06.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ:- ತಂದೆ ತೋಟದ ಮಾಲೀಕರಾಗಿದ್ದಾರೆ, ಈ ಮಾಲೀಕನ ಬಳಿ ಮಾಲಿಗಳು ಬಹಳ ಒಳ್ಳೊಳ್ಳೆಯ ಸುಗಂಧ ಭರಿತ ಹೂಗಳನ್ನು ಕರೆತರಬೇಕು, ಬಾಡಿರುವಂತಹ ಹೂಗಳನ್ನು ತರಬೇಡಿ”

ಪ್ರಶ್ನೆ:
ತಂದೆಯ ದೃಷ್ಟಿ ಯಾವ ಮಕ್ಕಳ ಮೇಲೆ ಬೀಳುತ್ತದೆ, ಯಾರ ಮೇಲೆ ಬೀಳುವುದಿಲ್ಲ?

ಉತ್ತರ:
ಯಾರು ಸುಗಂಧ ಬೀರುವ ಹೂಗಳಾಗಿದ್ದಾರೆ, ಅನೇಕ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡುತ್ತಾರೆ ಅವರನ್ನು ನೋಡಿ ನೋಡಿ ತಂದೆ ಖುಷಿ ಪಡುತ್ತಾರೆ. ಅವರ ಮೇಲೆ ತಂದೆಯ ದೃಷ್ಟಿ ಹೋಗುತ್ತದೆ. ಮತ್ತು ಯಾರ ಬುದ್ಧಿ ಕೊಳಕಾಗಿರುತ್ತದೆ, ಕಣ್ಣುಗಳು ಮೋಸ ಮಾಡುತ್ತವೆ ಅಂತಹವರ ಮೇಲೆ ತಂದೆಯ ದೃಷ್ಟಿಯೂ ಬೀಳುವುದಿಲ್ಲ. ತಂದೆ ಹೇಳುತ್ತಾರೆ, ಮಕ್ಕಳೇ, ಹೂಗಳಾಗಿ ಅನೇಕರನ್ನು ಹೂಗಳನ್ನಾಗಿ ಮಾಡಿ. ಆಗ ಬುದ್ಧಿವಂತ ಮಾಲಿ ಎಂದು ಹೇಳಲಾಗುತ್ತದೆ.

ಓಂ ಶಾಂತಿ.
ತೋಟದ ಮಾಲೀಕ ತಂದೆಯು ಕುಳಿತು ತಮ್ಮ ಹೂಗಳನ್ನು ನೋಡುತ್ತಾರೆ ಏಕೆಂದರೆ ಮತ್ತೆಲ್ಲ ಸೇವಾಕೇಂದ್ರಗಳಲ್ಲಂತೂ ಹೂಗಳು ಮಾತ್ತು ಮಾಲಿಗಳಿರುತ್ತಾರೆ, ಇಲ್ಲಿ ನೀವು ತೋಟದ ಮಾಲಿಕನ ಬಳಿ ತಮ್ಮ ಸುಗಂಧವನ್ನು ಬೀರಲು ಬರುತ್ತೀರಿ. ನೀವು ಹೂಗಳಾಗಿದ್ದೀರಿಲ್ಲವೆ! ನೀವು ತಿಳಿದುಕೊಂಡಿದ್ದೀರಿ, ತಂದೆಗೂ ಗೊತ್ತಿದೆ - ಮುಳ್ಳುಗಳ ಕಾಡಿನ ಬೀಜ ರೂಪ ರಾವಣನಾಗಿದ್ದಾನೆ. ಹಾಗೆ ನೋಡಿದರೆ ಇಡೀ ತೋಟದ ಬೀಜವು ಒಂದೇ ಆಗಿದೆ ಆದರೆ ಹೂಗಳ ತೋಟವನ್ನು ಮುಳ್ಳಿನ ಕಾಡನ್ನಾಗಿ ಮಾಡುವವರು ಅವಶ್ಯ ಇದ್ದಾರೆ. ಅವನೇ ರಾವಣ. ಅಂದ ಮೇಲೆ ನಿರ್ಣಯ ಮಾಡಿ - ತಂದೆ ಸರಿಯಾದ ಮಾತನ್ನು ತಿಳಿಸುತ್ತಾರೆ ಅಲ್ಲವೆ. ದೇವತಾ ರೂಪಿ ತೋಟದ ಬೀಜ ರೂಪ ತಂದೆ ಆಗಿದ್ದಾರೆ. ನೀವೀಗ ದೇವಿ ದೇವತೆ ಆಗುತ್ತಿದ್ದೀರಿ ಅಲ್ಲವೆ. ಇದು ಪ್ರತಿಯೊಬ್ಬರಿಗೂ ತಿಳಿದಿದೆ- ನಾವು ಯಾವ ಪ್ರಕಾರದ ಹೂ ಆಗಿದ್ದೇವೆ. ಹೂಗಳನ್ನು ನೋಡಲು ಮಾಲೀಕರು ಇಲ್ಲಿಯೇ ಬರುತ್ತಾರೆ. ಅವರೆಲ್ಲರೂ ಮಾಲಿಗಳಾಗಿದ್ದಾರೆ (ಸೇವಾಕೇಂದ್ರಗಳಲ್ಲಿ). ಅವರಲ್ಲಿಯೂ ಅನೇಕ ಪ್ರಕಾರದ ಮಾಲಿಗಳಿದ್ದಾರೆ. ಹೇಗೆ ತೋಟದಲ್ಲಿ ಭಿನ್ನ ಭಿನ್ನ ಪ್ರಕಾರದ ಮಾಲಿಗಳಿರುತ್ತಾರೆ. ಕೆಲವರಿಗೆ 5000 ರೂಪಾಯಿ ಸಂಬಳವಿರುತ್ತದೆ ಕೆಲವರಿಗೆ 1000, ಇನ್ನೂ ಕೆಲವರಿಗೆ 5000 ರೂಪಾಯಿಗಳಿರುತ್ತವೆ. ಕೆಲವರಿಗೆ 500 ರೂಪಾಯಿಗಳಿರುತ್ತವೆ. ಮೊಗಲ್ ಗಾರ್ಡನ್ನ ಮಾಲಿ ಅವಶ್ಯವಾಗಿ ಬಹಳ ಬುದ್ಧಿವಂತನಿರುತ್ತಾನೆ. ಅವನ ಸಂಬಳವೂ ಹೆಚ್ಚಿರುತ್ತದೆ. ಇದು ಬೇಹದ್ದಿನ ಅತಿ ದೊಡ್ಡ ಹೂದೋಟವಾಗಿದೆ. ಅದರಲ್ಲಿಯೂ ಅನೇಕ ಪ್ರಕಾರದ ನಂಬರವಾರ್ ಮಾಲಿಗಳಿದ್ದಾರೆ. ಯಾರು ಬಹಳ ಒಳ್ಳೆಯ ಮಾಲಿಗಳಿರುತ್ತಾರೆ ಅವರು ಹೂದೋಟವನ್ನು ಬಹಳ ಶೋಭಾಯಮಾನವಾಗಿಡುತ್ತಾರೆ, ಒಳ್ಳೊಳ್ಳೆಯ ಹೂಗಿಡಗಳನ್ನಿಡುತ್ತಾರೆ. ಹೇಗೆ ಗವರ್ನಮೆಂಟ್ ಹೌಸನ ಮೊಗಲ್ ಗಾರ್ಡನ್ ಎಷ್ಟು ಚೆನ್ನಾಗಿದೆ, ಹಾಗೆಯೇ ಇದೂ ಬೇಹದ್ದಿನ ಹೂದೋಟವಾಗಿದೆ. ಒಬ್ಬರಲೊ ತೋಟದ ಮಾಲೀಕರಾಗಿದ್ದಾರೆ. ಈಗ ಮುಳ್ಳುಗಳ ಕಾಡಿನ ಬೀಜ ರಾವಣ ಆಗಿದ್ದಾನೆ ಮತ್ತು ಹೂತೋಟದ ಬೀಜ ಶಿವತಂದೆಯಾಗಿದ್ದಾರೆ. ಆಸ್ತಿಯು ತಂದೆಯಿಂದ ಸಿಗುತ್ತದೆ. ರಾವಣನಿಂದ ಅಸ್ತಿ ಸಿಗುವುದಿಲ್ಲ. ರಾವಣನು ಶಾಪ ಕೊಡುತ್ತಾನೆ. ಯಾವಾಗ ಶಾಪಿತರಾಗುತ್ತಾರೆ ಆಗ ಸುಖ ಕೊಡುವವರನ್ನು ನೆನಪು ಮಾಡುತ್ತಾರೆ ಏಕೆಂದರೆ ಅವರು ಸುಖ ದಾತಾ, ಸದಾ ಸುಖ ನೀಡುವವರಾಗಿದ್ದಾರೆ. ಮಾಲಿಗಳೂ ಕೂಡ ಭಿನ್ನ ಭಿನ್ನ ಪ್ರಕಾರದವರಿರುತ್ತಾರೆ. ತೋಟದಮಾಲಿಕ ಬಂದು ಮಾಲಿಗಳನ್ನು ನೋಡುತ್ತಾರೆ ಎಂತಹ ಚಿಕ್ಕ ಪುಟ್ಟ ಹೂದೋಟವನ್ನು ಮಾಡಿದ್ದಾರೆ. ಯಾವ ಯಾವ ಹೂಗಳಿವೆ ಎಂದು ವಿಚಾರ ಮಾಡುತ್ತಾರೆ. ಕೆಲವೊಮ್ಮೆ ಬಹಳ ಒಳ್ಳೊಳ್ಳೆಯ ಮಾಲಿಗಳು ಬರುತ್ತಾರೆ. ಅಂತಹವರ ಹೂಗುಚ್ಛವೂ ಸಹ ಬಹಳ ಚೆನ್ನಾಗಿಯೇ ಇರುತ್ತದೆ. ಆಗ ಮಾಲೀಕನಿಗೂ ಖುಷಿಯಾಗುತ್ತದೆ – ಓಹೋ! ಈ ಮಾಲಿಯು ಬಹಳ ಒಳ್ಳೆಯವರಾಗಿದ್ದಾರೆ, ಒಳ್ಳೊಳ್ಳೆಯ ಹೂಗಳನ್ನು ತಂದಿದ್ದಾರೆ. ಇವರು ಬೇಹದ್ದಿನ ತಂದೆಯಾಗಿದ್ದಾರೆ ಮತ್ತು ಇವರದು ಬೇಹದ್ದಿನ ಮಾತುಗಳಾಗಿವೆ, ನೀವು ಮಕ್ಕಳು ಮನಸ್ಸಿನಲ್ಲಿ ತಿಳಿಯುತ್ತೀರಿ ತಂದೆಯು ಸಂಪೂರ್ಣವಾಗಿ ಸತ್ಯವನ್ನೇ ಹೇಳುತ್ತಾರೆ. ಅರ್ಧ ಕಲ್ಪ ರಾವಣನ ರಾಜ್ಯ ನಡೆಯುತ್ತದೆ, ಹೂದೋಟವನ್ನು ಮುಳ್ಳಿನ ಕಾಡನ್ನಾಗಿ ರಾವಣನೇ ಮಾಡುತ್ತಾನೆ. ಕಾಡಿನಲ್ಲಿ ಬರೀ ಮುಳ್ಳುಗಳೇ ಇರುತ್ತವೆ. ಬಹಳ ದುಃಖ ಕೊಡುತ್ತವೆ. ಹೂತೋಟದ ಮಧ್ಯೆ ಮುಳ್ಳುಗಳಿರುತ್ತವೆಯೇ, ಒಂದೂ ಇರುವುದಿಲ್ಲ. ಮಕ್ಕಳಿಗೆ ಗೊತ್ತಿದೆ, ರಾವಣನು ದೇಹಾಭಿಮಾನದಲ್ಲಿ ತರುತ್ತಾನೆ. ಅತಿ ದೊಡ್ಡ ಮುಳ್ಳು ದೇಹಾಭಿಮನವಾಗಿದೆ.

ತಂದೆಯು ರಾತ್ರಿಯೂ ತಿಳಿಸಿದ್ದರು – ಕೆಲವರದು ಕಾಮಿ ದೃಷ್ಟಿಯಿರುತ್ತದೆ, ಇನ್ನು ಕೆಲವರದು ಸ್ವಲ್ಪ ಕಾಮಿ ದೃಷ್ಟಿಯಿರುತ್ತದೆ. ಕೆಲವರು ಹೊಸ ಹೊಸಬರು ಬರುತ್ತಾರೆ ಅವರು ಮೊದಲು ಬಹಳ ಚೆನ್ನಾಗಿ ನಡೆಯುತ್ತಾರೆ. ವಿಕಾರದಲ್ಲೆಂದೂ ಹೋಗುವುದಿಲ್ಲ, ಪವಿತ್ರರಾಗಿರುತ್ತೇವೆಂದು ತಿಳಿಯುತ್ತಾರೆ, ಆ ಸಮಯದಲ್ಲಿ ಸ್ಮಶಾನ ವೈರಾಗ್ಯ ಬರುತ್ತದೆ. ಮತ್ತೆ ಮನೆಗೆ ಹೋದಾಗ ಕೊಳಕಾಗುತ್ತಾರೆ. ದೃಷ್ಟಿಯೂ ಕೊಳಕಾಗಿಬಿಡುತ್ತದೆ. ಇಲ್ಲಿ ಯಾರನ್ನು ಒಳ್ಳೆಯ ಹೂಗಳೆಂದು ತಿಳಿದು ಮಾಲೀಕನ ಬಳಿ ಕರೆದುಕೊಂಡು ಬರುತ್ತಾರೆ, ಬಾಬಾ, ಇವರು ಬಹಳ ಒಳ್ಳೆಯ ಹೂವಾಗಿದ್ದಾರೆ. ಇನ್ನೂ ಕೆಲವರು ಇವರು ಎಂತಹ ಹೂವಾಗಿದ್ದಾರೆಂದು ಬಂದು ಕಿವಿಯಲ್ಲಿ ಹೇಳುತ್ತಾರೆ. ಮಾಲಿಯಂತೂ ಅವಶ್ಯವಾಗಿ ತಿಳಿಸುತ್ತಾರೆ ಅಲ್ಲವೆ. ತಂದೆಯು ಅಂತರ್ಯಾಮಿಯಾಗಿದ್ದಾರೆಂದಲ್ಲ ಮಾಲಿಯು ಪ್ರತಿಯೊಬ್ಬರ ಚಲನ ವಲನಗಳನ್ನು ತಿಳಿಸುತ್ತಾರೆ - ಬಾಬಾ, ಇವರ ದೃಷ್ಟಿ ಚೆನ್ನಾಗಿಲ್ಲ, ಇವರ ಚಲನೆ ಶ್ರೇಷ್ಠವಾಗಿಲ್ಲ. ಇವರು 10-20% ಸುಧಾರಣೆಯಾಗಿದ್ದಾರೆ. ಮೂಲ ಕಣ್ಣುಗಳು ಇವು ಬಹಳ ಮೋಸ ಮಾಡುತ್ತವೆ. ಮಾಲಿಯು ಬಂದು ಮಾಲಿಕನಿಗೆ ಎಲ್ಲವನ್ನೂ ತಿಳಿಸುತ್ತಾರೆ. ತಂದೆಯು ಪ್ರತಿಯೊಬ್ಬರನ್ನೂ ಕೇಳುತ್ತಾರೆ - ಹೇಳಿ ನೀವು ಎಂತಹ ಹೂಗಳನ್ನು ತಂದಿದ್ದೀರಿ? ಕೆಲವರು ಗುಲಾಬಿ ಹೂಗಳಾಗಿರುತ್ತಾರೆ, ಸೇವಂತಿಯ ಹೂವಾಗಿರುತ್ತಾರೆ, ಕೆಲವರು ಎಕ್ಕದ ಹೂಗಳಂತಿರುವವರನ್ನೂ ಕರೆತರುತ್ತಾರೆ. ಇಲ್ಲಿ ಬಹಳ ಎಚ್ಚರದಿಂದ ಇರುತ್ತಾರೆ. ಕಾಡಿಗೆ ಹೋದ ನಂತರ ಬಾಡಿ ಹೋಗುತ್ತಾರೆ. ಇವರು ಯಾವ ಪ್ರಕಾರದ ಹೂವನ್ನುವುದನ್ನು ನೋಡುತ್ತಾರೆ. ಮಾಯೆಯೂ ಸಹ ಈ ರೀತಿ ಇದೆ, ಅದು ಮಾಲಿಗಳಿಗೂ ಸಹ ಜೋರಾಗಿ ಏಟನ್ನು ಕೊಡುತ್ತದೆ. ಅದರಿಂದ ಮಾಲಿಗಳೂ ಸಹ ಮುಳ್ಳುಗಳಂತಾಗುತ್ತಾರೆ. ಮಾಲೀಕನು ಬಂದಾಗ ಮೊಟ್ಟ ಮೊದಲು ಹೂದೋಟವನ್ನು ನೋಡುತ್ತಾರೆ, ಮತ್ತೆ ಕುಳಿತು ಅದನ್ನು ಶೃಂಗಾರ ಮಾಡುತ್ತಾರೆ - ಮಕ್ಕಳೇ, ಎಚ್ಚರದಿಂದಿರಿ ದೋಷಗಳನ್ನು ತೆಗೆಯಿರಿ ಇಲ್ಲವಾದರೆ ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ. ತಂದೆಯು ಲಕ್ಷ್ಮೀ ನಾರಾಯಣರನ್ನಾಗಿ ಮಾಡಲು ಬಂದಿದ್ದಾರೆ ಅಂದ ಮೇಲೆ ದೇವತೆಗಳಾಗುವ ಬದಲು ನೌಕರಾರುಗುವುದೇ! ನಾವು ಅಂತಹ ಶ್ರೇಷ್ಠರು, ಯೋಗ್ಯರಾಗುತ್ತೀದ್ದೇವೆಯೇ ಎಂದು ಪರಿಶೀಲನೆ ಮಾಡಿಕೊಳ್ಳಬೇಕು. ಇದಂತೂ ಮಕ್ಕಳಿಗೆ ತಿಳಿದಿದೆ - ಮುಳ್ಳುಗಳ ಕಾಡಿನ ಬೀಜ ರಾವಣ ಆಗಿದ್ದಾರೆ, ಹೂದೋಟದ ಬೀಜ ರಾಮನಾಗಿದ್ದಾನೆ. ಇವೆಲ್ಲ ಮಾತುಗಳನ್ನು ತಂದೆ ತಿಳಿಸುತ್ತಾರೆ. ಆದರೂ ಸಹ ತಂದೆ ಶಾಲೆಯ ವಿದ್ಯಾಭ್ಯಾಸದ ಮಹಿಮೆ ಮಾಡುತ್ತಾರೆ. ಈ ವಿದ್ಯೆಯು ಒಳ್ಳೆಯದಾಗಿದೆ ಏಕೆಂದರೆ ಅದು ಆದಾಯದ ಮೂಲವಾಗಿದೆ. ಗುರಿ-ಉದ್ದೇಶವಿರುವುದಿಲ್ಲ. ನಿಮ್ಮದು ನರನಿಂದ ನಾರಾಯಣರಾಗುವ ಒಂದೇ ಗುರಿಯಾಗಿದೆ. ಭಕ್ತಿ ಮಾರ್ಗದಲ್ಲಿ ಸತ್ಯನಾರಾಯನನ ಕಥೆ ಬಹಳ ಕೇಳುತ್ತಾರೆ. ಪ್ರತೀ ತಿಂಗಳು ಬ್ರಾಹ್ಮಣರನ್ನು ಕರೆಸುತ್ತಾರೆ, ಬ್ರಾಹ್ಮಣರು ಗೀತೆಯನ್ನು ತಿಳಿಸುತ್ತಾರೆ. ಇತ್ತೀಚೆಗಂತೂ ಎಲ್ಲರೂ ಗೀತೆಯನ್ನು ಹೇಳುತ್ತಾರೆ. ಸತ್ಯ ಬ್ರಾಹ್ಮಣರು ಯಾರೂ ಇಲ್ಲ. ತಾವು ಸತ್ಯಸತ್ಯ ಬ್ರಾಹ್ಮಣರಾಗಿದ್ದೀರಿ, ಸತ್ಯ ತಂದೆಯ ಮಕ್ಕಳಾಗಿದ್ದೀರಿ. ನೀವು ಸತ್ಯ ಸತ್ಯವಾದ ಕಥೆಯನ್ನು ತಿಳಿಸುತ್ತೀರಿ. ಇದು ಸತ್ಯನಾರಾಯಣನ ಕಥೆಯಾಗಿದೆ, ಅಮರ ಕಥೆಯೂ ಆಗಿದೆ, ಮೂರನೇ ನೇತ್ರದ ಕಥೆಯೂ ಆಗಿದೆ. ಭಗವಾನುವಾಚ - ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ, ಅವರಂತೂ ಗೀತೆಯನ್ನು ತಿಳಿಸುತ್ತಲೇ ಬಂದಿದ್ದಾರೆ ಆದರೆ ಯಾರು ರಾಜರಾದರು? ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ, ನಾನಂತೂ ಆಗುವುದಿಲ್ಲ ಎಂದು ಹೇಳುವವರು ಯಾರಾದರೂ ಇದ್ದಾರೆಯೇ? ಈ ರೀತಿ ಎಂದಾದರೂ ಕೇಳಿದ್ದೀರಾ? ಇವರೊಬ್ಬರೇ ತಂದೆಯಾಗಿದ್ದಾರೆ ಕುಳಿತು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಮಕ್ಕಳಿಗೆ ಗೊತ್ತಿದೆ, ಇಲ್ಲಿ ಮಾಲೀಕನ ಬಳಿ ರಿಫ್ರೆಶ್ ಆಗಲು ಬರುತ್ತೇವೆ. ಮಾಲಿಗಳೂ ಆಗುತ್ತಾರೆ, ಹೂಗಳೂ ಆಗುತ್ತಾರೆ. ಮಾಲಿಗಳಂತೂ ಅವಶ್ಯ ಆಗಬೇಕು. ಭಿನ್ನ ಭಿನ್ನ ಪ್ರಕಾರದ ಮಾಲಿಗಳಿದ್ದಾರೆ. ಸೇವೆ ಮಾಡದಿದ್ದರೆ ಒಳ್ಳೆಯ ಹೂ ಹೇಗೆ ಆಗುತ್ತಾರೆ? ಪ್ರತಿಯೊಬ್ಬರೂ ತಮ್ಮ ಹೃದಯವನ್ನು ಕೇಳಿಕೊಳ್ಳಿ - ನಾನು ಯಾವ ಪ್ರಕಾರದ ಹೂ ಆಗಿದ್ದೇನೆ? ಯಾವ ಪ್ರಕಾರದ ಮಾಲಿ ಆಗಿದ್ದೇನೆ? ಮಕ್ಕಳು ವಿಚಾರ ಸಾಗರ ಮಂಥನ ಮಾಡಬೇಕು. ಬ್ರಾಹ್ಮಣಿಯರಿಗೆ ಗೊತ್ತಿದೆ, ಭಿನ್ನ ಭಿನ್ನ ಪ್ರಕಾರದ ಮಾಲಿಗಳಿದ್ದಾರೆ. ಕೆಲವರು ಒಳ್ಳೊಳ್ಳೆಯ ಮಾಲಿಗಳು ಬರುತ್ತಾರೆ. ಅವರದು ಬಹಳ ಒಳ್ಳೆಯ ಹೂದೋಟವಿರುತ್ತದೆ. ಹೇಗೆ ಒಳ್ಳೆಯ ಮಾಲಿಯು ಹೂದೋಟವನ್ನು ಚೆನ್ನಾಗಿಯೇ ಇಟ್ಟುಕೊಳ್ಳುತ್ತಾರೆ. ಒಳ್ಳೊಳ್ಳೆಯ ಹೂಗಳನ್ನು ಕರೆತರುತ್ತಾರೆ. ಅವರನ್ನು ನೋಡಿ ಮನಸ್ಸಿಗೆ ಖುಷಿಯಾಗುತ್ತದೆ. ಕೆಲವರಂತೂ ಸುಗಂಧವಿಲ್ಲದ ಹೂಗಳನ್ನು ಕರೆತರುತ್ತಾರೆ ಅವರನ್ನು ನೋಡಿ ಇವರೇನು ಪದವಿ ಪಡೆಯುತ್ತಾರೆಂದು ಮಾಲೀಕ ತಿಳಿಯುತ್ತಾರೆ, ಇನ್ನೂ ಸಮಯವಿದೆ, ಒಂದೊಂದು ಮುಳ್ಳನ್ನು ಹೂವನ್ನಾಗಿ ಮಾಡುವುದರಲ್ಲಿ ಪರಿಶ್ರಮವಿರುತ್ತದೆ. ಕೆಲವರಂತೂ ಹೂವಾಗಲು ಇಚ್ಛಿಸುವುದೇ ಇಲ್ಲ. ಮುಳ್ಳುಗಳನ್ನೇ ಇಚ್ಛಿಸುತ್ತಾರೆ. ಕಣ್ಣುಗಳ ವೃತ್ತಿಯು ಬಹಳ ಕೊಳಕಾಗಿರುತ್ತದೆ. ಇಲ್ಲಿ ಬಂದಾಗಲೂ ಅವರಿಂದ ಸುಗಂಧ ಬರುವುದಿಲ್ಲ. ಮಾಲೀಕರು ಬಯಸುತ್ತಾರೆ, ನನ್ನ ಮುಂದೆ ಹೂಗಳು ಕುಳಿತರೆ ಒಳ್ಳೆಯದು ಚೆನ್ನಾಗಿರುತ್ತದೆ, ಅವರನ್ನು ನೋಡಿ ಖುಷಿಪಡುತ್ತೇನೆ. ಒಂದು ವೇಳೆ ಇವರ ವೃತ್ತಿ ಹೀಗಿದೆ ಎಂದು ನೋಡಿದಾಗ ಅವರ ಕಡೆ ದೃಷ್ಟಿಯನ್ನೂ ಹರಿಸುವುದಿಲ್ಲ. ಆದ್ದರಿಂದ ಈ ನನ್ನ ಹೂಗಳು ಯಾವ ಪ್ರಕಾರದವರಾಗಿರುತ್ತಾರೆ, ಎಷ್ಟು ಸುಗಂಧ ಬೀರುತ್ತಾರೆ? ಮುಳ್ಳುಗಳಿಂದ ಹೂಗಳಾಗಿದ್ದಾರೆಯೇ ಅಥವಾ ಇಲ್ಲವೆ ಎಂದು ತಂದೆಯು ಪ್ರತಿಯೊಬ್ಬರನ್ನೂ ನೋಡುತ್ತಾರೆ? ತಾವೂ ಸಹ ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬಹುದು. ನಾವು ಎಲ್ಲಿಯವರೆಗೆ ಹೂಗಳಾಗಿದ್ದೇವೆ? ಪುರುಷಾರ್ಥ ಮಾಡುತ್ತೇವೆಯೇ? ಪದೇ ಪದೇ ಹೇಳುತ್ತಾರೆ - ಬಾಬಾ, ನಾವು ತಮ್ಮನ್ನು ಮರೆತುಬಿಡುತ್ತೇವೆ, ಯೋಗದಲ್ಲಿರಲು ಆಗುವುದಿಲ್ಲ. ಅರೆ! ನೆನಪು ಮಾಡದಿದ್ದರೆ ಹೂಗಳು ಹೇಗಾಗುತ್ತೀರಿ. ನೆನಪು ಮಾಡಿದರೆ ಪಾಪವು ತುಂಡಾಗುತ್ತದೆ. ಆಗ ಹೂಗಳಾಗಿ ಅನ್ಯರನ್ನೂ ಹೂವನ್ನಾಗಿ ಮಾಡುತ್ತೀರಿ. ಆಗ ಮಾಲಿ ಎಂದು ಹೆಸರಿಡಬಹುದು. ತಂದೆಗೆ ಮಾಲಿಯ ಅವಶ್ಯಕತೆ ಇದೆ, ಯಾರಾದರೂ ಮಾಲಿಗಳಿದ್ದೀರಾ? ಮಾಲಿಗಳಾಗಲು ಏಕೆ ಸಾಧ್ಯವಿಲ್ಲ? ಬಂಧನವನ್ನಂತೂ ಬಿಡಬೇಕು. ಒಳಗೆ ಇಚ್ಛೆಯು ಬರಬೇಕು. ಸೇವೆಯ ಉಲ್ಹಾಸವಿರಬೇಕು. ತಮ್ಮ ರೆಕ್ಕೆಗಳನ್ನು ಶಕ್ತಿಶಾಲಿ ಮಾಡಲು ಶ್ರಮಪಡಬೇಕು. ಯಾರಲ್ಲಿ ಪ್ರೀತಿಯಿದೆಯೋ ಅವರನ್ನು ಬಿಡಲಾಗುತ್ತದೆಯೇ? ತಂದೆಯ ಸೇವೆಗಾಗಿ ಎಲ್ಲಿಯವರೆಗೆ ಹೂವಾಗಿ ಅನ್ಯರನ್ನು ಮಾಡಲಿಲ್ಲವೋ ಅಲ್ಲಿಯವರೆಗೆ ಶ್ರೇಶ್ಠ ಪದವಿಯನ್ನು ಪಡೆಯಲು ಹೇಗೆ ಸಾಧ್ಯ? ಇದು 21 ಜನ್ಮಗಳಿಗೆ ಶ್ರೇಷ್ಠ ಪದವಿಯಾಗಿದೆ. ಮಹಾರಾಜರು, ರಾಜರು, ದೊಡ್ಡ ದೊಡ್ಡ ಸಾಹುಕಾರರು ಇದ್ದಾರೆ. ಮತ್ತೆ ನಂಬರ್ವಾರಾಗಿ ಕಡಿಮೆ ಸಾಹುಕಾರರೂ ಇದ್ದಾರೆ, ಪ್ರಜೆಗಳೂ ಇದ್ದಾರೆ. ಹಾಗಾದರೆ ನಾವು ಏನಾಗಬೇಕು? ಯಾರು ಈಗ ಪುರುಷಾರ್ಥ ಮಾಡುವರೋ ಅವರು ಕಲ್ಪ ಕಲ್ಪಾಂತರವೂ ಆಗುತ್ತಾರೆ. ಈಗ ಪೂರ್ಣ ಒತ್ತು ಕೊಟ್ಟು ಪುರುಷಾರ್ಥ ಮಾಡಬೇಕು. ನರನಿಂದ ನಾರಾಯಣನಾಗಬೇಕು, ಯಾರು ಒಳ್ಳೆಯ ಪುರುಷಾರ್ಥಿಗಳಿರುವರೋ ಅವರು ಕಾರ್ಯದಲ್ಲಿ ತರುತ್ತಾರೆ. ಪ್ರತಿನಿತ್ಯದ ಲಾಭ ನಷ್ಟವನ್ನು ನೋಡಬೇಕಾಗುತ್ತದೆ. 12 ತಿಂಗಳಿನ ಮಾತಲ್ಲ ನಿತ್ಯವೂ ತಮ್ಮ ಲಾಭ ನಷ್ಟಗಳನ್ನು ತೆಗೆಯಬೇಕು. ನಷ್ಟಕ್ಕೊಳಗಾಗಬಾರದು, ಇಲ್ಲದಿದ್ದರೆ ಮೂರನೇಯ ದರ್ಜೆಯವರಾಗಿಬಿಡುತ್ತೀರಿ. ಶಾಲೆಯಲ್ಲಿಯೂ ಸಹ ನಂಬರವಾರ್ ಇರುತ್ತಾರಲ್ಲವೆ!

ಮಧುರಾತಿ ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ - ನಮ್ಮ ಬೀಜವು ವೃಕ್ಷಪತಿಯಾಗಿದ್ದಾರೆ, ಅವರ ಬರುವಿಕೆಯಿಂದ ನಮ್ಮ ಮೇಲೆ ಬೃಹಸ್ಪತಿಯ ದೆಶೆ ಬರುತ್ತದೆ. ನಂತರ ರಾವಣ ರಾಜ್ಯ ಬಂದಾಗ ರಾಹು ದೆಶೆ ಕುಳಿತುಕೊಳ್ಳುತ್ತದೆ. ಅದು ಅತ್ಯಂತ ಶ್ರೇಷ್ಠ, ಇದು ಅತ್ಯಂತ ಕನಿಷ್ಠ. ಒಮ್ಮೆಲೆ ಶಿವಾಲಯದಿಂದ ವೇಶ್ಯಾಲಯವನ್ನಾಗಿ ಮಾಡಿಬಿಡುತ್ತಾರೆ. ಈಗ ನೀವು ಮಕ್ಕಳ ಮೇಲೆ ಬೃಹಸ್ಪತಿಯ ದೆಶೆಯಿದೆ. ಹೊಸ ವೃಕ್ಷವಾಗಿರುತ್ತದೆ ನಂತರ ಅರ್ಧದಿಂದ ಹಳೆಯದು ಪ್ರಾರಂಭ ಆಗುತ್ತದೆ. ಪ್ರತಿಯೊಬ್ಬ ಮಾಲಿಯೂ ಹೂವನ್ನು ಕರೆತರುತ್ತಾರೆ. ಕೆಲವರಂತೂ ತಂದೆಯ ಬಳಿ ಹೋಗಬೇಕು ಎಂದು ಚಡಪಡಿಸುವಂತಹ ಹೂಗಳನ್ನು ಕರೆದುಕೊಂಡು ಬರುತ್ತಾರೆ. ಎಂತೆಂತಹ ಯುಕ್ತಿಗಳಿಂದ ಮಕ್ಕಳು ಬರುತ್ತಾರೆ! ಬಹಳ ಒಳ್ಳೆಯ ಹೂಗಳನ್ನು ತಂದಿದ್ದಾರೆ ಎಂದು ತಂದೆಯು ಹೇಳುತ್ತಾರೆ. ಭಲೆ! ಮಾಲಿಯ ಎರಡನೇಯ ದರ್ಜೆಯವರಾಗಿದ್ದಾರೆ, ಮಾಲಿಗಿಂತ ಹೂಗಳು ಒಳ್ಳೆಯವರಿರುತ್ತಾರೆ. ನಮ್ಮನ್ನು ಇಷ್ಟು ಶ್ರೇಷ್ಠ ವಿಶ್ವದ ಮಾಲೀಕರನ್ನಾಗಿ ಮಾಡುವ ತಂದೆಯ ಬಳಿ ಹೋಗಬೇಕೆಂದು ಚಡಪಡಿಸುತ್ತಾರೆ. ಮನೆಯಲ್ಲಿ ಪೆಟ್ಟು ತಿಂದರೂ ಸಹ ಶಿವಬಾಬಾ ನಮ್ಮ ರಕ್ಷಣೆ ಮಾಡಿರೆಂದು ಹೇಳುತ್ತಾರೆ. ಅವರನ್ನೇ ಸತ್ಯ ದ್ರೌಪದಿಯರೆಂದು ಹೇಳಲಾಗುತ್ತದೆ. ಯಾವುದು ಕಳೆದುಹೋಗಿದೆ ಅದು ಪುನರಾವರ್ತನೆಯಾಗಬೇಕಾಗಿದೆ. ನೆನ್ನೆ ಕರೆದಿರಲ್ಲವೆ ಆದ್ದರಿಂದ ತಂದೆ ಇಂದು ರಕ್ಷಣೆ ಮಾಡಲು ಬಂದಿದ್ದಾರೆ. ಹೀಗೆ ಜ್ಞಾನದ ಧ್ವನಿ ಮಾಡಿರಿ ಎಂದು ಯುಕ್ತಿಗಳನ್ನು ತಿಳಿಸುತ್ತಾರೆ. ನೀವು ಭ್ರಮರಿಗಳಾಗಿದ್ದೀರಿ, ಅವರು ಕೀಟಗಳಾಗಿದ್ದಾರೆ. ಅವರಿಗೆ ಜ್ಞಾನದ ಧ್ವನಿ ಮಾಡುತ್ತಿರಿ. ಭಗವಾನುವಾಚ - ಕಾಮ ಮಹಾಶತ್ರುವಾಗಿದೆ ಅದನ್ನು ಜಯಿಸುವುದರಿಂದ ವಿಶ್ವದ ಮಾಲೀಕರಾಗುತ್ತೀರಿ. ಕೆಲವು ಸಮಯದಲ್ಲಿ ಅಬಲೆಯರ ಮಾತು ನಾಟುತ್ತದೆ ಆಗ ತಣ್ಣಗಾಗುತ್ತಾರೆ. ಒಳ್ಳೆಯದು - ಭಲೇ ಹೋಗಿ. ಈ ರೀತಿ ಮಾಡುವವರ ಬಳಿ ಭಲೇ ಹೋಗಿ, ನನ್ನ ಅದೃಷ್ಟದಲ್ಲಿ ಅಂತೂ ಇಲ್ಲ. ನೀವಾದರೂ ಹೋಗಿ ಎಂದು ಹೇಳುತ್ತಾರೆ. ಹೀಗೆ ದ್ರೌಪದಿಯರು ಕೂಗುತ್ತಾರೆ. ತಂದೆಯು ಬರೆಯುತ್ತಾರೆ- ಮಕ್ಕಳೇ ಜ್ಞಾನದ ಭೂ ಭೂ ಮಾಡಿ, ಕೆಲವು ಸ್ತ್ರೀಯರು ಎಂತೆಂತಹವರು ಇರುತ್ತಾರೆ ಎಂದರೆ ಅವರಿಗೆ ಶೂರ್ಪನಖಿ, ಪೂತನಿ ಎಂದು ಹೇಳಬೇಕಾಗುತ್ತದೆ. ಪುರುಷರು ಅವರಿಗೆ ಭೂ ಭೂ ಮಾಡುತ್ತಾರೆ, ಅವರು ಇನ್ನೂ ಕೀಟಗಳಾಗಿಬಿಡುತ್ತಾರೆ, ವಿಕಾರವಿಲ್ಲದೇ ಇರುವುದಕ್ಕೆ ಆಗುವುದಿಲ್ಲ. ಹೂದೋಟದ ಮಾಲೀಕನ ಬಳಿ ಭಿನ್ನ ಭಿನ್ನ ಪ್ರಕಾರದವರು ಬರುತ್ತಾರೆ, ಮಾತೇ ಕೇಳಬೇಡಿ. ಕೆಲವರು ಕನ್ಯೆಯರೂ ಸಹ ಮುಳ್ಳುಗಳಾಗುತ್ತಾರೆ, ಆದ್ದರಿಂದ ತಂದೆಯು ತಿಳಿಸುತ್ತಾರೆ - ತಮ್ಮ ಜನ್ಮ ಪತ್ರಿಯನ್ನು ತಿಳಿಸಿ. ತಂದೆಗೆ ತಿಳಿಸುವುದೇ ಇಲ್ಲ. ಮುಚ್ಚಿಡುತ್ತಾರೆಂದರೆ ಅದು ವೃದ್ಧಿಯಾಗುತ್ತದೆ. ಇಲ್ಲಿ ಅಸತ್ಯವು ನಡೆಯಲು ಸಾಧ್ಯವಿಲ್ಲ. ನಿಮ್ಮ ವೃತ್ತಿಯು ಇನ್ನೂ ಹಾಳಾಗುತ್ತಲೇ ಹೋಗುವುದು. ತಂದೆಗೆ ತಿಳಿಸುವುದರಿಂದ ಪಾರಾಗುತ್ತೀರಿ. ವಿಕಾರಿಗಳಾಗುವವರ ಮುಖ ಕಪ್ಪಾಗುತ್ತದೆ. ಪತಿತರೆಂದರೆ ಕಪ್ಪು ಮುಖ, ಕೃಷ್ಣನಿಗೂ ಶ್ಯಾಮ ಸುಂದರ ಎಂದು ಹೇಳುತ್ತಾರೆ. ಕೃಷ್ಣನನ್ನು ಕಪ್ಪಾಗಿ ಮಾಡಿದ್ದಾರೆ, ನಾರಾಯಣನನ್ನೂ ಕಪ್ಪಾಗಿ ತೋರಿಸುತ್ತಾರೆ, ಅರ್ಥವೇನೆಂದು ತಿಳಿದುಕೊಂಡಿಲ್ಲ. ನಿಮ್ಮ ಬಳಿಯಂತೂ ನಾರಾಯಣನ ಚಿತ್ರ ಸುಂದರವಾಗಿದೆ. ನಿಮ್ಮ ಗುರಿ ಧ್ಯೇಯವೇ ಇದಾಗಿದೆ - ನೀವು ಕಪ್ಪು ನಾರಾಯಣರಾಗಬೇಕೇನು? ಮಂದಿರಗಳಲ್ಲಿ ಹೇಗೆ ಮಾಡಿದ್ದಾರೆ ಆ ರೀತಿಯಂತೂ ಇರಲಿಲ್ಲ. ವಿಕಾರದಲ್ಲಿ ಬೀಳುವ ಕಾರಣ ಮುS ಕಪ್ಪಾಗುತ್ತದೆ. ಆತ್ಮವು ಕಪ್ಪಾಗಿದೆ. ಕಬ್ಬಿಣಯುಗದಿಂದ ಸ್ವರ್ಣಿಮ ಯುಗಕ್ಕೆ ಹೋಗಬೇಕಾಗಿದೆ, ಚಿನ್ನದ ಪಕ್ಷಿಗಳಾಗಬೇಕು. ಕಲ್ಕತ್ತೆಯ ಕಾಳಿಯೆಂದು ಕರೆಯುತ್ತಾರೆ, ಎಷ್ಟು ಭಯಂಕರ ಮುಖ ಕಾಣಿಸುತ್ತದೆ ಕೇಳಲೇಬೇಡಿ, ತಂದೆ ಹೇಳುತ್ತಾರೆ ಮಕ್ಕಳೇಇದೆಲ್ಲವೂ ಭಕ್ತಿಮಾರ್ಗವಾಗಿದೆ, ಈಗಂತೂ ನಿಮಗೆಲ್ಲ ಜ್ಞಾನ ಸಿಕ್ಕಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾ ಅವರ ನೆನಪು ಪೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ರೆಕ್ಕೆಗಳನ್ನು ಸ್ವತಂತ್ರಗೊಳಿಸಲು ಶ್ರಮ ಪಡಬೇಕು. ಬಂಧನಗಳಿಂದ ಮುಕ್ತರಾಗಿ ಬುದ್ಧಿವಂತ ಮಾಲಿಗಳಾಗಬೇಕು. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.

2. ತಮ್ಮನ್ನು ತಾವು ನೋಡಿಕೊಳ್ಳಬೇಕು - ನಾನು ಎಷ್ಟು ಸುಗಂಧ ಭರಿತ ಹೂವಾಗಿದ್ದೇನೆ? ನನ್ನ ವೃತ್ತಿಯು ಶುದ್ಧವಾಗಿದೆಯೇ? ಕಣ್ಣುಗಳು ಮೋಸ ಮಾಡುವುದಿಲ್ಲ ತಾನೆ? ತಮ್ಮ ನಡೆ-ನುಡಿಯ ಚಾರ್ಟ್ನ್ನಿಟ್ಟು ಕೊರತೆಗಳನ್ನು ತೆಗೆಯಬೇಕಾಗಿದೆ.

ವರದಾನ:
ಸ್ವರಾಜ್ಯ ಅಧಿಕಾರದ ನಶೆ ಮತ್ತು ನಿಶ್ಚಯದಿಂದ ಸದಾ ಶಕ್ತಿಶಾಲಿಗಳಾಗುವಂತಹ ಸಹಜಯೋಗಿ, ನಿರಂತರ ಯೋಗಿ ಭವ

ಸ್ವರಾಜ್ಯ ಅಧಿಕಾರಿ ಅರ್ಥಾತ್ ಎಲ್ಲಾ ಕಮೇಂದ್ರಿಯಗಳ ಮೇಲೆ ತಮ್ಮ ರಾಜ್ಯ. ಎಂದೂ ಸಂಕಲ್ಪದಲ್ಲಿಯೂ ಸಹ ಕರ್ಮೇಂದ್ರಿಯ ಮೋಸಮಾಡಬಾರದು. ಎಂದಾದರೂ ಸ್ವಲ್ಪವಾದರೂ ದೇಹ-ಅಭಿಮಾನ ಬಂದಿತೆಂದರೆ ಜೋಷ್ ಅಥವಾ ಕ್ರೋಧ ಸಹಜವಾಗಿ ಬರುವುದು, ಆದರೆ ಯಾರು ಸ್ವರಾಜ್ಯ ಅಧಿಕಾರಿಯಾಗಿದ್ದಾರೆ ಅವರು ಸದಾ ನಿರಹಂಕಾರಿ, ಸದಾ ನಿರ್ಮಾಣರಾಗಿರುತ್ತಾ ಸೇವೆಮಾಡುತ್ತಾರೆ. ಆದ್ದರಿಂದ ನಾನು ಸ್ವರಾಜ್ಯ ಅಧಿಕಾರಿ ಆತ್ಮನಾಗಿದ್ದೇನೆ- ಈ ನಶೆ ಮತ್ತು ನಿಶ್ಚಯದಿಂದ ಶಕ್ತಿಶಾಲಿಯಾಗಿ ಮಾಯಾಜೀತ್ ನಿಂದ ಜಗತ್ ಜೀತ್ ಆಗಿ ಆಗ ಸಹಜಯೋಗಿ, ನಿರಂತರಯೋಗಿಗಳಾಗುವಿರಿ.

ಸ್ಲೋಗನ್:
ಲೈಟ್ಹೌಸ್ ಆಗಿ ಮನಸ್ಸು-ಬುದ್ಧಿಯಿಂದ ಲೈಟ್ ಹರಡುವಲ್ಲಿ ಬಿಝಿಯಾಗಿದ್ದಾಗ ಯಾವುದೇ ಮಾತಿನಲ್ಲಿ ಭಯವಾಗುವುದಿಲ್ಲ.