07.09.25 Avyakt Bapdada
Kannada
Murli 31.12.2006 Om Shanti Madhuban
“ದೃಢತೆ ಮತ್ತು
ಪರಿವರ್ತನೆ ಶಕ್ತಿಯಿಂದ ಅಥವಾ ಸಮಸ್ಯೆ ಶಬ್ಧಕ್ಕೆ ಬೀಳ್ಕೊಡುಗೆ ಕೊಟ್ಟು ನಿವಾರಣೆ ಅಥವಾ ಸಮಾಧಾನ
ಸ್ವರೂಪರಾಗಿ”.
ಇಂದು ನವಯುಗದ ರಚೈತ
ಬಾಪ್ದಾದಾ ತಮ್ಮ ನಾಲ್ಕಾರು ಕಡೆಯ ಮಕ್ಕಳಿಗೆ ಹೊಸ ವರ್ಷ ಮತ್ತು ನವಯುಗ ಎರಡರ ಶುಭಾಷಯಗಳನ್ನು ಕೊಡಲು
ಬಂದಿದ್ದಾರೆ. ನಾಲ್ಕಾರು ಕಡೆಯ ಮಕ್ಕಳು ಸಹ ಶುಭಾಶಯಗಳನ್ನು ಕೊಡಲು ಬಂದು ತಲುಪಿದ್ದಾರೆ. ಕೇವಲ
ಹೊಸ ವರ್ಷದ ಶುಭಾಷಯಗಳನ್ನು ಕೊಡಲು ಬಂದ್ದಿದ್ದೀರಾ ಅಥವಾ ನವಯುಗದ ಶುಭಾಷಯಗಳನ್ನು ಸಹ ಕೊಡಲು
ಬಂದ್ದಿದ್ದೀರಿ? ಹೇಗೆ ಹೊಸ ವರ್ಷದ ಖುಷಿಯಾಗುತ್ತದೆ ಮತ್ತು ಖುಷಿಯನ್ನು ಕೊಡುತ್ತದೆ. ನೀವು
ಬ್ರಾಹ್ಮಣ ಆತ್ಮರಿಗೆ ನವಯುಗವು ಸಹ ನೆನಪಿದೆಯೇ? ನವಯುಗ ನಯನಗಳ ಮುಂದೆ ಬಂದಿದ್ದೀಯಾ? ಹೇಗೆ ಹೊಸ
ವರ್ಷಕ್ಕಾಗಿ ಹೃದಯದಲ್ಲಿ ಬರುತ್ತದೆ ಹೋಸ ವರ್ಷವು ಬಂತು ಬಿಟ್ಟಿತು, ಹಾಗೆಯೇ ತಮ್ಮ ನವಯುಗಕ್ಕಾಗಿ
ಇದೇ ರೀತಿ ಅನುಭವ ಮಾಡುತ್ತೀರಾ – ಈಗ ನವಯುಗ ಬಂತೆಂದರೆ ಬಂತು ಬಿಟ್ಟಿತು ಎಂದು? ಆ ನವಯುಗದ ಸ್ಮೃತಿ
ಇಷ್ಟು ಸಮೀಪ ಬರುತ್ತದೆಯೇ? ಅಲ್ಲಿ ನಿಮ್ಮ ಶರೀರ ರೂಪಿ ವಸ್ತ್ರ ಹೊಳೆಯುತ್ತಿರುವುದು
ಕಾಣಿಸುತ್ತಿದೆಯೇ? ಬಾಪ್ದಾದಾರವರು ಡಬಲ್ ಶುಭಾಶಯಗಳನ್ನು ಕೊಡುತ್ತಾರೆ. ಮಕ್ಕಳ ಮನಸ್ಸಿನಲ್ಲಿ,
ನಯನಗಳಲ್ಲಿ ನವಯುಗದ ದೃಶ್ಯಗಳು ಇಮರ್ಜ್ ಆಗಿದೆ, ಎಷ್ಟು ತಮ್ಮ ನವಯುಗದಲ್ಲಿ ತನು – ಮನ- ಧನ- ಜನ
ಶ್ರೇಷ್ಠವಾಗಿದೆ, ಸರ್ವ ಪ್ರಾಪ್ತಿಗಳ ಭಂಡಾರವಿದೆ. ಇಂದು ಹಳೆಯ ಪ್ರಪಂಚದಲ್ಲಿದ್ದೇವೆ ಮತ್ತು ಈಗೀಗ
ತಮ್ಮ ರಾಜ್ಯದಲ್ಲಿರುವೆವು ಎಂದು ಖುಷಿಯಾಗುತ್ತಿದೆ. ತಮ್ಮ ರಾಜ್ಯದ ನೆನಪಿದೆಯೇ? ಹೇಗೆ ಇಂದು ಡಬಲ್
ಕಾರ್ಯಕ್ಕಾಗಿ ಬಂದಿದ್ದೀರಿ, ಹಳೆಯದಕ್ಕೆ ಬೀಳ್ಕೊಡುಗೆ ಕೊಡಲು ಮತ್ತು ಹೊಸದಕ್ಕೆ ಶುಭಾಶಯಗಳನ್ನು
ಕೊಡಲು. ಅಂದಾಗ ಕೇವಲ ಹಳೆಯ ವರ್ಷಕ್ಕೆ ಬೀಳ್ಕೊಡುಗೆ ಕೊಡಲು ಬಂದಿದ್ದೀರಾ ಅಥವಾ ಹಳೆಯ ಪ್ರಪಂಚದ
ಹಳೆಯ ಸಂಸ್ಕಾರ, ಹಳೆಯ ಸ್ವಭಾವ, ಹಳೆಯ ನಡತೆಗೂ ಬೀಳ್ಕೊಡುಗೆ ಕೊಡಲು ಬಂದಿದ್ದೀರಾ? ಹಳೆಯ ವರ್ಷಕ್ಕೆ
ಬೀಳ್ಕೊಡುಗೆ ಕೊಡುವುದಂತು ಸಹಜವಾಗಿದೆ, ಆದರೆ ಹಳೆಯ ಸಂಸ್ಕಾರಕ್ಕೆ ವಿದಾಯಿ ಕೊಡುವುದು ಅಷ್ಟೇ
ಸಹಜವೇನಿಸುತ್ತದೆಯೇ? ಏನು ತಿಳಿಯುತ್ತೀರಿ? ಮಾಯೆಗೂ ಬೀಳ್ಕೊಡುಗೆಯನ್ನು ಕೊಡುವುದಕ್ಕೆ ಬಂದಿದ್ದೀರೋ
ಅಥವಾ ಕೇವಲ ಹಳೆಯ ವರ್ಷಕ್ಕೆ ಬೀಳ್ಕೊಡುಗೆಯನ್ನು ಕೊಡುವುದಕ್ಕೆ ಬಂದೆದ್ದೀರಾ? ಬೀಳ್ಕೊಡುಗೆ
ಕೊಡಬೇಕಲ್ಲವೇ! ಮಾಯೆಯೊಂದಿಗೆ ಸ್ವಲ್ಪ ಪ್ರೀತಿಯಿದೆಯೇ? ಸ್ವಲ್ಪ-ಸ್ವಲ್ಪ ಇಟ್ಟುಕೊಳ್ಳಲು
ಬಯಸುತ್ತೀರಾ?
ಬಾಪ್ದಾದಾರವರು ಇಂದು
ನಾಲ್ಕಾರು ಕಡೆಯ ಮಕ್ಕಳಿಂದ ಹಳೆಯ ಸಂಸ್ಕಾರ ಸ್ವಭಾವಕ್ಕೆ ಬೀಳ್ಕೊಡುಗೆ ಕೊಡಿಸಲು ಬಯಸುತ್ತಾರೆ.
ಕೊಡಲು ಸಾಧ್ಯವೇ? ಸಾಹಸವಿದೆಯೇ ಅಥವಾ ವಿದಾಯಿ ಕೊಡಬೇಕು ಎಂದು ಯೋಚಿಸುತ್ತೀರಿ! ಆದರೆ ಮಾಯೆಯು ಬಂದು
ಬಿಡುತ್ತದೆಯೇ! ಇಂದು ದೃಢ ಸಂಕಲ್ಪದ ಶಕ್ತಿಯಿಂದ ಹಳೆಯ ಸಂಸ್ಕಾರಕ್ಕೆ ವಿದಾಯಿ ಕೊಟ್ಟು, ಹೊಸ ಯುಗದ
ಸಂಸ್ಕಾರಕ್ಕೆ, ಜೀವನಕ್ಕೆ ಶುಭಾಶಯ ಕೊಡುವ ಸಾಹಸವಿದೆಯೇ? ಸಾಹಸವಿದೆಯೇ? ಯಾರು ಆಗುತ್ತದೆ ಎಂದು
ತಿಳಿಯುವಿರಿ, ಆಗುತ್ತದೆಯೇ, ಆಗಲೇಬೇಕು, ಸಾಹಸವುಳ್ಳವರೇ ಇದೆಯೇ? ಯಾರು ಸಾಹಸವಿದೆ ಎಂದು
ತಿಳಿಯುತ್ತೀರಿ ಅವರು ಕೈ ಎತ್ತಿರಿ. ಸಾಹಸವಿದೆಯೇ? ಒಳ್ಳೆಯದು ಯಾರು ಕೈ ಎತ್ತಿಲ್ಲ ಅವರು
ಯೋಚಿಸುತ್ತಿದ್ದೀರಾ? ಡಬಲ್ ವಿದೇಶಿಯರು ಕೈ ಎತ್ತಿದ್ದೀರಾ, ಯಾರಲ್ಲಿ ಸಾಹಸವಿದೆ ಅವರು ಕೈ ಎತ್ತಿ,
ಎಲ್ಲರೂ ಎತ್ತಿಲ್ಲ. ಒಳ್ಳೆಯದು, ಡಬಲ್ ವಿದೇಶಿಯರಂತು ಬುದ್ಧಿವಂತರಿದ್ದಾರೆ. ಏಕೆಂದರೆ ಡಬಲ್
ನಶೆಯಿದೆ. ನೋಡಿ, ಬಾಪ್ದಾದಾರವರು ಪ್ರತಿ ತಿಂಗಳು ಫಲಿತಾಂಶವನ್ನು ನೋಡುವರು. ಬಾಪ್ದಾದಾರವರಿಗೆ
ಸಾಹಸವುಳ್ಳ ಮಕ್ಕಳಿದ್ದಾರೆಂದು ಖುಷಿಯಿದೆ. ಬುದ್ಧಿವಂತಿಕೆಯಿಂದ ಉತ್ತರ ಕೊಡುವಂತಹ ಮಕ್ಕಳಿದ್ದಾರೆ.
ಏಕೆ? ಏಕೆಂದರೆ ತಿಳಿದುಕೊಂಡಿದ್ದೀರಿ - ಸಾಹಸದ ಒಂದು ಹೆಜ್ಜೆ ನಮ್ಮದು ಮತ್ತು ಸಹಾಯದ ಸಾವಿರಾರು
ಹೆಜ್ಜೆಗಳು ತಂದೆಯದ್ದು ಸಿಗಲೇ ಬೇಕು. ಅಧಿಕಾರಿಯಾಗಿದ್ದೀರಿ. ಸಹಾಯದ ಸಾವಿರ ಹೆಜ್ಜೆಗೆ
ಅಧಿಕಾರಿಯಾಗಿದ್ದೀರಿ. ಮಾಯೆಯು ಕೇವಲ ಸಾಹಸವನ್ನು ಅಲುಗಾಡಿಸಲು ಪ್ರಯತ್ನ ಪಡುತ್ತದೆ.
ಬಾಪ್ದಾದಾರವರು ನೋಡುತ್ತಾರೆ ಸಾಹಸವನ್ನು ಚೆನ್ನಾಗಿ ಇಟ್ಟಿದ್ದೀರಿ, ಬಾಪ್ದಾದಾರವರು ಹೃದಯದಿಂದ
ಶುಭಾಶಯಗಳನ್ನು ಕೊಡುತ್ತಾರೆ ಆದರೆ ಸಾಹಸವನ್ನಿಟ್ಟು ನಂತರ ಜೊತೆಯಲ್ಲಿ ತಮ್ಮೊಳಗಡೆ ವ್ಯರ್ಥ
ಸಂಕಲ್ಪವನ್ನು ನಡೆಸುತ್ತಾರೆ, ಮಾಡುತ್ತಲಂತು ಇದ್ದೇವೆ, ಆಗಬೇಕು, ಅವಶ್ಯವಾಗಿ ಮಾಡುವೆವು,
ಗೊತ್ತಿಲ್ಲ... ಗೊತ್ತಿಲ್ಲ ಎನ್ನುವ ಸಂಕಲ್ಪ ಬರುವುದು ಸಾಹಸವನ್ನು ಬಲಹೀನವನ್ನಾಗಿ ಮಾಡಿ
ಬಿಡುತ್ತದೆ. ಅಂದಾಗ ಬಂದು ಬಿಡುತ್ತದೆಯಲ್ಲವೇ, ಮಾಡುತ್ತೇವೆ, ಮಾಡಬೇಕು, ಮುಂದೆ ಹಾರಬೇಕು. ಇದು
ಸಾಹಸವನ್ನು ಅಲುಗಾಡಿಸಿ ಬಿಡುತ್ತದೆ. ಮಾಡಲೇಬೇಕು ಎಂದು ಯೋಚಿಸಬೇಡಿ. ಏಕೆ ಆಗುವುದಿಲ್ಲ! ಯಾವಾಗ
ತಂದೆಯು ಜೊತೆಯಲ್ಲಿದ್ದಾರೆ, ತಂದೆಯ ಜೊತೆಯಲ್ಲಿ ಅಂದಾಗ ಬರಲು ಸಾಧ್ಯವಿಲ್ಲ.
ಈ ಹೊಸ ವರ್ಷದಲ್ಲಿ ಏನು
ನವೀನತೆ ಮಾಡುವಿರಿ? ಸಾಹಸದ ಕಾಲನ್ನು ಗಟ್ಟಿಯನ್ನಾಗಿ ಮಾಡಿ. ಈ ರೀತಿ ಸಾಹಸದ ಕಾಲು ಗಟ್ಟಿಯನ್ನಾಗಿ
ಮಾಡಿ ಯಾವುದರಿಂದ ಮಾಯೆಯು ಸ್ವಯಂ ಅಲುಗಾಡಬೇಕು ಆದರೆ ಕಾಲು ಅಲುಗಾಡಬಾರದು. ಹೊಸ ವರ್ಷದಲ್ಲಿ
ನವೀನತೆ ಮಾಡುವಿರಿ, ಅಥವಾ ಹೇಗೆ ಕೆಲವೊಮ್ಮೆ ಅಲುಗಾಡುತ್ತೀರಿ ಕೆಲವೊಮ್ಮೆ ಗಟ್ಟಿಯಾಗಿರುತ್ತೀರಿ,
ಹಾಗಂತೂ ಮಾಡುವುದಿಲ್ಲ ತಾನೆ! ನಿಮ್ಮೆಲ್ಲರ ಕರ್ತವ್ಯ ಏನಾಗಿದೆ? ನಿಮ್ಮನ್ನು ಏನೆಂದು
ಹೇಳಿಕೊಳ್ಳುತ್ತೀರಿ? ನೆನಪು ಮಾಡಿಕೊಳ್ಳಿರಿ. ವಿಶ್ವ ಕಲ್ಯಾಣಿ, ವಿಶ್ವ ಪರಿವರ್ತಕ, ಇದು ನಿಮ್ಮ
ಕರ್ತವ್ಯ ಅಲ್ಲವೇ! ಬಾಪ್ದಾದಾರವರಿಗೆ ಕೆಲವೊಮ್ಮೆ ಮಧುರ ನಗು ಬರುತ್ತದೆ. ವಿಶ್ವ ಪರಿವರ್ತಕ ಟೈಟಲ್
ಇದೆಯಲ್ಲವೇ! ವಿಶ್ವ ಪರಿವರ್ತಕರಾಗಿದ್ದೀರಾ? ಅಥವಾ ಲಂಡನ್ ಪರಿವರ್ತಕರಾಗಿದ್ದೀರಾ, ಭಾರತದ
ಪರಿವರ್ತಕರಾಗಿದ್ದೀರಾ? ಎಲ್ಲರೂ ವಿಶ್ವ ಪರಿವರ್ತಕರಾಗಿದ್ದೀರಾ? ಎಲ್ಲೇ ಇರಲಿ, ಹಳ್ಳಿಯಲ್ಲಿರಲಿ
ಅಥವಾ ಲಂಡನ್ ಅಥವಾ ಅಮೇರಿಕಾದಲ್ಲಿರಲಿ ಆದರೆ ವಿಶ್ವ ಕಲ್ಯಾಣಕಾರಿಯಾಗಿದ್ದೀರಲ್ಲವೇ? ಹಾಗಿದ್ದರೆ
ಕತ್ತನ್ನು ಅಲುಗಾಡಿಸಿ. ಪಕ್ಕಾ ಅಲ್ಲವೇ! 75 ಪರ್ಸೆಂಟೇಜ್ ಇದ್ದೀರಿ. 75 ಪರ್ಸೆಂಟ್ ವಿಶ್ವ
ಕಲ್ಯಾಣಿ ಮತ್ತು 25 ಪರ್ಸೆಂಟ್ ಕ್ಷಮೆಯಿದೆ, ಈ ರೀತಿಯಿದೆಯೇ? ನಿಮ್ಮ ಚಾಲೇಂಜ್ ಏನಾಗಿದೆ?
ಪ್ರಕೃತಿಯನ್ನು ಚಾಲೇಂಜ್ ಮಾಡುತ್ತೀರಿ - ಪ್ರಕೃತಿಯನ್ನು ಸಹ ಪರಿವರ್ತನೆ ಮಾಡೇ ಇರುತ್ತೀರಿ. ತಮ್ಮ
ಕರ್ತವ್ಯವನ್ನು ನೆನಪು ಮಾಡಿಕೊಳ್ಳಿರಿ. ಕೆಲವೊಮ್ಮೆ ತಮಗಾಗಿ ಯೋಚಿಸುತ್ತೀರಿ – ಮಾಡಲು
ಬಯಸುವುದಿಲ್ಲ ಆದರೆ ಆಗಿ ಬಿಡುತ್ತದೆ. ವಿಶ್ವ ಪರಿವರ್ತಕ, ಪ್ರಕೃತಿ ಪರಿವರ್ತಕ, ಸ್ವ
ಪರಿವರ್ತಕರಾಗಲು ಸಾಧ್ಯವಿಲ್ಲವೇ? ಶಕ್ತಿ ಸೇನೆ ಏನು ಯೋಚಿಸುತ್ತೀರಿ? ಈ ವರ್ಷದಲ್ಲಿ ತಮ್ಮ
ಕರ್ತವ್ಯ ವಿಶ್ವ ಪರಿವರ್ತಕದ ಸ್ವ ಪ್ರತಿ ಅಥವಾ ತಮ್ಮ ಬ್ರಾಹ್ಮಣ ಪರಿವಾರದ ಪ್ರತಿ, ಏಕೆಂದರೆ ಮೊದಲು
ದಾನವು ಮನೆಯಿಂದಲೇ ಪ್ರಾರಂಭವಾಗುತ್ತದೆಯಲ್ಲವೇ! ತಮ್ಮ ಕರ್ತವ್ಯದ ಪ್ರಾಕ್ಟಿಕಲ್ ಸ್ವರೂಪ
ಪ್ರತ್ಯಕ್ಷ ಮಾಡುತ್ತೀರಲ್ಲವೇ! ಸ್ವ ಪರಿವರ್ತನೆ ಯಾರು ಸ್ವಯಂ ಬಯಸುತ್ತಾರೆ ಮತ್ತು ಬಾಪ್ದಾದಾರವರು
ಬಯಸುತ್ತಾರೆ, ತಿಳಿದುಕೊಂಡಿದ್ದೀರಲ್ಲವೇ! ಬಾಪ್ದಾದಾರವರು ಕೇಳುತ್ತಾರೆ - ನೀವೆಲ್ಲಾ ಮಕ್ಕಳ
ಲಕ್ಷ್ಯವೇನಾಗಿದೆ? ಒಂದೇ ಉತ್ತರವನ್ನು ಹೆಚ್ಚಾಗಿ ಎಲ್ಲರು ಕೊಡುತ್ತಾರೆ ತಂದೆಯ ಸಮಾನರಾಗಬೇಕೆಂದು.
ಸರಿಯಿದೆಯಲ್ಲವೇ! ತಂದೆಯ ಸಮಾನರಾಗಲೇ ಬೇಕಲ್ಲವೇ, ನೋಡೋಣ, ಯೋಚಿಸೋಣ,..... ! ತಂದೆಯು ಇದನ್ನೇ
ಬಯಸುತ್ತಾರೆ ಈ ವರ್ಷದಲ್ಲಿ 70 ವರ್ಷ ಪೂರ್ಣವಾಗುತ್ತಿದೆ, ಈಗ 71ರ ವರ್ಷದಲ್ಲಿ ಏನಾದರು ಅದ್ಭುತ
ಮಾಡಿ ತೋರಿಸಿರಿ. ಎಲ್ಲರೂ ಸೇವೆಯ ಉಮ್ಮಂಗದಲ್ಲಿ ಭಿನ್ನ-ಭಿನ್ನ ಪ್ರೋಗ್ರಾಮ್ ಮಾಡುತ್ತಿರುತ್ತೀರಿ,
ಸಫಲವೂ ಆಗುತ್ತಿರುತ್ತದೆ, ಏನು ಪರಿಶ್ರಮ ಪಟ್ಟಿದ್ದೀರೋ ಅದಕ್ಕೆ ಸಫಲತೆಯು ಸಿಗುತ್ತದೆ ಎಂದು
ಬಾಪ್ದಾದಾರವರಿಗೆ ಖುಷಿಯು ಆಗುತ್ತಿರುತ್ತದೆ. ವ್ಯರ್ಥವಾಗಿ ಹೋಗುವುದಿಲ್ಲ ಆದರೆ ಯಾವುದಕ್ಕಾಗಿ
ಸೇವೆ ಮಾಡುತ್ತೀರಿ? ಏನು ಉತ್ತರ ಕೊಡುತ್ತೀರಿ? ತಂದೆಯನ್ನು ಪ್ರತ್ಯಕ್ಷಗೊಳಿಸಲು. ತಂದೆಯು ಇಂದು
ಮಕ್ಕಳಿಗೆ ಪ್ರಶ್ನೆಯನ್ನು ಕೇಳುತ್ತಾರೆ, ತಂದೆಯ ಪ್ರತ್ಯಕ್ಷ ಮಾಡಲೇಬೇಕು, ಆದರೆ ತಂದೆಯನ್ನು
ಪ್ರತ್ಯಕ್ಷ ಮಾಡುವ ಮೊದಲು ಸ್ವಯಂನ ಪ್ರತ್ಯಕ್ಷ ಮಾಡಿ. ಹೇಳಿರಿ, ಶಿವಶಕ್ತಿಯರು ಈ ವರ್ಷ ಸ್ವಯಂನ
ಪ್ರತ್ಯಕ್ಷ ಶಿವಶಕ್ತಿ ರೂಪದಲ್ಲಿ ಮಾಡುವಿರಾ? ಮಾಡುವಿರಾ? ಜನಕ ಹೇಳು? ಮಾಡುವಿರಾ? (ಮಾಡಲೇಬೇಕು)
ಜೊತೆಯಲ್ಲಿ, ಮೊದಲನೇ ಲೈನ್, ಎರಡನೇ ಲೈನ್ ಟೀಚರ್ಸ್. ಟೀಚರ್ಸ್ ಕೈ ಎತ್ತಿರಿ ಯಾರು ಈ ವರ್ಷದಲ್ಲಿ
ಮಾಡಿ ತೋರಿಸುವಿರಿ. ಮಾಡುವಿರಿ ಅಲ್ಲ, ಮಾಡಿ ತೋರಿಸಲೇಬೇಕು. ಒಳ್ಳೆಯದು – ಏಲ್ಲಾ ಟೀಚರ್ಸ್ ಕೈ
ಎತ್ತಿರಿ ಅಥವಾ ಕೆಲವರು ಎತ್ತಿಲ್ಲ.
ಒಳ್ಳೆಯದು – ಮಧುಬನದವರು.
ಮಾಡಲೇಬೇಕು, ಮಾಡಲೇಬೇಕಾಗುತ್ತದೆ. ಮಧುಬನದವರು, ಏಕೆಂದರೆ ಮಧುಬನ ಹತ್ತಿರವಿದೆಯಲ್ಲವೇ.
ದಿನಾಂಕವನ್ನು ಬರೆದಿಟ್ಟುಕೊಳ್ಳಿರಿ, 31 ದಿನಾಂಕವಿದೆ. ಟೈಮ್ ಸಹ ಬರೆದಿಟ್ಟುಕೊಳ್ಳಿರಿ (9 ಗಂಟೆ
20 ನಿಮಿಷ). ಮತ್ತು ಪಾಂಡವ ಸೇನೆ, ಪಾಂಡವರು ಏನು ತೋರಿಸುತ್ತಾರೆ! ವಿಜಯಿ ಪಾಂಡವ. ಕೆಲ-ಕೆಲವೊಮ್ಮೆ
ವಿಜಯಿಯಲ್ಲ, ವಿಜಯಿ ಪಾಂಡವರಾಗಿದ್ದೀರಿ. ಇದ್ದೀರಾ? ಈ ವರ್ಷದಲ್ಲಿ ಮಾಡಿ ತೋರಿಸಬೇಕು, ಅಥವಾ ಏನು
ಮಾಡುವುದು ಎಂದು ಹೇಳುತ್ತೀರಾ? ಮಾಯೆ ಬಂತು ಅಲ್ಲವೇ, ಬಯಸಿರಲಿಲ್ಲ ಬಂದು ಬಿಟ್ಟಿತು.
ಬಾಪ್ದಾದಾರವರು ಮೊದಲೇ ಹೇಳಿದ್ದರು – ಮಾಯೆ ತನ್ನ ಕೊನೆಯ ಸಮಯದವರೆಗೂ ಬರುವುದನ್ನು ಬಿಡುವುದಿಲ್ಲ.
ಆದರೆ ಮಾಯೆಯ ಕೆಲಸವಾಗಿದೆ ಬರುವುದು ಮತ್ತು ನಿಮ್ಮ ಕೆಲಸ ಏನಾಗಿದೆ? ವಿಜಯಿಯಾಗುವುದು. ಈ ರೀತಿ
ಯೋಚಿಸಬೇಡಿ, ಬಯಸುವುದಿಲ್ಲ ಆದರೆ ಮಾಯೆಯು ಬಂದು ಬಿಡುತ್ತದೆ. ಆಗಿ ಬಿಡುತ್ತದೆ. ಈಗ ಈ ಶಬ್ಧವನ್ನು
ಈ ವರ್ಷದ ಜೊತೆಯಲ್ಲಿ, ಈ ಶಬ್ಧಗಳಿಗೆ ಬೀಳ್ಕೊಡುಗೆ ಕೊಡಿಸಲು ಬಯಸುತ್ತಾರೆ. 12 ಗಂಟೆಗೆ ಈ
ವರ್ಷಕ್ಕೆ ಬೀಳ್ಕೊಡುಗೆ ಕೊಡುತ್ತಿರಲ್ಲವೇ. ಯಾವ ಗಂಟೆಯನ್ನು ಬಾರಿಸುವಿರೋ, ಇಂದು ಯಾವಾಗ ಗಂಟೆ
ಬಾರಿಸುವಿರೋ, ಆಗ ಯಾವ ಗಂಟೆ ಬಾರಿಸುವಿರಿ? ದಿನದ, ವರ್ಷದ ಅಥವಾ ಮಾಯೆಯನ್ನು ಬೀಳ್ಕೊಡುಗೆಯ ಗಂಟೆ
ಬಾರಿಸುವಿರೋ. ಎರಡು ಮಾತುಗಳಿವೆ - ಒಂದು ಪರಿವರ್ತನೆಯ ಶಕ್ತಿ, ಅದರ ಬಲಹೀನತೆಯಿದೆ. ಪ್ಲಾನ್ ಬಹಳ
ಚೆನ್ನಾಗಿ ಮಾಡುತ್ತೀರಿ, ಹೀಗೆ ಮಾಡುವೆವು, ಹೀಗೆ ಮಾಡುವೆವು, ಹೀಗೆ ಮಾಡುವೆವು.....
ಬಾಪ್ದಾದಾರವರು ಖುಷಿಯಾಗಿ ಬಿಡುತ್ತಾರೆ, ಬಹಳ ಒಳ್ಳೆಯ ಪ್ಲಾನ್ ಮಾಡುತ್ತಾರೆ ಆದರೆ ಪರಿವರ್ತನೆಯ
ಶಕ್ತಿಯ ಕೊರತೆಯಿರುವ ಕಾರಣ ಕೆಲವು ಪರಿವರ್ತನೆಯಾಗುತ್ತದೆ, ಕೆಲವು ಪರಿವರ್ತನೆಯಾಗುವುದಿಲ್ಲ.
ಎರಡನೇ ಕೊರತೆ - ದೃಢತೆ. ಸಂಕಲ್ಪಗಳು ಒಳ್ಳೊಳ್ಳೆಯದನ್ನೇ ಮಾಡುತ್ತೀರಿ, ಇಂದು ಸಹ ನೋಡಿ ಎಷ್ಟು
ಕಾರ್ಡ್, ಎಷ್ಟು ಪತ್ರಗಳು, ಎಷ್ಟು ವಚನಗಳನ್ನು ನೋಡಿದರು, ಬಾಪ್ದಾದಾರವರು ನೋಡಿದರು. ಬಹಳ
ಒಳ್ಳೊಳ್ಳೆಯ ಪತ್ರಗಳು ಬಂದಿವೆ. (ಕಾರ್ಡ್, ಪತ್ರ ಇತ್ಯಾದಿ ಎಲ್ಲಾ ಸ್ಟೇಜ್ ಮೇಲೆ ಶೃಂಗಾರ
ಮಾಡಿತ್ತಿದ್ದಾರೆ) ಮಾಡುವೆವು, ನೋಡುವೆವು, ಆಗಲೇಬೇಕು, ಆಗಲೇಬೇಕು, ಪದಮ-ಪದಮಗುಣ ನೆನಪು ಪ್ರೀತಿ,
ಎಲ್ಲಾ ಬಾಪ್ದಾದಾರವರ ಹತ್ತಿರ ತಲುಪಿದೆ, ನೀವು ಏನು ಸನ್ಮುಖದಲ್ಲಿ ಕುಳಿತ್ತಿದ್ದೀರಿ, ಅವರ ಹೃದಯದ
ಶಬ್ಧವು ತಂದೆಯ ಹತ್ತಿರ ತಲುಪಿದೆ. ಆದರೆ ಈಗ ಬಾಪ್ದಾದಾ ಈ ಎರಡು ಶಕ್ತಿಗಳ ಮೇಲೆ ಅಂಡರ್ಲೈನ್
ಮಾಡಿಸುತ್ತಿದ್ದಾರೆ. ಒಂದು ದೃಢತೆಯ ಕೊರತೆಯಾಗಿ ಬಿಡುತ್ತದೆ. ಕೊರತೆಯ ಕಾರಣ, ಇನ್ನೊಬ್ಬರನ್ನು
ನೋಡುವ ಹುಡುಗಾಟಿಕೆ ಆಗಿ ಬಿಡುತ್ತದೆ, ಮಾಡುತ್ತಿದ್ದೇವೆ, ಅವಶ್ಯವಾಗಿ ಮಾಡುತ್ತೇವೆ.
ಬಾಪ್ದಾದಾರವರು ಇದನ್ನೇ
ಬಯಸುತ್ತಾರೆ ಈ ವರ್ಷ ಒಂದು ಶಬ್ಧಕ್ಕೆ ಬೀಳ್ಕೊಡುಗೆ ಕೊಡಿ - ಸದಾಕಾಲಕ್ಕಾಗಿ. ಹೇಳುವುದೇ,
ಹೇಳುವುದೇ? ಕೊಡಬೇಕಾಗುತ್ತದೆ. ಈ ವರ್ಷ ಬಾಪ್ದಾದಾ ‘ಕಾರಣ’ ಶಬ್ಧಕ್ಕೆ ಬೀಳ್ಕೊಡುಗೆ ಕೊಡಿಸಲು
ಬಯಸುತ್ತಾರೆ, ನಿವಾರಣೆಯಾಗಲಿ, ಕಾರಣ ಸಮಾಪ್ತಿ. ಸಮಸ್ಯೆ ಸಮಾಪ್ತಿ, ಸಮಾಧಾನ ಸ್ವರೂಪ. ಸ್ವಯಂನ
ಕಾರಣವಿರಬಹುದು, ಜೊತೆಯಿರುವವರ ಕಾರಣವಿರಬಹುದು, ಸಂಘಟನೆಯ ಕಾರಣವಿರಬಹುದು, ಯಾವುದೇ ಪರಿಸ್ಥಿತಿಯ
ಕಾರಣವಿರಬಹುದು, ಬ್ರಾಹ್ಮಣರ ಶಬ್ಧಕೋಶದಲ್ಲಿ ಕಾರಣ ಶಬ್ಧ, ಸಮಸ್ಯೆ ಶಬ್ಧ ಪರಿವರ್ತನೆಯಾಗಲಿ,
ಸಮಾಧಾನ ಮತ್ತು ನಿವಾರಣೆಯಾಗಲಿ ಏಕೆಂದರೆ ಅನೇಕರು ಇಂದು ಅಮೃತವೇಳೆಯು ಸಹ ಬಾಪ್ದಾದಾರವರಿಂದ
ಆತ್ಮಿಕ ವಾರ್ತಾಲಾಪದಲ್ಲಿ ಇದನ್ನೇ ಮಾತನಾಡಿದರು. ಈ ಹೊಸ ವರ್ಷದಲ್ಲಿ ಏನಾದರು ನವೀನತೆ ಮಾಡುವೆವು.
ಅಂದಾಗ ಬಾಪ್ದಾದಾ ಬಯಸುತ್ತಾರೆ ಈ ಹೊಸ ವರ್ಷವನ್ನು ಈ ರೀತಿ ಆಚರಿಸಿರಿ ಈ ಎರಡು ಶಬ್ಧ
ಸಮಾಪ್ತಿಯಾಗಲಿ, ಪರ-ಉಪಕಾರಿ. ಸ್ವಯಂ ಕಾರಣರಾಗುವಿರಿ ಅಥವಾ ಬೇರೆಯವರು ಕಾರಣರಾಗುತ್ತಾರೆ, ಆದರೆ
ಪರ-ಉಪಕಾರಿ ಆತ್ಮನಾಗಿ, ದಯಾಹೃದಯಿ ಆತ್ಮನಾಗಿ, ಶುಭ ಭಾವನೆ, ಶುಭ ಕಾಮನೆಯ ಹೃದಯದವರಾಗಿ ಸಹಯೋಗ
ಕೊಡಿ, ಸ್ನೇಹ ತೆಗೆದುಕೊಳ್ಳಿರಿ.
ಈ ಹೊಸ ವರ್ಷಕ್ಕೆ ಏನು
ಹೆಸರಿಡುವಿರಿ? ಮೊದಲು ಪ್ರತಿ ವರ್ಷಕ್ಕೆ ಹೆಸರು ಕೊಡುತ್ತಿದ್ದರು, ನೆನಪಿದೆಯಲ್ಲವೇ?
ಬಾಪ್ದಾದಾರವರು ಈ ವರ್ಷಕ್ಕೆ ಶ್ರೇಷ್ಠ ಶುಭ ಸಂಕಲ್ಪ, ದೃಢ ಸಂಕಲ್ಪ, ಸ್ನೇಹ ಸಹಯೋಗ ಸಂಕಲ್ಪ ವರ್ಷ
- ಇದು ಹೆಸರು ಅಲ್ಲ, ಆದರೆ ಈ ರೀತಿ ನೋಡಲು ಬಯಸುತ್ತಾರೆ. ದೃಢತೆಯ ಶಕ್ತಿ, ಪರಿವರ್ತನೆಯ
ಶಕ್ತಿಯನ್ನು ಸದಾ ಜೊತೆಗಾರರನ್ನಾಗಿ ಮಾಡಿ. ಯಾರೇ ಏನೇ ನಕಾರಾತ್ಮಕವನ್ನು ಕೊಡಲಿ ಆದರೆ ಹೇಗೆ ನೀವು
ಅನ್ಯರಿಗೆ ಕೋರ್ಸ್ ಮಾಡಿಸುತ್ತೀರಿ ನಕಾರಾತ್ಮಕವನ್ನು ಸಕಾರಾತ್ಮಕತೆಯಲ್ಲಿ ಬದಲಾಯಿಸಿ ಎಂದು,
ಅಂದಾಗ ನೀವು ಸ್ವಯಂ ನಕಾರಾತ್ಮಕವನ್ನು ಸಕಾರಾತ್ಮಕತೆಯಲ್ಲಿ ಬದಲಾಯಿಸಲು ಸಾಧ್ಯವಿಲ್ಲವೇ? ಅನ್ಯರು
ಪರವಶರಾಗಿರುತ್ತಾರೆ, ಪರವಶರಾಗಿರುವವರ ಮೇಲೆ ದಯೆ ತೋರಿಸಲಾಗುತ್ತದೆ. ನಿಮ್ಮ ಜಡ ಚಿತ್ರ, ನಿಮ್ಮದೇ
ಜಡ ಚಿತ್ರವಿದೆಯಲ್ಲವೇ. ಭಾರತದಲ್ಲಿ ಡಬಲ್ ವಿದೇಶಿಯರದ್ದು ಚಿತ್ರವಿದೆಯಲ್ಲವೇ,
ಪೂಜಿಸಲ್ಪಡುವಂತಹವರು? ಹೃದಯವಂತಹವರು ಮಂದಿರಗಳಲ್ಲಿ ತಮ್ಮ ಚಿತ್ರವನ್ನು ನೋಡಿದ್ದೀರಲ್ಲವೇ! ಬಹಳ
ಒಳ್ಳೆಯದು. ಯಾವಾಗ ನಿಮ್ಮ ಜಡ ಚಿತ್ರ ದಯಾಹೃದಯದ್ದಾಗಿದೆ, ಯಾವುದೇ ಚಿತ್ರದ ಮುಂದೆ ಹೋದಾಗ ಏನು
ಬೇಡುವರು? ದಯೆ ಮಾಡಿ, ಕೃಪೆ ಮಾಡಿ, ದಯೆ, ದಯೆ, ದಯೆ... ಸದಾ ಮೊದಲು ತಮ್ಮ ಮೇಲೆ ದಯೆ ತೋರಿಸಿ,
ನಂತರ ಬ್ರಾಹ್ಮಣ ಪರಿವಾರದ ಮೇಲೆ ದಯೆ ತೋರಿಸಿ, ಒಂದುವೇಳೆ ಯಾರೇ ಪರವಶವಾಗಿದ್ದರೆ, ಸಂಸ್ಕಾರಕ್ಕೆ
ವಶರಾಗಿದ್ದರೆ, ಬಲಹೀನರಾಗಿದ್ದರೆ, ಆ ಸಮಯ ಬುದ್ಧಿಹೀನರಾಗಿ ಬಿಡುತ್ತಾರೆ, ಕ್ರೋಧ ಮಾಡುವುದಿಲ್ಲ.
ಕ್ರೋಧದ ರಿಪೋರ್ಟ್ ಹೆಚ್ಚು ಬರುತ್ತಿದೆ. ಕ್ರೋಧವಿಲ್ಲವೆಂದರೆ ಅದರ ಮರಿಮಕ್ಕಳೊಂದಿಗೆ ಬಹಳ ಪ್ರೀತಿ
ಇರುತ್ತದೆ. ಆವೇಶ (ಕ್ರೋಧದ ಅಂಶ), ಕ್ರೋಧದ ಮಗುವಾಗಿದೆ. ಹೇಗೆ ಪರಿವಾರದಲ್ಲಿ ಇರುತ್ತದೆಯಲ್ಲವೇ,
ದೊಡ್ಡ ಮಕ್ಕಳೊಂದಿಗೆ ಪ್ರೀತಿ ಕಡಿಮೆಯಿರುತ್ತದೆ ಮತ್ತು ಮೊಮ್ಮಕ್ಕಳೊಂದಿಗೆ ಪ್ರೀತಿ
ಹೆಚ್ಚಿರುತ್ತದೆ. ಕ್ರೋಧ ತಂದೆಯಾಗಿದೆ ಮತ್ತು ಆವೇಶ ಮತ್ತು ಉಲ್ಟಾ ನಶೆ, ನಶೆಯೂ ಭಿನ್ನ
ಭಿನ್ನವಾಗಿರುತ್ತದೆ, ಬುದ್ಧಿಯ ನಶೆ, ಕರ್ತವ್ಯದ ನಶೆ, ಸೇವೆಯ ಯಾವುದೇ ವಿಶೇಷ ಕರ್ತವ್ಯದ ನಶೆ, ಇದು
ಆವೇಶ ಆಗಿದೆ. ದಯಾಲು ಆಗಿರಿ, ಕೃಪಾಲು ಆಗಿರಿ. ನೋಡಿ, ಹೊಸ ವರ್ಷದಲ್ಲಿ ಒಬ್ಬರಿನ್ನೊಬ್ಬರ
ಮುಖವನ್ನು ಮಧುರ ಮಾಡುತ್ತೀರಿ, ಶುಭಾಶಯಗಳನ್ನು ಕೊಡುತ್ತಿರಿ, ಮುಖದಿಂದ ಮಧುರ ಅನುಭವ
ಮಾಡಿಸುತ್ತಿರಿ. ಇಡೀ ವರ್ಷ ಕಹಿತನವನ್ನು ತೋರಿಸಬಾರದು. ಅವರು ಮುಖವನ್ನು ಮಧುರ ಮಾಡುತ್ತಾರೆ, ನೀವು
ಕೇವಲ ಮುಖ ಮಧುರ ಮಾಡುವುದಿಲ್ಲ ಆದರೆ ನಿಮ್ಮ ಮುಖ (ಚಹರೆ) ಮಧುರವಾಗಿರಲಿ. ಸದಾ ತಮ್ಮ ಚಹರೆಯು
ಆತ್ಮೀಯತೆಯ ಸ್ನೇಹದಿಂದ ಕೂಡಲಿ, ಮುಗುಳ್ನಗೆಯಿರಲಿ. ಕಹಿತನವಲ್ಲ. ಬಹುಮತ ಯಾವಾಗ ಬಾಪ್ದಾದಾರವರಿಂದ
ಆತ್ಮಿಕ ವಾರ್ತಾಲಾಪ ಮಾಡುತ್ತಾರೆಂದಾಗ ತಮ್ಮ ಸತ್ಯ ಮಾತನ್ನು ತಿಳಿಸುತ್ತಾರೆ ಮತ್ತು ಬೇರೆ ಯಾರು
ಕೇಳುವುದಿಲ್ಲ. ಬಹುಮತದ ಫಲಿತಾಂಶದಲ್ಲಿ ಮತ್ತು ವಿಕಾರಗಳಿಂದ ಕ್ರೋಧ ಅಥವಾ ಕ್ರೋಧದ ಮರಿ ಮಕ್ಕಳ
ರಿಪೋರ್ಟ್ ಹೆಚ್ಚಾಗಿದೆ.
ಈ ಹೊಸ ವರ್ಷದಲ್ಲಿ ಈ
ಕಹಿತನವನ್ನು ತೆಗೆದು ಬಿಡಿ. ಕೆಲವರು ತಮ್ಮ ವಚನದಲ್ಲಿಯು ಬರೆದಿದ್ದಾರೆ ಬಯಸುತ್ತಾರೆ ಆದರೆ ಬಂದು
ಬಿಡುತ್ತದೆ. ಬಾಪ್ದಾದಾರವರು ಕಾರಣ ತಿಳಿಸಿದರು ದೃಢತೆಯ ಕೊರತೆಯಿದೆ. ತಂದೆಯ ಮುಂದೆ ಸಂಕಲ್ಪದ
ಮೂಲಕ ವಚನವೂ ತೆಗೆದುಕೊಳ್ಳುತ್ತದೆ, ಆದರೆ ದೃಢತೆ ಇಂತಹ ಶಕ್ತಿಯಾಗಿದೆ ಯಾವುದನ್ನು ಪ್ರಪಂಚದವರು
ಹೇಳುತ್ತಾರೆ ಶರೀರವೂ ಹೊರಟು ಹೋಗಲಿ ಆದರೆ ವಚನ ಹೋಗಬಾರದು. ಸಾಯಬೇಕಾಗಬಹುದು, ಬಾಗಬೇಕಾಗಬಹುದು,
ಬದಲಾಗಬಹುದು, ಸಹನೆ ಮಾಡಬೇಕಾಗುತ್ತದೆ, ಆದರೆ ವಚನದಲ್ಲಿ ದೃಡತೆಯಿರುವವರು ಪ್ರತಿ ಹೆಜ್ಜೆಯಲ್ಲಿ
ಸಫಲತಾಮೂರ್ತರಾಗಿದ್ದಾರೆ ಏಕೆಂದರೆ ದೃಢತೆ ಸಫಲತೆಯ ಬೀಗದ ಕೈ ಆಗಿದೆ. ಎಲ್ಲರ ಹತ್ತಿರ ಬೀಗದ ಕೈ ಇದೆ,
ಆದರೆ ಸಮಯದಲ್ಲಿ ಮರೆಯಾಗಿ ಬಿಡುತ್ತದೆ. ಅಂದಾಗ ಏನು ವಿಚಾರವಿದೆ?
ಹೊಸ ವರ್ಷದಲ್ಲಿ ನವೀನತೆ
ಇರಲೇ ಬೇಕು - ಸ್ವ, ಸಹಯೋಗಿಗಳ ಮತ್ತು ವಿಶ್ವದ ಪರಿವರ್ತನೆಯದ್ದು. ಹಿಂದೆಯಿರುವವರು ಕೇಳಿದ್ದೀರಾ?
ಮಾಡಬೇಕಲ್ಲವೇ, ಈ ರೀತಿ ಯೋಚಿಸಬಾರದು ಮೊದಲು ದೊಡ್ಡವರು ಮಾಡಲಿ, ನಾವಂತು ಚಿಕ್ಕವರಾಗಿದ್ದೇವೆ.
ಚಿಕ್ಕವರ ಸಮಾನ ತಂದೆ. ಪ್ರತಿಯೊಬ್ಬ ಮಗು ತಂದೆಯ ಅಧಿಕಾರಿಯಾಗಿದ್ದಾರೆ, ಮೊದಲನೇ ಬಾರಿಯೇ
ಬಂದಿರಬಹುದು ಆದರೆ ನನ್ನ ಬಾಬಾ ಎಂದು ಹೇಳಿದಾಗ ಅಧಿಕಾರಿಯಾಗಿದ್ದೀರಿ. ಶ್ರೀಮತದಂತೆ ನಡೆಯುವುದಕ್ಕೆ
ಅಧಿಕಾರಿ ಮತ್ತು ಸರ್ವ ಪ್ರಾಪ್ತಿಗಳಿಗೂ ಅಧಿಕಾರಿ. ಟೀಚರ್ಸ್ ಪರಸ್ಪರದಲ್ಲಿ ಪ್ರೋಗ್ರಾಮ್ ಮಾಡಿರಿ,
ವಿದೇಶಿಯರು ಮಾಡಿರಿ, ಭಾರತದವರು ಸಹ ಸೇರಿಕೊಂಡು ಮಾಡಿರಿ. ಬಾಪ್ದಾದಾರವರು ಪ್ರಶಸ್ತಿ ಕೊಡುವರು,
ಯಾವ ಜೋನ್, ವಿದೇಶದವರಾದಲಿ ಅಥವಾ ಭಾರತದವರಾಗಲಿ, ಯಾವ ಜೋನ್ ನಂಬರ್ಒನ್ ತೆಗೆದುಕೊಳ್ಳುತ್ತಾರೆ,
ಅವರಿಗೆ ಗೋಲ್ಡನ್ ಕಪ್ ಕೊಡುವರು. ಕೇವಲ ತಮ್ಮನ್ನು ಮಾಡಿಕೊಳ್ಳಬಾರದು, ಜೊತೆಗಾರರನ್ನೂ ಮಾಡಬೇಕು
ಏಕೆಂದರೆ ಬಾಪ್ದಾದಾರವರು ನೋಡುತ್ತಾರೆ ಮಕ್ಕಳ ಪರಿವರ್ತನೆಯಿಲ್ಲದೇ ವಿಶ್ವದ ಪರಿವರ್ತನೆಯೂ
ಸಡಿಲವಾಗುತ್ತದೆ. ಮತ್ತು ಆತ್ಮಗಳು ಹೊಸ-ಹೊಸ ಪ್ರಕಾರದ ದುಃಖದ ಪಾತ್ರವು ನಡೆಯುತ್ತಿದೆ. ದುಃಖ,
ಅಶಾಂತಿಯ ಹೊಸ ಹೊಸ ಕಾರಣಗಳಾಗುತ್ತಿವೆ. ತಂದೆಯು ಈಗ ಮಕ್ಕಳ ದುಃಖದ ಕರೆ ಕೇಳುತ್ತಾ ಪರಿವರ್ತನೆ
ಬಯಸುತ್ತಾರೆ. ಹೇ ಮಾಸ್ಟರ್ ಸುಖದಾತನ ಮಕ್ಕಳೇ, ದುಃಖಿಯರ ಮೇಲೆ ದಯೆ ತೋರಿಸಿ. ಭಕ್ತರು ಸಹ
ಭಕ್ತಿಯನ್ನು ಮಾಡಿ ಸುಸ್ತಾಗಿದ್ದಾರೆ. ಭಕ್ತರಿಗೆ ಮುಕ್ತಿಯ ಆಸ್ತಿ ಕೊಡಿಸಿ. ದಯೆ ಬರುತ್ತದೆಯೇ
ಇಲ್ಲವೇ? ತಮ್ಮದೇ ಸೇವೆಯಲ್ಲಿ, ತಮ್ಮದೇ ದಿನಚರ್ಯದಲ್ಲಿ ತತ್ಪರರಾಗಿದ್ದೀರಾ? ನಿಮಿತ್ತರಾಗಿದ್ದೀರಾ,
ಈ ರೀತಿಯಲ್ಲ ದೊಡ್ಡವರು ನಿಮಿತ್ತರಾಗಿದ್ದಾರೆ, ಒಂದೊಂದು ಮಗುವು ಯಾರು ನನ್ನ ಬಾಬಾ ಎಂದು
ಹೇಳುತ್ತಾರೆ, ಅಂದರೆ ಅವರೆಲ್ಲರೂ ನಿಮಿತ್ತರಾಗಿದ್ದಾರೆ. ಹೊಸ ವರ್ಷದಲ್ಲಿ ಒಬ್ಬರಿನ್ನೊಬ್ಬರಿಗೆ
ಗಿಫ್ಟ್ ಸಹ ಕೊಡುತ್ತಾರಲ್ಲವೇ. ನೀವು ಭಕ್ತರ ಆಸೆ ಪೂರ್ಣ ಮಾಡಿ, ಅವರಿಗೆ ಗಿಫ್ಟ್ ಕೊಡಿಸಿ.
ದುಃಖಿಯರನ್ನು ದುಃಖದಿಂದ ಬಿಡಿಸಿ, , ಮುಕ್ತಿಧಾಮದಲ್ಲಿ ಶಾಂತಿ ಕೊಡಿಸಿ - ಈ ಗಿಫ್ಟ್ ಕೊಡಿ.
ಬ್ರಾಹ್ಮಣ ಪರಿವಾರದಲ್ಲಿ ಪ್ರತಿ ಆತ್ಮರಿಗೆ ಹೃದಯದ ಸ್ನೇಹ ಮತ್ತು ಸಹಯೋಗದ ಗಿಫ್ಟ್ ಕೊಡಿ. ನಿಮ್ಮ
ಹತ್ತಿರ ಗಿಫ್ಟ್ನ ಸ್ಟಾಕ್ ಇದೆಯೇ? ಸ್ನೇಹವಿದೆಯೇ? ಸಹಯೋಗವಿದೆಯೇ? ಮುಕ್ತಿ ಕೊಡಿಸುವಂತಹ
ಶಕ್ತಿಯಿದೆಯೇ? ಯಾರ ಹತ್ತಿರ ಸ್ಟಾಕ್ ಬಹಳವಿದೆ, ಅವರು ಕೈ ಎತ್ತಿರಿ. ಸ್ಟಾಕ್ ಇದೆಯೇ, ಸ್ಟಾಕ್
ಕೊರತೆಯಿದೆಯೇ? ಮೊದಲನೇ ಲೈನ್ನವರ ಹತ್ತಿರ ಸ್ಟಾಕ್ ಕಡಿಮೆಯಿದೆಯೇನು? ಬೃಜ್ಮೋಹನ್ ಕೈ
ಎತ್ತುತ್ತಿಲ್ಲ. ಸ್ಟಾಕ್ವಿದೆಯಲ್ಲವೇ, ಸ್ಟಾಕ್ವಿದೆಯೇ? ಎಲ್ಲರೂ ಎತ್ತಿದ್ದೀರಾ? ಸ್ಟಾಕ್ವಿದೆಯೇ?
ಸ್ಟಾಕ್ವಿಟ್ಟು ಏನು ಮಾಡುತ್ತಿದ್ದೀರಿ? ಜಮಾ ಮಾಡಿಟ್ಟುಕೊಂಡಿದ್ದೀರಿ. ಟೀಚರ್ಸ್ ಸ್ಟಾಕ್ವಿದೆಯೇ?
ಕೊಡಿ, ವಿಶಾಲಹೃದಯದವರಾಗಿರಿ. ಮಧುಬನದವರು ಏನು ಮಾಡುತ್ತೀರಿ? ಸ್ಟಾಕ್ವಿದೆಯೇ, ಮಧುಬನದಲ್ಲಿದ್ದೀಯೇ?
ಮಧುಬನದಲ್ಲಂತು ನಾಲ್ಕಾರು ಕಡೆ ಸ್ಟಾಕ್ ತುಂಬಿದೆ. ಈಗ ದಾತಾ ಆಗಿರಿ, ಕೇವಲ ಜಮಾ ಮಾಡಬೇಡಿ. ದಾತಾ
ಆಗಿರಿ, ಕೊಡುತ್ತಾ ಹೋಗಿ.
ಈಗ ಪ್ರತಿಯೊಬ್ಬರು ತಮ್ಮ
ಮನಸ್ಸಿನ ಮಾಲೀಕನಾಗಿ ಅನುಭವ ಮಾಡಿ ಒಂದು ಸೆಕೆಂಡಿನಲ್ಲಿ ಮನಸ್ಸನ್ನು ಏಕಾಗ್ರ ಮಾಡಬಹುದೇ? ಆದೇಶ
ಮಾಡಬಹುದೇ? ಒಂದು ಸೆಕೆಂಡಿನಲ್ಲಿ ತಮ್ಮ ಮಧುರ ಮನೆಯಲ್ಲಿ ತಲುಪಿ ಬಿಡಿ. ಒಂದು ಸೆಕೆಂಡಿನಲ್ಲಿ
ತಮ್ಮ ರಾಜ್ಯ ಸ್ವರ್ಗದಲ್ಲಿ ತಲುಪಿಬಿಡಿ. ಮನಸ್ಸು ನಿಮ್ಮ ಆದೇಶವನ್ನು ಒಪ್ಪುತ್ತದೆಯೇ ಅಥವಾ
ಏರುಪೇರು ಮಾಡುತ್ತದೆಯೇ? ಮಾಲೀಕ ಯೋಗ್ಯವಾಗಿದ್ದರೆ, ಶಕ್ತಿವಂತನಾಗಿದ್ದರೆ, ಮನಸ್ಸು
ಒಪ್ಪುವುದಿಲ್ಲವೆಂದು ಹೇಳಲು ಸಾಧ್ಯವಿಲ್ಲ. ಈಗ ಅಭ್ಯಾಸ ಮಾಡಿ ಒಂದು ಸೆಕೆಂಡಿನಲ್ಲಿ ಎಲ್ಲರು ತಮ್ಮ
ಮಧುರ ಮನೆಯಲ್ಲಿ ತಲುಪಿಬಿಡಿ. ಈ ಅಭ್ಯಾಸ ಇಡೀ ದಿನದಲ್ಲಿ ಮಧ್ಯ-ಮಧ್ಯದಲ್ಲಿ ಮಾಡುವ
ಗಮನವಿಟ್ಟುಕೊಳ್ಳಿರಿ. ಮನಸ್ಸಿನ ಏಕಾಗ್ರತೆ ಸ್ವಯಂನ್ನು ಸಹ ಮತ್ತು ವಾಯುಮಂಡಲವನ್ನು ಸಹ
ಶಕ್ತಿಶಾಲಿಯನ್ನಾಗಿ ಮಾಡುತ್ತದೆ. ಒಳ್ಳೆಯದು.
ನಾಲ್ಕಾರು ಕಡೆಯ ಅತೀ
ಸರ್ವರ ಸ್ನೇಹಿ, ಸರ್ವರ ಸಹಯೋಗಿ ಶ್ರೇಷ್ಠ ಆತ್ಮರಿಗೆ, ನಾಲ್ಕಾರು ಕಡೆಯ ವಿಜಯೀ ಮಕ್ಕಳಿಗೆ,
ನಾಲ್ಕಾರು ಕಡೆಯ ಪರಿವರ್ತನೆ ಶಕ್ತಿವಂತ ಮಕ್ಕಳಿಗೆ, ಸದಾ ಸಮಾಧಾನ ಸ್ವರೂಪ ವಿಶ್ವ ಪರಿವರ್ತಕ
ಮಕ್ಕಳಿಗೆ ಬಾಪ್ದಾದಾರವರ ನೆನಪು ಪ್ರೀತಿ ಮತ್ತು ಹೃದಯದ ಆಶೀರ್ವಾದ ಸ್ವೀಕಾರವಾಗಲಿ. ಜೊತೆಯಲ್ಲಿ
ಎಲ್ಲಾ ಮಕ್ಕಳಿಗೆ ಯಾರು ತಂದೆಯ ಕಿರೀಟಧಾರಿಯಾಗಿದ್ದಾರೆ, ಇಂತಹ ಕಿರೀಟಧಾರಿ ಮಕ್ಕಳಿಗೆ
ಬಾಪ್ದಾದಾರವರ ನಮಸ್ತೆ.
ವರದಾನ:
ಮುರಳೀಧರನ
ಮುರಳಿಯ ಮೇಲೆ ಪ್ರೀತಿ ಇಡುವಂತಹವರೇ ಸದಾ ಶಕ್ತಿಶಾಲಿ ಆತ್ಮ ಭವ.
ಯಾವ ಮಕ್ಕಳ ವಿದ್ಯಾ
ಅರ್ಥಾತ್ ಮುರಳಿಯ ಮೇಲೆ ಪ್ರೀತಿಯಿದೆ ಅವರಿಗೆ ಸದಾ ಶಕ್ತಿಶಾಲಿ ಭವದ ವರದಾನ ಸಿಕ್ಕಿ ಬಿಡುವುದು,
ಅವರ ಮುಂದೆ ಯಾವುದೇ ವಿಘ್ನ ನಿಲ್ಲಲು ಸಾಧ್ಯವಿಲ್ಲ ಮುರಳೀಧರನ ಮೇಲೆ ಪ್ರೀತಿ ಇಡುವುದು ಎಂದರೇನೆ
ಅವರ ಮುರಳಿಯ ಮೇಲೆ ಪ್ರೀತಿ ಇಡುವುದು. ಒಂದುವೇಳೆ ಯಾರಾದರೂ ನನಗೆ ಮುರಳೀಧರನ ಮೇಲೆ ಬಹಳ
ಪ್ರೀತಿಯಿದೆ ಆದರೆ ವಿದ್ಯಾ ಓದಲು ಸಮಯವಿಲ್ಲ, ಎಂದರೆ ತಂದೆ ಒಪ್ಪಿಕೊಳ್ಳುವುದಿಲ್ಲ ಏಕೆಂದರೆ ಎಲ್ಲಿ
ಲಗನ್ ಇರುತ್ತದೆ ಅಲ್ಲಿ ಯಾವುದೇ ನೆಪಗಳು ಇರುವುದಿಲ್ಲ. ವಿದ್ಯಾ ಮತ್ತು ಪರಿವಾರದ ಪ್ರೀತಿ
ಕೋಟೆಯಾಗಿ ಬಿಡುವುದು, ಯಾವುದರಲ್ಲಿ ಅವರು ಸುರಕ್ಷಿತರಾಗಿರುತ್ತಾರೆ.
ಸ್ಲೋಗನ್:
ಎಲ್ಲಾ
ಪರಿಸ್ಥಿತಿಯಲ್ಲಿಯೂ ಸ್ವಯಂ ಅನ್ನು ಮೋಲ್ಡ್ ಮಾಡಿಕೊಂಡಾಗ ನಿಜವಾದ ಚಿನ್ನ ಆಗಿ ಬಿಡುವಿರಿ.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ(ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ಯೋಗವನ್ನು ಜ್ವಾಲಾರೂಪ
ಶಕ್ತಿಶಾಲಿಯನ್ನಾಗಿ ಮಾಡುವುದಕ್ಕೆ ಯೋಗದಲ್ಲಿ ಕುಳಿತುಕೊಳ್ಳುವ ಸಮಯದಲ್ಲಿ ಸಮಾವೇಶ ಮಾಡಿಕೊಳ್ಳುವ
ಶಕ್ತಿಯನ್ನು ಉಪಯೋಗಿಸಿ. ಸೇವೆಯ ಸಂಕಲ್ಪವೂ ಸಹ ಸಮಾವೇಶವಾಗಲಿ ಇಷ್ಟೊಂದು ಶಕ್ತಿಯಿರಲಿ ನಿಲ್ಲು
ಎಂದು ಹೇಳಿದಾಗ ನಿಂತು ಬಿಡಬೇಕು. ಪೂರ್ಣ ರೀತಿಯ ಬ್ರೇಕ್ ಆಗಲಿ, ಸಡಿಲವಾದದ್ದಲ್ಲ. ಒಂದುವೇಳೆ ಒಂದು
ಸೆಕೆಂಡಿನ ಬದಲಾಗಿ ಜಾಸ್ತಿ ಸಮಯ ಹಿಡಿಸುತ್ತದೆ ಎಂದರೆ ಸಮಾವೇಶದ ಶಕ್ತಿ ನಿರ್ಬಲವಾಗಿದೆ ಎಂದರ್ಥ.