08.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಸರ್ವೋತ್ತಮ ಯುಗವು ಈ ಸಂಗಮಯುಗವಾಗಿದೆ, ಇದರಲ್ಲಿಯೇ ನೀವಾತ್ಮಗಳು ಪರಮಾತ್ಮ ತಂದೆಯೊಂದಿಗೆ ಮಿಲನ
ಮಾಡುತ್ತೀರಿ, ಇದೇ ಸತ್ಯ-ಸತ್ಯವಾದ ಕುಂಭಮೇಳವಾಗಿದೆ”
ಪ್ರಶ್ನೆ:
ಯಾವ ಪಾಠವನ್ನು
ತಂದೆಯೇ ಓದಿಸುತ್ತಾರೆ, ಯಾವುದೇ ಮನುಷ್ಯರು ಓದಿಸಲು ಸಾಧ್ಯವಿಲ್ಲ?
ಉತ್ತರ:
ದೇಹೀ
ಅಭಿಮಾನಿಗಳಾಗುವ ಪಾಠವನ್ನು ಒಬ್ಬ ತಂದೆಯೇ ಓದಿಸುತ್ತಾರೆ, ಈ ಪಾಠವನ್ನು ಯಾವುದೇ ದೇಹಧಾರಿಗಳು
ಓದಿಸಲು ಸಾಧ್ಯವಿಲ್ಲ. ಮೊಟ್ಟಮೊದಲಿಗೆ ನಿಮಗೆ ಆತ್ಮದ ಜ್ಞಾನವು ಸಿಗುತ್ತದೆ, ನಿಮಗೆ ತಿಳಿದಿದೆ -
ನಾವಾತ್ಮಗಳು ಪರಮಧಾಮದಿಂದ ಪಾತ್ರಧಾರಿಗಳಾಗಿ ಪಾತ್ರವನ್ನಭಿನಯಿಸಲು ಬಂದೆವು, ಈಗ ಈ ನಾಟಕವು
ಮುಕ್ತಾಯವಾಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಇದನ್ನು ಯಾರೂ ಮಾಡಿಲ್ಲ ಆದ್ದರಿಂದ
ಇದಕ್ಕೆ ಆದಿ ಮತ್ತು ಅಂತ್ಯವೂ ಇಲ್ಲ.
ಗೀತೆ:
ಎದ್ದೇಳಿ
ಪ್ರಿಯತಮೆಯರೇ ಎದ್ದೇಳಿ...........
ಓಂ ಶಾಂತಿ.
ಮಕ್ಕಳು ಈ ಗೀತೆಯನ್ನು ಅನೇಕ ಬಾರಿ ಕೇಳಿರುತ್ತೀರಿ. ಪ್ರಿಯತಮನು ಪ್ರಿಯತಮೆಯರೊಂದಿಗೆ ಹೇಳುತ್ತಾರೆ
- ಅವರು ಶರೀರದಲ್ಲಿ ಬಂದಾಗ ಪ್ರಿಯತಮನೆಂದು ಹೇಳಲಾಗುತ್ತದೆ ಇಲ್ಲದಿದ್ದರೆ ಅವರು ತಂದೆ, ನೀವು
ಮಕ್ಕಳಾಗಿದ್ದೀರಿ. ನೀವೆಲ್ಲರೂ ಭಕ್ತಿನಿಯರಾಗಿದ್ದೀರಿ. ಭಗವಂತನನ್ನು ನೆನಪು ಮಾಡುತ್ತೀರಿ. ವಧುಗಳು
ವರನನ್ನು ನೆನಪು ಮಾಡುತ್ತೀರಿ. ಎಲ್ಲರ ಪ್ರಿಯತಮನು ವರನಾಗಿದ್ದಾರೆ, ಅವರೇ ಕುಳಿತು
ತಿಳಿಸಿಕೊಡುತ್ತಾರೆ, ಈಗ ಎದ್ದೇಳಿ ನವಯುಗವು ಬರುತ್ತಿದೆ. ನವಯುಗವೆಂದರೆ ಹೊಸ ಪ್ರಪಂಚ,
ಸತ್ಯಯುಗವಾಗಿದೆ. ಹಳೆಯ ಪ್ರಪಂಚವು ಕಲಿಯುಗವಾಗಿದೆ. ಈಗ ತಂದೆಯು ಬಂದಿದ್ದಾರೆ, ನಿಮ್ಮನ್ನು
ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ನಾನು ನಿಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತೇನೆಂದು
ಯಾವುದೇ ಮನುಷ್ಯರು ಹೇಳಲು ಸಾಧ್ಯವಿಲ್ಲ. ಸನ್ಯಾಸಿಗಳಂತೂ ಸ್ವರ್ಗ ಮತ್ತು ನರಕವನ್ನೇ
ತಿಳಿದುಕೊಂಡಿಲ್ಲ. ಹೇಗೆ ಅನ್ಯಧರ್ಮಗಳಿವೆಯೋ ಹಾಗೆಯೇ ಸನ್ಯಾಸಿಗಳದು ಒಂದು ಧರ್ಮವಾಗಿದೆ. ಅವರದು
ಆದಿಸನಾತನ ದೇವಿ-ದೇವತಾ ಧರ್ಮವಲ್ಲ. ಆದಿಸನಾತನ ದೇವಿ-ದೇವತಾಧರ್ಮವನ್ನು ಭಗವಂತನೇ ಬಂದು ಸ್ಥಾಪನೆ
ಮಾಡುತ್ತಾರೆ. ಯಾರು ನರಕವಾಸಿಗಳಾಗಿದ್ದಾರೆಯೋ ಅವರೇ ಮತ್ತೆ ಸತ್ಯಯುಗೀ ಸ್ವರ್ಗವಾಸಿಗಳಾಗುತ್ತಾರೆ.
ನೀವೀಗ ನರಕವಾಸಿಗಳಲ್ಲ, ನೀವು ಸಂಗಮಯುಗದಲ್ಲಿದ್ದೀರಿ. ಸಂಗಮವು ನಡುವಿನದಾಗಿರುತ್ತದೆ.
ಸಂಗಮಯುಗದಲ್ಲಿ ನೀವು ಸ್ವರ್ಗವಾಸಿಗಳಾಗುವ ಪುರುಷಾರ್ಥ ಮಾಡುತ್ತೀರಿ ಆದ್ದರಿಂದ ಸಂಗಮಯುಗದ
ಮಹಿಮೆಯಿದೆ. ವಾಸ್ತವದಲ್ಲಿ ಇದು ಸರ್ವೋತ್ತಮ ಕುಂಭಮೇಳವಾಗಿದೆ. ಇದನ್ನೇ ಪುರುಷೋತ್ತಮವೆಂದು
ಹೇಳಲಾಗುತ್ತದೆ. ನಿಮಗೆ ತಿಳಿದಿದೆ - ನಾವೆಲ್ಲರೂ ಒಬ್ಬ ತಂದೆಯ ಮಕ್ಕಳಾಗಿದ್ದೇವೆ, ಸಹೋದರತ್ವವೆಂದು
ಹೇಳುತ್ತಾರಲ್ಲವೆ. ಎಲ್ಲಾ ಆತ್ಮಗಳು ಪರಸ್ಪರ ಸಹೋದರರಾಗಿದ್ದಾರೆ. ಹಿಂದೂ-ಚೀನಿಯರು
ಸಹೋದರ-ಸಹೋದರರೆಂದು ಹೇಳುತ್ತಾರೆ, ಎಲ್ಲಾ ಧರ್ಮದ ಲೆಕ್ಕದಿಂದಂತೂ ಸಹೋದರ-ಸಹೋದರರಾಗಿದ್ದಾರೆ. ಈ
ಜ್ಞಾನವು ನಿಮಗೆ ಈಗ ಸಿಕ್ಕಿದೆ. ತಂದೆಯು ತಿಳಿಸುತ್ತಾರೆ - ನೀವು ನನ್ನ ಸಂತಾನರಾಗಿದ್ದೀರಿ,
ನೀವೀಗ ಸನ್ಮುಖದಲ್ಲಿ ಕೇಳುತ್ತೀರಿ. ಅವರಂತೂ ಕೇವಲ ನಾಮಮಾತ್ರಕ್ಕೆ ಹೇಳಿಬಿಡುತ್ತಾರೆ. ಎಲ್ಲಾ
ಆತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ. ಎಲ್ಲರೂ ಅವರೊಬ್ಬರನ್ನೇ ನೆನಪು ಮಾಡುತ್ತಾರೆ. ಸ್ತ್ರೀ ಹಾಗೂ
ಪುರುಷ ಇಬ್ಬರಲ್ಲಿಯೂ ಆತ್ಮವಿದೆ, ಈ ಲೆಕ್ಕದಿಂದ ಪರಸ್ಪರ ಸಹೋದರರಾಗಿದ್ದಾರೆ. ನಂತರ ಶರೀರದ
ಲೆಕ್ಕದಲ್ಲಿ ಸಹೋದರ-ಸಹೋದರಿ ಮತ್ತೆ ಸ್ತ್ರೀ-ಪುರುಷರಾಗಿಬಿಡುತ್ತಾರೆ ಆದ್ದರಿಂದ ತಂದೆಯು ಬಂದು
ಮಕ್ಕಳಿಗೆ ತಿಳಿಸುತ್ತಾರೆ - ಆತ್ಮಗಳು ಮತ್ತು ಪರಮಾತ್ಮನು ಬಹಳ ಕಾಲ ಅಗಲಿದ್ದರೆಂದು ಗಾಯನವಿದೆ.
ನದಿಗಳು ಮತ್ತು ಸಾಗರವು ಬಹಳಕಾಲ ಅಗಲಿದ್ದವೆಂದು ಹೇಳುವುದಿಲ್ಲ. ದೊಡ್ಡ-ದೊಡ್ಡ ನದಿಗಳಂತೂ
ಸಾಗರದೊಂದಿಗೆ ಸೇರಿರುತ್ತವೆ. ಇದನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ - ನದಿಯು ಸಾಗರನ
ಮಗುವಾಗಿದೆ, ಸಾಗರದಿಂದ ಹುಟ್ಟುತ್ತದೆ. ಮೋಡಗಳ ಮೂಲಕ ಮತ್ತೆ ಪರ್ವತಗಳ ಮೇಲೆ ಬೀಳುತ್ತದೆ, ಮತ್ತೆ
ನದಿಗಳಾಗಿ ಹರಿಯುತ್ತವೆ ಅಂದಾಗ ಎಲ್ಲರೂ ಸಾಗರನ ಮಕ್ಕಳಾಗಿದ್ದೀರಿ. ಅನೇಕರಿಗೆ ನೀರು ಎಲ್ಲಿಂದ
ಬರುತ್ತದೆ ಎಂಬುದೂ ಸಹ ತಿಳಿದಿಲ್ಲ, ಇದನ್ನು ಕಲಿಸಿಕೊಡಬೇಕಾಗುತ್ತದೆ. ಅಂದಾಗ ಈಗ ಮಕ್ಕಳು
ತಿಳಿದುಕೊಂಡಿದ್ದೀರಿ - ಜ್ಞಾನಸಾಗರನು ಒಬ್ಬರೇ ತಂದೆಯಾಗಿದ್ದಾರೆ. ನೀವೆಲ್ಲರೂ ಆತ್ಮಗಳಾಗಿದ್ದೀರಿ,
ತಂದೆಯು ಒಬ್ಬರೇ ಆಗಿದ್ದಾರೆ. ಆತ್ಮವೂ ನಿರಾಕಾರನಾಗಿದೆ, ನಂತರ ಸಾಕಾರದಲ್ಲಿ ಬಂದಾಗ
ಪುನರ್ಜನ್ಮವನ್ನು ತೆಗೆದುಕೊಳ್ಳುತ್ತೀರಿ. ತಂದೆಯೂ ಸಹ ಸಾಕಾರದಲ್ಲಿ ಬಂದು ಮಿಲನ ಮಾಡುತ್ತಾರೆ.
ತಂದೆಯ ಮಿಲನವು ಒಂದೇ ಬಾರಿ ಆಗುತ್ತದೆ. ಈ ಸಮಯದಲ್ಲಿ ಬಂದು ತಂದೆಯು ಎಲ್ಲರೊಂದಿಗೆ ಮಿಲನ
ಮಾಡಿದ್ದಾರೆ. ಇದನ್ನು ಸಹ ಅರಿತುಕೊಳ್ಳುತ್ತಾ ಹೋಗುತ್ತಾರೆ - ಭಗವಂತನಿದ್ದಾರೆ, ಗೀತೆಯಲ್ಲಿ
ಕೃಷ್ಣನ ಹೆಸರನ್ನು ಹಾಕಿದ್ದಾರೆ ಆದರೆ ಕೃಷ್ಣನಂತೂ ಇಲ್ಲಿ ಬರಲು ಸಾಧ್ಯವಿಲ್ಲ. ಕೃಷ್ಣನು ಹೇಗೆ
ನಿಂದನೆಯನ್ನು ಸಹಿಸುತ್ತಾನೆ? ಕೃಷ್ಣನ ಆತ್ಮವೂ ಈ ಸಮಯದಲ್ಲಿದೆ, ಮೊಟ್ಟಮೊದಲು ನಿಮಗೆ ಆತ್ಮದ
ಜ್ಞಾನವು ಸಿಗುತ್ತದೆ. ನೀವು ಆತ್ಮವಾಗಿದ್ದೀರಿ, ತಮ್ಮನ್ನು ಶರೀರವೆಂದು ತಿಳಿದು ಇಷ್ಟು ಸಮಯ
ನಡೆದಿದ್ದೀರಿ. ಈಗ ತಂದೆಯು ಬಂದು ಆತ್ಮಾಭಿಮಾನಿಯನ್ನಾಗಿ ಮಾಡುತ್ತಾರೆ. ಸಾಧು-ಸಂತ ಮೊದಲಾದವರು
ಎಂದೂ ನಿಮ್ಮನ್ನು ದೇಹೀ ಅಭಿಮಾನಿಯನ್ನಾಗಿ ಮಾಡುವುದಿಲ್ಲ. ನೀವು ಮಕ್ಕಳಾಗಿದ್ದೀರಿ. ನಿಮಗೆ
ಬೇಹದ್ದಿನ ತಂದೆಯಿಂದ ಆಸ್ತಿಯು ಸಿಗುತ್ತದೆ. ನಾವು ಪರಮಧಾಮದ ನಿವಾಸಿಗಳಾಗಿದ್ದೇವೆ, ಇಲ್ಲಿ
ಪಾತ್ರವನ್ನಭಿನಯಿಸಲು ಬಂದಿದ್ದೇವೆ. ಈಗ ಈ ನಾಟಕವು ಮುಕ್ತಾಯವಾಗುತ್ತದೆಯೆಂದು ನಿಮ್ಮ
ಬುದ್ಧಿಯಲ್ಲಿದೆ. ಈ ನಾಟಕವನ್ನು ಯಾರೂ ಮಾಡಲಿಲ್ಲ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಈ ನಾಟಕವು
ಯಾವಾಗಿನಿಂದ ಪ್ರಾರಂಭವಾಯಿತೆಂದು ಕೇಳುತ್ತಾರೆ ಆಗ ತಿಳಿಸಿ - ಇದು ಅನಾದಿ ನಾಟಕವಾಗಿದೆ. ಇದರ ಆದಿ
ಮತ್ತು ಅಂತ್ಯವಾಗುವುದಿಲ್ಲ, ಹಳೆಯದರಿಂದ ಹೊಸದು, ಹೊಸದರಿಂದ ಹಳೆಯದಾಗುತ್ತದೆ. ನೀವು ಮಕ್ಕಳಿಗೆ ಈ
ಪಾಠವು ಪಕ್ಕಾ ಆಗಿದೆ. ಹೊಸಪ್ರಪಂಚವು ಯಾವಾಗ ಆಗುತ್ತದೆ ಮತ್ತು ಯಾವಾಗ ಹಳೆಯದಾಗುತ್ತದೆ ಎಂಬುದನ್ನು
ನೀವು ತಿಳಿದುಕೊಂಡಿದ್ದೀರಿ. ಇದೂ ಸಹ ಕೆಲವರ ಬುದ್ಧಿಯಲ್ಲಿ ಪೂರ್ಣರೀತಿಯಲ್ಲಿರುತ್ತದೆ. ನೀವು
ತಿಳಿದುಕೊಂಡಿದ್ದೀರಿ - ಈಗ ನಾಟಕವು ಮುಕ್ತಾಯವಾಗಿ ಮತ್ತೆ ಪುನರಾವರ್ತನೆಯಾಗುವುದು, ಅವಶ್ಯವಾಗಿ
ನಮ್ಮ 84 ಜನ್ಮಗಳ ಪಾತ್ರವು ಮುಕ್ತಾಯವಾಯಿತು, ಈಗ ನಮ್ಮನ್ನು ಕರೆದುಕೊಂಡು ಹೋಗಲು ತಂದೆಯು
ಬಂದಿದ್ದಾರೆ. ತಂದೆಯು ಮಾರ್ಗದರ್ಶಕನೂ ಆಗಿದ್ದಾರಲ್ಲವೆ. ಮಾರ್ಗದರ್ಶಕರು ಯಾತ್ರಿಕರನ್ನು
ಕರೆದುಕೊಂಡು ಹೋಗುತ್ತಾರೆ. ಅವರು ಸ್ಥೂಲ ಮಾರ್ಗದರ್ಶಕರು, ನೀವು ಆತ್ಮಿಕ ಮಾರ್ಗದರ್ಶಕರಾಗಿದ್ದೀರಿ
ಆದ್ದರಿಂದ ಪಾಂಡವ ಸರ್ಕಾರವೆಂದು ನಿಮ್ಮ ಹೆಸರಿದೆ ಆದರೆ ಗುಪ್ತವಾಗಿದ್ದೀರಿ. ಪಾಂಡವರು, ಕೌರವರು,
ಯಾದವರು ಏನು ಮಾಡಿಹೋದರು, ಇದು ಈ ಸಮಯದ ಮಾತಾಗಿದೆ. ಈಗ ಮಹಾಭಾರತದ ಯುದ್ಧದ ಸಮಯವೂ ಆಗಿದೆ. ಅನೇಕ
ಧರ್ಮಗಳಿವೆ. ಪ್ರಪಂಚವೂ ತಮೋಪ್ರಧಾನವಾಗಿದೆ. ವಿಭಿನ್ನಧರ್ಮಗಳ ವೃಕ್ಷವು ಹಳೆಯದಾಗಿಬಿಟ್ಟಿದೆ. ಈ
ವೃಕ್ಷದ ಮೊಟ್ಟಮೊದಲ ಬುನಾದಿಯು ಆದಿಸನಾತನ ದೇವಿ-ದೇವತಾಧರ್ಮವಾಗಿದೆ. ಸತ್ಯಯುಗದಲ್ಲಿ ಕೆಲವರೇ
ಇರುತ್ತಾರೆ ನಂತರ ವೃದ್ಧಿಯಾಗುತ್ತದೆ. ಇದು ಯಾರಿಗೂ ತಿಳಿದಿಲ್ಲ, ನಿಮ್ಮಲ್ಲಿಯೂ ನಂಬರ್ವಾರ್
ಇದ್ದಾರೆ. ವಿದ್ಯಾರ್ಥಿಗಳಲ್ಲಿಯೂ ಕೆಲವರು ಬುದ್ಧಿವಂತರಿರುತ್ತಾರೆ, ಚೆನ್ನಾಗಿ ಧಾರಣೆ ಮಾಡುತ್ತಾರೆ
ಮತ್ತು ಅನ್ಯರಿಗೂ ಮಾಡಿಸುವ ಉತ್ಸಾಹವಿರುತ್ತದೆ. ಕೆಲವರು ಚೆನ್ನಾಗಿ ಧಾರಣೆ ಮಾಡುತ್ತಾರೆ, ಇನ್ನೂ
ಕೆಲವರು ಮಧ್ಯಮ, ಇನ್ನೂ ಕೆಲವರು ತೃತೀಯ ದರ್ಜೆಯಲ್ಲಿರುತ್ತಾರೆ. ಪ್ರದರ್ಶನಿಯಲ್ಲಂತೂ ಆಧುನಿಕ
ರೀತಿಯಲ್ಲಿ ತಿಳಿಸುವವರು ಬೇಕು. ಮೊಟ್ಟಮೊದಲಿಗೆ ತಿಳಿಸಿಕೊಡಿ - ಇಬ್ಬರು ತಂದೆಯರಿದ್ದಾರೆ, ಒಬ್ಬರು
ಬೇಹದ್ದಿನ ಪಾರಲೌಕಿಕ ತಂದೆ ಮತ್ತು ಇನ್ನೊಬ್ಬರು ಹದ್ದಿನ ಲೌಕಿಕ ತಂದೆಯಾಗಿದ್ದಾರೆ. ಭಾರತಕ್ಕೆ
ಬೇಹದ್ದಿನ ಆಸ್ತಿಯು ಸಿಕ್ಕಿತ್ತು, ಭಾರತವು ಸ್ವರ್ಗವಾಗಿತ್ತು. ಅದು ಈಗ ನರಕವಾಗಿದೆ. ಇದಕ್ಕೆ
ಆಸುರೀ ರಾಜ್ಯವೆಂದು ಹೇಳಲಾಗುತ್ತದೆ. ಭಕ್ತಿಯೂ ಸಹ ಮೊಟ್ಟಮೊದಲಿಗೆ ಅವ್ಯಭಿಚಾರಿಯಾಗಿರುತ್ತದೆ.
ಒಬ್ಬ ಶಿವತಂದೆಯನ್ನೇ ನೆನಪು ಮಾಡುತ್ತಾರೆ.
ತಂದೆಯು ತಿಳಿಸುತ್ತಾರೆ
- ಮಕ್ಕಳೇ, ಪುರುಷೋತ್ತಮರಾಗಬೇಕೆಂದರೆ ಕನಿಷ್ಟರನ್ನಾಗಿ ಮಾಡುವ ಮಾತುಗಳನ್ನು ಕೇಳಬೇಡಿ. ಒಬ್ಬ
ತಂದೆಯಿಂದಲೇ ಕೇಳಿ. ಅವ್ಯಭಿಚಾರಿ ಜ್ಞಾನವನ್ನು ಕೇಳಿ. ಅನ್ಯರಿಂದ ಏನನ್ನು ಕೇಳುವಿರೋ ಅದು
ಅಸತ್ಯವಾಗಿದೆ, ತಂದೆಯು ಈಗ ನಿಮಗೆ ಸತ್ಯವನ್ನು ತಿಳಿಸಿ ಪುರುಷೋತ್ತಮರನ್ನಾಗಿ ಮಾಡುತ್ತಾರೆ. ನೀವು
ಕೆಟ್ಟಮಾತುಗಳನ್ನು ಕೇಳುತ್ತಾ-ಕೇಳುತ್ತಾ ಕನಿಷ್ಟರಾಗಿಬಿಟ್ಟಿದ್ದೀರಿ. ಬಹ್ಮನ ದಿನವು
ಪ್ರಕಾಶವಾಗಿದೆ, ಬಹ್ಮನ ರಾತ್ರಿಯು ಅಂಧಕಾರವಾಗಿದೆ. ಇವೆಲ್ಲಾ ಮಾತುಗಳನ್ನು ಧಾರಣೆ ಮಾಡಬೇಕಾಗಿದೆ.
ಪ್ರತಿಯೊಂದು ಮಾತಿನಲ್ಲಿ ನಂಬರ್ವಾರ್ ಇದ್ದೇ ಇರುತ್ತಾರೆ. ವೈದ್ಯರಲ್ಲಿ ಕೆಲವರು ಒಂದು
ಆಪರೇಷನ್ನಿಗೆ 10-20 ಸಾವಿರ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ, ಇನ್ನೂ ಕೆಲವರಿಗೆ
ತಿನ್ನುವುದಕ್ಕೂ ಇರುವುದಿಲ್ಲ. ವಕೀಲರಲ್ಲಿಯೂ ಇದೇ ರೀತಿಯಲ್ಲಿರುತ್ತಾರೆ. ನೀವೂ ಸಹ ಎಷ್ಟು
ಓದುತ್ತೀರಿ ಮತ್ತು ಓದಿಸುತ್ತೀರೋ ಅಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತೀರಿ, ಅಂತರವಂತೂ
ಇದೆಯಲ್ಲವೆ. ದಾಸ-ದಾಸಿಯರಲ್ಲಿಯೂ ನಂಬರ್ವಾರ್ ಇರುತ್ತಾರೆ. ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ.
ತಮ್ಮೊಂದಿಗೆ ಕೇಳಿಕೊಳಬೇಕು - ನಾವೆಷ್ಟು ಓದುತ್ತೇವೆ ಭವಿಷ್ಯದಲ್ಲಿ ಜನ್ಮ-ಜನ್ಮಾಂತರ ಏನು
ಪದವಿಯನ್ನು ಪಡೆಯುತ್ತೇವೆ? ಯಾರು ಜನ್ಮ-ಜನ್ಮಾಂತರ ಏನಾಗುವರೋ, ಕಲ್ಪ-ಕಲ್ಪಾಂತರವೂ ಅದೇ ಆಗುತ್ತಾರೆ.
ಆದ್ದರಿಂದ ವಿದ್ಯೆಯ ಮೇಲೆ ಪೂರ್ಣಗಮನವನ್ನಿಡಬೇಕು. ವಿಷ ಕುಡಿಯುವುದನ್ನು ಒಮ್ಮೆಲೆ
ಬಿಟ್ಟುಬಿಡಬೇಕಾಗಿದೆ. ಕೊಳಕಾದ ವಸ್ತ್ರಗಳನ್ನು ಒಗೆದರು ಎಂದು ಸತ್ಯಯುಗದಲ್ಲಿ ಹೇಳುವುದಿಲ್ಲ. ಈ
ಸಮಯದಲ್ಲಿ ಎಲ್ಲರ ವಸ್ತ್ರಗಳು ಹರಿದುಹೋಗಿದೆ, ತಮೋಪ್ರಧಾನರಾಗಿದ್ದಾರಲ್ಲವೆ. ಇದು ಸಹ
ತಿಳಿಸಿಕೊಡುವ ಮಾತುಗಳಾಗಿವೆ. ಎಲ್ಲರಿಗಿಂತ ಹಳೆಯ ವಸ್ತ್ರವು ಯಾರಾದಾಗಿದೆ? ನಮ್ಮದು. ನಾವು ಈ
ಶರೀರವನ್ನು ಬದಲಾಯಿಸುತ್ತಾ ಇರುತ್ತೇವೆ, ಆತ್ಮವು ಪತಿತವಾಗುತ್ತಾ ಹೋಗುತ್ತದೆ. ಶರೀರವು ಹಳೆಯ
ಮತ್ತು ಪತಿತವಾಗುತ್ತಾ ಹೋಗುತ್ತದೆ. ಶರೀರವನ್ನು ಬದಲಾಯಿಸಲಾಗುತ್ತದೆ. ಆತ್ಮವಂತೂ ಬದಲಾಗುವುದಿಲ್ಲ,
ಶರೀರವು ವೃದ್ಧಾವಸ್ಥೆಗೆ ಬಂದಿತೆಂದರೆ ಮೃತ್ಯುವಾಗುತ್ತದೆ. ಇದು ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ.
ಎಲ್ಲರದೂ ಪಾತ್ರವಿದೆ. ಆತ್ಮವು ಅವಿನಾಶಿಯಾಗಿದೆ. ನಾನು ಶರೀರವನ್ನು ಬಿಡುತ್ತೇನೆಂದು ಆತ್ಮವು
ಹೇಳುತ್ತದೆ. ಈಗ ದೇಹೀ ಅಭಿಮಾನಿಗಳಾಗಬೇಕಾಗಿದೆ. ಮನುಷ್ಯರೆಲ್ಲರೂ ದೇಹಾಭಿಮಾನಿಗಳಾಗಿದ್ದಾರೆ.
ಅರ್ಧಕಲ್ಪ ದೇಹಾಭಿಮಾನಿಗಳು, ಅರ್ಧಕಲ್ಪ ದೇಹೀ ಅಭಿಮಾನಿಗಳಾಗಿರುತ್ತಾರೆ.
ದೇಹೀ-ಅಭಿಮಾನಿಗಳಾಗಿರುವ
ಕಾರಣವೇ ಸತ್ಯಯುಗೀ ದೇವತೆಗಳಿಗೆ ಮೋಹಜೀತರೆಂಬ ಬಿರುದು ಸಿಕ್ಕಿದೆ ಏಕೆಂದರೆ ಅಲ್ಲಿ
ನಾವಾತ್ಮಗಳಾಗಿದ್ದೇವೆ, ಈಗ ಈ ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕೆಂದು
ತಿಳಿಯುತ್ತಾರೆ, ಮೋಹಜೀತರಾಜನ ಕಥೆಯೂ ಇದೆಯಲ್ಲವೆ. ತಂದೆಯು ತಿಳಿಸುತ್ತಾರೆ - ದೇವಿ-ದೇವತೆಗಳು
ಮೋಹಜೀತರಾಗಿರುತ್ತಾರೆ, ಖುಷಿ-ಖುಷಿಯಿಂದ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು
ತೆಗೆದುಕೊಳ್ಳಬೇಕಾಗಿದೆ. ಮಕ್ಕಳಿಗೆ ಸಂಪೂರ್ಣ ಜ್ಞಾನವು ತಂದೆಯಿಂದ ಸಿಗುತ್ತಿದೆ. ನೀವೇ ಚಕ್ರವನ್ನು
ಸುತ್ತಿ ಈಗ ಪುನಃ ಬಂದು ಮಿಲನ ಮಾಡಿದ್ದೀರಿ. ಯಾರು ಅನ್ಯಧರ್ಮಗಳಲ್ಲಿ ಮತಾಂತರಗೊಂಡಿದ್ದಾರೆಯೋ,
ಅವರು ಸಹ ಬಂದು ಸೇರುತ್ತಾರೆ. ತಮ್ಮ ಅಲ್ಪಸ್ವಲ್ಪ ಆಸ್ತಿಯನ್ನು ಪಡೆಯುತ್ತಾರೆ, ಅವರ ಧರ್ಮವೇ
ಬದಲಾಯಿತಲ್ಲವೆ. ಎಷ್ಟು ಸಮಯದಿಂದ ಆ ಧರ್ಮದಲ್ಲಿದ್ದಾರೆಯೋ ಗೊತ್ತಿಲ್ಲ, 2-3 ಜನ್ಮಗಳನ್ನು
ತೆಗೆದುಕೊಳ್ಳಬಹುದು. ಯಾರನ್ನಾದರೂ ಹಿಂದೂಗಳಿಂದ ಮುಸಲ್ಮಾನರನ್ನಾಗಿ ಮಾಡಿದರೆ ಅವರು ಆ
ಧರ್ಮದಲ್ಲಿದ್ದು ಪುನಃ ಇಲ್ಲಿಗೆ ಬರುತ್ತಾರೆ, ಇವೂ ಸಹ ವಿಸ್ತಾರವಾದ ಮಾತುಗಳಾಗಿವೆ. ತಂದೆಯು
ತಿಳಿಸುತ್ತಾರೆ - ಇಷ್ಟೊಂದು ಮಾತುಗಳನ್ನು ನೆನಪಿಟ್ಟುಕೊಳ್ಳದಿದ್ದರೆ ತಮ್ಮನ್ನು ತಂದೆಯ
ಮಗುವೆಂದಾದರೂ ತಿಳಿದುಕೊಳ್ಳಿ, ಒಳ್ಳೊಳ್ಳೆಯ ಮಕ್ಕಳೂ ಸಹ ಮರೆತುಹೋಗುತ್ತಾರೆ, ತಂದೆಯನ್ನು ನೆನಪೇ
ಮಾಡುವುದಿಲ್ಲ. ಇದರಲ್ಲಿ ಮಾಯೆಯು ಮರೆಸುತ್ತದೆ. ನೀವು ಸಹ ಮೊದಲು ಮಾಯೆಗೆ ಶಿಷ್ಯ
ರಾಗಿದ್ದರಲ್ಲವೆ(ಅಧೀನ) . ಈಗ ಈಶ್ವರನ ಶಿಷ್ಯರಾಗುತ್ತೀರಿ. ಅದು ನಾಟಕದಲ್ಲಿ ಪಾತ್ರವಿದೆ.
ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ನೀವಾತ್ಮಗಳು ಮೊಟ್ಟಮೊದಲಿಗೆ
ಶರೀರದಲ್ಲಿ ಬಂದಾಗ ಪವಿತ್ರರಾಗಿದ್ದಿರಿ, ಮತ್ತೆ ಪುನರ್ಜನ್ಮವನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತರಾಗಿದ್ದೀರಿ. ಈಗ ಪುನಃ ತಂದೆಯು ತಿಳಿಸುತ್ತಾರೆ -
ನಷ್ಟಮೋಹಿಗಳಾಗಿ, ಈ ಶರೀರದಲ್ಲಿಯೂ ಮೋಹವನ್ನಿಡಬೇಡಿ.
ಈಗ ನೀವು ಮಕ್ಕಳಿಗೆ ಈ
ಹಳೆಯ ಪ್ರಪಂಚದಿಂದ ಬೇಹದ್ದಿನ ವೈರಾಗ್ಯವು ಬರುತ್ತದೆ ಏಕೆಂದರೆ ಈ ಪ್ರಪಂಚದಲ್ಲಿ ಎಲ್ಲರೂ ಪರಸ್ಪರ
ದುಃಖವನ್ನು ಕೊಡುವವರಾಗಿದ್ದಾರೆ ಆದ್ದರಿಂದ ಈ ಪ್ರಪಂಚವನ್ನೇ ಮರೆತುಹೋಗಿ, ನಾವು ಅಶರೀರಿಯಾಗಿ
ಬಂದಿದ್ದೆವು, ಈಗ ಅಶರೀರಿಯಾಗಿ ಹಿಂತಿರುಗಿ ಹೋಗಬೇಕಾಗಿದೆ. ಈಗ ಈ ಪ್ರಪಂಚವೇ ಸಮಾಪ್ತಿಯಾಗಲಿದೆ.
ತಮೋಪ್ರಧಾನರಿಂದ ಸತೋಪ್ರಧಾನರಾಗಲು ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ಈ
ಮಾತನ್ನು ಕೃಷ್ಣನು ಹೇಳಲು ಸಾಧ್ಯವಿಲ್ಲ. ಕೃಷ್ಣನು ಸತ್ಯಯುಗದಲ್ಲಿರುತ್ತಾನೆ. ತಂದೆಯೇ
ತಿಳಿಸುತ್ತಾರೆ - ನನ್ನನ್ನು ನೀವು ಪತಿತ-ಪಾವನನೆಂದು ಹೇಳುತ್ತೀರಿ. ಅಂದಮೇಲೆ ಈಗ ನನ್ನನ್ನು ನೆನಪು
ಮಾಡಿ, ನಾನು ಪಾವನರಾಗುವ ಯುಕ್ತಿಯನ್ನು ತಿಳಿಸುತ್ತೇನೆ. ಕಲ್ಪ-ಕಲ್ಪದ ಯುಕ್ತಿಯನ್ನು
ತಿಳಿಸುತ್ತೇನೆ, ಯಾವಾಗ ಹಳೆಯ ಪ್ರಪಂಚವಾಗುತ್ತದೆಯೋ ಆಗ ಭಗವಂತನೇ ಬರಬೇಕಾಗುತ್ತದೆ. ಮನುಷ್ಯರು
ಡ್ರಾಮದ ಆಯಸ್ಸನ್ನು ಬಹಳ ಧೀರ್ಘ ಮಾಡಿಬಿಟ್ಟಿದ್ದಾರೆ. ಆದ್ದರಿಂದ ಮನುಷ್ಯರು ಸಂಪೂರ್ಣವಾಗಿ
ಮರೆತುಹೋಗಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ - ಇದು ಸಂಗಮಯುಗವಾಗಿದೆ, ಇದು
ಪುರುಷೋತ್ತಮರಾಗುವ ಯುಗವಾಗಿದೆ. ಮನುಷ್ಯರಂತೂ ಸಂಪೂರ್ಣ ಘೋರ ಅಂಧಕಾರದಲ್ಲಿ ಬಿದ್ದಿದ್ದಾರೆ. ಈ
ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ನೀವೀಗ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ.
ನೀವೇ ಎಲ್ಲರಿಗಿಂತ ಹೆಚ್ಚಿನ ಭಕ್ತಿಯನ್ನು ಮಾಡಿದ್ದೀರಿ. ಈಗ ಭಕ್ತಿಮಾರ್ಗವು ಸಮಾಪ್ತಿಯಾಗುತ್ತದೆ.
ಮೃತ್ಯುಲೋಕದಲ್ಲಿ ಭಕ್ತಿಯಿದೆ ನಂತರ ಅಮರಲೋಕವು ಬರುತ್ತದೆ. ನೀವು ಈ ಸಮಯದಲ್ಲಿಯೇ ಜ್ಞಾನವನ್ನು
ಪಡೆಯುತ್ತೀರಿ, ಇದರ ನಂತರ ಭಕ್ತಿಯ ಹೆಸರು, ಗುರುತೂ ಇರುವುದಿಲ್ಲ. ಹೇ ಭಗವಂತ, ಹೇ ರಾಮ -
ಇವೆಲ್ಲವೂ ಭಕ್ತಿಯ ಶಬ್ಧಗಳಾಗಿವೆ. ಇಲ್ಲಿ ಯಾವುದೇ ಶಬ್ಧವನ್ನು ಮಾಡುವಂತಿಲ್ಲ. ತಂದೆಯು
ಜ್ಞಾನಸಾಗರನಾಗಿದ್ದಾರೆ, ಅಂದಮೇಲೆ ಶಬ್ಧ ಮಾಡುತ್ತಾರೆಯೇ ? ಅವರಿಗೆ ಸುಖ-ಶಾಂತಿಯ ಸಾಗರನೆಂದು
ಹೇಳಲಾಗುತ್ತದೆ ಅಂದಮೇಲೆ ತಿಳಿಸುವುದಕ್ಕೆ ಶರೀರವು ಬೇಕಲ್ಲವೆ. ಭಗವಂತನ ಭಾಷೆ ಯಾವುದೆಂಬುದನ್ನು
ಯಾರೂ ತಿಳಿದುಕೊಂಡಿಲ್ಲ. ತಂದೆಯು ಎಲ್ಲಾ ಭಾಷೆಗಳಲ್ಲಿ ಮಾತನಾಡುತ್ತಾರೆಂದಲ್ಲ, ಅವರ ಭಾಷೆಯೇ
ಹಿಂದಿಯಾಗಿದೆ. ತಂದೆಯು ಒಂದೇ ಭಾಷೆಯಲ್ಲಿ ತಿಳಿಸಿಕೊಡುತ್ತಾರೆ ನಂತರ ನೀವು ಅದನ್ನು ಅನುವಾದ ಮಾಡಿ
ತಿಳಿಸಿಕೊಡುತ್ತೀರಿ. ವಿದೇಶೀ ಮೊದಲಾದವರು ಯಾರೇ ಭೇಟಿ ಆದರೂ ಅವರಿಗೆ ತಂದೆಯ ಪರಿಚಯವನ್ನು
ಕೊಡಬೇಕಾಗಿದೆ. ತಂದೆಯು ಆದಿಸನಾತನ ದೇವಿದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದಾರೆ. ತ್ರಿಮೂರ್ತಿ
ಚಿತ್ರದ ಕುರಿತು ತಿಳಿಸಬೇಕು - ಪ್ರಜಾಪಿತ ಬ್ರಹ್ಮಾನಿಗೆ ಎಷ್ಟೊಂದು
ಬ್ರಹ್ಮಾಕುಮಾರ-ಕುಮಾರಿಯರಿದ್ದೀರಿ, ಯಾರೇ ಬಂದರೂ ಮೊದಲು ಅವರನ್ನು ಕೇಳಿ, ಯಾರ ಬಳಿ ಬಂದಿದ್ದೀರಿ?
ಬೋರ್ಡ ಅಂತೂ ಹಾಕಲಾಗಿದೆ. ಪ್ರಜಾಪಿತನೆಂದರೆ ಅವರು ರಚಿಸುವವರಾದರು ಆದರೆ ಅವರಿಗೆ ಭಗವಂತನೆಂದು
ಹೇಳಲು ಸಾಧ್ಯವಿಲ್ಲ. ನಿರಕಾರನಿಗೇ ಭಗವಂತನೆಂದು ಕರೆಯಲಾಗುವುದು. ಇವರು ಬ್ರಹ್ಮಾಕುಮಾರ-ಕುಮಾರಿಯರು
ಬ್ರಹ್ಮನ ಸಂತಾನರಾಗಿದ್ದಾರೆ. ತಾವಿಲ್ಲಿ ಏತಕ್ಕಾಗಿ ಬಂದಿದ್ದೀರಿ? ನಮ್ಮ ತಂದೆಯೊಂದಿಗೆ ನಿಮಗೆ
ಕೆಲಸವೇನಿದೆ? ತಂದೆಯೊಂದಿಗೆ ಮಕ್ಕಳಿಗೇ ಕೆಲಸವಿರುತ್ತದೆಯಲ್ಲವೆ. ನಾವು ತಂದೆಯನ್ನು ಬಹಳ ಚೆನ್ನಾಗಿ
ಅರಿತುಕೊಂಡಿದ್ದೇವೆ. ಸನ್ ಶೋಸ್ ಫಾದರ್ ಎಂದು ಗಾಯನವಿದೆ. ನಾವು ಅವರ ಮಕ್ಕಳಾಗಿದ್ದೇವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಪುರುಷೋತ್ತಮರಾಗಲು ಕನಿಷ್ಟರನ್ನಾಗಿ ಮಾಡುವಂತಹ ಕೆಟ್ಟಮಾತುಗಳನ್ನು ಕೇಳಬಾರದು. ಒಬ್ಬ ತಂದೆಯಿಂದಲೇ
ಅವ್ಯಭಿಚಾರಿ ಜ್ಞಾನವನ್ನು ಕೇಳಬೇಕಾಗಿದೆ.
2. ನಷ್ಟಮೋಹಿಗಳಾಗಲು
ದೇಹೀ ಅಭಿಮಾನಿಯಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಬುದ್ಧಿಯಲ್ಲಿರಲಿ - ಈ ಹಳೆಯ ಪ್ರಪಂಚವು
ದುಃಖ ಕೊಡುವಂತಹ ಪ್ರಪಂಚವಾಗಿದೆ, ಇದನ್ನು ಮರೆಯಬೇಕಾಗಿದೆ. ಇದರೊಂದಿಗೆ ಬೇಹದ್ದಿನ ವೈರಾಗ್ಯವಿರಲಿ.
ವರದಾನ:
ಸಂಗಮಯುಗದ
ಸರ್ವಪ್ರಾಪ್ತಿಗಳನ್ನು ಸ್ಮೃತಿಯಲ್ಲಿಟ್ಟುಕೊಂಡು ಏರುವ ಕಲೆಯ ಅನುಭವ ಮಾಡುವಂತಹ ಶ್ರೇಷ್ಠಪ್ರಾಲಭ್ಧ
ಭವ.
ಪರಮಾತ್ಮ ಮಿಲನ ಅಥವಾ
ಪರಮಾತ್ಮ ಜ್ಞಾನದ ವಿಶೇಷತೆಯಾಗಿದೆ- ಅವಿನಾಶಿ ಪ್ರಾಪ್ತಿಗಳಾಗುವುದು. ಸಂಗಮಯುಗವು ಪುರುಷಾರ್ಥಿ
ಜೀವನವಾಗಿದೆ ಮತ್ತು ಸತ್ಯಯುಗೀ ಪ್ರಾಲಬ್ಧ ಜೀವನವಾಗಿದೆ ಎನ್ನುವಂತಲ್ಲ. ಸಂಗಮಯುಗದ ವಿಶೇಷತೆಯಾಗಿದೆ-
ಒಂದು ಹೆಜ್ಜೆಯನ್ನಿಡಿ ಮತ್ತು ಸಾವಿರಹಜ್ಜೆಯಷ್ಟು ಪ್ರಾಲಬ್ಧವನ್ನು ಪಡೆಯಿರಿ. ಅಂದಮೇಲೆ ಕೇವಲ
ಪುರುಷಾರ್ಥಿ ಅಲ್ಲ ಆದರೆ ಶ್ರೇಷ್ಟ ಪ್ರಾಲಬ್ಧಿಯಾಗಿದ್ದೇವೆ- ಸದಾ ಈ ಸ್ವರೂಪವನ್ನು
ಮುಂದಿಟ್ಟುಕೊಳ್ಳಿರಿ. ಪ್ರಾಲಬ್ಧವನ್ನು ನೋಡುತ್ತಾ ಸಹಜವಾಗಿಯೇ ಏರುವಕಲೆಯ ಅನುಭ ಮಾಡುತ್ತೀರಿ.
“ಏನನ್ನು ಪಡೆಯಬೇಕಿತ್ತು ಅದನ್ನು ಪಡೆದುಬಿಟ್ಟೆನು” ಈ ಗೀತೆಯನ್ನು ಹಾಡುತ್ತೀರೆಂದರೆ
ಗುಟುಕರಿಸುವುದು ಮತ್ತು ತೂಕಡಿಸುವುದರಿಂದ ಪಾರಾಗಿಬಿಡುತ್ತೀರಿ.
ಸ್ಲೋಗನ್:
ಬ್ರಾಹ್ಮಣರ
ಶ್ವಾಸವು ಸಾಹಸವಾಗಿದೆ, ಅದರಿಂದ ಅತೀ ಕಠಿಣವಾದ ಕಾರ್ಯವೂ ಸಹಜವಾಗಿಬಿಡುತ್ತದೆ.
ಅವ್ಯಕ್ತ ಸೂಚನೆ:
ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ
ಹೇಗೆ ಬ್ರಹ್ಮಾ
ತಂದೆಯನ್ನು ನೋಡಿದಿರಿ ತಂದೆಯ ಜೊತೆ ಸ್ವಯಂನ್ನು ಸದಾ ಕಂಬೈಂಡ್ ರೂಪದಲ್ಲಿ ಅನುಭವ ಮಾಡಿದರು ಮತ್ತು
ಮಾಡಿಸಿದರು. ಈ ಕಂಬೈಂಡ್ ಸ್ವರೂಪವನ್ನು ಯಾರು ಬೇರೆ ಮಾಡಲು ಸಾಧ್ಯವಿಲ್ಲ. ಇಂತಹ ಸುಪುತ್ರ ಮಕ್ಕಳು
ಸದಾ ತಮ್ಮನ್ನು ತಂದೆಯ ಜೊತೆ ಕಂಬೈಂಡ್ ಅನುಭವ ಮಾಡುತ್ತಾರೆ. ಅವರನ್ನು ಬೇರ್ಪಡಿಸುವಂತಹ ಯಾವುದೇ
ಶಕ್ತಿಯಿಲ್ಲ.