07.11.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಶಿವತಂದೆಯು ನಿಮ್ಮ ಎಲ್ಲಾ ಭಂಡಾರವರನ್ನು ಸಂಪನ್ನ ಮಾಡಲು ಬಂದಿದ್ದಾರೆ, ಯಾವಾಗ ನಿಮ್ಮ ಭಂಡಾರವು ತುಂಬಿರುತ್ತದೆಯೋ ಆಗ ಕಾಲಕಂಟಕವು ದೂರವಾಗಿಬಿಡುತ್ತದೆ”

ಪ್ರಶ್ನೆ:
ಜ್ಞಾನವಂತ ಮಕ್ಕಳ ಬುದ್ಧಿಯಲ್ಲಿ ಯಾವ ಒಂದು ಮಾತಿನ ಪಕ್ಕಾ ನಿಶ್ಚಯವಿರುತ್ತದೆ?

ಉತ್ತರ:
ಅವರಿಗೆ ಈ ಧೃಡನಿಶ್ಚಯವಿರುತ್ತದೆ - ನಮಗೆ ಸಿಕ್ಕಿರುವ ಪಾತ್ರವು ಎಂದಿಗೂ ಅಳಿಸಿಹೋಗುವುದಿಲ್ಲ. ನಾನಾತ್ಮನಲ್ಲಿ 84 ಜನ್ಮಗಳ ಅವಿನಾಶಿ ಪಾತ್ರವು ನಿಗಧಿಯಾಗಿದೆ. ಈ ಜ್ಞಾನವು ಬುದ್ಧಿಯಲ್ಲಿದ್ದಾಗ ಜ್ಞಾನವಂತರಾಗಿರುತ್ತಾರೆ ಇಲ್ಲವೆಂದರೆ ಎಲ್ಲಾ ಜ್ಞಾನವು ಬುದ್ಧಿಯಿಂದ ಹೊರಟುಹೋಗುತ್ತದೆ.

ಓಂ ಶಾಂತಿ.
ತಂದೆಯು ಬಂದು ಆತ್ಮಿಕ ಮಕ್ಕಳ ಪ್ರತಿ ಏನು ಹೇಳುತ್ತಾರೆ? ಏನು ಸೇವೆ ಮಾಡುತ್ತೀರಿ? ಈ ಸಮಯದಲ್ಲಿ ತಂದೆಯು ಆತ್ಮಿಕ ವಿದ್ಯೆಯನ್ನು ಓದಿಸುವಂತಹ ಸೇವೆಯನ್ನು ಮಾಡುತ್ತಿದ್ದಾರೆ, ಇದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯ ಪಾತ್ರವೂ ಇದೆ, ಶಿಕ್ಷಕನ ಪಾತ್ರವೂ ಇದೆ ಹಾಗೂ ಗುರುವಿನ ಪಾತ್ರವೂ ಇದೆ. ಮೂರೂ ಪಾತ್ರವನ್ನು ಬಹಳ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ನೀವು ತಿಳಿದುಕೊಂಡಿದ್ದೀರಿ - ಎಲ್ಲರಿಗಾಗಿ ಅವರು ತಂದೆಯೂ ಆಗಿದ್ದಾರೆ, ಸದ್ಗತಿ ಕೊಡುವ ಗುರುವೂ ಆಗಿದ್ದಾರೆ. ಚಿಕ್ಕವರು, ದೊಡ್ಡವರು, ವೃದ್ಧರು ಎಲ್ಲರಿಗಾಗಿ ಅವರೊಬ್ಬರೇ ಆಗಿದ್ದಾರೆ. ಶ್ರೇಷ್ಠ ತಂದೆ, ಶ್ರೇಷ್ಠ ಶಿಕ್ಷಕನಾಗಿದ್ದಾರೆ, ಬೇಹದ್ದಿನ ಶಿಕ್ಷಣವನ್ನು ಕೊಡುತ್ತಾರೆ. ನೀವು ಸಮ್ಮೇಳನದಲ್ಲಿಯೂ ತಿಳಿಸಿಕೊಡಬಹುದು - ನಾವು ಎಲ್ಲರ ಜೀವನದ ಚರಿತ್ರೆಯನ್ನು ತಿಳಿದಿದ್ದೇವೆ, ಪರಮಪಿತ ಪರಮಾತ್ಮ ಶಿವತಂದೆಯ ಜೀವನಕಥೆಯನ್ನೂ ತಿಳಿದಿದ್ದೇವೆ. ನಂಬರ್ವಾರ್ ಆಗಿ ಎಲ್ಲವೂ ಬುದ್ಧಿಯಲ್ಲಿರಬೇಕು. ಎಲ್ಲದರ ವಿರಾಟರೂಪವು ಅಗತ್ಯವಾಗಿ ಬುದ್ಧಿಯಲ್ಲಿರಬೇಕು. ನಾವೀಗ ಬ್ರಾಹ್ಮಣರಾಗಿದ್ದೇವೆ, ನಂತರ ದೇವತೆಯಾಗುತ್ತೇವೆ. ಅನಂತರ ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೇವೆ. ಇದು ಮಕ್ಕಳಿಗೆ ನೆನಪಿರಬೇಕಲ್ಲವೆ. ನೀವು ಮಕ್ಕಳ ವಿನಃ ಈ ಮಾತುಗಳು ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಉತ್ಥಾನ ಹಾಗೂ ಪಥನದ ಎಲ್ಲಾ ರಹಸ್ಯವು ಬುದ್ಧಿಯಲ್ಲಿದೆ. ಉತ್ಥಾನದಲ್ಲಿದ್ದೆವು ಈಗ ಪತನದಲ್ಲಿ ಬಂದಿದ್ದೇವೆ, ಈಗ ಮಧ್ಯದಲ್ಲಿದ್ದೇವೆ. ನಾವು ಶೂದ್ರರೂ ಅಲ್ಲ, ಸಂಪೂರ್ಣ ಬ್ರಾಹ್ಮಣರೂ ಆಗಿಲ್ಲ. ಒಂದುವೇಳೆ ಈಗ ಪಕ್ಕಾ ಬ್ರಾಹ್ಮಣರಿರುವುದಾದರೆ ಯಾವುದೇ ಶೂದ್ರತನದ ನಡತೆಯಿರಬಾರದು. ಬ್ರಾಹ್ಮಣರಲ್ಲಿಯೂ ನಂತರ ಶೂದ್ರತನ ಬಂದುಬಿಡುತ್ತದೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ - ಎಂದಿನಿಂದ ಪಾಪವನ್ನು ಆರಂಭ ಮಾಡಿದ್ದೇವೆ ಯಾವಾಗ ಕಾಮಚಿತೆಯ ಮೇಲೆ ಹತ್ತುತ್ತೇವೆ ಎಂಬುದು ಈಗ ನಿಮ್ಮ ಬುದ್ಧಿಯಲ್ಲಿ ಪೂರ್ಣ ಚಕ್ರವಿದೆ. ಮೇಲೆ ಪರಮಪಿತ ಪರಮಾತ್ಮ ತಂದೆಯಿದ್ದಾರೆ, ನಂತರ ನೀವಾತ್ಮಗಳಿದ್ದೀರಿ. ಈ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿ ಅವಶ್ಯವಾಗಿ ಇರಬೇಕು. ಈಗ ನಾವು ಬ್ರಾಹ್ಮಣರಾಗಿದ್ದೇವೆ, ದೇವತೆಗಳಾಗುತ್ತಿದ್ದೇವೆ ನಂತರ ವೈಶ್ಯ, ಶೂದ್ರರ ರಾಜ್ಯದಲ್ಲಿ ಬರುತ್ತೇವೆ. ತಂದೆಯು ಬಂದು ನಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತಾರೆ, ನಂತರ ನಾವು ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆ. ಬ್ರಾಹ್ಮಣರಾಗಿ ಕರ್ಮಾತೀತ ಸ್ಥಿತಿಯನ್ನು ಪಡೆದು ಮನೆಗೆ ಹಿಂತಿರುಗುತ್ತೇವೆ. ಬಾಜೋಲಿ ಅಥವಾ 84 ಜನ್ಮದ ಚಕ್ರವನ್ನು ನೀವು ತಿಳಿದುಕೊಂಡಿದ್ದೀರಿ. ಬಾಜೋಲಿ ಆಟದಿಂದ ನಿಮಗೆ ಬಹಳ ಸುಲಭವಾಗಿ ತಿಳಿಸುತ್ತಾರೆ. ನಿಮ್ಮನ್ನು ಬಹಳ ಹಗುರರನ್ನಾಗಿ ಮಾಡುತ್ತಾರೆ ಏಕೆಂದರೆ ಬಿಂದು ಎಂದು ತಿಳಿಸಿದರೆ ತಕ್ಷಣ ಓಡಿಹೋಗುತ್ತೀರಿ. ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತಿದ್ದಾಗ ಓದುವ ವಿದ್ಯೆಯೇ ಬುದ್ಧಿಯಲ್ಲಿ ನೆನಪಿರುತ್ತದೆ. ನಿಮಗೂ ಈ ವಿದ್ಯೆಯು ನೆನಪಿರಬೇಕು. ನಾವೀಗ ಸಂಗಮಯುಗದಲ್ಲಿದ್ದೇವೆ ನಂತರ ಈ ಚಕ್ರವು ಸದಾ ಬುದ್ಧಿಯಲ್ಲಿ ತಿರುಗುತ್ತಿರಬೇಕು. ಈ ಚಕ್ರ ಮುಂತಾದ ಜ್ಞಾನವು ನೀವು ಬ್ರಾಹ್ಮಣರ ಬಳಿಯೇ ಇದೆ, ಶೂದ್ರರ ಬಳಿಯಲ್ಲ. ದೇವತೆಗಳ ಬಳಿಯೂ ಈ ಜ್ಞಾನವಿಲ್ಲ, ಈಗ ನೀವು ತಿಳಿದುಕೊಂಡಿದ್ದೀರಿ - ಭಕ್ತಿಮಾರ್ಗದ ಚಿತ್ರಗಳೆಲ್ಲವೂ ತಪ್ಪಾಗಿವೆ. ನಿಮ್ಮ ಬಳಿ ಇರುವಂತಹದ್ದು ಯಥಾರ್ಥವಾಗಿದೆ ಏಕೆಂದರೆ ನೀವು ಯಥಾರ್ಥವಾಗುತ್ತೀರಿ. ಈಗ ನಿಮಗೆ ಜ್ಞಾನವು ಸಿಗುತ್ತಿರುವಕಾರಣ ಯಾವುದನ್ನು ಭಕ್ತಿಯೆಂದು ಕರೆಯಲಾಗುವುದು, ಯಾವುದನ್ನು ಜ್ಞಾನವೆಂದು ಕರೆಯಲಾಗುವುದೆಂದು ನೀವು ತಿಳಿದಿದ್ದೀರಿ. ಜ್ಞಾನವನ್ನು ಕೊಡುವಂತಹ ತಂದೆಯು ಜ್ಞಾನಸಾಗರ ನಿಮಗೆ ಸಿಕ್ಕಿದ್ದಾರೆಂದು ನೀವು ತಿಳಿದಿದ್ದೀರಿ. ಶಾಲೆಯಲ್ಲಿ ಓದುವಾಗ ನಿಮಗೆ ಗುರಿಯು ಗೊತ್ತಿರುತ್ತದೆಯಲ್ಲವೆ! ಭಕ್ತಿಮಾರ್ಗದಲ್ಲಂತೂ ಗುರಿಯಿರುವುದಿಲ್ಲ. ನಾವೇ ಶ್ರೇಷ್ಠ ದೇವಿ-ದೇವತೆಗಳಾಗಿದ್ದವರು ಈಗ ಕೆಳಗೆ ಇಳಿದಿದ್ದೇವೆಂದು ನಿಮಗೆ ತಿಳಿದಿತ್ತೇನು? ಈಗ ನೀವು ಬ್ರಾಹ್ಮಣರಾಗಿರುವಕಾರಣ ತಿಳಿದಿದೆ. ಮೊದಲೂ ಸಹ ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಿರಿ. ಪ್ರಜಾಪಿತ ಬ್ರಹ್ಮನ ಹೆಸರಂತೂ ಪ್ರಸಿದ್ಧವಾಗಿದೆ. ಪ್ರಜಾಪಿತ ಮನುಷ್ಯನಾಗಿದ್ದಾರಲ್ಲವೆ. ಅವರಿಗೆ ಇಷ್ಟೊಂದು ಮಕ್ಕಳಿರುವಾಗ ಅವಶ್ಯವಾಗಿ ದತ್ತುಮಕ್ಕಳಾಗಿರಬಹುದು. ಎಷ್ಟೊಂದು ದತ್ತು ಮಕ್ಕಳಿದ್ದಾರೆ. ಆತ್ಮದ ರೂಪದಲ್ಲಂತೂ ಎಲ್ಲರೂ ಸಹೋದರ-ಸಹೋದರರಾಗಿದ್ದಾರೆ, ಈಗ ನಿಮ್ಮ ಬುದ್ಧಿಯು ಎಷ್ಟೊಂದು ವಿಶಾಲವಾಗಿದೆ! ಮೇಲೆ ಹೇಗೆ ನೀವು ನಕ್ಷತ್ರಗಳು ನಿಂತಿವೆ ಎಂದು ನೀವು ತಿಳಿದಿದ್ದೀರಿ ಆದರೆ ದೂರದಿಂದ ಎಷ್ಟು ಚಿಕ್ಕದಾಗಿ ಕಾಣುತ್ತದೆ. ನೀವೂ ಸಹ ಅತಿಸೂಕ್ಷ್ಮ ಆತ್ಮರಾಗಿದ್ದೀರಿ. ಆತ್ಮವು ಚಿಕ್ಕದು, ದೊಡ್ಡದಾಗುವುದಿಲ್ಲ. ಹಾ! ನಿಮ್ಮ ಪದವಿಯು ಬಹಳ ಶ್ರೇಷ್ಠವಾಗಿದೆ. ಅದನ್ನು ಸೂರ್ಯದೇವತಾ, ಚಂದ್ರದೇವತೆಯೆಂದು ಹೇಳಲಾಗುತ್ತದೆ. ಸೂರ್ಯತಂದೆ, ಚಂದ್ರಮನನ್ನು ತಾಯಿಯೆಂದು ಹೇಳಲಾಗುತ್ತದೆ. ಬಾಕಿ ಆತ್ಮಗಳೆಲ್ಲರೂ ನಕ್ಷತ್ರಗಳಾಗಿದ್ದಾರೆ. ಅಂದಾಗ ಆತ್ಮಗಳೆಲ್ಲರೂ ಒಂದೇ ರೀತಿ ಚಿಕ್ಕದಾಗಿದ್ದರೆ ಇಲ್ಲಿಗೆ ಬಂದು ಪಾತ್ರಧಾರಿಯಾಗುತ್ತೀರಿ, ನೀವೇ ದೇವತೆಗಳಾಗುತ್ತೀರಿ.

ನಾವು ಬಹಳ ಶಕ್ತಿಶಾಲಿಯಾಗುತ್ತಿದ್ದೇವೆ. ನಾವು ತಂದೆಯನ್ನು ನೆನಪು ಮಾಡುವುದರಿಂದ ಸತೋಪ್ರಧಾನ ದೇವತೆಯಾಗುತ್ತೇವೆ. ನಂಬರ್ವಾರ್ ಸ್ವಲ್ಪವೇ ವ್ಯತ್ಯಾಸವಿರುತ್ತದೆ. ಕೆಲವು ಆತ್ಮಗಳು ಪವಿತ್ರರಾಗಿ ಸತೋಪ್ರಧಾನದ ದೇವತೆಯಾಗಿಬಿಡುತ್ತಾರೆ. ಕೆಲವು ಆತ್ಮಗಳು ಸಂಪೂರ್ಣ ಪವಿತ್ರವಾಗುವುದಿಲ್ಲ. ಜ್ಞಾನವನ್ನು ಸ್ವಲ್ಪವೂ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ಅಗತ್ಯವಾಗಿ ಎಲ್ಲರಿಗೂ ತಂದೆಯ ಪರಿಚಯವು ಸಿಗಬೇಕು. ಅಂತ್ಯದಲ್ಲಿ ಎಲ್ಲರೂ ತಂದೆಯನ್ನು ತಿಳಿದುಕೊಳ್ಳುತ್ತಾರಲ್ಲವೆ. ವಿನಾಶದ ಸಮಯದಲ್ಲಿ ತಂದೆಯು ಬಂದಿದ್ದಾರೆಂದು ಎಲ್ಲರಿಗೂ ತಿಳಿಯುತ್ತದೆ. ಈಗಲೂ ಕೆಲವರಿಗೆ ಅಗತ್ಯವಾಗಿ ಭಗವಂತ ಎಲ್ಲಿಯೋ ಬಂದಿರಬೇಕು, ಆದರೆ ತಿಳಿಯುತ್ತಿಲ್ಲವೆಂದು ಹೇಳುತ್ತಾರೆ. ಯಾವುದಾದರೂ ರೂಪದಲ್ಲಿ ಬರುತ್ತಾರೆಂದು ತಿಳಿಯುತ್ತಾರೆ. ಮನುಷ್ಯರ ಮತವಂತೂ ಬಹಳ ಇದೆಯಲ್ಲವೆ. ನಿಮ್ಮದೊಂದೇ ಈಶ್ವರೀಯ ಮತವಾಗಿದೆ. ನೀವು ಈಶ್ವರೀಯ ಮತದಿಂದ ಏನಾಗುತ್ತೀರಿ? ಒಂದಾಗಿದೆ - ಮನುಷ್ಯರ ಮತ, ಮತ್ತೊಂದಾಗಿದೆ - ಈಶ್ವರೀಯ ಮತವಾಗಿದೆ. ದೇವತೆಗಳಿಗೂ ಮತವನ್ನು ಯಾರು ಕೊಟ್ಟರು? ತಂದೆ. ಶ್ರೇಷ್ಠಾತಿ ಶ್ರೇಷ್ಠರನ್ನಾಗಿ ಮಾಡುವುದು ತಂದೆಯ ಶ್ರೀಮತವಾಗಿದೆ. ಶ್ರೇಷ್ಠಾತಿಶ್ರೇಷ್ಠವೆಂದು ತಂದೆಗೆ ಕರೆಯಲಾಗುತ್ತದೆ, ಮನುಷ್ಯರಿಗಲ್ಲ. ಶ್ರೇಷ್ಠಾತಿಶ್ರೇಷ್ಠ ತಂದೆಯು ಬಂದು ಶ್ರೇಷ್ಠರನ್ನಾಗಿ ಮಾಡುತ್ತಾರೆ. ದೇವತೆಗಳನ್ನೂ ಶ್ರೇಷ್ಠರನ್ನಾಗಿ ಮಾಡುವಂತಹವರು ತಂದೆಯಾಗಿದ್ದಾರೆ ಆದ್ದರಿಂದ ಅವರನ್ನು ಶ್ರೇಷ್ಠಾತಿಶ್ರೇಷ್ಠ ಎಂದು ಕರೆಯಲಾಗುವುದು. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಇಂತಹ ಯೋಗ್ಯರನ್ನಾಗಿ ಮಾಡುತ್ತೇನೆ ಆದರೆ ಪ್ರಪಂಚದ ಜನರು ತಮ್ಮ ಬಿರುದನ್ನು ಶ್ರೀ ಶ್ರೀ ಎಂದು ಇಟ್ಟುಕೊಂಡಿದ್ದಾರೆ. ಸಮ್ಮೇಳನದಲ್ಲಿಯೂ ಸಹ ನೀವು ತಿಳಿಸಬಹುದು. ತಿಳಿಸಿಕೊಡಲು ನೀವೇ ನಿಮಿತ್ತರಾಗಿದ್ದೀರಿ. ಒಬ್ಬ ಶಿವತಂದೆಯೇ ಇಂತಹ ಶ್ರೇಷ್ಠ ದೇವತೆಯನ್ನಾಗಿ ಮಾಡುತ್ತಾರೆ. ಅವರು ಶಾಸ್ತ್ರ ಮೊದಲಾದುವುಗಳನ್ನು ಓದಿ ಆ ಬಿರುದನ್ನು ಪಡೆಯುತ್ತಾರೆ. ನಿಮ್ಮನ್ನು ಶ್ರೇಷ್ಠಾತಿಶ್ರೇಷ್ಠ ತಂದೆಯೇ ಶ್ರೇಷ್ಠರನ್ನಾಗಿ ಮಾಡುತ್ತಿದ್ದಾರೆ. ಇದು ತಮೋಪ್ರಧಾನ ಭ್ರಷ್ಟಾಚಾರಿ ಪ್ರಪಂಚವಾಗಿದೆ, ಭ್ರಷ್ಟಾಚಾರದಿಂದ ಜನ್ಮವನ್ನು ಪಡೆಯುತ್ತಾರೆ. ತಂದೆಯ ಬಿರುದು ಎಲ್ಲಿ, ಅದನ್ನು ಪತಿತ ಮನುಷ್ಯರು ತಮ್ಮ ಮೇಲೆಯೇ ಇಟ್ಟುಕೊಳ್ಳುತ್ತಾರೆ. ಶ್ರೇಷ್ಠಾತಿಶ್ರೇಷ್ಠ ಮಹಾನ್ ಆತ್ಮಗಳಂತೂ ದೇವಿ-ದೇವತೆಗಳಾಗಿದ್ದಾರಲ್ಲವೆ. ಸತೋಪ್ರಧಾನ ಪ್ರಪಂಚದಲ್ಲಿ ತಮೋಪ್ರಧಾನರಾಗಿರುವಂತಹ ಮನುಷ್ಯರ್ಯಾರೂ ಇರುವುದಿಲ್ಲ. ರಜೋ ಸಮಯದಲ್ಲಿ ರಜೋ ಮನುಷ್ಯರಿರುತ್ತಾರೆ, ತಮೋಗುಣಿಯಿರುವುದಿಲ್ಲ. ವರ್ಣಗಳ ಗಾಯನವೂ ಇದೆಯಲ್ಲವೆ. ಈಗ ನೀವು ತಿಳಿದುಕೊಂಡಿದ್ದೀರಿ - ಮೊದಲು ನಾವೂ ಸಹ ಸ್ವಲ್ಪವೂ ತಿಳಿದುಕೊಂಡಿರಲಿಲ್ಲ. ಈಗ ತಂದೆಯು ಎಷ್ಟೊಂದು ಬುದ್ಧಿವಂತರನ್ನಾಗಿ ಮಾಡುತ್ತಾರೆ. ನೀವು ಎಷ್ಟೊಂದು ಶ್ರೀಮಂತರಾಗುತ್ತೀರಿ! ಶಿವತಂದೆಯ ಭಂಡಾರ ಸಂಪನ್ನವಾಗಿದೆ. ಶಿವತಂದೆಯ ಭಂಡಾರವು ಯಾವುದಾಗಿದೆ? ಅವಿನಾಶಿ ಜ್ಞಾನರತ್ನಗಳು. ಶಿವತಂದೆಯ ಭಂಡಾರವು ಸಂಪನ್ನವಾಗಿದ್ದಾಗ ಮೃತ್ಯುವಿನಂತಹ ಕಂಟಕವೂ ದೂರವಾಗಿಬಿಡುತ್ತದೆ. ತಂದೆಯು ನೀವು ಮಕ್ಕಳಿಗೆ ಜ್ಞಾನರತ್ನಗಳನ್ನು ಕೊಡುತ್ತಾರೆ, ಅವರು ಸ್ವಯಂ ಸಾಗರನಾಗಿದ್ದಾರೆ. ಮಕ್ಕಳ ಬುದ್ಧಿಯು ಬೇಹದ್ದಿನಲ್ಲಿ ಹೋಗಬೇಕು. ಇಷ್ಟೊಂದು ಕೋಟ್ಯಾಂತರ ಆತ್ಮಗಳು ತಮ್ಮ-ತಮ್ಮ ಶರೀರವೆಂಬ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದಾರೆ. ಇದು ಬೇಹದ್ದಿನ ನಾಟಕವಾಗಿದೆ. ಆತ್ಮವು ಈ ಸಿಂಹಾಸನದ ಮೇಲೆ ವಿರಾಜಮಾನವಾಗುತ್ತದೆ. ಒಂದು ಶರೀರದಂತೆ ಮತ್ತೊಂದು ಶರೀರ (ಸಿಂಹಾಸನ) ವಿರಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಜೀವನವು ಬೇರೆ-ಬೇರೆಯಾಗಿದೆ. ಇದನ್ನು ಈಶ್ವರನ ಲೀಲೆಯೆಂದು ಕರೆಯಲಾಗುವುದು. ಪ್ರತಿಯೊಬ್ಬರಿಗೂ ಹೇಗೆ ಅವಿನಾಶಿ ಪಾತ್ರವು ಸಿಕ್ಕಿದೆ! ಇಷ್ಟೊಂದು ಚಿಕ್ಕ ಆತ್ಮನಲ್ಲಿ 84 ಜನ್ಮಗಳ ಪಾತ್ರವು ತುಂಬಲ್ಪಟ್ಟಿದೆ, ಅತೀ ಸೂಕ್ಷ್ಮವಾಗಿದೆ. ಇಷ್ಟೊಂದು ಅದ್ಭುತವಾದದ್ದು ಯಾವುದೂ ಇಲ್ಲ. ಇಷ್ಟೊಂದು ಸೂಕ್ಷ್ಮ ಆತ್ಮನಲ್ಲಿ ಎಷ್ಟೊಂದು ಪಾತ್ರವು ತುಂಬಿದೆ, ಆ ಪಾತ್ರವನ್ನು ಇಲ್ಲಿಯೇ ಅಭಿನಯಿಸುತ್ತದೆ. ಸೂಕ್ಷ್ಮವತನದಲ್ಲಿ ಯಾವುದೇ ಪಾತ್ರವನ್ನು ಅಭಿನಯಿಸುವುದಿಲ್ಲ. ತಂದೆಯು ಎಷ್ಟೊಂದು ಚೆನ್ನಾಗಿ ತಿಳಿಸುತ್ತಾರೆ. ನೀವು ತಂದೆಯ ಮೂಲಕ ಎಲ್ಲವನ್ನೂ ತಿಳಿದುಕೊಂಡುಬಿಡುತ್ತೀರಿ. ಇದೇ ಜ್ಞಾನವಾಗಿದೆ. ಎಲ್ಲರ ಆಂತರ್ಯದಲ್ಲಿರುವಂತದ್ದನ್ನು ತಿಳಿದಿರುವುದು ಎಂದಲ್ಲ. ಅವರು ತಿಳಿದಿರುವ ಜ್ಞಾನವೇ ನಿಮ್ಮಲ್ಲಿ ಇಮರ್ಜ್ ಆಗುತ್ತಾ ಹೋಗುತ್ತದೆ. ಆ ಜ್ಞಾನದಿಂದ ನೀವು ಇಷ್ಟೊಂದು ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಇದೂ ಸಹ ತಿಳುವಳಿಕೆಯಾಗಿದೆಯಲ್ಲವೆ. ತಂದೆಯು ಬೀಜರೂಪನಾಗಿದ್ದಾರೆ. ಅವರಲ್ಲಿ ವೃಕ್ಷದ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಮನುಷ್ಯರಂತೂ ಲಕ್ಷಾಂತರ ವರ್ಷಗಳ ಆಯಸ್ಸನ್ನು ಕೊಟ್ಟುಬಿಟ್ಟಿದ್ದಾರೆ ಆದ್ದರಿಂದ ಅವರಿಗೆ ಜ್ಞಾನದ ತಿಳುವಳಿಕೆಯು ಬರಲು ಸಾಧ್ಯವಿಲ್ಲ. ಈಗ ನಿಮಗೆ ಸಂಗಮಯುಗದಲ್ಲಿ ಈ ಎಲ್ಲಾ ಜ್ಞಾನವು ಸಿಗುತ್ತಿದೆ. ತಂದೆಯ ಮುಖಾಂತರ ನೀವು ಇಡೀ ಸೃಷ್ಟಿಚಕ್ರದ ಜ್ಞಾನವನ್ನು ತಿಳಿದುಕೊಳ್ಳುತ್ತೀರಿ. ಇದಕ್ಕೆ ಮೊದಲು ನೀವೂ ಸಹ ಏನೂ ತಿಳಿದುಕೊಂಡಿರಲಿಲ್ಲ. ಈಗ ನೀವು ಸಂಗಮದಲ್ಲಿದ್ದೀರಿ. ಇದು ನಿಮ್ಮ ಅಂತಿಮಜನ್ಮವಾಗಿದೆ, ನೀವು ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಸಂಪೂರ್ಣ ಬ್ರಾಹ್ಮಣರಾಗಿಬಿಡುತ್ತೀರಿ. ಈಗ ಇನ್ನೂ ಆಗಿಲ್ಲ, ಈಗ ಒಳ್ಳೊಳ್ಳೆಯ ಮಕ್ಕಳೂ ಸಹ ಬ್ರಾಹ್ಮಣ ಮಕ್ಕಳೂ ಸಹ ಶೂದ್ರರಾಗಿಬಿಡುತ್ತಾರೆ. ಇದಕ್ಕೆ ಮಾಯೆಗೆ ಸೋಲುವುದು ಎಂದು ಕರೆಯಲಾಗುವುದು. ತಂದೆಯ ಮಡಿಲಿನಿಂದ ಸೋತು ರಾವಣನ ಮಡಿಲಿಗೆ ಹೊರಟುಹೋಗುತ್ತಾರೆ. ಶ್ರೇಷ್ಠರಾಗುವ ತಂದೆಯ ಮಡಿಲು ಎಲ್ಲಿ! ಭ್ರಷ್ಟ ರಾವಣನ ಮಡಿಲೆಲ್ಲಿ! ಸೆಕೆಂಡಿನಲ್ಲಿ ಜೀವನ್ಮುಕ್ತಿ, ಸೆಕೆಂಡಿನಲ್ಲಿ ಪೂರ್ಣ ದುರ್ದಶೆಯಾಗಿಬಿಡುತ್ತದೆ. ಹೇಗೆ ದುರ್ದೆಶೆಯಾಗುತ್ತದೆಯೆಂದು ಬ್ರಾಹ್ಮಣಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ. ಇಂದು ತಂದೆಯವರಾಗಿ ನಾಳೆ ಮತ್ತೆ ಮಾಯೆಯ ಮುಷ್ಟಿಯಲ್ಲಿ ಬಂದು ರಾವಣನದಾಗುತ್ತಾರೆ ಮತ್ತೆ ನೀವು ಅವರನ್ನು ಕಾಪಾಡಲು ಪ್ರಯತ್ನಪಡುತ್ತೀರಿ. ಆಗ ಕೆಲವರು ಉಳಿದುಕೊಂಡುಬಿಡುತ್ತಾರೆ. ಹೇಗೆ ಮುಳುಗುವವರನ್ನು ಕಾಪಾಡಲು ಪ್ರಯತ್ನಪಡುವುದನ್ನು ನೀವು ನೋಡುತ್ತೀರಲ್ಲವೆ. ಎಷ್ಟೊಂದು ಕಷ್ಟವಾಗುತ್ತದೆ.

ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ನೀವಿಲ್ಲಿ ಶಾಲೆಯಲ್ಲಿ ಓದುತ್ತಿದ್ದೀರಲ್ಲವೆ. ನಾವು ಹೇಗೆ ಚಕ್ರವನ್ನು ಸುತ್ತಿಹಾಕಿಕೊಂಡು ಬರುತ್ತೇವೆಂದು ನಿಮಗೆ ತಿಳಿದಿದೆ. ಹೀಗೆ ಮಾಡಿ ಎಂದು ನೀವು ಮಕ್ಕಳಿಗೆ ಶ್ರೀಮತವು ಸಿಗುತ್ತದೆ. ಅಗತ್ಯವಾಗಿ ಭಗವಾನುವಾಚವೂ ಇದೆ. ಅದು ಅವರ ಶ್ರೀಮತವಾಯಿತಲ್ಲವೆ! ನಾನು ನೀವು ಮಕ್ಕಳನ್ನು ಈಗ ಶೂದ್ರರಿಂದ ದೇವತೆಯನ್ನಾಗಿ ಮಾಡಲು ಬಂದಿದ್ದೇನೆ. ಈಗ ಕಲಿಯುಗದಲ್ಲಿ ಶೂದ್ರ ಸಂಪ್ರದಾಯವಿದೆ. ಈಗ ಕಲಿಯುಗ ಮುಗಿಯುತ್ತಾ ಇದೆಯೆಂದು ನೀವು ತಿಳಿದುಕೊಂಡಿದ್ದೀರಿ. ನೀವೀಗ ಸಂಗಮದಲ್ಲಿ ಕುಳಿತಿದ್ದೀರಿ. ಇದು ತಂದೆಯ ಮುಖಾಂತರ ನಿಮಗೆ ಜ್ಞಾನವು ಸಿಕ್ಕಿದೆ. ಶಾಸ್ತ್ರಗಳೇನೆಲ್ಲವನ್ನೂ ಮಾಡಿದ್ದಾರೆಯೋ ಅವುಗಳಲ್ಲಿ ಮನುಷ್ಯರ ಮತವಿದೆ. ಈಶ್ವರನಂತೂ ಶಾಸ್ತ್ರಗಳನ್ನು ಮಾಡಿಲ್ಲ, ಒಂದೇ ಗೀತೆಗೆ ಎಷ್ಟೊಂದು ಹೆಸರುಗಳನ್ನಿಟ್ಟಿದ್ದಾರೆ. ಗಾಂಧೀಗೀತೆ, ಠಾಗೂರ್ಗೀತೆ ಮೊದಲಾದುವುಗಳು. ಬಹಳಷ್ಟು ಹೆಸರುಗಳಿವೆ. ಮನುಷ್ಯರು ಗೀತೆಯನ್ನೇಕೆ ಅಷ್ಟೊಂದು ಓದುತ್ತಾರೆ! ಏನನ್ನೂ ತಿಳಿದುಕೊಂಡಿಲ್ಲ. ಒಂದೇ ಅಧ್ಯಾಯವನ್ನು ತೆಗೆದುಕೊಂಡು ತಮ್ಮ-ತಮ್ಮದೇ ಆದಂತಹ ರೀತಿಯಲ್ಲಿ ಅರ್ಥವನ್ನು ತಿಳಿಸುತ್ತಾರೆ. ಅದೆಲ್ಲವೂ ಮನುಷ್ಯರಿಂದ ಮಾಡಲ್ಪಟ್ಟಿರುವುದಾಗಿದೆಯಲ್ಲವೆ. ನೀವು ಹೇಳಬಹುದು - ಮನುಷ್ಯರ ಮತದಿಂದ ಮಾಡಲ್ಪಟ್ಟಿರುವ ಗೀತೆಯನ್ನು ಓದಿರುವುದರಿಂದ ಈ ಸ್ಥಿತಿಯು ಒದಗಿದೆ. ಗೀತೆಯು ಮೊದಲನೆ ಸ್ಥಾನದ ಶಾಸ್ತ್ರವಾಗಿದೆ. ಅದು ದೇವಿ-ದೇವತಾಧರ್ಮದ ಶಾಸ್ತ್ರವಾಗಿದೆ, ಇದು ನಿಮ್ಮ ಬ್ರಾಹ್ಮಣಕುಲವಾಗಿದೆ, ಇದೂ ಸಹ ಬ್ರಾಹ್ಮಣ ಧರ್ಮವಾಗಿದೆಯಲ್ಲವೆ. ಎಷ್ಟೊಂದು ಧರ್ಮಗಳಿವೆ! ಯಾರ್ಯಾರೂ ಯಾವ ಧರ್ಮಗಳನ್ನು ರಚಿಸಿದ್ದಾರೆಯೋ ಆ ಧರ್ಮಕ್ಕೆ ಅವರ ಹೆಸರು ಬರುತ್ತದೆ. ಜೈನರು ಮಹಾವೀರನೆಂದು ಹೇಳುತ್ತಾರೆ, ನೀವೆಲ್ಲಾ ಮಕ್ಕಳು ಮಹಾವೀರ, ಮಹಾವೀರಿಣಿಯರಾಗಿದ್ದೀರಿ. ಮಂದಿರಗಳಲ್ಲಿ ನಿಮ್ಮ ನೆನಪಾರ್ಥವಿದೆ. ಇದು ರಾಜಯೋಗವಲ್ಲವೆ! ಕೆಳಗಡೆ ಯೋಗತಪಸ್ಸಿನಲ್ಲಿ ಕುಳಿತಿದ್ದಾರೆ, ಮೇಲೆ ರಾಜ್ಯಭಾಗ್ಯದ ಚಿತ್ರವಿದೆ. ಇದು ರಾಜಯೋಗದ ಯಥಾರ್ಥವಾದ ಮಂದಿರವಾಗಿದೆ. ನಂತರ ಒಂದಲ್ಲ ಒಂದು ಹೆಸರನ್ನಿಟ್ಟಿದ್ದಾರೆ. ಈ ನೆನಪಾರ್ಥವು ಸಂಪೂರ್ಣ ಯಥಾರ್ಥವಾಗಿದೆ. ಬುದ್ಧಿಗೆ ಕೆಲಸಕೊಟ್ಟು ಸರಿಯಾಗಿಯೇ ಮಾಡಿದ್ದಾರೆ ನಂತರ ಯಾರು ಯಾವ ಹೆಸರುಗಳನ್ನು ಹೇಳಿದರು ಆ ಹೆಸರನ್ನಿಟ್ಟಿದ್ದಾರೆ. ಇದನ್ನು ಮಾದರಿಯ ರೂಪದಲ್ಲಿಯೂ ಮಾಡಿದ್ದಾರೆ. ಸ್ವರ್ಗ ಹಾಗೂ ಸಂಗಮಯುಗದ ರಾಜಯೋಗವನ್ನು ಮಾಡಲ್ಪಟ್ಟಿದೆ. ನೀವು ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ನೀವು ಆದಿಯನ್ನು ನೋಡಿದ್ದೀರಿ. ಸಂಗಮಯುಗವನ್ನಾದರೂ ಆದಿಯೆಂದು ಹೇಳಿ ಅಥವಾ ಸತ್ಯಯುಗವನ್ನಾದರೂ ಹೇಳಿ. ಸಂಗಮಯುಗದ ದೃಶ್ಯವನ್ನು ಕೆಳಗಡೆ ತೋರಿಸಲಾಗಿದೆ ನಂತರ ರಾಜ್ಯಭಾಗ್ಯವನ್ನು ಮೇಲೆ ತೋರಿಸಲಾಗಿದೆ. ಸತ್ಯಯುಗವು ಆದಿಯಾಗಿದ್ದು, ದ್ವಾಪರವು ಮಧ್ಯದಲ್ಲಿದೆ. ಅಂತ್ಯವನ್ನಂತೂ ನೀವು ನೋಡುತ್ತಿದ್ದೀರಿ. ಇದೆಲ್ಲವೂ ವಿನಾಶವಾಗುತ್ತದೆ, ಸಂಪೂರ್ಣ ನೆನಪಾರ್ಥವನ್ನು ಮಾಡಲ್ಪಟ್ಟಿದೆ. ದೇವಿ-ದೇವತೆಗಳೇ ನಂತರ ವಾಮಮಾರ್ಗದಲ್ಲಿ ಬರುತ್ತಾರೆ, ದ್ವಾಪರದಿಂದ ವಾಮಮಾರ್ಗವು ಪ್ರಾರಂಭವಾಗುತ್ತದೆ. ಯಥಾರ್ಥವಾದ ನೆನಪಾರ್ಥವಿದೆ. ನೆನಪಿಗಾಗಿ ಬಹಳಷ್ಟು ಮಂದಿರಗಳನ್ನು ಕಟ್ಟಿಸಿದ್ದಾರೆ. ಇಲ್ಲಿಯೇ ಎಲ್ಲಾ ಚಿಹ್ನೆಗಳಿವೆ, ಮಂದಿರಗಳೂ ಇಲ್ಲಿಯೇ ಆಗುತ್ತವೆ. ಭಾರತವಾಸಿಗಳೇ ದೇವಿ-ದೇವತಾ ರಾಜ್ಯವನ್ನು ಮಾಡಿಹೋಗಿದ್ದಾರಲ್ಲವೆ. ನಂತರ ಎಷ್ಟೊಂದು ಮಂದಿರಗಳನ್ನು ಕಟ್ಟಿಸುತ್ತಾರೆ. ಸಿಖ್ಖರು ಬಹಳಷ್ಟು ಮಂದಿಯಾದಾಗ ತಮ್ಮ ಮಂದಿರವನ್ನು ಮಾಡುತ್ತಾರೆ. ಮಿಲಿಟರಿಯವರು ತಮ್ಮ ಮಂದಿರವನ್ನು ಮಾಡುತ್ತಾರೆ. ಭಾರತವಾಸಿಗಳು ತಮ್ಮ ಕೃಷ್ಣ ಅಥವಾ ಲಕ್ಷ್ಮಿ-ನಾರಾಯಣನ ಮಂದಿರವನ್ನು ಕಟ್ಟಿಸುತ್ತಾರೆ. ಹನುಮಂತ, ಗಣೇಶನ ಮಂದಿರವನ್ನು ಕಟ್ಟಿಸುತ್ತಾರೆ. ಈ ಸೃಷ್ಟಿಚಕ್ರವು ಹೇಗೆ ತಿರುಗುತ್ತದೆ, ಹೇಗೆ ಸ್ಥಾಪನೆ, ವಿನಾಶ, ಪಾಲನೆಯಾಗುತ್ತದೆಯೆಂದು ನೀವೇ ತಿಳಿದಿದ್ದೀರಿ. ಇದನ್ನು ಅಂಧಕಾರವುಳ್ಳಂತಹ ರಾತ್ರಿಯೆಂದು ಕರೆಯಲಾಗುವುದು. ಬ್ರಹ್ಮನ ದಿನ-ಬ್ರಹ್ಮನ ರಾತ್ರಿಯೆಂದು ಗಾಯನವಿದೆ ಏಕೆಂದರೆ ಬ್ರಹ್ಮನೇ ಚಕ್ರದಲ್ಲಿ ಬರುತ್ತಾರೆ. ಈಗ ನೀವು ಬ್ರಾಹ್ಮಣರಾಗಿದ್ದೀರಿ ನಂತರ ದೇವತೆಯಾಗುತ್ತೀರಿ. ಬ್ರಹ್ಮನೇ ಮುಖ್ಯವಾದವರಾದರಲ್ಲವೆ. ಮುಖ್ಯವಾಗಿ ಬ್ರಹ್ಮನನ್ನು ಇಡುವುದೋ ಅಥವಾ ವಿಷ್ಣುವನ್ನು ಇಡುವುದೋ? ಬ್ರಹ್ಮನು ರಾತ್ರಿಯವರಾಗಿದ್ದಾರೆ, ವಿಷ್ಣು ಹಗಲಿನವರಾಗಿದ್ದಾರೆ. ಬ್ರಹ್ಮನೇ ರಾತ್ರಿಯಿಂದ ಹಗಲಿಗೆ ಬರುತ್ತಾರೆ. ಹಗಲಿನಿಂದ ನಂತರ 84 ಜನ್ಮಗಳಾದ ಮೇಲೆ ರಾತ್ರಿಯಲ್ಲಿ ಬರುತ್ತಾರೆ. ಇದು ಎಷ್ಟೊಂದು ಸಹಜವಾದ ತಿಳುವಳಿಕೆಯಾಗಿದೆ. ಇದನ್ನೂ ಸಹ ಪೂರ್ಣ ನೆನಪು ಮಾಡುವುದಿಲ್ಲ. ಸಂಪೂರ್ಣ ಓದುವುದಿಲ್ಲವೆಂದರೆ ನಂಬರ್ವಾರ್ ಪುರುಷಾರ್ತದನುಸಾರ ಪದವಿಯನ್ನು ಪಡೆಯುತ್ತಾರೆ. ಎಷ್ಟೆಷ್ಟು ನೆನಪು ಮಾಡುತ್ತೀರಿ ಅಷ್ಟಷ್ಟು ಸತೋಪ್ರಧಾನರಾಗುತ್ತೀರಿ. ಸತೋಪ್ರಧಾನವಾಗಿದ್ದ ಭಾರತ ತಮೋಪ್ರಧಾನವಾಗಿದೆ. ಮಕ್ಕಳಲ್ಲಿ ಎಷ್ಟೊಂದು ಜ್ಞಾನವಿದೆ! ಈ ಜ್ಞಾನವನ್ನು ಸ್ಮರಣೆ ಮಾಡಬೇಕು. ಈ ಜ್ಞಾನವು ಹೊಸ ಪ್ರಪಂಚಕ್ಕಾಗಿಯೇ ಇದೆ. ಇದನ್ನು ಬೇಹದ್ದಿನ ತಂದೆಯೇ ಬಂದು ಕೊಡುತ್ತಾರೆ. ಎಲ್ಲಾ ಮನುಷ್ಯರು ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತಾರೆ. ಆಂಗ್ಲರೂ ಸಹ ಓ ಗಾಡ್ ಫಾದರ್, ಮುಕ್ತಿದಾತ ಎಂದು ಕರೆಯುತ್ತಾರೆ. ಮಾರ್ಗದರ್ಶಕನ ಅರ್ಥವಂತೂ ನೀವು ಮಕ್ಕಳ ಬುದ್ಧಿಯಲ್ಲಿದೆ. ತಂದೆಯು ಬಂದು ದುಃಖದ ಪ್ರಪಂಚವಾಗಿರುವ ಕಬ್ಬಿಣದ ಯುಗದಿಂದ ಬಿಡಿಸಿ ಚಿನ್ನದ ಯುಗದಲ್ಲಿ ಕರೆದೊಯ್ಯುತ್ತಾರೆ. ಚಿನ್ನದ ಯುಗ ಅಗತ್ಯವಾಗಿ ಕಳೆದುಹೋಗಿದೆ ಆದ್ದರಿಂದ ಅದನ್ನು ನೆನಪು ಮಾಡುತ್ತಾರೆ. ನೀವು ಮಕ್ಕಳಿಗೆ ಆಂತರ್ಯದಲ್ಲಿ ಬಹಳ ಖುಷಿಯಿರಬೇಕಾಗಿದೆ ಹಾಗೂ ದೈವೀ ಕರ್ಮವನ್ನು ಮಾಡಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯಿಂದ ಯಾವ ಅವಿನಾಶಿ ಜ್ಞಾನರತ್ನಗಳ ಅಪಾರ ಖಜಾನೆಯು ಸಿಗುತ್ತಿದೆ, ಅದನ್ನು ಸ್ಮೃತಿಯಲ್ಲಿಟ್ಟುಕೊಂಡು ಬುದ್ಧಿಯನ್ನು ಬೇಹದ್ದಿನ ಕಡೆ ಕರೆದೊಯ್ಯಬೇಕಾಗಿದೆ. ಈ ಬೇಹದ್ದಿನ ನಾಟಕದಲ್ಲಿ ಆತ್ಮಗಳೆಲ್ಲರೂ ಹೇಗೆ ತಮ್ಮ-ತಮ್ಮ ಸಿಂಹಾಸನದಲ್ಲಿ ವಿರಾಜಮಾನವಾಗಿದ್ದಾರೆ - ಈ ಈಶ್ವರೀಯ ಲೀಲೆಯನ್ನು ಸಾಕ್ಷಿಯಾಗಿ ನೋಡಬೇಕು.

2. ಸದಾ ಬುದ್ಧಿಯಲ್ಲಿರಲಿ - ನಾವು ಸಂಗಮಯುಗೀ ಬ್ರಾಹ್ಮಣರಾಗಿದ್ದೇವೆ. ನಮಗೆ ತಂದೆಯ ಶ್ರೇಷ್ಠ ಮಡಿಲು ಸಿಕ್ಕಿದೆ, ನಾವೀಗ ರಾವಣನ ಮಡಿಲಿಗೆ ಹೋಗುವುದಿಲ್ಲ. ನಾವು ಮುಳುಗುವಂತಹವರನ್ನು ರಕ್ಷಿಸುವುದೇ ನಮ್ಮ ಕರ್ತವ್ಯವಾಗಿದೆ.

ವರದಾನ:
ವ್ಯರ್ಥ ಸಂಕಲ್ಪರೂಪಿ ಕಂಬಗಳನ್ನು ಆಧಾರ ಮಾಡಿಕೊಳ್ಳುವ ಬದಲು ಸರ್ವ ಸಂಬಂಧದ ಅನುಭವವನ್ನು ಹೆಚ್ಚಿಸಿಕೊಳ್ಳುವಂತಹ ಸತ್ಯ ಸ್ನೇಹಿ ಭವ.

ಮಾಯೆ ಬಲಹೀನ ಸಂಕಲ್ಪಗಳನ್ನು ಶಕ್ತಿಶಾಲಿ ಮಾಡುವುದಕ್ಕಾಗಿ ಬಹಳ ರಾಯಲ್ ಕಂಬವನ್ನು ಹಾಕುವುದು, ಪದೇ-ಪದೇ ಇದೇ ಸಂಕಲ್ಪ ಕೊಡುವುದು ಹೀಗಂತೂ ಆಗೇ ಆಗುವುದು, ದೊಡ್ಡ-ದೊಡ್ಡವರೂ ಸಹ ಹೀಗೆ ಮಾಡುತ್ತಾರೆ, ಸಂಪೂರ್ಣವಂತು ಇನ್ನೂ ಯಾರೂ ಆಗಿಲ್ಲ, ಖಂಡಿತ ಯಾವುದಾದರೂ ಒಂದು ಬಲಹೀನತೆ ಇದ್ದೇ ಇರುತ್ತದೆ.....ಈ ವ್ಯರ್ಥ ಸಂಕಲ್ಪ ರೂಪಿ ಕಂಬ ಬಲಹೀನತೆಯನ್ನು ಇನ್ನೂ ಶಕ್ತಿಶಾಲಿಯಾಗಿ ಮಾಡುವುದು. ಈಗ ಇಂತಹ ಕಂಬದ ಆಧಾರವನ್ನು ಪಡೆಯುವುದರ ಬದಲು ಸರ್ವ ಸಂಬಂಧಗಳ ಅನುಭವವನ್ನು ಹೆಚ್ಚಿಸಿಕೊಳ್ಳಿ. ಸಾಕಾರ ರೂಪದಲ್ಲಿ ಜೊತೆಯ ಅನುಭವ ಮಾಡುತ್ತಾ ಸತ್ಯ ಸ್ನೇಹಿಯಾಗಿ.

ಸ್ಲೋಗನ್:
ಸಂತುಷ್ಟತೆ ಎಲ್ಲಕ್ಕಿಂತ ದೊಡ್ಡ ಗುಣವಾಗಿದೆ, ಯಾರು ಸದಾ ಸಂತುಷ್ಟರಾಗಿರುತ್ತಾರೆ ಅವರೇ ಪ್ರಭು ಪ್ರೀಯ, ಲೋಕ ಪ್ರೀಯ ಹಾಗೂ ಸ್ವಯಂ ಪ್ರೀಯ ಆಗುತ್ತಾರೆ.