07.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಪರಸ್ಪರ ಆತ್ಮೀಯ ಸಹೋದರರಾಗಿದ್ದೀರಿ, ನಿಮ್ಮಲ್ಲಿ ಪರಸ್ಪರ ಬಹಳ ಪ್ರೀತಿಯಿರಬೇಕು. ನೀವು ಪ್ರೇಮದಿಂದ ತುಂಬಿರುವ ಗಂಗೆಯಾಗಿ, ಎಂದೂ ಜಗಳ ಕಲಹ ಮಾಡಬಾರದು”

ಪ್ರಶ್ನೆ:
ಆತ್ಮಿಕ ತಂದೆಗೆ ಎಂತಹ ಮಕ್ಕಳು ಬಹಳ-ಬಹಳ ಪ್ರಿಯರಾಗುತ್ತಾರೆ?

ಉತ್ತರ:
1) ಯಾರು ಶ್ರೀಮತದನುಸಾರ ಇಡೀ ವಿಶ್ವದ ಕಲ್ಯಾಣ ಮಾಡುತ್ತಾರೆ. 2) ಯಾರು ಹೂಗಳಾಗಿದ್ದಾರೆ, ಎಂದೂ ಯಾರಿಗೂ ಮುಳ್ಳು ಚುಚ್ಚುವುದಿಲ್ಲ, ಪರಸ್ಪರ ಬಹಳ-ಬಹಳ ಪ್ರೀತಿಯಿಂದಿರುತ್ತಾರೆ, ಎಂದೂ ಮುನಿಸಿಕೊಳ್ಳುವುದಿಲ್ಲವೋ, ಇಂಥ ಮಕ್ಕಳು ತಂದೆಗೆ ಬಹಳ-ಬಹಳ ಪ್ರಿಯರಾಗುತ್ತಾರೆ. ಯಾರು ದೇಹಾಭಿಮಾನದಲ್ಲಿ ಬಂದು ಪರಸ್ಪರ ಜಗಳವಾಡುತ್ತಾರೆ, ಉಪ್ಪು ನೀರಾಗಿ ವರ್ತಿಸುವರೋ ಅವರು ತಂದೆಯ ಗೌರವವನ್ನು ಕಳೆಯುತ್ತಾರೆ ಅವರು ತಂದೆಯ ನಿಂದನೆ ಮಾಡಿಸುವ ನಿಂದಕರಾಗುತ್ತಾರೆ.

ಓಂ ಶಾಂತಿ.
ಹೇಗೆ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆ ಪ್ರಿಯವಾಗಿರುವಂತೆ ಆತ್ಮಿಕ ತಂದೆಗೆ ಆತ್ಮಿಕ ಮಕ್ಕಳೂ ಪ್ರಿಯವಾಗಿರುತ್ತಾರೆ ಏಕೆಂದರೆ ಶ್ರೀಮತದನುಸಾರ ಇಡೀ ವಿಶ್ವದ ಕಲ್ಯಾಣ ಮಾಡುತ್ತಿದ್ದೀರಿ ಕಲ್ಯಾಣಕಾರಿ ಗಳೆಲ್ಲರೂ ಪ್ರಿಯರಾಗುತ್ತಾರೆ. ನೀವೂ ಸಹ ಪರಸ್ಪರ ಸಹೋದರ ಸಹೋದರರಾಗಿದ್ದೀರಿ ಅಂದಾಗ ಅವಶ್ಯವಾಗಿ ನೀವು ಒಬ್ಬರು ಇನ್ನೊಬ್ಬರಿಗೆ ಪ್ರಿಯರಾಗುತ್ತೀರಿ. ಎಷ್ಟು ಈ ತಂದೆಯ ಮಕ್ಕಳಲ್ಲಿ ಪರಸ್ಪರ ಪ್ರೀತಿ ಇರುವುದೋ ಅಷ್ಟು ಹೊರಗಿನವರೊಂದಿಗೆ ಇರುವುದಿಲ್ಲ. ನಿಮ್ಮಲ್ಲಿಯೂ ಪರಸ್ಪರ ಬಹಳ ಪ್ರೀತಿಯಿರಬೇಕು. ಒಂದು ವೇಳೆ ಸಹೋದರ ಸಹೋದರರೇ ಇಲ್ಲಿ ಹೊಡೆದಾಡಿದರೆ, ಜಗಳವಾಡಿದರೆ, ಅಥವಾ ಪ್ರೀತಿ ಮಾಡದಿದ್ದರೆ ಅವರು ಸಹೋದರರೇ ಅಲ್ಲ. ನಿಮ್ಮಲ್ಲಿ ಪರಸ್ಪರ ಪ್ರೀತಿ ಇರಬೇಕು. ತಂದೆಗೆ ಆತ್ಮಗಳ ಜೊತೆ ಪ್ರೀತಿಯಿದೆಯಲ್ಲವೆ! ಅಂದಮೇಲೆ ನೀವಾತ್ಮರಿಗೆ ಪರಸ್ಪರ ಬಹಳ ಪ್ರೀತಿಯಿರಬೇಕು. ಸತ್ಯಯುಗದಲ್ಲಿ ಎಲ್ಲ ಆತ್ಮಗಳು ಒಬ್ಬರು ಇನ್ನೊಬ್ಬರಿಗೆ ಪ್ರಿಯವಾಗಿರುತ್ತಾರೆ ಏಕೆಂದರೆ ಶರೀರದ ಅಭಿಮಾನವಿರುವುದಿಲ್ಲ. ನೀವು ಸಹೋದರ ಸಹೋದರರು ಒಬ್ಬ ತಂದೆಯ ನೆನಪಿನಿಂದ ಇಡೀ ವಿಶ್ವದ ಕಲ್ಯಾಣ ಮಾಡುತ್ತೀರಿ, ತಮ್ಮ ಕಲ್ಯಾಣವನ್ನು ಮಾಡಿಕೊಳ್ಳುತ್ತೀರಿ ಅಂದ ಮೇಲೆ ನಿಮ್ಮ ಸಹೋದರರ ಕಲ್ಯಾಣ ಮಾಡಬೇಕು. ಆದ್ದರಿಂದ ತಂದೆಯು ದೇಹಾಭಿಮಾನದಿಂದ ದೇಹೀ ಅಭಿಮಾನಿಯನ್ನಾಗಿ ಮಾಡುತ್ತಿದ್ದಾರೆ. ಆ ಲೌಕಿಕ ಸಹೋದರಂತೂ ಪರಸ್ಪರ ಹಣಕ್ಕಾಗಿ, ಪಾಲಿಗಾಗಿ ಹೊಡೆದಾಡುತ್ತಾರೆ. ಆದರೆ ಇಲ್ಲಿ ಹೊಡೆದಾಡುವ ಜಗಳವಾಡುವ ಮಾತಿಲ್ಲ, ಪ್ರತಿಯೊಬ್ಬರೂ ನೇರ ಸಂಬಂಧವನ್ನಿಟ್ಟುಕೊಳ್ಳಬೇಕಾಗುತ್ತದೆ. ಇದು ಬೇಹದ್ದಿನ ಮಾತಾಗಿದೆ. ಯೋಗಬಲದಿಂದ ತಂದೆಯಿಂದ ಆಸ್ತಿಯನ್ನು ಪಡೆಯಬೇಕು. ಹೇಗೆ ಲೌಕಿಕ ತಂದೆಯಿಂದ ಸ್ಥೂಲ ಆಸ್ತಿಯನ್ನು ಪಡೆಯುತ್ತಾರೆ, ಇದಂತೂ ಆತ್ಮಿಕ ತಂದೆಯಿಂದ ಆತ್ಮಿಕ ಮಕ್ಕಳಿಗೆ ಆತ್ಮಿಕಆಸ್ತಿಯಾಗಿದೆ. ಪ್ರತಿಯೊಬ್ಬರೂ ನೇರವಾಗಿ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಎಷ್ಟೆಷ್ಟು ವ್ಯಕ್ತಿಗತವಾಗಿ ತಂದೆಯನ್ನು ನೆನಪು ಮಾಡುತ್ತೀರಿ ಅಷ್ಟು ಆಸ್ತಿಯು ಸಿಗುವುದು. ತಂದೆಯು ನೋಡುತ್ತಾರೆ - ಪರಸ್ಪರ ಹೊಡೆದಾಡಿದರೆ ತಂದೆಯು ಹೇಳುತ್ತಾರೆ ನೀವು ನಿರ್ಧನಿಕರೇನು? ಆತ್ಮೀಯ ಸಹೋದರರು ಜಗಳಾಡಬಾರದು, ಒಂದು ವೇಳೆ ಸಹೋದರರಾಗಿಯೂ ಜಗಳವಾಡಿದರೆ, ಪ್ರೀತಿಯಿಲ್ಲವೆಂದರೆ ರಾವಣನ ಮಕ್ಕಳಾದಂತೆ. ಅವರೆಲ್ಲರೂ ಆಸುರೀ ಸಂತಾನರು, ಮತ್ತೆ ದೈವೀ ಸಂತಾನರಲ್ಲಿ ಮತ್ತು ಆಸುರೀ ಸಂತಾನರಲ್ಲಿ ವ್ಯತ್ಯಾಸವೇ ಇಲ್ಲದಂತಾಗುತ್ತದೆ ಏಕೆಂದರೆ ದೇಹಾಭಿಮಾನಿಯಾಗುವುದರಿಂದಲೇ ಹೊಡೆದಾಡುತ್ತಾರೆ. ಆತ್ಮವು ಆತ್ಮನೊಂದಿಗೆ ಹೊಡೆದಾಡುವುದಿಲ್ಲ. ಆದ್ದರಿಂದ ತಂದೆಯು ಹೇಳುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಪರಸ್ಪರ ಉಪ್ಪುನೀರಾಗಬೇಡಿ. ಆಗುತ್ತಾರೆ ಆದ್ದರಿಂದಲೇ ತಿಳಿಸುತ್ತಾರೆ - ಅಂತಹವರಿಗೆ ತಂದೆಯೂ ಹೇಳುತ್ತಾರೆ - ಇವರು ದೇಹಾಭಿಮಾನಿ ಮಕ್ಕಳಾಗಿದ್ದಾರೆ, ರಾವಣನ ಮಕ್ಕಳಾಗಿದ್ದಾರೆ ನನ್ನ ಮಕ್ಕಳಂತೂ ಅಲ್ಲ ಏಕೆಂದರೆ ಪರಸ್ಪರ ಉಪ್ಪು ನೀರಾಗಿ ಇರುತ್ತಾರೆ. ನೀವು 21 ಜನ್ಮಗಳಲ್ಲಿ ಕ್ಷೀರಖಂಡವಾಗಿ ಇರುತ್ತೀರಿ, ಅಂದಾಗ ಈ ಸಮಯದಲ್ಲಿ ದೇಹೀ ಅಭಿಮಾನಿಗಳಾಗಿರಿ. ಒಂದು ವೇಳೆ ಪರಸ್ಪರ ಆಗುವುದಿಲ್ಲವೆಂದರೆ ಆ ಸಮಯದಲ್ಲಿ ನಾವು ರಾವಣನ ಸಂಪ್ರದಾಯದವರೆಂದು ತಿಳಿಯಬೇಕು. ಪರಸ್ಪರ ಉಪ್ಪು ನೀರಾಗಿರುವುದರಿಂದ ತಂದೆಯ ಗೌರವ ಕಳೆಯುತ್ತಾರೆ. ಈಶ್ವರೀಯ ಸಂತಾನರೆಂದು ಹೇಳಿಕೊಂಡರೂ ಅವರಲ್ಲಿ ಆಸುರೀ ಗುಣಗಳಿದ್ದರೆ ಅವರು ದೇಹಾಭಿಮಾನಿಗಳು ಎಂದರ್ಥ. ದೇಹೀ ಅಭಿಮಾನಿಗಳಲ್ಲಿ ಈಶ್ವರೀಯ ಗುಣಗಳಿರುತ್ತವೆ. ಇಲ್ಲಿ ನೀವು ಈಶ್ವರೀಯ ಗುಣಗಳನ್ನು ಧಾರಣೆ ಮಾಡಿದಾಗಲೇ ತಂದೆಯ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಮತ್ತೆ ಅದೇ ಸಂಸ್ಕಾರವು ಜೊತೆಯಲ್ಲಿ ಇರುತ್ತದೆ. ತಂದೆಗೆ ತಿಳಿಯುತ್ತದೆ - ಮಕ್ಕಳು ದೇಹಾಭಿಮಾನದಲ್ಲಿ ಬಂದು ಉಪ್ಪು ನೀರಾಗುತ್ತಾರೆ ಅಂತಹವರು ಈಶ್ವರನ ಮಕ್ಕಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ತಮಗೆ ಎಷ್ಟೊಂದು ನಷ್ಟ ಮಾಡಿಕೊಳ್ಳುತ್ತಾರೆ, ಮಾಯೆಗೆ ವಶರಾಗುತ್ತಾರೆ, ಪರಸ್ಪರ ಉಪ್ಪು ನೀರಾಗುತ್ತಾರೆ(ಮತಭೇದ). ಹಾಗೆ ಹೇಳುವುದಾದರೆ ಇಡೀ ಪ್ರಪಂಚವೇ ಉಪ್ಪು ನೀರಾಗಿದೆ ಆದರೆ ಒಂದು ವೇಳೆ ಈಶ್ವರೀಯ ಸಂತಾನರೂ ಸಹ ಉಪ್ಪು ನೀರಾದರೆ ವ್ಯತ್ಯಾಸವೇನಾಯಿತು? ಅವರಂತೂ ತಂದೆಯ ನಿಂದನೆ ಮಾಡಿಸುತ್ತಾರೆ. ತಂದೆಯ ನಿಂದನೆ ಮಾಡಿಸುವವರು, ಉಪ್ಪು ನೀರಾಗಿ ವರ್ತಿಸುವವರು, ಪದವಿ ಪಡೆಯಲು ಸಾಧ್ಯವಿಲ್ಲ. ಅವರನ್ನು ನಾಸ್ತಿಕರು ಎಂದು ಹೇಳಬಹುದು. ಆಸ್ತಿಕರಾಗುವ ಮಕ್ಕಳು ಎಂದೂ ಹೊಡೆದಾಡುವುದಿಲ್ಲ. ನೀವು ಪರಸ್ಪರ ಜಗಳವಾಡಬಾರದು. ಪ್ರೇಮದಿಂದ ಇರುವುದನ್ನು ಇಲ್ಲಿಂದಲೇ ಕಲಿಯಬೇಕು. ಇದರಿಂದ ಮುಂದೆ 21 ಜನ್ಮಗಳು ಪರಸ್ಪರ ಪ್ರೇಮ ಇರುತ್ತದೆ. ತಂದೆಯ ಮಕ್ಕಳು ಎಂದು ಕರೆಸಿಕೊಂಡ ಮೇಲೂ ಸಹೋದರ ಸಹೋದರಾಗುವುದಿಲ್ಲವೆಂದರೆ ಅವರು ಆಸುರೀ ಸಂತಾನರು. ತಂದೆಯು ಮಕ್ಕಳಿಗೆ ತಿಳಿಸಲು ಮುರಳಿ ನುಡಿಸುತ್ತಾರೆ ಆದರೆ ದೇಹಾಭಿಮಾನದ ಕಾರಣ ಬಾಬಾ ನಮಗೋಸ್ಕರ ಹೇಳುತ್ತಾರೆ ಎನ್ನುವುದೂ ತಿಳಿಯುವುದಿಲ್ಲ. ಮಾಯೆ ಬಹಳ ತೀಕ್ಷ್ಣವಾಗಿದೆ ಹೇಗೆ ಇಲಿ ಕಚ್ಚಿದಾಗ ಗೊತ್ತಾಗುವುದಿಲ್ಲ ಹಾಗೆ ಮಾಯೆಯೂ ಸಹ ಬಹಳ ಮಧುರವಾಗಿ ಕಚ್ಚುತ್ತದೆ ಅದು ಗೊತ್ತಾಗುವುದೇ ಇಲ್ಲ. ಪರಸ್ಪರ ಮುನಿಸಿಕೊಳ್ಳುವುದು ಆಸುರೀ ಸಂಪ್ರದಾಯದವರ ಕೆಲಸವಾಗಿದೆ. ಬಹಳ ಸೇವಾಕೇಂದ್ರಗಳಲ್ಲಿ ಉಪ್ಪು ನೀರಾಗಿ ವರ್ತಿಸುತ್ತಾರೆ, ಇನ್ನೂ ಯಾರೂ ಸಂಪೂರ್ಣರಾಗಿಲ್ಲ. ಮಾಯೆ ಯುದ್ಧ ಮಾಡುತ್ತಿರುತ್ತದೆ. ಮಾಯೆ ಹೀಗೆ ತಲೆ ತಿರುಗಿಸುತ್ತದೆ, ಅದು ತಿಳಿಯುವುದೇ ಇಲ್ಲ. ತಮ್ಮ ಹೃದಯದೊಂದಿಗೆ ಕೇಳಿಕೊಳ್ಳಿ - ನಮ್ಮಲ್ಲಿ ಪರಸ್ಪರ ಪ್ರೇಮವಿದೆಯೇ ಅಥವಾ ಇಲ್ಲವೆ? ಪ್ರೇಮ ಸಾಗರನ ಮಕ್ಕಳಾಗಿದ್ದೀರಿ ಅಂದ ಮೇಲೆ ಪ್ರೇಮದಿಂದ ತುಂಬಿದ ಗಂಗೆಯಾಗಿರಬೇಕು. ಹೊಡೆದಾಡುವುದು- ಜಗಳಾಡುವುದು, ಅಲ್ಲ ಸಲ್ಲದ ಮಾತನಾಡುವುದುದಕ್ಕಿಂತ ಮಾತನಾಡದಿರುವುದು ಒಳ್ಳೆಯದು. ಕೆಟ್ಟದ್ದನ್ನು ಕೇಳಬೇಡಿ. . . . ಒಂದು ವೇಳೆ ಯಾರಲ್ಲಿಯಾದರೂ ಕ್ರೋಧದ ಅಂಶವಿದ್ದರೆ ಆ ಪ್ರೀತಿಯಿರುವುದಿಲ್ಲ. ಆದ್ದರಿಂದ ತಂದೆ ತಿಳಿಸುತ್ತಾರೆ - ಪ್ರತಿನಿತ್ಯವೂ ತಮ್ಮ ಚಾರ್ಟ್ನ್ನು ನೋಡಿಕೊಳ್ಳಿ. ಆಸುರೀ ಚಲನೆಯು ಸುಧಾರಣೆಯಾಗದಿದ್ದರೆ ಮತ್ತೆ ಅದೃಷ್ಟವೇನಾಗಬಹುದು? ಯಾವ ಪದವಿಯನ್ನು ಪಡೆಯುತ್ತೀರಿ? ತಂದೆ ತಿಳಿಸುತ್ತಾರೆ ಏನೂ ಸೇವೆ ಮಾಡದಿದ್ದರೆ ಅವರ ಸ್ಥಿತಿಯೇನಾಗಬಹುದು? ಪದವಿ ಕಡಿಮೆಯಾಗುವುದು. ಸಕ್ಷಾತ್ಕಾರವಂತೂ ಎಲ್ಲರಿಗೂ ಆಗಲೇ ಬೇಕು. ನಿಮಗೂ ನಿಮ್ಮ ವಿದ್ಯಾಭ್ಯಾಸದ ಸಾಕ್ಷಾತ್ಕಾರವಾಗುತ್ತದೆ. ಸಾಕ್ಷಾತ್ಕಾರವಾದ ನಂತರವೇ ನೀವು ವರ್ಗಾವಣೆಯಾಗುತ್ತೀರಿ. ವರ್ಗವಾಗಿ ನೀವು ಹೊಸ ಪ್ರಪಂಚದಲ್ಲಿ ಬರುತ್ತೀರಿ. ಅಂತ್ಯದಲ್ಲಿ ಯಾರು ಎಷ್ಟು ಅಂಕಗಳಿಂದ ತೇರ್ಗಡೆ ಆಗಿದ್ದಾರೆಂದು ಸಾಕ್ಷಾತ್ಕಾರ ಆಗುತ್ತದೆ. ಆ ಸಮಯದಲ್ಲಿ ಅಳುತ್ತಾರೆ, ದುಃಖಿಸುತ್ತಾರೆ, ಶಿಕ್ಷೆಯನ್ನೂ ಅನುಭವಿಸುತ್ತಾರೆ. ನಾವು ತಂದೆ ಹೇಳಿದ್ದನ್ನು ಪಾಲಿಸಲಿಲ್ಲವೆಂದು ಪಶ್ಚಾತ್ತಾಪ ಪಡುತ್ತಾರೆ. ತಂದೆಯಂತೂ ಪದೇ ಪದೇ ತಿಳಿಸುತ್ತಾರೆ - ಮಕ್ಕಳೇ, ಯಾವುದೇ ಆಸುರೀ ಗುಣವಿರಬಾರದು. ಯಾರಲ್ಲಿ ದೈವೀ ಗುಣಗಳಿವೆ ಅವರು ತಮ್ಮ ಸಮಾನ ಮಾಡಿಕೊಳ್ಳಬೇಕು. ತಂದೆಯನ್ನು ನೆನಪು ಮಾಡುವುದಂತೂ ಬಹಳ ಸಹಜ. ಅಲ್ಫ್ ಮತ್ತು ಬೇ. ಅಲ್ಫ್ ಎಂದರೆ ತಂದೆ ಮತ್ತು ಬೇ ಅಂದರೆ ಬಾದಶಾಹಿ. ಅಂದಾಗ ಮಕ್ಕಳಿಗೆ ನಶೆಯಿರಬೇಕು. ಒಂದು ವೇಳೆ ಪರಸ್ಪರ ಉಪ್ಪು ನೀರಾದರೆ ಈಶ್ವರೀಯ ಸಂತಾನರೆಂದು ಹೇಗೆ ತಿಳಿಯುತ್ತೀರಿ! ಇವರು ಆಸುರೀ ಸಂತಾನರು, ಮಾಯೆ ಇವರ ಮೂಗು ಹಿಡಿದುಕೊಂಡಿದೆ ಎಂದು ತಂದೆಯು ತಿಳಿಯುತ್ತಾರೆ. ಇದು ಅವರಿಗೆ ತಿಳಿಯುವುದಿಲ್ಲ. ಅವರ ಸ್ಥಿತಿಯೇ ಏರುಪೇರಾಗುತ್ತದೆ, ಪದವಿಯೂ ಕಡಿಮೆಯಾಗುತ್ತದೆ. ನೀವು ಮಕ್ಕಳು ಅಂತಹವರಿಗೆ ಪ್ರೇಮದಿಂದ ಕಲಿಸಲು ಪ್ರಯತ್ನ ಮಾಡಬೇಕು. ಪ್ರೇಮದ ದೃಷ್ಟಿಯಿರಬೇಕು. ತಂದೆಯು ಪ್ರೇಮದಸಾಗರ ಆಗಿದ್ದಾರೆ ಆದ್ದರಿಂದ ಮಕ್ಕಳನ್ನು ಸೆಳೆಯುತ್ತಾರಲ್ಲವೆ ಅಂದಾಗ ನೀವೂ ಸಹ ಪ್ರೇಮದ ಸಾಗರರಾಗಬೇಕು.

ತಂದೆ ಮಕ್ಕಳಿಗೆ ಬಹಳ ಪ್ರೀತಿಯಿಂದ ತಿಳಿಸುತ್ತಾರೆ, ಒಳ್ಳೆಯ ಮತವನ್ನು ಕೊಡುತ್ತಾರೆ. ಈಶ್ವರೀಯ ಮತ ಸಿಗುವುದರಿಂದ ನೀವು ಹೂಗಳಾಗುತ್ತೀರಿ, ಎಲ್ಲ ಗುಣಗಳನ್ನು ಕೊಡುತ್ತಾರೆ. ದೇವತೆಗಳಲ್ಲಿ ಪ್ರೀತಿಯಿರುತ್ತದೆ ಅಲ್ಲವೆ, ಅಂದಾಗ ಆ ಸ್ಥಿತಿಯನ್ನು ನೀವು ಇಲ್ಲಿಯೇ ರೂಪಿಸಿಕೊಳ್ಳಬೇಕು. ಈ ಸಮಯದಲ್ಲಿನಿಮಗೆ ಜ್ಞಾನವಿದೆ, ನಂತರ ದೇವತೆಗಳಾದಿರೆಂದರೆ ಜ್ಞಾನವು ಇರುವುದಿಲ್ಲ, ಅಲ್ಲಿ ದೈವೀ ಪ್ರೀತಿಯಿರುತ್ತದೆ ಆದ್ದರಿಂದ ತಾವು ಮಕ್ಕಳು ದೈವೀ ಗುಣಗಳನ್ನು ಧಾರಣೆ ಮಾಡಬೇಕು. ಈಗ ನೀವು ಪೂಜ್ಯರಾಗಲು ಪುರುಷಾರ್ಥ ಮಾಡುತ್ತಿದ್ದೀರಿ. ನೀವು ಮಕ್ಕಳೂ ಸಹ ನಂಬರ್ವಾರ್ ಪುರುಷಾರ್ಥನುಸಾರ ತಿಳಿದುಕೊಂಡಿದ್ದೀರಿ. ಯಾರು ತಿಳಿದುಕೊಂಡಿಲ್ಲವೋ ಅವರು ಅನ್ಯರಿಗೂ ತಿಳಿಸಲು ಆಗುವುದಿಲ್ಲ. ಮತ್ತು ಪದವಿಯೂ ಕಡಿಮೆಯಾಗುತದೆ. ಶಾಲೆಯಲ್ಲಿ ಓದುವವರಲ್ಲಿ ಕೆಲವರ ಚಲನೆ ಕೆಟ್ಟುಹೋಗುತ್ತದೆ, ಇನ್ನೂ ಕೆಲವರದು ಸದಾ ಒಳ್ಳೆಯ ನಡವಳಿಕೆಯಿರುತ್ತದೆ, ಕೆಲವರು ಹಾಜರಾದರೆ, ಕೆಲವರು ಗೈರುಹಾಜರಿಯಾಗಿರುತ್ತಾರೆ. ಇಲ್ಲಿ ಯಾರು ಸದಾ ತಂದೆಯನ್ನು ನೆನಪು ಮಾಡುತ್ತಾರೆ ಸ್ವದರ್ಶನ ಚಕ್ರತಿರುಗಿಸುತ್ತಾರೆ ಅವರ ಹಾಜರಿಯಿರುತ್ತದೆ. ತಂದೆ ತಿಳಿಸುತ್ತಾರೆ - ಏಳುತ್ತಾ-ಕುಳಿತುಕೊಳ್ಳುತ್ತಾ ತಮ್ಮನ್ನು ಸ್ವದರ್ಶನ ಚಕ್ರಧಾರಿ ಎಂದು ತಿಳಿಯಿರಿ. ಮರೆತರೆ ಗೈರುಹಾಜರಿಯಾಗುತ್ತದೆ. ಯಾವಾಗ ಸದಾ ಹಾಜರಿರುತ್ತೀರಿ ಆಗ ಶ್ರೇಷ್ಠ ಪದವಿ ಪಡೆಯುತ್ತೀರಿ. ಮರೆತರೆ ಕಡಿಮೆ ಪದವಿ ಪಡೆಯುತ್ತೀರಿ. ತಂದೆಗೆ ಗೊತ್ತಿದೆ, ಇನ್ನೂ ಸಮಯವಿದೆ, ಶ್ರೇಷ್ಠ ಪದವಿಯನ್ನು ಪಡೆಯುವವರ ಬುದ್ಧಿಯಲ್ಲಿ ಈ ಚಕ್ರವು ತಿರುಗುತ್ತಿರಬಹುದು. ಶಿವ ತಂದೆಯ ನೆನಪಿರಲಿ, ಮುಖದಲ್ಲಿ ಜ್ಞಾನಾಮೃತವಿರಲಿ ಆಗ ಪ್ರಾಣ ತನುವನ್ನು ಬಿಟ್ಟು ಹೋಗಲಿ ಎಂದು ಹೇಳುತ್ತಾರೆ. ಯಾವುದೇ ವಸ್ತುವಿನೊಂದಿಗೆ ಪ್ರೀತಿಯಿದ್ದರೆ ಅಂತ್ಯ ಕಾಲದಲ್ಲಿ ಅದೇ ನೆನಪಿಗೆ ಬರುತ್ತದೆ. ತಿನ್ನುವ ಲೋಭವಿದ್ದರೆ ಸಾಯುವ ಸಮಯುದಲ್ಲಿ ಅದನ್ನು ತಿನ್ನಬೇಕೆಂದು ಆ ಪದಾರ್ಥವೇ ನೆನಪಿಗೆ ಬರುತ್ತದೆ. ಮತ್ತೆ ಪದವಿಭ್ರಷ್ಟರಾಗುತ್ತಾರೆ. ತಂದೆಯಂತೂ ಹೇಳುತ್ತಾರೆ - ಮಕ್ಕಳೇ, ಸ್ವದರ್ಶನಚಕ್ರಧಾರಿಗಳಾಗಿ ಶರೀರ ಬಿಡಿ, ಮತ್ತೇನೂ ನೆನಪಿಗೆ ಬರಬಾರದು. ಯಾವುದೇ ಸಂಬಂಧವಿಲ್ಲದೆ ಹೇಗೆ ಆತ್ಮವು ಒಂಟಿಯಾಗಿ ಬಂದಿದೆಯೋ ಹಾಗೆಯೇ ಹೋಗಬೇಕು. ಲೋಭವೂ ಕಡಿಮೆಯಿಲ್ಲ. ಲೋಭವಿದ್ದರೆ ಅಂತಿಮ ಸಮಯದಲ್ಲಿ ಅದೇ ನೆನಪಿಗೆ ಬರುತ್ತದೆ. ಅದು ಸಿಗಲಿಲ್ಲವೆಂದರೆ ಅದರ ಆಸೆಯಲ್ಲಿಯೇ ಶರೀರ ಬಿಡುತ್ತಾರೆ. ಆದ್ದರಿಂದ ನೀವು ಮಕ್ಕಳಲ್ಲಿ ಲೋಭ ಇರಬಾರದು. ತಂದೆ ತಿಳಿಸುತ್ತಾರೆ - ಅನೇಕರಿದ್ದಾರೆ ಆದರೆ ಇದನ್ನು ತಿಳಿದುಕೊಳ್ಳುವವರೇ ತಿಳಿದುಕೊಳ್ಳುತ್ತಾರೆ. ತಂದೆಯ ನೆನಪನ್ನು ಹೃದಯದಲ್ಲಿಟ್ಟುಕೊಳ್ಳಿ - ಬಾಬಾ, ಓಹೋ ಬಾಬಾ! ಕೇವಲ ಮುಖದಿಂದ ಬಾಬಾ, ಬಾಬಾ ಎಂದು ಹೇಳುವುದಲ್ಲ ಅಜಪಾಜಪವಾಗಿ ನಡೆಯುತ್ತಿರಲಿ. ತಂದೆಯ ನೆನಪಿನಲ್ಲಿ, ಕರ್ಮಾತೀತ ಸ್ಥಿತಿಯಲ್ಲಿ ಶರೀರ ಬಿಟ್ಟರೆ ಆಗ ಶ್ರೇಷ್ಠ ಪದವಿಯನ್ನು ಪಡೆಯಬಹುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಪ್ರೇಮದಿಂದ ತುಂಬಿದ ಗಂಗೆಯಾಗಬೇಕು. ಎಲ್ಲರ ಪ್ರತಿ ಪ್ರೇಮದ ದೃಷಿ ಇಟ್ಟುಕೊಳ್ಳಬೇಕು. ಎಂದೂ ಬಾಯಿಂದ ಅಲ್ಲ ಸಲ್ಲದ ಮಾತುಗಳನ್ನುಆಡಬಾರದು.

2. ಯಾವುದೇ ಪದಾರ್ಥದಲ್ಲಿ ಲೋಭವನ್ನಿಡಬಾರದು. ಸ್ವದರ್ಶನ ಚಕ್ರಧಾರಿಯಾಗಿರಬೇಕು. ಅಭ್ಯಾಸ ಮಾಡಬೇಕು ಅಂತ್ಯದ ಸಮಯದಲ್ಲಿ ಯಾವುದೇ ಪದಾರ್ಥವು ನೆನಪಾಗಬಾರದು.

ವರದಾನ:
ಹಳೆಯ ದೇಹ ಮತ್ತು ಪ್ರಪಂಚದ ಸರ್ವ ಆಕರ್ಷಣೆಗಳಿಂದ ಸಹಜವಾಗಿ ಮತ್ತು ಸದಾ ದೂರವಿರುವಂತಹ ರಾಜಋಷಿ ಭವ.

ರಾಜಋಷಿ ಅರ್ಥಾತ್ ಒಂದುಕಡೆ ಸರ್ವಪ್ರಾಪ್ತಿಯ ಅಧಿಕಾರದ ನಶೆ ಮತ್ತು ಇನ್ನೊಂದುಕಡೆ ಬೇಹದ್ಧಿನ ವೈರಾಗ್ಯದ ಅಲೌಕಿಕ ನಶೆ. ವರ್ತಮಾನ ಸಮಯ ಈ ಎರಡೂ ಅಭ್ಯಾಸವನ್ನು ಹೆಚ್ಚಿಸುತ್ತಾಹೋಗಿ. ವೈರಾಗ್ಯ ಅಂದರೆ ದೂರ ಆಗುವುದಲ್ಲ ಆದರೆ ಸರ್ವಪ್ರಾಪ್ತಿಗಳಿದ್ದರೂ ಹದ್ಧಿನ ಆಕರ್ಷಣೆ ಮನಸ್ಸು ಬುದ್ಧಿಯನ್ನು ಆಕರ್ಷಣೆಯಲ್ಲಿ ತರದೇ ಇರುವುದು. ಸಂಕಲ್ಪಮಾತ್ರದಲ್ಲೂ ಅಧೀನತೆ ಇರಬಾರದು ಇದಕ್ಕೆ ಹೇಳಲಾಗುತ್ತದೆ ರಾಜಋಷಿ ಅರ್ಥಾತ್ ಬೇಹದ್ಧಿನ ವೈರಾಗಿ. ಈ ಹಳೆಯ ದೇಹದ ಹಳೆಯ ಪ್ರಪಂಚ, ವ್ಯಕ್ತಭಾವ, ವೈಭವಗಳ ಭಾವ ಈ ಎಲ್ಲಾ ಆಕರ್ಷಣೆಗಳಿಂದ ಸದಾ ಮತ್ತು ಸಹಜವಾಗಿ ದೂರ ಇರುವಂತಹವರು.

ಸ್ಲೋಗನ್:
ವಿಜ್ಞಾನದ ಸಾಧನೆಗಳನ್ನು ಉಪಯೋಗಮಾಡಿ ಆದರೆ ಅದೇ ತಮ್ಮ ಜೀವನದ ಆಧಾರ ಮಾಡಿಕೊಳ್ಳಬಾರದು.

ಮಾತೇಶ್ವರೀ ಜೀ ಯವರ ಮಧುರ ಮಹಾವಾಕ್ಯ

“ಈ ಸಂಗಮದ ಸಮಯದಲ್ಲಿ ಕಾರ್ಯರೂಪದಲ್ಲಿ ಮಹಾಭಾರತ ಪುನರಾವರ್ತನೆಯಾಗುತ್ತಿದೆ”

ನೋಡಿ ಮನುಷ್ಯರು ಹೇಳುತ್ತಾರೆ ಕೌರವರಿಗೆ ಮತ್ತು ಪಾಂಡವರಿಗೆ ಕುರುಕ್ಷೇತ್ರದಲ್ಲಿ ಯುದ್ಧವಾಯಿತು ಮತ್ತು ನಂತರ ತೋರಿಸುತ್ತಾರೆ ಪಾಂಡವರ ಜೊತೆಯಲ್ಲಿ ಅವರಿಗೆ ಮಾರ್ಗದರ್ಶನ ನೀಡಲು ಶ್ರೀ ಕೃಷ್ಣನಿದ್ದನು ಎಂದು, ಅಂದಾಗ ಯಾರ ಕಡೆ ಸ್ವಯಂ ಪ್ರಕೃತಿ ಪತಿ ಪರಮಾತ್ಮ ಇದ್ದಾರೆ ಅವರಿಗೆ ಖಂಡಿತ ವಿಜಯ ಪ್ರಾಪ್ತಿಯಾಗುತ್ತದೆ. ನೋಡಿ ಎಲ್ಲಾ ಮಾತುಗಳನ್ನು ಸೇರಿಸಿಬಿಟ್ಟಿದ್ದಾರೆ, ಕೃಷ್ಣನಂತು ಸತ್ಯಯುಗದ ಮೊದಲ ದೇವತೆಯಾಗಿದ್ದಾನೆ, ಅವನನ್ನು ಭಗವಂತನೆಂದು ಹೇಳಲಾಗುವುದಿಲ್ಲ. ಆಗ ಪಾಂಡವರ ಸಾರಥಿ ಪರಮಾತ್ಮನಾಗಿದ್ದಾನೆ ಹೊರತು ಶ್ರೀಕೃಷ್ಣ ಅಲ್ಲ. ಈಗ ಪರಮಾತ್ಮ ನಾವು ಮಕ್ಕಳಿಗೆ ಎಂದೂ ಹಿಂಸೆಯನ್ನು ಕಲಿಸಲು ಸಾಧ್ಯವಿಲ್ಲ, ಪಾಂಡವರು ಎಂದೂ ಹಿಂಸಕ ಯುದ್ಧ ಮಾಡಿ ಸ್ವರಾಜ್ಯ ಪಡೆಯಲಿಲ್ಲ. ಈ ಪ್ರಪಂಚವೇ ಕರ್ಮಕ್ಷೇತ್ರವಾಗಿದೆ ಅದರಲ್ಲಿ ಮನುಷ್ಯ ಎಂಥೆಂಥಹ ಕರ್ಮ ಮಾಡಿ ಬೀಜ ಬಿತ್ತುವನೋ ಅದೇರೀತಿ ಒಳ್ಳೆಯ ಅಥವಾ ಕೆಟ್ಟ ಫಲವನ್ನು ಭೋಗಿಸುತ್ತಾನೆ. ಯಾವ ಕರ್ಮಕ್ಷೇತ್ರದಲ್ಲಿ ಪಾಂಡವರು ಅರ್ಥಾತ್ ಭಾರತ ಮಾತಾ ಶಕ್ತಿಅವತಾರ ಕೂಡ ಸೇರಿಕೊಂಡಿದೆ. ಪರಮಾತ್ಮ ಬರುವುದೇ ಭಾರತ ಖಂಡದಲ್ಲಿ ಆದ್ದರಿಂದ ಭಾರತ ಖಂಡವನ್ನು ಅವಿನಾಶಿ ಎಂದು ಹೇಳಲಾಗುತ್ತದೆ. ಪರಮಾತ್ಮನ ಅವತರಣೆ ಮುಖ್ಯವಾಗಿ ಭರತಖಂಡದಲ್ಲೇ ಆಗಿದೆ ಏಕೆಂದರೆ ಅಧರ್ಮದ ವೃದ್ಧಿಯೂ ಕೂಡ ಭಾರತಖಂಡದಲ್ಲೇ ಆಗಿದೆ. ಅಲ್ಲೇ ಪರಮಾತ್ಮನು ಯೋಗಬಲದ ಮುಖಾಂತರ ಕೌರವ ರಾಜ್ಯ ಸಮಾಪ್ತಿ ಮಾಡಿ ಪಾಂಡವರ ರಾಜ್ಯ ಸ್ಥಾಪನೆ ಮಾಡಿದರು. ಅಂದರೆ ಪರಮಾತ್ಮನು ಬಂದು ಧರ್ಮದ ರಾಜ್ಯ ಸ್ಥಾಪನೆ ಮಾಡಿದರು ಆದರೆ ಭಾರತವಾಸಿಗಳು ತಮ್ಮ ಮಹಾನ್ ಪವಿತ್ರ ಧರ್ಮ ಮತ್ತು ಶ್ರೇಷ್ಠಕರ್ಮವನ್ನು ಮರೆತು ತಮ್ಮನ್ನು ಹಿಂದು ಎಂದು ಹೇಳಿಕೊಳ್ಳುತ್ತಾರೆ. ಪಾಪ ತಮ್ಮ ಧರ್ಮವನ್ನು ಅರಿಯದೆ ಬೇರೆಯವರ ಧರ್ಮದಲ್ಲಿ ಸೇರಿಕೊಂಡುಬಿಟ್ಟರು. ತಮ್ಮ ಮೇಲೆ ದೇವತೆಗಳ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ ರಾಧಾಸ್ವಾಮಿ, ಆರ್ಯ ಸಮಾಜ್, ಬ್ರಹ್ಮ ಸಮಾಜ್, ಚಿದಾಕಾಶಿ ಮಠ-ಪಂತ ಮುಂತಾದುವುಗಳು ಹುಟ್ಟಿಕೊಂಡಿವೆ. ಇದರ ಅರ್ಥ ತಿಳಿದುಕೊಂಡಿಲ್ಲ ಕೇವಲ ಹೆಸರನ್ನು ಇಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ತಮ್ಮನ್ನು ರಾಧಾ ಸ್ವಾಮಿ ಎಂದು ಹೇಳಿಕೊಳ್ಳುತ್ತಾರೆ ಆದರೆ ರಾಧ ಅಂತೂ ಅವರ ಜೊತೆ ಇಲ್ಲವೇ ಇಲ್ಲ. ಅವರಂತು ತಮ್ಮನ್ನು ರಾಧಾಳ ಸ್ವಾಮಿ ಅರ್ಥಾತ್ ಪ್ರಕೃತಿಪತಿ ಈಗ ಅವರಂತೂ ಪರಮಾತ್ಮ ಆಗಿದ್ದಾರೆ, ಮನುಷ್ಯಾತ್ಮ ಆಗಲು ಸಾಧ್ಯವಿಲ್ಲ. ಆದರೂ ಅವರದು ಮಿಥ್ಯಾ ಜ್ಞಾನವಾಗಿದೆ, ಅಲ್ಲದೆ ಅವರನ್ನು ಆರ್ಯರು ಎಂದು ಹೇಳಿಕೊಳ್ಳುತ್ತಾರೆ, ಆರ್ಯರು ಎಂದು ಪವಿತ್ರರಿಗೆ ಹೇಳಲಾಗುತ್ತದೆ. ಎಲ್ಲರಿಗಿಂತಲೂ ಪವಿತ್ರರು ದೇವಿ ದೇವತೆಗಳಾಗಿದ್ದಾರೆ, ಇವರಂತಹ ಪವಿತ್ರರು ಈ ಕಲಿಯುಗದಲ್ಲಿ ಯಾರೂ ಇಲ್ಲ. ಈಗ ಆ ಸ್ವಚ್ಛ ಚಲನೆ ಯಾರಲ್ಲೂ ಇಲ್ಲ. ಕೇವಲ ಹೆಸರನ್ನು ಇಟ್ಟುಕೊಳ್ಳುವುದು ಶೋಭಿಸುವುದಿಲ್ಲ. ಮತ್ತೆ ಹೇಳುತ್ತಾರೆ ಬ್ರಹ್ಮ್ಸಮಾಜಿ, ಈಗ ಬ್ರಹ್ಮ್ ಅಂತೂ ಆಗಿದೆ ಅಖಂಡ ಜ್ಯೋತಿತತ್ವ ಎಲ್ಲಿ ನಿರಾಕಾರೀ ಆತ್ಮಗಳು ವಾಸ ಮಾಡುತ್ತವೆ. ಅಂದರೆ ಆತ್ಮಗಳ ಸಮಾಜವನ್ನು ಬ್ರಹ್ಮ್ ಸಮಾಜಿ ಹೇಳಬಹುದಾಗಿದೆ ಇದಂತೂ ಸಾಕಾರೀ ಪ್ರಪಂಚವಾಗಿದೆ ಅಂದಮೇಲೆ ಅವರನ್ನು ಬ್ರಹ್ಮ್ ಸಮಾಜಿ ಎಂದು ಹೇಗೆ ಹೇಳುವುದು. ಉಳಿದಂತೆ ಚಿದಾಕಾಶಿ ಯಂತೂ ಇಡೀ ಮನುಷ್ಯರಾಗಿದ್ದಾರೆ, ಯಾರೂ ಈ ಆಕಾಶ ತತ್ವದಲ್ಲಿ ವಾಸಮಾಡುತ್ತಾರೆ. ಆಕಾಶಕ್ಕೆ ಚಿದಾ ಎಂದು ಹೇಳಲಾಗುತ್ತದೆ ಇದರಲ್ಲಂತೂ ನಾವೆಲ್ಲಾ ಮನುಷ್ಯರು ವಾಸ ಮಾಡುತ್ತೇವೆ, ಅಂದಮೇಲೆ ನಾವೆಲ್ಲರೂ ಚಿದಾಕಾಶಿ ಆದೆವು ಆದರೆ ಅವರು ಚಿದಾಕಾಶಿ ಮಠ ವೆಂದು ವಿಶೇಷವಾಗಿ ಹೇಗೆ ಹೇಳಿಕೊಳ್ಳಲು ಸಾಧ್ಯ! ಅಂದರೆ ಇದು ಬೇಹದ್ದಿನ ಜ್ಞಾನ, ಬೇಹದ್ದಿನ ಮಾಲೀಕ ಖುದ್ದಾಗಿ ತಿಳಿಸುತ್ತಾರೆ. ಇವರಂತೂ ತಮ್ಮ ಸ್ವ ಧರ್ಮವನ್ನು ಮರೆತು ಹದ್ದಿನಲ್ಲಿ ಸಿಕ್ಕಿಕೊಂಡಿದ್ದಾರೆ ಇದಕ್ಕೆ ಹೇಳಲಾಗುತ್ತದೆ ಅತೀ ಧರ್ಮಗ್ಲಾನಿ ಏಕೆಂದರೆ ಇದೆಲ್ಲಾ ಪ್ರಕೃತಿ ಧರ್ಮವಾಗಿದೆ ಆದರೆ ಮೊದಲು ಇರ ಬೇಕಾಗಿದೆ ಸ್ವಧರ್ಮ, ಅಂದರೆ ಪ್ರತಿಯೊಬ್ಬರ ಸ್ವ ಧರ್ಮವಾಗಿದೆ ನಾನು ಆತ್ಮ ಶಾಂತಿ-ಸ್ವರೂಪನಾಗಿದ್ದೇನೆ ನಂತರ ನನ್ನ ಪ್ರಕೃತಿಯ ಧರ್ಮವಾಗಿದೆ ದೇವತಾ ಧರ್ಮ, ಅದು 33 ಕೋಟಿ ಭಾರತವಾಸಿ ದೇವತೆಗಳಾಗಿದ್ದಾರೆ. ಆದ್ದರಿಂದಲೇ ಪರಮಾತ್ಮ ಹೇಳುತ್ತಾರೆ ದೇಹದ ಅನೇಕ ಧರ್ಮಗಳನ್ನು ತ್ಯಾಗಮಾಡಿ, ಸರ್ವ ಧರ್ಮಾನ್ ಪರಿತ್ಯಜ್ಯಮ್...... ಈ ಹದ್ದಿನ ಧರ್ಮಗಳಲ್ಲಿ ಎಷ್ಟು ಆಂದೋಲನಗಳಾಗಿವೆ. ಅಂದರೆ ಈಗ ಈ ಹದ್ದಿನ ಧರ್ಮಗಳಿಂದ ಹೊರಬಂದು ಬೇಹದ್ದಿನಲ್ಲಿ ಹೋಗಬೇಕಾಗಿದೆ. ಆ ಬೇಹದ್ದಿನ ತಂದೆ ಸರ್ವಶಕ್ತಿವಂತ ಪರಮಾತ್ಮನ ಜೊತೆ ಯೋಗವಿಡಬೇಕು ಏಕೆಂದರೆ ಸರ್ವಶಕ್ತಿವಂತ ಪ್ರಕೃತಿಪತಿ ಪರಮಾತ್ಮನಾಗಿದ್ದಾರೆ ವಿನಃ ಕೃಷ್ಣ ಅಲ್ಲ. ಹೇಗೆ ಕಲ್ಪದ ಮೊದಲೂ ಸಹ ಯಾವರೀತಿ ಸಾಕ್ಷಾತ್ ಪ್ರಕೃತಿಪತಿ ಪರಮಾತ್ಮ ಇದ್ದರು ಅವರ ವಿಜಯದ ಗಾಯನ ಮಾಡಲಾಗಿದೆ. ಒಳ್ಳೆಯದು.