06.01.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮ್ಮ
ಒಂದೊಂದು ಮಾತು ಬಹಳ ಮಧುರ ಸುಂದರವಾಗಿರಬೇಕು, ಹೇಗೆ ತಂದೆಯು ದುಃಖಹರ್ತ-ಸುಖಕರ್ತನಾಗಿದ್ದಾರೆ
ಹಾಗೆಯೇ ತಂದೆಯ ಸಮಾನ ಎಲ್ಲರಿಗೆ ಸುಖನೀಡಿ”
ಪ್ರಶ್ನೆ:
ಲೌಕಿಕ
ಮಿತ್ರ-ಸಂಬಂಧಿಗಳಿಗೆ ಜ್ಞಾನವನ್ನು ತಿಳಿಸುವ ಯುಕ್ತಿಯೇನು?
ಉತ್ತರ:
ಯಾರಾದರೂ
ಮಿತ್ರಸಂಬಂಧಿಗಳು ಬಂದರೆ ಅವರೊಂದಿಗೆ ಬಹಳ ನಮ್ರತೆಯಿಂದ, ಬಹಳ ಪ್ರೀತಿ-ಭಾವದಿಂದ ಮುಗುಳ್ನಗುತ್ತಾ
ಮಾತನಾಡಬೇಕು. ಅವರಿಗೆ ತಿಳಿಸಬೇಕು - ಇದು ಅದೇ ಮಹಾಭಾರತ ಯುದ್ಧವಾಗಿದೆ, ತಂದೆಯು ರುದ್ರ ಜ್ಞಾನ
ಯಜ್ಞವನ್ನು ರಚಿಸುತ್ತಾರೆ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ - ಭಕ್ತಿಯನ್ನಂತೂ
ಜನ್ಮ-ಜನ್ಮಾಂತರದಿಂದ ಮಾಡಿದಿರಿ. ಈಗ ಜ್ಞಾನವು ಆರಂಭವಾಗುತ್ತದೆ. ಅವಕಾಶವು ಸಿಕ್ಕಿದಾಗ ಬಹಳ
ಯುಕ್ತಿಯಿಂದ ಮಾತನಾಡಿ. ಪರಿವಾರದಲ್ಲಿ ಬಹಳ ಪ್ರೀತಿಯಿಂದ ನಡೆದುಕೊಳ್ಳಿ. ಎಂದೂ ಯಾರಿಗೂ ದುಃಖವನ್ನು
ಕೊಡಬೇಡಿ.
ಗೀತೆ:
ಕೊನೆಗೂ ಆ ದಿನ
ಬಂದಿತು....................
ಓಂ ಶಾಂತಿ.
ಯಾವುದೇ ಗೀತೆಯನ್ನು ಕೇಳಿದಾಗ ಮಕ್ಕಳು ತಮ್ಮಲ್ಲಿ ಅದರ ಅರ್ಥವನ್ನು ತೆಗೆಯಬೇಕು. ಸೆಕೆಂಡಿನಲ್ಲಿ
ತೆಗೆಯಬಹುದಾಗಿದೆ. ಇದು ಬೇಹದ್ದಿನ ನಾಟಕದ ಬಹಳ ದೊಡ್ಡ ಗಡಿಯಾರವಾಗಿದೆಯಲ್ಲವೆ. ಭಕ್ತಿಮಾರ್ಗದಲ್ಲಿ
ಮನುಷ್ಯರು ಕರೆಯುತ್ತಾರೆ. ಹೇಗೆ ಕೋರ್ಟಿನಲ್ಲಿ ಕೇಸ್ ಆದಾಗ ಯಾವಾಗ ಕರೆಯುವರೋ, ಯಾವಾಗ ವಿಚಾರಣೆ
ನಡೆಯುವುದೋ ನಮ್ಮ ಮೊಕದ್ದಮೆಯು ಯಾವಾಗ ಮುಕ್ತಾಯವುದೋ ಎಂದು ಹೇಳುತ್ತಿರುತ್ತಾರೆ ಅಂದಾಗ ಮಕ್ಕಳದೂ
ಸಹ ಇದು ಮೊಕದ್ದಮೆಯಾಗಿದೆ. ಯಾವ ಮೊಕದ್ದಮೆ? ರಾವಣನು ನಿಮ್ಮನ್ನು ಬಹಳ ದುಃಖಿಯನ್ನಾಗಿ ಮಾಡಿದ್ದಾನೆ.
ನಿಮ್ಮದು ದೊಡ್ಡ ಕೋರ್ಟಿನಲ್ಲಿ ಈ ಮೊಕದ್ದಮೆಯು ದಾಖಲಾಗುತ್ತದೆ. ತಂದೆಯೇ ಬನ್ನಿ ನಮ್ಮನ್ನು
ದುಃಖದಿಂದ ಮುಕ್ತರನ್ನಾಗಿ ಮಾಡಿ ಎಂದು ಮನುಷ್ಯರು ಕರೆಯುತ್ತಿರುತ್ತಾರೆ. ಕೊನೆಗೊಂದು ದಿನ
ಅವಶ್ಯವಾಗಿ ತಂದೆಯು ಕೇಳಿಸಿಕೊಳ್ಳುತ್ತಾರೆ ಮತ್ತು ನಾಟಕದನುಸಾರ ತಮ್ಮ ಸಮಯದಲ್ಲಿ ಬರುತ್ತಾರೆ.
ಇದರಲ್ಲಿ ಒಂದು ಸೆಕೆಂಡಿನ ಅಂತರವೂ ಆಗಲು ಸಾಧ್ಯವಿಲ್ಲ. ಬೇಹದ್ದಿನ ಗಡಿಯಾರವು ಎಷ್ಟು ನಿಖರವಾಗಿ
ಮಾಡಲಾಗಿದೆ. ಇಲ್ಲಿ ನಿಮ್ಮ ಬಳಿಯಿರುವ ಈ ಚಿಕ್ಕ ಗಡಿಯಾರವೂ ಸಹ ನಿಖರವಾಗಿ ನಡೆಯುವುದಿಲ್ಲ. ಯಜ್ಞದ
ಪ್ರತಿಯೊಂದು ಕಾರ್ಯವು ನಿಖರವಾಗಿರಬೇಕು. ಗಡಿಯಾರವೂ ಸಹ ನಿಖರವಾಗಿರಬೇಕು. ತಂದೆಯಂತೂ ಬಹಳ
ನಿಖರವಾಗಿದ್ದಾರೆ. ಅವರ ಕೇಳುವಿಕೆಯೂ ಸಹ ನಿಖರವಾಗಿದೆ. ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ
ತಮ್ಮ ಸಮಯದಲ್ಲಿ ಬರುತ್ತಾರೆ ಅಂದಾಗ ಮಕ್ಕಳ ಕೂಗನ್ನು ತಂದೆಯು ಆಲಿಸಿದರು, ತಂದೆಯು ಬಂದಿದ್ದಾರೆ.
ಈಗ ನೀವು ಎಲ್ಲರಿಗೂ ತಿಳಿಸುತ್ತೀರಿ. ದುಃಖವನ್ನು ಯಾರು ಕೊಡುತ್ತಾರೆಂದು ಮೊದಲಿಗೆ ನೀವೂ ಸಹ
ತಿಳಿದುಕೊಂಡಿರಲಿಲ್ಲ ಈಗ ತಂದೆಯು ತಿಳಿಸುತ್ತಾರೆ. ದ್ವಾಪರದಿಂದ ರಾವಣರಾಜ್ಯವು ಆರಂಭವಾಗುತ್ತದೆ.
ತಂದೆಯು ಕಲ್ಪ-ಕಲ್ಪವೂ ಸಂಗಮಯುಗದಲ್ಲಿ ಬರುತ್ತಾರೆಂದು ನೀವು ಮಕ್ಕಳಿಗೆ ಅರ್ಥವಾಗಿದೆ. ಇದು
ಬೇಹದ್ದಿನ ರಾತ್ರಿಯಾಗಿದೆ. ಶಿವತಂದೆಯು ರಾತ್ರಿಯಲ್ಲಿ ಬರುತ್ತಾರೆ, ಕೃಷ್ಣನ ಮಾತಿಲ್ಲ. ಯಾವಾಗ
ಘೋರ ಅಂಧಕಾರದಲ್ಲಿ, ಅಜ್ಞಾನ ನಿದ್ರೆಯಲ್ಲಿ ಮಲಗಿರುತ್ತಾರೆಯೋ ಆಗ ಜ್ಞಾನಸೂರ್ಯ ತಂದೆಯು ಮಕ್ಕಳನ್ನು
ದಿನದಲ್ಲಿ ಕರೆದುಕೊಂಡು ಹೋಗಲು ಬರುತ್ತಾರೆ. ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ
ಏಕೆಂದರೆ ಪತಿತರಿಂದ ಪಾವನರಾಗಬೇಕಾಗಿದೆ. ತಂದೆಯೇ ಪತಿತ-ಪಾವನನಾಗಿದ್ದಾರೆ. ಅವರು ಬಂದಾಗಲೇ
ಕೇಳುತ್ತಾರಲ್ಲವೆ! ಈಗ ತಮ್ಮ ಮಾತನ್ನು ತಂದೆಯು ಆಲಿಸಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು
ಪತಿತರನ್ನು ಪಾವನ ಮಾಡಲು ಬಂದಿದ್ದೇನೆ. ಪಾವನರಾಗುವ ಸಹಜವಾದ ಯುಕ್ತಿಯನ್ನು ನಿಮಗೆ
ತಿಳಿಸಿಕೊಡುತ್ತೇನೆ. ಇಂದು ನೋಡಿ, ವಿಜ್ಞಾನವು ಎಷ್ಟೊಂದು ಬಲವಾಗಿದೆ. ಅಣುಬಾಂಬು ಇತ್ಯಾದಿಗಳ
ಎಷ್ಟು ಬಲವಾದ ಶಬ್ಧವಾಗುತ್ತದೆ! ನೀವು ಮಕ್ಕಳು ಶಾಂತಿಯ ಬಲದಿಂದ ಈ ವಿಜ್ಞಾನದ ಮೇಲೆ
ಜಯಗಳಿಸುತ್ತೀರಿ. ಶಾಂತಿಗೆ ಯೋಗವೆಂದು ಹೇಳಲಾಗುತ್ತದೆ. ಆತ್ಮವು ತಂದೆಯನ್ನು ನೆನಪು ಮಾಡುತ್ತದೆ -
ಬಾಬಾ, ತಾವು ಬಂದರೆ ನಾವು ಶಾಂತಿಧಾಮದಲ್ಲಿ ಹೋಗಿ ನಿವಾಸ ಮಾಡುವೆವು ಅಂದಾಗ ನೀವು ಮಕ್ಕಳು ಈ
ಯೋಗಬಲದಿಂದ, ಶಾಂತಿಯ ಬಲದಿಂದ ವಿಜ್ಞಾನದ ಮೇಲೆ ಜಯಗಳಿಸುತ್ತೀರಿ. ಶಾಂತಿಯ ಬಲವನ್ನು ಪ್ರಾಪ್ತಿ
ಮಾಡಿಕೊಳ್ಳುತ್ತೀರಿ. ವಿಜ್ಞಾನದಿಂದ ಇದೆಲ್ಲವೂ ವಿನಾಶವಾಗಲಿದೆ. ಶಾಂತಿಯಿಂದ ನೀವು ಮಕ್ಕಳು
ವಿಜಯಿಗಳಾಗುತ್ತೀರಿ. ಬಾಹುಬಲವುಳ್ಳವರು ಎಂದಿಗೂ ವಿಶ್ವದ ಮೇಲೆ ಜಯಗಳಿಸಲು ಸಾಧ್ಯವಿಲ್ಲ. ಈ
ವಿಚಾರಗಳನ್ನೂ ಸಹ ನೀವು ಪ್ರದರ್ಶನಿಯಲ್ಲಿ ಬರೆಯಬಹುದು.
ದೆಹಲಿಯಲ್ಲಿ ಬಹಳ ಸೇವೆಯು
ನಡೆಯುತ್ತದೆ ಏಕೆಂದರೆ ದೆಹಲಿಯು ರಾಜಧಾನಿಯಾಗಿದೆ. ನಿಮ್ಮ ರಾಜಧಾನಿಯೂ ಸಹ ದೆಹಲಿಯೇ ಆಗುವುದು.
ದೆಹಲಿಗೆ ಫರಿಸ್ತಾನವೆಂದು ಕರೆಯಲಾಗುವುದು. ಪಾಂಡವರ ಕೋಟೆಗಳಂತೂ ಇಲ್ಲ. ಯಾವಾಗ ಶತ್ರುಗಳು
ಮುತ್ತಿಗೆ ಹಾಕುವರೋ ಆಗ ಭದ್ರತಾ ಕೋಟೆಯನ್ನು ಕಟ್ಟಲಾಗುತ್ತದೆ. ನಿಮಗಂತೂ ಸತ್ಯಯುಗದಲ್ಲಿ ಕೋಟೆಯ
ಅವಶ್ಯಕತೆಯೇ ಇರುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ನಾವು ಶಾಂತಿಯ ಬಲದಿಂದ ನಮ್ಮ
ರಾಜ್ಯಸ್ಥಾಪನೆ ಮಾಡುತ್ತಿದ್ದೇವೆ. ಅವರದು ತಾತ್ಕಾಲಕ್ಕಾಗಿ ಶಾಂತಿಯಾಗಿದೆ, ನಿಮ್ಮದು
ಸತ್ಯಶಾಂತಿಯಾಗಿದೆ. ಜ್ಞಾನದ ಬಲ ಶಾಂತಿಯ ಬಲವೆಂದು ಹೇಳಲಾಗುತ್ತದೆ. ಜ್ಞಾನವು ವಿದ್ಯೆಯಾಗಿದೆ,
ವಿದ್ಯೆಯಿಂದಲೇ ಬಲ ಸಿಗುತ್ತದೆ. ಪೋಲಿಸ್ ಸೂಪರಿಂಟೆಂಡೆಂಟ್ ಆಗುತ್ತಾರೆ ಅವರಲ್ಲಿ ಎಷ್ಟೊಂದು
ಬಲವಿರುತ್ತದೆ. ಅವೆಲ್ಲವೂ ಸ್ಥೂಲ, ದುಃಖಕೊಡುವಂತಹ ಮಾತುಗಳಾಗಿವೆ. ನಿಮ್ಮ ಪ್ರತಿಯೊಂದು ಮಾತು
ಆತ್ಮೀಯವಾಗಿದೆ. ನಿಮ್ಮ ಮುಖದಿಂದ ಯಾವುದೆಲ್ಲಾ ಮಾತುಗಳು ಹೊರಬರುವುದೋ ಆ ಒಂದೊಂದು ಮಾತೂ ಸಹ ಬಹಳ
ಸುಂದರ-ಮಧುರವಾಗಿರಲಿ, ಅದನ್ನು ಕೇಳಿದವರು ಖುಷಿಯಾಗಿಬಿಡಲಿ. ಹೇಗೆ ತಂದೆಯು
ದುಃಖಹರ್ತ-ಸುಖಕರ್ತನಾಗಿದ್ದಾರೆ ಅದೇ ರೀತಿ ನೀವು ಮಕ್ಕಳೂ ಸಹ ಎಲ್ಲರಿಗೂ ಸುಖ ಕೊಡಬೇಕಾಗಿದೆ.
ಪರಿವಾರದವರಿಗೂ ದುಃಖವಾಗಬಾರದು. ಎಲ್ಲರೊಂದಿಗೆ ನಿಯಮಾನುಸಾರವಾಗಿ ನಡೆಯಬೇಕಾಗಿದೆ. ಹಿರಿಯರ ಜೊತೆ
ಪ್ರೀತಿಯಿಂದ ನಡೆಯಬೇಕಾಗಿದೆ. ಬಾಯಿಂದ ಇಷ್ಟು ಮಧುರ, ಒಳ್ಳೆಯ ಮಾತುಗಳು ಬರಲಿ, ಅದರಿಂದ ಎಲ್ಲರೂ
ಖುಷಿಪಡಲಿ. ಹೇಳಿ, ಶಿವತಂದೆಯು ತಿಳಿಸುತ್ತಾರೆ - ಮನ್ಮನಾಭವ. ನಾನು ಸರ್ವಶ್ರೇಷ್ಠನಾಗಿದ್ದೇನೆ,
ನನ್ನನ್ನು ನೆನಪು ಮಾಡುವುದರಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಬಹಳ ಪ್ರೀತಿಯಿಂದ
ಮಾತನಾಡಬೇಕು. ತಿಳಿಯಿರಿ, ಯಾರಾದರೂ ಹಿರಿಯ ಸಹೋದರನಾಗಿದ್ದರೆ ಹೇಳಿ, ದಾದಾಜೀ ಶಿವತಂದೆಯು
ಹೇಳುತ್ತಾರೆ - ನನ್ನನ್ನು ನೆನಪು ಮಾಡಿ ಎಂದು. ಶಿವತಂದೆಯು ಯಾರಿಗೆ ರುದ್ರನೆಂದು ಹೇಳುತ್ತಾರೆಯೋ
ಅವರೇ ಜ್ಞಾನಯಜ್ಞವನ್ನು ರಚಿಸುತ್ತಾರೆ. ಕೃಷ್ಣಜ್ಞಾನ ಯಜ್ಞ ಎಂಬುದನ್ನು ಕೇಳುವುದಿಲ್ಲ,
ರುದ್ರಜ್ಞಾನ ಯಜ್ಞವೆಂದೇ ಹೇಳುತ್ತಾರೆ ಅಂದಾಗ ಶಿವತಂದೆಯೇ ಈ ರುದ್ರಜ್ಞಾನ ಯಜ್ಞವನ್ನು
ರಚಿಸುತ್ತಾರೆ. ರಾಜ್ಯಭಾಗ್ಯವನ್ನು ಪ್ರಾಪ್ತಿಮಾಡಿಕೊಳ್ಳಲು ಜ್ಞಾನ ಮತ್ತು ಯೋಗವನ್ನು ಕಲಿಸುತ್ತಾರೆ.
ಈ ದಾದಾರವರೂ ಸಹ ಹೇಳುತ್ತಾರೆ. ಭಗವಾನುವಾಚ - ನನ್ನೊಬ್ಬನನ್ನೇ ನೆನಪು ಮಾಡಿ ಏಕೆಂದರೆ ಈಗ ಎಲ್ಲರ
ಅಂತಿಮಘಳಿಗೆಯಾಗಿದೆ, ವಾನಪ್ರಸ್ಥಸ್ಥಿತಿಯಾಗಿದೆ, ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ಶರೀರವನ್ನು
ಬಿಡುವ ಸಮಯದಲ್ಲಿ ಈಶ್ವರನನ್ನು ನೆನಪು ಮಾಡಿ ಎಂದು ಹೇಳುತ್ತಾರಲ್ಲವೆ. ಇಲ್ಲಿ ಸ್ವಯಂ ಈಶ್ವರನೇ
ಹೇಳುತ್ತಾರೆ - ಮಕ್ಕಳೇ, ಮೃತ್ಯುವು ಸನ್ಮುಖದಲ್ಲಿ ನಿಂತಿದೆ, ಇದರಿಂದ ಯಾರೂ ರಕ್ಷಿಸಿಕೊಳ್ಳಲು
ಸಾಧ್ಯವಿಲ್ಲ. ಅಂತಿಮದಲ್ಲಿಯೇ ತಂದೆಯು ಬಂದು ತಿಳಿಸುತ್ತಾರೆ, ಮಕ್ಕಳೇ, ನನ್ನನ್ನು ನೆನಪು ಮಾಡಿದರೆ
ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಇದಕ್ಕೆ ನೆನಪಿನ ಅಗ್ನಿಯೆಂದು ಕರೆಯಲಾಗುತ್ತದೆ, ಇದರಿಂದ ನಿಮ್ಮ
ಪಾಪಗಳು ಭಸ್ಮವಾಗುತ್ತವೆ ಎಂದು ತಂದೆಯು ಗ್ಯಾರಂಟಿ ಕೊಡುತ್ತಾರೆ. ವಿಕರ್ಮ ವಿನಾಶವಾಗಲು,
ಪಾವನರಾಗಲು ಮತ್ತ್ಯಾವುದೇ ಉಪಾಯವಿಲ್ಲ. ತಲೆಯ ಮೇಲೆ ಪಾಪಗಳ ಹೊರೆಯು ಏರುತ್ತಾ-ಏರುತ್ತಾ
ತುಕ್ಕುಹಿಡಿಯುತ್ತಾ-ಹಿಡಿಯುತ್ತಾ ಆತ್ಮರೂಪಿ ಚಿನ್ನವು 9 ಕ್ಯಾರೇಟಿನದಾಗಿಬಿಟ್ಟಿದೆ. 9
ಕ್ಯಾರೇಟಿನ ನಂತರ ಅದಕ್ಕೆ ಮೇಣದ ಸಮಾನವೆಂದು ಹೇಳಲಾಗುತ್ತದೆ. ಈಗ ಪುನಃ ಅದು 24 ಕ್ಯಾರೇಟಿನದು
ಹೇಗಾಗುವುದು, ಆತ್ಮವು ಪವಿತ್ರವಾಗುವುದು ಹೇಗೆ? ಪವಿತ್ರ ಆತ್ಮನಿಗೆ ಶರೀರವೂ ಪವಿತ್ರವಾದದ್ದೇ
ಸಿಗುವುದು.
ಯಾವುದೇ
ಮಿತ್ರಸಂಬಂಧಿಗಳೊಂದಿಗೆ ಬಹಳ ನಮ್ರತೆಯಿಂದ, ಪ್ರೇಮಭಾವದಿಂದ ಮುಗುಳ್ನಗುತ್ತಾ ಮಾತನಾಡಬೇಕು.
ತಿಳಿಸಿಕೊಡಬೇಕು - ಇದು ಅದೇ ಮಹಾಭಾರತ ಯುದ್ಧವಾಗಿದೆ. ಈ ರುದ್ರಜ್ಞಾನ ಯಜ್ಞವೂ ಇದೆ, ತಂದೆಯ ಮೂಲಕ
ನಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ಸಿಗುತ್ತದೆ, ಈ ಜ್ಞಾನವು ಮತ್ತೆಲ್ಲಿಯೂ ಸಿಗಲು
ಸಾಧ್ಯವಿಲ್ಲ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಭಕ್ತಿ ಇತ್ಯಾದಿಗಳನ್ನಂತೂ
ಜನ್ಮ-ಜನ್ಮಾಂತರದಿಂದಲೂ ಮಾಡಿದ್ದೇವೆ. ಈಗ ಜ್ಞಾನವು ಆರಂಭವಾಗುತ್ತದೆ, ಭಕ್ತಿಯು ರಾತ್ರಿ, ಜ್ಞಾನವು
ದಿನವಾಗಿದೆ. ಸತ್ಯಯುಗದಲ್ಲಿ ಭಕ್ತಿಯಿರುವುದಿಲ್ಲ. ಹೀಗ್ಹೀಗೆ ಯುಕ್ತಿಯಿಂದ ಮಾತನಾಡಬೇಕು. ಅವಕಾಶವು
ಸಿಕ್ಕಿದಾಗ ಯಾವಾಗ ಬಾಣವನ್ನು ಹೊಡೆಯಬೇಕೋ ಆಗ ಸಮಯ ಮತ್ತು ಅವಕಾಶವನ್ನು ನೋಡಿ ಜ್ಞಾನವನ್ನು
ತಿಳಿಸಬೇಕು. ಜ್ಞಾನವನ್ನು ಕೊಡುವುದಕ್ಕೂ ಬಹಳ ಯುಕ್ತಿಬೇಕು. ತಂದೆಯು ಯುಕ್ತಿಗಳನ್ನಂತೂ
ಎಲ್ಲರಿಗಾಗಿ ತಿಳಿಸುತ್ತಿರುತ್ತಾರೆ. ಪವಿತ್ರತೆಯು ಬಹಳ ಒಳ್ಳೆಯದಾಗಿದೆ, ಈ ಲಕ್ಷ್ಮಿ-ನಾರಾಯಣರು
ನಮ್ಮ ಪೂಜ್ಯರಾಗಿದ್ದಾರಲ್ಲವೆ. ಪೂಜ್ಯಪಾವನರೇ ಮತ್ತೆ ಪೂಜಾರಿಗಳಾದರು. ಪತಿತರು ಕುಳಿತು ಪಾವನರಿಗೆ
ಪೂಜೆ ಮಾಡುವುದು - ಇದು ಶೋಭಿಸುವುದಿಲ್ಲ. ಕೆಲವರಂತೂ ಪತಿತರಿಂದ ದೂರ ಓಡುತ್ತಾರೆ. ವಲ್ಲಭಾಚಾರಿಯು
ಎಂದೂ ಪಾದಗಳನ್ನು ಮುಟ್ಟಲೂ ಸಹ ಬಿಡುವುದಿಲ್ಲ. ಇವರು ಛೀ ಛೀ ಮನುಷ್ಯರಾಗಿದ್ದಾರೆಂದು
ತಿಳಿಯುತ್ತಾರೆ. ಮಂದಿರಗಳಲ್ಲಿಯೂ ಸಹ ಬ್ರಾಹ್ಮಣರಿಗೇ ಮೂರ್ತಿಯನ್ನು ಮುಟ್ಟಲು ಅನುಮತಿಯಿರುತ್ತದೆ,
ಶೂದ್ರರು ಒಳಗೆ ಹೋಗಿ ಮುಟ್ಟುವಂತಿಲ್ಲ. ಅಲ್ಲಿ ಬ್ರಾಹ್ಮಣರೇ ಮೂರ್ತಿಗೆ ಸ್ನಾನ ಮಾಡಿಸುತ್ತಾರೆ
ಮತ್ತ್ಯಾರಿಗೂ ಬಿಡುವುದಿಲ್ಲ. ಅಂತರವಿದೆಯಲ್ಲವೆ! ಅವರಂತೂ ಕುಖವಂಶಾವಳಿ ಬ್ರಾಹ್ಮಣರಾಗಿದ್ದಾರೆ,
ನೀವು ಮುಖವಂಶಾವಳಿ ಸತ್ಯಬ್ರಾಹ್ಮಣರಾಗಿದ್ದೀರಿ. ನೀವು ಆ ಬ್ರಾಹ್ಮಣರಿಗೆ ಬಹಳ ಚೆನ್ನಾಗಿ
ತಿಳಿಸಿಕೊಡಬಹುದು. ಬ್ರಾಹ್ಮಣರು ಎರಡು ಪ್ರಕಾರದವರಿರುತ್ತಾರೆ - ಮೊದಲನೆಯವರು ಪ್ರಜಾಪಿತ ಬ್ರಹ್ಮನ
ಮುಖವಂಶಾವಳಿಯಾಗಿದ್ದಾರೆ, ಎರಡನೆಯವರು ಕುಖವಂಶಾವಳಿಯಾಗಿದ್ದಾರೆ. ಬ್ರಹ್ಮನ ಮುಖವಂಶಾವಳಿ
ಬ್ರಾಹ್ಮಣರು ಶ್ರೇಷ್ಠ, ಶಿಖೆಗೆ ಸಮಾನರಾಗಿದ್ದಾರೆ. ಯಜ್ಞವನ್ನು ರಚಿಸಿದಾಗಲೂ ಸಹ ಬ್ರಾಹ್ಮಣರನ್ನೇ
ನಿಗಧಿಪಡಿಸಲಾಗುತ್ತದೆ. ಇದಂತೂ ಜ್ಞಾನಯಜ್ಞವಾಗಿದೆ, ಬ್ರಾಹ್ಮಣರಿಗೆ ಜ್ಞಾನವು ಸಿಗುತ್ತದೆ ಮತ್ತೆ
ಅವರು ದೇವತೆಗಳಾಗುತ್ತಾರೆ. ವರ್ಣಗಳ ಬಗ್ಗೆಯೂ ತಿಳಿಸಿದ್ದೇವೆ, ಯಾರು ಸೇವಾಧಾರಿ ಮಕ್ಕಳಿರುವರೋ
ಅವರಿಗೆ ಸದಾ ಸರ್ವೀಸಿನ ಉಮ್ಮಂಗವಿರುವುದು. ಎಲ್ಲಿಯೇ ಪ್ರದರ್ಶನಿಯಿದ್ದರೆ ಅಲ್ಲಿಗೆ ನಾವು ಹೋಗಿ
ಇಂತಿಂತಹ ವಿಷಯಗಳನ್ನು ತಿಳಿಸಬೇಕೆಂದು ತಕ್ಷಣ ಅಲ್ಲಿಗೆ ಹೋಗುತ್ತಾರೆ. ಪ್ರದರ್ಶನಿಗಳಂತೂ
ಪ್ರಜೆಗಳಾಗುವ ವಿಹಂಗ ಮಾರ್ಗವಾಗಿದೆ. ತಾವಾಗಿಯೇ ಅನೇಕರು ಬರುತ್ತಾರೆ ಅಂದಾಗ ತಿಳಿಸಿಕೊಡುವವರೂ ಸಹ
ಒಳ್ಳೆಯವರಿರಬೇಕು. ಒಂದುವೇಳೆ ಯಾರಾದರೂ ಪೂರ್ಣರೀತಿಯಲ್ಲಿ ತಿಳಿಸದಿದ್ದರೆ ಈ
ಬ್ರಹ್ಮಾಕುಮಾರ-ಕುಮಾರಿಯರ ಬಳಿ ಇದೇ ಜ್ಞಾನವಿದೆಯೇ ಎಂದು ಹೇಳುತ್ತಾರೆ ಮತ್ತೆ
ಸೇವಾಭಂಗವಾಗಿಬಿಡುತ್ತದೆ. ಪ್ರದರ್ಶನಿಯಲ್ಲಿ ಒಬ್ಬರು ಇಂತಹ ಸ್ಫೂರ್ತಿದಾಯಕ ವ್ಯಕ್ತಿಯಿರಬೇಕು,
ಅವರು ತಿಳಿಸಿಕೊಡುವ ಮಾರ್ಗದರ್ಶಕರನ್ನು ನೋಡುತ್ತಿರಬೇಕು. ಯಾರಾದರೂ ಹಿರಿಯ ವ್ಯಕ್ತಿಯಾಗಿದ್ದರೆ
ಅವರಿಗೆ ತಿಳಿಸಿಕೊಡುವವರೂ ಸಹ ಹೀಗೆ ಒಳ್ಳೆಯವರಾಗಿರಬೇಕು. ಬಹಳ ಕಡಿಮೆ ತಿಳಿಸುವವರನ್ನು ಅಲ್ಲಿಂದ
ತೆಗೆಯಬೇಕು. ಎಲ್ಲವನ್ನೂ ತೋರಿಸಲು ಒಬ್ಬರು ಒಳ್ಳೆಯವರಿರಬೇಕು. ನೀವಂತೂ ಮಹಾತ್ಮರಿಗೂ ಸಹ
ನಿಮಂತ್ರಣ ಕೊಡಬೇಕಾಗಿದೆ. ನೀವು ಕೇವಲ ತಿಳಿಸುತ್ತೀರಿ - ತಂದೆಯು ಹೀಗೆ ಹೇಳುತ್ತಾರೆ, ಅವರು
ಸರ್ವಶ್ರೇಷ್ಠ ಭಗವಂತನಾಗಿದ್ದಾರೆ, ಅವರೇ ರಚಯಿತ ತಂದೆಯಾಗಿದ್ದಾರೆ. ಉಳಿದೆಲ್ಲರೂ ಅವರ
ರಚನೆಯಾಗಿದ್ದಾರೆ, ಆಸ್ತಿಯು ತಂದೆಯಿಂದಲೇ ಸಿಗುತ್ತದೆ. ಸಹೋದರನಿಂದ ಸಹೋದರನಿಗೆ ಆಸ್ತಿಯು
ಸಿಗುತ್ತದೆಯೇ? ಯಾರೂ ಸುಖಧಾಮದ ಆಸ್ತಿಯನ್ನು ಕೊಡಲು ಸಾಧ್ಯವಿಲ್ಲ, ತಂದೆಯೇ ಆಸ್ತಿಯನ್ನು
ಕೊಡುತ್ತಾರೆ. ಸರ್ವರ ಸದ್ಗತಿ ಮಾಡುವಂತಹ ತಂದೆಯು ಅವರೊಬ್ಬರೇ ಆಗಿದ್ದಾರೆ ಅಂದಮೇಲೆ ಒಬ್ಬ
ತಂದೆಯನ್ನೇ ನೆನಪು ಮಾಡಬೇಕಾಗಿದೆ. ಅವರೇ ಬಂದು ಸತ್ಯಯುಗವನ್ನಾಗಿ ಮಾಡುತ್ತಾರೆ. ಬ್ರಹ್ಮಾರವರ
ತನುವಿನಿಂದ ಸ್ವರ್ಗಸ್ಥಾಪನೆ ಮಾಡುತ್ತಾರೆ, ಶಿವಜಯಂತಿಯನ್ನು ಆಚರಿಸುತ್ತಾರೆ ಆದರೆ ಅವರೇನು
ಮಾಡುತ್ತಾರೆ ಎಂಬುದೆಲ್ಲವನ್ನೂ ಮರೆತಿದ್ದಾರೆ. ಶಿವತಂದೆಯೇ ಬಂದು ರಾಜಯೋಗವನ್ನು ಕಲಿಸಿ
ಆಸ್ತಿಯನ್ನು ಕೊಡುತ್ತಾರೆ. 5000 ವರ್ಷಗಳ ಹಿಂದೆ ಭಾರತವು ಸ್ವರ್ಗವಾಗಿತ್ತು, ಲಕ್ಷಾಂತರ ವರ್ಷಗಳ
ಮಾತಿಲ್ಲ. ತಿಥಿ-ತಾರೀಖು ಎಲ್ಲವೂ ಇದೆ, ಇದನ್ನು ಯಾರೂ ಖಂಡಿಸಲು ಸಾಧ್ಯವಿಲ್ಲ. ಹೊಸಪ್ರಪಂಚ ಮತ್ತು
ಹಳೆಯ ಪ್ರಪಂಚವು ಅರ್ಧ-ಅರ್ಧವಾಗಿರಬೇಕು. ಅವರು ಸತ್ಯಯುಗದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು
ಹೇಳಿಬಿಡುತ್ತಾರೆ ಆದ್ದರಿಂದ ಯಾವುದರದೂ ಲೆಕ್ಕವಿರಲು ಸಾಧ್ಯವಿಲ್ಲ. ಸ್ವಸ್ತಿಕ್ನಲ್ಲಿಯೂ ಸಹ
ಪೂರ್ಣ ನಾಲ್ಕುಭಾಗಗಳಿಗೆ 1250 ವರ್ಷಗಳನ್ನು ಪ್ರತೀ ಯುಗದಲ್ಲಿ ಹಂಚಲಾಗಿದೆ. ಅವರು ಲೆಕ್ಕವನ್ನೂ
ಸಹ ತಿಳಿದುಕೊಂಡಿಲ್ಲ ಆದ್ದರಿಂದ ಕವಡೆಯ ಸಮಾನರೆಂದು ಹೇಳಲಾಗುತ್ತದೆ. ಈಗ ತಂದೆಯು
ವಜ್ರಸಮಾನರನ್ನಾಗಿ ಮಾಡುತ್ತಾರೆ. ಎಲ್ಲರೂ ಪತಿತರಾಗಿದ್ದಾರೆ, ಭಗವಂತನನ್ನು ನೆನಪು ಮಾಡುತ್ತಾರೆ
ಅಂದಾಗ ತಂದೆಯು ಬಂದು ಅಂತಹವರನ್ನು ಜ್ಞಾನದಿಂದ ಪವಿತ್ರರನ್ನಾಗಿ ಮಾಡುತ್ತಾರೆ. ನೀವು ಮಕ್ಕಳನ್ನು
ಜ್ಞಾನರತ್ನಗಳಿಂದ ಶೃಂಗರಿಸುತ್ತಿರುತ್ತಾರೆ ಮತ್ತೆ ನೀವು ನೋಡಿ ಏನಾಗುವಿರಿ! ನಿಮ್ಮ
ಗುರಿ-ಧ್ಯೇಯವೇನಾಗಿದೆ? ಭಾರತವು ಎಷ್ಟು ಕಿರೀಟಧಾರಿಯಾಗಿತ್ತು, ಇದನ್ನೆಲ್ಲವನ್ನೂ ಮರೆತಿದ್ದಾರೆ.
ಮುಸಲ್ಮಾನರೂ ಸಹ ಸೋಮನಾಥ ಮಂದಿರದಿಂದ ಎಷ್ಟೊಂದು ಲೂಟಿ ಮಾಡಿಕೊಂಡು ಹೋಗಿ ಮಸೀದಿ ಮೊದಲಾದುವುಗಳಲ್ಲಿ
ವಜ್ರಗಳನ್ನು ಹಾಕಿದ್ದಾನೆ. ಅದಕ್ಕೆ ಬೆಲೆಯನ್ನೂ ಸಹ ಕಟ್ಟುವುದಕ್ಕೆ ಸಾಧ್ಯವಿಲ್ಲ. ರಾಜರ
ಕಿರೀಟದಲ್ಲಿ ಎಷ್ಟೊಂದು ದೊಡ್ಡ-ದೊಡ್ಡ ಮಣಿಗಳಿರುತ್ತಿತ್ತು. ಕೆಲವರ ಕಿರೀಟವು ಕೋಟಿಯದು ಇನ್ನೂ
ಕೆಲವರದು 5 ಕೋಟಿಯದು. ಇತ್ತೀಚೆಗಂತೂ ಎಲ್ಲವೂ ನಕಲಿಯು ಬಂದುಬಿಟ್ಟಿದೆ. ಈ ಪ್ರಪಂಚದಲ್ಲಿ ಎಲ್ಲವೂ
ತಾತ್ಕಾಲಿಕ, ಬಿಡಿಗಾಸಿನ ಸುಖವಾಗಿದೆ. ಬಹಳ ದುಃಖವಿದೆ ಆದ್ದರಿಂದ ಸನ್ಯಾಸಿಗಳೂ ಸಹ ಇದಕ್ಕೆ
ಕಾಗವಿಷ್ಟ ಸಮಾನ ಸುಖವೆಂದು ಹೇಳಿ ಗೃಹಸ್ಥವನ್ನು ಬಿಟ್ಟುಹೋಗುತ್ತಾರೆ ಆದರೆ ಈಗ ಅವರೂ ಸಹ
ತಮೋಪ್ರಧಾನರಾಗಿಬಿಟ್ಟಿದ್ದಾರೆ. ನಂತರ ನಗರದಲ್ಲಿ ಬಂದು ಪ್ರವೇಶ ಮಾಡಿದ್ದಾರೆ ಆದರೆ ಯಾರಿಗೆ
ತಿಳಿಸುವುದು? ರಾಜ-ರಾಣಿಯರಂತೂ ಇಲ್ಲ, ಯಾರೂ ಒಪ್ಪುವುದಿಲ್ಲ. ಎಲ್ಲರದೂ ತಮ್ಮ-ತಮ್ಮ ಮತವಾಗಿದೆ,
ಏನು ಬೇಕೋ ಅದನ್ನು ಮಾಡಿಕೊಳ್ಳಲಿ ಎಂದು ಹೇಳಿಬಿಟ್ಟಿದ್ದಾರೆ. ಸಂಕಲ್ಪದ ಸೃಷ್ಟಿಯಾಗಿದೆ. ಈಗ ತಾವು
ಮಕ್ಕಳಿಗೆ ತಂದೆಯು ಗುಪ್ತ ರೀತಿಯಿಂದ ಪುರುಷಾರ್ಥ ಮಾಡಿಸುತ್ತಿರುತ್ತಾರೆ. ನೀವು ಎಷ್ಟೊಂದು
ಸುಖವನ್ನನುಭವಿಸುತ್ತೀರಿ. ಅನ್ಯಧರ್ಮದವರು ಅಂತಿಮದಲ್ಲಿ ಯಾವಾಗ ವೃದ್ಧಿಯನ್ನು ಹೊಂದುವರೋ ಆಗ
ಯುದ್ಧ ಇತ್ಯಾದಿಗಳ ಏರುಪೇರುಗಳಾಗುತ್ತವೆ. ಮುಕ್ಕಾಲುಭಾಗದ ಸಮಯದಲ್ಲಂತೂ ಸುಖದಲ್ಲಿರುತ್ತೀರಿ
ಆದ್ದರಿಂದ ತಂದೆಯು ತಿಳಿಸುತ್ತಾರೆ - ನಿಮ್ಮ ದೇವಿ-ದೇವತಾಧರ್ಮವಂತೂ ಬಹಳ ಸುಖವನ್ನು
ಕೊಡುವಂತಹದ್ದಾಗಿದೆ. ನಾವು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇವೆ.
ಅನ್ಯಧರ್ಮಸ್ಥಾಪಕರ್ಯಾರೂ ರಾಜ್ಯಸ್ಥಾಪನೆ ಮಾಡಲು ಸಾಧ್ಯವಿಲ್ಲ, ಅವರು ಸದ್ಗತಿ ಮಾಡುವುದಿಲ್ಲ ಕೇವಲ
ತಮ್ಮ ಧರ್ಮಸ್ಥಾಪನೆ ಮಾಡಲು ಬರುತ್ತಾರೆ. ಅವರೂ ಸಹ ಅಂತ್ಯದಲ್ಲಿ ಯಾವಾಗ ತಮೋಪ್ರಧಾನರಾಗಿಬಿಡುವರೋ
ಆಗ ಅವರನ್ನೂ ಸತೋಪ್ರಧಾನರನ್ನಾಗಿ ಮಾಡಲು ತಂದೆಯೇ ಬರಬೇಕಾಗುತ್ತದೆ.
ನಿಮ್ಮ ಬಳಿ ಬಹಳ ಮಂದಿ
ಬರುತ್ತಾರೆ ಆದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಬಾಬಾ ಇಂತಹವರು ಬಹಳ ಚೆನ್ನಾಗಿ
ತಿಳಿದುಕೊಳ್ಳುತ್ತಿದ್ದಾರೆ, ಬಹಳ ಒಳ್ಳೆಯವರಾಗಿದ್ದಾರೆಂದು ತಂದೆಗೆ ಬರೆಯುತ್ತಾರೆ ಆದರೆ ತಂದೆಯು
ತಿಳಿಸುತ್ತಾರೆ - ಅವರು ಏನನ್ನೂ ಅರಿತುಕೊಂಡಿಲ್ಲ. ಒಂದುವೇಳೆ ತಂದೆಯು ಬಂದಿದ್ದಾರೆ, ವಿಶ್ವದ
ಮಾಲೀಕರನ್ನಾಗಿ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದೇ ಆದರೆ ಅದೇ ಸಮಯ ನಶೆಯೇರಿಬಿಡುವುದು,
ತಕ್ಷಣವೇ ಟಿಕೇಟನ್ನು ತೆಗೆದುಕೊಂಡು ಓಡಿಬರುವರು. ಆದರೆ ತಂದೆಯೊಂದಿಗೆ ಮಿಲನ ಮಾಡಲು ಬ್ರಾಹ್ಮಣಿಯರ
ಪತ್ರವನ್ನಂತೂ ಅವಶ್ಯವಾಗಿ ತರಬೇಕಾಗುತ್ತದೆ. ತಂದೆಯನ್ನು ಅರಿತುಕೊಂಡಮೇಲೆ ಅವರನ್ನು ಮಿಲನ ಮಾಡದೇ
ಇರಲು ಸಾಧ್ಯವಿಲ್ಲ, ಒಮ್ಮೆಲೆ ನಶೆಯೇರಿಬಿಡುವುದು. ಅವರಿಗೆ ಆಂತರಿಕವಾಗಿ ಬಹಳ ಖುಷಿಯಿರುವುದು.
ಅವರ ಬುದ್ಧಿಯು ಮಿತ್ರಸಂಬಂಧಿಗಳ ಬಳಿ ಅಲೆಯುವುದಿಲ್ಲ ಆದರೆ ಅನೇಕರ ಬುದ್ಧಿಯು
ಅಲೆದಾಡುತ್ತಿರುತ್ತದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರವಾಗಿರಬೇಕು ಮತ್ತು
ತಂದೆಯ ನೆನಪಿನಲ್ಲಿರಬೇಕಾಗಿದೆ. ಇದು ಬಹಳ ಸಹಜ, ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು
ಮಾಡುತ್ತಾ ಇರಿ. ಹೇಗೆ ಕಛೇರಿಯಲ್ಲಿ ರಜೆ ತೆಗೆದುಕೊಳ್ಳುತ್ತೀರಿ ಹಾಗೆಯೇ ವ್ಯಾಪಾರದಿಂದಲೂ ರಜೆ
ತೆಗೆದುಕೊಂಡು ಒಂದೆರಡು ದಿನ ನೆನಪಿನ ಯಾತ್ರೆಯಲ್ಲಿ ಕುಳಿತುಬಿಡಿ. ಪದೇ-ಪದೇ ನೆನಪಿನಲ್ಲಿ
ಕುಳಿತುಕೊಳ್ಳುವುದಕ್ಕಾಗಿ ಇಡೀ ದಿನ ತಂದೆಯನ್ನು ನೆನಪು ಮಾಡುವ ವ್ರತವನ್ನಿಟ್ಟುಕೊಳ್ಳುವೆನು (ಬ್ರಹ್ಮಾತಂದೆ),
ಇದರಿಂದ ಎಷ್ಟೊಂದು ಜಮಾ ಆಗಿಬಿಡುವುದು, ವಿಕರ್ಮಗಳು ವಿನಾಶವಾಗುತ್ತವೆ. ತಂದೆಯ ನೆನಪಿನಿಂದಲೇ
ಸತೋಪ್ರಧಾನರಾಗಬೇಕು. ಇಡೀ ದಿನಸ ಸಂಪೂರ್ಣ ಯೋಗವು ಯಾರಿಗೂ ಇರಲು ಸಾಧ್ಯವಿಲ್ಲ. ಮಾಯೆಯು ಅವಶ್ಯವಾಗಿ
ವಿಘ್ನಗಳನ್ನು ಹಾಕುತ್ತದೆ ಆದರೂ ಸಹ ಪುರುಷಾರ್ಥ ಮಾಡುತ್ತಾ-ಮಾಡುತ್ತಾ ವಿಜಯಗಳಿಸುವಿರಿ. ಇಂದು ಇಡೀ
ದಿನ ಉದ್ಯಾನವನದಲ್ಲಿ ಕುಳಿತು ತಂದೆಯನ್ನು ನೆನಪು ಮಾಡುತ್ತೇನೆ, ಭೋಜನದ ಸಮಯದಲ್ಲಿಯೂ ಸಹ
ನೆನಪಿನಲ್ಲಿ ಕುಳಿತುಕೊಳ್ಳುತ್ತೇನೆ. ಆದರೆ ಇದರಲ್ಲಿ ಪರಿಶ್ರಮವಿದೆ. ನಾವು ಅವಶ್ಯವಾಗಿ
ಪಾವನರಾಗಬೇಕಾಗಿದೆ. ಪರಿಶ್ರಮವನ್ನೂ ಪಡಬೇಕಾಗಿದೆ, ಅನ್ಯರಿಗೂ ಮಾರ್ಗವನ್ನು ತಿಳಿಸಬೇಕಾಗಿದೆ.
ಪದಕವು ಬಹಳ ಒಳ್ಳೆಯ ವಸ್ತುವಾಗಿದೆ. ಮಾರ್ಗದ ಮಧ್ಯದಲ್ಲಿ ಪರಸ್ಪರ ಮಾತನಾಡುತ್ತಿದ್ದರೂ ಸಹ ಅನೇಕರು
ಬಂದು ಕೇಳುತ್ತಾರೆ, ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ, ಕೇವಲ ಈ ಸಂದೇಶವು
ಸಿಕ್ಕಿಬಿಟ್ಟರೂ ಸಹ ನಾವು ನಮ್ಮ ಜವಾಬ್ದಾರಿಯನ್ನು ಇಳಿಸಿಕೊಂಡೆವು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ವ್ಯಾಪಾರ-ವ್ಯವಹಾರಗಳಿಂದ ಬಿಡುವು ಸಿಕ್ಕಿದಾಗ ನೆನಪಿನಲ್ಲಿರುವ ವ್ರತವನ್ನು ಕೈಗೊಳ್ಳಬೇಕಾಗಿದೆ.
ಮಾಯೆಯ ಮೇಲೆ ವಿಜಯಪ್ರಾಪ್ತಿ ಮಾಡಿಕೊಳ್ಳಲು ನೆನಪಿನ ಪರಿಶ್ರಮಪಡಬೇಕಾಗಿದೆ.
2. ಬಹಳ ನಮ್ರತೆ ಮತ್ತು
ಪ್ರೇಮಭಾವದಿಂದ ಮುಗುಳ್ನಗುತ್ತಾ ಮಿತ್ರಸಂಬಂಧಿಗಳ ಸೇವೆ ಮಾಡಬೇಕಾಗಿದೆ. ಅವರಲ್ಲಿ ಬುದ್ಧಿಯನ್ನು
ಅಲೆದಾಡಿಸಬಾರದು. ಪ್ರೀತಿಯಿಂದ ತಂದೆಯ ಪರಿಚಯ ಕೊಡಬೇಕಾಗಿದೆ.
ವರದಾನ:
ನಡೆಯುತ್ತಾ-ತಿರುಗಾಡುತ್ತಾ ಫರಿಸ್ತೆ ಸ್ವರೂಪದ ಸಾಕ್ಷಾತ್ಕಾರ ಮಾಡಿಸುವಂತಹವರೇ
ಸಾಕ್ಷಾತ್ಕಾರಮೂರ್ತ ಭವ
ಹೇಗೆ ಆರಂಭದಲ್ಲಿ
ನಡೆಯುತ್ತಾ ತಿರುಗಾಡುತ್ತಾ ಬ್ರಹ್ಮಾ ಮರೆಯಾಗಿ ಶ್ರೀಕೃಷ್ಣ ಕಾಣಿಸುತ್ತಿದ್ದರು, ಈ ಸಾಕ್ಷಾತ್ಕಾರವು
ಎಲ್ಲವನ್ನೂ ಬಿಡಿಸಿಬಿಟ್ಟಿತು. ಇಂತಹ ಸಾಕ್ಷಾತ್ಕಾರದ ಮೂಲಕ ಈಗಲೂ ಸೇವೆಯಾಗಲಿ. ಯಾವಾಗ
ಸಾಕ್ಷಾತ್ಕಾರದಿಂದ ಪ್ರಾಪ್ತಿಯಾಗುವುದು ಆಗ ಆಗದೇ ಇರಲು ಸಾಧ್ಯವಿಲ್ಲ ಅದಕ್ಕೆ ನಡೆಯುತ್ತಾ
ತಿರುಗಾಡುತ್ತಾ ಫರಿಸ್ತೆ ಸ್ವರೂಪದ ಸಾಕ್ಷಾತ್ಕಾರ ಮಾಡಿಸಿ. ಭಾಷಣ ಮಾಡುವವರು ಬಹಳ ಇದ್ದಾರೆ ಆದರೆ
ನೀವು ಅನುಭವ ಮಾಡಿಸುವವರಾದಿ - ಆಗ ತಿಳಿದುಕೊಳ್ಳಿ ಇದು ಅಲ್ಲಾಹನ ಜನರಾಗಿದ್ದಾರೆ.
ಸ್ಲೋಗನ್:
ಸದಾ ಆತ್ಮಿಕ
ಮೋಜಿನ ಅನುಭವ ಮಾಡುತ್ತೀರಿ ಆಗ ಎಂದೂ ತಬ್ಬಿಬರಾಗುವುದಿಲ್ಲ.
ತಮ್ಮ ಶಕ್ತಿಶಾಲಿ ಮನಸ್ಸಾ
ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ
ಈಗ ತಮ್ಮ ಹೃದಯದ ಶುಭ
ಭಾವನೆಗಳ ಅನ್ಯ ಆತ್ಮಗಳವರೆಗೆ ತಲುಪಿಸಿ. ಸೈಲೆನ್ಸ್ನ ಶಕ್ತಿಯನ್ನು ಪ್ರತ್ಯಕ್ಷ ಮಾಡಿ.
ಪ್ರತಿಯೊಬ್ಬ ಬ್ರಾಹ್ಮಣ ಮಕ್ಕಳಲ್ಲಿ ಈ ಶಾಂತಿಯ ಶಕ್ತಿಯಿದೆ. ಕೇವಲ ಈ ಶಕ್ತಿಯನ್ನು ಮನಸ್ಸಿನಿಂದ,
ತನುವಿನಿಂದ ಇಮರ್ಜ ಮಾಡಿ. ಒಂದು ಸೆಕೆಂಡಿನಲ್ಲಿ ಮನಸ್ಸಿನ ಸಂಕಲ್ಪಗಳನ್ನು ಏಕಾಗ್ರ ಮಾಡಿಕೊಂಡು
ವಾಯುಮಂಡಲದಲ್ಲಿ ಸೈಲೆನ್ಸ್ನ ಶಕ್ತಿಯ ಪ್ರಕಂಪನ ಸ್ವತಃ ಹರಡಿಸುತ್ತೀರಿ.