07.03.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಇದು ಅನಾದಿ ಅವಿನಾಶಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಲ್ಲಿ ಯಾವ ದೃಶ್ಯವು ಕಳೆಯಿತೋ ಅದು ಪುನಃ ಕಲ್ಪದ ನಂತರವೇ ಪುನರಾವರ್ತನೆಯಾಗುತ್ತದೆ ಆದ್ದರಿಂದ ಸದಾ ನಿಶ್ಚಿಂತರಾಗಿರಿ”

ಪ್ರಶ್ನೆ:
ಈ ಪ್ರಪಂಚವು ತನ್ನ ತಮೋಪ್ರಧಾನ ಸ್ಥಿತಿಯನ್ನು ತಲುಪಿದೆ ಎಂಬುದಕ್ಕೆ ಚಿಹ್ನೆಗಳೇನು?

ಉತ್ತರ:
ದಿನ-ಪ್ರತಿದಿನ ಉಪದ್ರವಗಳಾಗುತ್ತಿರುತ್ತದೆ, ಎಷ್ಟೊಂದು ಗಲಾಟೆಗಳಾಗುತ್ತಿದೆ, ಚೋರರು ಹೇಗೆ ಹೊಡೆದು-ಬಡಿದು, ಚಿತ್ರ ಹಿಂಸೆ ಮಾಡಿ ಲೂಟಿ ಮಾಡಿಕೊಂಡು ಹೋಗುತ್ತಾರೆ. ಮಳೆಗಾಲವಲ್ಲದಿದ್ದರೂ ಮಳೆ ಬೀಳುತ್ತಿರುತ್ತದೆ, ಎಷ್ಟೊಂದು ನಷ್ಟವುಂಟಾಗುತ್ತದೆ, ಇವೆಲ್ಲವೂ ತಮೋಪ್ರಧಾನತೆಯ ಚಿಹ್ನೆಗಳಾಗಿವೆ. ತಮೋಪ್ರಧಾನ ಪ್ರಕೃತಿಯು ದುಃಖ ಕೊಡುತ್ತಿರುತ್ತದೆ. ನೀವು ಮಕ್ಕಳು ನಾಟಕದ ರಹಸ್ಯವನ್ನು ಅರಿತುಕೊಂಡಿದ್ದೀರಿ ಆದ್ದರಿಂದ ಇದು ನಥಿಂಗ್ ನ್ಯೂ (ಹೊಸದೇನಲ್ಲ) ಎಂದು ಹೇಳುತ್ತೀರಿ.

ಓಂ ಶಾಂತಿ.
ಈಗ ನೀವು ಮಕ್ಕಳ ಮೇಲೆ ಜ್ಞಾನದ ಮಳೆಯಾಗುತ್ತಿದೆ, ನೀವು ಸಂಗಮಯುಗಿಯಾಗಿದ್ದೀರಿ ಮತ್ತು ಯಾರೆಲ್ಲಾ ಮನುಷ್ಯರಿದ್ದಾರೆಯೋ ಅವರು ಕಲಿಯುಗಿಗಳಾಗಿದ್ದಾರೆ. ಈ ಸಮಯದ ಪ್ರಪಂಚದಲ್ಲಿ ಅನೇಕ ಮತ-ಮತಾಂತರಗಳಿವೆ. ನೀವು ಮಕ್ಕಳದು ಒಂದೇ ಮತವಾಗಿದೆ. ಈ ಒಂದು ಮತವು ಭಗವಂತನಿಂದಲೇ ಸಿಗುತ್ತದೆ. ಅವರು ಭಕ್ತಿಮಾರ್ಗದಲ್ಲಿ ಯಾವುದೆಲ್ಲಾ ಜಪತಪ, ತೀರ್ಥಯಾತ್ರೆಗಳನ್ನು ಮಾಡುತ್ತಾರೆಯೋ ಅವೆಲ್ಲವೂ ಭಗವಂತನಿಂದ ಸಿಕ್ಕಿರುವ ಮಾರ್ಗಗಳೆಂದು ತಿಳಿಯುತ್ತಾರೆ. ಭಕ್ತಿಯ ನಂತರವೇ ಭಗವಂತನು ಸಿಗುತ್ತಾರೆಂದು ತಿಳಿಯುತ್ತಾರೆ ಆದರೆ ಭಕ್ತಿಯು ಯಾವಾಗ ಪ್ರಾರಂಭವಾಗುತ್ತದೆ ಮತ್ತು ಎಲ್ಲಿಯವರೆಗೆ ನಡೆಯುತ್ತದೆ ಎಂಬುದು ಅವರಿಗೆ ತಿಳಿದೇ ಇಲ್ಲ ಕೇವಲ ಭಕ್ತಿಯಿಂದ ಭಗವಂತ ಸಿಗುವರೆಂದು ಹೇಳಿಬಿಡುತ್ತಾರೆ ಆದ್ದರಿಂದ ಅನೇಕ ಪ್ರಕಾರದ ಭಕ್ತಿಯನ್ನು ಮಾಡುತ್ತಾ ಬರುತ್ತಾರೆ. ಇದನ್ನೂ ಸಹ ತಿಳಿಯುತ್ತಾರೆ - ನಾವು ಪರಂಪರೆಯಿಂದ ಭಕ್ತಿ ಮಾಡುತ್ತಾ ಬಂದಿದ್ದೇವೆ, ಅವಶ್ಯವಾಗಿ ಒಂದುದಿನ ಭಗವಂತನು ಸಿಗುವರು. ಯಾವುದಾದರೊಂದು ರೂಪದಲ್ಲಿ ಭಗವಂತ ಸಿಗುವರು ಅಂದಾಗ ಅವರು ಏನು ಮಾಡುತ್ತಾರೆ? ಅವಶ್ಯವಾಗಿ ಸದ್ಗತಿಯನ್ನು ಕೊಡುತ್ತಾರೆ ಏಕೆಂದರೆ ಅವರು ಸರ್ವರ ಸದ್ಗತಿದಾತನಾಗಿದ್ದಾರೆ. ಭಗವಂತ ಯಾರು? ಯಾವಾಗ ಬರುವರು ಎಂಬುದನ್ನೂ ಸಹ ತಿಳಿದುಕೊಂಡಿಲ್ಲ. ಭಲೆ ಭಿನ್ನ-ಭಿನ್ನ ಪ್ರಕಾರದಲ್ಲಿ ಮಹಿಮೆ ಮಾಡುತ್ತಾರೆ. ಭಗವಂತನು ಪತಿತ-ಪಾವನ, ಜ್ಞಾನಸಾಗರನೆಂದು ಹೇಳುತ್ತಾರೆ. ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಇದೂ ಸಹ ತಿಳಿದಿದೆ - ಭಗವಂತನು ನಿರಾಕಾರನಾಗಿದ್ದಾರೆ, ಹೇಗೆ ನಾವಾತ್ಮಗಳೂ ಸಹ ನಿರಾಕಾರಿಯಾಗಿದ್ದೇವೆ, ನಂತರ ಈ ಶರೀರವನ್ನು ತೆಗೆದುಕೊಳ್ಳುತ್ತೇವೆ. ನಾವೂ ಸಹ ತಂದೆಯ ಜೊತೆ ಪರಮಧಾಮ ನಿವಾಸಿಗಳಾಗಿದ್ದೇವೆ. ನಾವು ಇಲ್ಲಿನ ನಿವಾಸಿಗಳಲ್ಲ, ಆದರೆ ಎಲ್ಲಿಯ ನಿವಾಸಿಗಳೆಂಬುದನ್ನೂ ಸಹ ಯಥಾರ್ಥ ರೀತಿಯಿಂದ ತಿಳಿಸುವುದಿಲ್ಲ. ನಾವು ಸ್ವರ್ಗದಲ್ಲಿ ಹೋಗುತ್ತೇವೆಂದು ಕೆಲವರು ತಿಳಿಯುತ್ತಾರೆ ಆದರೆ ಯಾರೂ ನೇರವಾಗಿ ಸ್ವರ್ಗದಲ್ಲಿ ಹೋಗುವಂತಿಲ್ಲ. ಇನ್ನೂ ಕೆಲವರು ಜ್ಯೋತಿಯು ಜ್ಯೋತಿಯಲ್ಲಿ ಸಮಾವೇಶವಾಗುತ್ತದೆ ಎಂದು ಹೇಳುತ್ತಾರೆ. ವಾಸ್ತವಿಕವಾಗಿ ಇದೂ ಸಹ ತಪ್ಪಾಗಿಬಿಡುತ್ತದೆ. ಜ್ಯೋತಿಯು ಜ್ಯೋತಿಯಲ್ಲಿ ಸಮಾವೇಶವಾಗುವುದೆಂದು ಹೇಳಿ ಆತ್ಮವನ್ನೂ ಸಹ ವಿನಾಶಿ ಮಾಡಿಬಿಡುತ್ತಾರೆ. ಮೋಕ್ಷವೂ ಸಹ ಯಾರಿಗೂ ಸಿಗಲು ಸಾಧ್ಯವಿಲ್ಲ. ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತಿದೆ ಎಂಬುದನ್ನು ಅವರೇ ಹೇಳುತ್ತಾರೆ. ಈ ಚಕ್ರವು ಸುತ್ತುತ್ತಾ ಇರುತ್ತದೆ, ಇತಿಹಾಸ-ಭೂಗೋಳವು ಪುನರಾವರ್ತನೆಯಾಗುತ್ತದೆ. ಆದರೆ ಚಕ್ರವು ಹೇಗೆ ಸುತ್ತುತ್ತದೆ ಎಂಬುದು ತಿಳಿದಿಲ್ಲ. ಚಕ್ರವನ್ನಾಗಲಿ, ಈಶ್ವರನನ್ನಾಗಲಿ ತಿಳಿದಿಲ್ಲ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಅಲೆದಾಡುತ್ತಾರೆ. ಭಗವಂತನು ಯಾರೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಭಗವಂತನನ್ನು ತಂದೆಯೆಂತಲೂ ಹೇಳುತ್ತಾರೆ ಅಂದಮೇಲೆ ಬುದ್ಧಿಯಲ್ಲಿ ಬರಬೇಕಲ್ಲವೆ. ಲೌಕಿಕ ತಂದೆಯಿದ್ದರೂ ಸಹ ನಾವು ಈ ತಂದೆಯನ್ನು ನೆನಪು ಮಾಡುತ್ತೇವೆಂದರೆ ಲೌಕಿಕ ಮತ್ತು ಅಲೌಕಿಕ ಇಬ್ಬರು ತಂದೆಯರಾದರು. ಆ ಪಾರಲೌಕಿಕ ತಂದೆಯೊಂದಿಗೆ ಮಿಲನ ಮಾಡಲು ಇಷ್ಟೊಂದು ಭಕ್ತಿ ಮಾಡುತ್ತಾರೆ. ಅವರು ಪರಲೋಕದಲ್ಲಿರುತ್ತಾರೆ, ಅವಶ್ಯವಾಗಿ ನಿರಾಕಾರಿ ಪ್ರಪಂಚವೂ ಇದೆ.

ನೀವೀಗ ಬಹಳ ಚೆನ್ನಾಗಿ ಅರಿತುಕೊಂಡಿದ್ದೀರಿ - ಮನುಷ್ಯರು ಏನೆಲ್ಲವನ್ನೂ ಮಾಡಿರುವರೋ ಅದೆಲ್ಲವೂ ಭಕ್ತಿಮಾರ್ಗವಾಗಿದೆ. ರಾವಣರಾಜ್ಯದಲ್ಲಿ ಭಕ್ತಿಯೇ ಭಕ್ತಿಯು ನಡೆಯುತ್ತಾ ಬಂದಿದೆ, ಜ್ಞಾನವು ಇಲ್ಲವೇ ಇಲ್ಲ. ಭಕ್ತಿಯಿಂದ ಎಂದೂ ಸದ್ಗತಿಯಾಗಲು ಸಾಧ್ಯವಿಲ್ಲ. ಸದ್ಗತಿ ಮಾಡುವ ತಂದೆಯನ್ನು ನೆನಪು ಮಾಡುತ್ತಾರೆಂದರೆ ಅವಶ್ಯವಾಗಿ ಅವರು ಎಂದಾದರೂ ಬಂದು ಸದ್ಗತಿ ಮಾಡಿರಬೇಕಲ್ಲವೆ. ನಿಮಗೂ ತಿಳಿದಿದೆ - ಇದು ಸಂಪೂರ್ಣ ತಮೋಪ್ರಧಾನ ಪ್ರಪಂಚವಾಗಿದೆ, ಸತೋಪ್ರಧಾನರಿದ್ದರು, ಈಗ ತಮೋಪ್ರಧಾನರಾಗಿದ್ದಾರೆ. ಎಷ್ಟೊಂದು ಉಪದ್ರವಗಳಾಗುತ್ತಿರುತ್ತವೆ. ಎಷ್ಟೊಂದು ಗಲಾಟೆಗಳಾಗಿವೆ. ಕಳ್ಳರು ಲೂಟಿ ಮಾಡುತ್ತಿರುತ್ತಾರೆ, ಹೇಗ್ಹೇಗೆ ಹೊಡೆದು-ಬಡಿದು, ಹಿಂಸೆ ಮಾಡಿ ಹಣವನ್ನು ಲೂಟಿ ಮಾಡಿ ತೆಗೆದುಕೊಂಡು ಹೋಗುತ್ತಾರೆ ಮತ್ತು ಇಂತಿಂತಹ ಔಷಧಿಗಳು ಬಂದಿವೆ ಅದರಿಂದ ಸ್ವಲ್ಪವೇ ಸಮಯದಲ್ಲಿ ಮೂರ್ಛಿತರನ್ನಾಗಿ ಮಾಡಿಬಿಡುತ್ತಾರೆ. ಇದು ರಾವಣರಾಜ್ಯವಾಗಿದೆ. ಇದು ಬಹಳ ದೊಡ್ಡ ಬೇಹದ್ದಿನ ಆಟವಾಗಿದೆ. ಇದು ಸುತ್ತುವುದರಲ್ಲಿ 5000 ವರ್ಷಗಳು ಹಿಡಿಯುತ್ತವೆ, ಆಟವೂ ಸಹ ಡ್ರಾಮದ ತರಹವಾಗಿದೆ. ಇದಕ್ಕೆ ನಾಟಕವೆಂದು ಹೇಳುವುದಿಲ್ಲ ಏಕೆಂದರೆ ನಾಟಕದಲ್ಲಿ ಯಾವ ಪಾತ್ರಧಾರಿಯಾದರೂ ರೋಗಿಯಾದರೆ ಅದಲುಬದಲು ಮಾಡಿಬಿಡುತ್ತಾರೆ ಆದರೆ ಇದರಲ್ಲಿ ಆ ಮಾತು ಸಾಧ್ಯವಿಲ್ಲ. ಇದು ಅನಾದಿ ಡ್ರಾಮವಲ್ಲವೆ. ತಿಳಿಯಿರಿ ಯಾರಾದರೂ ರೋಗಿಯಾದರೆ ರೋಗಿಯಾಗುವುದೂ ಡ್ರಾಮಾದಲ್ಲಿ ಅವರ ಪಾತ್ರವಾಗಿದೆ ಎಂದು ಹೇಳುತ್ತಾರೆ. ಇದು ಅನಾದಿ ಮಾಡಿ-ಮಾಡಲ್ಪಟ್ಟಿದೆ ಮತ್ತ್ಯಾರಿಗಾದರೂ ನೀವು ಡ್ರಾಮಾವೆಂದು ಹೇಳಿದರೆ ತಬ್ಬಿಬ್ಬಾಗುತ್ತಾರೆ. ಇದನ್ನು ನೀವೇ ತಿಳಿದುಕೊಂಡಿದ್ದೀರಿ, ಇದು ಬೇಹದ್ದಿನ ನಾಟಕವಾಗಿದೆ. ಕಲ್ಪದ ನಂತರವೂ ಸಹ ಇದೇ ಪಾತ್ರಧಾರಿಗಳಿರುತ್ತಾರೆ. ಈಗ ಹೇಗೆ ಮಳೆ ಬೀಳುವುದೋ ಕಲ್ಪದ ನಂತರವೂ ಇದೇ ರೀತಿ ಬೀಳುತ್ತದೆ, ಇದೇ ಉಪದ್ರವಗಳಾಗುತ್ತವೆ. ನಿಮಗೆ ತಿಳಿದಿದೆ - ಜ್ಞಾನದ ಮಳೆಯು ಎಲ್ಲರ ಮೇಲೆ ಬೀಳುವುದಿಲ್ಲ ಆದರೆ ತಂದೆಯ ಸಂದೇಶವು ಎಲ್ಲರ ಕಿವಿಗಳವರೆಗೆ ಅವಶ್ಯವಾಗಿ ಮುಟ್ಟುತ್ತದೆ - ಜ್ಞಾನಸಾಗರ ಭಗವಂತನು ಬಂದುಬಿಟ್ಟಿದ್ದಾರೆ. ನಿಮ್ಮದು ಮುಖ್ಯವಾದುದು ಯೋಗವಾಗಿದೆ, ಜ್ಞಾನವನ್ನೂ ನೀವೇ ಕೇಳುತ್ತೀರಿ ಆದರೆ ಸ್ಥೂಲವಾದ ಮಳೆಯು ಇಡೀ ಪ್ರಪಂಚದಲ್ಲಿ ಬೀಳುತ್ತದೆ. ಜ್ಞಾನದ ಮಳೆಯು ಕೇವಲ ನಿಮ್ಮ ಮೇಲೆ ಬೀಳುತ್ತದೆ. ನಿಮ್ಮ ಯೋಗದಿಂದ ಸ್ಥಿರವಾದ ಶಾಂತಿಯು ನೆಲೆಸುತ್ತದೆ. ಸ್ವರ್ಗಸ್ಥಾಪನೆ ಮಾಡುವ ತಂದೆಯು ಬಂದಿದ್ದಾರೆಂದು ನೀವು ಎಲ್ಲರಿಗೂ ತಿಳಿಸುತ್ತೀರಿ ಆದರೆ ಇಂತಹವರು ಅನೇಕರಿದ್ದಾರೆ ತನ್ನನ್ನೇ ಭಗವಂತನೆಂದು ತಿಳಿಯುತ್ತಾರೆ. ಅಂದಮೇಲೆ ನಿಮ್ಮದನ್ನು ಯಾರು ಒಪ್ಪುವರು? ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ನನ್ನನ್ನು ಯಥಾರ್ಥವಾಗಿ ತಿಳಿಯುವವರು ಕೋಟಿಯಲ್ಲಿಯೂ ಕೆಲವರು, ಕೆಲವರಲ್ಲಿಯೂ ಕೆಲವರೇ. ಭಗವಂತ ತಂದೆ ಬಂದಿದ್ದಾರೆಂಬ ಮಾತನ್ನು ನಿಮ್ಮಲ್ಲಿಯೂ ನಂಬರ್ವಾರ್ ತಿಳಿದುಕೊಂಡಿದ್ದಾರೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಲ್ಲವೆ. ಹೇಗೆ ತಂದೆಯನ್ನು ನೆನಪು ಮಾಡುವುದು ಎಂಬುದನ್ನು ತಂದೆಯು ತಿಳಿಸಿದ್ದಾರೆ. ತಮ್ಮನ್ನು ಆತ್ಮವೆಂದು ತಿಳಿಯಿರಿ, ಮನುಷ್ಯರು ದೇಹಾಭಿಮಾನಿಗಳಾಗಿಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ಯಾವಾಗ ಎಲ್ಲಾ ಮನುಷ್ಯಾತ್ಮರು ಪತಿತರಾಗಿಬಿಡುವರೋ ಆಗಲೇ ನಾನು ಬರುತ್ತೇನೆ. ನೀವು ಎಷ್ಟೊಂದು ತಮೋಪ್ರಧಾನರಾಗಿಬಿಟ್ಟಿದ್ದೀರಿ ಆದ್ದರಿಂದ ನಿಮ್ಮನ್ನು ಸತೋಪ್ರಧಾನರನ್ನಾಗಿ ಮಾಡಲು ಕಲ್ಪದ ಮೊದಲೂ ಸಹ ನಾನು ನಿಮಗೆ ಈ ರೀತಿಯಾಗಿ ತಿಳಿಸಿದ್ದೆನು. ನೀವು ತಮೋಪ್ರಧಾನರಿಂದ ಸತೋಪ್ರಧಾನರು ಹೇಗಾಗುತ್ತೀರಿ? ಕೇವಲ ನನ್ನನ್ನು ನೆನಪು ಮಾಡಿ. ನಿಮಗೆ ತನ್ನ ಮತ್ತು ರಚನೆಯ ಪರಿಚಯವನ್ನು ಕೊಡಲು ನಾನು ಬಂದಿದ್ದೇನೆ. ಈ ತಂದೆಯನ್ನು ರಾವಣರಾಜ್ಯದಲ್ಲಿ ಎಲ್ಲರೂ ನೆನಪು ಮಾಡುತ್ತಾರೆ. ಆತ್ಮವು ತನ್ನ ತಂದೆಯನ್ನು ನೆನಪು ಮಾಡುತ್ತದೆ. ತಂದೆಯು ಅಶರೀರಿಯಾಗಿದ್ದಾರೆ, ಬಿಂದುವಾಗಿದ್ದಾರಲ್ಲವೆ. ಅವರ ಹೆಸರನ್ನು ನಂತರ ಇಡಲಾಗಿದೆ. ನಿಮಗೆ ಸಾಲಿಗ್ರಾಮಗಳೆಂತಲೂ ಮತ್ತು ತಂದೆಗೆ ಶಿವನೆಂದು ಹೇಳುತ್ತಾರೆ. ನೀವು ಮಕ್ಕಳಿಗಾದರೂ ಶರೀರದ ಮೇಲೆ ಹೆಸರನ್ನಿಡಲಾಗುತ್ತದೆ ಆದರೆ ತಂದೆಯು ಪರಮ ಆತ್ಮನಾಗಿದ್ದಾರೆ, ಅವರಿಗೆ ತನ್ನದೇ ಆದ ಶರೀರವಿಲ್ಲ, ಇವರಲ್ಲಿ ಪ್ರವೇಶ ಮಾಡಿದ್ದಾರೆ. ಇದು ಬ್ರಹ್ಮಾರವರ ತನುವಾಗಿದೆ, ಇವರಿಗೆ ಶಿವನೆಂದು ಹೇಳುವುದಿಲ್ಲ. ನಿಮ್ಮ ಹೆಸರು ಆತ್ಮನೆಂದಾಗಿದೆ ಆದರೆ ಮತ್ತೆ ನೀವು ಶರೀರದಲ್ಲಿ ಬರುತ್ತೀರಿ. ಅವರು ಪರಮ ಆತ್ಮ, ಎಲ್ಲಾ ಆತ್ಮಗಳ ಪಿತನಾಗಿದ್ದಾರೆ. ಅಂದಾಗ ಎಲ್ಲರಿಗೆ ಇಬ್ಬರು ತಂದೆಯರಾಗಿಬಿಟ್ಟರು. ಒಬ್ಬರು ನಿರಾಕಾರಿ, ಇನ್ನೊಬ್ಬರು ಸಾಕಾರಿ. ಮೂರನೆಯದಾಗಿ ಇವರಿಗೆ (ಬ್ರಹ್ಮಾ) ಅದ್ಭುತ ಅಲೌಕಿಕ ತಂದೆಯೆಂದು ಹೇಳಲಾಗುತ್ತದೆ. ಎಷ್ಟೊಂದು ಮಂದಿ ಮಕ್ಕಳಿದ್ದಾರೆ, ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ಇಷ್ಟೊಂದು ಮಂದಿ ಇದ್ದಾರೆ, ಇದು ಹೇಗೆ? ಎಂಬುದು ಮನುಷ್ಯರಿಗೆ ಅರ್ಥವೇ ಆಗುವುದಿಲ್ಲ. ಇದು ಯಾವ ಪ್ರಕಾರದ ಧರ್ಮವಾಗಿದೆ ಎಂಬುದನ್ನು ಅವರು ತಿಳಿದುಕೊಂಡಿಲ್ಲ. ನೀವು ತಿಳಿದುಕೊಂಡಿದ್ದೀರಿ, ಈ ಕುಮಾರ-ಕುಮಾರಿ ಎನ್ನುವುದು ಪ್ರವೃತ್ತಿ ಮಾರ್ಗದ ಶಬ್ಧವಲ್ಲವೆ. ತಂದೆ, ತಾಯಿ, ಕುಮಾರ ಮತ್ತು ಕುಮಾರಿ. ನೀವು ಭಕ್ತಿಮಾರ್ಗದಲ್ಲಿ ನೀವೇ ಮಾತಾಪಿತಾ....... ಎಂದು ನೆನಪು ಮಾಡುತ್ತೀರಿ. ಈಗ ನಿಮಗೆ ಮಾತಾಪಿತರು ಸಿಕ್ಕಿದ್ದಾರೆ, ನಿಮ್ಮನ್ನು ದತ್ತು ಮಾಡಿಕೊಂಡಿದ್ದಾರೆ, ಸತ್ಯಯುಗದಲ್ಲಿ ದತ್ತು ಮಾಡಿಕೊಳ್ಳಲಾಗುವುದಿಲ್ಲ. ಅಲ್ಲಿ ದತ್ತು ಎನ್ನುವ ಹೆಸರೇ ಇಲ್ಲ. ಇಲ್ಲಾದರೂ ಹೆಸರಿದೆ, ಅವರು ಹದ್ದಿನ ತಂದೆ, ಇವರು ಬೇಹದ್ದಿನ ತಂದೆಯಾಗಿದ್ದಾರೆ. ಬೇಹದ್ದಿನ ದತ್ತಾಗಿದೆ. ಈ ರಹಸ್ಯವು ಬಹಳ ತಿಳಿದುಕೊಳ್ಳುವಂತಹದಾಗಿದೆ. ನೀವು ಪೂರ್ಣರೀತಿಯಿಂದ ಯಾರಿಗೂ ತಿಳಿಸಿಕೊಡುವುದಿಲ್ಲ, ಮೊಟ್ಟಮೊದಲಿಗೆ ಯಾರಾದರೂ ಒಳಗೆ ಬರುತ್ತಾರೆಂದರೆ ನಾವು ಗುರುವಿನ ದರ್ಶನ ಮಾಡಲು ಬಂದಿದ್ದೇವೆಂದು ತಿಳಿಸಿದರೆ ಆಗ ಹೇಳಿ - ಇದು ಮಂದಿರವಲ್ಲ, ಬೋರ್ಡಿನ ಮೇಲೆ ನೋಡಿ ಏನೆಂದು ಬರೆಯಲ್ಪಟ್ಟಿದೆ! ಬ್ರಹ್ಮಾಕುಮಾರ-ಕುಮಾರಿಯರು ಅನೇಕರಿದ್ದಾರೆ, ಇವರೆಲ್ಲರೂ ಪ್ರಜಾಪಿತನ ಮಕ್ಕಳಾದರು, ನೀವು ಸಹ ಪ್ರಜೆಗಳಾದಿರಿ. ಭಗವಂತನು ಸೃಷ್ಟಿಯನ್ನು ರಚಿಸುತ್ತಾರೆ, ಬ್ರಹ್ಮಾಮುಖಕಮಲದ ಮೂಲಕ ನಮ್ಮನ್ನು ರಚಿಸಿದ್ದಾರೆ. ನಾವು ಹೊಸಸೃಷ್ಟಿಯವರಾಗಿದ್ದೇವೆ, ನೀವು ಹಳೆಯ ಸೃಷ್ಟಿಯವರಾಗಿದ್ದೀರಿ. ಸಂಗಮಯುಗದಲ್ಲಿಯೇ ಹೊಸಸೃಷ್ಟಿಯ ರಚನೆಯಾಗುತ್ತದೆ, ಇದು ಪುರುಷೋತ್ತಮರಾಗುವ ಯುಗವಾಗಿದೆ. ನೀವು ಸಂಗಮಯುಗದಲ್ಲಿ ನಿಂತಿದ್ದೀರಿ, ಅವರು ಕಲಿಯುಗದಲ್ಲಿ ನಿಂತಿದ್ದಾರೆ. ಹೇಗೆ ಇದು ಪಾರ್ಟೀಷನ್ ಆಗಿಬಿಟ್ಟಿದೆ, ಇತ್ತೀಚೆಗಂತೂ ನೋಡಿ ಎಷ್ಟೊಂದು ಪಾರ್ಟೀಷನ್ ಆಗಿಬಿಟ್ಟಿದೆ! ಪ್ರತಿಯೊಂದು ಧರ್ಮದವರು ನಾವು ನಮ್ಮ ಧರ್ಮದ ಪ್ರಜೆಗಳನ್ನು ಸಂಭಾಲನೆ ಮಾಡುತ್ತೇವೆ. ನಮ್ಮ ಧರ್ಮವನ್ನು, ನಮ್ಮ ಜೊತೆಗಾರರನ್ನು ಸುಖಿಯಾಗಿಡಬೇಕೆಂದು ತಿಳಿಯುತ್ತಾರೆ. ನಮ್ಮ ರಾಜ್ಯದಿಂದ ಈ ಪದಾರ್ಥವು ಹೊರಗೆ ಹೋಗದಿರಲಿ, ಬೇರೆ ರಾಜ್ಯಕ್ಕೆ ಹೋಗಬಾರದೆಂದು ಪ್ರತಿಯೊಬ್ಬರೂ ಹೇಳುತ್ತಾರೆ. ಮೊದಲು ಪ್ರಜೆಗಳ ಮೇಲೆ ರಾಜನ ಆಜ್ಞೆಯು ನಡೆಯುತ್ತಿತ್ತು, ರಾಜನಿಗೆ ಅನ್ನದಾತ, ರಕ್ಷಕ ಎಂದು ಹೇಳುತ್ತಿದ್ದರು, ಈಗಂತೂ ಯಾರೂ ರಾಜ-ರಾಣಿಯರಿಲ್ಲ, ಎಲ್ಲವೂ ತುಂಡು-ತುಂಡುಗಳಾಗಿಬಿಟ್ಟಿವೆ, ಎಷ್ಟೊಂದು ಉಪದ್ರವಗಳಾಗುತ್ತವೆ. ಆಕಸ್ಮಿಕವಾಗಿ ಪ್ರವಾಹವು ಬಂದುಬಿಡುತ್ತದೆ, ಭೂಕಂಪಗಳಾಗುತ್ತಿರುತ್ತವೆ, ಇವೆಲ್ಲವೂ ದುಃಖದ ಮೃತ್ಯುವಾಗಿದೆ.

ಈಗ ನೀವು ಬ್ರಾಹ್ಮಣರು ತಿಳಿದುಕೊಂಡಿದ್ದೀರಿ - ಈಗ ನಾವೆಲ್ಲರೂ ಪರಸ್ಪರ ಸಹೋದರ-ಸಹೋದರರಾಗಿದ್ದೇವೆ. ಅಂದಾಗ ನಾವು ಪರಸ್ಪರ ಬಹಳ-ಬಹಳ ಪ್ರೀತಿಯಿಂದ ಕ್ಷೀರಖಂಡವಾಗಿರಬೇಕಾಗಿದೆ. ನಾವು ಒಬ್ಬ ತಂದೆಯ ಮಕ್ಕಳಾಗಿದ್ದೇವೆಂದರೆ ಪರಸ್ಪರ ಬಹಳ ಪ್ರೀತಿಯಿರಬೇಕು. ಹುಲಿ ಮತ್ತು ಹಸು ಒಮ್ಮೆಲೆ ಪಕ್ಕಾ ಶತ್ರುಗಳಾಗಿರುವ ಪ್ರಾಣಿಗಳು ರಾಮರಾಜ್ಯದಲ್ಲಿ ಒಟ್ಟಿಗೇ ನೀರು ಕುಡಿಯುತ್ತವೆ. ಇಲ್ಲಂತೂ ನೋಡಿ, ಮನೆ-ಮನೆಯಲ್ಲಿ ಎಷ್ಟೊಂದು ಹೊಡೆದಾಟವಿದೆ. ದೇಶ-ದೇಶದ ನಡುವೆ ಜಗಳ, ರಾಜ್ಯ-ರಾಜ್ಯದ ನಡುವೆ ಜಗಳ, ಪರಸ್ಪರ ದ್ವೇಷಿಗಳಾಗಿಬಿಡುತ್ತಾರೆ. ಪರಸ್ಪರ ಒಡಕುಂಟಾಗುತ್ತದೆ. ಅನೇಕ ಮತಗಳಿವೆ. ಈಗ ನಿಮಗೆ ತಿಳಿದಿದೆ - ನಾವೆಲ್ಲರೂ ಅನೇಕ ಬಾರಿ ತಂದೆಯಿಂದ ಆಸ್ತಿಯನ್ನು ಪಡೆದಿದ್ದೇವೆ ಮತ್ತು ಕಳೆದುಕೊಂಡಿದ್ದೇವೆ ಅರ್ಥಾತ್ ರಾವಣನ ಮೇಲೆ ಜಯಗಳಿಸುತ್ತೇವೆ ಮತ್ತು ಸೋಲುತ್ತೇವೆ, ಒಬ್ಬ ತಂದೆಯ ಶ್ರೀಮತದನುಸಾರ ನಾವು ವಿಶ್ವದ ಮಾಲೀಕರಾಗಿಬಿಡುತ್ತೇವೆ ಆದ್ದರಿಂದ ಅವರಿಗೆ ಶ್ರೇಷ್ಠಾತಿಶ್ರೇಷ್ಠ ಭಗವಂತನೆಂದು ಕರೆಯಲಾಗುತ್ತದೆ. ಸರ್ವರ ದುಃಖಹರ್ತ, ಸುಖಕರ್ತನೆಂದು ಕರೆಯಲಾಗುತ್ತದೆ. ಅವರು ಈಗ ನಿಮಗೆ ಸುಖದ ಮಾರ್ಗವನ್ನು ತಿಳಿಸುತ್ತಿದ್ದಾರೆ ಅಂದಾಗ ನೀವು ಮಕ್ಕಳು ಪರಸ್ಪರ ಕ್ಷೀರಖಂಡವಾಗಿರಬೇಕು, ಪ್ರಪಂಚದಲ್ಲಂತೂ ಎಲ್ಲರೂ ಉಪ್ಪುನೀರಾಗಿ ವರ್ತಿಸುತ್ತಾರೆ. ಒಬ್ಬರು ಇನ್ನೊಬ್ಬರನ್ನು ಕೊಲ್ಲುವುದಕ್ಕೂ ತಡಮಾಡುವುದಿಲ್ಲ. ನೀವು ಈಶ್ವರೀಯ ಸಂತಾನರು ಕ್ಷೀರಖಂಡವಾಗಿರಬೇಕು. ಈಶ್ವರೀಯ ಸಂತಾನರು ದೇವತೆಗಳಿಗಿಂತಲೂ ಶ್ರೇಷ್ಠರಾಗಿದ್ದೀರಿ ಏಕೆಂದರೆ ನೀವು ತಂದೆಗೆ ಎಷ್ಟೊಂದು ಸಹಯೋಗಿಗಳಾಗಿದ್ದೀರಿ. ಪುರುಷೋತ್ತಮರನ್ನಾಗಿ ಮಾಡಲು ಎಷ್ಟೊಂದು ಸಹಯೋಗಿಗಳಾಗಿದ್ದೀರಿ ಆದ್ದರಿಂದ ನಿಮ್ಮ ಮನಸ್ಸಿನಲ್ಲಿ ಬರಬೇಕು - ನಾವು ಪುರುಷೋತ್ತಮರಾಗಿದ್ದೇವೆ ಅಂದಮೇಲೆ ನಮ್ಮಲ್ಲಿ ದೈವೀಗುಣಗಳಿವೆಯೇ? ಆಸುರೀ ಗುಣಗಳಿದ್ದರೆ ತಂದೆಯ ಮಗುವೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಸದ್ಗುರುವಿನ ನಿಂದಕರು ಪದವಿಯನ್ನು ಪಡೆಯಲು ಸಾಧ್ಯವಿಲ್ಲವೆಂದು ಹೇಳಲಾಗಿದೆ. ಆ ಕಲಿಯುಗೀ ಗುರುಗಳು ಈ ಮಾತನ್ನು ತಮಗಾಗಿ ಹೇಳಿಕೊಂಡು ಮನುಷ್ಯರನ್ನು ಹೆದರಿಸುತ್ತಾರೆ. ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಯಾರು ತಂದೆಯ ಹೆಸರನ್ನು ಪ್ರಸಿದ್ಧ ಮಾಡುವರೋ, ಕ್ಷೀರಖಂಡವಾಗಿ ವರ್ತಿಸುವರೋ ಅವರೇ ಸುಪುತ್ರರಾಗಿದ್ದಾರೆ. ತಂದೆಯು ಈ ಮಾತನ್ನು ಯಾವಾಗಲೂ ತಿಳಿಸುತ್ತಾರೆ - ಮಕ್ಕಳೇ, ಕ್ಷೀರಖಂಡವಾಗಿರಿ, ಉಪ್ಪುನೀರಾಗಿ ಎಂದಿಗೂ ಪರಸ್ಪರ ಹೊಡೆದಾಡಬೇಡಿ. ನೀವಿಲ್ಲಿ ಕ್ಷೀರಖಂಡವಾಗಬೇಕಾಗಿದೆ. ನಿಮ್ಮಲ್ಲಿ ಪರಸ್ಪರ ಬಹಳ ಪ್ರೀತಿಯಿರಬೇಕು ಏಕೆಂದರೆ ನೀವು ಈಶ್ವರೀಯ ಸಂತಾನರಲ್ಲವೆ. ಈಶ್ವರನು ಅತಿಪ್ರಿಯನಾಗಿದ್ದಾರೆ, ಆದ್ದರಿಂದಲೇ ಎಲ್ಲರೂ ಅವರನ್ನೇ ನೆನಪು ಮಾಡುತ್ತಾರೆ ಆದ್ದರಿಂದ ಪರಸ್ಪರ ನಿಮ್ಮಲ್ಲಿಯೂ ಸಹ ಬಹಳ ಪ್ರೀತಿಯಿರಬೇಕು. ಇಲ್ಲವಾದರೆ ತಂದೆಯ ಗೌರವವನ್ನು ಕಳೆಯುತ್ತೀರಿ. ಈಶ್ವರನ ಮಕ್ಕಳು ಪರಸ್ಪರ ಉಪ್ಪುನೀರಾಗಿ ವರ್ತಿಸಲು ಹೇಗೆ ಸಾಧ್ಯ? ಹಾಗಿದ್ದರೆ ಮತ್ತೆ ಪದವಿಯನ್ನು ಹೇಗೆ ಪಡೆಯುತ್ತೀರಿ! ಆದ್ದರಿಂದ ಪರಸ್ಪರ ಕ್ಷೀರಖಂಡವಾಗಿ ಇಲ್ಲಿ ಉಪ್ಪುನೀರಾಗುತ್ತೀರೆಂದರೆ ಸ್ವಲ್ಪವೂ ಧಾರಣೆಯಾಗುವುದಿಲ್ಲ. ಒಂದುವೇಳೆ ತಂದೆಯ ಆದೇಶದಂತೆ ನಡೆಯದಿದ್ದರೆ ಉತ್ತಮಪದವಿಯನ್ನು ಹೇಗೆ ಪಡೆಯುವಿರಿ? ದೇಹಾಭಿಮಾನದಲ್ಲಿ ಬರುವುದರಿಂದಲೇ ಪರಸ್ಪರ ಹೊಡೆದಾಡುತ್ತಾರೆ, ದೇಹೀ-ಅಭಿಮಾನಿಯಾಗಿರಿ ಆಗ ಏನೂ ಏರುಪೇರುಗಳಾಗುವುದಿಲ್ಲ. ತಂದೆಯು ಸಿಕ್ಕಿದ್ದಾರೆಂದಮೇಲೆ ದೈವೀಗುಣಗಳನ್ನೂ ಸಹ ಧಾರಣೆ ಮಾಡಬೇಕಾಗಿದೆ. ಆತ್ಮವು ತಂದೆಯ ತರಹ ಆಗಬೇಕಾಗಿದೆ. ಹೇಗೆ ತಂದೆಯಲ್ಲಿ ಪವಿತ್ರತೆ, ಸುಖ, ಶಾಂತಿ, ಪ್ರೀತಿ ಎಲ್ಲವೂ ಇದೆಯೋ ಅದೇರೀತಿ ನೀವೂ ಆಗಬೇಕಾಗಿದೆ ಇಲ್ಲದಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಚೆನ್ನಾಗಿ ಓದಿ ತಂದೆಯಿಂದ ಉತ್ತಮ ಆಸ್ತಿಯನ್ನು ಪಡೆಯಬೇಕಾಗಿದೆ. ಯಾರು ಅನೇಕರ ಕಲ್ಯಾಣ ಮಾಡುವರೋ ಅವರೇ ರಾಜ-ರಾಣಿಯರಾಗುತ್ತಾರೆ. ಉಳಿದವರು ಹೋಗಿ ದಾಸ-ದಾಸಿಯರಾಗುತ್ತಾರೆ. ಯಾರ್ಯಾರು ಏನಾಗುತ್ತಾರೆಂಬುದನ್ನು ತಿಳಿದುಕೊಳ್ಳಬಹುದಲ್ಲವೆ. ಚೆನ್ನಾಗಿ ಓದುವವರು ನಾವು ಈ ಲೆಕ್ಕದಿಂದ ತಂದೆಯ ಹೆಸರನ್ನು ಹೇಗೆ ಪ್ರಸಿದ್ಧಗೊಳಿಸಬಹುದು ಎಂಬುದನ್ನು ತಾವೂ ತಿಳಿದುಕೊಳ್ಳಬಹುದು. ಈಶ್ವರನ ಮಕ್ಕಳಂತೂ ಬಹಳ ಪ್ರಿಯರಾಗಿರಬೇಕು. ನಿಮ್ಮನ್ನು ಯಾರೇ ನೋಡಲಿ ಅವರು ಖುಷಿಯಾಗಿಬಿಡಬೇಕು. ಅಂತಹ ಮಕ್ಕಳೇ ತಂದೆಗೂ ಪ್ರಿಯರೆನಿಸುತ್ತಾರೆ. ಮೊದಲು ಮನೆಯನ್ನು ಸುಧಾರಣೆ ಮಾಡಿ. ಮೊದಲು ಮನೆ ನಂತರ ಅನ್ಯರನ್ನು ಸುಧಾರಣೆ ಮಾಡಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿ ಕಮಲಪುಷ್ಪ ಸಮಾನ ಪವಿತ್ರ ಮತ್ತು ಕ್ಷೀರಖಂಡವಾಗಿರಿ. ಯಾರೇ ನೋಡಲಿ, ಓಹೋ ಇವರ ಮನೆಯಲ್ಲಿ ಸ್ವರ್ಗದಂತಿದೆ ಎಂದು ಹೇಳುವಂತಿರಲಿ. ಅಜ್ಞಾನಕಾಲದಲ್ಲಿಯೂ ಬಾಬಾರವರು ಇಂತಹ ಮನೆಯನ್ನು ನೋಡಿದ್ದಾರೆ 6-7 ಮಂದಿ ಮಕ್ಕಳು ವಿವಾಹ ಮಾಡಿಕೊಂಡಿರುವವರೆಲ್ಲರೂ ಒಟ್ಟಿಗೆ ಇರುತ್ತಾರೆ ಎಲ್ಲರೂ ಮುಂಜಾನೆಯೆದ್ದು ಭಕ್ತಿ ಮಾಡುತ್ತಾರೆ. ಮನೆಯಲ್ಲಿ ಬಹಳ ಶಾಂತಿಯು ನೆಲೆಸಿರುತ್ತದೆ ಅಂದಮೇಲೆ ಇಲ್ಲಿ ನಿಮ್ಮದು ಈಶ್ವರೀಯ ಕುಟುಂಬವಾಗಿದೆ. ಮನೆಯಲ್ಲಿ ಮಗನು ವಿವಾಹ ಮಾಡಿಕೊಂಡಿದರೆ, ತಂದೆಯ ಆಸ್ತಿಯು ಸಿಗಲು ಸಾಧ್ಯವಿಲ್ಲ. ಅವರು ಹೋಗಿ ತಮ್ಮನ್ನು ಸಂಭಾಲನೆ ಮಾಡಿಕೊಳ್ಳಲಿ. ಹಂಸ ಮತ್ತು ಕೊಕ್ಕರೆ ಒಟ್ಟಿಗೆ ಇರಲು ಸಾಧ್ಯವಿಲ್ಲ. ನೀವಂತೂ ಹಂಸಗಳಾಗಬೇಕಾಗಿದೆ. ನೀವು ಉಪ್ಪುನೀರಾಗಿ ವರ್ತಿಸಿದರೆ ತಂದೆಯು ನಿಮ್ಮಿಂದ ಖುಷಿಪಡುವುದಿಲ್ಲ. ನೀವು ಹೆಸರನ್ನು ಎಷ್ಟೊಂದು ಹಾಳುಮಾಡುತ್ತೀರಿ ಎಂದು ತಂದೆಯು ಹೇಳುತ್ತಾರಲ್ಲವೆ. ಒಂದುವೇಳೆ ನೀವು ಕ್ಷೀರಖಂಡವಾಗಿ ವರ್ತಿಸುವುದಿಲ್ಲವೆಂದರೆ ಸ್ವರ್ಗದಲ್ಲಿ ಶ್ರೇಷ್ಠಪದವಿಯನ್ನು ಪಡೆಯಲು ಸಾಧ್ಯವಿಲ್ಲ, ಬಹಳ ಶಿಕ್ಷೆಯನ್ನು ಅಭವಿಸುವಿರಿ. ಇಂತಹ ತಂದೆಯ ಮಕ್ಕಳಾದ ಮೇಲೂ ಸಹ ಉಪ್ಪುನೀರಾಗಿ ವರ್ತಿಸುತ್ತಾರೆಂದರೆ ಒಂದಕ್ಕೆ ನೂರರಷ್ಟು ಶಿಕ್ಷೆಯನ್ನನುಭವಿಸುತ್ತಾರೆ ಮತ್ತು ನಾವು ಏನು ಪದವಿಯನ್ನು ಪಡೆಯುತ್ತೇವೆಂದು ಸಾಕ್ಷಾತ್ಕಾರವೂ ಆಗುತ್ತಿರುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸದಾ ಗಮನವಿರಲಿ - ನಾವು ಈಶ್ವರನ ಮಕ್ಕಳಾಗಿದ್ದೇವೆ, ನಾವು ಬಹಳ ಪ್ರಿಯರಾಗಿ ವರ್ತಿಸಬೇಕಾಗಿದೆ. ಪರಸ್ಪರ ಎಂದೂ ಉಪ್ಪುನೀರಾಗಬಾರದು. ಮೊದಲು ತಮ್ಮನ್ನು ನಂತರ ಅನ್ಯರನ್ನೂ ಸುಧಾರಣೆ ಮಾಡುವ ಶಿಕ್ಷಣ ಕೊಡಬೇಕಾಗಿದೆ.

2. ಹೇಗೆ ತಂದೆಯಲ್ಲಿ ಸುಖ, ಶಾಂತಿ, ಪವಿತ್ರತೆ, ಪ್ರೀತಿ ಮೊದಲಾದ ಎಲ್ಲಾ ಗುಣಗಳಿವೆಯೋ ಹಾಗೆಯೇ ತಂದೆಯ ಸಮಾನರಾಗಬೇಕು. ಸದ್ಗುರುವಿನ ನಿಂದಕರಾಗುವಂತಹ ಯಾವುದೇ ಕರ್ಮವನ್ನು ಮಾಡಬಾರದು. ತಮ್ಮ ಚಲನೆಯಿಂದ ತಂದೆಯ ಹೆಸರನ್ನು ಪ್ರಸಿದ್ಧಗೊಳಿಸಬೇಕಾಗಿದೆ.

ವರದಾನ:
ತಂದೆ ಮತ್ತು ಪ್ರಾಪ್ತಿಯ ಸ್ಮೃತಿಯಿಂದ ಸದಾ ಸಾಹಸ-ಉಲ್ಲಾಸದಲ್ಲಿರುವಂತಹ ಏಕರಸ, ಅಚಲ ಭವ

ಜನ್ಮಪಡೆದೊಡನೆ ತಂದೆಯ ಮೂಲಕ ಏನೇನು ಪ್ರಾಪ್ತಿಯಾಯಿತು ಆ ಪಟ್ಟಿಯನ್ನು ಸದಾ ಮುಂದಿಟ್ಟುಕೊಳ್ಳಿ. ಯಾವಾಗ ಪ್ರಾಪ್ತಿ ಅಟಲ, ಅಚಲವಾಗಿರುತ್ತದೆ ಆಗ ಸಾಹಸ ಮತ್ತು ಉಲ್ಲಾಸವೂ ಸಹ ಅಚಲವಾಗಿರಬೇಕು. ಅಚಲವಾಗಿರುವ ಬದಲು ಒಂದುವೇಳೆ ಮನಸ್ಸು ಏನಾದರೂ ಚಂಚಲವಾಗಿಬಿಟ್ಟರೆ ಅಥವಾ ಸ್ಥಿತಿ ಚಂಚಲತೆಯಲ್ಲಿ ಬಂದುಬಿಟ್ಟರೆ ಅದರ ಕಾರಣವಾಗಿದೆ ತಂದೆ ಮತ್ತು ಪ್ರಾಪ್ತಿಯನ್ನು ಸದಾ ಮುಂದಿಟ್ಟುಕೊಳ್ಳುವುದಿಲ್ಲ. ಸರ್ವ ಪ್ರಾಪ್ತಿಗಳ ಅನುಭವ ಸದಾ ಎದುರಿಗೆ ಅಥವಾ ಸ್ಮೃತಿಯಲ್ಲಿದ್ದಾಗ ಎಲ್ಲಾ ವಿಘ್ನಗಳು ಸಮಾಪ್ತಿಯಾಗಿಬಿಡುವುದು, ಸದಾ ಹೊಸ ಉಮಂಗ, ಹೊಸ ಉಲ್ಲಾಸವಿರುತ್ತದೆ. ಸ್ಥಿತಿ ಏಕರಸ ಮತ್ತು ಅಚಲವಾಗಿರುತ್ತದೆ.

ಸ್ಲೋಗನ್:
ಯಾವುದೇ ಪ್ರಕಾರದ ಸೇವೆಯಲ್ಲಿ ಸದಾ ಸಂತುಷ್ಠರಾಗಿರುವುದೇ ಒಳ್ಳೆಯ ಮಾಕ್ರ್ಸ್ ತೆಗೆದುಕೊಳ್ಳುವುದು.

ಅವ್ಯಕ್ತ ಸೂಚನೆ - ಸತ್ಯ ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ತಾವು ಬ್ರಾಹ್ಮಣ ಮಕ್ಕಳು ಬಹಳ ಬಹಳ ರಾಯಲ್ ಆಗಿದ್ದೀರಿ. ತಮ್ಮ ಚಹರೆ ಹಾಗೂ ಚಲನೆ ಎರಡು ಸತ್ಯತೆಯ ಸಭ್ಯತೆಯನ್ನು ಅನುಭವ ಮಾಡಿಸಲಿ. ಹಾಗೆ ನೋಡಿದರೆ ರಾಯಲ್ ಆತ್ಮಗಳನ್ನು ಸಬ್ಯತೆಯ ದೇವತೆಗಳು ಎಂದು ಹೇಳಲಾಗುತ್ತದೆ. ಅವರ ಮಾತನಾಡುವುದು, ನೋಡುವುದು, ನಡೆಯುವುದು ತಿನ್ನುವುದು- ಕುಡಿಯುವುದು, ಕುಳಿತುಕೊಳ್ಳುವುದು- ಎದ್ದೇಳುವುದು, ಪ್ರತಿಯೊಂದು ಕರ್ಮದಲ್ಲಿ ಸಭ್ಯತೆ ಇದೆ, ಸತ್ಯತೆ ಸ್ವತಹವಾಗಿಯೇ ಕಾಣಿಸುತ್ತದೆ. ಈ ರೀತಿಯಲ್ಲ ನಾನಂತೂ ಸತ್ಯತೆಯನ್ನು ಸಿದ್ದ ಮಾಡುತ್ತಿದ್ದೇನೆ ಆದರೆ ನನ್ನಲ್ಲಿ ಸಭ್ಯತೆ ಇಲ್ಲ. ಇದಂತೂ ತಪ್ಪಾಗಿದೆ.