08.12.24    Avyakt Bapdada     Kannada Murli    13.02.2003     Om Shanti     Madhuban


ವರ್ತಮಾನ ಸಮಯದಲ್ಲಿ ತಮ್ಮ ದಯಾ ಹೃದಯ ಹಾಗೂ ದಾತಾ ಸ್ವರೂಪವನ್ನು ಪ್ರತ್ಯಕ್ಷ ಮಾಡಿ


ಇಂದು ವರದಾತಾ ತಂದೆ ತನ್ನ ಜ್ಞಾನದಾತಾ, ಶಕ್ತಿದಾತಾ, ಗುಣದಾತಾ, ಪರಮಾತ್ಮನ ಸಂದೇಶವಾಹಕ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಂದು ಮಗು ದಾತನಾಗಿ ಆತ್ಮಗಳನ್ನು ತಂದೆ ಸಮೀಪ ತರಲು ಅಂತರಾಳದಿಂದ ಪ್ರಯತ್ನ ಮಾಡುತ್ತಿದೆ. ವಿಶ್ವದಲ್ಲಿ ಅನೇಕ ಪ್ರಕಾರದ ಆತ್ಮಗಳು ಇದ್ದಾರೆ. ಯಾವ ಆತ್ಮಗಳಿಗೆ ಜ್ಞಾನಮೃತ ಬೇಕು, ಅನ್ಯ ಆತ್ಮಗಳಿಗೆ ಶಕ್ತಿ ಬೇಕು, ಗುಣ ಬೇಕು ತಾವು ಆತ್ಮಗಳ ಬಳಿ ಸರ್ವ ಖಜಾನೆಗಳು ಅಖಂಡವಾಗಿವೆ. ಪ್ರತಿಯೊಂದು ಆತ್ಮದ ಕಾಮನೆಯನ್ನು ಪೂರ್ಣ ಮಾಡುವಂತಹವರು ಆಗಿದ್ದೀರಿ. ದಿನ-ಪ್ರತಿ ದಿನ ಸಮಾಪ್ತಿಯ ಸಮಯ ಸಮೀಪ ಬರುತ್ತಿರುವ ಕಾರಣ ಈಗ ಆತ್ಮಗಳು ಯಾವುದಾದರೂ ಹೊಸ ಆಶ್ರಯವನ್ನು ಹುಡುಕುತ್ತಿದ್ದಾರೆ ಅಂದಮೇಲೆ ತಾವು ಆತ್ಮಗಳು ಹೊಸ ಆಶ್ರಯವನ್ನು ಕೊಡಲು ನಿಮಿತ್ತರಾಗಿದ್ದೀರಿ. ಬಾಪ್ದಾದಾ ಮಕ್ಕಳ ಉಮ್ಮಂಗ-ಉತ್ಸಾಹವನ್ನು ನೋಡಿ ಖುಷಿ ಆಗಿದ್ದಾರೆ. ಒಂದುಕಡೆ ಅವಶ್ಯಕತೆ ಇದೆ, ಇನ್ನೊಂದು ಕಡೆ ಉಮ್ಮಂಗ-ಉತ್ಸಾಹವಿದೆ. ಅವಶ್ಯಕತೆಯ ಸಮಯದಲ್ಲಿ ಒಂದು ಹನಿಯದ್ದೂ ಸಹ ಬಹಳ ಮಹತ್ವಿಕೆ ಇದೆ. ಅಂದಮೇಲೆ ಈ ಸಮಯದಲ್ಲಿ ತಾವು ನೀಡಿರುವ ಸಹಯೋಗದ, ಸಂದೇಶದ ಮಹತ್ವವಿದೆ.

ವರ್ತಮಾನ ಸಮಯದಲ್ಲಿ ತಾವು ಎಲ್ಲಾ ಮಕ್ಕಳ ದಯಾ ಹೃದಯ ಹಾಗೂ ದಾತಾ ಸ್ವರೂಪ ಪ್ರತ್ಯಕ್ಷವಾಗುವ ಸಮಯವಾಗಿದೆ. ತಾವು ಬ್ರಾಹ್ಮಣ ಆತ್ಮಗಳ ಅನಾದಿ ಸ್ವರೂಪದಲ್ಲಿಯೂ ದಾತಾತನದ ಸಂಸ್ಕಾರ ತುಂಬಿದೆ. ಆದ್ದರಿಂದ ಕಲ್ಪ ವೃಕ್ಷದ ಚಿತ್ರದಲ್ಲಿ ತಮ್ಮನ್ನು ವೃಕ್ಷದ ಬೇರಿನಲ್ಲಿ ತೋರಿಸಲಾಗಿದೆ ಏಕೆಂದರೆ ಬೇರಿನ ಮೂಲಕವೇ ಪೂರ್ಣ ವೃಕ್ಷಕ್ಕೆ ಎಲ್ಲಾ ತಲುಪುತ್ತದೆ. ತಮ್ಮ ಆದಿ ಸ್ವರೂಪ ದೇವತಾ ರೂಪ, ಅದರ ಅರ್ಥವೇ ದೇವತಾ ಅಂದರೆ ಅರ್ಥ ಕೊಡುವಂತಹವರು. ತಮ್ಮ ಮಧ್ಯದ ಸ್ವರೂಪ ಪೂಜ್ಯದ ಚಿತ್ರವಾಗಿದೆ ಅಂದಮೇಲೆ ಮಧ್ಯದ ಸಮಯದಲ್ಲಿಯೂ ಸಹ ಪೂಜ್ಯರೂಪದಲ್ಲಿ ತಾವು ವರದಾನವನ್ನು ನೀಡುವಂತಹವರು, ಆಶೀರ್ವಾದವನ್ನು ನೀಡುವಂತಹ ದಾತಾ ರೂಪರಾಗಿದ್ದೀರಿ ಅಂದಮೇಲೆ ತಾವು ಆತ್ಮಗಳ ವಿಶೇಷ ಸ್ವರೂಪವೇ ದಾತಾತನದ್ದಾಗಿದೆ. ಅಂದಮೇಲೆ ಈಗಲೂ ಪರಮಾತ್ಮನ ಸಂದೇಶ ವಾಹಕರಾಗಿ ವಿಶ್ವದಲ್ಲಿ ತಂದೆಯ ಪ್ರತ್ಯಕ್ಷತೆಯ ಸಂದೇಶವನ್ನು ಹರಡುತ್ತಿದ್ದೀರಿ. ಪ್ರತಿಯೊಬ್ಬ ಬ್ರಾಹ್ಮಣ ಮಗು ಪರಿಶೀಲನೆ ಮಾಡಿಕೊಳ್ಳಿ ಅನಾದಿ, ಆದಿ ದಾತನ ಸಂಸ್ಕಾರ ಪ್ರತಿಯೊಬ್ಬರ ಜೀವನದಲ್ಲಿ ಪ್ರತ್ಯಕ್ಷ ರೂಪದಲ್ಲಿ ಇರುತ್ತದೆಯೇ? ದಾತಾತನದ ಸಂಸ್ಕಾರ ಇರುವಂತಹ ಆತ್ಮಗಳ ಲಕ್ಷಣವಾಗಿದೆ - ಅವರು ಎಂದೂ ಸಹ ಇದನ್ನು ಸಂಕಲ್ಪ ಮಾತ್ರದಲ್ಲಿಯೂ ಮಾಡುವುದಿಲ್ಲ. ಯಾರಾದರೂ ಕೊಟ್ಟರೇ ಕೊಡುತ್ತೇನೆ. ಯಾರಾದರೂ ಮಾಡಿದರೆ ಮಾಡುತ್ತೇನೆ, ಇಲ್ಲ. ನಿರಂತರ ತೆರೆದ ಭಂಡಾರವಾಗಿರುತ್ತಾರೆ. ಬಾಪ್ದಾದಾ ಎಲ್ಲಾ ಕಡೆಯ ಮಕ್ಕಳ ದಾತತನದ ಸಂಸ್ಕಾರವನ್ನು ನೋಡುತ್ತಿದ್ದಾರೆ. ಏನು ನೋಡಿರಬಹುದು? ನಂಬರ್ವಾರಂತೂ ಇದ್ದೀರಿ. ಎಂದೂ ಸಹ ಈ ಸಂಕಲ್ಪವನ್ನು ಮಾಡಬೇಡಿ - ಈ ರೀತಿ ಆದರೆ ನಾನು ಇದನ್ನು ಮಾಡುತ್ತೇನೆ. ದಾತಾತನದ ಸಂಸ್ಕಾರದವರಿಗೆ ಎಲ್ಲಾ ಕಡೆಯಿಂದ ಸಹಯೋಗವು ಸ್ವತಃ ಪ್ರಾಪ್ತಿ ಆಗುತ್ತದೆ. ಕೇವಲ ಆತ್ಮಗಳ ಮೂಲಕ ಮಾತ್ರವಲ್ಲ. ಆದರೆ ಪ್ರಕೃತಿಯೂ ಸಹ ಸಮಯಕ್ಕನುಸಾರವಾಗಿ ಸಹಯೋಗಿ ಆಗುತ್ತದೆ. ಇದು ಸೂಕ್ಷ್ಮ ಲೆಕ್ಕಾಚಾರವಿದೆ ಯಾರು ಸದಾ ದಾತರಾಗುತ್ತಾರೋ, ಆ ಪುಣ್ಯದ ಫಲವಾಗಿ ಸಮಯದಲ್ಲಿ ಸಹಯೋಗ, ಸಮಯದಲ್ಲಿ ಸಫಲತೆ ಆ ಆತ್ಮಕ್ಕೆ ಸಹಜವಾಗಿ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಸದಾ ದಾತಾತನದ ಸಂಸ್ಕಾರವನ್ನು ಪ್ರತ್ಯಕ್ಷ ಸ್ವರೂಪದಲ್ಲಿ ಇಟ್ಟುಕೊಳ್ಳಿ. ಪುಣ್ಯದ ಖಾತೆ ಒಂದಕ್ಕೆ 10ರಷ್ಟು ಫಲ ಕೊಡುತ್ತದೆ ಅಂದಮೇಲೆ ಇಡೀ ದಿನದಲ್ಲಿ ನೋಟ್ ಮಾಡಿಕೊಳ್ಳಿ - ಸಂಕಲ್ಪದ ಮೂಲಕ, ವಚನದ ಮೂಲಕ, ಸಂಬಂಧ-ಸಂಪರ್ಕದ ಮೂಲಕ ಪುಣ್ಯಾತ್ಮರಾಗಿ ಪುಣ್ಯದ ಖಾತೆಯನ್ನು ಎಷ್ಟು ಜಮಾ ಮಾಡಿಕೊಂಡಿದ್ದೇನೆ? ಮನಸಾ ಸೇವೆಯೂ ಸಹ ಪುಣ್ಯದ ಖಾತೆಯಲ್ಲಿ ಜಮಾ ಆಗುತ್ತದೆ. ವಚನದ ಮೂಲಕ ಯಾವುದಾದರೂ ಬಲಹೀನ ಆತ್ಮವನ್ನು ಖುಷಿಯಲ್ಲಿ ತರುವುದು, ಚಿಂತೆಯಲ್ಲಿ ಇರುವಂತಹ ಆತ್ಮಕ್ಕೆ ಸ್ವಮಾನದ ಸ್ಮೃತಿಯಲ್ಲಿ ತರುವುದು. ಬೇಸರವಾದ ಆತ್ಮವನ್ನು ತಮ್ಮ ವಚನದ ಮೂಲಕ ಉಮ್ಮಂಗ-ಉತ್ಸಾಹದಲ್ಲಿ ತರುವುದು, ಸಂಬಂಧ-ಸಂಪರ್ಕದಿಂದ ತಮ್ಮ ಶ್ರೇಷ್ಠ ಸಂಗದ ರಂಗಿನ ಅನುಭವ ಮಾಡಿಸುವುದು, ಈ ವಿಧಿಯಿಂದ ಪುಣ್ಯದ ಖಾತೆಯನ್ನು ಜಮಾ ಮಾಡಿಕೊಳ್ಳಬಹುದು. ಈ ಜನ್ಮದಲ್ಲಿ ಎಷ್ಟು ಪುಣ್ಯದ ಜಮಾ ಮಾಡಿಕೊಳ್ಳುತ್ತೀರೋ ಆ ಪುಣ್ಯದ ಖಾತೆಯನ್ನು ಅರ್ಧ ಕಲ್ಪ ಅನುಭವಿಸುತ್ತೀರಿ ಹಾಗೂ ಅರ್ಧ ಕಲ್ಪ ತಮ್ಮ ಜಡ ಚಿತ್ರವು ಪಾಪಿ ಆತ್ಮಗಳನ್ನು ವಾಯುಮಂಡಲದ ಮೂಲಕ ಪಾಪಗಳಿಂದ ಮುಕ್ತ ಮಾಡುತ್ತದೆ. ಪತಿತಪಾವನಿ ಆಗುತ್ತೀನಿ. ಅಂದಮೇಲೆ ಬಾಪ್ದಾದಾ ಪ್ರತಿಯೊಬ್ಬ ಮಗುವಿನ ಜಮಾ ಆಗಿರುವ ಪುಣ್ಯದ ಖಾತೆಯನ್ನು ನೋಡುತ್ತಿದ್ದಾರೆ.

ಬಾಪ್ದಾದಾ ವರ್ತಮಾನ ಸಮಯದ ಮಕ್ಕಳ ಸೇವೆಯ ಉಮ್ಮಂಗ- ಉತ್ಸಾಹವನ್ನು ನೋಡಿ ಖುಷಿ ಆಗುತ್ತಿದ್ದಾರೆ. ಮೆಜಾರಿಟಿ ಮಕ್ಕಳಲ್ಲಿ ಸೇವೆಯ ಉಮ್ಮಂಗ ಚೆನ್ನಾಗಿದೆ. ಎಲ್ಲರೂ ತಮ್ಮ-ತಮ್ಮ ಕಡೆಯಿಂದ ಸೇವೆಯ ಯೋಜನೆಗಳನ್ನು ಕಾರ್ಯ ರೂಪದಲ್ಲಿ ತರುತ್ತಿದ್ದಾರೆ. ಇದಕ್ಕಾಗಿ ಬಾಪ್ದಾದಾ ಮನಃಪೂರ್ವಕವಾಗಿ ಶುಭಾಶಯಗಳನ್ನು ನೀಡುತ್ತಿದಾರೆ. ಚೆನ್ನಾಗಿ ಮಾಡುತ್ತಿದ್ದೀರಿ ಹಾಗೂ ಚೆನ್ನಾಗಿ ಮಾಡುತ್ತಿರುತ್ತೀರಿ. ಎಲ್ಲದಕ್ಕಿಂತ ಒಳ್ಳೆಯ ಮಾತು ಇದಾಗಿದೆ - ಎಲ್ಲರ ಸಂಕಲ್ಪ ಹಾಗೂ ಸಮಯ ವ್ಯಸ್ತವಾಗಿಬಿಟ್ಟಿದೆ. ಪ್ರತಿಯೊಬ್ಬರಿಗೂ ಈ ಗುರಿ ಇದೆ ನಾಲ್ಕೂ ಕಡೆಯ ಸೇವೆಯಿಂದ ಈಗ ದೂರುಗಳನ್ನು ಖಂಡಿತ ಪೂರ್ಣ ಮಾಡಬೇಕು.

ಬ್ರಾಹ್ಮಣರ ದೃಢ ಸಂಕಲ್ಪದಲ್ಲಿ ಬಹಳ ಶಕ್ತಿ ಇದೆ. ಒಂದುವೇಳೆ ಬ್ರಾಹ್ಮಣರು ದೃಢ ಸಂಕಲ್ಪ ಮಾಡಿದರೆ ಏನು ತಾನೇ ಮಾಡಲು ಸಾಧ್ಯವಿಲ್ಲ! ಎಲ್ಲವೂ ಆಗುತ್ತದೆ ಕೇವಲ ಯೋಗದ ಜ್ವಾಲಾ ರೂಪವನ್ನು ಮಾಡಿಕೊಳ್ಳಿ ಯೋಗವು ಜ್ವಾಲಾ ರೂಪವಾದರೆ ಜ್ವಾಲೆಯ ಹಿಂದೆ ಆತ್ಮಗಳು ಸ್ವತಃ ಬರುತ್ತಾರೆ ಏಕೆಂದರೆ ಜ್ವಾಲೆ (ಲೈಟ್) ಸಿಗುವುದರಿಂದ ಅವರಿಗೆ ಮಾರ್ಗವು ಕಾಣಿಸುತ್ತದೆ. ಈಗ ಯೋಗ ಮಾಡುತ್ತಿದ್ದೀರಿ ಆದರೆ ಯೋಗವು ಜ್ವಾಲಾ ರೂಪವಾಗಬೇಕು. ಸೇವೆಯ ಉಮ್ಮಂಗ-ಉತ್ತಾಹವು ಚೆನ್ನಾಗಿ ವೃದ್ಧಿ ಆಗುತ್ತಿದೆ ಆದರೆ ಯೋಗದಲ್ಲಿ ಜ್ವಾಲಾ ರೂಪವು ಈಗ ಅಂಡರ್ಲೈನ್(ಗಮನ ಕೊಡಬೇಕು) ಮಾಡಿಕೊಳ್ಳಿ. ತಮ್ಮ ದೃಷ್ಟಿಯಲ್ಲಿ ಆ ರೀತಿ ಹೊಳಪು ಇರಲಿ ಆ ದೃಷ್ಟಿಯಿಂದ ಒಂದೊಲ್ಲ ಒಂದು ಪ್ರಕಾರದ ಅನುಭೂತಿಯ ಅನುಭವವನ್ನು ಮಾಡಲಿ.

ಬಾಪ್ದಾದಾರವರಿಗೆ ವಿದೇಶದವರು ಯಾವ ಸಮಯದ ಕೂಗು ಎಂಬ ಯಾವ ಸೇವೆಯನ್ನು ಮಡಿದ್ದರು. ಅದರ ವಿಧಿ ಇಷ್ಟವಾಯಿತು. ಚಿಕ್ಕ ಸಂಘಟನೆಯನ್ನು ಸಮೀಪ ತಂದರು. ಆ ರೀತಿ ಪ್ರತಿಯೊಂದು ಜೋನ್, ಪ್ರತಿಯೊಂದು ಸೇವಾಕೇಂದ್ರವು ಬೇರೆ-ಬೇರೆ ಸೇವೆಯನ್ನು ಮಾಡುತ್ತಿದ್ದೀರಿ ಆದರೆ ಯಾರಾದರೂ ಸರ್ವ ವರ್ಗಗಳ ಸಂಘಟನೆಯನ್ನು ಮಾಡಿ. ಬಾಪ್ದಾದಾ ಹೇಳಿದರು ಹರಡಿರುವಂತಹ ಸೇವೆ ಬಹಳಷ್ಟು ಇದೆ ಆದರೆ ಹರಡಿರುವ ಸೇವೆಯಿಂದ ಸ್ವಲ್ಪ ಸಮೀಪ ಬರುವಂತಹ ಯೋಗ್ಯ ಆತ್ಮಗಳ ಸಂಘಟನೆಯನ್ನು ಆರಿಸುಕೊಳ್ಳಿ ಹಾಗೂ ಸಮಯ ಪ್ರತಿ ಸಮಯ ಆ ಸಂಘಟನೆಯನ್ನು ಸಮೀಪ ತರುತ್ತಾ ಇರಿ ಹಾಗೂ ಅವರಿಗೆ ಸೇವೆಯ ಉಮ್ಮಂಗವನ್ನು ಹೆಚ್ಚಿಸಿ. ಬಾಪ್ದಾದಾ ನೋಡುತ್ತಾರೆ - ಅಂತಹ ಆತ್ಮಗಳು ಇದ್ದಾರೆ ಆದರೆ ಈಗ ಆ ರೀತಿಯಾದ ಶಕ್ತಿಶಾಲಿ ಪಾಲನೆ, ಸಂಘಟಿತ ರೂಪದಲ್ಲಿ ಸಿಗುತ್ತಿಲ್ಲ, ಬೇರೆ-ಬೇರೆ ಯಥಾಶಕ್ತಿಯ ಪಾಲನೆಯೂ ಸಿಗುತ್ತಿದೆ. ಸಂಘಟನೆಯಲ್ಲಿ ಒಬ್ಬರನ್ನೊಬ್ಬರು ನೋಡಿಯೂ ಸಹ ಉಮ್ಮಂಗ ಬರುತ್ತದೆ. ಇವರು ಇದನ್ನು ಮಾಡುತ್ತಿದ್ದಾರೆ. ನಾನೂ ಸಹ ಮಾಡಬಹುದು, ನಾನು ಮಾಡುತ್ತೇನೆ ಎಂಬ ಉಮ್ಮಂಗ ಬರುತ್ತದೆ. ಬಾಪ್ದಾದಾ ಈಗ ಸೇವೆಯ ಪ್ರತ್ಯಕ್ಷವನ್ನು ಸಂಘಟಿತ ರೂಪದಲ್ಲಿ ನೋಡಲು ಇಚ್ಛಿಸುತ್ತಾರೆ. ಪ್ರಯತ್ನ ಚೆನ್ನಾಗಿ ಮಾಡುತ್ತಿದ್ದೀರಿ, ಪ್ರತಿಯೊಬ್ಬರೂ ತಮ್ಮ ವರ್ಗದ, ಸ್ಥಾನದ, ಜೋನಿನ ಸೇವಾಕೇಂದ್ರದ ಸೇವೆಯನ್ನು ಮಾಡುತ್ತಿದ್ದೀರಿ ಬಾಪ್ದಾದಾ ಖುಷಿ ಆಗುತ್ತಾರೆ. ಈಗ ಸಮೀಪದಲ್ಲಿ ತನ್ನಿ, ಪ್ರವೃತ್ತಿಯವರ ಉಮ್ಮಂಗವೂ ಬಾಪ್ದಾದಾರವರ ಬಳಿ ತಲುಪುತ್ತದೆ ಹಾಗೂ ಡಬಲ್ ವಿದೇಶದವರೂ ಸಹ ಡಬಲ್ ಕಾರ್ಯದಲ್ಲಿ ಇರುತ್ತಾ ಸೇವೆಯಲ್ಲಿ, ಸ್ವಯಂನ ಪುರುಷಾರ್ಥದಲ್ಲಿ, ಇದನ್ನು ನೋಡಿಯೂ ಸಹ ಬಾಪ್ದಾದಾ ಖುಷಿಯಾಗಿದ್ದಾರೆ.

ಬ್ರಾಹ್ಮಣ ಆತ್ಮಗಳು ವರ್ತಮಾನ ವಾಯುಮಂಡಲವನ್ನು ನೋಡಿ ವಿದೇಶದಲ್ಲಿ ಹೆದರುತ್ತಿಲ್ಲವೇ? ಡಬಲ್ ವಿದೇಶಿಗಳು ಏರು-ಪೇರಿನಲ್ಲಿ ಇದ್ದೀರೋ ಅಥವಾ ಅಚಲರಾಗಿದ್ದೀರೋ? ಆಚಲರೇ? ಏರು-ಪೇರಿನಲ್ಲಿ ಇಲ್ಲ ತಾನೇ! ಯಾರು ಅಚಲರಾಗಿದ್ದೀರೋ ಅವರು ಕೈ ಎತ್ತಿ, ಅಚಲರಾಗಿದ್ದೀರಿ. ನಾಳೆ ಏನಾದರೂ ಆಗಿಬಿಟ್ಟರೆ? ಆದರೂ ಸಹ ಅಚಲರಾಗಿರುತ್ತೀರಲ್ಲವೇ! ಏನಾಗುತ್ತದೆ, ಏನೂ ಆಗುವುದಿಲ್ಲ. ತಾವು ಬ್ರಾಹ್ಮಣರ ಮೇಲೆ ಪರಮಾತ್ಮನ ಛತ್ರಛಾಯೆ ಇದೆ. ಹೇಗೆ ವಾಟರ್ ಪ್ರೂಫ್ ಎಷ್ಟೇ ನೀರು ಇದ್ದರೂ ಸಹ ವಾಟರ್ ಪ್ರೂಫ್ ಆಗಿಬಿಡುತ್ತದೆ ಹಾಗೆಯೇ ಎಷ್ಟೇ ಏರು-ಪೇರು ಇರಲಿ ಬ್ರಾಹ್ಮಣ ಆತ್ಮಗಳು ಪರಮಾತ್ಮನ ಛತ್ರಛಾಯೆಯ ಒಳಗಡೆ ಸದಾ ನಿಶ್ಚಿಂತರು. ನಿಶ್ಚಿಂತ ಚಕ್ರವರ್ತಿಗಳು ತಾನೇ! ಸ್ವಲ್ಪ-ಸ್ವಲ್ಪ ಚಿಂತೆ ಇದೆಯೇ, ಏನು ಆಗುತ್ತದೋ? ಇಲ್ಲ. ನಿಶ್ಚಿಂತ. ಸ್ವರಾಜ್ಯಾಧಿಕಾರಿಗಳು ಆಗಿ, ನಿಶ್ಚಿಂತ ಚಕ್ರವರ್ತಿಗಳಾಗಿ, ಆಚಲ-ಅಡೋಲ ಸ್ಥಿತಿಯಲ್ಲಿ ಸ್ಥಿತರಾಗಿರಿ. ಸ್ಥಿತಿಯಿಂದ ಕೆಳಗಡೆ ಇಳಿಯಬೇಡಿ. ಅಪ್ಸೆಟ್ ಆಗುವುದು ಎಂದರೆ ಅರ್ಥ ಸ್ಥಿತಿಯಲ್ಲಿ ಸ್ಥಿತರಾಗಿಲ್ಲವೆಂದಾಗ ಅಪ್ಸೆಟ್ ಆಗುತ್ತಾರೆ. ಯಾರು ಸ್ಥಿತಿಯಲ್ಲಿ ಸ್ಥಿತರಾಗಿರುತ್ತಾರೋ ಅವರು ಸ್ವಪ್ನದಲ್ಲಿಯೂ ಸಹ ಅಪ್ಸೆಟ್ ಆಗಲು ಸಾಧ್ಯವಿಲ್ಲ.

ಮಾತೆಯರು ಏನು ತಿಳಿದುಕೊಂಡಿದ್ದೀರಿ? ಸ್ಥಿತಿಯಲ್ಲಿ ಸ್ಥಿತರಾಗುವುದು, ಕುಳಿತುಕೊಳ್ಳುವುದು ಬರುತ್ತದೆಯೇ? ಏರು-ಪೇರು ಆಗುವುದಿಲ್ಲ ತಾನೇ? ಬಾಪ್ದಾದಾ ಕಂಬೈಂಡ್ ಆಗಿದ್ದಾರೆ. ಯಾವಾಗ ಸರ್ವಶಕ್ತಿವಂತ ತಮ್ಮ ಕಂಬೈಂಡ್ ಆಗಿದ್ದಾರೆ ಅಂದಮೇಲೆ ತಮಗೆ ಏನು ಭಯವಿದೆ! ಒಂಟಿ ಎಂದು ತಿಳಿದರೆ ಏರು-ಪೇರಿನಲ್ಲಿ ಬರುತ್ತೀರಿ. ಕಂಬೈಂಡ್ ಆಗಿದ್ದಾಗ ಎಷ್ಟೇ ಏರು- ಪೇರು ಇರಲಿ ಆದರೆ ತಾವು ಆಚಲರಾಗಿರುತ್ತೀರಿ. ಮಾತೆಯರೇ ಸರಿಯಲ್ಲವೇ? ಸರಿ ತಾನೇ, ಕಂಬೈಂಡ್ ಆಗಿದ್ದೀರಲ್ಲವೇ! ಒಂಟಿಯಂತೂ ಅಲ್ಲ ತಾನೇ? ತಂದೆಯ ಜವಾಬ್ದಾರಿ ಇದೆ, ಒಂದುವೇಳೆ ತಾವು ಸ್ಥಿತಿಯಲ್ಲಿ ಸ್ಥಿತರಾಗಿದ್ದರೆ ತಂದೆಯ ಜವಾಬ್ದಾರಿ, ಆಪ್ಸೆಟ್ ಆದರೆ ನಿಮ್ಮ ಜವಾಬ್ದಾರಿ.

ಆತ್ಮಗಳಿಗೆ ಸಂದೇಶದ ಮೂಲಕ ಸಹಯೋಗ ಕೊಡುತ್ತಾ ಇದ್ದರೆ ಆಗ ದಾತಾ ಸ್ವರೂಪದಲ್ಲಿ ಸ್ಥಿತರಾಗಿರುತ್ತೀರಿ, ಆಗ ದಾತಾತನದ ಪುಣ್ಯದ ಫಲ ಶಕ್ತಿ ಸಿಗುತ್ತಿರುತ್ತದೆ. ನಡೆಯುತ್ತಾ-ತಿರುಗಾಡುತ್ತಾ ತಮ್ಮನ್ನು ಆತ್ಮ ಮಾಡಿಸುವಂತಹದ್ದು ಹಾಗೂ ಈ ಕರ್ಮೇದ್ರಿಯಗಳು ಮಾಡುವ ಕರ್ಮಾಚಾರಿಯಾಗಿದೆ, ಈ ಆತ್ಮದ ಸ್ಮೃತಿಯ ಅನುಭವ ಸದಾ ಪ್ರತ್ಯಕ್ಷ ರೂಪದಲ್ಲಿ ಇರಲಿ, ನಾನು ಇರುವುದೇ ಆತ್ಮ ಈ ರೀತಿ ಅಲ್ಲ. ಸ್ಮೃತಿಯಲ್ಲಿ ಪ್ರತ್ಯಕ್ಷರೂಪದಲ್ಲಿ ಇರಲಿ. ಮರೆತುಹೋಗಿರುತ್ತದೆ ಆದರೆ ಪ್ರತ್ಯಕ್ಷ ರೂಪದಲ್ಲಿ ಇರುವುದರಿಂದ ಆ ನಶೆ, ಖುಷಿ ಹಾಗೂ ನಿಯಂತ್ರಣ ಶಕ್ತಿ ಇರುತ್ತದೆ. ಆನಂದವೂ ಇರುತ್ತದೆ, ಏಕೆ! ಸಾಕ್ಷಿಯಾಗಿ ಕರ್ಮ ಮಾಡಿಸುತ್ತೀರಿ. ಪದೆ-ಪದೆ ಪರಿಶೀಲನೆ ಮಾಡಿಕೊಳ್ಳಿ - ಮಾಡಿಸುವಂತಹವನಾಗಿ ಕರ್ಮವನ್ನು ಮಾಡಿಸುತ್ತಿದ್ದೇನೆಯೇ? ಹೇಗೆ ರಾಜಾ ತನ್ನ ಕಮೇರ್ಂದ್ರಿಯಗಳನ್ನು ಆರ್ಡರ್ನಲ್ಲಿ ಇಟ್ಟುಕೊಳ್ಳುತ್ತಾನೆ, ಆಜ್ಞೆಯಂತೆ ಮಾಡಿಸುತ್ತಾನೆ, ಆ ರೀತಿ ಆತ್ಮ ಮಾಡಿಸುವಂತಹ ಸ್ವರೂಪದ ಸ್ಮೃತಿಯಲ್ಲಿ ಇದ್ದಾಗ ಸರ್ವ ಕರ್ಮೇಂದ್ರಿಯಗಳು ಆಜ್ಞೆಯನುಸಾರ ಇರುತ್ತವೆ. ಮಾಯೆಯ ಆಜ್ಞೆಯಲ್ಲಿ ಇರುವುದಿಲ್ಲ, ತಮ್ಮ ಆಜ್ಞೆಯಲ್ಲಿ ಇರುತ್ತವೆ. ಇಲ್ಲವಾದರೆ ಮಾಯೆ ನೋಡುತ್ತದೆ – ಮಾಡಿಸುವಂತಹ ಆತ್ಮ ಹುಡುಗಾಟಿಕೆಯಲ್ಲಿ ಇದ್ದರೆ ಮಾಯೆ ಆಜ್ಞೆಯನ್ನು ಮಾಡಲು ಶುರು ಮಾಡುತ್ತದೆ. ಕೆಲವೊಮ್ಮೆ ಸಂಕಲ್ಪದ ಶಕ್ತಿ, ಕೆಲವೊಮ್ಮೆ ಮುಖದ ಶಕ್ತಿ ಮಾಯೆ ಆಜ್ಞೆಯಂತೆ ನಡೆಯುತ್ತದೆ. ಆದ್ದರಿಂದ ಸದಾ ಪ್ರತಿಯೊಂದು ಕರ್ಮೇದ್ರಿಯಗಳನ್ನು ತಮ್ಮ ಆಜ್ಞೆಯಲ್ಲಿ ನಡೆಸಿ. ಈ ರೀತಿ ಹೇಳುವುದಿಲ್ಲ – ಇಷ್ಟವಿರಲಿಲ್ಲ ಆದರೆ ಆಗಿ ಹೋಯಿತು. ಯಾವುದು ಇಚ್ಛಿಸುತ್ತೀರೋ ಅದೇ ಆಗುತ್ತದೆ. ಈಗಿನಿಂದ ರಾಜ್ಯಾಧಿಕಾರಿಗಳಾಗುವ ಸಂಸ್ಕಾರ ತುಂಬಿಕೊಂಡರೆ ಆಗಲೇ ಅಲ್ಲಿಯೂ ರಾಜ್ಯವನ್ನು ಮಾಡುತ್ತೀರಿ. ಸ್ವರಾಜ್ಯ ಅಧಿಕಾರಿಯ ಸೀಟಿನಿಂದ ಎಂದೂ ಕೆಳಗೆ ಬರಬೇಡಿ. ಒಂದುವೇಳೆ ಕರ್ಮೇಂದ್ರಿಯಗಳು ಅಧೀನದಲ್ಲಿದ್ದಾಗ ಪ್ರತೀ ಶಕ್ತಿಯು ತಮ್ಮ ಆಜ್ಞೆಯ ಮೇರೆಗೆ ಇರುತ್ತದೆ. ಯಾವ ಶಕ್ತಿಯು ಯಾವ ಸಮಯದಲ್ಲಿ ಅವಶ್ಯವಿದೆಯೋ ಆಗ ಪ್ರತ್ಯಕ್ಷವಾಗುತ್ತದೆ. ಈ ರೀತಿಯಲ್ಲಿ ಕೆಲಸ ಪೂರ್ಣವಾದ ನಂತರ ತಾವು ಸಹನಾಶಕ್ತಿಗೆ ಬಾ ಎಂದು ಆಜ್ಞೆ ಮಾಡಿ, ಕೆಲಸ ಪೂರ್ಣವಾದ ನಂತರ ಅದು ಬರುತ್ತದೆ. ಪ್ರತೀ ಶಕ್ತಿಯು ತಮ್ಮ ಆಜ್ಞೆಯ ಮೇಲೆ ಪ್ರತ್ಯಕ್ಷವಾಗುತ್ತದೆ ಏಕೆಂದರೆ ಪ್ರತಿಯೊಂದು ಶಕ್ತಿಯು ಪರಮಾತ್ಮನ ಕೊಡುಗೆಯಾಗಿದೆ ಅಂದಾಗ ಪರಮಾತ್ಮನ ಕೊಡುಗೆ ತಮ್ಮ ವಸ್ತುವಾಯಿತು ಅಂದಾಗ ತಮ್ಮ ವಸ್ತುವನ್ನು ಹೇಗಾದರೂ ಉಪಯೋಗಿಸಿ, ಯಾವಾಗ ಬೇಕಾದರೂ ಉಪಯೋಗಿಸಿ ಹಾಗೆ ಈ ಸರ್ವಶಕ್ತಿಗಳು ನಿಮ್ಮ ಆಜ್ಞೆಯಲ್ಲಿರಬೇಕು. ಸರ್ವ ಕಮೇರ್ಂದ್ರಿಯಗಳು ನಿಮ್ಮ ಆಜ್ಞೆಯಲ್ಲಿರುತ್ತದೆ ಅದಕ್ಕೆ ಸ್ವರಾಜ್ಯ ಅಧಿಕಾರಿ, ಮಾಸ್ಟರ್ ಸರ್ವಶಕ್ತಿವಂತರೆಂದು ಹೇಳಲಾಗುತ್ತದೆ. ಆ ರೀತಿ ಪಾಂಡವರಿದ್ದೀರಾ? ಮಾಸ್ಟರ್ ಸರ್ವಶಕ್ತಿವಂತರೂ ಆಗಬೇಕು ಮತ್ತು ಸ್ವರಾಜ್ಯ ಅಧಿಕಾರಿಗಳೂ ಆಗಬೇಕು. ಮುಖದಿಂದ ಬಂದಿತು ಎಂದಲ್ಲ. ಅದಕ್ಕೆ ಯಾರು ಅಜ್ಞೆಯನ್ನು ಕೊಟ್ಟರು ಎಂದು ನೋಡಿ. ಇಷ್ಟವಿರಲಿಲ್ಲ ಆದರೂ ನೋಡಿದೆವು. ಮಾಡಲು ಇಷ್ಟವಿರಲಿಲ್ಲ. ಆದರೂ ಮಾಡಿದೆವು, ಇದು ಯಾರ ಆಜ್ಞೆಯಂತೆ ಆಗುತ್ತಿದೆ? ಅವರಿಗೆ ಅಧಿಕಾರಿಗಳೆಂದು ಹೇಳಲಾಗುತ್ತದೆಯೋ ಅಥವಾ ಅಧಿಕನರೇಂದು ಹೇಳಲಾಗುತ್ತದೆಯೋ? ಅಂದಾಗ ಆಧೀನರಾಗಬೇಡಿ, ಅಧಿಕಾರಿಗಳಾಗಿ. ಒಳ್ಳೆಯದು.

ಬಾಪ್ದಾದಾ ಹೇಳುತ್ತಾರೆ - ಹೇಗೆ ಈಗ ಮಧುಬನದಲ್ಲಿ ಬಹಳ ಬಹಳ ಖುಷಿಯಾಗಿದ್ದೀರೋ ಹಾಗೆಯೇ ಸದಾಕಾಲ ಖುಷಿಯಾಗಿರಬೇಕು ಏಕೆಂದರೆ ಆತ್ಮೀಯ ಗುಲಾಬಿಗಳಾಗಿದ್ದೀರಿ. ನೋಡಿ ನಾಲ್ಕೂ ಕಡೆ ಎಲ್ಲಾ ಆತ್ಮೀಯ ಗುಲಾಬಿಗಳು ಅರಳಿರುವ ಗುಲಾಬಿಗಳಿವೆ. ಬಾಡಿಹೋಗಿರುವಂತದ್ದಲ್ಲ, ಅರಳಿರುವ ಗುಲಾಬಿಗಳಾಗಿದ್ದೀರಿ ಅಂದಾಗ ಸದಾ ಆ ರೀತಿಯ ಖುಷಿಯ ಅದೃಷ್ಟವಂತರು ಮತ್ತು ಖುಷಿಯ ಚಹರೆಯಲ್ಲಿರಬೇಕು. ಯಾರೇ ತಮ್ಮ ಚಹರೆಯನ್ನು ನೋಡಿದಾಗ ನಿಮಗೆ ಏನು ಸಿಕ್ಕಿದೆ, ಬಹಳ ಖುಷಿಯಾಗಿದ್ದೀರಿ ಎಂದು ಕೇಳಬೇಕು. ಪ್ರತಿಯೊಬ್ಬರ ಚಹರೆಯು ತಂದೆಯ ಪರಿಚಯವನ್ನು ಕೊಡಬೇಕು. ಹೇಗೆ ಚಿತ್ರವು ಪರಿಚಯವನ್ನು ಕೊಡುತ್ತದೆಯೋ ಹಾಗೆಯೇ ತಮ್ಮ ಚಹರೆಯು ತಂದೆಯು ಸಿಕ್ಕಿದ್ದಾರೆಂದು ತಂದೆಯ ಪರಿಚಯವನ್ನು ಕೊಡಬೇಕು. ಒಳ್ಳೆಯದು.

ಎಲ್ಲರೂ ಚೆನ್ನಾಗಿದ್ದೀರಾ? ವಿದೇಶದವರು ಬಂದು ತಲುಪಿದ್ದಾರೆ. ಇಲ್ಲಿ ಚೆನ್ನಾಗಿರುತ್ತದೆಯಲ್ಲವೆ? (ಮೋಹಿನಿ ಬೆಹನ್, ನ್ಯೂಯಾರ್ಕ್) ಏರುಪೇರುಗಳನ್ನು ಕೇಳುವುದರಿಂದ ದೂರವಾದಿರಿ ಒಳ್ಳೆಯದನ್ನು ಮಾಡಿದಿರಿ, ಎಲ್ಲರೂ ಒಟ್ಟಿಗೆ ಬಂದು ತಲುಪಿದ್ದೀರಿ, ಒಳ್ಳೆಯದನ್ನು ಮಾಡಿದಿರಿ. ಒಳ್ಳೆಯದು. ಡಬಲ್ ವಿದೇಶಿಗಳಿಗೆ ಡಬಲ್ ನಶೆಯಿದೆಯಲ್ಲವೆ! ನಾವು ಡಬಲ್ ವಿದೇಶಿಗಳಾಗಿದ್ದೇವೆಂದು ಮನಸ್ಸಿನಿಂದಲೂ ಹೇಳಬೇಕು ಅಷ್ಟು ನಿಮಗೆ ನಶೆಯಿರಬೇಕು. ಡಬಲ್ ನಶೆಯಿದೆ, ಸ್ವರಾಜ್ಯ ಅಧಿಕಾರಿಗಳೇ ವಿಶ್ವ ಅಧಿಕಾರಗಳಾಗುವುದಾಗಿದೆ. ಈ ರೀತಿ ಡಬಲ್ ಸೆಶೆಯಿದೆಯಲ್ಲವೆ! ಬಾಪ್ದಾದಾರವರಿಗೂ ಇಷ್ಟವಾಗುತ್ತದೆ. ಒಂದುವೇಳೆ ಯಾವುದಾದರೂ ಗ್ರೂಪಿನಲ್ಲಿ ಡಬಲ್ ವಿದೇಶಿಗಳಿಲ್ಲದಿದ್ದರೆ ಚೆನ್ನಾಗಿರುವುದಿಲ್ಲ. ವಿಶ್ವದ ತಂದೆಯಾಗಿದ್ದಾರಲ್ಲವೇ ಅಂದಾಗ ವಿಶ್ವದವರೇ ಬೇಕಲ್ಲವೇ? ಎಲ್ಲರೂ ಬೇಕು. ಮಾತೆಯರು ಇಲ್ಲದಿದ್ದರೆ ಚೆನ್ನಾಗಿರುವುದಿಲ್ಲ. ಪಾಂಡವರಿಲ್ಲದಿದ್ದರೆ ಸುಂದರತೆ ಕಡಿಮೆಯಾಗುತ್ತದೆ. ನೋಡಿ ಯಾವುದಾದರೂ ಸೇವಾಕೇಂದ್ರದಲ್ಲಿ ಪಾಂಡವರೇ ಇಲ್ಲದಿದ್ದರೆ ಕೇವಲ ಮಾತೆಯರಿದ್ದರೆ ಚೆನ್ನಾಗಿರುತ್ತದೆಯೇ! ಮತ್ತು ಕೇವಲ ಪಾಂಡವರಿದ್ದು ಶಕ್ತಿಯರಿಲ್ಲದಿದ್ದರೆ ಸೇವಾಕೇಂದ್ರದ ಶೃಂಗಾರವಾಗಿರುವುದಿಲ್ಲ. ಇಬ್ಬರೂ ಬೇಕು. ಮಕ್ಕಳೂ ಸಹ ಬೇಕು. ನಮ್ಮ ಹೆಸರನ್ನು ಏಕೆ ತೆಗೆದುಕೊಳ್ಳಲಿಲ್ಲವೆಂದು ಮಕ್ಕಳು ಕೇಳುತ್ತಿದ್ದಾರೆ. ಮಕ್ಕಳೂ ಸಹ ಶೃಂಗಾರವಾಗಿದ್ದಾರೆ.

ಒಳ್ಳೆಯದು. ಈಗ ಒಂದು ಸೆಕೆಂಡಿನಲ್ಲಿ ನಿರಾಕಾರಿ ಆತ್ಮಗಳಾಗಿ ನಿರಾಕಾರಿ ತಂದೆಯ ನೆನಪಿನಲ್ಲಿ ಲವಲೀನರಾಗಿ. (ಡ್ರಿಲ್)

ನಾಲ್ಕೂ ಕಡೆಯ ಸರ್ವ ಸ್ವರಾಜ್ಯಾಧಿಕಾರಿ, ಸದಾ ಸಾಕ್ಷಿತನದ ಸೀಟಿನಲ್ಲಿ ಸೆಟ್ ಆಗಿರುವಂತಹ ಅಚಲ, ಅಡೋಲ ಆತ್ಮಗಳಿಗೆ, ಸದಾ ದಾತಾತನದ ಸ್ಮೃತಿಯಿಂದ ಸರ್ವರಿಗೂ ಜ್ಞಾನ, ಶಕ್ತಿ, ಗುಣ ಕೊಡುವಂತಹ ವಿಶಾಲ ಹೃದಯಿ ಆತ್ಮಗಳಿಗೆ, ಸದಾ ತಮ್ಮ ಚಹರೆಯಿಂದ ತಂದೆಯ ಚಿತ್ರವನ್ನು ತೋರಿಸುವಂತಹ ಶ್ರೇಷ್ಠಾತ್ಮಗಳಿಗೆ, ಸದಾ ಖುಷಿಯಾಗಿರುವಂತಹ, ಸದಾ ಖುಷಿಯ ಚಹರೆಯುಳ್ಳಂತಹ ಆತ್ಮೀಯ ಗುಲಾಬಿ, ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಮತ್ತು ನಮಸ್ತೆ.

ದಾದಿಜೀಯವರ ಜೊತೆ: (ಸೇವೆಯ ಜೊತೆ ಎಲ್ಲಾ ಕಡೆ 108 ಗಂಟೆ ಯೋಗದ ಒಳ್ಳೆಯ ಪೆÇ್ರೀಗಾಮ್ ನಡೆಯುತ್ತಿದೆ) ಈ ಜ್ವಾಲೆಯಿಂದಲೇ ವಿನಾಶದ ಜ್ವಾಲೆಯ ತೀವ್ರವಾಗಿ ಬರುತ್ತದೆ. ಈಗ ಕಾರ್ಯಕ್ರಮವನ್ನು ಮಾಡುತ್ತಾರೆ ನಂತರ ಯೋಚಿಸುತ್ತಿರುತ್ತಾರೆ. ಯೋಗದಿಂದ ವಿಕರ್ಮ ವಿನಾಶವಾಗುತ್ತದೆ, ಪಾಪಕರ್ಮದ ಹೊರೆಯು ಭಸ್ಮವಾಗುತ್ತದೆ, ಸೇವೆಯಿಂದ ಪುಣ್ಯದ ಖಾತೆಯು ಜಮಾ ಆಗುತ್ತದೆ ಅಂದಾಗ ಪುಣ್ಯದ ಖಾತೆಯನ್ನು ಜಮಾ ಮಾಡಿಕೊಳ್ಳುತ್ತಿದ್ದಾರೆ ಆದರೆ ಹಿಂದಿನ ಯಾವ ಸ್ವಲ್ಪ ಹೊರೆಯ ಸಂಸ್ಕಾರವಿದೆಯೋ, ಅದು ಯೋಗದ ಜ್ವಾಲೆಯಿಂದ ಭಸ್ಮವಾಗುತ್ತದೆ. ಸಾಧಾರಣವಾದ ಯೋಗದಿಂದಲ್ಲ. ಈಗ ಏನಾಗಿದೆ. ಯೋಗವನ್ನು ಮಾಡುತ್ತಾರೆ ಆದರೆ ಪಾಪಭಸ್ಮವಾಗುವ ಜ್ವಾಲಾರೂಪದ ಸ್ಥಿತಿಯಿಲ್ಲ ಆದ್ದರಿಂದ ಸ್ವಲ್ಪ ಸಮಯ ಸಮಾಪ್ತಿಯಾಗುತ್ತದೆ ನಂತರ ಬರುತ್ತದೆ. ಆದ್ದರಿಂದ ರಾವಣನನ್ನು ನೋಡಿ ಸಾಯಿಸುತ್ತಾರೆ, ಸುಟ್ಟು ಹಾಕುತ್ತಾರೆ ನಂತರ ಮೂಳೆಗಳನ್ನೂ ಸಹ ತೆಗೆದುಕೊಂಡು ಹೋಗಿ ನೀರಿನಲ್ಲಿ ಹಾಕುತ್ತಾರೆ. ಸಂಪೂರ್ಣ ಸಮಾಪ್ತಿಯಾಗುತ್ತದೆ ಆದರೆ ಹಿಂದಿನ ಸಂಸ್ಕಾರ, ದುರ್ಬಲ ಸಂಸ್ಕಾರ ಸಂಪೂರ್ಣ ಸಮಾಪ್ತಿಯಾಗಬೇಕು ಅದು ಸಮಾಪ್ತಿಯಾಗುತ್ತಿಲ್ಲ, ಸಾಯುತ್ತದೆ ಆದರೆ ಸಮಾಪ್ತಿಯಾಗುವುದಿಲ್ಲ, ಸತ್ತ ನಂತರ ಜೀವಂತವಾಗಿಬಿಡುತ್ತದೆ. ಸಂಸ್ಕಾರ ಪರಿವರ್ತನೆಯಿಂದ ಪ್ರಪಂಚವೇ ಪರಿವರ್ತನೆಯಾಗುತ್ತದೆ. ಈಗ ಸಂಸ್ಕಾರಗಳ ಲೀಲೆ ನಡೆಯುತ್ತಿದೆ. ಸಂಸ್ಕಾರವು ಮಧ್ಯ ಮಧ್ಯದಲ್ಲಿ ಪ್ರತ್ಯಕ್ಷವಾಗುತ್ತದೆಯಲ್ಲವೆ! ಹೆಸರು, ಚಿಹ್ನೆಯೂ ಸಮಾಪ್ತಿಯಾಗಲಿ, ಸಂಸ್ಕಾರ ಪರಿವರ್ತನೆ ಇದು ವಿಶೇಷ ಅಂಡರ್ಲೈನಿನ ಮಾತಾಗಿದೆ. ಸಂಸ್ಕಾರ ಪರಿವರ್ತನೆಯಿಲ್ಲದಿದ್ದಾಗ ವ್ಯರ್ಥ ಸಂಕಲ್ಪವು ಬರುತ್ತದೆ. ವ್ಯರ್ಥವಾದ ಸಮಯವು ಆಗುತ್ತದೆ. ವ್ಯರ್ಥ ತೊಂದರೆಯೂ ಆಗುತ್ತದೆ. ಎಲ್ಲವೂ ಆಗಲೇಬೇಕು (ಸಮಯ ಮಾಡುತ್ತದೆಯೋ ಅಥವಾ ಸ್ವಯಂ ಪುರುಷಾರ್ಥವನ್ನು ಮಾಡುತ್ತೀರೋ) ಎರಡೂ ಸೇರಿ ಮಾಡುತ್ತೀರಿ. ಸಮಯವು ಸ್ವಯಂ ಪುರುಷಾರ್ಥವನ್ನು ಮಾಡಿಸುತ್ತದೆ ಏಕೆಂದರೆ ಸಂಸ್ಕಾರದ ಮಿಲನದ ಮಹಾರಾಸ್ ಎಂದು ಗಾಯನ ಮಾಡಲಾಗಿದೆ. ಮಹಾನೃತ್ಯ ಯಾವ ಸ್ಮಾರಕವಿದೆಯೋ ಅದು ಸಂಸ್ಕಾರ ಮಿಲನದ ಮಹಾನೃತ್ಯ ಆಗಿದೆ. ಈಗ ನೃತ್ಯ ಆಗುತ್ತದೆ ಮಹಾನ್ ನೃತ್ಯವಾಗಿಲ್ಲ. (ಮಹಾನೃತ್ಯ ಯಾವಾಗ ಆಗುತ್ತದೆ?) ಆಂಡರ್ಲೈನ್ ಮಾಡಿಲ್ಲ, ದೃಡತೆಯೂ ಇಲ್ಲ. ಹುಡುಗಾಟಿಕೆತನ ಭಿನ್ನ-ಭಿನ್ನ ಪ್ರಕಾರವಾಗಿದೆ. ಒಳ್ಳೆಯದು. ತಾವೆಲ್ಲರೂ ಚೆನ್ನಾಗಿದ್ದೀರಲ್ಲವೇ.

ವರದಾನ:
ಕರ್ಮಯೋಗಿಯಾಗಿ ಪ್ರತಿ ಸಂಕಲ್ಪ, ಮಾತು ಮತ್ತು ಕರ್ಮ ಶ್ರೇಷ್ಠ ಮಾಡಿಕೊಳ್ಳುವಂತಹ ನಿರಂತರ ಯೋಗಿ ಭವ.

ಕರ್ಮಯೋಗಿ ಆತ್ಮನ ಪ್ರತಿ ಕರ್ಮ ಯೋಗ ಯುಕ್ತ, ಯುಕ್ತಿ ಯುಕ್ತವಾಗಿರುವುದು. ಒಂದುವೇಳೆ ಯಾವುದೇ ಕರ್ಮ ಯುಕ್ತಿ ಯುಕ್ತವಾಗಿರದಿದ್ದರೆ ತಿಳಿಯಿರಿ ಯೋಗಯುಕ್ತರಲ್ಲ. ಒಂದುವೇಳೆ ಸಾಧಾರಣ ಅಥವಾ ವ್ಯರ್ಥ ಕರ್ಮವಾದಾಗ ನಿರಂತರ ಯೋಗಿ ಎಂದು ಹೇಳಲಾಗುವುದಿಲ್ಲ. ಕರ್ಮಯೋಗಿ ಅರ್ಥಾತ್ ಪ್ರತಿ ಸೆಕೆಂಡ್, ಪ್ರತಿ ಸಂಕಲ್ಪ, ಪ್ರತಿ ಮಾತು ಸದಾ ಶ್ರೇಷ್ಠವಾಗಿರಬೇಕು. ಶ್ರೇಷ್ಠ ಕರ್ಮದ ಗುರುತು ಆಗಿದೆ-ಸ್ವಯಂ ಕೂಡ ಸಂತುಷ್ಠ ಮತ್ತು ಬೇರೆಯವರೂ ಸಂತುಷ್ಟ ಇಂತಹ ಆತ್ಮರೇ ನಿರಂತರ ಯೋಗಿಯಾಗುತ್ತಾರೆ.

ಸ್ಲೋಗನ್:
ಸ್ವಯಂ ಪ್ರಿಯ, ಲೋಕ ಪ್ರಿಯ ಮತ್ತು ಪ್ರಭು ಪ್ರಿಯ ಆತ್ಮರೇ ವರದಾನಿ ಮೂರ್ತಿಗಳಾಗಿದ್ದಾರೆ.