05.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನೆನಪಿನಿಂದಲೇ ಬ್ಯಾಟರಿಯು ಚಾರ್ಜ್ ಆಗುವುದು, ಶಕ್ತಿಯು ಸಿಗುವುದು, ಆತ್ಮವು ಸತೋಪ್ರಧಾನವಾಗುವುದು ಆದ್ದರಿಂದ ನೆನಪಿನ ಯಾತ್ರೆಯ ಕಡೆ ವಿಶೇಷ ಗಮನ ನೀಡಿ”

ಪ್ರಶ್ನೆ:
ಯಾವ ಮಕ್ಕಳ ಪ್ರೀತಿಯು ಒಬ್ಬ ತಂದೆಯೊಂದಿಗಿದೆಯೋ ಅವರ ಚಿಹ್ನೆಗಳೇನಾಗಿರುವುದು?

ಉತ್ತರ:
ಒಂದುವೇಳೆ ಒಬ್ಬ ತಂದೆಯೊಂದಿಗೇ ಪ್ರೀತಿಯಿದ್ದರೆ ತಂದೆಯ ದೃಷ್ಟಿಯು ಅವರನ್ನು ಸಂತೃಪ್ತರನ್ನಾಗಿ ಮಾಡುವುದು. 2) ಅವರು ಪೂರ್ಣ ನಷ್ಟಮೋಹಿಗಳಾಗಿರುತ್ತಾರೆ. 3. ಯಾರಿಗೆ ಬೇಹದ್ದಿನ ತಂದೆಯ ಪ್ರೀತಿಯು ಇಷ್ಟವಾಯಿತೋ ಅವರು ಮತ್ತ್ಯಾರ ಪ್ರೀತಿಯಲ್ಲಿಯೂ ಸಿಲುಕಲು ಸಾಧ್ಯವಿಲ್ಲ. 4. ಅವರ ಬುದ್ಧಿಯು ಅಸತ್ಯ ಖಂಡದ ಅಸತ್ಯ ಮನುಷ್ಯರಿಂದ ದೂರವಾಗುತ್ತದೆ. ತಂದೆಯು ನಿಮಗೆ ಈಗ ಇಷ್ಟೂ ಪ್ರೀತಿಯನ್ನು ಕೊಡುತ್ತಾರೆ ಅದು ಅವಿನಾಶಿಯಾಗಿಬಿಡುತ್ತದೆ ಅದರಿಂದ ಸತ್ಯಯುಗದಲ್ಲಿಯೂ ಸಹ ನೀವು ಪರಸ್ಪರ ಬಹಳ ಪ್ರೀತಿಯಿಂದಿರುತ್ತೀರಿ.

ಓಂ ಶಾಂತಿ.
ಬೇಹದ್ದಿನ ತಂದೆಯ ಪ್ರೀತಿಯು ಈಗ ಒಂದೇ ಬಾರಿ ನೀವು ಮಕ್ಕಳಿಗೆ ಸಿಗುತ್ತದೆ. ಯಾವ ಪ್ರೀತಿಯನ್ನು ಭಕ್ತಿಯಲ್ಲಿಯೂ ಸಹ ಬಹಳ ನೆನಪು ಮಾಡುತ್ತಾರೆ. ಬಾಬಾ, ನಿಮ್ಮ ಪ್ರೀತಿಯಷ್ಟೇ ಬೇಕು, ನೀವು ಮಾತಾಪಿತಾ....... ನೀವೇ ಸರ್ವಸ್ವವಾಗಿದ್ದೀರಿ. ಒಬ್ಬರಿಂದಲೇ ಅರ್ಧಕಲ್ಪಕ್ಕಾಗಿ ಪ್ರೀತಿಯು ಸಿಕ್ಕಿಬಿಡುತ್ತದೆ, ನಿಮ್ಮ ಆ ಆತ್ಮಿಕ ಪ್ರೀತಿಯ ಮಹಿಮೆಯು ಅಪರಮಪಾರವಾಗಿದೆ. ತಂದೆಯೇ ಮಕ್ಕಳನ್ನು ಶಾಂತಿಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ಈಗ ನೀವು ದುಃಖಧಾಮದಲ್ಲಿದ್ದೀರಿ. ಅಶಾಂತಿ ಮತ್ತು ದುಃಖದಲ್ಲಿ ಎಲ್ಲರೂ ಚೀರಾಡುತ್ತಾರೆ. ಯಾರಿಗೂ ಹೇಳುವವರು-ಕೇಳುವವರು ಇಲ್ಲ ಆದ್ದರಿಂದ ಭಕ್ತಿಮಾರ್ಗದಲ್ಲಿ ನೆನಪು ಮಾಡುತ್ತಾರೆ. ಆದರೆ ನಿಯಮಾನುಸಾರ ಭಕ್ತಿಗೂ ಅರ್ಧಕಲ್ಪ ಸಮಯವಿರುತ್ತದೆ.

ಇದಂತೂ ಮಕ್ಕಳಿಗೆ ತಿಳಿಸಲಾಗಿದೆ. ತಂದೆಯು ಅಂತರ್ಯಾಮಿ ಅಲ್ಲ. ತಂದೆಗೆ ಎಲ್ಲರ ಆಂತರ್ಯವನ್ನು ಅರಿತುಕೊಳ್ಳುವ ಅವಶ್ಯಕತೆಯಿಲ್ಲ. ಅದಕ್ಕೆಥಾಟ್ ರೀಡರ್ಸ್ ಗಳಿರುತ್ತಾರೆ. ಅವರೂ ಸಹ ಈ ವಿದ್ಯೆಯನ್ನು ಕಲಿಯುತ್ತಾರೆ. ಆದರೆ ಇಲ್ಲಿ ಆ ಮಾತಿಲ್ಲ. ತಂದೆಯು ಬರುತ್ತಾರೆ, ತಂದೆ ಮತ್ತು ಮಕ್ಕಳು ಪೂರ್ಣ ಪಾತ್ರವನ್ನಭಿನಯಿಸುತ್ತೇವೆ. ತಂದೆಯು ಪ್ರತಿಯೊಬ್ಬರ ಆಂತರ್ಯವನ್ನು ಅರಿತಿದ್ದಾರೆಂದಲ್ಲ. ತಂದೆಗೆ ಗೊತ್ತಿದೆ, ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಅದರಲ್ಲಿ ಮಕ್ಕಳು ಹೇಗೆ ಪಾತ್ರವನ್ನಭಿನಯಿಸುತ್ತಾರೆ ಎಂದು. ಅವರು ಪ್ರತಿಯೊಬ್ಬರ ಹೃದಯದಲ್ಲಿ ಹೋಗಿ ಅರಿತುಕೊಳ್ಳುವುದಿಲ್ಲ. ಇದನ್ನು ರಾತ್ರಿಯೂ ತಿಳಿಸಿದೆವು. ಪ್ರತಿಯೊಬ್ಬರಲ್ಲಿಯೂ ವಿಕಾರಗಳೇ ಇವೆ. ಬಹಳ ಛೀ ಛೀ ಮನುಷ್ಯರಾಗಿದ್ದಾರೆ. ತಂದೆಯು ಬಂದು ಹೂಗಳನ್ನಾಗಿ ಮಾಡುತ್ತಾರೆ, ಈ ತಂದೆಯ ಪ್ರೀತಿಯು ನೀವು ಮಕ್ಕಳಿಗೆ ಒಂದೇ ಬಾರಿ ಸಿಗುತ್ತದೆ ಇದು ಮತ್ತೆ ಅವಿನಾಶಿಯಾಗಿಬಿಡುತ್ತದೆ. ಅಲ್ಲಿ ನೀವು ಪರಸ್ಪರ ಬಹಳ ಪ್ರೀತಿ ಮಾಡುತ್ತೀರಿ. ಈಗ ನೀವು ಮೋಹಜೀತರಾಗುತ್ತಿದ್ದೀರಿ. ಸತ್ಯಯುಗೀ ರಾಜ್ಯಕ್ಕೆ ಮೋಹಜೀತ ರಾಜ-ರಾಣಿ ಹಾಗೂ ಪ್ರಜೆಗಳ ರಾಜ್ಯವೆಂದು ಹೇಳಲಾಗುತ್ತದೆ. ಅಲ್ಲಿ ಎಂದೂ ಯಾರೂ ಅಳುವುದಿಲ್ಲ, ದುಃಖದ ಹೆಸರಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಅವಶ್ಯವಾಗಿ ಭಾರತದಲ್ಲಿ ಆರೋಗ್ಯ-ಐಶ್ವರ್ಯ-ಸಂತೋಷ ಎಲ್ಲವೂ ಇತ್ತು, ಈಗ ಇಲ್ಲ ಏಕೆಂದರೆ ಈಗ ರಾವಣರಾಜ್ಯವಾಗಿದೆ. ಇದರಲ್ಲಿ ಎಲ್ಲರೂ ದುಃಖವನ್ನನುಭವಿಸುತ್ತಾರೆ ಮತ್ತೆ ತಂದೆಯನ್ನು ಬಂದು ಸುಖ-ಶಾಂತಿ ನೀಡಿ, ದಯೆ ತೋರಿಸಿ ಎಂದು ಬೇಡುತ್ತಾರೆ. ಬೇಹದ್ದಿನ ತಂದೆಯು ದಯಾಸಾಗರನಾಗಿದ್ದಾರೆ, ರಾವಣನು ನಿರ್ದಯಿ, ದುಃಖದ ಮಾರ್ಗವನ್ನು ತಿಳಿಸುವವನಾಗಿದ್ದಾನೆ. ಎಲ್ಲಾ ಮನುಷ್ಯರು ದುಃಖದ ಮಾರ್ಗದಲ್ಲಿ ನಡೆಯುತ್ತಾರೆ. ಎಲ್ಲದಕ್ಕಿಂತ ಬಹಳ ದುಃಖ ಕೊಡುವುದು ಕಾಮವಿಕಾರವಾಗಿದೆ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ಕಾಮವಿಕಾರದ ಮೇಲೆ ಜಯಗಳಿಸಿ, ಆಗ ಜಗಜ್ಜೀತರಾಗುತ್ತೀರಿ. ಈ ಲಕ್ಷ್ಮೀ-ನಾರಾಯಣರಿಗೆ ಜಗತ್ಜೀತರೆಂದು ಹೇಳುತ್ತಾರಲ್ಲವೆ. ನಿಮ್ಮ ಸನ್ಮುಖದಲ್ಲಿ ಗುರಿ-ಉದ್ದೇಶವು ನಿಂತಿದೆ. ಮನುಷ್ಯರು ಮಂದಿರಗಳಿಗೆ ಭಲೆ ಹೋಗುತ್ತಾರೆ, ಅವರ ಚರಿತ್ರೆಯನ್ನು ತಿಳಿದುಕೊಂಡಿಲ್ಲ. ಹೇಗೆ ಗೊಂಬೆ ಪೂಜೆಯಾಗುತ್ತದೆ, ದೇವಿಯರ ಪೂಜೆ ಮಾಡುತ್ತಾರೆ. ಮೂರ್ತಿ ಮಾಡಿ ಚೆನ್ನಾಗಿ ಶೃಂಗಾರ ಮಾಡಿ ಭೋಗವನ್ನಿಡುತ್ತಾರೆ ಆದರೆ ಆ ದೇವಿಯರಂತೂ ಏನೂ ತಿನ್ನುವುದಿಲ್ಲ. ತಿನ್ನುವವರು ಬ್ರಾಹ್ಮಣರಾಗಿದ್ದಾರೆ. ಮೂರ್ತಿಗಳನ್ನು ರಚನೆ ಮಾಡಿ ನಂತರ ಪಾಲನೆ ಮಾಡಿ ವಿನಾಶ ಮಾಡಿಬಿಡುತ್ತಾರೆ ಇದಕ್ಕೆ ಅಂಧಶ್ರದ್ಧೆಯೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಇಂತಹ ಮಾತುಗಳಿರುವುದಿಲ್ಲ. ಇವೆಲ್ಲಾ ರೀತಿ-ಪದ್ಧತಿಗಳು ಕಲಿಯುಗದಲ್ಲಿ ಪ್ರಾರಂಭವಾಗುತ್ತದೆ. ನೀವು ಮೊಟ್ಟಮೊದಲು ಒಬ್ಬ ಶಿವತಂದೆಯ ಪೂಜೆ ಮಾಡುತ್ತೀರಿ, ಅದಕ್ಕೆ ಅವ್ಯಭಿಚಾರಿ, ಸತ್ಯವಾದ ಪೂಜೆ ಎಂದು ಹೇಳಲಾಗುತ್ತದೆ. ನಂತರ ವ್ಯಭಿಚಾರಿ ಪೂಜೆಯಾಗುತ್ತದೆ. ಬಾಬಾ ಶಬ್ಧವನ್ನು ಹೇಳುವುದರಿಂದಲೇ ಪರಿವಾರದ ಭಾವನೆ ಬರುತ್ತದೆ. ನೀವೂ ಸಹ ಹೇಳುತ್ತೀರಲ್ಲವೆ- ನೀವು ಮಾತಾಪಿತಾ.... ನಿಮ್ಮ ಈ ಜ್ಞಾನ ಕೊಡುವುದರಿಂದ ನಮಗೆ ಅಪಾರ ಸುಖವು ಸಿಗುತ್ತದೆ. ಬುದ್ಧಿಯಲ್ಲಿ ನೆನಪಿದೆ- ನಾವು ಮೊಟ್ಟಮೊದಲು ಮೂಲವತನದಲಿದ್ದೆವು ಅಲ್ಲಿಂದ ಇಲ್ಲಿಗೆ ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸಲು ಬರುತ್ತೇವೆ. ಮೊಟ್ಟಮೊದಲು ನಾವು ದೈವೀಶರೀರವನ್ನು ತೆಗೆದುಕೊಳ್ಳುತ್ತೇವೆ ಅರ್ಥಾತ್ ದೇವತೆಗಳೆಂದು ಕರೆಸಿಕೊಳ್ಳುತ್ತೇವೆ ನಂತರ ಕ್ಷತ್ರಿಯ, ವೈಶ್ಯ, ಶೂದ್ರವರ್ಣದಲ್ಲಿ ಬರುತ್ತಾ ಭಿನ್ನ-ಭಿನ್ನ ಪಾತ್ರವನ್ನಭಿನಯಿಸುತ್ತೇವೆ. ಈ ಮಾತುಗಳನ್ನು ನೀವು ಮೊದಲು ತಿಳಿದುಕೊಂಡಿರಬೇಕು. ಈಗ ತಂದೆಯು ಬಂದು ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ನೀವು ಮಕ್ಕಳಿಗೆ ಕೊಟ್ಟಿದ್ದಾರೆ ಮತ್ತು ಹೇಗೆ ಈ ಶರೀರದಲ್ಲಿ ಪ್ರವೇಶ ಮಾಡುತ್ತಾರೆಂದು ತಮ್ಮ ಜ್ಞಾನವನ್ನೂ ನೀಡಿದ್ದಾರೆ. ಇವರು ತಮ್ಮ 84 ಜನ್ಮಗಳನ್ನು ತಿಳಿದುಕೊಂಡಿರಲಿಲ್ಲ. ನೀವೂ ಸಹ ತಿಳಿದುಕೊಂಡಿರಲಿಲ್ಲ. ಶ್ಯಾಮ-ಸುಂದರನ ರಹಸ್ಯವನ್ನಂತೂ ತಿಳಿಸಿದ್ದಾರೆ. ಈ ಶ್ರೀಕೃಷ್ಣನು ಹೊಸ ಪ್ರಪಂಚದ ಮೊದಲ ರಾಜಕುಮಾರ ಮತ್ತು ರಾಧೆಯು ಎರಡನೆಯವರಾಗಿದ್ದಾರೆ. ಕೆಲವು ವರ್ಷಗಳ ಅಂತರವಾಗುತ್ತದೆ. ಸೃಷ್ಟಿಯ ಆದಿಯಲ್ಲಿ ಇವರಿಗೆ ಮೊದಲಿಗರೆಂದು ಹೇಳಲಾಗುತ್ತದೆ. ಆದ್ದರಿಂದಲೇ ಕೃಷ್ಣನನ್ನು ಎಲ್ಲರೂ ಪ್ರೀತಿ ಮಾಡುತ್ತಾರೆ. ಇವರನ್ನೇ ಶ್ಯಾಮ ಮತ್ತು ಸುಂದರನೆಂದು ಹೇಳಲಾಗುತ್ತದೆ. ಸ್ವರ್ಗದಲ್ಲಂತೂ ಎಲ್ಲರೂ ಸುಂದರರೇ ಆಗಿದ್ದರು, ಈಗ ಸ್ವರ್ಗವೆಲ್ಲಿದೆ! ಚಕ್ರವು ಸುತ್ತುತ್ತಾ ಇರುತ್ತದೆ. ಸಮುದ್ರದ ಕೆಳಗೆ ಹೊರಟುಹೋಗುವುದಿಲ್ಲ. ಹೇಗೆ ಲಂಕೆ, ದ್ವಾರಿಕಾ ಸಾಗರದ ಕೆಳಗೆ ಹೊರಟುಹೋಯಿತೆಂದು ಹೇಳುತ್ತಾರೆ ಆದರೆ ಇಲ್ಲ, ಈ ಚಕ್ರವು ಸುತ್ತುತ್ತದೆ. ಈ ಚಕ್ರವನ್ನು ಅರಿತುಕೊಳ್ಳುವುದರಿಂದ ನೀವು ಚಕ್ರವರ್ತಿ ಮಹಾರಾಜ-ಮಹಾರಾಣಿ ವಿಶ್ವದ ಮಾಲೀಕರಾಗುತ್ತೀರಿ. ಪ್ರಜೆಗಳೂ ಸಹ ತಮ್ಮನ್ನು ಮಾಲೀಕರೆಂದು ತಿಳಿಯುತ್ತಾರಲ್ಲವೆ. ನಮ್ಮ ರಾಜ್ಯವೆಂದು ಹೇಳುತ್ತಾರೆ, ಭಾರತವಾಸಿಗಳು ನಮ್ಮ ರಾಜ್ಯವೆಂದು ಹೇಳುತ್ತಾರೆ. ಹೆಸರು ಭಾರತ ಎಂದಾಗಿದೆ, ಹಿಂದೂಸ್ಥಾನವೆಂಬ ಹೆಸರು ತಪ್ಪಾಗಿದೆ. ವಾಸ್ತವದಲ್ಲಿ ಆದಿಸನಾತನ ದೇವಿ-ದೇವತಾಧರ್ಮವೇ ಆಗಿದೆ ಆದರೆ ಧರ್ಮಭ್ರಷ್ಟ-ಕರ್ಮಭ್ರಷ್ಟ ಆಗಿರುವಕಾರಣ ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಇಲ್ಲದಿದ್ದರೆ ತಂದೆಯು ಪುನಃ ಬಂದು ದೇವಿ-ದೇವತಾ ಧರ್ಮದ ಸ್ಥಾಪನೆ ಹೇಗೆ ಮಾಡುತ್ತಾರೆ? ಮೊದಲು ಇವರೂ ಸಹ ಈ ಮಾತುಗಳನ್ನು ತಿಳಿದಿರಲಿಲ್ಲ. ಈಗ ತಂದೆಯು ತಿಳಿಸಿದ್ದಾರೆ.

ಇಂತಹ ಮಧುರ ತಂದೆಯಾಗಿದ್ದಾರೆ, ಅವರನ್ನೂ ಸಹ ನೀವು ಮರೆತುಹೋಗುತ್ತೀರಿ! ಎಲ್ಲರಿಗಿಂತ ಮಧುರ ತಂದೆಯಾಗಿದ್ದಾರಲ್ಲವೆ. ರಾವಣರಾಜ್ಯದಲ್ಲಿ ನಿಮಗೆ ಎಲ್ಲರೂ ದುಃಖವನ್ನೇ ಕೊಡುತ್ತಾರೆ ಆದ್ದರಿಂದ ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತೀರಿ. ಹೇ ಪ್ರಿಯತಮನೆ, ನೀವು ಯಾವಾಗ ಬಂದು ಪ್ರಿಯತಮೆಯರೊಂದಿಗೆ ಮಿಲನ ಮಾಡುತ್ತೀರಿ? ಎಂದು ಅವರ ನೆನಪಿನಲ್ಲಿ ಪ್ರೇಮದ ಕಣ್ಣೀರನ್ನು ಸುರಿಸುತ್ತೀರಿ ಏಕೆಂದರೆ ನೀವೆಲ್ಲರೂ ಭಕ್ತಿನಿಯರಾಗಿದ್ದೀರಿ. ಭಕ್ತಿನಿಯರ ಪತಿಯು ಭಗವಂತನಾದರು, ಭಗವಂತನು ಬಂದು ಭಕ್ತಿಯ ಫಲವನ್ನು ಕೊಡುತ್ತಾರೆ, ಮಾರ್ಗವನ್ನೂ ತಿಳಿಸುತ್ತಾರೆ ಮತ್ತು ಹೇಳುತ್ತಾರೆ- ಇದು 5000 ವರ್ಷಗಳ ಆಟವಾಗಿದೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಯಾವುದೇ ಮನುಷ್ಯರು ಅರಿತುಕೊಂಡಿಲ್ಲ. ಇದನ್ನು ಆತ್ಮಿಕ ತಂದೆ ಮತ್ತು ಆತ್ಮಿಕ ಮಕ್ಕಳೇ ತಿಳಿದಿದ್ದಾರೆ. ಯಾವುದೇ ಮನುಷ್ಯರಿಗೂ ಗೊತ್ತಿಲ್ಲ, ದೇವತೆಗಳಿಗೂ ಗೊತ್ತಿಲ್ಲ. ಈ ಆತ್ಮಿಕ ತಂದೆಗೇ ಗೊತ್ತಿದೆ. ಅವರು ಕುಳಿತು ಮಕ್ಕಳಿಗೆ ತಿಳಿಸಿಕೊಡುತ್ತಾರೆ ಮತ್ತ್ಯಾವುದೇ ದೇಹಧಾರಿಯ ಬಳಿ ಈ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಿರಲು ಸಾಧ್ಯವಿಲ್ಲ. ಈ ಜ್ಞಾನವಿರುವುದೇ ಆತ್ಮಿಕ ತಂದೆಯ ಬಳಿ. ಅವರಿಗೇ ಜ್ಞಾನಜ್ಞಾನೇಶ್ವರನೆಂದು ಹೇಳಲಾಗುತ್ತದೆ. ಜ್ಞಾನಜ್ಞಾನೇಶ್ವರ ತಂದೆಯು ನಿಮ್ಮನ್ನು ರಾಜರಾಜೇಶ್ವರರನ್ನಾಗಿ ಮಾಡಲು ಜ್ಞಾನವನ್ನು ಕೊಡುತ್ತಾರೆ ಆದ್ದರಿಂದ ಇದಕ್ಕೆ ರಾಜಯೋಗವೆಂದು ಹೇಳಲಾಗುತ್ತದೆ. ಉಳಿದೆಲ್ಲವೂ ಹಠಯೋಗಗಳಾಗಿವೆ. ಹಠಯೋಗಿಗಳ ಚಿತ್ರಗಳೂ ಬಹಳ ಇವೆ, ಸನ್ಯಾಸಿಗಳು ಯಾವಾಗ ಬರುತ್ತಾರೆಯೋ ಬಂದು ಹಠಯೋಗವನ್ನು ಕಲಿಸುತ್ತಾರೆ. ಬಹಳ ವೃದ್ಧಿಯಾದಾಗ ಹಠಯೋಗ ಮುಂತಾದವುಗಳನ್ನು ಕಲಿಸುತ್ತಾ ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ- ನಾನು ಬರುವುದೇ ಸಂಗಮದಲ್ಲಿ. ಬಂದು ರಾಜಧಾನಿಯನ್ನು ಸ್ಥಾಪನೆ ಮಾಡುತ್ತೇನೆ. ಇಲ್ಲಿಯೇ ಸ್ಥಾಪನೆ ಮಾಡುತ್ತೇನೆ, ಸತ್ಯಯುಗದಲ್ಲಲ್ಲ. ಸತ್ಯಯುಗದ ಆದಿಯಲ್ಲಂತೂ ರಾಜಧಾನಿಯಿರುತ್ತದೆಯೆಂದರೆ ಅವಶ್ಯವಾಗಿ ಅದು ಸಂಗಮದಲ್ಲಿಯೇ ಸ್ಥಾಪನೆಯಾಗುತ್ತದೆ. ಇಲ್ಲಿ ಕಲಿಯುಗದಲ್ಲಿ ಎಲ್ಲರೂ ಪೂಜಾರಿಗಳಾಗಿದ್ದಾರೆ, ಸತ್ಯಯುಗದಲ್ಲಿ ಪೂಜ್ಯರಾಗಿರುತ್ತಾರೆ. ಆದ್ದರಿಂದ ತಂದೆಯು ಪೂಜ್ಯರನ್ನಾಗಿ ಮಾಡಲು ಬರುತ್ತಾರೆ. ಪೂಜಾರಿಗಳನ್ನಾಗಿ ಮಾಡುವವರು ರಾವಣನಾಗಿದ್ದಾನೆ, ಇದೆಲ್ಲವನ್ನೂ ತಿಳಿದುಕೊಳ್ಳಬೇಕಲ್ಲವೆ. ಇದು ಶ್ರೇಷ್ಠಾತಿಶ್ರೇಷ್ಠ ವಿದ್ಯೆಯಾಗಿದೆ, ಇದನ್ನು ಯಾರೂ ಅರಿತುಕೊಂಡಿಲ್ಲ. ಅವರು ಪಾರಲೌಕಿಕ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ, ಇದು ಯಾರಿಗೂ ಗೊತ್ತಿಲ್ಲ. ತಂದೆಯು ಬಂದು ತಮ್ಮ ಪೂರ್ಣಪರಿಚಯವನ್ನುಕೊಡುತ್ತಾರೆ. ಮಕ್ಕಳಿಗೇ ತಾವೇ ತೋರಿಸಿ ಮತ್ತೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಬೇಹದ್ದಿನ ತಂದೆಯ ಪ್ರೀತಿಯು ಸಿಗುತ್ತದೆಯೆಂದರೆ ಮತ್ತ್ಯಾರ ಪ್ರೀತಿಯು ಇಷ್ಟವಾಗುವುದಿಲ್ಲ. ಈ ಸಮಯದಲ್ಲಿ ಅಸತ್ಯಖಂಡವಾಗಿದೆ. ಸುಳ್ಳು ಮಾಯೆ, ಸುಳ್ಳು ಶರೀರ...... ಭಾರತವು ಈಗ ಸುಳ್ಳಿನ ಖಂಡವಾಗಿದೆ ನಂತರ ಸತ್ಯಯುಗದಲ್ಲಿ ಸತ್ಯಖಂಡವಾಗಿರುವುದು. ಭಾರತವು ಎಂದೂ ವಿನಾಶವಾಗುವುದಿಲ್ಲ, ಇದು ಎಲ್ಲದಕ್ಕಿಂತ ಅತಿದೊಡ್ಡ ತೀರ್ಥಸ್ಥಾನವಾಗಿದೆ, ಇಲ್ಲಿ ಬೇಹದ್ದಿನ ತಂದೆಯು ಕುಳಿತು ಮಕ್ಕಳಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ ಮತ್ತು ಸರ್ವರ ಸದ್ಗತಿ ಮಾಡುತ್ತಾರೆ. ಇದು ಬಹಳ ದೊಡ್ಡ ತೀರ್ಥಸ್ಥಾನವಾಗಿದೆ. ಭಾರತದ ಮಹಿಮೆಯು ಅಪರಮಪಾರವಾಗಿದೆ ಆದರೆ ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ- ಭಾರತವು ವಿಶ್ವದ ಅತಿದೊಡ್ಡ ಅದ್ಭುತವಾಗಿದೆ. ಅವು ಮಾಯೆಯ 7 ಅದ್ಭುತಗಳಾಗಿವೆ, ಈಶ್ವರನ ಅದ್ಭುತವು ಒಂದೇ ಆಗಿದೆ. ತಂದೆಯೂ ಒಬ್ಬರೇ, ಅವರ ಸ್ವರ್ಗದ ಅದ್ಭುತವೂ ಒಂದೇ ಆಗಿದೆ, ಅದಕ್ಕೆ ಹೆವೆನ್-ಪ್ಯಾರಡೈಸ್ ಎಂದು ಹೇಳುತ್ತಾರೆ. ಸತ್ಯ-ಸತ್ಯವಾದ ಹೆಸರು ಒಂದೇ ಆಗಿದೆ-ಸ್ವರ್ಗ. ಇದು ನರಕವಾಗಿದೆ. ಪೂರ್ಣಚಕ್ರವನ್ನು ನೀವು ಬ್ರಾಹ್ಮಣರೇ ಸುತ್ತುತ್ತೀರಿ. ನಾವೇ ಬ್ರಾಹ್ಮಣರಿಂದ ದೇವತೆಗಳು..... ಏರುವ ಕಲೆ, ಇಳಿಯುವ ಕಲೆ. ಏರುವ ಕಲೆಯಿಂದ ಸರ್ವರ ಉದ್ಧಾರವಾಗುತ್ತದೆ. ವಿಶ್ವದಲ್ಲಿ ಶಾಂತಿಯೂ ಇರಲಿ, ಸುಖವೂ ಇರಲೆಂದು ಭಾರತವಾಸಿಗಳೇ ಬಯಸುತ್ತಾರೆ. ಸ್ವರ್ಗದಲ್ಲಂತೂ ಸುಖವೇ ಇರುತ್ತದೆ, ದುಃಖದ ಹೆಸರಿರುವುದಿಲ್ಲ. ಅದಕ್ಕೆ ಈಶ್ವರೀಯ ರಾಜ್ಯವೆಂದು ಕರೆಯಲಾಗುತ್ತದೆ. ಸತ್ಯಯುಗದಲ್ಲಿ ಸೂರ್ಯವಂಶಿಯರಲ್ಲಿ 2ನೇ ದರ್ಜೆಯಲ್ಲಿ ಚಂದ್ರವಂಶಿಯರಾಗುತ್ತಾರೆ. ನೀವು ಆಸ್ತಿಕರಾಗಿದ್ದೀರಿ, ಮನುಷ್ಯರು ನಾಸ್ತಿಕರಾಗಿದ್ದಾರೆ. ನೀವು ಮಾಲೀಕ ತಂದೆಗೆ ಮಕ್ಕಳಾಗಿ ಅವರಿಗೆ ಆಸ್ತಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತೀರಿ. ನಿಮ್ಮದು ಮಾಯೆಯ ಜೊತೆ ಗುಪ್ತಯುದ್ಧವು ನಡೆಯುತ್ತದೆ. ತಂದೆಯು ರಾತ್ರಿಯಲ್ಲಿ ಬರುತ್ತಾರೆ. ಶಿವರಾತ್ರಿಯಿದೆಯಲ್ಲವೆ ಆದರೆ ಶಿವನರಾತ್ರಿಯ ಅರ್ಥವನ್ನೂ ಸಹ ತಿಳಿದುಕೊಂಡಿಲ್ಲ. ಬ್ರಹ್ಮಾರವರ ರಾತ್ರಿಯು ಪೂರ್ಣವಾಗಿ ದಿನವು ಪ್ರಾರಂಭವಾಗುತ್ತದೆ. ಅವರು ಕೃಷ್ಣಭಗವಾನುವಾಚ ಎಂದು ಹೇಳುತ್ತಾರೆ ಆದರೆ ಇದು ಶಿವಭಗವಾನುವಾಚವಾಗಿದೆ. ಈಗ ಯಾರು ಸತ್ಯ? ಕೃಷ್ಣನಂತೂ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ. ತಂದೆಯು ತಿಳಿಸುತ್ತಾರೆ- ನಾನು ಸಾಧಾರಣ ವೃದ್ಧನ ತನುವಿನಲ್ಲಿ ಬರುತ್ತೇನೆ, ಇವರೂ ಸಹ ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ಬಹಳ ಜನ್ಮಗಳ ಅಂತಿಮದಲ್ಲಿ ಯಾವಾಗ ಪತಿತರಾಗಿಬಿಡುವರೋ ಆಗ ಪತಿತಸೃಷ್ಟಿ, ಪತಿತರಾಜ್ಯದಲ್ಲಿ ಬರುತ್ತೇನೆ. ಪತಿತಪ್ರಪಂಚದಲ್ಲಿ ಅನೇಕ ರಾಜ್ಯ, ಪಾವನಪ್ರಪಂಚದಲ್ಲಿ ಒಂದೇ ರಾಜ್ಯವಾಗುತ್ತದೆ. ಲೆಕ್ಕವಿದೆಯಲ್ಲವೆ! ಭಕ್ತಿಮಾರ್ಗದಲ್ಲಿ ಬಹಳ ನೌಧಾಭಕ್ತಿ ಮಾಡುತ್ತಾರೆ, ತಲೆಯನ್ನು ಕತ್ತರಿಸಿಕೊಳ್ಳುವ ಸ್ಥಿತಿಗೆ ಬಂದಾಗ ಅವರ ಮನೋಕಾಮನೆಗಳು ಪೂರ್ಣವಾಗುತ್ತವೆ. ಬಾಕಿ ಅದರಲ್ಲಿ ಏನೂ ಇಲ್ಲ, ಇದನ್ನು ನೌಧಾಭಕ್ತಿಯೆಂದು ಹೇಳಲಾಗುವುದು. ಯಾವಾಗಿನಿಂದ ರಾವಣರಾಜ್ಯವು ಪ್ರಾರಂಭವಾಗುತ್ತದೆಯೋ ಆಗಿನಿಂದಲೂ ಭಕ್ತಿಯ ಕರ್ಮಕಾಂಡದ ಮಾತುಗಳನ್ನು ಮನುಷ್ಯರು ಓದುತ್ತಾ-ಓದುತ್ತಾ ಕೆಳಗೆ ಬಂದುಬಿಡುತ್ತಾರೆ. ವ್ಯಾಸಭಗವಂತನು ಶಾಸ್ತ್ರಗಳನ್ನು ರಚಿಸಿದರೆಂದು ಹೇಳುತ್ತಾರೆ. ಕುಳಿತು ಏನೆಲ್ಲಾ ಬರೆದಿದ್ದಾರೆ, ಭಕ್ತಿ ಮತ್ತು ಜ್ಞಾನದ ರಹಸ್ಯವು ಈಗ ನೀವು ಮಕ್ಕಳಿಗೆ ತಿಳಿದಿದೆ. ಏಣಿ ಮತ್ತು ವೃಕ್ಷದ ಬಗ್ಗೆ ಗೊತ್ತಿದೆ, ಅದೆಲ್ಲವನ್ನೂ ತಿಳಿಸಬೇಕಾಗಿದೆ. ಅದರಲ್ಲಿ 84 ಜನ್ಮಗಳನ್ನೂ ತೋರಿಸಿದ್ದಾರೆ. ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ, ಯಾರು ಪ್ರಾರಂಭದಲ್ಲಿ ಬಂದಿರುತ್ತಾರೆಯೋ ಅವರೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಈ ಜ್ಞಾನವು ನಿಮಗೆ ಈಗಲೇ ಸಿಗುತ್ತದೆ. ಇದು ಮತ್ತೆ ಆದಾಯದ ಮೂಲವಾಗಿಬಿಡುತ್ತದೆ. 21 ಜನ್ಮಗಳಿಗೆ, ಅದರ ಪ್ರಾಪ್ತಿಗಾಗಿ ಪುರುಷಾರ್ಥ ಮಾಡುವಂತಹ ಅಪ್ರಾಪ್ತಿ ವಸ್ತು ಯಾವುದೂ ಇರುವುದಿಲ್ಲ. ಹೆಸರೇ ಆಗಿದೆ ಸ್ವರ್ಗ, ತಂದೆಯು ಅದರ ಮಾಲೀಕರನ್ನಾಗಿ ಮಾಡುತ್ತಾರೆ. ಮನುಷ್ಯರಂತೂ ಕೇವಲ ಅದ್ಭುತಗಳನ್ನು ತೋರಿಸುತ್ತಾರೆ ಆದರೆ ತಂದೆಯು ನಿಮ್ಮನ್ನು ಅದಕ್ಕೆ ಮಾಲೀಕರನ್ನಾಗಿ ಮಾಡುತ್ತಾರೆ ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನನ್ನನ್ನು ನಿರಂತರ ನೆನಪು ಮಾಡಿ, ಸ್ಮರಣೆ ಮಾಡಿ-ಮಾಡಿ ಸುಖ ಪಡೆಯಿರಿ. ತನು-ಮನ, ಕಲಹ-ಕ್ಲೇಷಗಳೆಲ್ಲವೂ ಕಳೆಯುತ್ತವೆ, ಜೀವನ್ಮುಕ್ತಿ ಪದವಿಯನ್ನು ಪಡೆಯುತ್ತೀರಿ. ಪವಿತ್ರರಾಗುವುದಕ್ಕೆ ನೆನಪಿನ ಯಾತ್ರೆಯೂ ಬಹಳ ಅವಶ್ಯಕ. ಮನ್ಮನಾಭವವಾಗಿದ್ದಾಗ ಮತ್ತೆ ಅಂತ್ಯ ಮತಿ ಸೋ ಗತಿಯಾಗಿಬಿಡುವುದು. ಗತಿಯೆಂದು ಶಾಂತಿಧಾಮಕ್ಕೆ ಹೇಳಲಾಗುತ್ತದೆ, ಸದ್ಗತಿ ಇಲ್ಲಿಯೇ ಆಗುತ್ತದೆ. ಸದ್ಗತಿಗೆ ವಿರುದ್ಧವಾಗಿ ದುರ್ಗತಿಯಿರುತ್ತದೆ.

ಈಗ ನೀವು ತಂದೆಯನ್ನು ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೀರಿ. ನಿಮಗೆ ತಂದೆಯ ಪ್ರೀತಿಯು ಸಿಗುತ್ತದೆ. ತಂದೆಯು ದೃಷ್ಟಿಯಿಂದ ಸಂತುಷ್ಠ ಮಾಡಿಬಿಡುತ್ತಾರೆ. ಸನ್ಮುಖದಲ್ಲಿ ಬಂದು ಜ್ಞಾನವನ್ನು ತಿಳಿಸುತ್ತಾರಲ್ಲವೆ. ಇದರಲ್ಲಿ ಪ್ರೇರಣೆಯ ಮಾತಿಲ್ಲ. ತಂದೆಯು ಸಲಹೆ ನೀಡುತ್ತಾರೆ- ಈ ರೀತಿ ನೆನಪು ಮಾಡುವುದರಿಂದ ಶಕ್ತಿಯು ಸಿಗುತ್ತದೆ. ಹೇಗೆ ಬ್ಯಾಟರಿಯು ಚಾರ್ಜ್ ಆಗುತ್ತದೆಯಲ್ಲವೆ. ಇದು ಮೋಟಾರು ಆಗಿದೆ, ಇದರ ಬ್ಯಾಟರಿಯು ಖಾಲಿಯಾಗಿಬಿಟ್ಟಿದೆ, ಈಗ ಸರ್ವಶಕ್ತಿವಂತ ತಂದೆಯ ಜೊತೆ ಬುದ್ಧಿಯೋಗವನ್ನಿಡುವುದರಿಂದ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿಬಿಡುತ್ತೀರಿ, ಬ್ಯಾಟರಿಯು ಚಾರ್ಜ್ ಆಗಿಬಿಡುತ್ತದೆ. ತಂದೆಯೇ ಬಂದು ಎಲ್ಲರ ಬ್ಯಾಟರಿಯನ್ನು ಚಾರ್ಜ್ ಮಾಡುತ್ತಾರೆ. ಸರ್ವಶಕ್ತಿವಂತ ತಂದೆಯೇ ಆಗಿದ್ದಾರೆ. ಈ ಮಧುರಾತಿ ಮಧುರ ಮಾತುಗಳನ್ನು ತಂದೆಯೇ ಕುಳಿತು ತಿಳಿಸಿಕೊಡುತ್ತಾರೆ. ಆ ಭಕ್ತಿ ಮಾರ್ಗದ ಶಾಸ್ತ್ರಗಳನ್ನು ಜನ್ಮ-ಜನ್ಮಾಂತರದಿಂದ ಓದುತ್ತಾ ಬಂದಿದ್ದೀರಿ. ಈಗ ತಂದೆಯು ಎಲ್ಲಾ ಧರ್ಮದವರಿಗಾಗಿ ಒಂದೇ ಮಾತನ್ನು ತಿಳಿಸುತ್ತಾರೆ- ತಮ್ಮನ್ನು ಆತ್ಮವೆಂದು ತಿಳಿಯಿರಿ, ತಂದೆಯನ್ನು ನೆನಪು ಮಾಡಿ ಆಗ ನಿಮ್ಮ ಪಾಪಗಳು ತುಂಡಾಗುತ್ತವೆ. ಈಗ ನೆನಪು ಮಾಡುವುದು ನೀವು ಮಕ್ಕಳ ಕೆಲಸವಾಗಿದೆ, ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ಪತಿತ-ಪಾವನ ಒಬ್ಬ ತಂದೆಯೇ ಆಗಿದ್ದಾರೆ. ನಂತರ ತಂದೆಯಿಂದ ಪಾವನರಾಗಿ ಎಲ್ಲರೂ ಮನೆಗೆ ಹೊರಟುಹೋಗುತ್ತಾರೆ. ಎಲ್ಲರಿಗಾಗಿ ಈ ಜ್ಞಾನವಿದೆ. ಸಹಜರಾಜಯೋಗ ಮತ್ತು ಸಹಜಜ್ಞಾನವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸರ್ವಶಕ್ತಿವಂತ ತಂದೆಯೊಂದಿಗೆ ತಮ್ಮ ಬುದ್ಧಿಯೋಗವನ್ನಿಟ್ಟು ಬ್ಯಾಟರಿಯನ್ನು ತುಂಬಿಕೊಳ್ಳಬೇಕಾಗಿದೆ. ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳಬೇಕು. ನೆನಪಿನ ಯಾತ್ರೆಯಲ್ಲೆಂದೂ ತಬ್ಬಿಬ್ಬಾಗಬಾರದು.

2. ವಿದ್ಯೆಯನ್ನು ಓದಿ ತಮ್ಮ ಮೇಲೆ ತಾವೇ ಕೃಪೆ ತೋರಿಸಿಕೊಳ್ಳಬೇಕಾಗಿದೆ. ತಂದೆಯ ಸಮಾನ ಪ್ರೀತಿಯ ಸಾಗರರಾಗಬೇಕಾಗಿದೆ. ಹೇಗೆ ತಂದೆಯ ಪ್ರೀತಿಯು ಅವಿನಾಶಿಯಾಗಿದೆಯೋ ಹಾಗೆಯೇ ಎಲ್ಲರೊಂದಿಗೆ ಅವಿನಾಶಿ ಸತ್ಯಪ್ರೀತಿಯನ್ನಿಟ್ಟುಕೊಳ್ಳಬೇಕಾಗಿದೆ. ಮೋಹಜೀತರಾಗಬೇಕಾಗಿದೆ.

ವರದಾನ:
ಅರಿತುಕೊಳ್ಳುವ ಶಕ್ತಿಯ ಮುಖಾಂತರ ಮಧುರ ಅನುಭವ ಮಾಡುವಂತಹ ಸದಾ ಶಕ್ತಿಶಾಲಿ ಆತ್ಮ ಭವ.

ಈ ಅರಿತುಕೊಳ್ಳುವ ಶಕ್ತಿ ಬಹಳ ಮದುರ ಅನುಭವ ಮಾಡಿಸುತ್ತದೆ-ಕೆಲವೊಮ್ಮೆ ತಮ್ಮನ್ನು ತಂದೆಯ ಕಣ್ಮಣಿ ಆತ್ಮ ಅರ್ಥಾತ್ ಕಣ್ಣುಗಳಲ್ಲಿ ಸಮಾವೇಶವಾಗಿರುವ ಶ್ರೇಷ್ಠ ಬಿಂದುವೆಂದು ಅರಿತುಕೊಳ್ಳಿ. ಕೆಲವೊಮ್ಮೆ ಮಸ್ತಕದಲ್ಲಿ ಹೊಳೆಯುತ್ತಿರುವ ಮಸ್ತಕಮಣಿ. ಕೆಲವೊಮ್ಮೆ ತಮ್ಮನ್ನು ಬ್ರಹ್ಮಾತಂದೆಯ ಸಹಯೋಗಿ ಬಲಗೈ, ಬ್ರಹ್ಮಾತಂದೆಯ ಭುಜಗಳೆಂದು ಅನುಭವ ಮಾಡಿ, ಕೆಲವೊಮ್ಮೆ ಅವ್ಯಕ್ತ ಫರಿಶ್ತಾ ಸ್ವರೂಪದ ಅನುಭವ ಮಾಡಿ..... ಈ ರೀತಿ ಅರಿತುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಆಗ ಶಕ್ತಿಶಾಲಿಗಳಾಗಿಬಿಡುವಿರಿ. ನಂತರ ಸಣ್ಣ ಚುಕ್ಕೆ ಕೂಡ ಸ್ಪಷ್ಟವಾಗಿ ಕಾಣುತ್ತದೆ ಮತ್ತು ಪರಿವರ್ತನೆ ಮಾಡಿಕೊಳ್ಳುವಿರಿ.

ಸ್ಲೋಗನ್:
ಸರ್ವರ ಹೃದಯದ ಆಶೀರ್ವಾದಗಳನ್ನು ಪಡೆಯುತ್ತಾ ಹೋಗಿ ಆಗ ತಮ್ಮ ಪುರುಷಾರ್ಥ ಸಹಜವಾಗಿಬಿಡುತ್ತದೆ.