08.09.25         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಪುಣ್ಯಾತ್ಮರಾಗಲು ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಕರ್ಮ ಮಾಡಿ, ಆಲ್ರೌಂಡರ್ ಆಗಿ, ದೈವೀ ಗುಣಗಳನ್ನು ಧಾರಣೆ ಮಾಡಿ".

ಪ್ರಶ್ನೆ:
ಯಾವ ಪರಿಶ್ರಮದಿಂದ ನೀವು ಮಕ್ಕಳು ಪದಮಾಪದಮಪತಿಗಳಾಗುತ್ತೀರಿ?

ಉತ್ತರ:
ವಿಕಾರಿ ದೃಷ್ಟಿಯನ್ನು ನಿರ್ವಿಕಾರಿಯನ್ನಾಗಿ ಮಾಡಿಕೊಳ್ಳುವುದೇ ಎಲ್ಲದಕ್ಕಿಂತ ದೊಡ್ಡ ಪರಿಶ್ರಮವಾಗಿದೆ, ಕಣ್ಣುಗಳು ಬಹಳ ಮೋಸ ಮಾಡುತ್ತವೆ. ಕಣ್ಣುಗಳನ್ನು ನಿರ್ವಿಕಾರಿಯನ್ನಾಗಿ ಮಾಡಿಕೊಳ್ಳಲು ತಂದೆಯು ಯುಕ್ತಿಯನ್ನು ತಿಳಿಸಿದ್ದಾರೆ - ಮಕ್ಕಳೇ, ಆತ್ಮಿಕ ದೃಷ್ಟಿಯಿಂದ ನೋಡಿ, ದೇಹವನ್ನು ನೋಡಬೇಡಿ. ನಾನಾತ್ಮನಾಗಿದ್ದೇನೆ, ಈ ಅಭ್ಯಾಸವನ್ನು ಪಕ್ಕಾ ಮಾಡಿಕೊಳ್ಳಿ. ಈ ಪರಿಶ್ರಮದಿಂದಲೇ ನೀವು ಜನ್ಮ-ಜನ್ಮಾಂತರಕ್ಕಾಗಿ ಪದಮಾಪತಿಗಳಾಗುತ್ತೀರಿ.

ಗೀತೆ:
ಧೈರ್ಯ ತಾಳು ಮಾನವನೇ..............

ಓಂ ಶಾಂತಿ.
ಇದನ್ನು ಯಾರು ಹೇಳಿದರು? ಶಿವ ತಂದೆಯು ಶರೀರದ ಮೂಲಕ ಹೇಳಿದರು. ಯಾವುದೇ ಆತ್ಮವು ಶರೀರವಿಲ್ಲದೆ ಮಾತನಾಡಲು ಸಾಧ್ಯವಿಲ್ಲ. ತಂದೆಯೂ ಸಹ ಶರೀರದಲ್ಲಿ ಪ್ರವೇಶ ಮಾಡಿ ಆತ್ಮಗಳಿಗೆ ತಿಳಿಸುತ್ತಾರೆ - ಮಕ್ಕಳೇ, ಈಗ ನಿಮ್ಮದು ದೈಹಿಕ ಸಂಬಂಧವಿಲ್ಲ, ಇದು ಆತ್ಮಿಕ ಸಂಬಂಧವಾಗಿದೆ. ಪರಮಪಿತ ಪರಮಾತ್ಮನಿಂದ ಆತ್ಮಕ್ಕೆ ಜ್ಞಾನವು ಸಿಗುತ್ತದೆ. ಯಾರೆಲ್ಲಾ ದೇಹಧಾರಿಗಳಿದ್ದಾರೆಯೋ ಎಲ್ಲರೂ ಓದುತ್ತಾರೆ. ತಂದೆಗಂತೂ ತಮ್ಮದೇ ಆದ ದೇಹವಿಲ್ಲ ಆದ್ದರಿಂದ ಸ್ವಲ್ಪ ಸಮಯಕ್ಕಾಗಿ ಇವರ ಆಧಾರವನ್ನು ತೆಗೆದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಮ್ಮನ್ನು ಆತ್ಮ ನಿಶ್ಚಯ ಮಾಡಿ ಕುಳಿತುಕೊಳ್ಳಿ. ಬೇಹದ್ದಿನ ತಂದೆಯು ನಾವಾತ್ಮಗಳಿಗೆ ತಿಳಿಸುತ್ತಾರೆ. ಅವರಲ್ಲದೆ ಮತ್ತ್ಯಾರೂ ಈ ರೀತಿಯಾಗಿ ತಿಳಿಸಿ ಕೊಡಲು ಸಾಧ್ಯವಿಲ್ಲ. ಆತ್ಮವು ಆತ್ಮಕ್ಕೆ ಹೇಗೆ ತಿಳಿಸಿಕೊಡುತ್ತದೆ! ಆತ್ಮಗಳಿಗೆ ತಿಳಿಸಲು ಪರಮಾತ್ಮನೇ ಬೇಕು ಅವರನ್ನು ಯಾರೂ ತಿಳಿದುಕೊಂಡಿಲ್ಲ. ತ್ರಿಮೂರ್ತಿ ಚಿತ್ರದಲ್ಲಿಯೂ ಸಹ ಶಿವನನ್ನು ಹಾರಿಸಿ ಬಿಟ್ಟಿದ್ದಾರೆ. ಬ್ರಹ್ಮಾರವರ ಮೂಲಕ ಸ್ಥಾಪನೆಯನ್ನು ಯಾರು ಮಾಡಿಸುತ್ತಾರೆ? ಬ್ರಹ್ಮಾನಂತೂ ಹೊಸ ಪ್ರಪಂಚದ ರಚಯಿತನಲ್ಲ, ಬೇಹದ್ದಿನ ತಂದೆಯು ರಚಯಿತನು ಎಲ್ಲರಿಗೂ ಒಬ್ಬರೇ ಶಿವ ತಂದೆಯಾಗಿದ್ದಾರೆ. ಬ್ರಹ್ಮಾರವರೂ ಸಹ ಈಗ ನಿಮ್ಮ ತಂದೆಯಾಗಿದ್ದಾರೆ ನಂತರ ಇರುವುದಿಲ್ಲ. ಸತ್ಯಯುಗದಲ್ಲಂತೂ ಲೌಕಿಕ ತಂದೆಯೇ ಇರುತ್ತಾರೆ. ಕಲಿಯುಗದಲ್ಲಿ ಲೌಕಿಕ ಮತ್ತು ಅಲೌಕಿಕ ಇರುತ್ತಾರೆ, ಈಗ ಸಂಗಮದಲ್ಲಿ ಲೌಕಿಕ, ಅಲೌಕಿಕ, ಪಾರಲೌಕಿಕ ಮೂವರು ತಂದೆಯರಿದ್ದಾರೆ. ತಂದೆಯು ತಿಳಿಸುತ್ತಾರೆ - ನನ್ನನ್ನು ಸುಖಧಾಮದಲ್ಲಿ ಯಾರೂ ನೆನಪೇ ಮಾಡುವುದಿಲ್ಲ. ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡಿದ ಮೇಲೆ ಕರೆಯುವ ಅವಶ್ಯಕತೆಯಾದರೂ ಏನಿದೆ? ಅಲ್ಲಿ ಮತ್ತ್ಯಾವುದೇ ಖಂಡವಿರುವುದಿಲ್ಲ. ಕೇವಲ ಸೂರ್ಯವಂಶಿಯರೇ ಇರುತ್ತಾರೆ, ಚಂದ್ರವಂಶಿಯರೂ ಸಹ ನಂತರದಲ್ಲಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸ್ವಲ್ಪ ತಾಳ್ಮೆಯಿಂದಿರಿ, ಇನ್ನು ಕೆಲವೇ ದಿನಗಳಲ್ಲಿ ಚೆನ್ನಾಗಿ ಪುರುಷಾರ್ಥ ಮಾಡಿ. ದೈವೀ ಗುಣಗಳನ್ನು ಧಾರಣೆ ಮಾಡಲಿಲ್ಲವೆಂದರೆ ಪದವಿಯು ಭ್ರಷ್ಟವಾಗುವುದು, ಇದು ಬಹಳ ದೊಡ್ಡ ಲಾಟರಿಯಾಗಿದೆ. ಬ್ಯಾರಿಸ್ಟರ್, ಸರ್ಜನ್ ಮುಂತಾದ ಪದವಿಯನ್ನು ಪಡೆಯುವುದೂ ಸಹ ಲಾಟರಿಯಲ್ಲವೆ. ಬಹಳಷ್ಟು ಹಣ ಸಂಪಾದನೆ ಮಾಡುತ್ತಾರೆ. ಅನೇಕರ ಮೇಲೆ ಅಧಿಕಾರ ನಡೆಸುತ್ತಾರೆ. ಯಾರು ಚೆನ್ನಾಗಿ ಓದಿ-ಓದಿಸುವರೋ ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ತಂದೆಯನ್ನೇ ಪದೇ-ಪದೇ ಮರೆತು ಹೋಗುತ್ತಾರೆ. ಮಾಯೆಯು ನೆನಪನ್ನು ಮರೆಸುತ್ತದೆ, ಜ್ಞಾನವನ್ನು ಮರೆಸುವುದಿಲ್ಲ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ತನ್ನ ಉನ್ನತಿ ಮಾಡಿಕೊಳ್ಳಬೇಕೆಂದರೆ ಚಾರ್ಟ್ ಇಡಿ - ಇಡೀ ದಿನದಲ್ಲಿ ಯಾವುದೇ ಪಾಪ ಕರ್ಮವನ್ನು ಮಾಡಲಿಲ್ಲವೆ? ಇಲ್ಲವಾದರೆ ಒಂದಕ್ಕೆ ನೂರು ಪಟ್ಟು ಪಾಪವಾಗುವುದು, ಯಜ್ಞದ ಸಂಭಾಲನೆ ಮಾಡುವವರು ಕುಳಿತಿದ್ದಾರೆ, ಅವರ ಸಲಹೆಯಂತೆ ಮಾಡಿ. ಬಾಬಾ ಎಲ್ಲಿಯಾದರೂ ಕೂರಿಸಿ, ಏನನ್ನಾದರೂ ತಿನ್ನಿಸಿ....... ಎಂದು ಹೇಳುತ್ತೀರಿ ಅಂದಾಗ ಮತ್ತೆಲ್ಲಾ ಆಸೆಗಳನ್ನು ಬಿಡಬೇಕು ಇಲ್ಲವಾದರೆ ಪಾಪವಾಗುತ್ತಾ ಹೋಗುವುದು. ಆತ್ಮವು ಹೇಗೆ ಪವಿತ್ರವಾಗುತ್ತದೆ! ಯಜ್ಞದಲ್ಲಿ ಯಾವುದೇ ಪಾಪದ ಕೆಲಸವನ್ನು ಮಾಡಬಾರದು. ಇಲ್ಲಿ ನೀವು ಪುಣ್ಯಾತ್ಮರಾಗುತ್ತೀರಿ ಅಂದಮೇಲೆ ಕಳ್ಳತನ ಇತ್ಯಾದಿ ಮಾಡುವುದು ಪಾಪವಲ್ಲವೆ! ಮಾಯೆಯ ಪ್ರವೇಶತೆಯಾಗಿದೆ. ಅಂತಹವರು ಯೋಗದಲ್ಲಿರಲೂ ಸಾಧ್ಯವಿಲ್ಲ, ಜ್ಞಾನದ ಧಾರಣೆ ಮಾಡಲೂ ಸಾಧ್ಯವಿಲ್ಲ. ತಮ್ಮ ಹೃದಯದಿಂದ ಕೇಳಿಕೊಳ್ಳಿ, ಒಂದುವೇಳೆ ನಾವು ಕುರುಡರಿಗೆ ಊರುಗೋಲಾಗಲಿಲ್ಲವೆಂದರೆ ಯಾರಾದೆವು! ಕುರುಡರೆಂದೇ ಹೇಳಬಹುದಲ್ಲವೆ. ಧೃತರಾಷ್ಟ್ರನ ಮಕ್ಕಳೆಂದು ಈ ಸಮಯಕ್ಕಾಗಿಯೇ ಗಾಯನವಿದೆ. ಅವರು ರಾವಣ ರಾಜ್ಯದಲ್ಲಿದ್ದಾರೆ, ನೀವು ಸಂಗಮದಲ್ಲಿದ್ದೀರಿ. ರಾಮ ರಾಜ್ಯದಲ್ಲಿ ಸುಖ ಪಡೆಯುವವರಾಗಿದ್ದೀರಿ. ಪರಮಪಿತ ಪರಮಾತ್ಮನು ಹೇಗೆ ಸುಖವನ್ನು ಕೊಡುತ್ತಾರೆ ಎಂದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಎಷ್ಟಾದರೂ ಚೆನ್ನಾಗಿ ತಿಳಿಸಿ ಆದರೂ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ತನ್ನನ್ನು ಆತ್ಮನೆಂದು ತಿಳಿದಾಗಲೇ ಪರಮಾತ್ಮನ ಜ್ಞಾನವನ್ನು ತಿಳಿದುಕೊಳ್ಳಲು ಸಾಧ್ಯ. ಆತ್ಮವೂ ಎಂತಹ ಪುರುಷಾರ್ಥ ಮಾಡುವುದೋ ಅದೇರೀತಿಯಾಗುತ್ತದೆ. ಗಾಯನವೂ ಇದೆ - ಅಂತ್ಯಕಾಲದಲ್ಲಿ ಯಾರು ಸ್ತ್ರೀ ಸ್ಮರಣೆ ಮಾಡಿದರು....... ತಂದೆಯು ತಿಳಿಸುತ್ತಾರೆ - ನನ್ನನ್ನು ಯಾರು ನೆನಪು ಮಾಡುವರೋ ಅವರು ನನ್ನನ್ನು ಪಡೆಯುತ್ತಾರೆ, ಇಲ್ಲವೆಂದರೆ ಬಹಳ-ಬಹಳ ಶಿಕ್ಷೆಗಳನ್ನನುಭವಿಸಿ ಬರುತ್ತಾರೆ. ಅದು ಸತ್ಯಯುಗದಲ್ಲಿಯೂ ಅಲ್ಲ, ತ್ರೇತಾಯುಗದ ಕೊನೆಯಲ್ಲಿ ಬರುತ್ತಾರೆ. ಸತ್ಯ-ತ್ರೇತಾಯುಗಕ್ಕೆ ಬ್ರಹ್ಮಾನ ದಿನವೆಂದು ಹೇಳಲಾಗುತ್ತದೆ ಅಂದಮೇಲೆ ಒಬ್ಬ ಬ್ರಹ್ಮಾನೇ ಇರುವುದಿಲ್ಲ, ಬ್ರಹ್ಮಾನಿಗೆ ಬಹಳ ಮಂದಿ ಮಕ್ಕಳೂ ಇದ್ದಾರಲ್ಲವೆ. ಬ್ರಾಹ್ಮಣರ ದಿನ ಮತ್ತೆ ಬ್ರಾಹ್ಮಣರ ರಾತ್ರಿಯಾಗುವುದು. ಈಗ ತಂದೆಯು ರಾತ್ರಿಯಿಂದ ದಿನವನ್ನಾಗಿ ಮಾಡಲು ಬಂದಿದ್ದಾರೆ. ಬ್ರಾಹ್ಮಣರೇ ದಿನದಲ್ಲಿ ಹೋಗಲು ತಯಾರಿ ಮಾಡಿಕೊಳ್ಳುತ್ತೀರಿ. ತಂದೆಯು ಎಷ್ಟೊಂದು ತಿಳಿಸುತ್ತಾರೆ! ದೈವೀ ಧರ್ಮದ ಸ್ಥಾಪನೆಯಂತೂ ಅವಶ್ಯವಾಗಿ ಆಗಲೇಬೇಕಾಗಿದೆ. ಕಲಿಯುಗದ ವಿನಾಶವೂ ಆಗಬೇಕಾಗಿದೆ. ಯಾರಿಗೆ ಒಳಗೆ ಸ್ವಲ್ಪವಾದರೂ ಸಂಶಯವಿರುವುದೋ ಅವರು ಓಡಿ ಹೋಗುತ್ತಾರೆ. ಮೊದಲು ನಿಶ್ಚಯ ನಂತರ ಸಂಶಯವುಂಟಾಗಿ ಬಿಡುತ್ತದೆ. ಇಲ್ಲಿಂದ ಸತ್ತು ಮತ್ತೆ ಹಳೆಯ ಪ್ರಪಂಚದಲ್ಲಿ ಹೋಗಿ ಜನ್ಮ ಪಡೆಯುತ್ತಾರೆ, ವಿನಶ್ಯಂತಿಯಾಗಿ ಬಿಡುತ್ತಾರೆ. ತಂದೆಯ ಶ್ರೀಮತದಂತೆ ನಡೆಯಬೇಕಲ್ಲವೆ. ತಂದೆಯು ಮಕ್ಕಳಿಗೆ ಬಹಳ ಒಳ್ಳೊಳ್ಳೆಯ ಜ್ಞಾನ ಬಿಂದುಗಳನ್ನು ಕೊಡುತ್ತಿರುತ್ತಾರೆ.

ಮೊಟ್ಟ ಮೊದಲಿಗೆ ತಿಳಿಸಿ - ನೀವು ಆತ್ಮವಾಗಿದ್ದೀರಿ ದೇಹವಲ್ಲ. ಇಲ್ಲದಿದ್ದರೆ ಲಾಟರಿಯೆಲ್ಲವೂ ಮಾಯವಾಗಿ ಬಿಡುವುದು. ಭಲೆ ಅಲ್ಲಿ ರಾಜ ಹಾಗೂ ಪ್ರಜೆ ಎಲ್ಲರೂ ಸುಖಿಗಳಾಗಿರುತ್ತಾರೆ ಆದರೂ ಶ್ರೇಷ್ಠ ಪದವಿಯನ್ನೇ ಪಡೆಯುವ ಪುರುಷಾರ್ಥ ಮಾಡಬೇಕಲ್ಲವೆ. ಸುಖಧಾಮದಲ್ಲಂತೂ ಹೋಗುತ್ತೇವೆಂದಲ್ಲ, ರಾಜರಾಗಲು ಬಂದಿದ್ದೀರೆಂದ ಮೇಲೆ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಇಂತಹ ಬುದ್ಧಿವಂತಿಕೆಯು ಬೇಕು, ತಂದೆಯ ಸರ್ವೀಸ್ ಮಾಡಬೇಕು. ಆತ್ಮಿಕ ಸೇವೆಯಿಲ್ಲವೆಂದರೆ ಸ್ಥೂಲ ಸೇವೆಯೂ ಇದೆ. ಕೆಲವೊಂದೆಡೆ ಪುರುಷರೂ ಸಹ ಪರಸ್ಪರ ತರಗತಿಯನ್ನು ನಡೆಸುತ್ತಿರುತ್ತಾರೆ. ಒಬ್ಬ ಸಹೋದರಿಯು ಮಧ್ಯ-ಮಧ್ಯದಲ್ಲಿ ಹೋಗಿ ತರಗತಿಯನ್ನು ಮಾಡಿ ಬರುತ್ತಾರೆ. ವೃಕ್ಷವು ನಿಧಾನ-ನಿಧಾನವಾಗಿ ವೃದ್ಧಿ ಹೊಂದುತ್ತದೆಯಲ್ಲವೆ. ಸೇವಾಕೇಂದ್ರಗಳಿಗೆ ಎಷ್ಟೊಂದು ಮಂದಿ ಬರುತ್ತಾರೆ ಮತ್ತೆ ನಡೆಯುತ್ತಾ-ನಡೆಯುತ್ತಾ ಮಾಯವಾಗಿ ಬಿಡುತ್ತದೆ. ವಿಕಾರದಲ್ಲಿ ಬಿದ್ದರೆ ಮತ್ತೆ ಸೇವಾಕೇಂದ್ರಕ್ಕೂ ಬರುವುದಕ್ಕೆ ನಾಚಿಕೆಯಾಗುತ್ತದೆ. ಬಹಳ ತಣ್ಣಗಾಗಿ ಬಿಡುತ್ತಾರೆ. ಇವರು ರೋಗಿಯಾಗಿ ಬಿಟ್ಟರೆಂದು ತಂದೆಯು ಹೇಳುತ್ತಾರೆ. ತಂದೆಯು ಎಲ್ಲಾ ಮಾತುಗಳನ್ನು ತಿಳಿಸುತ್ತಿರುತ್ತಾರೆ. ಪ್ರತಿನಿತ್ಯ ತಮ್ಮ ಲೆಕ್ಕ ಪತ್ರವನ್ನಿಡಿ. ಜಮಾ ಮತ್ತು ನಷ್ಟವಾಗುತ್ತದೆ. ಲಾಭ ಮತ್ತು ನಷ್ಟ. ಆತ್ಮವು ಪವಿತ್ರವಾಗಿ ಬಿಟ್ಟರೆ 21 ಜನ್ಮಗಳಿಗಾಗಿ ಜಮಾ ಆಯಿತು. ತಂದೆಯ ನೆನಪಿನಿಂದಲೇ ಜಮಾ ಆಗುವುದು, ಪಾಪಗಳು ತುಂಡಾಗುತ್ತವೆ. ಹೇ ಪತಿತ-ಪಾವನ ತಂದೆಯೇ ಬಂದು ನಮ್ಮನ್ನು ಪಾವನ ಮಾಡಿ ಎಂದು ಹೇಳುತ್ತೀರಲ್ಲವೆ. ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಿ ಎಂದು ಹೇಳುವುದಿಲ್ಲ. ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ಮುಕ್ತಿ-ಜೀವನ್ಮುಕ್ತಿ ಎರಡೂ ಪಾವನಧಾಮಗಳಾಗಿವೆ. ನಾವು ಮುಕ್ತಿ-ಜೀವನ್ಮುಕ್ತಿಯ ಆಸ್ತಿಯನ್ನು ಪಡೆಯುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಯಾರು ಪೂರ್ಣರೀತಿಯಿಂದ ತಿಳಿದುಕೊಳ್ಳುವುದಿಲ್ಲವೋ ಅವರು ಕೊನೆಯಲ್ಲಿ ಬರುತ್ತಾರೆ. ಸ್ವರ್ಗದಲ್ಲಂತೂ ಬರಬೇಕಾಗಿದೆ, ಎಲ್ಲರೂ ತಮ್ಮ-ತಮ್ಮ ಸಮಯದಲ್ಲಿ ಬರುತ್ತಾರೆ, ಎಲ್ಲಾ ಮಾತುಗಳನ್ನು ತಿಳಿಸಿಕೊಡಲಾಗುತ್ತದೆ. ಕೂಡಲೇ ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಇಲ್ಲಿ ನಿಮಗೆ ತಂದೆಯನ್ನು ನೆನಪು ಮಾಡಲು ಎಷ್ಟೊಂದು ಸಮಯ ಸಿಗುತ್ತದೆ! ಯಾರೇ ಬಂದರೂ ಸಹ ಅವರಿಗೆ ಇದನ್ನು ತಿಳಿಸಿ - ಮೊದಲು ತಮ್ಮನ್ನು ಆತ್ಮನೆಂದು ತಿಳಿಯಿರಿ, ಈ ಜ್ಞಾನವನ್ನು ತಂದೆಯೇ ಕೊಡುತ್ತಾರೆ. ಅವರು ಎಲ್ಲಾ ಆತ್ಮಗಳ ಪಿತನಾಗಿದ್ದಾರೆ ಅಂದಾಗ ಆತ್ಮಾಭಿಮಾನಿಯಾಗಬೇಕಾಗಿದೆ. ಆತ್ಮವು ಜ್ಞಾನವನ್ನು ತೆಗೆದುಕೊಳ್ಳುತ್ತದೆ, ಪರಮಾತ್ಮ ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ. ರಚಯಿತನನ್ನು ನೆನಪು ಮಾಡುವುದರಿಂದಲೇ ಪಾಪಗಳು ಭಸ್ಮವಾಗುತ್ತವೆ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿದುಕೊಳ್ಳುವುದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ. ಕೇವಲ ಇದನ್ನೇ ಅನ್ಯರಿಗೂ ತಿಳಿಸಿರಿ. ನಿಮ್ಮ ಬಳಿ ಚಿತ್ರಗಳೂ ಇವೆ. ಇವಂತೂ ಇಡೀ ದಿನ ಬುದ್ಧಿಯಲ್ಲಿರಬೇಕು. ನೀವಂತೂ ವಿದ್ಯಾರ್ಥಿಗಳಲ್ಲವೆ. ಬಹಳ ಮಂದಿ ಗೃಹಸ್ಥಿಗಳೂ ವಿದ್ಯಾರ್ಥಿಗಳಾಗಿರುತ್ತಾರೆ. ನೀವೂ ಸಹ ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನರಾಗಬೇಕಾಗಿದೆ. ಸಹೋದರ-ಸಹೋದರಿಯ ನಡುವೆ ಎಂದೂ ಕೆಟ್ಟ ದೃಷ್ಟಿ ಬರಲು ಸಾಧ್ಯವಿಲ್ಲ. ನೀವಂತೂ ಬ್ರಹ್ಮಾ ಮುಖವಂಶಾವಳಿಯಲ್ಲವೆ. ವಿಕಾರಿ ದೃಷ್ಟಿಯನ್ನು ನಿರ್ವಿಕಾರಿ ಮಾಡಿಕೊಳ್ಳಲು ಬಹಳ ಪರಿಶ್ರಮ ಪಡಬೇಕಾಗಿದೆ ಏಕೆಂದರೆ ಅರ್ಧ ಕಲ್ಪದಿಂದ ಹವ್ಯಾಸವಾಗಿ ಬಿಟ್ಟಿದೆ, ಅದನ್ನು ತೆಗೆಯುವುದರಲ್ಲಿ ಬಹಳ ಪರಿಶ್ರಮವಿದೆ. ಎಲ್ಲರೂ ಬರೆಯುತ್ತಾರೆ - ತಂದೆಯೇ, ವಿಕಾರಿ ದೃಷ್ಟಿಯನ್ನು ತೆಗೆಯುವ ಯಾವ ವಿಚಾರವನ್ನು ತಿಳಿಸಿದರು, ಇದು ಬಹಳ ಕಠಿಣವಾಗಿದೆ. ಘಳಿಗೆ-ಘಳಿಗೆಗೆ ಬುದ್ಧಿಯು ಹೊರಟು ಹೋಗುತ್ತದೆ. ಬಹಳ ಸಂಕಲ್ಪಗಳು ಬರುತ್ತವೆ ಅಂದಮೇಲೆ ಈಗ ಕಣ್ಣುಗಳನ್ನು ಏನು ಮಾಡುವುದು? ಸೂರದಾಸರ ದೃಷ್ಟಾಂತವನ್ನು ಕೊಡುತ್ತಾರೆ. ಅವರಂತೂ ಒಂದು ಕಥೆಯನ್ನಾಗಿ ಮಾಡಿ ಬಿಟ್ಟಿದ್ದಾರೆ. ಸೂರದಾಸರು ಕಣ್ಣುಗಳು ನನಗೆ ಮೋಸ ಮಾಡುತ್ತವೆ ಎಂಬುದನ್ನು ನೋಡಿ ಕಣ್ಣುಗಳನ್ನೇ ತೆಗೆದಿಟ್ಟರು. ಈಗಂತೂ ಆ ಮಾತಿಲ್ಲ, ಈ ಕಣ್ಣುಗಳು ಎಲ್ಲರಿಗೂ ಇವೆ ಆದರೆ ವಿಕಾರಿಯಾಗಿವೆ. ಇವನ್ನು ನಿರ್ವಿಕಾರಿಯನ್ನಾಗಿ ಮಾಡಿಕೊಳ್ಳಬೆಕಾಗಿದೆ. ಮನೆಯಲ್ಲಿದ್ದು ಇದನ್ನು ಮಾಡುವುದು ಸಾಧ್ಯವಿಲ್ಲವೆಂದು ಮನುಷ್ಯರು ತಿಳಿಯುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಇದು ಸಾಧ್ಯತೆಯಿದೆ ಏಕೆಂದರೆ ಬಹಳ-ಬಹಳ ಸಂಪಾದನೆಯಿದೆ, ನೀವು ಜನ್ಮ-ಜನ್ಮಾಂತರಕ್ಕಾಗಿ ಪದಮಾಪತಿಗಳಾಗುತ್ತೀರಿ. ಅಲ್ಲಿ ಲೆಕ್ಕವೇ ಇರುವುದಿಲ್ಲ. ಇತ್ತೀಚೆಗೆ ತಂದೆಯು ಪದಮಾಪತಿ, ಪದ್ಮಾವತಿಯೆಂದೇ ಹೆಸರನ್ನಿಟ್ಟು ಬಿಡುತ್ತಾರೆ. ನೀವು ಎಣಿಸಲಾರದಷ್ಟು ಪದಮಾಪತಿಗಳಾಗುತ್ತೀರಿ. ಅಲ್ಲಿ ಎಣಿಕೆಯೇ ಇರುವುದಿಲ್ಲ. ಯಾವಾಗ ರೂಪಾಯಿ ಮುಂತಾದ ಪೈಸೆಗಳು ಬರುತ್ತವೆಯೇ ಆಗ ಎಣಿಕೆ ಮಾಡಲಾಗುತ್ತದೆ. ಸತ್ಯಯುಗದಲ್ಲಿ ಚಿನ್ನ-ಬೆಳ್ಳಿಯ ನಾಣ್ಯಗಳು ಚಲಾವಣೆಯಲ್ಲಿರುತ್ತದೆ. ಮೊದಲು ರಾಮ-ಸೀತೆಯರ ನಾಣ್ಯಗಳು ಸಿಗುತ್ತಿತ್ತು, ಬಾಕಿ ಸೂರ್ಯವಂಶಿ ರಾಜಧಾನಿಯ ನಾಣ್ಯಗಳನ್ನೆಂದೂ ನೋಡಿಲ್ಲ. ಚಂದ್ರವಂಶಿಯ ನಾಣ್ಯಗಳನ್ನು ನೋಡುತ್ತಲೇ ಬಂದೆವು. ಮೊದಲಂತೂ ಎಲ್ಲವೂ ಚಿನ್ನದ ನಾಣ್ಯಗಳೇ ಇತ್ತು, ನಂತರ ಬೆಳ್ಳಿಯದು. ಈ ತಾಮ್ರ ಇತ್ಯಾದಿಗಳೆಲ್ಲವೂ ಈಗೀಗ ಬಂದಿವೆ. ಈಗನೀವು ಮಕ್ಕಳು ತಂದೆಯಿಂದ ಪುನಃ ಆಸ್ತಿಯನ್ನು ಪಡೆಯುತ್ತೀರಿ. ಸತ್ಯಯುಗದಲ್ಲಿ ಯಾವ ರೀತಿ ಪದ್ಧತಿಗಳು ನಡೆಯಬೇಕೋ ಅದು ನಡೆಯುತ್ತದೆ. ನೀವು ತಮ್ಮ ಪುರುಷಾರ್ಥ ಮಾಡಿ. ಸ್ವರ್ಗದಲ್ಲಿ ಬಹಳ ಕೆಲವರೇ ಇರುತ್ತಾರೆ, ದೀರ್ಘಾಯಸ್ಸಿರುತ್ತದೆ, ಅಕಾಲ ಮೃತ್ಯುವಿರುವುದಿಲ್ಲ ನಾವು ಕಾಲನ ಮೇಲೆ ಜಯ ಗಳಿಸುತ್ತೇವೆಂದು ತಿಳಿಯುತ್ತೀರಿ. ಸಾಯುವ ಕೆಲಸವೇ ಇರುವುದಿಲ್ಲ, ಅದಕ್ಕೆ ಅಮರಲೋಕವೆಂದೂ, ಇದಕ್ಕೆ ಮೃತ್ಯುಲೋಕವೆಂದೂ ಹೇಳಲಾಗುತ್ತದೆ. ಅಮರಲೋಕದಲ್ಲಿ ಹಾಹಾಕಾರವಿರುವುದಿಲ್ಲ. ಯಾರಾದರೂ ವೃದ್ಧರು ಮರಣ ಹೊಂದಿದರೆ ಹೋಗಿ ಚಿಕ್ಕ ಮಗುವಾಗುವರೆಂದು ಇನ್ನೂ ಖುಷಿಯಾಗುತ್ತದೆ. ಇಲ್ಲಂತೂ ಸಾಯುವಾಗಲೂ ಅಳತೊಡಗುತ್ತಾರೆ. ನಿಮಗೆ ಎಷ್ಟು ಒಳ್ಳೆಯ ಜ್ಞಾನವು ಸಿಗುತ್ತದೆ ಅಂದಮೇಲೆ ಎಷ್ಟೊಂದು ಧಾರಣೆಯಿರಬೇಕು, ಅನ್ಯರಿಗೂ ತಿಳಿಸಬೇಕಾಗಿದೆ. ನಾವು ಆತ್ಮಿಕ ಸೇವೆಯನ್ನು ಮಾಡಲು ಬಯಸುತ್ತೇವೆಂದು ತಂದೆಗೆ ಯಾರಾದರೂ ಹೇಳಿದರೆ ಕೂಡಲೇ ತಂದೆಯು ಹೇಳುತ್ತಾರೆ - ಭಲೆ ಮಾಡಿರಿ. ತಂದೆಯು ಯಾರನ್ನೂ ನಿರಾಕರಿಸುವುದಿಲ್ಲ, ಜ್ಞಾನವಿಲ್ಲವೆಂದರೆ ಅಜ್ಞಾನವೇ ಇದೆಯೆಂದರ್ಥ. ಅಜ್ಞಾನದಿಂದ ಮತ್ತೆ ಬಹಳ ಡಿಸ್ಸರ್ವೀಸ್ ಮಾಡಿ ಬಿಡುತ್ತಾರೆ. ಬಹಳ ಚೆನ್ನಾಗಿ ಸರ್ವೀಸ್ ಮಾಡಬೇಕಲ್ಲವೆ, ಆಗಲೇ ಲಾಟರಿ ಸಿಗುವುದು. ಬಹಳ ದೊಡ್ಡ ಸಂಪಾದನೆಯಾಗಿದೆ, ಇದು ಈಶ್ವರೀಯ ಲಾಟರಿಯಾಗಿದೆ! ನೀವು ರಾಜ-ರಾಣಿಯಾಗುತ್ತೀರೆಂದರೆ ನಿಮ್ಮ ಮಕ್ಕಳು, ಮೊಮ್ಮಕ್ಕಳೆಲ್ಲರೂ ತಿನ್ನುತ್ತಾ ಬರುತ್ತಾರೆ. ಇಲ್ಲಂತೂ ತಮ್ಮ ಕರ್ಮಗಳನುಸಾರ ಪಡೆಯುತ್ತಾರೆ. ಯಾರಾದರೂ ಧನ ದಾನ ಮಾಡಿದರೆ ರಾಜರಾಗುತ್ತಾರೆ. ತಂದೆಯು ಎಲ್ಲವನ್ನೂ ತಿಳಿಸಿ ಕೊಡುತ್ತಾರೆ. ಅದನ್ನು ಚೆನ್ನಾಗಿ ತಿಳಿದುಕೊಂಡು ಧಾರಣೆ ಮಾಡಿಕೊಳ್ಳಬೇಕಾಗಿದೆ, ಸರ್ವೀಸನ್ನೂ ಮಾಡಬೇಕು. ಸಾವಿರಾರು ಮಂದಿಯ ಸೇವೆಯಾಗುತ್ತದೆ. ಕೆಲವೊಂದು ಕಡೆ ಭಕ್ತಿಯ ಭಾವವಿರುವವರು ಬಹಳ ಒಳ್ಳೆಯವರಿರುತ್ತಾರೆ. ಬಹಳ ಭಕ್ತಿ ಮಾಡಿದ್ದರೆ ಜ್ಞಾನವೂ ನಾಟುತ್ತದೆ. ಚಹರೆಯಿಂದಲೇ ಅರ್ಥವಾಗುವುದು. ಕೇಳುತ್ತಾ ಖುಷಿಯಾಗುತ್ತಿರುತ್ತಾರೆ. ಯಾರು ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ಅಲ್ಲಿ-ಇಲ್ಲಿ ನೋಡುತ್ತಿರುತ್ತಾರೆ ಮತ್ತು ಕಣ್ಣನ್ನು ಮುಚ್ಚಿ ಕುಳಿತುಕೊಳ್ಳುತ್ತಾರೆ. ತಂದೆಯು ಎಲ್ಲವನ್ನು ನೋಡುತ್ತಾರೆ. ಒಂದುವೇಳೆ ಯಾರಿಗೂ ತಿಳಿಸಿಕೊಡಲಿಲ್ಲವೆಂದರೆ ಏನನ್ನೂ ತಿಳಿದುಕೊಂಡಿಲ್ಲವೆಂದರ್ಥ. ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟು ಬಿಡುತ್ತಾರೆ. ಇದು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುವ ಸಮಯವಾಗಿದೆ. ಈಗ ಎಷ್ಟು ತೆಗೆದುಕೊಳ್ಳುವಿರೋ ಅದು ಜನ್ಮ-ಜನ್ಮಾಂತರ, ಕಲ್ಪ-ಕಲ್ಪಾಂತರವೂ ಸಿಗುವುದು. ಇಲ್ಲವಾದರೆ ಮತ್ತೆ ಕೊನೆಯಲ್ಲಿ ಬಹಳ ಪಶ್ಚಾತ್ತಾಪ ಪಡುವಿರಿ ಮತ್ತು ಎಲ್ಲರಿಗೂ ಸಾಕ್ಷಾತ್ಕಾರವಾಗುವುದು - ನಾವು ಸಂಪೂರ್ಣ ಓದಲಿಲ್ಲ ಆದ್ದರಿಂದ ನೆನಪು ಮಾಡಲೂ ಸಾಧ್ಯವಿಲ್ಲ ಅಂದಮೇಲೆ ಹೋಗಿ ಏನಾಗುವರು? ನೌಕರ, ಚಾಕರ, ಸಾಧಾರಣ ಪ್ರಜೆ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಹೇಗೇಗೆ ಮಾಡುತ್ತಾರೆಯೋ ಅದರನುಸಾರ ಫಲ ಸಿಗುತ್ತದೆ. ಹೊಸ ಪ್ರಪಂಚಕ್ಕಾಗಿ ಕೇವಲ ನೀವೇ ಪುರುಷಾರ್ಥ ಮಾಡುತ್ತಿದ್ದೀರಿ. ಮನುಷ್ಯರು ದಾನ-ಪುಣ್ಯ ಮಾಡುತ್ತಾರೆ, ಅದೂ ಸಹ ಹೊಸ ಪ್ರಪಂಚಕ್ಕಾಗಿ, ಇದಂತೂ ಸಾಮಾನ್ಯ ಮಾತಾಗಿದೆ. ನಾವು ಒಳ್ಳೆಯ ಕೆಲಸವನ್ನು ಮಾಡುತ್ತೇವೆಂದರೆ ಅದರ ಫಲವು ಇನ್ನೊಂದು ಜನ್ಮದಲ್ಲಿ ಸಿಗುತ್ತದೆ. ನಿಮ್ಮದಂತೂ 21 ಜನ್ಮಗಳ ಮಾತಾಗಿದೆ. ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಕರ್ಮ ಮಾಡಿ, ಆಲ್ರೌಂಡರ್ ಆಗಿ. ಮೊದಲು ನಂಬರ್ವನ್ ಜ್ಞಾನಿ ಆತ್ಮ ಮತ್ತು ಯೋಗಿ ಆತ್ಮನಾಗಬೇಕು. ಜ್ಞಾನಿಗಳೂ ಬೇಕು, ಭಾಷಣಕ್ಕಾಗಿ ಯಾರು ಎಲ್ಲಾ ಪ್ರಕಾರದ ಸರ್ವೀಸ್ ಮಾಡುವರೋ ಅಂತಹ ಮಹಾರಥಿಗಳನ್ನು ಕರೆಸುತ್ತಾರಲ್ಲವೆ. ಇದರಿಂದ ಪುಣ್ಯವಂತೂ ಆಗಿಯೇ ಆಗುತ್ತದೆ. ನಾಲ್ಕು ವಿಷಯಗಳಿವೆಯಲ್ಲವೆ. ಯೋಗದಲ್ಲಿದ್ದು ಯಾವುದೇ ಕರ್ಮ ಮಾಡಿದರೆ ಒಳ್ಳೆಯ ಅಂಕಗಳು ಸಿಗುತ್ತವೆ. ತಮ್ಮ ಹೃದಯದಿಂದ ಕೇಳಿಕೊಳ್ಳಿ, ನಾವು ಸರ್ವೀಸ್ ಮಾಡುತ್ತೇವೆಯೇ? ಅಥವಾ ಕೇವಲ ತಿನ್ನುತ್ತೇವೆ, ಮಲಗುತ್ತೇವೆಯೇ? ಇಲ್ಲಂತೂ ಇದು ವಿದ್ಯೆಯಾಗಿದೆ, ಮತ್ತ್ಯಾವುದರ ಮಾತಿಲ್ಲ. ನೀವು ಮನುಷ್ಯರಿಂದ ದೇವತೆ, ನರನಿಂದ ನಾರಾಯಣನಾಗುತ್ತೀರಿ. ಅಮರಕಥೆ, ಮೂರನೆಯ ನೇತ್ರದ ಇದೊಂದೇ ಆಗಿದೆ. ಮನುಷ್ಯರಂತೂ ಹೋಗಿ ಎಲ್ಲಾ ಸುಳ್ಳು ಕಥೆಗಳನ್ನು ಕೇಳುತ್ತಾರೆ. ತಂದೆಯ ವಿನಃ ಮೂರನೆಯ ನೇತ್ರವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಈಗ ನಿಮಗೆ ಮೂರನೆಯ ನೇತ್ರವು ಸಿಕ್ಕಿದೆ, ಇದರಿಂದ ನಿಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೀರಿ. ಈ ವಿದ್ಯೆಯಲ್ಲಿ ಕುಮಾರ-ಕುಮಾರಿಯರು ಬಹಳ ತೀಕ್ಷ್ಣವಾಗಿ ಮುಂದೆಹೋಗಬೇಕು. ಚಿತ್ರಗಳೂ ಇವೆ, ಯಾರೊಂದಿಗಾದರೂ ಕೇಳಿ- ಗೀತೆಯ ಭಗವಂತ ಯಾರು? ಮುಖ್ಯಮಾತೇ ಇದಾಗಿದೆ. ಭಗವಂತನು ಒಬ್ಬರೇ ಇರುವರು, ಅವರಿಂದ ಮುಕ್ತಿಧಾಮದ ಆಸ್ತಿಯು ಸಿಗುತ್ತದೆ. ನಾವು ಅಲ್ಲಿನ ನಿವಾಸಿಗಳಾಗಿದ್ದೆವು, ಇಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೇವೆ. ಈಗ ಪಾವನರಾಗಲು ಹೇಗೆ ಸಾಧ್ಯ! ಪತಿತ ಪಾವನನಂತೂ ಒಬ್ಬರೇ ತಂದೆಯಾಗಿದ್ದಾರೆ. ಮುಂದೆ ಹೋದಂತೆ ನೀವು ಮಕ್ಕಳ ಸ್ಥಿತಿಯು ಬಹಳ ಚೆನ್ನಾಗಿ ಆಗುತ್ತಿರುತ್ತದೆ. ತಂದೆಯು ಹೆಜ್ಜೆ-ಹೆಜ್ಜೆಯಲ್ಲಿಯೂ ತಿಳುವಳಿಕೆ ಕೊಡುತ್ತಿರುತ್ತಾರೆ. ಒಬ್ಬ ತಂದೆಯ ನೆನಪು ಮಾಡುತ್ತೀರೆಂದರೆ ಜನ್ಮ-ಜನ್ಮಾಂತರದ ಪಾಪಗಳು ಅಳಿಸಿ ಹೋಗುತ್ತದೆ. ತಮ್ಮ ಹೃದಯದೊಂದಿಗೆ ಕೇಳಿಕೊಳ್ಳಿ - ನಾವು ಎಷ್ಟು ನೆನಪು ಮಾಡುತ್ತೇವೆ? ಚಾರ್ಟನ್ನಿಡುವುದು ಒಳ್ಳೆಯದು, ತಮ್ಮ ಉನ್ನತಿ ಮಾಡಿಕೊಳ್ಳಿ. ತಮ್ಮ ಮೇಲೆ ದಯೆ ತೋರಿಸಿಕೊಂಡು ತಮ್ಮ ಚಲನೆಯನ್ನು ನೋಡಿಕೊಳ್ಳುತ್ತಾ ಇರಿ. ಒಂದುವೇಳೆ ನೀವು ತಪ್ಪುಗಳನ್ನೇ ಮಾಡುತ್ತೀರೆಂದರೆ ರಿಜಿಸ್ಟರ್ ಹಾಳಾಗುವುದು. ಇಲ್ಲಂತೂ ದೈವೀ ಚಲನೆಯಿರಬೇಕು. ಗಾಯನವೂ ಇದೆಯಲ್ಲವೆ - ಏನು ತಿನ್ನಿಸುವಿರೋ, ಎಲ್ಲಿ ಕೂರಿಸುವಿರೋ, ಯಾವ ಆದೇಶ ನೀಡುವಿರೋ ಅದರಂತೆಯೇ ನಡೆಯುತ್ತೇನೆ ಅಂದಮೇಲೆ ಆದೇಶವನ್ನು ಅವಶ್ಯವಾಗಿ ತನುವಿನ ಮೂಲಕವೇ ಕೊಡುತ್ತಾರಲ್ಲವೆ. ಗೇಟ್ ವೇ ಟು ಹೆವಿನ್ (ಸ್ವರ್ಗದ ದ್ವಾರ) ಈ ಶಬ್ಧವು ಬಹಳ ಚೆನ್ನಾಗಿದೆ. ಇದು ಸ್ವರ್ಗಕ್ಕೆ ಹೋಗುವ ಮಾರ್ಗವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಪುಣ್ಯಾತ್ಮರಾಗಲು ಮತ್ತೆಲ್ಲಾ ಆಸೆಗಳನ್ನು ಬಿಟ್ಟು ಇದನ್ನು ಪಕ್ಕಾ ಮಾಡಿಕೊಳ್ಳಿ - ಬಾಬಾ, ತಾವು ಏನಾದರೂ ತಿನ್ನಿಸಿ, ಎಲ್ಲಿಯಾದರೂ ಕೂರಿಸಿ. ಯಾವುದೇ ಪಾಪದ ಕೆಲಸವನ್ನು ಮಾಡಬಾರದು.

2. ಈಶ್ವರೀಯ ಲಾಟರಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಆತ್ಮಿಕ ಸೇವೆಯಲ್ಲಿ ತೊಡಗಬೇಕಾಗಿದೆ. ಜ್ಞಾನದ ಧಾರಣೆ ಮಾಡಿ ಅನ್ಯರಿಗೂ ಮಾಡಿಸಬೇಕಾಗಿದೆ. ಒಳ್ಳೆಯ ಅಂಕಗಳನ್ನು ಪಡೆಯಲು ನೆನಪಿನಲ್ಲಿದ್ದು ಯಾವುದೇ ಕರ್ಮವನ್ನು ಮಾಡಬೇಕು.

ವರದಾನ:
ಸದಾ ಸ್ನೇಹಿಗಳಾಗಿ ಮಾಯೆ ಮತ್ತು ಪ್ರಕೃತಿಯನ್ನು ದಾಸಿಯನ್ನಾಗಿ ಮಾಡಿಕೊಳ್ಳುವ ಪರಿಶ್ರಮ ಅಥವಾ ಕಷ್ಟದಿಂದ ಮುಕ್ತ ಭವ.

ಯಾವ ಮಕ್ಕಳು ಸದಾ ಸ್ನೇಹಿಯಾಗಿದ್ದಾರೆ ಅವರು ಲವಲೀನವಾಗಿರುವ ಕಾರಣ ಪರಿಶ್ರಮದಿಂದ ಸದಾ ಸುರಕ್ಷಿತರಾಗಿರುತ್ತಾರೆ. ಅವರ ಮುಂದೆ ಪ್ರಕೃತಿ ಮತ್ತು ಮಾಯೆ ಎರಡೂ ಈಗಿನಿಂದಲೇ ದಾಸಿಯಾಗಿ ಬಿಡುತ್ತದೆ ಅರ್ಥಾತ್ ಸದಾ ಸ್ನೇಹಿ ಆತ್ಮ ಮಾಲಿಕ ಆಗಿ ಬಿಡುತ್ತದೆ. ಆಗ ಪ್ರಕೃತಿ, ಮಾಯೆಗೆ ಸದಾ ಸ್ನೇಹಿ ಮಕ್ಕಳ ಸಮಯ ಹಾಗೂ ಸಂಕಲ್ಪವನ್ನು ತಮ್ಮ ಸೆಳೆಯಲು ಧೈರ್ಯವೇ ಇರುವುದಿಲ್ಲ. ಅವರ ಪ್ರತಿ ಸಮಯ, ಪ್ರತಿ ಸಂಕಲ್ಪ ತಂದೆಯ ನೆನಪು ಮತ್ತು ಸೇವೆಯ ಪ್ರತಿ ಇರುತ್ತದೆ. ಸ್ನೇಹಿ ಆತ್ಮರ ಸ್ಥಿತಿಯ ಗಾಯನವಾಗಿದೆ ಒಬ್ಬ ತಂದೆ ಬಿಟ್ಟರೆ ಇನ್ನೊಬ್ಬರಿಲ್ಲ, ತಂದೆಯೇ ಸಂಸಾರವಾಗಿದ್ದಾರೆ. ಅವರು ಸಂಕಲ್ಪದಿಂದಲೂ ಅಧೀನರಾಗಲು ಸಾಧ್ಯವಿಲ್ಲ.

ಸ್ಲೋಗನ್:
ಜ್ಞಾನ ಪೂರ್ಣರಾದಾಗ ಸಮಸ್ಯೆಗಳು ಸಹಾ ಮನೋರಂಜನೆಯ ಆಟದ ಅನುಭವವಾಗುವುದು.

ಅವ್ಯಕ್ತ ಸೂಚನೆ:- ಈಗ ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.

ಈ ಕಲಿಯುಗೀ ತಮೋಪ್ರಧಾನ ಜಡಜಡಿಭೂತ ಹಳೆಯ ವೃಕ್ಷವನ್ನು ಭಸ್ಮ ಮಾಡುವುದಕ್ಕೆ ಸಂಘಟಿತ ರೂಪದಲ್ಲಿ ಫುಲ್ ಪೋರ್ಸ್ನಿಂದ ಯೋಗ ಜ್ವಾಲೆಯನ್ನು ಪ್ರಜ್ವಲಿತಗೋಳಿಸಿ ಆದರೆ ಇಂತಹ ಜ್ವಾಲಾ ಸ್ವರೂಪದ ನೆನಪು ಯಾವಾಗ ಇರುತ್ತದೆಯೆಂದರೆ ನೆನಪು ಜೋಡಣೆ ಸದಾ ಜೋಡಣೆಯಾಗಿದ್ದಾಗ. ಒಂದುವೇಳೆ ಮತ್ತೆ-ಮತ್ತೆ ಜೋಡಣೆ ಕತ್ತರಿಸಿದಾಗ, ಮತ್ತೆ ಜೋಡಿಸಲು ಸಮಯ ಹಿಡಿಸುತ್ತದೆ, ಪರಿಶ್ರಮವೂ ಆಗುತ್ತದೆ ಮತ್ತು ಶಕ್ತಿಶಾಲಿಯ ಬದಲಾಗಿ ನಿರ್ಬಲರಾಗಿ ಬಿಡುತ್ತಾರೆ.