06.09.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ-ನಿಮ್ಮ ಈ ವಿದ್ಯೆ ಸಂಪಾದನೆಯ ಮೂಲವಾಗಿದೆ, ಈ ವಿದ್ಯೆಯಿಂದ 21 ಜನ್ಮಗಳಿಗೆ ಸಂಪಾದನೆಯ ಪ್ರಬಂಧ ಆಗಿಬಿಡುತ್ತದೆ."

ಪ್ರಶ್ನೆ:
ಮುಕ್ತಿಧಾಮಕ್ಕೆ ಹೋಗುವುದು ಸಾಂಪಾದನೆ ಆಗಿದೆಯೇ ಅಥವಾ ನಷ್ಟವಾಗಿದೆಯೇ?

ಉತ್ತರ:
ಭಕ್ತರಿಗೆ ಇದು ಸಹ ಸಂಪಾದನೆ ಆಗಿದೆ ಏಕೆಂದರೆ ಅರ್ಧ ಕಲ್ಪದಿಂದ ಶಾಂತಿ-ಶಾಂತಿ ಕೇಳುತ್ತಾ ಬಂದಿದ್ದಾರೆ. ಬಹಳ ಪರಿಶ್ರಮದ ನಂತರವು ಸಹ ಶಾಂತಿ ಸಿಗಲಿಲ್ಲ. ಈಗ ತಂದೆಯ ಮೂಲಕ ಶಾಂತಿ ಸಿಗುತ್ತದೆ ಅರ್ಥಾತ್ ಮುಕ್ತಿಧಾಮಕ್ಕೆ ಹೋಗುತ್ತಾರೆ. ಇದು ಸಹ ಅರ್ಧ ಕಲ್ಪದ ಪರಿಶ್ರಮದ ಫಲವಾಯಿತು. ಇದರಿಂದ ಇದನ್ನು ಸಹ ಸಂಪಾದನೆ ಎನ್ನಲಾಗುವುದು, ನಷ್ಟವಲ್ಲ. ನೀವು ಮಕ್ಕಳು ಜೀವನ್ಮುಕ್ತಿಧಾಮಕ್ಕೆ ಹೋಗಲು ಪುರುಷಾರ್ಥ ಮಾಡುತ್ತೀರಿ.ನಿಮ್ಮ ಬುದ್ಧಿಯಲ್ಲಿ ವಿಶ್ವದ ಇತಿಹಾಸ-ಭೂಗೋಳ ಕುಣಿಯುತ್ತಿದೆ.

ಓಂ ಶಾಂತಿ.
ಮಕ್ಕಳು ಕೇವಲ ಒಬ್ಬರ ನೆನಪಿನಲ್ಲಿ ಕುಳಿತುಕೊಳ್ಳಬಾರದು. ಮೂರು ಸಂಬಂಧಗಳ ನೆನಪಿನಲ್ಲಿ ಕುಳಿತುಕೊಳ್ಳಬೇಕು. ಭಲೆ ಒಬ್ಬರೇ ಆಗಿದ್ದಾರೆ ನಿಮಗೆ ಗೊತ್ತಿದೆ. ಅವರು ತಂದೆಯೂ ಆಗಿದ್ದಾರೆ. ಶಿಕ್ಷಕರೂ ಆಗಿದ್ದಾರೆ. ಸದ್ಗುರುವೂ ಆಗಿದ್ದಾರೆ. ನಮ್ಮೆಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗಲು ಬಂದಿದ್ದಾರೆ. ಈ ಹೊಸಮಾತನ್ನು ನೀವೇ ತಿಳಿದುಕೊಂಡಿದ್ದೀರಿ. ಮಕ್ಕಳಿಗೆ ಗೊತ್ತಿದೆ - ಯಾರು ಭಕ್ತಿಯನ್ನು ಕಲಿಸುತ್ತಾರೆ. ಶಾಸ್ತ್ರಗಳನ್ನು ತಿಳಿಸುತ್ತಾರೆಯೋ ಅವರೆಲ್ಲರೂ ಮನುಷ್ಯರಾಗಿದ್ದಾರೆ. ಇವರಿಗೆ ಮನುಷ್ಯನೆಂದು ಹೇಳುವುದಿಲ್ಲವಲ್ಲವೇ. ಇವರಂತೂ ನಿರಾಕಾರನಾಗಿದ್ದಾರೆ. ಕುಳಿತು ನಿರಾಕಾರ ಆತ್ಮಗಳಿಗೆ ಓದಿಸುತ್ತಾರೆ. ಆತ್ಮವು ಶರೀರದ ಮೂಲಕ ಕೇಳುತ್ತದೆ. ಈ ಜ್ಞಾನವು ಬುದ್ಧಿಯಲ್ಲಿರಬೇಕು. ಈಗ ನೀವು ಬೇಹದ್ದಿನ ತಂದೆಯ ನೆನಪಿನಲ್ಲಿ ಕುಳಿತುಕೊಂಡಿದ್ದೀರಿ. ಬೇಹದ್ದಿನ ತಂದೆಯೂ ಹೇಳಿದ್ದಾರೆ - ಆತ್ಮೀಯ ಮಕ್ಕಳೇ, ನನ್ನನ್ನು ನೆನಪು ಮಾಡಿ ಆಗ ಪಾಪಗಳು ನಾಶವಾಗುತ್ತವೆ. ಇಲ್ಲಿ ಯಾವುದೇ ಶಾಸ್ತ್ರಗಳ ಮಾತಿಲ್ಲ. ನೀವು ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ಎಷ್ಟು ದೊಡ್ಡ ಶಿಕ್ಷಕನಾಗಿದ್ದಾರೆ. ಸರ್ವ ಶ್ರೇಷ್ಠನಾಗಿದ್ದಾರೆ. ಅಂದಮೇಲೆ ಸರ್ವ ಶ್ರೇಷ್ಠ ಪದವಿಯನ್ನೇ ಪ್ರಾಪ್ತಿ ಮಾಡಿಸುತ್ತಾರೆ. ಯಾವಾಗ ನೀವು ನಂಬರ್ವಾರ್ ಪುರುಷಾರ್ಥದನುಸಾರ ಸತೋಪ್ರಧಾನರಾಗುತ್ತೀರಿ. ಆಗ ಯುದ್ಧವು ಪ್ರಾರಂಭವಾಗುವುದು. ಪ್ರಾಕೃತಿಕ ವಿಕೋಪಗಳೂ ಆಗುವುದು ಅಂದಾಗ ಅವಶ್ಯವಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಬುದ್ಧಿಯಲ್ಲಿ ಪೂರ್ಣ ಜ್ಞಾನವೂ ಇರಬೇಕು. ಕೇವಲ ಈ ಪುರುಷೋತ್ತಮ ಸಂಗಮಯುಗದಲ್ಲಿ ಒಂದೇ ಬಾರಿ ಬಂದು ಹೊಸ ಪ್ರಪಂಚಕ್ಕಾಗಿ ತಂದೆಯು ತಿಳಿಸುತ್ತಾರೆ. ಚಿಕ್ಕ ಮಕ್ಕಳೂ ಸಹ ತಂದೆಯನ್ನು ನೆನಪು ಮಾಡುತ್ತಾರೆ. ನೀವಂತೂ ಬುದ್ಧಿವಂತರಾಗಿದ್ದೀರಿ. ನಿಮಗೆ ಗೊತ್ತಿದೆ - ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮವು ವಿನಾಶವಾಗುತ್ತದೆ. ಮತ್ತು ತಂದೆಯಿಂದ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ಮತ್ತು ಈ ಲಕ್ಷ್ಮೀ-ನಾರಾಯಣರು ಹೊಸ ಪ್ರಪಂಚದಲ್ಲಿ ಯಾವ ಪದವಿಯನ್ನು ಪಡೆದಿದ್ದಾರೆಯೋ ಅದನ್ನು ಶಿವ ತಂದೆಯಿಂದಲೇ ಪಡೆದಿದ್ದಾರೆ ಎಂಬುದೂ ಸಹ ನೀವು ತಿಳಿದುಕೊಂಡಿದ್ದೀರಿ. ಈ ಲಕ್ಷ್ಮೀ-ನಾರಾಯಣರೇ 84 ಜನ್ಮಗಳ ಚಕ್ರವನ್ನು ಸುತ್ತಿ ಈಗ ಬ್ರಹ್ಮಾ-ಸರಸ್ವತಿಯಾಗಿದ್ದಾರೆ. ಈಗ ಇನ್ನೂ ಪುರುಷಾರ್ಥ ಮಾಡುತ್ತಿದ್ದಾರೆ. ಈಗ ಸೃಷ್ಠಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ನಿಮಗಿದೆ. ಈಗ ನೀವು ಅಂಧ ಶ್ರದ್ಧೆಯಿಂದ ದೇವತೆಗಳ ಮುಂದೆ ತಲೆ ಬಾಗುವುದಿಲ್ಲ. ದೇವತೆಗಳ ಮುಂದೆ ಹೋಗಿ ತಮ್ಮನ್ನು ಪತಿತರೆಂದು ಸಿದ್ಧ ಮಾಡುತ್ತಾರೆ. ತಾವು ಸರ್ವಗುಣ ಸಂಪನ್ನರು, ನಾವು ಪಾಪಿ -ವಿಕಾರಿಗಳಾಗಿದ್ದೇವೆ. ನಮ್ಮಲ್ಲಿ ಯಾವುದೇ ಗುಣವಿಲ್ಲವೆಂದು ಹೇಳುತ್ತಾರೆ. ನೀವು ಯಾರ ಮಹಿಮೆ ಮಾಡುತ್ತೀದ್ದೀರೋ ಇಂದು ಸ್ವಯಂ ಈ ರೀತಿ ಆಗುತ್ತಿದ್ದೀರಿ. ಬಾಬಾ ಈ ಶಾಸ್ತ್ರ ಇತ್ಯಾದಿಗಳನ್ನು ಓದುವುದು ಯಾವಾಗಿನಿಂದ ಎಂದು ಕೇಳುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ರಾವಣ ರಾಜ್ಯವು ಪ್ರಾರಂಭವಾದಾಗಿನಿಂದ. ಇದೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಗಳಾಗಿವೆ. ನೀವಿಲ್ಲಿ ಕುಳಿತುಕೊಂಡಾಗ ಬುದ್ಧಿಯಲ್ಲಿ ಪೂರ್ಣ ಜ್ಞಾನವು ಧಾರಣೆಯಾಗಬೇಕು. ಈ ಸಂಸ್ಕಾರವನ್ನು ಆತ್ಮವು ತೆಗೆದುಕೊಂಡು ಹೋಗುತ್ತದೆ. ಭಕ್ತಿಯ ಸಂಸ್ಕಾರವು ಹೋಗುವುದಿಲ್ಲ. ಭಕ್ತಿಯ ಸಂಸ್ಕಾರದವರು ಹಳೆಯ ಪ್ರಪಂಚದಲ್ಲಿ ಮನುಷ್ಯರ ಬಳಿಯೇ ಜನ್ಮ ತೆಗೆದುಕೊಳ್ಳುತ್ತಾರೆ. ಇದೂ ಅವಶ್ಯಕವಾಗಿದೆ. ನಿಮ್ಮ ಬುದ್ಧಿಯಲ್ಲಿ ಈ ಜ್ಞಾನದ ಚಕ್ರವು ತಿರುಗಬೇಕು. ಜೊತೆ ಜೊತೆಗೆ ತಂದೆಯನ್ನೂ ನೆನಪು ಮಾಡಬೇಕಾಗಿದೆ. ಅವರು ನಮ್ಮ ತಂದೆಯೂ ಆಗಿದ್ದಾರೆ. ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ತಂದೆಯು ನಮ್ಮ ಶಿಕ್ಷಕನೂ ಆಗಿದ್ದಾರೆ ಎಂದಾಗ ಬುದ್ಧಿಯಲ್ಲಿ ವಿದ್ಯೆಯು ಬರುತ್ತದೆ ಮತ್ತು ಸೃಷ್ಠಿಚಕ್ರದ ಜ್ಞಾನವು ಬುದ್ಧಿಯಲ್ಲಿದೆ. ಇದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ.

ಭಕ್ತಿ ಮತ್ತು ಜ್ಞಾನ. ತಂದೆಗೆ ಜ್ಞಾನ ಸಾಗರನೆಂದು ಹೇಳಲಾಗುತ್ತದೆ. ಅವರಿಗೆ ಭಕ್ತಿಯು ಯಾವಾಗ ಆರಂಭವಾಯಿತು, ಯಾವಾಗ ಪೂರ್ಣವಾಗುವುದು ಎಂದು ಭಕ್ತಿಯಿದೆಲ್ಲವೂ ತಿಳಿದಿದೆ. ಮನುಷ್ಯರಿಗೆ ಇದು ಗೊತ್ತಿಲ್ಲ. ತಂದೆಯೇ ಬಂದು ತಿಳಿಸಿಕೊಡುತ್ತಾರೆ. ಸತ್ಯಯುಗದಲ್ಲಿ ನೀವು ದೇವಿ-ದೇವತೆಗಳು ವಿಶ್ವದ ಮಾಲೀಕರಾಗಿದ್ದೀರಿ. ಅಲ್ಲಿ ಭಕ್ತಿಯ ಹೆಸರಿರುವುದಿಲ್ಲ. ಒಂದು ಮಂದಿರವೂ ಇರಲಿಲ್ಲ. ಎಲ್ಲರೂ ದೇವಿ-ದೇವತೆಗಳೇ ಇದ್ದರು. ಕೊನೆಯಲ್ಲಿ ಯಾವಾಗ ಪ್ರಪಂಚವು ಅರ್ಧ ಹಳೆಯದಾಗುತ್ತದೆ. ಅಂದರೆ 2500 ವರ್ಷಗಳು ಪೂರ್ಣವಾಗುವುದೋ ಅಥವಾ ತ್ರೇತಾ ಮತ್ತು ದ್ವಾಪರದ ಸಂಗಮವಾಗುವುದೋ ಆಗ ರಾವಣನು ಬರುತ್ತಾನೆ. ಸಂಗಮವಂತೂ ಅವಶ್ಯವಾಗಿ ಬೇಕು. ತ್ರೇತಾ ಮತ್ತು ದ್ವಾಪರದ ಸಂಗಮದಲ್ಲಿ ರಾವಣನು ಬರುತ್ತಾನೆ. ಆಗ ದೇವಿ-ದೇವತೆಗಳು ವಾಮ ಮಾರ್ಗದಲ್ಲಿ ಇಳಿಯುತ್ತಾರೆ ಎನ್ನುವುದನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯೂ ಸಹ ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ಸಂಗಮಯುಗದಲ್ಲಿ ಬರುತ್ತಾರೆ ಮತ್ತು ತ್ರೇತಾ ಮತ್ತು ದ್ವಾಪರದ ಸಂಗಮದಲ್ಲಿ ರಾವಣನು ಬರುತ್ತಾನೆ. ಈಗ ಆ ಸಂಗಮಕ್ಕೆ ಕಲ್ಯಾಣಕಾರಿ ಎಂದು ಹೇಳುವುದಿಲ್ಲ. ಅದಕ್ಕೆ ಅಕಲ್ಯಾಣಕಾರಿಯೆಂದೇ ಹೇಳಲಾಗುತ್ತದೆ. ತಂದೆಯ ಹೆಸರೇ ಕಲ್ಯಾಣಕಾರಿಯಾಗಿದೆ. ದ್ವಾಪರದಿಂದ ಅಕಲ್ಯಾಣಕಾರಿ ಯುಗವು ಪ್ರಾರಂಭವಾಗುತ್ತದೆ. ತಂದೆಯಂತೂ ಚೈತನ್ಯ ಬೀಜ ರೂಪನಾಗಿದ್ದಾರೆ. ಅವರಿಗೆ ಇಡೀ ವೃಕ್ಷದ ಜ್ಞಾನವಿದೆ. ಒಂದುವೇಳೆ ಸ್ಥೂಲ ಬೀಜವೂ ಚೈತನ್ಯವಾಗಿದ್ದರೆ ನನ್ನಿಂದ ಇಂತಹ ಬೀಜವನ್ನು ಬಿತ್ತುವುದರಿಂದ ಮೊದಲು ಚಿಕ್ಕ ಸಸಿಯು ಬರುತ್ತದೆ. ನಂತರ ದೊಡ್ಡದಾಗಿ ಫಲ ಕೊಡಲು ಪ್ರಾರಂಭಿಸುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬಹುದು. ಆದರೆ ಚೈತನ್ಯವೇ ಎಲ್ಲವನ್ನೂ ತಿಳಿಸುತ್ತಾರೆ. ಪ್ರಪಂಚದಲ್ಲಂತೂ ಇಂದಿನ ಮನುಷ್ಯರು ಏನೇನನ್ನೋ ಮಾಡುತ್ತಿರುತ್ತಾರೆ. ಅನ್ವೇಷಣೆಗಳನ್ನೂ ಮಾಡುತ್ತಿರುತ್ತಾರೆ. ಚಂದ್ರಗ್ರಹದಲ್ಲಿ ಹೋಗುವ ಪ್ರಯತ್ನ ಪಡುತ್ತಿರುತ್ತಾರೆ. ಇವೆಲ್ಲಾ ಮಾತುಗಳನ್ನು ಈಗ ನೀವು ಕೇಳುತ್ತಿದ್ದೀರಿ. ಚಂದ್ರಗ್ರಹದ ಕಡೆ ಎಷ್ಟು ಮೇಲೆ ಎಷ್ಟೊಂದು ಮೈಲಿಗಳವರೆಗೆ ಹೋಗುತ್ತಾರೆ. ಚಂದ್ರಗ್ರಹದಲ್ಲಿ ಏನಿದೆ, ಹೇಗಿದೆ ಎಂದು ನೋಡೋಣವೆಂದು ಪರಿಶೀಲನೆ ಮಾಡಲು ಹೋಗುತ್ತಾರೆ. ಸಮುದ್ರದಲ್ಲಿ ಎಷ್ಟೊಂದು ದೂರದವರೆಗೆ ಹೋಗುತ್ತಾರೆ. ಪರಿಶೀಲನೆ ಮಾಡುತ್ತಾರೆ. ಆದರೆ ಅಂತ್ಯವನ್ನು ಮುಟ್ಟಲು ಸಾಧ್ಯವಿಲ್ಲ. ನೀರೇ ನೀರಿದೆ! ವಿಮಾನದಲ್ಲಿ ಮೇಲೆ ಹೋಗುತ್ತಾರೆ. ಅದಕ್ಕೆ ಮತ್ತೆ ಅದು ಹಿಂತಿರುಗಿ ಬರುವಷ್ಟು ಇಂಧನವನ್ನು ಹಾಕಬೇಕಾಗುತ್ತದೆ. ಆಕಾಶವು ಬೇಹದ್ದಿನದಾಗಿದೆಯಲ್ಲವೆ, ಸಾಗರವೂ ಬೇಹದ್ದಿನದಾಗಿದೆ. ಆಕಾಶ ತತ್ವವೂ ಬೇಹದ್ದಿನದಾಗಿದೆ. ಧರಣಿಯೂ ಬೇಹದ್ದಿನದಾಗಿದೆ. ನೋಡುತ್ತಾ ಹೋಗಿ, ಸಾಗರದ ಕೆಳಗೆ ಮತ್ತೆ ಧರಣಿಯಿದೆ. ಪರ್ವತವು ಯಾವುದರ ಮೇಲೆ ನಿಂತಿದೆ. ಧರಣಿಯು ಮೇಲಲ್ಲವೆ ಮತ್ತೆ ಭೂಮಿಯನ್ನು ಅಗೆದಾಗ ಪರ್ವತವು ಹೊರ ಬರುತ್ತದೆ. ಅದರ ಕೆಳಗೆ ಮತ್ತೆ ನೀರೂ ಸಹ ಹೊರ ಬರುತ್ತದೆ. ಸಾಗರವು ಧರಣಿಯ ಮೇಲಿದೆ. ಎಲ್ಲಿಯವರೆಗೆ ನೀರಿದೆ, ಎಲ್ಲಿಯವರೆಗೆ ಭೂಮಿಯಿದೆ ಎಂದು ಅದರ ಅಂತ್ಯವನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ಪರಮಪಿತ ಪರಮಾತ್ಮ ಯಾರು ಬೇಹದ್ದಿನ ತಂದೆಯಾಗಿದ್ದಾರೆ. ಅವರಿಗೆ ಬೇಹಂತ್ ಎಂದು ಹೇಳುವುದಿಲ್ಲ. ಈಶ್ವರನು ಬೇಹಂತ್, ಮಾಯೆಯೂ ಬೇಹಂತ್ ಆಗಿದೆಯೆಂದು ಭಲೆ ಮನುಷ್ಯರು ಹೇಳುತ್ತಾರೆ. ಆದರೆ ನಿಮಗೆ ತಿಳಿದಿದೆ ಈಶ್ವರನಂತೂ ಬೇಹಂತ್ ಆಗಲು ಸಾಧ್ಯವಿಲ್ಲ. ಬಾಕಿ ಈ ಆಕಾಶವು ಬೇಹಂತ್ ಆಗಿದೆ. ಈ ಪಂಚತತ್ವಗಳಿಗೆ ಆಕಾಶ, ಗಾಳಿ, ನೀರು, ಬೆಂಕಿ..... ಈ ಪಂಚತತ್ವಗಳು ತಮೋಪ್ರಧಾನವಾಗುತ್ತದೆ. ನಂತರ ತಂದೆಯು ಬಂದು ಸತೋಪ್ರಧಾನವನ್ನಾಗಿ ಮಾಡುತ್ತಾರೆ. ಆತ್ಮವು ಎಷ್ಟು ಸೂಕ್ಷ್ಮವಿದೆ, 84 ಜನ್ಮಗಳನ್ನು ಭೋಗಿಸುತ್ತದೆ. ಈ ಚಕ್ರವು ಸುತ್ತುತ್ತಲೇ ಇರುತ್ತದೆ. ಇದು ಅನಾದಿ ನಾಟಕವಾಗಿದೆ. ಇದರ ಅಂತ್ಯವಾಗುವುದಿಲ್ಲ. ಇದು ಪರಂಪರೆಯಿಂದ ನಡೆದು ಬರುತ್ತದೆ. ಯಾವಾಗಿನಿಂದ ಪ್ರಾರಂಭವಾಯಿತೆಂದು ಹೇಳುವುದಾದರೆ ಮತ್ತೆ ಅದಕ್ಕೆ ಅಂತ್ಯವೂ ಇರಬೇಕು. ಬಾಕಿ ಹೊಸ ಪ್ರಪಂಚವು ಯಾವಾಗಿನಿಂದ ಆರಂಭವಾಗುತ್ತದೆ. ನಂತರ ಯಾವಾಗ ಹಳೆಯದಾಗುತ್ತದೆ ಎಂಬ ಮಾತನ್ನು ಅವಶ್ಯವಾಗಿ ತಿಳಿಸಬೇಕಾಗುತ್ತದೆ. ಇದು 5000 ವರ್ಷಗಳ ಚಕ್ರವಾಗಿದೆ. ಇದು ಸುತ್ತುತ್ತಲೇ ಇರುತ್ತದೆ. ಈಗ ನೀವು ತಿಳಿದುಕೊಂಡಿದ್ದೀರಿ. ಮನುಷ್ಯರಂತೂ ಸುಳ್ಳು ಹೇಳಿ ಬಿಟ್ಟಿದ್ದಾರೆ. ಸತ್ಯಯುಗದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಆದ್ದರಿಂದ ಇದನ್ನು ಮನುಷ್ಯರು ಕೇಳುತ್ತಾ-ಕೇಳುತ್ತಾ ಅದನ್ನೇ ಸತ್ಯವೆಂದು ತಿಳಿದುಕೊಂಡಿದ್ದಾರೆ. ಭಗವಂತನು ಯಾವಾಗ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆಂದು ಅವರಿಗೆ ತಿಳಿಯುವುದೇ ಇಲ್ಲ. ತಿಳಿಯದಿರುವ ಕಾರಣದಿಂದಲೇ ಕಲಿಯುಗವು ಇನ್ನೂ 40 ಸಾವಿರ ವರ್ಷಗಳಿದೆ ಎಂದು ಹೇಳಿ ಬಿಡುತ್ತಾರೆ. ಎಲ್ಲಿಯವರೆಗೆ ನೀವು ತಿಳಿಸುವುದಿಲ್ಲವೋ ಅಲ್ಲಿಯವರೆಗೆ ಲಕ್ಷಾಂತರ ವರ್ಷಗಳೆಂದು ನಂಬಿರುತ್ತಾರೆ. ಕಲ್ಪವು 5000 ವರ್ಷಗಳಾಗಿದೆಯೇ ಹೊರತು ಲಕ್ಷಾಂತರ ವರ್ಷಗಳಲ್ಲ ಎಂಬ ಮಾತನ್ನು ತಿಳಿಸಲು ನೀವೀಗ ನಿಮಿತ್ತರಾಗಿದ್ದೀರಿ.

ಭಕ್ತಿಮಾರ್ಗದ ಎಷ್ಟೊಂದು ಸಾಮಗ್ರಿಯಿದೆ. ಮನುಷ್ಯರಿಗೆ ಹಣವಿದ್ದರೆ ಖರ್ಚು ಮಾಡುತ್ತಾರೆ. ತಂದೆಯೂ ತಿಳಿಸುತ್ತಾರೆ. ನಾನು ನಿಮಗೆ ಎಷ್ಟೊಂದು ಹಣವನ್ನು ಕೊಟ್ಟು ಹೋಗುತ್ತೇನೆ! ಬೇಹದ್ದಿನ ತಂದೆಯಂತೂ ಅವಶ್ಯವಾಗಿ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಇದರಿಂದ ಸುಖವೂ ಸಿಗುತ್ತದೆ. ಆಯಸ್ಸೂ ಹೆಚ್ಚುತ್ತದೆ. ತಂದೆಯು ಮಕ್ಕಳಿಗೆ ಹೇಳುತ್ತಾರೆ- ನನ್ನ ಮುದ್ದಾದ ಮಕ್ಕಳೇ, ಆಯುಷ್ಯವಾನ್ಭವ. ಅಲ್ಲಿ ನಿಮ್ಮ ಆಯಸ್ಸು 150 ವರ್ಷಗಳಿರುತ್ತದೆ, ಎಂದೂ ಕಾಲವು ಕಬಳಿಸುವುದಿಲ್ಲ. ತಂದೆಯು ವರವನ್ನು ಕೊಡುತ್ತಾರೆ. ನಿಮ್ಮನ್ನು ದೀರ್ಘಾಯುಸ್ಸುಳ್ಳವರನ್ನಾಗಿ ಮಾಡುತ್ತಾರೆ. ನೀವು ಅಮರರಾಗುತ್ತೀರಿ. ಸತ್ಯಯುಗದಲ್ಲಿ ಎಂದು ಅಕಾಲ ಮೃತ್ಯವಾಗುವುದಿಲ್ಲ. ಅಲ್ಲಿ ನೀವು ಬಹಳ ಸುಖಿಯಾಗಿರುತ್ತೀರಿ. ಆದ್ದರಿಂದ ಸುಖಧಾಮವೆಂದು ಹೇಳಲಾಗುತ್ತದೆ. ಆಯಸ್ಸು ಧೀರ್ಘವಾಗಿರುತ್ತದೆ. ಹಣವು ಹೆಚ್ಚು ಸಿಗುತ್ತದೆ. ಬಹಳ ಸುಖಿಯಾಗಿಯೂ ಇರುತ್ತೀರಿ. ಕಂಗಾಲರಿಂದ ಕಿರೀಟಧಾರಿಗಳಾಗಿ ಬಿಡುತ್ತೀರಿ. ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಲು ತಂದೆಯು ಬರುತ್ತಾರೆಂದು ನಿಮ್ಮ ಬುದ್ಧಿಯಲ್ಲಿದೆ. ಅದಂತೂ ಅವಶ್ಯವಾಗಿ ಚಿಕ್ಕ ವೃಕ್ಷವಾಗಿರುವುದು. ಅಲ್ಲಿರುವುದೇ ಒಂದು ಧರ್ಮ, ಒಂದು ರಾಜ್ಯ, ಒಂದು ಭಾಷೆ, ಅದಕ್ಕೆ ವಿಶ್ವದಲ್ಲಿ ಶಾಂತಿಯೆಂದು ಹೇಳಲಾಗುತ್ತದೆ. ಇಡೀ ವಿಶ್ವದಲ್ಲಿ ನಾವೇ ಪಾತ್ರಧಾರಿಗಳಾಗಿದ್ದೇವೆ. ಇದನ್ನು ಪ್ರಪಂಚವು ತಿಳಿದುಕೊಂಡಿಲ್ಲ. ಒಂದುವೇಳೆ ತಿಳಿದುಕೊಂಡಿದ್ದರೆ ನಾವು ಯಾವಾಗಿನಿಂದ ಪಾತ್ರವನ್ನಭಿಯಿಸುತ್ತಾ ಬಂದಿದ್ದೇವೆಂದು ತಿಳಿಸಬೇಕಿತ್ತು. ಈಗ ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ. ತಂದೆಯಿಂದ ಏನು ಸಿಗುತ್ತದೆಯೋ ಅದು ಮತ್ತ್ಯಾರಿಂದಲೂ ಸಿಗುವುದಿಲ್ಲವೆಂದು ಗೀತೆಯಲ್ಲಿಯೂ ಇದೆಯಲ್ಲವೆ. ತಂದೆಯು ಇಡೀ ಆಕಾಶ, ಧರಣಿ, ಇಡೀ ವಿಶ್ವದ ರಾಜಧಾನಿಯನ್ನು ಕೊಟ್ಟು ಬಿಡುತ್ತಾರೆ. ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು, ನಂತರದಲ್ಲಿ ಯಾವ ರಾಜರು ಮೊದಲಾದವರಿರುತ್ತಾರೆಯೋ ಅವರು ಭಾರತದವರಾಗಿದ್ದರು, ಗಾಯನವೂ ಇದೆ, ಯಾವುದನ್ನು ತಂದೆಯು ಕೊಡುತ್ತಾರೆಯೋ ಅದನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯೇ ಬಂದು ಪ್ರಾಪ್ತಿ ಮಾಡಿಸುತ್ತಾರೆ. ಅಂದಾಗ ಈ ಪೂರ್ಣ ಜ್ಞಾನವು ಬುದ್ಧಿಯಲ್ಲಿರಬೇಕು. ಯಾರಿಗೆ ಬೇಕಾದರೂ ತಿಳಿಸುವಂತಿರಬೇಕು. ಇಷ್ಟೊಂದು ತಿಳಿದುಕೊಳ್ಳುವಂತದ್ದಾಗಿದೆ. ಈಗ ಯಾರು ತಿಳಿಸಲು ಸಾಧ್ಯ? ಯಾರು ಬಂಧನಮುಕ್ತರಾಗಿರುವರೋ ಅವರೇ ತಿಳಿಸುತ್ತಾರೆ. ತಂದೆಯ ಬಳಿ ಯಾರಾದರೂ ಬಂದರೆ ತಂದೆಯು ಅವರನ್ನು ಪ್ರಶ್ನಿಸುತ್ತಾರೆ - ನಿಮಗೆ ಎಷ್ಟು ಮಂದಿ ಮಕ್ಕಳಿದ್ದಾರೆ? ಆಗ ನಮಗೆ 5 ಮಂದಿ ಮಕ್ಕಳಿದ್ದಾರೆ ಮತ್ತು 6ನೇ ಮಗನು ಶಿವ ತಂದೆಯಾಗಿದ್ದಾರೆ ಅಂದಾಗ ಅವರು ಎಲ್ಲರಿಗಿಂತ ಹಿರಿಯ ಮಗನಾದರಲ್ಲವೆ. ಶಿವ ತಂದೆಯ ಮಕ್ಕಳಾಗಿ ಬಿಟ್ಟರೆ ಮತ್ತೆ ಶಿವ ತಂದೆಯು ತನ್ನ ಮಗುವನ್ನಾಗಿ ಮಾಡಿಕೊಂಡು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಮಕ್ಕಳು ವಾರಸುಧಾರರಾಗಿ ಬಿಡುತ್ತಾರೆ. ಈ ಲಕ್ಷ್ಮೀ-ನಾರಾಯಣರು ಶಿವ ತಂದೆಯ ಪೂರ್ಣ ವಾರಸುಧಾರರಾಗಿದ್ದಾರೆ. ಮೊದಲ ಜನ್ಮದಲ್ಲಿ ಶಿವ ತಂದೆಗೆ ಎಲ್ಲವನ್ನೂ ಕೊಟ್ಟು ಬಿಟ್ಟರು ಅಂದಾಗ ಆಸ್ತಿಯು ಅವಶ್ಯವಾಗಿ ಮಕ್ಕಳಿಗೇ ಸಿಗಬೇಕು. ತಂದೆಯು ಹೇಳಿದರು - ನನ್ನನ್ನು ವಾರಸುಧಾರನನ್ನಾಗಿ ಮಾಡಿಕೊಳ್ಳಿ. ಅನ್ಯರ್ಯಾರೂ ಇಲ್ಲ. ಬಾಬಾ ಇದೆಲ್ಲವೂ ತಮ್ಮದಾಗಿದೆ, ತಮ್ಮದೆಲ್ಲವೂ ನಮ್ಮದಾಗಿದೆ. ತಾವು ಇಡೀ ವಿಶ್ವದ ರಾಜಧಾನಿಯ ಆಸ್ತಿಯನ್ನು ಕೊಡುತ್ತೀರಿ. ಏಕೆಂದರೆ ನಿಮ್ಮ ಬಳಿ ಏನೆಲ್ಲವೂ ಇತ್ತೋ ಎಲ್ಲವನ್ನೂ ಕೊಟ್ಟು ಬಿಟ್ಟಿರಿ ಎಂದು ಮಕ್ಕಳು ಹೇಳುತ್ತೀರಿ. ನಾಟಕದಲ್ಲಿ ನಿಗಧಿಯಾಗಿದೆಯಲ್ಲವೆ. ಅರ್ಜುನನಿಗೆ ವಿನಾಶವನ್ನೂ ತೋರಿಸಿದರು. ಚತುರ್ಭುಜನನ್ನೂ ತೋರಿಸಿದರು. ಅರ್ಜುನನೆಂದರೆ ಮತ್ತ್ಯಾರೂ ಅಲ್ಲ, ಇವರಿಗೆ (ಬ್ರಹ್ಮ) ಸಾಕ್ಷಾತ್ಕಾರವಾಯಿತು. ನೋಡಿದರು, ರಾಜ್ಯಭಾಗ್ಯವು ಸಿಗುತ್ತದೆ ಅಂದಮೇಲೆ ನಾನೇಕೆ ಶಿವ ತಂದೆಯನ್ನು ವಾರಸುಧಾರನನ್ನಾಗಿ ಮಾಡಿಕೊಳ್ಳಬಾರದು! ಅವರು ಮತ್ತೆ ನಮ್ಮನ್ನು ವಾರಸುಧಾರನನ್ನಾಗಿ ಮಾಡಿಕೊಳ್ಳುತ್ತಾರೆ. ಈ ವ್ಯಾಪಾರವಂತೂ ಬಹಳ ಚೆನ್ನಾಗಿದೆ ಎಂದೂ ಯಾರೊಂದಿಗೂ ಏನನ್ನು ಕೇಳಲಿಲ್ಲ. ಎಲ್ಲವನ್ನೂ ಗುಪ್ತವಾಗಿ ಕೊಟ್ಟು ಬಿಟ್ಟರು. ಇದಕ್ಕೆ ಗುಪ್ತದಾನವೆಂದು ಹೇಳಲಾಗುತ್ತದೆ. ಇವರಿಗೇನಾಯಿತೆಂದು ಯಾರಿಗೇನು ಗೊತ್ತು! ಕೆಲವರು ಈ ದಾದಾರವರಿಗೆ ವೈರಾಗ್ಯವು ಬಂದಿತು, ಬಹುಶಃ ಸನ್ಯಾಸಿಯಾಗಿ ಬಿಟ್ಟರೆಂದು ತಿಳಿದರು. ಅಂದಾಗ ಮಕ್ಕಳು ಹೇಳುತ್ತಾರೆ - ನಮಗೆ ಐದು ಮಂದಿ ಮಕ್ಕಳಿದ್ದಾರೆ ಮತ್ತು ಆರನೇಯ ಮಗುವನ್ನಾಗಿ ನಾವು ಇವರನ್ನು (ತಂದೆ) ಮಾಡಿಕೊಳ್ಳುತ್ತೇವೆ. ಈ ಬ್ರಹ್ಮಾರವರೂ ಸಹ ಎಲ್ಲವನ್ನೂ ತಂದೆಯ ಮುಂದೆ ಇಟ್ಟು ಬಿಟ್ಟರು. ಇದರಿಂದ ಅನೇಕರ ಸೇವೆಯಾಗಲಿ ಎಂದು ದಾದಾರವರನ್ನು ನೋಡಿ ಎಲ್ಲರಿಗೆ ವಿಚಾರ ಬಂದಿತು. ಎಲ್ಲರೂ ಮನೆ-ಮಠವನ್ನು ಬಿಟ್ಟು ಓಡಿ ಬಂದರು. ಅಲ್ಲಿಂದಲೇ ಹೊಡೆದಾಟವು ಪ್ರಾರಂಭವಾಯಿತು. ಅವರು ಮನೆ-ಮಠವನ್ನು ಬಿಡುವ ಧೈರ್ಯವನ್ನು ತೋರಿಸಿದರು. ಭಟ್ಟಿಯಾಗಿತ್ತೆಂದು ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಏಕೆಂದರೆ ಅವರಿಗೆ ಏಕಾಂತವು ಅವಶ್ಯವಾಗಿ ಬೇಕು. ತಂದೆಯ ನೆನಪಿನ ವಿನಃ ಮತ್ತ್ಯಾರ ನೆನಪೂ ಇರಬಾರದು. ಮಿತ್ರ ಸಂಬಂಧಿಗಳು ಮೊದಲಾದವರ ನೆನಪೂ ಇರಬಾರದು ಏಕೆಂದರೆ ಆತ್ಮವು ಪತಿತವಾಗಿದೆ. ಅದನ್ನು ಈಗ ಅವಶ್ಯವಾಗಿ ಪಾವನ ಮಾಡಿಕೊಳ್ಳಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿ. ಇದರಲ್ಲಿಯೇ ವಿಘ್ನಗಳು ಬರುತ್ತವೆ. ಇದು ಸ್ತ್ರೀ-ಪುರುಷರ ನಡುವೆ ಜಗಳವನ್ನಿಡುವ ಜ್ಞಾನವಾಗಿದೆ ಎಂದು ಹೇಳುತ್ತಿದ್ದರು, ಏಕೆಂದರೆ ಒಬ್ಬರು ಪವಿತ್ರರಾಗಿ ಇನ್ನೊಬ್ಬರು ಆಗದಿದ್ದರಿಂದ ಹೊಡೆದಾಟವು ನಡೆಯಿತು. ಇವರೆಲ್ಲರೂ ಪೆಟ್ಟು ತಿಂದಿದ್ದಾರೆ. ಏಕೆಂದರೆ ಆಕಸ್ಮಿಕವಾಗಿ ಹೊಸ ಮಾತಾಯಿತಲ್ಲವೆ. ಎಲ್ಲರೂ ಆಶ್ಚರ್ಯ ಚಕಿತರಾದರು. ಇದೇನಾಯಿತು, ಇವರೆಲ್ಲರೂ ಓಡಿ ಹೋಗುತ್ತಾರೆ ಎಂದುಕೊಳ್ಳುತ್ತಿದ್ದರು. ಮನುಷ್ಯರಲ್ಲಿ ತಿಳುವಳಿಕೆಯೂ ಇಲ್ಲ. ಯಾವುದೋ ಶಕ್ತಿಯಿದೆ ಎಂದಷ್ಟೇ ಹೇಳುತ್ತಿದ್ದರು. ಈ ರೀತಿಯಂತೂ ತಮ್ಮ ಮನೆ-ಮಠವನ್ನು ಬಿಟ್ಟು ಓಡಿ ಬರುವಂತಹ ಮಾತು ಎಂದೂ ಇರಲಿಲ್ಲ. ನಾಟಕದಲ್ಲಿ ಇದೆಲ್ಲಾ ಚರಿತ್ರೆಯು ಶಿವ ತಂದೆಯದಾಗಿದೆ. ಕೆಲವರು ಖಾಲಿ ಕೈಯಲ್ಲಿಯೇ ಓಡಿ ಬಂದರು. ಇದೂ ಸಹ ಆಟವಾಗಿದೆ. ಮನೆ-ಮಠ ಎಲ್ಲವನ್ನೂ ಬಿಟ್ಟು ಓಡಿ ಬಂದರು, ಏನೂ ನೆನಪಿರಲಿಲ್ಲ. ಬಾಕಿ ಕೇವಲ ಈ ಶರೀರವಿದೆ. ಇದರಿಂದ ಕೆಲಸ ಮಾಡಬೇಕಾಗಿದೆ. ಆತ್ಮವನ್ನೇ ನೆನಪಿನ ಯಾತ್ರೆಯಿಂದ ಪವಿತ್ರ ಮಾಡಿಕೊಳ್ಳಬೇಕಾಗಿದೆ. ಆಗಲೇ ಪವಿತ್ರ ಆತ್ಮಗಳು ಹಿಂತಿರುಗಿ ಹೋಗಬೇಕಾಗಿದೆ. ಸ್ವರ್ಗದಲ್ಲಿ ಅಪವಿತ್ರ ಆತ್ಮಗಳು ಹೋಗುವಂತಿಲ್ಲ. ಇದು ನಿಯಮವೇ ಇಲ್ಲ. ಮುಕ್ತಿಧಾಮದಲ್ಲಿ ಪವಿತ್ರರೇ ಬೇಕು. ಪವಿತ್ರರಾಗುವುದರಲ್ಲಿಯೇ ಎಷ್ಟೊಂದು ವಿಘ್ನಗಳು ಬರುತ್ತವೆ. ಮೊದಲು ಯಾವುದೇ ಸತ್ಸಂಗ ಇತ್ಯಾದಿಗಳಲ್ಲಿ ಹೋಗಲು ಯಾವುದೇ ಅಡೆ ತಡೆ ಇರಲಿಲ್ಲ. ಎಲ್ಲಿ ಬೇಕಾದರೂ ಹೊರಟು ಹೋಗುತ್ತಿದ್ದರು. ಇಲ್ಲಿ ಪವಿತ್ರತೆಯ ಕಾರಣವೇ ಇಲ್ಲಿಗೆ ಬರಲು ವಿಘ್ನಗಳನ್ನು ಹಾಕುತ್ತಾರೆ. ಇದಂತೂ ತಿಳಿದಿದೆ - ಪವಿತ್ರರಾಗದ ವಿನಃ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಧರ್ಮರಾಜನ ಮೂಲಕ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ, ನಂತರ ಅಲ್ಪ ಸ್ವಲ್ಪ ಪ್ರಾಪ್ತಿಯ (ರೊಟ್ಟಿ) ಸಿಗುತ್ತದೆ. ಪೆಟ್ಟು ತಿನ್ನದೆ ಇದ್ದರೆ ಪದವಿಯು ಒಳ್ಳೆಯದೇ ಸಿಗುತ್ತದೆ. ಇದು ತಿಳುವಳಿಕೆಯ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ನೀವು ನನ್ನ ಬಳಿ ಬರಬೇಕಾಗಿದೆ. ಈ ಹಳೆಯ ಶರೀರವನ್ನು ಬಿಟ್ಟು ಪವಿತ್ರ ಆತ್ಮಗಳಾಗಬೇಕಾಗಿದೆ. ಮತ್ತೆ ಯಾವಾಗ ಪಂಚತತ್ವಗಳೂ ಸತೋಪ್ರಧಾನವಾಗಿ ಬಿಡುವುದೋ ಆಗ ನಮಗೆ ಶರೀರವೂ ಹೊಸದು, ಸತೋಪ್ರಧಾನವಾದದ್ದೇ ಸಿಗುತ್ತದೆ. ಎಲ್ಲವೂ ಅಲ್ಲೋಲ ಕಲ್ಲೋಲವಾಗಿ ಹೊಸದಾಗಿ ಬಿಡುತ್ತವೆ. ಹೇಗೆ ತಂದೆಯು ಬಂದು ಇವರಲ್ಲಿ ಕುಳಿತುಕೊಂಡು ಬಿಡುತ್ತಾರೆ. ಹಾಗೆಯೇ ತಂದೆಯು ಯಾವುದೇ ಕಷ್ಟವಿಲ್ಲದೆ ಗರ್ಭ ಮಹಲಿನಲ್ಲಿ ಹೋಗಿ ಕುಳಿತುಕೊಳ್ಳುತ್ತದೆ. ನಂತರ ಸಮಯವು ಬಂದಾಗ ಅದು ಹೊರಗೆ ಬಂದು ಬಿಡುತ್ತದೆ. ಆಗ ಹೇಗೆ ವಿದ್ಯುತ್ತಿನಂತೆ ಪ್ರಪಂಚವೇ ಮಿಂಚುತ್ತದೆ ಏಕೆಂದರೆ ಆತ್ಮವು ಪವಿತ್ರವಾಗಿರುತ್ತದೆ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಪತಿತ ಛಿ-ಛಿ ಪ್ರಪಂಚದಿಂದ ಬೇಹದ್ದಿನ ವೈರಾಗ್ಯ ಇಟ್ಟುಕೊಂಡು ಆತ್ಮವನ್ನು ಪಾವನ ಮಾಡುವ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಒಬ್ಬ ತಂದೆಯ ಆಕರ್ಷಣೆಯಲ್ಲಿಯೇ ಇರಬೇಕಾಗಿದೆ.

2. ಜ್ಞಾನದ ಧಾರಣೆಯಿಂದ ತಮ್ಮ ಬ್ಯಾಟರಿಯನ್ನು ತುಂಬಿಕೊಳ್ಳಬೇಕಾಗಿದೆ. ಜ್ಞಾನ ರತ್ನಗಳಿಂದ ತಮ್ಮನ್ನು ಧನವಾನ್ ಮಾಡಿಕೊಳ್ಳಬೇಕಾಗಿದೆ. ಈಗ ಸಂಪಾದನೆಯ ಸಮಯವಾಗಿದೆ ಇದರಿಂದ ನಷ್ಟದಿಂದ ತಪ್ಪಿಸಿಕೊಳ್ಳಬೇಕಾಗಿದೆ.

ವರದಾನ:
ಜ್ಞಾನ ರತ್ನಗಳನ್ನು ಧಾರಣೆ ಮಾಡಿಕೊಂಡು ವ್ಯರ್ಥವನ್ನು ಸಮಾಪ್ತಿಗೊಳಿಸುವಂತಹ ಪವಿತ್ರ ಹಂಸ ಭವ.

ಪವಿತ್ರ ಹಂಸಗಳ ಎರಡು ವಿಶೇಷತೆಗಳಿವೆ - ಒಂದು ಜ್ಞಾನ ರತ್ನಗಳನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಇನ್ನೊಂದು - ನಿರ್ಣಯ ಶಕ್ತಿಯ ಮೂಲಕ ಹಾಲು ಮತ್ತು ನೀರನ್ನು ಬೇರೆ ಮಾಡುವುದು. ಹಾಲು ಮತ್ತು ನೀರಿನ ಅರ್ಥವಿದೆ - ಸಮರ್ಥ ಮತ್ತು ವ್ಯರ್ಥದ ನಿರ್ಣಯ. ವ್ಯರ್ಥವನ್ನು ನೀರಿನ ಸಮಾನ ಎಂದು ಹೇಳಲಾಗುತ್ತದೆ ಮತ್ತು ಸಮರ್ಥವನ್ನು ಹಾಲಿನ ಸಮಾನ. ಅಂದಮೇಲೆ ವ್ಯರ್ಥವನ್ನು ಸಮಾಪ್ತಿ ಮಾಡುವುದು ಅರ್ಥಾತ್ ಪವಿತ್ರ ಹಂಸ ಆಗುವುದು. ಪ್ರತೀ ಸಮಯದಲ್ಲಿ ಬುದ್ಧಿಯಲ್ಲಿ ಜ್ಞಾನ ರತ್ನಗಳ ವಿಚಾರವೇ ನಡೆಯುತ್ತಿರಲಿ, ಮನನ ನಡೆಯುತ್ತಿರಲಿ, ಆಗಲೇ ರತ್ನಗಳಿಂದ ಸಂಪನ್ನರಾಗಿ ಬಿಡುತ್ತೀರಿ.

ಸ್ಲೋಗನ್:
ಸದಾ ತಮ್ಮ ಶ್ರೇಷ್ಠ ಸ್ಥಾನದಲ್ಲಿ ಸ್ಥಿತರಾಗಿದ್ದು ವಿರೋಧವನ್ನು ಸಮಾಪ್ತಿ ಮಾಡುವವರೇ ವಿಜಯಿ ಆತ್ಮರಾಗಿದ್ದಾರೆ.