06.03.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಹೇಗೆ
ನೀವು ಆತ್ಮಗಳಿಗೆ ಈ ಶರೀರ ರೂಪಿ ಸಿಂಹಾಸನವು ಸಿಕ್ಕಿದೆ, ಹಾಗೆಯೇ ತಂದೆಯೂ ಸಹ ಈ ದಾದಾರವರ
ಸಿಂಹಾಸನದಲ್ಲಿ ವಿರಾಜಮಾನವಾಗಿದ್ದಾರೆ, ಅವರಿಗೆ ತಮ್ಮ ಸಿಂಹಾಸನವಿಲ್ಲ”
ಪ್ರಶ್ನೆ:
ಯಾವ ಮಕ್ಕಳಿಗೆ
ಈಶ್ವರೀಯ ಸಂತಾನರೆಂಬ ಸ್ಮೃತಿಯಿರುವುದೋ, ಅವರ ಚಿಹ್ನೆಗಳೇನು?
ಉತ್ತರ:
ಅವರ ಸತ್ಯ
ಪ್ರೀತಿ ಒಬ್ಬ ತಂದೆಯೊಂದಿಗಿರುವುದು, ಈಶ್ವರೀಯ ಸಂತಾನರು ಎಂದೂ ಹೊಡೆದಾಡುವುದು, ಜಗಳವಾಡುವುದಿಲ್ಲ.
ಅವರಿಗೆ ಎಂದೂ ಕುದೃಷ್ಟಿಯಿರುವುದಿಲ್ಲ. ಯಾವಾಗ ಬ್ರಹ್ಮಾಕುಮಾರ-ಕುಮಾರಿ ಅರ್ಥಾತ್
ಸಹೋದರ-ಸಹೋದರಿಯರಾದರೆಂದರೆ ಕೆಟ್ಟದೃಷ್ಟಿಯು ಬರಲು ಸಾಧ್ಯವಿಲ್ಲ.
ಗೀತೆ:
ಆಕಾಶ
ಸಿಂಹಾಸನವನ್ನು ಬಿಟ್ಟುಬಾ......
ಓಂ ಶಾಂತಿ.
ಈಗ ಮಕ್ಕಳು ತಿಳಿದುಕೊಂಡಿದ್ದೀರಿ, ತಂದೆಯು ಆಕಾಶ ಸಿಂಹಾಸನವನ್ನು ಬಿಟ್ಟು ಈಗ ದಾದಾರವರ ತನುವನ್ನು
ತನ್ನ ಸಿಂಹಾಸನವನ್ನಾಗಿ ಮಾಡಿಕೊಂಡಿದ್ದಾರೆ. ಅದನ್ನು ಬಿಟ್ಟು ಇಲ್ಲಿ ಬಂದು ಕುಳಿತಿದ್ದಾರೆ. ಈ
ಆಕಾಶತತ್ವವು ಜೀವಾತ್ಮರ ಸಿಂಹಾಸನವಾಗಿದೆ. ಹೇಗೆ ಆ ಮಹಾತತ್ವವು ಆತ್ಮಗಳ ಸಿಂಹಾಸನವಾಗಿದೆ, ಎಲ್ಲಿ
ನೀವಾತ್ಮಗಳು ಶರೀರರಹಿತವಾಗಿರುತ್ತೀರಿ. ಹೇಗೆ ಆಕಾಶದಲ್ಲಿ ನಕ್ಷತ್ರಗಳಿವೆಯಲ್ಲವೆ ಹಾಗೆಯೆ
ನೀವಾತ್ಮಗಳೂ ಸಹ ಬಹಳ ಚಿಕ್ಕ-ಚಿಕ್ಕ ರೂಪದಲ್ಲಿ ಪರಮಧಾಮದಲ್ಲಿರುತ್ತೀರಿ. ಆತ್ಮವನ್ನು
ದಿವ್ಯದೃಷ್ಟಿಯ ಹೊರತು ನೋಡಲು ಸಾಧ್ಯವಿಲ್ಲ. ನೀವಾತ್ಮಗಳಿಗೆ ಈಗ ಜ್ಞಾನವಿದೆ. ಹೇಗೆ ನಕ್ಷತ್ರವು
ಅತಿಸೂಕ್ಷ್ಮವಾಗಿದೆಯೋ ಹಾಗೆಯೇ ಆತ್ಮಗಳೂ ಸಹ ಬಿಂದುರೂಪವಾಗಿದ್ದೀರಿ, ಈಗ ತಂದೆಯು ಸಿಂಹಾಸನವನ್ನಂತೂ
ಬಿಟ್ಟುಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವಾತ್ಮಗಳೂ ಸಹ ಸಿಂಹಾಸನವನ್ನು ಬಿಟ್ಟು ಇಲ್ಲಿ
ಈ ಶರೀರವನ್ನು ತಮ್ಮ ಸಿಂಹಾಸನವನ್ನಾಗಿ ಮಾಡಿಕೊಳ್ಳುತ್ತೀರಿ. ನನಗೂ ಅವಶ್ಯವಾಗಿ ಶರೀರವು ಬೇಕಲ್ಲವೆ.
ಇದನ್ನು ಪತಿತ ಪ್ರಪಂಚವೆಂದು ಕರೆಯುತ್ತಾರೆ. ದೂರದೇಶದ ನಿವಾಸಿಯೇ...... ಎಂದು ಗೀತೆಯಿದೆಯಲ್ಲವೆ.
ಎಲ್ಲಿ ನೀವಾತ್ಮಗಳಿರುತ್ತೀರೋ ಅದು ನೀವಾತ್ಮಗಳು ಮತ್ತು ತಂದೆಯ ದೇಶವಾಗಿದೆ ಮತ್ತೆ ನೀವು
ಸ್ವರ್ಗದಲ್ಲಿ ಹೋಗುತ್ತೀರಿ, ಯಾವುದರ ಸ್ಥಾಪನೆಯನ್ನು ತಂದೆಯು ಈಗ ಮಾಡಿಸುತ್ತಾರೆ. ತಂದೆಯು ಆ
ಸ್ವರ್ಗದಲ್ಲಿ ಬರುವುದಿಲ್ಲ, ತಾನು ವಾಣಿಯಿಂದ ದೂರ ವಾನಪ್ರಸ್ಥದಲ್ಲಿ ಹೋಗಿ ಇರುತ್ತಾರೆ.
ಸ್ವರ್ಗದಲ್ಲಿ ಅವರ ಅವಶ್ಯಕತೆಯಿಲ್ಲ. ಅವರು ದುಃಖ-ಸುಖದಿಂದ ಭಿನ್ನವಾಗಿದ್ದಾರಲ್ಲವೆ. ನೀವು
ಸುಖದಲ್ಲಿ ಬರುತ್ತೀರಿ ಆದ್ದರಿಂದ ದುಃಖದಲ್ಲಿಯೂ ಬರುತ್ತೀರಿ.
ಈಗ ನೀವು
ತಿಳಿದುಕೊಂಡಿದ್ದೀರಿ, ನಾವು ಬ್ರಹ್ಮಾಕುಮಾರ-ಕುಮಾರಿಯರು ಸಹೋದರ-ಸಹೋದರಿಯರಾಗಿದ್ದೀರಿ ಅಂದಾಗ
ಪರಸ್ಪರ ಕೆಟ್ಟದೃಷ್ಟಿಯ ವಿಚಾರವು ಬರಬಾರದು. ಇಲ್ಲಂತೂ ನೀವು ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ.
ಪರಸ್ಪರ ಸಹೋದರ-ಸಹೋದರಿಯರಾಗಿದ್ದೀರಿ. ಪವಿತ್ರರಾಗಿರುವ ಯುಕ್ತಿ ನೋಡಿ ಹೇಗಿದೆ! ಈ ಮಾತುಗಳು
ಯಾವುದೇ ಶಾಸ್ತ್ರಗಳಲ್ಲಿಲ್ಲ. ಎಲ್ಲರ ತಂದೆಯು ಒಬ್ಬರೇ ಆಗಿದ್ದಾರೆ ಅಂದಮೇಲೆ ಎಲ್ಲರೂ
ಮಕ್ಕಳಾದಿರಲ್ಲವೆ. ಮಕ್ಕಳು ಪರಸ್ಪರ ಜಗಳವಾಡಬಾರದು. ಈ ಸಮಯದಲ್ಲಿ ನಿಮಗೆ ತಿಳಿದಿದೆ - ನಾವು
ಈಶ್ವರೀಯ ಸಂತಾನರಾಗಿದ್ದೇವೆ. ಮೊದಲು ಆಸುರೀ ಸಂತಾನರಾಗಿದ್ದೆವು, ಈಗ ಸಂಗಮಯುಗದಲ್ಲಿ ಈಶ್ವರೀಯ
ಸಂತಾನರಾಗಿದ್ದೇವೆ. ಮತ್ತೆ ಸತ್ಯಯುಗದಲ್ಲಿ ದೈವೀಸಂತಾನರಾಗುತ್ತೇವೆ. ಮಕ್ಕಳಿಗೆ ಈ ಚಕ್ರದ ಬಗ್ಗೆ
ಅರ್ಥವಾಗಿದೆ. ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ ಅಂದಮೇಲೆ ಎಂದೂ ಕುದೃಷ್ಟಿ ಬರುವುದು
ಸಾಧ್ಯವಿಲ್ಲ. ಸತ್ಯಯುಗದಲ್ಲಿ ಕುದೃಷ್ಟಿ ಇರುವುದಿಲ್ಲ. ಕುದೃಷ್ಟಿ ರಾವಣರಾಜ್ಯದಲ್ಲಿಯೇ ಇರುತ್ತದೆ.
ನೀವು ಮಕ್ಕಳಿಗೆ ಒಬ್ಬ ತಂದೆಯ ವಿನಃ ಮತ್ತ್ಯಾರ ನೆನಪೂ ಇರಬಾರದು. ಎಲ್ಲರಿಗಿಂತ ಹೆಚ್ಚಿನದಾಗಿ
ಒಬ್ಬ ತಂದೆಯೊಂದಿಗೆ ನಿಮ್ಮ ಪ್ರೀತಿಯಿರಬೇಕು. ಒಬ್ಬ ಶಿವತಂದೆಯ ವಿನಃ ನನ್ನವರು ಮತ್ತ್ಯಾರೂ ಇಲ್ಲ.
ತಂದೆಯು ತಿಳಿಸುತ್ತಾರೆ - ಮಕ್ಕಳು ಈಗ ನೀವು ಶಿವಾಲಯದಲ್ಲಿ ಹೋಗಬೇಕು. ಶಿವತಂದೆಯು ಸ್ವರ್ಗದ
ಸ್ಥಾಪನೆ ಮಾಡುತ್ತಿದ್ದಾರೆ, ಅರ್ಧಕಲ್ಪ ರಾವಣರಾಜ್ಯವು ನಡೆದಿದೆ, ಇದರಿಂದ ನೀವು ದುರ್ಗತಿಯನ್ನು
ಪಡೆದಿದ್ದೀರಿ. ರಾವಣನೆಂದರೆ ಯಾರು, ಅವನನ್ನು ಏಕೆ ಸುಡುತ್ತಾರೆ ಎಂಬುದನ್ನು ಯಾರೂ
ತಿಳಿದುಕೊಂಡಿಲ್ಲ. ಶಿವತಂದೆಯನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ದೇವಿಯರನ್ನು ಶೃಂಗರಿಸಿ
ಮುಳುಗಿಸುತ್ತಾರೆ, ಶಿವತಂದೆಯ ಮಣ್ಣಿನ ಲಿಂಗವನ್ನು ಮಾಡಿ, ಪೂಜೆ ಮಾಡಿ, ಮಣ್ಣನ್ನು ಮಣ್ಣಿಗೆ
ಸೇರಿಸಿಬಿಡುತ್ತಾರೆ. ಹಾಗೆಯೆ ರಾವಣನನ್ನೂ ಸಹ ಪ್ರತಿಮೆ ಮಾಡಿ ಸುಡುತ್ತಾರೆ, ಏನನ್ನೂ
ತಿಳಿದುಕೊಂಡಿಲ್ಲ. ಈಗ ರಾವಣರಾಜ್ಯವಾಗಿದೆ, ರಾಮರಾಜ್ಯವು ಸ್ಥಾಪನೆಯಾಗಬೇಕೆಂದು ಹೇಳುತ್ತಾರೆ.
ಗಾಂಧೀಜಿಯೂ ಸಹ ರಾಮರಾಜ್ಯವಾಗಬೇಕೆಂದು ಬಯಸುತ್ತಿದ್ದರು ಅಂದಮೇಲೆ ಇದು ರಾವಣರಾಜ್ಯವೆಂದು
ಅರ್ಥವಾಯಿತಲ್ಲವೆ. ಯಾವ ಮಕ್ಕಳು ಈ ರಾವಣರಾಜ್ಯದಲ್ಲಿ ಕಾಮಚಿತೆಯನ್ನೇರಿ ಸುಟ್ಟುಹೋಗಿದ್ದರೋ
ಅಂಥಹವರ ಮೇಲೆ ತಂದೆಯು ಪುನಃ ಬಂದು ಜ್ಞಾನದ ಮಳೆಯನ್ನು ಸುರಿಸುತ್ತಾರೆ, ಎಲ್ಲರ ಕಲ್ಯಾಣ
ಮಾಡುತ್ತಾರೆ. ಹೇಗೆ ಬರಡುಭೂಮಿಯಲ್ಲಿ ಮಳೆಬಿದ್ದರೆ ಹುಲ್ಲು ಬೆಳೆಯುತ್ತದೆಯಲ್ಲವೆ. ನಿಮ್ಮ ಮೇಲೂ
ಸಹ ಜ್ಞಾನದ ಮಳೆ ಇಲ್ಲದಿರುವ ಕಾರಣ ಎಷ್ಟೊಂದು ಕಂಗಾಲರಾಗಿಬಿಟ್ಟಿದ್ದೀರಿ. ಈಗ ಮತ್ತೆ ಜ್ಞಾನದ
ಮಳೆಯಾಗುತ್ತದೆ. ಇದರಿಂದ ನೀವು ವಿಶ್ವದ ಮಾಲೀಕರಾಗಿಬಿಡುತ್ತೀರಿ. ಭಲೆ ನೀವು ಮಕ್ಕಳು ಗೃಹಸ್ಥ
ವ್ಯವಹಾರದಲ್ಲಿರುತ್ತೀರಿ ಆದರೆ ಒಳಗೆ ಬಹಳ ಖುಷಿಯಿರಬೇಕು. ಯಾರಾದರೂ ಬಡವರ ಮಕ್ಕಳು ಓದುತ್ತಾರೆಂದರೆ
ವಕೀಲ ಮೊದಲಾದವರಾಗುತ್ತಾರೆ. ಅವರೂ ಸಹ ದೊಡ್ಡ-ದೊಡ್ಡವರ ಜೊತೆ ಕುಳಿತುಕೊಳ್ಳುತ್ತಾರೆ.
ತಿನ್ನುತ್ತಾರೆ, ಕುಡಿಯುತ್ತಾರೆ ಅಂದರೆ ಅಷ್ಟು ಯೋಗ್ಯರಾಗುತ್ತಾರೆ. ಬಿಲ್ಲಿನಿಯರ ಮಾತೂ ಸಹ
ಶಾಸ್ತ್ರಗಳಲ್ಲಿದೆಯಲ್ಲವೆ.
ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಯಾರು ಎಲ್ಲರಿಗಿಂತ ಹೆಚ್ಚಿನ ಭಕ್ತಿ ಮಾಡಿದ್ದಾರೆಯೋ ಅವರೇ ಎಲ್ಲರಿಗಿಂತ
ಹೆಚ್ಚಿನ ಜ್ಞಾನವನ್ನು ತಿಳಿದುಕೊಂಡಿದ್ದಾರೆ. ಎಲ್ಲರಿಗಿಂತ ಹೆಚ್ಚಿನದಾಗಿ ಆರಂಭದಿಂದ ಹಿಡಿದು ನಾವೇ
ಭಕ್ತಿ ಮಾಡಿದ್ದೇವೆ. ತಂದೆಯು ನಮಗೆ ಪುನಃ ಸ್ವರ್ಗದಲ್ಲಿ ಮೊಟ್ಟಮೊದಲಿಗೆ ಕಳುಹಿಸಿಕೊಡುತ್ತಾರೆ.
ಇದು ಜ್ಞಾನಯುಕ್ತ ಯಥಾರ್ಥ ಮಾತಾಗಿದೆ. ಅವಶ್ಯವಾಗಿ ನಾವೇ ಪೂಜ್ಯರಾಗಿದ್ದೆವು ಮತ್ತೆ ನಾವೇ
ಪೂಜಾರಿಯಾಗುತ್ತೇವೆ. ಕೆಳಗಿಳಿಯುತ್ತಾ ಹೋಗುತ್ತೇವೆ. ಮಕ್ಕಳಿಗೆ ಜ್ಞಾನವೆಲ್ಲವನ್ನೂ
ತಿಳಿಸಲಾಗುತ್ತದೆ. ಈ ಸಮಯದಲ್ಲಿ ಇಡೀ ಪ್ರಪಂಚ ನಾಸ್ತಿಕನಾಗಿದೆ, ತಂದೆಯನ್ನು ಅರಿತುಕೊಂಡಿಲ್ಲ.
ನಮಗೆ ಗೊತ್ತಿಲ್ಲವೆಂದು ಹೇಳಿಬಿಡುತ್ತಾರೆ, ಮುಂದೆ ಹೋದಂತೆ ಈ ಸನ್ಯಾಸಿ ಮೊದಲಾದವರೆಲ್ಲರೂ ಬಂದು
ಅವಶ್ಯವಾಗಿ ಆಸ್ತಿಕರಾಗುತ್ತಾರೆ. ಯಾರಾದರೂ ಒಬ್ಬ ಸನ್ಯಾಸಿಯು ಬಂದುಬಿಟ್ಟರೂ ಸಹ ಅವರ ಮೇಲೆ ಎಲ್ಲರೂ
ವಿಶ್ವಾಸವನ್ನಿಡುವುದಿಲ್ಲ. ಇವರಿಗೆ ಬ್ರಹ್ಮಾಕುಮಾರ-ಕುಮಾರಿಯರ ಜಾದೂ ಹಿಡಿದಿದೆ ಎಂದು ಹೇಳುತ್ತಾರೆ.
ಅವರ ಶಿಷ್ಯರನ್ನು ಸಿಂಹಾಸನದ ಮೇಲೆ ಕುಳ್ಳರಿಸಿ ಇವರನ್ನು ತೆಗೆದುಬಿಡುತ್ತಾರೆ. ಇಂತಹ ಅನೇಕ
ಸನ್ಯಾಸಿಗಳೆಲ್ಲರೂ ಬಂದಿದ್ದಾರೆ ಮತ್ತೆ ಮಾಯವಾಗಿಬಿಡುತ್ತಾರೆ. ಇದು ಬಹಳ ವಿಚಿತ್ರವಾದ ನಾಟಕವಾಗಿದೆ.
ಈಗ ನೀವು ಮಕ್ಕಳು ಆದಿಯಿಂದ ಹಿಡಿದು ಅಂತ್ಯದವರೆಗೂ ಎಲ್ಲವನ್ನೂ ತಿಳಿದುಕೊಂಡಿದ್ದೀರಿ.
ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ಧಾರಣೆ ಮಾಡುತ್ತಾರೆ. ತಂದೆಯ ಬಳಿ ಇಡೀ ಜ್ಞಾನವಿದೆ,
ಇದು ನಿಮ್ಮ ಬಳಿಯೂ ಇರಬೇಕು. ದಿನ-ಪ್ರತಿದಿನ ಎಷ್ಟೊಂದು ಸೇವಾಕೇಂದ್ರಗಳನ್ನು ತೆರೆಯುತ್ತಿರುತ್ತಾರೆ.
ಮಕ್ಕಳಿಗೆ ಬಹಳ ದಯಾಹೃದಯಿಗಳಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ತಮ್ಮ ಮೇಲೂ
ದಯಾಹೃದಯಿಗಳಾಗಬೇಕಾಗಿದೆ, ನಿರ್ದಯಿಗಳಾಗಬೇಡಿ. ತಮ್ಮ ಮೇಲೆ ದಯೆ ತೋರಿಸಿಕೊಳ್ಳಬೇಕು. ಅದು ಹೇಗೆ?
ಅದನ್ನೂ ಸಹ ತಂದೆಯು ತಿಳಿಸುತ್ತಿದ್ದಾರೆ. ತಂದೆಯನ್ನು ನೆನಪು ಮಾಡಿ, ಪತಿತರಿಂದ ಪಾವನರಾಗಬೇಕಾಗಿದೆ.
ಪಾವನರಾದ ಮೇಲೆ ಮತ್ತೆಂದೂ ಪತಿತರಾಗುವ ಪುರುಷಾರ್ಥ ಮಾಡಬಾರದು. ದೃಷ್ಟಿಯು ಶುದ್ಧವಾಗಿರಬೇಕು, ನಾವು
ಬ್ರಾಹ್ಮಣರು ಈಶ್ವರೀಯ ಸಂತಾನರಾಗಿದ್ದೇವೆ. ಈಶ್ವರನು ನಮ್ಮನ್ನು ದತ್ತು ಮಾಡಿಕೊಂಡಿದ್ದಾರಲ್ಲವೆ
ಅಂದಮೇಲೆ ಈಗ ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ಮೊದಲು ಸೂಕ್ಷ್ಮವತನವಾಸಿ ಫರಿಶ್ತೆಗಳಾಗುತ್ತೀರಿ.
ಈಗ ನೀವು ಫರಿಶ್ತೆಗಳಾಗುತ್ತಿದ್ದೀರಿ. ಸೂಕ್ಷ್ಮವತನದ ರಹಸ್ಯವನ್ನು ಮಕ್ಕಳಿಗೆ ತಿಳಿಸಿದ್ದೇವೆ. ಇದು
ಶಬ್ಧದ ಪ್ರಪಂಚವಾಗಿದೆ, ಸೂಕ್ಷ್ಮವತನದಲ್ಲಿ ಸನ್ನೆಯ ಭಾಷೆಯಿರುತ್ತದೆ, ಮೂಲವತನದಲ್ಲಿ ಸಂಪೂರ್ಣ
ಶಾಂತಿಯಿರುತ್ತದೆ. ಸೂಕ್ಷ್ಮವತನವು ಫರಿಶ್ತೆಗಳ ಪ್ರಪಂಚವಾಗಿದೆ. ಹೇಗೆ ಭೂತಕ್ಕೆ ಛಾಯೆಯ
ಶರೀರವಿರುತ್ತದೆಯಲ್ಲವೆ. ಆತ್ಮಕ್ಕೆ ಶರೀರವು ಸಿಗದಿದ್ದಾಗ ಅಲೆದಾಡುತ್ತಿರುತ್ತದೆ, ಅದಕ್ಕೆ
ಪ್ರೇತಾತ್ಮನೆಂದು ಹೇಳಲಾಗುತ್ತದೆ. ಅದನ್ನು ಈ ಕಣ್ಣುಗಳಿಂದಲೂ ನೋಡಬಹುದಾಗಿದೆ. ಆದರೆ ಇವರು
ಸೂಕ್ಷ್ಮವತನವಾಸಿ ಫರಿಶ್ತೆಗಳಾಗಿದ್ದಾರೆ, ಇವೆಲ್ಲವೂ ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ನಿಮಗೆ
ಮೂಲವತನ, ಸೂಕ್ಷ್ಮವತನ, ಸ್ಥೂಲವತನದ ಜ್ಞಾನವಿದೆ. ನಡೆಯುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ಈ
ಜ್ಞಾನವಿರಬೇಕು. ನಾವು ಮೂಲತಃ ಮೂಲವತನದ ನಿವಾಸಿಗಳಾಗಿದ್ದೇವೆ. ಈಗ ನಾವು ಸೂಕ್ಷ್ಮವತನದ ಮೂಲಕ
ಮೂಲವತನಕ್ಕೆ ಹೋಗುತ್ತೇವೆ. ತಂದೆಯು ಸೂಕ್ಷ್ಮವತನವನ್ನು ಈ ಸಮಯದಲ್ಲಿಯೇ ರಚಿಸುತ್ತಾರೆ. ಮೊದಲು
ಸೂಕ್ಷ್ಮ ನಂತರ ಸ್ಥೂಲವಿರಬೇಕು. ಈಗ ಇದು ಸಂಗಮಯುಗವಾಗಿದೆ. ಇದಕ್ಕೆ ಈಶ್ವರೀಯ ಯುಗವೆಂದು
ಹೇಳುತ್ತಾರೆ, ಸತ್ಯಯುಗಕ್ಕೆ ದೈವೀಯುಗವೆಂದು ಹೇಳಲಾಗುತ್ತದೆ. ಈಗ ನೀವು ಮಕ್ಕಳಿಗೆ ಬಹಳ
ಖುಷಿಯಿರಬೇಕು. ಒಂದುವೇಳೆ ದೃಷ್ಟಿಯು ಕೆಡುತ್ತದೆಯೆಂದರೆ ಶ್ರೇಷ್ಠ ಪದವಿಯನ್ನು ಪಡೆಯಲು
ಸಾಧ್ಯವಿಲ್ಲ. ನೀವೀಗ ಬ್ರಾಹ್ಮಣ-ಬ್ರಾಹ್ಮಿಣಿಯರಾಗಿದ್ದೀರಲ್ಲವೆ ಮತ್ತೆ ಮನೆಗೆ ಹೋದಾಗ ಇದನ್ನು
ಮರೆತುಬಿಡಬಾರದು. ಆದರೆ ನೀವು ಸಂಗದೋಷದಲ್ಲಿ ಬಂದು ಮರೆತುಹೋಗುತ್ತೀರಿ. ನೀವು ಹಂಸಗಳು ಈಶ್ವರೀಯ
ಸಂತಾನರಾಗಿದ್ದೀರಿ. ನಿಮಗೆ ಯಾರಲ್ಲಿಯೂ ಆಂತರಿಕ ಸೆಳೆತವಿರಬಾರದು. ಒಂದುವೇಳೆ ಸೆಳೆತವಿದ್ದರೆ
ಅಂತಹವರಿಗೆ ಮೋಹದ ಕೋತಿಯೆಂದು ಹೇಳಲಾಗುತ್ತದೆ.
ನಿಮ್ಮ ಕರ್ತವ್ಯವೇ
ಎಲ್ಲರನ್ನೂ ಪಾವನ ಮಾಡುವುದಾಗಿದೆ. ನೀವು ವಿಶ್ವವನ್ನು ಸ್ವರ್ಗವನ್ನಾಗಿ ಮಾಡುವವರಾಗಿದ್ದೀರಿ, ಆ
ರಾವಣನ ಆಸುರೀ ಸಂತಾನರೆಲ್ಲಿ, ನೀವು ಈಶ್ವರೀಯ ಸಂತಾನರೆಲ್ಲಿ! ನೀವು ಮಕ್ಕಳು ತಮ್ಮ ಸ್ಥಿತಿಯನ್ನು
ಏಕರಸ ಮಾಡಿಕೊಳ್ಳಲು ಎಲ್ಲವನ್ನು ನೋಡುತ್ತಿದ್ದರೂ ಸಹ ಹೇಗೆ ನೋಡಲೇ ಇಲ್ಲವೆಂಬ ಅಭ್ಯಾಸ
ಮಾಡಬೇಕಾಗಿದೆ, ಇದರಲ್ಲಿ ಬುದ್ಧಿಯನ್ನು ಏಕರಸವಾಗಿಟ್ಟುಕೊಳ್ಳುವುದು ಸಾಹಸದ ಮಾತಾಗಿದೆ.
ಸಂಪೂರ್ಣರಾಗುವುದರಲ್ಲಿ ಪರಿಶ್ರಮವಾಗುತ್ತದೆ, ಸಮಯವು ಬೇಕು. ಯಾವಾಗ ಕರ್ಮಾತೀತ ಸ್ಥಿತಿಯಾಗುವುದೋ
ಆಗ ಆ ದೃಷ್ಟಿಯು ಬರುತ್ತದೆ, ಅಲ್ಲಿಯವರೆಗೆ ಯಾವುದಾದರೊಂದು ಸೆಳೆತವು ಇದ್ದೇ ಇರುತ್ತದೆ. ಇದರಲ್ಲಿ
ಸಂಪೂರ್ಣ ಅಲಿಪ್ತರಾಗಬೇಕಾಗುತ್ತದೆ. ಬುದ್ಧಿಯೋಗವು ಸ್ಪಷ್ಟವಾಗಿರಬೇಕು. ನೋಡಿಯೂ ನೋಡದಂತಿರಬೇಕು.
ಯಾರು ಇಂತಹ ಅಭ್ಯಾಸ ಮಾಡುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಆ ಸ್ಥಿತಿಯು ಇನ್ನೂ
ಬಂದಿಲ್ಲ. ಸನ್ಯಾಸಿಗಳಂತೂ ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಇಲ್ಲಿ ಬಹಳ ಪರಿಶ್ರಮವಾಗುತ್ತದೆ.
ನೀವು ತಿಳಿದುಕೊಂಡಿದ್ದೀರಿ - ನಾವೂ ಸಹ ಈ ಹಳೆಯ ಪ್ರಪಂಚದ ಸನ್ಯಾಸ ಮಾಡಿ ಕುಳಿತಿದ್ದೇವೆ, ನಾವೀಗ
ಮಧುರವಾದ ಶಾಂತಿಯ ಮನೆಯಲ್ಲಿ ಹೋಗಬೇಕಾಗಿದೆ. ಎಷ್ಟು ನಿಮ್ಮ ಬುದ್ಧಿಯಲ್ಲಿದೆಯೋ ಅಷ್ಟು
ಮತ್ತ್ಯಾರಲ್ಲಿಯೂ ಇಲ್ಲ. ಈಗ ಹಿಂತಿರುಗಿ ಹೋಗಬೇಕೆನ್ನುವುದು ನೀವೇ ತಿಳಿದುಕೊಂಡಿದ್ದೀರಿ.
ಶಿವಭಗವಾನುವಾಚವೂ ಇದೆ - ತಂದೆಯು ಪತಿತ-ಪಾವನ ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ. ಕೃಷ್ಣನೇನು
ಮಾರ್ಗದರ್ಶಕನಲ್ಲ, ಈ ಸಮಯದಲ್ಲಿ ನೀವೂ ಸಹ ಎಲ್ಲರಿಗೆ ಮಾರ್ಗ ತಿಳಿಸುವುದನ್ನು ಕಲಿಯುತ್ತೀರಿ.
ಆದ್ದರಿಂದ ನಿಮಗೆ ಪಾಂಡವರೆಂದು ಹೆಸರನ್ನಿಡಲಾಗಿದೆ. ನೀವು ಪಾಂಡವಸೇನೆಯಾಗಿದ್ದೀರಿ.
ದೇಹೀ-ಅಭಿಮಾನಿಗಳೂ ಆಗುತ್ತೀರಿ ಏಕೆಂದರೆ ನಿಮಗೆ ತಿಳಿದಿದೆ - ಈಗ ಹಿಂತಿರುಗಿ ಹೋಗಬೇಕಾಗಿದೆ. ಈ
ಹಳೆಯ ಶರೀರವನ್ನು ಬಿಡಬೇಕಾಗಿದೆ. ಸರ್ಪದ, ಭ್ರಮರಿಯ ಉದಾಹರಣೆಗಳೆಲ್ಲವೂ ಈ ಸಮಯದ್ದಾಗಿದೆ. ನೀವೀಗ
ಪ್ರತ್ಯಕ್ಷದಲ್ಲಿ ಇದ್ದೀರಿ. ಅವರಂತೂ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ನೀವೇ
ತಿಳಿದುಕೊಂಡಿದ್ದೀರಿ - ಇದು ಸ್ಮಶಾನವಾಗಿದೆ ನಂತರ ಇದೇ ಫರಿಸ್ತಾನವಾಗಲಿದೆ.
ನಿಮಗಾಗಿ ಎಲ್ಲಾ ದಿನಗಳೂ
ಶುಭ (ಅದೃಷ್ಟದ) ದಿನಗಳಾಗಿವೆ. ನೀವು ಮಕ್ಕಳು ಅದೃಷ್ಟವಂತರಾಗಿದ್ದೀರಿ. ಗುರುವಾರದ ದಿನದಂದು
ಮಕ್ಕಳನ್ನು ಮೊಟ್ಟಮೊದಲಿಗೆ ಶಾಲೆಯಲ್ಲಿ ಕರೆದುಕೊಂಡು ಹೋಗಿ ಕುಳ್ಳರಿಸುತ್ತಾರೆ. ಈ ಪದ್ಧತಿಯು
ನಡೆದು ಬರುತ್ತದೆ. ನಿಮಗಂತೂ ಈಗ ವೃಕ್ಷಪತಿ ತಂದೆಯೇ ಓದಿಸುತ್ತಾರೆ. ಈ ನಿಮ್ಮ ಬೃಹಸ್ಪತಿ ದೆಶೆಯು
ಜನ್ಮ-ಜನ್ಮಾಂತರ ನಡೆಯುತ್ತದೆ. ಇದು ಬೇಹದ್ದಿನ ದೆಶೆಯಾಗಿದೆ. ಭಕ್ತಿಮಾರ್ಗದಲ್ಲಿ ಹದ್ದಿನ ದೆಶೆಗಳು
ನಡೆಯುತ್ತವೆ. ಈಗ ಇದು ಬೇಹದ್ದಿನ ದೆಶೆಯಾಗಿದೆ. ಆದ್ದರಿಂದ ಸಂಪೂರ್ಣ ರೀತಿಯಿಂದ ಪರಿಶ್ರಮ
ಪಡಬೇಕಾಗಿದೆ. ಕೇವಲ ಒಬ್ಬರೇ ಲಕ್ಷ್ಮೀ-ನಾರಾಯಣರಿರುವುದಿಲ್ಲ ಅಲ್ಲವೆ. ಅವರ ರಾಜಧಾನಿಯೂ ಇರುತ್ತದೆ,
ಅವಶ್ಯವಾಗಿ ಅನೇಕರು ರಾಜ್ಯ ಮಾಡುತ್ತಾರೆ. ಲಕ್ಷ್ಮೀ-ನಾರಾಯಣರ ಸೂರ್ಯವಂಶಿ ಮನೆತನದ ರಾಜ್ಯವು
ನಡೆದಿದೆ. ಈ ಮಾತುಗಳು ಸಹ ನಿಮ್ಮ ಬುದ್ಧಿಯಲ್ಲಿಯೇ ಇದೆ. ಅಲ್ಲಿ ಹೇಗೆ ರಾಜತಿಲಕವನ್ನು (ಪಟ್ಟಾಭಿಷೇಕ)
ನೀಡುತ್ತಾರೆಂದು ನೀವು ಮಕ್ಕಳಿಗೆ ಸಾಕ್ಷಾತ್ಕಾರವಾಗಿದೆ. ಸೂರ್ಯವಂಶಿಯರು ಮತ್ತೆ ಚಂದ್ರವಂಶಿಯರಿಗೆ
ಹೇಗೆ ರಾಜ್ಯವನ್ನು ಕೊಡುತ್ತಾರೆ! ಅವರ ತಂದೆ-ತಾಯಿಯು ಮಕ್ಕಳ ಪಾದಗಳನ್ನು ತೊಳೆದು ಪಟ್ಟಾಭಿಷೇಕ
ಮಾಡುತ್ತಾರೆ, ರಾಜ್ಯಭಾಗ್ಯವನ್ನು ಕೊಡುತ್ತಾರೆ. ಈ ಸಾಕ್ಷಾತ್ಕಾರ ಮೊದಲಾದುವುಗಳೆಲ್ಲವೂ ನಾಟಕದಲ್ಲಿ
ನಿಗಧಿಯಾಗಿದೆ. ಇದರಲ್ಲಿ ನೀವು ಮಕ್ಕಳು ತಬ್ಬಿಬ್ಬಾಗುವ ಅವಶ್ಯಕತೆಯಿಲ್ಲ. ನೀವು ತಂದೆಯನ್ನು ನೆನಪು
ಮಾಡಿ, ಸ್ವದರ್ಶನಚಕ್ರಧಾರಿಗಳಾಗಿ ಮತ್ತು ಅನ್ಯರನ್ನೂ ಮಾಡಿ. ನೀವು ಬ್ರಹ್ಮಾಮುಖವಂಶಾವಳಿ,
ಸ್ವದರ್ಶನಚಕ್ರಧಾರಿ ಸತ್ಯಬ್ರಾಹ್ಮಣರಾಗಿದ್ದೀರಿ. ಶಾಸ್ತ್ರಗಳಲ್ಲಿ ಸ್ವದರ್ಶನಚಕ್ರದಿಂದ ಎಷ್ಟೊಂದು
ಹಿಂಸೆಯನ್ನು ತೋರಿಸಿದ್ದಾರೆ. ಈಗ ತಂದೆಯು ನೀವು ಮಕ್ಕಳಿಗೆ ಸತ್ಯಗೀತೆಯನ್ನು ತಿಳಿಸುತ್ತಾರೆ
ಅಂದಮೇಲೆ ಇದನ್ನು ಕಂಠಪಾಠ ಮಾಡಿಕೊಳ್ಳಬೇಕು. ಎಷ್ಟೊಂದು ಸಹಜವಾಗಿದೆ! ನಿಮ್ಮ ಪೂರ್ಣ ಸಂಬಂಧವು
ಗೀತೆಯೊಂದಿಗಿದೆ. ಗೀತೆಯಲ್ಲಿ ಜ್ಞಾನವೂ ಇದೆ, ಯೋಗವೂ ಇದೆ, ನೀವೂ ಸಹ ಒಂದೇ ಪುಸ್ತಕವನ್ನು
ರಚಿಸಬೇಕು. ಯೋಗದ ಪುಸ್ತಕವನ್ನು ಪ್ರತ್ಯೇಕವಾಗಿ ಏಕೆ ಮಾಡಬೇಕು ಆದರೆ ಇತ್ತೀಚೆಗೆ ಯೋಗದ ಬಹಳ
ನಾಮಾಚಾರಗಳಿವೆ ಆದ್ದರಿಂದ ಮನುಷ್ಯರು ಬಂದು ತಿಳಿದುಕೊಳ್ಳಲಿ ಎಂದು ಹೆಸರನ್ನಿಡಲಾಗುತ್ತದೆ. ಒಬ್ಬ
ತಂದೆಯೊಂದಿಗೆ ಬುದ್ಧಿಯೋಗವನ್ನು ಇಡಬೇಕೆನ್ನುವ ಮಾತನ್ನೂ ಕೊನೆಗೊಂದು ದಿನ ಎಲ್ಲರೂ ಬಂದು
ತಿಳಿದುಕೊಳ್ಳುತ್ತಾರೆ. ಯಾರು ಕೇಳುವರೋ ಅವರು ತಮ್ಮ ಧರ್ಮದಲ್ಲಿ ಬಂದು ಶ್ರೇಷ್ಠ ಪದವಿಯನ್ನು
ಪಡೆಯುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಮೇಲೆ
ತಾವೇ ದಯೆತೋರಿಸಿಕೊಳ್ಳಬೇಕಾಗಿದೆ, ತಮ್ಮ ದೃಷ್ಟಿಯನ್ನು ಬಹಳ ಒಳ್ಳೆಯ ಮತ್ತು
ಪವಿತ್ರವಾಗಿಟ್ಟುಕೊಳ್ಳಬೇಕಾಗಿದೆ. ಈಶ್ವರನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ದತ್ತು
ಮಾಡಿಕೊಂಡಿದ್ದಾರೆ ಆದ್ದರಿಂದ ಪತಿತರಾಗುವ ಸಂಕಲ್ಪವೆಂದೂ ಇರಬಾರದು.
2. ಸಂಪೂರ್ಣ ಕರ್ಮಾತೀತ
ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಸದಾ ಉಪರಾಂ ಆಗಿರುವ ಅಭ್ಯಾಸ ಮಾಡಬೇಕಾಗಿದೆ. ಈ
ಪ್ರಪಂಚದಲ್ಲಿ ಎಲ್ಲವನ್ನು ನೋಡುತ್ತಿದ್ದರೂ ನೋಡದಂತಿರಬೇಕಾಗಿದೆ. ಇದೇ ಅಭ್ಯಾಸದಿಂದ ಸ್ಥಿತಿಯನ್ನು
ಏಕರಸ ಮಾಡಿಕೊಳ್ಳಬೇಕಾಗಿದೆ.
ವರದಾನ:
ಪ್ರತಿ
ಹೆಜ್ಜೆಯಲ್ಲಿ ಪದಮದಷ್ಟು ಸಂಪಾದನೆ ಜಮಾ ಮಾಡಿಕೊಳ್ಳುವಂತಹ ಸರ್ವ ಖಜಾನೆಗಳಿಂದ ಸಂಪನ್ನ ಅಥವಾ
ತೃಪ್ತ ಆತ್ಮ ಭವ
ಯಾವ ಮಕ್ಕಳು ತಂದೆಯ
ನೆನಪಿನಲ್ಲಿರುತ್ತಾ ಪ್ರತಿ ಹೆಜ್ಜೆ ಇಡುತ್ತಾರೆ ಅಂತಹವರು ಹೆಜ್ಜೆ-ಹೆಜ್ಜೆಯಲ್ಲಿ ಪದಮದಷ್ಟು
ಸಂಪಾದನೆ ಜಮಮಾಡುತ್ತಾರೆ. ಈ ಸಂಗಮಯುಗದಲ್ಲಿಯೇ ಪದಮಗಳ ಸಂಪಾದನೆಯ ಗಣಿ ಸಿಗುತ್ತದೆ.
ಸಂಗಮಯುಗವಾಗಿದೆ ಜಮಾ ಮಾಡಿಕೊಳ್ಳುವ ಯುಗ. ಈಗ ಎಷ್ಟು ಜಮಾ ಮಾಡಲು ಇಚ್ಚಿಸುವಿರೋ ಅಷ್ಟು ಜಮಾ
ಮಾಡಿಕೊಳ್ಳಲು ಸಾಧ್ಯ. ಒಂದು ಹೆಜ್ಜೆ ಎಂದರೆ ಒಂದು ಸೆಕೆಂಡ್ ಸಹ ಜಮಾ ಇಲ್ಲದೆ ಹೋಗುವಂತಿಲ್ಲ
ಅರ್ಥಾತ್ ವ್ಯರ್ಥವಾಗಿರಬಾರದು. ಭಂಡಾರ ಸದಾ ಭರ್ಪೂರ್ ಆಗಿರಬೇಕು. ಯಾವುದೇ ವಸ್ತು ಅಪ್ರಾಪ್ತಿ
ಇಲ್ಲ.....ಇಂತಹ ಸಂಸ್ಕಾರವಿರಬೇಕು. ಯಾವಾಗ ಇಂತಹ ತೃಪ್ತ ಅಥವಾ ಸಂಪನ್ನ ಆತ್ಮ ಅಗುವಿರಿ ಆಗ
ಭವಿಷ್ಯದಲ್ಲಿ ಅಕೂಟ್ ಖಜಾನೆಗಳ ಮಾಲೀಕರಾಗುವಿರಿ.
ಸ್ಲೋಗನ್:
ಯಾವುದೇ ಮಾತಿಗೆ
ಅಪ್ಸೆಟ್ ಆಗುವ ಬದಲು ಜ್ಞಾನಪೂರ್ಣರ ಸೀಟ್ನಲ್ಲಿ ಸೆಟ್ ಆಗಿರಿ.
ಮಾತೇಷ್ವರೀಜಿ ಯವರ
ಅಮೂಲ್ಯ ಮಹಾವಾಕ್ಯ
“ಅರ್ಧಕಲ್ಪ ಜ್ಞಾನ
ಬ್ರಹ್ಮಾನ ದಿನವಾಗಿದೆ ಮತ್ತು ಅರ್ಧಕಲ್ಪ ಭಕ್ತಿ ಮಾರ್ಗ ಬ್ರಹ್ಮಾನ ರಾತ್ರಿಯಾಗಿದೆ”
ಅರ್ಧಕಲ್ಪ ಆಗಿದೆ
ಬ್ರಹ್ಮಾನ ದಿನ, ಅರ್ದಕಲ್ಪ ಆಗಿದೆ ಬ್ರಹ್ಮಾನ ರಾತ್ರಿ, ಈಗ ರಾತ್ರಿ ಪೂರ್ತಿ ಆಗಿ ಬೆಳ್ಳಿಗ್ಗೆ
ಬರಬೇಕಿದೆ. ಈಗ ಪರಮಾತ್ಮ ಬಂದು ಅಂಧಕಾರವನ್ನು ಅಂತ್ಯ ಮಾಡಿ ಪ್ರಕಾಶದ ಆದಿಯನ್ನು ಮಾಡುತ್ತಾರೆ,
ಜ್ಞಾನದಿಂದ ಪ್ರಕಾಶ, ಭಕ್ತಿಯಿಂದ ಇದೆ ಅಂಧಕಾರ. ಗೀತೆಯಲ್ಲಿಯೂ ಸಹಾ ಹೇಳುತ್ತಾರೆ ಈ ಪಾಪದ
ಪ್ರಪಂಚದಿಂದ ದೂರ ಎಲ್ಲಿಯಾದರೂ ಕರೆದುಕೊಂಡು ಹೋಗು, ಚಿತ್ತಕ್ಕೆ ಎಲ್ಲಿ ನೆಮ್ಮದಿ ಸಿಗುತ್ತೊ
ಅಲ್ಲಿಗೆ..... ಇದಾಗಿದೆ ನೆಮ್ಮದಿ ಇಲ್ಲದ ಪ್ರಪಂಚ, ಎಲ್ಲಿಯೂ ನೆಮ್ಮದಿ ಇಲ್ಲ. ಮುಕ್ತಿಯಲ್ಲಿ
ಶಾಂತಿಯೂ ಇಲ್ಲ ಅಶಾಂತಿಯೂ ಇಲ್ಲ. ಸತ್ಯಯುಗ ತ್ರೇತಾಯುಗವಾಗಿದೆ ಶಾಂತಿಯ ಪ್ರಪಂಚ, ಯಾವ
ಸುಖಧಾಮವನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಆದ್ದರಿಂದ ನೀವು ಈಗ ಶಾಂತಿಯ ಪ್ರಪಂಚಕ್ಕೆ
ಹೋಗುತ್ತಿರುವಿರಿ, ಅಲ್ಲಿ ಅಪವಿತ್ರ ಆತ್ಮ ಯಾವುದೂ ಹೋಗಲು ಸಾಧ್ಯವಿಲ್ಲ, ಅವರು ಅಂತಿಮದಲ್ಲಿ
ಧರ್ಮರಾಜನಿಂದ ಶಿಕ್ಷೆ ತಿಂದು ಕರ್ಮ-ಬಂಧನದಿಂದ ಮುಕ್ತರಾಗಿ ಶುದ್ಧ ಸಂಸ್ಕಾರವನ್ನು ತೆಗೆದುಕೊಂಡು
ಹೋಗುತ್ತಾರೆ ಏಕೆಂದರೆ ಅಲ್ಲಿ ಅಶುದ್ಧ ಸಂಸ್ಕಾರ ವಿರುವುದಿಲ್ಲ, ಪಾಪವೂ ಆಗುವುದಿಲ್ಲ. ಯಾವಾಗ
ಆತ್ಮ ತನ್ನ ನಿಜವಾದ ತಂದೆಯನ್ನ ಮರೆತು ಹೋಗುತ್ತೆ ಆಗ ಈ ಮರೆತು ಮರೆಯವಂತಹ ಅನಾದಿ ಸೋಲು ಗೆಲುವಿನ
ಆಟ ಮಾಡಿಮಾಡಲ್ಪಟ್ಟಿದೆ ಆದ್ದರಿಂದ ತನ್ನ ಈ ಸರ್ವ ಶಕ್ತಿವಾನ್ ಪರಮಾತ್ಮನ ಮೂಲಕ ಶಕ್ತಿಯನ್ನು ಪಡೆದು
ವಿಕಾರಗಳ ಮೇಲೆ ವಿಜಯ ಸಾಧಿಸಿ 21 ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು ಪಡೆಯುತ್ತಿರುವಿರಿ. ಒಳ್ಳೆಯದು.
ಓಂ ಶಾಂತಿ.
ಅವ್ಯಕ್ತ ಸೂಚನೆ - ಸತ್ಯ
ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ
ನಿಮ್ಮ ಮಾತಿನಲ್ಲಿ
ಸ್ನೇಹವೂ ಇರಲಿ, ಮಧುರತೆಯು ಇರಲಿ ಹಾಗೂ ಮಹಾನತೆಯು ಇರಲಿ,. ಸತ್ಯತೆಯು ಇರಲಿ ಆದರೆ ಸ್ವರೂಪದ
ನಮ್ರತೆಯು ಇರಲಿ. ನಿರ್ಭಯರಾಗಿ ಅಥಾರಿಟಿಯಿಂದ ಹೇಳಿ ಆದರೆ ಮರ್ಯಾದೆಯ ಒಳಗಿರಿ- ಎರಡು ಮಾತುಗಳ
ಸಮತೋಲನ ಇರಲಿ, ಎಲ್ಲಿ ಸಮತೋಲನ ಇರುತ್ತದೆ ಅಲ್ಲಿ ಅದ್ಬುತ ಕಾಣಿಸುತ್ತದೆ ಹಾಗೂ ಅವರ ಮಾತು ಕಟು
ಆಗಿರುವುದಿಲ್ಲ, ಪ್ರಿಯ ಎನಿಸುತ್ತಾರೆ, ಅಥಾರಿಟಿ ಹಾಗೂ ನಮ್ರತೆ ಎರಡರ ಸಮತೋಲನ ಅದ್ಭುತವನ್ನು ಮಾಡಿ
ತೋರಿಸುತ್ತದೆ. ಇದೆ ತಂದೆಯ ಪ್ರತ್ಯಕ್ಷತೆಯ ಸಾಧನವಾಗಿದೆ.