07.04.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಯಾವಾಗಲೆಲ್ಲಾ ಸಮಯ ಸಿಗುತ್ತದೆ ಆಗ ಏಕಾಂತದಲ್ಲಿ ಕುಳಿತು ಸತ್ಯ ಪ್ರಿಯತಮನನ್ನು ನೆನಪು ಮಾಡಿ
ಏಕೆಂದರೆ ನೆನಪಿನಿಂದಲೇ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆ”
ಪ್ರಶ್ನೆ:
ತಂದೆಯು
ಸಿಕ್ಕಿದ್ದಾರೆಂದರೆ ಯಾವ ಆಲಸ್ಯವು ಸಮಾಪ್ತಿಯಾಗಬೇಕಾಗಿದೆ?
ಉತ್ತರ:
ಕೆಲವು ಮಕ್ಕಳು
ಆಲಸಿಗಳಾಗಿ ಹೇಳುತ್ತಾರೆ - ನಾವಂತು ತಂದೆಯ ಮಕ್ಕಳಾಗಿ ಬಿಟ್ಟಿದ್ದೇವೆ. ನೆನಪಿನ ಪರಿಶ್ರಮ
ಪಡುವುದಿಲ್ಲ. ಗಳಿಗೆ-ಗಳಿಗೆ ನೆನಪು ಮರೆತು ಹೋಗುತ್ತದೆಯೆಂದರೆ ಇದೇ ಆಲಸ್ಯವಾಗಿದೆ. ಬಾಬಾ
ಹೇಳುತ್ತಾರೆ - ಮಕ್ಕಳೇ, ಒಂದುವೇಳೆ ನೆನಪಿನಲ್ಲಿರುತ್ತೀರೆಂದರೆ ಆಂತರ್ಯದಲ್ಲಿ ಸ್ಥಿರವಾದ
ಖುಷಿಯಿರುತ್ತದೆ. ಯಾವುದೇ ಪ್ರಕಾರದಿಂದ ಗುಟುಕರಿಸುವುದಿಲ್ಲ. ಹೇಗೆ ಬಂಧನದಲ್ಲಿರುವವರು
ನೆನಪಿನಲ್ಲಿ ಚಡಪಡಿಸುತ್ತಾರೆ, ಹಗಲು-ರಾತ್ರಿ ನೆನಪು ಮಾಡುತ್ತಾರೆ, ಹಾಗೆಯೇ ನೀವೂ ಸಹ ನಿರಂತರ
ನೆನಪಿನಲ್ಲಿ ಇರಬೇಕಾಗಿದೆ.
ಗೀತೆ:
ಅದೃಷ್ಟವನ್ನು
ಬೆಳಗಿಸಿಕೊಂಡು ಬಂದಿದ್ದೇನೆ......
ಓಂ ಶಾಂತಿ.
ತಂದೆಯು ಮಕ್ಕಳಿಗೂ ತಿಳಿಸಿದ್ದಾರೆ - ನೀವೂ ಓಂ ಶಾಂತಿ ಹೇಳುತ್ತೀರಿ. ತಂದೆಯೂ ಓಂ ಶಾಂತಿ ಅರ್ಥಾತ್
ನೀವು ಆತ್ಮರು ಶಾಂತ ಸ್ವರೂಪರಾಗಿದ್ದೀರಿ ಎಂದು ಹೇಳುತ್ತಾರೆ. ತಂದೆಯೂ ಶಾಂತ ಸ್ವರೂಪನಾಗಿದ್ದಾರೆ,
ಆತ್ಮದ ಸ್ವಧರ್ಮವು ಶಾಂತಿಯಾಗಿದೆ. ಪರಮಾತ್ಮನದೂ ಸ್ವಧರ್ಮ ಶಾಂತಿಯಾಗಿದೆ. ನೀವೂ ಸಹ
ಶಾಂತಿಧಾಮದಲ್ಲಿ ಇರುವವರಾಗಿದ್ದೀರಿ. ತಂದೆಯೂ ಸಹ ಹೇಳುತ್ತಾರೆ - ನಾನೂ ಕೂಡ
ಅಲ್ಲಿರುವವನಾಗಿದ್ದೇನೆ. ನೀವು ಮಕ್ಕಳು ಪುನರ್ಜನ್ಮದಲ್ಲಿ ಬರುತ್ತೀರಿ, ನಾನು ಬರುವುದಿಲ್ಲ. ನಾನು
ಈ ರಥದಲ್ಲಿ ಪ್ರವೇಶ ಮಾಡುತ್ತೇನೆ. ಇದು ನನ್ನ ರಥವಾಗಿದೆ. ಒಂದುವೇಳೆ ಶಂಕರನೊಂದಿಗೆ ಕೇಳುತ್ತೀರಿ,
ಕೇಳುವುದಕ್ಕಂತು ಸಾಧ್ಯವಿಲ್ಲ. ಆದರೆ ತಿಳಿದುಕೊಳ್ಳಿರಿ - ಸೂಕ್ಷ್ಮವತದಲ್ಲಿ ಹೋಗಿ ಯಾರೇ
ಕೇಳುತ್ತಾರೆಂದರೆ ಹೇಳುತ್ತಾರೆ - ಈ ಸೂಕ್ಷ್ಮ ಶರೀರ ನಮ್ಮದಾಗಿದೆ. ಶಿವ ತಂದೆಯು ಹೇಳುತ್ತಾರೆ -
ಇದು ನಮ್ಮ ಶರೀರವಲ್ಲ. ಇದನ್ನು ನಾವು ಬಾಡಿಗೆಯಾಗಿ ತೆಗೆದುಕೊಂಡಿದ್ದೇವೆ ಏಕೆಂದರೆ ನನಗೂ ಸಹ
ಕರ್ಮೇಂದ್ರಿಯಗಳ ಆಧಾರ ಬೇಕಾಗಿದೆ. ಮೊಟ್ಟ ಮೊದಲ ಮುಖ್ಯ ಮಾತನ್ನು ತಿಳಿಸಬೇಕಾಗಿದೆ - ಪತಿತ-ಪಾವನ,
ಜ್ಞಾನ ಸಾಗರ ಕೃಷ್ಣನಲ್ಲ. ಶ್ರೀ ಕೃಷ್ಣನು ಸರ್ವ ಆತ್ಮರನ್ನು ಪತಿತರಿಂದ ಪಾವನರನ್ನಾಗಿ
ಮಾಡುವುದಿಲ್ಲ, ಅವನಂತು ಪಾವನ ಪ್ರಪಂಚದಲ್ಲಿ ಬಂದು ರಾಜ್ಯ ಮಾಡುತ್ತಾನೆ. ಮೊದಲು ರಾಜ
ಕುಮಾರನಾಗುತ್ತಾನೆ ನಂತರ ಮಹಾರಾಜ ಆಗುತ್ತಾರೆ. ಅವರಲ್ಲಿಯೂ ಜ್ಞಾನವಿರುವುದಿಲ್ಲ. ರಚನೆಯ
ಜ್ಞಾನವಂತು ರಚಯಿತನಲ್ಲಿಯೇ ಇರುತ್ತದೆಯಲ್ಲವೆ. ಶ್ರೀ ಕೃಷ್ಣನನ್ನು ರಚನೆ ಎಂದು ಹೇಳಲಾಗುತ್ತದೆ,
ರಚಯಿತ ತಂದೆಯೇ ಬಂದು ಜ್ಞಾನವನ್ನು ಕೊಡುತ್ತಾರೆ. ಈಗ ತಂದೆಯು ರಚಿಸುತ್ತಿದ್ದಾರೆ, ಹೇಳುತ್ತಾರೆ -
ನೀವು ನಮ್ಮ ಮಕ್ಕಳಾಗಿದ್ದೀರಿ. ಬಾಬಾ ನಾವು ತಮ್ಮವರಾಗಿದ್ದೇವೆ ಎಂದು ನೀವೂ ಹೇಳುತ್ತೀರಿ.
ಬ್ರಹ್ಮಾನ ಮೂಲಕ ಬ್ರಾಹ್ಮಣರ ಸ್ಥಾಪನೆ ಎಂದು ಹೇಳಲಾಗುತ್ತದೆ. ಇಲ್ಲವೆಂದರೆ ಬ್ರಾಹ್ಮಣರೆಲ್ಲಿಂದ
ಬರುತ್ತಾರೆ? ಸೂಕ್ಷ್ಮವತನದಲ್ಲಿರುವ ಬ್ರಹ್ಮಾ ಬೇರೆ ಯಾರೋ ಇಲ್ಲ, ಮೇಲಿರುವಂತಹವರೇ
ಕೆಳಗಿರುವಂತಹವರು, ಅವರೇ ಮೇಲಿರುವಂತಹವರಾಗಿದ್ದಾರೆ. ಒಬ್ಬರೇ ಆಗಿದ್ದಾರೆ. ಒಳ್ಳೆಯದು - ವಿಷ್ಣು
ಮತ್ತು ಲಕ್ಷ್ಮೀ-ನಾರಾಯಣರದೂ ಒಂದೇ ಮಾತಾಗಿದೆ. ಅವರು ಎಲ್ಲಿಯವರಾಗಿದ್ದಾರೆ? ಬ್ರಹ್ಮಾ ಸೋ
ವಿಷ್ಣುವಾಗುತ್ತಾರೆ. ಬ್ರಹ್ಮಾ-ಸರಸ್ವತಿಯೇ ಲಕ್ಷ್ಮಿ-ನಾರಾಯಣ ನಂತರ ಅವರೇ ಇಡೀ ಕಲ್ಪದ 84 ಜನ್ಮಗಳ
ನಂತರ ಬಂದು ಸಂಗಮದಲ್ಲಿ ಬ್ರಹ್ಮಾ-ಸರಸ್ವತಿಯಾಗುತ್ತಾರೆ. ಲಕ್ಷ್ಮೀ-ನಾರಾಯಣರೂ ಸಹ
ಮನುಷ್ಯನಾಗಿದ್ದಾರೆ, ಅವರದು ದೇವಿ-ದೇವತಾ ಧರ್ಮವಾಗಿದೆ. ವಿಷ್ಣುವಿಗೆ 4 ಭುಜಗಳನ್ನು ಕೊಡಲಾಗಿದೆ.
ಇದು ಪ್ರವೃತ್ತಿ ಮಾರ್ಗವನ್ನು ತೋರಿಸಲಾಗಿದೆ. ಭಾರತದಲ್ಲಿ ಪ್ರಾರಂಭದಿಂದಲೇ ಪ್ರವೃತ್ತಿ ಮಾರ್ಗ
ನಡೆಯುತ್ತಾ ಬರುತ್ತದೆ ಆದ್ದರಿಂದ ವಿಷ್ಣುವಿಗೆ 4 ಭುಜಗಳನ್ನು ಕೊಟ್ಟಿದ್ದಾರೆ. ಇಲ್ಲಿ
ಬ್ರಹ್ಮಾ-ಸರಸ್ವತಿ ಇದ್ದಾರೆ, ಆ ಸರಸ್ವತಿ ದತ್ತು ಮಗುವಾಗಿದ್ದಾರೆ. ಇವರ (ಬ್ರಹ್ಮಾ ಬಾಬಾ) ಹೆಸರು
ಲಕೀರಾಜ್ ಎಂದಿತ್ತು, ನಂತರ ಇವರ ಹೆಸರು ಬ್ರಹ್ಮಾ ಎಂದು ಇಡಲಾಯಿತು. ಶಿವ ತಂದೆಯು ಇವರಲ್ಲಿ
ಪ್ರವೇಶ ಮಾಡಿದರು ಮತ್ತು ರಾಧೆಯನ್ನು ತನ್ನ ಮಗುವನ್ನಾಗಿ ಮಾಡಿಕೊಂಡರು, ಸರಸ್ವತಿ ಎಂದು
ಹೆಸರಿಡಲಾಯಿತು. ಸರಸ್ವತಿಗೆ ಬ್ರಹ್ಮಾ ಯಾವುದೇ ಲೌಕಿಕ ತಂದೆಯಲ್ಲ. ಇವರಿಬ್ಬರ ಲೌಕಿಕ ತಂದೆ
ಬೇರೆಯಿದ್ದರು, ಈಗ ಅವರಿಲ್ಲ. ಇವರನ್ನು ಶಿವ ತಂದೆಯು ಬ್ರಹ್ಮಾರವರ ಮುಖಾಂತರ ದತ್ತು ಮಾಡಿಕೊಂಡರು.
ನೀವು ದತ್ತು ಮಕ್ಕಳಾಗಿದ್ದೀರಿ. ಬ್ರಹ್ಮಾನೂ ಸಹ ಶಿವ ತಂದೆಯ ಮಗನಾಗಿದ್ದಾರೆ. ಬ್ರಹ್ಮಾನ ಮುಖ
ಕಮಲದಿಂದ ರಚಿಸುತ್ತಾರೆ ಆದ್ದರಿಂದ ಬ್ರಹ್ಮಾನನ್ನೂ ಸಹ ಮಾತಾ ಎಂದು ಹೇಳಲಾಗುತ್ತದೆ. ನೀವು
ಮಾತಾಪಿತಾ ನಾವು ನಿಮ್ಮ ಬಾಲಕರು, ನಿಮ್ಮ ಕೃಪೆಯಿಂದ ಸುಖದ ಗಣಿ...... ಗಾಯನ ಮಾಡುತ್ತಾರಲ್ಲವೆ.
ನೀವು ಬಾಲಕರು ಬಂದು ಬ್ರಾಹ್ಮಣರಾಗಿದ್ದೀರಿ. ಇದರಲ್ಲಿ ಬಹಳ ಚೆನ್ನಾಗಿ ತಿಳಿದುಕೊಳ್ಳುವ
ಬುದ್ಧಿಯಿರಬೇಕು. ನೀವು ಮಕ್ಕಳು ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ.
ಬ್ರಹ್ಮಾರವರೇನು ಸ್ವರ್ಗದ ರಚಯಿತ ಅಥವಾ ಜ್ಞಾನ ಸಾಗರನಲ್ಲ. ಜ್ಞಾನ ಸಾಗರ ಒಬ್ಬರೇ ತಂದೆಯಾಗಿದ್ದಾರೆ.
ಆತ್ಮದ ತಂದೆಯೂ ಸಹ ಜ್ಞಾನ ಸಾಗರನಾಗಿದ್ದಾರೆ. ಆತ್ಮವೂ ಜ್ಞಾನ ಸಾಗರನಾಗುತ್ತದೆ ಆದರೆ ಇವರನ್ನು (ಬ್ರಹ್ಮಾ)
ಜ್ಞಾನ ಸಾಗರನೆಂದು ಹೇಳುವುದಿಲ್ಲ ಏಕೆಂದರೆ ಸಾಗರನಂತು ಒಬ್ಬರೇ ಆಗಿದ್ದಾರೆ. ನೀವೆಲ್ಲರೂ
ನದಿಗಳಾಗಿದ್ದೀರಿ. ಸಾಗರನಿಗೆ ತನ್ನದೇ ಆದ ಶರೀರವಿಲ್ಲ, ನದಿಗಳಿಗೆ ಇದೆ. ನೀವು ಜ್ಞಾನ
ನದಿಗಳಾಗಿದ್ದೀರಿ. ಕಲ್ಕತ್ತಾದಲ್ಲಿ ಬ್ರಹ್ಮ ಪುತ್ರ ನದಿಯು ಬಹಳ ದೊಡ್ಡದಾಗಿದೆ ಏಕೆಂದರೆ ಅದರ
ಸಂಬಂಧ ಸಾಗರದೊಂದಿಗಿದೆ. ಅದರ ಮೇಳ ಬಹಳ ದೊಡ್ಡದಾಗಿ ಆಗುತ್ತದೆ. ಇಲ್ಲಿಯೂ ಮೇಳ ಆಗುತ್ತದೆ. ಸಾಗರ
ಮತ್ತು ಬ್ರಹ್ಮ ಪುತ್ರ ಇಬ್ಬರೂ ಕಂಬೈಂಡ್ ಆಗಿದ್ದಾರೆ. ಇದು ಚೈತನ್ಯ, ಅದು ಜಡ ಮೇಳವಾಗಿದೆ. ಈ
ಮಾತನ್ನು ತಂದೆಯು ತಿಳಿಸುತ್ತಾರೆ, ಶಾಸ್ತ್ರಗಳಲ್ಲಿಲ್ಲ. ಶಾಸ್ತ್ರಗಳು ಭಕ್ತಿಮಾರ್ಗದ ವಿಭಾಗವಾಗಿದೆ.
ಇದು ಜ್ಞಾನ ಮಾರ್ಗ, ಅದು ಭಕ್ತಿ ಮಾರ್ಗವಾಗಿದೆ. ಅರ್ಧ ಕಲ್ಪ ಭಕ್ತಿಮಾರ್ಗದ ವಿಭಾಗವು ನಡೆಯುತ್ತದೆ.
ಅದರಲ್ಲಿ ಜ್ಞಾನ ಸಾಗರ ಇಲ್ಲವೇ ಇಲ್ಲ. ಪರಮಪಿತ ಪರಮಾತ್ಮ, ಜ್ಞಾನ ಸಾಗರ ತಂದೆಯು ಸಂಗಮದಲ್ಲಿ ಬಂದು
ಜ್ಞಾನಸ್ನಾನದಿಂದ ಎಲ್ಲರ ಸದ್ಗತಿ ಮಾಡುತ್ತಾರೆ.
ನೀವು ತಿಳಿದಿದ್ದೀರಿ -
ನಾವು ಬೇಹದ್ದಿನ ತಂದೆಯಿಂದ ಸ್ವರ್ಗದ ಸುಖದ ಅದೃಷ್ಟವನ್ನು ರೂಪಿಸಿಕೊಳ್ಳುತ್ತಿದ್ದೇವೆ. ಅವಶ್ಯವಾಗಿ
ನಾವು ಸತ್ಯಯುಗ, ತ್ರೇತಾದಲ್ಲಿ ದೇವಿ-ದೇವತೆಗಳಾಗಿದ್ದೆವು, ಈಗ ನಾವು ಪೂಜಾರಿ ಮನುಷ್ಯರಾಗಿದ್ದೇವೆ.
ಮತ್ತೆ ಮನುಷ್ಯರಿಂದ ನೀವು ದೇವತೆಗಳಾಗುತ್ತೀರಿ. ಬ್ರಾಹ್ಮಣರಿಂದ ದೇವತಾ ಧರ್ಮದಲ್ಲಿ ಬರುತ್ತೀರಿ,
ನಂತರ ಕ್ಷತ್ರಿಯ, ವೈಶ್ಯ, ಶೂದ್ರರಾದಿರಿ. 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗಿಳಿಯಬೇಕಾಯಿತು. ಇದನ್ನೂ ಸಹ ನಿಮಗೆ ತಂದೆಯು
ತಿಳಿಸಿದ್ದಾರೆ. ನೀವು ತಮ್ಮ ಜನ್ಮಗಳನ್ನು ತಿಳಿದುಕೊಂಡಿರಲಿಲ್ಲ, 84 ಜನ್ಮಗಳೂ ಸಹ ನೀವೇ
ತೆಗೆದುಕೊಳ್ಳುತ್ತೀರಿ. ಯಾರು ಮೊಟ್ಟ ಮೊದಲು ಬರುತ್ತಾರೆ, ಅವರೇ ಪೂರ್ಣ 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾರೆ. ಯೋಗದಿಂದಲೇ ತುಕ್ಕು ಬಿಡುತ್ತದೆ, ಯೋಗದಲ್ಲಿಯೇ ಪರಿಶ್ರಮವಿದೆ. ಭಲೆ ಕೆಲವು
ಮಕ್ಕಳು ಜ್ಞಾನದಲ್ಲಿ ಮುಂದೆ ಹೋಗುತ್ತಾರೆ ಆದರೆ ಯೋಗದಲ್ಲಿ ಕಚ್ಚಾ ಇದ್ದಾರೆ. ಬಂಧನ ಮುಕ್ತರಿಗಿಂತ
ಬಂಧನದಲ್ಲಿರುವವರು ಯೋಗದಲ್ಲಿ ಚೆನ್ನಾಗಿದ್ದಾರೆ. ಅವರಂತು ಶಿವ ತಂದೆಯ ಮಿಲನಕ್ಕಾಗಿ
ಚಡಪಡಿಸುತ್ತಿರುತ್ತಾರೆ. ನಿಮಗಂತು ಸಿಕ್ಕಿದ್ದಾರೆ. ನೆನಪು ಮಾಡಿ ಎಂದು ಹೇಳಲಾಗುತ್ತದೆ ಆದರೆ ನೀವು
ಗಳಿಗೆ-ಗಳಿಗೆಗೂ ಮರೆತು ಹೋಗುತ್ತೀರಿ. ನಿಮಗೆ ಬಿರುಗಾಳಿಗಳು ಬಹಳ ಬರುತ್ತವೆ. ಅವರು ನೆನಪಿನಲ್ಲಂತು
ಚಡಪಡಿಸುತ್ತಿರುತ್ತಾರೆ. ನೀವು ಚಡಪಡಿಸುವುದಿಲ್ಲ. ಅವರು ಮನೆಯಲ್ಲಿ ಕುಳಿತಿದ್ದಂತೆಯೇ ಶ್ರೇಷ್ಠ
ಪದವಿಯಾಗುತ್ತದೆ, ನೀವು ತಿಳಿದಿದ್ದೀರಿ - ತಂದೆಯ ನೆನಪಿನಲ್ಲಿರುವುದರಿಂದ ನಮಗೆ ಸ್ವರ್ಗದ
ರಾಜ್ಯಭಾಗ್ಯ ಸಿಗುವುದು. ಹೇಗೆ ಮಗು ಗರ್ಭದಿಂದ ಹೊರಬರಲು ಚಡಪಡಿಸುತ್ತದೆ ಹಾಗೆಯೇ
ಬಂಧನದಲ್ಲಿರುವವರು ಚಡಪಡಿಸುತ್ತಾ-ಚಡಪಡಿಸುತ್ತಾ, ಶಿವ ಬಾಬಾ ಈ ಬಂಧನದಿಂದ ಬಿಡಿಸಿ ಎಂದು
ಕೂಗುತ್ತಿರುತ್ತಾರೆ. ಹಗಲು-ರಾತ್ರಿ ನೆನಪು ಮಾಡುತ್ತಾರೆ. ನಿಮಗೆ ತಂದೆಯು ಸಿಕ್ಕಿದ್ದಾರೆಂದರೆ
ನೀವು ಹುಡುಗಾಟಿಕೆಯಲ್ಲಿದ್ದೀರಿ. ನಾವು ಬಾಬಾರವರ ಮಕ್ಕಳಾಗಿದ್ದೇವೆ, ನಾವು ಈ ಶರೀರವನ್ನು ಬಿಟ್ಟು
ರಾಜಕುಮಾರರಾಗುತ್ತೇವೆ ಎನ್ನುವ ಸ್ಥಿರವಾದ ಖುಷಿಯು ಆಂತರ್ಯದಲ್ಲಿರಬೇಕು. ಆದರೆ ಮಾಯೆಯು ನೆನಪು
ಮಾಡಲು ಬಿಡುವುದಿಲ್ಲ. ನೆನಪಿನಿಂದಲೇ ಬಹಳ ಖುಷಿಯಲ್ಲಿರುತ್ತೀರಿ, ನೆನಪು ಮಾಡುವುದಿಲ್ಲವೆಂದರೆ
ಗುಟುಕರಿಸುತ್ತಿರುತ್ತೀರಿ. ಅರ್ಧಕಲ್ಪ ನೀವು ರಾವಣ ರಾಜ್ಯದಲ್ಲಿ ದುಃಖವನ್ನು ನೋಡಿದ್ದೀರಿ. ಅಕಾಲ
ಮೃತ್ಯುವಾಗುತ್ತಾ ಬಂದಿದೆ. ದುಃಖವಂತು ಇದ್ದೇ ಇದೆ. ಭಲೆ ಎಷ್ಟೇ ಸಾಹುಕಾರರಿರಲಿ, ದುಃಖವಂತು ಇದೆ,
ಅಕಾಲ ಮೃತ್ಯುವಾಗುತ್ತದೆ. ಸತ್ಯಯುಗದಲ್ಲಿ ಇಂತಹ ಅಕಾಲ ಮರಣವಾಗುವುದಿಲ್ಲ, ಎಂದೂ
ಖಾಯಿಲೆಯಾಗುವುದಿಲ್ಲ. ಸಮಯದಲ್ಲಿ ಕುಳಿತು-ಕುಳಿತಿದ್ದಂತೆ ತಾನಾಗಿಯೇ ಒಂದು ಶರೀರವನ್ನು ಬಿಟ್ಟು
ಇನ್ನೊಂದನ್ನು ತೆಗೆದುಕೊಂಡು ಬಿಡುತ್ತಾರೆ. ಅದರ ಹೆಸರೇ ಸುಖಧಾಮ ಎಂದಾಗಿದೆ. ಮನುಷ್ಯರಂತು
ಸ್ವರ್ಗದ ಮಾತನ್ನು ಕಲ್ಪನೆಯೆಂದು ತಿಳಿಯುತ್ತಾರೆ. ಸ್ವರ್ಗ ಎಲ್ಲಿಂದ ಬರುತ್ತದೆ ಎಂದು ಹೇಳುತ್ತಾರೆ.
ನೀವು ತಿಳಿದಿದ್ದೀರಿ - ನಾವಂತು ಸ್ವರ್ಗದಲ್ಲಿ ಇರುವವರಾಗಿದ್ದೇವೆ ಮತ್ತೆ 84 ಜನ್ಮಗಳನ್ನು
ತೆಗೆದುಕೊಳ್ಳುತ್ತೇವೆ. ಈ ಪೂರ್ಣ ಆಟವು ಭಾರತದ ಮೇಲೆಯೇ ಮಾಡಲ್ಪಟ್ಟಿದೆ. ನಾವು 21 ಜನ್ಮಗಳು ಪಾವನ
ದೇವತೆಗಳಾಗಿದ್ದೆವು ನಂತರ ನಾವು ಕ್ಷತ್ರಿಯ, ವೈಶ್ಯ, ಶೂದ್ರರಾದೆವು. ಈಗ ಮತ್ತೆ
ಬ್ರಾಹ್ಮಣರಾಗಿದ್ದೇವೆ ಎಂದು ನೀವು ತಿಳಿದುಕೊಂಡಿದ್ದೀರಿ. ಈ ಸ್ವದರ್ಶನ ಚಕ್ರವು ಬಹಳ ಸಹಜವಾಗಿದೆ.
ಇದನ್ನು ಶಿವ ತಂದೆಯು ತಿಳಿಸುತ್ತಿದ್ದಾರೆ.
ಶಿವ ತಂದೆಯು ಬ್ರಹ್ಮಾನ
ರಥದಲ್ಲಿ ಬಂದಿದ್ದಾರೆ ಎಂದು ತಿಳಿದಿದ್ದೀರಿ. ಯಾರು ಬ್ರಹ್ಮಾ ಆಗಿದ್ದಾರೆ ಅವರೇ ಸತ್ಯಯುಗದ
ಆದಿಯಲ್ಲಿ ಶ್ರೀ ಕೃಷ್ಣನಾಗಿದ್ದನು. 84 ಜನ್ಮಗಳನ್ನು ತೆಗೆದುಕೊಂಡು ಪತಿತರಾದರು ನಂತರ ಇವರಲ್ಲಿ (ಬ್ರಹ್ಮಾ)
ತಂದೆಯು ಪ್ರವೇಶ ಮಾಡಿ ದತ್ತು ಮಾಡಿಕೊಂಡಿದ್ದಾರೆ. ಸ್ವಯಂ ಹೇಳುತ್ತಾರೆ - ನಾನು ಈ ತನುವಿನ
ಆಧಾರವನ್ನು ತೆಗೆದುಕೊಂಡು ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿದ್ದೇನೆ. ನಿಮ್ಮನ್ನು ಸ್ವರ್ಗದ
ರಾಜಧಾನಿಗೆ ಯೋಗ್ಯರನ್ನಾಗಿ ಮಾಡುತ್ತೇನೆ, ಯಾರು ಯೋಗ್ಯರಾಗುತ್ತಾರೆಯೋ ಅವರೇ ರಾಜ್ಯಭಾಗ್ಯದಲ್ಲಿ
ಬರುತ್ತಾರೆ. ಇದರಲ್ಲಿ ಒಳ್ಳೆಯ ಗುಣವಿರಬೇಕು. ಮುಖ್ಯವಾಗಿರುವುದೇ ಪವಿತ್ರತೆಯಾಗಿದೆ. ಈ ಮಾತಿನಲ್ಲಿ
ಅಬಲೆಯರ ಅತ್ಯಾಚಾರವಾಗುತ್ತದೆ. ಕೆಲವು ಕಡೆ ಪುರುಷರ ಮೇಲೂ ಅತ್ಯಾಚಾರಗಳುತ್ತವೆ. ವಿಕಾರಕ್ಕಾಗಿ
ಒಬ್ಬರಿಗೊಬ್ಬರು ಬೇಸರ ಪಡಿಸುತ್ತಾರೆ. ಇಲ್ಲಿ ಮಾತೆಯರು ಬಹಳ ಮಂದಿಯಿರುವ ಕಾರಣ ಶಕ್ತಿ ಸೇನೆ ಎಂಬ
ಗಾಯನವಾಗಿದೆ. ವಂದೇ ಮಾತರಂ. ಸುಂದರರಾಗಲು ಈಗ ನೀವು ಕಾಮ ಚಿತೆಯಿಂದ ಇಳಿದು ಜ್ಞಾನ ಚಿತೆಯ ಮೇಲೆ
ಕುಳಿತಿದ್ದೀರಿ. ದ್ವಾಪರದಿಂದ ಕಾಮ ಚಿತೆಯ ಮೇಲೆ ಕುಳಿತಿದ್ದಿರಿ, ಒಬ್ಬರಿಗೊಬ್ಬರು ವಿಕಾರ ಕೊಡುವ
ಕಂಕಣವನ್ನು ವಿಕಾರಿ ಬ್ರಾಹ್ಮಣರು ಬಂಧಿಸುತ್ತಾರೆ. ನೀವು ನಿರ್ವಿಕಾರಿ ಬ್ರಾಹ್ಮಣರಾಗಿದ್ದೀರಿ.
ನೀವು ಅದನ್ನು ಕ್ಯಾನ್ಸಲ್ ಮಾಡಿಸಿ ಜ್ಞಾನ ಚಿತೆಯ ಮೇಲೆ ಕೂರಿಸುತ್ತೀರಿ. ಕಾಮ ಚಿತೆಯಿಂದ
ಕಪ್ಪಾದಿರಿ, ಜ್ಞಾನ ಚಿತೆಯಿಂದ ಸುಂದರರಾಗಿ ಬಿಡುತ್ತೀರಿ. ತಂದೆಯು ಹೇಳುತ್ತಾರೆ - ಭಲೆ ಒಟ್ಟಾಗಿ
ಇರಿ ಆದರೆ ಪ್ರತಿಜ್ಞೆ ಮಾಡಿ - ನಾವು ವಿಕಾರದಲ್ಲಿ ಹೋಗುವುದಿಲ್ಲ ಎಂದು. ಆದ್ದರಿಂದ ಬಾಬಾ
ಉಂಗುರವನ್ನೂ ತೊಡಿಸುತ್ತಾರೆ. ಶಿವ ತಂದೆಯು ತಂದೆಯೂ ಆಗಿದ್ದಾರೆ, ಪ್ರಿಯತಮನೂ ಆಗಿದ್ದಾರೆ. ಎಲ್ಲಾ
ಸೀತೆಯರ ರಾಮನಾಗಿದ್ದಾರೆ, ಅವರೇ ಪತಿತ-ಪಾವನನೂ ಆಗಿದ್ದಾರೆ. ಬಾಕಿ ರಘುಪತಿ ರಾಘವ ರಾಜಾರಾಮನ
ಮಾತಲ್ಲ. ಅವರು ಸಂಗಮದಲ್ಲಿಯೇ ಈ ಪ್ರಾಲಬ್ಧವನ್ನು ಪಡೆದಿದ್ದರು, ಅವರಿಗೆ (ತ್ರೇತಾದ ರಾಮ) ಹಿಂಸಕ
ಬಾಣ ತೋರಿಸುವುದು ತಪ್ಪಾಗಿದೆ. ಚಿತ್ರದಲ್ಲಿಯೂ ಕೊಡಬಾರದು. ಕೇವಲ ಚಂದ್ರವಂಶಿ ಎಂದು ಬರೆಯಬೇಕಾಗಿದೆ.
ಮಕ್ಕಳಿಗೆ ತಿಳಿಸಬೇಕಾಗಿದೆ – ಶಿವ ತಂದೆಯು ಇವರ ಮೂಲಕ ನಮಗೆ ಈ ಚಕ್ರದ ರಹಸ್ಯವನ್ನು
ತಿಳಿಸುತಿದ್ದಾರೆ. ಸತ್ಯ ನಾರಾಯಣನ ಕಥೆ ಹೇಳುತ್ತಾರಲ್ಲವೆ. ಅದು ಮನುಷ್ಯರು ಮಾಡಿರುವ ಕಥೆಯಾಗಿದೆ.
ನರನಿಂದ ನಾರಾಯಣನಂತು ಯಾರೂ ಆಗುವುದಿಲ್ಲ. ಸತ್ಯ ನಾರಾಯಣನ ಕಥೆಯ ಅರ್ಥವೇ ಆಗಿದೆ - ನರನಿಂದ
ನಾರಾಯಣರಾಗುವುದು. ಅಮರ ಕಥೆಯೂ ಸಹ ತಿಳಿಸುತ್ತಾರೆ ಆದರೆ ಅಮರಪುರಿಯಲ್ಲಂತು ಯಾರೂ ಹೋಗುವುದಿಲ್ಲ.
ಮೃತ್ಯುಲೋಕವು 2500 ವರ್ಷ ನಡೆಯುತ್ತದೆ. ಮೂರನೆಯ ನೇತ್ರದ ಕಥೆಯನ್ನು ಮಾತೆಯರು ಕೇಳುತ್ತಾರೆ.
ವಾಸ್ತವದಲ್ಲಿ ಇದು ಮೂರನೆಯ ಜ್ಞಾನದ ನೇತ್ರವನ್ನು ಕೊಡುವ ಕಥೆಯಾಗಿದೆ. ಈಗ ಜ್ಞಾನದ ಮೂರನೇ
ಆತ್ಮನಿಗೆ ಸಿಗುತ್ತದೆ ಅಂದಮೇಲೆ ಆತ್ಮಾಭಿಮಾನಿ ಆಗಬೇಕಾಗಿದೆ. ನಾನು ಈ ಶರೀರದ ಮೂಲಕ ಈಗ
ದೇವತೆಯಾಗುತ್ತೇನೆ. ನನ್ನಲ್ಲಿಯೇ ಸಂಸ್ಕಾರವಿದೆ. ಮನುಷ್ಯರೆಲ್ಲರೂ ದೇಹಾಭಿಮಾನಿಯಾಗಿದ್ದಾರೆ.
ತಂದೆಯು ಬಂದು ದೇಹೀ-ಅಭಿಮಾನಿಯನ್ನಾಗಿ ಮಾಡುತ್ತಾರೆ. ಮತ್ತೆ ಮನುಷ್ಯರು ಆತ್ಮ-ಪರಮಾತ್ಮ ಒಂದೇ
ಆಗಿದೆ, ಇವೆಲ್ಲಾ ರೂಪಗಳನ್ನು ಪರಮಾತ್ಮನೇ ಧಾರಣೆ ಮಾಡಿದ್ದಾರೆ ಎಂದು ಹೇಳಿ ಬಿಡುತ್ತಾರೆ. ತಂದೆಯು
ಹೇಳುತ್ತಾರೆ - ಇದೆಲ್ಲಾ ರಾಂಗ್ ಆಗಿದೆ, ಇದಕ್ಕೆ ಮಿಥ್ಯ ಅಭಿಮಾನ, ಮಿಥ್ಯ ಜ್ಞಾನವೆಂದು
ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಬಿಂದುವಿನಂತೆ ಇದ್ದೇನೆ. ನೀವೂ ಸಹ
ತಿಳಿದುಕೊಂಡಿರಲಿಲ್ಲ, ಇವರೂ ಸಹ (ಬ್ರಹ್ಮಾ ತಂದೆ) ತಿಳಿದುಕೊಂಡಿರಲಿಲ್ಲ. ಈಗ ತಂದೆಯು
ತಿಳಿಸುತ್ತಾರೆ - ಇದರಲ್ಲಿ ಸಂಶಯ ಬರಬಾರದು, ನಿಶ್ಚಯವಾಗಬೇಕು. ತಂದೆಯು ಅವಶ್ಯವಾಗಿ ಸತ್ಯವನ್ನೇ
ಹೇಳುತ್ತಾರೆ, ಸಂಶಯ ಬುದ್ಧಿ ವಿನಃಶ್ಯಂತಿ. ಅಂತಹವರು ಪೂರ್ಣ ಆಸ್ತಿಯನ್ನು ಪಡೆಯುವುದಿಲ್ಲ.
ಆತ್ಮಾಭಿಮಾನಿಯಾಗುವುದರಲ್ಲಿಯೇ ಪರಿಶ್ರಮವಿದೆ. ಭೋಗವನ್ನು ತಯಾರು ಮಾಡುತ್ತಾ ಬುದ್ಧಿಯು ತಂದೆಯ ಕಡೆ
ತೊಡಗಿರಲಿ - ಪ್ರತೀ ಮಾತಿನಲ್ಲಿ ಈ ಅಭ್ಯಾಸ ಮಾಡಬೇಕಾಗಿದೆ. ನೆನಪಿನಿಂದಲೇ ನೀವು
ಸತೋಪ್ರಧಾನರಾಗುತ್ತೀರಿ. 8 ಗಂಟೆ ಕರ್ಮ ಮಾಡುವುದಕ್ಕಾಗಿ ಕೊಡಲಾಗಿದೆ. ಮಧ್ಯದಲ್ಲಿಯೂ ಸಹ
ಏಕಾಂತದಲ್ಲಿ ಹೋಗಿ ಕುಳಿತುಕೊಳ್ಳಿ, ನೀವು ತಂದೆಯ ಪರಿಚಯವನ್ನು ಎಲ್ಲರಿಗೂ ತಿಳಿಸಿರಿ. ಇಂದು
ಕೇಳುವುದಿಲ್ಲವೆಂದರೆ ನಾಳೆ ಕೇಳುತ್ತಾರೆ. ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ನಾವು
ಸ್ವರ್ಗದಲ್ಲಿದ್ದೆವು ಈಗ ಮತ್ತೆ ನರಕವಾಸಿಗಳಾಗಿದ್ದೇವೆ. ಈಗ ಮತ್ತೆ ತಂದೆಯ ಆಸ್ತಿ ಸಿಗಬೇಕಾಗಿದೆ.
ಭಾರತವಾಸಿಗಳಿಗೇ ತಿಳಿಸಲಾಗುತ್ತದೆ. ತಂದೆಯು ಬರುವುದೂ ಭಾರತದಲ್ಲಿಯೇ ಆಗಿದೆ. ನೋಡಿ, ನಿಮ್ಮ ಬಳಿ
ಮುಸಲ್ಮಾನರೂ ಬರುತ್ತಾರೆ, ಅವರೂ ಸಹ ಸೇವಾಕೇಂದ್ರವನ್ನು ಸಂಭಾಲನೆ ಮಾಡುತ್ತಾರೆ. ಹೇಳುತ್ತಾರೆ –
ಶಿವ ತಂದೆಯನ್ನು ನೆನಪು ಮಾಡಿರಿ. ಸಿಖ್ಖರೂ ಬರುತ್ತಾರೆ, ಕ್ರಿಶ್ಚಿಯನ್ನರೂ ಬರುತ್ತಾರೆ, ಮುಂದೆ
ಹೋದಂತೆ ಬಹಳ ಬರುತ್ತಾರೆ. ಈ ಜ್ಞಾನವು ಎಲ್ಲರಿಗಾಗಿ ಇದೆ ಏಕೆಂದರೆ ಇದಾಗಿದೆ - ತಂದೆಯ ಸಹಜ ನೆನಪು
ಮತ್ತು ಸಹಜ ಆಸ್ತಿ. ಆದರೆ ಅವಶ್ಯವಾಗಿ ಪವಿತ್ರರಂತು ಆಗಬೇಕಾಗುತ್ತದೆ. ದಾನ ಕೊಟ್ಟರೆ ಗ್ರಹಣ
ಬಿಡುವುದು. ಈಗ ಭಾರತದಲ್ಲಿ ರಾಹುವಿನ ಗ್ರಹಣವಿದೆ ನಂತರ ಬೃಹಸ್ಪತಿ ದೆಶೆಯು ಪ್ರಾರಂಭವಾಗುತ್ತದೆ
21 ಜನ್ಮಗಳಿಗಾಗಿ. ಮೊದಲು ಬೃಹಸ್ಪತಿ ದೆಶೆಯಾಗುತ್ತದೆ ನಂತರ ಶುಕ್ರ ದೆಶೆಯಾಗುತ್ತದೆ.
ಸೂರ್ಯವಂಶಿಯರ ಮೇಲೆ ಬೃಹಸ್ಪತಿ ದೆಶೆ, ಚಂದ್ರವಂಶಿಯರ ಮೇಲೆ ಶುಕ್ರ ದೆಶೆ ಎಂದು ಹೇಳಲಾಗುತ್ತದೆ.
ನಂತರ ದೆಶೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಎಲ್ಲದಕ್ಕಿಂತ ಕೆಟ್ಟ ದೆಶೆಯಾಗಿದೆ – ರಾಹು ದೆಶೆ.
ಬೃಹಸ್ಪತಿಯು ಯಾವುದೇ ಗುರುವಾಗುವುದಿಲ್ಲ, ಈ ದೆಶೆಯಾಗಿದೆ - ವೃಕ್ಷಪತಿಯದು. ವೃಕ್ಷಪತಿ ತಂದೆಯು
ಬರುತ್ತಾರೆ ಅಂದಮೇಲೆ ವೃಕ್ಷಪತಿ ಮತ್ತು ಶುಕ್ರ ದೆಶೆಯಾಗುತ್ತದೆ. ರಾವಣನು ಬರುತ್ತಾನೆಂದರೆ ರಾಹು
ದೆಶೆಯಾಗಿ ಬಿಡುತ್ತದೆ. ನೀವು ಮಕ್ಕಳ ಮೇಲೆ ಈಗ ಬೃಹಸ್ಪತಿ ದೆಶೆಯು ಕುಳಿತುಕೊಳ್ಳುತ್ತದೆ. ಕೇವಲ
ವೃಕ್ಷಪತಿಯನ್ನು ನೆನಪು ಮಾಡಿ, ಪವಿತ್ರರಾಗಿ, ಅಷ್ಟೇ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಪ್ರತಿಯೊಂದು
ಕಾರ್ಯ ಮಾಡುತ್ತಾ ಆತ್ಮಾಭಿಮಾನಿಯಾಗುವ ಅಭ್ಯಾಸ ಮಾಡಬೇಕಾಗಿದೆ. ದೇಹದ ಅಹಂಕಾರವು ಸಮಾಪ್ತಿಯಾಗಲಿ -
ಇದಕ್ಕಾಗಿ ಪರಿಶ್ರಮ ಪಡಬೇಕು.
2. ಸತ್ಯಯುಗೀ
ರಾಜ್ಯಭಾಗ್ಯದ ಯೋಗ್ಯರಾಗಲು ತಮ್ಮ ಮ್ಯಾನರ್ಸ್ನ್ನು ರಾಯಲ್ ಮಾಡಿಕೊಳ್ಳಬೇಕಾಗಿದೆ. ಪವಿತ್ರತೆಯೇ
ಎಲ್ಲದಕ್ಕಿಂತ ಶ್ರೇಷ್ಠ ಚಲನೆಯಾಗಿದೆ. ಪವಿತ್ರರಾಗುವುದರಿಂದಲೇ ಪವಿತ್ರ ಪ್ರಪಂಚದ
ಮಾಲೀಕರಾಗುತ್ತೀರಿ.
ವರದಾನ:
ಮಾಡಿ-ಮಾಡಿಸುವವರ ಸ್ಮೃತಿಯ ಮೂಲಕ ಸಹಜಯೋಗದ ಅನುಭವ ಮಾಡುವಂತಹ ಸಫಲತಾಮೂರ್ತಿ ಭವ.
ಯಾವುದೇ ಕಾರ್ಯವನ್ನು
ಮಾಡುತ್ತಿದ್ದರೂ ಇದೇ ಸ್ಮೃತಿಯಿರಲಿ - ಈ ಕಾರ್ಯಕ್ಕಾಗಿ ನಿಮಿತ್ತ ಮಾಡುವಂತಹ ಬೆನ್ನೆಲುಬು (ಸ್ಥೈರ್ಯ
ಕೊಡುವವರು) ಯಾರಾಗಿದ್ದಾರೆ. ಸ್ಥೈರ್ಯ ಕೊಡುವವರಿಲ್ಲದೆ ಯಾವುದೇ ಕರ್ಮದಲ್ಲಿ ಸಫಲತೆಯು ಸಿಗಲು
ಸಾಧ್ಯವಿಲ್ಲ ಆದ್ದರಿಂದ ಯಾವುದೇ ಕಾರ್ಯವನ್ನು ಮಾಡುತ್ತಿದ್ದರೂ ಇದನ್ನಷ್ಟೇ ಚಿಂತನೆ ಮಾಡಿರಿ -
ನಾನು ನಿಮಿತ್ತನಷ್ಟೇ, ಮಾಡಿಸುವವರು ಸ್ವಯಂ ಸರ್ವ ಸಮರ್ಥ ತಂದೆಯಾಗಿದ್ದಾರೆ - ಈ ಸ್ಮೃತಿಯನ್ನು
ಇಟ್ಟುಕೊಂಡು ಕರ್ಮ ಮಾಡುತ್ತೀರೆಂದರೆ ಸಹಜ ಯೋಗದ ಅನುಭೂತಿ ಆಗುತ್ತಿರುವುದು. ನಂತರ ಈ ಸಹಜಯೋಗವು
ಅಲ್ಲಿ ಸಹಜ ರಾಜ್ಯಾಡಳಿತವನ್ನು ಮಾಡಿಸುತ್ತದೆ. ಇಲ್ಲಿನ ಸಂಸ್ಕಾರವನ್ನು ಅಲ್ಲಿಗೆ ತೆಗೆದುಕೊಂಡು
ಹೋಗುವಿರಿ.
ಸ್ಲೋಗನ್:
ಇಚ್ಛೆಗಳು
ನೆರಳಿನಂತೆ, ಅದಕ್ಕೆ ತಾವು ಬೆನ್ನು ಮಾಡಿ ಬಿಡುತ್ತೀರೆಂದರೆ ಅದು ತಮ್ಮ ಹಿಂದಿಂದೆಯೇ ಬರುವುದು.
ಅವ್ಯಕ್ತ ಸೂಚನೆ:–
“ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”
ಮಧುರತೆ ಇಂತಹ ವಿಶೇಷ
ಧಾರಣೆಯಾಗಿದೆ ಯಾವುದು ಕಹಿಯಾದ ಧರಣಿಯನ್ನು ಸಹ ಮಧುರವನ್ನಾಗಿ ಮಾಡಿ ಬಿಡುತ್ತದೆ. ನೀವೆಲ್ಲರು
ಬದಲಾಗಲು ಆಧಾರ ತಂದೆಯ ಎರಡು ಮಧುರ ಮಾತುಗಳಾಗಿವೆ. ಮಧುರ ಮಕ್ಕಳೇ ನೀವು ಮಧುರ ಶುದ್ಧ
ಆತ್ಮರಾಗಿದ್ದೀರಿ. ಈ ಎರಡು ಮಾತುಗಳೇ ಬದಲಾಯಿಸಿ ಬಿಟ್ಟಿತು. ಮಧುರ ದೃಷ್ಟಿಯು ಬದಲಾಯಿಸಿ ಬಿಟ್ಟಿತು.
ಹೀಗೆಯೇ ಮಧುರತೆಯ ಮೂಲಕ ಅನ್ಯರನ್ನು ಸಹ ಮಧುರರನ್ನಾಗಿ ಮಾಡಿ. ಈ ಮುಖವನ್ನು ಮಧುರವನ್ನಾಗಿ ಮಾಡಿ.
ಸದಾ ಈ ಮಧುರತೆಯ ಉಡುಗೊರೆಯನ್ನು ಜೊತೆಯಲ್ಲಿಟ್ಟುಕೊಳ್ಳಿ. ಇದರಿಂದಲೇ ಸದಾ ಮಧುರರಾಗಿರುವಿರಿ ಮತ್ತು
ಮಧುರರನ್ನಾಗಿ ಮಾಡುವಿರಿ.