06.02.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಹಳೆಯ ಪ್ರಪಂಚದ ಮುಳ್ಳುಗಳನ್ನು ಹೊಸಪ್ರಪಂಚದ ಹೂಗಳನ್ನಾಗಿ ಮಾಡಬೇಕು – ಇದು ನೀವು ಬುದ್ಧಿವಂತ ಮಾಲಿಗಳ ಕೆಲಸವಾಗಿದೆ”

ಪ್ರಶ್ನೆ:
ಸಂಗಮಯುಗದಲ್ಲಿ ನೀವು ಮಕ್ಕಳು ಯಾವ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳುತ್ತೀರಿ?

ಉತ್ತರ:
ಮುಳ್ಳುಗಳಿಂದ ಸುಗಂಧಭರಿತ ಹೂಗಳಾಗುವುದು ಎಲ್ಲದಕ್ಕಿಂತ ಶ್ರೇಷ್ಠ ಅದೃಷ್ಟವಾಗಿದೆ. ಒಂದುವೇಳೆ ಯಾವುದಾದರೂ ವಿಕಾರವಿದ್ದರೆ ಮುಳ್ಳಾಗಿದ್ದಾರೆಂದರ್ಥ. ಯಾವಾಗ ಮುಳ್ಳಿನಿಂದ ಹೂವಾಗುವಿರೋ ಆಗಲೇ ಸತೋಪ್ರಧಾನ ದೇವಿ-ದೇವತೆಗಳಾಗುವಿರಿ. ನೀವು ಮಕ್ಕಳೀಗ 21 ಪೀಳಿಗೆಗಾಗಿ ಸೂರ್ಯವಂಶಿ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ.

ಗೀತೆ:
ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆ...............

ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದ್ದೀರಿ. ಇದಂತೂ ಸಾಮಾನ್ಯ ಗೀತೆಯಾಗಿದೆ ಏಕೆಂದರೆ ನೀವು ಮಾಲಿಗಳು, ತಂದೆಯು ಮಾಲೀಕನಾಗಿದ್ದಾರೆ. ಈಗ ಮಾಲಿಗಳು ಮುಳ್ಳುಗಳಿಂದ ಹೂಗಳನ್ನಾಗಿ ಮಾಡಬೇಕಾಗಿದೆ. ಈ ಶಬ್ಧವು ಬಹಳ ಸ್ಪಷ್ಟವಾಗಿದೆ. ಭಕ್ತರು ಭಗವಂತನ ಬಳಿ ಬಂದಿದ್ದೀರಿ. ಇವರೆಲ್ಲರೂ ಭಕ್ತಿನಿಯರಾಗಿದ್ದಾರಲ್ಲವೆ. ಈಗ ಜ್ಞಾನದ ವಿದ್ಯೆಯನ್ನು ಓದಲು ತಂದೆಯ ಬಳಿ ಬಂದಿದ್ದೀರಿ, ಈ ರಾಜಯೋಗದ ವಿದ್ಯೆಯಿಂದಲೇ ಹೊಸಪ್ರಪಂಚದ ಮಾಲೀಕರಾಗುತ್ತೀರಿ. ಆದ್ದರಿಂದ ನಾವು ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇವೆ, ಹೊಸ ಪ್ರಪಂಚವನ್ನು ಹೃದಯದಲ್ಲಿ ಶೃಂಗರಿಸಿಕೊಂಡು ಬಂದಿದ್ದೇವೆಂದು ಭಕ್ತಿನಿಯರು ಹೇಳುತ್ತಾರೆ. ತಂದೆಯೂ ಸಹ ಪ್ರತಿನಿತ್ಯವೂ ತಿಳಿಸುತ್ತಾರೆ - ಮಧುರಮನೆ ಮತ್ತು ಮಧುರರಾಜಧಾನಿಯನ್ನು ನೆನಪು ಮಾಡಬೇಕಾಗಿದೆ. ಪ್ರತಿಯೊಂದು ಸೇವಾಕೇಂದ್ರಗಳಲ್ಲಿ ಮುಳ್ಳುಗಳಿಂದ ಹೂಗಳಾಗುತ್ತಿದ್ದಾರೆ. ಹೂಗಳಲ್ಲಿಯೂ ನಂಬರ್ವಾರ್ ಇರುತ್ತದೆಯಲ್ಲವೆ. ಶಿವನ ಮೇಲೆ ಹೂಗಳನ್ನು ಹಾಕುತ್ತಾರೆ. ಕೆಲಕೆಲವರು ಕೆಲವೊಂದು ರೀತಿಯ ಹೂಗಳನ್ನಿಡುತ್ತಾರೆ. ಗುಲಾಬಿ ಹೂ ಮತ್ತು ಎಕ್ಕದ ಹೂವಿನಲ್ಲಿ ರಾತ್ರಿ-ಹಗಲಿನ ಅಂತರವಿದೆ. ಇದೂ ಸಹ ಹೂದೋಟವಾಗಿದೆ. ಕೆಲವರು ಸಂಪಿಗೆಹೂಗಳೂ ಇದ್ದಾರೆ, ಮಲ್ಲಿಗೆ ಹೂಗಳಂತಹವರೂ ಇದ್ದಾರೆ, ಇನ್ನೂ ಕೆಲವರು ಎಕ್ಕದ ಹೂವಿನಂತಹವರೂ ಇದ್ದಾರೆ. ಮಕ್ಕಳಿಗೆ ಗೊತ್ತಿದೆ, ಈ ಸಮಯದಲ್ಲಿ ಎಲ್ಲರೂ ಮುಳ್ಳುಗಳಾಗಿದ್ದಾರೆ, ಈ ಪ್ರಪಂಚವೇ ಮುಳ್ಳುಗಳ ಕಾಡಾಗಿದೆ, ಇದನ್ನು ಹೊಸಪ್ರಪಂಚದ ಹೂವನ್ನಾಗಿ ಮಾಡಬೇಕಾಗಿದೆ. ಈ ಹಳೆಯ ಪ್ರಪಂಚದಲ್ಲಿ ಮುಳ್ಳುಗಳಿವೆ ಆದ್ದರಿಂದ ಗೀತೆಯಲ್ಲಿಯೂ ಹೇಳುತ್ತಾರೆ, ಹಳೆಯ ಪ್ರಪಂಚದ ಮುಳ್ಳುಗಳಿಂದ ಹೊಸಪ್ರಪಂಚದ ಹೂಗಳಾಗಲು ನಾವು ತಂದೆಯ ಬಳಿ ಬಂದಿದ್ದೇವೆ. ಆ ಹೊಸಪ್ರಪಂಚವನ್ನು ತಂದೆಯು ಸ್ಥಾಪನೆ ಮಾಡುತ್ತಿದ್ದಾರೆ. ಮುಳ್ಳುಗಳಿಂದ ಹೂಗಳು ಅರ್ಥಾತ್ ದೇವಿ-ದೇವತೆಗಳಾಗಬೇಕಾಗಿದೆ. ಗೀತೆಯ ಅರ್ಥವು ಬಹಳ ಸಹಜವಾಗಿದೆ. ನಾವು ಅದೃಷ್ಟವನ್ನು ಹೊಸ ಪ್ರಪಂಚಕ್ಕಾಗಿ ಬೆಳಗಿಸಿಕೊಳ್ಳಲು ಬಂದಿದ್ದೇವೆ. ಹೊಸ ಪ್ರಪಂಚವು ಸತ್ಯಯುಗವಾಗಿದೆ. ಕೆಲವರದು ಸತೋಪ್ರಧಾನ ಅದೃಷ್ಟವಾಗಿದೆ, ಕೆಲವರದು ರಜೋ, ಕೆಲವರದು ತಮೋ ಆಗಿದೆ. ಕೆಲವರು ಸೂರ್ಯವಂಶಿ ರಾಜರಾಗುತ್ತಾರೆ, ಕೆಲವರು ಪ್ರಜೆಗಳಾಗುತ್ತಾರೆ. ಇನ್ನೂ ಕೆಲವರು ಹೋಗಿ ಪ್ರಜೆಗಳಿಗೂ ನೌಕರರಾಗುತ್ತಾರೆ. ಈ ಹೊಸ ಪ್ರಪಂಚದ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಶಾಲೆಯಲ್ಲಿ ಅದೃಷ್ಟವನ್ನು ರೂಪಿಸಿಕೊಳ್ಳಲು ಹೋಗುತ್ತಾರಲ್ಲವೆ. ಇಲ್ಲಂತೂ ಹೊಸ ಪ್ರಪಂಚದ ಮಾತಾಗಿದೆ. ಈ ಹಳೆಯ ಪ್ರಪಂಚದಲ್ಲಿ ಯಾವ ಅದೃಷ್ಟವನ್ನು ರೂಪಿಸಿಕೊಳ್ಳುತ್ತೀರಿ! ನೀವು ಭವಿಷ್ಯ ಹೊಸಪ್ರಪಂಚದಲ್ಲಿ ದೇವತೆಗಳಾಗುವ ಅದೃಷ್ಟವನ್ನು ರೂಪಿಸಿಕೊಳ್ಳುತ್ತಿದ್ದೀರಿ, ಯಾವ ದೇವತೆಗಳನ್ನು ಎಲ್ಲರೂ ನಮಸ್ಕಾರ ಮಾಡುತ್ತಾ ಬಂದಿದ್ದಾರೆ. ನಾವೇ ದೇವತಾ ಪೂಜ್ಯರಾಗಿದ್ದೆವು ಮತ್ತೆ ನಾವೇ ಪೂಜಾರಿಯಾಗಿದ್ದೇವೆ. 21 ಜನ್ಮಗಳ ಆಸ್ತಿಯು ತಂದೆಯಿಂದ ಸಿಗುತ್ತದೆ, ಯಾವುದಕ್ಕೆ 21 ಪೀಳಿಗೆಗಳೆಂದು ಹೇಳಲಾಗುತ್ತದೆ. ವೃದ್ಧಾವಸ್ಥೆಯವರೆಗೆ ಪೀಳಿಗೆ ಎಂದು ಹೇಳಲಾಗುತ್ತದೆ, ತಂದೆಯು 21 ಜನ್ಮಗಳ ಆಸ್ತಿಯನ್ನು ಕೊಡುತ್ತಾರೆ ಏಕೆಂದರೆ ಯುವಾವಸ್ಥೆ ಹಾಗೂ ಬಾಲ್ಯದಲ್ಲಿ, ಮಧ್ಯದಲ್ಲಿ ಅಕಾಲಮೃತ್ಯುವೆಂದೂ ಬರುವುದಿಲ್ಲ ಆದ್ದರಿಂದ ಅದಕ್ಕೆ ಅಮರಲೋಕವೆಂದು ಹೇಳಲಾಗುತ್ತದೆ. ಇದು ಮೃತ್ಯುಲೋಕ, ರಾವಣರಾಜ್ಯವಾಗಿದೆ. ಇಲ್ಲಿ ಎಲ್ಲರಲ್ಲಿಯೂ ವಿಕಾರದ ಪ್ರವೇಶತೆಯಾಗಿದೆ. ಒಂದು ವಿಕಾರವಿದ್ದರೂ ಸಹ ಮುಳ್ಳಾದರಲ್ಲವೆ. ಈ ಮಾಲಿಗಳು ಸುಗಂಧಭರಿತ ಹೂಗಳನ್ನಾಗಿ ಮಾಡುವುದನ್ನು ತಿಳಿದುಕೊಂಡಿಲ್ಲ, ಮಾಲಿಯು ಚೆನ್ನಾಗಿದ್ದರೆ ಒಳ್ಳೊಳ್ಳೆಯ ಹೂಗಳನ್ನು ತಯಾರು ಮಾಡುತ್ತಾರೆಂದು ತಂದೆಯು ತಿಳಿಯುತ್ತಾರೆ. ವಿಜಯಮಾಲೆಯಲ್ಲಿ ಪೆÇೀಣಿಸಲ್ಪಡುವಂತಹ ಹೂಗಳಾಗಬೇಕು. ದೇವತೆಗಳ ಮುಂದೆ ಒಳ್ಳೊಳ್ಳೆಯ ಹೂಗಳನ್ನು ತೆಗೆದುಕೊಂಡು ಹೋಗುತ್ತಾರಲ್ಲವೆ. ತಿಳಿದುಕೊಳ್ಳಿ, ಎಲಿಜಬೆತ್ ರಾಣಿಯು ಬರುತ್ತಾರೆಂದರೆ ಆಗ ಒಮ್ಮೆಲೆ ಬಹಳ ಸುಂದರವಾದ ಮಾಲೆಯನ್ನು ಮಾಡಿ ತೆಗೆದುಕೊಂಡು ಹೋಗುತ್ತಾರೆ. ಇಲ್ಲಿಯ ಮನುಷ್ಯರಂತೂ ತಮೋಪ್ರಧಾನರಾಗಿದ್ದಾರೆ. ಶಿವನ ಮಂದಿರಕ್ಕೂ ಹೋಗುತ್ತಾರೆ, ಇವರು ಭಗವಂತನೆಂದೂ ತಿಳಿಯುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರನಿಗೆ ದೇವತೆಗಳೆಂದು ಹೇಳುತ್ತಾರೆ, ಶಿವನಿಗೆ ಭಗವಂತನೆಂದು ಹೇಳುತ್ತಾರೆ ಅಂದಮೇಲೆ ಅವರು ಸರ್ವಶ್ರೇಷ್ಠನಾದರಲ್ಲವೆ! ಶಿವನು ದತ್ತೂರಿಯನ್ನು ತಿನ್ನುತ್ತಿದ್ದರು, ಭಂಗೀಸೇದುತ್ತಿದ್ದರು ಎಂದು ಹೇಳುತ್ತಾರೆ. ಎಷ್ಟೊಂದು ನಿಂದನೆ ಮಾಡಿದ್ದಾರೆ. ಎಕ್ಕದ ಹೂಗಳನ್ನೇ ತೆಗೆದುಕೊಂಡು ಹೋಗುತ್ತಾರೆ. ಇಂತಹ ಪರಮಪಿತ ಪರಮಾತ್ಮ ,ಅವರ ಬಳಿ ಏನನ್ನು ತೆಗೆದುಕೊಂಡು ಹೋಗುತ್ತಾರೆ! ತಮೋಪ್ರಧಾನ ಮುಳ್ಳುಗಳ ಬಳಿ ಬಹಳ ಸುಂದರವಾದ ಹೂಗಳನ್ನು ತೆಗೆದುಕೊಂಡು ಹೋಗುತ್ತಾರೆ ಮತ್ತು ಶಿವನ ಮಂದಿರಕ್ಕೆ ಏನನ್ನು ತೆಗೆದುಕೊಂಡು ಹೋಗುತ್ತಾರೆ! ಹಾಲನ್ನೂ ಸಹ ಹೇಗೆ ಎರೆಯುತ್ತಾರೆ? 5% ಹಾಲು, ಉಳಿದ 95% ನೀರು. ಭಗವಂತನಿಗೆ ಹೇಗೆ ಹಾಲನ್ನೆರೆಯಬೇಕು ಎಂಬುದೇನನ್ನೂ ತಿಳಿದುಕೊಂಡಿಲ್ಲ. ಈಗ ನೀವು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ. ಯಾರು ಬಹಳ ಚೆನ್ನಾಗಿ ತಿಳಿದುಕೊಂಡಿದ್ದಾರೆಯೋ ಅವರನ್ನು ಸೇವಾಕೇಂದ್ರದ ಮುಖ್ಯಸ್ಥರನ್ನಾಗಿ ಮಾಡಲಾಗುತ್ತದೆ. ಎಲ್ಲರೂ ಒಂದೇರೀತಿ ಇರುವುದಿಲ್ಲ, ಭಲೆ ವಿದ್ಯೆಯು ಒಂದೇ ಆಗಿದೆ. ಮನುಷ್ಯರಿಂದ ದೇವತೆಗಳಾಗುವುದೇ ಗುರಿ-ಉದ್ದೇಶವಾಗಿದೆ ಆದರೆ ಶಿಕ್ಷಕರಂತೂ ನಂಬರ್ವಾರ್ ಇದ್ದಾರಲ್ಲವೆ. ವಿಜಯಮಾಲೆಯಲ್ಲಿ ಬರುವ ಮುಖ್ಯ ಆಧಾರ ವಿದ್ಯೆಯಾಗಿದೆ. ವಿದ್ಯೆಯು ಒಂದೇ ಆಗಿರುತ್ತದೆ, ಅದರಲ್ಲಿ ತೇರ್ಗಡೆಯ ಅಂಕಗಳಂತೂ ಇರುತ್ತವೆಯಲ್ಲವೆ. ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ಕೆಲವಂತೂ ವಿಜಯಮಾಲೆಯ 8 ಮಣಿಗಳಲ್ಲಿ ಬರುತ್ತಾರೆ, ಕೆಲವರು 108ರಲ್ಲಿ, ಕೆಲವರು 16,108ರಲ್ಲಿ ಬರುತ್ತಾರೆ. ಹೇಗೆ ಮನೆತನಗಳನ್ನಾಗಿ ಮಾಡುತ್ತಾರಲ್ಲವೆ, ವೃಕ್ಷದಲ್ಲಿಯೂ ಸಹ ಕವಲುಗಳೊಡೆಯುತ್ತವೆ. ಮೊಟ್ಟಮೊದಲಿಗೆ ಒಂದು ಎಲೆ, ಎರಡೆಲೆ - ಹೀಗೆ ವೃದ್ಧಿಯಾಗುತ್ತಾ ಹೋಗುತ್ತವೆ. ಇದು ಸಹ ವೃಕ್ಷವಾಗಿದೆ. ಇದರಲ್ಲಿ ಬಹಳಷ್ಟು ಮನೆತನಗಳಿರುತ್ತವೆ. ಹೇಗೆ ಕೃಪಲಾನಿ ಮನೆತನ ಇತ್ಯಾದಿ, ಇತ್ಯಾದಿ., ಆದರೆ ಅವೆಲ್ಲವೂ ಹದ್ದಿನ ಮನೆತನಗಳಾಗಿವೆ, ಇದು ಬೇಹದ್ದಿನ ಮನೆತನವಾಗಿದೆ. ಇದರ ಮೂಲ ಯಾರು? ಪ್ರಜಾಪಿತ ಬ್ರಹ್ಮಾ.ಅವರಿಗೆ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳುತ್ತಾರೆ ಆದರೆ ಇದು ಯಾರಿಗೂ ತಿಳಿದಿಲ್ಲ. ಮನುಷ್ಯರು ಸೃಷ್ಟಿಯ ರಚಯಿತ ಯಾರೆಂಬುದನ್ನು ತಿಳಿದುಕೊಂಡಿಲ್ಲ, ಸಂಪೂರ್ಣ ಅಹಲ್ಯೆಯ ತರಹ ಕಲ್ಲುಬುದ್ಧಿಯವರಾಗಿದ್ದಾರೆ. ಯಾವಾಗ ಈ ರೀತಿಯಾಗಿಬಿಡುವರೋ ಆಗಲೇ ತಂದೆಯು ಬರುತ್ತಾರೆ.

ನೀವಿಲ್ಲಿ ಅಹಲ್ಯೆ (ಕಲ್ಲು) ಬುದ್ಧಿಯವರಿಂದ ಪಾರಸಬುದ್ಧಿಯವರಾಗಲು ಬಂದಿದ್ದೀರಿ ಅಂದಮೇಲೆ ಜ್ಞಾನವನ್ನೂ ಧಾರಣೆ ಮಾಡಬೇಕಲ್ಲವೆ. ತಂದೆಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ವಿದ್ಯಾಭ್ಯಾಸದ ಬಗ್ಗೆ ಆಲೋಚಿಸಬೇಕು. ತಿಳಿದುಕೊಳ್ಳಿ - ಇಂದು ಬಂದಿದ್ದೀರಿ, ನಾಳೆ ಆಕಸ್ಮಿಕವಾಗಿ ಶರೀರಬಿಟ್ಟರೆ ಏನು ಪದವಿಯನ್ನು ಪಡೆಯುತ್ತೀರಿ! ಜ್ಞಾನವನ್ನಂತೂ ಸ್ವಲ್ಪವೂ ತಿಳಿದುಕೊಳ್ಳಲಿಲ್ಲ, ಏನನ್ನೂ ಕಲಿಯಲಿಲ್ಲ ಅಂದಮೇಲೆ ಯಾವ ಪದವಿ ಪಡೆಯುತ್ತೀರಿ? ದಿನ-ಪ್ರತಿದಿನ ಯಾರು ತಡವಾಗಿ ಶರೀರ ಬಿಡುತ್ತಾರೆಯೋ ಅವರಿಗೆ ಸಮಯವಂತೂ ಸ್ವಲ್ಪ ಸಿಗುತ್ತದೆ ಏಕೆಂದರೆ ಸಮಯವು ಕಡಿಮೆಯಾಗುತ್ತಾ ಹೋಗುತ್ತದೆ. ಅದರಲ್ಲಿ ಮತ್ತೆ ಜನ್ಮ ತೆಗೆದುಕೊಂಡು ಏನು ಮಾಡಲು ಸಾಧ್ಯ. ಹಾ! ನಿಮ್ಮಲ್ಲಿ ಯಾರು ಶರೀರಬಿಡುತ್ತಾರೆಯೋ ಅವರು ಒಳ್ಳೆಯ ಮನೆಯಲ್ಲಿ ಹೋಗಿ ಜನ್ಮಪಡೆಯುತ್ತಾರೆ. ಸಂಸ್ಕಾರವನ್ನು ತೆಗೆದುಕೊಂಡು ಹೋಗುವುದರಿಂದ ಆ ಆತ್ಮವು ಬಹಳ ಬೇಗನೆ ಜಾಗೃತವಾಗುವುದು, ಶಿವತಂದೆಯನ್ನು ನೆನಪು ಮಾಡಲು ತೊಡಗುವುದು. ಸಂಸ್ಕಾರವು ಇಲ್ಲವೆಂದರೆ ಏನೂ ಆಗುವುದಿಲ್ಲ. ಇದನ್ನು ಬಹಳ ಆಳವಾಗಿ ಅರಿತುಕೊಳ್ಳಬೇಕಾಗುತ್ತದೆ. ಮಾಲಿಯು ಒಳ್ಳೊಳ್ಳೆಯ ಹೂಗಳನ್ನು ತೆಗೆದುಕೊಂಡು ಬರುತ್ತಾರೆಂದರೆ ಅವರ ಮಹಿಮೆಯನ್ನೂ ಮಾಡಲಾಗುತ್ತದೆ. ಹೂಗಳನ್ನಾಗಿ ಮಾಡುವುದು ಮಾಲಿಯ ಕರ್ತವ್ಯವಲ್ಲವೆ. ಹೀಗೆ ಅನೇಕ ಮಕ್ಕಳಿದ್ದಾರೆ, ಯಾರಿಗೆ ತಂದೆಯನ್ನು ನೆನಪು ಮಾಡುವುದು ಬರುವುದೇ ಇಲ್ಲ. ಎಲ್ಲವೂ ಅದೃಷ್ಟದ ಮೇಲಿದೆಯಲ್ಲವೆ. ಅದೃಷ್ಟದಲ್ಲಿಲ್ಲವೆಂದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಅದೃಷ್ಟವಂತ ಮಕ್ಕಳು ತಂದೆಯನ್ನು ಯಥಾರ್ಥ ರೀತಿಯಿಂದ ಅರಿತುಕೊಂಡು ಅವರನ್ನು ಪೂರ್ಣರೀತಿಯಲ್ಲಿ ನೆನಪು ಮಾಡುತ್ತಾರೆ. ತಂದೆಯ ಜೊತೆಜೊತೆಗೆ ಹೊಸಪ್ರಪಂಚವನ್ನು ನೆನಪು ಮಾಡುತ್ತಿರುತ್ತಾರೆ. ನಾವು ಹೊಸ ಪ್ರಪಂಚಕ್ಕಾಗಿ ಹೊಸ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೇವೆಂದು ಗೀತೆಯಲ್ಲಿಯೂ ಹೇಳುತ್ತಾರಲ್ಲವೆ. 21 ಜನ್ಮಗಳಿಗಾಗಿ ತಂದೆಯಿಂದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ನಶೆ ಮತ್ತು ಖುಷಿಯಲ್ಲಿದ್ದಾಗ ಇಂತಹ ಗೀತೆಗಳ ಅರ್ಥವನ್ನು ಸನ್ನೆಯಿಂದಲೇ ಅರಿತುಕೊಳ್ಳುವಿರಿ. ಶಾಲೆಯಲ್ಲಿಯೂ ಸಹ ಯಾರ ಅದೃಷ್ಟದಲ್ಲಾದರೂ ಇಲ್ಲವೆಂದರೆ ಅವರು ಅನುತ್ತೀರ್ಣರಾಗಿಬಿಡುತ್ತಾರೆ. ಇದಂತೂ ಬಹಳ ದೊಡ್ಡಪರೀಕ್ಷೆಯಾಗಿದೆ, ಸ್ವಯಂ ಭಗವಂತನೇ ಕುಳಿತು ಓದಿಸುತ್ತಾರೆ. ಈ ಜ್ಞಾನವು ಎಲ್ಲಾ ಧರ್ಮದವರಿಗಾಗಿ ಇದೆ. ತಂದೆಯು ತಿಳಿಸುತ್ತಾರೆ - ತನ್ನನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. ನಿಮಗೆ ತಿಳಿದಿದೆ, ಯಾವುದೇ ದೇಹಧಾರಿ ಮನುಷ್ಯರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಬ್ರಹ್ಮಾ-ವಿಷ್ಣು-ಶಂಕರರಿಗೂ ಸಹ ಭಗವಂತನೆಂದು ಹೇಳುವುದಿಲ್ಲ, ಅವರೂ ಸಹ ಸೂಕ್ಷ್ಮವತನವಾಸಿ ದೇವತೆಗಳಾಗಿದ್ದಾರೆ. ಇಲ್ಲಿ ಮನುಷ್ಯರಿದ್ದಾರೆ, ದೇವತೆಗಳಿಲ್ಲ. ಇದು ಮನುಷ್ಯ ಲೋಕವಾಗಿದೆ. ಈ ಲಕ್ಷ್ಮೀ-ನಾರಾಯಣ ಮೊದಲಾದವರು ದೈವೀಗುಣವುಳ್ಳ ಮನುಷ್ಯರಾಗಿದ್ದಾರೆ, ಅದಕ್ಕೆ ದೇವತಾ ಧರ್ಮವೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಎಲ್ಲರೂ ದೇವಿ-ದೇವತೆಗಳಿರುತ್ತಾರೆ, ಸೂಕ್ಷ್ಮವತನದಲ್ಲಿ ಬ್ರಹ್ಮಾ-ವಿಷ್ಣು-ಶಂಕರರಿರುತ್ತಾರೆ. ಬ್ರಹ್ಮಾ ದೇವತಾಯ ನಮಃ, ವಿಷ್ಣು ದೇವತಾಯ ನಮಃ ಎಂದು ಹೇಳುತ್ತಾರೆ. ನಂತರ ಶಿವ ಪರಮಾತ್ಮಾಯನಮಃ ಎಂದು ಹೇಳುತ್ತಾರೆ. ಶಿವನಿಗೆ ದೇವತೆಯೆಂದು ಹೇಳುವುದಿಲ್ಲ ಮತ್ತು ಮನುಷ್ಯರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಮೂರು ಅಂತಸ್ತು (ಮಹಡಿ) ಗಳಿವೆಯಲ್ಲವೆ. ನಾವು ಮೂರನೆಯ ಅಂತಸ್ತಿನಲ್ಲಿದ್ದೇವೆ. ಸತ್ಯಯುಗದ ಯಾರು ದೈವೀ ಗುಣವಂತ ಮನುಷ್ಯರಿದ್ದಾರೆಯೋ ಅವರೇ ಮತ್ತೆ ಆಸುರೀ ಗುಣವಂತರಾಗಿಬಿಡುತ್ತಾರೆ. ಮಾಯೆಯ ಗ್ರಹಣವು ಹಿಡಿಯುವುದರಿಂದ ಕಪ್ಪಾಗಿಬಿಡುತ್ತಾರೆ. ಹೇಗೆ ಚಂದ್ರನಿಗೂ ಗ್ರಹಣವಿಡಿಯುತ್ತದೆಯಲ್ಲವೆ. ಅವು ಹದ್ದಿನ ಮಾತುಗಳಾಗಿವೆ, ಇದು ಬೇಹದ್ದಿನ ಮಾತಾಗಿದೆ. ಬೇಹದ್ದಿನ ದಿನ ಮತ್ತು ಬೇಹದ್ದಿನ ರಾತ್ರಿಯಾಗಿದೆ. ಬ್ರಹ್ಮನ ದಿನ ಮತ್ತು ರಾತ್ರಿಯೆಂದು ಹೇಳುತ್ತಾರೆ. ನೀವೂ ಸಹ ಈಗ ಒಬ್ಬ ತಂದೆಯಿಂದಲೇ ಓದಬೇಕಾಗಿದೆ ಮತ್ತೆಲ್ಲವನ್ನೂ ಮರೆತುಬಿಡಬೇಕಾಗಿದೆ. ತಂದೆಯ ಮೂಲಕ ಓದುವುದರಿಂದ ನೀವು ಹೊಸಪ್ರಪಂಚದ ಮಾಲೀಕರಾಗಿಬಿಡುತ್ತೀರಿ. ಇದು ಸತ್ಯ-ಸತ್ಯವಾದ ಗೀತಾಪಾಠಶಾಲೆಯಾಗಿದೆ. ಪಾಠಶಾಲೆಯಲ್ಲಿ ಯಾವಾಗಲೂ ಇರುವುದಿಲ್ಲ. ಭಕ್ತಿಮಾರ್ಗವು ಭಗವಂತನೊಂದಿಗೆ ಮಿಲನ ಮಾಡುವ ಮಾರ್ಗವಾಗಿದೆ. ಎಷ್ಟು ಹೆಚ್ಚಿನ ಭಕ್ತಿ ಮಾಡುವರೋ ಅಷ್ಟು ಭಗವಂತನು ಪ್ರಸನ್ನರಾಗುವರು ಮತ್ತು ಫಲವನ್ನು ಕೊಡುವರೆಂದು ಮನುಷ್ಯರು ತಿಳಿಯುತ್ತಾರೆ. ಇವೆಲ್ಲಾ ಮಾತುಗಳನ್ನು ನೀವೇ ಈಗ ತಿಳಿದುಕೊಂಡಿದ್ದೀರಿ. ಭಗವಂತನು ಒಬ್ಬರೇ ಆಗಿದ್ದಾರೆ. ಅವರು ಫಲವನ್ನು ಈಗಲೇ ಕೊಡುತ್ತಾರೆ. ಯಾರು ಮೊಟ್ಟಮೊದಲು ಸೂರ್ಯವಂಶಿ ಪೂಜ್ಯರಾಗಿದ್ದರು ಅವರೇ ಎಲ್ಲರಿಗಿಂತ ಹೆಚ್ಚಿನ ಭಕ್ತಿ ಮಾಡಿದ್ದಾರೆ. ಅವರೇ ಇಲ್ಲಿಗೆ ಬರುತ್ತಾರೆ. ನೀವೇ ಮೊಟ್ಟಮೊದಲು ಶಿವತಂದೆಯ ಅವ್ಯಭಿಚಾರಿ ಭಕ್ತಿಮಾಡಿದ್ದೀರಿ. ಆದ್ದರಿಂದ ಅವಶ್ಯವಾಗಿ ನೀವೇ ಮೊಟ್ಟಮೊದಲ ಭಕ್ತರಾಗಿದ್ದೀರಿ ನಂತರ ಕೆಳಗಿಳಿಯುತ್ತಾ-ಇಳಿಯುತ್ತಾ ತಮೋಪ್ರಧಾನರಾಗಿಬಿಡುತ್ತೀರಿ. ನೀವು ಅರ್ಧಕಲ್ಪ ಭಕ್ತಿ ಮಾಡಿದ್ದೀರಿ ಆದ್ದರಿಂದ ನಿಮಗೇ ಮೊದಲು ಜ್ಞಾನವನ್ನು ಕೊಡುತ್ತಾರೆ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ.

ನಾವು ದೂರ ಇದ್ದೇವೆ ಆದ್ದರಿಂದ ಪ್ರತಿನಿತ್ಯವೂ ಓದಲು ಆಗುವುದಿಲ್ಲವೆಂಬ ನೆಪವು ಈ ವಿದ್ಯೆಯಲ್ಲಿ ನಡೆಯುವುದಿಲ್ಲ. ನಾವು 10 ಮೈಲಿ ದೂರ ಇದ್ದೇವೆಂದು ಕೆಲವರು ಹೇಳುತ್ತಾರೆ. ಅರೆ! ತಂದೆಯ ನೆನಪಿನಲ್ಲಿ ನೀವು 10 ಮೈಲಿಗಳು ಕಾಲ್ನಡಿಗೆಯಲ್ಲಿ ಹೋದರೂ ಸಹ ಎಂದೂ ಸುಸ್ತಾಗುವುದಿಲ್ಲ. ಎಷ್ಟು ದೊಡ್ಡ ಖಜಾನೆಯನ್ನು ಪಡೆಯಲು ಹೋಗುತ್ತೀರಿ. ತೀರ್ಥಸ್ಥಳಗಳಲ್ಲಿ ಮನುಷ್ಯರು ದರ್ಶನ ಮಾಡುವುದಕ್ಕಾಗಿ ಕಾಲ್ನಡಿಗೆಯಲ್ಲಿಯೇ ಹೋಗುತ್ತಾರೆ, ಎಷ್ಟೊಂದು ಪರಿಶ್ರಮ ಪಡುತ್ತಾರೆ. ಇದಂತೂ ಒಂದೇ ನಗರದ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಓದಿಸಲು ಎಷ್ಟೊಂದು ದೂರದಿಂದ ಬಂದಿದ್ದೇನೆ. ಆದರೆ ನೀವು ನಮ್ಮ ಮನೆಯು 5 ಮೈಲಿ ದೂರದಲ್ಲಿದೆಯೆಂದು ಹೇಳುತ್ತೀರಿ. ಖಜಾನೆಯನ್ನು ಪಡೆದುಕೊಳ್ಳಲು ಓಡೋಡಿ ಬರಬೇಕು, ಅಮರನಾಥದಲ್ಲಿ ಕೇವಲ ದರ್ಶನ ಮಾಡುವುದಕ್ಕಾಗಿ ಎಲ್ಲೆಲ್ಲಿಂದಲೋ ಹೋಗುತ್ತಾರೆ. ಇಲ್ಲಂತೂ ಸ್ವಯಂ ಅಮರನಾಥ ತಂದೆಯೇ ಓದಿಸುತ್ತಾರೆ, ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ, ನೀವು ನೋಡಿದರೆ ನೆಪ ಹೇಳುತ್ತೀರಿ. ಅಮೃತವೇಳೆಯ ಸಮಯದಲ್ಲಿ ಯಾರು ಬೇಕಾದರೂ ಬರಬಹುದು, ಆ ಸಮಯದಲ್ಲಿ ಯಾವುದೇ ಭಯವಿಲ್ಲ. ಯಾರೂ ನಿಮ್ಮನ್ನು ಲೂಟಿ ಮಾಡುವುದಿಲ್ಲ. ಒಂದುವೇಳೆ ಯಾವುದೇ ಆಭರಣಗಳಿದ್ದರೆ ಕಸಿದುಕೊಳ್ಳುತ್ತಾರೆ, ಕಳ್ಳರಿಗೆ ಬೇಕಾಗಿರುವುದೇ ಹಣ-ವಸ್ತು ಇತ್ಯಾದಿ ಆದರೆ ಯಾರ ಅದೃಷ್ಟದಲ್ಲಿಲ್ಲವೋ ಅವರು ಬಹಳ ನೆಪಗಳನ್ನು ಹೇಳುತ್ತಿರುತ್ತಾರೆ. ಓದದೇ ಇದ್ದರೆ ತಮ್ಮ ಪದವಿಯನ್ನು ಕಳೆದುಕೊಳ್ಳುತ್ತಾರೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸುತ್ತಾರೆ ಆದರೆ ಪುರುಷಾರ್ಥವನ್ನು ಮಾಡಬೇಕಲ್ಲವೆ. ಹೆಜ್ಜೆಯನ್ನಿಡಲಿಲ್ಲವೆಂದರೆ ಗುರಿಯನ್ನು ತಲುಪಲು ಹೇಗೆ ಸಾಧ್ಯ!

ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇದು ಆತ್ಮಗಳು ಮತ್ತು ಪರಮಾತ್ಮನ ಮೇಳವಾಗಿದೆ. ತಂದೆಯ ಬಳಿ ಸ್ವರ್ಗದ ಆಸ್ತಿಯನ್ನು ಪಡೆಯಲು ಬಂದಿದ್ದೇವೆ, ಹೊಸಪ್ರಪಂಚದ ಸ್ಥಾಪನೆಯಾಗುತ್ತಿದೆ. ಸ್ಥಾಪನಾಕಾರ್ಯವು ಪೂರ್ಣವಾಯಿತೆಂದರೆ ವಿನಾಶವು ಆರಂಭವಾಗಿಬಿಡುವುದು. ಇದು ಅದೇ ಮಹಾಭಾರತದ ಯುದ್ಧವಾಗಿದೆಯಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯು ಯಾವ ಜ್ಞಾನದ ಖಜಾನೆಯನ್ನು ಕೊಡುತ್ತಿದ್ದಾರೆ ಅದನ್ನು ತೆಗೆದುಕೊಳ್ಳಲು ಓಡೋಡಿ ಬರಬೇಕು. ಇದರಲ್ಲಿ ಯಾವುದೇ ಪ್ರಕಾರದ ನೆಪವನ್ನು ಹೇಳಬಾರದು. ತಂದೆಯ ನೆನಪಿನಲ್ಲಿ 10 ಮೈಲುಗಳು ಕಾಲ್ನಡಿಗೆಯಲ್ಲಿ ಹೋದರೂ ಸಹ ಸುಸ್ತಾಗುವುದಿಲ್ಲ.

2. ವಿಜಯಮಾಲೆಯಲ್ಲಿ ಬರುವ ಆಧಾರವು ವಿದ್ಯೆಯಾಗಿದೆ. ವಿದ್ಯಾಭ್ಯಾಸದ ಮೇಲೆ ಪೂರ್ಣಗಮನ ಕೊಡಬೇಕಾಗಿದೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಮಧುರಮನೆ ಮತ್ತು ಮಧುರ ರಾಜಧಾನಿಯನ್ನು ನೆನಪು ಮಾಡಬೇಕು.

ವರದಾನ:
ಸಂಗಮಯುಗದ ಮಹತ್ವವನ್ನು ತಿಳಿದು ಒಂದಕ್ಕೆ ಲೆಕ್ಕವಿಲ್ಲದಷ್ಟು ಬಾರಿ ಪ್ರತಿಫಲ ಪ್ರಾಪ್ತಿ ಮಾಡಿಕೊಳ್ಳುವಂತಹ ಸರ್ವಪ್ರಾಪ್ತಿ ಸಂಪನ್ನ ಭವ

ಸಂಗಮಯುಗದಲ್ಲಿ ಬಾಬಾರವರ ವಾಯಿದೆ ಆಗಿದೆ-ಒಂದು ಕೊಡಿ ಲಕ್ಷತೆಗೆದುಕೊಳ್ಳಿ. ಹೇಗೆ ಸರ್ವ ಶ್ರೇಷ್ಠ ಸಮಯ, ಸರ್ವ ಶ್ರೇಷ್ಟ ಜನ್ಮ, ಸರ್ವ ಶ್ರೇಷ್ಟ ಟೈಟಲ್ ಈ ಸಮಯದ್ದಾಗಿದೆ ಹಾಗೇ ಸರ್ವ ಪ್ರಾಪ್ತಿಗಳ ಅನುಭವ ಈಗಲೇ ಆಗುತ್ತದೆ. ಈಗ ಒಂದಕ್ಕೆ ಕೇವಲ ಲಕ್ಷಗುಣ ಸಿಕ್ಕುವುದಲ್ಲ ಆದರೆ ಯಾವಾಗ ಬೇಕೊ ,ಹೇಗೆ ಬೇಕೊ, ಏನು ಬೇಕೊ ಕೊಡಲು ತಂದೆಯು ಸೇವಕನ ರೂಪದಲ್ಲಿ ಬಂಧಿತರಾಗಿದ್ದಾರೆ. ಒಂದಕ್ಕೆ ಲೆಕ್ಕವಿಲ್ಲದಷ್ಟು ಬಾರಿ ಪ್ರತಿಫಲ ಸಿಕ್ಕಿಬಿಡುತ್ತದೆ ಏಕೆಂದರೆ ವರ್ತಮಾನ ಸಮಯ ವರದಾತನೇ ನಿಮ್ಮವರಾಗಿದ್ದಾರೆ. ಯಾವಾಗ ಬೀಜ ನಿಮ್ಮ ಕೈಯಲ್ಲಿದೆ ಅಗ ಬೀಜದ ಮುಖಾಂತರ ಏನು ಬೇಕೊ ಅದನ್ನು ಸೆಕೆಂಡ್ನಲ್ಲಿ ತೆಗೆದುಕೊಂಡು ಸರ್ವಪ್ರಾಪ್ತಿಗಳಿಂದ ಸಂಪನ್ನರಾಗಿಬಿಡುವಿರಿ.

ಸ್ಲೋಗನ್:
ಎಂತಹದೇ ಪರಿಸ್ಥಿತಿಯಿರಲಿ, ಪರಿಸ್ಥಿತಿ ಮುಂದೆ ಹೋಗಿಬಿಡುತ್ತದೆ ಆದರೆ ಖುಷಿ ಹೋಗದಿರಲಿ.

ಅವ್ಯಕ್ತ ಸೂಚನೆ: ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ

ಕಾರ್ಯ ಮಾಡುವುದಕ್ಕೆ ಸಫಲತೆಗಾಗಿ “ಏಕತೆ ಮತ್ತು ಏಕಾಗ್ರತೆ” – ಇವೆರೆಡು ಶ್ರೇಷ್ಠ ಭುಜಗಳಾಗಿವೆ. ಏಕಾಗ್ರತೆ ಅರ್ಥಾತ್ ಸದಾ ನಿರ್ವ್ಯರ್ಥ ಸಂಕಲ್ಪ, ನಿರ್ವಿಕಲ್ಪ. ಎಲ್ಲಿ ಏಕತೆ ಮತ್ತು ಏಕಾಗ್ರತೆಯಿದೆ, ಅಲ್ಲಿ ಸಫಲತೆಯು ಕೊರಳಿನ ಹಾರವಾಗಿದೆ. ವರದಾತಾನಿಗೆ ಒಂದು ಶಬ್ದ ಪ್ರಿಯವಾಗಿದೆ – ‘ಏಕವ್ರತ’, ಒಂದೇ ಬಲ ಒಂದೇ ಭರವಸೆ. ಜೊತೆ-ಜೊತೆಯಲ್ಲಿ ಏಕಮತ, ಮನಮತವಿಲ್ಲ, ಪರಮತವಿಲ್ಲ, ಏಕರಸ, ಬೇರೆ ಯಾವ ವ್ಯಕ್ತಿಯಿಲ್ಲ, ವೈಭವದ ರಸವಿಲ್ಲ. ಇದೇ ರೀತಿ ಏಕತೆ, ಏಕಾಂತಪ್ರಿಯ.