05.09.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನಿಮಗೆ ಇಲ್ಲಿ ಪ್ರವೃತ್ತಿಮಾರ್ಗದ (ಪರಿವಾರದ) ಪ್ರೀತಿಯು ಸಿಗುತ್ತದೆ ಏಕೆಂದರೆ ತಂದೆಯು ಹೃದಯಪೂರ್ವಕವಾಗಿ ನನ್ನ ಮಕ್ಕಳೇ ಎಂದು ಹೇಳುತ್ತಾರೆ, ತಂದೆಯಿಂದ ಆಸ್ತಿಯು ಸಿಗುತ್ತದೆ, ಈ ಪ್ರೀತಿಯನ್ನು ದೇಹಧಾರಿ ಗುರುಗಳಲು ಕೊಡಲು ಸಾಧ್ಯವಿಲ್ಲ”

ಪ್ರಶ್ನೆ:
ಯಾವಮಕ್ಕಳ ಬುದ್ಧಿಯಲ್ಲಿ ಜ್ಞಾನದ ಧಾರಣೆಯಾಗಿರುತ್ತದೆ, ಯಾರು ತೀಕ್ಷ್ಣಬುದ್ಧಿಯವರಾಗಿರುತ್ತಾರೆ- ಅವರ ಲಕ್ಷಣಗಳೇನಾಗಿರುತ್ತದೆ?

ಉತ್ತರ:
ಅನ್ಯರಿಗೆ ತಿಳಿಸುವ ಉಮ್ಮಂಗವಿರುವುದು. ಅವರ ಬುದ್ಧಿಯು ಮಿತ್ರಸಂಬಂಧಿಗಳು ಮುಂತಾದವರಲ್ಲಿ ಅಲೆದಾಡುವುದಿಲ್ಲ. ಯಾರು ಸೂಕ್ಷ್ಮಬುದ್ಧಿಯವರಾಗಿರುತ್ತಾರೆಯೋ ಅವರು ಓದುವುದರಲ್ಲಿ ಎಂದೂ ಸಹ ಆಕಳಿಕೆ ಇತ್ಯಾದಿಗಳೇನೂ ಬರುವುದಿಲ್ಲ. ಎಂದೂ ಸಹ ಶಾಲೆಯಲ್ಲಿ ಕಣ್ಣುಗಳನ್ನು ಮುಚ್ಚುವುದಿಲ್ಲ. ಯಾವ ಮಕ್ಕಳು ಚಂಚಲ ಬುದ್ಧಿಯವರಾಗಿ ಕುಳಿತಿರುತ್ತಾರೆ, ಯಾರ ಬುದ್ಧಿಯು ಆಕಡೆ-ಈಕಡೆ ಅಲೆಯುತ್ತಿರುತ್ತದೆಯೋ ಅವರು ಜ್ಞಾನವನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅವರಿಗೆ ತಂದೆಯನ್ನು ನೆನಪು ಮಾಡುವುದು ಬಹಳ ಕಷ್ಟವಾಗುತ್ತದೆ.

ಓಂ ಶಾಂತಿ.
ಇದು ತಂದೆ ಮತ್ತು ಮಕ್ಕಳ ಮಿಲನವಾಗಿದೆ. ಗುರುಗಳು ಮತ್ತು ಶಿಷ್ಯರ ಮೇಳವಂತು ಅಲ್ಲ. ಗುರುಗಳಿಗೆ ಈ ದೃಷ್ಟಿಯಿರುತ್ತದೆ- ಇವರು ನಮ್ಮ ಶಿಷ್ಯರು ಅಥವಾ ಇವರು ಅನುಯಾಯಿಯಾಗಿದ್ದಾರೆ ಅಥವಾ ಜಿಜ್ಞಾಸು ಆಗಿದ್ದಾರೆ, ಇದು ಕನಿಷ್ಟದೃಷ್ಟಿಯಾಯಿತಲ್ಲವೆ. ಅವರು ಆ ದೃಷ್ಟಿಯಿಂದಲೇ ನೋಡುತ್ತಿರುತ್ತಾರೆ, ಆತ್ಮವನ್ನು ನೋಡುವುದಿಲ್ಲ. ಅವರು ಶರೀರಗಳನ್ನೇ ನೋಡುತ್ತಾರೆ ಮತ್ತು ಶಿಷ್ಯರೂ ಸಹ ದೇಹಾಭಿಮಾನಿಯಾಗಿಯೇ ಕುಳಿತುಕೊಂಡಿರುತ್ತಾರೆ. ಅವರನ್ನು ತನ್ನ ಗುರುಗಳೆಂದು ತಿಳಿಯುತ್ತಾರೆ. ಇವರು ನಮ್ಮ ಗುರುವಾಗಿದ್ದಾರೆ ಎಂಬ ದೃಷ್ಟಿಯೇ ಇರುತ್ತದೆ. ಗುರುಗಳಿಗೆ ಬಹಳ ಗೌರವವನ್ನು ಕೊಡುತ್ತಾರೆ. ಇಲ್ಲಂತೂ ಬಹಳ ವ್ಯತ್ಯಾಸವಿದೆ, ಇಲ್ಲಿ ತಂದೆಯೇ ಮಕ್ಕಳಿಗೆ ಗೌರವ ಕೊಡುತ್ತಾರೆ ಏಕೆಂದರೆ ಈ ಮಕ್ಕಳಿಗೆ ಓದಿಸಬೇಕು ಎಂಬುದು ತಂದೆಗೆ ಗೊತ್ತಿದೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಬೇಹದ್ದಿನ ಚರಿತ್ರೆ-ಭೂಗೋಳವನ್ನು ತಿಳಿಸಬೇಕಾಗಿದೆ ಆದರೆ ಆ ಗುರುಗಳ ಮನಸ್ಸಿನಲ್ಲಿ ಮಕ್ಕಳೆಂಬ ಪ್ರೀತಿಯಿರುವುದಿಲ್ಲ. ತಂದೆಯ ಬಳಿಯಂತು ಮಕ್ಕಳೆಂಬ ಪ್ರೀತಿಯಿರುತ್ತದೆ ಮತ್ತು ಮಕ್ಕಳಿಗೂ ಸಹ ತಂದೆಯ ಪ್ರತಿ ಪ್ರೀತಿಯಿರುತ್ತದೆ. ನೀವು ತಿಳಿದುಕೊಳ್ಳುತ್ತೀರಿ- ನಿಮಗೆ ತಂದೆಯು ಸೃಷ್ಟಿಚಕ್ರದ ಜ್ಞಾನವನ್ನು ತಿಳಿಸುತ್ತಾರೆ. ಆ ಗುರುಗಳು ಏನನ್ನು ಕಲಿಸುತ್ತಾರೆ? ಅರ್ಧಕಲ್ಪದಿಂದ ಶಾಸ್ತ್ರ ಇತ್ಯಾದಿಗಳನ್ನೇ ತಿಳಿಸುತ್ತಾರೆ, ಭಕ್ತಿಮಾರ್ಗದ ಕರ್ಮವನ್ನು ಮಾಡುತ್ತಾ ಗಾಯಿತ್ರಿಮಂತ್ರ, ಸಂಧ್ಯಾವಂದನೆ ಇತ್ಯಾದಿಯನ್ನು ಕಲಿಸುತ್ತಾರೆ. ಇಲ್ಲಿ ತಂದೆಯು ಬಂದು ತನ್ನ ಪರಿಚಯವನ್ನು ಕೊಡುತ್ತಿದ್ದಾರೆ. ನಾವು ತಂದೆಯನ್ನು ಅರಿತುಕೊಂಡೇ ಇರಲಿಲ್ಲ, ಅವರನ್ನು ನಾವು ಸರ್ವವ್ಯಾಪಿ ಎಂದು ಹೇಳುತ್ತಿದ್ದೆವು, ಪರಮಾತ್ಮನು ಎಲ್ಲಿದ್ದಾನೆ ಎಂದು ಯಾವಾಗ ಕೇಳಿದರೂ ಸಹ ಸರ್ವವ್ಯಾಪಿಯಾಗಿದ್ದಾರೆಂದು ಕ್ಷಣದಲ್ಲಿಯೇ ಹೇಳಿಬಿಡುತ್ತಾರೆ. ತಮ್ಮಬಳಿ ಯಾರಾದರೂ ಬಂದರೆ ಇಲ್ಲಿ ಏನನ್ನು ಕಲಿಸುತ್ತೀರಿ ಎಂದು ಕೇಳಿದರೆ ತಿಳಿಸಿ- ನಾವು ರಾಜಯೋಗವನ್ನು ಕಲಿಸುತ್ತೇವೆ, ಯಾವುದರಿಂದ ತಾವು ಮನುಷ್ಯರಿಂದ ದೇವತೆಗಳು ಅರ್ಥಾತ್ ರಾಜರಾಗಬಹುದು, ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವ ಸತ್ಸಂಗ ವiತ್ತ್ಯಾವುದೇ ಸತ್ಸಂಗ ಇರುವುದಿಲ್ಲ. ದೇವತೆಗಳು ಇರುವುದು ಸತ್ಯಯುಗದಲ್ಲಿ. ಕಲಿಯುಗದಲ್ಲಿ ಇರುವುದು ಮನುಷ್ಯರು. ಈಗ ನಾವು ನಿಮಗೆ ಇಡೀ ಸೃಷ್ಟಿಚಕ್ರದ ರಹಸ್ಯವನ್ನು ತಿಳಿಸುತ್ತೇನೆ, ಇದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ, ಹಾಗೂ ಪಾವನರಾಗುವ ಬಹಳಷ್ಟು ಯುಕ್ತಿಯನ್ನು ನಿಮಗೆ ತಿಳಿಸುತ್ತೇನೆ. ಇಂತಹ ಯುಕ್ತಿಯನ್ನೆಂದೂ ಯಾರೂ ಸಹ ತಿಳಿಸಲು ಸಾಧ್ಯವಿಲ್ಲ. ಇದು ಸಹಜ ರಾಜಯೋಗವಾಗಿದೆ. ತಂದೆಯು ಪತಿತ-ಪಾವನನಾಗಿದ್ದಾರೆ, ಅವರು ಸರ್ವಶಕ್ತಿವಂತನೂ ಆಗಿದ್ದಾರೆ ಅಂದಮೇಲೆ ಅವರನ್ನು ನೆನಪು ಮಾಡುವುದರಿಂದ ಪಾಪಗಳು ತುಂಡಾಗುತ್ತವೆ ಏಕೆಂದರೆ ಯೋಗಾಗ್ನಿ ಆಗಿದೆಯಲ್ಲವೆ. ಅಂದಾಗ ಇಲ್ಲಿ ಹೊಸಮಾತನ್ನು ಕಲಿಸುತ್ತೇವೆ.

ಇದು ಜ್ಞಾನಮಾರ್ಗವಾಗಿದೆ. ಜ್ಞಾನಸಾಗರ ತಂದೆಯೊಬ್ಬರೇ ಆಗಿದ್ದಾರೆ, ಜ್ಞಾನ ಮತ್ತು ಭಕ್ತಿಯು ಬೇರೆ-ಬೇರೆಯಾಗಿದೆ. ಜ್ಞಾನವನ್ನು ಕಲಿಸಲು ತಂದೆಯೇ ಬರಬೇಕಾಗುತ್ತದೆ ಏಕೆಂದರೆ ಅವರೇ ಜ್ಞಾನಸಾಗರನಾಗಿದ್ದಾರೆ. ಅವರು ತಾನಾಗಿಯೇ ಬಂದು ತನ್ನ ಪರಿಚಯವನ್ನು ಕೊಡುತ್ತಾರೆ- ನಾನು ಎಲ್ಲರ ತಂದೆಯಾಗಿದ್ದೇನೆ. ಬ್ರಹ್ಮಾರವರ ಮೂಲಕ ಇಡೀ ಸೃಷ್ಟಿಯನ್ನು ಪಾವನ ಮಾಡುತ್ತೇನೆ. ಪಾವನಪ್ರಪಂಚವು ಸತ್ಯಯುಗವಾಗಿದೆ, ಪತಿತಪ್ರಪಂಚವು ಕಲಿಯುಗವಾಗಿದೆ ಅಂದಮೇಲೆ ಇದು ಸತ್ಯಯುಗದ ಆದಿ, ಕಲಿಯುಗದ ಅಂತ್ಯದ ಸಂಗಮವಾಗಿದೆ. ಇದನ್ನು ಅತಿಚಿಕ್ಕದಾದ ಯುಗವೆಂದು ಹೇಳಲಾಗುತ್ತದೆ. ಇದರಲ್ಲಿ ನಾವು ಜಂಪ್ ಮಾಡುತ್ತೇವೆ. ಎಲ್ಲಿಗೆ? ಹಳೆಯ ಪ್ರಪಂಚದಿಂದ ಹೊಸ ಪ್ರಪಂಚಕ್ಕೆ ಒಮ್ಮೆಲೆ ಜಿಗಿಯುತ್ತೇವೆ. ಸತ್ಯಯುಗದಿಂದ ನಿಧಾನ-ನಿಧಾನವಾಗಿ ಏಣಿಯನ್ನು ಕೆಳಗಿಳಿಯುತ್ತಾ ಬಂದೆವು ಆದರೆ ಇಲ್ಲಿ ನಾವು ಈ ಛೀ ಛೀ ಪ್ರಪಂಚದಿಂದ ಹೊಸಪ್ರಪಂಚದಲ್ಲಿ ಹೋಗುತ್ತೇವೆ. ನೇರವಾಗಿ ಅತಿ ಎತ್ತರದಲ್ಲಿ ಹೋಗುತ್ತೇವೆ. ಹಳೆಯ ಪ್ರಪಂಚವನ್ನು ಬಿಟ್ಟು ನಾವು ಹೊಸ ಪ್ರಪಂಚಕ್ಕೆ ಹೋಗುತ್ತೇವೆ. ಇದು ಬೇಹದ್ದಿನ ಮಾತಾಗಿದೆ. ಬೇಹದ್ದಿನ ಹಳೆಯ ಪ್ರಪಂಚದಲ್ಲಿ ಅನೇಕ ಮನುಷ್ಯರಿದ್ದಾರೆ, ಹೊಸ ಪ್ರಪಂಚದಲ್ಲಿ ಕೆಲವರೇ ಇರುತ್ತಾರೆ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಅಲ್ಲಿ ಎಲ್ಲರೂ ಪವಿತ್ರರಾಗಿರುತ್ತಾರೆ, ಕಲಿಯುಗದಲ್ಲಿ ಎಲ್ಲರೂ ಅಪವಿತ್ರರಾಗಿದ್ದಾರೆ. ರಾವಣನು ಅಪವಿತ್ರರನ್ನಾಗಿ ಮಾಡುತ್ತಾನೆ. ತಂದೆಯು ಎಲ್ಲರಿಗೂ ತಿಳಿಸುತ್ತಾರೆ- ಮಕ್ಕಳೇ, ನೀವೀಗ ರಾವಣರಾಜ್ಯ ಅಥವ ಹಳೆಯ ಪ್ರಪಂಚದಲ್ಲಿದ್ದೀರಿ. ನೀವು ಮೊದಲು ರಾಮರಾಜ್ಯದಲ್ಲಿದ್ದಿರಿ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ ನಂತರ 84 ಜನ್ಮಗಳ ಚಕ್ರವನ್ನು ಸುತುತ್ತಾ ಹೇಗೆ ಕೆಳಗೆ ಬಂದಿದ್ದೀರೆನ್ನುವುದನ್ನು ನಾನು ತಿಳಿಸುತ್ತೇನೆ. ಯಾರು ಒಳ್ಳೆಯ ಬುದ್ಧಿವಂತರಿರುವರೋ ಅವರು ತಕ್ಷಣದಲ್ಲಿ ತಿಳಿದುಕೊಳ್ಳುತ್ತಾರೆ. ಯಾರಿಗೆ ಬುದ್ಧಿಯಲ್ಲಿ ಬರುವುದಿಲ್ಲವೋ ಅವರು ಬಿಸಿತವೆಯ ಮೇಲೆ ನೀರು ಹಾಕಿದಂತೆ, ಆಕಡೆ-ಈಕಡೆ ನೋಡುತ್ತಿರುತ್ತಾರೆ, ಗಮನವಿಟ್ಟು ಕೇಳುವುದಿಲ್ಲ. ಈ ರೀತಿ ಹೇಳುತ್ತಾರಲ್ಲವೆ- ಬಿಸಿತವೆಯಂತಿದ್ದೀರಿ, ಏನು ಹೇಳಿದರೂ ಹಾರಿಹೋಗುತ್ತಿದೆ. ಸನ್ಯಾಸಿಗಳೂ ಸಹ ಕಥೆಯನ್ನು ಹೇಳುವಾಗ ಯಾರಾದರೂ ತೂಕಡಿಸಿದಾಗ ಅಥವ ಗಮನವು ಬೇರೆಕಡೆಯಲ್ಲಿ ಇರುತ್ತದೆಯೆಂದರೆ ತಕ್ಷಣವೇ ಕೇಳುತ್ತಾರೆ- ಈಗ ನಾವು ಏನು ತಿಳಿಸಿದ್ದೇವೆ? ಇಲ್ಲಿ ತಂದೆಯೂ ಸಹ ಎಲ್ಲರನ್ನೂ ನೋಡುತ್ತಿರುತ್ತಾರೆ- ಚಂಚಲಬುದ್ಧಿಯವರಾಗಿ ಯಾರೂ ಸಹ ಕುಳಿತಿಲ್ಲವೇ ಎಂದು ನೋಡುತ್ತಾರೆ. ಯಾರು ಸೂಕ್ಷ್ಮ ಬುದ್ಧಿಯವರಿರುತ್ತಾರೆಯೋ ಅವರು ವಿದ್ಯಾಭ್ಯಾಸದ ಸಮಯದಲ್ಲಿ ಆಕಳಿಸುವುದಿಲ್ಲ. ಶಾಲೆಯಲ್ಲಿ ಯಾರೂ ಸಹ ಕಣ್ಣುಗಳನ್ನು ಮುಚ್ಚಿ ಕುಳಿತುಕೊಳ್ಳುವ ನಿಯಮವಿಲ್ಲ. ಜ್ಞಾನವನ್ನು ಸ್ವಲ್ಪವೂ ಅರ್ಥಮಾಡಿಕೊಳ್ಳುವುದಿಲ್ಲ. ಅವರಿಗೆ ತಂದೆಯ ನೆನಪು ಮಾಡುವುದು ಬಹಳ ಕಷ್ಟವಾಗುತ್ತದೆ ಅಂದಮೇಲೆ ಪಾಪವು ಹೇಗೆ ಭಸ್ಮವಾಗುತ್ತದೆ! ಸೂಕ್ಷ್ಮಬುದ್ಧಿಯವರು ಬಹಳಚೆನ್ನಾಗಿ ಧಾರಣೆ ಮಾಡಿಕೊಂಡು, ಅನ್ಯರಿಗೂ ತಿಳಿಸುವ ಉಮ್ಮಂಗವನ್ನಿಡುತ್ತಾರೆ, ಜ್ಞಾನವಿಲ್ಲದಿದ್ದರೆ ಬುದ್ಧಿಯು ಮಿತ್ರಸಂಬಂಧಿಗಳಕಡೆ ಅಲೆಯುತ್ತಿರುತ್ತದೆ. ಇಲ್ಲಿ ತಂದೆಯು ತಿಳಿಸುತ್ತಾರೆ- ಎಲ್ಲವನ್ನೂ ಮರೆಯಬೇಕಾಗಿದೆ. ಅಂತ್ಯದಲ್ಲಿ ಯಾವುದೇ ನೆನಪು ಬರಬಾರದು. ಈ ಬ್ರಹ್ಮಾರವರು ಗುರುಗಳು ಮುಂತಾದವರನ್ನು ನೋಡಿದ್ದಾರೆ, ಯಾರು ಪರಿಪಕ್ವ ಬ್ರಹ್ಮಜ್ಞಾನಿಗಳಿದ್ದಾರೆಯೋ ಅವರು ಮುಂಜಾನೆಯ ಸಮಯದಲ್ಲಿ ಕುಳಿತು-ಕುಳಿತಿದ್ದಂತೆಯೇ ಬ್ರಹ್ಮತತ್ಮವನ್ನು ನೆನಪು ಮಾಡುತ್ತಾ-ಮಾಡುತ್ತಾ ಶರೀರವನ್ನು ಬಿಟ್ಟುಬಿಡುತ್ತಾರೆ. ಅಲ್ಲಿ ಬಹಳ ಶಾಂತಿಯ ಪ್ರಕಂಪನಗಳಿರುತ್ತವೆ. ಅವರು ಬ್ರಹ್ಮತತ್ವದಲ್ಲಿ ಲೀನವಾಗಲು ಸಾಧ್ಯವಿಲ್ಲ, ಪುನಃ ತಾಯಿಯ ಗರ್ಭದಿಂದ ಜನ್ಮವನ್ನು ತೆಗೆದುಕೊಳ್ಳಬೇಕಾಗುತ್ತದೆ.

ತಂದೆಯು ತಿಳಿಸಿದ್ದಾರೆ- ವಾಸ್ತವದಲ್ಲಿ ಮಹಾತ್ಮನೆಂದು ಕೃಷ್ಣನಿಗೆ ಹೇಳಲಾಗುತ್ತದೆ. ಮನುಷ್ಯರು ಅರ್ಥವನ್ನು ತಿಳಿದುಕೊಳ್ಳದೇ ಸುಮ್ಮನೇ ಹೇಳಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ- ಶ್ರೀಕೃಷ್ಣನು ಸಂಪೂರ್ಣ ನಿರ್ವಿಕಾರಿಯಾಗಿದ್ದಾನೆ ಆದರೆ ಅವರನ್ನು ಸನ್ಯಾಸಿ ಎಂದಲ್ಲ, ದೇವತೆಯೆಂದು ಹೇಳಲಾಗುತ್ತದೆ. ಸನ್ಯಾಸಿಯೆಂದು ಹೇಳುವುದರಲ್ಲಿ ಮತ್ತು ದೇವತೆಯೆಂದು ಹೇಳುವುದರಲ್ಲಿ ಅರ್ಥವಿದೆ. ಇವರು ಹೇಗೆ ದೇವತೆಯಾದರು? ಸನ್ಯಾಸಿಯಿಂದ ದೇವತೆಯಾದರೇನು? ಬೇಹದ್ದಿನ ಸನ್ಯಾಸ ಮಾಡಿದರು ನಂತರ ಹೊಸಪ್ರಪಂಚದಲ್ಲಿ ಹೊರಟುಹೋದರು. ಆ ಮನುಷ್ಯರಂತು ಅಲ್ಪಕಾಲದ ಸನ್ಯಾಸ ಮಾಡುತ್ತಾರೆ, ಬೇಹದ್ದಿನಲ್ಲಿ ಹೋಗಲು ಸಾಧ್ಯವಿಲ್ಲ. ಮತ್ತೆ ಹದ್ದಿನಲ್ಲಿಯೇ ವಿಕಾರದಿಂದ ಜನ್ಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಬೇಹದ್ದಿನ ಮಾಲೀಕರಾಗಲು ಸಾಧ್ಯವಿಲ್ಲ, ಎಂದೂ ರಾಜ-ರಾಣಿಯಾಗಲು ಸಾಧ್ಯವಿಲ್ಲ ಏಕೆಂದರೆ ಅವರ ಧರ್ಮವೇ ಭಿನ್ನವಾಗಿದೆ. ಸನ್ಯಾಸಧರ್ಮವು ದೇವಿ-ದೇವತಾಧರ್ಮವಲ್ಲ. ಸನ್ಯಾಸಧರ್ಮದವರು ದೇವಿ-ದೇವತಾ ಧರ್ಮದ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಅಂದಮೇಲೆ ಗೀತೆ ಇತ್ಯಾದಿಯನ್ನೇಕೆ ತೆಗೆದುಕೊಳ್ಳುತ್ತಾರೆ. ಇದೆಲ್ಲವೂ ಅಧರ್ಮವಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ನಾನು ಅಧರ್ಮದ ವಿನಾಶ ಮಾಡಿ, ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತೇನೆ. ಉಳಿದಂತೆ ಇವರೆಲ್ಲರೂ ಅಧರ್ಮವನ್ನೇ ಮಾಡುತ್ತಿರುತ್ತಾರೆ. ವಿಕಾರವು ಅಧರ್ಮವಲ್ಲವೆ! ಆದ್ದರಿಂದ ತಂದೆಯು ತಿಳಿಸುತ್ತಾರೆ- ಇದೆಲ್ಲದರ ವಿನಾಶ ಮತ್ತು ಒಂದು ಆದಿಸನಾತನ ದೇವಿ-ದೇವತಾಧರ್ಮದ ಸ್ಥಾಪನೆ ಮಾಡುತ್ತಿದ್ದೀರಿ. ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟು ಪದವಿಯನ್ನು ಪಡೆಯುತ್ತಾರೆ. ತಮ್ಮನ್ನು ಆತ್ಮವೆಂದು ನಿಶ್ಚಯ ಮಾಡಿಕೊಳ್ಳಬೇಕಾಗಿದೆ. ಭಲೆ ಗೃಹಸ್ಥವ್ಯವಹಾರದಲ್ಲಿರಿ, ಅದರಲ್ಲಿಯೂ ಎಷ್ಟು ಸಾಧ್ಯವೋ ಅಷ್ಟು ಏಳುತ್ತಾ-ಕುಳಿತುಕೊಳ್ಳುತ್ತಾ ಪರಿಪಕ್ವ ಮಾಡಿಕೊಳ್ಳಬೇಕು. ಹೇಗೆ ಭಕ್ತರು ಮುಂಜಾನೆಯಲ್ಲಿ ಎದ್ದು, ಏಕಾಂತದಲ್ಲಿ ಮಾಲೆಯನ್ನು ಜಪಿಸುತ್ತಾರೆ. ನೀವು ಇಡೀ ದಿನದ ಲೆಕ್ಕವನ್ನು ತೆಗೆಯುತ್ತೀರಿ. ಈ ಸಮಯದಲ್ಲಿ ಇಷ್ಟು ನೆನಪಿತ್ತು, ಇಡೀ ದಿನದಲ್ಲಿ ಇಷ್ಟು ನೆನಪಿತ್ತು ಎಂಬುದರ ಲೆಕ್ಕವನ್ನು ತೆಗೆಯಬೇಕು. ಭಕ್ತರು ಮುಂಜಾನೆಯಲ್ಲಿ ಮಾಲೆಯನ್ನು ಜಪಿಸುತ್ತಾರೆ, ಭಲೆ ಕೆಲವರು ಸತ್ಯಭಕ್ತರಾಗಿರುವುದಿಲ್ಲ. ಕೆಲವರ ಬುದ್ಧಿಯಂತು ಹೊರಗೆ ಅಲ್ಲಿ-ಇಲ್ಲಿ ಅಲೆಯುತ್ತಿರುತ್ತದೆ. ಈಗ ನೀವು ತಿಳಿದುಕೊಂಡಿದ್ದೀರಿ- ಭಕ್ತಿಯಿಂದ ಯಾವುದೇ ಲಾಭವು ಸಿಗುವುದಿಲ್ಲ. ಇದು ಜ್ಞಾನವಾಗಿದೆ, ಇದರಿಂದ ಬಹಳ ಲಾಭವಾಗುತ್ತದೆ. ಈಗ ನಿಮ್ಮದು ಏರುವಕಲೆಯಾಗಿದೆ. ತಂದೆಯು ಪದೇ-ಪದೇ ತಿಳಿಸುತ್ತಾರೆ- ಮನ್ಮನಾಭವ. ಗೀತೆಯಲ್ಲಿಯೂ ಈ ಅಕ್ಷರವಿದೆ ಆದರೆ ಅದರ ಅರ್ಥವನ್ನು ಯಾರೂ ಸಹ ತಿಳಿಸಲು ಸಾಧ್ಯವಿಲ್ಲ. ಉತ್ತರವನ್ನು ತಿಳಿಸುವುದು ಬರುವುದೇ ಇಲ್ಲ, ವಾಸ್ತವದಲ್ಲಿ ಅದರ ಅರ್ಥವನ್ನೂ ಬರೆಯಲಾಗಿದೆ- ತಾವು ತಮ್ಮನ್ನು ಆತ್ಮವೆಂದು ತಿಳಿದು, ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿರಿ. ಭಗವಾನುವಾಚ ಇದೆಯಲ್ಲವೆ. ಆದರೆ ಅವರ ಬುದ್ಧಿಯಲ್ಲಿ ಕೃಷ್ಟಭಗವಂತನಿದ್ದಾನೆ. ಕೃಷ್ಣನಂತು ದೇಹಧಾರಿ, ಪುನರ್ಜನ್ಮದಲ್ಲಿ ಬರುವವನಾಗಿದ್ದಾನಲ್ಲವೆ. ಅಂದಮೇಲೆ ಕೃಷ್ಣನನ್ನು ಭಗವಂತನೆಂದು ಹೇಳಲು ಹೇಗೆ ಸಾಧ್ಯ! ಸನ್ಯಾಸಿಗಳು ಮೊದಲಾದವರ ದೃಷ್ಟಿಯು ತಂದೆ ಮತ್ತು ಮಕ್ಕಳೆಂಬ ದೃಷ್ಟಿಯಿರಲು ಸಾಧ್ಯವಿಲ್ಲ. ಭಲೆ ಗಾಂಧೀಜಿಯನ್ನೂ ಸಹ ಬಾಪೂಜಿಯೆಂದು ಹೇಳುತ್ತಿದ್ದರು ಆದರೆ ತಂದೆ ಮತ್ತು ಮಕ್ಕಳ ಸಂಬಂಧವೆಂದು ಹೇಳುವುದಿಲ್ಲ. ಅವರು ಸಾಕಾರಿಯಾದರಲ್ಲವೆ. ನಿಮಗೆ ತಿಳಿಸಲಾಗಿದೆ- ತಮ್ಮನ್ನು ಆತ್ಮವೆಂದು ತಿಳಿಯಿರಿ. ಇವರಲ್ಲಿ ಯಾವ ತಂದೆಯು ಕುಳಿತಿದ್ದಾರೆಯೋ ಅವರು ಬೇಹದ್ದಿನ ಬಾಪೂಜಿಯಾಗಿದ್ದಾರೆ. ಲೌಕಿಕ ಮತ್ತು ಪಾರಲೌಕಿಕ ಇಬ್ಬರೂ ತಂದೆಯರಿಂದ ಆಸ್ತಿಯು ಸಿಗುತ್ತದೆ. ಬಾಪೂಜಿಯಿಂದಂತು ಏನೂ ಸಿಗುವುದಿಲ್ಲ. ಹಾ! ಭಾರತದ ರಾಜಧಾನಿಯು ಮರಳಿ ಸಿಕ್ಕಿತು ಆದರೆ ಇದನ್ನು ಆಸ್ತಿಯೆಂದು ಹೇಳುವುದಿಲ್ಲ, ಅದರಲ್ಲಿ ಸುಖವೂ ಸಿಗಬೇಕಲ್ಲವೆ.

ಇವೆರಡು ಆಸ್ತಿಗಳಿವೆ - ಒಂದು ಲೌಕಿಕ ತಂದೆಯ ಆಸ್ತಿ. ಇನ್ನೊಂದು ಅಲೌಕಿಕ ತಂದೆಯ ಆಸ್ತಿ. ಬ್ರಹ್ಮಾರವರಿಂದ ಯಾವುದೇ ಆಸ್ತಿಯು ಸಿಗುವುದಿಲ್ಲ. ಭಲೆ ಅವರು ಎಲ್ಲಾ ಪ್ರಜೆಗಳ ಪಿತನಾಗಿದ್ದಾರೆ, ಅವರನ್ನು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳುತ್ತಾರೆ. ಅವರೇ ಸ್ವಯಂ ಹೇಳುತ್ತಾರೆ - ನನ್ನಿಂದ ನಿಮಗೆ ಯಾವುದೇ ಆಸ್ತಿಯು ಸಿಗುವುದಿಲ್ಲ. ನನ್ನಿಂದ ಆಸ್ತಿಯು ಸಿಗುವುದಿಲ್ಲ ಎಂದು ಇವರೇ ಹೇಳುತ್ತಾರೆಂದರೆ ಲೌಕಿಕ ತಂದೆಯಿಂದ ಆಸ್ತಿಯೇನು ಸಿಗುತ್ತದೆ? ಏನೂ ಸಿಗುವುದಿಲ್ಲ. ಬ್ರಿಟಿಷರಂತು ಹೊರಟುಹೋದರು. ಅವರ ರಾಜಧಾನಿಯಲ್ಲಾದರೂ ಸ್ವಲ್ಪ ಸುಖವಿತ್ತು, ಈಗೇನಿದೆ? ಉಪವಾಸ ಸತ್ಯಾಗ್ರಹ, ಪಿಕೆಟಿಂಗ್, ಮುಷ್ಕರ ಮುಂತಾದವುಗಳಿರುತ್ತವೆ. ಎಷ್ಟೊಂದು ಹೊಡೆದಾಟಗಳಾಗುತ್ತವೆ, ಯಾರ ಭಯವೂ ಇಲ್ಲ, ದೊಡ್ಡ-ದೊಡ್ಡ ಅಧಿಕಾರಿಗಳನ್ನೂ ಸಹ ಸಾಯಿಸಿಬಿಡುತ್ತಾರೆ. ಸುಖಕ್ಕಿಂತಲೂ ದುಃಖವೇ ಇದೆ ಅಂದಮೇಲೆ ಇಲ್ಲಿಯೇ ಬೇಹದ್ದಿನ ಮಾತಿದೆ. ತಂದೆಯು ತಿಳಿಸುತ್ತಾರೆ- ಮೊದಲು ಇದನ್ನು ನಿಶ್ಚಯ ಮಾಡಿಕೊಳ್ಳಿರಿ ನಾನು ಆತ್ಮನಾಗಿದ್ದೇನೆ, ಶರೀರವಲ್ಲ. ತಂದೆಯು ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ, ನಾವು ದತ್ತು ಮಕ್ಕಳಾಗಿದ್ದೇವೆ. ನಿಮಗೆ ತಿಳಿಸಲಾಗುತ್ತದೆ- ಜ್ಞಾನಸಾಗರ ತಂದೆಯು ಬಂದಿದ್ದಾರೆ ಮತ್ತು ಸೃಷ್ಟಿಚಕ್ರದ ರಹಸ್ಯವನ್ನು ತಿಳಿಸುತ್ತಾರೆ, ಇದನ್ನು ಮತ್ತ್ಯಾರೂ ಸಹ ತಿಳಿಸಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ದೇಹಸಹಿತವಾಗಿ ದೇಹದ ಎಲ್ಲಾ ಧರ್ಮಗಳನ್ನು ಮರೆತು, ನನ್ನೊಬ್ಬನನ್ನೇ ನೆನಪು ಮಾಡಿ. ಅವಶ್ಯವಾಗಿ ಸತೋಪ್ರಧಾನರಾಗಬೇಕು ಎಂಬುದು ನಿಮಗೆ ಗೊತ್ತಿದೆ. ಈ ಹಳೆಯ ಪ್ರಪಂಚದ ವಿನಾಶವಂತು ಆಗಲೇಬೇಕಾಗಿದೆ. ಹೊಸಪ್ರಪಂಚದಲ್ಲಂತು ಕೆಲವರೇ ಇರುತ್ತಾರೆ, ಇಷ್ಟು ಕೋಟ್ಯಾಂತರ ಆತ್ಮರೆಲ್ಲಿ! 9 ಲಕ್ಷವೆಲ್ಲಿ! ಅಂದಮೇಲೆ ಇವರೆಲ್ಲರೂ ಎಲ್ಲಿಗೆ ಹೋಗುತ್ತಾರೆ? ಈಗ ನಿಮ್ಮ ಬುದ್ಧಿಯಲ್ಲಿದೆ- ನಾವೆಲ್ಲಾ ಆತ್ಮರೂ ಮೇಲಿದ್ದೆವು, ನಂತರ ಪಾತ್ರವನ್ನಭಿನಯಿಸಲು ಇಲ್ಲಿಗೆ ಬಂದೆವು, ಆತ್ಮವನ್ನು ಪಾತ್ರಧಾರಿಯೆಂದು ಹೇಳುತ್ತಾರೆ. ಆತ್ಮವು ಈ ಶರೀರದ ಜೊತೆ ಪಾತ್ರವನ್ನಭಿನಯಿಸುತ್ತದೆ. ಆತ್ಮಕ್ಕೆ ಕರ್ಮೇಂದ್ರಿಯಗಳಂತು ಇರಬೇಕಲ್ಲವೆ. ಆತ್ಮವು ಎಷ್ಟೊಂದು ಸೂಕ್ಷ್ಮವಾಗಿದೆ! 84 ಲಕ್ಷ ಜನ್ಮಗಳಲ್ಲ. 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ, ನಂತರ ಪಾತ್ರವನ್ನು ಹೇಗೆ ಪುನರಾವರ್ತನೆ ಮಾಡುತ್ತದೆ, ಅದು ನೆನಪಿರುವುದಕ್ಕೇ ಸಾಧ್ಯವಿಲ್ಲ. ಸ್ಮೃತಿಯಿಂದ ಹೊರಟುಹೋಗುತ್ತದೆ. 84 ಜನ್ಮಗಳೇ ನಿಮಗೆ ನೆನಪಿರುವುದಿಲ್ಲ, ಮರೆತುಹೋಗುತ್ತೀರಿ ಅಂದಮೇಲೆ 84 ಲಕ್ಷ ಜನ್ಮಗಳಿರಲು ಸಾಧ್ಯವಿಲ್ಲ. ಈಗ ನೀವು ಮಕ್ಕಳು ತಂದೆಯನ್ನು ನೆನಪು ಮಾಡಿ ಪವಿತ್ರರಾಗಬೇಕಾಗಿದೆ. ಈ ಯೋಗಾಗ್ನಿಯಿಂದ ವಿಕರ್ಮಗಳು ವಿನಾಶವಾಗುತ್ತದೆ. ಮಕ್ಕಳಿಗೆ ಈ ನಿಶ್ಚಯವೂ ಇದೆ- ನಾವು ಕಲ್ಪ-ಕಲ್ಪವೂ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಸ್ವರ್ಗವಾಸಿಯಾಗಲು ತಂದೆಯು ತಿಳಿಸಿದ್ದಾರೆ- ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಏಕೆಂದರೆ ನಾನೇ ಪತಿತ-ಪಾವನನಾಗಿದ್ದೇನೆ. ನೀವು ತಂದೆಯನ್ನು ಕರೆದಿದ್ದೀರಲ್ಲವೆ ಆದ್ದರಿಂದ ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆ. ದೇವತೆಗಳು ಪಾವನರಾಗಿರುತ್ತಾರೆ, ಮನುಷ್ಯರು ಪತಿತರಾಗಿದ್ದಾರೆ. ಈಗ ಪುನಃ ಪಾವನರಾಗಿ ಶಾಂತಿಧಾಮಕ್ಕೆ ಹೋಗಬೇಕಾಗಿದೆ. ನೀವು ಶಾಂತಿಧಾಮಕ್ಕೆ ಹೋಗಲು ಬಯಸುತ್ತೀರೋ ಅಥವ ಸುಖಧಾಮದಲ್ಲಿ ಬರಲು ಬಯಸುತ್ತೀರಾ? ಸುಖವು ಕಾಗೆಯ ಎಂಜಲಿಗೆ ಸವi ವಾಗಿದೆ, ನಮಗೆ ಶಾಂತಿಯೇ ಬೇಕೆಂದು ಸನ್ಯಾಸಿಗಳು ಹೇಳುತ್ತಾರೆ ಆದ್ದರಿಂದ ಅವರು ಸತ್ಯಯುಗದಲ್ಲಿ ಬರಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಪ್ರವೃತ್ತಿಮಾರ್ಗದ ಪ್ರೀತಿಯಿತ್ತು. ದೇವತೆಗಳು ನಿರ್ವಿಕಾರಿಗಳಾಗಿದ್ದರು, ಅವರೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತರಾಗುತ್ತಾರೆ. ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೆ, ನಿರ್ವಿಕಾರಿಗಳಾಗಬೇಕಾಗಿದೆ. ಸ್ವರ್ಗದಲ್ಲಿ ಹೋಗಬೇಕೆಂದರೆ ನನ್ನನ್ನು ನೆನಪು ಮಾಡುತ್ತೀರೆಂದರೆ ನಿಮ್ಮ ಎಲ್ಲಾ ಪಾಪಗಳು ಭಸ್ಮವಾಗಿ ಪುಣ್ಯಾತ್ಮರಾಗಿಬಿಡುತ್ತೀರಿ. ನಂತರ ಶಾಂತಿಧಾಮ, ಸುಖಧಾಮಕ್ಕೆ ಹೋಗುತ್ತೀರಿ. ಅಲ್ಲಿ ಶಾಂತಿಯೂ ಇತ್ತು, ಸುಖವೂ ಇತ್ತು. ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಿರ್ವಿಕಾರಿಗಳಾಗಿರಿ, ಸ್ವರ್ಗದಲ್ಲಿ ಹೋಗಬೇಕೆಂದರೆ ನನ್ನನ್ನು ನೆನಪು ಮಾಡಿದಾಗ ನಿಮ್ಮ ಎಲ್ಲಾ ಪಾಪಗಳು ಭಸ್ಮವಾಗಿ ಪುಣ್ಯಾತ್ಮರಾಗಿಬಿಡುತ್ತೀರಿ, ನಂತರ ಶಾಂತಿಧಾಮ, ಸುಖಧಾಮಕ್ಕೆ ಹೋಗುತ್ತೀರಿ. ಅಲ್ಲಿ ಶಾಂತಿಯೂ ಇತ್ತು, ಸುಖವೂ ಇತ್ತು. ಈಗ ದುಃಖಧಾಮವಾಗಿದೆ, ಈಗ ತಂದೆಯು ಬಂದು ದುಃಖಧಾಮದ ವಿನಾಶ, ಸುಖಧಾಮದ ಸ್ಥಾಪನೆ ಮಾಡುತ್ತಾರೆ. ಚಿತ್ರಗಳೂ ಸಹ ಸನ್ಮುಖದಲ್ಲಿ ನಿಂತಿದೆ. ನಂತರ ಸತ್ಯಯುಗದಲ್ಲಿ ಸ್ವಲ್ಪಭಾಗವೇ ಉಳಿಯುತ್ತದೆ, ಇಷ್ಟೆಲ್ಲಾ ಖಂಡಗಳು ಅಲ್ಲಿರುವುದಿಲ್ಲ. ವಿಶ್ವದ ಇತಿಹಾಸ-ಭೂಗೋಳವೆಲ್ಲವನ್ನೂ ತಂದೆಯೇ ತಿಳಿಸಿಕೊಡುತ್ತಾರೆ. ಇದು ಪಾಠಶಾಲೆಯಾಗಿದೆ, ಭಗವಾನುವಾಚ- ಮೊಟ್ಟಮೊದಲನೆಯದಾಗಿ ತಂದೆಯ ಪರಿಚಯವನ್ನು ಕೊಡಬೇಕಾಗುತ್ತದೆ. ಈಗ ಕಲಿಯುಗವಿದೆ ಮತ್ತೆ ಸತ್ಯಯುಗದಲ್ಲಿ ಹೋಗಬೇಕಾಗಿದೆ, ಆನಂತರ ಸುಖವೇ ಸುಖವಿರುತ್ತದೆ. ಒಬ್ಬರನ್ನೇ ನೆನಪು ಮಾಡುವುದು ಅವ್ಯಭಿಚಾರಿ ನೆನಪಾಗಿದೆ. ಶರೀರವನ್ನೂ ಸಹ ಮರೆತುಬಿಡಬೇಕು. ಶಾಂತಿಧಾಮದಿಂದ ಬಂದಿದ್ದೀರಿ, ಈಗ ಮತ್ತೆ ಶಾಂತಿಧಾಮಕ್ಕೆ ಹೊರಟುಹೋಗುತ್ತೀರಿ. ಈಗ ನೀವು ಕುಳಿತುಕೊಂಡು ಬಹಳಚೆನ್ನಾಗಿ ತಿಳಿಸಬೇಕಾಗುತ್ತದೆ. ಮೊದಲು ಇಷ್ಟೊಂದು ಚಿತ್ರಗಳಿರಲಿಲ್ಲ, ಚಿತ್ರಗಳಿಲ್ಲದೆಯೂ ಸಹ ಸಾರರೂಪದಲ್ಲಿ ತಿಳಿಸಲಾಗುತ್ತಿತ್ತು. ಈ ಪಾಠಶಾಲೆಯಲ್ಲಿ ಮನುಷ್ಯರಿಂದ ದೇವತೆಗಳಾಗಿಬಿಡಬೇಕು. ಈ ಜ್ಞಾನವು ಹೊಸಪ್ರಪಂಚಕ್ಕಾಗಿ ಇದೆ, ಅದನ್ನು ತಂದೆಯೇ ಕೊಡುತ್ತಾರಲ್ಲವೆ. ತಂದೆಯ ದೃಷ್ಟಿಯು ಮಕ್ಕಳ ಮೇಲಿರುತ್ತದೆ, ನಾನು ಆತ್ಮರಿಗೆ ಓದಿಸುತ್ತೇನೆಂದು ತಂದೆಯು ತಿಳಿಸುತ್ತಾರೆ. ನೀವೂ ಸಹ ಬೇಹದ್ದಿನ ತಂದೆಯು ನಮಗೆ ತಿಳಿಸುತ್ತಾರೆಂದು ತಿಳಿದುಕೊಳ್ಳುತ್ತೀರಿ. ಅವರ ಹೆಸರಾಗಿದೆ- ಶಿವ. ಕೇವಲ ಬೇಹದ್ದಿನ ಬಾಬಾ ಎಂದು ಹೇಳುವುದರಿಂದ ತಬ್ಬಿಬ್ಬಾಗುತ್ತಾರೆ ಏಕೆಂದರೆ ವರ್ತಮಾನದಲ್ಲಿ ಬಾಬಾ ಎನ್ನುವವರು ಅನೇಕರಿದ್ದಾರೆ. ಮುನ್ಸಿಪಾಲಿಟಿಯ ಮೇಯರ್ನ್ನೂ ಸಹ ಬಾಬಾ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ- ನಾನು ಇವರಲ್ಲಿ ಬಂದಾಗಲೂ ಸಹ ನನ್ನ ಹೆಸರು ಶಿವ ಎಂದೇ ಆಗಿದೆ, ನಾನು ಈ ರಥದ ಮೂಲಕ ನಿಮಗೆ ಜ್ಞಾನವನ್ನು ಕೊಡುತ್ತೇನೆ. ಇವರನ್ನು ದತ್ತು ಮಾಡಿಕೊಂಡಿದ್ದೇನೆ. ಇವರಿಗೆ ಪ್ರಜಾಪಿತ ಬ್ರಹ್ಮನೆಂದು ಹೆಸರನ್ನಿಟ್ಟಿದ್ದೇನೆ. ಇವರಿಗೂ ಸಹ ನನ್ನಿಂದಲೇ ಆಸ್ತಿಯು ಸಿಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈಗ ಹಳೆಯ ಪ್ರಪಂಚದಿಂದ ಹೊಸಪ್ರಪಂಚಕ್ಕೆ ಜಂಪ್ ಮಾಡುವ ಸಮಯವಾಗಿದೆ ಆದ್ದರಿಂದ ಈ ಹಳೆಯ ಪ್ರಪಂಚದಿಂದ ಬೇಹದ್ದಿನ ಸನ್ಯಾಸವನ್ನು ಮಾಡಬೇಕಾಗಿದೆ. ಇದನ್ನು ಬುದ್ಧಿಯಿಂದ ಮರೆಯಬೇಕಾಗಿದೆ.

2. ವಿದ್ಯೆಯ ಮೇಲೆ ಪೂರ್ಣಗಮನವನ್ನು ಕೊಡಬೇಕಾಗಿದೆ. ಶಾಲೆಯಲ್ಲಿ ಕಣ್ಣುಮುಚ್ಚಿ ಕುಳಿತುಕೊಳ್ಳುವ ನಿಯಮವಿಲ್ಲ. ಗಮನವಿರಲಿ- ವಿದ್ಯಾಭ್ಯಾಸದ ಸಮಯದಲ್ಲಿ ಬುದ್ಧಿಯು ಆಕಡೆ-ಈಕಡೆ ಅಲೆಯಬಾರದು. ಆಕಳಿಕೆ ಬರಬಾರದು. ಏನನ್ನು ಕೇಳುತ್ತೀರಿ ಅದು ಧಾರಣೆಯಾಗುತ್ತಾ ಇರಬೇಕು.

ವರದಾನ:
ಆತ್ಮೀಯ ನಶೆಯ ಮೂಲಕ ಹಳೆಯ ಪ್ರಪಂಚವನ್ನು ಮರೆಯುವಂತಹ ಸ್ವರಾಜ್ಯ ಅಧಿಕಾರಿ ಭವ.

ಸಂಗಮಯುಗದಲ್ಲಿ ಯಾರು ತಂದೆಯ ಆಸ್ತಿಗೆ ಅಧಿಕಾರಿಯಾಗುತ್ತಾರೆ, ಅವರೇ ಸ್ವರಾಜ್ಯ ಮತ್ತು ವಿಶ್ವ ರಾಜ್ಯ ಅಧಿಕಾರಿಯಾಗುತ್ತಾರೆ. ಇಂದು ಸ್ವರಾಜ್ಯವಿದೆ ನಾಳೆ ವಿಶ್ವದ ರಾಜ್ಯವಿರುವುದು. ಇಂದು ನಾಳೆಯ ಮಾತಾಗಿದೆ, ಇಂತಹ ಅಧಿಕಾರಿ ಆತ್ಮ ಆತ್ಮೀಯ ನಶೆಯಲ್ಲಿರುವುದು ಮತ್ತು ಈ ನಶೆ ಹಳೆಯ ಪ್ರಪಂಚವನ್ನು ಸಹಜವಾಗಿ ಮರೆಸಿ ಬಿಡುವುದು. ಅಧಿಕಾರಿ ಎಂದೂ ಯಾವುದೇ ವಸ್ತುವಿನ, ವ್ಯಕ್ತಿಯ, ಸಂಸ್ಕಾರದ ಅಧೀನ ಆಗಲು ಸಾಧ್ಯವಿಲ್ಲ. ಹದ್ದಿನ ಮಾತುಗಳನ್ನು ಅವರು ಬಿಡುವ ಅಗತ್ಯವಿರಲ್ಲ ಸ್ವತಃವಾಗಿ ಬಿಟ್ಟು ಹೋಗಿ ಬಿಡುತ್ತವೆ.

ಸ್ಲೋಗನ್:
ಪ್ರತಿ ಸೆಕೆಂಡ್, ಪ್ರತಿ ಶ್ವಾಸ, ಪ್ರತಿ ಖಜಾನೆಯನ್ನು ಸಫಲ ಮಾಡಿಕೊಳ್ಳುವಂತಹವರೇ ಸಫಲತಾ ಮೂರ್ತಿಗಳಾಗುತ್ತಾರೆ.