07.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಶಾಂತಿಯಲ್ಲಿರುವುದು, ಹೆಚ್ಚು ಶಬ್ಧದಲ್ಲಿ ಬರದೇ ಇರುವುದು, ಮಧುರವಾಗಿ ಮಾತನಾಡುವುದು ಎಲ್ಲದಕ್ಕಿಂತ ಒಳ್ಳೆಯ ದೈವೀಗುಣಗಳಾಗಿದೆ, ನೀವು ಮಕ್ಕಳೀಗ ಟಾಕಿಯಿಂದ ಮೂವಿ, ಮೂವೀಯಿಂದ ಸೈಲೆನ್ಸ್ ನಲ್ಲಿ ಹೋಗುತ್ತೀರಿ ಆದ್ದರಿಂದ ಹೆಚ್ಚು ಶಬ್ಧದಲ್ಲಿ ಹೋಗಬೇಡಿ”

ಪ್ರಶ್ನೆ:
ಯಾವ ಮುಖ್ಯಧಾರಣೆಯ ಆಧಾರದಿಂದ ಸರ್ವ ದೈವೀಗುಣಗಳು ಸ್ವತಹವಾಗಿಯೇ ಬಂದುಬಿಡುತ್ತವೆ?

ಉತ್ತರ:
ಮುಖ್ಯವಾದುದು ಪವಿತ್ರತೆಯ ಧಾರಣೆಯಾಗಿದೆ. ದೇವತೆಗಳು ಪವಿತ್ರವಾಗಿದ್ದಾರೆ ಆದ್ದರಿಂದ ಅವರಲ್ಲಿ ದೈವೀಗುಣಗಳಿವೆ. ಈ ಪ್ರಪಂಚದಲ್ಲಿ ಯಾರಲ್ಲಿಯೂ ದೈವೀಗುಣಗಳಿರಲು ಸಾಧ್ಯವಿಲ್ಲ. ರಾವಣರಾಜ್ಯದಲ್ಲಿ ದೈವೀಗುಣಗಳು ಎಲ್ಲಿಂದ ಬರುತ್ತವೆ! ನೀವು ರಾಯಲ್ ಮಕ್ಕಳೀಗ ದೈವೀಗುಣವನ್ನು ಧಾರಣೆ ಮಾಡುತ್ತಿದ್ದೀರಿ.

ಗೀತೆ:
ಭೋಲಾನಾಥನಿಗಿಂತ ಭಿನ್ನ ................

ಓಂ ಶಾಂತಿ.
ಈಗ ಮಕ್ಕಳು ತಿಳಿದುಕೊಂಡಿದ್ದೀರಿ - ಕೆಟ್ಟಿರುವವರನ್ನು ಸುಧಾರಣೆ ಮಾಡುವವರು ಒಬ್ಬರೇ ಆಗಿದ್ದಾರೆ. ಭಕ್ತಿಮಾರ್ಗದಲ್ಲಿ ಅನೇಕರ ಬಳಿ ಹೋಗುತ್ತಾರೆ. ಎಷ್ಟೊಂದು ತೀರ್ಥಯಾತ್ರೆಗಳನ್ನು ಮಾಡುತ್ತಾರೆ. ಕೆಟ್ಟಿರುವವರನ್ನು ಸರಿಪಡಿಸುವವರು, ಪತಿತರನ್ನು ಪಾವನ ಮಾಡುವವರು ಒಬ್ಬರೇ ಆಗಿದ್ದಾರೆ, ಸದ್ಗತಿದಾತ, ಮಾರ್ಗದರ್ಶಕ, ಮುಕ್ತಿದಾತನು ಅವರೊಬ್ಬರೇ ಆಗಿದ್ದಾರೆ. ಈಗ ಗಾಯನವಿದೆ ಆದರೆ ಅನೇಕ ಮನುಷ್ಯರು ಅನೇಕ ಧರ್ಮ, ಮತ, ಪಂಥ, ಶಾಸ್ತ್ರಗಳಿರುವ ಕಾರಣ ಅನೇಕ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಸುಖ, ಶಾಂತಿಗಾಗಿ ಸತ್ಸಂಗಗಳಿಗೆ ಹೋಗುತ್ತಾರಲ್ಲವೆ. ಯಾರು ಹೋಗುವುದಿಲ್ಲವೋ ಅವರು ಮಾಯಾವೀ ಮಸ್ತಿಯಲ್ಲಿಯೇ ಮಸ್ತರಾಗಿರುತ್ತಾರೆ. ಇದನ್ನು ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ಕಲಿಯುಗದ ಅಂತ್ಯವಾಗಿದೆ. ಮನುಷ್ಯರು ಇದನ್ನು ಸಹ ತಿಳಿದುಕೊಂಡಿಲ್ಲ - ಸತ್ಯಯುಗವು ಯಾವಾಗ ಬರುತ್ತದೆ? ಈಗೇನಿದೆ? ಇದನ್ನಂತೂ ಚಿಕ್ಕಮಕ್ಕಳೂ ಸಹ ತಿಳಿದುಕೊಳ್ಳಬಹುದಾಗಿದೆ. ಹೊಸಪ್ರಪಂಚದಲ್ಲಿ ಸುಖವು, ಹಳೆಯ ಪ್ರಪಂಚದಲ್ಲಿ ಅವಶ್ಯವಾಗಿ ದುಃಖವು ಇರುತ್ತದೆ. ಈ ಹಳೆಯ ಪ್ರಪಂಚದಲ್ಲಿ ಅನೇಕ ಮನುಷ್ಯರು, ಅನೇಕ ಧರ್ಮಗಳಿವೆ. ನೀವು ಯಾರಿಗೆ ಬೇಕಾದರೂ ತಿಳಿಸಬಲ್ಲಿರಿ. ಇದು ಕಲಿಯುಗವಾಗಿದೆ, ಸತ್ಯಯುಗವು ಕಳೆದಿದೆ. ಅಲ್ಲಿ ಒಂದೇ ಆದಿಸನಾತನ ದೇವಿ-ದೇವತಾಧರ್ಮವಿತ್ತು ಮತ್ತ್ಯಾವುದೇ ಧರ್ಮವಿರಲಿಲ್ಲ. ತಂದೆಯು ಅನೇಕ ಬಾರಿ ತಿಳಿಸಿದ್ದಾರೆ. ಆದರೂ ತಿಳಿಸುತ್ತಾರೆ- ಯಾರೇ ಬರಲಿ ಅವರಿಗೆ ಹೊಸ ಪ್ರಪಂಚ ಹಾಗೂ ಹಳೆಯ ಪ್ರಪಂಚದ ಅಂತರವನ್ನು ತೋರಿಸಬೇಕು. ಭಲೆ ಅವರೇನಾದರೂ ಹೇಳಲಿ - ಕೆಲವರು 10,000 ವರ್ಷ ಆಯಸ್ಸೆಂದು ಹೇಳುತ್ತಾರೆ, ಇನ್ನೂ ಕೆಲವರು 30 ಸಾವಿರ ವರ್ಷಗಳಿದೆಯೆಂದು ಹೇಳುತ್ತಾರೆ. ಅನೇಕ ಮತಗಳಿವೆಯಲ್ಲವೆ. ಈಗ ಅವರ ಬಳಿಯಿರುವುದು ಶಾಸ್ತ್ರಗಳ ಮತವಾಗಿದೆ. ಅನೇಕ ಶಾಸ್ತ್ರ, ಅನೇಕ ಮತಗಳು ಮನುಷ್ಯರ ಮತವಾಗಿದೆಯಲ್ಲವೆ. ಶಾಸ್ತ್ರಗಳನ್ನು ಬರೆಯುವುದೇ ಮನುಷ್ಯರಲ್ಲವೆ! ದೇವತೆಗಳು ಯಾವುದೇ ಶಾಸ್ತ್ರಗಳನ್ನು ಬರೆಯುವುದಿಲ್ಲ. ಸತ್ಯಯುಗದಲ್ಲಿ ದೇವಿ-ದೇವತಾ ಧರ್ಮವಿರುತ್ತದೆ, ಅವರನ್ನು ಮನುಷ್ಯರೆಂದು ಕರೆಯಲಾಗುವುದಿಲ್ಲ. ಅಂದಾಗ ಯಾರೇ ಮಿತ್ರಸಂಬಂಧಿಗಳು ಸಿಗುತ್ತಾರೆಂದರೆ ಅವರಿಗೆ ಇದನ್ನು ತಿಳಿಸಬೇಕು. ವಿಚಾರ ಮಾಡುವ ಮಾತಾಗಿದೆ- ಹೊಸಪ್ರಪಂಚದಲ್ಲಿ ಇಷ್ಟು ಕಡಿಮೆ ಜನಸಂಖ್ಯೆಯಿರುತ್ತದೆ, ಹಳೆಯ ಪ್ರಪಂಚದಲ್ಲಿ ಎಷ್ಟೊಂದು ವೃದ್ಧಿಯಾಗುತ್ತದೆ. ಸತ್ಯಯುಗದಲ್ಲಿ ಕೇವಲ ಒಂದು ದೇವತಾ ಧರ್ಮವಿತ್ತು, ಕೆಲವರೇ ಮನುಷ್ಯರಿದ್ದರು. ದೈವೀಗುಣಗಳು ದೇವತೆಗಳಲ್ಲಿಯೇ ಇರುತ್ತದೆ, ಮನುಷ್ಯರಲ್ಲಿರುವುದಿಲ್ಲ ಆದ್ದರಿಂದಲೇ ಮನುಷ್ಯರು ಹೋಗಿ ದೇವತೆಗಳ ಮುಂದೆ ನಮಸ್ಕಾರ ಮಾಡುತ್ತಾರಲ್ಲವೆ. ದೇವತೆಗಳ ಮಹಿಮೆ ಮಾಡುತ್ತಾರೆ ಏಕೆಂದರೆ ಅವರು ಸ್ವರ್ಗವಾಸಿಗಳಾಗಿದ್ದಾರೆ. ನಾವು ನರಕವಾಸಿ, ಕಲಿಯುಗವಾಸಿಗಳಾಗಿದ್ದೇವೆಂದು ತಿಳಿದಿದೆ. ಮನುಷ್ಯರಲ್ಲಿ ದೈವೀಗುಣಗಳಿರಲು ಸಾಧ್ಯವಿಲ್ಲ. ಇಂತಹವರಲ್ಲಿ ಬಹಳ ಒಳ್ಳೆಯ ದೈವೀಗುಣಗಳಿವೆಯೆಂದು ಯಾರಾದರೂ ಹೇಳಿದರೆ ತಿಳಿಸಿ, ದೈವೀಗುಣಗಳು ದೇವತೆಗಳಲ್ಲಿಯೇ ಇರುತ್ತವೆ. ಏಕೆಂದರೆ ಅವರು ಪವಿತ್ರರಾಗಿದ್ದಾರೆ. ಇಲ್ಲಿ ಪವಿತ್ರರಿಲ್ಲದಿರುವ ಕಾರಣ ದೈವೀಗುಣಗಳಿರಲು ಸಾಧ್ಯವಿಲ್ಲ ಏಕೆಂದರೆ ಆಸುರೀ ರಾವಣರಾಜ್ಯವಲ್ಲವೆ. ಹೊಸ ವೃಕ್ಷದಲ್ಲಿ ದೈವೀಗುಣವಂತ ದೇವತೆಗಳಿರುತ್ತಾರೆ ಮತ್ತೆ ಹಳೆಯ ವೃಕ್ಷವಾಗುತ್ತದೆ. ರಾವಣರಾಜ್ಯದಲ್ಲಿ ದೈವೀಗುಣವಂತರಿರಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಆದಿಸನಾತನ ದೇವಿ-ದೇವತೆಗಳ ಪ್ರವೃತ್ತಿಮಾರ್ಗವಿತ್ತು, ಪ್ರವೃತ್ತಿಮಾರ್ಗದವರದೇ ಮಹಿಮೆ ಮಾಡಲ್ಪಟ್ಟಿದೆ. ಸತ್ಯಯುಗದಲ್ಲಿ ನಾವು ಪವಿತ್ರ ದೇವಿ-ದೇವತೆಗಳಾಗಿದ್ದೆವು, ಸನ್ಯಾಸ ಮಾರ್ಗವಿರಲಿಲ್ಲ. ಎಷ್ಟೊಂದು ವಿಚಾರಗಳು ಸಿಗುತ್ತವೆ ಆದರೆ ಎಲ್ಲ ವಿಚಾರಗಳು ಯಾರ ಬುದ್ಧಿಯಲ್ಲಿರುವುದಿಲ್ಲ ಮರೆತುಹೋಗುತ್ತದೆ ಆದ್ದರಿಂದ ಅನುತ್ತೀರ್ಣರಾಗುತ್ತಾರೆ. ದೈವೀಗುಣಗಳನ್ನು ಧಾರಣೆ ಮಾಡುವುದಿಲ್ಲ. ಒಂದೇ ದೈವೀಗುಣವು ಬಹಳ ಒಳ್ಳೆಯದಾಗಿದೆ, ಯಾರೊಂದಿಗೂ ಹೆಚ್ಚು ಮಾತನಾಡದಿರುವುದು, ಮಧುರವಾಗಿ ಮಾತನಾಡುವುದು, ಬಹಳ ಕಡಿಮೆ ಮಾತನಾಡಬೇಕು ಏಕೆಂದರೆ ನೀವು ಮಕ್ಕಳು ಟಾಕಿಯಿಂದ ಮೂವೀ, ಮೂವೀ ಯಿಂದ ಸೈಲೆನ್ಸ್ ನಲ್ಲಿ ಹೋಗಬೇಕಾಗಿದೆ ಆದ್ದರಿಂದ ಶಬ್ಧವನ್ನು ಬಹಳ ಕಡಿಮೆ ಮಾಡಬೇಕು. ಯಾರು ಬಹಳ ಕಡಿಮೆ, ನಿಧಾನವಾಗಿ ಮಾತನಾಡುವರೋ ಅವರು ರಾಯಲ್ ಮನೆತನದವರೆಂದು ತಿಳಿಯುತ್ತಾರೆ. ಮುಖದಿಂದ ಸದಾ ರತ್ನಗಳೇ ಹೊರಬರುತ್ತಿರಲಿ. ಸನ್ಯಾಸಿ ಅಥವಾ ಯಾರೇ ಆಗಿರಲಿ ಅವರಿಗೆ ಹೊಸ ಮತ್ತು ಹಳೆಯ ಪ್ರಪಂಚದ ಅಂತರವನ್ನು ತಿಳಿಸಬೇಕು. ಸತ್ಯಯುಗದಲ್ಲಿ ದೈವೀಗುಣವುಳ್ಳ ದೇವತೆಗಳಿದ್ದರು, ಅದು ಪ್ರವೃತ್ತಿ ಮಾರ್ಗವಾಗಿತ್ತು. ನೀವು ಸನ್ಯಾಸಿಗಳ ಧರ್ಮವೇ ಬೇರೆಯಾಗಿದೆ, ಆದರೂ ಇದನ್ನಂತೂ ತಿಳಿದುಕೊಳ್ಳುತ್ತೀರಲ್ಲವೆ - ಹೊಸ ಸೃಷ್ಟಿಯು ಸತೋಪ್ರಧಾನವಾಗಿರುತ್ತದೆ, ಈಗ ತಮೋಪ್ರಧಾನವಾಗಿದೆ. ಆತ್ಮವು ತಮೋಪ್ರಧಾನವಾದಾಗ ತಮೋಪ್ರಧಾನ ಶರೀರವೇ ಸಿಗುತ್ತದೆ. ಈಗ ಪತಿತ ಪ್ರಪಂಚವಾಗಿದೆ. ಎಲ್ಲರಿಗೆ ಪತಿತರೆಂದೇ ಹೇಳುತ್ತಾರೆ. ಸತ್ಯಯುಗವು ಪಾವನ, ಸತೋಪ್ರಧಾನ ಪ್ರಪಂಚವಾಗಿರುತ್ತದೆ. ಅದೇ ಹೊಸಪ್ರಪಂಚವು ಈಗ ಹಳೆಯದಾಗುತ್ತದೆ. ಈ ಸಮಯದಲ್ಲಿ ಎಲ್ಲಾ ಮನುಷ್ಯಾತ್ಮರು ನಾಸ್ತಿಕರಾಗಿದ್ದಾರೆ ಆದ್ದರಿಂದಲೇ ಹೊಡೆದಾಟಗಳಿವೆ. ಮಾಲೀಕನನ್ನು ಅರಿತುಕೊಳ್ಳದೇ ಇರುವ ಕಾರಣ ಪರಸ್ಪರ ಹೊಡೆದಾಡುತ್ತಾ-ಜಗಳವಾಡುತ್ತಾ ಇರುತ್ತಾರೆ. ರಚಯಿತ ಮತ್ತು ರಚನೆಯನ್ನು ಅರಿತುಕೊಂಡಿರುವವರಿಗೆ ಆಸ್ತಿಕರೆಂದು ಹೇಳಲಾಗುತ್ತದೆ. ಸನ್ಯಾಸ ಧರ್ಮದವರು ಹೊಸ ಪ್ರಪಂಚವನ್ನು ತಿಳಿದುಕೊಂಡೇ ಇಲ್ಲ ಆದ್ದರಿಂದ ಅಲ್ಲಿ ಬರುವುದೇ ಇಲ್ಲ. ತಂದೆಯು ತಿಳಿಸಿದ್ದಾರೆ - ಈಗ ಎಲ್ಲಾ ಆತ್ಮಗಳು ತಮೋಪ್ರಧಾನರಾಗಿದ್ದಾರೆ ಮತ್ತೆ ಎಲ್ಲಾ ಆತ್ಮಗಳನ್ನು ಸತೋಪ್ರಧಾನರನ್ನಾಗಿ ಯಾರು ಮಾಡುವರು? ಅದನ್ನು ತಂದೆಯೇ ಮಾಡಲು ಸಾಧ್ಯ. ಸತೋಪ್ರಧಾನ ಪ್ರಪಂಚದಲ್ಲಿ ಕೆಲವರೇ ಮನುಷ್ಯರಿರುತ್ತಾರೆ, ಉಳಿದೆಲ್ಲರೂ ಮುಕ್ತಿಧಾಮದಲ್ಲಿರುತ್ತಾರೆ, ಬ್ರಹ್ಮ್ತತ್ವವಾಗಿದೆ, ಅಲ್ಲಿ ನಾವಾತ್ಮಗಳು ನಿವಾಸ ಮಾಡುತ್ತೇವೆ ಅದಕ್ಕೆ ಬ್ರಹ್ಮಾಂಡವೆಂದು ಕರೆಯಲಾಗುತ್ತದೆ. ಆತ್ಮವು ಅವಿನಾಶಿಯಾಗಿದೆ, ಇದು ಅವಿನಾಶಿ ನಾಟಕವಾಗಿದೆ, ಇದರಲ್ಲಿ ಎಲ್ಲಾ ಆತ್ಮಗಳ ಪಾತ್ರವಿದೆ. ನಾಟಕವು ಯಾವಾಗ ಆರಂಭವಾಯಿತು? ಇದನ್ನು ಎಂದೂ ಯಾರೂ ತಿಳಿಸಲು ಸಾಧ್ಯವಿಲ್ಲ. ಇದು ಅನಾದಿ ನಾಟಕವಾಗಿದೆಯಲ್ಲವೆ. ತಂದೆಯು ಕೇವಲ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು ಬರಬೇಕಾಗುತ್ತದೆ. ತಂದೆಯು ಹೊಸ ಸೃಷ್ಟಿಯನ್ನು ರಚಿಸುತ್ತಾರೆಂದಲ್ಲ. ಯಾವಾಗ ಪತಿತರಾಗುವರೋ ಆಗಲೇ ಕರೆಯುತ್ತಾರೆ. ಸತ್ಯಯುಗದಲ್ಲಿ ಯಾರೂ ಕರೆಯುವುದಿಲ್ಲ, ಅದು ಪಾವನಪ್ರಪಂಚವಾಗಿದೆ. ರಾವಣನು ಪತಿತರನ್ನಾಗಿ ಮಾಡುತ್ತಾನೆ ಮತ್ತೆ ಪರಮಪಿತ ಪರಮಾತ್ಮನು ಬಂದು ಪಾವನರನ್ನಾಗಿ ಮಾಡುತ್ತಾರೆ. ಇದು ಅರ್ಧ-ಅರ್ಧ ಆಗಿದೆ. ಬ್ರಹ್ಮನ ದಿನ ಮತ್ತು ಬ್ರಹ್ಮನ ರಾತ್ರಿಯು ಅರ್ಧ-ಅರ್ಧವಾಗಿದೆ. ಜ್ಞಾನದಿಂದ ದಿನವಾಗುತ್ತದೆ, ಅಲ್ಲಿ ಅಜ್ಞಾನವಿರುವುದಿಲ್ಲ. ಭಕ್ತಿಮಾರ್ಗಕ್ಕೆ ಅಂಧಕಾರ ಮಾರ್ಗವೆಂದು ಹೇಳಲಾಗುತ್ತದೆ. ದೇವತೆಗಳು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಮತ್ತೆ ಅಂಧಕಾರದಲ್ಲಿ ಬರುತ್ತಾರೆ ಆದ್ದರಿಂದ ಮನುಷ್ಯರು ಹೇಗೆ ಸತೋ, ರಜೋ, ತಮೋದಲ್ಲಿ ಬರುತ್ತಾರೆಂದು ಏಣಿಚಿತ್ರದಲ್ಲಿ ತೋರಿಸಲಾಗಿದೆ. ಈಗ ಎಲ್ಲರದೂ ಜಡಜಡೀಭೂತ ಸ್ಥಿತಿಯಾಗಿದೆ. ತಂದೆಯು ಪರಿವರ್ತಿಸಲು ಅರ್ಥಾತ್ ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ಬರುತ್ತಾರೆ. ದೇವತೆಗಳಿದ್ದಂತಹ ಸಮಯದಲ್ಲಿ ಆಸುರೀಗುಣಗಳ್ಳುಳ್ಳ ಮನುಷ್ಯರಿರಲಿಲ್ಲ. ಈಗ ಈ ಆಸುರೀಗುಣವುಳ್ಳವರನ್ನು ಮತ್ತೆ ದೈವೀ ಗುಣವಂತರನ್ನಾಗಿ ಮಾಡುವವರು ಯಾರು? ಈಗಂತೂ ಅನೇಕ ಧರ್ಮ, ಅನೇಕ ಮನುಷ್ಯರಿದ್ದಾರೆ, ಪರಸ್ಪರ ಹೊಡೆದಾಡುತ್ತಾರೆ. ಸತ್ಯಯುಗದಲ್ಲಿ ಒಂದು ಧರ್ಮವಿದ್ದಾಗ ದುಃಖದ ಯಾವುದೇ ಮಾತಿರುವುದಿಲ್ಲ. ಶಾಸ್ತ್ರಗಳಲ್ಲಂತೂ ಬಹಳ ದಂತಕಥೆಗಳಿವೆ. ಅದನ್ನು ಜನ್ಮ-ಜನ್ಮಾಂತರಗಳಿಂದ ಮನುಷ್ಯರು ಓದುತ್ತಾ ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ - ಇವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ, ಇದರಿಂದ ನನ್ನನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾನಂತೂ ಸ್ವಯಂ ಒಂದೇಬಾರಿ ಬಂದು ಎಲ್ಲರ ಸದ್ಗತಿ ಮಾಡಬೇಕಾಗಿದೆ. ಹಾಗೆಯೇ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಬಹಳ ತಾಳ್ಮೆಯಿಂದ ಕುಳಿತು ತಿಳಿಸಿಕೊಡಬೇಕು, ಯಾವುದೇ ಗಲಾಟೆಯಾಗಬಾರದು ಏಕೆಂದರೆ ಅವರಿಗೆ ತಮ್ಮದೇ ಆದ ಬಹಳ ಅಹಂಕಾರವಿರುತ್ತದೆಯಲ್ಲವೆ. ಸಾಧು-ಸಂತರ ಜೊತೆ ಅವರ ಅನುಯಾಯಿಗಳು ಇರುವ ಕಾರಣ ಅನುಯಾಯಿಗಳು ಇವರಿಗೂ ಬ್ರಹ್ಮಾಕುಮಾರಿಯರ ಜಾದೂ ಹಿಡಿದಿದೆ ಎಂದು ಹೇಳಿಬಿಡುತ್ತಾರೆ. ಆದರೆ ಬುದ್ಧಿವಂತ ಮನುಷ್ಯರಾಗಿದ್ದರೆ ಇವು ವಿಚಾರ ಯೋಗ್ಯ ಮಾತುಗಳಾಗಿವೆ ಎಂದು ಹೇಳುತ್ತಾರೆ. ಮೇಳ, ಪ್ರದರ್ಶನಿಯಲ್ಲಿ ಅನೇಕ ಪ್ರಕಾರದವರು ಬರುತ್ತಾರಲ್ಲವೆ. ಪ್ರದರ್ಶನಿಯಲ್ಲಿ ಯಾರೇ ಬಂದರೂ ಸಹ ಅವರಿಗೆ ಬಹಳ ತಾಳ್ಮೆಯಿಂದ ತಿಳಿಸಿಕೊಡಬೇಕು. ಹೇಗೆ ತಂದೆಯು ತಾಳ್ಮೆಯಿಂದ ತಿಳಿಸುತ್ತಿದ್ದಾರೆ ಅಂದಮೇಲೆ ಬಹಳ ಜೋರಾಗಿ ಮಾತನಾಡಬಾರದು. ಪ್ರದರ್ಶನಿಯಲ್ಲಂತೂ ಅನೇಕರು ಸೇರುತ್ತಾರಲ್ಲವೆ. ಆಗ ತಿಳಿಸಬೇಕು - ತಾವು ಸ್ವಲ್ಪಸಮಯವನ್ನು ಕೊಟ್ಟು ಏಕಾಂತದಲ್ಲಿ ಬಂದು ತಿಳಿದುಕೊಂಡರೆ ತಮಗೆ ರಚಯಿತ ಮತ್ತು ರಚನೆಯ ರಹಸ್ಯವನ್ನು ತಿಳಿಸುತ್ತೇವೆ. ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ರಚಯಿತ ತಂದೆಯೇ ತಿಳಿಸುತ್ತಾರೆ. ಉಳಿದವರೆಲ್ಲರೂ ನಮಗೆ ಗೊತ್ತಿಲ್ಲ, ಗೊತ್ತಿಲ್ಲ ಎನ್ನುತ್ತಲೇ ಹೋಗುತ್ತಾರೆ. ಯಾವುದೇ ಮನುಷ್ಯರು ಹೋಗಲು ಸಾಧ್ಯವಿಲ್ಲ. ಜ್ಞಾನದಿಂದ ಸದ್ಗತಿಯಾದರೆ ಮತ್ತೆ ಜ್ಞಾನದ ಅವಶ್ಯಕತೆಯಿರುವುದಿಲ್ಲ. ಈ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಿಕೊಡಲು ಸಾಧ್ಯವಿಲ್ಲ. ತಿಳಿಸಿಕೊಡುವವರು ಯಾರಾದರು ವೃದ್ಧರಾಗಿದ್ದರೆ ಮನುಷ್ಯರು ತಿಳಿಯುತ್ತಾರೆ - ಇವರು ಅನುಭವಿಯಾಗಿದ್ದಾರೆ, ಅಂದಮೇಲೆ ಅವಶ್ಯವಾಗಿ ಇವರು ಸತ್ಸಂಗ ಮಾಡಿರಬೇಕು. ಯಾರಾದರೂ ಮಕ್ಕಳು ತಿಳಿಸಿದರೆ ಇವರಿಗೇನು ತಿಳಿದಿದೆ ಎಂದು ಹೇಳುತ್ತಾರೆ ಆದ್ದರಿಂದ ವೃದ್ಧರು ತಿಳಿಸಿದಾಗ ಅದರ ಪ್ರಭಾವ ಬೀರುವ ಸಾಧ್ಯತೆಯಿದೆ. ತಂದೆಯು ಒಂದೇಬಾರಿ ಬಂದು ಈ ಜ್ಞಾನವನ್ನು ತಿಳಿಸಿಕೊಡುತ್ತಾರೆ. ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡುತ್ತಾರೆ. ಮಾತೆಯರು ಕುಳಿತು ತಿಳಿಸಿದರೆ ಬಹಳ ಖುಷಿಯಾಗಿಬಿಡುತ್ತಾರೆ ಆದ್ದರಿಂದ ತಿಳಿಸಿ - ಜ್ಞಾನಸಾಗರ ತಂದೆಯು ಜ್ಞಾನದ ಕಳಸವನ್ನು ನಾವು ಮಾತೆಯರಿಗೇ ಕೊಟ್ಟಿದ್ದಾರೆ ಅದನ್ನು ನಾವು ಅನ್ಯರಿಗೆ ಕೊಡುತ್ತೇವೆ. ಬಹಳ ನಮ್ರತೆಯಿಂದ ಹೇಳುತ್ತಿರಬೇಕಾಗಿದೆ. ಶಿವನೇ ಜ್ಞಾನಸಾಗರನಾಗಿದ್ದಾರೆ, ಅವರು ನಮಗೆ ಜ್ಞಾನವನ್ನು ತಿಳಿಸುತ್ತಾರೆ. ಹೇಳುತ್ತಾರೆ ನಾನು ನೀವು ಮಾತೆಯರ ಮುಕ್ತಿ-ಜೀವನ್ಮುಕ್ತಿಯ ದ್ವಾರವನ್ನು ತೆರೆಯುತ್ತೇನೆ ಮತ್ತ್ಯಾರೂ ತೆರೆಯಲು ಸಾಧ್ಯವಿಲ್ಲ. ನಾವೀಗ ಪರಮಾತ್ಮನ ಮೂಲಕ ಓದುತ್ತಿದ್ದೇವೆ, ನಮಗೆ ಯಾವುದೇ ಮನುಷ್ಯರು ಓದಿಸುವುದಿಲ್ಲ. ಜ್ಞಾನಸಾಗರನು ಒಬ್ಬರೇ ಪರಮಪಿತನಾಗಿದ್ದಾರೆ. ನೀವೆಲ್ಲಾ ಭಕ್ತಿಯ ಸಾಗರರಾಗಿದ್ದೀರಿ. ಭಕ್ತಿಯ ಅಥಾರಿಟಿಯಾಗಿದ್ದೀರಿ. ಜ್ಞಾನದ ಅಥಾರಿಟಿಯಲ್ಲ. ಜ್ಞಾನದ ಅಥಾರಿಟಿಯು ನಾನೊಬ್ಬನೇ ಆಗಿದ್ದೇನೆ, ಎಲ್ಲರೂ ಅವರೊಬ್ಬರನ್ನೇ ಮಹಿಮೆ ಮಾಡುತ್ತಾರೆ, ಅವರೇ ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ, ನಾವು ಅವರನ್ನೇ ಒಪ್ಪುತ್ತೇವೆ. ಅವರು ನಮಗೆ ಬ್ರಹ್ಮಾರವರ ತನುವಿನಿಂದ ಓದಿಸುತ್ತಾರೆ ಆದ್ದರಿಂದ ಬ್ರಹ್ಮಾಕುಮಾರ-ಕುಮಾರಿಯರೆಂದು ಗಾಯನವಿದೆ. ಹೀಗೆ ಬಹಳ ಮಧುರರೂಪದಲ್ಲಿ ಕುಳಿತು ತಿಳಿಸಿಕೊಡಿ. ಭಲೆ ಎಷ್ಟಾದರೂ ಓದಿರುವವರಾಗಿರಲಿ, ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಮೊಟ್ಟಮೊದಲಿಗೆ ತಂದೆಯ ಮೇಲೆ ನಿಶ್ಚಯ ಮೂಡಿಸಬೇಕಾಗಿದೆ. ಮೊದಲು ನೀವಿದನ್ನು ತಿಳಿದುಕೊಳ್ಳಿ - ರಚಯಿತನು ತಂದೆಯೇ ಅಥವಾ ಅಲ್ಲವೆ! ಎಲ್ಲರ ರಚಯಿತನೂ ಒಬ್ಬರೇ ಶಿವತಂದೆಯಾಗಿದ್ದಾರೆ, ಅವರೇ ಜ್ಞಾನಸಾಗರನಾಗಿದ್ದಾರೆ. ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಮೊದಲಿಗೆ ಈ ನಿಶ್ಚಯವು ಬುದ್ಧಿಯಲ್ಲಿರಲಿ - ರಚಯಿತ ತಂದೆಯು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಅವರು ನಮಗೆ ಸತ್ಯವನ್ನೇ ತಿಳಿಸುತ್ತಾರೆ ಎಂದು ಹೇಳಿದಾಗ ಮತ್ತ್ಯಾವುದೇ ಪ್ರಶ್ನೆಯು ಉದ್ಭವಿಸಲು ಸಾಧ್ಯವಿಲ್ಲ. ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ ಕೇವಲ ಇಷ್ಟನ್ನೇ ತಿಳಿಸುತ್ತಾರೆ - ನೀವು ನನ್ನನ್ನು ನೆನಪು ಮಾಡಿ ಆಗ ಪಾಪಗಳು ಭಸ್ಮವಾಗುವುವು. ಪತಿತರನ್ನು ಪಾವನ ಮಾಡುವುದೇ ನನ್ನ ಕೆಲಸವಾಗಿದೆ, ಈಗ ತಮೋಪ್ರಧಾನ ಪ್ರಪಂಚವಾಗಿದೆ. ಪತಿತ-ಪಾವನ ತಂದೆಯಿಲ್ಲದೇ ಯಾರಿಗೂ ಜೀವನ್ಮುಕ್ತಿಯು ಸಿಗಲು ಸಾಧ್ಯವಿಲ್ಲ, ಎಲ್ಲರೂ ಗಂಗಾಸ್ನಾನವನ್ನು ಮಾಡಲು ಹೋಗುತ್ತಾರೆ ಅಂದಮೇಲೆ ಪತಿತರಾದರಲ್ಲವೆ! ನಾನಂತೂ ಗಂಗಾಸ್ನಾನ ಮಾಡಿರಿ ಎಂದು ಹೇಳುವುದಿಲ್ಲ, ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳುತ್ತೇನೆ. ನಾನು ನೀವೆಲ್ಲಾ ಪ್ರಿಯತಮೆಯರ ಪ್ರಿಯತಮನಾಗಿದ್ದೇನೆ. ಎಲ್ಲರೂ ಒಬ್ಬ ಪ್ರಿಯತಮನನ್ನೇ ನೆನಪು ಮಾಡುತ್ತಾರೆ. ರಚನೆಯ ರಚಯಿತನು ಒಬ್ಬರೇ ತಂದೆಯಾಗಿದ್ದಾರೆ, ತಿಳಿಸುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿಯಾಗಿ ನನ್ನನ್ನು ನೆನಪು ಮಾಡಿ. ಆಗ ಈ ಯೋಗಾಗ್ನಿಯಿಂದ ವಿಕರ್ಮಗಳು ವಿನಾಶವಾಗುತ್ತವೆ. ಹಳೆಯ ಪ್ರಪಂಚವು ಬದಲಾಗುತ್ತಿರುವ ಈ ಸಮಯದಲ್ಲಿಯೇ ತಂದೆಯು ಯೋಗವನ್ನು ಕಲಿಸುತ್ತಾರೆ, ವಿನಾಶವು ಸನ್ಮುಖದಲ್ಲಿ ನಿಂತಿದೆ. ನಾವೀಗ ದೇವತೆಗಳಾಗುತ್ತಿದ್ದೇವೆ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ. ತಂದೆಯ ಸನ್ಮುಖದಲ್ಲಿ ಭಲೆ ಕೇಳುತ್ತಾರೆ ಆದರೆ ಏಕರಸವಾಗಿ ಕೇಳುವುದಿಲ್ಲ. ಬುದ್ಧಿಯು ಅಲ್ಲಿ-ಇಲ್ಲಿ ಓಡುತ್ತಿರುತ್ತದೆ, ಭಕ್ತಿಯಲ್ಲಿಯೂ ಹೀಗೆ0iÉುೀ ಆಗುತ್ತಿರುತ್ತದೆ. ಇಡೀ ದಿನವಂತೂ ವ್ಯರ್ಥವಾಗಿ ಹೋಗುತ್ತದೆ. ಆದರೆ ಯಾವ ಸಮಯವನ್ನು ನಿಗಧಿಪಡಿಸಿಕೊಳ್ಳುತ್ತೀರೋ ಅದರಲ್ಲಿಯೂ ಸಹ ಬುದ್ಧಿಯು ಎಲ್ಲೆಲ್ಲಿಯೋ ಹೊರಟು ಹೋಗುತ್ತದೆ. ಎಲ್ಲರದೂ ಇದೇ ಸ್ಥಿತಿಯಾಗುತ್ತಾ ಇರುತ್ತದೆ. ಮಾಯೆಯಲ್ಲವೆ!

ಕೆಲಕೆಲವು ಮಕ್ಕಳು ತಂದೆಯ ಮುಂದೆ ಕುಳಿತಿದ್ದಂತೆಯೇ ಧ್ಯಾನದಲ್ಲಿ ಹೊರಟುಹೋಗುತ್ತಾರೆ, ಇದು ಸಹ ಸಮಯವನ್ನು ವ್ಯರ್ಥ ಮಾಡಿದಂತಾಯಿತಲ್ಲವೆ. ಸಂಪಾದನೆಯಂತೂ ಆಗಲಿಲ್ಲ. ತಂದೆಯು ತಿಳಿಸುತ್ತಾರೆ - ನೆನಪಿನಲ್ಲಿರಿ, ಇದರಿಂದ ವಿಕರ್ಮ ವಿನಾಶವಾಗುವುದು. ಧ್ಯಾನದಲ್ಲಿ ಹೋಗುವುದರಿಂದ ಬುದ್ಧಿಯಲ್ಲಿ ತಂದೆಯ ನೆನಪಿರುವುದಿಲ್ಲ. ಇವೆಲ್ಲಾ ಮಾತುಗಳಲ್ಲಿ ಬಹಳ ಗೊಂದಲವಿûದೆ. ನೀವಂತೂ ಕಣ್ಣುಗಳನ್ನು ಮುಚ್ಚಲೂಬಾರದು. ನೆನಪಿನಲ್ಲಿ ಕುಳಿತುಕೊಳ್ಳಬೇಕಲ್ಲವೆ. ಕಣ್ಣುಗಳನ್ನು ತೆರೆಯುವುದರಲ್ಲಿ ಭಯಪಡಬಾರದು. ಕಣ್ಣುಗಳನ್ನು ತೆರೆದೇ ನೆನಪು ಮಾಡಬೇಕು. ಬುದ್ಧಿಯಲ್ಲಿ ಪ್ರಿಯತಮನ ನೆನಪೇ ಇರಲಿ. ಕಣ್ಣುಮುಚ್ಚಿ ಕುಳಿತುಕೊಳ್ಳುವ ನಿಯಮವಿಲ್ಲ. ತಂದೆಯು ತಿಳಿಸುತ್ತಾರೆ - ನೆನಪಿನಲ್ಲಿ ಕುಳಿತುಕೊಳ್ಳಿ ಆದರೆ ಕಣ್ಣುಮುಚ್ಚಿ ಕುಳಿತುಕೊಳ್ಳಿ ಎಂದು ಹೇಳುವುದಿಲ್ಲ. ಕಣ್ಣುಗಳನ್ನು ಮುಚ್ಚಿಕೊಂಡು ಕತ್ತು ಬಗ್ಗಿಸಿ ಕುಳಿತುಕೊಂಡರೆ ತಂದೆಯು ಹೇಗೆ ನೋಡುತ್ತಾರೆ? ಕಣ್ಣುಗಳನ್ನೆಂದೂ ಮುಚ್ಚಬಾರದು. ಕಣ್ಣುಮುಚ್ಚುತ್ತೀರೆಂದರೆ ಏನೋ ಬೆರಕೆಯಿದೆಯೆಂದರ್ಥ. ಮತ್ತೇನನ್ನೋ ನೆನಪು ಮಾಡುತ್ತಿರುತ್ತಾರೆ. ತಂದೆಯಂತೂ ತಿಳಿಸುತ್ತಾರೆ - ಮತ್ತ್ಯಾವುದೇ ಮಿತ್ರಸಂಬಂಧಿಗಳನ್ನು ನೆನಪು ಮಾಡಿದರೆ ನೀವು ಸತ್ಯ ಪ್ರಿಯತಮೆಯರಾಗಲಿಲ್ಲ. ಸತ್ಯ ಪ್ರಿಯತಮೆಯರಾದಾಗಲೇ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಪರಿಶ್ರಮವೆಲ್ಲವೂ ನೆನಪಿನಲ್ಲಿದೆ. ದೇಹಾಭಿಮಾನದಲ್ಲಿ ತಂದೆಯನ್ನು ಮರೆಯುತ್ತಾರೆ ಮತ್ತೆ ಅಲೆದಾಡುತ್ತಿರುತ್ತಾರೆ ಆದ್ದರಿಂದ ಬಹಳ ಮಧುರರೂ ಆಗಬೇಕು, ವಾತಾವರಣವೂ ಮಧುರವಾಗಿರಲಿ. ಯಾವುದೇ ಶಬ್ಧವಿರಬಾರದು. ಯಾರೇ ಬಂದರೂ ಸಹ ಎಷ್ಟು ಮಧುರವಾಗಿ ಮಾತನಾಡುತ್ತಾರೆಂದು ನೋಡಲಿ. ಬಹಳ ಶಾಂತಿಯಿರಬೇಕು. ಜಗಳ-ಕಲಹ ಮಾಡಬಾರದು ಇಲ್ಲವಾದರೆ ತಂದೆ, ಶಿಕ್ಷಕ, ಸದ್ಗುರು ಮೂವರಿಗೂ ನಿಂದನೆ ಮಾಡಿಸುತ್ತೀರಿ, ಮತ್ತೆ ಪದವಿಯೂ ಬಹಳ ಕಡಿಮೆ ಪಡೆಯುತ್ತೀರಿ. ಮಕ್ಕಳಿಗೆ ಈಗ ತಿಳುವಳಿಕೆಯು ಸಿಕ್ಕಿದೆ. ಶ್ರೇಷ್ಠಪದವಿಯನ್ನು ಪಡೆಯಲೆಂದು ನಾನು ನಿಮಗೆ ಓದಿಸುತ್ತೇನೆ. ಓದಿ ಅನ್ಯರಿಗೂ ಓದಿಸಬೇಕಾಗಿದೆ. ನಾವು ಯಾರಿಗೂ ತಿಳಿಸಿಕೊಡುವುದೇ ಇಲ್ಲ ಅಂದಮೇಲೆ ಏನು ಪದವಿಯನ್ನು ಪಡೆಯುತ್ತೇವೆ ಎಂಬುದನ್ನು ತಾವೂ ತಿಳಿದುಕೊಳ್ಳಬಹುದಾಗಿದೆ. ಪ್ರಜೆಗಳನ್ನು ಮಾಡಿಕೊಳ್ಳಲಿಲ್ಲವೆಂದರೆ ಏನಾಗುತ್ತಾರೆ? ಯೋಗವೂ ಇಲ್ಲ, ಜ್ಞಾನವೂ ಇಲ್ಲವೆಂದರೆ ಮತ್ತೆ ವಿದ್ಯಾವಂತರ ಮುಂದೆ ತಲೆಬಾಗಬೇಕಾಗುವುದು. ಆದ್ದರಿಂದ ತಮ್ಮನ್ನು ನೋಡಿಕೊಳ್ಳಬೇಕು - ಈ ಸಮಯದಲ್ಲಿ ಅನುತ್ತೀರ್ಣರಾಗಿ ಕಡಿಮೆ ಪದವಿಯನ್ನು ಪಡೆದರೆ ಕಲ್ಪ-ಕಲ್ಪಾಂತರವೂ ಕಡಿಮೆ ಪದವಿಯಾಗಿಬಿಡುವುದು. ತಂದೆಯ ಕರ್ತವ್ಯವು ತಿಳಿಸುವುದಾಗಿದೆ, ನೀವು ತಿಳಿದುಕೊಳ್ಳಲಿಲ್ಲವೆಂದರೆ ತಮ್ಮ ಪದವಿಯನ್ನು ಭ್ರಷ್ಟ ಮಾಡಿಕೊಳ್ಳುತ್ತೀರಿ. ಯಾರಿಗೆ ಹೇಗೆ ತಿಳಿಸಿಕೊಡಬೇಕೆಂಬುದನ್ನೂ ಸಹ ತಂದೆಯು ತಿಳಿಸಿಕೊಡುತ್ತಾರೆ. ಎಷ್ಟು ಕಡಿಮೆ ಮತ್ತು ನಿಧಾನವಾಗಿ ಮಾತನಾಡುವಿರೋ ಅಷ್ಟೂ ಒಳ್ಳೆಯದು. ತಂದೆಯು ಸೇವೆ ಮಾಡುವವರಿಗೇ ಮಹಿಮೆ ಮಾಡುತ್ತಾರಲ್ಲವೆ. ಬಹಳ ಚೆನ್ನಾಗಿ ಸೇವೆ ಮಾಡುತ್ತಾರೆಂದರೆ ತಂದೆಯ ಹೃದಯವನ್ನೇರುತ್ತಾರೆ. ಸೇವೆಯಿಂದಲೇ ಹೃದಯವನ್ನೇರುತ್ತಾರಲ್ಲವೆ. ಅವಶ್ಯವಾಗಿ ನೆನಪಿನ ಯಾತ್ರೆಯು ಇದ್ದಾಗಲೇ ಸತೋಪ್ರಧಾನರಾಗುತ್ತೀರಿ. ಹೆಚ್ಚು ಶಿಕ್ಷೆಯನ್ನನುಭವಿಸಿದರೆ ಪದವಿಯು ಕಡಿಮೆಯಾಗಿಬಿಡುವುದು, ಪಾಪಗಳು ಭಸ್ಮವಾಗಲಿಲ್ಲವೆಂದರೆ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ, ಪದವಿಯೂ ಕಡಿಮೆಯಾಗಿಬಿಡುವುದು. ಅದಕ್ಕೆ ನಷ್ಟವೆಂದು ಹೇಳಲಾಗುತ್ತದೆ. ಇದು ಸಹ ವ್ಯಾಪಾರವಾಗಿದೆಯಲ್ಲವೆ. ನಷ್ಟದಲ್ಲಿ ಹೋಗಬಾರದು ಅಂದಾಗ ದೈವೀಗುಣಗಳನ್ನು ಧಾರಣೆ ಮಾಡಿ ಶ್ರೇಷ್ಠರಾಗಬೇಕು. ತಂದೆಯು ಉನ್ನತಿಗಾಗಿ ಭಿನ್ನ-ಭಿನ್ನ ಪ್ರಕಾರದ ಮಾತುಗಳನ್ನು ತಿಳಿಸುತ್ತಾರೆ. ಈಗ ಯಾರು ಮಾಡುವರೋ ಅವರೇ ಪಡೆಯುತ್ತಾರೆ. ನೀವು ಪರಿಸ್ಥಾನಿಗಳಾಗಬೇಕಾಗಿದೆ ಆದ್ದರಿಂದ ಅಂತಹ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾರೊಂದಿಗಾದರೂ ಬಹಳ ನಮ್ರತೆ ಮತ್ತು ನಿಧಾನವಾಗಿ ಮಾತನಾಡಬೇಕಾಗಿದೆ. ಮಾತು, ನಡತೆ ಬಹಳ ಮಧುರವಾಗಿರಬೇಕಾಗಿದೆ. ವಾತಾವರಣವು ಶಾಂತಿಯಿಂದ ಕೂಡಿರಲಿ. ಯಾವುದೇ ಶಬ್ಧವಿರಬಾರದು ಆಗಲೇ ಸೇವೆಯ ಸಫಲತೆಯು ಸಿಗುವುದು.

2. ಸತ್ಯ-ಸತ್ಯ ಪ್ರಿಯತಮೆಯರಾಗಿ ಒಬ್ಬ ಪ್ರಿಯತಮನನ್ನು ನೆನಪು ಮಾಡಬೇಕಾಗಿದೆ. ನೆನಪಿನಲ್ಲೆಂದೂ ಕಣ್ಣುಮುಚ್ಚಿ, ತಲೆ ಬಗ್ಗಿಸಿಕೊಂಡು ಕುಳಿತುಕೊಳ್ಳಬಾರದು, ದೇಹೀ-ಅಭಿಮಾನಿಯಾಗಿರಬೇಕಾಗಿದೆ.

ವರದಾನ:
ಸರ್ವ ಖಜಾನೆಗಳನ್ನು ಸ್ವಯಂನ ಪ್ರತಿ ಮತ್ತು ಅನ್ಯರ ಪ್ರತಿ ಉಪಯೋಗಿಸುವಂತಹ ಅಖಂಡ ಮಹಾದಾನಿ ಭವ.

ಹೇಗೆ ತಂದೆಯ ಭಂಡಾರ ಸದಾ ನಡೆಯುತ್ತಿರುತ್ತದೆ, ಪ್ರತಿದಿನ ಕೊಡುತ್ತಿರುತ್ತಾರೆ, ಅದೇ ರೀತಿ ತಮ್ಮದೂ ಸಹ ಅಖಂಡ ಭಂಡಾರ ನಡೆಯುತ್ತಲೇಯಿರಲಿ ಏಕೆಂದರೆ ನಿಮ್ಮ ಬಳಿ ಜ್ಞಾನದ, ಶಕ್ತಿಗಳ, ಖುಷಿಯ ತುಂಬಿರುವ ಭಂಡಾರವಿದೆ. ಇದನ್ನು ಜೊತೆಯಲ್ಲಿಟ್ಟುಕೊಳ್ಳುವುದು ಅಥವಾ ಉಪಯೋಗಿಸುವುದರಲ್ಲಿ ಯಾವುದೇ ಪ್ರಕಾರದ ಅಪಾಯವಿಲ್ಲ. ಈ ಭಂಡಾರ ತೆರೆದಿಟ್ಟರೆ ಕಳ್ಳರು ಬರುವುದಿಲ್ಲ. ಬಂದ್ ಮಾಡಿಟ್ಟರೆ ಕಳ್ಳರು ಬಂದುಬಿಡುವರು. ಆದ್ದರಿಂದ ಪ್ರತಿದಿನ ನಿಮಗೆ ಸಿಕ್ಕಿರುವ ಖಜಾನಗಳನ್ನು ನೋಡಿಕೊಳ್ಳಿ ಮತ್ತು ಸ್ವಯಂ ಪ್ರತಿ ಹಾಗೂ ಅನ್ಯರ ಪ್ರತಿ ಉಪಯೋಗಿಸಿ ಆಗ ಅಖಂಡ ಮಹಾದಾನಿಯಾಗಿಬಿಡುವಿರಿ.

ಸ್ಲೋಗನ್:
ಕೇಳಿದ್ದನ್ನು ಮನನ ಮಾಡಿ. ಮನನ ಮಾಡುವುದರಿಂದಲೇ ಶಕ್ತಿಶಾಲಿಯಾಗುವಿರಿ.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

ಸೇವೆ ಮತ್ತು ಸ್ಥಿತಿ, ತಂದೆ ಮತ್ತು ನೀವು, ಇದು ಕಂಬೈಂಡ್ ಸ್ಥಿತಿ, ಕಂಬೈಂಡ್ ಸೇವೆ ಮಾಡಿ ಆಗ ಸದಾ ಫರಿಶ್ತೆ ಸ್ವರೂಪದ ಅನುಭವ ಮಾಡುವಿರಿ. ಸದಾ ತಂದೆಯ ಜೊತೆಯಿದೆ ಮತ್ತು ಜೊತೆಗಾರರು ಇದ್ದಾರೆ – ಈ ಡಬಲ್ ಅನುಭವವಾಗಲಿ. ಸ್ವಯಂನ್ ಲಗನ್ನಲ್ಲಿ ಸದಾ ಜೊತೆಯ ಅನುಭವ ಮಾಡಿ ಮತ್ತು ಸೇವೆಯಲ್ಲಿ ಸದಾ ಜೊತೆಗಾರರ ಅನುಭವ ಮಾಡಿ.