05.04.26    Avyakt Bapdada     Kannada Murli    15.11.2009     Om Shanti     Madhuban


“ಸ್ವರಾಜ್ಯದ ರಿಜಲ್ಟ್ನ್ನು ಪರಿಶೀಲನೆ ಮಾಡಿಕೊಂಡು ಸ್ವಯಂನ್ನು ಪರಿವರ್ತನೆ ಮಾಡಿಕೊಳ್ಳಿ ಮತ್ತು ಅಖಂಡ ರಾಜ್ಯಕ್ಕೆ ಅಧಿಕಾರಿ ಆಗಿ”


ಈ ದಿನ ಹೃದಯ ರಾಮ ತಂದೆ ತನ್ನ ಪ್ರಿಯ ರಾಜಾ ಮಕ್ಕಳನ್ನು ಮಿಲನ ಮಾಡಲು ಬಂದಿದ್ದಾರೆ, ಏಕೆ ಪ್ರಿಯರಾಗಿದ್ದೀರಿ? ತಾವು ಪ್ರತಿಯೊಬ್ಬ ಮಕ್ಕಳು ಮೂರು ಸಿಂಹಾಸನಗಳಿಗೆ ಮಾಲೀಕರಾಗಿದ್ದೀರಿ ಎಂದು ಗೊತ್ತಿದೆಯೇ? ಒಂದು ಸ್ವರಾಜ್ಯದ ಸಿಂಹಾಸನ, ಇನ್ನೊಂದು ಬಾಪ್ದಾದಾರವರ ಹೃದಯ ಸಿಂಹಾಸನ, ಮೂರನೆಯದು ಭವಿಷ್ಯದ ಸಿಂಹಾಸನ. ಮೂರು ಸಿಂಹಾಸನಗಳು ಕಾಣಿಸುತ್ತಿದ್ದೆಯೇ? ತಮ್ಮ ಭವಿಷ್ಯ ಸಿಂಹಾಸನದ್ದೂ ಸಹ ಇಲ್ಲಿಯೇ ಅಭ್ಯಾಸ ಮಾಡುತ್ತಿದ್ದೀರಿ. ಭವಿಷ್ಯದ ತಯಾರಿ ಅಥವಾ ಪುರುಷಾರ್ಥ ಈಗಲೇ ಮಾಡುತ್ತಿದ್ದೀರಿ. ತಮ್ಮ ಪುರುಷಾರ್ಥ ಅನೇಕ ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು ಕೊಡಿಸುವಂತಹದ್ದು. ಈ ಸಮಯದಲ್ಲಿಯೇ ತಮ್ಮ ರಾಜ್ಯಭಾಗ್ಯದ ಸಂಸ್ಕಾರವನ್ನು ಧಾರಣೆ ಮಾಡುತ್ತಿದ್ದೀರಿ ಏಕೆಂದರೆ ಈಗಿನ ಪುರುಷಾರ್ಥ ಭವಿಷ್ಯಕ್ಕೆ ರಾಜ್ಯಾಧಿಕಾರಿಯನ್ನಾಗಿ ಮಾಡುತ್ತದೆ. ಅಂದಾಗ ಈ ಸಮಯದಲ್ಲಿ ತಮ್ಮ ಪುರುಷಾರ್ಥ ಯಥಾರ್ಥವಾಗಿದೆಯೇ? ಎಂದು ಚೆಕ್ ಮಾಡಿಕೊಳ್ಳಿ. ಹೇಗೆ ಭವಿಷ್ಯದಲ್ಲಿ ಒಂದು ರಾಜ್ಯವಿರುತ್ತದೆ, ಹಾಗೆಯೇ ನಮ್ಮ ಮನದಲ್ಲಿ ಒಂದೇ ರಾಜ್ಯ ನಡೆಯುತ್ತಿದೆಯೇ? ಎಂದು ಈಗ ಚೆಕ್ ಮಾಡಿಕೊಳ್ಳಿ. ಪುರುಷಾರ್ಥದಲ್ಲಿ ಒಂದು ರಾಜ್ಯವಿದೆಯೇ? ಅಥವಾ ಮಾಯಾ ರಾಜ್ಯದಲ್ಲಿ ವಿಘ್ನ ಹಾಕುತ್ತದೋ? ಒಂದು ರಾಜ್ಯಕ್ಕೆ ಬದಲಾಗಿ ಮಾಯೆಯ ಪ್ರಭಾವವಂತೂ ಬೀರುವುದಿಲ್ಲ ತಾನೇ? ಎರಡು ರಾಜ್ಯಗಳು ಇರುವುದಿಲ್ಲ ತಾನೇ? ಭವಿಷ್ಯದ ವಿಶೇಷತೆಯೇ ಆಗಿದೆ ಒಂದು ರಾಜ್ಯ ಇರುವುದು. ಅಂದಾಗ ಈಗಿನ ಅಭ್ಯಾಸ ಭವಿಷ್ಯದಲ್ಲಿ ನಡೆಯುತ್ತದೆ. ಈಗ ಸ್ವರಾಜ್ಯವಿದೆಯೇ, ಸ್ವರಾಜ್ಯದಲ್ಲಿ ಮಾಯೆ ಎಲ್ಲಾದರೂ ಪ್ರವೇಶ ಮಾಡುತ್ತಿಲ್ಲ ತಾನೇ? ಎಂದು ಚೆಕ್ ಮಾಡಿಕೊಳ್ಳಿ. ಎರಡು ರಾಜ್ಯ ಇಲ್ಲ ತಾನೇ? ಒಂದುವೇಳೆ ಎರಡು ರಾಜ್ಯ ನಡೆದರೆ ಒಂದು ರಾಜ್ಯದ ಸಂಸ್ಕಾರ ಯಾವಾಗ ತುಂಬಿಸಿಕೊಳ್ಳುತ್ತೀರಿ? ಭವಿಷ್ಯದ ವಿಶೇಷತೆಯೇ ಆಗಿದೆ ಒಂದು ರಾಜ್ಯ, ಒಂದು ಧರ್ಮ ಇರುವುದು. ಯಾವ ಧರ್ಮವಾಗಿದೆ? ತಮ್ಮ ವಿಶೇಷ ಧಾರಣೆ ಯಾವುದಾಗಿದೆ? ಸಂಪೂರ್ಣ ಪವಿತ್ರತೆ. ಅಂದಾಗ ಚೆಕ್ ಮಾಡಿಕೊಳ್ಳಿ ಒಂದು ಧರ್ಮವಿದೆಯೇ? ಮಧ್ಯದಲ್ಲಿ ಬೇರೆ ಅಪವಿತ್ರ ಧರ್ಮ ಪ್ರವೇಶ ಮಾಡುವುದಿಲ್ಲತಾನೇ? ಜೊತೆಯಲ್ಲಿ ಲಾ ಅಂಡ್ ಆರ್ಡರ್ ಒಂದರದೇ ಇದೆಯೆ ಅಥವಾ ಮಾಯೆ ಮಧ್ಯದಲ್ಲಿ ಪ್ರವೇಶ ಮಾಡುತ್ತಿಲ್ಲ ತಾನೇ? ಎಂದು ಇದನ್ನೂ ಸಹ ಚೆಕ್ ಮಾಡಿಕೊಳ್ಳಿ. ಒಂದು ರಾಜ್ಯ ನಿರ್ವಿಘ್ನವಾಗಿ ನಡೆಯುತ್ತಿದೆಯೇ? ಬೇರೆ ಮಾತುಗಳು ರಾಜ್ಯದಲ್ಲಿ ಸದಾ ಸುಖ ಮತ್ತು ಶಾಂತಿ ಸಹಜವಾಗಿರುತ್ತದೆ ಅಂದಾಗ ಈಗ ನೋಡಿಕೊಳ್ಳಿ ತಮ್ಮ ರಾಜ್ಯದಲ್ಲಿ ಸದಾ ಸುಖ-ಶಾಂತಿ ಇದೆಯೇ? ಯಾವುದೇ ಪ್ರವೇಶತೆ ಇಲ್ಲ ತಾನೇ? ಸ್ವರಾಜ್ಯದಲ್ಲಿ ಮಾಯೆ ತನ್ನ ಪ್ರಭಾವವನ್ನು ತೋರಿಸಿ ಅಶಾಂತಿ ಹರಡುವುದಿಲ್ಲ ತಾನೇ? ಸ್ವರಾಜ್ಯದಲ್ಲಿ ಯಾವುದೇ ಪ್ರಶಂಸೆಯ ಪ್ರಭಾವ ಮಾಯೆ ಹಾಕುತ್ತಿಲ್ಲ ತಾನೇ? ಸದಾ ಸುಖ-ಶಾಂತಿ, ಆನಂದ, ಪ್ರೇಮ, ಅತೀಂದ್ರಿಯ ಸುಖ ನಿರಂತರ ಆಗಿರುತ್ತದೆಯೇ? ಏಕೆಂದರೆ ಭವಿಷ್ಯ ರಾಜ್ಯದಲ್ಲಿ ಎಲ್ಲಾ ಪ್ರಾಪ್ತಿಗಳು ಇದೆ ಎಂದು ಗೊತ್ತಿದೆ. ಆದ್ದರಿಂದ ಸಂತುಷ್ಟತೆಯೂ ಇದೆ. ಈಗಲೂ ಸಹ ಸ್ವರಾಜ್ಯ ಸಂಪನ್ನವಾಗಿರುತ್ತದೋ ಅಥವಾ ಯಾವುದಾದರೂ ಕೊರತೆ ಇರುತ್ತದೆಯೋ? ಏಕೆಂದರೆ ಈಗಿನ ಪುರುಷಾರ್ಥದಲ್ಲಿ ಒಂದುವೇಳೆ ಕೊರತೆ ಉಳಿದು ಬಿಟ್ಟರೆ ಭವಿಷ್ಯದ ಅಖಂಡ ರಾಜ್ಯಕ್ಕೆ ಅಧಿಕಾರಿ ಹೇಗೆ ಆಗುತ್ತೀರಿ? ಪೂರ್ಣ ಆಧಾರ ಈಗಿನ ಪುರುಷಾರ್ಥದ ಮೇಲಿದೆ. ಈಗಿನ ಯಾವುದೇ ಕೊರತೆ ಭವಿಷ್ಯದ ಸಂಪೂರ್ಣ ರಾಜ್ಯಕ್ಕೆ ಅಧಿಕಾರಿ ಆಗಲು ಸಾಧ್ಯವಿಲ್ಲ. ಬಹಳ ಕಾಲದ ಈ ಸ್ವರಾಜ್ಯದ ಅಭ್ಯಾಸ ಭವಿಷ್ಯ ರಾಜ್ಯಕ್ಕೆ ಅಧಿಕಾರಿಯನ್ನಾಗಿ ಮಾಡುತ್ತದೆ. ತಮ್ಮ ಚೆಕಿಂಗ್ ಸದಾ ಇರಲಿ ಏಕೆಂದರೆ ಈಗ ಒಂದುವೇಳೆ ಬಹಳ ಕಾಲದ ಪುರುಷಾರ್ಥವಿಲ್ಲವೆಂದರೆ ಪ್ರಾಲಬ್ದ ಕಡಿಮೆ ಸಿಗುತ್ತದೆ, ಆದ್ದರಿಂದ ಬಾಪ್ದಾದಾ ಸಮಯ ಪ್ರತಿ ಸಮಯ ಈ ಅಟೆನ್ಷನ್ ಸೆಳೆಯುತ್ತಿದ್ದಾರೆ, ಇದಕ್ಕಾಗಿ ತಮ್ಮನ್ನು ಸಂಪನ್ನ ಮತ್ತು ಸಂಪೂರ್ಣ ಮಾಡಿಕೊಳ್ಳಿ. ಒಂದುವೇಳೆ ಈಗ ಮಧ್ಯ-ಮಧ್ಯದಲ್ಲಿ ಪುರುಷಾರ್ಥ ನಡೆಯುತ್ತಿದೆ ಎಂದು ಹೇಳುತ್ತೀರಿ ಆದರೆ ಪುರುಷಾರ್ಥದಲ್ಲಿ ಆದರೆ, ಆದರೆ ಎಂದು ಬರುವುದಿಲ್ಲ ತಾನೇ? ಇದಂತೂ ಆಗಿ ಬಿಡುತ್ತದೆ, ಇದಂತೂ ಮಾಡಿ ಬಿಡುತ್ತೇವೆ, ಈ ಸಂಸ್ಕಾರ ಅವಿನಾಶಿ 21 ಜನ್ಮಗಳಿಗಾಗಿ ಅಖಂಡ ರಾಜ್ಯದ ಅಧಿಕಾರಿಯನ್ನಾಗಿ ಮಾಡುವುದಿಲ್ಲ.

ಬಾಪ್ದಾದಾರವರು ಸದಾ ಕಾಲಕ್ಕಾಗಿ ಅಟೆನ್ಷನ್ ಕೊಡುತ್ತಿದ್ದಾರೆ, ಒಂದುವೇಳೆ ಯಾವುದಾದರೂ ವಿಘ್ನ ಬಂದರೆ, ಯಾವುದಾದರೂ ಬಿರುಗಾಳಿ ಬಂದರೆ ಬಿರುಗಾಳಿ ಬಹುಮಾನ ಆಗುತ್ತಿದೆಯೇ ಎಂದು ಚೆಕ್ ಮಾಡಿಕೊಳ್ಳಿ. ಬಿರುಗಾಳಿ ಬಿರುಗಾಳಿ ಅಲ್ಲ ಆದರೆ ಬಹುಮಾನ ಆಗಿ ಬಿಡಲಿ. ಯಾವುದೇ ಮಾಯೆಯ ಯುದ್ಧ ಆದರೆ, ಮಾಯೆ ಅನುಭವ ಮಾಡಿಸುತ್ತದೆ, ಆ ಅನುಭವವೂ ಸಹ ನಮ್ಮನ್ನು ಅನುಭವದ ಏಣಿ ಮುಂದುವರೆಸುತ್ತದೆ, ಇದಕ್ಕಾಗಿ ಬಾಪ್ದಾದಾರವರು ಸದಾ ತಮ್ಮ ಚಾರ್ಟ್ ತಾವೇ ಚೆಕ್ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಎಷ್ಟು ತಮ್ಮ ಚಾರ್ಟ್ನ್ನು ಚೆಕ್ ಮಾಡಿಕೊಳ್ಳುತ್ತೀರಿ ಅಷ್ಟು ಚೆಕ್ ಮಾಡಿಕೊಂಡು ಚೇಂಜ್ (ಪರಿವರ್ತನೆ) ಆಗುತ್ತೀರಿ. ಅಂದಾಗ ಪ್ರತಿಯೊಬ್ಬರು ತಮ್ಮ ಚಾರ್ಟ್ನ್ನು ಚೆಕ್ ಮಾಡಿಕೊಳ್ಳುತ್ತೀರಾ? ಚೆಕ್ ಮಾಡಿಕೊಳ್ಳುತ್ತೀರಾ? ಯಾರು ಪ್ರತಿದಿನ ಮಾಡಿಕೊಳ್ಳುತ್ತೀರಿ ಅವರು ಕೈ ಎತ್ತಿ. ಯಾರು ಪ್ರತಿದಿನ ಮಾಡಿಕೊಳ್ಳುತ್ತಾರೆ ಅವರು ಕೈ ಎತ್ತಿ, ಆಗಾಗ ಮಾಡಿಕೊಳ್ಳುವರಲ್ಲ. ಪ್ರತಿದಿನ ಚಾರ್ಟ್ ಚೆಕ್ ಮಾಡಿಕೊಳ್ಳಿ ಮತ್ತು ಪರಿವರ್ತನೆ ಆಗಿ ಏಕೆಂದರೆ ಸಮಯದ ಸೂಚನೆ ಬಾಪ್ದಾದಾರವರು ಬಹಳ ಸಮಯದಿಂದ ಕೊಟ್ಟಿದ್ದಾರೆ. ಸಮಯವನ್ನು ನೋಡುತ್ತಲೂ ಇದ್ದಾರೆ. ಮನುಷ್ಯರ ಮನಸ್ಸಿನಲ್ಲಿ ಚಿಂತೆ ಹೆಚ್ಚಾಗುತ್ತಿದೆ ಮತ್ತು ತಮ್ಮ ಮನದಲ್ಲಿ ಚಿಂತೆ ಇಲ್ಲ ಆದರೆ ಪ್ರಭು ಚಿಂತನೆ ಇದೆ. ಪ್ರಭು ಚಿಂತನೆ ಇರುವ ಕಾರಣ ತಾವು ಸದಾ ನಾವು ನಿಮಿತ್ತರಾಗಿದ್ದೇವೆ, ನಿರ್ಮಾನರಾಗಿದ್ದೇವೆ ಏಕೆಂದರೆ ಮಾಡಿಸುವವರು ತಂದೆ ಆಗಿದ್ದಾರೆ ಎಂದು ಗೊತ್ತಿದೆ. ಆದ್ದರಿಂದ ತಮ್ಮ ಮನದಲ್ಲಿ ಚಿಂತೆ ಇಲ್ಲ, ಮಾಡಿಸುವ ತಂದೆ ಮಾಡಿಸುತ್ತಿದ್ದಾರೆ ಎಂಬ ಸ್ಮೃತಿ ಮುಂದುವರೆಸುತ್ತಿದೆ.

ಈಗ ವಿಶೇಷವಾಗಿ ಪ್ರತಿಯೊಬ್ಬರು ಈ ಸಂಗಮ ಯುಗದ ಒಂದೊಂದು ಸೆಕೆಂಡ್, ಸಮಯ ಮತ್ತು ಸಂಕಲ್ಪ ಶುಭವಾಗಿ ನಡೆಯುತ್ತಿದೆಯೇ? ಎಂದು ಚೆಕ್ ಮಾಡಿಕೊಳ್ಳಬೇಕು. ಸಮಯದ ಮಹತ್ವವನ್ನು ತಿಳಿದು ಒಂದು ಸೆಕೆಂಡ್, ಸೆಕೆಂಡ್ ಅಲ್ಲ ಒಂದು ಸೆಕೆಂಡ್ಗೆ ಬೆಲೆ ಇದೆ, ಮಹತ್ವವಿದೆ. ಕೆಲವೊಮ್ಮೆ ಮಕ್ಕಳಿಗೆ ಸಂಕಲ್ಪ ನಡೆದಿದೆ ಆದರೆ 2-4 ಸೆಕೆಂಡ್ ನಡೆದಿದೆ ಎಂದು ಹೇಳುತ್ತಾರೆ. ಆದರೆ ಸಂಗಮ ಸಮಯದ ಬೆಲೆ ಇದೆ, ಈಗ ಒಂದು ಸೆಕೆಂಡ್ ಒಂದು ಗಂಟೆಗೆ ಸಮಾನವಾಗಿದೆ. ಈಗ ಸಮಯಕ್ಕೆ ಇಷ್ಟು ಬೆಲೆ ಇದೆ ಏಕೆಂದರೆ ಬಾಪ್ದಾದಾ ಅಚಾನಕ್ ಯಾವುದೇ ಸಮಯದಲ್ಲಿ ತಮ್ಮ ಅಂತಿಮ ಪೇಪರ್ ಇರುತ್ತದೆ ಎಂದು ಹೇಳಿ ಬಿಟ್ಟಿದ್ದಾರೆ. ಬಾಪ್ದಾದಾರವರೂ ಸಹ ಹೇಳುವುದಿಲ್ಲ. ಆದ್ದರಿಂದ ಈಗಿನ ಸಮಯದ ಅಟೆನ್ಷನ್ ಸಂಪೂರ್ಣ ಮತ್ತು ಸಂಪನ್ನರನ್ನಾಗಿ ಮಾಡಿಕೊಳ್ಳಬೇಕು. ಬಾಪ್ದಾದಾರವರು ಯಾವ ಸರ್ವ ಖಜಾನೆಗಳು ಕೊಟ್ಟಿದ್ದಾರೆ ಆ ಒಂದೊಂದು ಖಜಾನೆಯನ್ನು ಸಮಯದಲ್ಲಿ ಕಾರ್ಯದಲ್ಲಿ ತೊಡಗಿಸಬೇಕು. ಖಜಾನೆಗಳಿಗೆ ಮಾಲೀಕರಾಗಿದ್ದೀರಿ, ಮಾಲೀಕರ ವಿಶೇಷತೆ ಇದೆ ಆಗಿದೆ, ಯಾವ ಸಮಯದಲ್ಲಿ ಯಾವ ಖಜಾನೆ ಅವಶ್ಯಕತೆ ಇದೆ ಆ ಸಮಯದಲ್ಲಿ ಆ ಖಜಾನೆ ಕಾರ್ಯದಲ್ಲಿ ಉಪಯೋಗ ಆಗುತ್ತಿದೆಯೇ? ತಾವು ಎದುರಿಸುವ ಶಕ್ತಿಗೆ ಆಜ್ಞೆ ಮಾಡಿದರೆ ಎದುರಿಸುವ ಶಕ್ತಿ ಕಾರ್ಯ ಮಾಡುತ್ತದೆಯೇ? ಏಕೆಂದರೆ ಯಾರು ಸಮಯದಲ್ಲಿ ತನ್ನ ಖಜಾನೆಗಳನ್ನು ಕಾರ್ಯದಲ್ಲಿ ಉಪಯೋಗಿಸುವವರಿಗೆ ಮಾಲೀಕ ಎಂದು ಹೇಳಲಾಗುತ್ತದೆ. ಈಗ ಎಲ್ಲರಿಗೆ ಇಷ್ಟು ಸ್ವಯಂನ ಮೇಲೆ ಅಟೆನ್ಷನ್ ಕೊಡಬೇಕು, ಎಲ್ಲರ ಒಳಗೆ ಖುಷಿಯ ಖಜಾನೆ, ಸ್ವತಃವಾಗಿ ಚಲನೆ ಮತ್ತು ಚೆಹರೆಯ ಮೇಲೆ ಕಂಡು ಬರಲಿ. ಖುಷಿ ಅವಿನಾಶಿ ತಂದೆಯ ಕೊಡುಗೆ ಆಗಿದೆ, ಅವಿನಾಶಿ ತಂದೆಯ ಕೊಡುಗೆಯನ್ನು ಅವಿನಾಶಿಯಾಗಿಟ್ಟುಕೊಳ್ಳಿ. ಖುಷಿಗಾಗಿ ಖುಷಿಯ ಹಾಗೆ ಔಷಧಿ ಇಲ್ಲ ಎಂದು ಹೇಳಲಾಗುತ್ತದೆ, ಖುಷಿಯ ಹಾಗೆ ಯಾವುದೇ ಖಜಾನೆ ಇಲ್ಲ. ಯಾರ ಒಳಗೆ ಸದಾ ಖುಷಿ ಇದೆ, ಅವರ ನಯನಗಳಿಂದ, ಚೆಹರೆಯಿಂದ, ಚಲನೆಯಿಂದ ಸಹಜವಾಗಿ ಕಂಡು ಬರುತ್ತದೆ. ಬಾಪ್ದಾದಾರವರ ವರದಾನವಾಗಿದೆ - ಸದಾ ಖುಷಿಯಾಗಿರಿ ಮತ್ತು ಸದಾ ಖುಷಿಯನ್ನು ಹಂಚಿ ಏಕೆಂದರೆ ಖುಷಿಯನ್ನು ಹಂಚುವುದರಿಂದ ಖುಷಿ ಹೆಚ್ಚುತ್ತದೆ ಮತ್ತ್ಯಾವುದೇ ಖಜಾನೆ ಹಂಚುವುದರಿಂದ ಕಡಿಮೆ ಆಗುತ್ತದೆ. ಆದರೆ ಖುಷಿಯ ಖಜಾನೆ ಎಷ್ಟು ಹಂಚುತ್ತೀರೋ ಅಷ್ಟು ಹೆಚ್ಚಾಗುತ್ತದೆ. ಖುಷಿಯ ಖಜಾನೆ ಸದಾ ಕಾಯಂ ಆಗಿದೆಯೇ? ಎಂದು ಚೆಕ್ ಮಾಡಿಕೊಳ್ಳಿ.

ಈಗ ಎಲ್ಲಾ ಮಕ್ಕಳಿಗೆ ದೇಶದವರಿರಲಿ, ವಿದೇಶದವರಿರಲಿ, ಎಲ್ಲಾ ಮಕ್ಕಳಿಗೆ ಬಾಪ್ದಾದಾ ಒಂದು ಮಾತಿನ ಶುಭಾಶಯಗಳನ್ನು ಕೊಡುತ್ತಿದ್ದಾರೆ. ಯಾವ ಮಾತಾಗಿದೆ? ಯಾವುದು ಎಲ್ಲರೂ ದೇಶದವರಿರಲಿ, ವಿದೇಶದವರಿರಲಿ ತಮ್ಮ ಒಲವು-ಉತ್ಸಾಹದಿಂದ ಆತ್ಮರಿಗೆ ತಂದೆಯ ಸಂದೇಶವನ್ನು ಕೊಟ್ಟು ಬಿಟ್ಟಿದ್ದೀರಿ. ಎಲ್ಲರೂ ತಮ್ಮ ಖುಷಿಯಿಂದ ಯಾವ ಕಾರ್ಯ ಮಾಡಿದ್ದೀರಿ, ಆ ಕಾರ್ಯದಲ್ಲಿ ಪ್ರೋಗ್ರಾಮ್ ಒಂದು ಮಾಡಿದ್ದೀರಿ, ಪ್ರತಿಯೊಂದು ಸ್ಥಾನದಲ್ಲಿ ಒಂದು ಕಾರ್ಯಕ್ರಮ ಮಾಡಿದ್ದೀರಿ ಆದರೆ ಅದರ ಫಲ ಸಾವಿರದಷ್ಟು ಪ್ರಾಪ್ತಿ ಮಾಡಿಕೊಂಡಿದ್ದೀರಿ. ಈಗಿನ ಸಮಯದ ಪ್ರಮಾಣ ಯಾವ ಪರಿಸ್ಥಿತಿ ಇದೆ ಅದು ಮುಂದೆ ಹೋದಂತೆ ನಾಜೂಕು (ಗಂಭೀರ) ಆಗುತ್ತದೆ ಎಂದು ಬಾಪ್ದಾದಾರವರಿಗೆ ಸಂಕಲ್ಪವಿದೆ. ಆದ್ದರಿಂದ ಹಳ್ಳಿಯವರಿರಬಹುದು, ಯಾವುದೇ ಮೂಲೆಯಲ್ಲಿ ಇರಬಹುದು, ನಮ್ಮ ತಂದೆ ಬಂದಿದ್ದಾರೆ ಮತ್ತೆ ತಾವು ನಮಗೆ ಸಂದೇಶ ಕೊಟ್ಟಿಲ್ಲ ಎಂದು ದೂರು ಮಾಡಬಾರದು. ಆದ್ದರಿಂದ ಎಲ್ಲರೂ ಒಲವು-ಉತ್ಸಾಹದಿಂದ ಕಾರ್ಯ ಮಾಡಿದ್ದೀರಿ, ಬಾಪ್ದಾದಾ ಖುಷಿಯಾಗಿದ್ದಾರೆ ಮತ್ತು ಅದೇ ರೀತಿ ಪರಸ್ಪರ ಸೇರಿ ಇಂತಹ ಕಾರ್ಯಕ್ರಮ ಮಾಡುತ್ತಿರಬೇಕು. ಒಲವು-ಉತ್ಸಾಹ ಮತ್ತು ಸಾಹಸ ಪ್ರತಿಯೊಬ್ಬರು ತಮ್ಮ-ತಮ್ಮ ವಿಧಿಯ ಮೂಲಕ ಕಾರ್ಯದಲ್ಲಿ ತೊಡಗಿಸಿರುವುದು ಬಾಪ್ದಾದಾರವರು ನೋಡಿದ್ದಾರೆ. ಆದರೆ ಈಗ ಎಲ್ಲರೂ ಬಹಳ ಒಳ್ಳೆಯದು ಮಾಡಿದಿರಿ. ಮುಂದೆಯೂ ಸಹ ಸಮಯ ಪ್ರಮಾಣ ಯಾವುದೇ ಮೂಲೆ ಸಂದೇಶ ಇಲ್ಲದೆ ಉಳಿದುಕೊಳ್ಳಬಾರದು ಎಂಬ ಲಕ್ಷ್ಯ ಇಟ್ಟುಕೊಳ್ಳಿ. ಇದರಲ್ಲಿ ತಮ್ಮ ಪುರುಷಾರ್ಥವೂ ಚೆನ್ನಾಗಿ ಆಗುತ್ತದೆ ಮತ್ತು ಆತ್ಮಗಳ ಕಲ್ಯಾಣ ಆಗುತ್ತದೆ. ಎಲ್ಲರಿಗೆ ಈ ಕಾರ್ಯಕ್ರಮ ಚೆನ್ನಾಗಿ ಅನಿಸಿದೆಯಲ್ಲವೇ. ಚೆನ್ನಾಗಿದೆಯೇ? ಬಾಪ್ದಾದಾ ಎಲ್ಲಾ ಮಕ್ಕಳಿಗೆ ಆತ್ಮಗಳ ಪ್ರತಿ ದಯಾಹೃದಯಿ ಆಗಿ ಎಂದು ಪದೇ-ಪದೇ ಹೇಳುತ್ತಾರೆ. ಈಗಿನ ದುಃಖ-ಅಶಾಂತಿಯ ಕಾರಣ ದಯೆ ಮಾಡಿ, ಕರುಣೆ ಮಾಡಿ ಎಂದು ಹೇಳುತ್ತಾರೆ. ಈಗ ಪ್ರತಿಯೊಬ್ಬ ಮಕ್ಕಳ ದಯಾಹೃದಯಿ ಪಾರ್ಟ್ನ್ನು ನೋಡಲು ಬಾಪ್ದಾದಾರವರು ಬಯಸುತ್ತಾರೆ.

ಅಂದಾಗ ಪ್ರತಿಯೊಬ್ಬರು ತಮ್ಮ ಚಾರ್ಟ್ನ್ನು ಚೆಕ್ ಮಾಡಿಕೊಳ್ಳುತ್ತೀರಾ? ಚೆಕ್ ಮಾಡಿಕೊಳ್ಳುತ್ತೀರಾ? ಯಾರು ಪ್ರತಿದಿನ ಮಾಡಿಕೊಳ್ಳುತ್ತೀರಿ ಅವರು ಕೈ ಎತ್ತಿ. ಯಾರು ಪ್ರತಿದಿನ ಮಾಡಿಕೊಳ್ಳುತ್ತಾರೆ ಅವರು ಕೈ ಎತ್ತಿ, ಆಗಾಗ ಮಾಡಿಕೊಳ್ಳುವವರಲ್ಲ. ಪ್ರತಿದಿನ ಚಾರ್ಟ್ ಚೆಕ್ ಮಾಡಿಕೊಳ್ಳಿ ಮತ್ತು ಪರಿವರ್ತನೆ ಆಗಿ ಏಕೆಂದರೆ ಸಮಯದ ಸೂಚನೆ ಬಾಪ್ದಾದಾರವರು ಬಹಳ ಸಮಯದಿಂದ ಕೊಟ್ಟಿದ್ದಾರೆ. ಸಮಯವನ್ನು ನೋಡುತ್ತಲೂ ಇದ್ದಾರೆ. ಮನುಷ್ಯರ ಮನಸ್ಸಿನಲ್ಲಿ ಚಿಂತೆ ಹೆಚ್ಚಾಗುತ್ತಿದೆ ಮತ್ತು ತಮ್ಮ ಮನದಲ್ಲಿ ಚಿಂತೆ ಇಲ್ಲ ಆದರೆ ಪ್ರಭು ಚಿಂತನೆ ಇದೆ. ಪ್ರಭು ಚಿಂತನೆ ಇರುವ ಕಾರಣ ತಾವು ಸದಾ ನಾವು ನಿಮಿತ್ತರಾಗಿದ್ದೇವೆ, ನಿರ್ಮಾನರಾಗಿದ್ದೇವೆ ಏಕೆಂದರೆ ಮಾಡಿಸುವವರು ತಂದೆ ಆಗಿದ್ದಾರೆ ಎಂದು ಗೊತ್ತಿದೆ. ಆದ್ದರಿಂದ ತಮ್ಮ ಮನದಲ್ಲಿ ಚಿಂತೆ ಇಲ್ಲ, ಮಾಡಿಸುವ ತಂದೆ ಮಾಡಿಸುತ್ತಿದ್ದಾರೆ ಎಂಬ ಸ್ಮೃತಿ ಮುಂದುವರೆಸುತ್ತಿದೆ.

ತಮಗೆ ದುಃಖಮಯ ಪ್ರಪಂಚ ಬದಲಾವಣೆ ಆಗಿ ಸುಖಮಯಿ ಪ್ರಪಂಚ ಬರಲೇಬೇಕು ಎಂಬ ಉಮಂಗವಿದೆ, ಅಂದಾಗ ಸುಖಮಯಿ ಪ್ರಪಂಚ ಬರಲು ಈ ದುಃಖ-ಅಶಾಂತಿಯ ವಿನಾಶವಾಗಲು ಪರಿಸ್ಥಿತಿಗಳು ಬದಲಾವಣೆ ಆಗುತ್ತಿದೆ. ಅಂದಾಗ ಮನಸಾ ಆಗಿರಲಿ, ವಾಚಾ ಆಗಿರಲಿ, ಚಲನೆಯಿಂದ ಸೇವೆಯ ಗತಿಯನ್ನು ಹೆಚ್ಚಿಸುತ್ತಾ ಹೋಗಿ, ತಮ್ಮ ರಾಜ್ಯವನ್ನು ಸಮೀಪ ತರುತ್ತಾ ಹೋಗಿ ಎಂಬ ಈ ದಿನದ ತಂದೆಯ ಸಂದೇಶವನ್ನು ನೆನಪಿಟ್ಟುಕೊಳ್ಳಿ. ಒಳ್ಳೆಯದು.

ಈ ಬಾರಿ ಬಾಪ್ದಾದಾರವರ ಜೊತೆ ಮಿಲನ ಮಾಡಲು ಮೊದಲನೇ ಬಾರಿ ಬಂದಿರುವವರು ಕೈ ಎತ್ತಿ. ಒಳ್ಳೆಯದು ಬಹಳಷ್ಟು ಇದ್ದಾರೆ. ಸ್ವಲ್ಪ ಎದ್ದು ನಿಲ್ಲಿ. ಶುಭಾಶಯಗಳು. ಸಮಾಪ್ತಿಗೆ ಮೊದಲು ಬಂದು ತಲುಪಿದ್ದೀರಿ, ಹೊಸ ಜನ್ಮ ಪಡೆದುಕೊಂಡಿದ್ದೀರಿ, ಇದಕ್ಕೆ ಎಲ್ಲಾ ಕಡೆಯಿಂದ ಬರುವ ಮಕ್ಕಳಿಗೆ ಬಾಪ್ದಾದಾ ಮತ್ತು ಎಲ್ಲಾ ಕಡೆಯ ಮಕ್ಕಳ ಮೂಲಕ ಶುಭಾಶಯಗಳು, ಶುಭಾಶಯಗಳು. ಬ್ರಾಹ್ಮಣ ಪರಿವಾರವನ್ನು ನೋಡಿ ಖುಷಿ ಆಗುತ್ತದೆಯಲ್ಲವೇ ಆದರೆ ಯಾರು ಈಗ ಬಂದಿದ್ದೀರಿ, ಅವರಿಗೆ ಬಾಪ್ದಾದಾ ಇದನ್ನೆ ತಿಳಿಸುತ್ತಾರೆ, ಈಗ ಬಹಳ ಸಮಯ ಕಳೆದು ಹೋಗಿದೆ, ಬಹಳ ಸ್ವಲ್ಪ ಸಮಯ ಉಳಿದಿದೆ. ಆದ್ದರಿಂದ ಪುರುಷಾರ್ಥವನ್ನು ತೀವ್ರ ಮಾಡಬೇಕು. ತೀವ್ರ ಪುರುಷಾರ್ಥಿ ಮುಂದುವರೆಯುತ್ತಾರೆ. ನಡೆಯುವುದಲ್ಲ, ಹಾರುತ್ತಿರಬೇಕು. ಹಾರುವ ಕಲೆಯ ಪುರುಷಾರ್ಥ ಮಾಡಿದರೆ ತಂದೆ ಆಸ್ತಿ ತಡವಾಗಿ ಬಂದಿದ್ದರೂ ಸಹ ಪೂರ್ತಿ ತಮ್ಮ ಅಧಿಕಾರವನ್ನು ತೆಗೆದುಕೊಳ್ಳಬಹುದು. ಪ್ರತಿಯೊಂದು ಸೆಕೆಂಡ್ ಖುಷಿಯಾಗಿರಬೇಕು ಮತ್ತು ಎಲ್ಲರಿಗೆ ಸಂದೇಶ ಕೊಡಬೇಕು. ಒಳ್ಳೆಯದು.

ಈ ದಿನ ಬಾಪ್ದಾದಾರವರು ಏನು ಹೇಳಿದ್ದಾರೆ ಸ್ವರಾಜ್ಯಧಿಕಾರಿ ಆಗಿ ಸ್ವರಾಜ್ಯದ ರಿಜಲ್ಟ್ ಚೆಕ್ ಮಾಡಿಕೊಳ್ಳಿ, ಚೆಕ್ ಮಾಡಿಕೊಳ್ಳುವುದರಿಂದ ಯಾವುದೇ ಕೊರತೆಯನ್ನು ಬಹಳ ಸಮಯದಿಂದ ಚೇಂಜ್ ಮಾಡಿಕೊಳ್ಳಬೇಕು ಏಕೆಂದರೆ ಬಹಳ ಸಮಯ ಅಖಂಡ ರಾಜ್ಯ ನಡೆಯಲಿ, ಇದರ ಅವಶ್ಯಕತೆ ಇದೆ, ಬಹಳ ಸಮಯದ ಪುರುಷಾರ್ಥ, ಬಹಳ ಸಮಯದ ಪ್ರಾಲಬ್ಧದ ಅಧಿಕಾರಿ ಸ್ವತಃವಾಗಿಯೇ ಆಗುತ್ತೀರಿ, ಆದ್ದರಿಂದ ಬಹಳ ಸಮಯದ ಪುರುಷಾರ್ಥ ಅಂಡರ್ಲೈನ್ ಮಾಡಬೇಕು. ಚೆಕೆಂಗ್ (ಪರಿಶೀಲನೆ) ಮತ್ತು ಚೇಂಜ್ (ಪರಿವರ್ತನೆ) ಮಾಡುತ್ತಿದ್ದೀರಾ?

ಎಲ್ಲಾ ಕಡೆಯ ಬಾಪ್ದಾದಾರವರ ಹೃದಯ ಸಿಂಹಾಸನಾಧಿಕಾರಿ, ಪ್ರತಿಯೊಬ್ಬ ಮಕ್ಕಳಿಗೆ, ಬಾಪ್ದಾದಾ ಪ್ರತಿದಿನ ಅಮೃತವೇಳೆ ವಿಶೇಷವಾಗಿ ಶಕ್ತಿ ಹಂಚುತ್ತಾರೆ. ಅಮೃತವೇಳೆ ವಿಶೇಷ ವರದಾನ, ಶಕ್ತಿಯನ್ನು ಹಂಚುತ್ತಾರೆ, ಯಾರು ಅಮೃತವೇಳೆಯ ಶಕ್ತಿ ವಿಶೇಷ ವರದಾನವನ್ನು ಸ್ವೀಕಾರ ಮಾಡುತ್ತಾರೆ ಅವರು ವಿಶೇಷ ತೀವ್ರ ಪುರುಷಾರ್ಥಿ ಆಗುತ್ತಾರೆ. ಅಮೃತವೇಳೆಯ ಮಹತ್ವವನ್ನು ಇಟ್ಟುಕೊಳ್ಳುವುದು ಅರ್ಥಾತ್ ಸದಾ ಬಾಪ್ದಾದಾರವರ ಸಿಂಹಾಸನಾಧಿಕಾರಿ ಆಗುವುದು. ಅಂದಾಗ ಕೆಲವು ಮಕ್ಕಳ ಅಟೆನ್ಷನ್ ಇದೆ ಮತ್ತು ಬಾಪ್ದಾದಾ ಪ್ರತಿದಿನ ಅವರಿಗೆ ಮುಖ್ಯವಾಗಿ ವಾಹ್! ಮಗು ವಾಹ್! ಎಂಬ ಸರ್ಟಿಫಿಕೇಟ್ ಕೊಡುತ್ತಾರೆ.

ಎಲ್ಲಾ ಕಡೆಯ ತೀವ್ರ ಪುರುಷಾರ್ಥಿ, ಪ್ರತಿ ಸಮಯ ಬಾಪ್ದಾದಾರವರನ್ನು ತನ್ನ ಜೊತೆಗಾರರನ್ನಾಗಿ ಮಾಡಿಕೊಂಡು ಕಂಬೈನ್ಡ್ ಆಗಿರುವ ಅಭ್ಯಾಸ ಮಾಡುವ ಮಕ್ಕಳಿಗೆ ಬಾಪ್ದಾದಾ ಸದಾ ಹಾರುತ್ತಿರಿ ಮತ್ತು ಅನ್ಯರಿಗೂ ಸಹ ಹಾರುವ ಸಹಯೋಗ ಕೊಟ್ಟು ಹಾರಿಸುತ್ತಿರಿ ಎಂಬ ವಿಶೇಷ ವರದಾನವನ್ನು ಕೊಡುತ್ತಿದ್ದಾರೆ, ಎಲ್ಲರೂ ವಿಜಯಿ ಆಗಿದ್ದಾರೆ ಮತ್ತು ವಿಜಯದ ಫಲ ಬಾಪ್ದಾದಾರವರದು ಪ್ರತಿ ಸಮಯ ಆಶೀರ್ವಾದಗಳು ಪ್ರಾಪ್ತಿ ಆಗುತ್ತದೆ ಅಂದಾಗ ಅಮರರಾಗಿ ಎಲ್ಲರಿಗೆ ಅಮೃತವನ್ನು ಕುಡಿಸುತ್ತಿರಿ. ಎಲ್ಲಾ ಕಡೆಯ ಮಕ್ಕಳು ಬಾಪ್ದಾದಾರವರ ಮುಂದೆ ಇದ್ದಾರೆ. ಪ್ರತಿಯೊಬ್ಬ ಮಗುವಿನೊಂದಿಗೆ ಬಾಪ್ದಾದಾರವರಿಗೆ ಹೃದಯದ ಪ್ರೀತಿ ಇದೆ ಏಕೆಂದರೆ ಪ್ರತಿಯೊಬ್ಬ ಮಗುವಿನಲ್ಲಿ ಯಾವುದಾದರೂ ವಿಶೇಷತೆ ಇದೆ. ಈಗ ಎಲ್ಲಾ ವಿಶೇಷತೆಗಳಿಂದ ತಮ್ಮನ್ನು ವಿಶೇಷ ಆತ್ಮನನ್ನಾಗಿ ಮಾಡಿ ಮುಂದುವರೆಯುತ್ತಾ ಹೋಗಿ. ಬಾಪ್ದಾದಾರವರ ಪ್ರತಿಯೊಬ್ಬ ಮಗುವಿಗೆ ಪರ್ಸನಲ್ (ವೈಕ್ತಿಕ) ಪದಮಾಗುಣ ನೆನಪು, ಪ್ರೀತಿ ಸ್ವೀಕಾರ ಆಗಲಿ. ಒಳ್ಳೆಯದು ಈಗಂತೂ ಮಿಲನ ಮಾಡುತ್ತಿರುತ್ತೇವೆ. ನಮಸ್ತೆ.

ದಾದಿಗಳ ಜೊತೆ : ಎಲ್ಲರೂ ಹೆಚ್ಚು ಸುತ್ತಿದ್ದೀರಿ. ಈಗಿನ ಸಮಯದಲ್ಲಿ ಅಶಾಂತಿ ಬಹಳ ಹೆಚ್ಚುತ್ತಿರುತ್ತದೆ ಅಂದಾಗ ಇಡೀ ದಿನ ಚಿಂತಿತರಾಗಿರುತ್ತಾರೆ ಮತ್ತು ಶಾಂತಿಯ ವೈಬ್ರೇಷನ್, ಶಾಂತಿ ಕೊಟ್ಟರೆ ಖುಷಿ ಆಗಿ ಬಿಡುತ್ತಾರೆ. ಹೇಗೆ ಸುಸ್ತಾಗಿರುವವರಿಗೆ ಅರ್ಧ ಗಂಟೆ ವಿಶ್ರಾಂತಿ ಸಿಕ್ಕಿದರೂ ಖುಷಿ ಆಗುತ್ತದೆ. ಒಳ್ಳೆಯದು ಮಾಡಿದ್ದೀರಿ. ಎಲ್ಲಾ ಸ್ಥಾನದಲ್ಲಿ, ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಎಲ್ಲರೂ ಚೆನ್ನಾಗಿ ಮಾಡಿದ್ದಾರೆ. ಎಲ್ಲಿ ಉಮ್ಮಸು ಇರುತ್ತದೆ ಅಲ್ಲಿ ಖರ್ಚಿನ ಮಾತೇ ಇಲ್ಲ. ಇಷ್ಟೊಂದು ಆತ್ಮಗಳಿಗೆ ಸಂದೇಶವಂತೂ ಸಿಕ್ಕಿ ಬಿಟ್ಟಿದೆ, ತಮ್ಮ ದೂರು ಪೂರ್ಣ ಆಯಿತು. ಒಳ್ಳೆಯದು. ಈ ರೀತಿ ಮಧ್ಯ-ಮಧ್ಯದಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿರಿ. ಪ್ರತಿಯೊಂದು ನಗರ ತಮ್ಮ ಅನುಕೂಲ ಅನುಸಾರವಾಗಿ ಹೇಗೆಯೇ ಮಾಡಲಿ ಅದು ಒಳ್ಳೆಯದು.

ಡಬಲ್ ವಿದೇಶಿ ದೊಡ್ಡ ಅಕ್ಕಂದಿರೊಂದಿಗೆ: ಬಾಪ್ದಾದಾರವರು ಗ್ರೂಪ್-ಗ್ರೂಪ್ನ್ನು ಕರೆದು ರಿಫ್ರೆಶ್ ಮಾಡುವುದು ಚೆನ್ನಾಗಿ ಎನಿಸುತ್ತದೆ ಏಕೆಂದರೆ ಅವರು ಬಹಳ-ಬಹಳ ದೂರ ಇರುತ್ತಾರೆ, ಹತ್ತಿರ ಬರುವುದರಿಂದ ಒಬ್ಬೊಬ್ಬರ ಗುಣ ಕಾಣಿಸುತ್ತದೆ. ದೂರ-ದೂರದಲ್ಲಿ ಇರುವುದರಿಂದ ಗೊತ್ತಾಗುವುದಿಲ್ಲ ಅಂದಾಗ ಒಬ್ಬಿಬ್ಬರನ್ನು ನೋಡಿ ಉಮಸ್ಸೂ ಸಹ ಬರುತ್ತದೆ. ಅಬುವಿನಲ್ಲಿ ಈ ಕಾರ್ಯಕ್ರಮ ಚೆನ್ನಾಗಿ ಎನಿಸುತ್ತದೆ ಮತ್ತೆ ಒಬ್ಬರಿಗೊಬ್ಬರು ಉತ್ಸಾಹ ತುಂಬಿ ಸಂಘಟನೆ ಪಕ್ಕಾ ಮಾಡುತ್ತೀರಿ, ಇದು ಚೆನ್ನಾಗಿದೆ. ಸರಿಯಾಗಿ ನಡೆಯುತ್ತಿದೆಯಲ್ಲವೇ.

ಒಬ್ಬರಿಗೊಬ್ಬರು ಸಹಯೋಗ ಕೊಡುವುದು ಇದರಿಂದ ಮುಂದುವರೆಯುತ್ತೀರಿ, ಸಮಯ ಕೊಡುತ್ತೀರಲ್ಲವೇ, ತಮ್ಮ ಸೇವೆಯನ್ನು ಬಿಟ್ಟು ಹೃದಯದಿಂದ ಸಮಯ ಕೊಡುತ್ತೀರಿ, ತಮ್ಮ ಕಾರ್ಯ ಪೂರ್ಣ ಮಾಡಿದ್ದೀರಾ? ಸಫಲತೆ ಸಿಕ್ಕಿದೆ, ಈಗ ಭಲೆ ಹೋಗಿ, ಎಲ್ಲರೂ ಬಹಳ ಒಳ್ಳೆಯ ಸಹಯೋಗ ಕೊಟ್ಟಿದ್ದೀರಿ, ವಿದೇಶದಲ್ಲೂ ಕೊಟ್ಟಿದ್ದೀರಿ, ಭಾರತದಲ್ಲೂ ಕೊಟ್ಟಿದ್ದೀರಿ.

ಯು.ಪಿ. ಜೋನ್ನಿನ ಸೇವಾಧಾರಿಗಳೊಂದಿಗೆ: ಬಾಪ್ದಾದಾ ಎಲ್ಲಾ ಜೋನ್ನವರಿಗೆ ಹೇಳುತ್ತಾರೆ - ಪ್ರತಿಯೊಂದು ಜೋನಿನಲ್ಲಿ ಒಂದು ಗ್ರೂಪ್ನ್ನು ಮಾಡಿ ಯಾವ ಗ್ರೂಪಿನಲ್ಲಿ ಎಲ್ಲಾ ವರ್ಗದವರು ಇರಬೇಕು. ಸೇವೆಗಾಗಿ ತಮ್ಮ ವರ್ಗ ಯಾವುದು ಮಾಡಲ್ಪಟ್ಟಿದೆ, ಪ್ರತಿಯೊಂದು ಜೋನ್ ತಮ್ಮ ಸ್ಥಾನದಲ್ಲಿ ಪ್ರತಿಯೊಂದು ವರ್ಗದ ಸೇವೆ ಮಾಡುತ್ತಿದ್ದಾರೆ, ಮಾಡುತ್ತಿರುತ್ತಾರೆ ಆದರೆ ಪ್ರತಿಯೊಂದು ಜೋನಿನಲ್ಲಿ ಈ ರೀತಿ ಸೇವೆಯ ಗ್ರೂಪ್ ಇರಲಿ ಯಾವುದರಲ್ಲಿ ಪ್ರತಿಯೊಂದು ವರ್ಗ ಇರಬೇಕು. ಮತ್ತು ಎಲ್ಲಿ ಕಾರ್ಯಕ್ರಮ ಮಾಡಿದರೂ ಆ ಗ್ರೂಪ್ ತಮ್ಮ-ತಮ್ಮ ವರ್ಗದವರಿಗೆ ವಿಶೇಷ ನಿಮಂತ್ರಣ ಕೊಡಲಿ, ಯಾವುದೇ ವರ್ಗ ನಮಗಂತೂ ಸಂದೇಶ ಸಿಗಲಿಲ್ಲ ಎಂಬ ದೂರು ಕೊಡಬಾರದು. ಪ್ರತಿಯೊಬ್ಬರದೂ ವೆರೈಟೀ ಗ್ರೂಪ್ ಮಾಡಲಿ, ಅದು ತಮ್ಮ ವರ್ಗದ ಸೇವೆಯನ್ನೂ ಹೆಚ್ಚಿಸಲಿ ಮತ್ತು ಜೊತೆಯಲ್ಲಿ ಪ್ರತಿಯೊಬ್ಬರು ನಮಗೆ ಈ ಜ್ಞಾನದಿಂದ ಏನು ಸಿಕ್ಕಿದೆ ಮತ್ತು ಯಾವ ಅನುಭವ ಮಾಡುತ್ತಿದ್ದೇವೆ ಎಂದು ತಮ್ಮ-ತಮ್ಮ ಅನುಭವ ಹೇಳಲಿ. ಪ್ರತಿಯೊಂದು ಜೋನಿನಲ್ಲಿ ಈ ರೀತಿ ಸೇವೆಯ ಗ್ರೂಪ್ ಮಾಡಿ. ಭಾಷಣ ಮಾಡಲು ಸಮಯ ಸಿಗಲಿಲ್ಲವೆಂದರೂ ಅವರನ್ನು ಪ್ರೋಗ್ರಾಮ್ ಸಮಯದಲ್ಲಿ ಹಿಂದೆ ಲೈನ್ನಲ್ಲಿ ಕೂರಿಸಿ ಅವರ ಪರಿಚಯ ಸ್ಟೇಜ್ ಸೆಕ್ರಟರಿ ಕೊಡಲಿ. ಒಬ್ಬಿಬ್ಬರ ಅನುಭವವೂ ಹೇಳಿಸಬಹುದು ಮತ್ತು ಪರಿವಾರದಲ್ಲಿ ಇರುತ್ತಾ ತಮ್ಮ ಕಾರ್ಯ ಮಾಡುತ್ತಾ ನಮ್ಮ ಜೀವನ ಹೇಗೆ ನಡೆದಿದೆ, ಹೇಗೆ ಬದಲಾವಣೆ ಆಗಿದೆ ಎಂಬುದು ಅವರು ಸಮಯವಿದ್ದರೆ ಅವಕಾಶ ತೆಗೆದುಕೊಂಡು ತಿಳಿಸಲಿ. ಇಂತಹ ವಿಶೇಷ ಮೈಕ್ ತಯಾರಿ ಮಾಡಿ ಯಾರು ಸೇವೆ ಮಾಡುತ್ತಿರಲಿ.

ಒಳ್ಳೆಯದು. ಯು.ಪಿಯವರು ವಿಶೇಷವಾಗಿ ಬ್ರಹ್ಮಾಬಾಬಾರವರ ಪಾಲನೆಯನ್ನು ಪಡೆದುಕೊಳ್ಳುವ ಅಧಿಕಾರ ಪ್ರಾಪ್ತಿ ಮಾಡಿಕೊಂಡಿದ್ದೀರಿ. ಯು.ಪಿ.ಯಲ್ಲಿ ಬ್ರಹ್ಮಾನ ಹೆಸರಿನಲ್ಲಿ ನೆನಪಾರ್ಥವೂ ಸಹ ಇದೆ. ಜಗದಂಬಾ, ಬ್ರಹ್ಮಾತಂದೆಯ ಪಾಲನೆ ಪಡೆದುಕೊಂಡಿರುವುದು ಯು.ಪಿ.ಯ ಭಾಗ್ಯವಾಗಿದೆ. ಪಾಲನೆಯ ಧರಿಣಿಯಾಗಿದೆ. ಭಾಗ್ಯದ ನಕ್ಷತ್ರ ಬ್ರಹ್ಮಾತಂದೆ ಮತ್ತು ಜಗದಂಬಾರವರು ಯು.ಪಿಗೆ ವರದಾನದಲ್ಲಿ ಕೊಟ್ಟಿದ್ದಾರೆ. ಒಳ್ಳೆಯದು. ಈಗ ದಿನ-ಪ್ರತಿದಿನ ತಂದೆ ಸೇವೆ ಸ್ಥಾನ ಮತ್ತು ಉಪ ಸೇವಾಕೇಂದ್ರದ ಅಥವಾ ಗೀತಾ ಪಾಠಶಾಲೆಗಳಿವೆ ಅದು ಮೊದಲಿಕ್ಕಿಂತಲೂ ಈಗ ಬಹಳ ವೃದ್ಧಿ ಆಗಿರುವುದನ್ನು ನೋಡಿದ್ದಾರೆ. ಆದ್ದರಿಂದ ಬಾಪ್ದಾದಾ ಮುಖ್ಯವಾಗಿ ಮುಂದುವರೆಯುತ್ತಾ ಹೋಗಿ ಮತ್ತು ನಂಬರ್ ವೃದ್ಧಿ ಮಾಡುವುದರಲ್ಲಿ, ಸಂದೇಶ ಕೊಡುವುದರಲ್ಲಿ ನಂಬರ್ ವನ್ ಆಗಿ ಎಂಬ ವರದಾನ ಕೊಡುತ್ತಿದ್ದಾರೆ. ಒಳ್ಳೆಯದು. ಬಾಪ್ದಾದಾ ಖುಷಿ ಆಗಿದ್ದಾರೆ ಮತ್ತೆ ಹೆಚ್ಚಿಸುತ್ತಾ ಹೋಗಬೇಕು. ಶಿಕ್ಷಕಿಯರಿಗೆ ಶುಭಾಶಯಗಳು, ವೃದ್ಧಿ ಮಾಡುತ್ತಿದ್ದೀರಿ. ಇದಕ್ಕಿಂತಲೂ ಹೆಚ್ಚು ವೃದ್ಧಿ ಮಾಡುತ್ತಿರಬೇಕು. ಒಳ್ಳೆಯದು.

ವರದಾನ:
ಸಂಘಟನೆಯಲ್ಲಿ ಸಹಯೋಗದ ಶಕ್ತಿಯ ಮೂಲಕ ವಿಜಯಿಯಾಗುವಂತಹ ಸರ್ವರ ಶುಭ ಚಿಂತಕ ಭವ.

ಒಂದುವೇಳೆ ಸಂಘಟನೆಯಲ್ಲಿ ಪ್ರತಿಯೊಬ್ಬರೂ ಒಬ್ಬರಿಗೊಬ್ಬರ ಸಹಯೋಗಿಗಳು, ಶುಭ ಚಿಂತಕರಾಗಿದ್ದರೆ ಸಹಯೋಗದ ಶಕ್ತಿಯ ಮುತ್ತಿಗೆಯು ಬಹಳ ಚಮತ್ಕಾರ ಮಾಡಬಹುದು. ಪರಸ್ಪರದಲ್ಲಿ ಒಬ್ಬರಿನ್ನೊಬ್ಬರ ಶುಭಚಿಂತಕ, ಸಹಯೋಗಿಯಾಗಿದ್ದರೆ ಈ ಮುತ್ತಿಗೆಯೊಳಗೆ ಬರಲು ಸಾಹಸವಿರಲು ಸಾಧ್ಯವಿಲ್ಲ. ಆದರೆ ಸಂಘಟನೆಯಲ್ಲಿ ಭಲೆ ಎಷ್ಟೇ ಮಾತುಗಳಲ್ಲಿ ಸಹನೆ ಮಾಡಬೇಕಾಗಬಹುದು ಆದರೆ ಎದುರಿಸುತ್ತಾ ತೋರಿಸುತ್ತೇವೆ, ವಿಜಯಿಯಾಗಿ ತೋರಿಸುತ್ತೇವೆ - ಯಾವಾಗ ಈ ಧೃಡ ಸಂಕಲ್ಪವನ್ನು ಮಾಡುತ್ತೀರಿ ಆಗ ಸಹಯೋಗದ ಶಕ್ತಿಯು ಬರುತ್ತದೆ.

ಸ್ಲೋಗನ್:
ಯಾವುದೇ ಇಚ್ಛೆಯು ಒಳ್ಳೆಯವರನ್ನಾಗಲು ಬಿಡುವುದಿಲ್ಲ, ಆದ್ದರಿಂದ ಇಚ್ಛಾ ಮಾತ್ರಂ ಅವಿದ್ಯಾ ಆಗಿರಿ.

ಅವ್ಯಕ್ತ ಸೂಚನೆ:– “ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”

ಹೇಗೆ ಸಿಹಿಯನ್ನು ತಿನ್ನುವುದು ಮತ್ತಿ ತಿನ್ನಿಸುವುದರಿಂದ ಸ್ವಲ್ಪ ಸಮಯಕ್ಕಾಗಿ ಮುಖ (ಬಾಯಿ) ಸಿಹಿಯಾಗುತ್ತದೆ, ಖುಷಿಯಾಗುತ್ತದೆ. ಹೀಗೆ ಸ್ವಯಂವೇ ಮಧುರರಾದಾಗ ಸದಾ ಮುಖದಿಂದ ಮಧುರ ಮಾತುಗಳನ್ನು ಮಾತನಾಡುತ್ತಿರುವಿರಿ. ಇಂತಹ ಮಧುರ ಮಾತು ಸ್ವಯಂಗೂ ಸಹ ಖುಷಿಯಾಗುವುದು, ಅನ್ಯರನ್ನು ಸಹ ಖುಷಿ ಪಡಿಸುವರು. ಇದೇ ವಿಧಿಯಿಂದ ಸದಾ ಸರ್ವರ ಮುಖ ಮಧುರರಾಗಿ ಮಾಡುತ್ತೀರಿತ್ತಿರಿ, ಸದಾ ಮಧುರ ದೃಷ್ಟಿ, ಮಧುರ ಮಾತು, ಮಧುರ ಕರ್ಮವಾಗಿರಲಿ.