. ತಂದೆಯು ತಿಳಿಸುತ್ತಾರೆ - ನಿಮಗೆ ಮತ್ತ್ಯಾರೂ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಇತಿಹಾಸ-ಭೂಗೋಳವನ್ನು ತಿಳಿಸಲು ಸಾಧ್ಯವಿಲ್ಲ. ನಿಮಗೆ ಪ್ರತಿಯೊಂದು ಬೇಹದ್ದಿನ ಮಾತನ್ನು ತಿಳಿಸಲಾಗುತ್ತದೆ, ನಿಮ್ಮದು ಬೇಹದ್ದಿನ ವೈರಾಗ್ಯವಾಗಿದೆ. ಇದನ್ನೂ ಸಹ ನಿಮಗೆ ಪತಿತಪ್ರಪಂಚದ ವಿನಾಶ, ಪಾವನಪ್ರಪಂಚದ ಸ್ಥಾಪನೆಯಾಗಬೇಕಾಗಿದೆಯೋ ಆಗಲೇ ಕಲಿಸಿಕೊಡುತ್ತೇನೆ. ಸನ್ಯಾಸಿಗಳಂತೂ ನಿವೃತ್ತಿ ಮಾರ್ಗದವರಾಗಿದ್ದಾರೆ, ವಾಸ್ತವದಲ್ಲಿ ಅವರು ಕಾಡಿನಲ್ಲಿರಬೇಕಾಗಿದೆ. ಮೊದಲು ಋಷಿ-ಮುನಿ ಮೊದಲಾದವರೆಲ್ಲರೂ ಕಾಡಿನಲ್ಲಿರುತ್ತಿದ್ದರು, ಅವರಲ್ಲಿ ಸತೋಪ್ರಧಾನ ಶಕ್ತಿಯಿರುತ್ತಿತ್ತು ಅದರಿಂದ ಮನುಷ್ಯರನ್ನು ಸೆಳೆಯುತ್ತಿದ್ದರು. ಎಲ್ಲೆಲ್ಲಿಯೋ ಕುಟೀರಗಳಲ್ಲಿದ್ದರೂ ಸಹ ಮನುಷ್ಯರು ಅಲ್ಲಿಗೆ ಭೋಜನವನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಸನ್ಯಾಸಿಗಳ ಮಂದಿರವನ್ನೆಂದೂ ಕಟ್ಟುವುದಿಲ್ಲ. ಯಾವಾಗಲೂ ದೇವತೆಗಳ ಮಂದಿರವನ್ನು ಕಟ್ಟುತ್ತಾರೆ. ನೀವೇನು ಭಕ್ತಿ ಮಾಡುವುದಿಲ್ಲ, ಯೋಗದಲ್ಲಿರುತ್ತೀರಿ. ಅವರ ಜ್ಞಾನವೇ ಬ್ರಹ್ಮ್ ತತ್ವವನ್ನು ನೆನಪು ಮಾಡುವುದಾಗಿದೆ. ನಾವು ಬ್ರಹ್ಮ್ ತತ್ವದಲ್ಲಿ ಲೀನವಾಗಿಬಿಡಬೇಕೆಂದು ತಿಳಿಯುತ್ತಾರೆ ಆದರೆ ತಂದೆಯ ವಿನಃ ಮತ್ತ್ಯಾರೂ ಅಲ್ಲಿಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ, ಬಂದು ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ಉಳಿದೆಲ್ಲಾ ಆತ್ಮಗಳು ಹಿಂತಿರುಗಿ ಹೊರಟುಹೋಗುತ್ತಾರೆ ಏಕೆಂದರೆ ನಿಮಗಾಗಿ ಹೊಸ ಪ್ರಪಂಚವು ಬೇಕಲ್ಲವೆ. ಹಳೆಯ ಪ್ರಪಂಚದವರಾರೂ ಇರುವಂತಿಲ್ಲ. ನೀವು ಇಡೀ ವಿಶ್ವದ ಮಾಲೀಕರಾಗುತ್ತೀರಿ, ಇದೂ ಸಹ ನಿಮಗೆ ತಿಳಿದಿದೆ - ನಮ್ಮ ರಾಜ್ಯವಿದ್ದಾಗ ಇಡೀ ವಿಶ್ವದಲ್ಲಿ ನಾವೇ ಇದ್ದೆವು ಮತ್ತ್ಯಾವ ಖಂಡವೂ ಇರಲಿಲ್ಲ. ಸತ್ಯಯುಗದಲ್ಲಿ ಬಹಳಷ್ಟು ಜಮೀನಿರುತ್ತದೆ. ಇಲ್ಲಂತೂ ಎಷ್ಟೇ ಜಮೀನು ಇರಲಿ ಆದರೂ ಸಹ ಸಮುದ್ರವನ್ನು ಒಣಗಿಸಿ ಜಮೀನು ಮಾಡಿಕೊಳ್ಳುತ್ತಿರುತ್ತಾರೆ ಏಕೆಂದರೆ ಜನಸಂಖ್ಯೆಯು ಹೆಚ್ಚುತ್ತಾಹೋಗುತ್ತಿದೆ. ಈ ಸಮುದ್ರವನ್ನು ಒಣಗಿಸುವುದನ್ನು ವಿದೇಶದವರಿಂದ ಕಲಿತಿದ್ದಾರೆ. ಬಾಂಬೆಯಲ್ಲಿ ಮೊದಲು ಏನೂ ಇರಲಿಲ್ಲ, ಇದು ಕೊನೆಯಲ್ಲಿ ಇರುವುದಿಲ್ಲ. ಇವರು (ಬ್ರಹ್ಮಾ) ಅನುಭವಿಯಾಗಿದ್ದಾರಲ್ಲವೆ. ತಿಳಿದುಕೊಳ್ಳಿ, ಭೂಕಂಪ ಅಥವಾ ಅತೀ ಸುರಿಮಳೆಯಾಗುತ್ತದೆಯೆಂದರೆ ಮತ್ತೇನು ಮಾಡುತ್ತಾರೆ! ಹೊರಬರುವುದಕ್ಕೇ ಸಾಧ್ಯವಿರುವುದಿಲ್ಲ, ಬಹಳಷ್ಟು ಪ್ರಾಕೃತಿಕ ವಿಕೋಪಗಳಾಗುತ್ತವೆ ಇಲ್ಲವೆಂದರೆ ಇಷ್ಟೊಂದು ವಿನಾಶವು ಹೇಗಾಗುವುದು. ಸತ್ಯಯುಗದಲ್ಲಿ ಕೇವಲ ಭಾರತವಾಸಿಗಳೇ ಇರುತ್ತಾರೆ. ಇಂದು ಹೇಗಿದೆ, ನಾಳೆ ಏನಾಗುವುದು, ಇದೆಲ್ಲವನ್ನೂ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಈ ಜ್ಞಾನವನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಪತಿತರಾಗಿದ್ದೀರಿ ಆದ್ದರಿಂದಲೇ ಬಂದು ನಮ್ಮನ್ನು ಪಾವನ ಮಾಡಿ ಎಂದು ನನ್ನನ್ನು ಕರೆಯುತ್ತೀರಿ, ಅಂದಾಗ ಅವಶ್ಯವಾಗಿ ನಾನು ಬರುತ್ತೇನೆ ಆಗಲೇ ಪಾವನ ಪ್ರಪಂಚವು ಸ್ಥಾಪನೆಯಾಗುವುದಲ್ಲವೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದಾರೆ, ಎಷ್ಟು ಒಳ್ಳೆಯ ಯುಕ್ತಿಯನ್ನು ತಿಳಿಸುತ್ತಾರೆ! ಭಗವಾನುವಾಚ, ಮನ್ಮನಾಭವ.. ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ತೊರೆದು ನನ್ನೊಬ್ಬನ್ನನ್ನೇ ನೆನಪು ಮಾಡಿ. ಇದರಲ್ಲಿಯೇ ಪರಿಶ್ರಮವಿದೆ. ಜ್ಞಾನವಂತೂ ಬಹಳ ಸಹಜ. ಇದನ್ನು ಚಿಕ್ಕಮಕ್ಕಳೂ ಸಹ ಬಹುಬೇಗನೆ ನೆನಪು ಮಾಡಿಕೊಳ್ಳುವರು ಆದರೆ ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುವುದೇ ಪರಿಶ್ರಮವಾಗಿದೆ. ಹಿರಿಯರ ಬುದ್ಧಿಯಲ್ಲಿಯೂ ನಿಲ್ಲುವುದಿಲ್ಲವೆಂದರೆ ಇನ್ನು ಚಿಕ್ಕಮಕ್ಕಳು ನೆನಪು ಮಾಡಲು ಹೇಗೆ ಸಾಧ್ಯ? ಭಲೆ ಶಿವಬಾಬಾ, ಶಿವಬಾಬಾ ಎಂದು ಹೇಳಬಹುದು ಆದರೆ ತಿಳುವಳಿಕೆ ಇಲ್ಲ ಅಲ್ಲವೆ. ನಾವೂ ಬಿಂದುವಾಗಿದ್ದೇವೆ, ತಂದೆಯೂ ಬಿಂದುವಾಗಿದ್ದಾರೆ ಎಂಬುದು ಸ್ಮೃತಿಯಲ್ಲಿ ಬರುವುದು ಪರಿಶ್ರಮವಾಗುತ್ತದೆ. ಇವರನ್ನು ಯಥಾರ್ಥರೀತಿಯಲ್ಲಿ ನೆನಪು ಮಾಡಬೇಕಾಗಿದೆ ಏಕೆಂದರೆ ಇವರು ದೊಡ್ಡರೂಪದಲ್ಲಿಲ್ಲ. ತಂದೆಯು ತಿಳಿಸುತ್ತಾರೆ – ಯಥಾರ್ಥ ರೂಪದಲ್ಲಿ ನಾನು ಬಿಂದುವಾಗಿದ್ದೇನೆ ಆದ್ದರಿಂದ ನಾನು ಯಾರಾಗಿದ್ದೇನೆ, ಹೇಗಿದ್ದೇನೆ ಎಂಬುದನ್ನು ಸ್ಮರಣೆ ಮಾಡುವುದು ಬಹಳ ಪರಿಶ್ರಮವಾಗಿದೆ.

ಪರಮಾತ್ಮನು ಬ್ರಹ್ಮ್ತತ್ವವಾಗಿದ್ದಾರೆಂದು ಸನ್ಯಾಸಿಗಳು ಹೇಳುತ್ತಾರೆ ಮತ್ತು ಪರಮಾತ್ಮನು ಚಿಕ್ಕಬಿಂದುವಾಗಿದ್ದಾರೆಂದು ನೀವು ಹೇಳುತ್ತೀರಿ. ಇದರಲ್ಲಿ ರಾತ್ರಿ-ಹಗಲಿನ ಅಂತರವಿದೆಯಲ್ಲವೆ. ಯಾವ ಬ್ರಹ್ಮ್ತತ್ವದಲ್ಲಿ ನಾವು ಆತ್ಮಗಳು ಇರುತ್ತೇವೆಯೋ ಅದನ್ನೇ ಪರಮಾತ್ಮನೆಂದು ಹೇಳಿಬಿಡುತ್ತಾರೆ. ಇದು ಬುದ್ಧಿಯಲ್ಲಿರಬೇಕು - ನಾನು ಆತ್ಮನಾಗಿದ್ದೇನೆ, ಶಿವತಂದೆಯ ಮಗುವಾಗಿದ್ದೇನೆ, ಈ ಕಿವಿಗಳ ಮೂಲಕ ಕೇಳುತ್ತೇನೆ, ತಂದೆಯು ಈ ಮುಖದಿಂದ ತಿಳಿಸುತ್ತಾರೆ - ನಾನು ಪರಮ ಆತ್ಮನಾಗಿದ್ದೇನೆ, ಅತ್ತ್ಯಂತ ದೂರಕ್ಕಿಂತ ದೂರದೇಶದ ನಿವಾಸಿಯಾಗಿದ್ದೇನೆ. ನೀವೂ ಸಹ ಅತೀ ದೂರದ ನಿವಾಸಿಗಳಾಗಿದ್ದೀರಿ ಆದರೆ ನೀವು ಜನನ-ಮರಣದಲ್ಲಿ ಬರುತ್ತೀರಿ, ನಾನು ಬರುವುದಿಲ್ಲ. ನೀವೀಗ ತಮ್ಮ 84 ಜನ್ಮಗಳನ್ನು ಅರಿತುಕೊಂಡಿದ್ದೀರಿ, ತಂದೆಯ ಪಾತ್ರವನ್ನೂ ಅರಿತಿದ್ದೀರಿ. ಆತ್ಮದ ಗಾತ್ರವು ಚಿಕ್ಕದು-ದೊಡ್ಡದಿರುವುದಿಲ್ಲ ಆದರೆ ಕಲಿಯುಗದಲ್ಲಿ ಬರುವುದರಿಂದ ಮೈಲಿಗೆಯಾಗುತ್ತದೆ. ಇಷ್ಟು ಸೂಕ್ಷ್ಮ ಆತ್ಮದಲ್ಲಿ ಸಂಪೂರ್ಣ ಜ್ಞಾನವಿದೆ, ತಂದೆಯೂ ಸೂಕ್ಷ್ಮವಾಗಿದ್ದಾರಲ್ಲವೆ ಆದರೆ ಅವರಿಗೆ ಪರಮ ಆತ್ಮನೆಂದು ಕರೆಯಲಾಗುತ್ತದೆ. ಅವರು ಜ್ಞಾನಸಾಗರನಾಗಿದ್ದಾರೆ, ಬಂದು ನಿಮಗೆ ತಿಳಿಸಿಕೊಡುತ್ತಾರೆ. ಈ ಸಮಯದಲ್ಲಿ ಯಾರು ಓದುತ್ತಿದ್ದೀರಿ, ಕಲ್ಪದ ಹಿಂದೆಯೂ ಸಹ ಓದಿದ್ದಿರಿ, ಇದರಿಂದ ದೇವತೆಗಳಾಗಿದ್ದಿರಿ. ನಿಮ್ಮಲ್ಲಿ ಬಹಳ ದುರಾದೃಷ್ಟವು ಯಾರದೆಂದರೆ ಯಾರು ಪತಿತರಾಗಿ ತಮ್ಮ ಬುದ್ಧಿಯನ್ನು ಮಲಿನ ಮಾಡಿಕೊಳ್ಳುತ್ತಾರೆ ಏಕೆಂದರೆ ಧಾರಣೆಯಾಗುವುದಿಲ್ಲ. ಒಳಗೆ ಮನಸ್ಸು ತಿನ್ನುತ್ತಿರುತ್ತದೆ, ಅಂತಹವರು ಪವಿತ್ರರಾಗಿ ಎಂದು ಅನ್ಯರಿಗೆ ಹೇಳಲು ಸಾಧ್ಯವಿಲ್ಲ. ಪಾವನರಾಗುತ್ತಾ-ಆಗುತ್ತಾ ನಾವು ಸೋಲನ್ನನುಭವಿಸಿಬಿಟ್ಟೆವು. ಇದ್ದ ಸಂಪಾದನೆಯೆಲ್ಲವೂ ಸಮಾಪ್ತಿಯಾಯಿತೆಂದು ತಮ್ಮನ್ನು ತಿಳಿಯುತ್ತಾರೆ. ಮತ್ತೆ ಮೇಲೇಳುವುದರಲ್ಲಿ ಬಹಳ ಸಮಯ ಹಿಡಿಸುತ್ತದೆ. ಜೋರಾದ ಒಂದೇ ಪೆಟ್ಟು ಒಮ್ಮೆಲೆ ಗಾಯಗೊಳಿಸುತ್ತದೆ, ರಿಜಿಸ್ಟರ್ ಹಾಳಾಗಿಬಿಡುತ್ತದೆ. ನೀವು ಮಾಯೆಯಿಂದ ಸೋತುಹೋದಿರಿ, ನಿಮ್ಮದು ದುರಾದೃಷ್ಟವಾಗಿದೆ ಎಂದು ತಂದೆಯು ಹೇಳುತ್ತಾರೆ. ಮಾಯಾಜೀತರು ಜಗಜ್ಜೀತರಾಗಬೇಕಾಗಿದೆ. ಜಗಜ್ಜೀತರೆಂದು ಮಹಾರಾಜ-ಮಹಾರಾಣಿಗೇ ಹೇಳಲಾಗುತ್ತದೆ, ಪ್ರಜೆಗಳಿಗೆ ಹೇಳುವುದಿಲ್ಲ. ಈಗ ದೈವೀಸ್ವರ್ಗದ ಸ್ಥಾಪನೆಯಾಗುತ್ತಿದೆ, ತಮಗಾಗಿ ಯಾರು ಮಾಡಿಕೊಳ್ಳುವರೋ ಅವರು ಪಡೆಯುವರು. ಎಷ್ಟು ಪಾವನರಾಗಿ ಅನ್ಯರನ್ನೂ ಮಾಡುವರೋ ಬಹಳ ದಾನ ಮಾಡುವವರಿಗೆ ಫಲವಂತೂ ಸಿಗುತ್ತದೆಯಲ್ಲವೆ. ದಾನಿಗಳ ಹೆಸರು ಪ್ರಸಿದ್ಧವಾಗುತ್ತದೆ. ಇನ್ನೊಂದು ಜನ್ಮದಲ್ಲಿ ಅಲ್ಪಕಾಲದ ಸುಖವನ್ನು ಪಡೆಯುತ್ತಾರೆ, ಇಲ್ಲಂತೂ 21 ಜನ್ಮಗಳ ಮಾತಾಗಿದೆ. ಪಾವನ ಪ್ರಪಂಚದ ಮಾಲೀಕರಾಗಬೇಕಾಗಿದೆ. ಯಾರು ಪಾವನರಾಗಿದ್ದರೋ ಈಗಲೂ ಅವರೇ ಆಗುತ್ತಾರೆ. ನಡೆಯುತ್ತಾ-ನಡೆಯುತ್ತಾ ಮಾಯೆಯು ಪೆಟ್ಟನ್ನು ಕೊಟ್ಟು ಒಮ್ಮೆಲೆ ಬೀಳಿಸಿಬಿಡುತ್ತದೆ. ಮಾಯೆಯೂ ಸಹ ಕಡಿಮೆ ಶಕ್ತಿಶಾಲಿಯಲ್ಲ, 8-10 ವರ್ಷಗಳು ಪವಿತ್ರರಾಗಿದ್ದರು, ಪವಿತ್ರತೆಯ ಮೇಲೆ ಜಗಳವಾಯಿತು, ಅನ್ಯರನ್ನೂ ಬೀಳುವುದರಿಂದ ಪಾರು ಮಾಡಿದರು ಆದರೆ ಮತ್ತೆ ತಾವೇ ಬಿದ್ದರೆಂದರೆ ಇದಕ್ಕೆ ಅವರವರ ಅದೃಷ್ಟವೆಂದು ಹೇಳಲಾಗುತ್ತದೆಯಲ್ಲವೆ. ತಂದೆಯ ಮಕ್ಕಳಾಗಿಯೂ ಮತ್ತೆ ಮಾಯೆಗೆ ವಶವಾಗಿಬಿಡುತ್ತಾರೆಂದರೆ ಶತ್ರುವಾದರಲ್ಲವೆ. ಖುದಾದೋಸ್ತ್ನ ಒಂದು ಕಥೆಯೂ ಇದೆಯಲ್ಲವೇ. ತಂದೆಯು ಬಂದು ಮಕ್ಕಳನ್ನು ಪ್ರೀತಿ ಮಾಡುತ್ತಾರೆ, ಸಾಕ್ಷಾತ್ಕಾರ ಮಾಡಿಸುತ್ತಾರೆ. ಭಕ್ತಿ ಮಾಡದೆಯೂ ಸಾಕ್ಷಾತ್ಕಾರವಾಗುತ್ತದೆ ಅಂದಾಗ ಗೆಳೆಯನನ್ನಾಗಿ ಮಾಡಿಕೊಂಡರಲ್ಲವೆ. ಮೊದಲು ಎಷ್ಟೊಂದು ಸಾಕ್ಷಾತ್ಕಾರಗಳಾಗುತ್ತಿತ್ತು ನಂತರ ಅದನ್ನು ಜಾದುವೆಂದು ತಿಳಿದು ಬಹಳಷ್ಟು ದೊಂಬಿ ಮಾಡಿದರು ಆಗ ಸಾಕ್ಷಾತ್ಕಾರವನ್ನೂ ನಿಲ್ಲಿಸಲಾಯಿತು. ಮತ್ತೆ ಅಂತಿಮದಲ್ಲಿಯೂ ನೀವು ಬಹಳ ಸಾಕ್ಷಾತ್ಕಾರಗಳನ್ನು ಮಾಡುತ್ತಿರುತ್ತೀರಿ. ಮೊದಲು ಎಷ್ಟೊಂದು ಮಜಾ ಬರುತ್ತಿತ್ತು. ಅದನ್ನು ನೋಡಿಯೂ ಸಹ ಮತ್ತೆ ಎಷ್ಟು ಮಂದಿ ಹೊರಟುಹೋದರು. ಹೇಗೆ ಭಟ್ಟಿಯಿಂದ ಕೆಲವು ಇಟ್ಟಿಗೆಗಳು ಚೆನ್ನಾಗಿ ಸುಟ್ಟುಹೊರಬಂದವು, ಇನ್ನೂ ಕೆಲವು ಹಸಿಯಾಗಿಯೇ ಉಳಿದುಬಿಟ್ಟವು ಅಂದರೆ ಕೆಲವರಂತೂ ಹೊರಟುಹೋದರು. ಈಗ ಅವರು ಲಕ್ಷಾಧೀಪತಿ, ಕೋಟ್ಯಾಧಿಪತಿಗಳಾಗಿಬಿಟ್ಟಿದ್ದಾರೆ. ನಾವಂತೂ ಈಗ ಸ್ವರ್ಗದಲ್ಲಿ ಕುಳಿತಿದ್ದೇವೆಂದು ಅವರು ತಿಳಿಯುತ್ತಾರೆ. ಈಗ ಇಲ್ಲಿ ಸ್ವರ್ಗವಿರಲು ಹೇಗೆ ಸಾಧ್ಯ! ಸ್ವರ್ಗವಂತೂ ಹೊಸ ಪ್ರಪಂಚದಲ್ಲಿಯೇ ಇರುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳಲು ದಯಾಹೃದಯಿಗಳಾಗಿ ಓದಿ ಮತ್ತು ಓದಿಸಬೇಕಾಗಿದೆ. ಎಂದೂ ಯಾವುದೇ ಅಭ್ಯಾಸಕ್ಕೆ ವಶೀಭೂತರಾಗಿ ತಮ್ಮ ರಿಜಿಸ್ಟರನ್ನು ಹಾಳು ಮಾಡಿಕೊಳ್ಳಬಾರದು.

2. ಮನುಷ್ಯರಿಂದ ದೇವತೆಗಳಾಗಲು ಮುಖ್ಯವಾದುದು ಪವಿತ್ರತೆಯಾಗಿದೆ ಆದ್ದರಿಂದ ಎಂದೂ ತಮ್ಮ ಬುದ್ಧಿಯನ್ನು ಮಲಿನ ಮಾಡಿಕೊಳ್ಳಬಾರದು. ಮನಸ್ಸು ತಿನ್ನುತ್ತಿರುವಂತಹ, ಪಶ್ಚಾತ್ತಾಪ ಪಡುವಂತಹ ಕರ್ಮವನ್ನು ಮಾಡಬಾರದು.

ವರದಾನ:
ಬೀಜರೂಪ ಸ್ಥಿತಿಯ ಮುಖಾಂತರ ಇಡೀ ವಿಶ್ವಕ್ಕೆ ಲೈಟ್ನ ನೀರನ್ನು ಕೊಡುವಂತಹ ವಿಶ್ವ ಕಲ್ಯಾಣಕಾರಿ ಭವ.

ಬೀಜರೂಪ ಸ್ಟೇಜ್ ಎಲ್ಲದಕ್ಕಿಂತ ಶಕ್ತಿಶಾಲಿ ಸ್ಟೇಜ್ ಆಗಿದೆ, ಇದೇ ಸ್ಟೇಜ್ ಲೈಟ್ ಹೌಸ್ನ ಕಾರ್ಯಮಾಡುತ್ತದೆ, ಇದರಿಂದ ಇಡೀ ವಿಶ್ವಕ್ಕೆ ಲೈಟ್ ಹರಡಲು ನಿಮಿತ್ತರಾಗುವಿರಿ. ಹೇಗೆ ಬೀಜದ ಮೂಲಕ ಸ್ವತಃವಾಗಿ ಇಡೀ ವೃಕ್ಷಕ್ಕೆ ನೀರು ಸಿಗುತ್ತದೆ ಅದೇರೀತಿ ಯಾವಾಗ ಬೀಜರೂಪ ಸ್ಥಿತಿಯಲ್ಲಿ ಸ್ಥಿತರಾಗಿರುವಿರಿ ಆಗ ವಿಶ್ವಕ್ಕೆ ಲೈಟ್ನ ನೀರು ಸಿಗುತ್ತದೆ. ಆದರೆ ಇಡೀ ವಿಶ್ವಕ್ಕೇ ನಿಮ್ಮ ಲೈಟ್ ಹರಡಬೇಕಾದರೆ ವಿಶ್ವಕಲ್ಯಾಣಕಾರಿಯ ಶಕ್ತಿಶಾಲಿ ಸ್ಟೇಜ್ ಬೇಕಾಗುವುದು. ಅದಕ್ಕಾಗಿ ಲೈಟ್ ಹೌಸ್ ಆಗಿ ಕೇವಲ ಬಲ್ಬ್ ಅಲ್ಲ. ಪ್ರತಿ ಸಂಕಲ್ಪದಲ್ಲಿ ಸ್ಮೃತಿಯಿರಲಿ ಇಡೀ ವಿಶ್ವಕ್ಕೆ ಕಲ್ಯಾಣವಾಗಲಿ ಎಂದು.

ಸ್ಲೋಗನ್:
ಅಡ್ಡೆಸ್ಟ್ ಅಗುವ ಶಕ್ತಿ ನಾಜೂಕಾದ ಸಮಯದಲ್ಲಿ ಪಾಸ್ ವಿತ್ ಹಾನರ್ ಮಾಡಿಬಿಡುತ್ತದೆ.

ಅವ್ಯಕ್ತ ಸೂಚನೆ - ಸತ್ಯ ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ಪರಮಾತ್ಮ ಪ್ರತ್ಯಕ್ಷತೆಯ ಆಧಾರವಾಗಿದೆ ಸತ್ಯತ್ತೆ. ಸತ್ಯತೆಯಿಂದಲೇ ಪ್ರತ್ಯಕ್ಷತೆ ಆಗುತ್ತದೆ- ಒಂದು ಸ್ವಯಂನ ಸ್ಥಿತಿಯ ಸತ್ಯತೆ, ಎರಡನೆಯದು ಸೇವೆಯ ಸತ್ಯತೆ. ಸತ್ಯತೆಯ ಆಧಾರವಾಗಿದೆ ಸ್ವಚ್ಛತೆ ಹಾಗೂ ನಿರ್ಭಯತೆ. ಈ ಎರಡು ಧಾರಣೆಗಳ ಆಧಾರದಿಂದ ಸತ್ಯತೆಯ ಮೂಲಕ ಪರಮಾತ್ಮ ಪ್ರತ್ಯಕ್ಷತೆಯ ನಿಮಿತರಾಗಿ. ಯಾವುದೇ ಪ್ರಕಾರದ ಅಸ್ವಚ್ಛತೆ ಅರ್ಥ ಸ್ವಲ್ಪವೂ ಸತ್ಯತೆ ಸ್ವಚ್ಛತೆ ಯ ಕಡಿಮೆ ಇದ್ದಲ್ಲಿ ಕರ್ತವ್ಯದ ಸಿದ್ದಿ ಆಗಲು ಸಾಧ್ಯವಿಲ್ಲ.