08.11.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಇಲ್ಲಿ ರಾಜ್ಯಭಾಗ್ಯಕ್ಕಾಗಿ ರಾಜಯೋಗದ ವಿದ್ಯೆಯನ್ನು ಓದುತ್ತಿದ್ದೀರಿ, ಇದು ನಿಮ್ಮ
ಹೊಸವಿದ್ಯೆಯಾಗಿದೆ”
ಪ್ರಶ್ನೆ:
ಈ ವಿದ್ಯೆಯಲ್ಲಿ
ಕೆಲವು ಮಕ್ಕಳು ನಡೆಯುತ್ತಾ-ನಡೆಯುತ್ತಾ ಅನುತ್ತೀರ್ಣರಾಗುತ್ತಾರೆ - ಏಕೆ?
ಉತ್ತರ:
ಏಕೆಂದರೆ ಈ
ವಿದ್ಯೆಯಲ್ಲಿ ಮಾಯೆಯೊಂದಿಗೆ ಬಾಕ್ಸಿಂಗ್ ಆಗಿದೆ. ಈ ಮಾಯೆಯ ಬಾಕ್ಸಿಂಗ್ನಲ್ಲಿ ಬುದ್ಧಿಗೆ ಕಠಿಣ
ಪೆಟ್ಟಾಗುವ ಕಾರಣ ತಂದೆಯ ಜೊತೆ ಸತ್ಯವಾಗಿರುವುದಿಲ್ಲ, ಸತ್ಯವಾಗಿರುವವರು ಸದಾ
ಸುರಕ್ಷಿತರಾಗಿರುತ್ತಾರೆ.
ಓಂ ಶಾಂತಿ.
ಇದಂತೂ ಎಲ್ಲಾ ಮಕ್ಕಳಿಗೂ ನಿಶ್ಚಯವಿರುತ್ತದೆ. ನಾವಾತ್ಮಗಳಿಗೆ ಪರಮಾತ್ಮ ಓದಿಸುತ್ತಾರೆ. 5000
ವರ್ಷಗಳ ನಂತರ ಒಮ್ಮೆಯೇ ಬೇಹದ್ದಿನ ತಂದೆಯು ಬಂದು ಬೇಹದ್ದಿನ ಮಕ್ಕಳಿಗೆ ಓದಿಸುತ್ತಾರೆ. ಯಾರೇ
ಹೊಸವ್ಯಕ್ತಿಯು ಈ ಮಾತುಗಳನ್ನು ಕೇಳಿದರೆ ಅದನ್ನು ತಿಳಿದುಕೊಳ್ಳಲಾಗುವುದಿಲ್ಲ. ಆತ್ಮಿಕ ತಂದೆ,
ಆತ್ಮಿಕ ಮಕ್ಕಳೆಂದರೆ ಏನಾಗಿದ್ದಾರೆ ಎಂದೂ ಸಹ ತಿಳಿದುಕೊಳ್ಳಲು ಸಾಧ್ಯವಿಲ್ಲ. ನೀವು ಮಕ್ಕಳು
ಮಾತ್ರ ನಾವು ಸಹೋದರರಾಗಿದ್ದೇವೆಂದು ತಿಳಿದುಕೊಂಡಿದ್ದೀರಿ. ಅವರು ನಮ್ಮ ತಂದೆಯೂ ಆಗಿದ್ದಾರೆ,
ಶಿಕ್ಷಕರೂ ಆಗಿದ್ದಾರೆ, ಸದ್ಗುರುವೂ ಸಹ ಆಗಿದ್ದಾರೆ. ನೀವು ಮಕ್ಕಳಿಗೆ ಇದು ತಾನೇತಾನಾಗಿಯೇ
ನೆನಪಿರುತ್ತದೆ. ಇಲ್ಲಿ ಕುಳಿತಿದ್ದು ನಾವೆಲ್ಲಾ ಆತ್ಮಗಳಿಗೂ ಒಬ್ಬ ಆತ್ಮಿಕ ತಂದೆಯಾಗಿದ್ದಾರೆಂದು
ತಿಳಿದುಕೊಂಡಿರಬಹುದು. ಎಲ್ಲಾ ಆತ್ಮಗಳು ಅವರನ್ನು ನೆನಪು ಮಾಡುತ್ತಾರೆ. ಯಾವುದೇ
ಧರ್ಮದವರಾಗಿರಬಹುದು, ಎಲ್ಲಾ ಮನುಷ್ಯಮಾತ್ರರನ್ನೂ ಸಹ ಅಗತ್ಯವಾಗಿ ತಂದೆಯನ್ನು ನೆನಪು ಮಾಡುತ್ತಾರೆ.
ತಂದೆಯು ತಿಳಿಸುತ್ತಾರೆ - ಎಲ್ಲರಲ್ಲಿಯೂ ಆತ್ಮವಿರುತ್ತದೆಯಲ್ಲವೆ. ಈಗ ತಂದೆಯು ತಿಳಿಸುತ್ತಾರೆ -
ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯಿರಿ. ಇಲ್ಲಿ ನೀವಾತ್ಮಗಳು
ಪಾತ್ರವನ್ನಭಿನಯಿಸುತ್ತಿದ್ದೀರಿ. ಹೇಗೆ ಪಾತ್ರವನ್ನಭಿನಯಿಸುತ್ತೀರಿ ಎಂಬುದನ್ನೂ ಸಹ ತಿಳಿಸಲಾಗಿದೆ.
ಮಕ್ಕಳು ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ನೀವು ರಾಜಯೋಗಿಯಾಗಿದ್ದೀರಲ್ಲವೆ. ಎಲ್ಲರೂ
ಯೋಗಿಗಳೇ ಆಗಿರುತ್ತಾರೆ, ಓದಿಸುವಂತಹ ಶಿಕ್ಷಕನ ಜೊತೆ ಅಗತ್ಯವಾಗಿ
ಸಂಬಂಧವನ್ನಿಟ್ಟುಕೊಳ್ಳಬೇಕಾಗುತ್ತದೆ. ಗುರಿಯಿಂದಲೇ ನಾವು ಏನಾಗುತ್ತೇವೆ ಎಂಬುದನ್ನು
ತಿಳಿದಿರುತ್ತದೆ. ಈ ವಿದ್ಯೆಯಂತೂ ಒಂದೇ ಆಗಿದೆ, ಇದನ್ನು ರಾಜರಿಗೂ ರಾಜರಾಗುವ ವಿದ್ಯೆಯೆಂದು
ಹೇಳಲಾಗುತ್ತದೆ. ರಾಜಯೋಗವಾಗಿದೆಯಲ್ಲವೆ! ರಾಜ್ಯ ಪ್ರಾಪ್ತಿ ಮಾಡಿಕೊಳ್ಳಲು ತಂದೆಯ ಜೊತೆ ಯೋಗವಿದೆ.
ಅನ್ಯ ಯಾವುದೇ ಮನುಷ್ಯರು ಈ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ನಿಮಗೆ ಇಲ್ಲಿ ಯಾವ ಮನುಷ್ಯರೂ
ಕಲಿಸುತ್ತಿಲ್ಲ, ಪರಮಾತ್ಮನೇ ನೀವಾತ್ಮಗಳಿಗೆ ಕಲಿಸುತ್ತಾರೆ ನಂತರ ನೀವು ಅನ್ಯರಿಗೆ ಕಲಿಸುತ್ತೀರಿ.
ನೀವೂ ಸಹ ತಮ್ಮನ್ನು ಆತ್ಮನೆಂದು ತಿಳಿಯಿರಿ. ನಾವಾತ್ಮಗಳಿಗೆ ತಂದೆಯು ಕಲಿಸುತ್ತಾರೆ. ಇದು
ನೆನಪಿರದೇ ಇರುವಕಾರಣ ಶಕ್ತಿಯು ತುಂಬುವುದಿಲ್ಲ ಆದುದರಿಂದ ಅನೇಕರ ಬುದ್ಧಿಯಲ್ಲಿ
ಕುಳಿತುಕೊಳ್ಳುವುದಿಲ್ಲ. ತಂದೆಯು ಸದಾ ಹೇಳುತ್ತಿರುತ್ತಾರೆ - ಯೋಗಯುಕ್ತರಾಗಿ ನೆನಪಿನ
ಯಾತ್ರೆಯಲ್ಲಿದ್ದು ತಿಳಿಸಿಕೊಡಿ. ನಾವು ಸಹೋದರ-ಸಹೋದರಿಯರಿಗೆ ಕಲಿಸುತ್ತೇವೆ. ನೀವು
ಆತ್ಮಗಳಾಗಿದ್ದೀರಿ, ಅವರು ಎಲ್ಲರಿಗೂ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಆತ್ಮವನ್ನೇ
ನೋಡಬೇಕಾಗಿದೆ. ಒಂದುಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂಬ ಗಾಯನವಿದೆ ಆದರೆ ಇದರಲ್ಲಿ ಬಹಳ
ಪರಿಶ್ರಮವಿದೆ. ಆತ್ಮಾಭಿಮಾನಿಗಳಾಗದ ಕಾರಣ ನಿಮ್ಮ ಮಾತಿನಲ್ಲಿ ಶಕ್ತಿಯಿರುವುದಿಲ್ಲ ಏಕೆಂದರೆ
ತಂದೆಯು ಹೇಗೆ ತಿಳಿಸುತ್ತಾರೆಯೋ ಹಾಗೆ ಇನ್ನ್ಯಾರೂ ತಿಳಿಸುವುದಿಲ್ಲ. ಕೆಲವರು ಬಹಳ ಚೆನ್ನಾಗಿ
ತಿಳಿಸುತ್ತಾರೆ - ಯಾರು ಮುಳ್ಳಾಗಿದ್ದಾರೆ, ಯಾರು ಹೂವಾಗಿದ್ದಾರೆಂಬುದು ಎಲ್ಲವೂ ತಿಳಿಯುತ್ತದೆ.
ಶಾಲೆಯಲ್ಲಿ ಮಕ್ಕಳು 5-6ನೇ ತರಗತಿಯಲ್ಲಿ ಓದಿದನಂತರ ವರ್ಗಾವಣೆಯಾಗುತ್ತಾರೆ. ಒಳ್ಳೊಳ್ಳೆಯ ಮಕ್ಕಳು
ಯಾವಾಗ ವರ್ಗಾವಣೆಯಾಗುತ್ತಾರೆಯೋ ಆಗ ಮುಂದಿನ ತರಗತಿಯ ಶಿಕ್ಷಕರಿಗೂ ಸಹ ತಕ್ಷಣ ಈ ಮಕ್ಕಳು ತೀಕ್ಷ್ಣ
ಪುರುಷಾರ್ಥಿಯಾಗಿದ್ದಾರೆ. ಇವರು ಬಹಳ ಚೆನ್ನಾಗಿ ಓದಿದ್ದಾರೆ ಆದ್ದರಿಂದ ಉತ್ತಮ ಸ್ಥಾನದಲ್ಲಿ
ಬಂದಿದ್ದಾರೆಂದು ತಿಳಿಯುತ್ತದೆ. ಶಿಕ್ಷಕರಂತೂ ಅಗತ್ಯವಾಗಿ ತಿಳಿದುಕೊಳ್ಳುವರು. ಅದು ಲೌಕಿಕ
ವಿದ್ಯೆಯಾಗಿದೆ, ಇಲ್ಲಂತೂ ಅಂತಹ ಮಾತಿಲ್ಲ, ಇದು ಪಾರಲೌಕಿಕ ವಿದ್ಯೆಯಾಗಿದೆ. ಇಲ್ಲಂತೂ ಆ ರೀತಿ
ಹೇಳುವುದಿಲ್ಲ, ಮೊದಲು ಚೆನ್ನಾಗಿ ಓದಿ ಬಂದಿದ್ದಾರೆ ಆದ್ದರಿಂದ ಇಲ್ಲಿ ಚೆನ್ನಾಗಿ ಓದುತ್ತಾರೆಂದು
ಹೇಳಲು ಸಾಧ್ಯವಿಲ್ಲ. ಅಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವಕಾರಣ ಬಹಳ ಶ್ರಮಪಟ್ಟಿದ್ದಾರೆ
ಆದ್ದರಿಂದ ಮೊದಲನೆಯ ಸ್ಥಾನವನ್ನು ಪಡೆದಿದ್ದಾರೆಂದು ಶಿಕ್ಷಕರು ತಿಳಿಯುತ್ತಾರೆ. ಇದಂತೂ
ಹೊಸವಿದ್ಯೆಯಾಗಿದೆ. ಇದನ್ನು ಮೊದಲೇ ಯಾರೂ ಸಹ ಓದಿರುವುದಿಲ್ಲ, ಓದಿಸುವವರೂ ಸಹ
ಹೊಸಶಿಕ್ಷಕರಾಗಿದ್ದಾರೆ, ಎಲ್ಲವೂ ಹೊಸದಾಗಿದೆ. ಹೊಸ ಮಕ್ಕಳಿಗೆ ಓದಿಸುತ್ತಾರೆ. ಅಲ್ಲಿ ಚೆನ್ನಾಗಿ
ಓದುವಂತಹವರಿಗೆ ಉತ್ತಮ ಪುರುಷಾರ್ಥಿಯೆಂದು ಹೇಳಲಾಗುತ್ತದೆ. ಇದು ಹೊಸ ಪ್ರಪಂಚಕ್ಕೆ ಹೊಸ
ಜ್ಞಾನವಾಗಿದ್ದು ಇಲ್ಲಿ ಯಾರೂ ಸಹ ಓದಿಸುವವರಿಲ್ಲ. ಎಷ್ಟೆಷ್ಟು ಗಮನ ಕೊಡುತ್ತಾರೆಯೋ ಅಷ್ಟಷ್ಟು
ಉತ್ತಮ ಸ್ಥಾನವನ್ನು ಪಡೆಯುತ್ತಾರೆ. ಕೆಲವರಂತೂ ಬಹಳ ಮಧುರ, ಆಜ್ಞಾಕಾರಿಯಾಗಿರುತ್ತಾರೆ.
ನೋಡುವುದರಿಂದಲೇ ಇವರಿಗೆ ಓದಿಸುವಂತಹವರು ಬಹಳ ಚೆನ್ನಾಗಿದ್ದಾರೆ, ಇವರಲ್ಲಿ ಯಾವುದೇ ಅವಗುಣವಿಲ್ಲ,
ನಡತೆಯಿಂದ, ಮಾತುಕತೆಯಿಂದ ತಿಳಿದುಬರುತ್ತದೆ. ತಂದೆಯು ಎಲ್ಲರನ್ನೂ ಕೇಳುತ್ತಾರೆ - ಇವರು ಹೇಗೆ
ಓದುತ್ತಾರೆ? ಇವರಲ್ಲಿ ಯಾವುದೇ ಬಲಹೀನತೆಯಿಲ್ಲವೆ? ಈ ರೀತಿ ಬಹಳಷ್ಟು ಮಕ್ಕಳು ಕೇಳುತ್ತಾರೆ -
ನಮ್ಮನ್ನು ಕೇಳದೇ ಯಾವುದೇ ಸಮಾಚಾರವನ್ನು ಕೊಡಬಾರದು. ಕೆಲವರು ಬಹಳ ಚೆನ್ನಾಗಿ ಓದುತ್ತಾರೆ,
ಕೆಲವರಿಗೆ ತೀಕ್ಷ್ಣ ಬುದ್ಧಿಯಿರುವುದಿಲ್ಲ. ಮಾಯೆಯ ಯುದ್ಧವು ಬಹಳ ನಡೆಯುತ್ತದೆ, ಅದನ್ನು ತಂದೆಯು
ತಿಳಿದಿದ್ದಾರೆ. ಇವರಿಗೆ ಮಾಯೆಯು ಬಹಳ ಮೋಸ ಮಾಡುತ್ತದೆ. ಒಂದುವೇಳೆ 10 ವರ್ಷಗಳು ಓದಿಸಿರಬಹುದು
ಆದರೆ ಮಾಯೆಯು ಇಷ್ಟೂ ಶಕ್ತಿಶಾಲಿಯಾಗಿರುತ್ತದೆ ಅದು ದೇಹ-ಅಹಂಕಾರ ಬಂದರೆ ಇನ್ನೂ
ಸಿಕ್ಕಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಯಾರು ಶಕ್ತಿಶಾಲಿಗಳಾಗಿದ್ದಾರೆ ಅವರ ಮೇಲೆ
ಮಾಯೆಯ ಪೆಟ್ಟು ಜೋರಾಗಿ ಬೀಳುತ್ತದೆ. ಮಾಯೆಯೂ ಸಹ ಬಲಶಾಲಿಗಳೊಂದಿಗೆ ಬಲಶಾಲಿಯಾಗಿ ಯುದ್ಧ
ಮಾಡುತ್ತದೆ.
ನೀವು ತಿಳಿದುಕೊಂಡಿರಬಹುದು - ತಂದೆಯು ಯಾರಲ್ಲಿ ಪ್ರವೇಶ ಮಾಡಿದ್ದಾರೆಯೋ ಅವರು ನಂಬರ್ವನ್
ಆಗಿದ್ದಾರೆ. ನಂತರ ನಂಬರ್ವಾರ್ ಅಂತೂ ಬಹಳಷ್ಟು ಇದ್ದಾರಲ್ಲವೆ. ತಂದೆಯು ಒಬ್ಬರು-ಇಬ್ಬರ
ಉದಾಹರಣೆಯನ್ನಂತೂ ಕೊಡುತ್ತಾರೆ, ಹಾಗೆ ನೋಡಿದರೆ ಬಹಳಷ್ಟು ನಂಬರ್ವಾರ್ ಇರುತ್ತಾರೆ. ಹೇಗೆ
ದೆಹಲಿಯಲ್ಲಿ ಗೀತಾ ಅಕ್ಕನವರು ಬಹಳ ಬುದ್ಧಿವಂತರಾಗಿದ್ದಾರೆ. ಆ ಮಗು ಬಹಳ ಮಧುರವಾಗಿಯೂ ಇದ್ದಾರೆ.
ತಂದೆಯು ತಿಳಿಸುತ್ತಾರೆ - ಗೀತಾ ಅಂತೂ ಸತ್ಯಗೀತಾ ಆಗಿದ್ದಾರೆ. ಮನುಷ್ಯರು ಆ ಗೀತೆಯನ್ನು
ಓದುತ್ತಾರೆ ಆದರೆ ಭಗವಂತನು ಹೇಗೆ ರಾಜಯೋಗವನ್ನು ಕಲಿಸಿ ರಾಜರಿಗೂ ರಾಜರನ್ನಾಗಿ ಮಾಡಿದ್ದರೆಂದು
ತಿಳಿದುಕೊಂಡಿಲ್ಲ. ಅವಶ್ಯವಾಗಿ ಸತ್ಯಯುಗವಿದ್ದಾಗ ಒಂದೇ ಧರ್ಮವಿತ್ತು, ಇದು ನೆನ್ನೆಯ ಮಾತಾಗಿದೆ.
ತಂದೆಯು ತಿಳಿಸುತ್ತಾರೆ - ನೆನ್ನೆ ನಿಮ್ಮನ್ನು ಇಷ್ಟೊಂದು ಶ್ರೀಮಂತರನ್ನಾಗಿ ಮಾಡಿ ಹೋದೆ. ನೀವು
ಪದಮಾಪದಮ ಭಾಗ್ಯಶಾಲಿಗಳಾಗಿದ್ದಿರಿ, ಈಗ ನೀವು ಏನಾಗಿಬಿಟ್ಟಿದ್ದೀರಿ. ನಿಮಗೂ
ಅನುಭವವಾಗುತ್ತದೆಯಲ್ಲವೆ! ಆ ಗೀತೆಯನ್ನು ಓದುವಂತಹವರಿಗೆ ಈ ಅನುಭವ ಆಗುತ್ತದೆಯೇನು! ಏನೂ
ತಿಳಿದುಕೊಳ್ಳುವುದಿಲ್ಲ. ಶ್ರೇಷ್ಠಾತಿಶ್ರೇಷ್ಠ ಶ್ರೀಮತ್ಭಗವದ್ಗೀತೆ ಎಂದು ಗಾಯನವಿದೆ. ಅವರಂತೂ
ಗೀತೆಯ ಪುಸ್ತಕವನ್ನು ಓದುತ್ತಾರೆ ಅಥವಾ ಹೇಳುತ್ತಾರೆ. ತಂದೆಯಂತೂ ಗೀತೆಯನ್ನು ಓದುವುದಿಲ್ಲ,
ಅಂತರವಂತೂ ಇದೆಯಲ್ಲವೆ. ಅವರಿಗಂತೂ ನೆನಪಿನಯಾತ್ರೆಯಿರುವುದಿಲ್ಲ, ಅವರಿನ್ನೂ ಕೆಳಗಡೆ ಇಳಿಯುತ್ತಾ
ಬರುತ್ತಾರೆ. ಸರ್ವವ್ಯಾಪಿಯ ಜ್ಞಾನದಿಂದ ನೋಡಿ ಏನಾಗಿಬಿಟ್ಟಿದ್ದಾರೆ! ನಿಮಗೆ ತಿಳಿದಿದೆ -
ಕಲ್ಪ-ಕಲ್ಪವೂ ಹೀಗೆಯೇ ಆಗುತ್ತದೆ. ತಂದೆಯು ಹೇಳುತ್ತಾರೆ - ನಿಮ್ಮನ್ನು ವಿಷಯಸಾಗರದಿಂದ ಪಾರು
ಮಾಡಿಬಿಡುತ್ತೇನೆ. ಎಷ್ಟೊಂದು ಅಂತರವಿದೆಯಲ್ಲವೆ. ಶಾಸ್ತ್ರವನ್ನು ಓದುವುದು ಭಕ್ತಿಮಾರ್ಗದ್ದಾಗಿದೆ.
ತಂದೆಯು ತಿಳಿಸುತ್ತಾರೆ - ಇದನ್ನು ಓದುವುದರಿಂದ ನನ್ನೊಂದಿಗೆ ಯಾರೂ ಸಹ ಮಿಲನ ಮಾಡುವುದಿಲ್ಲ. ಯಾವ
ಕಡೆಯಿಂದ ಹೋದರೂ ಸಹ ಒಂದೇ ಗುರಿಯನ್ನು ತಲುಪುತ್ತೇವೆಂದು ಅವರು ಹೇಳುತ್ತಾರೆ, ಒಮ್ಮೊಮ್ಮೆ ಭಗವಂತನು
ಬಂದು ಒಂದಲ್ಲಒಂದು ರೂಪದಿಂದ ಓದಿಸುತ್ತಾರೆಂದು ಹೇಳುತ್ತಾರೆ. ಯಾವಾಗ ಭಗವಂತನೇ ಓದಿಸುವಾಗ ನೀವೇಕೆ
ಓದಿಸುತ್ತೀರಿ? ತಂದೆಯು ತಿಳಿಸುತ್ತಾರೆ - ಗೀತೆಯಲ್ಲಿ ಹಿಟ್ಟಿನಲ್ಲಿ ಉಪ್ಪಿರುವಷ್ಟು ಸರಿಯಿದೆ,
ಅವುಗಳನ್ನು ನೀವು ತಿಳಿಸಿಕೊಡಬಹುದು. ಸತ್ಯಯುಗದಲ್ಲಂತೂ ಯಾವುದೇ ಶಾಸ್ತ್ರ ಇತ್ಯಾದಿಗಳಿರುವುದಿಲ್ಲ,
ಇದೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ. ಇವುಗಳನ್ನು ಅನಾದಿಯೆಂದು ಕರೆಯಲಾಗುವುದಿಲ್ಲ, ಇವು
ಆರಂಭದಿಂದ ನಡೆದುಬಂದಿಲ್ಲ. ಇವರು ಅನಾದಿಯ ಅರ್ಥವನ್ನು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ
- ಈ ನಾಟಕವು ಅನಾದಿಯಾಗಿದೆ. ಈಗ ನಿಮಗೆ ರಾಜಯೋಗವನ್ನು ಕಲಿಸುತ್ತೇನೆ ನಂತರ
ಪ್ರಾಯಲೋಪವಾಗಿಬಿಡುತ್ತದೆ ಎಂದು ತಂದೆಯು ಹೇಳುತ್ತಾರೆ. ನಮ್ಮ ರಾಜ್ಯವು ಅನಾದಿಯಾಗಿತ್ತೆಂದು ನೀವು
ಹೇಳುತ್ತೀರಿ. ಅದೇ ರಾಜ್ಯವಿದೆ ಕೇವಲ ಪಾವನರಿಂದ ಬದಲಾಗಿ ಪತಿತರಾಗಿರುವುದರಿಂದ ಹೆಸರು
ಬದಲಾಗಿಬಿಟ್ಟಿದೆ. ದೇವತೆಗಳ ಬದಲಾಗಿ ಹಿಂದೂಗಳೆಂದು ಹೇಳಿಕೊಳ್ಳುತ್ತಿದ್ದಾರೆ. ಆದಿಸನಾತನ
ದೇವಿ-ದೇವತಾಧರ್ಮವಿತ್ತಲ್ಲವೆ. ಹೇಗೆ ಅನ್ಯರು ಸತೋಪ್ರಧಾನದಿಂದ ಸತೋ, ರಜೋ, ತಮೋದಲ್ಲಿ
ಬರುತ್ತಾರೆಯೋ ಹಾಗೆಯೇ ನೀವೂ ಸಹ ಇಳಿಯುತ್ತಾ ಬಂದಿದ್ದೀರಿ. ರಜೋದಲ್ಲಿ ಬರುತ್ತೀರೆಂದರೆ
ಅಪವಿತ್ರತೆಯಕಾರಣ ದೇವತೆಗಳ ಬದಲಾಗಿ ಹಿಂದೂಗಳೆಂದು ಹೇಳಲಾಗುತ್ತಿದೆ. ಇಲ್ಲವೆಂದರೆ ಹಿಂದೂ ಎಂಬುದು
ಹಿಂದೂಸ್ತಾನದ ಹೆಸರಾಗಿದೆ. ನೀವು ಅಸಲಾಗಿ ದೇವಿ-ದೇವತೆಗಳಾಗಿದ್ದಿರಲ್ಲವೆ. ದೇವತೆಗಳು ಸದಾ
ಪಾವನರಾಗಿರುತ್ತಾರೆ ಆದರೆ ಈಗಂತೂ ಮನುಷ್ಯರು ಪತಿತರಾಗಿಬಿಟ್ಟಿದ್ದಾರೆ. ಅಂದಾಗ ಹೆಸರೂ ಸಹ ಹಿಂದೂ
ಎಂದು ಇಟ್ಟಿದ್ದಾರೆ! ಅಂದಾಗ ಕೇಳಿ - ಹಿಂದೂಧರ್ಮವು ಯಾವಾಗ, ಯಾರಿಂದ ರಚಿಸಲ್ಪಟ್ಟಿತು? ಆದರೆ
ಹೇಳಲು ಸಾಧ್ಯವಿಲ್ಲ. ಆದಿಸನಾತನ ದೇವಿ-ದೇವತಾ ಧರ್ಮವಿತ್ತು, ಅದನ್ನು ಸ್ವರ್ಗ ಮುಂತಾದ
ಒಳ್ಳೊಳ್ಳೆಯ ಹೆಸರುಗಳನ್ನು ಕೊಟ್ಟಿದ್ದಾರೆ. ಯಾವುದು ಹಿಂದೆಯಿತ್ತು ಅದು ಪುನಃ
ಪುನರಾವರ್ತನೆಯಾಗುವುದಿದೆ. ಈ ಸಮಯದಲ್ಲಿ ನೀವು ಪ್ರಾರಂಭದಿಂದ ಹಿಡಿದು ಅಂತ್ಯದವರೆವಿಗೂ ಎಲ್ಲವನ್ನೂ
ತಿಳಿದುಕೊಂಡಿದ್ದೀರಿ. ತಿಳಿಯುತ್ತಾ ಹೋದರೆ ಬದುಕಿರುತ್ತೀರಿ, ಕೆಲವರಂತೂ ಸತ್ತುಹೋಗುತ್ತಾರೆ.
ತಂದೆಯ ಮಕ್ಕಳಾದನಂತರ ಮಾಯೆಯ ಯುದ್ಧವಾಗುತ್ತದೆ. ಯುದ್ಧವಾಗುವುದರಿಂದ ದ್ರೋಹಿಗಳಾಗಿಬಿಡುತ್ತಾರೆ.
ರಾವಣನಿಗಾಗಿದ್ದವರು ರಾಮನಿಗಾದರು ಮತ್ತೆ ರಾಮನ ಮಕ್ಕಳ ಮೇಲೆ ರಾವಣನು ವಿಜಯವನ್ನು ಪಡೆದು ತನ್ನಕಡೆ
ಕರೆದೊಯ್ಯುತ್ತಾನೆ, ಕೆಲವರು ಖಾಯಿಲೆಗೀಡಾಗುತ್ತಾರೆ ನಂತರ ಅಲ್ಲಿಯೂ ಇರುವುದಿಲ್ಲ, ಇಲ್ಲಿಯೂ
ಇರುವುದಿಲ್ಲ, ಖುಷಿಯೂ ಇರುವುದಿಲ್ಲ, ದುಃಖವೂ ಇರುವುದಿಲ್ಲ ಮಧ್ಯದಲ್ಲಿರುತ್ತಾರೆ. ನಿಮ್ಮ ಬಳಿಯೂ
ಬಹಳಷ್ಟು ಮಧ್ಯದಲ್ಲಿರುವವರು ಇದ್ದಾರೆ. ತಂದೆಗೆ ಪೂರ್ಣಮಕ್ಕಳಾಗುವುದಿಲ್ಲ, ರಾವಣನಿಗೂ ಪೂರ್ಣ
ಆಗುವುದಿಲ್ಲ.
ಈಗ ನೀವು ಪುರುಷೋತ್ತಮ ಸಂಗಮಯುಗದಲ್ಲಿದ್ದೀರಿ. ಉತ್ತಮ ಪುರುಷರಾಗಲು ಪುರುಷಾರ್ಥ ಮಾಡುತ್ತಿದ್ದೀರಿ,
ಇವು ತಿಳಿದುಕೊಳ್ಳುವಂತಹ ಮಾತುಗಳಾಗಿವೆ. ತಂದೆಯು ಕೇಳಿದತಕ್ಷಣ ಬಹಳಷ್ಟು ಮಂದಿ ಕೈಯೆತ್ತುತ್ತಾರೆ
ಆದರೆ ಅಂತಹವರನ್ನು ಬುದ್ಧಿಯಿಲ್ಲವೆಂದು ತಿಳಿದುಕೊಳ್ಳಲಾಗುತ್ತದೆ ಆದರೂ ಸಹ ತಂದೆಯು ಶುಭವನ್ನೇ
ಮಾತನಾಡಿ ಎಂದು ಹೇಳುತ್ತಾರೆ. ನಾವು ನರನಿಂದ ನಾರಾಯಣನಾಗುತ್ತೇವೆಂದು ಎಲ್ಲರೂ ಹೇಳುತ್ತಾರೆ. ಕಥೆಯೂ
ಸಹ ನರನಿಂದ ನಾರಾಯಣನಾಗುವುದಾಗಿದೆ. ಅಜ್ಞಾನಕಾಲದಲ್ಲಿ ಸತ್ಯನಾರಾಯಣನ ಕಥೆಯನ್ನು ಕೇಳುತ್ತಾರಲ್ಲವೆ!
ಅಲ್ಲಂತೂ ಯಾರೂ ಕೇಳುವುದಿಲ್ಲ. ಇದನ್ನಂತೂ ತಂದೆಯೇ ಕೇಳುತ್ತಾರೆ - ನೀವು ಏನನ್ನು
ತಿಳಿದುಕೊಂಡಿದ್ದೀರಿ, ಮಾಯೆಯು ಎಷ್ಟೊಂದು ಶಕ್ತಿಶಾಲಿಯಾಗಿದೆ. ನೀವು ಏನನ್ನು ತಿಳಿದುಕೊಂಡಿದ್ದೀರಿ
- ಇಷ್ಟು ಧೈರ್ಯವಿದೆಯೇ? ನೀವು ಅಗತ್ಯವಾಗಿ ಪಾವನರಾಗಬೇಕು. ಯಾರೇ ಬಂದರೂ ಅವರನ್ನು ಕೇಳಬಹುದು - ಈ
ಜನ್ಮದಲ್ಲಿ ಯಾವುದೇ ಪಾಪಕರ್ಮವನ್ನು ಮಾಡಿಲ್ಲ ತಾನೆ! ಜನ್ಮ-ಜನ್ಮಾಂತರದಿಂದ ಪಾಪಿಗಳಂತೂ ಆಗಿಯೇ
ಇದ್ದೀರಿ, ಈ ಜನ್ಮದ ಪಾಪವನ್ನು ಹೇಳಿದಾಗ ಹಗುರರಾಗಿಬಿಡುತ್ತೀರಿ ಇಲ್ಲದಿದ್ದರೆ ಆಂತರ್ಯದಲ್ಲಿ
ತಿನ್ನುತ್ತಿರುತ್ತದೆ. ಸತ್ಯವನ್ನು ಹೇಳುವುದರಿಂದ ಹಗುರರಾಗಿರುತ್ತೀರಿ. ಕೆಲವು ಮಕ್ಕಳು ಸತ್ಯವನ್ನು
ಹೇಳುವುದಿಲ್ಲ ಆದ್ದರಿಂದ ಮಾಯೆಯು ಒಮ್ಮೆಯೇ ಬಲವಾಗಿ ಪೆಟ್ಟನ್ನು ಕೊಟ್ಟುಬಿಡುತ್ತದೆ. ನಿಮ್ಮದು
ಅತಿದೊಡ್ಡ ಬಾಕ್ಸಿಂಗ್ ಆಗಿದೆ. ಆ ಬಾಕ್ಸಿಂಗ್ನಲ್ಲಂತೂ ಶರೀರಕ್ಕೆ ಪೆಟ್ಟಾಗುತ್ತದೆ, ಈ
ಬಾಕ್ಸಿಂಗ್ನಲ್ಲಿ ಮನಸ್ಸಿಗೆ ಪೆಟ್ಟಾಗುತ್ತದೆ. ಈ ಬ್ರಹ್ಮಾತಂದೆಯೂ ಸಹ ಹೇಳುತ್ತಾರೆ - ನಾನು ಬಹಳ
ಜನ್ಮಗಳ ಅಂತ್ಯದಲ್ಲಿದ್ದೇನೆ. ಎಲ್ಲರಿಗಿಂತ ಪಾವನನಾಗಿದ್ದೆನು, ಈಗ ಎಲ್ಲರಿಗಿಂತ ಪತಿತನಾಗಿದ್ದೇನೆ
ಮತ್ತೆ ಪಾವನನಾಗುತ್ತೇನೆ. ನಾನು ಮಹಾತ್ಮನಾಗಿದ್ದೇನೆ ಎಂದಂತೂ ಹೇಳುವುದಿಲ್ಲ. ತಂದೆಯು ಬಹಳ
ಸತ್ಕಾರ ಮಾಡುತ್ತಾರೆ. ಇವರು (ಬ್ರಹ್ಮಾ) ಎಲ್ಲರಿಗಿಂತ ಹೆಚ್ಚು ಪತಿತರಾಗಿದ್ದಾರೆ. ತಂದೆಯು
ತಿಳಿಸುತ್ತಾರೆ - ನಾನು ಪರಾಯದೇಶದಲ್ಲಿ, ಬೇರೆಯವರ ಶರೀರದಲ್ಲಿ ಬರುತ್ತೇನೆ. ಇವರ (ಬ್ರಹ್ಮಾ)
ಅನೇಕ ಜನ್ಮಗಳ ಅಂತಿಮದಲ್ಲಿ ಬಂದು ಪ್ರವೇಶಮಾಡುತ್ತೇನೆ. ಇವರೇ ಪೂರ್ಣ 84 ಜನ್ಮಗಳನ್ನು
ತೆಗೆದುಕೊಂಡಿದ್ದಾರೆ. ಈಗ ಇವರೂ ಸಹ ಪೂರ್ಣ ಪುರುಷಾರ್ಥವನ್ನು ಮಾಡುತ್ತಿದ್ದಾರೆ. ಬಹಳ
ಎಚ್ಚರದಿಂದಿರಬೇಕಾಗುತ್ತದೆ. ತಂದೆಯನ್ನಂತೂ ತಿಳಿದುಕೊಂಡಿದ್ದಾರಲ್ಲವೆ! ಇವರು ತಂದೆಗೆ ಅತಿ
ಸಮೀಪದಲ್ಲಿದ್ದಾರೆ, ಇವರೆಂದೂ ತಂದೆಯಿಂದ ದೂರ ಹೋಗುವುದಿಲ್ಲ, ಬಿಟ್ಟು ಹೋಗೋಣವೆಂದೂ ಚಿಂತೆಯೂ
ಬರುವುದಿಲ್ಲ. ನನ್ನವರಂತೂ ತಂದೆಯವರಾಗಿದ್ದಾರಲ್ಲವೆ, ನನ್ನ ಮನೆಯಲ್ಲಿ ಕುಳಿತಿದ್ದಾರೆ. ತಂದೆಗೂ
ಸಹ ತಿಳಿದಿದೆ - ತಮಾಷೆಯನ್ನು ಮಾಡುತ್ತಾರೆ, ಬಾಬಾ ಇಂದು ನನಗೆ ಸ್ನಾನ ಮಾಡಿಸಿ, ಊಟ ಮಾಡಿಸಿ, ನಾನು
ಚಿಕ್ಕಮಗುವಾಗಿದ್ದೇನೆ - ಈ ರೀತಿಯಾಗಿ ನೆನಪು ಮಾಡುತ್ತೇನೆ. ನೀವು ಮಕ್ಕಳಿಗೂ ಈ ರೀತಿ ನೆನಪು ಮಾಡಿ
ಎಂದು ತಿಳಿಸುತ್ತೇನೆ. ಬಾಬಾ, ನೀವಂತೂ ಬಹಳ ಮಧುರರಾಗಿದ್ದೀರಿ, ಒಮ್ಮೆಲೆ ನಮ್ಮನ್ನು ವಿಶ್ವದ
ಮಾಲೀಕರನ್ನಾಗಿ ಮಾಡುತ್ತೀರಿ. ಈ ಮಾತುಗಳು ಬೇರೆ ಯಾರ ಬುದ್ಧಿಯಲ್ಲಿಯೂ ಇರಲು ಸಾಧ್ಯವಿಲ್ಲ. ತಂದೆಯು
ಎಲ್ಲರನ್ನೂ ರಿಫ್ರೆಷ್ ಮಾಡುತ್ತಿರುತ್ತಾರೆ. ಎಲ್ಲರೂ ಪುರುಷಾರ್ಥ ಮಾಡುತ್ತಾರೆ ಆದರೆ ಚಲನೆಯೂ ಸಹ
ಅದೇ ರೀತಿಯಿರಬೇಕಲ್ಲವೆ. ತಪ್ಪಾದರೆ ತಕ್ಷಣ ಬರೆಯಬೇಕು - ತಂದೆಯೇ ನಮ್ಮಿಂದ ಇಂತಹ ತಪ್ಪಾಯಿತು.
ಕೆಲವರು ಬರೆಯುತ್ತಾರೆ - ಬಾಬಾ ನಮ್ಮಿಂದ ಇಂತಹ ತಪ್ಪಾಯಿತು ಕ್ಷಮಿಸಿ. ನನ್ನ ಮಗುವಾಗಿ ನಂತರ ತಪ್ಪು
ಮಾಡಿದರೆ ನೂರುಪಟ್ಟು ವೃದ್ಧಿಯಾಗುತ್ತದೆ. ಮಾಯೆಗೆ ಸೋತು ಹೇಗಿದ್ದರೋ ಹಾಗೆಯೇ ಆಗಿಬಿಡುತ್ತಾರೆ.
ಮಾಯೆಗೆ ಬಹಳ ಸೋಲುತ್ತಾರೆ, ಇದು ಅತಿದೊಡ್ಡ ಬಾಕ್ಸಿಂಗ್ ಆಗಿದೆ. ರಾಮ ಹಾಗೂ ರಾವಣನ ಯುದ್ಧವಾಗಿದೆ.
ಕಪಿಸೈನ್ಯವನ್ನು ತೆಗೆದುಕೊಂಡರು ಎಂದು ತೋರಿಸುತ್ತಾರೆ. ಇದೆಲ್ಲವೂ ಮಕ್ಕಳ ಆಟವು ಮಾಡಲ್ಪಟ್ಟಿದೆ.
ಚಿಕ್ಕ ಮಕ್ಕಳು ಹೇಗೆ ಬುದ್ಧಿಯಿಲ್ಲದವರಾಗಿರುತ್ತಾರಲ್ಲವೆ! ತಂದೆಯೂ ಹೇಳುತ್ತಾರೆ - ಇದಂತೂ
ನಯಾಪೈಸೆಯ ಬುದ್ಧಿಯಾಗಿದೆ. ಪ್ರತಿಯೊಂದು ಈಶ್ವರನ ರೂಪವೆಂದು ಹೇಳಿಬಿಡುತ್ತಾರೆ. ಪ್ರತಿಯೊಬ್ಬರೂ
ಈಶ್ವರನಾಗಿ ರಚನೆ ಮಾಡುತ್ತಾರೆ, ಪಾಲನೆ ಕೊಡುತ್ತಾರೆ ನಂತರ ವಿನಾಶ ಮಾಡಿಬಿಡುತ್ತಾರೆ. ಈಗ ಈಶ್ವರ
ಯಾರ ವಿನಾಶವನ್ನಾದರೂ ಮಾಡುತ್ತಾರೇನು? ಇದೆಷ್ಟು ಅಜ್ಞಾನವಾಗಿದೆ ಆದುದರಿಂದ ಇದನ್ನು ಗೊಂಬೆಪೂಜೆ
ಮಾಡುತ್ತಾರೆಂದು ಹೇಳಲಾಗುತ್ತದೆ. ಆಶ್ಚರ್ಯವಲ್ಲವೆ! ಮನುಷ್ಯರ ಬುದ್ಧಿಯು ಏನಾಗಿಬಿಟ್ಟಿದೆ.
ಎಷ್ಟೊಂದು ಖರ್ಚು ಮಾಡುತ್ತಾರೆ! ತಂದೆಯು ದೂರು ಕೊಡುತ್ತಾರೆ - ನಾನು ನಿಮ್ಮನ್ನು ಇಷ್ಟೊಂದು
ದೊಡ್ಡವರನ್ನಾಗಿ ಮಾಡಿಹೋದೆನು, ನೀವು ಏನು ಮಾಡಿದ್ದೀರಿ! ನೀವೂ ತಿಳಿದುಕೊಂಡಿದ್ದೀರಿ, ನಾವೇ
ದೇವತೆಗಳಾದಂತಹವರು ನಂತರ ಚಕ್ರಸುತ್ತಿಕೊಂಡು ಬಂದು ಬ್ರಾಹ್ಮಣರಾಗಿದ್ದೇವೆ ನಂತರ ನಾವೇ ದೇವತೆ..........
ಆಗುತ್ತೇವೆ. ಇದಂತೂ ಬುದ್ಧಿಯಲ್ಲಿ ಕುಳಿತಿದೆಯಲ್ಲವೆ. ಇಲ್ಲಿ ಕುಳಿತಿರುವಾಗ ಬುದ್ಧಿಯಲ್ಲಿ ಈ
ಜ್ಞಾನವು ಇರಬೇಕು. ತಂದೆಯಂತೂ ಜ್ಞಾನಪೂರ್ಣರಾಗಿದ್ದಾರಲ್ಲವೆ. ಅವರು ಶಾಂತಿಧಾಮದಲ್ಲಿರುತ್ತಾರೆ
ಆದರೂ ಸಹ ಅವರಿಗೆ ಜ್ಞಾನಪೂರ್ಣರೆಂದು ಕರೆಯಲಾಗುವುದು. ನಿಮ್ಮ ಆತ್ಮನಲ್ಲಿಯೂ
ಪೂರ್ಣಜ್ಞಾನವಿರುತ್ತದೆಯಲ್ಲವೆ. ಈ ಜ್ಞಾನದಿಂದ ನಿಮ್ಮ ಕಣ್ಣು ತೆರೆಯಲ್ಪಟ್ಟಿದೆ. ತಂದೆಯು ನಿಮಗೆ
ಜ್ಞಾನನೇತ್ರವನ್ನು ಕೊಡುತ್ತಾರೆ. ಆತ್ಮನಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ತಿಳಿದಿದೆ,
ಚಕ್ರವು ಸುತ್ತುತ್ತಿರುತ್ತದೆ. ಬ್ರಾಹ್ಮಣರಿಗೇ ಸ್ವದರ್ಶನ ಚಕ್ರವು ಸಿಗುತ್ತದೆ. ದೇವತೆಗಳಿಗೆ
ಓದಿಸುವಂತಹವರು ಯಾರೂ ಇರುವುದಿಲ್ಲ, ನೀವೇ ಓದಬೇಕಾಗಿದೆ. ನೀವೇ ನಂತರ ದೇವತೆಯಾಗಿಬಿಡುತ್ತೀರಿ. ಈಗ
ತಂದೆಯು ಕುಳಿತು ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾರೆ. ಈ ಹೊಸವಿದ್ಯೆಯನ್ನು ಓದಿ
ಶ್ರೇಷ್ಠರಾಗುತ್ತೀರಿ. ಫಸ್ಟ್ ಇದ್ದವರೇ ಲಾಸ್ಟ್ ಆಗುತ್ತಾರೆ. ಇದು ವಿದ್ಯೆಯಲ್ಲವೆ. ಈಗ ನೀವು
ತಿಳಿದುಕೊಂಡಿದ್ದೀರಿ - ತಂದೆಯು ಪ್ರತೀ ಕಲ್ಪ ಬಂದು ಪತಿತರಿಂದ ಪಾವನ ಮಾಡುತ್ತಾರೆ ನಂತರ ಈ
ಜ್ಞಾನವು ಸಮಾಪ್ತಿಯಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ
ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಬಹಳ
ಆಜ್ಞಾಕಾರಿಗಳಾಗಿ, ಮಧುರರಾಗಿ ನಡೆಯಬೇಕು. ದೇಹ ಅಹಂಕಾರದಲ್ಲಿ ಬರಬಾರದು. ತಂದೆಗೆ ಮಗುವಾಗಿ ನಂತರ
ಯಾವುದೇ ತಪ್ಪನ್ನು ಮಾಡಬಾರದು. ಮಾಯೆಯ ಬಾಕ್ಸಿಂಗ್ನಲ್ಲಿ ಬಹಳ-ಬಹಳ ಎಚ್ಚರದಿಂದಿರಬೇಕು.
2. ತಮ್ಮ ವಾಕ್ಯಗಳಲ್ಲಿ
ಶಕ್ತಿಯನ್ನು ತುಂಬಿಕೊಳ್ಳಲು ಆತ್ಮಾಭಿಮಾನಿಗಳಾಗಿರುವ ಅಭ್ಯಾಸ ಮಾಡಬೇಕು. ಸ್ಮೃತಿಯಿರಲಿ - ತಂದೆಯು
ಕಲಿಸಿರುವುದನ್ನು ನಾವು ಹೇಳುತ್ತಿದ್ದೇವೆ ಆದ್ದರಿಂದ ಅದರಲ್ಲಿ ಶಕ್ತಿಯನ್ನು ತುಂಬುತ್ತಾರೆ.
ವರದಾನ:
ಅವಿನಾಶಿ
ನಶೆಯಲ್ಲಿದ್ದು ಆತ್ಮಿಕ ಮಜಾ ಮತ್ತು ಮೋಜಿನ ಅನುಭವ ಮಾಡುವಂತಹ ಬ್ರಾಹ್ಮಣರಿಂದ ಫರಿಶ್ತಾ ಭವ.
ತಾವು ಬ್ರಾಹ್ಮಣರಿಂದ
ಫರಿಶ್ತೆ, ದೇವತೆಗಳಿಗಿಂತಲೂ ಶ್ರೇಷ್ಠರಿದ್ದೀರಿ, ದೇವತೆಗಳ ಜೀವನದಲ್ಲಿ ತಂದೆಯ ಜ್ಞಾನವು ಇಮರ್ಜ್
ಆಗಿರುವುದಿಲ್ಲ. ಪರಮಾತ್ಮನ ಮಿಲನದ ಅನುಭವವೂ ಆಗುವುದಿಲ್ಲ. ಆದ್ದರಿಂದ ಈಗ ಸದಾ ಈ ನಶೆಯಿರಲಿ -
ನಾವು ದೇವತೆಗಳಿಗಿಂತಲೂ ಶ್ರೇಷ್ಠವಾದ ಬ್ರಾಹ್ಮಣರಿಂದ ಫರಿಶ್ತೆಯಿದ್ದೇವೆ. ಈ ಅವಿನಾಶಿ ನಶೆಯೇ
ಆತ್ಮಿಕ ಮಜಾ ಮೋಜಿನ ಅನುಭವ ಮಾಡಿಸುವಂತದ್ದಾಗಿದೆ. ಒಂದು ವೇಳೆ ನಶೆಯು ಸದಾ ಇರುವುದಿಲ್ಲವೆಂದರೆ
ಕೆಲವೊಮ್ಮೆ ಮಜದಲ್ಲಿರುತ್ತೀರಿ, ಕೆಲವೊಮ್ಮೆ ಗೊಂದಲವಾಗುತ್ತೀರಿ.
ಸ್ಲೋಗನ್:
ತಮ್ಮ ಸೇವೆಯನ್ನೂ
ಸಹ ತಂದೆಯ ಮುಂದೆ ಅರ್ಪಣೆ ಮಾಡಿಬಿಡಿ, ಆಗಲೇ ಸಮರ್ಪಿತ ಆತ್ಮನೆಂದು ಹೇಳಲಾಗುತ್ತದೆ.