06.09.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನಿಮಗೆ
ಇದೇ ಚಿಂತೆಯಿರಲಿ - ನಾವು ಎಲ್ಲರಿಗೆ ಹೇಗೆ ಸುಖಧಾಮದ ಮಾರ್ಗ ತಿಳಿಸುವುದು, ಎಲ್ಲರಿಗೆ ಇದು
ಅರ್ಥವಾಗಲಿ, ಇದೇ ಪುರುಷೋತ್ತಮರಾಗುವ ಸಂಗಮಯುಗವಾಗಿದೆ".
ಪ್ರಶ್ನೆ:
ನೀವು ಮಕ್ಕಳು
ಪರಸ್ಪರದಲ್ಲಿ ಒಬ್ಬರು ಇನ್ನೊಬ್ಬರಿಗೆ ಯಾವಾಗ ಶುಭಾಷಯಗಳನ್ನು ಕೊಡುತ್ತೀರಿ? ಮನುಷ್ಯರು ಯಾವಾಗ
ಶುಭಾಷಯಗಳನ್ನು ಕೊಡುತ್ತಾರೆ?
ಉತ್ತರ:
ಯಾರಾದರೂ ಜನ್ಮ
ಪಡೆದಾಗ, ವಿಜಯಿಗಳಾದಾಗ ಹಾಗೂ ವಿವಾಹವಾದಾಗ ಇಲ್ಲವೆ ವಿಶೇಷ ದಿನದಂದು ಮನುಷ್ಯರು ಶುಭಾಷಯಗಳನ್ನು
ಹೇಳುತ್ತಾರೆ ಆದರೆ ಅದೇನು ಸತ್ಯವಾದ ಶುಭಾಷಯಗಳಲ್ಲ. ನೀವು ಮಕ್ಕಳು ಒಬ್ಬರು ಇನ್ನೊಬ್ಬರಿಗೆ ಶಿವ
ತಂದೆಯ ಮಕ್ಕಳಾಗುವ ಶುಭಾಷಯಗಳನ್ನು ಕೊಡುತ್ತೀರಿ. ನೀವು ಹೇಳುತ್ತೀರಿ - ನಾವು ಎಷ್ಟು
ಭಾಗ್ಯಶಾಲಿಗಳಾಗಿದ್ದೇವೆ, ಎಲ್ಲಾ ದುಃಖಗಳಿಂದ ಮುಕ್ತರಾಗಿ ಸುಖಧಾಮಕ್ಕೆ ಹೋಗುತ್ತೇವೆ. ನಿಮಗೆ
ಒಳಗಿಂದೊಳಗೇ ಖುಷಿಯಾಗುತ್ತದೆ.
ಓಂ ಶಾಂತಿ.
ಬೇಹದ್ದಿನ ತಂದೆಯು ಬೇಹದ್ದಿನ ಮಕ್ಕಳಿಗೆ ತಿಳಿಸುತ್ತಾರೆ. ಅಂದಾಗ ಪ್ರಶ್ನೆಯು ಉತ್ಪನ್ನವಾಗುತ್ತದೆ
- ಬೇಹದ್ದಿನ ತಂದೆ ಯಾರು? ಇದನ್ನಂತೂ ತಿಳಿದುಕೊಂಡಿದ್ದೀರಿ. ಎಲ್ಲರ ತಂದೆಯು ಒಬ್ಬರೇ ಆಗಿದ್ದಾರೆ.
ಅವರಿಗೆ ಪರಮಪಿತನೆಂದೂ ಹೇಳಲಾಗುತ್ತದೆ. ಲೌಕಿಕ ತಂದೆಗೆ ಪರಮಪಿತನೆಂದು ಹೇಳುವುದಿಲ್ಲ, ಆದ್ದರಿಂದ
ಪರಮಪಿತ ಒಬ್ಬರೇ ಆಗಿದ್ದಾರೆ ಆದರೆ ಅವರನ್ನು ಎಲ್ಲಾ ಮಕ್ಕಳು ಮರೆತು ಹೋಗಿದ್ದಾರೆ. ಆದ್ದರಿಂದ
ಪರಮಪಿತ ಪರಮಾತ್ಮ ದುಃಖಹರ್ತ, ಸುಖಕರ್ತನಾಗಿದ್ದಾರೆ ಅವರನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ
- ತಂದೆಯು ನಮ್ಮ ದುಃಖವನ್ನು ಹೇಗೆ ದೂರ ಮಾಡುತ್ತಿದ್ದಾರೆ, ಮತ್ತೆ ಸುಖ-ಶಾಂತಿಯಲ್ಲಿ ಹೋಗುತ್ತೇವೆ.
ಎಲ್ಲರೂ ಸುಖದಲ್ಲಿ ಹೋಗುವುದಿಲ್ಲ, ಕೆಲವರು ಸುಖಧಾಮದಲ್ಲಿ, ಇನ್ನೂ ಕೆಲವರು ಶಾಂತಿಧಾಮದಲ್ಲಿ
ಹೋಗುತ್ತಾರೆ. ಕೆಲವರು ಸತ್ಯಯುಗದಲ್ಲಿ, ಕೆಲವರು ತ್ರೇತಾಯುಗದಲ್ಲಿ, ಇನ್ನೂ ಕೆಲವರು
ದ್ವಾಪರಯುಗದಲ್ಲಿ ಪಾತ್ರವನ್ನಭಿನಯಿಸುತ್ತಾರೆ. ನೀವು ಸತ್ಯಯುಗದಲ್ಲಿದ್ದಾಗ ಉಳಿದವರೆಲ್ಲರೂ
ಮುಕ್ತಿಧಾಮದಲ್ಲಿರುತ್ತಾರೆ, ಅದಕ್ಕೆ ಈಶ್ವರನ ಮನೆಯೆಂದು ಹೇಳುವರು. ಮುಸಲ್ಮಾನರೂ ಸಹ ನಮಾಜ್
ಮಾಡುವಾಗ ಎಲ್ಲರೂ ಸೇರಿ ಖುದಾನ ಆರಾಧನೆ ಮಾಡುತ್ತಾರೆ, ಏತಕ್ಕಾಗಿ? ಸ್ವರ್ಗಕ್ಕಾಗಿಯೋ ಇಲ್ಲವೆ
ಖುದಾನ ಬಳಿ ಹೋಗುವುದಕ್ಕಾಗಿಯೋ! ಅಲ್ಲಾನ ಮನೆಯನ್ನು ಬಹಿಶ್ತ್ (ಸ್ವರ್ಗ) ಎಂದು ಹೇಳುವುದಿಲ್ಲ.
ಅಲ್ಲಂತೂ ಆತ್ಮಗಳು ಶಾಂತಿಯಲ್ಲಿರುತ್ತಾರೆ, ಶರೀರವಿರುವುದಿಲ್ಲ. ಇದಂತೂ ತಿಳಿದುಕೊಂಡಿರಬಹುದು -
ಅಲ್ಲಾನ ಬಳಿಗೆ ಶರೀರದೊಂದಿಗಲ್ಲ, ನಾವಾತ್ಮಗಳು ಹೋಗುತ್ತೇವೆ, ಕೇವಲ ಅಲ್ಲಾನನ್ನು ನೆನಪು
ಮಾಡುವುದರಿಂದಷ್ಟೇ. ಏಕೆಂದರೆ ಅವರನ್ನು ಅರಿತುಕೊಂಡೇ ಇಲ್ಲ ಅಂದಾಗ ತಂದೆಯು ಸುಖ-ಶಾಂತಿಯ
ಆಸ್ತಿಯನ್ನು ಕೊಡುತ್ತಿದ್ದಾರೆಂದು ಮನುಷ್ಯರಿಗೆ ಹೇಗೆ ಸಲಹೆ ಕೊಡುವುದು? ವಿಶ್ವದಲ್ಲಿ ಶಾಂತಿಯು
ಹೇಗೆ ಸ್ಥಾಪನೆಯಾಗುತ್ತದೆ? ವಿಶ್ವದಲ್ಲಿ ಶಾಂತಿಯು ಯಾವಾಗ ಇತ್ತು ಎಂಬುದು ಅವರಿಗೆ ಹೇಗೆ
ತಿಳಿಸುವುದು. ಸೇವಾಧಾರಿ ಮಕ್ಕಳಿಗೆ ನಂಬರ್ವಾರ್ ಪುರುಷಾರ್ಥದನುಸಾರ ಈ ಚಿಂತನೆಯಿರುತ್ತದೆ. ನೀವು
ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರಿಗೇ ತಮ್ಮ ಪರಿಚಯವನ್ನು ಕೊಟ್ಟಿದ್ದಾರೆ. ಇಡೀ ಪ್ರಪಂಚದ ಮನುಷ್ಯ
ಮಾತ್ರರ ಪಾತ್ರದ ಬಗ್ಗೆ ಪರಿಚಯವನ್ನೂ ಕೊಟ್ಟಿದ್ದಾರೆ. ನಾವೀಗ ಮನುಷ್ಯ ಮಾತ್ರರಿಗೆ ತಂದೆ ಮತ್ತು
ರಚನೆಯ ಪರಿಚಯವನ್ನು ಹೇಗೆ ಕೊಡುವುದು? ತಂದೆಯು ಎಲ್ಲರಿಗೆ ಹೇಳುತ್ತಾರೆ - ತನ್ನನ್ನು ಆತ್ಮನೆಂದು
ತಿಳಿದು ನನ್ನನ್ನು ನೆನಪು ಮಾಡಿರಿ ಆಗ ಖುದಾನ ಮನೆಗೆ ಹೋಗುತ್ತೀರಿ. ಸತ್ಯಯುಗ ಅಥವಾ ಬಹಿಶ್ತ್ನಲ್ಲಿ
ಎಲ್ಲರೂ ಹೋಗುವುದಿಲ್ಲ, ಅಲ್ಲಿ ಒಂದೇ ಧರ್ಮವಿರುತ್ತದೆ. ಉಳಿದವರೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ.
ಇದರಲ್ಲಿ ಯಾರೂ ಬೇಸರವಾಗುವ ಮಾತೇ ಇಲ್ಲ. ಮನುಷ್ಯರು ಶಾಂತಿಯನ್ನು ಬಯಸುತ್ತಾರೆ ಆದರೆ ಆ ಶಾಂತಿಯು
ಅಲ್ಲಾ ಅಥವಾ ಪರಮಾತ್ಮನ ಮನೆಯಲ್ಲಿಯೇ ಸಿಗುತ್ತದೆ. ಎಲ್ಲಾ ಆತ್ಮಗಳು ಶಾಂತಿಧಾಮದಿಂದ ಬರುತ್ತಾರೆ.
ನಂತರ ಯಾವಾಗ ನಾಟಕವು ಮುಕ್ತಾಯವಾಗುವುದೋ ಆಗಲೇ ಪುನಃ ಅಲ್ಲಿಗೆ ಹೋಗುತ್ತಾರೆ. ತಂದೆಯು ಪತಿತ
ಪ್ರಪಂಚದಿಂದ ಎಲ್ಲರನ್ನು ಕರೆದುಕೊಂಡು ಹೋಗುವುದಕ್ಕಾಗಿ ಬರುತ್ತಾರೆ.
ಈಗ ನೀವು ಮಕ್ಕಳ
ಬುದ್ಧಿಯಲ್ಲಿದೆ - ನಾವು ಶಾಂತಿಧಾಮಕ್ಕೆ ಹೋಗುತ್ತೇವೆ ನಂತರ ಸುಖಧಾಮದಲ್ಲಿ ಬರುತ್ತೇವೆ. ಇದು
ಪುರುಷೋತ್ತಮ ಸಂಗಮಯುಗವಾಗಿದೆ. ಪುರುಷೋತ್ತಮ ಅರ್ಥಾತ್ ಉತ್ತಮರಿಗಿಂತಲೂ ಉತ್ತಮ ಪುರುಷರು.
ಎಲ್ಲಿಯವರೆಗೆ ಆತ್ಮವು ಪವಿತ್ರವಾಗುವುದಿಲ್ಲವೋ ಅಲ್ಲಿಯವರೆಗೆ ಉತ್ತಮ ಪುರುಷನಾಗಲು ಸಾಧ್ಯವಿಲ್ಲ.
ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಮತ್ತು ಸೃಷ್ಟಿಚಕ್ರವನ್ನು ಅರಿತುಕೊಳ್ಳಿ.
ಜೊತೆಯಲ್ಲಿ ದೈವೀ ಗುಣಗಳನ್ನೂ ಧಾರಣೆ ಮಾಡಿ. ಈ ಸಮಯದಲ್ಲಿ ಎಲ್ಲಾ ಮನುಷ್ಯರ ಚಾರಿತ್ರ್ಯವು
ಹಾಳಾಗಿದೆ. ಹೊಸ ಪ್ರಪಂಚದಲ್ಲಿ ಎಲ್ಲರ ನಡವಳಿಕೆಯು ಬಹಳ ಚೆನ್ನಾಗಿರುತ್ತದೆ. ಭಾರತವಾಸಿಗಳೇ
ಶ್ರೇಷ್ಠ ಚಾರಿತ್ರ್ಯವಂತರಾಗುತ್ತೀರಿ. ಆ ಶ್ರೇಷ್ಠ ಚಾರಿತ್ರ್ಯವಂತರಿಗೇ ಕನಿಷ್ಟರು ತಲೆ
ಬಾಗುತ್ತಾರೆ. ಅವರ ಚಲನೆಯನ್ನು ವರ್ಣನೆ ಮಾಡುತ್ತಾರೆ, ಇದನ್ನು ನೀವು ಮಕ್ಕಳೇ
ತಿಳಿದುಕೊಳ್ಳುತ್ತೀರಿ. ಇದನ್ನು ಅನ್ಯರಿಗೆ ತಿಳಿಸುವುದು ಹೇಗೆ? ಯಾವ ಸಹಜಯುಕ್ತಿಯನ್ನು ರಚಿಸುವುದು?
ಇದು ಆತ್ಮಗಳ ಮೂರನೆಯ ನೇತ್ರವನ್ನು ತೆರೆಸುವ ಸೇವೆಯಾಗಿದೆ. ತಂದೆಯ ಆತ್ಮದಲ್ಲಿ ಜ್ಞಾನವಿದೆ, ಭಲೆ
ಮನುಷ್ಯರು ನನ್ನಲ್ಲಿ ಜ್ಞಾನವಿದೆ ಎಂದು ಹೇಳುತ್ತಾರೆ ಆದರೆ ಇದು ದೇಹಾಭಿಮಾನವಾಗಿದೆ. ಇಲ್ಲಿ
ಆತ್ಮಾಭಿಮಾನಿಗಳಾಗಬೇಕಾಗಿದೆ. ಸನ್ಯಾಸಿಗಳ ಬಳಿ ಶಾಸ್ತ್ರಗಳ ಜ್ಞಾನವಿದೆ, ತಂದೆಯ ಜ್ಞಾನವನ್ನಂತೂ
ತಂದೆಯೇ ಬಂದು ಕೊಡಬೇಕಾಗುವುದು. ಹೀಗೆ ಯುಕ್ತಿಯಿಂದ ತಿಳಿಸಬೇಕಾಗಿದೆ. ಹೀಗೆ ಅವರು ಕೃಷ್ಣನನ್ನೇ
ಭಗವಂತನೆಂದು ತಿಳಿಯುತ್ತಾರೆ. ಭಗವಂತನನ್ನು ತಿಳಿದುಕೊಂಡಿಲ್ಲ. ಋಷಿ-ಮುನಿ ಮೊದಲಾದವರೂ ಸಹ ಭಗವಂತನ
ಬಗ್ಗೆ ನಮಗೂ ಗೊತ್ತಿಲ್ಲವೆಂದು ಹೇಳುತ್ತಿದ್ದರು. ಮನುಷ್ಯರು ಭಗವಂತನಾಗಲು ಸಾಧ್ಯವಿಲ್ಲ, ನಿರಾಕಾರ
ಭಗವಂತನೇ ರಚಯಿತನಾಗಿದ್ದಾರೆಂದು ತಿಳಿದುಕೊಳ್ಳುತ್ತಾರೆ ಆದರೆ ಅವರು ಹೇಗೆ ರಚಿಸುತ್ತಾರೆ, ಅವರ
ನಾಮ-ರೂಪ-ದೇಶ-ಕಾಲ ಯಾವುದು? ಎಂದು ಕೇಳಿದರೆ ಅವರು ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಹೇಳಿ
ಬಿಡುತ್ತಾರೆ. ನಾಮ-ರೂಪದಿಂದ ಭಿನ್ನವಾದ ವಸ್ತುವಿರಲು ಹೇಗೆ ಸಾಧ್ಯ? ಇದು ಅಸಂಭವವೆಂದೇ
ತಿಳಿದುಕೊಳ್ಳುವುದಿಲ್ಲ. ಒಂದುವೇಳೆ ಪರಮಾತ್ಮನು ಕಲ್ಲು-ಮುಳ್ಳು, ಮೀನು-ಮೊಸಳೆ ಎಲ್ಲದರಲ್ಲಿಯೂ
ಇದ್ದಾರೆಂದು ಹೇಳುವುದಾದರೆ ಅದೂ ಸಹ ನಾಮ-ರೂಪವಾಯಿತಲ್ಲವೆ. ಕೆಲಕೆಲವೊಮ್ಮೆ ಕೆಲವೊಂದು ತರಹ
ಹೇಳುತ್ತಿರುತ್ತಾರೆ. ಮಕ್ಕಳಿಗೆ ದಿನ-ರಾತ್ರಿ ಬಹಳ ಚಿಂತನೆ ನಡೆಯುತ್ತಿರಬೇಕು - ನಾವು ಮನುಷ್ಯರಿಗೆ
ಹೇಗೆ ತಿಳಿಸುವುದು? ಇದು ಮನುಷ್ಯರಿಂದ ದೇವತೆಗಳಾಗುವ ಪುರುಷೋತ್ತಮ ಸಂಗಮಯುಗವಾಗಿದೆ. ಮನುಷ್ಯರು
ದೇವತೆಗಳಿಗೆ ನಮಸ್ಕಾರ ಮಾಡುತ್ತಾರೆ. ಮನುಷ್ಯರು ಮನುಷ್ಯರಿಗೆ ಮಾಡುವುದಿಲ್ಲ. ಮನುಷ್ಯರು ಭಗವಂತ
ಅಥವ ದೇವತೆಗಳಿಗೆ ನಮಸ್ಕಾರ ಮಾಡುತ್ತಾರೆ. ಮುಸಲ್ಮಾನರೂ ಸಹ ಆರಾಧನೆ ಮಾಡುತ್ತಾರೆ. ಅಲ್ಲಾನನ್ನು
ನೆನಪು ಮಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಅವರು ಅಲ್ಲಾನ ಬಳಿಯಂತೂ ತಲುಪಲು ಸಾಧ್ಯವಿಲ್ಲ.
ಮುಖ್ಯ ಮಾತೇನೆಂದರೆ ಅಲ್ಲಾನ ಬಳಿ ಹೇಗೆ ಹೋಗುವುದು? ಮತ್ತೆ ಅಲ್ಲಾನು ಹೇಗೆ ಹೊಸ ಸೃಷ್ಟಿಯನ್ನು
ರಚಿಸುತ್ತಾರೆ. ಇವೆಲ್ಲಾ ಮಾತುಗಳನ್ನು ಹೇಗೆ ತಿಳಿಸಿಕೊಡುವುದು? ಇದಕ್ಕಾಗಿ ಮಕ್ಕಳೇ ವಿಚಾರ ಸಾಗರ
ಮಂಥನ ಮಾಡಬೇಕಾಗುತ್ತದೆ. ತಂದೆಯಂತೂ ಮಾಡುವುದಿಲ್ಲ, ತಂದೆಯು ಮಕ್ಕಳಿಗೆ ವಿಚಾರ ಸಾಗರ ಮಂಥನ ಮಾಡುವ
ಯುಕ್ತಿಯನ್ನು ಕಲಿಸುತ್ತಾರೆ. ಈ ಸಮಯದಲ್ಲಿ ಎಲ್ಲರೂ ಕಲಿಯುಗದಲ್ಲಿ ತಮೋಪ್ರಧಾನರಾಗಿದ್ದಾರೆ.
ಅವಶ್ಯವಾಗಿ ಯಾವುದೋ ಸಮಯದಲ್ಲಿ ಸತ್ಯಯುಗವು ಇರಬೇಕಲ್ಲವೆ. ಸತ್ಯಯುಗಕ್ಕೆ ಪವಿತ್ರ ಪ್ರಪಂಚವೆಂದು
ಹೇಳಲಾಗುತ್ತದೆ. ಪವಿತ್ರ ಮತ್ತು ಅಪವಿತ್ರ. ಹೇಗೆ ಚಿನ್ನದಲ್ಲಿ ತುಕ್ಕು ಬೀಳುತ್ತದೆಯಲ್ಲವೆ.
ಆತ್ಮವೂ ಸಹ ಮೊದಲು ಪವಿತ್ರ, ಸತೋಪ್ರಧಾನವಾಗಿರುತ್ತದೆ ನಂತರ ಅದರಲ್ಲಿ ತುಕ್ಕು ಬೀಳುತ್ತದೆ.
ಯಾವಾಗ ತಮೋಪ್ರಧಾನವಾಗಿ ಬಿಡುವುದೋ ಆಗ ತಂದೆಯು ಬರುತ್ತಾರೆ. ತಂದೆಯೇ ಬಂದು ಸತೋಪ್ರಧಾನ,
ಸುಖಧಾಮವನ್ನಾಗಿ ಮಾಡುತ್ತಾರೆ. ಸುಖಧಾಮದಲ್ಲಿ ಕೇವಲ ಭಾರತವಾಸಿಗಳೇ ಇರುತ್ತಾರೆ. ಉಳಿದೆಲ್ಲರೂ
ಶಾಂತಿಧಾಮಕ್ಕೆ ಹೋಗುತ್ತಾರೆ. ಶಾಂತಿಧಾಮದಲ್ಲಿ ಎಲ್ಲರೂ ಪವಿತ್ರರಾಗಿರುತ್ತಾರೆ, ಮತ್ತೆ ಇಲ್ಲಿ
ಬಂದು ನಿಧಾನ-ನಿಧಾನವಾಗಿ ಅಪವಿತ್ರರಾಗುತ್ತಾ ಹೋಗುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಸತೋ, ರಜೋ,
ತಮೋ ಅವಶ್ಯವಾಗಿ ಆಗುತ್ತಾರೆ ಅಂದಾಗ ಈಗ ಅವರಿಗೆ ನೀವೆಲ್ಲರೂ ಅಲ್ಲಾನ ಮನೆಗೆ ತಲುಪಬಹುದೆಂದು,
ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ತನ್ನನ್ನು ಆತ್ಮನೆಂದು ತಿಳಿಯಿರಿ ಎಂಬುದನ್ನು ಅವರಿಗೆ ಹೇಗೆ
ತಿಳಿಸುವುದು? ಭಗವಾನುವಾಚವಂತೂ ಇದೆ - ನನ್ನನ್ನು ನೆನಪು ಮಾಡಿದರೆ ಈ ಐದೂ ಭೂತಗಳು ಹೊರಟು
ಹೋಗುತ್ತವೆ. ನೀವು ಮಕ್ಕಳಿಗೆ ದಿನ-ರಾತ್ರಿ ಇದೇ ಚಿಂತೆಯಿರಬೇಕು. ಹೇಗೆ ತಂದೆಗೂ ಸಹ ಚಿಂತೆಯಾಯಿತು.
ಈಗ ಹೋಗಿ ಎಲ್ಲರನ್ನೂ ಸುಖಿಯನ್ನಾಗಿ ಮಾಡುವುದೇ? ಎಂಬ ಸಂಕಲ್ಪವು ಬಂದಿತು. ಅಂದಮೇಲೆ ಮಕ್ಕಳೂ ಸಹ
ತಂದೆಯ ಜೊತೆಯಲ್ಲಿ ಸಹಯೋಗಿಗಳಾಗಬೇಕಾಗಿದೆ. ತಂದೆಯೊಬ್ಬರೇ ಏನು ಮಾಡುವರು? ಒಬ್ಬರಿಂದ ವಿಚಾರಸಾಗರ
ಮಂಥನ ಮಾಡಿ - ಮನುಷ್ಯರಿಗೆ ಇದು ಪುರುಷೋತ್ತಮ ಸಂಗಮಯುಗವೆಂದು ಕೂಡಲೇ ಅರ್ಥವಾಗಬೇಕೆಂದರೆ ಇಂತಹ
ಯಾವ ಉಪಾಯವನ್ನು ರಚಿಸುವುದು? ಈ ಸಮಯದಲ್ಲಿಯೇ ಮನುಷ್ಯರು ಪುರುಷೋತ್ತಮರಾಗುತ್ತಾರೆ. ಮೊದಲು
ಶ್ರೇಷ್ಠರಾಗಿರುತ್ತಾರೆ ನಂತರ ಕೆಳಗಿಳಿಯುತ್ತಾರೆ ಎಂಬುದನ್ನು ಹೇಗೆ ತಿಳಿಸುವುದು? ಮೊಟ್ಟ ಮೊದಲಿಗೇ
ಕೆಳಗಿಳಿಯುವುದಿಲ್ಲ ಅಲ್ಲವೆ? ಏಕೆಂದರೆ ಬಂದ ತಕ್ಷಣವೇ ತಮೋಪ್ರಧಾನರಾಗಿರುವುದಿಲ್ಲ. ಪ್ರತಿಯೊಂದು
ವಸ್ತು ಮೊದಲು ಸತೋಪ್ರಧಾನ ನಂತರ ಸತೋ, ರಜೋ, ತಮೋ ಆಗುತ್ತದೆ. ಮಕ್ಕಳು ಇಷ್ಟೊಂದು
ಪ್ರದರ್ಶನಿಗಳನ್ನಿಡುತ್ತಾರೆ ಆದರೂ ಸಹ ಮನುಷ್ಯರು ಏನೂ ತಿಳಿದುಕೊಳ್ಳುತ್ತಿಲ್ಲ. ಅಂದಮೇಲೆ ಮತ್ತೇನು
ಉಪಾಯ ಮಾಡುವುದು? ಭಿನ್ನ-ಭಿನ್ನ ಉಪಾಯಗಳನ್ನಂತೂ ಮಾಡಬೇಕಾಗುತ್ತದೆಯಲ್ಲವೆ ಅದಕ್ಕಾಗಿ ಸಮಯವೂ
ಸಿಕ್ಕಿದೆ. ತಕ್ಷಣ ಯಾರೂ ಸಂಪೂರ್ಣರಾಗಿ ಬಿಡುವುದಿಲ್ಲ. ಚಂದ್ರಮನೂ ಸಹ ಸ್ವಲ್ಪ-ಸ್ವಲ್ಪವಾಗಿಯೇ
ಕೊನೆಗೆ ಸಂಪೂರ್ಣನಾಗುತ್ತಾನೆ. ನಾವೂ ಸಹ ತಮೋಪ್ರಧಾನರಾಗಿದ್ದೇವೆ ಮತ್ತೆ ಸತೋಪ್ರಧಾನರಾಗುವುದರಲ್ಲಿ
ಸಮಯ ಹಿಡಿಸುತ್ತದೆ. ಅದಂತೂ ಜಡ, ಇದು ಚೈತನ್ಯ ಆತ್ಮಗಳ ಮಾತಾಗಿದೆ ಅಂದಾಗ ನಾವು ಹೇಗೆ
ತಿಳಿಸಿಕೊಡಬೇಕು? ಮುಸಲ್ಮಾನರ ಮೌಳ್ವಿಗೆ ತಿಳಿಸಿರಿ, ನೀವು ಈ ನಮಾಜನ್ನು ಏಕೆ ಓದುತ್ತೀರಿ, ಯಾರ
ನೆನಪಿನಲ್ಲಿ ಓದುತ್ತೀರಿ? ಇದನ್ನು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ವಿಶೇಷ ದಿನಗಳಂದು
ರಾಷ್ಟ್ರಪತಿ ಮೊದಲಾದವರೂ ಸಹ ಮಸೀದಿಗೆ ಹೋಗುತ್ತಾರೆ. ಹಿರಿಯರೊಂದಿಗೆ ಆಲಿಂಗನ ಮಾಡುತ್ತಾರೆ. ಎಲ್ಲಾ
ಮಸೀದಿಗಳಿಗೂ ಒಂದು ದೊಡ್ಡ ಮಸೀದಿಯಿರುತ್ತದೆ. ಅಲ್ಲಿಗೆ ಈದ್-ಮುಬಾರಕ್ ಕೊಡಲು ಹೋಗುತ್ತಾರೆ. ಈಗ
ಶುಭಾಷಯಗಳಂತೂ ಇದಾಗಿದೆ ಯಾವಾಗ ಎಲ್ಲಾ ದುಃಖಗಳಿಂದ ಮುಕ್ತರಾಗಿ ಸುಖಧಾಮದಲ್ಲಿ ಹೋಗುತ್ತೇವೆಯೋ ಆಗ
ಶುಭಾಷಯಗಳು ಎಂದು ಹೇಳಲಾಗುವುದು. ನಾವು ಖುಷಿಯ ಸಮಾಚಾರವನ್ನು ತಿಳಿಸುತ್ತೇವೆ. ಯಾರಾದರೂ
ವಿಜಯಿಯಾದಾಗಲೂ ಶುಭಾಷಯಗಳನ್ನು ಹೇಳುತ್ತಾರೆ, ವಿವಾಹವಾದಾಗಲೂ ಶುಭಾಷಯಗಳನ್ನು ಹೇಳುತ್ತಾರೆ ಅಂದರೆ
ಸದಾ ಸುಖಿಯಾಗಿರಿ ಎಂದು. ಈಗ ನಿಮಗೆ ತಂದೆಯು ತಿಳಿಸಿದ್ದಾರೆ - ಪ್ರತಿಯೊಬ್ಬರಿಗೆ ಹೇಗೆ
ಶುಭಾಷಯಗಳನ್ನು ಕೊಡುವುದು. ಈ ಸಮಯದಲ್ಲಿ ನಾವು ಬೇಹದ್ದಿನ ತಂದೆಯಿಂದ ಮುಕ್ತಿ-ಜೀವನ್ಮುಕ್ತಿಯ
ಆಸ್ತಿಯನ್ನು ಪಡೆಯುತ್ತಿದ್ದೇವೆ. ನಿಮಗಂತೂ ಸತ್ಯವಾದ ಶುಭಾಷಯಗಳು ಸಿಗುತ್ತದೆ. ತಂದೆಯು
ತಿಳಿಸುತ್ತಾರೆ - ಮಕ್ಕಳೇ, ನಿಮಗೆ ಶುಭಾಷಯಗಳು, ನೀವು 21 ಜನ್ಮಗಳಿಗಾಗಿ
ಪದಮಾಪತಿಗಳಾಗುತ್ತಿದ್ದೀರಿ. ಈಗ ಎಲ್ಲಾ ಮನುಷ್ಯರು ತಂದೆಯಿಂದ ಹೇಗೆ ಆಸ್ತಿಯನ್ನು
ಪಡೆದುಕೊಳ್ಳುವುದು ಹಾಗೂ ಎಲ್ಲರಿಗೆ ಶುಭಾಷಯಗಳು ಸಿಗುವುದು! ನಿಮಗೂ ಈಗ ಅರ್ಥವಾಗಿದೆ ಆದರೆ ನಿಮಗೆ
ಶುಭಾಷಯಗಳನ್ನು ಮನುಷ್ಯರು ಕೊಡಲು ಸಾಧ್ಯವಿಲ್ಲ, ನಿಮ್ಮನ್ನು ತಿಳಿದುಕೊಂಡೇ ಇಲ್ಲ. ಶುಭಾಷಯಗಳನ್ನು
ಕೊಡುವುದಾದರೆ ತಾವೂ ಅವಶ್ಯವಾಗಿ ಬಂದು ಶುಭಾಷಯಗಳನ್ನು ಪಡೆದುಕೊಳ್ಳಲು ಯೋಗ್ಯರಾಗುವರು. ನೀವಂತೂ
ಗುಪ್ತವಾಗಿದ್ದೀರಲ್ಲವೆ. ಒಬ್ಬರು ಇನ್ನೊಬ್ಬರಿಗೆ ಶುಭಾಷಯಗಳನ್ನು ಕೊಡಬಲ್ಲಿರಿ. ಶುಭಾಷಯಗಳು, ನಾವು
ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ. ನೀವು ಮಕ್ಕಳು ಎಷ್ಟು ಭಾಗ್ಯಶಾಲಿಗಳಾಗಿದ್ದೀರಿ! ಯಾರಾದರೂ
ಜನ್ಮ ಪಡೆದಾಗ ಅಥವಾ ಲಾಟರಿ ಸಿಕ್ಕಿದಾಗ ಶುಭಾಷಯಗಳೆಂದು ಹೇಳುತ್ತಾರೆ. ಮಕ್ಕಳು ಉತ್ತೀರ್ಣರಾದಾಗಲೂ
ಸಹ ಶುಭಾಷಯಗಳನ್ನು ಹೇಳುತ್ತಾರೆ. ನಿಮಗೆ ಒಳಗಿಂದೊಳಗೇ ಖುಷಿಯಾಗುತ್ತದೆ. ತಮಗೆ ಶುಭಾಷಯಗಳನ್ನು
ಹೇಳಿಕೊಳ್ಳುತ್ತೀರಿ, ನಮಗೆ ತಂದೆಯು ಸಿಕ್ಕಿದ್ದಾರೆ, ಅವರಿಂದ ನಾವು ಆಸ್ತಿಯನ್ನು
ಪಡೆಯುತ್ತಿದ್ದೇವೆ.
ತಂದೆಯು ತಿಳಿಸುತ್ತಾರೆ
- ನೀವಾತ್ಮಗಳು ದುರ್ಗತಿಯನ್ನು ಪಡೆದಿದ್ದೀರಿ, ನೀವೀಗ ಸದ್ಗತಿಯನ್ನು ಪಡೆಯುತ್ತೀರಿ. ಶುಭಾಷಯಗಳಂತೂ
ಎಲ್ಲರಿಗೂ ಸಿಗುತ್ತದೆ. ಕೊನೆಯಲ್ಲಿ ಎಲ್ಲರಿಗೆ ಅರ್ಥವಾಗುತ್ತದೆ. ಯಾರು ಶ್ರೇಷ್ಠಾತಿ
ಶ್ರೇಷ್ಠರಾಗುವರೋ ಅವರ ಕೆಳಗಿನವರಿಗೆ ಶುಭಾಷಯಗಳನ್ನು ಹೇಳುವರು. ತಾವು ಸೂರ್ಯವಂಶೀ ಕುಲದಲ್ಲಿ
ಮಹಾರಾಜ, ಮಹಾರಾಣಿಯಾಗುತ್ತೀರಿ, ನೀಚ ಕುಲದವರು ಯಾರು ವಿಜಯಮಾಲೆಯ ಮಣಿಯಾಗುವರೋ ಅವರಿಗೆ
ಶುಭಾಷಯಗಳನ್ನು ಹೇಳುತ್ತಾರೆ. ಯಾರು ತೇರ್ಗಡೆಯಾಗುವರೋ ಅವರಿಗೆ ಶುಭಾಷಯಗಳು ಸಿಗುವುದು, ಅವರದೇ
ಪೂಜೆಯು ನಡೆಯುತ್ತದೆ. ಆತ್ಮಕ್ಕೂ ಶುಭಾಷಯಗಳು, ಯಾವುದು ಶ್ರೇಷ್ಠ ಪದವಿಯನ್ನು ಪಡೆಯುತ್ತದೆ ನಂತರ
ಭಕ್ತಿಮಾರ್ಗದಲ್ಲಿ ಅವರಿಗೇ ಪೂಜೆಯು ನಡೆಯುತ್ತದೆ. ಏಕೆ ಪೂಜೆ ಮಾಡುತ್ತೇವೆಂದು ಮನುಷ್ಯರಿಗೆ
ಗೊತ್ತಿಲ್ಲ ಅಂದಾಗ ಮಕ್ಕಳಿಗೆ ಇದೇ ಚಿಂತೆಯಿರುತ್ತದೆ - ಎಲ್ಲರಿಗೆ ಹೇಗೆ ತಿಳಿಸಿ ಕೊಡುವುದು? ನಾವು
ಪವಿತ್ರರಾಗಿದ್ದೇವೆ, ಅನ್ಯರನ್ನೂ ಪವಿತ್ರರನ್ನಾಗಿ ಮಾಡುವುದು ಹೇಗೆ? ಪ್ರಪಂಚವಂತೂ
ದೊಡ್ಡದಾಗಿದೆಯಲ್ಲವೆ. ಮನೆ-ಮನೆಗೂ ಸಂದೇಶ ತಲುಪಬೇಕಾದರೆ ಯಾವ ಯುಕ್ತಿಯನ್ನು ರಚಿಸುವುದು? ಸಂದೇಶ
ಪತ್ರಗಳನ್ನು ಹಂಚುವುದರಿಂದಲೂ ಎಲ್ಲರಿಗೂ ಸಿಗುವುದಿಲ್ಲ. ಈಗಂತೂ ಪ್ರತಿಯೊಬ್ಬರ ಕೈಗೆ ಸಂದೇಶವು
ಸಿಗಬೇಕು ಏಕೆಂದರೆ ತಂದೆಯ ಬಳಿ ಹೇಗೆ ತಲುಪಬೇಕೆಂದು ಅವರಿಗೆ ತಿಳಿದೇ ಇಲ್ಲ. ಎಲ್ಲಾ ಮಾರ್ಗಗಳು
ಪರಮಾತ್ಮನೊಂದಿಗೆ ಮಿಲನ ಮಾಡುವ ಮಾರ್ಗಗಳೆಂದು ಹೇಳಿ ಬಿಡುತ್ತಾರೆ ಆದರೆ ತಂದೆಯು ಹೇಳುತ್ತಾರೆ - ಈ
ಭಕ್ತಿ, ದಾನ, ಪುಣ್ಯ ಇತ್ಯಾದಿಗಳನ್ನು ಜನ್ಮ-ಜನ್ಮಾಂತರದಿಂದಲೂ ಮಾಡುತ್ತಾ ಬಂದಿದ್ದೀರಿ ಆದರೆ
ಮಾರ್ಗವೆಲ್ಲಿ ಸಿಕ್ಕಿತು? ಇದೆಲ್ಲವೂ ಅನಾದಿಯಿಂದ ನಡೆಯುತ್ತಾ ಬಂದಿದೆ ಎಂದು ಹೇಳಿ ಬಿಡುತ್ತಾರೆ
ಆದರೆ ಯಾವಾಗಿನಿಂದ ಆರಂಭವಾಯಿತು? ಅನಾದಿಯ ಅರ್ಥವನ್ನೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ಸಹ
ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಜ್ಞಾನದ ಪ್ರಾಲಬ್ಧವೂ 21 ಜನ್ಮಗಳವರೆಗೆ
ನಡೆಯುತ್ತದೆ ಅದು ಸುಖ ನಂತರ ದುಃಖ ಸಿಗುತ್ತದೆ. ನೀವು ಮಕ್ಕಳಿಗೆ ಲೆಕ್ಕವನ್ನು ತಿಳಿಸಲಾಗುತ್ತದೆ,
ಬಹಳ ಭಕ್ತಿ ಮಾಡಿದ್ದೀರಿ! ಇವೆಲ್ಲಾ ರಹಸ್ಯಯುಕ್ತ ಮಾತುಗಳನ್ನು ಒಬ್ಬೊಬ್ಬರಿಗೂ ತಿಳಿಸಲು
ಸಾಧ್ಯವಿಲ್ಲ. ಏನು ಮಾಡುವುದು, ದಿನ ಪತ್ರಿಕೆಗಳಲ್ಲಿ ಹಾಕಿಸಬೇಕು - ಸಮಯವಂತೂ ಹಿಡಿಸುತ್ತದೆ.
ಅಷ್ಟು ಬೇಗನೆ ಎಲ್ಲರಿಗೆ ಸಂದೇಶವು ಸಿಗಲು ಸಾಧ್ಯವಿಲ್ಲ. ಎಲ್ಲರೂ ಪುರುಷಾರ್ಥ ಮಾಡಲು ತೊಡಗಿ
ಬಿಟ್ಟರೆ ಮತ್ತೆ ಎಲ್ಲರೂ ಸ್ವರ್ಗದಲ್ಲಿ ಬಂದು ಬಿಡುವರು ಆದರೆ ಇದು ಸಾಧ್ಯವಿಲ್ಲ. ಈಗ ನೀವು
ಸ್ವರ್ಗಕ್ಕಾಗಿ ಪುರುಷಾರ್ಥ ಮಾಡುತ್ತೀರಿ. ಈಗ ಯಾರು ನಮ್ಮ ಧರ್ಮದವರಿದ್ದಾರೆಯೋ ಅವರನ್ನು ಪುನಃ
ಕರೆತರುವುದು ಹೇಗೆ? ಯಾರ್ಯಾರೂ ಇಲ್ಲಿಂದ ಮತಾಂತರಗೊಂಡಿದ್ದಾರೆ ಎಂಬುದು ಹೇಗೆ ತಿಳಿಯುವುದು? ಹಿಂದೂ
ಧರ್ಮದವರು ಮೂಲತಃ ದೇವಿ-ದೇವತಾ ಧರ್ಮದವರಾಗಿದ್ದಾರೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. ಪಕ್ಕಾ
ಹಿಂದೂಗಳಾಗಿದ್ದರೆ ತಮ್ಮ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಒಪ್ಪುತ್ತಾರೆ. ಈ ಸಮಯದಲ್ಲಿ
ಎಲ್ಲರೂ ಪತಿತರಾಗಿದ್ದಾರೆ. ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ, ಬಂದು ನಮ್ಮನ್ನು ಪಾವನ
ಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದು ನಿರಾಕಾರನನ್ನೇ ಕರೆಯುತ್ತಾರೆ. ಅವರು ಇಷ್ಟು ದೊಡ್ಡ
ರಾಜ್ಯವನ್ನು ಹೇಗೆ ಪಡೆದುಕೊಂಡರು? ಅದನ್ನು ಗೆದ್ದು ರಾಜ್ಯ ಪಡೆದಿದ್ದಾರೆ ಎಂದು ಹೇಳಲು ಭಾರತದಲ್ಲಿ
ಈ ಸಮಯದಲ್ಲಂತೂ ಯಾವುದೇ ರಾಜಧಾನಿಯಿಲ್ಲ. ಅವರು ಯುದ್ಧ ಮಾಡಿ ರಾಜ್ಯವನ್ನು ಪಡೆಯುವುದಿಲ್ಲ.
ಮನುಷ್ಯರಿಂದ ದೇವತೆಗಳನ್ನಾಗಿ ಹೇಗೆ ಮಾಡುವುದು ಎಂಬುದು ಯಾರಿಗೂ ತಿಳಿದಿಲ್ಲ. ನಿಮಗೂ ಸಹ ಈಗ
ತಂದೆಯಿಂದ ಅರ್ಥವಾಗಿದೆ, ಅಂದಮೇಲೆ ಮುಕ್ತಿ ಜೀವನ್ಮುಕ್ತಿಯನ್ನು ಪಡೆಯಬೇಕಾದರೆ ಎಲ್ಲರಿಗೆ ಹೇಗೆ
ತಿಳಿಸುವುದು? ಪುರುಷಾರ್ಥ ಮಾಡಿಸುವವರು ಬೇಕಲ್ಲವೆ. ಯಾರು ತಮ್ಮನ್ನು ಅರಿತುಕೊಂಡು ಅಲ್ಲಾನನ್ನು
ನೆನಪು ಮಾಡುವಂತಿರಬೇಕು. ತಿಳಿಸಿ, ನೀವು ಭಗವಂತನ ಶುಭಾಷಯಗಳೆಂದು ಯಾವುದಕ್ಕೆ ಹೇಳುತ್ತೀರಿ! ನೀವು
ಅಲ್ಲಾನ ಬಳಿ ಹೋಗುತ್ತಿದ್ದೀರಿ, ಪಕ್ಕಾ ನಿಶ್ಚಯವಿದೆಯೇ? ಯಾವುದಕ್ಕಾಗಿ ನಿಮಗೆ ಇಷ್ಟೊಂದು
ಖುಷಿಯಿರುತ್ತದೆ, ಇದನ್ನಂತೂ ಅನೇಕ ವರ್ಷಗಳಿಂದಲೂ ನೀವು ಮಾಡುತ್ತಾ ಬಂದಿದ್ದೀರಿ ಆದರೆ ಎಂದಾದರೂ
ಖುದಾನ ಬಳಿ ಹೋಗುತ್ತೀರೋ ಅಥವಾ ಇಲ್ಲವೋ? ಅವಶ್ಯವಾಗಿ ನಾವು ಏತಕ್ಕಾಗಿ ಓದುತ್ತೇವೆ ಎಂದು
ತಬ್ಬಿಬ್ಬಾಗುತ್ತಾರೆ. ಅವಶ್ಯವಾಗಿ ನಾವು ಏನು ಮಾಡುವುದಕ್ಕಾಗಿ ಓದುತ್ತೇವೆ. ಶ್ರೇಷ್ಠಾತಿ
ಶ್ರೇಷ್ಠನು ಒಬ್ಬ ಅಲ್ಲಾ ಆಗಿದ್ದಾರೆ. ಅಲ್ಲಾನ ಮಕ್ಕಳು ನೀವೂ ಸಹ ಆತ್ಮಗಳಾಗಿದ್ದೀರೆಂದು
ತಿಳಿಸಿಕೊಡಿ. ನಾವು ಅಲ್ಲಾನ ಬಳಿ ಹೋಗಬೇಕೆಂದು ಆತ್ಮವು ಬಯಸುತ್ತದೆ. ಯಾವ ಆತ್ಮವು ಮೊದಲು
ಪವಿತ್ರವಾಗಿತ್ತೋ ಅದು ಈಗ ಪತಿತವಾಗಿದೆ. ಈಗ ಈ ಪ್ರಪಂಚವನ್ನಂತೂ ಸ್ವರ್ಗವೆಂದು ಹೇಳುವುದಿಲ್ಲ. ಈಗ
ಎಲ್ಲಾ ಆತ್ಮಗಳು ಪತಿತರಾಗಿದ್ದಾರೆ ಅಂದಮೇಲೆ ಅಲ್ಲಾನ ಮನೆಗೆ ಹೋಗಲು ಹೇಗೆ ಪಾವನರಾಗುವುದು? ಅಲ್ಲಿ
ವಿಕಾರೀ ಆತ್ಮಗಳಿರುವುದಿಲ್ಲ ಅಂದಮೇಲೆ ನಿರ್ವಿಕಾರಿಯಾಗಬೇಕು ಅಂದರೆ ತಕ್ಷಣ ಸತೋಪ್ರಧಾನರಾಗಿ
ಬಿಡುವುದಿಲ್ಲ. ಇದೆಲ್ಲವನ್ನೂ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಈ ತಂದೆಗೆ (ಬ್ರಹ್ಮಾ) ವಿಚಾರ
ಸಾಗರ ಮಂಥನ ನಡೆಯುತ್ತದೆ ಆದ್ದರಿಂದಲೇ ತಿಳಿಸುತ್ತಾರಲ್ಲವೆ. ಯಾರಿಗೆ ಹೇಗೆ ತಿಳಿಸಬೇಕೆಂದು
ಯುಕ್ತಿಗಳನ್ನು ರಚಿಸಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನಾನು ಹೋಗಿ
ಮಕ್ಕಳನ್ನು ದುಃಖದಿಂದ ಬಿಡಿಸೋಣ, ಸುಖಿಗಳನ್ನಾಗಿ ಮಾಡೋಣ ಎಂದು ಹೇಗೆ ತಂದೆಗೆ ವಿಚಾರ ಬಂದಿತೋ
ಅದೇರೀತಿ ತಂದೆಗೆ ಸಹಯೋಗಿಗಳಾಗಬೇಕಾಗಿದೆ. ಮನೆ-ಮನೆಗೂ ಸಂದೇಶ ಕೊಡುವ ಯುಕ್ತಿಗಳನ್ನು
ರಚಿಸಬೇಕಾಗಿದೆ.
2. ಸರ್ವರ ಶುಭಾಷಯಗಳನ್ನು
ಪ್ರಾಪ್ತಿ ಮಾಡಿಕೊಳ್ಳಲು ವಿಜಯಮಾಲೆಯ ಮಣಿಗಳಾಗುವ ಪುರುಷಾರ್ಥ ಮಾಡಬೇಕು, ಪೂಜ್ಯರಾಗಬೇಕಾಗಿದೆ.
ವರದಾನ:
ಮಾಡುವವರು ಮತ್ತು
ಮಾಡಿಸುವವರ ಸ್ಮೃತಿಯಿಂದ ಲೈಟ್ನ ಕಿರೀಟಧಾರಿ ಭವ.
ನಾನು ನಿಮಿತ್ತ ಕರ್ಮಯೋಗಿ,
ಮಾಡುವವನಾಗಿದ್ದೇನೆ, ಮಾಡಿಸುವವರು ತಂದೆಯಾಗಿದ್ದಾರೆ - ಒಂದುವೇಳೆ ಈ ಸ್ಮೃತಿಯು ಸ್ವತಹವಾಗಿಯೇ
ಇರುತ್ತದೆಯೆಂದರೆ ಸದಾ ಲೈಟ್ನ ಕಿರೀಟಧಾರಿ ಹಾಗೂ ನಿಶ್ಚಿಂತ ಚಕ್ರವರ್ತಿಯಾಗಿ ಬಿಡುತ್ತೀರಿ. ತಂದೆ
ಮತ್ತು ನಾನು ಅಷ್ಟೇ, ಮೂರನೆಯವರು ಯಾರೂ ಇಲ್ಲ - ಈ ಅನುಭೂತಿಯು ಸಹಜವಾಗಿ ನಿಶ್ಚಿಂತ
ಚಕ್ರವರ್ತಿಯನ್ನಾಗಿ ಮಾಡಿ ಬಿಡುತ್ತದೆ. ಯಾರು ಇಂತಹ ಚಕ್ರವರ್ತಿಯಾಗುತ್ತಾರೆ, ಅವರೇ ಮಾಯಾಜೀತರು,
ಕರ್ಮೇಂದ್ರಿಯಾಜೀತರು ಹಾಗೂ ಪ್ರಕೃತಿಜೀತರಾಗಿ ಬಿಡುತ್ತಾರೆ. ಆದರೆ ಒಂದುವೇಳೆ ಯಾವುದೇ ತಪ್ಪಿನಿಂದ,
ಯಾವುದೇ ವ್ಯರ್ಥ ಭಾವದ ಹೊರೆಯು ತಮ್ಮ ಮೇಲೆ ತೆಗೆದುಕೊಂಡು ಬಿಡುತ್ತೀರೆಂದರೆ, ಕಿರೀಟಕ್ಕೆ ಬದಲು
ಚಿಂತೆಯ ಅನೇಕ ಹೊರೆಯು ತಲೆಯ ಮೇಲೆ ಬಂದು ಬಿಡುತ್ತದೆ.
ಸ್ಲೋಗನ್:
ಸರ್ವ
ಬಂಧನಗಳಿಂದ ಮುಕ್ತರಾಗುವುದಕ್ಕಾಗಿ ದೈಹಿಕ ಸಂಬಂಧದಿಂದ ನಷ್ಟಮೋಹಿಯಾಗಿರಿ.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ಯೋಗದಲ್ಲಿ ಯಾವಾಗ ಅನ್ಯ
ಎಲ್ಲಾ ಸಂಕಲ್ಪಗಳು ಶಾಂತವಾಗುತ್ತವೆ, ಒಂದೇ ಸಂಕಲ್ಪ ಇರುತ್ತದೆ “ತಂದೆ ಮತ್ತು ನಾನು” ಇದಕ್ಕೆ
ಶಕ್ತಿಶಾಲಿಯಾದ ಯೋಗವೆಂದು ಹೇಳಲಾಗುತ್ತದೆ. ತಂದೆಯ ಮಿಲನದ ಅನುಭೂತಿಯಿಲ್ಲದೇ ಅನ್ಯ ಎಲ್ಲಾ
ಸಂಕಲ್ಪಗಳು ಸಮಾವೇಶವಾದಾಗ ಹೇಳಲಾಗುತ್ತದೆ ಜ್ವಾಲಾರೂಪದ ನೆನಪು, ಯಾವುದರಿಂದ ಪರಿವರ್ತನೆಯಾಗುತ್ತದೆ.