08.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ತಂದೆಯ ಸಮಾನ ಅಪಕಾರಿಗೂ ಉಪಕಾರ ಮಾಡುವುದನ್ನು ಕಲಿಯಿರಿ, ನಿಂದಕರನ್ನೂ ತಮ್ಮ ಮಿತ್ರರನ್ನಾಗಿ ಮಾಡಿಕೊಳ್ಳಿ”

ಪ್ರಶ್ನೆ:
ತಂದೆಗೆ ಯಾವ ದೃಷ್ಟಿಯು ಪಕ್ಕಾ ಆಗಿದೆ? ನೀವು ಮಕ್ಕಳು ಯಾವುದನ್ನು ಪಕ್ಕಾ ಮಾಡಿಕೊಳ್ಳಬೇಕು?

ಉತ್ತರ:
ತಂದೆಗೆ ಈ ದೃಷ್ಟಿಯು ಪಕ್ಕಾ ಆಗಿದೆ- ಎಲ್ಲಾ ಆತ್ಮಗಳು ನನ್ನ ಮಕ್ಕಳಾಗಿದ್ದಾರೆ. ಆದ್ದರಿಂದ ಮಕ್ಕಳೇ ಮಕ್ಕಳೇ ಎಂದು ಹೇಳುತ್ತಿರುತ್ತಾರೆ. ನೀವು ಎಂದೂ ಯಾರನ್ನೂ ಮಕ್ಕಳೇ ಮಕ್ಕಳೇ ಎಂದು ಹೇಳಲು ಸಾಧ್ಯವಿಲ್ಲ. ನೀವು ಈ ದೃಷ್ಟಿಯನ್ನು ಪಕ್ಕಾ ಮಾಡಿಕೊಳ್ಳಬೇಕು - ಈ ಆತ್ಮವು ನನ್ನ ಸಹೋದರನಾಗಿದೆ. ಸಹೋದರನೆಂದು ನೋಡಿ, ಸಹೋದರನೊಂದಿಗೆ ಮಾತನಾಡಿ ಆತ್ಮಿಕ ಪೀತಿಯಿರುತ್ತದೆ. ಕೆಟ್ಟ ಸಂಕಲ್ಪಗಳು ಸಮಾಪ್ತಿಯಾಗುತ್ತವೆ. ನಿಂದನೆ ಮಾಡುವವರೂ ಮಿತ್ರರಾಗಿಬಿಡುತ್ತಾರೆ.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ತಿಳಿಸಿ ಕೊಡುತ್ತಾರೆ. ಆತ್ಮಿಕ ತಂದೆಯ ಹೆಸರೇನು? ಅವಶ್ಯವಾಗಿ ಹೇಳುತ್ತೀರಿ - ಶಿವ ಎಂದು. ಅವರು ಎಲ್ಲರ ತಂದೆಯಾಗಿದ್ದಾರೆ, ಅವರನ್ನೇ ಭಗವಂತನೆಂದು ಹೇಳಲಾಗುತ್ತದೆ, ನೀವು ಮಕ್ಕಳಲ್ಲಿಯೂ ನಂಬರವಾರ ಪುರುಷಾರ್ಥಾನುಸಾರ ತಿಳಿದುಕೊಂಡಿದ್ದೀರಿ. ಅವರು ಆಕಾಶವಾಣಿಯೆಂದು ಹೇಳುತ್ತಾರೆ ಆದರೆ ವಾಸ್ತವಿಕವಾಗಿ ಆಕಾಶವಾಣಿಯು ಯಾರಿಂದ ಬರುತ್ತದೆ? ಶಿವತಂದೆಯಿಂದ. ಈ ಮುಖವನ್ನು (ಬ್ರಹ್ಮಾರವರ) ಆಕಾಶ ತತ್ವವೆಂದು ಹೇಳಲಾಗುತ್ತದೆ. ಆಕಾಶ ತತ್ವದಿಂದ ವಾಣಿಯು ಎಲ್ಲಾ ಮನುಷ್ಯರಿಗೂ ಬರುತ್ತದೆ. ಯಾರೆಲ್ಲಾ ಆತ್ಮಗಳಿದ್ದಾರೆಯೋ ಎಲ್ಲರೂ ತಮ್ಮ ತಂದೆಯನ್ನು ಮರೆತುಹೋಗಿದ್ದಾರೆ. ಅನೇಕ ಪ್ರಕಾರದ ಗಾಯನ ಮಾಡುತ್ತಾರೆ. ಏನನ್ನೂ ಅರಿತುಕೊಂಡಿಲ್ಲ. ಗಾಯನವೂ ಇಲ್ಲಿಯೇ ಮಾಡುತ್ತಾರೆ. ಸುಖದಲ್ಲಿ ಯಾರೂ ತಂದೆಯನ್ನು ನೆನಪು ಮಾಡುವುದಿಲ್ಲ. ಎಲ್ಲಾ ಕಾಮನೆಗಳು ಅಲ್ಲಿ ಪೂರ್ಣವಾಗಿಬಿಡುತ್ತವೆ. ಆದರೆ ಇಲ್ಲಂತೂ ಬಹಳ ಕಾಮನೆಗಳಿವೆ. ಮಳೆಯಿಲ್ಲದಿದ್ದರೆ ಯಜ್ಞ ರಚಿಸುತ್ತಾರೆ. ಸದಾ ಯಜ್ಞ ಮಾಡುವುದರಿಂದ ಮಳೆಯಾಗುತ್ತದೆ ಎಂದಲ್ಲ. ಎಲ್ಲಿಯಾದರೂ ಬರಗಾಲ ಉಂಟಾದರೆ ಭಲೇ ಯಜ್ಞವನ್ನು ರಚಿಸುತ್ತಾರೆ. ಆದರೆ ಯಜ್ಞ ಮಾಡುವುದರಿಂದ ಏನೂ ಆಗುವುದಿಲ್ಲ. ಇದಂತೂ ನಾಟಕವಾಗಿದೆ. ಯಾವ ಅಪತ್ತು ಬರಬೇಕಾಗಿದೆಯೋ ಅವಂತೂ ಬರಲೇಬೇಕಾಗಿದೆ. ಎಷ್ಟೊಂದು ಮನುಷ್ಯರು ಸಾಯುತ್ತಾರೆ, ಎಷ್ಟೊಂದು ಪ್ರಾಣಿ ಮೊದಲಾದವುಗಳು ಸಾಯುತ್ತಿರುತ್ತವೆ. ಮನುಷ್ಯರು ಎಷ್ಟೊಂದು ದುಃಖಿಯಾಗಿದ್ದಾರೆ. ಅಂದಮೇಲೆ ಮಳೆಯು ಹೆಚ್ಚಾದಾಗ ಮಳೆ ನಿಲ್ಲಿಸುವುದಕ್ಕೂ ಯಜ್ಞವಿದೆಯೇ? ಯಾವಾಗ ಧಾರಾಕಾರ ಮಳೆ ಸುರಿಯುವುದೋ ಆಗ ಯಜ್ಞ ಮಾಡುತ್ತಾರೆಯೇ, ಇವೆಲ್ಲಾ ಮಾತುಗಳನ್ನು ನೀವು ತಿಳಿದುಕೊಳ್ಳುತ್ತೀರಿ ಮತ್ತ್ಯಾರಿಗೆ ಗೊತ್ತಿದೆ?

ತಂದೆಯು ಸ್ವತಃ ಕುಳಿತು ತಿಳಿಸುತ್ತಾರೆ- ಮನುಷ್ಯರು ತಂದೆಯ ಮಹಿಮೆಯನ್ನೂ ಮಾಡುತ್ತಾರೆ ಮತ್ತು ನಿಂದನೆಯೂ ಮಾಡುತ್ತಾರೆ. ಆಶ್ಚರ್ಯವೆಂದರೆ ತಂದೆಯ ನಿಂದನೆಯು ಯಾವಾಗಿನಿಂದ ಪ್ರಾರಂಭವಾಯಿತು, ಯಾವಾಗಿನಿಂದ ರಾವಣ ರಾಜ್ಯವು ಪ್ರಾರಂಭವಾಗಿದೆಯೋ ಆಗಿನಿಂದ ಈಶ್ವರನನ್ನು ಸರ್ವವ್ಯಾಪಿ ಎಂದು ಹೇಳಿರುವುದೇ ಮುಖ್ಯವಾದ ನಿಂದನೆಯಾಗಿದೆ, ಇದರಿಂದಲೇ ಕೆಳಗೆ ಬಿದ್ದಿದ್ದಾರೆ. ಯಾರು ನಮ್ಮನ್ನು ನಿಂದನೆ ಮಾಡುವವರೋ ಅವರೇ ನಮ್ಮ ಸತ್ಯ ಮಿತ್ರರೆಂದು ಗಾಯನವಿದೆ. ಈಗ ಎಲ್ಲದಕ್ಕಿಂತ ಹೆಚ್ಚಿನ ನಿಂದನೆ ಯಾರು ಮಾಡಿದ್ದಾರೆ? ನೀವು ಮಕ್ಕಳು. ಈಗ ಮತ್ತೆ ನೀವೇ ಮಿತ್ರರಾಗಿದ್ದೀರಿ. ಹಾಗೆ ಹೇಳುವದಾದರೆ ಇಡೀ ಪ್ರಪಂಚವೇ ನಿಂದನೆ ಮಾಡುತ್ತದೆ, ಅದರಲ್ಲಿಯೂ ಮೊದಲನೆಯವರು ನೀವಾಗಿದ್ದಿರಿ. ನೀವು ಮಕ್ಕಳೇ ನನ್ನ ನಿಂದನೆ ಮಾಡಿದ್ದೀರಿ. ನೀವು ಮಕ್ಕಳೇ ಅಪಕಾರಿಗಳಾಗಿದ್ದೀರಿ ಎಂದು ಬೇಹದ್ದಿನ ತಂದೆಯು ತಿಳಿಸುತ್ತಾರೆ. ಈ ನಾಟಕವು ಹೇಗೆ ಮಾಡಲ್ಪಟ್ಟಿದೆ, ಇವು ವಿಚಾರಸಾಗರ ಮಂಥನ ಮಾಡುವ ಮಾತುಗಳಾಗಿವೆ. ವಿಚಾರ ಸಾಗರ ಮಂಥನಕ್ಕೆ ಎಷ್ಟೊಂದು ಅರ್ಥವಿದೆ ಆದರೆ ಯಾರೂ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ- ನೀವು ಮಕ್ಕಳು ಓದಿ ಉಪಕಾರ ಮಾಡುತ್ತೀರಿ. ಗಾಯನವೂ ಇದೆ- ಯದಾ ಯದಾಹಿ ಧರ್ಮಸ್ಯ....ಇದು ಭಾರತದ ಮಾತಾಗಿದೆ. ನೋಡಿ ಆಟವು ಹೇಗಿದೆ ಶಿವಜಯಂತಿ ಅಥವಾ ಶಿವರಾತ್ರಿಯನ್ನು ಆಚರಿಸುತ್ತಾರೆ. ವಾಸ್ತವದಲ್ಲಿ ಅವತಾರವೂ ಒಂದೇ ಆಗಿದೆ. ಅವತಾರವನ್ನೂ ಸಹ ಕಲ್ಲು-ಮುಳ್ಳುನಲ್ಲಿದ್ದಾರೆಂದು ಹೇಳಿಬಿಟ್ಟಿದ್ದಾರೆ. ತಂದೆಯು ದೂರುತ್ತಾರೆ-ಗೀತಾಪಾಠಿಗಳು ಶ್ಲೋಕಗಳನ್ನು ಓದುತ್ತಾರೆ, ಆದರೆ ನಮಗೆ ಗೊತ್ತಿಲ್ಲವೆಂದು ಹೇಳುತ್ತಾರೆ.

ನೀವೇ ಅತ್ಯಂತ ಪ್ರೀತಿಯ ಮಕ್ಕಳಾಗಿದ್ದೀರಿ, ಯಾರೊಂದಿಗೂ ಮಾತನಾಡಿದರೂ ತಂದೆಯು ಮಕ್ಕಳೇ, ಮಕ್ಕಳೇ ಎಂದು ಹೇಳುತ್ತಿರುತ್ತಾರೆ. ತಂದೆಗಂತೂ ಈ ದೃಷ್ಟಿಯು ಪಕ್ಕಾ ಆಗಿಬಿಟ್ಟಿದೆ.- ಎಲ್ಲಾ ಆತ್ಮಗಳು ನನ್ನ ಮಕ್ಕಳಾಗಿದ್ದಾರೆ.. ನಿಮ್ಮಲ್ಲಿ ಮಗುವೇ ಎಂಬ ಶಬ್ದವನ್ನು ಹೇಳುವಂತಹರು ಒಬ್ಬರೂ ಇರುವದಿಲ್ಲ. ಇದಂತೂ ನಿಮಗೆ ಗೊತ್ತಿದೆ- ಕೆಲವರು ಕೆಲಕೆಲವು ಪದವಿಯನ್ನು ಹೊಂದಿದ್ದಾರೆ. ಎಲ್ಲರೂ ಆತ್ಮಗಳಾಗಿದ್ದೀರಿ ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ ಆದ್ದರಿದ ಇದರಲ್ಲಿ ಚಿಂತೆಯಾಗಲಿ, ಖುಷಿಯಾಗಲಿ ಏನೂ ಆಗುವದಿಲ್ಲ. ಎಲ್ಲರೂ ನನ್ನ ಮಕ್ಕಳಾಗಿದ್ದೀರಿ. ಯಾರಾದರೂ ಭಲೆ ರಾಜನ ಶರೀರವನ್ನು ಧಾರಣೆ ಮಾಡಿರಬಹುದು. ಇನ್ನೂ ಕೆಲವರು ಬೇರೆ ಶರೀರವನ್ನು ಧಾರಣೆ ಮಾಡಿರಬಹುದು ಆದರೆ ಮಕ್ಕಳೇ ಮಕ್ಕಳೇ ಎನ್ನುವ ಅಭ್ಯಾಸವಾಗಿಬಿಟ್ಟಿದೆ. ತಂದೆಯ ದೃಷ್ಟಿಯಲ್ಲಂತೂ ಎಲ್ಲರೂ ಆತ್ಮಗಳಾಗಿದ್ದೀರಿ. ಅದರಲ್ಲಿಯೂ ಬಡವರು ಬಹಳ ಪ್ರಿಯರಾಗಿರುತ್ತಾರೆ. ಏಕೆಂದರೆ ಅವರೇ ನಾಟಕದನುಸಾರ ಬಹಳ ನಿಂದನೆ ಮಾಡಿದ್ದಾರೆ. ಈಗ ಮತ್ತೆ ನನ್ನ ಬಳಿ ಬಂದುಬಿಟ್ಟಿದ್ದಾರೆ. ತಂದೆಯ ದೃಷ್ಟಿಯಲ್ಲಂತೂ ಎಲ್ಲರೂ ಆತ್ಮಗಳಾಗಿದ್ದೀರಿ. ಅದರಲ್ಲಿಯೂ ಬಡವರು ಬಹಳ ಪ್ರಿಯರಾಗುತ್ತಾರೆ ಏಕೆಂದರೆ ಅವರೇ ನಾಟಕದನುಸಾರ ಬಹಳ ನಿಂದನೆ ಮಾಡಿದ್ದಾರೆ. ಈಗ ಮತ್ತೆ ನನ್ನ ಬಳಿ ಬಂದುಬಿಟ್ಟಿದ್ದಾರೆ. ಕೇವಲ ಈ ಲಕ್ಷ್ಮಿ-ನಾರಯಣರಿಗಷ್ಟೇ ಎಂದೂ ನಿಂದನೆ ಮಾಡುವದಿಲ್ಲ. ಕೃಷ್ಣನಿಗೂ ಬಹಳ ನಿಂದನೆ ಮಾಡಿದ್ದಾರೆ, ಆಶ್ಚರ್ಯದ ಮಾತಾಗಿದೆಯಲ್ಲವೇ. ಕೃಷ್ಣನೇ ದೊಡ್ಡವನಾದಾಗ ಅವನ ಗ್ಲಾನಿ ಮಾಡುವದಿಲ್ಲ. ಈ ಜ್ಞಾನವು ಎಷ್ಟು ರಹಸ್ಯಯುಕ್ತವಾಗಿದೆ. ಇಂತಹ ಗುಹ್ಯ ಮಾತುಗಳನ್ನು ಯಾರಾದರೂ ತಿಳಿದುಕೊಳ್ಳುತ್ತಾರೆಯೇ? ಇದನ್ನು ತಿಳಿಯಲು ಬುದ್ದಿಯು ಚಿನ್ನದ ಪಾತ್ರೆಯಾಗಬೇಕು. ಅದು ನೆನಪಿನಿಂದಲೇ ಸಾಧ್ಯ. ಇಲ್ಲಿ ಕುಳಿತಿದ್ದರೂ ಸಹ ಯಥಾರ್ಥವಾಗಿ ನೆನಪು ಮಾಡುತ್ತಾರೆಯೇ? ನಾವು ಅತಿ ಸೂಕ್ಷ್ಮ ಆತ್ಮಗಳಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ನೆನಪು ಬುದ್ದಿಯಿಂದ ಮಾಡಬೇಕಾಗಿದೆ. ಆದರೆ ಇದು ಬುದ್ಧಿಯಲ್ಲಿ ಬರುವುದಿಲ್ಲ. ಅತೀ ಸೂಕ್ಷ್ಮ ಆತ್ಮವಾಗಿದ್ದರೂ ಅವರು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕರೂ ಆಗಿದ್ದಾರೆ, ಇದು ಬುದ್ಧಿಯಲ್ಲಿ ಬರುವುದೂ ಸಹ ಅಸಂಭವವಾಗಿದೆ. ಬಾಬಾ, ಬಾಬಾ ಎಂದಂತೂ ಹೇಳುತ್ತಾರೆ, ದುಃಖದಲ್ಲಿ ಎಲ್ಲರೂ ನೆನಪು ಮಾಡುವರು. ಸುಖದಲ್ಲಿ ಇಲ್ಲವೆಂದು ಭಗವಾನುವಾಚ ಇದೆಯಲ್ಲವೇ ಏಕೆಂದರೆ ಸುಖದಲ್ಲಿ ನೆನಪು ಮಾಡುವ ಅವಶ್ಯಕತೆಯೇ ಇರುವದಿಲ್ಲ, ಇಲ್ಲಂತೂ ಇಷ್ಟೊಂದು ದುಃಖ ಅಪತ್ತುಗಳು ಬರುತ್ತವೆ. ಆದ್ದರಿಂದ ಹೇ ಭಗವಂತ ದಯೆ ತೋರಿಸಿ, ಕೃಪೆ ಮಾಡಿ ಎಂದು ನೆನಪು ಮಾಡುತ್ತಾರೆ. ಮಕ್ಕಳಾದ ನಂತರವೂ ಸಹ ಬಾಬಾ ಕೃಪೆ ಮಾಡಿ, ಶಕ್ತಿ ನೀಡಿ ದಯೆತೋರಿಸಿ ಎಂದು ಬರೆಯುತ್ತಾರೆ. ಅದಕ್ಕೆ ತಂದೆಯು ಬರೆಯುತ್ತಾರೆ-ಶಕ್ತಿಯನ್ನು ತಾವೇ ಯೋಗಬಲದಿಂದ ಪಡೆದುಕೊಳ್ಳಿ. ತಮಗೆ ತಾವೇ ರಾಜತಿಲಕವನ್ನು ಕೊಟ್ಟುಕೊಳ್ಳಿ. ಅದನ್ನು ಹೇಗೆ ಕೊಟ್ಟುಕೊಳ್ಳಬೇಕೆಂದು ತಿಳಿಸುತ್ತೇನೆ. ಶಿಕ್ಷಕರು ಓದುವ ಯುಕ್ತಿಯನ್ನು ತಿಳಿಸುತ್ತಾರೆ. ಆದರೆ ಓದುವುದು, ಆದೇಶದನುಸಾರ ನಡೆಯುವುದು ವಿದ್ಯಾರ್ಥಿಗಳ ಕೆಲಸವಾಗಿದೆ. ಶಿಕ್ಷಕರು ಕೃಪೆ ಅಥವಾ ಆಶೀರ್ವಾದ ಮಾಡಲು ಅವರೇನು ಗುರುಗಳಲ್ಲ. ಯಾರು ಒಳ್ಳೆಯ ಮಕ್ಕಳಿರುವರೋ ಅವರು ಸ್ಪರ್ಧೆ ಮಾಡುತ್ತಾರೆ. ಪ್ರತಿಯೊಬ್ಬರೂ ಸ್ವತಂತ್ರವಾಗಿದ್ದೀರಿ, ಪುರುಷಾರ್ಥದಲ್ಲಿ ಎಷ್ಟು ಮುಂದೆ ಓಡಬೇಕೋ ಅವರು ಮುಂದೆ ಓಡಬಹುದು. ನೆನಪಿನ ಯಾತ್ರೆಯೇ ಓಟವಾಗಿದೆ.

ಒಂದೊಂದು ಆತ್ಮವೂ ಸ್ವತಂತ್ರವಾಗಿದೆ, ಸಹೋದರ-ಸಹೋದರಿಯ ಸಂಬಂಧವನ್ನೂ ಬಿಡಿಸಿದೆವು. ಈಗ ಸಹೋದರನೆಂದು ತಿಳಿದಮೇಲೂ ಸಹ ಕೆಟ್ಟ ದೃಷ್ಟಿಯು ಹೋಗುವುದಿಲ್ಲ, ಅದು ತನ್ನ ಕೆಲಸವನ್ನು ಮಾಡುತ್ತ್ತಾ ಇರುತ್ತದೆ, ಈ ಸಮಯದಲ್ಲಿ ಮನುಷ್ಯರ ಎಲ್ಲಾ ಅಂಗಗಳು ವಿಕಾರಿಯಾಗಿವೆ. ಕಾಲಿನಿಂದ ಒದೆಯುತ್ತಾರೆ, ಪೆಟ್ಟುಕೊಡುತ್ತಾರೆಂದರೆ ಕೆಟ್ಟ ಅಂಗವಾಯಿತಲ್ಲವೇ! ಅಂಗ-ಅಂಗವೂ ವಿಕಾರಿಯಾಗಿದೆ. ಸತ್ಯಯುಗದಲ್ಲಿ ಯಾವುದೇ ಅಂಗವು ಕೆಟ್ಟ ಕಾರ್ಯವನ್ನು ಮಾಡುವುದಿಲ್ಲ. ಇಲ್ಲಿ ಪ್ರತಿಯೊಂದು ಅಂಗದಿಂದಲೂ ಕೆಟ್ಟ ಕಾರ್ಯಗಳನ್ನು ಮಾಡುತ್ತಿರುತ್ತಾರೆ, ಎಲ್ಲಕ್ಕಿಂತ ಹೆಚ್ಚಿನ ಕೆಟ್ಟ ಅಂಗ ಯಾವುದು? ಕಣ್ಣುಗಳು ವಿಕಾರದ ಆಸೆಯು ಪೂರ್ಣವಾಗಲಿಲ್ಲವೆಂದರೆ ಮತ್ತೆ ಕೈ ನಡೆಸಲು ತೊಡಗಿಬಿಡುತ್ತಾರೆ. ಮೊಟ್ಟಮೊದಲು ಮೋಸ ಮಾಡುವುದು ಕಣ್ಣುಗಳಾಗಿವೆ. ಆದ್ದರಿಂದಲೇ ಸೂರದಾಸರ ಕಥೆಯೂ ಇದೆ. ಶಿವತಂದೆಯಂತೂ ಯಾವುದೇ ಶಾಸ್ತ್ರಗಳನ್ನು ಓದಿಲ್ಲ, ಈ ರಥವಾದ ಬ್ರಹ್ಮಾರವರು ಓದಿದ್ದಾರೆ, ಶಿವತಂದೆಗೆ ಈ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಇದೂ ಸಹ ನಿಮಗೆ ಗೊತ್ತಿದೆ-ಶಿವ ತಂದೆಯು ಯಾವುದೇ ಪುಸ್ತಕಗಳನ್ನು ತೆಗೆದುಕೊಂಡು ಓದುವದಿಲ್ಲ. ನಾನು ಜ್ಞಾನಸಾಗರನಾಗಿದ್ದೇನೆ. ಬೀಜರೂಪನಾಗಿದ್ದೇನೆಂದು ಹೇಳುತ್ತಾರೆ. ಇದು ಸೃಷ್ಟಿರೂಪಿ ವೃಕ್ಷವಾಗಿದೆ, ಇದರ ರಚಿಯಿತ ತಂದೆ ಬೀಜವಾಗಿದ್ದಾರೆ. ತಂದೆಯು ತಿಳಿಸುತ್ತಾರೆ-ನನ್ನ ನಿವಾಸ ಸ್ಥಾನವು ಮೂಲವತನವಾಗಿದೆ. ಈಗ ನಾನು ಈ ಶರೀರದಲ್ಲಿ ವಿರಾಜನಮಾನನಾಗಿದ್ದೇನೆ. ನಾನು ಈ ಮನುಷ್ಯಸೃಷ್ಟಿಯ ಬೀಜ ರೂಪನಾಗಿದ್ದೇನೆ. ಪರಮಪಿತ ಪರಮಾತ್ಮನಾಗಿದ್ದೇನೆಂದು ಮತ್ತ್ಯಾರು ಹೇಳಲು ಸಾಧ್ಯವಿಲ್ಲ. ಯಾರಾದರೂ ಒಳ್ಳೆಯ ಬುದ್ಧಿವಂತರಾಗಿದ್ದರೆ ಅವರಿಗೆ ಈಶ್ವರ ಸರ್ವವ್ಯಾಪಿಯಾಗಿದ್ದಾರೆಂದು ಯಾರಾದರೂ ಹೇಳಿದರೆ ತಕ್ಷಣ ನೀವೂ ಈಶ್ವರನೇ? ನೀವೂ ಸಹ ಅಲ್ಲಾ, ಪ್ರಭುವಾಗಿದ್ದೀರಾ ಎಂದು ಕೇಳಿಬಿಡುತ್ತಾರೆ. ಆದರೆ ಈ ಸಮಯದಲ್ಲಿ ಯಾರೂ ಅಷ್ಟೊಂದು ಬುದ್ಧಿವಂತರಿಲ್ಲ. ಅಲ್ಲಾನನ್ನು ತಿಳಿದುಕೊಂಡಿಲ್ಲ. ಸ್ವಯಂ ತಂದೆಯೇ ನಾನು ಅಲ್ಲಾ ಆಗಿದ್ದೇನೆಂದು ಹೇಳುತ್ತಾರೆ. ಮನುಷ್ಯರೂ ಸಹ ಆಂಗ್ಲ ಭಾಷೆಯಲ್ಲಿ ಆಮ್ನಿಪ್ರೆಸೆಂಟ್(ಸರ್ವವ್ಯಾಪಿ) ಎಂದು ಹೇಳಿಬಿಡುತ್ತಾರೆ, ಇದರ ಅರ್ಥವನ್ನು ತಿಳಿದುಕೊಂಡರೆ ಎಂದೂ ಈ ರೀತಿ ಹೇಳುವುದಿಲ್ಲ. ಈಗ ಮಕ್ಕಳಿಗಂತೂ ಗೊತ್ತಿದೆ-ಶಿವ ಜಯಂತಿಯೇ ಹೊಸ ವಿಶ್ವದ ಜಯಂತಿ. ಅದರಲ್ಲಿ ಸುಖ -ಶಾಂತಿ-ಪವಿತ್ರತೆ ಎಲ್ಲವೂ ಬಂದು ಬಿಡುತ್ತದೆ. ಶಿವಜಯಂತಿ ಸೋ ಕೃಷ್ಣ ಜಯಂತಿ ಸೋ ದಶಹರಾ ಜಯಂತಿ. ಶಿವಜಯಂತಿಯೇ ದೀಪಮಾಲಾ ಜಯಂತಿ, ಶಿವಜಯಂತಿಯೇ ಸ್ವರ್ಗ ಜಯಂತಿ. ಶಿವ ಜಯಂತಿಯಿಂದ ಎಲ್ಲಾ ಜಯಂತಿಗಳು ಬಂದುಬಿಡುತ್ತವೆ. ಇವೆಲ್ಲಾ ಹೊಸ ಮಾತುಗಳನ್ನು ತಂದೆಯೇ ತಿಳಿಸಿಕೊಡುತ್ತಾರೆ. ಶಿವಜಯಂತಿಯೇ ಶಿವಾಲಯ ಜಯಂತಿ, ವೇಶ್ಯಾಲಯ ಮರಂತಿ, ಎಲ್ಲ್ಲಾ ಹೊಸ ಮಾತುಗಳನ್ನು ತಂದೆಯೇ ತಿಳಿಸಿಕೊಡುತ್ತಾರೆ. ಶಿವಜಯಂತಿಯೇ ಹೊಸ ವಿಶ್ವದ ಜಯಂತಿ. ವಿಶ್ವದಲ್ಲಿ ಶಾಂತಿಯು ಬೇಕೆಂದು ಎಲ್ಲರೂ ಬಯಸುತ್ತಾರಲ್ಲವೆ. ನೀವು ಎಷ್ಟಾದರೂ ತಿಳಿಸಿ ಆದರೆ ಮನುಷ್ಯರು ಜಾಗೃತರಾಗುವುದೇ ಇಲ್ಲ. ಅಜ್ಞಾನದ ಅಂಧಕಾರದಲ್ಲಿ ಮಲಗಿಬಿಟ್ಟಿದ್ದಾರೆ. ಭಕ್ತಿ ಮಾಡುತ್ತಾ ಏಣಿಯನ್ನು ಇಳಿಯುತ್ತಲೇ ಹೋಗುತ್ತಾರೆ. ನಾನು ಬಂದು ಎಲ್ಲರ ಸದ್ಗತಿ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಸ್ವರ್ಗ ಮತ್ತು ನರಕದ ರಹಸ್ಯವನ್ನು ತಂದೆಯು ನಿಮಗೆ ತಿಳಿಸಿಕೊಡುತ್ತಾರೆ. ಯಾವ ಪತ್ರಿಕೆಗಳು ನಿಮ್ಮ ನಿಂದನೆ ಮಾಡುತ್ತದೆಯೋ ಪತ್ರಿಕೆಯವರಿಗೂ ಬರೆಯಬೇಕು-ಯಾರು ನಮ್ಮ ನಿಂದನೆ ಮಾಡುವವರೋ ಅವರೇ ನಮ್ಮ ಮಿತ್ರರು, ನಿಮ್ಮ ಸದ್ಗತಿಯನ್ನೂ ನಾವು ಅವಶ್ಯವಾಗಿ ಮಾಡುತ್ತೇವೆ, ಎಷ್ಟು ಬೇಕೋ ಅಷ್ಟು ನಿಂದನೆ ಮಾಡಿ, ಈಶ್ವರನ ನಿಂದನೆ ಮಾಡುತ್ತಾರೆ. ಈಶ್ವರನ ನಿಂದನೆಯನ್ನೇ ಮಾಡುತ್ತಾರೆಂದ ಮೇಲೆ ನಮ್ಮ ನಿಂದನೆ ಮಾಡಿದರೇನಾಯಿತು! ಆದ್ದರಿಂದ ನಿಮ್ಮ ಸದ್ಗತಿಯನ್ನು ನಾವು ಅವಶ್ಯವಾಗಿ ಮಾಡುತ್ತೇವೆ. ನೀವು ಇಚ್ಛಿಸದಿದ್ದರೂ ಸಹ ನಾವು ಮೂಗನ್ನು ಹಿಡಿದುಕೊಂಡು ಕರೆದುಕೊಂಡು ಹೋಗುತ್ತೇವೆ. ಇದರಲ್ಲಿ ಹೆದರುವ ಮಾತಿಲ್ಲ, ಏನೆಲ್ಲವೂ ಮಾಡುತ್ತಾರೆಯೋ ಕಲ್ಪದ ಹಿಂದೆಯೂ ಮಾಡಿದ್ದರು. ನಾವು ಬ್ರಹ್ಮಾ ಕುಮಾರ-ಕುಮಾರಿಯರಂತೂ ಎಲ್ಲರ ಸದ್ಗತಿ ಮಾಡುತ್ತೇವೆ, ಅವರಿಗೆ ಬಹಳ ಚೆನ್ನಾಗಿ ತಿಳಿಸಿಕೊಡಬೇಕು. ಅಬಲೆಯರ ಮೇಲೆ ಅತ್ಯಾಚಾರಗಳು ಕಲ್ಪದ ಹಿಂದೆಯೂ ಆಗಿತ್ತು ಎಂಬುದನ್ನು ಮಕ್ಕಳು ಮರೆತುಹೋಗುತ್ತಾರೆ. ತಂದೆಯು ತಿಳಿಸುತ್ತಾರೆ- ನನ್ನ ಎಲ್ಲಾ ಬೇಹದ್ದಿನ ಮಕ್ಕಳು ನನ್ನ ನಿಂದನೆ ಮಾಡುತ್ತಾರೆ. ಮಕ್ಕಳೇ ಎಲ್ಲರಿಗಿಂತ ಮಿತ್ರರಾಗಿದ್ದಾರೆ, ಮಕ್ಕಳು ಹೂಗಳ ಸಮಾನರಾಗಿರುತ್ತಾರೆ, ಮಕ್ಕಳಿಗೆ ತಂದೆ-ತಾಯಿಯು ಮುತ್ತಿಡುತ್ತಾರೆ, ತಲೆಯ ಮೇಲಿಟ್ಟುಕೊಳ್ಳುತ್ತಾರೆ, ಅವರ ಸೇವೆ ಮಾಡುತ್ತಾರೆ ಹಾಗೆಯೇ ತಂದೆಯೂ ನೀವು ಮಕ್ಕಳ ಸೇವೆ ಮಾಡುತ್ತಾರೆ.

ಈಗ ನಿಮಗೆ ಈ ಜ್ಞಾನವು ಸಿಕ್ಕಿದೆ, ಇದನ್ನು ನೀವು ಜೊತೆ ತೆಗೆದುಕೊಂಡು ಹೋಗುತ್ತೀರಿ. ಯಾರು ತೆಗದುಕೊಳ್ಳುವದಿಲ್ಲವೋ ಅವರದೂ ನಾಟಕದಲ್ಲಿ ಪಾತ್ರವಿದೆ, ಅದೇ ಪಾತ್ರವನ್ನಭಿನಯಿಸುತ್ತಾರೆ. ಲೆಕ್ಕಾಚಾರಗಳನ್ನು ಸಮಾಪ್ತಿಮಾಡಿಕೊಂಡು ಮನೆಗೆ ಹೊರಟು ಹೋಗುತ್ತಾರೆ, ಸ್ವರ್ಗವನ್ನಂತೂ ನೋಡುವದಿಲ್ಲ. ಎಲ್ಲರೂ ಸ್ವರ್ಗವನ್ನು ನೋಡುತ್ತಾರೆಯೇ! ಈ ನಾಟಕವು ಮಾಡಲ್ಪಟ್ಟಿದೆ. ಹೆಚ್ಚಿನ ಪಾಪಗಳನ್ನು ಮಾಡುತ್ತಾರೆ, ಬರುವುದು ತಡವಾಗಿಯೇ. ತಮೋಪ್ರಧಾನರು ಬಹಳ ತಡವಾಗಿ ಬರುತ್ತಾರೆ, ಈ ರಹಸ್ಯವು ತಿಳಿದುಕೊಳ್ಳಲು ಬಹಳ ಒಳ್ಳೆಯದಾಗಿದೆ. ಒಳ್ಳೊಳ್ಳೆಯ ಮಕ್ಕಳ ಮೇಲೂ ಸಹ ಗ್ರಹಚಾರವು ಕುಳಿತುಕೊಳ್ಳುತ್ತದೆ ಎಂದರೆ ಬಹುಬೇಗ ಕೋಪ ಬಂದುಬಿಡುತ್ತದೆ. ನಂತರ ಪತ್ರವನ್ನೂ ಬರೆಯುವುದಿಲ್ಲ. ಅಂತಹವರಿಗೆ ಮುರಳಿಯನ್ನು ನಿಲ್ಲಿಸಿ ಎಂದು ತಂದೆಯು ಹೇಳುತ್ತಾರೆ. ಇಂತಹವರಿಗೆ ತಂದೆಯ ಖಜಾನೆಯನ್ನು ಕೊಡುವುದರಿಂದ ಲಾಭವಾದರೂ ಏನು! ನಂತರ ಯಾರಿಗಾದರೂ ಕಣ್ಣು ತೆರೆದಾಗ ತಪ್ಪಾಯಿತೆಂದು ಹೇಳುತ್ತಾರೆ. ಕೆಲವರಂತೂ ಬೆಲೆಯನ್ನೇ ಕೊಡುವುದಿಲ್ಲ. ಇಷ್ಟೊಂದು ಹುಡುಗಾಟಿಕೆ ಮಾಡಬಾರದು. ಇಂತಹವರು ಅನೇಕರು ಇದ್ದಾರೆ, ತಂದೆಯನ್ನೂ ನೆನಪು ಮಾಡುವುದಿಲ್ಲ. ಅನ್ಯರನ್ನೂ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವುದಿಲ್ಲ. ಹಾಗೆ ಮಾಡಿಕೊಳ್ಳುವಂತಿದ್ದರೆ ಬಾಬಾ, ನಾವು ಪ್ರತಿ ಶ್ವಾಸದಲ್ಲಿ ತಮ್ಮನ್ನು ನೆನಪು ಮಾಡುತ್ತೇನೆ ಎಂದು ತಂದೆಗೆ ಪತ್ರವನ್ನು ಬರೆಯಬೇಕು. ಕೆಲವರು ಇಂತಹವರು ಇದ್ದಾರೆ- ಬಾಬಾ, ಇಂತಹರಿಗೆ ಸವಿ ನೆನಪನ್ನು ತಿಳಿಸಿ ಎಂದು ಬರೆಯುತ್ತಾರೆ. ಈ ನೆನಪು ಸತ್ಯವಾದುದೆ! ಇಲ್ಲಿ ಸುಳ್ಳು ನಡೆಯಲು ಸಾಧ್ಯವಿಲ್ಲ, ಒಳಗೆ ಮನಸ್ಸು ತಿನ್ನುತ್ತಿರುತ್ತದೆ. ತಂದೆಯು ಮಕ್ಕಳಿಗೆ ಒಳ್ಳೊಳ್ಳೆಯ ಜ್ಞಾನ ಬಿಂದುಗಳನ್ನು ತಿಳಿಸುತ್ತಿರುತ್ತಾರೆ, ದಿನ-ಪ್ರತಿದಿನ ಗುಹ್ಯ ಮಾತುಗಳನ್ನು ತಿಳಿಸುತ್ತಿರುತ್ತಾರೆ. ಮುಂದೆ ದುಃಖದ ಪರ್ವತಗಳೇ ಬೀಳುವುದಿದೆ, ಸತ್ಯಯುಗದಲ್ಲಿ ದುಃಖದ ಹೆಸರಿರುವುದಿಲ್ಲ. ಈಗ ರಾವಣ ರಾಜ್ಯವಾಗಿದೆ, ಮೈಸೂರಿನ ಮಹಾರಾಜರೂ ಸಹ ರಾವಣನ ಪ್ರತಿಮೆಯನ್ನು ಮಾಡಿ ದಸರಾ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.. ರಾಮನನ್ನು ಭಗವಂತನೆಂದು ಹೇಳುತ್ತಾರೆ, ಸೀತೆಯ ಅಪಹರಣವಾಯಿತು. ರಾಮನು ಸರ್ವಶಕ್ತಿವಂತನಾದರೆ ರಾಮನ ಸೀತೆಯು ಅಪಹರಣವಾಗಲು ಹೇಗೆ ಸಾಧ್ಯ, ಇದೆಲ್ಲವೂ ಅಂಧ ಶ್ರದ್ಧೆಯಾಗಿದೆ. ಈ ಸಮಯದಲ್ಲಿ ಪ್ರತಿಯೊಬ್ಬರಲ್ಲಿಯೂ 5 ವಿಕಾರಗಳ ಕೊಳಕಿದೆ. ಮತ್ತೆ ಭಗವಂತನನ್ನೂ ಸರ್ವವ್ಯಾಪಿ ಎಂದು ಹೇಳಿರುವುದು ಬಹಳ ದೊಡ್ಡ ಸುಳ್ಳಾಗಿದೆ ಆದ್ದರಿದಲೇ ತಂದೆಯು ತಿಳಿಸುತ್ತಾರೆ- ಯದಾ ಯದಾಹೀ ಧರ್ಮಸ್ಯ..... ನಾನು ಬಂದು ಸತ್ಯಖಂಡ, ಸದ್ಧರ್ಮದ ಸ್ಥಾಪನೆ ಮಾಡುತ್ತೇನೆ. ಸತ್ಯಯುಗಕ್ಕೆ ಸತ್ಯ ಖಂಡವೆಂದು ಕಲಿಯುಗಕ್ಕೆ ಸುಳ್ಳಿನಖಂಡವೆಂದು ಹೇಳಲಾಗುತ್ತದೆ. ಈಗ ತಂದೆಯು ಅಸತ್ಯ ಖಂಡವನ್ನು ಸತ್ಯ ಖಂಡವನ್ನಾಗಿ ಮಾಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಗುಹ್ಯ ಅಥವಾ ರಹಸ್ಯಯುಕ್ತ ಜ್ಞಾನವನ್ನು ತಿಳಿದುಕೊಳ್ಳಲು ಬುದ್ಧಿಯನ್ನು ನೆನಪಿನ ಯಾತ್ರೆಯಿಂದ ಚಿನ್ನದ ಪಾತ್ರೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ನೆನಪಿನ ಸ್ಪರ್ಧೆ ಮಾಡಬೇಕಾಗಿದೆ.

2. ತಂದೆಯ ಆದೇಶದಂತೆ ನಡೆದು ವಿದ್ಯೆಯನ್ನು ಗಮನವಿಟ್ಟು ಓದಿ, ತಮ್ಮ ಮೇಲೆ ತಾವೇ ಕೃಪೆ ಅಥವಾ ಆಶೀರ್ವಾದ ಮಾಡಿಕೊಳ್ಳಬೇಕು, ತಮಗೆ ತಾವೇ ರಾಜ್ಯತಿಲಕವನ್ನು ಕೊಟ್ಟುಕೊಳ್ಳಬೇಕಾಗಿದೆ. ನಿಂದಕರನ್ನೂ ಮಿತ್ರರೆಂದು ತಿಳಿದು ಅವರ ಸದ್ಗತಿಯನ್ನೂ ಮಾಡಬೇಕಾಗಿದೆ.

ವರದಾನ:
ಮೇಲಿನಿಂದ ಅವತರಿತವಾಗಿರುವ ಅವತಾರರಾಗಿ ಸೇವೆ ಮಾಡುವವರೇ ಸಾಕ್ಷಾತ್ಕಾರ ಮೂರ್ತಿ ಭವ.

ಹೇಗೆ ತಂದೆ ಸೇವೆಗಾಗಿ ವತನದಿಂದ ಕೆಳಗೆ ಬರುತ್ತಾರೆ, ಅದೇ ರೀತಿ ನಾವೂ ಸಹ ಸೇವೆಗಾಗಿ ವತನದಿಂದ ಬಂದಿರುವೆವು. ಈರೀತಿ ಅನುಭವ ಮಾಡಿ ಸೇವೆ ಮಾಡಿದರೆ ಸದಾ ನ್ಯಾರಾ ಮತ್ತು ತಂದೆಯ ಸಮಾನ ವಿಶ್ವಕ್ಕೆ ಪ್ರೀಯ ಆಗಿಬಿಡುವಿರಿ. ಮೇಲಿನಿಂದ ಕೆಳಗೆ ಬರುವುದು ಎಂದರೆ ಅವತಾರ ಎಂದು ತಿಳಿದು ಅವತರಿತರಾಗಿ ಸೇವೆ ಮಾಡುವುದು. ಎಲ್ಲರೂ ಬಯಸುತ್ತಾರೆ ಅವತಾರರು ಬರಲಿ ಮತ್ತು ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲಿ ಎಂದು. ಅಂದಾಗ ಸತ್ಯವಾದ ಅವತಾರರು ನೀವಾಗಿರುವಿರಿ ಯಾರು ಎಲ್ಲರಿಗೂ ಮುಕ್ತಿಧಾಮಕ್ಕೆ ಜೊತೆಯಲ್ಲಿ ಕರೆದೊಯ್ಯುವಿರಿ. ಯಾವಾಗ ಅವತಾರರು ಎಂದು ತಿಳಿದು ಸೇವೆಮಾಡುವಿರಿ ಆಗ ಸಾಕ್ಷಾತ್ಕಾರ ಮೂರ್ತಿಗಳಾಗುವಿರಿ ಮತ್ತು ಅನೇಕರ ಇಚ್ಛೆಗಳು ಪೂರ್ಣವಾಗುತ್ತದೆ.

ಸ್ಲೋಗನ್:
ಯಾರು ನಿಮಗೆ ಒಳ್ಳೆಯದನೇ ಕೊಡಲಿ, ಕೆಟ್ಟದ್ದನೇ ಕೊಡಲಿ ಆದರೆ ನೀವು ಎಲ್ಲರಿಗೂ ಸ್ನೇಹ ಕೊಡಿ, ಸಹಯೋಗ ಕೊಡಿ. ದಯೆತೋರಿ.