07.09.24 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ- ಸದಾ
ಜ್ಞಾನದ ಮೂರನೆಯ ನೇತ್ರವು ತೆರೆದಿದ್ದಾಗ ಖುಷಿಯಲ್ಲಿ ರೋಮಾಂಚನವಾಗುತ್ತೀರಿ, ಸದಾ ಖುಷಿಯ
ನಶೆಯೇರಿರುವುದು"
ಪ್ರಶ್ನೆ:
ಈ ಸಮಯದಲ್ಲಿ
ಮನುಷ್ಯರ ದೃಷ್ಟಿಯು ಬಹಳ ನಿರ್ಬಲವಾಗಿದೆ ಆದ್ದರಿಂದ ಅವರಿಗೆ ತಿಳಿಸುವ ಯುಕ್ತಿಯೇನಾಗಿದೆ?
ಉತ್ತರ:
ತಂದೆಯು
ತಿಳಿಸುತ್ತಾರೆ- ಅವರಿಗಾಗಿ ನೀವು ಇಂತಹ ದೊಡ್ಡಚಿತ್ರಗಳನ್ನು ತಯಾರು ಮಾಡಿಸಿ, ಅವರು ಅದನ್ನು
ದೂರದಿಂದಲೇ ನೋಡಿ ಅರಿತುಕೊಳ್ಳುವಂತಿರಬೇಕು. ಈ ಗೋಲದ(ಸೃಷ್ಟಿಚಕ್ರದ) ಚಿತ್ರವು ಬಹಳ ದೊಡ್ಡದಾಗಿ
ಮಾಡಿಸಿರಿ. ಇದು ಕುರುಡರ ಮುಂದೆ ಕನ್ನಡಿಯಾಗಿದೆ.
ಪ್ರಶ್ನೆ:
ಇಡೀ
ಪ್ರಪಂಚವನ್ನು ಸ್ವಚ್ಛಮಾಡುವುದರಲ್ಲಿ ನಿಮಗೆ ಯಾರು ಸಹಯೋಗಿಯಾಗುತ್ತಾರೆ?
ಉತ್ತರ:
ಈ ಪ್ರಾಕೃತಿಕ
ವಿಕೋಪಗಳು ಸಹಯೋಗಿಯಾಗುತ್ತವೆ, ಈ ಬೇಹದ್ದಿನ ಪ್ರಪಂಚದ ಸ್ವಚ್ಛತೆಗಾಗಿ ಅವಶ್ಯವಾಗಿ ಯಾರಾದರೂ
ಸಹಯೋಗಿ ಬೇಕಾಗಿದೆ.
ಓಂ ಶಾಂತಿ.
ತಂದೆಯಿಂದ ಒಂದು ಸೆಕೆಂಡಿನಲ್ಲಿ ಆಸ್ತಿ ಅರ್ಥಾತ್ ಜೀವನ್ಮುಕ್ತಿಯೆಂದು ಗಾಯನವಿದೆ. ಮತ್ತೆಲ್ಲರೂ
ಜೀವನಬಂಧನದಲ್ಲಿ ಇದ್ದಾರೆ. ಈ ತ್ರಿಮೂರ್ತಿ ಮತ್ತು ಗೋಲ ಚಿತ್ರವೊಂದೇ ಸಾಕಷ್ಟಾಗಿದೆ, ಇದು
ಮುಖ್ಯವಾಗಿದೆ. ಇದನ್ನು ಬಹಳ ದೊಡ್ಡದನ್ನಾಗಿ ಮಾಡಿಸಬೇಕು, ಕುರುಡರಿಗೆ ಬಹಳ ದೊಡ್ಡಕನ್ನಡಿಯಾಗಬೇಕು.
ಅದನ್ನು ಬಹಳಚೆನ್ನಾಗಿ ನೋಡಲು ಸಾಧ್ಯವಾಗುವಂತಿರಬೇಕು ಏಕೆಂದರೆ ಈಗ ಎಲ್ಲರ ದೃಷ್ಟಿಯು
ನಿರ್ಬಲವಾಗಿದೆ, ಬುದ್ಧಿಯು ಕಡಿಮೆಯಾಗಿದೆ, ಮೂರನೆಯ ನೇತ್ರಕ್ಕೆ ಬುದ್ಧಿಯೆಂದು ಹೇಳಲಾಗುತ್ತದೆ.
ನಿಮ್ಮ ಬುದ್ಧಿಯಲ್ಲಿ ಈಗ ಖುಷಿಯಿದೆ, ಖುಷಿಯಲ್ಲಿ ಯಾರಿಗೆ ರೋಮಾಂಚನವಾಗುವುದಿಲ್ಲವೋ ಅವರು
ಶಿವತಂದೆಯನ್ನು ನೆನಪು ಮಾಡುವುದಿಲ್ಲವೆಂದರ್ಥ ಆಗಿದೆ. ಅಂದಾಗ ಇವರ ಜ್ಞಾನದ ನೇತ್ರವು ಸ್ವಲ್ಪವೇ
ತೆರೆದಿದೆ, ಮಂಜು-ಮಂಜಾಗಿ ಕಾಣುತ್ತಿದೆಯೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ- ಯಾರಿಗೇ
ಆದರೂ ಸಂಕ್ಷಿಪ್ತವಾಗಿ ತಿಳಿಸಬೇಕಾಗಿದೆ. ದೊಡ್ಡ-ದೊಡ್ಡ ಮೇಳವಾಗುತ್ತದೆ. ಮಕ್ಕಳಿಗೆ ತಿಳಿದಿದೆ-
ಸರ್ವೀಸ್ ಮಾಡುವುದಕ್ಕಾಗಿ ವಾಸ್ತವದಲ್ಲಿ ಒಂದು ಚಿತ್ರವಷ್ಟೇ ಸಾಕು. ಭಲೆ ಗೋಲದ ಚಿತ್ರವಿದ್ದರೂ
ಪರವಾಗಿಲ್ಲ. ತಂದೆಯು ಡ್ರಾಮಾ ಮತ್ತು ವೃಕ್ಷದ ಅಥವ ಕಲ್ಪವೃಕ್ಷದ ಮತ್ತು 84 ಜನ್ಮಗಳ ಚಕ್ರದ
ರಹಸ್ಯವನ್ನು ತಿಳಿಸುತ್ತಾರೆ. ಬ್ರಹ್ಮಾರವರ ಮೂಲಕ ತಂದೆಯ ಆಸ್ತಿಯು ಸಿಗುತ್ತದೆ. ಇದೂ ಸಹ ಬಹಳ
ಸ್ಪಷ್ಟವಾಗಿರುವುದಾಗಿದೆ. ಈ ಒಂದು ಚಿತ್ರದಲ್ಲಿ ಎಲ್ಲವೂ ಬಂದುಬಿಡುತ್ತದೆ ಮತ್ತು ಇಷ್ಟೆಲ್ಲಾ
ಚಿತ್ರಗಳ ಅವಶ್ಯಕತೆಯೂ ಇಲ್ಲ. ಇವೆರಡು ಚಿತ್ರಗಳು ಬಹಳದೊಡ್ಡ ಅಕ್ಷರಗಳಲ್ಲಿರಲಿ, ಬರವಣಿಗೆಯೂ
ಇರಬೇಕು. ಜೀವನ್ಮುಕ್ತಿಯು ಈಶ್ವರೀಯ ಜನ್ಮಸಿದ್ಧ ಅಧಿಕಾರವಾಗಿದೆ, ಮುಂದೆಬರುವ ವಿನಾಶಕ್ಕೆ ಮೊದಲೇ
ಈ ಜನ್ಮಸಿದ್ಧ ಅಧಿಕಾರವನ್ನು ಪಡೆಯಿರಿ. ವಿನಾಶವು ಅವಶ್ಯವಾಗಿ ಆಗಲೇಬೇಕಾಗಿದೆ. ಡ್ರಾಮಾದ
ಯೋಜನೆಯನುಸಾರವಾಗಿ ಸ್ವಯಂ ತಿಳಿದುಕೊಳ್ಳುತ್ತಾರೆ, ನೀವು ತಿಳಿಸುವ ಅವಶ್ಯಕತೆಯಿರುವುದಿಲ್ಲ.
ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ, ಇದು ಸರಿಯಾಗಿ ನೆನಪಿರಬೇಕು ಆದರೆ ಮಾಯೆಯು
ನಿಮ್ಮಿಂದ ಮರೆಸಿಬಿಡುತ್ತದೆ, ಸಮಯವು ವ್ಯರ್ಥವಾಗಿ ಹೋಗುತ್ತದೆ. ಬಹಳ ಕಳೆದುಹೋಯಿತು, ಸ್ವಲ್ಪವೇ
ಉಳಿದಿದೆಯೆಂದು ಗಾಯನವಿದೆಯಲ್ಲವೆ. ವಿನಾಶವಾಗುವುದರಲ್ಲಿ ಸ್ವಲ್ಪಸಮಯವಿದೆ, ಆ ಸ್ವಲ್ಪದರಲ್ಲಿಯೂ
ಕಡಿಮೆಯಾಗುತ್ತಿದೆ. ಮತ್ತೇನಾಗುತ್ತದೆಯೆಂದು ವಿಚಾರ ಮಾಡಬೇಕಾಗುತ್ತದೆ. ಈಗ ಜಾಗೃತರಾಗುವುದಿಲ್ಲ,
ಕೊನೆಯಲ್ಲಿ ಜಾಗೃತಗೊಳ್ಳುತ್ತಾರೆ ಕಣ್ಣುಗಳು ತೆರೆಯುತ್ತದೆ. ಈ ಸ್ಥೂಲ ಕಣ್ಣುಗಳಲ್ಲ, ಬುದ್ಧಿಯ
ಕಣ್ಣಿನ ಜಾಗೃತಿಯಾಗಿದೆ. ಚಿಕ್ಕ-ಚಿಕ್ಕ ಚಿತ್ರಗಳಿಂದ ಮಜಾ ಬರುವುದಿಲ್ಲ. ದೊಡ್ಡ-ದೊಡ್ಡಚಿತ್ರಗಳು
ತಯಾರು ಮಾಡಲಾಗುತ್ತದೆ, ವಿಜ್ಞಾನವೂ ಸಹ ಎಷ್ಟೊಂದು ಸಹಯೋಗ ಕೊಡುತ್ತದೆ. ವಿನಾಶದಲ್ಲಿ ತತ್ವಗಳೂ ಸಹ
ಸಹಾಯ ಮಾಡುತ್ತದೆ. ಕವಡೆಯಷ್ಟು ಖರ್ಚಿಲ್ಲದೆಯೇ ತಮಗೆ ಎಷ್ಟೊಂದು ಸಹಯೋಗ ಕೊಡುತ್ತದೆ. ನಿಮಗಾಗಿ
ಎಲ್ಲವನ್ನೂ ಸ್ವಚ್ಛ ಮಾಡಿಬಿಡುತ್ತದೆ. ಇದು ಸಂಪೂರ್ಣ ಛೀ ಛೀ ಪ್ರಪಂಚವಾಗಿದೆ. ಅಜ್ಮೀರ್ನಲ್ಲಿ
ಸ್ವರ್ಗದ ನೆನಪಾರ್ಥವಿದೆ, ಇಲ್ಲಿ ದಿಲ್ವಾಡಾ ಮಂದಿರದಲ್ಲಿ ಸ್ಥಾಪನೆಯ ನೆನಪಾರ್ಥವಿದೆ ಆದರೆ
ಇದರಿಂದ ಮನುಷ್ಯರು ಅರಿತುಕೊಳ್ಳುವುದೇ ಇಲ್ಲ. ಈಗ ನೀವು ಬುದ್ಧಿವಂತರಾಗಿದ್ದೀರಿ.
ವಿನಾಶವಾಗುತ್ತದೆಯೋ ಅಥವ ಇಲ್ಲವೋ ಅರ್ಥವಾಗುತ್ತಿಲ್ಲವೆಂದು ಮನುಷ್ಯರು ಭಲೆ ಹೇಳಬಹುದು. ಒಂದು
ಕಥೆಯಿದೆಯಲ್ಲವೆ- ಹುಲಿ ಬಂದಿತು, ಹುಲಿ ಬಂದಿತು... ಎಂದು ನಿತ್ಯವೂ ಹೇಳುತ್ತಿದ್ದರು, ಅದನ್ನು
ಯಾರೂ ನಂಬುತ್ತಿರಲಿಲ್ಲ. ಒಂದುದಿನ ಹುಲಿಯು ಬಂದುಬಿಟ್ಟಿತು, ಎಲ್ಲಾ ಹಸುಗಳನ್ನು ತಿಂದುಬಿಟ್ಟಿತು.
ಈ ಹಳೆಯ ಪ್ರಪಂಚವು ಹೋಯಿತೆಂದರೆ ಹೋಯಿತು, ಬಹಳಷ್ಟು ಹೋಯಿತು ಸ್ವಲ್ಪವೇ ಉಳಿದುಕೊಂಡಿದೆ ಎಂದೂ ಸಹ
ನೀವು ಹೇಳುತ್ತಿರುತ್ತೀರಿ. ಇದರ ಪೂರ್ಣಜ್ಞಾನವು ತಾವು ಮಕ್ಕಳ ಬುದ್ಧಿಯಲ್ಲಿರಬೇಕು. ಆತ್ಮವೇ ಧಾರಣೆ
ಮಾಡುತ್ತದೆ, ತಂದೆಯಲ್ಲಿಯೇ ಜ್ಞಾನವಿರುವುದಾಗಿದೆ. ಅವರು ಯಾವಾಗ ಶರೀರವನ್ನು ಧಾರಣೆ ಮಾಡುತ್ತಾರೆಯೋ
ಆಗ ಜ್ಞಾನವನ್ನು ಕೊಡುತ್ತಾರೆ. ಅವಶ್ಯವಾಗಿ ಅವರಲ್ಲಿ ಜ್ಞಾನವಿದೆ, ಆದ್ದರಿಂದಲೇ ಅವರನ್ನು
ಜ್ಞಾನಸಾಗರ, ಪರಮಾತ್ಮನೆಂದು ಹೇಳಲಾಗುತ್ತದೆ. ಅವರು ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು
ಅರಿತುಕೊಂಡಿದ್ದಾರೆ. ತನ್ನನ್ನು ಅರಿತಿದ್ದಾರಲ್ಲವೆ ಮತ್ತು ಸೃಷ್ಟಿಚಕ್ರವು ಹೇಗೆ
ಸುತ್ತುತ್ತದೆಯೆನ್ನುವ ಜ್ಞಾನವೂ ಇದೆ ಆದ್ದರಿಂದ ಆಂಗ್ಲಭಾಷೆಯಲ್ಲಿ ನಾಲೆಡ್ಜ್ ಫುಲ್ ಎಂದು
ಹೇಳಲಾಗುತ್ತದೆ. ಇದು ಬಹಳ ಚೆನ್ನಾಗಿ ಬುದ್ಧಿಯಲ್ಲಿರಬೇಕು. ಎಲ್ಲರ ಬುದ್ಧಿಯಲ್ಲಿ ಏಕರಸವಾಗಿ
ಧಾರಣೆಯಾಗುವುದಿಲ್ಲ. ಭಲೆ ಬರೆಯುತ್ತಾರೆ ಆದರೆ ಧಾರಣೆಯಿರುವುದಿಲ್ಲ. ನಾಮಮಾತ್ರಕ್ಕೆ ಬರೆಯುತ್ತಾರೆ,
ವಾಸ್ತವದಲ್ಲಿ ಅವರು ಯಾರಿಗೂ ತಿಳಿಸುವುದಿಲ್ಲ. ಕೇವಲ ಕಾಗದಕ್ಕೆ ತಿಳಿಸುತ್ತಾರಷ್ಟೆ, ಕಾಗದವೇನು
ಮಾಡುತ್ತದೆ? ಕಾಗದದಿಂದ ಯಾರೂ ಸಹ ಅರಿತುಕೊಳ್ಳುವುದಿಲ್ಲ. ಈ ದೊಡ್ಡ-ದೊಡ್ಡಚಿತ್ರಗಳಿಂದ ಬಹಳ
ಚೆನ್ನಾಗಿ ಅರಿತುಕೊಳ್ಳುತ್ತಾರೆ. ಇದು ಬಹಳ ಶ್ರೇಷ್ಠವಾದ ಜ್ಞಾನವಾಗಿರುವುದರಿಂದ ಅಕ್ಷರವೂ ಸಹ
ದೊಡ್ಡ-ದೊಡ್ಡದಾಗಿರಬೇಕು, ಈ ದೊಡ್ಡಚಿತ್ರಗಳನ್ನು ಮನುಷ್ಯರು ನೋಡಿ ತಿಳಿಯುತ್ತಾರೆ- ಇದರಲ್ಲಿ
ಅವಶ್ಯವಾಗಿ ಏನೋ ಸಾರವಿದೆ. ಸ್ಥಾಪನೆ ಮತ್ತು ವಿನಾಶವೆಂದು ಬರೆಯಲಾಗಿದೆ, ರಾಜಧಾನಿಯ ಸ್ಥಾಪನೆಯು
ಈಶ್ವರೀಯ ಜನ್ಮಸಿದ್ಧ ಅಧಿಕಾರವಾಗಿದೆ, ಪ್ರತಿಯೊಂದು ಮಗುವಿನ ಜೀವನ್ಮುಕ್ತಿಯ ಅಧಿಕಾರವಿದೆ ಅಂದಮೇಲೆ
ಎಲ್ಲರೂ ಜೀವನಬಂಧನದಲ್ಲಿದ್ದಾರೆ. ಇವರನ್ನು ಜೀವನಬಂಧನದಿಂದ ಜೀವನ್ಮುಕ್ತಿಯಲ್ಲಿ ಕರೆದುಕೊಂಡು
ಹೋಗುವುದು ಹೇಗೆ ಎಂದು ಮಕ್ಕಳ ಬುದ್ಧಿಯಲ್ಲಿ ವಿಚಾರವು ಬರಬೇಕು. ಮೊದಲು ಶಾಂತಿಧಾಮಕ್ಕೆ
ಹೋಗುತ್ತೀರಿ ನಂತರ ಸುಖಧಾಮದಲ್ಲಿ ಬರುತ್ತೀರಿ. ಸುಖಧಾಮಕ್ಕೆ ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ.
ಈ ಚಿತ್ರವು ವಿಶೇಷವಾಗಿ ದೊಡ್ಡ-ದೊಡ್ಡದಾಗಿ ಮಾಡಿಸಬೇಕಾಗಿದೆ. ಮುಖ್ಯವಾದ ಚಿತ್ರವಾಗಿದೆಯಲ್ಲವೆ!
ಬಹಳ ದೊಡ್ಡ-ದೊಡ್ಡ ಅಕ್ಷರಗಳಲ್ಲಿರಬೇಕು. ಇದರಿಂದ ಮನುಷ್ಯರು ಹೇಳುತ್ತಾರೆ- ಈ
ಬ್ರಹ್ಮಾಕುಮಾರ-ಕುಮಾರಿಯರು ಇಷ್ಟು ದೊಡ್ಡಚಿತ್ರಗಳನ್ನು ಮಾಡಿಸಿದ್ದಾರೆ ಅಂದಮೇಲೆ ಅವಶ್ಯವಾಗಿ ಏನೋ
ತಿಳುವಳಿಕೆಯಿದೆ. ಆದ್ದರಿಂದ ಎಲ್ಲಿ ನೋಡಿದರಲ್ಲಿ ನಿಮ್ಮ ದೊಡ್ಡಚಿತ್ರಗಳನ್ನು ಹಾಕಿರಬೇಕು.
ಅದರಿಂದ ಇವೆಲ್ಲಾ ಏನೆಂದು ಮನುಷ್ಯರು ಕೇಳುತ್ತಾರೆ, ತಾವು ತಿಳಿಸಿರಿ- ಇಷ್ಟೆಲ್ಲಾ
ದೊಡ್ಡಚಿತ್ರಗಳನ್ನು ತಾವು ತಿಳಿದುಕೊಳ್ಳುವುದಕ್ಕಾಗಿ ಮಾಡಲಾಗಿದೆ. ಇದರಲ್ಲಿ ಸ್ಪಷ್ಟವಾಗಿ
ಬರೆಯಲ್ಪಟ್ಟಿದೆ. ಬೇಹದ್ದಿನ ಆಸ್ತಿಯು ಇವರಿಗಿತ್ತು, ಇದು ನೆನ್ನೆಯ ಮಾತಾಗಿದೆ, ಈಗ ಅವರಿಲ್ಲ
ಏಕೆಂದರೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗೆ ಬಂದುಬಿಟ್ಟಿದ್ದಾರೆ.
ಸತೋಪ್ರಧಾನದಿಂದ ತಮೋಪ್ರಧಾನರಾಗಲೇಬೇಕಾಗಿದೆ. ಜ್ಞಾನ ಮತ್ತು ಭಕ್ತಿ, ಪೂಜ್ಯ ಮತ್ತು ಪೂಜಾರಿಯ
ಆಟವಾಗಿದೆಯಲ್ಲವೆ. ಪೂರ್ಣಆಟವು ಅರ್ಧ-ಅರ್ಧವಾಗಿ ಮಾಡಲ್ಪಟ್ಟಿದೆ ಅಂದಮೇಲೆ ಇಂತಹ ದೊಡ್ಡ-ದೊಡ್ಡ
ಚಿತ್ರಗಳನ್ನು ಮಾಡಿಸುವ ಸಾಹಸವಿರಬೇಕು, ಸರ್ವೀಸಿನ ಉಮ್ಮಂಗವಿರಬೇಕು. ದೆಹಲಿಯಲ್ಲಿ
ಮೂಲೆ-ಮೂಲೆಯಲ್ಲಿಯೂ ಸರ್ವೀಸ್ ಮಾಡಬೇಕು, ಮೇಳದಲ್ಲಿ ಬಹಳಮಂದಿ ಓದುತ್ತಾರೆ, ಈ ಚಿತ್ರಗಳು ನಿಮಗೆ
ಕೆಲಸಕ್ಕೆ ಬರುತ್ತದೆ. ಅದರಲ್ಲಿಯೂ ತ್ರಿಮೂರ್ತಿ, ಗೋಲ ಮುಖ್ಯಚಿತ್ರವಾಗಿದೆ. ಇವು ಬಹಳ ಒಳ್ಳೆಯ
ಚಿತ್ರಗಳಾಗಿವೆ, ಇವು ಅಂಧರ ಮುಂದೆ ಕನ್ನಡಿಯಿದ್ದಂತೆ. ಅಂಧರಿಗೆ ಓದಿಸಲಾಗುತ್ತದೆ, ಓದುವುದಂತು
ಆತ್ಮವಲ್ಲವೆ ಆದರೆ ಆತ್ಮದ ಕರ್ಮೆಂದ್ರಿಯಗಳು ಚಿಕ್ಕದಾಗಿರುವುದರಿಂದ ಓದಿಸುವುದಕ್ಕಾಗಿ
ಚಿತ್ರಗಳನ್ನು ತೋರಿಸಲಾಗುತ್ತದೆ. ನಂತರ ಸ್ವಲ್ಪ ದೊಡ್ಡವರಾದಾಗ ಪ್ರಪಂಚದ ನಕ್ಷೆಯನ್ನು
ತೋರಿಸುತ್ತಾರೆ ಮತ್ತು ಆ ನಕ್ಷೆಯು ಬುದ್ಧಿಯಲ್ಲಿರುತ್ತದೆ. ಈಗ ನಿಮ್ಮ ಬುದ್ಧಿಯಲ್ಲಿ ಪೂರ್ಣನಾಟಕದ
ನಕ್ಷೆಯಿದೆ, ಅದರಲ್ಲಿ ಇಷ್ಟೆಲ್ಲಾ ಧರ್ಮಗಳಿವೆ, ನಂತರದಲ್ಲಿ ನಂಬರ್ವಾರ್ ಬರುತ್ತಾರೆ ಮತ್ತು
ಹೋಗುತ್ತಾರೆ, ಇದೊಂದೇ ಆದಿಸನಾತನ ದೇವಿ-ದೇವತಾ ಧರ್ಮವಾಗಿದೆ, ಇದಕ್ಕೆ ಸ್ವರ್ಗವೆಂದು ಹೇಳುತ್ತಾರೆ.
ತಂದೆಯೊಂದಿಗೆ ಬುದ್ಧಿಯೋಗವನ್ನು ಜೋಡಿಸುವುದರಿಂದ ಪತಿತ ಆತ್ಮವು ಪಾವನವಾಗಿಬಿಡುತ್ತದೆ. ಭಾರತದ
ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ, ಯೋಗವೆಂದರೆ ನೆನಪು. ತಂದೆಯಾದ ನನ್ನನ್ನು ನೆನಪು ಮಾಡಿ ಎಂದು
ಪಾರಲೌಕಿಕ ತಂದೆಯು ಹೇಳಬೇಕಾಗುತ್ತದೆ ಆದರೆ ಲೌಕಿಕ ತಂದೆಯು ಹೇಳಬೇಕಾಗುವುದಿಲ್ಲ, ಮಕ್ಕಳು
ತಾವಾಗಿಯೇ ಅಪ್ಪ-ಅಮ್ಮ ಎಂದು ಹೇಳುತ್ತಿರುತ್ತಾರೆ. ಅವರು ಲೌಕಿಕ ಮಾತಾ-ಪಿತ ಆಗಿದ್ದಾರೆ, ಇವರು
ಪಾರಲೌಕಿಕ ಪಿತನಾಗಿದ್ದಾರೆ. ನಿಮ್ಮ ಕೃಪೆಯಿಂದ ಅಪಾರ ಸುಖವು ಸಿಗುತ್ತದೆಯೆಂಬ ಗಾಯನವಿದೆ, ಯಾರಿಗೆ
ದುಃಖವಿದೆಯೋ ಅವರೇ ಹಾಡುತ್ತಾರೆ. ಸುಖದಲ್ಲಿ ಹಾಡುವ ಅವಶ್ಯಕತೆಯೇ ಇರುವುದಿಲ್ಲ. ದುಃಖದಲ್ಲಿದ್ದಾರೆ
ಆದ್ದರಿಂದಲೇ ಕರೆಯುತ್ತಾರೆ. ಇವರು ಮಾತಾಪಿತನಾಗಿದ್ದಾರೆ ಎಂಬುದನ್ನೀಗ ನೀವು ಅರಿತುಕೊಂಡಿದ್ದೀರಿ.
ನಾನು ನಿಮಗೆ ದಿನ-ಪ್ರತಿದಿನ ಗುಹ್ಯಾತಿಗುಹ್ಯ ಮಾತುಗಳನ್ನು ತಿಳಿಸುತ್ತೇನೆ. ಮಾತಾಪಿತ ಎಂದು
ಯಾರಿಗೆ ಹೇಳಲಾಗುತ್ತದೆ ಎಂಬುದು ನಿಮಗೆ ಮೊದಲಿನಿಂದಲೇ ತಿಳಿದುಕೊಂಡಿದ್ದಿರಾ? ತಂದೆಯೆಂದು ಅವರಿಗೇ
ಹೇಳಲಾಗುತ್ತದೆ, ಬ್ರಹ್ಮಾರವರ ಮೂಲಕ ತಂದೆಯ ಆಸ್ತಿಯು ಸಿಗುತ್ತದೆ, ತಾಯಿಯೂ ಇರಬೇಕಲ್ಲವೆ ಏಕೆಂದರೆ
ಮಕ್ಕಳನ್ನು ದತ್ತು ಮಾಡಿಕೊಳ್ಳಬೇಕಾಗಿದೆ, ಈ ಮಾತುಗಳು ಯಾರ ಗಮನದಲ್ಲಿಯೂ ಬರುವುದಿಲ್ಲ ಆದ್ದರಿಂದ
ತಂದೆಯು ಪದೇ-ಪದೇ ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ತಂದೆಯನ್ನು ನೆನಪು ಮಾಡಿರಿ,
ಲಕ್ಷ್ಯವು ಸಿಕ್ಕಿತೆಂದರೆ ಮತ್ತೆಲ್ಲಿಯಾದರೂ ಹೋಗಿರಿ, ವಿದೇಶಕ್ಕೇ ಹೋಗಿರಿ, ಕೋರ್ಸನ್ನು
ತಿಳಿದುಕೊಂಡಿರೆಂದರೆ ಸಾಕು. ತಂದೆಯಿಂದ ಆಸ್ತಿಯನ್ನು ಪಡೆಯಲೇಬೇಕು, ಆತ್ಮರು ನೆನಪಿನಿಂದಲೇ
ಪಾವನವಾಗುತ್ತಾರೆ. ಸ್ವರ್ಗದ ಮಾಲೀಕನಾಗುತ್ತೇವೆ ಎಂಬ ಲಕ್ಷ್ಯವು ಬುದ್ಧಿಯಲ್ಲಿದೆಯೆಂದರೆ ಭಲೆ
ಮತ್ತೆಲ್ಲಿಯಾದರೂ ಹೋಗಿರಿ, ಗೀತಾಜ್ಞಾನದ ಸಾರವು ಈ ಬ್ಯಾಡ್ಜ್ನಲ್ಲಿದೆ. ಏನು ಮಾಡಬೇಕು ಎಂದು
ಯಾರನ್ನೂ ಕೇಳುವ ಅವಶ್ಯಕತೆಯಿಲ್ಲ. ತಂದೆಯಿಂದ ಆಸ್ತಿಯನ್ನು ಪಡೆಯಬೇಕೆಂದರೆ ಅವಶ್ಯವಾಗಿ ತಂದೆಯನ್ನು
ನೆನಪು ಮಾಡಬೇಕು. ನೀವು ಈ ಆಸ್ತಿಯನ್ನು ತಂದೆಯಿಂದ ಅನೇಕಬಾರಿ ಪಡೆದಿದ್ದೀರಿ. ಶಿಕ್ಷಕನಿಂದ
ಓದಿಕೊಂಡು ಯಾವುದಾದರೊಂದು ಪದವಿಯನ್ನು ಪಡೆದುಕೊಳ್ಳುತ್ತಾರೆ, ವಿದ್ಯೆಯಲ್ಲಿ ಬುದ್ಧಿಯೋಗವು
ಶಿಕ್ಷಕನೊಂದಿಗೆ ಇರುತ್ತದೆಯಲ್ಲವೆ. ಪರೀಕ್ಷೆಯು ಬಹಳ ದೊಡ್ಡದಾಗಿ ಇರಬಹುದು ಅಥವ ಚಿಕ್ಕದಾಗಿರಬಹುದು,
ಆದರೆ ಓದುವುದಂತು ಆತ್ಮವಲ್ಲವೆ! ಇವರ (ಬ್ರಹ್ಮಾ) ಆತ್ಮವು ಓದುತ್ತಿದೆಯಲ್ಲವೆ. ಶಿಕ್ಷಕನನ್ನು
ಮತ್ತು ಗುರಿ-ಉದ್ದೇಶವನ್ನು ನೆನಪು ಮಾಡಬೇಕಾಗಿದೆ, ಸೃಷ್ಟಿ ಚಕ್ರವನ್ನು
ಬುದ್ಧಿಯಲ್ಲಿಟ್ಟುಕೊಳ್ಳಬೇಕು. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕು. ದೈವೀಗುಣಗಳನ್ನು
ಧಾರಣೆ ಮಾಡಬೇಕಾಗಿದೆ. ಧಾರಣೆಯನ್ನು ಎಷ್ಟು ಮಾಡಿಕೊಳ್ಳುತ್ತೀರೋ ಅಷ್ಟು ಶ್ರೇಷ್ಠಪದವಿಯನ್ನು
ಪಡೆಯುತ್ತೀರಿ. ಚೆನ್ನಾಗಿ ನೆನಪು ಮಾಡುತ್ತೀರುತ್ತೀರೆಂದರೆ ಪುನಃ ಇಲ್ಲಿಗೆ (ಮಧುಬನ) ಬರುವ
ಅವಶ್ಯಕತೆ ಏನಿದೆ? ಆದರೂ ಪುನಃ ಬರುತ್ತಾರೆ. ಇಂತಹ ಶ್ರೇಷ್ಟ ತಂದೆ, ಯಾರಿಂದ ಬೇಹದ್ದಿನ ಆಸ್ತಿ
ಸಿಗುತ್ತದೆ, ಅಂತಹ ತಂದೆಯನ್ನು ಮಿಲನ ಮಾಡಿ ಹೋಗಲಿ. ಎಲ್ಲರೂ ಮಂತ್ರವನ್ನು ತೆಗೆದುಕೊಂಡು
ಬರುತ್ತಾರೆ. ನಮಗಂತೂ ಬಹಳ ದೊಡ್ಡ ಮಂತ್ರ ಸಿಗುತ್ತದೆ. ಜ್ಞಾನವಂತೂ ಬುದ್ಧಿಯಲ್ಲಿ ಚೆನ್ನಾಗಿದೆ.
ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ವಿನಾಶಿ ಸಂಪಾದನೆಯಹಿಂದೆ ಅಧಿಕ ಸಮಯವನ್ನು ವ್ಯರ್ಥ ಮಾಡಬಾರದು. ಅದೆಲ್ಲವೂ
ಮಣ್ಣುಪಾಲಾಗಿಬಿಡುತ್ತದೆ. ತಂದೆಗೆ ಏನಾದರೂ ಬೇಕಾಗಿದೆಯೇ? ಏನೂ ಇಲ್ಲ. ಏನಾದರೂ ಖರ್ಚು
ಮಾಡುತ್ತೀರೆಂದರೆ ತಮಗಾಗಿಯೇ ಮಾಡುತ್ತೀರಿ. ಇದರಲ್ಲಿ ಒಂದುಪೈಸೆಯಷ್ಟು ಖರ್ಚು ಮಾಡಬೇಕಾಗಿಲ್ಲ,
ಯುದ್ಧಕ್ಕಾಗಿ ಯಾವುದೇ ಬಂದೂಕು ಹಾಗೂ ಟ್ಯಾಂಕುಗಳನ್ನು ಖರೀದಿಸಬೇಕಾಗಿಲ್ಲ, ಯಾವುದೇ ಖರ್ಚಿಲ್ಲ.
ನೀವು ಯುದ್ಧ ಮಾಡುತ್ತಿದ್ದರೂ ಇಡೀ ಪ್ರಪಂಚದಿಂದ ಗುಪ್ತವಾಗಿದ್ದೀರಿ. ನಿಮ್ಮ ಯುದ್ಧವು ಹೇಗಿದೆ
ನೋಡಿ! ಇದಕ್ಕೆ ಯೋಗಬಲವೆಂದು ಹೇಳಲಾಗುತ್ತದೆ. ಇದರಲ್ಲಿ ಎಲ್ಲವೂ ಗುಪ್ತಮಾತಾಗಿದೆ, ಇದರಲ್ಲಿ
ಯಾರನ್ನೂ ಸಾಯಿಸುವ ಅವಶ್ಯಕತೆಯಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಇವರೆಲ್ಲರ
ಮೃತ್ಯುವು ನಾಟಕದಲ್ಲಿ ನಿಗಧಿಯಾಗಿದೆ. ಪ್ರತೀ 5000 ವರ್ಷಗಳ ನಂತರ ಯೋಗಬಲವನ್ನು ಜಮಾ ಮಾಡಿಕೊಳ್ಳಲು
ನೀವು ವಿದ್ಯೆಯನ್ನು ಓದುತ್ತೀರಿ. ವಿದ್ಯಾಭ್ಯಾಸವು ಮುಕ್ತಾಯವಾಯಿತೆಂದರೆ ಮತ್ತೆ ಹೊಸಪ್ರಪಂಚಕ್ಕೆ
ಬರಬೇಕಾಗಿದೆ. ಈ ಹಳೆಯ ಪ್ರಪಂಚಕ್ಕಾಗಿ ಪ್ರಾಕೃತಿಕ ವಿಕೋಪಗಳಾಗುತ್ತವೆ. ಗಾಯನವೂ ಇದೆಯಲ್ಲವೆ-
ತಮ್ಮ ಕುಲದ ವಿನಾಶವನ್ನು ಹೇಗೆ ಮಾಡಿಕೊಳ್ಳುತ್ತಾರೆ, ಯಾದವರದು ಎಷ್ಟು ದೊಡ್ಡಕುಲವಿದೆಯೆಂದರೆ ಇಡೀ
ಯುರೋಪ್ ಬಂದುಬಿಡುತ್ತದೆ. ನೀವು ಇಡೀವಿಶ್ವದ ಮೇಲೆ ಜಯಗಳಿಸುತ್ತೀರಿ. ಈ ಲಕ್ಷ್ಮೀ-ನಾರಾಯಣರಂತು
ಪವಿತ್ರರಾಗಿರುತ್ತಾರೆ, ಅಲ್ಲಿ ವಿಕಾರಿದೃಷ್ಟಿಯೇ ಇರುವುದಿಲ್ಲ. ಮುಂದೆಹೋದಂತೆ ತಮಗೆ ಬಹಳಷ್ಟು
ಸಾಕ್ಷಾತ್ಕಾರವಾಗುತ್ತದೆ. ತನ್ನ ದೇಶದ ಸಮೀಪಕ್ಕೆ ಬಂದಾಗ ಅಲ್ಲಿನ ವೃಕ್ಷಗಳು ಸ್ಪಷ್ಟವಾಗಿ
ಕಾಣಿಸುತ್ತದೆಯಲ್ಲವೆ. ನಾವು ನಮ್ಮ ಮನೆಯ ಸಮೀಪದಲ್ಲಿ ತಲುಪುತ್ತಿದ್ದೇವೆಂದು ಖುಷಿಯಾಗುತ್ತದೆ.
ಅದೇರೀತಿ ತಾವೂ ಸಹ ಮನೆಗೆ ಹೊರಡುತ್ತಿದ್ದೀರಿ, ನಂತರ ತಮ್ಮ ಸುಖಧಾಮಕ್ಕೆ ಬರುತ್ತೀರಿ.
ಸ್ವರ್ಗವನ್ನು ಬಿಟ್ಟುಬಂದು ಎಷ್ಟು ಸಮಯವಾಗಿದೆ! ಅದರಲ್ಲಿ ಇನ್ನು ಸ್ವಲ್ಪಸಮಯವಿದೆಯಷ್ಟೆ. ಈಗ
ಸ್ವರ್ಗವು ಮತ್ತೆ ಸಮೀಪಕ್ಕೆ ಬಂದಿದೆ. ಈಗ ನಿಮ್ಮ ಬುದ್ಧಿಯು ಮೇಲೆ ಹೋಗುತ್ತದೆ, ಅದು ನಿರಾಕಾರಿ
ಪ್ರಪಂಚವಾಗಿದೆ. ಅದಕ್ಕೆ ಬ್ರಹ್ಮಾಂಡವೆಂದೂ ಹೇಳಲಾಗುತ್ತದೆ, ನಾವು ಅಲ್ಲಿನ ನಿವಾಸಿಯಾಗಿದ್ದೇವೆ.
ಇಲ್ಲಿ 84 ಜನ್ಮಗಳ ಪಾತ್ರವನ್ನಭಿನಯಿಸಿದೆವು, ಈಗ ಹಿಂತಿರುಗಿ ಮನೆಗೆ ಹೋಗುತ್ತೇವೆ. ಮಕ್ಕಳು
ಆಲ್ರೌಂಡ್ ಪಾತ್ರಧಾರಿಗಳಾಗಿದ್ದೀರಿ. ಪ್ರಾರಂಭದಿಂದ ಪೂರ್ಣವಾಗಿ 84 ಜನ್ಮಗಳನ್ನು
ತೆಗೆದುಕೊಳ್ಳುವವರಾಗಿದ್ದೀರಿ, ನಂತರದಲ್ಲಿ ಬರುವವರಿಗೆ ಸರ್ವತೋಮುಖ ಪಾತ್ರಧಾರಿಗಳೆಂದು
ಹೇಳುವುದಿಲ್ಲ. ಕನಿಷ್ಟ ಮತ್ತು ಗರಿಷ್ಟದಲ್ಲಿ ಎಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು
ತಂದೆಯು ತಿಳಿಸಿದ್ದಾರೆ. ಕನಿಷ್ಟವೆಂದರೆ 1 ಜನ್ಮವಿದೆ, ಅಂತ್ಯದಲ್ಲಿ ಎಲ್ಲರೂ ಹಿಂತಿರುಗಿ
ಹೊರಟುಹೋಗುತ್ತಾರೆ. ಆಟವು ಪೂರ್ಣವಾಯಿತೆಂದರೆ ಎಲ್ಲವೂ ಸಮಾಪ್ತಿ. ಈಗ ತಂದೆಯು ತಿಳಿಸುತ್ತಾರೆ-
ನನ್ನನ್ನು ನೆನಪು ಮಾಡಿ, ಅದರಿಂದ ಅಂತ್ಯಮತಿ ಸೋ ಗತಿಯಾಗಿಬಿಡುತ್ತದೆ, ತಂದೆಯ ಬಳಿ ಪರಮಧಾಮಕ್ಕೆ
ಹೋಗುತ್ತೀರಿ. ಅದಕ್ಕೆ ಮುಕ್ತಿಧಾಮವೆಂದೂ ಹೇಳಲಾಗುತ್ತದೆ. ಶಾಂತಿಧಾಮದ ನಂತರ ಸುಖಧಾಮ, ಇದು
ದುಃಖಧಾಮವಾಗಿದೆ. ಪ್ರತಿಯೊಬ್ಬರೂ ಸಹ ಸತೋಪ್ರಧಾನ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾರೆ.
ಕನಿಷ್ಟವೆಂದರೆ ಒಂದು ಜನ್ಮವಿದ್ದರೂ ಸಹ ಈ ನಾಲ್ಕೂಸ್ಥಿತಿಯನ್ನು ಪಾರು ಮಾಡುತ್ತಾರೆ. ತಂದೆಯು
ಮಕ್ಕಳಿಗೆ ಎಷ್ಟುಚೆನ್ನಾಗಿ ತಿಳಿಸಿಕೊಡುತ್ತಾರೆ, ಆದರೂ ಸಹ ತಂದೆಯನ್ನು ನೆನಪು ಮಾಡುವುದಿಲ್ಲ,
ತಂದೆಯನ್ನು ಮರೆತುಬಿಡುತ್ತಾರೆ. ನಂಬರ್ವಾರಂತು ಇರುವರಲ್ಲವೆ. ಮಕ್ಕಳಿಗೆ ತಿಳಿದಿದೆ- ನಂಬರ್ವಾರ್
ಪುರುಷಾರ್ಥದನುಸಾರವಾಗಿ ರುದ್ರಮಾಲೆಯಾಗುತ್ತದೆ. ಎಷ್ಟು ಕೋಟ್ಯಾಂತರ ಆತ್ಮರ ರುದ್ರಮಾಲೆಯಿದೆ, ಇದು
ಬೇಹದ್ದಿನ ವಿಶ್ವದ ಮಾಲೆಯಾಗಿದೆ. ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮಾ- ಇಬ್ಬರ
ಉಪನಾಮವನ್ನು ನೋಡಿರಿ- ಇದು ಪ್ರಜಾಪಿತ ಬ್ರಹ್ಮಾರವರ ಹೆಸರಾಗಿದೆ, ಅರ್ಧಕಲ್ಪದ ನಂತರ ರಾವಣನು
ಬರುತ್ತಾನೆ. ಮೊದಲು ದೇವತಾಧರ್ಮ ನಂತರ ಇಸ್ಲಾಂಧರ್ಮ, ಅವರು ಆದಂ-ಬೀಬಿಯನ್ನು ನೆನಪು ಮಾಡುತ್ತಾರೆ.
ಪ್ಯಾರಡೈಸ್ನ್ನು ನೆನಪು ಮಾಡುತ್ತಾರೆ ಎಂದರೆ ಭಾರತವು ಪ್ಯಾರಡೈಸ್ ಸ್ವರ್ಗವಾಗಿತ್ತು. ತಂದೆಯು
ಸರ್ವಶ್ರೇಷ್ಠ ಭಗವಂತನಾಗಿದ್ದಾರೆ, ಅವರು ಸರ್ವ ಶ್ರೇಷ್ಠ ವಿದ್ಯೆಯನ್ನು ಓದಿಸುತ್ತಾರೆ, ಅದರಿಂದ
ಸರ್ವ ಶ್ರೇಷ್ಠ ಪದವಿಯು ಸಿಗುತ್ತದೆ- ಇದರಿಂದ ಮಕ್ಕಳಿಗೆ ಖುಷಿಯಾಗಬೇಕು. ಎಲ್ಲರಿಗಿಂತ
ಸರ್ವಶ್ರೇಷ್ಠ ಶಿಕ್ಷಕನು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಎಲ್ಲರನ್ನೂ ಮನೆಗೆ
ಕರೆದುಕೊಂಡು ಹೋಗುವ ಸದ್ಗುರುವೂ ಆಗಿದ್ದಾರೆ. ಇಂತಹ ತಂದೆಯ ನೆನಪು ಏಕೆ ಇರುವುದಿಲ್ಲ! ಇದರಲ್ಲಿ
ಖುಷಿಯ ನಶೆಯೇರಿರಬೇಕು. ಆದರೆ ಇದು ಯುದ್ಧದ ಮೈದಾನವಾಗಿರುವುದರಿಂದ ಮಾಯೆಯು ಸ್ಥಿರವಾಗಿರಲು
ಬಿಡುವುದಿಲ್ಲ. ಪದೇ-ಪದೇ ಬೀಳುತ್ತಿರುತ್ತಾರೆಂದರೆ ತಂದೆಯು ತಿಳಿಸುತ್ತಾರೆ- ಮಕ್ಕಳೇ,
ನೆನಪಿನಿಂದಲೇ ಮಾಯಾಜೀತರಾಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯು
ಏನನ್ನು ತಿಳಿಸುತ್ತಾರೆಯೋ ಅದನ್ನು ಸ್ವರೂಪದಲ್ಲಿ ತರಬೇಕಾಗಿದೆ. ಕೇವಲ ಕಾಗದದಲ್ಲಿ
ಬರೆದುಕೊಳ್ಳುವಂತಾಗಬಾರದು. ವಿನಾಶಕ್ಕೆ ಮೊದಲು ಜೀವನಬಂಧನದಿಂದ ಜೀವನ್ಮುಕ್ತ ಪದವಿಯನ್ನು ಪ್ರಾಪ್ತಿ
ಮಾಡಿಕೊಳ್ಳಬೇಕಾಗಿದೆ.
2. ತಮ್ಮ ಸಮಯವನ್ನು
ವಿನಾಶಿ ಸಂಪಾದನೆಯಲ್ಲಿ ಅಧಿಕವಾಗಿ ವ್ಯರ್ಥವಾಗಿ ಕಳೆಯಬಾರದು ಏಕೆಂದರೆ ಇದೆಲ್ಲವೂ ಮಣ್ಣುಪಾಲಾಗಲಿದೆ.
ಆದ್ದರಿಂದ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ ಮತ್ತು
ದೈವೀಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ.
ವರದಾನ:
ಯೋಗಬಲದ ಮೂಲಕ
ಮಾಯೆಯ ಶಕ್ತಿಯ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಳ್ಳುವಂತಹ ಸದಾ ವಿಜಯಿ ಭವ.
ಜ್ಞಾನ ಬಲ ಮತ್ತು ಯೋಗ
ಬಲ ಎಲ್ಲಕ್ಕಿಂತ ಶ್ರೇಷ್ಠ ಬಲವಾಗಿದೆ. ಹೇಗೆ ವಿಜ್ಞಾನದ ಬಲ ಅಂಧಕಾರದ ಮೇಲೆ ವಿಜಯ ಪ್ರಾಪ್ತಿ
ಮಾಡಿಕೊಂಡು ಬೆಳಕನ್ನು ಮಾಡುತ್ತದೆ. ಅದೇ ರೀತಿ ಯೋಗಬಲ ಸದಾಕಾಲಕ್ಕಾಗಿ ಮಾಯೆಯ ಮೇಲೆ ಜಯ ಪ್ರಾಪ್ತಿ
ಮಾಡಿಕೊಂಡು ವಿಜಯಿಗಳನ್ನಾಗಿ ಮಾಡುವುದು. ಯೋಗಬಲ ಇಷ್ಟು ಶ್ರೇಷ್ಠ ಬಲವಾಗಿದೆ ಯಾವುದರ ಮುಂದೆ
ಮಾಯೆಯ ಶಕ್ತಿ ಏನೂ ಇರುವುದಿಲ್ಲ. ಯೋಗ ಬಲವುಳ್ಳಂತ ಆತ್ಮಗಳು ಸ್ವಪ್ನದಲ್ಲಿಯೂ ಸಹ ಮಾಯೆಯಿಂದ
ಸೋಲನ್ನು ಅನುಭವಿಸಲು ಸಾಧ್ಯವಿಲ್ಲ. ಸ್ವಪ್ನದಲ್ಲಿಯೂ ಸಹ ಯಾವುದೇ ಬಲಹೀನತೆ ಬರಲು ಸಾಧ್ಯವಿಲ್ಲ. ಈ
ರೀತಿ ವಿಜಯದ ತಿಲಕ ನಿಮ್ಮ ಮಸ್ತಕದಲ್ಲಿ ಇಡಲ್ಪಟ್ಟಿದೆ.
ಸ್ಲೋಗನ್:
ನಂಬರ್ ಒನ್ನಲ್ಲಿ
ಬರಬೇಕಾದರೆ ವ್ಯರ್ಥವನ್ನು ಸಮರ್ಥದಲ್ಲಿ ಪರಿವರ್ತನೆ ಮಾಡಿಕೊಳ್ಳಿ.