05.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವೀಗ
ನಾಮರೂಪದ ಖಾಯಿಲೆಯಿಂದ ಪಾರಾಗಬೇಕಾಗಿದೆ, ಉಲ್ಟಾ ಖಾತೆಯನ್ನು ಮಾಡಿಕೊಳ್ಳಬಾರದು, ಒಬ್ಬ ತಂದೆಯ
ನೆನಪಿನಲ್ಲಿರಬೇಕು”
ಪ್ರಶ್ನೆ:
ಭಾಗ್ಯವಂತ
ಮಕ್ಕಳು ಯಾವ ಮುಖ್ಯ ಪುರುಷಾರ್ಥದಿಂದ ತಮ್ಮ ಭಾಗ್ಯವನ್ನು ರೂಪಿಸಿಕೊಳ್ಳುತ್ತಾರೆ?
ಉತ್ತರ:
ಭಾಗ್ಯವಂತ
ಮಕ್ಕಳು ಎಲ್ಲರಿಗೆ ಸುಖ ನೀಡುವಂತಹ ಪುರುಷಾರ್ಥ ಮಾಡುತ್ತಾರೆ. ಮನಸಾ-ವಾಚಾ-ಕರ್ಮಣಾ ಯಾರಿಗೂ
ದುಃಖವನ್ನು ಕೊಡುವುದಿಲ್ಲ. ಶೀತಲರಾಗಿ ನಡೆಯುವುದರಿಂದ ಭಾಗ್ಯವಾಗುತ್ತಾ ಹೋಗುತ್ತದೆ. ನಿಮ್ಮದು ಇದು
ವಿದ್ಯಾರ್ಥಿ ಜೀವನವಾಗಿದೆ. ಆದ್ದರಿಂದ ಈಗ ನೀವು ಗುಟುಕರಿಸಬಾರದು, ಅಪಾರ ಖುಷಿಯಲ್ಲಿರಬೇಕಾಗಿದೆ.
ಗೀತೆ:
ನೀವೇ ಮಾತಾ-ಪಿತಾ
ಆಗಿದ್ದೀರಿ...........
ಓಂ ಶಾಂತಿ.
ಎಲ್ಲಾ ಮಕ್ಕಳು ಮುರುಳಿಯನ್ನು ಕೇಳುತ್ತೀರಿ. ಎಲ್ಲಿಯೇ ಮುರುಳಿಯು ಹೋಗುತ್ತದೆಯೆಂದರೆ ಎಲ್ಲರೂ
ತಿಳಿಯುತ್ತಾರೆ - ಯಾರ ಮಹಿಮೆಯನ್ನು ಹಾಡಲಾಗುತ್ತದೆಯೋ ಅವರು ಸಾಕಾರಿಯಲ್ಲ, ನಿರಾಕಾರ ತಂದೆಯ
ಮಹಿಮೆಯಾಗಿದೆ. ನಿರಾಕಾರ ತಂದೆಯು ಸಾಕಾರದ ಮೂಲಕ ಸನ್ಮುಖದಲ್ಲಿ ಮುರುಳಿಯನ್ನು ತಿಳಿಸುತ್ತಿದ್ದಾರೆ.
ಈಗ ನಾವಾತ್ಮಗಳು ಅವರನ್ನು ನೋಡುತ್ತಿದ್ದೇವೆ ಎಂತಲೂ ಹೇಳಬಹುದಾಗಿದೆ. ಆತ್ಮವು ಬಹಳ ಸೂಕ್ಷ್ಮವಾಗಿದೆ,
ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿಯೂ ಸಹ ನಾವಾತ್ಮರು
ಅತಿಸೂಕ್ಷ್ಮವಾಗಿದ್ದೇವೆ ಎಂದು ತಿಳಿದಿರುತ್ತಾರೆ ಆದರೆ ಆತ್ಮವೆಂದರೇನು? ಎಂಬ ಪೂರ್ಣರಹಸ್ಯವು
ಬುದ್ಧಿಯಲ್ಲಿರುವುದಿಲ್ಲ. ಪರಮಾತ್ಮನನ್ನು ನೆನಪು ಮಾಡುತ್ತಾರೆ ಆದರೆ ಅವರು ಯಾರು? ಎಂಬುದು
ಪ್ರಪಂಚಕ್ಕೆ ತಿಳಿದಿಲ್ಲ. ಮೊದಲು ನಿಮಗೂ ತಿಳಿದಿರಲಿಲ್ಲ, ಈಗ ನೀವು ಮಕ್ಕಳಿಗೆ ಇದು ನಿಶ್ಚಯವಿದೆ
- ಇಲ್ಲಿ ಯಾವುದೇ ಲೌಕಿಕ ಶಿಕ್ಷಕರು ಅಥವಾ ಸಂಬಂಧಿಗಳೂ ಅಲ್ಲ. ಹೇಗೆ ಸೃಷ್ಟಿಯಲ್ಲಿ
ಅನ್ಯಮನುಷ್ಯರಿದ್ದಾರೆಯೋ ಹಾಗೆಯೇ ಈ ದಾದಾರವರು ಇದ್ದರು. ತ್ವಮೇವ ಮಾತಾಶ್ಚ ಪಿತಾ ಎಂದು
ಮಹಿಮೆಯನ್ನು ಹಾಡಿದಾಗ ಅವರು ಮೇಲಿದ್ದಾರೆಂದು ತಿಳಿಯುತ್ತಿದ್ದಿರಿ. ಈಗ ತಂದೆಯು ತಿಳಿಸುತ್ತಾರೆ -
ನಾನು ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡಿದ್ದೇನೆ. ಅದೇ ಮಾತಾಪಿತನು ಈಗ ಇವರಲ್ಲಿದ್ದೇನೆ. ಮೊದಲಂತೂ
ಬಹಳ ಪ್ರೀತಿಯಿಂದ ಮಹಿಮೆ ಮಾಡುತ್ತಿದ್ದಿರಿ ಮತ್ತು ಭಯವನ್ನಿಟ್ಟುಕೊಳ್ಳುತ್ತಿದ್ದಿರಿ. ಈಗಂತೂ ಅವರೇ
ಇಲ್ಲಿ ಈ ಶರೀರದಲ್ಲಿ ಬಂದಿದ್ದಾರೆ. ಯಾರು ನಿರಾಕಾರನಾಗಿದ್ದರು ಅವರು ಈಗ ಸಾಕಾರದಲ್ಲಿ
ಬಂದುಬಿಟ್ಟಿದ್ದಾರೆ, ಅವರೇ ಕುಳಿತು ಈಗ ಮಕ್ಕಳಿಗೆ ತಿಳಿಸುತ್ತಾರೆ. ಅವರು ಯಾರೆಂದು ಪ್ರಪಂಚಕ್ಕೆ
ತಿಳಿದಿಲ್ಲ. ಗೀತೆಯ ಭಗವಂತನು ಕೃಷ್ಣನೆಂದು ತಿಳಿಯುತ್ತಾರೆ ಮತ್ತು ಅವರು ರಾಜಯೋಗವನ್ನು
ಕಲಿಸುತ್ತಾರೆಂದೂ ಹೇಳಿಬಿಡುತ್ತಾರೆ ಅಂದಮೇಲೆ ತಂದೆಯೇನು ಮಾಡುತ್ತಾರೆ? ನೀವು ಮಾತಾಪಿತಾ ಎಂದು ಭಲೆ
ಹಾಡುತ್ತಿದ್ದಿರಿ ಆದರೆ ಅವರಿಂದ ಯಾವಾಗ ಮತ್ತು ಏನು ಸಿಗುತ್ತದೆ ಎಂಬುದನ್ನು ತಿಳಿದುಕೊಂಡಿರಲಿಲ್ಲ.
ಗೀತೆಯನ್ನು ಕೇಳುವಾಗ ಕೃಷ್ಣನ ಮೂಲಕ ರಾಜಯೋಗವನ್ನು ಕಲಿತಿದ್ದೆವೆಂದು ತಿಳಿಯುತ್ತಿದ್ದಿರಿ ಅಂದಮೇಲೆ
ಅವರು ಯಾವಾಗ ಬಂದು ಕಲಿಸಿಕೊಡುತ್ತಾರೆ? ಎಂಬುದೂ ಸಹ ಗಮನದಲ್ಲಿ ಬರುತ್ತಿರಬಹುದು. ಈ ಸಮಯದಲ್ಲಿ ಇದು
ಅದೇ ಮಹಾಭಾರತ ಯುದ್ಧವಾಗಿದೆ ಅಂದಾಗ ಅವಶ್ಯವಾಗಿ ಕೃಷ್ಣನ ಸಮಯವಾಗಿರಬೇಕು. ಅವಶ್ಯವಾಗಿ ಅದೇ
ಚರಿತ್ರೆ-ಭೂಗೋಳವು ಪುನರಾವರ್ತನೆಯಾಗಬೇಕು. ದಿನ-ಪ್ರತಿದಿನ ಎಲ್ಲವನ್ನೂ ತಿಳಿದುಕೊಳ್ಳುತ್ತಾ
ಹೋಗುತ್ತಾರೆ. ಅವಶ್ಯವಾಗಿ ಗೀತೆಯ ಭಗವಂತನಿರಬೇಕು, ಮಹಾಭಾರತ ಯುದ್ಧವೂ ಸಹ ಈಗ ಕಾಣುತ್ತಿದೆ.
ಅವಶ್ಯವಾಗಿ ಇದು ಈ ಪ್ರಪಂಚದ ಅಂತ್ಯವಾಗಿರಬೇಕು ಎಂಬುದೆಲ್ಲವೂ ತಿಳಿಯುತ್ತಾಹೋಗುತ್ತದೆ. ಪಾಂಡವರು
ಪರ್ವತಗಳ ಮೇಲೆ ಹೊರಟುಹೋದರೆಂದು ತೋರಿಸುತ್ತಾರೆ ಅಂದಾಗ ಅವರ ಬುದ್ಧಿಯಲ್ಲಿ ಇದು ಬರುತ್ತಿರಬಹುದು
- ಅವಶ್ಯವಾಗಿ ವಿನಾಶವು ಸನ್ಮುಖದಲ್ಲಿದೆ, ಈಗ ಕೃಷ್ಣನೆಲ್ಲಿ? ಎಲ್ಲಿಯವರೆಗೆ ನಿಮ್ಮಿಂದ ಗೀತೆಯ
ಭಗವಂತನು ಕೃಷ್ಣನಲ್ಲ ಶಿವನಾಗಿದ್ದಾರೆಂಬುದನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ
ಹುಡುಕುತ್ತಿರುತ್ತಾರೆ. ನಿಮ್ಮ ಬುದ್ಧಿಯಲ್ಲಂತೂ ಈ ಮಾತುಗಳು ಪಕ್ಕಾ ಆಗಿದೆ, ಇದನ್ನು ನೀವೀಗ
ಮರೆಯಲು ಸಾಧ್ಯವಿಲ್ಲ. ನೀವು ಯಾರಿಗೆ ಬೇಕಾದರೂ ತಿಳಿಸಬಹುದು - ಗೀತೆಯ ಭಗವಂತನು ಕೃಷ್ಣನಲ್ಲ,
ಶಿವನಾಗಿದ್ದಾರೆ. ಪ್ರಪಂಚದಲ್ಲಿ ನೀವು ಮಕ್ಕಳ ವಿನಃ ಮತ್ತ್ಯಾರೂ ಹೀಗೆ ಹೇಳುವುದಿಲ್ಲ. ಗೀತೆಯ
ಭಗವಂತನು ರಾಜಯೋಗವನ್ನು ಕಲಿಸುತ್ತಿದ್ದರು ಎಂದರೆ ಅವಶ್ಯವಾಗಿ ಅವರು ನರನಿಂದ
ನಾರಾಯಣನಾಗುತ್ತಾರೆಂಬುದು ಸಿದ್ಧವಾಗುತ್ತದೆ. ಭಗವಂತನೇ ನಮಗೆ ಓದಿಸುತ್ತಾರೆ, ನರನಿಂದ
ನಾರಾಯಣನನ್ನಾಗಿ ಮಾಡುತ್ತಾರೆಂದು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಸ್ವರ್ಗದಲ್ಲಿ ಈ
ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ. ಈಗಂತೂ ಆ ಸ್ವರ್ಗವೂ ಇಲ್ಲ, ಆ ನಾರಾಯಣನೂ ಇಲ್ಲ, ಆ
ದೇವತೆಗಳೂ ಇಲ್ಲ. ಚಿತ್ರಗಳಿವೆ, ಇದರಿಂದಲೇ ಅವರು ಇದ್ದು ಹೋಗಿದ್ದಾರೆಂಬುದನ್ನು ತಿಳಿಯುತ್ತಾರೆ.
ಇವರಿಗೆ ಎಷ್ಟು ವರ್ಷಗಳಾಯಿತು ಎಂಬುದನ್ನು ಈಗ ನೀವು ತಿಳಿದುಕೊಂಡಿದ್ದೀರಿ. ನಿಮಗೆ ಪಕ್ಕಾ
ಅರ್ಥವಾಗಿದೆ, ಇಂದಿಗೆ 5000 ವರ್ಷಗಳ ಮೊದಲು ಇವರ ರಾಜ್ಯವಿತ್ತು, ಈಗ ಅಂತ್ಯವಾಗಿದೆ. ಯುದ್ಧವೂ
ಸನ್ಮುಖದಲ್ಲಿ ನಿಂತಿದೆ. ನಮಗೆ ತಂದೆಯೇ ಓದಿಸುತ್ತಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ.
ಎಲ್ಲಾ ಸೇವಾಕೇಂದ್ರಗಳಲ್ಲಿ ಓದುತ್ತಾರೆ ಮತ್ತು ಓದಿಸುತ್ತಾರೆ. ಓದಿಸುವ ಯುಕ್ತಿಯು ಬಹಳ
ಚೆನ್ನಾಗಿದೆ. ಈ ಚಿತ್ರಗಳ ಮೂಲಕ ಬಹಳ ಒಳ್ಳೆಯ ತಿಳುವಳಿಕೆಯು ಸಿಗುವುದು. ಮುಖ್ಯಮಾತೇನೆಂದರೆ
ಗೀತೆಯ ಭಗವಂತನು ಶಿವನೋ ಅಥವಾ ಕೃಷ್ಣನೋ? ಬಹಳಷ್ಟು ಅಂತರವಿದೆಯಲ್ಲವೆ. ಸ್ವರ್ಗದ ಸ್ಥಾಪನೆ
ಮಾಡುವಂತಹ ಅಥವಾ ಪುನಃ ಆದಿಸನಾತನ ದೇವಿ-ದೇವತಾಧರ್ಮವನ್ನು ಸ್ಥಾಪಿಸುವಂತಹ ಸದ್ಗತಿದಾತನು ಶಿವನೋ
ಅಥವಾ ಕೃಷ್ಣನೋ? ಮುಖ್ಯವಾದ್ದದು ಈ ಮೂರುಮಾತುಗಳ ನಿರ್ಣಯವಾಗಿದೆ. ಇದರ ಮೇಲೆಯೇ ತಂದೆಯೇ
ಒತ್ತುಕೊಟ್ಟು ಹೇಳುತ್ತಾರೆ. ಭಲೆ ಈ ಜ್ಞಾನವನ್ನು ಚೆನ್ನಾಗಿದೆ ಎಂದು ತಮ್ಮ ಅಭಿಪ್ರಾಯವನ್ನು
ಬರೆದುಕೊಡುತ್ತಾರೆ ಆದರೆ ಇದರಿಂದೇನೂ ಲಾಭವಿಲ್ಲ. ನಿಮ್ಮದು ಯಾವ ಮುಖ್ಯಮಾತಿದೆಯೋ ಅದರ ಮೇಲೆ
ಒತ್ತುಕೊಟ್ಟು ಹೇಳಬೇಕಾಗಿದೆ, ಇದರಲ್ಲಿಯೇ ನಿಮ್ಮ ವಿಜಯವಿದೆ. ಭಗವಂತನು ಒಬ್ಬರೇ ಆಗಿದ್ದಾರೆಂದು
ನೀವು ಸಿದ್ಧಮಾಡಿ ತಿಳಿಸುತ್ತೀರಿ. ಗೀತೆಯನ್ನು ತಿಳಿಸುವವರೂ ಸಹ ಭಗವಂತರಾಗಿಬಿಟ್ಟರೆಂದಲ್ಲ.
ಭಗವಂತನು ಈ ರಾಜಯೋಗ ಮತ್ತು ಜ್ಞಾನದ ಮೂಲಕ ದೇವಿ-ದೇವತಾಧರ್ಮದ ಸ್ಥಾಪನೆ ಮಾಡಿದರು.
ತಂದೆಯು ತಿಳಿಸುತ್ತಾರೆ
– ಮಕ್ಕಳ ಮೇಲೆ ಮಾಯೆಯ ಯುದ್ಧವು ಆಗುತ್ತಿರುತ್ತದೆ. ಇಲ್ಲಿಯವರೆಗೂ ಯಾರೂ ಕರ್ಮಾತೀತ ಸ್ಥಿತಿಯನ್ನು
ಪಡೆದಿಲ್ಲ. ಪುರುಷಾರ್ಥವನ್ನು ಮಾಡುತ್ತಾ-ಮಾಡುತ್ತಾ ಅಂತಿಮದಲ್ಲಿ ನೀವು ಒಬ್ಬ ತಂದೆಯ ನೆನಪಿನಲ್ಲಿ
ನೀವು ಸದಾ ಹರ್ಷಿತರಾಗಿರುತ್ತೀರಿ. ಯಾವುದೇ ಬೇಸರವುಂಟಾಗುವುದಿಲ್ಲ. ಈಗಂತೂ ತಲೆಯ ಮೇಲೆ ಪಾಪಗಳ
ಬಹಳ ಹೊರೆಯಿದೆ, ಅದು ನೆನಪಿನಿಂದಲೇ ಕಳೆಯುವುದು. ತಂದೆಯು ಪುರುಷಾರ್ಥದ ಯುಕ್ತಿಯನ್ನು
ತಿಳಿಸಿದ್ದಾರೆ. ನೆನಪಿನಿಂದಲೇ ಪಾಪಗಳು ಭಸ್ಮವಾಗುತ್ತವೆ. ಅನೇಕರು ಮೂಡಮತಿಗಳು ನೆನಪಿನಲ್ಲಿರದೇ
ಇರುವ ಕಾರಣ ಮತ್ತೆ ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಹರ್ಷಿತಮುಖಿಯಾಗಿ ಅನ್ಯರಿಗೆ
ಜ್ಞಾನ ತಿಳಿಸುವುದೂ ಸಹ ಕಷ್ಟವಾಗುತ್ತದೆ. ಇಂದು ಯಾರಿಗಾದರೂ ತಿಳಿಸಿದರು ಮತ್ತೆ ನಾಳೆ ಏನಾದರೂ
ಬೇಸರವಾದರೆ ಖುಷಿಯು ಮರೆಯಾಗಿಬಿಡುತ್ತದೆ ಆಗ ಮಾಯೆಯ ಘರ್ಷಣೆಯಾಗುತ್ತಿದೆ ಎಂದು ತಿಳಿಯಬೇಕು.
ಆದ್ದರಿಂದ ಪುರುಷಾರ್ಥ ಮಾಡಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಅಳುವುದು, ಚೀರಾಡುವುದು ಮಾಡಬಾರದು.
ಮಾಯೆಯು ಚಪ್ಪಲಿಯಿಂದ ಹೊಡೆಯುತ್ತಿದೆ ಎಂದು ತಿಳಿಯಬೇಕು ಆದ್ದರಿಂದ ಪುರುಷಾರ್ಥ ಮಾಡಿ ತಂದೆಯ ನೆನಪು
ಮಾಡಬೇಕು. ತಂದೆಯ ನೆನಪಿನಿಂದಲೇ ಬಹಳ ಖುಷಿಯಿರುವುದು ಆಗ ಮುಖದಿಂದ ತಕ್ಷಣ ಮಾತು ಬರುವುದು.
ಪತಿತ-ಪಾವನ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿರಿ. ಯಾರೊಬ್ಬ ಮನುಷ್ಯನಿಗೂ
ರಚಯಿತ ತಂದೆಯ ಪರಿಚಯವಿಲ್ಲ. ಮನುಷ್ಯರಾಗಿಯೂ ತಂದೆಯನ್ನು ಅರಿತುಕೊಂಡಿಲ್ಲವೆಂದರೆ ಪ್ರಾಣಿಗಿಂತಲೂ
ಕೀಳಾದರು. ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ ಅಂದಾಗ ತಂದೆಯನ್ನು ಹೇಗೆ ನೆನಪು ಮಾಡುವುದು!
ಇದೇ ದೊಡ್ಡ ತಪ್ಪಾಗಿದೆ. ಇದನ್ನು ನೀವು ತಿಳಿಸಿಕೊಡಬೇಕಾಗಿದೆ. ಗೀತೆಯ ಭಗವಂತನು
ಶಿವತಂದೆಯಾಗಿದ್ದಾರೆ, ಅವರೇ ಆಸ್ತಿಯನ್ನು ಕೊಡುತ್ತಾರೆ, ಮುಕ್ತಿ-ಜೀವನ್ಮುಕ್ತಿದಾತನಾಗಿದ್ದಾರೆ.
ಅನ್ಯಧರ್ಮದವರ ಬುದ್ಧಿಯಲ್ಲಿ ಇದು ಕುಳಿತುಕೊಳ್ಳುವುದಿಲ್ಲ. ಅವರು ತಮ್ಮ ಲೆಕ್ಕಾಚಾರಗಳನ್ನು
ಸಮಾಪ್ತಿ ಮಾಡಿಕೊಂಡು ಹಿಂತಿರುಗಿ ಹೊರಟುಹೋಗುತ್ತಾರೆ. ಅಂತಿಮದಲ್ಲಿ ಸ್ವಲ್ಪ ಪರಿಚಯವು ಸಿಗುತ್ತದೆ,
ಮತ್ತೆ ತಮ್ಮ ಧರ್ಮದಲ್ಲಿ ಹೊರಟುಹೋಗುತ್ತಾರೆ. ನಿಮಗೆ ತಂದೆಯು ತಿಳಿಸುತ್ತಾರೆ - ನೀವು
ದೇವತೆಗಳಾಗಿದ್ದಿರಿ, ಈಗಲೂ ಸಹ ಪುನಃ ತಂದೆಯನ್ನು ನೆನಪು ಮಾಡಿದರೆ ನೀವು ದೇವತೆಗಳಾಗಿಬಿಡುತ್ತೀರಿ.
ವಿಕರ್ಮಗಳು ವಿನಾಶವಾಗುತ್ತವೆ. ಆದರೂ ಸಹ ಮತ್ತೆ ಉಲ್ಟಾ ವ್ಯವಹಾರವನ್ನು ಮಾಡಿಬಿಡುತ್ತಾರೆ. ಬಾಬಾ,
ಇಂದು ನನ್ನ ಸ್ಥಿತಿಯು ಮುದುಡಿ ಹೋಗಿದೆ. ತಂದೆಯನ್ನು ನೆನಪು ಮಾಡಲಿಲ್ಲವೆಂದು ಬರೆಯುತ್ತಾರೆ.
ನೆನಪು ಮಾಡದಿದ್ದರೆ ಅವಶ್ಯವಾಗಿ ಬಾಡಿಹೋಗುತ್ತಾರೆ. ಇದು ಶವಗಳ ಪ್ರಪಂಚವಾಗಿದೆ, ಎಲ್ಲರೂ
ಸತ್ತುಬಿದ್ದಿದ್ದಾರೆ. ನೀವು ತಂದೆಯ ಮಕ್ಕಳಾಗಿದ್ದೀರಿ ಅಂದಾಗ ತಂದೆಯ ಆದೇಶವಾಗಿದೆ, ನನ್ನನ್ನು
ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವುದು. ಈ ಶರೀರವಂತೂ ಹಳೆಯ ತಮೋಪ್ರಧಾನವಾಗಿದೆ.
ಅಂತಿಮದವರೆಗೂ ಏನಾದರೊಂದು ಆಗುತ್ತಾ ಇರುವುದು. ಎಲ್ಲಿಯವರೆಗೆ ತಂದೆಯ ನೆನಪಿನಲ್ಲಿದ್ದು ಕರ್ಮಾತೀತ
ಸ್ಥಿತಿಯನ್ನು ಹೊಂದುವುದಿಲ್ಲವೋ ಅಲ್ಲಿಯವರೆಗೆ ಮಾಯೆಯು ಅಲುಗಾಡಿಸುತ್ತಾ ಇರುವುದು. ಇದು ಯಾರನ್ನೂ
ಬಿಡುವುದಿಲ್ಲ ಆದ್ದರಿಂದ ಮಾಯೆಯು ಹೇಗೆ ಮೋಸಗೊಳಿಸುತ್ತದೆ! ಎಂಬುದನ್ನು ಪರಿಶೀಲನೆ
ಮಾಡಿಕೊಳ್ಳುತ್ತಿರಬೇಕು. ಭಗವಂತನೇ ನಮಗೆ ಓದಿಸುತ್ತಾರೆ, ಇದನ್ನೇಕೆ ಮರೆಯುವಿರಿ? ನನ್ನ
ಪ್ರಾಣಕ್ಕಿಂತಲೂ ಪ್ರಿಯ ಅವರೊಬ್ಬರೇ ತಂದೆಯಾಗಿದ್ದಾರೆ ಎಂದು ಆತ್ಮವು ಹೇಳುತ್ತದೆ ಅಂದಮೇಲೆ ಮತ್ತೆ
ಮರೆಯುವುದಾದರೂ ಏಕೆ! ತಂದೆಯು ದಾನ ಮಾಡುವುದಕ್ಕಾಗಿ ಧನವನ್ನು ಕೊಡುತ್ತಾರೆ. ಪ್ರದರ್ಶನಿ,
ಮೇಳಗಳಲ್ಲಿ ನೀವು ಅನೇಕರಿಗೆ ದಾನ ಮಾಡಬಹುದಾಗಿದೆ. ತಾವೇ ಅಭಿರುಚಿಯಿಂದ ಸೇವೆಗಾಗಿ ಓಡಿಹೋಗಬೇಕು.
ಈಗಂತೂ ಹೋಗಿ ತಿಳಿಸಿಕೊಡಿ ಎಂದು ತಂದೆಯು ಒತ್ತಾಯ ಮಾಡಬೇಕಾಗುತ್ತದೆ. ಪ್ರದರ್ಶನಿಯಲ್ಲಿಯೂ ಬಹಳ
ತಿಳಿದುಕೊಂಡಿರುವವರು ಬೇಕು. ದೇಹಾಭಿಮಾನಿಗಳ ಬಾಣವು ನಾಟುವುದಿಲ್ಲ. ಹೇಗೆ ಕತ್ತಿಗಳಲ್ಲಿಯೂ
ಅನೇಕಪ್ರಕಾರವಿರುತ್ತದೆಯಲ್ಲವೆ. ನಿಮ್ಮ ಯೋಗದ ಕತ್ತಿಯೂ ಸಹ ಬಹಳ ಹರಿತವಾಗಿರಬೇಕು. ಹೋಗಿ ಅನೇಕರ
ಕಲ್ಯಾಣ ಮಾಡಬೇಕೆಂದು ಸರ್ವೀಸಿನ ಉಲ್ಲಾಸವಿರಬೇಕು. ಅಂತಿಮ ಸಮಯದಲ್ಲಿ ಒಬ್ಬ ತಂದೆಯ ವಿನಃ
ಮತ್ತ್ಯಾರದೂ ನೆನಪು ಬಾರದಿರುವಂತಹ ಅಭ್ಯಾಸವಾಗಬೇಕು ಆಗಲೇ ನೀವು ರಾಜ್ಯಪದವಿಯನ್ನು ಪಡೆಯುವಿರಿ.
ಅಂತ್ಯಕಾಲದಲ್ಲಿ ಯಾರು ತಂದೆಯನ್ನು ಸ್ಮರಿಸಿದರೋ ಅವರು ಭಗವಂತನನ್ನು ಸೇರಿದರೆಂದು ಹೇಳುತ್ತಾರೆ.
ತಂದೆ ಮತ್ತು ಆಸ್ತಿಯನ್ನೇ ನೆನಪು ಮಾಡಬೇಕಾಗಿದೆ ಆದರೆ ಮಾಯೆಯು ಕಡಿಮೆಯಿಲ್ಲ. ಅನೇಕರು ಇದರಲ್ಲಿ
ಕಚ್ಚಾ ಆಗಿಬಿಡುತ್ತಾರೆ. ಯಾವಾಗ ಅನ್ಯರ ನಾಮರೂಪದಲ್ಲಿ ಸಿಕ್ಕಿಹಾಕಿಕೊಳ್ಳುವರೋ ಆಗ ಉಲ್ಟಾಕರ್ಮಗಳ
ಖಾತೆಯಾಗುತ್ತದೆ. ಒಬ್ಬರು ಇನ್ನೊಬ್ಬರಿಗೆ ವ್ಯಕ್ತಿಗತವಾಗಿ ಪತ್ರಗಳನ್ನು ಬರೆಯುತ್ತಾರೆ.
ದೇಹಧಾರಿಗಳೊಂದಿಗೆ ಪ್ರೀತಿಯುಂಟಾಗುತ್ತದೆಯೆಂದರೆ ಉಲ್ಟಾ ಕರ್ಮಗಳ ಖಾತೆಯಾಗಿಬಿಡುತ್ತದೆ. ತಂದೆಯ
ಬಳಿ ಸಮಾಚಾರವು ಬರುತ್ತದೆ. ವಿರುದ್ಧ ಕೆಲಸಗಳನ್ನು ಮಾಡಿ, ಬಾಬಾ ಹೀಗಾಗಿಬಿಟ್ಟಿತೆಂದು
ಹೇಳಿಬಿಡುತ್ತಾರೆ. ಅರೆ! ಖಾತೆಯಂತೂ ಉಲ್ಟಾ ಆಯಿತಲ್ಲವೆ. ಈ ಶರೀರವಂತೂ ಮೈಲಿಗೆಯಾಗಿದೆ, ನೀವು
ಅದನ್ನೇಕೆ ನೆನಪು ಮಾಡುತ್ತೀರಿ? ನನ್ನನ್ನು ನೆನಪು ಮಾಡಿದರೆ ಸದಾ ಖುಷಿಯಿರುವುದು ಎಂದು ತಂದೆಯು
ತಿಳಿಸುತ್ತಾರೆ ಆದರೆ ಇಂದು ಖುಷಿಯಲ್ಲಿರುತ್ತಾರೆ ನಾಳೆ ಶವಗಳಂತೆ ಬಾಡಿಹೋಗುತ್ತಾರೆ.
ಜನ್ಮ-ಜನ್ಮಾಂತರಗಳಿಂದಲೂ ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾ ಬಂದಿದ್ದಾರಲ್ಲವೆ.
ಸ್ವರ್ಗದಲ್ಲಿ ಈ ನಾಮ-ರೂಪದ ಖಾಯಿಲೆಯಿಲ್ಲ, ಅಲ್ಲಂತೂ ಮೋಹಜೀತ ಕುಟುಂಬವಾಗಿರುತ್ತದೆ. ಅವರಿಗೆ
ತಿಳಿದಿರುತ್ತದೆ - ನಾವಾತ್ಮಗಳಾಗಿದ್ದೇವೆ, ಶರೀರವಲ್ಲ. ಅದು ಆತ್ಮಾಭಿಮಾನಿ ಪ್ರಪಂಚವಾಗಿದೆ, ಇದು
ದೇಹಾಭಿಮಾನಿ ಪ್ರಪಂಚವಾಗಿದೆ. ಮತ್ತೆಮತ್ತೆ ಅರ್ಧಕಲ್ಪಕ್ಕಾಗಿ ದೇಹೀ-ಅಭಿಮಾನಿಗಳಾಗಿಬಿಡುತ್ತೀರಿ.
ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ದೇಹಾಭಿಮಾನವನ್ನು ಬಿಡಿ, ಆತ್ಮಾಭಿಮಾನಿಗಳಾಗುವುದರಿಂದ
ಬಹಳ ಮಧುರ, ಶೀತಲರಾಗಿಬಿಡುತ್ತೀರಿ. ಇಂತಹವರು ಕೆಲವರೇ ಇದ್ದಾರೆ, ಅವರು ತಂದೆಯ ನೆನಪನ್ನು
ಮರೆಯದಂತಹ ಪುರುಷಾರ್ಥವನ್ನು ಮಾಡಿಸುತ್ತಿರುತ್ತಾರೆ. ತಂದೆಯು ಆದೇಶ ನೀಡುತ್ತಾರೆ - ಮಕ್ಕಳೇ,
ನನ್ನನ್ನು ನೆನಪು ಮಾಡಿ, ದಿನಚರಿಯನ್ನಿಟ್ಟುಕೊಳ್ಳಿ ಆದರೆ ಮಾಯೆಯು
ದಿನಚರಿಯನ್ನಿಟ್ಟುಕೊಳ್ಳುವುದಕ್ಕೂ ಬಿಡುವುದಿಲ್ಲ. ಇಂತಹ ಮಧುರ ತಂದೆಯನ್ನು ಎಷ್ಟೊಂದು ನೆನಪು
ಮಾಡಬೇಕು. ಇವರಂತೂ ತಂದೆಯರ ತಂದೆ, ಪತಿಯರ ಪತಿಯಾಗಿದ್ದಾರಲ್ಲವೆ. ತಂದೆಯನ್ನು ನೆನಪು ಮಾಡಿ ಮತ್ತು
ಅನ್ಯರನ್ನೂ ತಮ್ಮ ಸಮಾನರನ್ನಾಗಿ ಮಾಡುವ ಪುರುಷಾರ್ಥ ಮಾಡಬೇಕಾಗಿದೆ. ಇದರಲ್ಲಿ ಬಹಳ
ವಿಶಾಲಹೃದಯವನ್ನಿಟ್ಟುಕೊಳ್ಳಬೇಕು. ಸೇವಾಧಾರಿ ಮಕ್ಕಳನ್ನು ತಂದೆಯೇ ನೌಕರಿಯಿಂದ ಬಿಡಿಸುತ್ತಾರೆ.
ಈಗ ಈ ಕಾರ್ಯದಲ್ಲಿ ತೊಡಗಿ ಎಂದು ತಂದೆಯು ಪ್ರತಿಯೊಬ್ಬರ ಸನ್ನಿವೇಶವನ್ನು ನೋಡಿ ಹೇಳುತ್ತಾರೆ.
ಲಕ್ಷ್ಯವಂತೂ ಸನ್ಮುಖದಲ್ಲಿದೆ, ಭಕ್ತಿಮಾರ್ಗದಲ್ಲಿಯೂ ಚಿತ್ರಗಳ ಮುಂದೆ ಹೋಗಿ ನೆನಪಿನಲ್ಲಿ
ಕುಳಿತುಕೊಳ್ಳುತ್ತಾರಲ್ಲವೆ. ನೀವಂತೂ ಕೇವಲ ಆತ್ಮವೆಂದು ತಿಳಿದು ಪರಮಾತ್ಮ ತಂದೆಯನ್ನು ನೆನಪು
ಮಾಡಬೇಕಾಗಿದೆ. ವಿಚಿತ್ರರಾಗಿ ವಿಚಿತ್ರತಂದೆಯನ್ನು ನೆನಪು ಮಾಡಬೇಕಾಗಿದೆ. ಇದರಲ್ಲಿ ಪರಿಶ್ರಮವಿದೆ.
ವಿಶ್ವದ ಮಾಲೀಕರಾಗುವುದು ಚಿಕ್ಕಮ್ಮನ ಮನೆಯಂತಲ್ಲ. ತಂದೆಯು ತಿಳಿಸುತ್ತಾರೆ - ನಾನಂತೂ ವಿಶ್ವದ
ಮಾಲೀಕನಾಗುವುದಿಲ್ಲ, ನಿಮ್ಮನ್ನು ಮಾಡುತ್ತೇನೆ. ಎಷ್ಟೊಂದು ತಲೆಕೆಡಿಸಿಕೊಳ್ಳಬೇಕಾಗುತ್ತದೆ.
ಸುಪುತ್ರರಿಗೆ ತಾನಾಗಿಯೇ ಚಿಂತೆಯಿರುತ್ತದೆ. ಅವರು ರಜೆಯನ್ನು ತೆಗೆದುಕೊಂಡಾದರೂ ಸೇವೆಯಲ್ಲಿ
ತೊಡಗುತ್ತಾರೆ. ಕೆಲವು ಮಕ್ಕಳಿಗೆ ಬಂಧನವೂ ಇದೆ, ಮೋಹವೂ ಇರುತ್ತದೆ. ಈಗ ತಂದೆಯು ತಿಳಿಸುತ್ತಾರೆ -
ನಿಮ್ಮ ಎಲ್ಲಾ ರೋಗಗಳು ಹೊರಬರುತ್ತವೆ. ನೀವು ತಂದೆಯನ್ನು ನೆನಪು ಮಾಡುತ್ತಾ ಇರಿ. ಮಾಯೆಯು
ನಿಮ್ಮನ್ನು ದೂರಮಾಡುವ ಪ್ರಯತ್ನಪಡುತ್ತದೆ. ಇಲ್ಲಿ ನೆನಪೇ ಮುಖ್ಯವಾಗಿದೆ, ರಚಯಿತ ಮತ್ತು ರಚನೆಯ
ಆದಿ-ಮಧ್ಯ-ಅಂತ್ಯದ ಜ್ಞಾನವು ಸಿಕ್ಕಿತೆಂದಮೇಲೆ ಇನ್ನೇನು ಬೇಕು! ಭಾಗ್ಯವಂತ ಮಕ್ಕಳು ಎಲ್ಲರಿಗೆ
ಸುಖವನ್ನು ಕೊಡುವ ಪುರುಷಾರ್ಥ ಮಾಡುತ್ತಾರೆ. ಮನಸಾ-ವಾಚಾ-ಕರ್ಮಣಾ ಯಾರಿಗೂ ದುಃಖ ಕೊಡುವುದಿಲ್ಲ.
ಶೀತಲರಾಗಿ ನಡೆಯುತ್ತಾರೆಂದರೆ ಭಾಗ್ಯವಾಗುತ್ತಾ ಹೋಗುತ್ತದೆ. ಒಂದುವೇಳೆ ಯಾರಾದರೂ
ತಿಳಿದುಕೊಳ್ಳಲಿಲ್ಲವೆಂದರೆ ಅವರ ಭಾಗ್ಯದಲ್ಲಿ ಇಲ್ಲವೆಂದು ತಿಳಿಯಲಾಗುತ್ತದೆ. ಯಾರ
ಭಾಗ್ಯದಲ್ಲಿದೆಯೋ ಅವರು ಚೆನ್ನಾಗಿ ಕೇಳುತ್ತಾರೆ. ಮೊದಲು ಏನೇನು ಮಾಡುತ್ತಿದ್ದರೆಂದು ಅನುಭವವನ್ನು
ತಿಳಿಸುತ್ತಾರಲ್ಲವೆ. ಏನೆಲ್ಲವನ್ನು ಮಾಡಿದ್ದರೋ ಅದರಿಂದ ದುರ್ಗತಿಯೇ ಆಯಿತೆಂದು ಈಗ ತಿಳಿಯುತ್ತದೆ.
ತಂದೆಯನ್ನು ನೆನಪು ಮಾಡಿದಾಗಲೇ ಸದ್ಗತಿಯನ್ನು ಪಡೆಯುವರು. ಕೆಲವರು ಅರ್ಧಗಂಟೆ ಅಥವಾ ಒಂದು ಗಂಟೆಯ
ಸಮಯವೂ ಸಹ ನೆನಪಿನಲ್ಲಿರುವುದು ವಿರಳ ಆದ್ದರಿಂದಲೇ ತೂಕಡಿಸುತ್ತಿರುತ್ತಾರೆ. ತಂದೆಯು
ತಿಳಿಸುತ್ತಾರೆ - ಅರ್ಧಕಲ್ಪ ನೀವು ಪಶ್ಚಾತ್ತಾಪ ಪಟ್ಟಿದ್ದೀರಿ (ತೂಕಡಿಸಿದಿರಿ), ಈಗ ತಂದೆಯು
ಸಿಕ್ಕಿದ್ದಾರೆ, ವಿದ್ಯಾರ್ಥಿಜೀವನವಾಗಿದೆ ಅಂದಮೇಲೆ ಖುಷಿಯಿರಬೇಕಲ್ಲವೆ ಆದರೆ ತಂದೆಯನ್ನು ಪದೇ-ಪದೇ
ಮರೆತುಹೋಗುತ್ತಾರೆ.
ತಂದೆಯು ತಿಳಿಸುತ್ತಾರೆ
- ನೀವು ಕರ್ಮಯೋಗಿಗಳಾಗಿದ್ದೀರಿ, ಆ ಉದ್ಯೋಗ-ವ್ಯವಹಾರಗಳನ್ನು ಮಾಡಲೇಬೇಕಾಗಿದೆ. ನಿದ್ರೆಯನ್ನು
ಕಡಿಮೆ ಮಾಡುವುದು. ಒಳ್ಳೆಯದು. ನೆನಪಿನಿಂದ ಸಂಪಾದನೆಯಾಗುವುದು, ಖುಷಿಯೂ ಇರುವುದು. ನೆನಪಿನಲ್ಲಿ
ಕುಳಿತುಕೊಳ್ಳುವುದು ಅವಶ್ಯಕವಾಗಿದೆ. ದಿನದಲ್ಲಂತೂ ಬಿಡುವು ಸಿಗುವುದಿಲ್ಲ ಆದ್ದರಿಂದ
ಮುಂಜಾನೆಯಲ್ಲಿ ಸಮಯವನ್ನು ತೆಗೆಯಬೇಕು. ನೆನಪು ಮಾಡುವುದರಿಂದ ಬಹಳ ಖುಷಿಯಿರುವುದು. ಯಾರಿಗಾದರೂ
ಬಂಧನವಿದ್ದರೆ ಅವರೂ ಸಹ ಹೇಳಬಹುದು - ನಾವಂತೂ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ
ಅಂದಮೇಲೆ ಇದರಲ್ಲಿ ಯಾರೂ ತಡೆಯಲು ಸಾಧ್ಯವಿಲ್ಲ. ಕೇವಲ ಸರ್ಕಾರಕ್ಕೆ ಹೋಗಿ ತಿಳಿಸಿ - ವಿನಾಶವು
ಸನ್ಮುಖದಲ್ಲಿ ನಿಂತಿದೆ, ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತದೆ ಮತ್ತು ಈ
ಅಂತಿಮ ಜನ್ಮದಲ್ಲಿ ಪವಿತ್ರರಾಗಿರಬೇಕೆಂದು ತಂದೆಯು ತಿಳಿಸುತ್ತಾರೆ ಆದ್ದರಿಂದ ನಾವು
ಪವಿತ್ರರಾಗುತ್ತೇವೆ ಅಂದಾಗ ಯಾರಿಗೆ ಜ್ಞಾನದ ನಶೆಯಿರುವುದೋ ಅವರೇ ಈ ರೀತಿ ಹೇಳುತ್ತಾರೆ. ಇಲ್ಲಿಗೆ
ಬಂದಮೇಲೂ ದೇಹಧಾರಿಗಳನ್ನು ನೆನಪು ಮಾಡುವುದು ದೇಹಾಭಿಮಾನದಲ್ಲಿ ಬಂದು ಜಗಳ-ಕಲಹ ಮಾಡುವುದು ಕ್ರೋಧದ
ಭೂತವಾಗಿಬಿಡುತ್ತದೆ. ತಂದೆಯು ಕ್ರೋಧ ಮಾಡುವವರ ಕಡೆ ನೋಡುವುದೂ ಇಲ್ಲ. ಸೇವೆ ಮಾಡುವವರೊಂದಿಗೇ
ಪ್ರೀತಿಯಿರುತ್ತದೆ. ಯಾವಾಗ ತಂದೆಯನ್ನು ನೆನಪು ಮಾಡುವಿರೋ ಆಗಲೇ ಹೂಗಳಾಗುತ್ತೀರಿ. ಇದೇ
ಮೂಲಮಾತಾಗಿದೆ. ಒಬ್ಬರು ಇನ್ನೊಬ್ಬರನ್ನು ನೋಡುತ್ತಲೂ ತಂದೆಯನ್ನು ನೆನಪು ಮಾಡಬೇಕಾಗಿದೆ.
ಸೇವೆಯಲ್ಲಿ ಮೂಳೆ-ಮೂಳೆಗಳನ್ನು ಸವೆಸಬೇಕು. ಬ್ರಾಹ್ಮಣರು ಪರಸ್ಪರ ಕ್ಷೀರಖಂಡವಾಗಿರಬೇಕು,
ಉಪ್ಪುನೀರಾಗಬಾರದು. ತಿಳುವಳಿಕೆಯಿಲ್ಲದ ಕಾರಣ ಪರಸ್ಪರರೊಂದಿಗೆ ತಿರಸ್ಕಾರ ಮತ್ತು ತಂದೆಯೊಂದಿಗೂ
ತಿರಸ್ಕಾರವನ್ನು ತೋರುತ್ತಿರುತ್ತಾರೆ. ಇಂತಹವರು ಯಾವ ಪದವಿಯನ್ನು ಪಡೆಯುತ್ತಾರೆ! ನಿಮಗೆ
ಸಾಕ್ಷಾತ್ಕಾರವಾಗುತ್ತದೆ, ಆ ಸಮಯದಲ್ಲಿ ನಾವು ಇಂತಹ ತಪ್ಪು ಮಾಡಿದೆವೆಂದು ಸ್ಮೃತಿಯು ಬರುತ್ತದೆ.
ಆಗ ನಿಮ್ಮ ಅದೃಷ್ಟದಲ್ಲಿಲ್ಲವೆಂದರೆ ಏನು ಮಾಡಲು ಸಾಧ್ಯ ಎಂದು ತಂದೆಯೂ ಸಹ ಹೇಳಿಬಿಡುತ್ತಾರೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ನಿರ್ಬಂಧನರಾಗಲು ಜ್ಞಾನದ ನಶೆಯಿರಲಿ, ದೇಹಾಭಿಮಾನದ ಚಲನೆಯಿರಬಾರದು. ಪರಸ್ಪರ ಉಪ್ಪುನೀರಾಗಿರುವ
ಸಂಸ್ಕಾರವಿರಬಾರದು. ದೇಹಧಾರಿಗಳೊಂದಿಗೆ ಪ್ರೀತಿಯಿದ್ದರೆ ಬಂಧನಮುಕ್ತರಾಗಲು ಸಾಧ್ಯವಿಲ್ಲ.
2.
ಕರ್ಮಯೋಗಿಯಾಗಿರಬೇಕಾಗಿದೆ. ನೆನಪಿನಲ್ಲಿ ಕುಳಿತುಕೊಳ್ಳುವುದು ಬಹಳ ಅವಶ್ಯವಾಗಿದೆ.
ಆತ್ಮಾಭಿಮಾನಿಯಾಗಿ ಬಹಳ ಮಧುರ ಮತ್ತು ಶೀತಲರಾಗುವ ಪುರುಷಾರ್ಥ ಮಾಡಬೇಕಾಗಿದೆ. ಸೇವೆಯಲ್ಲಿ
ಮೂಳೆ-ಮೂಳೆಯನ್ನು ಸವೆಸಬೇಕಾಗಿದೆ.
ವರದಾನ:
ಶ್ರೀಮತದಿಂದ
ಮನಮತ ಮತ್ತು ಜನಮತದ ಕಲ್ಮಶವನ್ನು ಸಮಾಪ್ತಿ ಮಾಡುವಂತಹ ಸತ್ಯ ಸ್ವ-ಕಲ್ಯಾಣಿ ಭವ.
ತಂದೆ ಮಕ್ಕಳಿಗೆ ಎಲ್ಲಾ
ಖಜಾನೆಯನ್ನು ಸ್ವ-ಕಲ್ಯಾಣ ಮತ್ತು ವಿಶ್ವ ಕಲ್ಯಾಣದ ಪ್ರತಿ ಕೊಟ್ಟಿದ್ದಾರೆ. ಆದರೆ ಅದನ್ನು
ವ್ಯರ್ಥದ ಕಡ ತೊಡಗಿಸುವುದು, ಅಕಲ್ಯಾಣದ ಕಾರ್ಯದಲ್ಲಿ ತೊಡಗಿಸುವುದು, ಶ್ರೀಮತದಲ್ಲಿ ಮನಮತ ಮತ್ತು
ಜನಮತವನ್ನು ಬೆರಕೆ ಮಾಡುವುದು - ಇದು ಅಮಾನತ್ ನಲ್ಲಿ ಖಯಾನತ್ ಮಾಡಿದ ಹಾಗೆ. ಈಗ ಈ ಖಯಾನತ್ ಹಾಗು
ಕಲ್ಮಶವನ್ನು ಸಮಾಪ್ತಿ ಮಾಡಿ ರುಹಾನಿಯತ್(ಆತ್ಮೀಯತೆ) ಮತ್ತು ದಯೆಯನ್ನು ಧಾರಣೆ ಮಾಡಿ. ತಮ್ಮ ಮೇಲೆ
ಮತ್ತು ಸರ್ವರ ಮೇಲೆ ದಯೆ ತೋರಿಸಿ ಸ್ವ ಕಲ್ಯಾಣಿಕಾರಿಯಾಗಿ. ಸ್ವಯಂ ಅನ್ನು ನೋಡಿ, ತಂದೆಯನ್ನು ನೋಡಿ
ಬೇರೆಯವರನ್ನು ನೋಡಬೇಡಿ.
ಸ್ಲೋಗನ್:
ಯಾರು ಎಲ್ಲೂ
ಆಕರ್ಷಿತರಾಗುವುದಿಲ್ಲವೋ, ಅವರೇ ಸದಾ ಹರ್ಷಿತರಾಗಿರಲು ಸಾಧ್ಯ.
ಅವ್ಯಕ್ತ ಸೂಚನೆ:
ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ
“ಬಾಬಾ ಮತ್ತು ನಾವು” –
ಕಂಬೈಂಡ್ ಆಗಿದ್ದೇವೆ, ಮಾಡಿಸುವಂತಹವರು ತಂದೆ ಮತ್ತು ಮಾಡುವುದಕ್ಕೆ ನಿಮಿತ್ತ ನಾನಾತ್ಮನಾಗಿದ್ದೇನೆ
– ಇದಕ್ಕೆ ಹೇಳಲಾಗುತ್ತದೆ ಒಬ್ಬರ ನೆನಪು. ಶುಭಚಿಂತನೆಯಲ್ಲಿರುವವರಿಗೆ ಎಂದೂ ಚಿಂತೆಯಿರುವುದಿಲ್ಲ.
ಹೇಗೆ ತಂದೆ ಮತ್ತು ನೀವು ಕಂಬೈಂಡ್ ಆಗಿದ್ದೀರಿ, ಶರೀರ ಮತ್ತು ಆತ್ಮ ಕಂಬೈಂಡ್ ಆಗಿದೆ, ನಿಮ್ಮ
ಭವಿಷ್ಯ ವಿಷ್ಣು ಸ್ವರೂಪ ಕಂಬೈಂಡ್ ಆಗಿದೆ, ಹೀಗೆ ಸ್ವ-ಸೇವೆ ಮತ್ತು ಸರ್ವರ ಸೇವೆ ಕಂಬೈಂಡ್ವಾಗಿರಲಿ
ಆಗ ಪರಿಶ್ರಮ ಕಡಿಮೆ ಸಫಲತೆ ಹೆಚ್ಚು ಸಿಗುವುದು.