06.12.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವೀಗ
ಪುರುಷೋತ್ತಮ ಸಂಗಮಯುಗದಲ್ಲಿದ್ದೀರಿ, ನೀವು ಇಲ್ಲಿರುತ್ತಾ ಹೊಸ ಪ್ರಪಂಚವನ್ನು ನೆನಪು ಮಾಡಬೇಕಾಗಿದೆ
ಮತ್ತು ಆತ್ಮವನ್ನು ಪಾವನ ಮಾಡಿಕೊಳ್ಳಬೇಕಾಗಿದೆ”
ಪ್ರಶ್ನೆ:
ತಂದೆಯು ನಿಮಗೆ
ಇಂತಹ ಯಾವ ತಿಳುವಳಿಕೆಯನ್ನು ಕೊಟ್ಟರು ಯಾವುದರಿಂದ ಬುದ್ಧಿಯ ಬೀಗವು ತೆರೆಯಿತು?
ಉತ್ತರ:
ತಂದೆಯು ಈ
ಬೇಹದ್ದಿನ ಅನಾದಿ ನಾಟಕದ ಇಂತಹ ತಿಳಿವಳಿಕೆ ಕೊಟ್ಟಿದ್ದಾರೆ ಇದರಿಂದ ಬುದ್ಧಿಗೆ ಯಾವ ಗಾಡ್ರೇಜ್
ಬೀಗ ಹಾಕಲ್ಪಟ್ಟಿದೆಯೋ ಅದು ತೆರೆದುಬಿಡುತ್ತದೆ. ಕಲ್ಲುಬುದ್ಧಿಯಿಂದ ಪಾರಸಬುದ್ಧಿಯಾಗಿಬಿಡುತ್ತದೆ.
ತಂದೆಯು ಈ ತಿಳುವಳಿಕೆಯನ್ನೂ ಕೊಟ್ಟಿದ್ದಾರೆ - ಈ ಡ್ರಾಮಾದಲ್ಲಿ ಪ್ರತಿಯೊಬ್ಬ ಪಾತ್ರಧಾರಿಗೆ
ತನ್ನ-ತನ್ನದೇ ಅನಾದಿ ಪಾತ್ರವಿದೆ, ಯಾರು ಕಲ್ಪದ ಮೊದಲು ಎಷ್ಟು ಓದಿದ್ದಾರೆ, ಅವರೇ ಈಗಲೂ ಸಹ
ಓದುತ್ತಾರೆ. ಪುರುಷಾರ್ಥ ಮಾಡಿ ತನ್ನ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ.
ಓಂ ಶಾಂತಿ.
ಆತ್ಮಿಕ ಮಕ್ಕಳಪ್ರತಿ ಆತ್ಮೀಯ ತಂದೆಯು ಕುಳಿತು ಕಲಿಸುತ್ತಾರೆ. ಯಾವಾಗಿನಿಂದ ತಂದೆಯಾಗಿದ್ದಾರೆಯೋ
ಆಗಿನಿಂದಲೇ ಶಿಕ್ಷಕನೂ ಆಗಿದ್ದಾರೆ, ಆಗಿನಿಂದಲೇ ನಂತರ ಸದ್ಗುರುವಿನ ರೂಪದಲ್ಲಿ ಶಿಕ್ಷಣವನ್ನು
ಕೊಡುತ್ತಿದ್ದಾರೆ. ಇದನ್ನಂತೂ ನೀವು ಮಕ್ಕಳು ಮೊದಲೇ ತಿಳಿದುಕೊಂಡಿದ್ದೀರಿ - ಅವರು ತಂದೆ, ಶಿಕ್ಷಕ,
ಗುರುವಾಗಿದ್ದಾರೆಂದರೆ ಚಿಕ್ಕಮಗುವಂತೂ ಅಲ್ಲ. ಶ್ರೇಷ್ಠಾತಿಶ್ರೇಷ್ಠ ದೊಡ್ಡವರಿಗಿಂತಲೂ
ದೊಡ್ಡವರಾಗಿದ್ದಾರೆ. ತಂದೆಗೆ ತಿಳಿದಿದೆ - ಇವರೆಲ್ಲರೂ ನನ್ನ ಮಕ್ಕಳಾಗಿದ್ದಾರೆ, ಬಂದು ನಮ್ಮನ್ನು
ಪಾವನಪ್ರಪಂಚದಲ್ಲಿ ಕರೆದುಕೊಂಡು ಹೋಗಿ ಎಂದು ನಾಟಕದ ಯೋಜನೆಯನುಸಾರ ಕರೆದಿರಿ ಆದರೆ ಏನನ್ನೂ
ಅರಿತುಕೊಂಡಿರಲಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ - ಪಾವನಪ್ರಪಂಚವೆಂದು ಸತ್ಯಯುಗಕ್ಕೂ, ಪತಿತ
ಪ್ರಪಂಚವೆಂದು ಕಲಿಯುಗಕ್ಕೂ ಹೇಳಲಾಗುತ್ತದೆ. ತಂದೆಯೇ ಬಂದು ನಮ್ಮನ್ನು ರಾವಣನ ಬಂಧನದಿಂದ ಬಿಡಿಸಿ,
ದುಃಖದಿಂದ ಮುಕ್ತರನ್ನಾಗಿ ಮಾಡಿ ಸುಖ-ಶಾಂತಿಧಾಮದಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ.
ಎರಡು ಹೆಸರುಗಳೂ ಚೆನ್ನಾಗಿದೆ. ಮುಕ್ತಿ-ಜೀವನ್ಮುಕ್ತಿ ಅಥವಾ ಶಾಂತಿಧಾಮ-ಸುಖಧಾಮ.
ಶಾಂತಿಧಾಮವೆಲ್ಲಿದೆ ಅಥವಾ ಸುಖಧಾಮವೆಲ್ಲಿದೆ ಎಂಬುದು ನೀವು ಮಕ್ಕಳ ವಿನಃ ಮತ್ತ್ಯಾರ
ಬುದ್ಧಿಯಲ್ಲಿಲ್ಲ, ಸಂಪೂರ್ಣ ಬುದ್ಧಿಹೀನರಾಗಿಬಿಟ್ಟಿದ್ದಾರೆ. ನಿಮ್ಮ ಲಕ್ಷ್ಯವೇ
ಬುದ್ಧಿವಂತರಾಗುವುದಾಗಿದೆ. ನಾವು ಹೀಗೆ ಬುದ್ಧಿವಂತರಾಗಬೇಕೆಂದು ಬುದ್ಧಿಹೀನರಿಗೆ
ಲಕ್ಷ್ಯವಿರುತ್ತದೆ. ಎಲ್ಲರಿಗೆ ಕಲಿಸಿಕೊಡಬೇಕು – ಇಲ್ಲಿ ಮನುಷ್ಯರಿಂದ ದೇವತೆಗಳಾಗುವ ಲಕ್ಷ್ಯವಿದೆ.
ಇದು ಮನುಷ್ಯಸೃಷ್ಟಿ, ಅದು ದೇವತೆಗಳ ಸೃಷ್ಟಿಯಾಗಿದೆ. ಸತ್ಯಯುಗದಲ್ಲಿ ದೇವತೆಗಳ ಸೃಷ್ಟಿಯಿರುತ್ತದೆ
ಅಂದಮೇಲೆ ಅವಶ್ಯವಾಗಿ ಕಲಿಯುಗದಲ್ಲಿ ಮನುಷ್ಯರ ಸೃಷ್ಟಿಯೇ ಇರುವುದು. ಈಗ ಮನುಷ್ಯರಿಂದ
ದೇವತೆಗಳಾಗಬೇಕೆಂದರೆ ಅವಶ್ಯವಾಗಿ ಪುರುಷೋತ್ತಮ ಸಂಗಮಯುಗವು ಇರುವುದು. ಅವರು ದೇವತೆಗಳು, ಇವರು
ಮನುಷ್ಯರಾಗಿದ್ದಾರೆ. ದೇವತೆಗಳು ಬುದ್ಧಿವಂತರಾಗಿದ್ದಾರೆ ಅವರನ್ನು ತಂದೆಯು ಎಷ್ಟು
ಬುದ್ಧಿವಂತರನ್ನಾಗಿ ಮಾಡಿದ್ದಾರೆ! ಯಾವ ತಂದೆಯು ವಿಶ್ವದ ಮಾಲೀಕನಾಗಿದ್ದಾರೆ. ಭಲೆ ಅವರು
ಮಾಲೀಕನಾಗುವುದಿಲ್ಲ, ಈ ರೀತಿ ಗಾಯನ ಮಾಡಲಾಗುತ್ತದೆ - ಬೇಹದ್ದಿನ ತಂದೆ, ಬೇಹದ್ದಿನ ಸುಖ
ನೀಡುವವರಾಗಿದ್ದಾರೆ. ಬೇಹದ್ದಿನ ಸುಖವು ಹೊಸಪ್ರಪಂಚದಲ್ಲಿರುತ್ತದೆ ಮತ್ತು ಬೇಹದ್ದಿನ ದುಃಖವು
ಹಳೆಯ ಪ್ರಪಂಚದಲ್ಲಿರುತ್ತದೆ. ದೇವತೆಗಳ ಚಿತ್ರಗಳೂ ಸಹ ನಿಮ್ಮ ಸನ್ಮುಖದಲ್ಲಿದೆ, ಅವರ ಗಾಯನವೂ ಇದೆ.
ಇತ್ತೀಚಿನ ದಿನಗಳಲ್ಲಿ ಪಂಚಭೂತಗಳಿಗೂ ಪೂಜೆ ಮಾಡುತ್ತಿರುತ್ತಾರೆ.
ಈಗ ತಂದೆಯು ನೀವು
ಮಕ್ಕಳಿಗೆ ತಿಳಿಸುತ್ತಾರೆ - ನೀವು ಪುರುಷೋತ್ತಮ ಸಂಗಮಯುಗದಲ್ಲಿದ್ದೀರಿ. ನಿಮ್ಮಲ್ಲಿಯೇ ನಂಬರ್ವಾರ್
ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ - ನಮ್ಮ ಒಂದುಕಾಲು ಸ್ವರ್ಗದಲ್ಲಿ, ಇನ್ನೊಂದುಕಾಲು
ನರಕದಲ್ಲಿದೆ. ಇರುವುದು ಇಲ್ಲಿಯೇ ಆದರೆ ಬುದ್ಧಿಯು ಹೊಸ ಪ್ರಪಂಚದಲ್ಲಿದೆ ಮತ್ತು ಹೊಸ ಪ್ರಪಂಚದಲ್ಲಿ
ಯಾರು ಕರೆದುಕೊಂಡು ಹೋಗುವರೋ ಅವರನ್ನು ನೆನಪನ್ನು ಮಾಡಬೇಕಾಗಿದೆ. ತಂದೆಯ ನೆನಪಿನಿಂದಲೇ ನೀವು
ಪವಿತ್ರರಾಗುವಿರಿ. ಇದನ್ನು ಶಿವತಂದೆಯು ತಿಳಿಸುತ್ತಾರೆ. ಶಿವಜಯಂತಿಯನ್ನು ಅವಶ್ಯವಾಗಿ ಆಚರಣೆ
ಮಾಡುತ್ತಾರೆ, ಅವರು ಯಾವಾಗ ಬಂದರು, ಬಂದು ಏನು ಮಾಡಿದರು - ಇದೇನನ್ನೂ ತಿಳಿದುಕೊಂಡಿಲ್ಲ.
ಶಿವರಾತ್ರಿ ಮತ್ತು ಕೃಷ್ಣನ ಜಯಂತಿಯನ್ನಾಚರಿಸುತ್ತಾರೆ, ಕೃಷ್ಣನಿಗೆ ಹೇಳುವ ಅದೇ ಶಬ್ಧಗಳನ್ನು
ಶಿವತಂದೆಗೆ ಹೇಳುವುದಿಲ್ಲ ಆದ್ದರಿಂದ ಶಿವನ ರಾತ್ರಿಯೆಂದು ಹೇಳುತ್ತಾರೆ ಆದರೆ ಅದರ ಅರ್ಥವನ್ನು
ತಿಳಿದುಕೊಂಡಿಲ್ಲ. ನೀವು ಮಕ್ಕಳಿಗಂತೂ ಈಗ ಅರ್ಥವನ್ನು ತಿಳಿಸಲಾಗುತ್ತದೆ - ಕಲಿಯುಗದ ಅಂತಿಮದಲ್ಲಿ
ಅಪಾರ ದುಃಖವಿದೆ, ಮತ್ತೆ ಸತ್ಯಯುಗದಲ್ಲಿ ಅಪಾರ ಸುಖವಿರುತ್ತದೆ. ಈ ಜ್ಞಾನವು ನೀವು ಮಕ್ಕಳಿಗೆ ಈಗ
ಸಿಕ್ಕಿದೆ. ನೀವು ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೀರಿ. ಯಾರು ಕಲ್ಪದ ಹಿಂದೆ ಓದಿರುವರೋ
ಅವರೇ ಈಗಲೂ ಓದುತ್ತಾರೆ. ಯಾರೆಷ್ಟು ಪುರುಷಾರ್ಥ ಮಾಡಿರುವರೋ ಅವರೇ ಮಾಡುತ್ತಾರೆ ಮತ್ತು ಅಂತಹ
ಪದವಿಯನ್ನೇ ಪಡೆಯುತ್ತಾರೆ. ನಿಮ್ಮ ಬುದ್ಧಿಯಲ್ಲಿ ಪೂರ್ಣಚಕ್ರವಿದೆ. ನೀವೇ ಶ್ರೇಷ್ಠಾತಿಶ್ರೇಷ್ಠ
ಪದವಿಯನ್ನು ಪಡೆಯುತ್ತೀರಿ ಮತ್ತೆ ನೀವೇ ಕೆಳಗಿಳಿಯುತ್ತೀರಿ. ಮನುಷ್ಯಾತ್ಮರೆಲ್ಲರೂ
ಮಾಲೆಯಾಗಿದ್ದಾರೆ, ಎಲ್ಲರೂ ನಂಬರ್ವಾರ್ ಆಗಿ ಬರುತ್ತಾರೆ. ಪ್ರತಿಯೊಬ್ಬ ಪಾತ್ರಧಾರಿಗೆ ಯಾವ
ಸಮಯದಲ್ಲಿ ಯಾರು ಯಾವ ಪಾತ್ರವನ್ನಭಿನಯಿಸಬೇಕೆಂದು ತಮ್ಮ-ತಮ್ಮ ಪಾತ್ರವು ಸಿಕ್ಕಿದೆ. ಇದು ಅನಾದಿ
ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಇದನ್ನು ತಂದೆಯು ತಿಳಿಸಿಕೊಡುತ್ತಾರೆ. ಈಗ ತಂದೆಯು ನಿಮಗೆ ಏನನ್ನು
ತಿಳಿಸುವರೋ ಅದನ್ನು ನೀವು ನಿಮ್ಮ ಸಹೋದರರಿಗೆ ತಿಳಿಸಬೇಕಾಗಿದೆ. ನಿಮ್ಮ ಬುದ್ಧಿಯಲ್ಲಿದೆ - ಪ್ರತೀ
5000 ವರ್ಷಗಳ ನಂತರ ತಂದೆಯು ಬಂದು ತಿಳಿಸಿಕೊಡುತ್ತಾರೆ ಮತ್ತೆ ನಾವು ಬಂದು ನಮ್ಮ ಸಹೋದರರಿಗೆ
ತಿಳಿಸುತ್ತೇವೆ. ಸಹೋದರ-ಸಹೋದರತೆಯು ಆತ್ಮದ ಸಂಬಂಧದಲ್ಲಿದೆ. ಈ ಸಮಯದಲ್ಲಿ ನೀವು ತಮ್ಮನ್ನು ಅಶರೀರಿ
ಆತ್ಮವೆಂದು ತಿಳಿಯಿರಿ. ಪಾವನವಾಗುವುದಕ್ಕಾಗಿ ಆತ್ಮವೇ ತನ್ನ ತಂದೆಯನ್ನು ನೆನಪು ಮಾಡಬೇಕಾಗಿದೆ.
ಆತ್ಮವು ಪವಿತ್ರವಾದರೆ ಮತ್ತೆ ಶರೀರವೂ ಪವಿತ್ರವಾದದ್ದೇ ಸಿಗುತ್ತದೆ. ಆತ್ಮವು ಅಪವಿತ್ರವಾದರೆ
ಅದರಿಂದ ಆಭರಣವೂ ಸಹ ಅಪವಿತ್ರವೇ. ನಂಬರ್ವಾರಂತೂ ಇರುತ್ತಾರಲ್ಲವೆ. ಮುಖಲಕ್ಷಣ, ಚಲನ-ವಲನ ಒಬ್ಬರದು
ಇನ್ನೊಬ್ಬರಿಗೆ ಹೋಲುವುದಿಲ್ಲ. ಎಲ್ಲರೂ ನಂಬರ್ವಾರ್ ತಮ್ಮ-ತಮ್ಮ ಪಾತ್ರವನ್ನಭಿನಯಿಸುತ್ತಾರೆ.
ಸ್ವಲ್ಪವೂ ಅಂತರವಾಗುವುದಿಲ್ಲ. ನಾಟಕದಲ್ಲಿ ನೆನ್ನೆಯ ದಿನ ಯಾವ ದೃಶ್ಯವನ್ನು ನೋಡಿದ್ದಿರಿ, ಅದೇ
ದೃಶ್ಯವನ್ನು ನೋಡುತ್ತೀರಿ. ಅದೇ ಪುನರಾವರ್ತನೆಯಾಗುತ್ತದೆಯಲ್ಲವೆ. ಅದೇ ರೀತಿ ಇದು ಬೇಹದ್ದಿನ
ಮತ್ತು ನೆನ್ನೆಯ ನಾಟಕವಾಗಿದೆ. ನೆನ್ನೆಯ ದಿನ ನಿಮಗೆ ತಿಳಿಸಿದ್ದೆನು, ನೀವು ರಾಜ್ಯಭಾಗ್ಯವನ್ನು
ತೆಗೆದುಕೊಂಡಿರಿ ಮತ್ತೆ ಕಳೆದುಕೊಂಡಿರಿ. ಇಂದು ಮತ್ತೆ ರಾಜ್ಯಭಾಗ್ಯವನ್ನು ಪಡೆಯಲು
ತಿಳಿದುಕೊಳ್ಳುತ್ತಿದ್ದೀರಿ. ಇಂದು ಭಾರತವು ಹಳೆಯ ನರಕವಾಗಿದೆ. ಇದೇ ಭಾರತವು ನಾಳೆ ಹೊಸ
ಸ್ವರ್ಗವಾಗುತ್ತದೆ. ಈಗ ನಾವು ಹೊಸ ಪ್ರಪಂಚದಲ್ಲಿ ಹೋಗುತ್ತಿದ್ದೇವೆ. ಶ್ರೀಮತದನುಸಾರ
ಶ್ರೇಷ್ಠರಾಗುತ್ತಿದ್ದೇವೆಂದು ನಿಮ್ಮ ಬುದ್ಧಿಯಲ್ಲಿದೆ. ಶ್ರೇಷ್ಠರು ಅವಶ್ಯವಾಗಿ
ಶ್ರೇಷ್ಠಸೃಷ್ಟಿಯಲ್ಲಿಯೇ ಇರುತ್ತಾರೆ. ಈ ಲಕ್ಷ್ಮೀ-ನಾರಾಯಣರು ಶ್ರೇಷ್ಠರಾಗಿರುವುದರಿಂದ ಶ್ರೇಷ್ಠ
ಸ್ವರ್ಗದಲ್ಲಿರುತ್ತಾರೆ, ಯಾರು ಭ್ರಷ್ಟರಿದ್ದಾರೆಯೋ ಅವರು ನರಕದಲ್ಲಿರುತ್ತಾರೆ. ಈ ರಹಸ್ಯವನ್ನು
ನೀವು ಈಗ ತಿಳಿದುಕೊಂಡಿದ್ದೀರಿ. ಈ ಬೇಹದ್ದಿನ ನಾಟಕವನ್ನು ಯಾರಾದರೂ ಒಳ್ಳೆಯ ರೀತಿಯಲ್ಲಿ
ಅರಿತುಕೊಂಡಾಗ ಮಾತ್ರ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಶಿವರಾತ್ರಿಯನ್ನು ಆಚರಿಸುತ್ತಾರೆ ಆದರೆ
ಏನನ್ನೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳನ್ನು ರಿಫ್ರೆಷ್ ಮಾಡಲಾಗುತ್ತದೆ ಮತ್ತೆ ನೀವು
ಅನ್ಯರನ್ನೂ ರಿಫ್ರೆಷ್ ಮಾಡುತ್ತೀರಿ. ಈಗ ನಿಮಗೆ ಜ್ಞಾನವು ಸಿಗುತ್ತಿದೆ, ನೀವೇ ನಂತರ ಸದ್ಗತಿಯನ್ನು
ಪಡೆಯುತ್ತೀರಿ. ತಂದೆಯು ತಿಳಿಸುತ್ತಾರೆ - ನಾನಂತೂ ಸ್ವರ್ಗದಲ್ಲಿ ಬರುವುದಿಲ್ಲ, ಪತಿತಪ್ರಪಂಚವನ್ನು
ಪರಿವರ್ತನೆ ಮಾಡಿ ಪಾವನ ಪ್ರಪಂಚವನ್ನಾಗಿ ಮಾಡುವುದೇ ನಮ್ಮ ಕರ್ತವ್ಯವಾಗಿದೆ. ಸತ್ಯಯುಗದಲ್ಲಂತೂ
ನಿಮ್ಮ ಬಳಿ ಕುಬೇರನ ಖಜಾನೆಗಳಿರುತ್ತವೆ. ಇಲ್ಲಿ ಕಂಗಾಲಾಗಿದ್ದೀರಿ ಆದ್ದರಿಂದಲೇ ಬಂದು ಬೇಹದ್ದಿನ
ಆಸ್ತಿಯನ್ನು ಕೊಡಿ ಎಂದು ಕರೆಯುತ್ತಾರೆ. ಕಲ್ಪ-ಕಲ್ಪವೂ ಬೇಹದ್ದಿನ ಆಸ್ತಿಯು ಸಿಗುತ್ತದೆ ಮತ್ತೆ
ಕಂಗಾಲಾಗಿಬಿಡುತ್ತಾರೆ. ನೀವು ಚಿತ್ರಗಳ ಮೇಲೆ ತಿಳಿಸಿದಾಗಲೇ ಅರಿತುಕೊಳ್ಳುವರು. ಮೊದಲ
ನಂಬರಿನಲ್ಲಿದ್ದ ಲಕ್ಷ್ಮಿ-ನಾರಾಯಣರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ
ಮನುಷ್ಯರಾಗಿಬಿಟ್ಟರು. ಈ ಜ್ಞಾನವು ನಿಮಗೆ ಈ ಸಮಯದಲ್ಲಿ ಸಿಕ್ಕಿದೆ. ನಿಮಗೆ ತಿಳಿದಿದೆ - ಇಂದಿಗೆ
5000 ವರ್ಷಗಳ ಮೊದಲು ಆದಿಸನಾತನ ದೇವಿ-ದೇವತಾಧರ್ಮವಿತ್ತು, ಅದಕ್ಕೆ ವೈಕುಂಠ, ಪ್ಯಾರಡೈಸ್,
ದೈವೀಪ್ರಪಂಚವೆಂದೂ ಹೇಳುತ್ತಾರೆ ಆದರೆ ಈಗ ಹೇಳುವುದಿಲ್ಲ, ಈಗಂತೂ ಭೂತದ ಪ್ರಪಂಚವಾಗಿದೆ. ಭೂತದ
ಪ್ರಪಂಚದ ಅಂತ್ಯ, ದೈವೀಪ್ರಪಂಚದ ಆದಿಯ ಸಂಗಮವಾಗಿದೆ. ಈ ಮಾತುಗಳನ್ನು ಈಗ ನೀವು
ತಿಳಿದುಕೊಳ್ಳುತ್ತೀರಿ. ಇದನ್ನು ಮತ್ತ್ಯಾರ ಮುಖದಿಂದಲೂ ಕೇಳಲು ಸಾಧ್ಯವಿಲ್ಲ. ತಂದೆಯು ಬಂದು ಇವರ
ಮುಖದ ಆಧಾರವನ್ನು ತೆಗೆದುಕೊಳ್ಳುತ್ತಾರೆ. ಯಾರ ಮುಖವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನೂ
ತಿಳಿದುಕೊಂಡಿಲ್ಲ. ಯಾರ ಮೇಲೆ ತಂದೆಯ ಸವಾರಿಯಾಗುವುದು? ಈ ಶರೀರದಲ್ಲಿ ಹೇಗೆ ನಿಮ್ಮ ಆತ್ಮ
ಸವಾರಿಯಾಗಿದೆಯಲ್ಲವೆ. ಶಿವತಂದೆಗೆ ತಮ್ಮ ಶರೀರವಂತೂ ಇಲ್ಲ ಅಂದಮೇಲೆ ಅವರಿಗೆ ಮುಖವು ಅವಶ್ಯವಾಗಿ
ಬೇಕು ಇಲ್ಲವೆಂದರೆ ರಾಜಯೋಗವನ್ನು ಹೇಗೆ ಕಲಿಸುವುದು? ಪ್ರೇರಣೆಯಿಂದಂತೂ ಕಲಿಸಲಾಗುವುದಿಲ್ಲ ಅಂದಾಗ
ಇವೆಲ್ಲಾ ಮಾತುಗಳನ್ನು ಹೃದಯದಲ್ಲಿ ಬರೆದುಕೊಳ್ಳಬೇಕಾಗಿದೆ. ಪರಮಾತ್ಮನ ಬುದ್ಧಿಯಲ್ಲಿಯೂ ಸಹ
ಸಂಪೂರ್ಣ ಜ್ಞಾನವಿದೆಯಲ್ಲವೆ. ನಿಮ್ಮ ಬುದ್ಧಿಯಲ್ಲಿಯೂ ಕುಳಿತುಕೊಳ್ಳಬೇಕು. ಈ ಜ್ಞಾನವನ್ನು
ಬುದ್ಧಿಯಿಂದ ಧಾರಣೆ ಮಾಡಿಕೊಳ್ಳಬೇಕು. ನಿಮ್ಮ ಬುದ್ಧಿಯು ಸರಿಯಿದೆ ಎಂದು ಹೇಳಲಾಗುತ್ತದೆ.
ಬುದ್ಧಿಯು ಆತ್ಮದಲ್ಲಿರುತ್ತದೆ, ಆತ್ಮವೇ ಬುದ್ಧಿಯಿಂದ ಅರಿತುಕೊಳ್ಳುತ್ತಿದೆ. ನಿಮ್ಮ ಬುದ್ಧಿಯನ್ನು
ಕಲ್ಲುಬುದ್ಧಿಯನ್ನಾಗಿ ಯಾರು ಮಾಡಿದರು? ಈಗ ತಿಳಿದುಕೊಳ್ಳುತ್ತೀರಿ - ರಾವಣನು ನಮ್ಮ ಬುದ್ಧಿಯನ್ನು
ಏನು ಮಾಡಿಬಿಟ್ಟಿದ್ದಾನೆ! ನೆನ್ನೆಯ ದಿನ ನೀವು ನಾಟಕವನ್ನು ಅರಿತುಕೊಂಡಿರಲಿಲ್ಲ, ಬುದ್ಧಿಗೆ
ಗಾಡ್ರೇಜ್ ಬೀಗವನ್ನು ಹಾಕಲ್ಪಟ್ಟಿತ್ತು. ‘ಗಾಡ್’ ಎಂಬ ಶಬ್ಧವು ಬರುತ್ತದೆಯಲ್ಲವೆ. ತಂದೆಯು ಯಾವ
ಬುದ್ಧಿಯನ್ನು ಕೊಡುವರೋ ಅದರ ಬದಲಾಗಿ ಕಲ್ಲುಬುದ್ಧಿಯಾಗಿಬಿಡುತ್ತದೆ ಮತ್ತೆ ತಂದೆಯು ಬಂದು
ಬೀಗವನ್ನು ತೆರೆಯುತ್ತಾರೆ. ಸತ್ಯಯುಗದಲ್ಲಿ ಪಾರಸಬುದ್ಧಿಯವರಿರುತ್ತಾರೆ, ತಂದೆಯು ಬಂದು ಎಲ್ಲರ
ಕಲ್ಯಾಣ ಮಾಡುತ್ತಾರೆ. ಎಲ್ಲರ ಬುದ್ಧಿಯು ನಂಬರ್ವಾರ್ ಆಗಿ ತೆರೆಯುತ್ತದೆ. ಮತ್ತೆ ಒಬ್ಬರ ಹಿಂದೆ
ಇನ್ನೊಬ್ಬರು ಬರುತ್ತಾ ಇರುತ್ತಾರೆ, ಯಾರೂ ಸಹ ಮೇಲಿರಲು ಸಾಧ್ಯವಿಲ್ಲ, ಪತಿತರು ಅಲ್ಲಿರಲು
ಸಾಧ್ಯವಿಲ್ಲ. ತಂದೆಯು ಪಾವನರನ್ನಾಗಿ ಮಾಡಿ ಪಾವನಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತಾರೆ. ಅಲ್ಲಿ
ಎಲ್ಲರೂ ಪಾವನ ಆತ್ಮಗಳೇ ಇರುತ್ತಾರೆ. ಅದು ನಿರಾಕಾರಿ ಸೃಷ್ಟಿಯಾಗಿದೆ.
ನೀವು ಮಕ್ಕಳಿಗೆ ಎಲ್ಲವೂ
ಅರ್ಥವಾಗಿದೆ ಆದ್ದರಿಂದ ತಮ್ಮ ಮನೆಯೂ ಸಹ ಬಹಳ ಹತ್ತಿರವಿದ್ದಂತೆ ಕಾಣುತ್ತದೆ. ನಿಮಗೆ ಮನೆಯೊಂದಿಗೆ
ಬಹಳ ಪ್ರೀತಿಯಿದೆ. ನಿಮಗಿರುವಷ್ಟು ಪ್ರೀತಿ ಯಾರಿಗೂ ಇಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ,
ಯಾರಿಗೆ ತಂದೆಯಜೊತೆ ಪ್ರೀತಿಯಿದೆಯೋ ಅವರಿಗೆ ಮನೆಯೊಂದಿಗೂ ಪ್ರೀತಿಯಿರುತ್ತದೆ. ಅನನ್ಯ
ಮಕ್ಕಳಿರುತ್ತಾರಲ್ಲವೆ. ಇದನ್ನು ತಿಳಿದುಕೊಂಡಿದ್ದೀರಿ - ಯಾರು ಇಲ್ಲಿ ಬಹಳ ಚೆನ್ನಾಗಿ ಪುರುಷಾರ್ಥ
ಮಾಡಿ ಅನನ್ಯ ಮಕ್ಕಳಾಗಿರುವರೋ ಅವರೇ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಚಿಕ್ಕವರು ಅಥವಾ
ದೊಡ್ಡವರು ಶರೀರದ ಮೇಲಲ್ಲ. ಜ್ಞಾನ ಮತ್ತು ಯೋಗದಲ್ಲಿ ಯಾರು ಮಸ್ತರಾಗಿದ್ದಾರೆಯೋ ಅವರೇ ದೊಡ್ಡವರು.
ಕೆಲವು ಚಿಕ್ಕ-ಚಿಕ್ಕ ಮಕ್ಕಳೂ ಸಹ ಜ್ಞಾನದಲ್ಲಿ ತೀಕ್ಷ್ಣವಾಗಿದ್ದರೆ ಅವರು ದೊಡ್ಡವರಿಗೆ
ಓದಿಸುತ್ತಾರೆ. ಇಲ್ಲವೆಂದರೆ ದೊಡ್ಡವರು ಚಿಕ್ಕವರಿಗೆ ಓದಿಸುವ ನಿಯಮವಿದೆ. ಇತ್ತೀಚೆಗಂತೂ ಮನುಷ್ಯರು
ಕುಬ್ಜರಾಗಿಬಿಡುತ್ತಾರೆ. ಹಾಗೆ ನೋಡಿದರೆ ಎಲ್ಲಾ ಆತ್ಮಗಳು ಕುಬ್ಜರಾಗಿದ್ದಾರೆ ಅರ್ಥಾತ್
ಬೆಳವಣಿಗೆಯಿಲ್ಲದೆ ಕುಂಟಿತರಾಗಿದ್ದಾರೆ. ಆತ್ಮವು ಬಿಂದುವಾಗಿದೆ. ಅದನ್ನು ಹೇಗೆ ತೂಕಮಾಡುವುದು!
ಅತಿಸೂಕ್ಷ್ಮ ನಕ್ಷತ್ರವಾಗಿದೆ, ಮನುಷ್ಯರು ನಕ್ಷತ್ರದ ಹೆಸರನ್ನು ಕೇಳಿ ಮೇಲೆ ನೋಡುತ್ತಾರೆ. ನೀವು
ನಕ್ಷತ್ರದ ಹೆಸರನ್ನು ಕೇಳಿ ತಮ್ಮನ್ನು ನೋಡಿಕೊಳ್ಳುತ್ತೀರಿ. ನೀವು ಧರಣಿಯ ನಕ್ಷತ್ರಗಳಾಗಿದ್ದೀರಿ.
ಆ ನಕ್ಷತ್ರಗಳು ಆಕಾಶದ ಜಡನಕ್ಷತ್ರಗಳಾಗಿವೆ, ನೀವು ಚೈತನ್ಯವಾಗಿದ್ದೀರಿ. ಅದರಲ್ಲಂತೂ ಏನೂ
ಅದಲು-ಬದಲಾಗಲು ಸಾಧ್ಯವಿಲ್ಲ. ಆದರೆ ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ, ಎಷ್ಟು ದೊಡ್ಡ
ಪಾತ್ರವನ್ನಭಿನಯಿಸುತ್ತೀರಿ. ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಕಾಂತಿಯು
ಕಡಿಮೆಯಾಗಿಬಿಡುತ್ತದೆ. ಬ್ಯಾಟರಿಯು ಖಾಲಿಯಾಗಿಬಿಡುತ್ತದೆ ಮತ್ತೆ ತಂದೆಯು ಬಂದು ಭಿನ್ನ-ಭಿನ್ನ
ಪ್ರಕಾರದಿಂದ ತಿಳಿಸಿದ್ದಾರೆ ಏಕೆಂದರೆ ಈಗ ನಿಮ್ಮ ಆತ್ಮವು ನಂದಿಹೋಗುವ ಸ್ಥಿತಿಯಲ್ಲಿದೆ.
ಅದರಲ್ಲಿದ್ದ ಶಕ್ತಿಯೆಲ್ಲವೂ ಸಮಾಪ್ತಿಯಾಗಿದೆ. ಈಗ ಮತ್ತೆ ತಂದೆಯಿಂದ ಶಕ್ತಿಯನ್ನು
ತುಂಬಿಕೊಳ್ಳುತ್ತೀರಿ. ನೀವು ತಮ್ಮ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳುತ್ತಿದ್ದೀರಿ. ಇದರಲ್ಲಿ
ಮಾಯೆಯೂ ಸಹ ಬಹಳ ವಿಘ್ನಗಳನ್ನು ಹಾಕುತ್ತದೆ, ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಲು ಬಿಡುವುದಿಲ್ಲ.
ನೀವು ಚೈತನ್ಯ ಬ್ಯಾಟರಿಯಾಗಿದ್ದೀರಿ. ನಿಮಗೆ ತಿಳಿದಿದೆ - ತಂದೆಯ ಜೊತೆ ಯೋಗವನ್ನಿಡುವುದರಿಂದ ನಾವು
ಸತೋಪ್ರಧಾನರಾಗುತ್ತೇವೆ. ಈಗ ನೀವು ಮಕ್ಕಳು ತಮೋಪ್ರಧಾನರಾಗಿದ್ದೀರಿ. ಆ ಲೌಕಿಕವಿದ್ಯೆ ಮತ್ತು ಈ
ಪಾರಲೌಕಿಕ ವಿದ್ಯೆಯಲ್ಲಿ ಬಹಳ ಅಂತರವಿದೆ. ಹೇಗೆ ನಂಬರ್ವಾರ್ ಎಲ್ಲಾ ಆತ್ಮಗಳು ಮೇಲೆ ಹೋಗುತ್ತಾರೆ
ಮತ್ತೆ ತಮ್ಮ ಸಮಯದಲ್ಲಿ ಪಾತ್ರವನ್ನಭಿನಯಿಸಲು ಬರಬೇಕಾಗಿದೆ. ಎಲ್ಲರಿಗೂ ಸಹ ತಮ್ಮ ಅವಿನಾಶಿ
ಪಾತ್ರವು ಸಿಕ್ಕಿದೆ. ನೀವು ಈ 84 ಜನ್ಮಗಳ ಪಾತ್ರವನ್ನು ಎಷ್ಟುಬಾರಿ ಅಭಿನಯಿಸಿರಬಹುದು! ನಿಮ್ಮ
ಬ್ಯಾಟರಿಯು ಎಷ್ಟುಬಾರಿ ಚಾರ್ಜ್ ಮತ್ತು ಡಿಸ್ಚಾರ್ಜ್ ಆಗಿದೆ! ಯಾವಾಗ ನಮ್ಮ ಬ್ಯಾಟರಿಯು
ಡಿಸ್ಚಾರ್ಜ್ ಆಗಿದೆ ಎಂದು ಈಗ ತಿಳಿದಿದೆಯೆಂದರೆ ಮತ್ತೆ ಚಾರ್ಜ್ ಮಾಡಿಕೊಳ್ಳುವುದರಲ್ಲಿ ತಡವೇಕೆ
ಮಾಡಬೇಕು? ಆದರೆ ಮಾಯೆಯು ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಲು ಬಿಡುವುದಿಲ್ಲ. ಮಾಯೆಯು ಬ್ಯಾಟರಿ
ಚಾರ್ಜ್ ಮಾಡಿಕೊಳ್ಳುವುದನ್ನು ನಿಮಗೆ ಮರೆಸಿಬಿಡುತ್ತದೆ. ಪದೇ-ಪದೇ ಬ್ಯಾಟರಿಯನ್ನು ಡಿಸ್ಚಾರ್ಜ್
ಮಾಡಿಬಿಡುತ್ತದೆ. ತಂದೆಯನ್ನು ನೆನಪು ಮಾಡುವ ಪ್ರಯತ್ನಪಡುತ್ತೀರಿ ಆದರೆ ಸಾಧ್ಯವಾಗುವುದಿಲ್ಲ.
ನಿಮ್ಮಲ್ಲಿ ಯಾರು ತಮ್ಮ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಂಡು ಸತೋಪ್ರಧಾನತೆಯ ಸಮೀಪ ಬರುವಿರೋ
ಅಂತಹವರಿಂದಲೂ ಸಹ ಕೆಲವೊಮ್ಮೆ ಮಾಯೆಯು ತಪ್ಪುಗಳನ್ನು ಮಾಡಿಸಿ ಬ್ಯಾಟರಿಯನ್ನು ಡಿಸ್ಚಾರ್ಜ್
ಮಾಡಿಬಿಡುತ್ತದೆ. ಇದು ಕೊನೆಯವರೆಗೂ ಆಗುತ್ತಿರುತ್ತದೆ. ಮತ್ತೆ ಯಾವಾಗ ಯುದ್ಧದ ಅಂತ್ಯವಾಗುವುದು
ಆಗ ಎಲ್ಲರೂ ಸಮಾಪ್ತಿಯಾಗುತ್ತಾರೆ ಮತ್ತು ಯಾರದೆಷ್ಟು ಬ್ಯಾಟರಿಯು ಚಾರ್ಜ್ ಆಗಿರುವುದು
ಅದರನುಸಾರವಾಗಿ ಪದವಿಯನ್ನು ಪಡೆಯುತ್ತೀರಿ. ಎಲ್ಲಾ ಆತ್ಮಗಳು ತಂದೆಯ ಮಕ್ಕಳಾಗಿದ್ದಾರೆ. ತಂದೆಯೇ
ಬಂದು ಎಲ್ಲರ ಬ್ಯಾಟರಿಯನ್ನು ಚಾರ್ಜ್ ಮಾಡಿಸುತ್ತಾರೆ, ಆಟವು ಎಷ್ಟು ವಿಚಿತ್ರವಾಗಿ ಮಾಡಲ್ಪಟ್ಟಿದೆ!
ಪದೇ-ಪದೇ ತಂದೆಯ ಜೊತೆ ಬುದ್ಧಿಯೋಗವನ್ನಿಡುವುದರಿಂದ ದೂರವಾದರೆ ಎಷ್ಟೊಂದು ನಷ್ಟವುಂಟಾಗುತ್ತದೆ?
ಆದ್ದರಿಂದ ಬುದ್ಧಿಯೋಗವು ತುಂಡಾಗದಿರಲು ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಯಾವಾಗ
ಸಮಾಪ್ತಿಯಾಗುವುದೋ ಅನಂತರ ನಂಬರ್ವಾರ್ ಪುರುಷಾರ್ಥದನುಸಾರವಾಗಿ ನಿಮ್ಮ ಪಾತ್ರವು
ಮುಕ್ತಾಯವಾಗುತ್ತದೆ ಹೇಗೆ ಕಲ್ಪ-ಕಲ್ಪವೂ ಆಗುತ್ತದೆ. ಆತ್ಮಗಳ ಮಾಲೆಯು ತಯಾರಾಗುತ್ತದೆ.
ಮಕ್ಕಳು
ತಿಳಿದುಕೊಂಡಿದ್ದೀರಿ - ರುದ್ರಾಕ್ಷಿ ಮಾಲೆಯಿದೆ, ವಿಷ್ಣುವಿನ ಮಾಲೆಯೂ ಇದೆ. ಮೊದಲ ನಂಬರಿನಲ್ಲಿ
ಅವರ ಮಾಲೆಯನ್ನೇ ಇಡುತ್ತಾರಲ್ಲವೆ. ತಂದೆಯು ದೈವೀಪ್ರಪಂಚವನ್ನು ರಚಿಸುತ್ತಾರಲ್ಲವೆ! ಹೇಗೆ
ರುದ್ರಮಾಲೆಯಿದೆಯೋ ಅದೇ ರೀತಿ ರುಂಡಮಾಲೆಯೂ ಇದೆ. ಬ್ರಾಹ್ಮಣರ ಮಾಲೆಯು ಈಗ ತಯಾರಾಗಲು ಸಾಧ್ಯವಿಲ್ಲ
ಏಕೆಂದರೆ ಅದಲುಬದಲಾಗುತ್ತಿರುತ್ತದೆ. ಯಾವಾಗ ರುದ್ರಮಾಲೆಯಾಗುವುದೋ ಆಗಲೇ ಅಂತಿಮ
ತೀರ್ಮಾನವಾಗುತ್ತದೆ. ಇದು ಬ್ರಾಹ್ಮಣರ ಮಾಲೆಯೂ ಆಗಿದೆ ಆದರೆ ಈ ಸಮಯದಲ್ಲಿ ತಯಾರಾಗಲು ಸಾಧ್ಯವಿಲ್ಲ
ಏಕೆಂದರೆ ನೀವು ಬ್ರಾಹ್ಮಣರ ಸ್ಥಿತಿಯು ಬದಲಾಗುತ್ತಿರುತ್ತದೆ. ವಾಸ್ತವದಲ್ಲಿ ಎಲ್ಲರೂ ಪ್ರಜಾಪಿತ
ಬ್ರಹ್ಮನ ಸಂತಾನರಾಗಿದ್ದಾರೆ. ಶಿವತಂದೆಯ ಸಂತಾನರ ಮಾಲೆಯೂ ಇದೆ, ವಿಷ್ಣುವಿನ ಮಾಲೆಯೆಂದೂ
ಹೇಳುತ್ತಾರೆ. ನೀವು ಬ್ರಾಹ್ಮಣರಾಗುತ್ತೀರಿ ಅಂದಮೇಲೆ ಬ್ರಹ್ಮಾ ಮತ್ತು ಶಿವನ ಮಾಲೆಯೂ ಬೇಕು.
ಇದೆಲ್ಲಾ ಜ್ಞಾನವು ಬುದ್ಧಿಯಲ್ಲಿ ನಂಬರ್ವಾರ್ ಇದೆ. ಎಲ್ಲರೂ ಕೇಳುತ್ತಾರೆ ಆದರೆ ಕೇಳಿರುವುದು
ಕೆಲವರಿಗೆ ಆ ಸಮಯದಲ್ಲಿಯೇ ಕಿವಿಗಳಿಂದ ಹೊರಟುಹೋಗುತ್ತದೆ, ಕೇಳುವುದೇ ಇಲ್ಲ. ಕೆಲವರಂತೂ ಓದುವುದೇ
ಇಲ್ಲ, ಭಗವಂತನು ಓದಿಸಲು ಬಂದಿದ್ದಾರೆಂದು ಅವರಿಗೆ ಅರ್ಥವಾಗುವುದೇ ಇಲ್ಲ. ಈ ವಿದ್ಯೆಯನ್ನು
ಎಷ್ಟೊಂದು ಖುಷಿಯಿಂದ ಓದಬೇಕಲ್ಲವೆ! ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನೆನಪಿನ
ಯಾತ್ರೆಯಿಂದ ಆತ್ಮರೂಪಿ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಂಡು ಸತೋಪ್ರಧಾನತೆಯನ್ನು ತಲುಪಬೇಕಾಗಿದೆ.
ಬ್ಯಾಟರಿಯು ಡಿಸ್ಚಾರ್ಜ್ ಆಗುವಂತಹ ಯಾವುದೇ ತಪ್ಪನ್ನು ಮಾಡಬಾರದು.
2. ಅನನ್ಯ ಮಕ್ಕಳಾಗಲು
ತಂದೆಯ ಜೊತೆಜೊತೆಗೆ ಮನೆಯೊಂದಿಗೂ ಪ್ರೀತಿಯನ್ನಿಟ್ಟುಕೊಳ್ಳಬೇಕು. ಜ್ಞಾನ ಮತ್ತು ಯೋಗದಲ್ಲಿ
ಮಸ್ತರಾಗಬೇಕಾಗಿದೆ. ತಂದೆಯು ಏನನ್ನು ತಿಳಿಸುವರೋ ಅದನ್ನು ತಮ್ಮ ಸಹೋದರರಿಗೂ ತಿಳಿಸಬೇಕಾಗಿದೆ.
ವರದಾನ:
ಒಬ್ಬ ತಂದೆಯನ್ನು
ತಮ್ಮ ಸಂಸಾರವನ್ನಾಗಿ ಮಾಡಿಕೊಂಡು ಸದಾ ಒಬ್ಬರ ಆಕರ್ಷಣೆಯಲ್ಲಿ ಇರುವಂತಹ ಕರ್ಮ ಬಂಧನ ಮುಕ್ತಭವ.
ಸದಾ ಇದೇ ಅನುಭವದಲ್ಲಿರಿ-
ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ. ಒಬ್ಬ ತಂದೆಯೇ ನನ್ನ ಸಂಸಾರ ಮತ್ತ್ಯಾವುದೇ ಆಕರ್ಷಣೆಯಿಲ್ಲ,
ಯಾವುದೇ ಕರ್ಮ ಬಂಧನವಿಲ್ಲ. ತಮ್ಮ ಯಾವುದೇ ಬಲಹೀನ ಸಂಸ್ಕಾರದ ಬಂಧನವೂ ಇರಬಾರದು. ಯಾರು ಯಾರ ಮೇಲೆಯೇ
ನನ್ನದೆಂಬ ಅಧಿಕಾರವನ್ನಿಡುತ್ತಾರೆ, ಅವರಿಗೆ ಕ್ರೋಧ ಅಥವಾ ಅಭಿಮಾನವು ಬರುತ್ತದೆ- ಇದೂ ಸಹ ಕರ್ಮ
ಬಂಧನವಾಗಿದೆ. ಆದರೆ ಯಾವಾಗ ತಂದೆಯವರೇ ನನ್ನ ಸಂಸಾರವಾಗಿದ್ದಾರೆ, ಈ ಸ್ಮೃತಿಯಿರುತ್ತದೆಯೆಂದರೆ
ನನ್ನದು-ನನ್ನದು ಎನ್ನುವುದೆಲ್ಲವೂ ಒಬ್ಬ ನನ್ನ ಬಾಬಾರವರಲ್ಲಿ ಸಮಾವೇಶವಾಗಿ ಬಿಡುತ್ತದೆ ಮತ್ತು
ಕರ್ಮ ಬಂಧನಗಳಿಂದ ಸಹಜವಾಗಿಯೇ ಮುಕ್ತರಾಗಿ ಬಿಡುತ್ತೀರಿ.
ಸ್ಲೋಗನ್:
ಮಹಾನ್ ಆತ್ಮರು
ಅವರಾಗಿದ್ದಾರೆ, ಯಾರ ದೃಷ್ಟಿ ಮತ್ತು ವೃತ್ತಿಯು ಬೇಹದ್ದಿನದಾಗಿರುತ್ತದೆ.