07.01.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ತಮ್ಮನ್ನು ಸಂಗಮಯುಗೀ ಬ್ರಾಹ್ಮಣರೆಂದು ತಿಳಿಯಿರಿ ಆಗ ಸತ್ಯಯುಗೀ ವೃಕ್ಷವು ಕಾಣಿಸುತ್ತದೆ ಮತ್ತು
ಅಪಾರ ಖುಷಿಯಲ್ಲಿರುತ್ತೀರಿ”
ಪ್ರಶ್ನೆ:
ಯಾರು ಜ್ಞಾನದ
ಅಭಿರುಚಿಯುಳ್ಳ ಮಕ್ಕಳಿದ್ದಾರೆಯೋ ಅವರ ಲಕ್ಷಣವೇನಾಗಿದೆ?
ಉತ್ತರ:
ಅವರು ಪರಸ್ಪರ
ಜ್ಞಾನದ ಮಾತುಗಳನ್ನೇ ಮಾತನಾಡುತ್ತಾರೆ, ಪರಚಿಂತನೆಯನ್ನೆಂದೂ ಮಾಡುವುದಿಲ್ಲ. ಏಕಾಂತದಲ್ಲಿ ಹೋಗಿ
ವಿಚಾರಸಾಗರ ಮಂಥನ ಮಾಡುತ್ತಾರೆ.
ಪ್ರಶ್ನೆ:
ಈ ಸೃಷ್ಟಿನಾಟಕದ
ಯಾವ ರಹಸ್ಯವನ್ನು ನೀವು ಮಕ್ಕಳೇ ಅರಿತುಕೊಂಡಿದ್ದೀರಿ?
ಉತ್ತರ:
ಈ ಸೃಷ್ಟಿಯಲ್ಲಿ ಒಬ್ಬ ಶಿವತಂದೆಯ ವಿನಃ ಮತ್ತ್ಯಾವುದೇ ವಸ್ತುವು ಸ್ಥಿರವಲ್ಲ. ಹಳೆಯ ಪ್ರಪಂಚದ
ಆತ್ಮಗಳನ್ನು ಹೊಸಪ್ರಪಂಚದಲ್ಲಿ ಕರೆದುಕೊಂಡು ಹೋಗಲು ಯಾರಾದರೂ ಬೇಕಲ್ಲವೆ. ಈ ನಾಟಕದ ರಹಸ್ಯವನ್ನು
ನೀವು ಮಕ್ಕಳೇ ಅರಿತುಕೊಂಡಿದ್ದೀರಿ.
ಓಂ ಶಾಂತಿ.
ಆತ್ಮೀಯ ಮಕ್ಕಳ ಪ್ರತಿ ಪುರುಷೋತ್ತಮ ಸಂಗಮಯುಗದಲ್ಲಿ ಬರುವ ಮಕ್ಕಳಿಗೆ ತಂದೆಯು ತಿಳಿಸುತ್ತಿದ್ದಾರೆ.
ಮಕ್ಕಳು ಇದನ್ನು ತಿಳಿದುಕೊಂಡಿದ್ದೀರಿ - ನಾವು ಬ್ರಾಹ್ಮಣರಾಗಿದ್ದೇವೆ. ತಮ್ಮನ್ನು ಬ್ರಾಹ್ಮಣರೆಂದು
ತಿಳಿಯುತ್ತೀರೋ ಅಥವಾ ಇದನ್ನೂ ಮರೆತುಹೋಗುತ್ತೀರೋ? ಬ್ರಾಹ್ಮಣರಿಗೆ ತಮ್ಮ ಕುಲವು
ಮರೆತುಹೋಗುವುದಿಲ್ಲ ಅಂದಮೇಲೆ ನಿಮಗೂ ಸಹ ಇದು ಅವಶ್ಯವಾಗಿ ನೆನಪಿರಬೇಕು - ನಾವು
ಬ್ರಾಹ್ಮಣರಾಗಿದ್ದೇವೆ. ಒಂದು ಮಾತು ನೆನಪಿದ್ದರೂ ಸಹ ದೋಣಿಯು ಪಾರಾಗುವುದು. ಸಂಗಮಯುಗದಲ್ಲಿ ನೀವು
ಹೊಸ-ಹೊಸ ಮಾತುಗಳನ್ನು ಕೇಳುತ್ತೀರಿ ಅಂದಮೇಲೆ ಅದರ ಚಿಂತನೆ ನಡೆಯಬೇಕು - ಇದಕ್ಕೆ ವಿಚಾರಸಾಗರ
ಮಂಥನವೆಂದು ಹೇಳಲಾಗುವುದು. ನೀವು ರೂಪಭಸಂತರಾಗಿದ್ದೀರಿ, ನಿಮ್ಮ ಆತ್ಮದಲ್ಲಿ ಸಂಪೂರ್ಣಜ್ಞಾನವನ್ನು
ತುಂಬಲಾಗುತ್ತದೆ ಅಂದಮೇಲೆ ರತ್ನಗಳೇ ಹೊರಬರಬೇಕು. ತಮ್ಮನ್ನು ನಾವು ಸಂಗಮಯುಗೀ ಬ್ರಾಹ್ಮಣರೆಂದು
ತಿಳಿಯಬೇಕಾಗಿದೆ. ಇದನ್ನೂ ಸಹ ಯಾರೂ ತಿಳಿದುಕೊಳ್ಳುವುದಿಲ್ಲ. ಒಂದುವೇಳೆ ತಮ್ಮನ್ನು ಸಂಗಮಯುಗೀ
ಬ್ರಾಹ್ಮಣರೆಂದು ತಿಳಿದಿದ್ದೇ ಆದರೆ ಸತ್ಯಯುಗದ ವೃಕ್ಷವು ಸಮೀಪದಲ್ಲಿ ಕಾಣಿಸುತ್ತದೆ ಮತ್ತು ಅಪಾರ
ಖುಷಿಯೂ ಇರುತ್ತದೆ. ತಂದೆಯು ಏನನ್ನು ತಿಳಿಸುವರೋ ಅದನ್ನು ಒಳಗೆ ಮತ್ತೆ-ಮತ್ತೆ ಮನನ ಮಾಡಬೇಕು -
ನಾವೀಗ ಸಂಗಮಯುಗದಲ್ಲಿದ್ದೇವೆ, ಇದೂ ಸಹ ನಿಮ್ಮ ವಿನಃ ಮತ್ತ್ಯಾರಿಗೂ ತಿಳಿದಿಲ್ಲ
ಸಂಗಮಯುಗದಲ್ಲಿದ್ದೀರಿ ಅಂದಾಗ ಸಮಯವನ್ನೂ ತೆಗೆದುಕೊಳ್ಳುತ್ತದೆ. ಇದೊಂದೇ ನರನಿಂದ ನಾರಾಯಣ,
ನರಕವಾಸಿಗಳಿಂದ ಸ್ವರ್ಗವಾಸಿಗಳಾಗುವ ವಿದ್ಯೆಯಾಗಿದೆ. ಇದು ನೆನಪಿದ್ದರೂ ಸಹ ಖುಷಿಯಿರುವುದು - ನಾವೇ
ಸ್ವರ್ಗವಾಸಿ ದೇವತೆಗಳಾಗುತ್ತಿದ್ದೇವೆ. ಸಂಗಮಯುಗವಾಸಿಗಳಾದಾಗಲೇ ಸ್ವರ್ಗವಾಸಿಗಳಾಗುವಿರಿ. ಮೊದಲು
ನರಕವಾಸಿಗಳಾಗಿದ್ದಿರಿ, ಸಂಪೂರ್ಣ ಕೆಟ್ಟಸ್ಥಿತಿಯಿತ್ತು, ಕೆಟ್ಟಕೆಲಸಗಳನ್ನು ಮಾಡುತ್ತಿದ್ದಿರಿ,
ಈಗ ಅದನ್ನು ತೆಗೆಯಬೇಕಾಗಿದೆ. ಮನುಷ್ಯರಿಂದ ದೇವತೆ, ಸ್ವರ್ಗವಾಸಿಗಳಾಗಬೇಕಾಗಿದೆ. ಯಾರ
ಸ್ತ್ರೀಯಾದರೂ ಸಾವನ್ನಪ್ಪಿದರೆ ಕೇಳಿ - ನಿಮ್ಮ ಸ್ತ್ರೀಯು ಎಲ್ಲಿದ್ದಾರೆ? ಅದಕ್ಕೆ ಅವರು
ಸ್ವರ್ಗವಾಸಿಗಳಾದರೆಂದು ಹೇಳುತ್ತಾರೆ. ಸ್ವರ್ಗವೆಂದರೇನು ಎನ್ನುವುದನ್ನೂ ಸಹ ತಿಳಿದುಕೊಂಡಿಲ್ಲ.
ಒಂದುವೇಳೆ ಸ್ವರ್ಗವಾಸಿಯಾಗಿದ್ದರೆ ಇನ್ನೂ ಖುಷಿಯಾಗಬೇಕಲ್ಲವೆ. ಈಗ ನೀವು ಮಕ್ಕಳು ಈ ಮಾತುಗಳನ್ನು
ಅರಿತುಕೊಂಡಿದ್ದೀರಿ. ಈಗ ಒಳಗೆ ವಿಚಾರ ನಡೆಯಬೇಕು - ನಾವೀಗ ಸಂಗಮಯುಗದಲ್ಲಿದ್ದೇವೆ,
ಪಾವನರಾಗುತ್ತಿದ್ದೇವೆ, ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಇದನ್ನು
ಪದೇ-ಪದೇ ಸ್ಮರಣೆ ಮಾಡಬೇಕು ಮರೆಯಬಾರದು ಆದರೆ ಮಾಯೆಯು ಮರೆಸಿ ಒಮ್ಮೆಲೆ ಕಲಿಯುಗಿಗಳನ್ನಾಗಿ
ಮಾಡಿಬಿಡುತ್ತದೆ. ಹೇಗೆ ಸಂಪೂರ್ಣ ಕಲಿಯುಗದವರ ತರಹ ಚಟುವಟಿಕೆಗಳು ನಡೆಯುತ್ತವೆ, ಆ ಖುಷಿಯ ನಶೆಯೂ
ಇರುವುದಿಲ್ಲ. ಚಹರೆಯು ಶವದಂತಿರುತ್ತದೆ. ತಂದೆಯೂ ಸಹ ತಿಳಿಸುತ್ತಾರೆ - ಎಲ್ಲರೂ ಕಾಮಚಿತೆಯ ಮೇಲೆ
ಕುಳಿತು ಸುಟ್ಟು ಶವಗಳಾಗಿಬಿಟ್ಟಿದ್ದಾರೆ. ಈಗ ನಾವು ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆ
ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ ಅಂದಮೇಲೆ ಆ ಖುಷಿಯಿರಬೇಕಲ್ಲವೆ ಆದ್ದರಿಂದ ಗಾಯನವೂ ಇದೆ -
ಅತೀಂದ್ರಿಯ ಸುಖವನ್ನು ಗೋಪ-ಗೋಪಿಕೆಯರಿಂದ ಕೇಳಿ. ನೀವು ನಿಮ್ಮ ಹೃದಯದೊಂದಿಗೆ ಕೇಳಿಕೊಳ್ಳಿ - ನಾವು
ಆ ಸುಖದ ಅನುಭೂತಿಯಲ್ಲಿರುತ್ತೇವೆಯೇ? ನೀವು ಈಶ್ವರೀಯ ಮೆಷಿನ್ ಆಗಿದ್ದೀರಿ, ಈಶ್ವರೀಯ ಮೆಷಿನ್ ಯಾವ
ಕೆಲಸ ಮಾಡುತ್ತದೆ? ಮೊದಲು ಶೂದ್ರರಿಂದ ಬ್ರಾಹ್ಮಣರು, ಬ್ರಾಹ್ಮಣರಿಂದ ದೇವತೆಗಳನ್ನಾಗಿ ಮಾಡುತ್ತದೆ.
ನಾವು ಬ್ರಾಹ್ಮಣರಾಗಿದ್ದೇವೆಂಬುದನ್ನು ಮರೆಯಬಾರದು. ಆ ಬ್ರಾಹ್ಮಣರಂತೂ ನಾವು ಬ್ರಾಹ್ಮಣರಾಗಿದ್ದೇವೆ
ಎಂದು ಬಹುಬೇಗನೆ ಹೇಳಿಬಿಡುತ್ತಾರೆ, ಅವರು ಕುಖವಂಶಾವಳಿಯಾಗಿದ್ದಾರೆ, ನೀವು
ಮುಖವಂಶಾವಳಿಯಾಗಿದ್ದೀರಿ ಅಂದಮೇಲೆ ನೀವು ಬ್ರಾಹ್ಮಣರಿಗೆ ಬಹಳ ಖುಷಿಯಿರಬೇಕು. ಬ್ರಹ್ಮಾಭೋಜನದ
ಗಾಯನವಿದೆ. ನೀವು ಯಾರಿಗಾದರೂ ಬ್ರಹ್ಮಾಭೋಜನವನ್ನು ತಿನ್ನಿಸುತ್ತೀರಿ ಅಂದರೆ ನಾವು ಪವಿತ್ರ
ಬ್ರಾಹ್ಮಣರ ಕೈಯಿಂದ ತಿನ್ನುತ್ತೇವೆ ಎಂದು ಎಷ್ಟೊಂದು ಖುಷಿಪಡುತ್ತಾರೆ. ಮನಸ್ಸಾ-ವಾಚಾ-ಕರ್ಮಣಾ
ಪವಿತ್ರವಾಗಿರಬೇಕು ಯಾವುದೇ ಅಪವಿತ್ರ ಕರ್ತವ್ಯವನ್ನು ಮಾಡಬಾರದು. ಇದರಲ್ಲಿ ಸಮಯವಂತೂ ಹಿಡಿಸುತ್ತದೆ.
ಜನಿಸುತ್ತಿದ್ದಂತೆಯೇ ಯಾರೂ ಆಗುವುದಿಲ್ಲ. ಭಲೆ ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ.
ತಂದೆಯ ಮಕ್ಕಳಾದರೆಂದರೆ ಆಸ್ತಿಯು ಸಿಕ್ಕಿತು. ಒಂದುಬಾರಿ ಇವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ
ಎಂದು ಅರ್ಥವಾಗಿಬಿಡುತ್ತದೆ, ನಿಶ್ಚಯ ಮಾಡಿಕೊಳ್ಳುವುದರಿಂದಲೇ ವಾರಸುಧಾರರಾಗಿಬಿಡುತ್ತಾರೆ. ಮತ್ತೆ
ಒಂದುವೇಳೆ ಯಾವುದೇ ಅಕರ್ತವ್ಯ ಮಾಡಿದರೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಹೇಗೆ
ಕಾಶಿಯಲ್ಲಿ ಬಲಿಯಾಗುವುದನ್ನು ತಿಳಿಸಿದ್ದೇವೆ. ಶಿಕ್ಷೆಯನ್ನು ಅನುಭವಿಸುವುದರಿಂದ ಲೆಕ್ಕಾಚಾರವು
ಸಮಾಪ್ತಿಯಾಗುತ್ತದೆ. ಮುಕ್ತಿಗಾಗಿಯೇ ಬಾವಿಯಲ್ಲಿ ಬೀಳುತ್ತಿದ್ದರು. ಇಲ್ಲಂತೂ ಆ ಮಾತಿಲ್ಲ ಕೇವಲ
ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಶಿವತಂದೆಯು ಮಕ್ಕಳಿಗೆ ಹೇಳುತ್ತಾರೆ. ಇದು ಎಷ್ಟು ಸಹಜವಾಗಿದೆ!
ಆದರೂ ಸಹ ಮಾಯೆಯ ಸುರುಳಿಯು ಬಂದುಬಿಡುತ್ತದೆ. ಈ ನಿಮ್ಮ ಯುದ್ಧವು ಎಲ್ಲದಕ್ಕಿಂತ ಹೆಚ್ಚಿನ ಸಮಯ
ನಡೆಯುತ್ತದೆ. ಬಾಹುಬಲದ ಯುದ್ಧವು ಇಷ್ಟೊಂದು ಸಮಯ ನಡೆಯುವುದಿಲ್ಲ. ನೀವು ಯಾವಾಗಿನಿಂದ ಬಂದಿದ್ದೀರೋ
ಅಲ್ಲಿಂದ ಯುದ್ಧವು ಪ್ರಾರಂಭವಾಗಿದೆ. ಹಳಬರೊಂದಿಗೆ ಎಷ್ಟೊಂದು ಯುದ್ಧವು ನಡೆಯುತ್ತದೆ! ಹೊಸಬರು
ಬಂದರೂ ಸಹ ಅವರೊಂದಿಗೂ ನಡೆಯುತ್ತದೆ. ಸ್ಥೂಲಯುದ್ಧದಲ್ಲಿಯೂ ಸಹ ಮರಣ ಹೊಂದುತ್ತಿರುತ್ತಾರೆ,
ಬೇರೆಯವರು ಬಂದು ಸೇರುತ್ತಿರುತ್ತಾರೆ ಹಾಗೆಯೇ ಇಲ್ಲಿಯೂ ಸಹ ಸಾಯುತ್ತಾರೆ ಮತ್ತು ವೃದ್ಧಿಯನ್ನೂ
ಹೊಂದುತ್ತಾರೆ. ವೃಕ್ಷವಂತೂ ದೊಡ್ಡದಾಗಲೇಬೇಕು. ತಂದೆಯು ಮಧುರಾತಿ ಮಧುರ ಮಕ್ಕಳಿಗೆ ತಿಳಿಸುತ್ತಾರೆ
- ಮಕ್ಕಳೇ, ಇದು ನೆನಪಿರಬೇಕು. ತಂದೆಯು ತಂದೆಯೂ ಆಗಿದ್ದಾರೆ, ಪಾರಲೌಕಿಕ ಶಿಕ್ಷಕನೂ ಆಗಿದ್ದಾರೆ,
ಸದ್ಗುರುವೂ ಆಗಿದ್ದಾರೆ. ಕೃಷ್ಣನಿಗೆ ತಂದೆ, ಶಿಕ್ಷಕ, ಸದ್ಗುರುವೆಂದು ಹೇಳುವುದಿಲ್ಲ.
ನಿಮಗೆ ಎಲ್ಲರ ಕಲ್ಯಾಣ
ಮಾಡುವ ಉಮ್ಮಂಗವಿರಬೇಕು. ಮಹಾರಥಿ ಮಕ್ಕಳು ಸೇವೆಯಲ್ಲಿ ತತ್ಫರರಾಗಿರುತ್ತಾರೆ, ಅವರಿಗಂತೂ ಬಹಳ
ಖುಷಿಯಿರುತ್ತದೆ. ಎಲ್ಲಿಂದಲೇ ನಿಮಂತ್ರಣ ಸಿಕ್ಕಿದರೆ ಓಡುತ್ತಿರುತ್ತಾರೆ. ಪ್ರದರ್ಶನಿ, ಸರ್ವೀಸ್
ಕಮಿಟಿಯಲ್ಲಿಯೂ ಒಳ್ಳೊಳ್ಳೆಯ ಮಕ್ಕಳು ಆಯ್ಕೆಯಾಗುತ್ತಾರೆ, ಅವರಿಗೆ ಆದೇಶವು ಸಿಗುತ್ತದೆ, ಸರ್ವೀಸ್
ಮಾಡುತ್ತಾ ಇದ್ದರೆ ಇವರು ಈಶ್ವರೀಯ ಮೆಷಿನ್ನಿನ ಒಳ್ಳೆಯ ಮಕ್ಕಳಾಗಿದ್ದಾರೆ. ಇವರಂತೂ ಬಹಳ ಒಳ್ಳೆಯ
ಸರ್ವೀಸ್ ಮಾಡುತ್ತಾರೆಂದು ತಂದೆಯೂ ಸಹ ಖುಷಿಪಡುವರು ಅಂದಾಗ ತಮ್ಮನ್ನು ತಾವು ಕೇಳಿಕೊಳ್ಳಬೇಕು -
ನಾವು ಸರ್ವೀಸ್ ಮಾಡುತ್ತೇವೆಯೇ? ನಾವು ಈಶ್ವರೀಯ ಸೇವೆಯಲ್ಲಿದ್ದೇವೆಂದು ಹೇಳುತ್ತೀರಿ ಅಂದಾಗ
ಈಶ್ವರನ ಸೇವೆ ಯಾವುದಾಗಿದೆ? ಕೇವಲ ಎಲ್ಲರಿಗೆ ಇದೇ ಸಂದೇಶವನ್ನು ಕೊಡಿ - ಮನ್ಮನಾಭವ.
ಆದಿ-ಮಧ್ಯ-ಅಂತ್ಯದ ಜ್ಞಾನವಂತೂ ಬುದ್ಧಿಯಲ್ಲಿದೆ, ನಿಮ್ಮ ಹೆಸರೇ ಆಗಿದೆ ಸ್ವದರ್ಶನಚಕ್ರಧಾರಿಗಳು
ಅಂದಮೇಲೆ ಅದರ ಚಿಂತನೆ ನಡೆಯುತ್ತಿರಬೇಕು. ಸ್ವದರ್ಶನಚಕ್ರವು ಎಂದಾದರೂ ನಿಲ್ಲುತ್ತದೆಯೇ? ನೀವು
ಚೈತನ್ಯ ಲೈಟ್ಹೌಸ್ ಸಹ ಆಗಿದ್ದೀರಿ. ನಿಮ್ಮ ಮಹಿಮೆಯನ್ನು ಬಹಳ ಗಾಯನ ಮಾಡಲಾಗುತ್ತದೆ. ಬೇಹದ್ದಿನ
ತಂದೆಯ ಗಾಯನವನ್ನು ನೀವು ತಿಳಿದುಕೊಂಡಿದ್ದೀರಿ. ಅವರು ಜ್ಞಾನಸಾಗರ, ಪತಿತ-ಪಾವನನಾಗಿದ್ದಾರೆ,
ಗೀತೆಯ ಭಗವಂತನಾಗಿದ್ದಾರೆ. ಅವರೇ ಜ್ಞಾನ ಮತ್ತು ಯೋಗಬಲದಿಂದ ಈ ಕಾರ್ಯವನ್ನು ಮಾಡಿಸುತ್ತಾರೆ.
ಇದರಲ್ಲಿ ಯೋಗಬಲ ಪ್ರಭಾವವು ಬಹಳ ಇದೆ. ಭಾರತವು ಪ್ರಾಚೀನ ರಾಜಯೋಗಕ್ಕೆ ಹೆಸರುವಾಸಿಯಾಗಿದೆ, ಈಗ
ನೀವು ಅದನ್ನು ಕಲಿಯುತ್ತೀರಿ. ಸನ್ಯಾಸಿಗಳಂತೂ ಹಠಯೋಗಿಗಳಾಗಿದ್ದಾರೆ, ಅವರಂತೂ ಪತಿತರನ್ನು ಪಾವನ
ಮಾಡಲು ಸಾಧ್ಯವಿಲ್ಲ, ಜ್ಞಾನವು ಒಬ್ಬ ತಂದೆಯ ಬಳಿಯೇ ಇದೆ. ಜ್ಞಾನದಿಂದ ನೀವು
ಜನ್ಮತೆಗೆದುಕೊಳ್ಳುತ್ತೀರಿ. ಗೀತೆಗೆ ತಾಯಿಯೆಂದು ಹೇಳಲಾಗುತ್ತದೆ. ಮಾತಾಪಿತರಲ್ಲವೆ! ನೀವು
ಶಿವತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ತಾಯಿಯೂ ಬೇಕಲ್ಲವೆ. ಮನುಷ್ಯರು ಭಲೆ ಹಾಡುತ್ತಾರೆ ಆದರೆ
ಏನನ್ನೂ ಅರಿತುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಇದರ ಅರ್ಥವು ಎಷ್ಟು ಗುಹ್ಯವಾಗಿದೆ! ಪರಮಪಿತ
ಪರಮಾತ್ಮ ಎಂದು ಹೇಳುತ್ತರೆ ಮತ್ತೆ ಮಾತಾಪಿತಾ ಎಂದು ಏಕೆ ಹೇಳಲಾಗುತ್ತದೆ? ತಂದೆಯು ತಿಳಿಸುತ್ತಾರೆ
- ಭಲೆ ಸರಸ್ವತಿಯಿದ್ದಾರೆ ಆದರೆ ವಾಸ್ತವದಲ್ಲಿ ಸತ್ಯ-ಸತ್ಯವಾದ ತಾಯಿ ಬ್ರಹ್ಮಪುತ್ರನಾಗಿದ್ದಾರೆ.
ಮೊಟ್ಟಮೊದಲಿಗೆ ಸಾಗರ ಮತ್ತು ಬ್ರಹ್ಮಪುತ್ರನ ಸಂಗಮವಾಗುತ್ತದೆ. ತಂದೆಯು ಇವರಲ್ಲಿ ಪ್ರವೇಶ
ಮಾಡುತ್ತಾರೆ. ಇದು ಎಷ್ಟೊಂದು ಗುಹ್ಯವಾದ ಮಾತುಗಳಾಗಿವೆ! ಚಿಂತನೆ ಮಾಡಲು ಅನೇಕರ ಬುದ್ಧಿಯಲ್ಲಿ ಈ
ಮಾತುಗಳೇ ಇಲ್ಲ. ಸಂಪೂರ್ಣ ಮಂದಬುದ್ಧಿಯವರು, ಕಡಿಮೆ ದರ್ಜೆಯನ್ನು ಪಡೆಯುವವರಾಗಿದ್ದಾರೆ ಆದರೂ ಸಹ
ಅವರಿಗಾಗಿ ತಂದೆಯು ಮತ್ತೆ ತಿಳಿಸುತ್ತಾರೆ - ಮಕ್ಕಳೇ, ತಮ್ಮನ್ನು ಆತ್ಮವೆಂದು ತಿಳಿಯಿರಿ. ಇದು
ಸಹಜವಲ್ಲವೆ. ನಾವಾತ್ಮಗಳ ತಂದೆಯು ಪರಮಾತ್ಮನಾಗಿದ್ದಾರೆ, ಅವರು ನೀವಾತ್ಮಗಳಿಗೆ ತಿಳಿಸುತ್ತಾರೆ -
ನನ್ನೊಬ್ಬನನ್ನೇ ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುವುದು. ಇದು ಮುಖ್ಯಮಾತಾಗಿದೆ.
ಮಂದಬುದ್ಧಿಯವರು ದೊಡ್ಡ ಮಾತುಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಗೀತೆಯಲ್ಲಿಯೂ ಇದೆ
- ಮನ್ಮನಾಭವ. ಬಾಬಾ, ನೆನಪಿನಯಾತ್ರೆಯು ಬಹಳ ಕಷ್ಟವಿದೆ. ಪದೇ-ಪದೇ ಮರೆತುಹೋಗುತ್ತೇವೆ.
ಯಾವುದಾದರೊಂದು ವಿಚಾರದಲ್ಲಿ ಸೋಲುತ್ತೇವೆಂದು ಎಲ್ಲರೂ ತಂದೆಗೆ ಪತ್ರವನ್ನ ಬರೆಯುತ್ತಾರೆ. ಇದು
ಮಾಯೆ ಮತ್ತು ಈಶ್ವರನ ಮಕ್ಕಳ ಮಲ್ಲಯುದ್ಧವಾಗಿದೆ. ಇದರಬಗ್ಗೆ ಯಾರಿಗೂ ತಿಳಿದಿಲ್ಲ. ಈಗ ಮಾಯೆಯ ಮೇಲೆ
ಜಯಗಳಿಸಿ ಕರ್ಮಾತೀತ ಸ್ಥಿತಿಯಲ್ಲಿ ಹೋಗಬೇಕಾಗಿದೆ. ಮೊಟ್ಟಮೊದಲಿಗೆ ನೀವು ಕರ್ಮ ಸಂಬಂಧದಲ್ಲಿ
ಬಂದಿದ್ದೀರಿ. ಅದರಲ್ಲಿ ಬರುತ್ತಾ-ಬರುತ್ತಾ ಮತ್ತೆ ಅರ್ಧಕಲ್ಪದ ನಂತರನೀವು ಕರ್ಮ ಬಂಧನದಲ್ಲಿ
ಬಂದುಬಿಟ್ಟಿದ್ದೀರಿ. ಮೊದಲಿಗೆ ನೀವು ಪವಿತ್ರ ಆತ್ಮಗಳಾಗಿದ್ದಿರಿ, ಸುಖದ ಕರ್ಮಬಂಧನವಾಗಲಿ, ದುಃಖದ
ಕರ್ಮಬಂಧನವಾಗಲಿ ಇರಲಿಲ್ಲ. ಮತ್ತೆ ಸುಖದ ಸಂಬಂಧದಲ್ಲಿ ಬಂದಿದ್ದೀರಿ. ಇದನ್ನೂ ಸಹ ಈ ಸಮಯದಲ್ಲಿಯೇ
ನೀವು ತಿಳಿದುಕೊಂಡಿದ್ದೀರಿ - ನಾವು ಸಂಬಂಧದಲ್ಲಿದ್ದೆವು, ಈಗ ದುಃಖದಲ್ಲಿದ್ದೇವೆ ಅಂದಮೇಲೆ ಮತ್ತೆ
ಅವಶ್ಯವಾಗಿ ಸುಖದಲ್ಲಿರುತ್ತೇವೆ. ಹೊಸಪ್ರಪಂಚವಿದ್ದಾಗ ಪವಿತ್ರರಾಗಿದ್ದೆವು, ಮಾಲೀಕರಾಗಿದ್ದೆವು,
ಈಗ ಹಳೆಯಪ್ರಪಂಚದಲ್ಲಿ ಪತಿತರಾಗಿಬಿಟ್ಟಿದ್ದೇವೆ. ನಾವೇ ದೇವತೆಗಳಾಗುತ್ತೇವೆ ಎಂಬುದನ್ನು ನೆನಪು
ಮಾಡಬೇಕಲ್ಲವೆ.
ತಂದೆಯು ತಿಳಿಸುತ್ತಾರೆ
- ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಕಳೆಯುತ್ತವೆ, ನೀವು ನನ್ನ ಮನೆಗೆ ಬಂದುಬಿಡುತ್ತೀರಿ.
ಶಾಂತಿಧಾಮದ ಮೂಲಕ ಸುಖಧಾಮದಲ್ಲಿ ಬಂದುಬಿಡುತ್ತೀರಿ. ಮೊಟ್ಟಮೊದಲಿಗೆ ಮನೆಗೆ ಹೋಗಬೇಕಾಗಿದೆ
ಆದ್ದರಿಂದ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ಪವಿತ್ರರಾಗುತ್ತೀರಿ.
ಪತಿತ-ಪಾವನನಾದ ನಾನು ನಿಮ್ಮನ್ನು ಮನೆಗೆ ಬರಲು ಪವಿತ್ರರನ್ನಾಗಿ ಮಾಡುತ್ತಿದ್ದೇನೆ, ಹೀಗೆ
ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಬೇಕಾಗಿದೆ. ಅವಶ್ಯವಾಗಿ ಚಕ್ರವು ಪೂರ್ಣವಾಗುತ್ತದೆ. ನಾವು ಎಷ್ಟು
ಜನ್ಮಗಳನ್ನು ತೆಗೆದುಕೊಂಡಿದ್ದೇವೆ, ಈಗ ತಂದೆಯು ಪತಿತರಿಂದ ಪಾವನರನ್ನಾಗಿ ಮಾಡಲು ಬಂದಿದ್ದಾರೆ
ಅಂದಮೇಲೆ ಯೋಗಬಲದಿಂದಲೇ ಪಾವನರಾಗುತ್ತೀರಿ. ಈ ಯೋಗಬಲವು ಪ್ರಸಿದ್ಧವಾಗಿದೆ, ಯಾವುದನ್ನು ತಂದೆಯೇ
ಕಲಿಸಿಕೊಡುತ್ತಾರೆ. ಇದರಲ್ಲಿ ಶರೀರದಿಂದ ಏನೂ ಮಾಡಲು ಅವಶ್ಯಕತೆಯಿಲ್ಲ ಅಂದಾಗ ಇಡೀ ದಿನ ಈ ಮಾತುಗಳ
ಮಂಥನವು ನಡೆಯುತ್ತಿರಬೇಕು. ಎಲ್ಲಿಯಾದರೂ ಏಕಾಂತದಲ್ಲಿ ಕುಳಿತುಕೊಳ್ಳಿ ಅಥವಾ ಎಲ್ಲಿಗೇ ಹೋಗಿ
ಬುದ್ಧಿಯಲ್ಲಿ ಇದೇ ಚಿಂತನೆಯು ನಡೆಯುತ್ತಿರಲಿ. ಏಕಾಂತವು ಬಹಳಷ್ಟಿದೆ, ಮಾಳಿಗೆಯ ಮೇಲಂತೂ ಹೆದರುವ
ಮಾತಿಲ್ಲ. ಮೊದಲು ನೀವು ಮುಂಜಾನೆಯಲ್ಲಿ ಮುರುಳಿ ಕೇಳಿದ ನಂತರ ಬೆಟ್ಟಗಳ ಮೇಲೆ ಹೋಗುತ್ತಿದ್ದಿರಿ.
ಏನು ಕೇಳಿದಿರೋ ಅದರ ಚಿಂತನೆ ಮಾಡಲು ಬೆಟ್ಟಗಳ ಮೇಲೆ ಹೋಗಿ ಕುಳಿತುಕೊಳ್ಳುತ್ತಿದ್ದಿರಿ. ಯಾರಿಗೆ
ಜ್ಞಾನದ ಅಭಿರುಚಿಯಿರುವುದೋ ಅವರು ಪರಸ್ಪರ ಜ್ಞಾನದ ಮಾತುಗಳನ್ನೇ ಮಾತನಾಡುತ್ತಾರೆ,
ಜ್ಞಾನವಿಲ್ಲವೆಂದರೆ ಪರಚಿಂತನೆ ಮಾಡುತ್ತಿರುತ್ತಾರೆ. ಪ್ರದರ್ಶನಿಯಲ್ಲಿ ನೀವು ಎಷ್ಟೊಂದು
ಮಾತುಗಳನ್ನು ತಿಳಿಸುತ್ತೀರಿ ಮತ್ತು ನಿಮಗೆ ತಿಳಿದಿದೆ - ನಮ್ಮ ಜ್ಞಾನವು ಬಹಳ ಸುಖವನ್ನು
ನೀಡುವಂತಹದ್ದಾಗಿದೆ. ಅನ್ಯಧರ್ಮದವರಿಗೆ ಕೇವಲ ಇಷ್ಟನ್ನೇ ತಿಳಿಸಬೇಕು - ತಂದೆಯನ್ನು ನೆನಪು ಮಾಡಿ.
ಇವರು ಮುಸಲ್ಮಾನರಾಗಿದ್ದಾರೆ, ನಾನು ಇಂತಹವನಾಗಿದ್ದೇನೆ ಎಂದು ತಿಳಿಯಬಾರದು. ಆತ್ಮವನ್ನು ನೋಡಬೇಕು
ಮತ್ತು ಆತ್ಮಕ್ಕೇ ತಿಳಿಸಬೇಕು. ಪ್ರದರ್ಶನಿಯಲ್ಲಿ ತಿಳಿಸಿಕೊಡುವಾಗಲೂ ಸಹ ಈ ಅಭ್ಯಾಸ ಮಾಡಿ -
ನಾನಾತ್ಮ, ನನ್ನ ಸಹೋದರನಿಗೆ ತಿಳಿಸುತ್ತೇನೆ. ಈಗ ನಮಗೆ ತಂದೆಯಿಂದ ಅಸ್ತಿಯು ಸಿಗುತ್ತಿದೆ,
ತನ್ನನ್ನು ಆತ್ಮವೆಂದು ತಿಳಿದು ಸಹೋದರನಿಗೆ ಜ್ಞಾನ ಕೊಡುತ್ತೇನೆ. ಈಗ ತಂದೆಯ ಬಳಿ ನಡೆಯಿರಿ, ಬಹಳ
ಸಮಯದಿಂದ ಅಗಲಿದ್ದೀರಿ, ಅದು ಶಾಂತಿಧಾಮವಾಗಿದೆ ಆದರೆ ಇದು ಎಷ್ಟೊಂದು ಅಶಾಂತಿ, ದುಃಖವಿದೆ. ತಂದೆಯು
ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿಯುವ ಹವ್ಯಾಸವನ್ನಿಟ್ಟುಕೊಳ್ಳಿ, ಇದರಿಂದ ನಾಮ, ರೂಪ
ಎಲ್ಲವೂ ಮರೆತುಹೋಗಲಿ. ಇಂತಹವರು ಮುಸಲ್ಮಾನರಾಗಿದ್ದಾರೆಂದು ಏಕೆ ತಿಳಿಯುತ್ತೀರಿ? ಆತ್ಮವೆಂದು
ತಿಳಿದು ತಿಳಿಸಿಕೊಡಿ. ಈ ಆತ್ಮವು ಒಳ್ಳೆಯವರಾಗಿದ್ದಾರೆ ಅಥವಾ ಕೆಟ್ಟವರಾಗಿದ್ದಾರೆ ಎಂದು
ಅರಿತುಕೊಳ್ಳಬಹುದು. ಕೆಟ್ಟವರಿಂದ ದೂರ ಓಡಬೇಕೆಂದು ಆತ್ಮಕ್ಕೇ ಹೇಳಲಾಗುತ್ತದೆ. ಈಗ ನೀವು
ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ, ಇಲ್ಲಿ ಪಾತ್ರವನ್ನಭಿನಯಿಸಿದ್ದೀರಿ, ಈಗ ಮತ್ತೆ ಹಿಂತಿರುಗಿ
ಹೋಗಬೇಕಾಗಿದೆ. ಪಾವನರಾಗಬೇಕಾಗಿದೆ, ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕಾಗುತ್ತದೆ.
ಪಾವನರಾದಾಗಲೇ ಪಾವನಪ್ರಪಂಚದ ಮಾಲೀಕರಾಗುವಿರಿ. ನಾಲಿಗೆಯಿಂದ ಪ್ರತಿಜ್ಞೆ ಮಾಡಲಾಗುತ್ತದೆ. ತಂದೆಯೂ
ಸಹ ಪ್ರತಿಜ್ಞೆ ಮಾಡಿ ಎಂದು ಹೇಳುತ್ತಾರೆ. ತಂದೆಯು ಯುಕ್ತಿಯನ್ನು ತಿಳಿಸುತ್ತಾರೆ - ನೀವಾತ್ಮಗಳು
ಪರಸ್ಪರ ಸಹೋದರ-ಸಹೋದರರಾಗಿದ್ದೀರಿ, ಮತ್ತೆ ಈ ಶರೀರದಲ್ಲಿ ಬಂದಾಗ ಸಹೋದರ-ಸಹೋದರಿಯರಾಗುತ್ತೀರಿ.
ಸಹೋದರ-ಸಹೋದರಿಯರೆಂದೂ ವಿಕಾರದಲ್ಲಿ ಹೋಗಲು ಸಾಧ್ಯವಿಲ್ಲ. ಪವಿತ್ರರಾಗಿ ತಂದೆಯನ್ನು ನೆನಪು
ಮಾಡುವುದರಿಂದ ನೀವು ವಿಶ್ವದ ಮಾಲೀಕರಾಗಿಬಿಡುತ್ತೀರಿ. ಮಾಯೆಯಿಂದ ಸೋತುಹೋದಿರಿ, ಮತ್ತೆ ಎದ್ದು
ನಿಂತುಕೊಳ್ಳಿ ಎಂದು ತಿಳಿಸಲಾಗುತ್ತದೆ. ಎಷ್ಟು ನಿಲ್ಲುತ್ತಾರೆಯೋ ಅಷ್ಟು ಪ್ರಾಪ್ತಿಯಾಗುತ್ತದೆ.
ನಷ್ಟ ಮತ್ತು ಸಂಪಾದನೆಯಂತೂ ಇರುತ್ತದೆಯಲ್ಲವೆ. ಅರ್ಧಕಲ್ಪ ಸಂಪಾದನೆ ನಂತರ ರಾವಣರಾಜ್ಯದಲ್ಲಿ
ನಷ್ಟವಾಗಿಬಿಡುತ್ತದೆ. ಲೆಕ್ಕವಿದೆಯಲ್ಲವೆ! ಗೆಲುವು ಸಂಪಾದನೆ, ಸೋಲು ನಷ್ಟವಾಗಿದೆ ಆದ್ದರಿಂದ
ತಮ್ಮನ್ನು ತಾವು ಪೂರ್ಣ ಪರಿಶೀಲನೆ ಮಾಡಿಕೊಳ್ಳಬೇಕು. ತಂದೆಯನ್ನು ನೆನಪು ಮಾಡುವುದರಿಂದ ಮಕ್ಕಳಿಗೆ
ಖುಷಿಯಿರುವುದು. ಅವರಂತೂ ಕೇವಲ ಗಾಯನ ಮಾಡುತ್ತಾರೆ, ಏನನ್ನೂ ಅರಿತುಕೊಂಡಿಲ್ಲ. ಎಲ್ಲರೂ
ಬುದ್ಧಿಹೀನತೆಯಿಂದ ಹಾಡುತ್ತಾರೆ. ನೀವಂತೂ ಪೂಜೆ ಇತ್ಯಾದಿಯನ್ನಂತೂ ಮಾಡುವುದಿಲ್ಲ ಆದರೆ ಗಾಯನವಂತೂ
ಮಾಡುತ್ತೀರಲ್ಲವೆ. ಅವ್ಯಭಿಚಾರಿ ಎಂದು ಆ ಒಬ್ಬ ತಂದೆಯ ಗಾಯನವಿದೆ. ತಂದೆಯು ಬಂದು ನೀವು ಮಕ್ಕಳಿಗೆ
ತಾವೇ ಓದಿಸುತ್ತಾರೆ. ನೀವು ಯಾವುದೇ ಪ್ರಶ್ನೆಗಳನ್ನೂ ಕೇಳುವ ಅವಶ್ಯಕತೆಯಿಲ್ಲ. ಚಕ್ರವು
ಸ್ಮೃತಿಯಲ್ಲಿರಬೇಕು. ನಾವು ಮಾಯೆಯ ಮೇಲೆ ಹೇಗೆ ಜಯಗಳಿಸುತ್ತೇವೆ ಮತ್ತು ಹೇಗೆ ಸೋಲುತ್ತೇವೆಂದು
ತಿಳಿದುಕೊಳ್ಳಬೇಕು. ತಂದೆಯು ತಿಳಿಸುತ್ತಾರೆ - ಸೋಲನ್ನನುಭವಿಸುವುದರಿಂದ ನೂರರಷ್ಟು
ಶಿಕ್ಷೆಯಾಗುತ್ತದೆ. ಸದ್ಗುರುವಿನ ನಿಂದನೆ ಮಾಡಿಸಬೇಡಿ ಇಲ್ಲವೆಂದರೆ ನೀವು ಪದವಿಯನ್ನು
ಪಡೆಯುವುದಿಲ್ಲ. ಇದು ಸತ್ಯನಾರಾಯಣನ ಕಥೆಯಾಗಿದೆ, ಇದನ್ನು ಯಾರೂ ಅರಿತುಕೊಂಡಿಲ್ಲ. ಗೀತೆಯೇ ಬೇರೆ,
ಸತ್ಯನಾರಾಯಣನ ಕಥೆಯನ್ನೇ ಬೇರೆ ಮಾಡಿಬಿಟ್ಟಿದ್ದಾರೆ. ಇದು ನರನಿಂದ ನಾರಾಯಣನನ್ನಾಗಿ ಮಾಡುವ
ಗೀತೆಯಾಗಿದೆ.
ತಂದೆಯು ತಿಳಿಸುತ್ತಾರೆ
- ನಾನು ನಿಮಗೆ ನರನಿಂದ ನಾರಾಯಣರನ್ನಾಗಿ ಮಾಡುವ ವಿದ್ಯೆಯನ್ನು ತಿಳಿಸುತ್ತೇನೆ. ಇದಕ್ಕೆ
ಗೀತೆಯೆಂದೂ ಹೇಳುತ್ತಾರೆ, ಅಮರನಾಥನ ಕಥೆಯೆಂದೂ ಹೇಳುತ್ತಾರೆ. ಮೂರನೆಯ ನೇತ್ರವನ್ನು ತಂದೆಯೇ
ಕೊಡುತ್ತಾರೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ - ನಾವು ದೇವತೆಗಳಾಗುತ್ತೇವೆ ಅಂದಮೇಲೆ ಅವಶ್ಯವಾಗಿ
ಒಳ್ಳೆಯಗುಣಗಳೂ ಇರಬೇಕು. ಈ ಸೃಷ್ಟಿಯಲ್ಲಿ ಯಾವುದೇ ವಸ್ತುವು ಶಾಶ್ವತವಿಲ್ಲ. ಒಬ್ಬ ಶಿವತಂದೆಯೇ
ಶಾಶ್ವತವಾಗಿದ್ದಾರೆ. ಉಳಿದೆಲ್ಲರೂ ಕೆಳಗೆ ಬರಲೇಬೇಕಾಗಿದೆ ಆದರೆ ತಂದೆಯೂ ಸಹ ಸಂಗಮದಲ್ಲಿಯೇ
ಬರುತ್ತಾರೆ, ಎಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ಹಳೆಯ ಪ್ರಪಂಚದ ಆತ್ಮಗಳನ್ನು
ಹೊಸಪ್ರಪಂಚದಲ್ಲಿ ಕರೆದುಕೊಂಡು ಹೋಗಲು ಯಾರಾದರೂ ಬೇಕಲ್ಲವೆ. ಅಂದಾಗ ನಾಟಕದಲ್ಲಿ ಇದೆಲ್ಲಾ
ರಹಸ್ಯವಿದೆ. ತಂದೆಯು ಬಂದು ಪವಿತ್ರರನ್ನಾಗಿ ಮಾಡುತ್ತಾರೆ, ಯಾವುದೇ ದೇಹಧಾರಿಗಳಿಗೆ ಭಗವಂತನೆಂದು
ಕರೆಯಲು ಸಾಧ್ಯವಿಲ್ಲ. ಈ ಸಮಯದಲ್ಲಿ ತಂದೆಯು ತಿಳಿಸುತ್ತಾರೆ - ಆತ್ಮಗಳ ರೆಕ್ಕೆಗಳು ತುಂಡಾಗಿವೆ
ಆದ್ದರಿಂದ ಹಾರಲು ಆಗುತ್ತಿಲ್ಲ. ತಂದೆಯು ಬಂದು ಮತ್ತೆ ಜ್ಞಾನ-ಯೋಗದ ರೆಕ್ಕೆಗಳನ್ನು ಕೊಡುತ್ತಾರೆ.
ಯೋಗಬಲದಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ, ಪುಣ್ಯಾತ್ಮರಾಗಿಬಿಡುತ್ತೀರಿ. ಮೊಟ್ಟಮೊದಲು
ಪರಿಶ್ರಮಪಡಬೇಕು ಆದ್ದರಿಂದ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ಚಾರ್ಟ್ ಇಡಿ.
ಯಾರ ಚಾರ್ಟ್ ಚೆನ್ನಾಗಿರುವುದೋ ಅವರು ಬರೆಯುತ್ತಾರೆ ಮತ್ತು ಅವರಿಗೆ ಖುಷಿಯೂ ಇರುವುದು. ಈಗ ಎಲ್ಲರೂ
ಪರಿಶ್ರಮಪಡುತ್ತಾರೆ, ಚಾರ್ಟನ್ನು ಬರೆಯುವುದಿಲ್ಲವೆಂದರೆ ಯೋಗದ ಹರಿತವು ತುಂಬುವುದಿಲ್ಲ. ಚಾರ್ಟ್
ಬರೆಯುವುದರಲ್ಲಿ ಬಹಳಷ್ಟು ಲಾಭವಿದೆ. ಚಾರ್ಟ್ನ ಜೊತೆಗೆ ಒಳ್ಳೆಯ ಜ್ಞಾನ ಅಂಶಗಳು ಬೇಕು.
ಚಾರ್ಟ್ನಲ್ಲಿ ಇವೆರಡನ್ನೂ ಬರೆಯಿರಿ - ಎಷ್ಟು ಸರ್ವೀಸ್ ಮಾಡಿದೆವು ಮತ್ತು ಎಷ್ಟು ನೆನಪು ಮಾಡಿದೆವು?
ಪುರುಷಾರ್ಥವನ್ನು ಈ ರೀತಿ ಮಾಡಬೇಕು ಅಂತಿಮದಲ್ಲಿ ಯಾವುದೇ ವಸ್ತುವು ನೆನಪಿಗೆ ಬರಬಾರದು. ತಮ್ಮನ್ನು
ಆತ್ಮನೆಂದು ತಿಳಿದು ಪುಣ್ಯಾತ್ಮರಾಗುವ ಪರಿಶ್ರಮಪಡಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಏಕಾಂತದಲ್ಲಿ
ಜ್ಞಾನದ ಮನನ ಚಿಂತನೆ ಮಾಡಬೇಕಾಗಿದೆ. ನೆನಪಿನ ಯಾತ್ರೆಯಲ್ಲಿದ್ದು ಮಾಯೆಯ ಮೇಲೆ ಜಯಗಳಿಸಿ
ಕರ್ಮಾತೀತ ಸ್ಥಿತಿಯನ್ನು ಹೊಂದಬೇಕಾಗಿದೆ.
2. ಯಾರಿಗಾದರೂ
ಜ್ಞಾನವನ್ನು ತಿಳಿಸುವ ಸಮಯದಲ್ಲಿ ಬುದ್ಧಿಯಲ್ಲಿರಲಿ - ನಾವಾತ್ಮಗಳು ನಮ್ಮ ಸಹೋದರರಿಗೆ ಜ್ಞಾನವನ್ನು
ತಿಳಿಸುತ್ತಿದ್ದೇನೆ. ನಾಮ, ರೂಪ, ದೇಹ ಎಲ್ಲವೂ ಮರೆತುಹೋಗಲಿ. ಪಾವನರಾಗುವ ಪ್ರತಿಜ್ಞೆ ಮಾಡಿ
ಪಾವನರಾಗಿ ಪಾವನಪ್ರಪಂಚದ ಮಾಲೀಕರಾಗಬೇಕಾಗಿದೆ.
ವರದಾನ:
ಸ್ವಯಂನ ಪ್ರತಿ
ಇಚ್ಛಾ ಮಾತ್ರಂ ಅವಿದ್ಯೆಯಾಗಿ ತಂದೆಯ ಸಮಾನ ಅಖಂಡದಾನಿ, ಪರೋಪಕಾರಿ ಭವ
ಹೇಗೆ ಬ್ರಹ್ಮಾ ತಂದೆಯು
ಸ್ವಯಂನ ಸಮಯವೂ ಸೇವೆಯಲ್ಲಿ ಕೊಟ್ಟರು, ಸ್ವಯಂ ನಿರ್ಮಾನರಾಗಿ ಮಕ್ಕಳಿಗೆ ಮಾನ್ಯತೆ ಕೊಟ್ಟರು, ಕಾಮದ
ಹೆಸರಿನ ಪ್ರಾಪ್ತಿಯ ತ್ಯಾಗವನ್ನೂ ಮಾಡಿದರು. ಹೆಸರು, ಮರ್ಯಾದೆ, ಸ್ಥಾನ ಎಲ್ಲರಲ್ಲಿಯೂ
ಪರೋಪಕಾರಿಯಾಗಿ, ತಮ್ಮದು ತ್ಯಾಗ ಮಾಡಿ ಅನ್ಯರ ಹೆಸರು ಮಾಡಿದರು, ಸ್ವಯಂನ್ನು ಸದಾ
ಸೇವಾಧಾರಿಯಾಗಿಟ್ಟುಕೊಂಡು, ಮಕ್ಕಳನ್ನು ಮಾಲೀಕರನ್ನಾಗಿ ಮಾಡಿದರು. ಸ್ವಯಂನ ಸುಖ ಮಕ್ಕಳ ಸುಖದಲ್ಲಿ
ಎಂದು ತಿಳಿದರು. ಇಂತಹ ತಂದೆಯ ಸಮಾನ ಇಚ್ಛಾ ಮಾತ್ರಂ ಅವಿದ್ಯೆ ಅರ್ಥಾತ್ ಮಸ್ತ ಫಕೀರ (ಭಿಕ್ಷುಕ)ರಾಗಿ
ಅಖಂಡದಾನಿ ಪರೋಪಕಾರಿಯಾಗಿ ಆಗ ವಿಶ್ವ ಕಲ್ಯಾಣದ ಕಾರ್ಯದಲ್ಲಿ ತೀವ್ರಗತಿ ಬರುತ್ತದೆ. ಕೇಸ್ ಮತ್ತು
ಕಿಸ್ಸೆ(ಕಥೆ) ಸಮಾಪ್ತಿಯಾಗಿ ಬಿಡಲಿ.
ಸ್ಲೋಗನ್:
ಜ್ಞಾನ, ಗುಣ
ಮತ್ತು ಧಾರಣೆಯಲ್ಲಿ ಸಿಂಧುರಾಗಿ, ಸ್ಮೃತಿಯಲ್ಲಿ ಬಿಂದು ಆಗಿ.
ತಮ್ಮ ಶಕ್ತಿಶಾಲಿ ಮನಸ್ಸಾ
ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ
ಈಗ ನೀವು ಮಕ್ಕಳು ತಮ್ಮ
ಶ್ರೇಷ್ಠ ಶಕ್ತಿಶಾಲಿ ಸಂಕಲ್ಪ ಮೂಲಕ ಸಕಾಶ ಕೊಡಿ. ಬಲಹೀನರಿಗೆ ಬಲ ಕೊಡಿ. ತಮ್ಮ ಪುರುಷಾರ್ಥದ ಸಮಯ
ಇನ್ನೊಬ್ಬರಿಗೆ ಸಹಯೋಗ ಕೊಡುವುದರಲ್ಲಿ ತೊಡಗಿಸಿ. ಇನ್ನೊಬ್ಬರಿಗೆ ಸಹಯೋಗ ಕೊಡುವುದು ಅರ್ಥಾತ್
ತಮ್ಮದನ್ನು ಜಮಾ ಮಾಡಿಕೊಳ್ಳುವುದು. ಈಗ ಇಂತಹ ಅಲೆ ಹರಡಿಸಿ - ಸೈಲವೆಷನ್ ಇಲ್ಲ, ಸೈಲವೆಷನ್
ಕೊಡುವುದಾಗಿದೆ. ಕೊಡುವುದರಲ್ಲಿ ತೆಗೆದುಕೊಳ್ಳುವುದು ಸಮಾವೇಶವಾಗುವುದಾಗಿದೆ