06.07.25 Avyakt Bapdada
Kannada
Murli 18.01.2006 Om Shanti Madhuban
“ಸಂಕಲ್ಪ, ಸಮಯ ಮತ್ತು
ಮಾತಿನ ಉಳಿತಾಯದ ಸ್ಕೀಮ್ನ ಮೂಲಕ ಸಫಲತೆಯ ಉತ್ಸವವನ್ನಾಚರಿಸಿ, ನಿರಾಶರಾಗಿರುವ ಆತ್ಮಗಳಲ್ಲಿ
ಆಶಾದೀಪವನ್ನು ಬೆಳಗಿಸಿ”
ಇಂದು ಸ್ನೇಹದ ದಿನವಾಗಿದೆ.
ನಾಲ್ಕಾರುಕಡೆಯ ಎಲ್ಲಾ ಮಕ್ಕಳು ಸ್ನೇಹಸಾಗರನಲ್ಲಿ ಸಮಾವೇಶವಾಗಿದ್ದಾರೆ. ಈ ಸ್ನೇಹವು
ಸಹಜಯೋಗಿಗಳನ್ನಾಗಿ ಮಾಡುವಂತಹದ್ದಾಗಿದೆ. ಸ್ನೇಹವು ಸರ್ವ ಅನ್ಯಆಕರ್ಷಣೆಗಳಿಂದ ದೂರ
ಮಾಡುವಂತಹದ್ದಾಗಿದೆ. ಸ್ನೇಹದ ವರದಾನವು ತಾವೆಲ್ಲಾ ಮಕ್ಕಳಿಗೆ ಜನ್ಮದ ವರದಾನವಾಗಿದೆ. ಸ್ನೇಹದಲ್ಲಿ
ಪರಿವರ್ತನೆ ಮಾಡಿಸುವ ಶಕ್ತಿಯಿದೆ ಅಂದಾಗ ಇಂದಿನ ದಿನ ಎರಡು ಪ್ರಕಾರದ ಮಕ್ಕಳನ್ನು ನಾಲ್ಕಾರುಕಡೆ
ನೋಡಿದೆವು. ಲವಲೀ ಮಕ್ಕಳಂತೂ ಎಲ್ಲರೂ ಆಗಿದ್ದಾರೆ ಆದರೆ ಒಂದನೆಯವರು ಲವಲೀ ಮಕ್ಕಳು, ಎರಡನೇ
ಪ್ರಕಾರದವರು ಲವಲೀನ ಮಕ್ಕಳು. ಲವಲೀನ ಮಕ್ಕಳು ಪ್ರತೀ ಸಂಕಲ್ಪ, ಪ್ರತೀ ಶ್ವಾಸದಲ್ಲಿ, ಪ್ರತೀ ಮಾತು,
ಪ್ರತಿಯೊಂದು ಕರ್ಮದಲ್ಲಿ ಸ್ವತಃ ಮತ್ತು ಸಹಜವಾಗಿ ತಂದೆಯ ಸಮಾನರಾಗಿರುತ್ತಾರೆ - ಏಕೆ? ಮಕ್ಕಳಿಗೆ
ತಂದೆಯು ಸಮರ್ಥ ಭವದ ವರದಾನ ಕೊಟ್ಟಿದ್ದಾರೆ. ಇಂದಿನ ದಿನಕ್ಕೆ ಸ್ಮೃತಿ ಸೋ ಸಮರ್ಥ ದಿವಸವೆಂದು
ಹೇಳುತ್ತೀರಿ - ಏಕೆ? ತಂದೆಯು ಇಂದಿನ ದಿನದಂದು ಸ್ವಯಂನ್ನು ಬೆನ್ನೆಲುಬನ್ನಾಗಿ ಮಾಡಿಕೊಂಡರು ಮತ್ತು
ಲವಲೀನ ಮಕ್ಕಳನ್ನು ವಿಶ್ವದ ಸ್ಟೇಜಿನಲ್ಲಿ ಪ್ರತ್ಯಕ್ಷಗೊಳಿಸಿದರು. ವ್ಯಕ್ತದಲ್ಲಿ ಮಕ್ಕಳನ್ನು
ಪ್ರತ್ಯಕ್ಷ ಮಾಡಿ ಸ್ವಯಂ ಅವ್ಯಕ್ತ ರೂಪದಲ್ಲಿ ಜೊತೆಗಾರನಾದರು.
ಇಂದಿನ ಈ ಸ್ಮೃತಿ ಸೋ
ಸಮರ್ಥ ದಿವಸದಂದು ಮಕ್ಕಳನ್ನು ಬಾಲಕರಿಂದ ಮಾಲೀಕರನ್ನಾಗಿ ಮಾಡಿ ಸರ್ವಶಕ್ತಿವಂತ ತಂದೆಯನ್ನು ಮಾ||
ಸರ್ವಶಕ್ತಿವಂತರಾಗಿ ಪ್ರತ್ಯಕ್ಷಮಾಡುವ ಕಾರ್ಯವನ್ನು ಕೊಡಲಾಯಿತು ಮತ್ತು ತಂದೆಯು ನೋಡಿ
ಖುಷಿಪಡುತ್ತಾರೆ - ಎಲ್ಲಾ ಮಕ್ಕಳೂ ಸಹ ಯಥಾಯೋಗ ತಥಾ ಶಕ್ತಿಯಿಂದ ತಂದೆಯನ್ನು ಪ್ರತ್ಯಕ್ಷ ಮಾಡುವ
ಅರ್ಥಾತ್ ವಿಶ್ವಕಲ್ಯಾಣ ಮಾಡಿ ವಿಶ್ವಪರಿವರ್ತನೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ತಂದೆಯ ಮೂಲಕ
ಯಾವ ಸರ್ವಶಕ್ತಿಗಳ ಆಸ್ತಿಯು ಸಿಕ್ಕಿದೆಯೋ ಅದನ್ನು ಸ್ವಯಂನಪ್ರತಿ ಹಾಗೂ ವಿಶ್ವದ ಆತ್ಮಗಳಪ್ರತಿ
ಕಾರ್ಯದಲ್ಲಿ ತೊಡಗಿಸುತ್ತಿದ್ದಾರೆ. ಬಾಪ್ದಾದಾರವರೂ ಸಹ ಇಂತಹ ಮಾ|| ಸರ್ವಶಕ್ತಿವಂತರು, ತಂದೆಯ
ಸಮಾನ ಉಮ್ಮಂಗ-ಉತ್ಸಾಹದಲ್ಲಿರುವಂತಹ ಆಲ್ರೌಂಡ್ ಸೇವಾಧಾರಿ, ನಿಸ್ವಾರ್ಥ ಸೇವಾಧಾರಿ, ಬೇಹದ್ದಿನ
ಸೇವಾಧಾರಿ ಮಕ್ಕಳಿಗೆ ಪದಮಾ-ಪದಮಾದಷ್ಟು ಶುಭಾಷಯಗಳನ್ನು ನೀಡುತ್ತಿದ್ದೇವೆ. ಶುಭಾಷಯಗಳು.
ಶುಭಾಷಯಗಳು. ದೇಶ-ವಿದೇಶ, ದೇಶದ ಮಕ್ಕಳೂ ಕಡಿಮೆಯಿಲ್ಲ ಮತ್ತು ವಿದೇಶದ ಮಕ್ಕಳೂ ಸಹ ಕಡಿಮೆಯಿಲ್ಲ.
ಬಾಪ್ದಾದಾ ಇಂತಹ ಮಕ್ಕಳ ಮಹಿಮೆಯನ್ನು ಒಳಗಿಂದೊಳಗೆ ಮಾಡುತ್ತಾರೆ ಮತ್ತು ವಾಹ್! ಮಕ್ಕಳೇ ವಾಹ್!
ಎಂದು ಗೀತೆಯನ್ನೂ ಹಾಡುತ್ತಾರೆ. ತಾವೆಲ್ಲರೂ ವಾಹ್! ವಾಹ್! ಮಕ್ಕಳಾಗಿದ್ದೀರಲ್ಲವೆ. ಕೈಯನ್ನು
ಅಲುಗಾಡಿಸುತ್ತಿದ್ದಾರೆ. ಬಹಳ ಒಳ್ಳೆಯದು- ಬಾಪ್ದಾದಾರವರಿಗೆ ಹೆಮ್ಮೆಯಿದೆ - ಮಕ್ಕಳ ಪ್ರತಿ ಯಾವ
ಹೆಮ್ಮೆಯಿದೆಯೆಂದರೆ ಇಡೀ ಕಲ್ಪದಲ್ಲಿ ಯಾವ ತಂದೆಯ ಪ್ರತೀ ಮಗುವು ಸ್ವರಾಜ್ಯಾಧಿಕಾರಿ
ರಾಜರಾಗಿರುವಂತಹವರು ಯಾರೂ ಇರಲು ಸಾಧ್ಯವಿಲ್ಲ. ತಾವೆಲ್ಲರೂ ಸ್ವರಾಜ್ಯ ಅಧಿಕಾರಿ ರಾಜರಲ್ಲವೆ.
ಪ್ರಜೆಗಳಲ್ಲ ತಾನೆ! ಕೆಲವು ಮಕ್ಕಳು ವಾರ್ತಾಲಾಪ ಮಾಡುವಾಗ ಹೇಳುತ್ತಾರೆ - ಬಾಬಾ, ನಾವು
ಭವಿಷ್ಯದಲ್ಲಿ ಏನಾಗುತ್ತೇವೆ, ಅದರ ಚಿತ್ರವನ್ನು ನಮಗೆ ತೋರಿಸಿ - ಬಾಪ್ದಾದಾ ಏನು ಹೇಳುತ್ತಾರೆ?
ಹಳೆಯ ಮಕ್ಕಳಂತೂ ಹೇಳುತ್ತಾರೆ - ಜಗದಂಬಾ ತಾಯಿಯು ಪ್ರತಿಯೊಬ್ಬ ಮಗುವಿಗೆ ಚಿತ್ರವನ್ನು
ತೋರಿಸುತ್ತಿದ್ದರು ಅಂದಾಗ ನಮಗೂ ಚಿತ್ರವನ್ನು ತೋರಿಸಿ. ಇದಕ್ಕೆ ಬಾಪ್ದಾದಾ ಹೇಳುತ್ತಾರೆ -
ಪ್ರತಿಯೊಬ್ಬ ಮಗುವಿಗೆ ತಂದೆಯು ವಿಚಿತ್ರ ದರ್ಪಣ ಕೊಟ್ಟಿದ್ದಾರೆ. ಆ ದರ್ಪಣದಲ್ಲಿ ನಾನು ಯಾರು?
ಎಂದು ತಮ್ಮ ಭವಿಷ್ಯದ ಚಿತ್ರವನ್ನು ನೋಡಬಲ್ಲಿರಿ. ಆ ದರ್ಪಣ ತಮ್ಮಬಳಿ ಇದೆಯೇ? ಅದು ಯಾವ
ದರ್ಪಣವೆಂದು ತಿಳಿದುಕೊಂಡಿದ್ದೀರಾ? ಮೊದಲ ಸಾಲಿನವರು ತಿಳಿದುಕೊಂಡಿರಬೇಕಲ್ಲವೆ? ಆ ದರ್ಪಣವಾಗಿದೆ
- ವರ್ತಮಾನ ಸಮಯದ ಸ್ವರಾಜ್ಯ ಸ್ಥಿತಿಯ ದರ್ಪಣ. ವರ್ತಮಾನ ಸಮಯದಲ್ಲಿ ಯಾರೆಷ್ಟು ಸ್ವರಾಜ್ಯಾಧಿಕಾರಿ
ಆಗಿದ್ದಾರೆಯೋ ಅದರನುಸಾರ ವಿಶ್ವದ ರಾಜ್ಯಾಧಿಕಾರಿಗಳಾಗುತ್ತಾರೆ. ಈಗ ತಮ್ಮನ್ನು ತಾವು ನಾನು ಸದಾ
ಸ್ವರಾಜ್ಯ ಅಧಿಕಾರಿಯಾಗಿದ್ದೇನೆಯೇ? ಅಥವಾ ಕೆಲವೊಮ್ಮೆ ಅಧೀನ, ಕೆಲವೊಮ್ಮೆ ಅಧಿಕಾರಿಯೇ? ಎಂದು
ದರ್ಪಣದಲ್ಲಿ ನೋಡಿಕೊಳ್ಳಿ. ಕೆಲವೊಮ್ಮೆ ಅಧಿಕಾರಿಯಾಗುತ್ತೀರಿ. ಕೆಲವೊಮ್ಮೆ ಕಣ್ಣು ಮೋಸಮಾಡುತ್ತದೆ,
ಮನಸ್ಸು ಮೋಸಗೊಳಿಸುತ್ತದೆ. ಬಾಯಿಯು ಮೋಸ ಮಾಡುತ್ತದೆ, ಇನ್ನೂ ಕೆಲವೊಮ್ಮೆ ಕಿವಿಗಳೂ ಸಹ
ಮೋಸಗೊಳಿಸುತ್ತದೆ. ವ್ಯರ್ಥಮಾತುಗಳನ್ನು ಕೇಳುವ ಆಸಕ್ತಿ ಬಂದುಬಿಡುತ್ತದೆ. ಒಂದುವೇಳೆ ಯಾವುದೇ
ಕರ್ಮೇಂದ್ರಿಯವು ಮೋಸಗೊಳಿಸುತ್ತದೆ, ಪರವಶರನ್ನಾಗಿ ಮಾಡುತ್ತದೆಯೆಂದರೆ ಇದರಿಂದ ಸಿದ್ಧವಾಗುತ್ತದೆ
- ತಂದೆಯ ಮೂಲಕ ಯಾವ ಸರ್ವಶಕ್ತಿಗಳು ವರದಾನದಲ್ಲಿ ಸಿಕ್ಕಿದೆ ಹಾಗೂ ಆಸ್ತಿಯಲ್ಲಿ ಸಿಕ್ಕಿದೆಯೋ ಆ
ಕಂಟ್ರೋಲಿಂಗ್ ಪವರ್, ರೂಲಿಂಗ್ ಪವರ್ ಇಲ್ಲ. ಅಂದಾಗ ಆಲೋಚಿಸಿ - ಯಾರು ಸ್ವಯಂನಮೇಲೆ ಆಡಳಿತ ನಡೆಸಲು
ಸಾಧ್ಯವಿಲ್ಲವೋ ಅವರು ವಿಶ್ವದಮೇಲೆ ಹೇಗೆ ಆಡಳಿತ ಮಾಡಬಲ್ಲರು? ತಮ್ಮ ವರ್ತಮಾನ ಸ್ಥಿತಿಯ ಸ್ವರಾಜ್ಯ
ಅಧಿಕಾರಿಯ ದರ್ಪಣದಲ್ಲಿ ಪರಿಶೀಲನೆ ಮಾಡಿಕೊಳ್ಳಿ. ದರ್ಪಣವಂತೂ ಎಲ್ಲರಿಗೂ ಸಿಕ್ಕಿದೆಯಲ್ಲವೆ.
ದರ್ಪಣವು ಸಿಕ್ಕಿದ್ದರೆ ಕೈಯನ್ನೆತ್ತಿರಿ. ದರ್ಪಣದಲ್ಲಿ ಯಾವುದೇ ಕಲೆಯುಂಟಾಗಿಲ್ಲ ತಾನೆ? ದರ್ಪಣವು
ಸ್ಪಷ್ಟವಾಗಿದೆಯೇ?
ಬಾಪ್ದಾದಾ ಪ್ರತಿಯೊಬ್ಬ
ಮಗುವಿಗೆ ಸ್ವರಾಜ್ಯ ಅಧಿಕಾರಿಯ ಸ್ವಮಾನವನ್ನು ಕೊಟ್ಟಿದ್ದಾರೆ. ಮಾ|| ಸರ್ವಶಕ್ತಿವಂತರ ಬಿರುದೂ ಸಹ
ಎಲ್ಲಾ ಮಕ್ಕಳಿಗೆ ತಂದೆಯ ಮೂಲಕ ಸಿಕ್ಕಿದೆ. ಮಾ|| ಶಕ್ತಿವಂತರಲ್ಲ, ಸರ್ವಶಕ್ತಿವಂತರು. ಕೆಲವು
ಮಕ್ಕಳು ವಾರ್ತಾಲಾಪದಲ್ಲಿ ಇದನ್ನೂ ಸಹ ಹೇಳುತ್ತಾರೆ - ಬಾಬಾ, ತಾವಂತೂ ಸರ್ವಶಕ್ತಿಗಳನ್ನು
ಕೊಟ್ಟಿದ್ದೀರಿ ಆದರೆ ಈ ಶಕ್ತಿಗಳು ಕೆಲಕೆಲವೊಮ್ಮೆ ಸಮಯದಲ್ಲಿ ಕೆಲಸ ಮಾಡುವುದಿಲ್ಲ. ಸಮಯದಲ್ಲಿ
ಇಮರ್ಜ್ ಆಗುವುದಿಲ್ಲ. ಸಮಯವು ಕಳೆದುಹೋದಮೇಲೆ ಇಮರ್ಜ್ ಆಗುತ್ತದೆಯೆಂದು ದೂರುಕೊಡುತ್ತಾರೆ. ಇದಕ್ಕೆ
ಕಾರಣವೇನಾಗುತ್ತದೆ? ಯಾವ ಸಮಯದಲ್ಲಿ ಯಾವ ಶಕ್ತಿಯನ್ನು ಆಹ್ವಾನ ಮಾಡುತ್ತೀರೋ ಆ ಸಮಯದಲ್ಲಿ
ಪರಿಶೀಲನೆ ಮಾಡಿಕೊಳ್ಳಿ - ನಾನು ಮಾಲೀಕನಾಗಿ ಆಸನದ ಮೇಲೆ ಸ್ಥಿತನಾಗಿದ್ದೇನೆಯೇ? ಒಂದುವೇಳೆ
ಯಾರಾದಾರೂ ಆಸನದಮೇಲೆ ಸ್ಥಿತರಾಗಿಲ್ಲವೆಂದರೆ ಅಂತಹವರ ಆಜ್ಞೆಯನ್ನು ಯಾರೂ ಪಾಲಿಸುವುದಿಲ್ಲ.
ಸ್ವರಾಜ್ಯ ಅಧಿಕಾರಿಯಾಗಿದ್ದೇನೆ, ಮಾ|| ಸರ್ವಶಕ್ತಿವಂತನಾಗಿದ್ದೇನೆ, ತಂದೆಯ ಮೂಲಕ ಆಸ್ತಿ ಮತ್ತು
ವರದಾನಕ್ಕೆ ಅಧಿಕಾರಿಯಾಗಿದ್ದೇನೆ - ಈ ಸ್ಥಿತಿಯ ಆಸನದಲ್ಲಿ ಸ್ಥಿತರಾಗಿ ನಂತರ ಆಜ್ಞೆ ಮಾಡಿ. ಏನು
ಮಾಡಲಿ, ಹೇಗೆ ಮಾಡಲಿ ಆಗುತ್ತಿಲ್ಲವೆಂದು ಆಸನದ ಕೆಳಗೆ ಕುಳಿತು, ಆಸನದಿಂದ ಇಳಿದು ಆಜ್ಞೆ
ಮಾಡುತ್ತೀರಿ ಆಗ ಅದನ್ನು ಪಾಲಿಸುವರೇ? ಈಗಿನ ಕಾಲದಲ್ಲಿಯೂ ಒಂದುವೇಳೆ ಯಾರಾದರೂ
ಪ್ರಧಾನಮಂತ್ರಿಯಾಗಿದ್ದಾರೆ, ಆಸನದಲ್ಲಿದ್ದಾರೆ ಮತ್ತು ಅವರು ಆಸನದಿಂದ ಕೆಳಗಿಳಿದಮೇಲೆ ಯಾರಾದರೂ
ಅವರ ಆಜ್ಞೆಯನ್ನು ಪಾಲಿಸುವರೇ? ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ಆಸನದ ಮೇಲೆ ಸ್ಥಿತನಾಗಿದ್ದೇನೆಯೇ?
ಅಧಿಕಾರಿಯಾಗಿ ಆಜ್ಞೆ ಮಾಡುತ್ತೇನೆಯೇ? ತಂದೆಯು ಪ್ರತಿಯೊಬ್ಬ ಮಗುವಿಗೆ ಅಥಾರಿಟಿಯನ್ನು
ಕೊಟ್ಟಿದ್ದಾರೆ, ಇದು ಪರಮಾತ್ಮನ ಅಥಾರಿಟಿಯಾಗಿದೆ, ಯಾವುದೇ ಆತ್ಮನ ಅಥಾರಿಟಿಯು ಸಿಕ್ಕಿಲ್ಲ, ಇದು
ಮಹಾತ್ಮರ ಅಥಾರಿಟಿಯೂ ಅಲ್ಲ. ಪರಮಾತ್ಮನ ಅಥಾರಿಟಿಯಾಗಿದೆ ಅಂದಮೇಲೆ ಅಥಾರಿಟಿ ಮತ್ತು ಅಧಿಕಾರ - ಈ
ಸ್ಥಿತಿಯಲ್ಲಿ ಸ್ಥಿತರಾಗಿ ಯಾವುದೇ ಶಕ್ತಿಗೆ ಆಜ್ಞೆ ಮಾಡಿ ಆಗ ಅದು ಆಯಿತು ಪ್ರಭು ಎಂದು ಹೇಳಿ
ಹಾಜರಾಗಿಬಿಡುವುದು. ಸರ್ವಶಕ್ತಿಗಳ ಮುಂದೆ ಈ ಮಾಯೆ, ಪ್ರಕೃತಿ, ಸ್ವಭಾವ, ಸಂಸ್ಕಾರ ಎಲ್ಲವೂ
ದಾಸಿಯಾಗಿಬಿಡುತ್ತದೆ. ಮಾಲೀಕರು ನಮಗೆ ಆಜ್ಞೆ ನೀಡಲಿ ಎಂದು ತಾವು ಮಾಲೀಕರಿಗಾಗಿ ಕಾಯುತ್ತಿರುತ್ತದೆ.
ಇಂದು ಸಮರ್ಥ ದಿವಸವಲ್ಲವೆ
ಆದ್ದರಿಂದ ಬಾಪ್ದಾದಾ ಮಕ್ಕಳಲ್ಲಿ ಯಾವ ಯಾವ ಸಾಮರ್ಥ್ಯವಿದೆ ಎಂಬುದನ್ನು ರಿವೈಜ್
ಮಾಡಿಸುತ್ತಿದ್ದಾರೆ, ಅಂಡರ್ಲೈನ್ ಮಾಡಿಸುತ್ತ್ತಿದ್ದಾರೆ. ಮಕ್ಕಳು ಸಮಯದಲ್ಲಿ ಏಕೆ
ಶಕ್ತಿಹೀನರಾಗಿಬಿಡುತ್ತೀರಿ? ಬಾಪ್ದಾದಾ ನೋಡಿದರು - ಮೆಜಾರಿಟಿ ಮಕ್ಕಳಲ್ಲಿ ಲೀಕೇಜ್ ಇದೆ.
ಶಕ್ತಿಗಳು ಲೀಕೇಜ್ ಆಗುವಕಾರಣ ಕಡಿಮೆಯಾಗಿಬಿಡುತ್ತದೆ ಮತ್ತು ವಿಶೇಷವಾಗಿ ಎರಡು ಮಾತುಗಳ ಲೀಕೇಜ್
ಇದೆ. ಅವರೆಡು ಮಾತುಗಳಾಗಿವೆ - ಸಮಯ ಮತ್ತು ಸಂಕಲ್ಪ ವ್ಯರ್ಥವಾಗಿ ಹೋಗುತ್ತಿದೆ.
ಕೆಟ್ಟದಾಗಿರುವುದಿಲ್ಲ ಆದರೆ ವ್ಯರ್ಥ. ಸಮಯದಲ್ಲಿ ಕೆಟ್ಟಕಾರ್ಯವನ್ನಂತೂ ಮಾಡುವುದಿಲ್ಲ ಆದರೆ ಜಮಾ
ಸಹ ಮಾಡಿಕೊಳ್ಳುವುದಿಲ್ಲ. ಕೇವಲ ಇಂದು ಏನು ಕೆಟ್ಟದ್ದು ಮಾಡಲಿಲ್ಲವಲ್ಲ ಎಂದು ನೋಡಿಕೊಳ್ಳುತ್ತಾರೆ
ಆದರೆ ಇಂದು ಏನನ್ನು ಜಮಾ ಮಾಡಿಕೊಂಡೆನು? ಕಳೆಯುವುದಂತೂ ಕಳೆಯಲಿಲ್ಲ ಆದರೆ ಸಂಪಾದನೆ ಮಾಡಿಕೊಂಡೆನೆ?
ದುಃಖವನ್ನಂತೂ ಕೊಡಲಿಲ್ಲ ಆದರೆ ಎಷ್ಟು ಮಂದಿಗೆ ಸುಖ ಕೊಟ್ಟೆನು? ಯಾರನ್ನೂ ಅಶಾಂತ ಮಾಡಲಿಲ್ಲ ಆದರೆ
ಶಾಂತಿಯ ವೈಬ್ರೇಷನ್ ಎಷ್ಟು ಹರಡಿದೆನು? ಶಾಂತಿದೂತನಾಗಿ ಎಷ್ಟು ಆತ್ಮರಿಗೆ ಶಾಂತಿಯನ್ನು ಕೊಟ್ಟೆನು
- ವಾಯುಮಂಡಲದ ಮೂಲಕ ಅಥವಾ ಮುಖದ ಮೂಲಕ ಇಲ್ಲವೆ ವೈಬ್ರೇಷನ್ನ ಮೂಲಕ ಏಕೆಂದರೆ ನಿಮಗೆ ತಿಳಿದಿದೆ -
ಇದು ಅತಿಕಡಿಮೆ ಸಮಯವಾಗಿದೆ, ಇದು ಪುರುಷೋತ್ತಮ ಕಲ್ಯಾಣಕಾರಿ ಜಮಾ ಮಾಡಿಕೊಳ್ಳುವ ಸಮಯವಾಗಿದೆ.
ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ - ಇದು ಪ್ರತೀ ಘಳಿಗೆ ನೆನಪಿರಲಿ. ಮಾಡೋಣ, ಆಗಿಬಿಡುವುದು.....
ಈ ರೀತಿ ಅಲ್ಲ. ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ. ಬ್ರಹ್ಮಾತಂದೆಯದು ಇದೇ ತೀವ್ರಗತಿಯ
ಪುರುಷಾರ್ಥವಿತ್ತು ಆದ್ದರಿಂದ ನಂಬರ್ವನ್ ಗುರಿಯನ್ನು ತಲುಪಿದರು ಅಂದಾಗ ತಂದೆಯು ಯಾವ
ಸಾಮರ್ಥ್ಯವನ್ನು ಕೊಟ್ಟಿದ್ದಾರೆ, ಇದು ಸಮರ್ಥ ದಿವಸದಂದು ನೆನಪು ಬಂದಿತಲ್ಲವೆ. ಉಳಿತಾಯದ ಸ್ಕೀಮ್
ಮಾಡಿ. ಸಂಕಲ್ಪದ ಉಳಿತಾಯ, ಸಮಯದ ಉಳಿತಾಯ, ವಾಣಿಯ ಉಳಿತಾಯ, ಯಾವುದು ಯಥಾರ್ಥ ಮಾತಲ್ಲವೋ ಆ ಯಥಾರ್ಥ
ವ್ಯರ್ಥ ಮಾತಿನ ಉಳಿತಾಯ.
ಬಾಪ್ದಾದಾ ಎಲ್ಲಾ
ಮಕ್ಕಳನ್ನು ಸದಾ ಅಥಾರಿಟಿಯ ಆಸನದಲ್ಲಿ ಸ್ಥಿತರಾಗಿರುವ ಸ್ವರಾಜ್ಯ ಅಧಿಕಾರಿ ರಾಜರ ರೂಪದಲ್ಲಿ ನೋಡಲು
ಬಯಸುತ್ತಾರೆ. ನಿಮಗೂ ಇದು ಇಷ್ಟವಲ್ಲವೆ. ಈ ರೂಪವು ಇಷ್ಟವಾಗಿದೆಯಲ್ಲವೆ! ಕೆಲವೊಮ್ಮೆ ಬಾಪ್ದಾದಾ
ಯಾವಾಗ ಯಾವುದೇ ಮಗುವನ್ನು ಟಿ.ವಿ.ಯಲ್ಲಿ ನೋಡಿದರೂ ಇದೇ ರೂಪದಲ್ಲಿ ನೋಡಬೇಕು. ಬಾಪ್ದಾದಾರವರ ಬಳಿ
ನ್ಯಾಚುರಲ್ ಟಿ.ವಿ. ಇದೆ, ಸ್ವಿಚ್ಅನ್ನು ಒತ್ತಬೇಕಾಗಿಲ್ಲ. ಒಂದೇ ಸಮಯದಲ್ಲಿ ನಾಲ್ಕಾರುಕಡೆಯ
ಮಕ್ಕಳನ್ನು ನೋಡಬಲ್ಲರು. ಪ್ರತಿಯೊಬ್ಬ ಮಗುವನ್ನು ಮೂಲೆ-ಮೂಲೆಯಲ್ಲಿರುವವರನ್ನು ನೋಡಬಲ್ಲರು ಅಂದಾಗ
ಇದು ಸಾಧ್ಯವೇ? ನಾಳೆಯಿಂದ ಟಿ.ವಿ.ಯನ್ನು ತೆರೆದಾಗ ಏನು ಕಾಣಿಸುವುದು? ಫರಿಶ್ತೆಯ ಉಡುಪಿನಲ್ಲಿ,
ಫರಿಶ್ತೆಗಳ ಉಡುಪಾಗಿದೆ. ಬೆಳಕಿನಿಂದ ಹೊಳೆಯುವ ಉಡುಪು, ಮಿಂಚುವ ಉಡುಪು - ಈ ಶರೀರಭಾನದ ಮಣ್ಣಿನ
ಉಡುಪನ್ನು ಧರಿಸಬೇಡಿ. ಹೊಳೆಯುತ್ತಿರುವ ಉಡುಪಾಗಿರಲಿ. ಸಫಲತೆಯ ನಕ್ಷತ್ರಗಳಾಗಿರಿ. ಇಂತಹ
ಪ್ರತಿಯೊಬ್ಬರ ಮೂರ್ತಿಯನ್ನು ಈ ರೂಪದಲ್ಲಿ ನೋಡಲು ಬಯಸುತ್ತೇವೆ. ನಿಮಗೂ ಪ್ರಿಯವಲ್ಲವೆ. ಮಣ್ಣಿನ
ಉಡುಪನ್ನು ಧರಿಸುತ್ತೀರೆಂದರೆ ಮಣ್ಣಿನ ತರಹವೇ ಆಗಿಬಿಡುತ್ತೀರಿ. ಹೇಗೆ ತಂದೆಯು ಅಶರೀರಿಯಾಗಿದ್ದಾರೆ,
ಬ್ರಹ್ಮಾತಂದೆಯು ಬೆಳಕಿನ ಉಡುಪಿನಲ್ಲಿದ್ದಾರೆ, ಫರಿಶ್ತಾ ಆಗಿದ್ದಾರೆ, ಅದೇ ರೀತಿ ಫಾಲೋ ಫಾದರ್
ಮಾಡಿ. ಸ್ಥೂಲರೂಪದಲ್ಲಿ ನೋಡಿ. ಒಂದುವೇಳೆ ತಮ್ಮ ವಸ್ತ್ರಗಳಿಗೆ ಮಣ್ಣು ಆದರೆ ಕಲೆಯುಂಟಾದರೆ ಏನು
ಮಾಡುತ್ತೀರಿ? ಅದನ್ನು ಬದಲಾಯಿಸಿಬಿಡುತ್ತೀರಲ್ಲವೆ ಅದೇ ರೀತಿ ಪರಿಶೀಲನೆ ಮಾಡಿಕೊಳ್ಳಿ - ಸದಾ
ಹೊಳೆಯುವಂತಹ ಫರಿಶ್ತೆಯ ಉಡುಪಿದೆಯೇ? ನನ್ನ ಪ್ರತಿಯೊಬ್ಬ ಮಗುವೂ ರಾಜಾಮಗುವಾಗಿದೆ ಎಂದು ತಂದೆಗೆ
ಯಾವ ಹೆಮ್ಮೆಯಿದೆಯೋ ಅದೇ ಸ್ವರೂಪದಲ್ಲಿರಿ, ರಾಜರಾಗಿ ಇರಿ. ಈ ಮಾಯೆಯು ಈ ರೀತಿ ತಮಗೆ
ದಾಸಿಯಾಗುವುದು ಮತ್ತು ಬೀಳ್ಕೊಡುಗೆಯನ್ನು ತೆಗೆದುಕೊಳ್ಳಲು ಬರುವುದು ಅಂದರೆ ಅರ್ಧಕಲ್ಪಕ್ಕಾಗಿ
ನಿಮ್ಮಿಂದ ಬೀಳ್ಕೊಡುಗೆಯನ್ನು ತೆಗೆದುಕೊಳ್ಳಲು ಬರುತ್ತದೆ, ಯುದ್ಧ ಮಾಡುವುದಿಲ್ಲ. ಬಾಪ್ದಾದಾ ಸದಾ
ಹೇಳುತ್ತಾರೆ - ತಂದೆಯ ಮೇಲೆ ಬಲಿಹಾರಿಯಾಗುವವರು ಎಂದೂ ಹಾರ್ (ಸೋಲು) ಅನುಭವಿಸಲು ಸಾಧ್ಯವಿಲ್ಲ.
ಒಂದುವೇಳೆ ಹಾರ್ (ಸೋಲು) ಅನುಭವಿಸಿದರೆ ಬಲಿಹಾರಿಯಾಗಿಲ್ಲ ಎಂದರ್ಥ.
ಈಗ ತಮ್ಮೆಲ್ಲರ ಮೀಟಿಂಗ್
ಆಗುವುದಿದೆಯಲ್ಲವೆ. ಮೀಟಿಂಗ್ನ ದಿನಾಂಕವು ನಿಗಧಿಯಾಗುತ್ತದೆಯಲ್ಲವೆ ಅಂದಾಗ ಈ ಬಾರಿ ಕೇವಲ
ಸೇವಾಯೋಜನೆಯ ಮೀಟಿಂಗ್ನ್ನು ಬಾಪ್ದಾದಾ ನೋಡಲು ಬಯಸುವುದಿಲ್ಲ. ಸೇವೆಯ ಯೋಜನೆಯನ್ನು ಭಲೆ ಮಾಡಿ ಆದರೆ
ಮೀಟಿಂಗ್ನಲ್ಲಿ ಸಫಲತೆಯ ಉತ್ಸವದ ಯೋಜನೆ ಮಾಡಿ. ಬಹಳಷ್ಟು ಉತ್ಸವ (ಆಚರಣೆ) ವನ್ನು ಮಾಡಿದಿರಿ. ಈಗ
ಸಫಲತೆಯ ಉತ್ಸವವನ್ನಾಚರಿಸುವ ದಿನಾಂಕವನ್ನು ನಿಗಧಿಪಡಿಸಿ. ಎಲ್ಲರೂ ಹೇಗಾಗುವರೋ ಎಂದು
ಆಲೋಚಿಸುತ್ತೀರಾ? ಹೋಗಲಿ, ಕೊನೆಪಕ್ಷ 108 ರತ್ನಗಳಂತೂ ಸಫಲತಾಮೂರ್ತಿಯ ಉತ್ಸವವನ್ನಾಚರಿಸಿ
ಉದಾಹರಣೆಯಾಗಿ. ಇದು ಸಾಧ್ಯವೇ? ಹೇಳಿರಿ. ಮೊದಲ ಸಾಲಿನವರು ಹೇಳಿರಿ? ಸಾಧ್ಯವೆ? ಉತ್ತರವನ್ನು
ಕೊಡುವ ಸಾಹಸವನ್ನಿಡುವುದಿಲ್ಲ. ಮಾಡುತ್ತೇವೆಯೇ ಅಥವಾ ಇಲ್ಲವೋ ಎಂದು ಆಲೋಚಿಸುತ್ತೀರಿ.
ಸಾಹಸವಿದ್ದಾಗ ಅಲ್ಲಿ ಎಲ್ಲವೂ ಆಗುತ್ತದೆ. ದಾದೀಜಿಯು ಹೇಳಲಿ - 108 ಮಂದಿ ಸಫಲತಾಮೂರ್ತಿಗಳಾಗುವಿರಾ?
(ಹೌದು ಬಾಬಾ ಖಂಡಿತ ಆಗಲು ಸಾಧ್ಯತೆಯಿದೆ. ಸಫಲತೆಯ ಉತ್ಸವವಾಗುತ್ತದೆ.) ನೋಡಿ, ದಾದೀಜಿಯಲ್ಲಿ
ಧೈರ್ಯವಿದೆ, ತಮ್ಮೆಲ್ಲರ ಕಡೆಯಿಂದ ಧೈರ್ಯವನ್ನಿಡುತ್ತಿದ್ದಾರೆ ಅಂದಾಗ ಸಹಯೋಗಿಗಳಾಗಿ. ಈ ಬಾರಿ
ಮೀಟಿಂಗ್ ಆದಾಗ ಅದರಲ್ಲಿ ಬಾಪ್ದಾದಾ ರಿಪೋರ್ಟ್ ತೆಗೆದುಕೊಳ್ಳುತ್ತೇವೆ. ಪಾಂಡವರೇ ಹೇಳಿ. ಏಕೆ
ಸುಮ್ಮನಿದ್ದೀರಿ? ಏಕೆ ಮೌನವಾಗಿದ್ದೀರಿ? ಸಾಹಸವನ್ನೇಕೆ ಇಡುತ್ತಿಲ್ಲ? ಮಾಡಿ ತೋರಿಸುವಿರಾ?
ಒಳ್ಳೆಯದು. ಸಾಹಸವನ್ನು ಇಡಬಲ್ಲಿರಾ? ನಾವು ಸಾಹಸವನ್ನಿಟ್ಟು ಮಾಡಿ ತೋರಿಸುತ್ತೇವೆಂದು ಯಾರು
ತಿಳಿಯುವಿರೋ ಅವರು ಕೈಯೆತ್ತಿರಿ. ಮಾಡುವಿರಾ? ಯಾವುದೇ ಸಂಸ್ಕಾರ ಇರುವುದಿಲ್ಲವೆ? ಯಾವುದೇ
ನಿರ್ಬಲತೆಯಿರುವುದಿಲ್ಲವೆ? ಒಳ್ಳೆಯದು- ಮಧುಬನದವರೂ ಸಹ ಕೈಯೆತ್ತುತ್ತಿದ್ದಾರೆ. ವಾಹ್! ಶುಭಾಷಯಗಳು.
ಶುಭಾಷಯಗಳು. ಅಂದಾಗ 108 ಬಹಳ ಸಹಜವಾಗಿ ಆಗಿಬಿಡುವುದು. ಇಷ್ಟೊಂದು ಮಂದಿ ಕೈಯೆತ್ತಿದಿರಿ ಅಂದಮೇಲೆ
108 ಆಗುವುದೇನು ದೊಡ್ಡಮಾತು! ಡಬಲ್ ವಿದೇಶಿಯರು ಏನು ಮಾಡುವಿರಿ? ಹಾ! ದಾದಿ ಜಾನಕಿಯವರೂ ಸಹ
ಕೇಳುತ್ತಿದ್ದಾರೆ. ನಾನು ಹೇಳುವುದೇ ಎಂದು ಅವರಿಗೆ ಉಮ್ಮಂಗ ಬರುತ್ತಿದೆ. ವಿದೇಶದ ಮಾಲೆಯನ್ನೂ
ನೋಡುತ್ತೇವೆ – ಸರಿಯೇ? ಕೈಯೆತ್ತಿರಿ. ಸಮ್ಮತವೇ? ಒಳ್ಳೆಯದು. ಇಂದು ಇವರು ಎಷ್ಟು ಮಂದಿ
ಕುಳಿತಿದ್ದಾರೆ? (200) ಇವರಲ್ಲಿ 108 ಮಂದಿಯಾದರೂ ತಯಾರಾಗಿಬಿಡುತ್ತೀರಲ್ಲವೆ. ಇದರಲ್ಲಿ ಮೊದಲು
ನಾನು ಮಾಡಬೇಕು. ಬೇರೆಯವರನ್ನು ನೋಡಬಾರದು. ಮೊದಲು ನಾನು ಮತ್ತು ದೇಹಾಭಿಮಾನದ ನಾನು, ನಾನು
ಎನ್ನಬಾರದು. ಇದರಲ್ಲಿ ಮೊದಲು ನಾನು ಎನ್ನಬೇಕು. ಬೇರೆ ಅನ್ಯ ಕೆಲಸವನ್ನು ಬಾಪ್ದಾದಾರವರು
ಕೊಡುತ್ತಾರೆ.
ಇಂದು ಸಮರ್ಥದಿವಸವಲ್ಲವೆ
ಆದ್ದರಿಂದ ಸಾಮರ್ಥ್ಯವಿದೆ. ಬಾಪ್ದಾದಾ ಇಂದು ಒಂದು ವಿಚಿತ್ರ ದೀಪಾವಳಿಯನ್ನು ಆಚರಣೆ ಮಾಡಲು
ಬಯಸುತ್ತಾರೆ. ತಾವಂತೂ ಕೆಲವುಬಾರಿ ದೀಪಾವಳಿಯನ್ನು ಆಚರಿಸಿದ್ದೀರಿ ಆದರೆ ಬಾಪ್ದಾದಾರವರ ವಿಚಿತ್ರ
ದೀಪಾವಳಿಯನ್ನು ಆಚರಿಸಲು ಬಯಸುತ್ತಾರೆ. ತಿಳಿಸುವುದೇ? ತಿಳಿಸುವುದೇ? ತಿಳಿಸುವುದೇ? ವರ್ತಮಾನ
ಸಮಯವನ್ನಂತೂ ನೀವು ನೋಡುತ್ತಲೇ ಇದ್ದೀರಿ. ದಿನ-ಪ್ರತಿದಿನ ನಾಲ್ಕಾರುಕಡೆ ಮನುಷ್ಯಾತ್ಮರಲ್ಲಿ
ನಿರಾಶೆಯು ಹೆಚ್ಚುತ್ತಾಹೋಗುತ್ತಿದೆ ಆದ್ದರಿಂದ ಭಲೆ ಮನಸ್ಸಿನಿಂದಾದರೂ ಸೇವೆ ಮಾಡಿ, ವಾಚಾದಿಂದಾದರೂ
ಮಾಡಿ, ಸಂಬಂಧ-ಸಂಪರ್ಕದ ಮೂಲಕವಾದರೂ ಮಾಡಿ ಆದರೆ ಬಾಪ್ದಾದಾ ನಿರಾಶರಾಗಿರುವ ಮನುಷ್ಯರಲ್ಲಿ
ಆಶಾದೀಪವನ್ನು ಬೆಳಗಿಸಲು ಬಯಸುತ್ತಾರೆ. ನಾಲ್ಕಾರುಕಡೆ ಮನುಷ್ಯಾತ್ಮರ ಮನಸ್ಸಿನಲ್ಲಿ ಆಶಾದೀಪವು
ಬೆಳಗಲಿ. ಈ ಆಶಾದೀಪಗಳ ದೀಪಾವಳಿಯನ್ನು ನೋಡಲು ಬಾಪ್ದಾದಾ ಬಯಸುತ್ತಾರೆ. ಇದು ಸಾಧ್ಯವೇ?
ವಾಯುಮಂಡಲದಲ್ಲಿ ಕೊನೆಪಕ್ಷ ಈ ಆಶಾದೀಪಗಳು ಬೆಳಗಲಿ ಆಗ ವಿಶ್ವಪರಿವರ್ತನೆಯು ಆಯಿತೆಂದರೆ ಆಯಿತು.
ಸ್ವರ್ಣೀಮ ಪ್ರಭಾತವು ಬಂದಿತೆಂದರೆ ಬಂದಿತು. ಏನೂ ಆಗುವುದಿಲ್ಲ, ನಮ್ಮಿಂದ ಮಾಡಲು ಸಾಧ್ಯವಿಲ್ಲ -
ಈ ನಿರಾಶೆಯು ಸಮಾಪ್ತಿಯಾಗಲಿ. ಆಶಾದೀಪವು ಬೆಳಗಲಿ. ಇದನ್ನು ಮಾಡಲು ಸಾಧ್ಯವಿದೆಯಲ್ಲವೆ. ಇದು
ಸಹಜವಲ್ಲವೆ ಅಥವಾ ಕಷ್ಟವೋ? ಸಹಜವೇ? ಯಾರು ಮಾಡುವಿರೋ ಅವರು ಕೈಯೆತ್ತಿರಿ. ಮಾಡುವಿರಾ? ಇಷ್ಟೊಂದು
ಮಂದಿ ಆಶಾದೀಪವನ್ನು ಬೆಳಗಿಸುತ್ತೀರೆಂದರೆ ದೀಪಾವಳಿಯಾಗಿಬಿಡುತ್ತದೆಯಲ್ಲವೆ. ಇಷ್ಟು ಶಕ್ತಿಶಾಲಿ
ವಾಯುಮಂಡಲವನ್ನು ತಯಾರು ಮಾಡಿ. ಹೋಗಲಿ ಸನ್ಮುಖದಲ್ಲಿ ತಲುಪಲು ಸಾಧ್ಯವಿಲ್ಲವೆಂದರೆ ಲೈಟ್ಹೌಸ್
ಮೈಟ್ಹೌಸ್ ಆಗಿ ದೂರದವರೆಗೆ ವೈಬ್ರೇಷನ್ ಹರಡಿಸಿ. ಯಾವಾಗ ವಿಜ್ಞಾನವು ಲೈಟ್ಹೌಸ್ನ ಮೂಲಕ ದೂರದವರೆಗೆ
ಪ್ರಕಾಶವನ್ನು ಕೊಡುತ್ತದೆ ಅಂದಮೇಲೆ ತಾವೂ ವೈಬ್ರೇಷನ್ ಹರಡಿಸಲು ಸಾಧ್ಯವಿಲ್ಲವೆ? ಕೇವಲ
ಮಾಡಲೇಬೇಕೆಂದು ಧೃಡಸಂಕಲ್ಪ ಮಾಡಿ, ಬ್ಯುಸಿಯಾಗಿಬಿಡಿ. ಮನಸ್ಸನ್ನು
ಬ್ಯುಸಿಯಾಗಿಟ್ಟುಕೊಳ್ಳುತ್ತೀರೆಂದರೆ ಸ್ವಯಂಗೂ ಲಾಭ ಮತ್ತು ಅನ್ಯಆತ್ಮರಿಗೂ ಲಾಭ.
ನಡೆದಾಡುತ್ತಾ-ತಿರುಗಾಡುತ್ತಾ ಇದನ್ನೇ ವೃತ್ತಿಯಲ್ಲಿಟ್ಟುಕೊಳ್ಳಿ - ವಿಶ್ವದ ಕಲ್ಯಾಣ
ಮಾಡಲೇಬೇಕಾಗಿದೆ. ಈ ವೃತ್ತಿಯು ವಾಯುಮಂಡಲವನ್ನು ಹರಡುವುದು ಏಕೆಂದರೆ ಸಮಯವು ಆಕಸ್ಮಿಕವಾಗಿ ಆಗಲಿದೆ.
ತಮ್ಮ ಸಹೋದರ-ಸಹೋದರಿಯರು ತಾವು ನಮಗೆ ಏಕೆ ತಿಳಿಸಿಲ್ಲವೆಂದು ದೂರು ಕೊಡಬಾರದು. ಅಂತ್ಯದ ಸಮಯದೊಳಗೆ
ಮಾಡಿಬಿಡುತ್ತೇವೆಂದು ಕೆಲವು ಮಕ್ಕಳು ಹೇಳಿಬಿಡುತ್ತಾರೆ ಆದರೆ ಅಂತಿಮದಲ್ಲಿ ನೀವು ಮಾಡಿದರೂ ಸಹ
ತಮಗೆ ದೂರು ಕೊಡುತ್ತಾರೆ. ನಮಗೆ ಸಮಯಕ್ಕೆ ಮೊದಲೇ ಏಕೆ ತಿಳಿಸಿಲಿಲ್ಲ. ನಾವೂ ಭಾಗ್ಯವನ್ನು
ಮಾಡಿಕೊಳ್ಳುತ್ತಿದ್ದೆವು ಎಂದು ದೂರುತ್ತಾರೆ ಆದ್ದರಿಂದ ಪ್ರತೀ ಸಂಕಲ್ಪದಲ್ಲಿ ಬಾಪ್ದಾದಾರವರ
ನೆನಪಿನಿಂದ ಪ್ರಕಾಶವನ್ನು ತೆಗೆದುಕೊಳ್ಳುತ್ತಾ ಹೋಗಿ. ಲೈಟ್ಹೌಸ್ ಆಗಿ ಲೈಟ್ನ್ನು ಕೊಡುತ್ತಾ ಹೋಗಿ.
ಸಮಯವನ್ನು ವ್ಯರ್ಥಮಾಡಬೇಡಿ. ಮಕ್ಕಳು ಬಹಳ ಯುದ್ಧ ಮಾಡುವುದನ್ನು ಬಾಪ್ದಾದಾ ನೋಡುತ್ತಾರೆ. ಅದು
ಬಾಪ್ದಾದಾರವರಿಗೆ ಇಷ್ಟವಾಗುವುದಿಲ್ಲ. ಮಾ|| ಸರ್ವಶಕ್ತಿವಂತರು ಯುದ್ಧ ಮಾಡುತ್ತಿದ್ದಾರೆ! ಇದು
ನಮಗೆ ಇಷ್ಟವಾಗುವುದಿಲ್ಲ. ರಾಜರಾಗಿ ಸಫಲತಮೂರ್ತಿಗಳಾಗಿ ನಿರಾಶೆಯನ್ನು ಸಮಾಪ್ತಿ ಮಾಡಿ,
ಆಶಾದೀಪವನ್ನು ಬೆಳಗಿಸಿ. ಒಳ್ಳೆಯದು.
ಎಲ್ಲಾ ಕಡೆಯ ಮಕ್ಕಳ
ಸ್ನೇಹದ ನೆನಪಿನ ಮಾಲೆಗಳು ಬಹಳಷ್ಟು ಬಂದು ತಲುಪಿದೆ. ಬಾಪ್ದಾದಾ ನೆನಪನ್ನು ಕಳುಹಿಸುವವರನ್ನು
ಸನ್ಮುಖದಲ್ಲಿ ನೋಡುತ್ತಾ ನೆನಪಿಗೆ ಮರುಪಾವತಿಯಾಗಿ ಹೃದಯದ ಆಶೀರ್ವಾದಗಳು, ಹೃದಯದ ಪ್ರೀತಿಯನ್ನು
ಕೊಡುತ್ತಿದ್ದಾರೆ. ಒಳ್ಳೆಯದು.
ಯಾರು ಮೊದಲಬಾರಿ
ಬಂದಿದ್ದೀರೋ ಅವರು ಎದ್ದುನಿಲ್ಲಿ: ಒಳ್ಳೆಯದು. ಪ್ರತೀ ಸರದಿಯಲ್ಲಿ ನೋಡಿದ್ದೇವೆ. ಮೆಜಾರಿಟಿ
ಹೊಸಬರಿರುತ್ತಾರೆ ಅಂದಾಗ ಸರ್ವೀಸ್ ವೃದ್ಧಿಪಡಿಸಿದ್ಧೀರಲ್ಲವೆ. ಎಷ್ಟೊಂದು ಮಂದಿಗೆ ಸಂದೇಶ
ಕೊಟ್ಟಿದ್ದೀರಿ. ಹೇಗೆ ತಮ್ಮೆಲ್ಲರಿಗೂ ಸಂದೇಶ ಸಿಕ್ಕಿತು ಅದೇರೀತಿ ತಾವೂ ಸಹ ಇನ್ನೂ ಹೆಚ್ಚು
ಸಂದೇಶ ಕೊಡಿ, ಯೋಗ್ಯರನ್ನಾಗಿ ಮಾಡಿ. ಒಳ್ಳೆಯದು- ಪ್ರತೀ ಸಬ್ಜೆಕ್ಟ್ನಲ್ಲಿ ಇನ್ನೂ
ಉಮ್ಮಂಗ-ಉತ್ಸಾಹದಿಂದ ಮುಂದುವರೆಯಿರಿ. ಚೆನ್ನಾಗಿದೆ.
ಒಳ್ಳೆಯದು- ಈಗ
ಲಕ್ಷ್ಯವನ್ನಿಡಿ. ನಡೆದಾಡುತ್ತಾ-ತಿರುಗಾಡುತ್ತಾ ಮನಸಾ, ವಾಚಾ ಇಲ್ಲವೆ ಕರ್ಮಣಾ ಸೇವೆಯಿಲ್ಲದೇ
ಇರಲೇಬಾರದು ಮತ್ತು ನೆನಪಿಲ್ಲದೆಯೂ ಇರಬಾರದು. ನೆನಪು ಮತ್ತು ಸೇವೆ ಸದಾ ಜೊತೆಯಲ್ಲಿರಲಿ. ಇಷ್ಟು
ತಮ್ಮನ್ನು ಬ್ಯುಸಿಯಾಗಿಟ್ಟುಕೊಳ್ಳಿ, ನೆನಪಿನಲ್ಲಿಯೂ ಹಾಗೂ ಸೇವೆಯಲ್ಲಿಯೂ. ಖಾಲಿಯಿರುತ್ತೀರೆಂದರೆ
ಮಾಯೆಯು ಬರಲು ಅವಕಾಶ ಸಿಗುತ್ತದೆ. ಇಷ್ಟು ಬ್ಯುಸಿಯಾಗಿರಿ ಅದರಿಂದ ದೂರದಿಂದಲೇ ಮಾಯೆಯು ಬರುವ
ಸಾಹಸವಿಡಬಾರದು. ಮತ್ತೆ ತಂದೆಯ ಸಮಾನರಾಗುವ ಯಾವ ಲಕ್ಷ್ಯವನ್ನಿಟ್ಟಿದ್ದೀರಿ ಅದು ಸಹಜವಾಗಿಬಿಡುವುದು.
ಪರಿಶ್ರಮ ಪಡಬೇಕಾಗುವುದಿಲ್ಲ, ಸ್ನೇಹೀ ಸ್ವರೂಪರಾಗಿರುತ್ತೀರಿ. ಒಳ್ಳೆಯದು.
ಬಾಪ್ದಾದಾರವರ ನಯನಗಳಲ್ಲಿ
ಸಮಾವೇಶವಾಗಿರುವ ಕಣ್ಮಣಿಗಳು, ತಂದೆಯ ಸರ್ವಪ್ರಾಪ್ತಿಗಳಿಗೆ ಅಧಿಕಾರಿ ಶ್ರೇಷ್ಠಾತ್ಮಗಳು, ಸದಾ
ಉಮ್ಮಂಗ-ಉತ್ಸಾಹದ ರೆಕ್ಕೆಗಳಿಂದ ಹಾರುವ ಮತ್ತು ಹಾರಿಸುವಂತಹ ಮಹಾವೀರ ಮತ್ತು ಮಹಾವೀರಿಣಿ ಮಕ್ಕಳಿಗೆ,
ಒಬ್ಬ ತಂದೆಯ ಸಂಸಾರವಾಗಿದ್ದಾರೆ - ಈ ಲಗನ್ನಿನಲ್ಲಿ ಮಗ್ನರಾಗಿರುವ ಲವಲೀನ ಮಕ್ಕಳಿಗೆ,
ಲವಲೀನರಾಗುವುದು ಅರ್ಥಾತ್ ತಂದೆಯ ಸಮಾನ ಸಹಜ ಆಗುವುದು ಅಂದಾಗ ಲವಲೀ ಮತ್ತು ಲವಲೀನ ಎರಡೂ ಪ್ರಕಾರದ
ಮಕ್ಕಳಿಗೆ ಬಹಳ-ಬಹಳ ಪದುಮ-ಪದುಮದಷ್ಟು ನೆನಪು, ಪ್ರೀತಿ ಹಾಗೂ ನಮಸ್ತೆ.
ವರದಾನ:
ತಮ್ಮ ಪ್ರತಿ
ಕರ್ಮ ಅಥವಾ ವಿಶೇಷತೆಯ ಮೂಲಕ ದಾತಾನ ಕಡೆ ಕೈ ತೋರಿಸುವಂತಹ ಸತ್ಯ ಸೇವಾಧಾರಿ ಭವ
ಸತ್ಯ ಸೇವಾಧಾರಿ ಯಾವುದೇ
ಆತ್ಮಕ್ಕೆ ಸಹಯೋಗ ಕೊಟ್ಟು ಸ್ವಯಂ ನಲ್ಲಿ ಸಿಕ್ಕಿಹಾಕಿಸಿಕೊಳ್ಳುವುದಿಲ್ಲ. ಅವರು ಎಲ್ಲರ
ಸಂಪರ್ಕವನ್ನು ತಂದೆಯಜೊತೆ ಮಾಡಿಸುತ್ತಾರೆ. ಅವರ ಪ್ರತಿಮಾತು ತಂದೆಯ ಸ್ಮøತಿ
ತರಿಸುವಂತಹದಾಗಿರುತ್ತದೆ. ಅವರ ಪ್ರತಿ ಕರ್ಮದಿಂದ ತಂದೆ ಕಂಡುಬರುತ್ತಾರೆ. ಅವರಿಗೆ ಎಂದೂ ಇಂತಹ
ಸಂಕಲ್ಪ ಸಹಾ ಬರುವುದಿಲ್ಲ ನನ್ನ ವಿಶೇಷತೆಗೆ ಕಾರಣ ಈ ನನ್ನ ಸಹಯೋಗಿ ಯಾಗಿದ್ದಾರೆ ಎಂದು. ಒಂದುವೇಳೆ
ನಿಮ್ಮನ್ನು ನೋಡಿ, ತಂದೆಯನ್ನು ನೋಡದೆ ಸೇವೆ ಮಾಡಿದರೆ ಆ ಸೇವೆ ಸೇವೆಯಾಗಿರುವುದಿಲ್ಲ, ತಂದೆಯನ್ನು
ಮರೆಸಿಬಿಟ್ಟರು. ಸತ್ಯ ಸೇವಾಧಾರಿ ಸತ್ಯದ ಕಡೆ ಎಲ್ಲರ ಸಂಬಂಧವನ್ನು ಜೋಡಿಸುತ್ತಾರೆ, ಸ್ವಯಂ ಕಡೆ
ಅಲ್ಲ.
ಸ್ಲೋಗನ್:
ಯಾವುದೇ
ಪ್ರಕಾರದ ಅರ್ಜಿ ಹಾಕುವ ಬದಲು ಸದಾ ರಾಜಿóಯಾಗಿರಿ.
ಅವ್ಯಕ್ತ ಸೂಚನೆ:
ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ
ಶ್ರೇಷ್ಠ ಭಾಗ್ಯದ ಗೆರೆ
ಎಳೆಯುವ ಆಧಾರವಾಗಿದೆ- “ಶ್ರೇಷ್ಠ ಸಂಕಲ್ಪ ಹಾಗೂ ಶ್ರೇಷ್ಠ ಕರ್ಮ”. ಟ್ರಸ್ಟಿ ಆತ್ಮವಾಗಿರಲಿ, ಅಥವಾ
ಸೇವಾಧಾರಿ ಆತ್ಮವಾಗಿರಲಿ, ಇಬ್ಬರಿಗೂ ಸಹ ಭಾಗ್ಯ ಮಾಡಿಕೊಳ್ಳಲು ಪೂರ್ತಿ ಚಾನ್ಸ್ ಇದೆ, ಯಾರು ಎಷ್ಟು
ಭಾಗ್ಯ ಮಾಡಿಕೊಳ್ಳಲು ಬಯಸುತ್ತಾರೋ ಅಷ್ಟು ಮಾಡಿಕೊಳ್ಳಬಹುದು.