05.11.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಾಟಕದ
ಶ್ರೇಷ್ಠ ಜ್ಞಾನವು ನೀವು ಮಕ್ಕಳ ಬಳಿಯೇ ಇದೆ, ಅದೇ ರೀತಿ ಪುನರಾವರ್ತನೆಯಾಗುತ್ತದೆಯೆಂದು ನೀವು
ಮಾತ್ರ ತಿಳಿದುಕೊಂಡಿದ್ದೀರಿ”
ಪ್ರಶ್ನೆ:
ಪ್ರವೃತ್ತಿಯಲ್ಲಿರುವಂತಹವರಿಗೆ ತಂದೆಯು ಯಾವ ಸಲಹೆಯನ್ನು ಕೊಡುತ್ತಾರೆ?
ಉತ್ತರ:
ಕೆಲವು ಮಕ್ಕಳು
ಕೇಳುತ್ತಾರೆ - ಬಾಬಾ, ನಾವು ಈ ವ್ಯಾಪಾರವನ್ನು ಮಾಡೋಣವೇ? ತಂದೆಯು ತಿಳಿಸುತ್ತಾರೆ - ಮಕ್ಕಳೇ,
ವ್ಯಾಪಾರವನ್ನೇನೋ ಮಾಡಿ ಆದರೆ ರಾಯಲ್ ವ್ಯಾಪಾರ ಮಾಡಿ. ಬ್ರಾಹ್ಮಣ ಮಕ್ಕಳು ಅಪವಿತ್ರ ವ್ಯಾಪಾರದಂತಹ
ಮಧ್ಯಪಾನ, ಸಿಗರೇಟ್, ಬೀಡಿ ಮೊದಲಾದುವುಗಳ ವ್ಯಾಪಾರವನ್ನು ಮಾಡಬಾರದು ಏಕೆಂದರೆ ಇನ್ನೂ ವಿಕಾರಗಳ
ಆಕರ್ಷಣೆಯಾಗುತ್ತದೆ.
ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಿದ್ದಾರೆ. ಈಗ ಒಂದು ಆತ್ಮಿಕ ತಂದೆಯ ಶ್ರೀಮತವಾಗಿದೆ,
ಇನ್ನೊಂದು ರಾವಣನ ಅಸುರೀ ಮತವಾಗಿದೆ. ತಂದೆಯದು ಅಸುರೀ ಮತವೆಂದು ಹೇಳಲಾಗುವುದಿಲ್ಲ. ರಾವಣನಿಗಂತೂ
ತಂದೆಯೆಂದು ಹೇಳುವುದಿಲ್ಲ. ಅದು ರಾವಣನ ಅಸುರೀಮತವಾಗಿದೆ, ಈಗ ನೀವು ಮಕ್ಕಳಿಗೆ ಈಶ್ವರೀಯ ಮತವು
ಸಿಗುತ್ತಿದೆ. ಹಗಲು-ರಾತ್ರಿಯ ವ್ಯತ್ಯಾಸವು ಎಷ್ಟೊಂದಿದೆ. ಈಶ್ವರೀಯ ಮತದಂತೆ ದೈವೀಗುಣಗಳನ್ನು
ಧಾರಣೆ ಮಾಡುತ್ತೀದ್ದೇವೆಂದು ಬುದ್ಧಿಯಲ್ಲಿದೆ. ಈಗ ನೀವು ಮಕ್ಕಳು ಮಾತ್ರ ತಂದೆಯಿಂದ ಕೇಳುತ್ತೀರಿ,
ಬೇರೆ ಯಾರಿಗೂ ಸಹ ಗೊತ್ತಾಗುವುದಿಲ್ಲ. ತಂದೆಯು ಸಿಗುವುದೇ ಸಂಪತ್ತಿಗಾಗಿ ಆದರೆ ರಾವಣನಿಂದ ಇನ್ನೂ
ಸಂಪತ್ತು ಕಡಿಮೆಯಾಗುತ್ತದೆ. ಈಶ್ವರೀಯ ಮತವು ಎಲ್ಲಿಗೆ ಕರೆದೊಯ್ಯುತ್ತದೆ ಮತ್ತು ಅಸುರೀ ಮತವು
ಎಲ್ಲಿಗೆ ಕರೆದೊಯ್ಯುತ್ತದೆಯೆಂದು ನೀವೇ ತಿಳಿದಿದ್ದೀರಿ. ಎಂದಿನಿಂದ ಅಸುರೀ ಮತವು ಸಿಗುತ್ತದೆಯೋ
ಆಗಿನಿಂದಲೇ ನೀವು ಕೆಳಗೆ ಇಳಿಯುತ್ತಲೇ ಬರುತ್ತೀರಿ. ಹೊಸಪ್ರಪಂಚದಲ್ಲಿ ನೀವು ಸ್ವಲ್ಪವೇ
ಇಳಿಯುತ್ತೀರಿ, ಇಳಿಯುವುದು ಹೇಗೆ ಮತ್ತು ಹತ್ತುವುದು ಹೇಗೆಂದು ನೀವು ಮಕ್ಕಳುಮಾತ್ರವೇ
ತಿಳಿದುಕೊಂಡಿದ್ದೀರಿ. ಪುನಃ ಶ್ರೇಷ್ಠರಾಗಲು ನಿಮಗೆ ಶ್ರೀಮತವು ಸಿಗುತ್ತದೆ. ನಾವು
ಶ್ರೇಷ್ಠಮತವನ್ನು ಹೇಗೆ ಪಡೆಯುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಅನೇಕಬಾರಿ ನೀವು
ಶ್ರೇಷ್ಠಮತದಿಂದ ಶ್ರೇಷ್ಠಪದವಿಯನ್ನು ಪಡೆದಿದ್ದೀರಿ ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ
ಕೆಳಗಡೆ ಇಳಿದುಬಂದಿದ್ದೀರಿ ನಂತರ ಒಮ್ಮೆಯೇ ಹತ್ತುತ್ತೀರಿ. ನಂಬರ್ವಾರ್ ಪುರುಷಾರ್ಥದನುಸಾರ ಆಗಿಯೇ
ಆಗುತ್ತದೆ, ಸಮಯವು ಹಿಡಿಸುತ್ತದೆಯೆಂದು ತಂದೆಯು ತಿಳಿಸುತ್ತಾರೆ. ಪೂರ್ಣ ಯಥಾರ್ಥವಾಗಿ
ಪುರುಷೋತ್ತಮ ಸಂಗಮಯುಗದ ಸಮಯವಾಗಿದೆ. ಇದು ಬಹಳ ವಂಡರ್ಫುಲ್ ಆಗಿ ತುಂಬಾ ಯಥಾರ್ಥವಾದ ನಾಟಕವು
ನಡೆಯುತ್ತಿರುತ್ತದೆ. ಆಸ್ತಿಯನ್ನು ತೆಗೆದುಕೊಳ್ಳುವುದು, ತಂದೆಯನ್ನು ನೆನಪು ಮಾಡುವುದು ಮಕ್ಕಳಿಗೆ
ಸಹಜವಾಗುತ್ತಾ ಇರುತ್ತದೆ. ಅಷ್ಟೆ! ಆದರೆ ಪುರುಷಾರ್ಥ ಮಾಡುತ್ತಾ ಕೆಲವರಿಗೆ ಕಷ್ಟವೆನಿಸುತ್ತದೆ.
ಇಷ್ಟೊಂದು ಶ್ರೇಷ್ಠಾತಿಶ್ರೇಷ್ಠ ಪದವಿಯನ್ನು ಪಡೆಯುವುದು ಸುಲಭವೇನಲ್ಲ. ಬಹಳ ಸಹಜವಾದ ತಂದೆಯ ನೆನಪು,
ಸಹಜವಾದ ಆಸ್ತಿಯಾಗಿದೆ. ಒಂದು ಸೆಕೆಂಡಿನ ಮಾತಾಗಿದೆ! ನಂತರ ಪುರುಷಾರ್ಥ ಮಾಡಲು ತೊಡಗಿದಾಗ ಮಾಯೆಯ
ವಿಘ್ನಗಳು ಬೀಳುತ್ತವೆ. ರಾವಣನ ಮೇಲೆ ವಿಜಯಿಯಾಗಬೇಕಾಗುತ್ತದೆ. ಇಡೀ ಸೃಷ್ಟಿಯ ಮೇಲೆ ರಾವಣನ
ರಾಜ್ಯವಿದೆ. ನಿಮಗೆ ತಿಳಿದಿದೆ, ನಾವು ಯೋಗಬಲದಿಂದ ಪ್ರತಿ ಕಲ್ಪದಲ್ಲಿಯೂ ವಿಜಯವನ್ನು ಪಡೆಯುತ್ತಾ
ಬಂದಿದ್ದೇವೆ, ಈಗಲೂ ಪಡೆಯುತ್ತಿದ್ದೇವೆ. ಬೇಹದ್ದಿನ ತಂದೆಯು ಕಲಿಸುವವರಾಗಿದ್ದಾರೆ.
ಭಕ್ತಿಮಾರ್ಗದಲ್ಲಿಯೂ ನೀವು ತಂದೆ, ತಂದೆ ಎಂದು ಹೇಳುತ್ತಾ ಬಂದಿದ್ದೀರಿ ಆದರೆ ತಂದೆಯನ್ನು
ತಿಳಿದುಕೊಂಡಿರಲಿಲ್ಲ. ಆತ್ಮನನ್ನು ತಿಳಿದುಕೊಂಡಿದ್ದೀರಿ, ಭೃಕುಟಿಯ ಮಧ್ಯೆ ಪ್ರಕಾಶಿಸುತ್ತಿರುವ
ಅವಿನಾಶಿ ನಕ್ಷತ್ರವೆಂದು ಹೇಳುತ್ತಿದ್ದಿರಿ. ಆತ್ಮನನ್ನು ತಿಳಿದಿದ್ದರೂ ಸಹ ತಂದೆಯನ್ನು
ತಿಳಿದಿರಲಿಲ್ಲ. ಎಂತಹ ವಿಚಿತ್ರ ನಾಟಕವಾಗಿದೆ! ಹೇ ಪರಮಪಿತ ಪರಮಾತ್ಮ, ಎಂದು ನೆನಪು ಮಾಡುತ್ತಾ
ಹೇಳುತ್ತಿದ್ದಿರಿ ಆದರೂ ಸಹ ತಂದೆಯನ್ನು ತಿಳಿದುಕೊಂಡಿರಲಿಲ್ಲ. ಆತ್ಮನ ಹಾಗೂ ಪರಮಾತ್ಮನ
ಕರ್ತವ್ಯವನ್ನು ಸಂಪೂರ್ಣವಾಗಿ ತಿಳಿದುಕೊಂಡಿರಲಿಲ್ಲ, ಸ್ವಯಂ ತಂದೆಯೇ ಬಂದು ತಿಳಿಸುತ್ತಾರೆ.
ತಂದೆಯ ವಿನಃ ಮತ್ತ್ಯಾರೂ ಸಹ ಎಂದಿಗೂ ಅನುಭವ ಮಾಡಿಸಲು ಸಾಧ್ಯವಿಲ್ಲ. ಯಾರ ಪಾತ್ರವೂ ಸಹ
ಅಂತಹದ್ದಿಲ್ಲ. ಈಶ್ವರೀಯ ಸಂಪ್ರದಾಯ, ಅಸುರೀ ಸಂಪ್ರದಾಯ ಮತ್ತು ದೈವೀ ಸಂಪ್ರದಾಯವೆಂಬ ಗಾಯನವಿದೆ,
ಬಹಳ ಸಹಜವಾಗಿದೆ ಆದರೆ ಈ ಮಾತುಗಳೆಲ್ಲವನ್ನೂ ಹೇಳಲು ಮಾಯೆಯು ವಿಘ್ನವನ್ನು ಹಾಕುತ್ತದೆ, ಮರೆಯುವಂತೆ
ಮಾಡುತ್ತದೆ. ತಂದೆಯು ತಿಳಿಸುತ್ತಾರೆ - ನಂಬರ್ವಾರ್ ಪುರುಷಾರ್ಥದನುಸಾರ ನೆನಪು
ಮಾಡುತ್ತಾ-ಮಾಡುತ್ತಾ ಯಾವಾಗ ನಾಟಕದ ಅಂತ್ಯವಾಗುತ್ತದೆ ಅರ್ಥಾತ್ ಹಳೆಯ ಪ್ರಪಂಚದ ಅಂತ್ಯವಾಗುತ್ತದೆ
ಆಗ ನಂಬರ್ವಾರ್ ಪುರುಷಾರ್ಥದನುಸಾರ ರಾಜಧಾನಿಯು ಸ್ಥಾಪನೆಯಾಗುತ್ತದೆ. ಶಾಸ್ತ್ರಗಳಲ್ಲಿಯೂ ಸಹ ಈ
ಮಾತುಗಳನ್ನು ಯಾರೂ ಸಹ ತಿಳಿದುಕೊಳ್ಳಲು ಆಗುವುದಿಲ್ಲ. ಗೀತೆ ಮೊದಲಾದುವುಗಳನ್ನು ಇವರೂ
ಓದಿದ್ದಾರಲ್ಲವೆ. ಈಗ ತಂದೆಯು ತಿಳಿಸುತ್ತಾರೆ - ಇದಕ್ಕೇನೂ ಬೆಲೆಯಿಲ್ಲ. ಆದರೆ ಭಕ್ತಿಯಲ್ಲಿ
ಕನರಸವು ಹೆಚ್ಚಾಗಿರುವ ಕಾರಣ ಬಿಡುವುದಿಲ್ಲ.
ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆಯೆಂದು ನೀವು ತಿಳಿದುಕೊಂಡಿದ್ದೀರಿ. ವ್ಯಾಪಾರ
ಮೊದಲಾದುವುಗಳು ಕೆಲವರದು ರಾಯಲ್ ಆಗಿರುತ್ತದೆ, ಕೆಲವರದು ಪತಿತ ವ್ಯಾಪಾರವಾಗಿರುತ್ತದೆ. ಮಧ್ಯ,
ಬೀಡಿ, ಸಿಗರೇಟ್ ಮೊದಲಾದುವುಗಳನ್ನು ಮಾರಾಟ ಮಾಡುವುದು ಬಹಳ ಕೆಟ್ಟ ವ್ಯಾಪಾರವಾಗಿದೆ. ಈ ಮಧ್ಯಪಾನವು
ಎಲ್ಲಾ ವಿಕಾರಗಳನ್ನು ಸೆಳೆಯುತ್ತದೆ. ಯಾರನ್ನಾದರೂ ಮಧ್ಯಪಾನ ಸೇವನೆ ಮಾಡುವಂತೆ ಮಾಡುವುದು ಒಳ್ಳೆಯ
ವ್ಯಾಪಾರವಲ್ಲ. ತಂದೆಯು ಸಲಹೆ ಕೊಡುತ್ತಾರೆ - ಉಪಾಯದಿಂದ ಈ ವ್ಯಾಪಾರವನ್ನು ಪರಿವರ್ತನೆ
ಮಾಡಿಕೊಳ್ಳಿ. ಇಲ್ಲವೆಂದರೆ ಶ್ರೇಷ್ಠಪದವಿಯು ಸಿಗುವುದಿಲ್ಲ. ತಂದೆಯು ತಿಳಿಸುತ್ತಾರೆ - ಅವಿನಾಶಿ
ಜ್ಞಾನರತ್ನಗಳ ವ್ಯಾಪಾರವನ್ನು ಬಿಟ್ಟು ಇವೆಲ್ಲಾ ವ್ಯಾಪಾರಗಳಲ್ಲಿ ನಷ್ಟವಿದೆ. ಭಲೆ ಇವರೂ ಸಹ
ವಜ್ರದ ವ್ಯಾಪಾರವನ್ನು ಮಾಡುತ್ತಿದ್ದರು ಆದರೆ ಲಾಭವಂತೂ ಸಿಗಲಿಲ್ಲವೆ? ಪ್ರಯತ್ನಪಟ್ಟು
ಲಕ್ಷಾಧೀಪತಿಯಾಗಬಹುದು. ಈ ವ್ಯಾಪಾರದಿಂದ ಏನಾಗುತ್ತೀರಿ? ತಂದೆಯು ಸಾಮಾನ್ಯ ಪತ್ರಗಳಲ್ಲಿ ಪದಮಾಪದಮ
ಭಾಗ್ಯಶಾಲಿಯೆಂದು ಬರೆಯುತ್ತಾರೆ, ಅದೂ ಸಹ 21 ಜನ್ಮಗಳಿಗೆ ಆಗುತ್ತೀರಿ. ನೀವೂ ಸಹ
ತಿಳಿದುಕೊಂಡಿದ್ದೀರಿ - ತಂದೆಯು ಹೇಳುವಂತದ್ದು ಖಂಡಿತವಾಗಿ ಸರಿಯಾಗಿದೆ. ನಾವೇ
ದೇವಿ-ದೇವತೆಗಳಾಗಿದ್ದೆವು ನಂತರ ಚಕ್ರವನ್ನು ಸುತ್ತುತ್ತಾ-ಸುತ್ತುತ್ತಾ ಕೆಳಗಡೆ ಬಂದಿದ್ದೇವೆ.
ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನೂ ತಿಳಿದುಕೊಂಡಿದ್ದೇವೆ. ಜ್ಞಾನವಂತೂ ತಂದೆಯಿಂದ ಸಿಗುತ್ತದೆ ಆದರೆ
ದೈವೀಗುಣಗಳನ್ನು ಧಾರಣೆ ಮಾಡಬೇಕು. ನಮ್ಮನ್ನು ನಾವೇ ಪರಿಶೀಲನೆ ಮಾಡಬೇಕು. ನಮ್ಮಲ್ಲಿ ಯಾವುದೇ
ಅಸುರೀಗುಣವಿಲ್ಲವೆ? ಈ ತಂದೆಯು ತಿಳಿದುಕೊಂಡಿದ್ದಾರೆ - ನಾನು ನನ್ನ ಈ ಶರೀರವೆಂಬ ಮನೆಯನ್ನು
ಬಾಡಿಗೆಯಾಗಿ ಕೊಟ್ಟಿದ್ದೇನೆ, ಇದು ಮನೆಯಲ್ಲವೆ, ಇದರಲ್ಲಿ ಆತ್ಮವಿರುತ್ತದೆ. ಭಗವಂತನಿಗೆ ನಾನು
ಬಾಡಿಗೆಗೆ ಮನೆಯನ್ನು ಕೊಟ್ಟಿದ್ದೇನೆಂದು ನನಗೆ ಬಹಳ ಹೆಮ್ಮೆಯಾಗುತ್ತದೆ. ನಾಟಕದ ಯೋಜನೆಯನುಸಾರವಾಗಿ
ಬೇರೆ ಯಾವ ಮನೆಯನ್ನೂ ಸಹ ಅವರು ತೆಗೆದುಕೊಳ್ಳುವುದಿಲ್ಲ, ಕಲ್ಪ-ಕಲ್ಪವೂ ಈ ಮನೆಯನ್ನೇ
ತೆಗೆದುಕೊಳ್ಳಬೇಕಾಗುತ್ತದೆ. ಇವರಿಗಂತೂ (ಬ್ರಹ್ಮಾ) ಖುಷಿಯಾಗುತ್ತದೆಯಲ್ಲವೆ. ಆದರೆ ಎಷ್ಟೊಂದು
ಗಲಾಟೆಯಾಯಿತು! ಈ ತಂದೆಯು ನಗುತ್ತಾ ಒಮ್ಮೊಮ್ಮೆ ಹೇಳುತ್ತಾರೆ - ಬಾಬಾ, ನಿಮ್ಮ ರಥವಾದ ಕಾರಣವಾಗಿ
ನಾನು ಬಹಳ ಬೈಗುಳವನ್ನು ತಿನ್ನಬೇಕಾಯಿತು. ಅದಕ್ಕೆ ತಂದೆಯು ಎಲ್ಲದಕ್ಕಿಂತ ಹೆಚ್ಚಾಗಿ ಬೈಗುಳ ನನಗೆ
ಸಿಕ್ಕಿತೆಂದು ಹೇಳುತ್ತಾರೆ. ಈಗ ನಿಮ್ಮ ಸರದಿಯಾಗಿದೆ. ಬ್ರಹ್ಮನಿಗೆ ಎಂದೂ ಬೈಗುಳ ಸಿಕ್ಕಿದ್ದೇ
ಇಲ್ಲ, ಈಗ ಆ ಸರದಿ ಬಂದಿದೆ. ರಥವನ್ನು ಕೊಟ್ಟಕಾರಣ ತಂದೆಯಿಂದ ಸಹಯೋಗ ಸಿಗುತ್ತದೆಯೆಂದು
ತಿಳಿದುಕೊಳ್ಳುತ್ತಾರಲ್ಲವೆ. ಆದರೂ ಸಹ ತಂದೆಯು ತಿಳಿಸುತ್ತಾರೆ - ನಿರಂತರವಾಗಿ ತಂದೆಯನ್ನು ನೆನಪು
ಮಾಡಬೇಕು. ಇದರಿಂದ ನನಗಿಂತಲೂ ನೀವು ಬಹಳ ಮುಂದೆ ಹೋಗಬಹುದು ಏಕೆಂದರೆ ಇವರ ಮೇಲೆ ಬಹಳ
ಜವಾಬ್ದಾರಿಯಿದೆ! ಭಲೆ ನಾಟಕವೆಂದು ಬಿಟ್ಟುಬಿಡುತ್ತಾರೆ. ಆದರೂ ಸಹ ಸ್ವಲ್ಪ ಅಪವಾದವಂತೂ ಅಗತ್ಯವಾಗಿ
ಬರುತ್ತದೆ. ಇವರು ಬಹಳ ಒಳ್ಳೆಯ ಕರ್ತವ್ಯವನ್ನು ಮಾಡುತ್ತಿದ್ದರು, ಸಂಗದೋಷದಿಂದ ಕೆಟ್ಟುಹೋದರೆಂದು
ಜನ ಅಪವಾದ ಮಾಡಿದರು. ಎಷ್ಟೊಂದು ಡಿಸ್-ಸರ್ವೀಸ್ ಆಗುತ್ತದೆ! ಇಂತಹ ಕರ್ತವ್ಯವನ್ನು ಮಾಡುತ್ತಾರೆ
ಆದುದರಿಂದ ಅಪವಾದವಾಗುತ್ತದೆ. ಆ ಸಮಯದಲ್ಲಿ ಇವರಿಗೇನೂ ತಿಳಿಯಲಿಲ್ಲ. ಇದೂ ಸಹ ನಾಟಕವು
ಮಾಡಲ್ಪಟ್ಟಿತ್ತು. ನಂತರ ಇವರಿಗೆ ವಿಚಾರ ಬಂದಿತು - ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆಯಲ್ಲವೆ!
ಮಾಯೆಯು ಸ್ಥಿತಿಯನ್ನು ಹಾಳುಮಾಡುತ್ತಿರುತ್ತದೆ ಆದುದರಿಂದ ಬಹಳ ಡಿಸ್-ಸರ್ವೀಸ್ ಆಗುತ್ತದೆ.
ಅಬಲೆಯರ ಮೇಲೆ ಎಷ್ಟೊಂದು ಅತ್ಯಾಚಾರವಾಗುತ್ತದೆ, ಇಲ್ಲಿ ಮಕ್ಕಳೇ ಎಷ್ಟೊಂದು ಡಿಸ್-ಸರ್ವೀಸ್
ಮಾಡುತ್ತಾರೆ, ಉಲ್ಟಾ-ಸುಲ್ಟಾ ಮಾತುಗಳನ್ನಾಡಲು ತೊಡಗುತ್ತಾರೆ.
ತಂದೆಯು ಏನನ್ನು ತಿಳಿಸುತ್ತಾರೆ? ಎಂದು ನೀವು ಮಕ್ಕಳಿಗೆ ತಿಳಿದಿದೆ. ಇಲ್ಲಿ ಶಾಸ್ತ್ರ
ಮೊದಲಾದುವುಗಳನ್ನು ತಿಳಿಸುತ್ತಿಲ್ಲ. ಈಗ ನಾವು ಶ್ರೀಮತದಂತೆ ಎಷ್ಟೊಂದು ಶ್ರೇಷ್ಠರಾಗುತ್ತೇವೆ.
ಅಸುರೀಮತದಿಂದ ಎಷ್ಟೊಂದು ಭ್ರಷ್ಟರಾಗಿದ್ದೇವೆ. ಸಮಯವು ಬೇಕಾಗುತ್ತದೆ, ಮಾಯೆಯ ಯುದ್ಧವು
ನಡೆಯುತ್ತಿರುತ್ತದೆ. ಈಗ ನಿಮ್ಮ ವಿಜಯವಂತೂ ಅಗತ್ಯವಾಗಿ ಆಗುವುದಿದೆ, ಶಾಂತಿಧಾಮ-ಸುಖಧಾಮದಲ್ಲಿ
ನಮ್ಮ ವಿಜಯವು ಇದ್ದೇ ಇದೆ ಎಂದು ತಿಳಿದಿದ್ದೀರಿ. ಕಲ್ಪ-ಕಲ್ಪವೂ ವಿಜಯವನ್ನು ಪಡೆಯುತ್ತಾ
ಬಂದಿದ್ದೀರಿ. ಇದು ಪುರುಷೋತ್ತಮ ಸಂಗಮಯುಗದಲ್ಲಿ ಸ್ಥಾಪನೆ ಹಾಗೂ ವಿನಾಶವಾಗುತ್ತದೆ. ಈ ಎಲ್ಲಾ
ವಿಸ್ತಾರವು ನೀವು ಮಕ್ಕಳ ಬುದ್ಧಿಯಲ್ಲಿದೆ. ತಂದೆಯು ನಿಜವಾಗಿಯೂ ನಮ್ಮಿಂದ ಸ್ಥಾಪನೆ
ಮಾಡಿಸುತ್ತಿದ್ದಾರೆ ನಂತರ ನಾವೇ ರಾಜ್ಯ ಮಾಡುತ್ತೇವೆ, ತಂದೆಗೆ ಧನ್ಯವಾದಗಳನ್ನೂಸಹಹೇಳುವುದಿಲ್ಲ!
ತಂದೆಯು ತಿಳಿಸುತ್ತಾರೆ - ಇದೂಸಹನಾಟಕದಲ್ಲಿ ನೊಂದಾವಣೆಯಾಗಿದೆ. ನಾನೂ ಸಹ ನಾಟಕದಲ್ಲಿ
ಪಾತ್ರಧಾರಿಯಾಗಿದ್ದೇನೆ, ನಾಟಕದಲ್ಲಿ ಎಲ್ಲರ ಪಾತ್ರವು ನೊಂದಾವಣೆಯಾಗಿದೆ, ಶಿವತಂದೆಯ ಪಾತ್ರವೂ ಇದೆ,
ಇದರಲ್ಲಿ ಧನ್ಯವಾದಗಳನ್ನು ಹೇಳುವ ಮಾತೇ ಇಲ್ಲ. ಶಿವತಂದೆಯು ಹೇಳುತ್ತಾರೆ - ನಾನು ನಿಮಗೆ
ಶ್ರೀಮತವನ್ನು ಕೊಟ್ಟು ಮಾರ್ಗವನ್ನು ತೋರಿಸುತ್ತೇನೆ, ಮತ್ತೆ ಯಾರೂ ಸಹ ತೋರಿಸಲು ಸಾಧ್ಯವಿಲ್ಲ.
ಯಾರೇ ಬಂದರೂ ಹೇಳಿ, ಸತೋಪ್ರಧಾನ, ಹೊಸಪ್ರಪಂಚವು ಸ್ವರ್ಗವಾಗಿತ್ತಲ್ಲವೆ. ಈ ಹಳೆಯ ಪ್ರಪಂಚವನ್ನು
ತಮೋಪ್ರಧಾನವೆಂದು ಕರೆಯಲಾಗುವುದು. ನಂತರ ಸತೋಪ್ರಧಾನರಾಗಲು ದೈವೀಗುಣಗಳನ್ನು ಧಾರಣೆ ಮಾಡಬೇಕು
ಮತ್ತು ತಂದೆಯನ್ನು ನೆನಪು ಮಾಡಬೇಕು. ಮಂತ್ರವೇ ಮನ್ಮನಾಭವ ಮತ್ತು ಮಧ್ಯಾಜೀಭವ. ನಾನು
ಸದ್ಗುರುವಾಗಿದ್ದೇನೆಂದು ಹೇಳುತ್ತಾರೆ.
ನೀವು ಮಕ್ಕಳೀಗ ನೆನಪಿನ ಯಾತ್ರೆಯಿಂದ ಇಡೀ ಸೃಷ್ಟಿಯನ್ನು ಸದ್ಗತಿಯಲ್ಲಿ ತಲುಪಿಸುತ್ತೀರಿ.
ಜಗದ್ಗುರು ಒಬ್ಬ ಶಿವತಂದೆಯಾಗಿದ್ದಾರೆ, ಅವರೇ ಶ್ರೀಮತವನ್ನು ಕೊಡುತ್ತಾರೆ. ಪ್ರತೀ 5000 ವರ್ಷಗಳ
ನಂತರ ಈ ಶ್ರೀಮತವು ಸಿಕ್ಕಿದೆ. ಚಕ್ರವು ಸುತ್ತುತ್ತಿರುತ್ತದೆ, ಇಂದು ಹಳೆಯ ಪ್ರಪಂಚವಿದೆ, ನಾಳೆ
ಹೊಸಪ್ರಪಂಚವಾಗುತ್ತದೆ. ಈ ಚಕ್ರವನ್ನು ತಿಳಿದುಕೊಳ್ಳುವುದು ಬಹಳ ಸಹಜವಾಗಿದೆ. ಆದರೆ ಯಾರಿಗಾದರೂ
ತಿಳಿಸಲು ನೆನಪಿರಬೇಕು, ಅದನ್ನೂ ಮರೆತುಹೋಗುತ್ತಾರೆ. ಯಾರಾದರೂ ಜ್ಞಾನದಿಂದ ಬಿದ್ದರೆ ಅವರಲ್ಲಿ ಆ
ಜ್ಞಾನವು ಸಮಾಪ್ತಿಯಾಗಿಬಿಡುತ್ತದೆ, ಮಾಯೆಯು ಕಲಾರಹಿತರನ್ನಾಗಿ ಮಾಡಿಬಿಡುತ್ತದೆ. ವಿಕಾರದಲ್ಲಿ
ಹೇಗೆ ಸಿಕ್ಕಿಕೊಳ್ಳುತ್ತಾರೆಂದರೆ ಕೇಳಲೇಬೇಡಿ! ಈಗ ನಿಮಗೆ ಇಡೀ ಚಕ್ರದ ನೆನಪಿದೆ. ನೀವು
ಜನ್ಮ-ಜನ್ಮಾಂತರ ವೇಶ್ಯಾಲಯದಲ್ಲಿದ್ದು ಸಾವಿರಾರು ಪಾಪಗಳನ್ನು ಮಾಡುತ್ತಾ ಬಂದಿದ್ದೀರಿ, ಎಲ್ಲರ
ಮುಂದೆ ಹೇಳುತ್ತಿದ್ದಿರಿ, ನಾವು ಜನ್ಮ-ಜನ್ಮದ ಪಾಪಿಗಳಾಗಿದ್ದೇವೆ. ನಾವೇ ಮೊದಲು
ಪುಣ್ಯಾತ್ಮರಾಗಿದ್ದೆವು, ಈಗ ಪಾಪಾತ್ಮರಾಗಿದ್ದೇವೆ, ಈಗ ಮತ್ತೆ ಪುಣ್ಯಾತ್ಮರಾಗುತ್ತಿದ್ದೇವೆ. ಈ
ಜ್ಞಾನವು ನೀವು ಮಕ್ಕಳಿಗೆ ಈಗ ಸಿಗುತ್ತಿದೆ. ಮತ್ತೆ ನೀವು ಅನ್ಯರಿಗೂ ಕೊಟ್ಟು ತಮ್ಮ ಸಮಾನರನ್ನಾಗಿ
ಮಾಡಿಕೊಳ್ಳುತ್ತೀರಿ. ಗೃಹಸ್ಥ ವ್ಯವಹಾರದಲ್ಲಿರುವುದರಿಂದ ಸ್ವಲ್ಪ ವ್ಯತ್ಯಾಸವಿರುತ್ತದೆಯಲ್ಲವೆ!
ಅವರು ನೀವು ತಿಳಿಸಿಕೊಡುವಷ್ಟು ತಿಳಿಸಲು ಸಾಧ್ಯವಿಲ್ಲ ಆದರೆ ಎಲ್ಲರೂ ಬಿಡಲು ಆಗುವುದಿಲ್ಲ. ತಂದೆಯೇ
ಸ್ವಯಂ ಹೇಳುತ್ತಾರೆ – ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನರಾಗಬೇಕು. ಎಲ್ಲವನ್ನೂ
ಬಿಟ್ಟುಬಂದರೆ ಇಷ್ಟು ಮಂದಿ ಎಲ್ಲಿ ಕುಳಿತುಕೊಳ್ಳುತ್ತೀರಿ? ತಂದೆಯು ಜ್ಞಾನಪೂರ್ಣರಾಗಿದ್ದಾರೆ,
ಅವರು ಯಾವುದೇ ಶಾಸ್ತ್ರ ಮೊದಲಾದುವುಗಳನ್ನೇನೂ ಓದಿಲ್ಲ. ಇವರು ಶಾಸ್ತ್ರ ಮೊದಲಾದುವುಗಳನ್ನು
ಓದಿದ್ದರು. ನನಗೆ ಪರಮಪಿತ ಪರಮಾತ್ಮ ಜ್ಞಾನಪೂರ್ಣನಾಗಿದ್ದಾರೆ ಎಂದು ಹೇಳುತ್ತಾರೆ. ತಂದೆಯಲ್ಲಿ
ಯಾವ ಜ್ಞಾನವಿದೆಯೆಂದು ಮನುಷ್ಯರಿಗೆ ತಿಳಿಯದು. ಈಗ ನಿಮ್ಮಲ್ಲಿ ಸೃಷ್ಟಿಯ ಆದಿ-ಮಧ್ಯ-ಅಂತ್ಯದ
ಜ್ಞಾನವಿದೆ ಅಂದಾಗ ಈ ಭಕ್ತಿಮಾರ್ಗದ ಶಾಸ್ತ್ರಗಳೆಲ್ಲವೂ ಅನಾದಿಯಾಗಿದೆಯೆಂದು ನೀವು ತಿಳಿದಿದ್ದೀರಿ.
ಭಕ್ತಿಮಾರ್ಗದಲ್ಲಿ ಈ ಶಾಸ್ತ್ರಗಳೂ ಅಗತ್ಯವಾಗಿ ಬರುತ್ತವೆ. ಬೆಟ್ಟ ಉರುಳಿದ ನಂತರ ಹೇಗೆ
ತಯಾರಾಗುತ್ತದೆಯೆಂದು ಹೇಳುತ್ತಾರೆ ಆದರೆ ಇದೆಲ್ಲವೂ ನಾಟಕವಾಗಿದೆ. ಶಾಸ್ತ್ರ ಮೊದಲಾದುವುಗಳೆಲ್ಲವೂ
ತನ್ನ ಸಮಯದಲ್ಲಿಯೇ ತಯಾರಾಗುತ್ತವೆ. ನಾವು ಮೊದಲು ಶಿವನ ಪೂಜೆ ಮಾಡುತ್ತಿದ್ದೆವು, ಇವೂ ಸಹ
ಶಾಸ್ತ್ರಗಳಲ್ಲಿದೆಯಲ್ಲವೆ. ಶಿವನ ಪೂಜೆಯನ್ನು ಹೇಗೆ ಮಾಡಲಾಗುತ್ತದೆ, ಎಷ್ಟೊಂದು ಶ್ಲೋಕಗಳನ್ನು
ಹೇಳುತ್ತಾರೆ. ಆದರೆ ಇಲ್ಲಿ ಕೇವಲ ತಂದೆಯನ್ನು ನೆನಪು ಮಾಡಿ, ಶಿವತಂದೆಯು ಜ್ಞಾನಸಾಗರನಾಗಿದ್ದಾರೆ.
ಅವರು ಈಗ ನಮಗೆ ಜ್ಞಾನವನ್ನು ಕೊಡುತ್ತಿದ್ದಾರೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ? ಎಂದು
ತಂದೆಯು ನಿಮಗೆ ತಿಳಿಸಿದ್ದಾರೆ. ಶಾಸ್ತ್ರಗಳಲ್ಲಿ ಬಹಳ ದೀರ್ಘವಾದ ಸಮಯವನ್ನು ಹಾಕಿ ಸುಳ್ಳು
ಮಾಡಿಬಿಟ್ಟಿದ್ದಾರೆ. ಅಷ್ಟೊಂದು ಸಮಯದಲ್ಲಿ ನಡೆದಿರುವುದು ನೆನಪಿಗೆ ಬರಲು ಸಾಧ್ಯವಿಲ್ಲ ಮಕ್ಕಳ
ಆಂತರ್ಯದಲ್ಲಿ ಎಷ್ಟೊಂದು ಖುಷಿಯಾಗಬೇಕು, ನಮಗೆ ತಂದೆಯು ಓದಿಸುತ್ತಿದ್ದಾರೆ! ವಿದ್ಯಾರ್ಥಿ ಜೀವನವು
ಉತ್ತಮ ಜೀವನವೆಂದು ಗಾಯನವಿದೆ. ಭಗವಾನುವಾಚ - ನಾನು ನಿಮ್ಮನ್ನು ರಾಜರಿಗೂ ರಾಜರನ್ನಾಗಿ
ಮಾಡುತ್ತೇನೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಯೂ ಇಲ್ಲ. ಇದು ಶ್ರೇಷ್ಠಾತಿಶ್ರೇಷ್ಠ
ಪ್ರಾಪ್ತಿಯಾಗಿದೆ. ವಾಸ್ತವದಲ್ಲಿ ಸರ್ವರಿಗೂ ಸದ್ಗತಿ ಮಾಡುವಂತಹ ಗುರು ಒಬ್ಬರೇ ಆಗಿದ್ದಾರೆ.
ಧರ್ಮಸ್ಥಾಪನೆ ಮಾಡುವವರಿಗೂ ಗುರುವೆಂದು ಹೇಳುತ್ತಾರೆ ಆದರೆ ಆ ಗುರುವು ಸದ್ಗತಿ ಕೊಡಲು
ಸಾಧ್ಯವಿಲ್ಲ. ಅವರು ಇನ್ನೂ ತಮ್ಮ ಹಿಂದೆ ಪಾತ್ರಧಾರಿಗಳನ್ನು ಕರೆತರುತ್ತಾರೆ, ಹಿಂತಿರುಗಿ ಹೋಗುವ
ಮಾರ್ಗವನ್ನು ತೋರಿಸುವುದಿಲ್ಲ. ಶಿವನ ಮೆರವಣಿಗೆಯೆಂದೇ ಗಾಯನವಿದೆ ಆದರೆ ಗುರುವಿನ ಮೆರವಣಿಗೆ ಎಂದು
ಗಾಯನವಿಲ್ಲ. ಮನುಷ್ಯರು ಶಿವ ಹಾಗೂ ಶಂಕರನೆಂದು ಗಾಯನ ಮಾಡಿದ್ದಾರೆ. ಎಲ್ಲಿ ಆ ಸೂಕ್ಷ್ಮವತನವಾಸಿ,
ಮೂಲವತನವಾಸಿ ಎಲ್ಲಿ! ಇಬ್ಬರೂ ಸಹ ಒಂದೇ ಆಗಲು ಹೇಗೆ ಸಾಧ್ಯ. ಆದರೆ ಇದನ್ನು ಭಕ್ತಿಮಾರ್ಗದಲ್ಲಿ
ಬರೆದುಬಿಟ್ಟಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರ ಈ ಮೂವರೂ ಮಕ್ಕಳಾಗಿದ್ದಾರಲ್ಲವೆ. ಬ್ರಹ್ಮಾರವರ
ಬಗ್ಗೆ ಕುಳಿತು ನೀವು ತಿಳಿಸಿಕೊಡಬಹುದು. ಇವರನ್ನು ದತ್ತು ತೆಗೆದುಕೊಂಡಿರುವ ಕಾರಣ ಇವರು ಶಿವನ
ಮಗನಾದರಲ್ಲವೆ. ಶ್ರೇಷ್ಠಾತಿಶ್ರೇಷ್ಠ ತಂದೆಯಾಗಿದ್ದಾರೆ, ಉಳಿದೆಲ್ಲವೂ ಅವರ ರಚನೆಯಾಗಿದೆ. ಇವು
ಎಷ್ಟೊಂದು ತಿಳಿಯುವ ಮಾತುಗಳಾಗಿವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಅವಿನಾಶಿ
ಜ್ಞಾನರತ್ನಗಳ ಧಾರಣೆ ಮಾಡಿ 21 ಜನ್ಮಗಳಿಗಾಗಿ ಪದಮಾಪದಮ ಭಾಗ್ಯಶಾಲಿಗಳಾಗಬೇಕು. ನಮ್ಮನ್ನು ನಾವು
ಹೀಗೆ ಪರಿಶೀಲನೆ ಮಾಡಿಕೊಳ್ಳಬೇಕು - ನಮ್ಮಲ್ಲಿ ಯಾವುದೇ ಅಸುರೀ ಗುಣವಂತೂ ಇಲ್ಲವೆ? ವಿಕಾರಗಳು
ಉತ್ಪತ್ತಿಯಾಗುವಂತಹ ಯಾವುದೇ ವ್ಯಾಪಾರವನ್ನು ಮಾಡುತ್ತಿಲ್ಲವೆ?
2. ನೆನಪಿನ
ಯಾತ್ರೆಯಲ್ಲಿದ್ದು ಇಡೀ ಸೃಷ್ಟಿಯನ್ನು ಸದ್ಗತಿಯಲ್ಲಿ ತಲುಪಿಸಬೇಕು. ಒಬ್ಬ ಸದ್ಗುರು ತಂದೆಯ
ಶ್ರೀಮತದಂತೆ ನಡೆದು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆ ಮಾಡಬೇಕಾಗಿದೆ. ಮಾಯೆಯು ಎಂದಿಗೂ
ಕಲಾರಹಿತರನ್ನಾಗಿ ಮಾಡದಿರಲಿ ಎಂಬ ಗಮನವಿರಲಿ.
ವರದಾನ:
ಕೆಟ್ಟದರಲ್ಲಿಯೂ
ಸಹ ಒಳ್ಳೆಯದರ ಅನುಭವ ಮಾಡುವಂತಹ ನಿಶ್ಚಯಬುದ್ಧಿ ನಿಶ್ಚಿಂತ ಚಕ್ರವರ್ತಿ ಭವ.
ಸದಾ ಇದೇ ಸ್ಲೋಗನ್
ನೆನಪಿರಲಿ ಏನಾಯಿತು ಒಳ್ಳೆಯದೇ ಆಯಿತು, ಒಳ್ಳೆಯದೇ ಆಗಿದೆ ಮತ್ತು ಒಳ್ಳೆಯದೇ ಆಗಬೇಕು. ಕೆಟ್ಟದನ್ನು
ಕೆಟ್ಟದರ ರೂಪದಲ್ಲಿ ನೋಡಬೇಡಿ. ಆದರೆ ಕೆಟ್ಟದರಲ್ಲಿಯೂ ಸಹ ಒಳ್ಳೆಯದರ ಅನುಭವ ಮಾಡಿ, ಕೆಟ್ಟದರಿಂದಲೂ
ಸಹ ಪಾಠ ಕಲಿಯಿರಿ. ಯಾವುದೇ ಮಾತು ಬಂದಾಗ “ಏನಾಗುವುದು” ಈ ಸಂಕಲ್ಪ ಬರಬಾರದು, ಆದರೆ ತಕ್ಷಣ ಬರಲಿ
“ಒಳ್ಳೆಯದೇ ಆಗುವುದು”. ಕಳೆದು ಹೋದದ್ದು ಒಳ್ಳೆಯದೇ ಆಯಿತು. ಎಲ್ಲಿ ಒಳ್ಳೆಯದಿದೆ ಅಲ್ಲಿ
ನಿಶ್ಚಿಂತ ಚಕ್ರವರ್ತಿಯಿರುತ್ತಾರೆ. ನಿಶ್ಚಯ ಬುದ್ಧಿಯ ಅರ್ಥವೇ ಆಗಿದೆ ನಿಶ್ಚಿಂತ ಚಕ್ರವರ್ತಿ.
ಸ್ಲೋಗನ್:
ಯಾರು ಸ್ವಯಂಗೆ
ಅಥವಾ ಅನ್ಯರಿಗೆ ಮಾನ್ಯತೆ ಕೊಡುತ್ತಾರೆ ಅವರ ರಿಕಾರ್ಡ್ ಸದಾ ಸರಿಯಾಗಿರುವುದು.