06.04.25 Avyakt Bapdada
Kannada
Murli 15.12.2004 Om Shanti Madhuban
“ಪ್ರತಿಯೊಬ್ಬ ಮಗು
ಆಶೀರ್ವಾದಗಳನ್ನು ಕೊಡಲಿ ಮತ್ತು ಆಶೀರ್ವಾದಗಳನ್ನು ತೆಗೆದುಕೊಳ್ಳಲಿ- ಇದೇ ಬಾಪ್ದಾದಾರವರ ವಿಶೇಷ
ಆಸೆಯಾಗಿದೆ”
ಇಂದು ಬಾಪ್ದಾದಾ ತನ್ನ
ನಾಲ್ಕಾರೂ ಕಡೆಯ ನಿಶ್ಚಿಂತ ಚಕ್ರವರ್ತಿಗಳ ಸಭೆಯನ್ನು ನೋಡುತ್ತಿದ್ದೇವೆ. ಈ ರಾಜಸಭೆಯು ಇಡೀ
ಕಲ್ಪದಲ್ಲಿ ಈ ಸಮಯದಲ್ಲಿಯೇ ಇದೆ. ಆತ್ಮೀಯ ನಶೆಯಲ್ಲಿ ಇರುತ್ತೀರಿ, ಆದ್ದರಿಂದ ನಿಶ್ಚಿಂತ
ಚಕ್ರವರ್ತಿಗಳಾಗಿದ್ದೀರಿ. ಮುಂಜಾನೆ ಏಳುವಾಗಲೂ ನಿಶ್ಚಿಂತರು, ನಡೆಯುತ್ತಾ, ತಿರುಗಾಡುತ್ತಾ, ಕರ್ಮ
ಮಾಡುತ್ತಾ ನಿಶ್ಚಿಂತರು ಮತ್ತು ಮಲಗುತ್ತೀರೆಂದರೂ ಸಹ ನಿಶ್ಚಿಂತ ನಿದ್ರೆಯಲ್ಲಿ ಮಲಗುತ್ತೀರಿ. ಈ
ಅನುಭವ ಮಾಡುತ್ತೀರಲ್ಲವೇ! ನಿಶ್ಚಿಂತರಾಗಿದ್ದೀರಾ? ಆಗಿದ್ದೀರಾ ಅಥವಾ ಆಗುತ್ತಿದ್ದೀರಾ?
ಆಗಿಬಿಟ್ಟಿದ್ದೀರಲ್ಲವೇ! ನಿಶ್ಚಿಂತರು ಮತ್ತು ಚಕ್ರವರ್ತಿಗಳಾಗಿದ್ದೀರಿ. ಸ್ವರಾಜ್ಯಾಧಿಕಾರಿಗಳು ಈ
ಕರ್ಮೇಂದ್ರಿಯಗಳ ಮೇಲೆ ರಾಜ್ಯ ಮಾಡುವಂತಹ ನಿಶ್ಚಿಂತಚಕ್ರವರ್ತಿಗಳಾಗಿದ್ದೀರಿ ಅರ್ಥಾತ್
ಸ್ವರಾಜ್ಯಾಧಿಕಾರಿಗಳಾಗಿದ್ದೀರಿ ಅಂದಾಗ ಇಂತಹ ಸಭೆ ಇಡೀ ಪ್ರಪಂಚದಲ್ಲಿ ತಾವು ಮಕ್ಕಳದೇ ಆಗಿದೆ.
ಯಾವುದಾದರೂ ಚಿಂತೆಯಿದೆಯೇ? ಚಿಂತೆಯಿದೆಯೇ? ಏಕೆಂದರೆ ತಮ್ಮ ಎಲ್ಲಾ ಚಿಂತೆಯನ್ನು ತಂದೆಗೆ
ಕೊಟ್ಟುಬಿಟ್ಟಿದ್ದೀರಿ ಅಂದಮೇಲೆ ಹೊರೆಯು ಸಮಾಪ್ತಿಯಾಯಿತಲ್ಲವೇ! ಚಿಂತೆಯೂ ಸಮಾಪ್ತಿ ಮತ್ತು
ನಿಶ್ಚಿಂತಚಕ್ರವರ್ತಿಗಳಾಗಿ ಅಮೂಲ್ಯಜೀವನದ ಅನುಭವ ಮಾಡುತ್ತಿದ್ದೀರಿ. ಎಲ್ಲರ ತಲೆಯ ಮೇಲೆ
ಪವಿತ್ರತೆಯ ಪ್ರಕಾಶದ ಕಿರೀಟವು ಸ್ವತಃವಾಗಿಯೇ ಹೊಳೆಯುತ್ತದೆ. ನಿಶ್ಚಿಂತಚಕ್ರವರ್ತಿಗಳ ಮೇಲೆ
ಪ್ರಕಾಶತೆಯ ಕಿರೀಟವಿದೆ. ಒಂದುವೇಳೆ ಯಾವುದೇ ಚಿಂತೆ ಮಾಡುತ್ತೀರಿ ಮತ್ತು ಯಾವುದಾದರೂ ಹೊರೆಯನ್ನು
ತಮ್ಮ ಮೇಲೆ ಹೋರುತ್ತೀರೆಂದರೆ ತಲೆಯ ಮೇಲೆ ಏನು ಬಂದುಬಿಡುತ್ತದೆ ಎಂದು ತಿಳಿದಿದೆಯೇ? ಕಿರೀಟದ
ಬದಲಾಗಿ ಭಾರದ ಬುಟ್ಟಿಯು ಬಂದುಬಿಡುತ್ತದೆ ಅಂದಾಗ ಆಲೋಚಿಸಿ, ಕಿರೀಟ ಮತ್ತು ಬುಟ್ಟಿ ಎರಡನ್ನೂ
ಸಮ್ಮುಖದಲ್ಲಿ ತಂದುಕೊಳ್ಳಿ - ಯಾವುದು ಇಷ್ಟವಾಗುತ್ತದೆ? ಭಾರದ ಬುಟ್ಟಿಯು ಇಷ್ಟವಾಗುತ್ತದೆಯೇ ಅಥವಾ
ಪ್ರಕಾಶತೆಯ ಕಿರೀಟವು ಇಷ್ಟವಾಗುತ್ತದೆಯೇ? ಹೇಳಿ, ಟೀಚರ್ಸ್ ಯಾವುದು ಇಷ್ಟವಾಗುತ್ತದೆ? ಕಿರೀಟವೇ
ಇಷ್ಟವಾಗುತ್ತದೆಯಲ್ಲವೇ! ತಾವೆಲ್ಲರೂ ಕರ್ಮೇಂದ್ರಿಯಗಳ ಮೇಲೆ ರಾಜ್ಯ ಮಾಡುವಂತಹ ರಾಜರಾಗಿದ್ದೀರಿ.
ಪವಿತ್ರತೆಯು ಪ್ರಕಾಶದ ಕಿರೀಟಧಾರಿಯನ್ನಾಗಿ ಮಾಡುತ್ತದೆ ಆದ್ದರಿಂದ ತಮ್ಮ ನೆನಪಾರ್ಥವಾಗಿ
ಜಡಚಿತ್ರಗಳಲ್ಲಿಯೂ ಎರಡು ಕಿರೀಟಗಳನ್ನು ತೋರಿಸಿದ್ದಾರೆ. ದ್ವಾಪರದಿಂದ ಹಿಡಿದು ರಾಜರಂತೂ
ಅನೇಕರಾಗಿದ್ದಾರೆ ಆದರೆ ಡಬಲ್ ಕಿರೀಟಧಾರಿ ರಾಜರು ಯಾರೂ ಆಗಲಿಲ್ಲ. ನಿಶ್ಚಿಂತಚಕ್ರವರ್ತಿಗಳು,
ಸ್ವರಾಜ್ಯಾಧಿಕಾರಿಗಳೂ ಸಹ ಯಾರೂ ಆಗಲಿಲ್ಲ ಏಕೆಂದರೆ ಪವಿತ್ರತೆಯ ಶಕ್ತಿಯು ಮಾಯಾಜೀತ್,
ಕರ್ಮೇಂದ್ರಿಯಾಜೀತ್ ವಿಜಯಿಗಳನ್ನಾಗಿ ಮಾಡುತ್ತದೆ. ನಿಶ್ಚಿಂತ ಚಕ್ರವರ್ತಿಗಳ ಚಿಹ್ನೆಯಾಗಿದೆ - ಸದಾ
ಸ್ವಯಂ ಸಂತುಷ್ಟರು ಮತ್ತು ಅನ್ಯರನ್ನೂ ಸಂತುಷ್ಟ ಪಡಿಸುವವರು. ಅವರು ಅಸಂತುಷ್ಟರಾಗಲು ಎಂದೂ ಯಾವುದೂ
ಅಪ್ರಾಪ್ತಿಯೇ ಇರುವುದಿಲ್ಲ. ಎಲ್ಲಿ ಅಪ್ರಾಪ್ತಿಯಿದೆಯೋ ಅಲ್ಲಿ ಅಸಂತುಷ್ಟತೆಯಿದೆ. ಎಲ್ಲಿ
ಪ್ರಾಪ್ತಿಯಿದೆಯೋ ಅಲ್ಲಿ ಸಂತುಷ್ಟತೆಯಿದೆ - ಈ ರೀತಿ ಸಂತುಷ್ಟರಾಗಿದ್ದೀರಾ? ಪರಿಶೀಲನೆ
ಮಾಡಿಕೊಳ್ಳಿ - ಸದಾ ಸರ್ವ ಪ್ರಾಪ್ತಿಸ್ವರೂಪರು ಸಂತುಷ್ಟರಾಗಿದ್ದೀರಾ? ಗಾಯನವೂ ಇದೆ - ದೇವತೆಗಳಿಗೆ
ಯಾವುದೇ ಅಪ್ರಾಪ್ತ ವಸ್ತುವಿಲ್ಲ ಎಂದು ಆದರೆ ಇದು ಬ್ರಾಹ್ಮಣರ ಖಜಾನೆಯಲ್ಲಿ ಮಾತ್ರ. ಸಂತುಷ್ಟತೆಯೇ
ಜೀವನದ ಶ್ರೇಷ್ಠ ಶೃಂಗಾರವಾಗಿದೆ, ಶ್ರೇಷ್ಠ ಮೌಲ್ಯವಾಗಿದೆ ಅಂದಾಗ ಎಲ್ಲರೂ ಸಂತುಷ್ಟ
ಆತ್ಮಗಳಾಗಿದ್ದೀರಲ್ಲವೇ!
ಬಾಪ್ದಾದಾರವರಿಗೆ ಇಂತಹ
ನಿಶ್ಚಿಂತ ಚಕ್ರವರ್ತಿ ಮಕ್ಕಳನ್ನು ನೋಡಿ ಖುಷಿಯಾಗುತ್ತದೆ. ವಾಹ್! ನನ್ನ ನಿಶ್ಚಿಂತ ಚಕ್ರವರ್ತಿಗಳೇ
ವಾಹ್! ನೀವು ವಾಹ್! ವಾಹ್! ಆಗಿದ್ದೀರಲ್ಲವೇ! ಯಾರು ನಿಶ್ಚಿಂತರಾಗಿದ್ದೀರೋ ಅವರು ಕೈ ಎತ್ತಿರಿ.
ನಿಶ್ಚಿಂತರೇ? ಚಿಂತೆಯು ಬರುವುದಿಲ್ಲವೇ, ಎಂದಿಗೂ ಬರುವುದಿಲ್ಲವೇ? ಒಳ್ಳೆಯದು. ನಿಶ್ಚಿಂತರಾಗುವ
ವಿಧಿಯು ಬಹಳ ಸಹಜವಾಗಿದೆ, ಕಷ್ಟವಿಲ್ಲ. ಕೇವಲ ಒಂದುಶಬ್ದದ ಮಾತ್ರೆ (ಅಕ್ಷರ) ಯ ಅಂತರವಿದೆ.
ಇಷ್ಟೊಂದು ಸಹಜವಾಗಿದೆ, ಆ ಶಬ್ದವಾಗಿದೆ - ನನ್ನದು ಎಂಬುದನ್ನು ನಿನ್ನದು ಎಂಬುದರಲ್ಲಿ ಪರಿವರ್ತನೆ
ಮಾಡಿ. ನನ್ನದಲ್ಲ, ನಿನ್ನದು. ಹಿಂದೀ ಭಾಷೆಯಲ್ಲಿ ನನ್ನದು ಎಂದಾದರೂ ಬರೆಯಿರಿ ಮತ್ತು ನಿನ್ನದು
ಎಂದಾದರೂ ಬರೆಯಿರಿ. ಅಂತರವು ಒಂದೇ ಅಕ್ಷರವಾಗಿದೆ - ನ ಮತ್ತು ನಿ ಆದರೆ ಅಂತರವು ಇಷ್ಟೇ
ಆಗಿಬಿಡುತ್ತದೆ ಅಂದಾಗ ತಾವೆಲ್ಲರೂ ನನ್ನದು-ನನ್ನದು ಎನ್ನುವವರಾಗಿದ್ದೀರೋ ಅಥವಾ ನಿನ್ನದು-ನಿನ್ನದು
ಎನ್ನುವವರೋ? ನನ್ನದು ಎಂಬುದನ್ನು ನಿನ್ನದರಲ್ಲಿ ಪರಿವರ್ತನೆ ಮಾಡಿಕೊಂಡಿರಾ? ಮಾಡಿಲ್ಲವೆಂದರೆ ಈಗ
ಮಾಡಿಕೊಳ್ಳಿ. ನನ್ನದು-ನನ್ನದು ಎನ್ನುವವರು ದಾಸರಾಗುವವರು, ಉದಾಸ (ಬೇಸರ) ರಾಗುವವರು. ಮಾಯೆಗೆ
ದಾಸರಾಗಿಬಿಡುತ್ತೀರೆಂದರೆ ಆಗ ಉದಾಸರಾಗುತ್ತೀರಲ್ಲವೇ. ಉದಾಸ ಅರ್ಥಾತ್ ಮಾಯೆಗೆ ದಾಸರಾಗುವವರು
ಅಂದಾಗ ತಾವು ಮಾಯಾಜೀತರಾಗಿದ್ದೀರಿ, ಮಾಯೆಗೆ ದಾಸರಲ್ಲ. ಒಂದುವೇಳೆ ಉದಾಸವು ಬರುತ್ತದೆ ಎಂದರೆ
ಕೆಲ-ಕೆಲವೊಮ್ಮೆ ಅದನ್ನು ರುಚಿ ನೋಡಿಬಿಡುತ್ತೀರಿ ಏಕೆಂದರೆ 63 ಜನ್ಮಗಳು ಉದಾಸರಾಗಿರುವ
ಅಭ್ಯಾಸವಿದೆಯಲ್ಲವೇ, ಆದ್ದರಿಂದ ಕೆಲವೊಮ್ಮೆ ಅದು ಸ್ಮೃತಿಗೆ ಬಂದುಬಿಡುತ್ತದೆ, ಆದ್ದರಿಂದ
ಬಾಪ್ದಾದಾ ಏನು ಹೇಳಿದೆವು? ಪ್ರತಿಯೊಬ್ಬ ಮಗು ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಿ. ಒಂದುವೇಳೆ
ಈಗಲೂ ಸಹ ಯಾವುದಾದರೂ ಮೂಲೆಯಲ್ಲಿ ಚಿಂತೆ ಇಟ್ಟುಕೊಂಡಿದ್ದೇ ಆದರೆ ಅದನ್ನು ಕೊಟ್ಟುಬಿಡಿ. ತಮ್ಮ ಬಳಿ
ಹೊರೆಯನ್ನು ಏಕೆ ಇಟ್ಟುಕೊಳ್ಳುತ್ತೀರಿ? ಹೊರೆಯನ್ನು ಹೊತ್ತುಕೊಳ್ಳುವ ಹವ್ಯಾಸವಾಗಿಬಿಟ್ಟಿದೆಯೇ?
ಯಾವಾಗ ತಂದೆಯು ಹೇಳುತ್ತಾರೆ - ಮಕ್ಕಳೇ, ಹೊರೆಯೆಲ್ಲವನ್ನೂ ನನಗೆ ಕೊಟ್ಟುಬಿಡಿ, ತಾವು
ಹಗುರರಾಗಿಬಿಡಿ, ಡಬಲ್ಲೈಟ್ ಆಗಿರಿ. ಅಂದಮೇಲೆ ಡಬಲ್ಲೈಟ್ ಆಗಿರುವುದು ಒಳ್ಳೆಯದೋ ಅಥವಾ ಹೊರೆಯು
ಒಳ್ಳೆಯದೋ? ಇದನ್ನು ಒಳ್ಳೆಯ ರೀತಿಯಲ್ಲಿ ಪರಿಶೀಲನೆ ಮಾಡಿಕೊಳ್ಳಿ. ಅಮೃತವೇಳೆ ಏಳುವಾಗಲೂ ಸಹ
ಪರಿಶೀಲನೆ ಮಾಡಿಕೊಳ್ಳಿ - ವಿಶೇಷವಾಗಿ ವರ್ತಮಾನ ಸಮಯದಲ್ಲಿ ಸಂಸ್ಕಾರದಲ್ಲಿಯೂ ಯಾವುದೇ ಹೊರೆಯಂತೂ
ಇಲ್ಲವೆ? ಸಂಸ್ಕಾರವೇ ಅಲ್ಲ ಸ್ವಪ್ನಮಾತ್ರದಲ್ಲಿಯೂ ಸಹ ಹೊರೆಯ ಅನುಭವವಾಗಬಾರದು. ಎಲ್ಲರಿಗೂ
ಡಬಲ್ಲೈಟ್ ಸ್ಥಿತಿಯು ಇಷ್ಟವಲ್ಲವೆ ಆದ್ದರಿಂದ ವಿಶೇಷವಾಗಿ ಈ ಹೋಮ್ ವರ್ಕನ್ನು ಕೊಡುತ್ತಿದ್ದೇವೆ -
ಅಮೃತವೇಳೆ ಪರಿಶೀಲನೆ ಮಾಡಿಕೊಳ್ಳಿ. ಪರಿಶೀಲನೆ ಮಾಡಿಕೊಳ್ಳುವುದು ಬರುತ್ತದೆಯಲ್ಲವೆ ಆದರೆ ಕೇವಲ
ಪರಿಶೀಲನೆಯಲ್ಲ ಅದರ ಜೊತೆ ಪರಿವರ್ತನೆಯನ್ನೂ ಮಾಡಿಕೊಳ್ಳಿ. ನನ್ನದು ಎಂಬುದನ್ನು ನಿನ್ನದರಲ್ಲಿ
ಪರಿವರ್ತನೆ ಮಾಡಿಕೊಳ್ಳಿ. ನನ್ನದು-ನನ್ನದು ಎಂದಿದ್ದರೆ ಅದನ್ನು ಪರಿಶೀಲನೆ ಮಾಡಿ ಮತ್ತು
ಪರಿವರ್ತನೆ ಮಾಡಿಕೊಳ್ಳಿ ಏಕೆಂದರೆ ಬಾಪ್ದಾದಾ ಈ ಮಾತನ್ನು ಪದೇ-ಪದೇ ತಿಳಿಸುತ್ತಿದ್ದೇವೆ - ಸಮಯ
ಮತ್ತು ಸ್ವಯಂ ಎರಡನ್ನೂ ನೋಡಿಕೊಳ್ಳಿ. ಸಮಯದ ತೀವ್ರತೆಯನ್ನೂ ನೋಡಿ ಮತ್ತು ಸ್ವಯಂನ ತೀವ್ರತೆಯನ್ನೂ
ನೋಡಿಕೊಳ್ಳಿ. ಕೊನೆಗೆ ನಮಗಿದು ತಿಳಿದಿರಲೇ ಇಲ್ಲ, ಸಮಯವು ಇಷ್ಟು ತೀಕ್ಷ್ಣವಾಗಿ ಹೊರಟುಹೋಯಿತು
ಎಂದು ಹೇಳಬಾರದು. ಈಗಂತೂ ಪುರುಷಾರ್ಥವು ಸ್ವಲ್ಪ ಸಡಿಲವಾಗಿದೆ, ಅಂತಿಮದಲ್ಲಿ ಇದನ್ನು ತೀವ್ರ
ಮಾಡಿಕೊಳ್ಳುತ್ತೇವೆಂದು ಕೆಲವು ಮಕ್ಕಳು ತಿಳಿಯುತ್ತೀರಿ ಆದರೆ ಬಹಳಕಾಲದ ಅಭ್ಯಾಸವೇ ಅಂತಿಮದಲ್ಲಿ
ಸಹಯೋಗಿಯಾಗುವುದು. ಮಕ್ಕಳೇ ಚಕ್ರವರ್ತಿಗಳಾಗಿಯಾದರೂ ನೋಡಿ. ಆಗಿದ್ದೀರಿ ಆದರೆ ಕೆಲವರು ಆಗಿದ್ದೀರಿ,
ಕೆಲವರು ಆಗಿಲ್ಲ. ನಡೆಯುತ್ತಿದ್ದೇವೆ, ಮಾಡುತ್ತಿದ್ದೇವೆ ಕೊನೆಯಲ್ಲಿ ಸಂಪನ್ನರಾಗಿಬಿಡುತ್ತೇವೆ..........
ಎಂದಲ್ಲ. ಈಗ ನಡೆಯುವುದೂ ಅಲ್ಲ, ಮಾಡುವುದೂ ಅಲ್ಲ ಹಾರಬೇಕಾಗಿದೆ. ಈಗ ಹಾರುವ ತೀವ್ರತೆಯಿರಬೇಕು.
ರೆಕ್ಕೆಗಳು ಸಿಕ್ಕಿದೆಯಲ್ಲವೆ. ಉಮ್ಮಂಗ-ಉತ್ಸಾಹ ಮತ್ತು ಸಾಹಸದ ರೆಕ್ಕೆಗಳು ಎಲ್ಲರಿಗೆ ಸಿಕ್ಕಿವೆ
ಮತ್ತು ತಂದೆಯ ವರದಾನವೂ ಇದೆ. ವರದಾನವು ನೆನಪಿದೆಯೇ? ಸಾಹಸದ ಒಂದು ಹೆಜ್ಜೆ ತಮ್ಮದು ಮತ್ತು ಸಾವಿರ
ಹೆಜ್ಜೆಗಳ ಸಹಯೋಗ ತಂದೆಯದು ಏಕೆಂದರೆ ಮಕ್ಕಳೊಂದಿಗೆ ತಂದೆಗೆ ಹೃದಯ ಪ್ರೀತಿಯಿದೆ ಅಂದಮೇಲೆ
ಪ್ರಿಯಮಕ್ಕಳ ಪರಿಶ್ರಮವನ್ನು ತಂದೆಯು ನೋಡಲು ಸಾಧ್ಯವಿಲ್ಲ. ಪ್ರೀತಿಯಲ್ಲಿರಿ ಆಗ ಪರಿಶ್ರಮವೂ
ಸಮಾಪ್ತಿಯಾಗಿಬಿಡುವುದು. ಪರಿಶ್ರಮವು ಇಷ್ಟವಾಗುತ್ತದೆಯೇ? ಸುಸ್ತಾಗಿಬಿಟ್ಟಿದ್ದೀರಿ. 63 ಜನ್ಮಗಳು
ಅಲೆದಾಡುತ್ತಾ-ಅಲೆದಾಡುತ್ತಾ ಶ್ರಮ ಪಡುತ್ತಾ ಸುಸ್ತಾಗಿದ್ದಿರಿ ಮತ್ತು ತಂದೆಯು ತಮ್ಮ ಪ್ರೀತಿಯಿಂದ
ಅಲೆದಾಡುವ ಬದಲು ಮೂರು ಸಿಂಹಾಸನಗಳಿಗೆ ಮಾಲೀಕರನ್ನಾಗಿ ಮಾಡಿಬಿಟ್ಟರು. ಮೂರು ಸಿಂಹಾಸನಗಳು
ಯಾವುದೆಂದು ತಿಳಿದುಕೊಂಡಿದ್ದೀರಾ? ತಿಳಿದುಕೊಳ್ಳುವುದೇನು, ಆದರೆ ಆ ಸಿಂಹಾಸನಗಳ
ನಿವಾಸಿಗಳಾಗಿದ್ದೀರಿ, ಅಕಾಲ ಸಿಂಹಾಸನಾಧೀಶರೂ ಆಗಿದ್ದೀರಿ, ಬಾಪ್ದಾದಾರವರ ಹೃದಯ ಸಿಂಹಾಸನಾಧೀಶರೂ
ಆಗಿದ್ದೀರಿ ಮತ್ತು ಭವಿಷ್ಯ ವಿಶ್ವರಾಜ್ಯದ ಸಿಂಹಾಸನಾಧಿಕಾರಿಗಳೂ ಆಗಿದ್ದೀರಿ. ಆದ್ದರಿಂದ ಬಾಪ್ದಾದಾ
ಎಲ್ಲಾ ಮಕ್ಕಳನ್ನು ಸಿಂಹಾಸನಾಧಿಕಾರಿಗಳನ್ನಾಗಿ ನೋಡುತ್ತಿದ್ದೇವೆ. ಇಂತಹ ಪರಮಾತ್ಮನ ಹೃದಯ
ಸಿಂಹಾಸನವು ಇಡೀ ಕಲ್ಪದಲ್ಲಿಯೇ ಅನುಭವ ಮಾಡಲು ಸಾಧ್ಯವಿಲ್ಲ. ಏನು ತಿಳಿಯುತ್ತೀರಿ - ಪಾಂಡವರೇ?
ಚಕ್ರವರ್ತಿಗಳಾಗಿದ್ದೀರಾ? ಕೈಯನ್ನೆತ್ತುತ್ತಿದ್ದಾರೆ. ಸಿಂಹಾಸನವನ್ನು ಬಿಡಬೇಡಿ, ದೇಹಭಾನದಲ್ಲಿ
ಬರುವುದೆಂದರೆ ಮಣ್ಣಿನಲ್ಲಿ ಬಂದುಬಿಟ್ಟಿರೆಂದರ್ಥ. ಈ ದೇಹವು ಮಣ್ಣಾಗಿದೆ, ಸಿಂಹಾಸನಾಧಿಕಾರಿಗಳಾದರೆ
ಚಕ್ರವರ್ತಿಗಳಾಗುವಿರಿ.
ಬಾಪ್ದಾದಾ ಎಲ್ಲಾ ಮಕ್ಕಳ
ಪುರುಷಾರ್ಥದ ಚಾರ್ಟನ್ನು ಪರಿಶೀಲನೆ ಮಾಡುತ್ತೇವೆ. ನಾಲ್ಕೂ ಸಬ್ಜೆಕ್ಟ್ಗಳಲ್ಲಿ ಯಾರು-ಯಾರು
ಎಲ್ಲಿಯವರೆಗೆ ತಲುಪಿದ್ದಾರೆ? ಬಾಪ್ದಾದಾ ಪ್ರತಿಯೊಬ್ಬ ಮಗುವಿನ ಚಾರ್ಟನ್ನು ಪರಿಶೀಲನೆ ಮಾಡಿದೆವು
- ಬಾಪ್ದಾದಾ ಯಾವುದೆಲ್ಲಾ ಖಜಾನೆಗಳನ್ನು ಕೊಟ್ಟಿದ್ದೇವೆಯೋ ಆ ಸರ್ವಖಜಾನೆಗಳನ್ನು ಎಲ್ಲಿಯವರೆಗೆ
ಜಮಾ ಮಾಡಿಕೊಂಡಿದ್ದೀರಿ ಎಂದು ಜಮಾದ ಖಾತೆಯನ್ನು ಪರಿಶೀಲನೆ ಮಾಡುತ್ತಿದ್ದೆವು ಏಕೆಂದರೆ ಎಲ್ಲರಿಗೆ
ಖಜಾನೆಗಳನ್ನು ಒಂದೇ ರೀತಿ ಒಂದೇ ಪ್ರಮಾಣದಲ್ಲಿ ಕೊಟ್ಟಿದ್ದೇವೆ. ಕೆಲವರಿಗೆ ಕಡಿಮೆ, ಕೆಲವರಿಗೆ
ಹೆಚ್ಚಿನದಾಗಿ ಕೊಟ್ಟಿಲ್ಲ. ಖಜಾನೆಗಳು ಜಮಾ ಆಗುವ ಚಿಹ್ನೆಯೇನಾಗಿದೆ? ಖಜಾನೆಗಳು ಯಾವುವು
ಎಂಬುದನ್ನಂತೂ ತಿಳಿದುಕೊಂಡೇ ಇದ್ದೀರಲ್ಲವೆ? ಎಲ್ಲದಕ್ಕಿಂತ ದೊಡ್ಡ ಖಜಾನೆಯು ಶ್ರೇಷ್ಠಸಂಕಲ್ಪದ
ಖಜಾನೆಯಾಗಿದೆ, ಸಂಕಲ್ಪವೂ ಖಜಾನೆಯಾಗಿದೆ ಅಂದಾಗ ವರ್ತಮಾನ ಸಮಯವೂ ಸಹ ಬಹಳ ದೊಡ್ಡ ಖಜಾನೆಯಾಗಿದೆ
ಏಕೆಂದರೆ ವರ್ತಮಾನ ಸಮಯದಲ್ಲಿ ಏನೆಲ್ಲವನ್ನೂ ಪ್ರಾಪ್ತಿ ಮಾಡಿಕೊಳ್ಳಬಯಸುವಿರೋ, ಯಾವ ವರದಾನವನ್ನು
ತೆಗೆದುಕೊಳ್ಳಬಯಸುವಿರೋ, ಎಷ್ಟು ತಮ್ಮನ್ನು ಶ್ರೇಷ್ಠರನ್ನಾಗಿ ಮಾಡಿಕೊಳ್ಳಬಯಸುವಿರೋ ಅಷ್ಟು ಈಗ
ಮಾಡಿಕೊಳ್ಳಬೇಕಾಗಿದೆ. ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ. ಹೇಗೆ ತಮ್ಮ ಸಂಕಲ್ಪದ ಖಜಾನೆಯನ್ನು
ಕಳೆಯುವುದು ಎಂದರೆ ತಮ್ಮ ಪ್ರಾಪ್ತಿಗಳನ್ನು ಕಳೆದುಕೊಳ್ಳುವುದು. ಹೇಗೆ ಸಮಯದ ಒಂದು ಕ್ಷಣವನ್ನೂ ಸಹ
ವ್ಯರ್ಥವಾಗಿ ಕಳೆದಿರಿ, ಸಫಲ ಮಾಡಲಿಲ್ಲವೆಂದರೆ ಬಹಳಷ್ಟು ಕಳೆದುಕೊಂಡಿರಿ ಎಂದರ್ಥ. ಜೊತೆಗೆ
ಜ್ಞಾನದ ಖಜಾನೆ, ಗುಣಗಳ ಖಜಾನೆ, ಶಕ್ತಿಗಳ ಖಜಾನೆ ಮತ್ತು ಜೊತೆಯಲ್ಲಿ ಪ್ರತಿಯೊಂದು ಆತ್ಮ ಮತ್ತು
ಪರಮಾತ್ಮನ ಮೂಲಕ ಆಶೀರ್ವಾದಗಳ ಖಜಾನೆ. ಎಲ್ಲದಕ್ಕಿಂತ ಸಹಜವಾಗಿದೆ - ಪುರುಷಾರ್ಥದಲ್ಲಿ
ಆಶೀರ್ವಾದಗಳನ್ನು ಕೊಡಿ ಮತ್ತು ಆಶೀರ್ವಾದಗಳನ್ನು ತೆಗೆದುಕೊಳ್ಳಿ. ಸುಖವನ್ನು ಕೊಡಿ ಮತ್ತು
ಸುಖವನ್ನು ಪಡೆಯಿರಿ, ದುಃಖವನ್ನು ಕೊಡಲೂಬೇಡಿ ಮತ್ತು ಪಡೆಯಲೂಬೇಡಿ. ದುಃಖವನ್ನು
ಕೊಡಲಿಲ್ಲವೆಂದಲ್ಲ ಒಂದುವೇಳೆ ತೆಗೆದುಕೊಂಡರೂ ಸಹ ದುಃಖಿಯಾಗುತ್ತೀರಲ್ಲವೆ! ಆದ್ದರಿಂದ
ಆಶೀರ್ವಾದಗಳನ್ನು ಕೊಡಿ, ಸುಖ ಕೊಡಿ ಮತ್ತು ಸುಖವನ್ನು ತೆಗೆದುಕೊಳ್ಳಿ. ಆಶೀರ್ವಾದಗಳನ್ನು
ಕೊಡುವುದು ಬರುತ್ತದೆಯೇ? ಬರುತ್ತದೆಯೇ? ತೆಗೆದುಕೊಳ್ಳುವುದೂ ಬರುತ್ತದೆಯೇ? ಯಾರಿಗೆ
ಆಶೀರ್ವಾದಗಳನ್ನು ಕೊಡುವುದು ಮತ್ತು ತೆಗೆದುಕೊಳ್ಳುವುದು ಬರುತ್ತದೆಯೋ ಅವರು ಕೈಯೆತ್ತಿರಿ.
ಒಳ್ಳೆಯದು. ಎಲ್ಲರಿಗೂ ಬರುತ್ತದೆಯೇ? ಎಲ್ಲರಿಗೂ ಬರುತ್ತದೆ. ಒಳ್ಳೆಯದು- ಡಬಲ್ ವಿದೇಶಿಯರಿಗೂ
ಬರುತ್ತದೆಯೇ? ಶುಭಾಷಯಗಳು. ಕೊಡುವುದೂ ಬರುತ್ತದೆ, ತೆಗೆದುಕೊಳ್ಳುವುದೂ ಬರುತ್ತದೆಯೆಂದರೆ ಬಹಳ
ಒಳ್ಳೆಯದು- ಶುಭಾಷಯಗಳು. ಎಲ್ಲರಿಗೂ ಶುಭಾಷಯಗಳು. ಒಂದುವೇಳೆ ತೆಗೆದುಕೊಳ್ಳುವುದೂ ಬರುತ್ತದೆ ಮತ್ತು
ಕೊಡುವುದೂ ಬರುತ್ತದೆಯೆಂದಮೇಲೆ ಮತ್ತೆ ಇನ್ನೇನು ಬೇಕು! ಆಶೀರ್ವಾದಗಳನ್ನು ಕೊಡುತ್ತಾ ಹೋಗಿ ಮತ್ತು
ತೆಗೆದುಕೊಳ್ಳುತ್ತಾ ಹೋಗಿ ಆಗ ಸಂಪನ್ನರಾಗಿಬಿಡುತ್ತೀರಿ. ಯಾರಾದರೂ ಶಾಪವನ್ನು ಕೊಟ್ಟರೆ ಏನು
ಮಾಡುವಿರಿ? ತೆಗೆದುಕೊಳ್ಳುವಿರಾ? ತಮಗೆ ಶಾಪವನ್ನು ಕೊಟ್ಟರೆ ತಾವೇನು ಮಾಡುತ್ತೀರಾ?
ತೆಗೆದುಕೊಳ್ಳುತ್ತೀರಾ? ಒಂದುವೇಳೆ ತಿಳಿದುಕೊಳ್ಳಿ - ಶಾಪವನ್ನು ತೆಗೆದುಕೊಂಡಿರೆಂದರೆ ತಮ್ಮಲ್ಲಿ
ಸ್ವಚ್ಛತೆಯಿರುತ್ತದೆಯೇ? ಶಾಪವಂತೂ ಕೆಟ್ಟವಸ್ತುವಲ್ಲವೆ? ತಾವು ತೆಗೆದುಕೊಂಡಿರಿ, ತಮ್ಮಲ್ಲಿ
ಅದನ್ನು ಸ್ವೀಕಾರ ಮಾಡಿಕೊಂಡಿರೆಂದರೆ ತಮ್ಮಲ್ಲಿ ಸ್ವಚ್ಛತೆಯಂತೂ ಉಳಿಯುವುದಿಲ್ಲ ಅಲ್ಲವೆ?
ಒಂದುವೇಳೆ ಸ್ವಲ್ಪವಾದರೂ ಲೋಪವಿದ್ದರೆ ನೀವು ಸಂಪನ್ನರಾಗಲು ಸಾಧ್ಯವಿಲ್ಲ. ಕೆಟ್ಟ ಪದಾರ್ಥವನ್ನು
ಯಾರಾದರೂ ಕೊಟ್ಟರೆ ತಾವು ತೆಗೆದುಕೊಳ್ಳುತ್ತೀರಿ, ಯಾರಾದರೂ ಯಾವುದೇ ಬಹಳ ಸುಂದರ ಫಲವಿದೆ ಆದರೆ ಅದು
ಕೆಟ್ಟಿರುವುದನ್ನು ಕೊಟ್ಟರೆ ಫಲವಂತೂ ನೋಡಲು ಸುಂದರವಾಗಿದೆ ಆದರೆ ತೆಗೆದುಕೊಳ್ಳುವಿರಾ?
ತೆಗೆದುಕೊಳ್ಳುವುದಿಲ್ಲವೋ ಅಥವಾ ಚೆನ್ನಾಗಿದೆ ಭಲೆ ಕೊಡಲಿ ಎಂದು ಹೇಳುತ್ತೀರಾ? ಎಂದಾದರೂ ಯಾರಾದರೂ
ಶ್ರಾಪವನ್ನು ಕೊಟ್ಟರೆ ತಾವು ಅದನ್ನು ತಮ್ಮ ಮನಸ್ಸಿನಲ್ಲಿ ಧಾರಣೆ ಮಾಡಿಕೊಳ್ಳಬೇಡಿ. ಇದು
ಶ್ರಾಪವೆಂದು ಅರ್ಥವಾಗುತ್ತದೆ ಆದರೆ ಆ ಶ್ರಾಪವನ್ನು ತಮ್ಮಲ್ಲಿ ಧಾರಣೆ ಮಾಡಿಕೊಳ್ಳಬೇಡಿ
ಇಲ್ಲವೆಂದರೆ ಅದು ತಮ್ಮಲ್ಲಿ ಲೋಪವಾಗಿ ಉಳಿಯುತ್ತದೆ ಅಂದಾಗ ಈ ಹಳೆಯ ವರ್ಷದಲ್ಲಿ ಇನ್ನು
ಸ್ವಲ್ಪದಿನಗಳೇ ಇದೆ ಆದರೆ ತಮ್ಮ ಹೃದಯದಲ್ಲಿ ಧೃಡಸಂಕಲ್ಪ ಮಾಡಿ. ಈಗಲೂ ಸಹ ಯಾರ ಶ್ರಾಪವಾದರೂ
ಮನಸ್ಸಿನಲ್ಲಿದ್ದರೆ ಅದನ್ನು ತೆಗೆದುಹಾಕಿ ಮತ್ತು ನಾಳೆಯಿಂದ ಆಶೀರ್ವಾದವನ್ನು ಕೊಡಿ,
ಆಶೀರ್ವಾದವನ್ನು ತೆಗೆದುಕೊಳ್ಳಿ - ಒಪ್ಪಿಗೆಯೇ? ಇಷ್ಟವೆ? ಕೇವಲ ಇಷ್ಟವೋ ಅಥವಾ ಮಾಡಲೇಬೇಕಾಗಿದೆಯೋ?
ಇಷ್ಟವಿದೆ ಆದರೆ ಮಾಡಲೇಬೇಕು, ಏನೇ ಆಗಿಬಿಡಲಿ ಆದರೆ ಮಾಡಲೇಬೇಕೆಂದು ಯಾರು ತಿಳಿಯುವಿರೋ ಅವರು
ಕೈಯೆತ್ತಿರಿ. ಮಾಡಲೇಬೇಕಾಗಿದೆ.
ಯಾರು ಸ್ನೇಹಿ,
ಸಹಯೋಗಿಗಳು ಬಂದಿದ್ದೀರಿ ಅವರು ಕೈ ಎತ್ತಿ, ಯಾರು ಮೊದಲನೇ ಬಾರಿ ಬಂದಿದ್ದೀರಿ? ಒಳ್ಳೆಯದು. ಎಲ್ಲರೂ
ಒಂದೇ ಸಾಲಿನಲ್ಲಿ ಕುಳಿತಿದ್ದೀರಿ, ಯಾರು ಸ್ನೇಹಿ, ಸಹಯೋಗಿಗಳು ಬಂದಿದ್ದೀರಿ ಅವರಿಗೆ ಬಾಪ್ದಾದಾ
ಶುಭಾಶಯಗಳನ್ನು ಹೇಳುತ್ತೇವೆ. ಏಕೆಂದರೆ ಸಹಯೋಗಿಗಳು ಆಗಿಯೇ ಇದ್ದೀರಿ. ಸ್ನೇಹಿಗಳೂ ಆಗಿದ್ದೀರಿ.
ಆದರೆ ಈ ದಿನ ಒಂದು ಹೆಜ್ಜೆಯನ್ನು ಮುಂದೆ ಇಟ್ಟು ತಂದೆಯ ಮನೆಗೆ ಬಂದಿದ್ದೀರಿ, ತನ್ನ ಮನೆಗೆ
ಬಂದಿದ್ದೀರಿ. ಅಂದಾಗ ತಮ್ಮ ಮನೆಗೆ ಬಂದಿರುವುದರಿಂದ ಶುಭಾಶಯಗಳು. ಒಳ್ಳೆಯದು. ಯಾರು ಸ್ನೇಹಿ,
ಸಹಯೋಗಿ ಬಂದಿದ್ದೀರಿ ಅವರೂ ಸಹ ಅಶೀರ್ವಾದಗಳನ್ನು ಕೊಡುವುದು ತೆಗೆದುಕೊಳ್ಳುವುದು ಮಾಡಬೇಕು
ಎಂಬುದನ್ನು ತಿಳಿಯುತ್ತೀರಾ? ಸಾಹಸ ಮಾಡುತ್ತೀರಾ? ಯಾರು ಸ್ನೇಹಿ, ಸಹಯೋಗಿ, ಸಾಹಸವನ್ನು ಇಡುತ್ತೀರಿ
ಅವರಿಗೆ ಸಹಾಯ ಸಿಗುತ್ತದೆ. ಉದ್ದವಾಗಿ ಕೈ ಎತ್ತಿರಿ. ಒಳ್ಳೆಯದು. ತಾವೂ ಸಹ
ಸಂಪನ್ನರಾಗಿಬಿಡುತ್ತೀರಿ. ಶುಭಾಶಯಗಳು. ಯಾರು ನಿಯಮಿತವಾಗಿ ಈಶ್ವರೀಯ ವಿದ್ಯಾರ್ಥಿಗಳಾಗಿದ್ದೀರಿ,
ಭಲೆ ಬ್ರಾಹ್ಮಣಜೀವನದಲ್ಲಿ ಬಾಪ್ದಾದಾರವರನ್ನು ಮೊದಲ ಬಾರಿಗೆ ಮಿಲನ ಮಾಡಲು ಬಂದಿದ್ದೀರಿ ಆದರೆ
ತನ್ನನ್ನು ಬ್ರಾಹ್ಮಣರೆಂದು ತಿಳಿಯುತ್ತೀರಿ, ನಿಯಮಿತ ವಿದ್ಯಾರ್ಥಿ ಎಂದು ತಿಳಿಯುತ್ತೀರಿ ಅವರು
ಆಶೀರ್ವಾದವನ್ನು ಕೊಡುವುದು ಮತ್ತು ತೆಗೆದುಕೊಳ್ಳುವುದು ಮಾಡುತ್ತೇವೆ ಎನ್ನುವವರು ಕೈ ಎತ್ತಿರಿ.
ಮಾಡುತ್ತೀರಾ? ಟೀಚರ್ಸ್ ಕೈ ಎತ್ತುತ್ತೀರಾ? ಈ ಕ್ಯಾಬಿನ್ನಲ್ಲಿ ಇರುವವರು ಕೈ ಎತ್ತುತ್ತಿಲ್ಲ. ಇವರು
ನಾವು ಕೊಡುತ್ತಿದ್ದೇವೆ ಎಂದು ತಿಳಿದಿದ್ದಿರಾ? ಈಗ ಮಾಡಲೇಬೇಕಾಗಿದೆ. ಏನೇ ಆಗಲಿ ಸಾಹಸವನ್ನು ಇಡಿ.
ಧೃಡ ಸಂಕಲ್ಪವನ್ನು ಇಡಿ. ಒಂದುವೇಳೆ ಶಾಪದ ಪ್ರಭಾವ ಬೀರಿದರೂ ಸಹ 10 ಪಟ್ಟು ಆಶೀರ್ವಾದವನ್ನು
ಕೊಟ್ಟು ಅದರ ಪ್ರಭಾವವನ್ನು ಸಮಾಪ್ತಿ ಮಾಡಬೇಕಾಗಿದೆ. ಒಂದು ಶಾಪದ ಪ್ರಭಾವಕ್ಕೆ 10 ಪಟ್ಟು
ಆಶೀರ್ವಾದವನ್ನು ನೀಡಿ ಹಗುರ ಮಾಡಿಕೊಳ್ಳುವುದರಿಂದ ಸಾಹಸವು ಬಂದುಬಿಡುತ್ತದೆ. ತಮಗೆ
ನಷ್ಟವಾಗುತ್ತದೆಯಲ್ಲವೇ? ಬೇರೆಯವರು ಶಾಪವನ್ನು ಕೊಟ್ಟು ಹೊರಟು ಹೋದರು ಆದರೆ ಆ ಶಾಪವನ್ನು ಸಮಾವೇಶ
ಮಾಡಿಕೊಂಡಿರೆಂದರೆ ಯಾರಿಗೆ ದುಃಖವಾಗುತ್ತದೆ? ಕೊಡುವವರಿಗೋ ಅಥವಾ ತೆಗೆದುಕೊಳ್ಳುವವರಿಗೋ?
ಕೊಡುವವರೂ ಸಹ ಇರುತ್ತಾರೆ ಆದರೆ ತೆಗೆದುಕೊಳ್ಳುವವರೂ ಸಹ ಹೆಚ್ಚಾಗಿಬಿಡುತ್ತಾರೆ. ಕೊಡುವವರು
ಹುಡುಗಾಟಿಕೆಯಲ್ಲಿರುತ್ತಾರೆ.
ಇಂದು ಬಾಪ್ದಾದಾ ತನ್ನ
ಹೃದಯದ ವಿಶೇಷ ಆಸೆಯನ್ನು ಹೇಳುತ್ತಿದ್ದೇವೆ - ಬಾಪ್ದಾದಾರವರಿಗೂ ಸಹ ಎಲ್ಲಾ ಮಕ್ಕಳಿಗೆ ಒಂದೊಂದು
ಮಗುವಿನ ಪ್ರತಿಯೂ ಸಹ ಭಲೆ ದೇಶದವರಾಗಿರಲಿ, ವಿದೇಶದವರಾಗಿರಲಿ, ಏಕೆಂದರೆ ಸಹಯೋಗಿಗಳಿಗೂ ಸಹ ಪರಿಚಯ
ದೊರೆಕಿದೆಯಲ್ಲವೇ. ಪರಿಚಯ ದೊರೆಕಿದೆ ಅಂದಾಗ ಪರಿಚಯದಿಂದ ಪ್ರಾಪ್ತಿಯನ್ನು ಮಾಡಿಕೊಳ್ಳಬೇಕು.
ಪ್ರತಿಯೊಬ್ಬ ಮಗು ಆಶೀರ್ವಾದವನ್ನು ಕೊಡುತ್ತಾ ಇರಬೇಕು, ಇದೇ ಬಾಪ್ದಾದಾರವರ ಆಸೆಯಾಗಿದೆ.
ಆಶೀರ್ವಾದಗಳ ಖಜಾನೆಯನ್ನು ಎಷ್ಟು ಬೇಕಾದರೂ ಜಮಾ ಮಾಡಿಕೊಳ್ಳುತ್ತಾ ಹೋಗಿ. ಏಕೆಂದರೆ ಈ ಸಮಯದಲ್ಲಿ
ನೀವು ಎಷ್ಟು ಆಶೀರ್ವಾದವನ್ನು ಜಮಾ ಮಾಡಿಕೊಳ್ಳುತ್ತೀರೋ ಅಷ್ಟೂ ತಾವು ಪೂಜ್ಯರಾದಾಗ ಆತ್ಮರಿಗೆ
ನೀಡಲು ಸಾಧ್ಯವಾಗುತ್ತದೆ. ಕೇವಲ ಈಗ ಮಾತ್ರ ಕೊಡುವುದಲ್ಲ, ದ್ವಾಪರದಿಂದ ಭಕ್ತರಿಗೂ ಸಹ
ಆಶೀರ್ವಾದವನ್ನು ಕೊಡಬೇಕಾಗಿದೆ. ಇಷ್ಟೊಂದು ಆಶೀರ್ವಾದವನ್ನು ಜಮಾ ಮಾಡಿಕೊಳ್ಳಬೇಕಾಗಿದೆ. ರಾಜಾ
ಮಕ್ಕಳಲ್ಲವೇ! ಬಾಪ್ದಾದಾರವರು ಪ್ರತಿಯೊಬ್ಬ ಮಗುವನ್ನು ರಾಜಾ ಮಗುವನ್ನಾಗಿ ನೋಡುತ್ತೇವೆ,
ಕಡಿಮೆಯಲ್ಲ. ಒಳ್ಳೆಯದು.
ಒಳ್ಳೆಯದು-
ಬಾಪ್ದಾದಾರವರ ಆಸೆಯನ್ನು ಅಂಡರ್ಲೈನ್ ಮಾಡಿದಿರಾ? ಯಾರು ಮಾಡಿದ್ದೀರಿ ಕೈಯೆತ್ತಿ. ಮಾಡಿದಿರಾ?
ಬಾಪ್ದಾದಾರವರು 6 ತಿಂಗಳ ಹೋಮ್ವರ್ಕ್ ಕೊಟ್ಟಿದ್ದೇವೆ - ನೆನಪಿದೆಯೇ? ಶಿಕ್ಷಕಿ ಸಹೋದರಿಯರಿಗೆ
ನೆನಪಿದೆಯೇ? ಆದರೆ ಈ ಫಲಿಂತಾಶ ಹೊಸವರ್ಷದಲ್ಲಿ ಬೇಗ ಪ್ರಾರಂಭವಾಗಲಿದೆ. ಆದ್ದರಿಂದ ಒಂದು
ತಿಂಗಳಿನಲ್ಲಿ ಈ ಧೃಡಸಂಕಲ್ಪವನ್ನು ನೋಡುತ್ತೇವೆ. 6 ತಿಂಗಳ ಹೋಮ್ವರ್ಕ್ ಬೇರೆಯಿದೆ. ಈ ತಿಂಗಳ
ಧೃಡಸಂಕಲ್ಪದ ಫಲಿತಾಂಶವನ್ನು ನೋಡುತ್ತೇವೆ. ಸರಿಯಲ್ಲವೆ- ಶಿಕ್ಷಕಿ ಸಹೋದರಿಯರಿಗೆ ಒಂದುತಿಂಗಳು
ಸಾಕಲ್ಲವೆ! ಪಾಂಡವರು ಸರಿಯೇ? ಒಳ್ಳೆಯದು. ಯಾರು ಮೊದಲಬಾರಿ ಮಧುಬನದಲ್ಲಿ ತಲುಪಿದ್ದೀರಿ, ಅವರು
ಕೈಯೆತ್ತಿರಿ. ಬಹಳ ಒಳ್ಳೆಯದು. ಬಾಪ್ದಾದಾರವರಿಗೆ ಸದಾ ಹೊಸ ಮಕ್ಕಳು ಬಹಳ ಪ್ರಿಯರೆನಿಸುತ್ತಾರೆ
ಆದರೆ ಹೊಸ ಮಕ್ಕಳು ಹೇಗೆ ವೃಕ್ಷವಿರುತ್ತದೆಯಲ್ಲವೆ, ಅದರಲ್ಲಿ ಚಿಕ್ಕ-ಚಿಕ್ಕ ಎಲೆಗಳು ಚಿಗುರುತ್ತವೆ,
ಅದು ಪಕ್ಷಿಗಳಿಗೆ ಬಹಳ ಪ್ರಿಯವೆನಿಸುತ್ತದೆ. ಇಂತಹ ಹೊಸ-ಹೊಸ ಮಕ್ಕಳು ಇದ್ದೀರೆಂದರೆ ಮಾಯೆಗೂ ಸಹ
ಹೊಸ ಮಕ್ಕಳು ಪ್ರಿಯರೆನಿಸುತ್ತಾರೆ. ಆದ್ದರಿಂದ ಯಾರೆಲ್ಲಾ ಹೊಸಬರಿದ್ದೀರಿ ಅವರು ಪ್ರತಿನಿತ್ಯ
ತನ್ನ ನವೀನತೆಯನ್ನು ಪರಿಶೀಲನೆ ಮಾಡಿಕೊಳ್ಳಿ. ಈ ದಿನ ತನ್ನಲ್ಲಿ ಯಾವ ನವೀನತೆಯನ್ನು ತಂದಿದ್ದೀರಿ?
ಯಾವ ವಿಶೇಷಗುಣ, ಯಾವ ಶಕ್ತಿಯನ್ನು ತನ್ನಲ್ಲಿ ವಿಶೇಷವಾಗಿ ಧಾರಣೆ ಮಾಡಿದಿರಿ? ಈ ರೀತಿ ಪರಿಶೀಲನೆ
ಮಾಡಿದರೆ ಸ್ವಯಂನ್ನು ಪರಿಪಕ್ವವನ್ನಾಗಿ ಮಾಡಿಕೊಳ್ಳುತ್ತೀರಿ ಆಗ ಸುರಕ್ಷಿತರಾಗಿರುತ್ತೀರಿ,
ಅಮರರಾಗಿರುತ್ತೀರಿ ಅಂದಾಗ ಅಮರಾಗಿರುವುದು, ಅಮರ ಪದವಿಯನ್ನು ಪಡೆಯುವುದಾಗಿದೆ. ಒಳ್ಳೆಯದು.
ನಾಲ್ಕಾರು ಕಡೆಯ
ನಿಶ್ಚಿಂತ ಚಕ್ರವರ್ತಿಗಳಿಗೆ ಸದಾ ಆತ್ಮೀಯ ನಶೆಯಲ್ಲಿ ಇರುವಂತಹ ಶ್ರೇಷ್ಠ ಆತ್ಮಗಳಿಗೆ, ಸದಾ
ಪ್ರಾಪ್ತಿಯಾದ ಖಜಾನೆಗಳನ್ನು ಜಮಾದ ಖಾತೆಯಲ್ಲಿ ಹೆಚ್ಚಿಸಿಕೊಳ್ಳುವಂತಹ ತೀವ್ರಪುರುಷಾರ್ಥಿ
ಆತ್ಮಗಳಿಗೆ, ಸದಾ ಒಂದೇ ಸಮಯದಲ್ಲಿ ಮೂರು ಪ್ರಕಾರದ ಸೇವೆ ಮಾಡುವಂತಹ ಶ್ರೇಷ್ಠ ಸೇವಾದಾರಿ ಮಕ್ಕಳಿಗೆ
ಬಾಪ್ದಾದಾರವರ ನೆನಪು, ಪ್ರೀತಿ, ಪದಮಾಪದಮ, ನೆನಪು, ಪ್ರೀತಿ ಮತ್ತೆ ನಮಸ್ತೆ.
ವರದಾನ:
ಸರ್ವ
ಶಕ್ತಿಗಳನ್ನು ಆರ್ಡರ್ ಪ್ರಮಾಣ ತಮ್ಮ ಸಹಯೋಗಿಗಳನ್ನಾಗಿ ಮಾಡಿಕೊಳ್ಳುವಂತಹ ಪ್ರಕೃತಿಜೀತ್ ಭವ
ಎಲ್ಲರಿಗಿಂತ
ದೊಡ್ಡದರಲ್ಲಿ ದೊಡ್ಡ ದಾಸಿ ಪ್ರಕೃತಿಯಾಗಿದೆ. ಯಾವ ಮಕ್ಕಳು ಪ್ರಕೃತಿಜೀತ್ ಆಗುವ ವರದಾನ
ಪ್ರಾಪ್ತಿಮಾಡಿಕೊಂಡಿರುತ್ತಾರೆ ಅವರ ಆರ್ಡರ್ ಪ್ರಮಾಣ ಸರ್ವಶಕ್ತಿಗಳು ಮತ್ತು ಪ್ರಕೃತಿರೂಪಿ ದಾಸಿ
ಕಾರ್ಯಮಾಡುತ್ತವೆ ಅರ್ಥಾತ್ ಸಮಯದಲ್ಲಿ ಸಹಯೋಗ ಕೂಡುತ್ತವೆ. ಆದರ ಒಂದುವೇಳೆ ಪ್ರಕೃತಿಜೀತ್ ಆಗುವ
ಬದಲು ಹುಡುಗಾಟಕಯ ನಿದ್ರಯಲ್ಲಿ ಅಥವಾ ಅಲ್ಪಕಾಲದ ಪ್ರಾಪ್ತಿಯ ನಶೆಯಲ್ಲಿ ವ್ಯರ್ಥ ಸಂಕಲ್ಪಗಳ
ಆಟದಲ್ಲಿ ಮಸ್ತರಾಗಿ ತಮ್ಮ ಸಮಯವನ್ನು ಕಳೆದಿದ್ದೇ ಆದರ ಶಕ್ತಿಗಳು ಆರ್ಡರ್ ಪ್ರಮಾಣ
ಕಾರ್ಯಮಾಡುವುದಿಲ್ಲ, ಆದ್ದರಿಂದ ಚೆಕ್ ಮಾಡಿಕೊಳ್ಳಿ ಮೊದಲನೇ ಮುಖ್ಯ ಸಂಕಲ್ಪ ಶಕ್ತಿ, ನಿರ್ಣಯ
ಶಕ್ತಿ ಮತ್ತು ಸಂಸ್ಕಾರದ ಶಕ್ತಿ ಈ ಮೂರೂ ಶಕ್ತಿಗಳು ಆರ್ಡರ್ನಲ್ಲಿದೆಯಾ? ಎಂದು.
ಸ್ಲೋಗನ್:
ಬಾಪ್ದಾದಾರವರ
ಗುಣಗಾನ ಮಾಡಿದಾಗ ಸ್ವಯಂ ಕೂಡ ಗುಣಮೂರ್ತ್ ಆಗಿಬಿಡುವಿರಿ.
ಅವ್ಯಕ್ತ ಸೂಚನೆ:
ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿ
ಕಂಬೈಂಡ್ ಸೇವೆಯಿಲ್ಲದೆ
ಸಫಲತೆ ಅಸಂಭವವಿದೆ. ಈ ರೀತಿಯಲ್ಲ ಸೇವೆ ಮಾಡುವುದಕ್ಕೆ ಹೋಗುವುದು ಮತ್ತು ವಾಪಸ್ಸು ಬಂದಾಗ ಮಾಯೆಯು
ಬಂದಿತು, ಮೂಢ್ ಆಫ್ ಆಯಿತು, ಡಿಸ್ಟರ್ಬ್ ಆಯಿತು ಎಂದು ಹೇಳುವುದು, ಅದಕ್ಕೆ ಅಂಡರ್ಲೈನ್ ಮಾಡಿ -
ಸೇವೆಯಲ್ಲಿ ಸಫಲತೆ ಅಥವಾ ಸೇವೆಯಲ್ಲಿ ವೃದ್ಧಿಯ ಸಾಧನವಾಗಿದೆ ಸ್ವಯಂನ ಸೇವೆ ಮತ್ತು ಸರ್ವರ ಕಂಬೈಂಡ್
ಸೇವೆ.