07.10.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ತಂದೆಯು
ಬಂದಿದ್ದಾರೆ ತಾವು ಮಕ್ಕಳನ್ನು ಕುಂಬಿಪಾಕ ನರಕದಿಂದ ಮುಕ್ತರನ್ನಾಗಿ ಮಾಡಲು, ತಾವು ಮಕ್ಕಳು
ಇದಕ್ಕಾಗಿಯೇ ನಿಮಂತ್ರಣ ಕೊಟ್ಟಿದ್ದೀರಿ”
ಪ್ರಶ್ನೆ:
ತಾವು ಮಕ್ಕಳು
ಬಹಳ ದೊಡ್ಡ ಶಿಲ್ಪಿಗಳು (ಕಲೆಯುಳ್ಳವರು) -ಹೇಗೆ? ತಮ್ಮ ನಿರ್ಮಾಣ ಯಾವುದಾಗಿದೆ?
ಉತ್ತರ:
ತಾವು ಮಕ್ಕಳು
ಇಂತಹ ನಿರ್ಮಾಣವನ್ನು ಮಾಡುತ್ತೀರಿ- ಇದರಿಂದ ಇಡೀ ಪ್ರಪಂಚವು ಹೊಸದಾಗುತ್ತದೆ. ಇದಕ್ಕಾಗಿ ತಾವು
ಯಾವುದೇ ಇಟ್ಟಿಗೆ ಮುಂತಾದವುಗಳನ್ನು ಎತ್ತುವ ಮಾತಿಲ್ಲ. ಆದರೆ ನೆನಪಿನ ಯಾತ್ರೆಯಿಂದ ಹೊಸ
ಪ್ರಪಂಚವನ್ನು ಮಾಡುತ್ತೇವೆ. ನಾವು ಹೊಸಪ್ರಪಂಚದ ನಿರ್ಮಾಣವನ್ನು ಮಾಡುತ್ತಿದ್ದೇವೆ ಎಂದು ನಮಗೆ
ಖುಷಿಯಿದೆ, ನಾವೇ ಪುನಃ ಇಂತಹ ಸ್ವರ್ಗದ ಮಾಲೀಕರಾಗುತ್ತೇವೆ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ, ತಾವು ಯಾವಾಗ ತಮ್ಮ-ತಮ್ಮ
ಊರಿನಿಂದ ಹೊರಡುತ್ತೀರೆಂದರೆ ಬುದ್ಧಿಯಲ್ಲಿ ನಾವು ಶಿವತಂದೆಯ ಪಾಠಶಾಲೆಗೆ ಹೋಗುತ್ತೇವೆಂದು
ಬುದ್ಧಿಯಲ್ಲಿ ಇರುತ್ತದೆ. ಸಾಧು-ಸಂತರ ದರ್ಶನಕ್ಕೆ ಹೋಗುತ್ತೇವೆ ಅಥವಾ ಶಾಸ್ತ್ರ ಮುಂತಾದವುಗಳನ್ನು
ಕೇಳುವುದಕ್ಕಾಗಿ ಹೋಗುತ್ತೇವೆ ಎಂದಲ್ಲ. ತಮಗೆ ಗೊತ್ತಿದೆ- ನಾವು ಶಿವತಂದೆಯ ಬಳಿ ಹೋಗುತ್ತೇವೆ ಎಂದು.
ಶಿವ ಮೇಲಿದ್ದಾರೆ ಎಂದು ಪ್ರಪಂಚದವರು ತಿಳಿದುಕೊಳ್ಳುತ್ತಾರೆ ಅವರು ಯಾವಾಗ ನೆನಪು ಮಾಡುತ್ತಾರೆಯೋ
ಆಗ ಕಣ್ಣು ತೆರೆದು ಕುಳಿತುಕೊಳ್ಳುವುದಿಲ್ಲ. ಶಿವಲಿಂಗವನ್ನು ನೋಡುತ್ತಿರುತ್ತಾರೆ. ಭಲೆ ಶಿವನ
ಮಂದಿರದಲ್ಲಿ ಹೋಗುತ್ತಾರೆ ಆದರೂ ಸಹ ಶಿವನನ್ನು ನೆನಪು ಮಾಡುತ್ತಾರೆ ಅಂದಮೇಲೆ ನೋಡುತ್ತಾರೆಯೋ ಅಥವ
ಮಂದಿರ ನೆನಪಿಗೆ ಬರುತ್ತದೆಯೋ? ಕೆಲವರು ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುತ್ತಾರೆ. ದೃಷ್ಟಿಯು
ಯಾವುದೇ ನಾಮ-ರೂಪದಲ್ಲಿ ಹೋದರೆ ನಾವು ಮಾಡುವಂತಹ ಸಾಧನೆ ಮುರಿದುಹೋಗುತ್ತದೆ ಎಂದು
ತಿಳಿದುಕೊಳ್ಳುತ್ತಾರೆ. ನಾವು ಶಿವನನ್ನು ನೆನಪು ಮಾಡುತ್ತಿದ್ದೇವೆ ಎಂದು ಈಗ ತಾವು ಮಕ್ಕಳಿಗೆ
ಗೊತ್ತಿದೆ. ಕೆಲವರು ಕೃಷ್ಣನನ್ನು ನೆನಪು ಮಾಡುತ್ತಾರೆ, ಗುರುವಿನ ಚಿಕ್ಕ ಲಾಕೆಟ್ ಮಾಡಿಸಿಕೊಂಡು
ಹಾಕಿಕೊಳ್ಳುತಾರೆ. ಗೀತೆಯದು ಚಿಕ್ಕ ಲಾಕೆಟ್ ಮಾಡಿಸಿಕೊಂಡು ಹಾಕಿಕೊಳ್ಳುತ್ತಾರೆ.
ಭಕ್ತಿಮಾರ್ಗದಲ್ಲಿ ಎಲ್ಲರೂ ಹೇಗೆ ಇರುತ್ತಾರೆ! ಮನೆಯಲ್ಲಿದ್ದರೂ ಸಹ ನೆನಪು ಮಾಡುತ್ತಾರೆ. ನೆನಪಿನ
ಯಾತ್ರೆಯನ್ನು ಮಾಡುವುದಕ್ಕಾಗಿ ಹೋಗುತ್ತಾರೆ. ಚಿತ್ರವನ್ನು ಮನೆಯಲ್ಲಿಟ್ಟುಕೊಂಡು ಪೂಜೆ ಮಾಡಬಹುದು
ಆದರೆ ಭಕ್ತಿಯಲ್ಲಿ ನಿಯಮ ಮಾಡಲ್ಪಟ್ಟಿದೆ, ಜನ್ಮ-ಜನ್ಮಾಂತರದಿಂದ ಯಾತ್ರೆಗಳಿಗೆ ಹೋಗುತ್ತಾರೆ.
ನಾಲ್ಕೂ ದಿಕ್ಕುಗಳ ಯಾತ್ರೆಯನ್ನು ಮಾಡುತ್ತಾರೆ. ನಾಲ್ಕುದಿಕ್ಕು ಎಂದು ಏಕೆ ಹೇಳುತ್ತಾರೆ? ಪೂರ್ವ,
ಪಶ್ಚಿಮ, ಉತ್ತರ, ದಕ್ಷಿಣ ನಾಲ್ಕಾರು ಕಡೆ ಸುತ್ತುತ್ತಾರೆ. ಭಕ್ತಿಮಾರ್ಗವು ಯಾವಾಗ ಪ್ರಾರಂಭವಾಯಿತೋ
ಆಗ ಒಬ್ಬರ ಭಕ್ತಿಯನ್ನು ಮಾಡುತ್ತಿದ್ದರು, ಅದಕ್ಕೆ ಅವ್ಯಭಿಚಾರಿ ಭಕ್ತಿಯೆಂದು ಹೇಳಲಾಗುತ್ತದೆ.
ಭಕ್ತಿಯು ಸತೋಪ್ರಧಾನವಾಗಿತ್ತು, ಈಗ ತಮೋಪ್ರಧಾನವಾಗಿದೆ. ಭಕ್ತಿಯೂ ಸಹ ವ್ಯಭಿಚಾರಿಯಾಗಿದೆ ಅನೇಕರ
ನೆನಪನ್ನು ಮಾಡುತ್ತಾರೆ. ಶರೀರವು ಪಂಚತತ್ವಗಳಿಂದ ಮಾಡಲ್ಪಟ್ಟಿರುವ ತಮೋಪ್ರಧಾನ ಶರೀರವಾಗಿದೆ,
ಇದನ್ನೂ ಸಹ ಪೂಜೆ ಮಾಡುತ್ತಾರೆಂದರೆ ಇದು ಭೂತಗಳ ಪೂಜೆಯಾಗಿದೆ. ಆದರೆ ಯಾರೂ ಸಹ ಈ ಮಾತನ್ನು ಅರ್ಥ
ಮಾಡಿಕೊಂಡಿಲ್ಲ. ಭಲೆ ಇಲ್ಲಿ ಕುಳಿತಿದ್ದಾರೆ ಆದರೆ ಬುದ್ಧಿಯು ಅಲೆದಾಡುತ್ತಿರುತ್ತದೆ. ಇಲ್ಲಿ ನಾವು
ಮಕ್ಕಳು ಕಣ್ಣನ್ನು ಮುಚ್ಚಿ ಶಿವತಂದೆಯನ್ನು ನೆನಪು ಮಾಡಬಾರದು. ತಂದೆಯು ದೂರದೇಶದಲ್ಲಿ ಇರುವವರು
ಎಂದು ತಮಗೆ ಗೊತ್ತಿದೆ. ಅವರು ಬಂದು ಮಕ್ಕಳಿಗೆ ಶ್ರೀಮತವನ್ನು ಕೊಡುತ್ತಾರೆ. ಶ್ರೀಮತದಂತೆ
ನಡೆಯುವುದರಿಂದ ಶ್ರೇಷ್ಠ ದೇವತೆಗಳಾಗುತ್ತೇವೆ. ದೇವತೆಗಳ ರಾಜಧಾನಿ ಸ್ಥಾಪನೆಯಾಗುತ್ತಿದೆ. ತಮ್ಮ
ದೇವಿ-ದೇವತಾ ರಾಜ್ಯವನ್ನು ಸ್ಥಾಪನೆ ಮಾಡಲು ತಾವು ಇಲ್ಲಿ ಕುಳಿತಿದ್ದೀರಿ. ಹೇಗೆ
ಸ್ಥಾಪನೆಯಾಗುತ್ತದೆ ಎಂದು ಮೊದಲು ನಿಮಗೆ ತಿಳಿದಿರಲಿಲ್ಲವಲ್ಲವೆ! ಈಗ ತಿಳಿದುಕೊಂಡಿದ್ದೀರಿ- ಬಾಬಾ
ನಮ್ಮ ತಂದೆಯೂ ಸಹ ಆಗಿದ್ದಾರೆ, ಶಿಕ್ಷಕರಾಗಿ ಓದಿಸುತ್ತಾರೆ ಮತ್ತು ಜೊತೆಯಲ್ಲಿಯೂ ಸಹ ಕರೆದುಕೊಂಡು
ಹೋಗುತ್ತಾರೆ. ಸದ್ಗತಿಯನ್ನು ಕೊಡುತ್ತಾರೆ. ಗುರುಗಳು ಯಾರಿಗೂ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ.
ಇಲ್ಲಿ ನಮಗೆ ತಿಳಿಸಲಾಗುತ್ತದೆ- ಇಲ್ಲಿ ಒಬ್ಬರೇ ತಂದೆ, ಟೀಚರ್, ಸದ್ಗುರುವಾಗಿದ್ದಾರೆ. ತಂದೆಯಿಂದ
ಆಸ್ತಿಯು ಸಿಗುತ್ತದೆ, ಸದ್ಗುರುವಾಗಿ ಹಳೆಯ ಪ್ರಪಂಚದಿಂದ ಹೊಸಪ್ರಪಂಚಕ್ಕೆ ಕರೆದುಕೊಂಡು
ಹೋಗುತ್ತಾರೆ. ಇವೆಲ್ಲಾ ಮಾತುಗಳು ವೃದ್ಧ ಮಾತೆಯರಿಗೆ ಅರ್ಥವಾಗುವುದಿಲ್ಲ. ಅವರಿಗೆ ಮುಖ್ಯವಾಗಿ
ತಮ್ಮನ್ನು ಆತ್ಮನೆಂದು ತಿಳಿದುಕೊಂಡು ತಂದೆಯನ್ನು ನೆನಪು ಮಾಡಬೇಕೆಂದು ತಿಳಿಸಲಾಗುತ್ತದೆ. ನಾವು
ಶಿವತಂದೆಯ ಮಕ್ಕಳಾಗಿದ್ದೇವೆ, ನಮಗೆ ತಂದೆಯು ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ವೃದ್ಧ
ಮಾತೆಯರಿಗೆ ಈ ರೀತಿ ಗಿಳಿಯ ಭಾಷೆಯಲ್ಲಿ ಕುಳಿತು ತಿಳಿಸಬೇಕಾಗಿದೆ. ಇಲ್ಲಿ ಪ್ರತಿಯೊಂದು ಆತ್ಮಕ್ಕೆ
ತಂದೆಯ ಆಸ್ತಿಯನ್ನು ಪಡೆಯಲು ಅಧಿಕಾರವಿದೆ. ಮೃತ್ಯುವಂತೂ ಸಮ್ಮುಖದಲ್ಲಿದೆ. ಹಳೆಯ ಪ್ರಪಂಚ
ಹೊಸದಾಗಬೇಕಾಗಿದೆ. ಹೊಸದರಿಂದ ಹಳೆಯದಾಗುತ್ತದೆ. ಮನೆಯನ್ನು ನಿರ್ಮಾಣ ಮಾಡಲು ಸ್ವಲ್ಪ
ತಿಂಗಳುಗಳಾಗುತ್ತದೆ ನಂತರ ಹಳೆಯದಾಗುವುದರಲ್ಲಿ 100 ವರ್ಷ ಹಿಡಿಸುತ್ತದೆ.
ಈಗ ನೀವು ಮಕ್ಕಳಿಗೆ
ಗೊತ್ತಿದೆ- ಈ ಹಳೆಯ ಪ್ರಪಂಚ ಸಂಪೂರ್ಣ ಸಮಾಪ್ತಿಯಾಗುತ್ತದೆ, ಈಗ ಏನು ಯುದ್ಧವಾಗುತ್ತದೆಯೋ ಅದು
ಪುನಃ 5000 ವರ್ಷಗಳ ನಂತರ ಆಗುತ್ತದೆ. ಇವೆಲ್ಲಾ ಮಾತುಗಳನ್ನು ವೃದ್ಧರು ಅರ್ಥಮಾಡಿಕೊಳ್ಳಲು
ಸಾಧ್ಯವಿಲ್ಲ. ಅವರಿಗೆ ಅರ್ಥಮಾಡಿಸುವುದೂ ಬ್ರಾಹ್ಮಣಿಯರ ಕರ್ತವ್ಯವಾಗಿದೆ. ಅವರಿಗೆ ತಮ್ಮನ್ನು
ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಎನ್ನುವ ಒಂದು ಶಬ್ಧವೇ ಸಾಕು. ನಾವು ಆತ್ಮ ಪರಮಧಾಮದ
ನಿವಾಸಿಗಳಾಗಿದ್ದೇವೆ. ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತೇವೆ. ಆತ್ಮನೇ ಇಲ್ಲಿ
ದುಃಖ ಮತ್ತು ಸುಖದ ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ಮುಖ್ಯವಾದ ಮಾತು ತಂದೆಯು ತಿಳಿಸುತ್ತಾರೆ-
ನನ್ನನ್ನು ನೆನಪು ಮಾಡಿ ಮತ್ತು ಸುಖಧಾಮವನ್ನು ನೆನಪು ಮಾಡಿ. ತಂದೆಯನ್ನು ನೆನಪು ಮಾಡುವುದರಿಂದ
ಪಾಪದಿಂದ ಮುಕ್ತರಾಗುತ್ತೇವೆ ಮತ್ತು ಸ್ವರ್ಗದಲ್ಲಿ ಬರುತ್ತೇವೆ. ಯಾರೆಷ್ಟು ನೆನಪು ಮಾಡುತ್ತಾರೆಯೋ
ಅಷ್ಟು ಪಾಪದಿಂದ ಮುಕ್ತರಾಗುತ್ತಾರೆ. ವೃದ್ಧರು ಸತ್ಸಂಗಕ್ಕೆ ಹೋಗಿ ಕಥೆಯನ್ನು ಕೇಳುವುದರಲ್ಲಿ
ಸಿಕ್ಕಿಹಾಕಿಕೊಂಡಿದ್ದಾರೆ. ಅಂತಹವರಿಗೆ ಗಳಿಗೆ-ಗಳಿಗೆ ತಂದೆಯ ನೆನಪನ್ನು ತರಿಸಬೇಕು. ಶಾಲೆಯಲ್ಲಿ
ವಿದ್ಯೆಯಿರುತ್ತದೆ, ಕಥೆಯನ್ನು ತಿಳಿಸುವುದಿಲ್ಲ. ಭಕ್ತಿಮಾರ್ಗದಲ್ಲಿ ತಾವು ಬಹಳ ಕಥೆಯನ್ನು
ಕೇಳಿದ್ದೀರಿ ಆದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ, ಛೀ ಛೀ ಪ್ರಪಂಚದಿಂದ ಹೊಸಪ್ರಪಂಚಕ್ಕೆ ಹೋಗಲು
ಸಾಧ್ಯವಿಲ್ಲ. ಮನುಷ್ಯರಿಗೆ ರಚಯಿತ ಮತ್ತು ರಚನೆಯ ಬಗ್ಗೆ ಗೊತ್ತಿಲ್ಲ. ಏನೂ ಗೊತ್ತಿಲ್ಲ ಎಂದು
ಹೇಳುತ್ತಾರೆ. ತಮಗೂ ಸಹ ಮೊದಲು ಗೊತ್ತಿರಲಿಲ್ಲ. ಈಗ ತಾವು ಭಕ್ತಿಯ ಮಾರ್ಗವನ್ನು ಬಹಳ ಚೆನ್ನಾಗಿ
ತಿಳಿದುಕೊಂಡಿದ್ದೀರಿ. ಮನೆಯಲ್ಲಿ ಅನೇಕರ ಬಳಿ ಮೂರ್ತಿಗಳಿರುತ್ತದೆ, ವಸ್ತುಗಳು ಅದೇ ಆಗಿದೆ.
ಕೆಲವರ ಪತಿಯರು ಸ್ತ್ರೀಯರಿಗೆ ಹೇಳುತ್ತಾರೆ- ಮನೆಯಲ್ಲಿಯೇ ಮೂರ್ತಿಯನ್ನಿಟ್ಟು ಪೂಜೆ ಮಾಡು ಎಂದು.
ಹೊರಗಡೆ ಮೋಸ ಹೋಗುವುದಕ್ಕೆ ಏಕೆ ಹೋಗುತ್ತೀರಾ, ಆದರೆ ಅವರಿಗೂ ಸಹ ಭಾವನೆಯಿರುತ್ತದೆ. ಈಗ ತಮಗೆ
ತಿಳಿದಿದೆ- ತೀರ್ಥಯಾತ್ರೆಗೆ ಹೋಗುವುದೆಂದರೆ ಭಕ್ತಿಮಾರ್ಗದಲ್ಲಿ ಮೋಸ ಹೋಗುವುದು. ಅನೇಕಬಾರಿ ತಾವು
84 ಜನ್ಮಗಳ ಚಕ್ರವನ್ನು ಸುತ್ತಿದ್ದೀರಿ. ಸತ್ಯ-ತ್ರೇತಾಯುಗದಲ್ಲಿ ಯಾವುದೇ ಯಾತ್ರೆ ಇರುವುದಿಲ್ಲ.
ಅಲ್ಲಿ ಯಾವುದೇ ಮಂದಿರವಿರುವುದಿಲ್ಲ. ಈ ಯಾತ್ರೆಗಳೆಲ್ಲಾ ಭಕ್ತಿಮಾರ್ಗದಲ್ಲಿ ಇರುತ್ತದೆ.
ಜ್ಞಾನಮಾರ್ಗದಲ್ಲಿ ಯಾವುದೂ ಇರುವುದಿಲ್ಲ. ಅದಕ್ಕೆ ಭಕ್ತಿಯೆಂದು ಹೇಳಲಾಗುತ್ತದೆ. ಜ್ಞಾನವನ್ನು
ಕೊಡುವವರು ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ. ಜ್ಞಾನದಿಂದ ಸದ್ಗತಿಯಾಗುತ್ತದೆ. ಸದ್ಗತಿದಾತ
ಒಬ್ಬ ತಂದೆಯಾಗಿದ್ದಾರೆ, ಶಿವತಂದೆಯನ್ನು ಶ್ರೀ-ಶ್ರೀ ಎಂದು ಹೇಳುವುದಿಲ್ಲ. ಅವರಿಗೆ ಬಿರುದಿನ
ಅವಶ್ಯಕತೆಯಿಲ್ಲ. ಇಲ್ಲಿ ಆಡಂಬರವನ್ನು ಮಾಡುತ್ತಾರೆ, ಅವರಿಗೆ ಶಿವತಂದೆಯೆಂದು ಹೇಳುತ್ತಾರೆ. ತಾವು
ಓ ಶಿವಬಾಬಾ, ನಾವು ಪತಿತರಾಗಿದ್ದೇವೆ, ನಮ್ಮನ್ನು ಬಂದು ಪಾವನ ಮಾಡು ಎಂದು ಕರೆಯುತ್ತೀರಿ.
ಭಕ್ತಿಮಾರ್ಗದ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ
ಸಿಕ್ಕಿಹಾಕಿಕೊಂಡಿದ್ದಾರೆ. ಯಾರಿಗೂ ಸಹ ಗೊತ್ತಾಗುವುದಿಲ್ಲ. ಆಗ ಹೇಳುತ್ತಾರೆ- ತಂದೆಯು ನಮ್ಮನ್ನು
ಮುಕ್ತರನ್ನಾಗಿ ಮಾಡಿ ಎಂದು. ಬಾಬಾರವರೂ ಸಹ ಡ್ರಾಮಾದನುಸಾರ ಬರಲೇಬೇಕಾಗುತ್ತದೆ. ನಾನೂ ಸಹ
ಇವರೆಲ್ಲರನ್ನೂ ಕೆಸರಿನಿಂದ ಬಿಡುಗಡೆ ಮಾಡುವುದಕ್ಕಾಗಿ ನಾಟಕದಲ್ಲಿ ಬಂಧಿತನಾಗಿದ್ದೇನೆ ಎಂದು
ತಂದೆಯು ತಿಳಿಸುತ್ತಾರೆ. ಇದಕ್ಕೆ ಕುಂಬಿಪಾಕ ನರಕ, ರೌರವ ನರಕವೆಂದು ಹೇಳಲಾಗುತ್ತದೆ. ಅವರಿಗೆ
ಏನಾದರೂ ಗೊತ್ತಾಗುತ್ತದೆಯೇನು!
ತಾವು ತಂದೆಗೆ
ನಿಮಂತ್ರಣವನ್ನು ಹೇಗೆ ಕೊಡುತ್ತೀರಿ ನೋಡಿ! ನಿಮಂತ್ರಣವನ್ನು ಮದುವೆ-ಮುಂಜಿಯಲ್ಲಿ ಕೊಡಲಾಗುತ್ತದೆ.
ಓ ಪತಿತ-ಪಾವನ ತಂದೆಯೇ, ಈ ರಾವಣರಾಜ್ಯದಲ್ಲಿ ಹಳೆಯ ಪ್ರಪಂಚದಲ್ಲಿ ಬನ್ನಿ, ನಾವು ಈ ಕೆಸರಿನಲ್ಲಿ
ಕುತ್ತಿಗೆಯವರೆಗೂ ಸಿಕ್ಕಿಹಾಕಿಕೊಂಡಿದ್ದೇವೆ ಎಂದು ತಾವು ನಿಮಂತ್ರಣ ಕೊಡುತ್ತೀರಿ. ತಂದೆಯ ವಿನಃ
ಯಾರೂ ಸಹ ಬಿಡುಗಡೆ ಮಾಡುವುದಿಲ್ಲ. ಇದು ರಾವಣನ ದೇಶವಾಗಿದೆ, ಎಲ್ಲ ಆತ್ಮರು ತಮೋಪ್ರಧಾನವಾಗಿದೆ
ಆದ್ದರಿಂದ ಬಂದು ಪಾವನ ಮಾಡಿ ಎಂದು ದೂರದೇಶದಲ್ಲಿರುವ ತಂದೆಯನ್ನು ಕರೆಯುತ್ತಾರೆ. ಪತಿತ-ಪಾವನ
ಸೀತಾರಾಮ ಎಂದು ಹಾಡುತ್ತಾ ಕೂಗುತ್ತಾರೆ. ಪವಿತ್ರರಾಗುತ್ತಾರೆ ಎಂದಲ್ಲ. ಈ ಪ್ರಪಂಚ ಪತಿತವಾಗಿದೆ,
ರಾವಣರಾಜ್ಯವಾಗಿದೆ, ಇದರಲ್ಲಿ ಎಲ್ಲರೂ ಸಿಕ್ಕಿಹಾಕಿಕೊಂಡಿದ್ದಾರೆ. ಪುನಃ ನಿಮಂತ್ರಣವನ್ನು
ಕೊಡುತ್ತಾರೆ- ಬಂದು ಕುಂಭಿಪಾಕ ನರಕದಿಂದ ಮುಕ್ತ ಮಾಡಿ ಎಂದು. ಅಂದಾಗ ತಂದೆಯು ಬಂದು
ಹೇಳುತ್ತಿದ್ದಾರೆ- ನಾನು ನಿಮ್ಮ ವಿಧೇಯ ಸೇವಕನಾಗಿದ್ದೇನೆ. ತಾವು ಮಕ್ಕಳು ಡ್ರಾಮಾದಲ್ಲಿ ಬಹಳ
ದುಃಖವನ್ನು ನೋಡಿದ್ದೀರಿ. ಸಮಯ ಕಳೆಯುತ್ತಾ ಹೋಗುತ್ತದೆ. ಒಂದು ಕ್ಷಣವು ಮತ್ತೊಂದು ಕ್ಷಣಕ್ಕೆ
ಹೋಲುವುದಿಲ್ಲ. ಈಗ ತಂದೆಯು ತಮ್ಮನ್ನು ಲಕ್ಷ್ಮೀ-ನಾರಾಯಣರ ಸಮಾನ ಮಾಡುತ್ತಿದ್ದಾರೆ ನಂತರ
ಅರ್ಧಕಲ್ಪ ರಾಜ್ಯವನ್ನು ಮಾಡುತ್ತೇವೆಂದು ನೆನಪು ಮಾಡಿ. ಈಗ ಸಮಯವು ಬಹಳ ಕಡಿಮೆಯಿದೆ. ಮೃತ್ಯುವು
ಪ್ರಾರಂಭವಾಗುತ್ತದೆ. ಮನುಷ್ಯರು ಗೊಂದಲವಾಗುತ್ತಾರೆ. ಸ್ವಲ್ಪ ಸಮಯದಲ್ಲಿ ಏನೇನಾಗುತ್ತದೆ!
ಕೆಲವರಿಗೆ ಅದನ್ನು ಕೇಳಿ ಹೃದಯಾಘಾತವಾಗುತ್ತದೆ. ಹೇಗೆ ಸಾಯುತ್ತಾರೆ ಎಂದು ಹೇಳುವುದಕ್ಕೆ
ಸಾಧ್ಯವಿಲ್ಲ. ನೋಡಿ, ಅನೇಕ ವೃದ್ಧ ಮಾತೆಯರು ಬಂದಿದ್ದಾರೆ, ಪಾಪ ಅವರಿಗೆ ಏನೂ ಅರ್ಥವಾಗುವುದಿಲ್ಲ.
ಹೇಗೆ ತೀರ್ಥಯಾತ್ರೆಗೆ ಹೋಗುತ್ತಾರಲ್ಲವೆ ಹಾಗೆಯೇ ಇಲ್ಲಿಗೆ ವೃದ್ಧ ಮಾತೆಯರು ಬಂದಿದ್ದಾರೆ, ನಾವೂ
ಹೋಗಬೇಕೆಂದು ಒಬ್ಬರನ್ನೊಬ್ಬರು ನೋಡಿ ತಯಾರಾಗುತ್ತಾರೆ.
ಈಗ ತಮಗೆ ಭಕ್ತಿಮಾರ್ಗದ
ತೀರ್ಥಯಾತ್ರೆಯ ಅರ್ಥವಾಗಿದೆ- ಕೆಳಗಿಳಿಯುವುದು ತಮೋಪ್ರಧಾನರಾಗುವುದು ಎಂದು ತಿಳಿದಿದೆಯಲ್ಲವೆ.
ದೊಡ್ದದಕ್ಕಿಂತ ದೊಡ್ಡ ಯಾತ್ರೆಯು ತಮ್ಮದಾಗಿದೆ. ತಾವು ಪತಿತ ಪ್ರಪಂಚದಿಂದ ಪಾವನ ಪ್ರಪಂಚಕ್ಕೆ
ಹೋಗುತ್ತೀರಿ ಅಂದಮೇಲೆ ಮಕ್ಕಳಿಗೆ ಶಿವತಂದೆಯ ನೆನಪನ್ನು ತರಿಸುತ್ತಾ ಇರಿ. ಶಿವತಂದೆಯ ನೆನಪಿದೆಯೇ?
ಎಂದು ಕೇಳುವ್ಯದರಿಂದಲೂ ಸ್ವರ್ಗದಲ್ಲಿ ಬರುತ್ತಾರೆ. ಇದರ ಫಲವಂತೂ ಅವಶ್ಯವಾಗಿ ಸಿಗಲೇಬೇಕು.
ವಿದ್ಯೆಯ ಆಧಾರದಮೇಲೆ ಪದವಿಯು ಸಿಗುತ್ತದೆ. ಓದುವುದರಲ್ಲಿ ಬಹಳ ವ್ಯತ್ಯಾಸ ಕಂಡುಬರುತ್ತದೆ.
ಶ್ರೇಷ್ಠಾತಿಶ್ರೇಷ್ಠ ಮತ್ತು ಕನಿಷ್ಠ ಪದವಿಯಲ್ಲಿ ರಾತ್ರಿ-ಹಗಲಿನ ಅಂತರವಾಗುತ್ತದೆ. ಎಲ್ಲಿ
ಪ್ರಧಾನಮಂತ್ರಿ, ಎಲ್ಲಿ ಕೆಲಸ ಮಾಡುವವರು? ರಾಜಧಾನಿಯಲ್ಲಿ ನಂಬರ್ವಾರ್ ಇರುತ್ತಾರೆ.
ಸ್ವರ್ಗದಲ್ಲಿಯೂ ಸಹ ರಾಜಧಾನಿಯಿರುತ್ತದೆ ಆದರೆ ಅಲ್ಲಿ ಪಾಪಾತ್ಮರು, ಕೊಳಕು ವಿಕಾರಿಗಳಿರುವುದಿಲ್ಲ.
ಅದು ನಿರ್ವಿಕಾರಿಯಾದ ಪ್ರಪಂಚವಾಗಿದೆ. ನಾವು ಲಕ್ಷ್ಮೀ-ನಾರಾಯಣರಾಗುತ್ತೇವೆಂದು ತಾವು ಹೇಳುತ್ತೀರಿ.
ತಾವು ಕೈಯೆತ್ತುವುದನ್ನು ನೋಡಿ ವೃದ್ಧರೂ ಸಹ ಕೈಯನ್ನೆತ್ತುತ್ತಾರೆ. ಏನೂ ಅರ್ಥವಾಗುವುದಿಲ್ಲ. ಆದರೂ
ಸಹ ತಂದೆಯ ಹತ್ತಿರ ಬಂದಿದ್ದಾರೆಂದರೆ ಸ್ವರ್ಗದಲ್ಲಿ ಹೋಗುತ್ತಾರೆ ಆದರೆ ಎಲ್ಲರೂ
ಲಕ್ಷ್ಮೀ-ನಾರಾಯಣರಾಗಲು ಸಾಧ್ಯವಿಲ್ಲ. ಪ್ರಜೆಗಳು ಆಗುತ್ತಾರೆ, ತಂದೆಯು ತಿಳಿಸುತ್ತಾರೆ- ನಾನು
ಬಡವರ ಬಂಧುವಾಗಿದ್ದೇನೆ. ಬಾಬಾ ಬಡವರನ್ನುನೋಡಿ ಖುಷಿಯಾಗುತ್ತಾರೆ. ಭಲೆ ಎಷ್ಟೇ ದೊಡ್ಡ ಸಾಹುಕಾರ
ಪದಮಾಪತಿ ಆಗಿರಬಹುದು ಆದರೆ ಅವರಿಗಿಂತಲೂ ಇಲ್ಲಿ ಶ್ರೇಷ್ಠಪದವಿಯನ್ನು 21 ಜನ್ಮಗಳಿಗಾಗಿ
ಪಡೆಯುತ್ತಾರೆ. ಇದೂ ಸಹ ಒಳ್ಳೆಯದೇ ಆಗಿದೆ. ವೃದ್ಧರು ಬರುತ್ತಾರೆಂದರೆ ತಂದೆಗೆ ಖುಷಿಯಾಗುತ್ತದೆ,
ವೃದ್ಧರಾದರೂ ಸಹ ಕೃಷ್ಣಪುರಿಯಲ್ಲಿ ಹೋಗುತ್ತಾರೆ. ಇದಾಗಿದೆ ರಾವಣಪುರಿ, ಯಾರು ಚೆನ್ನಾಗಿ
ಓದುತ್ತಾರೆ ಅವರು ಕೃಷ್ಣನನ್ನೂ ಸಹ ಮಡಿಲಿನಲ್ಲಿ ತೂಗುತ್ತಾರೆ. ಪ್ರಜೆಗಳು ಒಳಗಡೇ ಬರುವುದಕ್ಕೆ
ಸಾಧ್ಯವಿಲ್ಲ. ಅವರಿಗೆ ಕೇವಲ ಸಾಕ್ಷಾತ್ಕಾರವಾಗುತ್ತದೆ- ಹೇಗೆ ಪೋಪ್ ಸಾಕ್ಷಾತ್ಕಾರವನ್ನು
ಮಾಡಿಸುತ್ತಾರೆ ಕಿಟಕಿಯಿಂದ, ಲಕ್ಷಾಂತರ ಜನರು ದರ್ಶನ ಮಾಡುವುದಕ್ಕಾಗಿ ಬರುತ್ತಾರೆ ಆದರೆ ಅವರು
ನಮಗೇನು ಸಾಕ್ಷಾತ್ಕಾರ ಮಾಡಿಸುವುದಿಲ್ಲ. ಸದಾ ಪಾವನರಾಗಿರುವವರು ಒಬ್ಬ ತಂದೆಯಾಗಿದ್ದಾರೆ, ಅವರು
ಬಂದು ನಮ್ಮನ್ನು ಪಾವನ ಮಾಡುತ್ತಾರೆ. ಇಡೀ ವಿಶ್ವವನ್ನು ಸತೋಪ್ರಧಾನ ಮಾಡುತ್ತಾರೆ. ಸ್ವರ್ಗದಲ್ಲಿ
4 ಭೂತಗಳಿರುವುದಿಲ್ಲ. 5 ತತ್ವಗಳೂ ಸಹ ಸತೋಪ್ರಧಾನವಾಗುತ್ತದೆ, ನಿಮಗೆ ಗುಲಾಮರಾಗಿಬಿಡುತ್ತವೆ.
ನಷ್ಟವಾಗುವ ರೀತಿ ಅಲ್ಲಿ ಬಿಸಿಲು ಇರುವುದಿಲ್ಲ. ಪಂಚತತ್ವಗಳೂ ಸಹ ನಿಯಮದನುಸಾರ ನಡೆಯುತ್ತದೆ.
ಅಕಾಲಮೃತ್ಯು ಇರುವುದಿಲ್ಲ. ಈಗ ತಾವು ಸ್ವರ್ಗದಲ್ಲಿ ಹೋಗುತ್ತೀರೆಂದರೆ ನರಕದಿಂದ ಬುದ್ಧಿಯೋಗವನ್ನು
ತೆಗೆದುಹಾಕಬೇಕು. ಹೇಗೆ ಹೊಸ ಮನೆಯನ್ನು ಕಟ್ಟುತ್ತಾರೆಂದರೆ ಹಳೆಯದು ಬುದ್ಧಿಯಿಂದ ಮರೆತುಹೋಗುತ್ತದೆ.
ಬುದ್ಧಿಯು ಹೊಸಮನೆಯಕಡೆ ಹೋಗುತ್ತದೆ, ಇದು ಬೇಹದ್ದಿನ ಮಾತಾಗಿದೆ. ಹೊಸಪ್ರಪಂಚದ
ಸ್ಥಾಪನೆಯಾಗುತ್ತಿದೆ. ಹಳೆಯದರ ವಿನಾಶವಾಗಬೇಕು. ತಾವು ಹೊಸಪ್ರಪಂಚ ಸ್ವರ್ಗವನ್ನು ಸ್ಥಾಪನೆ
ಮಾಡುವವರು. ತಾವು ಬಹಳ ಒಳ್ಳೆಯ ಶಿಲ್ಪಿಗಳು. ತಮಗಾಗಿ ಸ್ವರ್ಗವನ್ನು ಮಾಡುತ್ತಿದ್ದೀರಿ. ಎಷ್ಟು
ಒಳ್ಳೆಯ ಶಿಲ್ಪಿಗಳಾಗಿದ್ದೀರಿ, ನೆನಪಿನ ಯಾತ್ರೆಯಿಂದ ಹೊಸಪ್ರಪಂಚ ಸ್ವರ್ಗವನ್ನು ಮಾಡುತ್ತೀರಿ.
ಸ್ವಲ್ಪ ನೆನಪು ಮಾಡಿದರೆ ಸ್ವರ್ಗದಲ್ಲಿ ಬಂದುಬಿಡಬಹುದು. ತಾವು ಗುಪ್ತವೇಷದಲ್ಲಿ ತಮ್ಮ
ಸ್ವರ್ಗವನ್ನು ಮಾಡುತ್ತಿದ್ದೀರಿ. ನಾವು ಈ ಶರೀರವನ್ನು ಬಿಟ್ಟನಂತರ ಸ್ವರ್ಗದಲ್ಲಿ ನಿವಾಸ
ಮಾಡುತ್ತೇವೆಂದರೆ ಇಂತಹ ಬೇಹದ್ದಿನ ತಂದೆಯನ್ನು ಮರೆಯಬಾರದು ಎಂದು ಗೊತ್ತಿದೆ. ಈಗ ತಾವು
ಸ್ವರ್ಗದಲ್ಲಿ ಹೋಗುವುದಕ್ಕಾಗಿ ವಿದ್ಯೆಯನ್ನು ಓದುತ್ತಿದ್ದೀರಿ. ತಮ್ಮ ರಾಜಧಾನಿ ಸ್ಥಾಪನೆಯನ್ನು
ಮಾಡುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೀರಿ. ಈ ರಾವಣರಾಜ್ಯವು ಸಂಪೂರ್ಣ ಸಮಾಪ್ತಿಯಾಗುತ್ತಿದೆ.
ಅಂದಮೇಲೆ ಆಂತರಿಕವಾಗಿ ಎಷ್ಟು ಖುಷಿಯಿರಬೇಕು! ನಾವು ಇಂತಹ ಸ್ವರ್ಗವನ್ನು ಅನೇಕಬಾರಿ ಮಾಡಿದ್ದೇವೆ,
ರಾಜ್ಯವನ್ನು ಪಡೆದುಕೊಂಡು ನಂತರ ಕಳೆದುಕೊಂಡೆವು. ಇದನ್ನು ಸಹ ನೆನಪು ಮಾಡಿದರೆ ಬಹಳ ಒಳ್ಳೆಯದು.
ನಾವು ಸ್ವರ್ಗದ ಮಾಲೀಕರಾಗುತ್ತೇವೆ. ತಂದೆಯು ನಮ್ಮನ್ನು ಮಾಲೀಕರನ್ನಾಗಿ ಮಾಡಿದ್ದರು, ತಂದೆಯನ್ನು
ನೆನಪು ಮಾಡುವುದರಿಂದ ಪಾಪಕರ್ಮಗಳು ಭಸ್ಮವಾಗುತ್ತವೆ. ಸಹಜ ರೀತಿಯಲ್ಲಿ ತಾವು ಸ್ವರ್ಗವನ್ನು
ಸ್ಥಾಪನೆ ಮಾಡುತ್ತಿದ್ದೀರಿ. ಹಳೆಯ ಪ್ರಪಂಚದ ವಿನಾಶಕ್ಕಾಗಿ ಎಷ್ಟೊಂದು ವಸ್ತುಗಳನ್ನು
ಕಂಡುಹಿಡಿಯುತ್ತಿರುತ್ತಾರೆ. ಪ್ರಕೃತಿಯ ವಿಕೋಪಗಳು, ಬಾಂಬು ಮುಂತಾದವುಗಳ ಮುಖಾಂತರ ಇಡೀ ಹಳೆಯ
ಪ್ರಪಂಚದ ಸಮಾಪ್ತಿಯಾಗುತ್ತದೆ. ತಮಗೆ ಶ್ರೇಷ್ಠ ಮತವನ್ನು ಕೊಡಲು ಮತ್ತೆ ಸ್ವರ್ಗವನ್ನು ಸ್ಥಾಪನೆ
ಮಾಡಲು ಈಗ ತಂದೆಯು ಬಂದಿದ್ದಾರೆ. ಅನೇಕಬಾರಿ ನೀವು ಸ್ಥಾಪನೆ ಮಾಡಿದ್ದೀರಿ ಅಂದಮೇಲೆ ಬುದ್ಧಿಯಲ್ಲಿ
ನೆನಪಿಟ್ಟುಕೊಳ್ಳಬೇಕು. ಅನೇಕಬಾರಿ ರಾಜ್ಯವನ್ನು ಪಡೆದು ಮತ್ತು ಕಳೆದುಕೊಂಡಿದ್ದೇವೆ. ಇದನ್ನು
ಬುದ್ಧಿಯಲ್ಲಿ ಚಿಂತನೆ ಮಾಡುತ್ತಾ ಒಬ್ಬರಿಗೊಬ್ಬರು ಈ ಮಾತನ್ನು ತಿಳಿಸಿ. ಪ್ರಪಂಚದ ಮಾತುಗಳಲ್ಲಿ
ಸಮಯವನ್ನು ವ್ಯರ್ಥ ಮಾಡಬಾರದು. ತಂದೆಯನ್ನು ನೆನಪು ಮಾಡಿ, ಸ್ವದರ್ಶನ ಚಕ್ರಧಾರಿಗಳಾಗಿ. ಇದನ್ನು
ಮಕ್ಕಳು ಚೆನ್ನಾಗಿ ಕೇಳಿ ಹಾಗೂ ಮನನ ಮಾಡಿ. ಬಾಬಾರವರು ಏನು ತಿಳಿಸಿದ್ದಾರೆ ಅದನ್ನು ಸ್ಮರಣೆ
ಮಾಡಬೇಕು. ಶಿವತಂದೆ ಮತ್ತು ಆಸ್ತಿಯನ್ನು ಅವಶ್ಯವಾಗಿ ನೆನಪು ಮಾಡಬೇಕು. ತಂದೆಯು ಕೈಯಲ್ಲಿ
ಸ್ವರ್ಗವನ್ನು ತಂದಿದ್ದಾರೆ. ಪವಿತ್ರರೂ ಸಹ ಆಗಬೇಕಾಗಿದೆ. ಪವಿತ್ರರಾಗುವುದಿಲ್ಲವೆಂದರೆ
ಶಿಕ್ಷೆಯನ್ನು ಪಡೆಯಬೇಕಾಗುತ್ತದೆ. ಪದವಿಯೂ ಚಿಕ್ಕದಾಗಿಬಿಡುತ್ತದೆ. ಸ್ವರ್ಗದಲ್ಲಿ ಶ್ರೇಷ್ಠ
ಪದವಿಯನ್ನು ಪಡೆಯಬೇಕೆಂದರೆ ಚೆನ್ನಾಗಿ ಧಾರಣೆ ಮಾಡಬೇಕು. ತಂದೆಯು ದಾರಿಯನ್ನು ಸಹಜವಾಗಿ
ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯು
ಏನನ್ನು ತಿಳಿಸುತ್ತಾರೆಯೋ ಅದನ್ನು ಚೆನ್ನಾಗಿ ತಿಳಿದುಕೊಂಡು ನಂತರ ಮನನ ಮಾಡಬೇಕು. ಪ್ರಪಂಚದ
ಮಾತುಗಳಲ್ಲಿ ಸಮಯವನ್ನು ವ್ಯರ್ಥವಾಗಿ ಕಳೆಯಬಾರದು.
2. ತಂದೆಯನ್ನು ನೆನಪು
ಮಾಡುವಾಗ ಕಣ್ಣುಗಳನ್ನು ಮುಚ್ಚಿ ಕುಳಿತುಕೊಳ್ಳಬಾರದು. ಶ್ರೀಕೃಷ್ಣನ ರಾಜ್ಯದಲ್ಲಿ ಬರಬೇಕೆಂದರೆ
ವಿದ್ಯೆಯನ್ನು ಚೆನ್ನಾಗಿ ಓದಬೇಕು.
ವರದಾನ:
ಮನಸ್ಸು-ಬುದ್ಧಿಯನ್ನು ಜಂಜಾಟಗಳಿಂದ ದೂರ ಸರಿದು ಮಿಲನ್ ಮೇಳಾ ಆಚರಿಸುವಂತಹ ಘರ್ಷಣೆಗಳಿಂದ ಮುಕ್ತ
ಭವ
ಕೆಲವು ಮಕ್ಕಳು
ಯೋಚಿಸುತ್ತಾರೆ ಈ ಜಂಜಾಟ ಪೂರ್ತಿ ಆದರೆ ನಮ್ಮ ಅವಸ್ಥೆ ಅಥವಾ ಸೇವೆ ಚೆನ್ನಾಗಿ ಆಗಿಬಿಡುತ್ತೆ ಎಂದು
ಆದರೆ ಜಂಜಾಟ ಬೆಟ್ಟದ ಸಮಾನವಾಗಿರುತ್ತೆ. ಬೆಟ್ಟ ಸರಿಯುವುದಿಲ್ಲ, ಆದರೆ ಎಲ್ಲಿ ಜಂಜಾಟವಿರುತ್ತೆ
ಅಲ್ಲಿ ತಮ್ಮ ಮನಸ್ಸು-ಬುದ್ಧಿಯನ್ನು ಬೇರೆಯಾಗಿಡಿ ಅಥವಾ ಹಾರುವಕಲೆಯಿಂದ ಜಂಜಾಟಗಳ ಬೆಟ್ಟದ ಮೇಲೆ
ಹೋಗಿಬಿಡಿ ಆಗ ಬೆಟ್ಟವೂ ಸಹ ನಿಮಗೆ ಸಹಜ ಅನುಭವವಾಗುವುದು. ಘರ್ಷಣೆಗಳ ಪ್ರಪಂಚದಲ್ಲಿ ಜಂಜಾಟವಂತೂ
ಬಂದೇ ಬರುವುದು, ನೀವು ಅದರಿಂದ ಮುಕ್ತರಾಗಿರಿ ಆಗ ಮಿಲನ ಮೇಳ ಆಚರಿಸಲು ಸಾಧ್ಯ.
ಸ್ಲೋಗನ್:
ಈ ಬೆಹದ್ದಿನ
ನಾಟಕದಲ್ಲಿ ಹೀರೋ ಪಾತ್ರ ಅಭಿನಯಿಸುವಂತಹವರೇ ಹೀರೋ ಪಾತ್ರಧಾರಿಗಳಾಗಿದ್ದಾರೆ.