05.09.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ –
ಎಲ್ಲಿಯ ತನಕ ಪಾವನರಾಗುವುದಿಲ್ಲವೋ ಅಲ್ಲಿಯ ತನಕ ನೆನಪು ಮಾಡುತ್ತಿರುತ್ತೇನೆ, ಒಬ್ಬ ತಂದೆಯನ್ನೇ
ಪ್ರೀತಿ ಮಾಡುತ್ತೇನೆಂದು ನಿಮ್ಮ ಪ್ರತಿಜ್ಞೆಯಾಗಿದೆ".
ಪ್ರಶ್ನೆ:
ಬುದ್ಧಿವಂತ
ಮಕ್ಕಳು ಸಮಯವನ್ನು ನೋಡುತ್ತಾ ಯಾವ ಪುರುಷಾರ್ಥವನ್ನು ಮಾಡುತ್ತಾರೆ?
ಉತ್ತರ:
ಅಂತ್ಯದಲ್ಲಿ
ಶರೀರ ಬಿಡುವಾಗ ಒಬ್ಬ ತಂದೆಯ ನೆನಪೇ ಇರಲಿ ಮತ್ತು ಬೇರೆ ಯಾರದೇ ನೆನಪು ಬರಬಾರದು. ಇಂತಹ
ಪುರುಷಾರ್ಥವನ್ನು ಬುದ್ಧಿವಂತ ಮಕ್ಕಳೇ ಈಗಿನಿಂದಲೂ ಮಾಡುತ್ತಿರುತ್ತಾರೆ, ಏಕೆಂದರೆ ಕರ್ಮಾತೀತರಾಗಿ
ಹೋಗಬೇಕಾಗಿದೆ ನಾವು ತಂದೆಯ ಬಳಿ ಹೋಗುತ್ತಾ ಇದ್ದೇವೆ ಆದ್ದರಿಂದ ಈ ಹಳೆಯ ಶರೀರದಿಂದ ಮಮತ್ವವನ್ನು
ತೆಗೆದು ಹಾಕಿ.
ಗೀತೆ:
ನಾವು ಅವರನ್ನು
ಬಿಟ್ಟು ಅಗಲಿರಲಾರೆವು ...........
ಓಂ ಶಾಂತಿ.
ತಂದೆಯು ಸನ್ಮುಖದಲ್ಲಿ ಮಕ್ಕಳಿಗೆ ತಿಳಿಸಿ ಕೊಡುತ್ತಿರುತ್ತಾರೆ. ಮಕ್ಕಳು ಬೇಹದ್ದಿನ ತಂದೆಯೊಂದಿಗೆ
ಪ್ರತಿಜ್ಞೆ ಮಾಡುತ್ತಾರೆ - ಬಾಬಾ, ನಾವು ನಿಮ್ಮವರಾಗಿದ್ದೇವೆ, ಅಂತಿಮ ಸಮಯಕ್ಕೆ ಮುಂಚೆ ಅಂದರೆ
ಶಾಂತಿಧಾಮಕ್ಕೆ ತಲುಪುವುದಕ್ಕೆ ಮೊದಲೇ ತಮ್ಮನ್ನು ನೆನಪು ಮಾಡಿದರೆ ನಮ್ಮ ಜನ್ಮ-ಜನ್ಮಾಂತರದ ತಲೆಯ
ಮೇಲಿರುವ ಪಾಪಗಳು ಭಸ್ಮವಾಗುತ್ತದೆ. ಇದಕ್ಕೇ ಯೋಗಾಗ್ನಿಯೆಂದು ಹೇಳಲಾಗುತ್ತದೆ. ಮತ್ತ್ಯಾವುದೇ
ಉಪಾಯವಿಲ್ಲ. ಪತಿತ-ಪಾವನ ಅಥವಾ ಶ್ರೀ ಶ್ರೀ 108 ಜಗದ್ಗುರು ಎಂದು ಒಬ್ಬ ತಂದೆಗೇ ಹೇಳಲಾಗುತ್ತದೆ.
ಅವರೇ ಜಗತ್ತಿಗೆ ತಂದೆ, ಜಗತ್ ಶಿಕ್ಷಕ, ಜಗತ್ತಿನ ಗುರುವಾಗಿದ್ದಾರೆ. ರಚನೆಯ ಆದಿ-ಮಧ್ಯ-ಅಂತ್ಯದ
ಜ್ಞಾನವನ್ನೆ ಕೊಡುತ್ತಾರೆ. ಇದು ಪತಿತ ಪ್ರಪಂಚವಾಗಿದೆ, ಇದರಲ್ಲಿ ಯಾರೊಬ್ಬರೂ ಪಾವನರಾಗುವುದು
ಅಸಂಭವವಿದೆ. ಪತಿತ-ಪಾವನ ತಂದೆಯೇ ಜಗತ್ತಿಗೆ ಸದ್ಗತಿಯನ್ನು ಮಾಡುತ್ತಿದ್ದಾರೆ. ನೀವೇ ಅವರ
ಮಕ್ಕಳಾಗಿದ್ದೀರಿ ಮತ್ತು ಜಗತ್ತನ್ನು ಪಾವನ ಮಾಡುವುದು ಹೇಗೆಂದು ಕಲಿಯುತ್ತಿದ್ದೀರಿ. ಶಿವನ ಎದುರು
ತ್ರಿಮೂರ್ತಿಯ ಚಿತ್ರವು ಅವಶ್ಯವಾಗಿ ಇರಬೇಕು. ಇದನ್ನೂ ಸಹ ಬರೆಯಬೇಕು – ದೈವೀ ಸಾಮ್ರಾಜ್ಯ ನಿಮ್ಮ
ಜನ್ಮಸಿದ್ಧ ಅಧಿಕಾರವಾಗಿದೆ, ಅದೂ ಸಹ ಕಲ್ಪದ ಸಂಗಮಯುಗದಲ್ಲಿ ಆಗುವುದು ಎಂದು ಬರೆಯಬೇಕು.
ಸ್ಪಷ್ಟವಾಗಿ ಬರೆಯದಿದ್ದರೆ ಮನುಷ್ಯರು ಏನೂ ಸಹ ತಿಳಿದುಕೊಳ್ಳಲು ಸಾಧ್ಯವಿಲ್ಲ ಮತ್ತೊಂದು ಮಾತು
ಕೇವಲ ಬಿ.ಕೆ. ಹೆಸರಿನ ಮುಂದೆ ಪ್ರಜಾಪಿತ ಅಕ್ಷರವನ್ನು ಅವಶ್ಯವಾಗಿ ಸೇರಿಸಬೇಕು ಏಕೆಂದರೆ ಬ್ರಹ್ಮಾ
ಎಂಬ ಹೆಸರು ಅನೇಕರದಿರುತ್ತದೆ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವೆಂದು
ಬರೆಯಬೇಕು. ಕಲ್ಲಿನಂತಹ ಜಗತ್ತನ್ನೂ ಪಾವನ ಮಾಡಿ ಪಾರಸವನ್ನಾಗಿ ಒಬ್ಬ ತಂದೆಯೇ ಮಾಡುತ್ತಾರೆ ಎಂಬುದು
ನಿಮಗೆ ತಿಳಿದಿದೆ. ಈ ಸಮಯದಲ್ಲಿ ಒಬ್ಬರೂ ಸಹ ಪಾವನರಿಲ್ಲ, ಎಲ್ಲರೂ ಒಬ್ಬರಿಗೊಬ್ಬರು ಯುದ್ಧ
ಮಾಡುತ್ತಾರೆ, ಜಗಳವಾಡುತ್ತಾರೆ, ನಿಂದನೆ ಹಾಕುತ್ತಿರುತ್ತಾರೆ. ತಂದೆಗೂ ಸಹ ಮೀನು-ಮೊಸಳೆಯ
ಅವತಾರವನ್ನು ತೆಗೆದುಕೊಳ್ಳುತ್ತಾರೆಂದು ಹೇಳುತ್ತಾರೆ. ಅವತಾರ ಎಂದು ಯಾರಿಗೆ ಕರೆಯಲಾಗುತ್ತದೆ
ಎಂಬುದೂ ಸಹ ತಿಳಿದಿಲ್ಲ. ಒಬ್ಬರದೇ ಅವತಾರ ಆಗುತ್ತದೆ. ಅದೂ ಸಹ ಅಲೌಕಿಕ ರೀತಿಯಲ್ಲಿ ಪ್ರವೇಶ ಮಾಡಿ
ವಿಶ್ವವನ್ನು ಪಾವನವನ್ನಾಗಿ ಮಾಡುತ್ತಾರೆ. ಅನ್ಯ ಆತ್ಮರಂತೂ ತಮ್ಮ-ತಮ್ಮ ಶರೀರವನ್ನು
ತೆಗೆದುಕೊಳ್ಳುತ್ತಾರೆ, ಅವರಿಗೆ (ತಂದೆಗೆ) ತನ್ನದೇ ಆದ ಶರೀರವಿಲ್ಲ. ಜ್ಞಾನ ಸಾಗರನಾಗಿದ್ದರೂ
ಜ್ಞಾನವನ್ನು ಹೇಗೆ ಕೊಡುತ್ತಾರೆ? ಶರೀರವಂತೂ ಬೇಕಲ್ಲವೆ. ಇವೆಲ್ಲಾ ಮಾತುಗಳನ್ನು ನಿಮ್ಮ ವಿನಃ ಬೇರೆ
ಯಾರೂ ತಿಳಿದುಕೊಳ್ಳುವುದಿಲ್ಲ. ಗೃಹಸ್ಥ ವ್ಯವಹಾರದಲ್ಲಿದ್ದು ಪವಿತ್ರರಾಗುವುದು ಸಾಹಸದ ಕೆಲಸವಾಗಿದೆ.
ಮಹಾವೀರ ಅರ್ಥಾತ್ ವೀರತೆಯನ್ನು ತೋರಿಸುವುದು. ಇದೂ ಸಹ ವೀರತೆಯಾಗಿದೆ ಯಾವ ಕೆಲಸವನ್ನು ಸನ್ಯಾಸಿಗಳು
ಮಾಡಲು ಸಾಧ್ಯವಿಲ್ಲ ಅದನ್ನು ನೀವು ಮಾಡಬಹುದಾಗಿದೆ. ತಂದೆ ಶ್ರೀಮತವನ್ನು ಕೊಡುತ್ತಾರೆ – ಗೃಹಸ್ಥ
ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನ ಪವಿತ್ರರಾಗಿ ಆಗ ಶ್ರೇಷ್ಠ ಪದವಿಯನ್ನು ಪಡೆಯಲು
ಸಾಧ್ಯವಿದೆ ಇಲ್ಲದಿದ್ದರೆ ವಿಶ್ವದ ರಾಜ್ಯಭಾಗ್ಯ ಹೇಗೆ ಸಿಗುತ್ತದೆ? ಇದು ನರನಿಂದ ನಾರಾಯಣನಾಗುವ
ವಿದ್ಯೆಯಾಗಿದೆ. ಇದು ಪಾಠಶಾಲೆಯಾಗಿದೆ, ಅನೇಕರು ಓದುತ್ತಾರೆ ಆದ್ದರಿಂದ "ಈಶ್ವರೀಯ
ವಿಶ್ವವಿದ್ಯಾಲಯ" ಎಂದು ಬರೆಯಿರಿ. ಇದಂತೂ ಪೂರ್ಣ ಸರಿಯಾದ ಅಕ್ಷರವಾಗಿದೆ. ಭಾರತವಾಸಿಗಳಿಗೆ
ತಿಳಿದಿದೆ - ನಾವೇ ವಿಶ್ವದ ಮಾಲೀಕರಾಗಿದ್ದೆವು, ಇದು ನೆನ್ನೆಯ ಮಾತಾಗಿದೆ. ಇದುವರೆವಿಗೂ
ರಾಧಾ-ಕೃಷ್ಣ, ಲಕ್ಷ್ಮೀ-ನಾರಾಯಣರ ಮಂದಿರಗಳು ಆಗುತ್ತಾ ಇರುತ್ತವೆ. ಕೆಲವರಂತೂ ಪತಿತ ಮನುಷ್ಯರದನ್ನೂ
ಸಹ ಮಂದಿರವನ್ನು ಕಟ್ಟಿಸುತ್ತಾರೆ. ದ್ವಾಪರದಿಂದ ಹಿಡಿದು ಮನುಷ್ಯರು ಪತಿತರಾಗಿಯೇ ಇದ್ದಾರೆ. ಶಿವ
ಎಲ್ಲಿ! ದೇವತೆಗಳ ಮಂದಿರ ಮಾಡುವುದೆಲ್ಲಿ! ಪತಿತ ಮನುಷ್ಯರೆಲ್ಲಿ! ಇವರು ದೇವತೆಗಳಾಗಿದ್ದಾರೆಯೇ. ಈ
ಮಾತಿನ ಬಗ್ಗೆ ಸರಿಯಾಗಿ ವಿಚಾರ ಸಾಗರ ಮಂಥನವನ್ನು ಮಾಡಬೇಕೆಂದು ತಂದೆಯು ತಿಳಿಸುತ್ತಾರೆ. ತಂದೆಯು
ತಿಳಿಸುತ್ತಲೇ ಇರುತ್ತಾರೆ. ದಿನ-ಪ್ರತಿದಿನ ಬರಹವೂ ಬದಲಾವಣೆಯಾಗುತ್ತಾ ಇರುತ್ತದೆ. ಮೊದಲು ಈ ರೀತಿ
ಏಕೆ ಮಾಡಲಿಲ್ಲ, ಮೊದಲೇ ಮನ್ಮನಾಭವದ ಅರ್ಥವನ್ನು ಏಕೆ ತಿಳಿಸಲಿಲ್ಲ. ಅರೆ! ಮೊದಲೇ ಈ ರೀತಿ
ನೆನಪಿನಲ್ಲಿರಲು ಸಾಧ್ಯವಿತ್ತೇನು? ಬಹಳ ಕಡಿಮೆ ಮಕ್ಕಳು ಪ್ರತಿಯೊಂದು ಮಾತಿನ ಪ್ರತ್ಯುತ್ತರವನ್ನು
ಪೂರ್ಣ ಮಾಡಲು ಸಾಧ್ಯತೆಯಿದೆ. ಅದೃಷ್ಟದಲ್ಲಿ ಉತ್ತಮ ಪದವಿ ಇಲ್ಲದಿದ್ದರೆ ಶಿಕ್ಷಕರೂ ಸಹ ಏನು
ಮಾಡುತ್ತಾರೆ? ಆಶೀರ್ವಾದದಿಂದ ಶ್ರೇಷ್ಠರಾಗಿ ಬಿಡುತ್ತಾರೆಂದಲ್ಲ. ನಾನು ಹೇಗೆ ಸೇವೆಯನ್ನು
ಮಾಡುತ್ತಿದ್ದೇನೆಂದು ತಮ್ಮನ್ನು ನೋಡಿಕೊಳ್ಳಿ. ವಿಚಾರ ಸಾಗರ ಮಂಥನ ಮಾಡಬೇಕು. ಗೀತೆಯ ಭಗವಂತ ಯಾರು?
ಈ ಚಿತ್ರ ಬಹಳ ಮುಖ್ಯವಾದುದಾಗಿದೆ. ಭಗವಂತ ನಿರಾಕಾರ, ಅವರು ಬ್ರಹ್ಮಾರವರ ಶರೀರವಿಲ್ಲದೆ ಏನನ್ನೂ
ತಿಳಿಸಲು ಸಾಧ್ಯವಿಲ್ಲ. ಅವರು ಬ್ರಹ್ಮನ ತನುವಿನಲ್ಲಿ ಮತ್ತು ಸಂಗಮಯುಗದಲ್ಲಿಯೇ ಬರುತ್ತಾರೆ.
ಇಲ್ಲದಿದ್ದರೆ ಬ್ರಹ್ಮಾ-ವಿಷ್ಣು-ಶಂಕರರು ಏತಕ್ಕಾಗಿ? ಅವರ ಜೀವನ ಚರಿತ್ರೆ ಬೇಕಲ್ಲವೆ, ಇದನ್ನು
ಯಾರೂ ಸಹ ತಿಳಿದುಕೊಂಡಿಲ್ಲ. 100 ಭುಜವುಳ್ಳ ಬ್ರಹ್ಮಾರವರ ಬಳಿ ಹೋಗಿ ಎಂದು ಹೇಳುತ್ತಾರೆ, ಸಾವಿರ
ಭುಜವುಳ್ಳವರ ಬಳಿ ಹೋಗಿ ಎಂಬುದರ ಬಗ್ಗೆ ಒಂದು ಕಥೆಯನ್ನೂ ಸಹ ಮಾಡಿದ್ದಾರೆ. ಪ್ರಜಾಪಿತ
ಬ್ರಹ್ಮಾನಿಗೆ ಇಷ್ಟೊಂದು ಮಕ್ಕಳಿದ್ದಾರಲ್ಲವೆ! ಇಲ್ಲಿಗೆ ಬರುವುದೇ ಪವಿತ್ರರಾಗಲು.
ಜನ್ಮ-ಜನ್ಮಾಂತರ ಅಪವಿತ್ರರಾಗುತ್ತಾ ಬಂದಿದ್ದಾರೆ, ಈಗ ಪೂರ್ಣ ಪವಿತ್ರರಾಗಬೇಕು. ನನ್ನೊಬ್ಬನನ್ನೇ
ನೆನಪು ಮಾಡಿ ಎಂದು ಶ್ರೀಮತವಿದೆ. ಕೆಲವರಿಗೆ ಇದುವರೆಗೂ ಹೇಗೆ ನೆನಪು ಮಾಡುವುದೆಂದು
ತಿಳಿದುಕೊಂಡಿಲ್ಲ, ತಬ್ಬಿಬ್ಬಾಗುತ್ತಾರೆ. ತಂದೆಯ ಮಕ್ಕಳಾಗಿಯೂ ವಿಕರ್ಮಾಜೀತರಾಗಲಿಲ್ಲವೆಂದರೆ,
ಪಾಪ ತುಂಡಾಗಲಿಲ್ಲವೆಂದರೆ, ನೆನಪಿನ ಯಾತ್ರೆಯಲಿಲ್ಲವೆಂದರೆ ಹೇಗೆ ಪದವಿಯನ್ನು ಪಡೆಯುತ್ತಾರೆ? ಭಲೆ
ಸಮರ್ಪಿತರಾಗಿರುತ್ತಾರೆ ಆದರೆ ಏನು ಲಾಭ? ಎಲ್ಲಿಯ ತನಕ ಪುಣ್ಯಾತ್ಮರಾಗಿ ಅನ್ಯರನ್ನೂ
ಮಾಡುವುದಿಲ್ಲವೆಂದರೆ ಅವರು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಎಷ್ಟು ಕಡಿಮೆ ನನ್ನನ್ನು
ನೆನಪು ಮಾಡುತ್ತೀರೋ ಅಷ್ಟು ಕಡಿಮೆ ಪದವಿಯನ್ನು ಪಡೆಯುತ್ತೀರಿ. ನಂಬರ್ವಾರ್ ಪುರುಷಾರ್ಥದನುಸಾರ
ನಿಧಾನವಾಗಿ ಬರುತ್ತೀರಿ. ನಾವು ಎಲ್ಲವನ್ನೂ ಸಮರ್ಪಣೆ ಮಾಡಿ ಬಿಟ್ಟಿದ್ದೇವೆ ಆದ್ದರಿಂದ ನಮಗೆ ಡಬಲ್
ಕಿರೀಟಧಾರಿಗಳಾಗುತ್ತೇವೆ ಎಂದಲ್ಲ. ಮೊದಲು ದಾಸ-ದಾಸಿಯರಾಗುತ್ತಾ ಕೊನೆಯಲ್ಲಿ ಸ್ವಲ್ಪ ಸಿಗುತ್ತದೆ.
ಅನೇಕರಿಗೆ ನಾನು ಸಮರ್ಪಿತನಾಗಿದ್ದೇನೆಂದು ಅಹಂಕಾರವಿರುತ್ತದೆ. ಅರೆ! ನೆನಪಿನ ವಿನಃ ಏನಾಗಲು
ಸಾಧ್ಯವಿದೆ! ದಾಸ-ದಾಸಿಯಾಗುವುದಕ್ಕಿಂತಲೂ ಸಾಹುಕಾರ ಪ್ರಜೆಯಾಗುವುದು ಒಳ್ಳೆಯದು.
ದಾಸ-ದಾಸಿಯರಾಗುವುದೂ ಸಹ ಕೃಷ್ಣನ ಜೊತೆ ಉಯ್ಯಾಲೆಯಾಡಲು ಸಾಧ್ಯವಿದೆಯೇನು? ಇದು ಬಹಳ
ತಿಳಿದುಕೊಳ್ಳುವ ಮಾತಾಗಿದೆ. ಇದರಲ್ಲಿ ಬಹಳ ಪರಿಶ್ರಮ ಪಡಬೇಕು. ಸ್ವಲ್ಪದರಲ್ಲಿಯೇ ಖುಷಿಯಾಗಬಾರದು.
ನಾನೂ ರಾಜನಾಗುತ್ತೇನೆ ಎಂದು ತಿಳಿಯಬಾರದು. ಆ ರೀತಿಯಾಗುವುದಾದರೆ ಅನೇಕರು ರಾಜರಾಗಿ ಬಿಡುತ್ತಾರೆ.
ಮೊದಲನೇ ಮುಖ್ಯ ಮಾತು - ನೆನಪಿನ ಯಾತ್ರೆಯಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಯಾರು ಚೆನ್ನಾಗಿ
ನೆನಪಿನಲ್ಲಿರುತ್ತಾರೆ, ಅವರಿಗೆ ಖುಷಿಯಿರುತ್ತದೆ. ಆತ್ಮವು ಒಂದು ಶರೀರವನ್ನು ಬಿಟ್ಟು
ಮತ್ತೊಂದನ್ನು ತೆಗೆದುಕೊಳ್ಳುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಸತ್ಯಯುಗದಲ್ಲಿ ಖುಷಿಯಿಂದ
ಒಂದು ಶರೀರವನ್ನು ಬಿಟ್ಟು ಮತ್ತೊಂದನ್ನು ತೆಗೆದುಕೊಳ್ಳುತ್ತಾರೆ. ಇಲ್ಲಂತೂ ಅಳುತ್ತಿರುತ್ತಾರೆ,
ಸತ್ಯಯುಗದ ಮಾತನ್ನೇ ಮರೆತು ಬಿಟ್ಟಿದ್ದಾರೆ. ಸರ್ಪವು ತನ್ನ ಹಳೆಯ ಪೆÇರೆಯನ್ನು ಕಳಚಿ ಎಷ್ಟು
ಸಹಜವಾಗಿ ಹೊಸದನ್ನು ಧರಿಸುತ್ತದೆ ಹಾಗೆಯೇ ಸತ್ಯಯುಗದಲ್ಲಿಯೂ ಸಹ ಹಳೆಯ ಶರೀರವನ್ನು ಬಿಟ್ಟು ಹೊಸ
ಶರೀರವನ್ನು ತೆಗೆದುಕೊಳ್ಳುತ್ತದೆ. ಈ ಹಳೆಯ ಶರೀರವನ್ನು ಬಿಡಬೇಕಾಗಿದೆ. ನಾವು ಆತ್ಮರಾಗಿದ್ದೇವೆ,
ಈ ಹಳೆಯ ಶರೀರವನ್ನು ಬಿಡಬೇಕು ಎಂಬುದು ನಿಮಗೆ ತಿಳಿದಿದೆ. ಬುದ್ಧಿವಂತ ಮಕ್ಕಳು ಯಾರು ತಂದೆಯ
ನೆನಪಿನಲ್ಲಿರುತ್ತಾರೆಯೋ ಅವರು ಹೇಳುತ್ತಾರೆ - ನಾವು ತಂದೆಯ ನೆನಪಿನಲ್ಲಿ ಶರೀರವನ್ನು ಬಿಟ್ಟು
ಹೋಗಿ ತಂದೆಯ ಜೊತೆ ಮಿಲನ ಮಾಡುತ್ತೇವೆ. ತಂದೆಯನ್ನು ಹೇಗೆ ಮಿಲನ ಮಾಡಲು ಸಾಧ್ಯವಿದೆ ಎಂಬುದು
ಯಾವುದೇ ಮನುಷ್ಯ ಮಾತ್ರರಿಗೆ ತಿಳಿದಿಲ್ಲ. ನೀವು ಮಕ್ಕಳಿಗೆ ಮಾರ್ಗವು ಸಿಕ್ಕಿದೆ, ಈಗ
ಪುರುಷಾರ್ಥವನ್ನು ಮಾಡುತ್ತಿದ್ದೀರಿ. ಜೀವಿಸಿದ್ದಂತೆಯೇ ಸತ್ತಿದ್ದೀರಿ ಆದರೆ ಆತ್ಮವೂ ಸಹ
ಪವಿತ್ರವಾಗಬೇಕಲ್ಲವೆ. ಪವಿತ್ರವಾಗಿ ನಂತರ ಈ ಹಳೆಯ ಶರೀರವನ್ನು ಬಿಟ್ಟು ಹೋಗಬೇಕಾಗಿದೆ. ಕರ್ಮಾತೀತ
ಅವಸ್ಥೆಯಾದರೆ ಶರೀರವು ಬಿಟ್ಟು ಹೋಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಕರ್ಮಾತೀತ ಸ್ಥಿತಿಯಾದರೆ
ತಾನಾಗಿಯೇ ಶರೀರವನ್ನು ಬಿಟ್ಟು ಆತ್ಮವು ಹೊರಟು ಹೋಗುತ್ತದೆ. ಈ ಹಳೆಯ ಶರೀರದಿಂದ ತಿರಸ್ಕಾರ
ಬರುತ್ತದೆ, ಸರ್ಪಕ್ಕೆ ಹಳೆಯ ಪೊರೆಯೊಂದಿಗೆ ತಿರಸ್ಕಾರ ಬರುತ್ತದೆಯಲ್ಲವೆ! ನಿಮ್ಮದು ಹೊಸ ಶರೀರ
ತಯಾರಾಗುತ್ತಾ ಇದೆ ಆದರೆ ಯಾವಾಗ ಕರ್ಮಾತೀತ ಸ್ಥಿತಿಯಾಗುವುದು ಆಗ ಅಂತ್ಯದಲ್ಲಿ ಆ ರೀತಿಯಾಗುತ್ತದೆ.
ಈಗ ನಾವು ಹೋಗುತ್ತಿದ್ದೇವೆ ಎಂಬ ಅನುಭವವಾಗುತ್ತದೆ. ಯುದ್ಧದ ಸಿದ್ಧತೆಯೂ ಆಗುವುದು. ವಿನಾಶವು
ನಿಮ್ಮ ಕರ್ಮಾತೀತ ಸ್ಥಿತಿಯಾಗುವುದರ ಮೇಲೆ ಆಧಾರಿತವಾಗಿದೆ. ಅಂತಿಮದಲ್ಲಿ ಎಲ್ಲರೂ ನಂಬರ್ವಾರ್
ಕರ್ಮಾತೀತ ಸ್ಥಿತಿಯನ್ನು ಪಡೆಯುತ್ತಾರೆ, ಎಷ್ಟೊಂದು ಲಾಭವಿದೆ. ನೀವು ವಿಶ್ವದ ಮಾಲೀಕರಾಗುತ್ತೀರಿ
ಅಂದಮೇಲೆ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕು. ನೀವು ನೋಡುತ್ತೀರಿ - ಕೊನೆಗೆ ಇಂತಹವರೂ
ಬರುತ್ತಾರೆ - ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನೇ ನೆನಪು ಮಾಡುತ್ತಿರುತ್ತಾರೆ. ಮೃತ್ಯು
ಸನ್ಮುಖದಲ್ಲಿ ನಿಂತಿದೆ, ಹೇಗೆ ಈಗೀಗ ಯುದ್ಧವಾಗುವುದು ಎಂಬಂತೆ ಪತ್ರಿಕೆಗಳಲ್ಲಿಯೂ ತೋರಿಸುತ್ತಾರೆ.
ಮಹಾಯುದ್ಧವು ಆರಂಭವಾಯಿತೆಂದರೆ ಬಾಂಬುಗಳು ಬೀಳುತ್ತಾ ಹೋಗುತ್ತವೆ. ಇದರಲ್ಲಿ ತಡವಾಗುವುದಿಲ್ಲ.
ಬುದ್ಧಿವಂತ ಮಕ್ಕಳು ತಿಳಿದುಕೊಳ್ಳುತ್ತಾರೆ. ಬುದ್ಧಿಹೀನರು ಏನನ್ನೂ ತಿಳಿದುಕೊಳ್ಳುವುದಿಲ್ಲ,
ಅವರಲ್ಲಿ ಏನೂ ಧಾರಣೆಯಾಗುವುದಿಲ್ಲ. ಭಲೆ ಹೌದೌದು ಎನ್ನುತ್ತಾರೆ ಆದರೆ ಏನನ್ನೂ
ತಿಳಿದುಕೊಳ್ಳುವುದಿಲ್ಲ, ನೆನಪಿನಲ್ಲಿಯೂ ಇರುವುದಿಲ್ಲ. ಯಾರು ದೇಹಾಭಿಮಾನದಲ್ಲಿರುವುರೋ ಅವರಿಗೆ ಈ
ಪ್ರಪಂಚವೇ ನೆನಪಿರುತ್ತದೆ ಅಂದಮೇಲೆ ಅವರೇನು ತಿಳಿದುಕೊಳ್ಳುವರು! ತಂದೆಯು ತಿಳಿಸುತ್ತಾರೆ -
ಮಕ್ಕಳೇ, ದೇಹೀ-ಅಭಿಮಾನಿಗಳಾಗಿರಿ. ಈಗ ದೇಹವನ್ನು ಮರೆಯಬೇಕಾಗಿದೆ, ಅಂತಿಮದಲ್ಲಿ ನೀವು ಬಹಳ
ಪ್ರಯತ್ನ ಪಡುತ್ತೀರಿ. ಈಗ ನೀವು ತಿಳಿದುಕೊಳ್ಳುತ್ತಿಲ್ಲ, ಕೊನೆಯಲ್ಲಿ ಬಹಳ-ಬಹಳ ಪಶ್ಚಾತ್ತಾಪ
ಪಡುವಿರಿ. ತಂದೆಯು ಸಾಕ್ಷಾತ್ಕಾರವನ್ನೂ ಮಾಡಿಸುತ್ತಾರೆ - ಇಂತಿಂತಹ ಪಾಪಗಳನ್ನು ಮಾಡಿದಿರಿ
ಅದಕ್ಕಾಗಿ ಈಗ ಶಿಕ್ಷೆಯನ್ನನುಭವಿಸಿರಿ, ಪದವಿಯನ್ನೂ ನೋಡಿಕೊಳ್ಳಿ. ಆರಂಭದಲ್ಲಿಯೂ ಹೀಗೆ
ಸಾಕ್ಷಾತ್ಕಾರ ಮಾಡುತ್ತಿದ್ದರು ಮತ್ತೆ ಅಂತಿಮದಲ್ಲಿಯೂ ಸಾಕ್ಷಾತ್ಕಾರವಾಗುವುದು.
ತಂದೆಯು ತಿಳಿಸುತ್ತಾರೆ
- ತಮ್ಮ ಗೌರವವನ್ನು ಕಳೆದುಕೊಳ್ಳಬೇಡಿ, ವಿದ್ಯೆಯಲ್ಲಿ ತೊಡಗುವ ಪುರುಷಾರ್ಥ ಮಾಡಿ. ತನ್ನನ್ನು
ಆತ್ಮನೆಂದು ತಿಳಿದು ನನ್ನೊಬ್ಬನನ್ನೇ ನೆನಪು ಮಾಡಿ. ತಂದೆಯೇ ಪತಿತ-ಪಾವನನಾಗಿದ್ದಾರೆ.
ಪ್ರಪಂಚದಲ್ಲಿ ಮತ್ತ್ಯಾರೂ ಪತಿತ-ಪಾವನರಿಲ್ಲ. ಶಿವ ಭಗವಾನುವಾಚ - ಸರ್ವರ ಸದ್ಗತಿದಾತ,
ಪತಿತ-ಪಾವನನು ಒಬ್ಬನೇ ಎಂದು ಹೇಳುತ್ತಾರೆ, ಎಲ್ಲರೂ ಅವರನ್ನೇ ನೆನಪು ಮಾಡುತ್ತಾರೆ ಆದರೆ ತನ್ನನ್ನು
ಆತ್ಮ ಬಿಂದುವೆಂದು ತಿಳಿದಾಗಲೇ ತಂದೆಯ ನೆನಪು ಬರುವುದು. ಮಕ್ಕಳಿಗೆ ತಿಳಿದಿದೆ, ನಾವಾತ್ಮರಲ್ಲಿ
ಪೂರ್ಣ 84 ಜನ್ಮಗಳ ನಿಗಧಿಯಾಗಿದೆ, ಅದೆಂದೂ ವಿನಾಶವಾಗುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳುವುದು
ಚಿಕ್ಕಮ್ಮನ ಮನೆಯಂತಲ್ಲ, ಬಹು ಬೇಗನೆ ಮರೆತು ಹೋಗುತ್ತಾರೆ ಆದ್ದರಿಂದ ಯಾರಿಗೂ ತಿಳಿಸುವುದಕ್ಕೂ
ಆಗುವುದಿಲ್ಲ. ದೇಹಾಭಿಮಾನವು ಎಲ್ಲರನ್ನೂ ಸಾಯಿಸಿ ಬಿಟ್ಟಿದೆ. ಇದು ಮೃತ್ಯುಲೋಕವಾಗಿ ಬಿಟ್ಟಿದೆ.
ಎಲ್ಲರೂ ಅಕಾಲಮೃತ್ಯುವನ್ನು ಹೊಂದುತ್ತಿರುತ್ತಾರೆ. ಹೇಗೆ ಪ್ರಾಣಿ-ಪಕ್ಷಿಗಳು ಸಾಯುತ್ತವೆಯೋ ಹಾಗೆಯೇ
ಮನುಷ್ಯರೂ ಸಾಯುತ್ತಾರೆ, ಏನೂ ವ್ಯತ್ಯಾಸವೇ ಇಲ್ಲ. ಲಕ್ಷ್ಮೀ-ನಾರಾಯಣರಂತೂ ಅಮರಲೋಕದ ಮಾಲೀಕರಲ್ಲವೆ.
ಅಲ್ಲಿ ಅಕಾಲಮೃತ್ಯುವಿರುವುದಿಲ್ಲ, ದುಃಖವೇ ಇಲ್ಲ. ಇಲ್ಲಂತೂ ದುಃಖವಾದರೆ ಹೋಗಿ ಜೀವಘಾತ
ಮಾಡಿಕೊಳ್ಳುತ್ತಾರೆ. ತಮಗೆ ತಾವೇ ಅಕಾಲಮೃತ್ಯುವನ್ನು ತಂದುಕೊಳ್ಳುತ್ತಾರೆ. ಇದು ಬಹಳ ದೊಡ್ಡ
ಗುರಿಯಾಗಿದೆ. ಎಂದೂ ಸಹ ಕುದೃಷ್ಟಿಯಾಗದಿರಲಿ, ಇದರಲ್ಲಿಯೇ ಪರಿಶ್ರಮವಿದೆ. ಇಷ್ಟು
ಶ್ರೇಷ್ಠಪದವಿಯನ್ನು ಪಡೆಯುವುದು ಚಿಕ್ಕಮ್ಮನ ಮನೆಯಂತಲ್ಲ, ಸಾಹಸವು ಬೇಕು ಇಲ್ಲದಿದ್ದರೆ ಅತಿ
ಚಿಕ್ಕ ಮಾತಿನಲ್ಲಿಯೇ ಹೆದರಿಕೊಂಡು ಬಿಡುತ್ತಾರೆ. ಯಾರಾದರೂ ದುಷ್ಟರು ಒಳಗೆ ಪ್ರವೇಶಿಸಿದರೆ
ಅವರನ್ನು ಹೊಡೆದು ಓಡಿಸಬೇಕು, ಇದರಲ್ಲಿ ಅಂಜುಬುರಕರಾಗಬಾರದು. ಶಿವಶಕ್ತಿ ಪಾಂಡವಸೇನೆಯೆಂದು
ಗಾಯನವಿದೆಯಲ್ಲವೆ. ನೀವೇ ಸ್ವರ್ಗದ ಬಾಗಿಲನ್ನು ತೆರೆಯುತ್ತೀರಿ, ಹೆಸರು ಪ್ರಸಿದ್ಧವಾಗಿದೆ ಅಂದಮೇಲೆ
ಇಂತಹ ಸಾಹಸವು ಬೇಕಲ್ಲವೆ. ಯಾವಾಗ ಸರ್ವಶಕ್ತಿವಂತ ತಂದೆಯ ನೆನಪಿನಲ್ಲಿರುತ್ತೀರೋ ಆಗ ಆ ಶಕ್ತಿಯು
ಪ್ರವೇಶ ಮಾಡುವುದು. ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಈ
ಯೋಗಾಗ್ನಿಯಿಂದ ವಿಕರ್ಮಗಳು ವಿನಾಶವಾಗುತ್ತದೆ ಮತ್ತು ವಿಕರ್ಮಾಜೀತ ರಾಜರಾಗಿ ಬಿಡುತ್ತೀರಿ.
ನೆನಪಿನದೇ ಪರಿಶ್ರಮವಿದೆ. ಯಾರು ಮಾಡುತ್ತಾರೆಯೋ ಅವರು ಪಡೆಯುವರು. ಅನ್ಯರಿಗೂ ಸಾವಧಾನ
ನೀಡಬೇಕಾಗಿದೆ. ನೆನಪಿನ ಯಾತ್ರೆಯಿಂದಲೇ ದೋಣಿಯು ಪಾರಾಗುವುದು. ವಿದ್ಯೆಗೆ ಯಾತ್ರೆಯೆಂದು
ಹೇಳುವುದಿಲ್ಲ. ಅದು ಸ್ಥೂಲ ಯಾತ್ರೆಯಾಗಿದೆ, ಇದು ಆತ್ಮಿಕ ಯಾತ್ರೆಯಾಗಿದೆ. ನೇರವಾಗಿ ತಮ್ಮ
ಮನೆಯಾದ ಶಾಂತಿಧಾಮಕ್ಕೆ ಹೊರಟು ಹೋಗುತ್ತೀರಿ. ತಂದೆಯೂ ಸಹ ಆ ಮನೆಯಲ್ಲಿರುತ್ತಾರೆ. ನನ್ನನ್ನು
ನೆನಪು ಮಾಡುತ್ತಾ-ಮಾಡುತ್ತಾ ನೀವು ಮನೆಗೆ ತಲುಪುತ್ತೀರಿ. ಎಲ್ಲರೂ ಇಲ್ಲಿ
ಪಾತ್ರವನ್ನಭಿನಯಿಸಲೇಬೇಕಾಗಿದೆ, ನಾಟಕವು ಅವಿನಾಶಿಯಾಗಿ ನಡೆಯುತ್ತಲೇ ಇರುತ್ತದೆ. ಮಕ್ಕಳೇ,
ಮೊದಲನೆಯದಾಗಿ ತಂದೆಯ ನೆನಪಿನಲ್ಲಿರಿ ಹಾಗೂ ಪವಿತ್ರರಾಗಿ, ದೈವೀ ಗುಣಗಳನ್ನು ಧಾರಣೆ ಮಾಡಿ ಮತ್ತು
ಎಷ್ಟು ಸರ್ವೀಸ್ ಮಾಡುವಿರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುವಿರಿ ಅಂದಾಗ ಅವಶ್ಯವಾಗಿ
ಕಲ್ಯಾಣಕಾರಿಗಳಾಗಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸದಾ
ನೆನಪಿರಲಿ - ಸರ್ವಶಕ್ತಿವಂತ ತಂದೆಯೇ ನಮ್ಮ ಜೊತೆಯಿದ್ದಾರೆ, ಈ ಸ್ಮೃತಿಯಿಂದ ಶಕ್ತಿಯು ಪ್ರವೇಶ
ಮಾಡುವುದು, ವಿಕರ್ಮಗಳು ಭಸ್ಮವಾಗುತ್ತವೆ. ಶಿವಶಕ್ತಿ ಪಾಂಡವ ಸೇನೆಯೆಂದು ಹೆಸರಿದೆ ಅಂದಮೇಲೆ
ಶೌರ್ಯವನ್ನು ತೋರಿಸಬೇಕಾಗಿದೆ, ಅಂಜುಬುರುಕರಾಗಬಾರದು.
2. ಮರುಜೀವಿಗಳಾದಮೇಲೆ
ನಾನಂತೂ ಸಮರ್ಪಿತನಾಗಿದ್ದೇನೆ ಎಂಬ ಅಹಂಕಾರ ಬರಬಾರದು. ಸಮರ್ಪಿತರಾಗಿ ಪುಣ್ಯಾತ್ಮರಾಗಿ, ಅನ್ಯರನ್ನೂ
ಮಾಡಬೇಕಾಗಿದೆ. ಇದರಲ್ಲಿಯೇ ಲಾಭವಿದೆ.
ವರದಾನ:
ನಿರ್ವಿಘ್ನ
ಸ್ಥಿತಿಯ ಮೂಲಕ ಸ್ವಯಂನ ಅಡಿಪಾಯವನ್ನು ಭಧ್ರ ಮಾಡಿಕೊಳ್ಳುವಂತಹವರು ಪಾಸ್ ವಿತ್ ಆನರ್ ಭವ.
ಯಾವ ಮಕ್ಕಳು ಬಹಳ
ಕಾಲದಿಂದ ನಿರ್ವಿಘ್ನ ಸ್ಥಿತಿಯ ಅನುಭವಿಯಾಗಿದ್ದಾರೆ ಅವರ ಅಡಿಪಾಯ ಪಕ್ಕಾ ಆಗಿರುವ ಕಾರಣ ಸ್ವಯಂ ಸಹಾ
ಶಕ್ತಿಶಾಲಿಯಾಗಿರುತ್ತಾರೆ ಮತ್ತು ಬೇರೆಯವರನ್ನೂ ಸಹಾ ಶಕ್ತಿಶಾಲಿಯನ್ನಾಗಿ ಮಾಡುತ್ತಾರೆ. ಬಹುಕಾಲದ
ಶಕ್ತಿಶಾಲಿ, ನಿರ್ವಿಘ್ನ ಆತ್ಮ ಅಂತಿಮದಲ್ಲಿಯೂ ಸಹಾ ನಿರ್ವಿಘ್ನರಾಗಿ ಪಾಸ್ ವಿತ್ ಆನರ್ ಆಗಿ
ಬಿಡುತ್ತಾರೆ ಇಲ್ಲಾ ಫಸ್ಟ್ ಡಿವಿಷನ್ ನಲ್ಲಿ ಬಂದು ಬಿಡುತ್ತಾರೆ. ಆದ್ದರಿಂದ ಸದಾಇದೇ ಲಕ್ಷ್ಯಇರಲಿ
ಬಹುಕಾಲದ ನಿರ್ವಿಘ್ನ ಸ್ಥಿತಿಯ ಅನುಭವ ಅವಶ್ಯವಾಗಿ ಮಾಡಬೇಕು.
ಸ್ಲೋಗನ್:
ಎಲ್ಲಾ ಆತ್ಮರ
ಪ್ರತಿ ಉಪಕಾರ ಅರ್ಥಾತ್ ಶುಭ ಕಾಮನೆಯಿಟ್ಟಾಗ ಸ್ವತಃ ಆಶೀರ್ವಾದಗಳು ಪ್ರಾಪ್ತಿಯಾಗುವುದು.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ಯೋಗ ಎಂದರೆ ಶಾಂತಿಯ
ಶಕ್ತಿಯಾಗಿದೆ. ಈ ಶಾಂತಿಯ ಶಕ್ತಿ ಬಹಳ ಸಹಜವಾಗಿ ಸ್ವಯಂನ್ನು ಮತ್ತು ಅನ್ಯರನ್ನು ಪರಿವರ್ತನೆ
ಮಾಡುತ್ತದೆ, ಇದರಿಂದ ವ್ಯಕ್ತಿಯು ಸಹ ಬದಲಾದರೆ ಪ್ರಕೃತಿಯು ಸಹ ಬದಲಾಗುತ್ತದೆ. ವ್ಯಕ್ತಿಯರಿಗೆ
ಮುಖದ ಕೋರ್ಸ್ನ್ನು ಮಾಡಿಸಿ ಬಿಡುತ್ತೀರಿ, ಆದರೆ ಪ್ರಕೃತಿಯನ್ನು ಬದಲಾಯಿಸುವುದಕ್ಕೆ ಶಾಂತಿಯ ಶಕ್ತಿ
ಅರ್ಥಾತ್ ಯೋಗಬಲವೇ ಬೇಕಾಗಿದೆ.