09.01.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ವಿಕರ್ಮಗಳ ಶಿಕ್ಷೆಗಳಿಂದ ಮುಕ್ತರಾಗುವ ಪುರುಷಾರ್ಥ ಮಾಡಿ, ಈ ಅಂತಿಮ ಜನ್ಮದಲ್ಲಿ ಎಲ್ಲಾ
ಲೆಕ್ಕಾಚಾರವನ್ನು ಮುಕ್ತ ಮಾಡಿ ಪಾವನರಾಗಬೇಕು”
ಪ್ರಶ್ನೆ:
ಮೋಸ ಮಾಡುವ
ಮಾಯೆಯು ಯಾವ ಪ್ರತಿಜ್ಞೆಯನ್ನು ಖಂಡನೆಗೆ ಪ್ರಯತ್ನಪಡುತ್ತದೆ?
ಉತ್ತರ:
ನಾವು ಯಾವುದೇ
ದೇಹಧಾರಿಯೊಂದಿಗೆ ಮನಸ್ಸನ್ನು ಇಡುವುದಿಲ್ಲವೆಂದು ನೀವು ಪ್ರತಿಜ್ಞೆ ಮಾಡಿದ್ದೀರಿ. ಆತ್ಮವು
ಹೇಳುತ್ತದೆ - ಒಬ್ಬ ತಂದೆಯನ್ನೇ ನೆನಪು ಮಾಡುತ್ತೇನೆ. ತನ್ನ ದೇಹವನ್ನೂ ಸಹ ನೆನಪು ಮಾಡುವುದಿಲ್ಲ.
ತಂದೆಯು ದೇಹಸಹಿತವಾಗಿ ಎಲ್ಲದರ ಸನ್ಯಾಸವನ್ನು ಮಾಡಿಸುತ್ತಾರೆ ಆದರೆ ಮಾಯೆಯು ಈ ಪ್ರತಿಜ್ಞೆಯನ್ನೆ
ತೊಡೆದುಹಾಕುತ್ತದೆ. ದೇಹದಲ್ಲಿ ಸೆಳೆತ ಬಂದುಬಿಡುತ್ತದೆ. ಯಾರು ಪ್ರತಿಜ್ಞೆಯನ್ನು ಉಲ್ಲಂಘನೆ
ಮಾಡುತ್ತಾರೆಯೋ ಅವರು ಬಹಳ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಗೀತೆ:
ನೀನೇ ತಾಯಿ-ತಂದೆ.....
ಓಂ ಶಾಂತಿ.
ಇದರಲ್ಲಿ ಶ್ರೇಷ್ಠಾತಿಶ್ರೇಷ್ಠ ಭಗವಂತನ ಮಹಿಮೆಯೂ ಸಹ ಇದೆ, ನಂತರ ನಿಂದನೆಯೂ ಸಹ ಇದೆ. ಈಗ
ಶ್ರೇಷ್ಠಾತಿಶ್ರೇಷ್ಠ ತಂದೆಯು ತಾವೇ ಬಂದು ತನ್ನ ಪರಿಚಯ ಕೊಡುತ್ತಾರೆ ಮತ್ತು ಯಾವಾಗ ರಾವಣರಾಜ್ಯವು
ಪ್ರಾರಂಭವಾಗುತ್ತದೆಯೋ ತನ್ನ ದೊಡ್ಡಸ್ಥಿಕೆಯನ್ನು ತೋರಿಸುತ್ತಾರೆ. ಭಕ್ತಿಮಾರ್ಗದಲ್ಲಿ ಭಕ್ತಿಯದೇ
ರಾಜ್ಯವಿದೆ ಆದ್ದರಿಂದ ರಾವಣರಾಜ್ಯವೆಂದು ಕರೆಯಲಾಗುತ್ತದೆ. ಅದು ರಾಮರಾಜ್ಯ, ಇದು
ರಾವಣರಾಜ್ಯವಾಗಿದೆ. ರಾಮ ಮತ್ತು ರಾವಣನನ್ನು ಹೋಲಿಕೆ ಮಾಡಲಾಗುತ್ತದೆ. ಬಾಕಿ ಆ ರಾಮನು
ತ್ರೇತಾಯುಗದ ರಾಜನಾಗಿದ್ದಾನೆ ಅವನಿಗೆ ಈ ರೀತಿ ಹೇಳುವುದಿಲ್ಲ. ರಾವಣನು ಅರ್ಧಕಲ್ಪದ
ರಾಜನಾಗಿದ್ದಾನೆ. ರಾಮನು ಅರ್ಧಕಲ್ಪದ ರಾಜನೆಂದಲ್ಲ. ಇದೆಲ್ಲವೂ ಸ್ಪಷ್ಟವಾಗಿ ತಿಳಿದುಕೊಳ್ಳುವ
ಮಾತುಗಳಾಗಿವೆ ಬಾಕಿ ಅದೆಲ್ಲವೂ ಸಂಪೂರ್ಣ ಸಹಜವಾಗಿ ತಿಳಿದುಕೊಳ್ಳುವಂತಹ ಮಾತುಗಳಾಗಿವೆ. ನಾವೆಲ್ಲರೂ
ಸಹೋದರ-ಸಹೋದರರಾಗಿದ್ದೇವೆ. ನಮ್ಮೆಲ್ಲರ ತಂದೆಯು ಒಬ್ಬ ನಿರಾಕಾರನಾಗಿದ್ದಾರೆ. ಈ ಸಮಯದಲ್ಲಿ
ನಾವೆಲ್ಲಾ ಮಕ್ಕಳು ರಾವಣನ ಜೈಲಿನಲ್ಲಿದ್ದೇವೆಂದು ಮಕ್ಕಳಿಗೆ ತಿಳಿದಿದೆ. ಕಾಮಚಿತೆಯ ಮೇಲೆ ಕುಳಿತು
ಎಲ್ಲರೂ ಕಪ್ಪಾಗಿಬಿಟ್ಟಿದ್ದಾರೆ. ಆತ್ಮನಲ್ಲಿಯೇ ಎಲ್ಲದರ ಜ್ಞಾನವಿದೆಯಲ್ಲವೆ! ಇದರಲ್ಲಿಯೇ
ಎಲ್ಲದಕ್ಕಿಂತ ಹೆಚ್ಚಿನ ಮಹತ್ವಿಕೆಯನ್ನು ಆತ್ಮ-ಪರಮಾತ್ಮನನ್ನು ತಿಳಿದುಕೊಳ್ಳುವುದರ ಕಡೆಯೇ
ಕೊಡಬೇಕಾಗಿದೆ. ಇಷ್ಟು ಚಿಕ್ಕದಾದಂತಹ ಆತ್ಮನಲ್ಲಿ ಎಷ್ಟೊಂದು ಪಾತ್ರವು ನೊಂದಣಿಯಾಗಿದೆ! ಅದನ್ನು
ಅಭಿನಯಿಸುತ್ತಾ ಇರುತ್ತದೆ. ದೇಹಾಭಿಮಾನದಲ್ಲಿ ಬಂದು ಪಾತ್ರವನ್ನು ಅಭಿನಯಿಸುತ್ತಾರೆಂದರೆ
ಸ್ವಧರ್ಮವನ್ನು ಮರೆತುಬಿಡುತ್ತಾರೆ. ಈಗ ತಂದೆಯು ಬಂದು ನಿಮ್ಮನ್ನು ಆತ್ಮಾಭಿಮಾನಿಗಳನ್ನಾಗಿ
ಮಾಡುತ್ತಾರೆ ಏಕೆಂದರೆ ನಾನು ಪಾವನನಾಗಬೇಕೆಂದು ಆತ್ಮವೇ ಹೇಳುತ್ತದೆ. ಮನ್ಮನಾಭವ, ನನ್ನೊಬ್ಬನನ್ನೇ
ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ಹೇ ಪರಮಪಿತ, ಹೇ ಪತಿತ-ಪಾವನ ಎಂದು ಆತ್ಮವೇ ಕರೆಯುತ್ತದೆ.
ನಾವಾತ್ಮರೇ ಪತಿತರಾಗಿಬಿಟ್ಟಿದ್ದೇವೆ, ನೀವು ಬಂದು ಪಾವನರನ್ನಾಗಿ ಮಾಡಿ. ಸಂಸ್ಕಾರವೆಲ್ಲವೂ
ಆತ್ಮನಲ್ಲಿಯೇ ಇದೆಯಲ್ಲವೆ. ಆತ್ಮವು ಪತಿತ ಮನುಷ್ಯ, ಪಾವನ ನಿರ್ವಿಕಾರಿ ದೇವತೆಗಳ ಮುಂದೆಹೋಗಿ ಅವರ
ಮಹಿಮೆಯನ್ನು ಮಾಡುತ್ತಾರೆ. ಮಕ್ಕಳೇ, ನೀವೇ ಪೂಜ್ಯದೇವತೆಗಳಾಗಿದ್ದಿರಿ, 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾ ಕೆಳಗಿಳಿಯಲೇಬೇಕು, ಈ ಆಟವೇ ಪತಿತರಿಂದ ಪಾವನ, ಪಾವನರಿಂದ ಪತಿತರಾಗುವುದಾಗಿದೆ
ಎಂದು ತಂದೆಯು ತಿಳಿಸುತ್ತಾರೆ. ಎಲ್ಲದರ ಜ್ಞಾನವನ್ನು ತಂದೆಯು ಬಂದು ಸೂಕ್ಷ್ಮವಾಗಿ ತಿಳಿಸುತ್ತಾರೆ.
ಈಗ ಎಲ್ಲರದೂ ಅಂತಿಮ ಜನ್ಮವಾಗಿದೆ, ಎಲ್ಲರೂ ಲೆಕ್ಕಾಚಾರವನ್ನು ಮುಗಿಸಿ ಹೋಗಬೇಕು. ತಂದೆಯು
ಸಾಕ್ಷಾತ್ಕಾರ ಮಾಡಿಸುತ್ತಾರೆ, ಪತಿತರು ತನ್ನ ವಿಕರ್ಮದ ಶಿಕ್ಷೆಯನ್ನು ಅವಶ್ಯವಾಗಿ ಅನುಭವಿಸಲೇಬೇಕು.
ಅಂತಿಮದಲ್ಲಿ ಯಾವುದಾದರೂ ಜನ್ಮವನ್ನು ಕೊಟ್ಟೇ ಶಿಕ್ಷೆಯನ್ನು ಕೊಡುತ್ತಾರೆ ಅಂದರೆ ಮನುಷ್ಯನ
ತನುವಿನಲ್ಲಿಯೇ ಶಿಕ್ಷೆಯನ್ನು ಅನುಭವಿಸಬೇಕು. ಆದ್ದರಿಂದ ಶರೀರವನ್ನು ಅವಶ್ಯವಾಗಿ ಧಾರಣೆ
ಮಾಡಬೇಕಾಗುತ್ತದೆ. ಆತ್ಮವು ನಾನು ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ ಎಂಬ ಅನುಭವವನ್ನು
ಮಾಡುತ್ತದೆ. ಹೇಗೆ ಕಾಶಿಯಲ್ಲಿ ಬಲಿಯಾಗುವ ಸಮಯದಲ್ಲಿ ಶಿಕ್ಷೆಯನ್ನನುಭವಿಸುತ್ತಾರೆ, ಮಾಡಿರುವ
ಪಾಪಗಳ ಸಾಕ್ಷಾತ್ಕಾರವಾಗುತ್ತದೆ ಆದ್ದರಿಂದಲೇ ಭಗವಂತನೇ ಕ್ಷಮೆ ಮಾಡು, ನಾವು ಈ ರೀತಿ ಮತ್ತೆಂದೂ
ಮಾಡುವುದಿಲ್ಲ ಎಂದು ಹೇಳುತ್ತಾರೆ. ಇದೆಲ್ಲವೂ ಸಾಕ್ಷಾತ್ಕಾರದಲ್ಲಿಯೇ ಕ್ಷಮೆಯಾಚಿಸುತ್ತಾರೆ.
ಅದನ್ನು ಅನುಭವ ಮಾಡುತ್ತಾರೆ. ದುಃಖವನ್ನು ಭೋಗಿಸುತ್ತಾರೆ. ಎಲ್ಲದಕ್ಕಿಂತ ಹೆಚ್ಚಿನದಾಗಿ ಆತ್ಮ
ಮತ್ತು ಪರಮಾತ್ಮನಿಗೇ ಮಹತ್ವಿಕೆಯಿದೆ. ಆತ್ಮವೇ 84 ಜನ್ಮಗಳ ಪಾತ್ರವನ್ನಭಿನಯಿಸುತ್ತದೆ ಅಂದಮೇಲೆ
ಆತ್ಮವು ಎಲ್ಲದಕ್ಕಿಂತ ಶಕ್ತಿಶಾಲಿಯಾಯಿತಲ್ಲವೆ. ಇಡೀ ನಾಟಕದಲ್ಲಿ ಆತ್ಮ ಮತ್ತು ಪರಮಾತ್ಮನಿಗೇ
ಮಹತ್ವಿಕೆಯಿದೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. ಆತ್ಮವೆಂದರೇನು? ಪರಮಾತ್ಮನು ಯಾರು? ಎಂಬ
ರಹಸ್ಯವನ್ನು ಒಬ್ಬ ಮನುಷ್ಯನೂ ಸಹ ಅರಿತುಕೊಂಡಿಲ್ಲ. ನಾಟಕದನುಸಾರ ಇದೆಲ್ಲವೂ ಆಗಲೇಬೇಕಾಗಿದೆ. ಈಗ
ನೀವು ಮಕ್ಕಳಿಗೂ ಸಹ ಈ ಜ್ಞಾನವಿದೆ - ಇದೇನೂ ಹೊಸಮಾತಲ್ಲ. ಕಲ್ಪದ ಹಿಂದೆಯೂ ಸಹ ಇದೆಲ್ಲವೂ
ನಡೆದಿತ್ತು, ಜ್ಞಾನ, ಭಕ್ತಿ, ವೈರಾಗ್ಯವೆಂದು ಹೇಳುತ್ತಾರೆ ಅರ್ಥವನ್ನು ತಿಳಿದುಕೊಂಡಿಲ್ಲ. ತಂದೆಯು
ಈ ಸಾಧು ಮೊದಲಾದವರ ಸಂಗವನ್ನು ಬಹಳ ಮಾಡಿದ್ದಾರೆ. ಕೇವಲ ಹೆಸರನ್ನು ತೆಗೆದುಕೊಳ್ಳುತ್ತಾರೆ. ಈಗ
ನೀವು ಮಕ್ಕಳು ಒಳ್ಳೆಯ ರೀತಿಯಲ್ಲಿ ಅರಿತುಕೊಂಡಿದ್ದೀರಿ - ನಾವು ಹಳೆಯ ಪ್ರಪಂಚದಿಂದ
ಹೊಸಪ್ರಪಂಚಕ್ಕೆ ಹೋಗುತ್ತೇವೆಂದರೆ ಈ ಪ್ರಪಂಚದಿಂದ ಅವಶ್ಯವಾಗಿ ವೈರಾಗ್ಯವನ್ನಿಡಬೇಕಾಗಿದೆ.
ಇದರೊಂದಿಗೆ ಮನಸ್ಸನ್ನಿಡಬಾರದು. ಬಾಬಾ, ನಾವು ಯಾವುದೇ ದೇಹಧಾರಿಯ ಜೊತೆ
ಮನಸ್ಸನ್ನಿಡುವುದಿಲ್ಲವೆಂದು ನೀವು ಪ್ರತಿಜ್ಞೆ ಮಾಡಿದ್ದೀರಿ. ನಾವು ಒಬ್ಬ ತಂದೆಯನ್ನೇ ನೆನಪು
ಮಾಡುತ್ತೇವೆ, ತನ್ನ ದೇಹವನ್ನೂ ನೆನಪು ಮಾಡುವುದಿಲ್ಲವೆಂದು ಆತ್ಮವು ಹೇಳುತ್ತದೆ. ತಂದೆಯು
ದೇಹಸಹಿತವಾಗಿ ಎಲ್ಲದರ ಸನ್ಯಾಸ ಮಾಡಿಸುತ್ತಾರೆ ಅಂದಮೇಲೆ ಅನ್ಯರ ದೇಹದೊಂದಿಗೆ ನಾವು ಸೆಳೆತವನ್ನೇಕೆ
ಇಟ್ಟುಕೊಳ್ಳೋಣ! ಯಾರೊಂದಿಗೆ ಸೆಳೆತವಿರುವುದೋ ಅವರ ನೆನಪೇ ಬರುತ್ತಿರುವುದು ಮತ್ತು ಈಶ್ವರನ ನೆನಪೂ
ಬರಲು ಸಾಧ್ಯವಿಲ್ಲ. ಪ್ರತಿಜ್ಞೆಯನ್ನು ಖಂಡಿಸುವುದರಿಂದ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ
ಮತ್ತು ಪದವಿಯೂ ಭ್ರಷ್ಟವಾಗಿಬಿಡುತ್ತದೆ ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು
ಮಾಡಬೇಕಾಗಿದೆ. ಮಾಯೆಯು ಬಹಳ ಮೋಸಗಾರನಾಗಿದೆ. ಅಂದಾಗ ಎಂತಹದ್ದೇ ಸನ್ನಿವೇಶದಲ್ಲಿ ತನ್ನನ್ನು
ರಕ್ಷಿಸಿಕೊಳ್ಳಬೇಕಾಗಿದೆ, ದೇಹಾಭಿಮಾನವು ಬಹಳ ಕಠಿಣ ರೋಗವಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ
- ಮಕ್ಕಳೇ, ಈಗ ಆತ್ಮಾಭಿಮಾನಿಯಾಗಿ, ತಂದೆಯನ್ನು ನೆನಪು ಮಾಡಿ ಆಗ ದೇಹಾಭಿಮಾನದ ಖಾಯಿಲೆಯು
ಬಿಡುಗಡೆಯಾಗುವುದು. ಇಡೀ ದಿನ ದೇಹದ ಅಭಿಮಾನದಲ್ಲಿರುತ್ತಾರೆ, ತಂದೆಯನ್ನು ಬಹಳ ಕಡಿಮೆ ನೆನಪು
ಮಾಡುತ್ತಾರೆ. ತಂದೆಯು ತಿಳಿಸಿದ್ದಾರೆ - ಕೈಕೆಲಸ ಮಾಡುತ್ತಿರಲಿ, ಮನಸ್ಸು-ಬುದ್ಧಿಯು ತಂದೆಯನ್ನು
ನೆನಪು ಮಾಡುತ್ತಿರಲಿ. ಹೇಗೆ ಪ್ರಿಯತಮ-ಪ್ರಿಯತಮೆಯರು ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಲೂ ಸಹ
ತಮ್ಮ ಪ್ರಿಯತಮನನ್ನೇ ನೆನಪು ಮಾಡುತ್ತಿರುತ್ತಾರೆ. ಈಗ ನೀವಾತ್ಮಗಳು ಪರಮಾತ್ಮನೊಂದಿಗೆ
ಪ್ರೀತಿಯನ್ನು ಇಡಬೇಕಾಗಿದೆ ಅಂದಮೇಲೆ ಅವರನ್ನೇ ನೆನಪು ಮಾಡಬೇಕಲ್ಲವೆ. ನಾವು
ದೇವಿ-ದೇವತೆಗಳಾಗಬೇಕೆಂಬುದೇ ನಿಮ್ಮ ಗುರಿ-ಧ್ಯೇಯವಾಗಿದೆ, ಅದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ.
ಮಾಯೆಯಂತೂ ಖಂಡಿತ ಮೋಸಮಾಡುತ್ತದೆ ಆದ್ದರಿಂದ ತಮ್ಮನ್ನು ಅದರಿಂದ ಬಿಡಿಸಿಕೊಳ್ಳಬೇಕಾಗಿದೆ
ಇಲ್ಲವಾದರೆ ಅದರಲ್ಲಿ ಸಿಕ್ಕಿಕೊಂಡು ಸಾಯುತ್ತೀರಿ ಮತ್ತೆ ನಿಂದನೆಯೂ ಆಗುವುದು, ಬಹಳ ನಷ್ಟವೂ
ಆಗುವುದು.
ಮಕ್ಕಳಿಗೆ ತಿಳಿದಿದೆ -
ನಾವಾತ್ಮಗಳು ಬಿಂದುವಾಗಿದ್ದೇವೆ, ನಮ್ಮ ತಂದೆಯೂ ಸಹ ಬೀಜರೂಪ, ಜ್ಞಾನಪೂರ್ಣನಾಗಿದ್ದಾರೆ, ಇವು ಬಹಳ
ಅಧ್ಬುತವಾದ ಮಾತುಗಳಾಗಿವೆ. ಆತ್ಮವೆಂದರೇನು? ಅದರಲ್ಲಿ ಹೇಗೆ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ?
ಈ ಗುಹ್ಯಮಾತುಗಳನ್ನು ಒಳ್ಳೊಳ್ಳೆಯ ಮಕ್ಕಳೂ ಸಹ ಪೂರ್ಣರೀತಿಯಿಂದ ಅರಿತುಕೊಂಡಿಲ್ಲ. ತಮ್ಮನ್ನು
ಯಥಾರ್ಥರೀತಿಯಲ್ಲಿ ತಮ್ಮನ್ನು ಆತ್ಮನೆಂದು ತಿಳಿದು, ತಂದೆಯನ್ನೂ ಸಹ ಬಿಂದುವೆಂದು ತಿಳಿದು ನೆನಪು
ಮಾಡುವುದು, ಅವರು ಜ್ಞಾನಸಾಗರನಾಗಿದ್ದಾರೆ, ಬೀಜರೂಪನಾಗಿದ್ದಾರೆ...... ಎಂದು ತಿಳಿದು ನೆನಪು
ಮಾಡುವವರು ಬಹಳ ವಿರಳ. ಮೇಲೆ-ಮೇಲಿನ ವಿಚಾರಗಳಿಂದಲ್ಲ, ಇದರಲ್ಲಿ ನಾವು ಆತ್ಮಗಳಾಗಿದ್ದೇವೆ, ನಮ್ಮ
ತಂದೆಯು ಬಂದಿದ್ದಾರೆ, ಅವರು ಬೀಜರೂಪ, ಜ್ಞಾನಪೂರ್ಣನಾಗಿದ್ದಾರೆ, ನಮಗೆ ಜ್ಞಾನವನ್ನು
ತಿಳಿಸುತ್ತಿದ್ದಾರೆ. ಧಾರಣೆಯೂ ಸಹ ನಾನು ಅತಿಸೂಕ್ಷ್ಮ ಆತ್ಮನಲ್ಲಿಯೇ ಆಗುತ್ತದೆ ಎಂದು
ಸೂಕ್ಷ್ಮಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ಆತ್ಮ, ಪರಮಾತ್ಮ.... ಎಂದು ಹೀಗೆ ಅನೇಕರು
ಮೇಲೆ-ಮೇಲೆ ವಿಚಾರ ಮಾಡುತ್ತಾರೆ ಅದರೆ ಯಥಾರ್ಥವಾದ ರೀತಿಯಲ್ಲಿ ಬುದ್ಧಿಯಲ್ಲಿ ಬರುವುದೇ ಇಲ್ಲ.
ನೆನಪು ಮಾಡದೇ ಇರುವುದಕ್ಕಿಂತಲೂ ಮೇಲೆ-ಮೇಲೆ ನೆನಪು ಮಾಡುವುದು ಸರಿಯೇ ಆದರೆ ಯಥಾರ್ಥ ನೆನಪೇ
ಹೆಚ್ಚಿನ ಫಲದಾಯಕವಾಗಿದೆ ಆದ್ದರಿಂದ ಮೇಲೆ-ಮೇಲೆ ನೆನಪು ಮಾಡುವವರು ಅಷ್ಟು ಶ್ರೇಷ್ಠಪದವಿಯನ್ನು
ಪಡೆಯಲು ಸಾಧ್ಯವಿಲ್ಲ, ಇದರಲ್ಲಿ ಬಹಳ ಪರಿಶ್ರಮವಿದೆ. ನಾನಾತ್ಮ ಅತಿಸೂಕ್ಷ್ಮಬಿಂದುವಾಗಿದ್ದೇನೆ,
ತಂದೆಯೂ ಸಹ ಬಿಂದುವಾಗಿದ್ದಾರೆ, ಅವರಲ್ಲಿ ಸಂಪೂರ್ಣಜ್ಞಾನವಿದೆ, ಇದೂ ಸಹ ಇಲ್ಲಿ ನೀವು
ಕುಳಿತಿದ್ದಾಗ ಕೆಲವೊಂದು ಮಾತುಗಳು ಬುದ್ಧಿಯಲ್ಲಿ ಬರುತ್ತದೆ ಆದರೆ ನಡೆಯುತ್ತಾ-ತಿರುಗಾಡುತ್ತಾ ಆ
ಚಿಂತನೆಯು ಎಷ್ಟು ಇರಬೇಕೋ ಅಷ್ಟಿರುವುದಿಲ್ಲ, ಮರೆತುಹೋಗುತ್ತಾರೆ. ಇಡೀ ದಿನದಲ್ಲಿ ಅದೇ
ಚಿಂತನೆಯಿರಬೇಕು. ಇದು ಸತ್ಯ-ಸತ್ಯ ನೆನಪಾಗಿದೆ. ನಾವು ಹೇಗೆ ನೆನಪು ಮಾಡುತ್ತೇವೆಂದು ಕೆಲವರು
ಸತ್ಯವನ್ನು ತಿಳಿಸುತ್ತಿಲ್ಲ, ಭಲೆ ದಿನಚರಿಯನ್ನು ಕಳುಹಿಸುತ್ತಾರೆ, ಅವರು ತನ್ನನ್ನು ಬಿಂದುವೆಂದು
ತಿಳಿದು, ತಂದೆಯನ್ನೂ ಸಹ ಬಿಂದುವೆಂದು ತಿಳಿದು ನೆನಪು ಮಾಡುತ್ತೇನೆಂಬುದನ್ನು ಬರೆಯುವುದಿಲ್ಲ.
ಪೂರ್ಣಸತ್ಯತೆಯಿಂದ ಬರೆಯುವುದಿಲ್ಲ. ಭಲೆ ಬಹಳ ಚೆನ್ನಾಗಿ ಮುರುಳಿಯನ್ನು ತಿಳಿಸುವವರಿದ್ದಾರೆ ಆದರೆ
ಯೋಗವು ಬಹಳ ಕಡಿಮೆಯಿದೆ, ದೇಹಾಭಿಮಾನವು ಬಹಳ ಇದೆ. ಈ ಗುಪ್ತಮಾತನ್ನು ಪೂರ್ಣ ತಿಳಿದುಕೊಂಡಿಲ್ಲ,
ಸ್ಮರಣೆ ಮಾಡುವುದಿಲ್ಲ. ನೆನಪಿನಿಂದಲೇ ಪಾವನರಾಗಬೇಕಾಗಿದೆ, ಮೊದಲು ಕರ್ಮಾತೀತ ಸ್ಥಿತಿಯು ಬೇಕಲ್ಲವೆ.
ಅವರೇ ಶ್ರೇಷ್ಠಪದವಿಯನ್ನು ಪಡೆಯಲು ಸಾಧ್ಯ. ಉಳಿದಂತೆ ಮುರುಳಿಯನ್ನು ಹೇಳುವವರು ಅನೇಕರಿದ್ದಾರೆ
ಆದರೆ ತಂದೆಗೆ ಗೊತ್ತಿದೆ, ಯೋಗದಲ್ಲಿರುವುದಿಲ್ಲ ಅಂದರೆ ವಿಶ್ವದ ಮಾಲೀಕರಾಗುವುದು ಚಿಕ್ಕಮ್ಮನ
ಮನೆಯಂತಲ್ಲ. ಅವರು ಅಲ್ಪಕಾಲದ ಪದವಿಯನ್ನು ಪಡೆಯುವುದಕ್ಕೋಸ್ಕರ ಎಷ್ಟೊಂದು ಓದುತ್ತಾರೆ! ಆದಾಯದ
ಮೂಲವು ಈಗ ಇದೆ. ಮೊದಲು ವಕೀಲರು ಇಷ್ಟೊಂದು ಸಂಪಾದಿಸುತ್ತಿರಲಿಲ್ಲ, ಈಗಂತೂ ಎಷ್ಟೆಷ್ಟು ಸಂಪಾದನೆ
ಮಾಡುತ್ತಾರೆ!
ಮಕ್ಕಳು ತಮ್ಮ
ಕಲ್ಯಾಣಕ್ಕಾಗಿ ಒಂದನೆಯದಾಗಿ ತನ್ನನ್ನು ಆತ್ಮವೆಂದು ತಿಳಿದು ಯಥಾರ್ಥರೀತಿಯಲ್ಲಿ ತಂದೆಯನ್ನು ನೆನಪು
ಮಾಡಬೇಕಾಗಿದೆ ಮತ್ತು ಅನ್ಯರಿಗೂ ತ್ರಿಮೂರ್ತಿಶಿವನ ಪರಿಚಯ ಕೊಡಬೇಕಾಗಿದೆ. ಕೇವಲ ಶಿವನೆಂದು
ಹೇಳುವುದರಿಂದ ತಿಳಿದುಕೊಳ್ಳುವುದಿಲ್ಲ, ತ್ರಿಮೂರ್ತಿಗಳು ಅವಶ್ಯವಾಗಿ ಬೇಕು. ತ್ರಿಮೂರ್ತಿ ಮತ್ತು
ಕಲ್ಪವೃಕ್ಷ - ಇವೆರಡು ಚಿತ್ರಗಳು ಮುಖ್ಯವಾಗಿದೆ. ಏಣಿಯ ಚಿತ್ರಕ್ಕಿಂತಲೂ ಕಲ್ಪವೃಕ್ಷದ ಚಿತ್ರದಲ್ಲಿ
ಹೆಚ್ಚಿನ ಜ್ಞಾನವಿದೆ. ಈ ಚಿತ್ರವು ಎಲ್ಲರ ಬಳಿಯಿರಬೇಕು. ಒಂದುಕಡೆ ತ್ರಿಮೂರ್ತಿ-ಗೋಲ, ಇನ್ನೊಂದು
ಕಡೆ ವೃಕ್ಷ. ಈ ಪಾಂಡವಸೇನೆಯ ಬಾವುಟವಿರಬೇಕು, ನಾಟಕ ಮತ್ತು ವೃಕ್ಷದ ಜ್ಞಾನವನ್ನು ತಂದೆಯೇ
ಕೊಡುತ್ತಾರೆ. ಲಕ್ಷ್ಮಿ-ನಾರಾಯಣ, ವಿಷ್ಣು ಮೊದಲಾದವರು ಯಾರು? ಇದನ್ನು ಯಾರೂ ತಿಳಿದುಕೊಂಡಿಲ್ಲ.
ಮಹಾಲಕ್ಷ್ಮಿಯ ಪೂಜೆ ಮಾಡುತ್ತಾರೆ, ಲಕ್ಷ್ಮಿಯು ಬರುತ್ತಾಳೆಂದು ತಿಳಿಯುತ್ತಾರೆ ಅಂದಾಗ ಲಕ್ಷ್ಮಿಗೆ
ಹಣವೆಲ್ಲಿಂದ ಬರುತ್ತದೆ? 4 ಭುಜದ, 8 ಭುಜದವರ ಎಷ್ಟೊಂದು ಚಿತ್ರಗಳನ್ನು ಮಾಡಿದ್ದಾರೆ, ಏನನ್ನೂ
ತಿಳಿದುಕೊಂಡಿಲ್ಲ. 8-10 ಭುಜದ ಮನುಷ್ಯರಂತೂ ಯಾರೂ ಸಹ ಇರಲು ಸಾಧ್ಯವಿಲ್ಲ. ಯಾರಿಗೇನು ಬಂದಿತೋ
ಅದನ್ನು ಮಾಡಿದರು, ಅದೇ ನಡೆದುಬಂದಿತು. ಹನುಮಂತನ ಪೂಜೆ ಮಾಡಿ ಎಂದು ಮತವನ್ನು ಕೊಟ್ಟರು, ಅದೇ ರೀತಿ
ನಡೆಯುತ್ತಾ ಬಂದಿತು. ಹನುಮಂತನು ಸಂಜೀವಿನಿ ಮೂಲಿಕೆಯನ್ನು ತೆಗೆದುಕೊಂಡು ಬಂದನೆಂದು ತೋರಿಸುತ್ತಾರೆ
ಆದರೆ ಅದರ ಅರ್ಥವನ್ನು ನೀವು ತಿಳಿದುಕೊಂಡಿದ್ದೀರಿ. ಸಂಜೀವಿನಿ ಮೂಲಿಕೆಯು ಮನ್ಮನಾಭವ ಆಗಿದೆ,
ವಿಚಾರ ಮಾಡಬೇಕು, ಎಲ್ಲಿಯವರೆಗೆ ಬ್ರಾಹ್ಮಣರಾಗುವುದಿಲ್ಲವೋ, ತಂದೆಯ ಪರಿಚಯ ಸಿಗುವುದಿಲ್ಲವೋ
ಅಲ್ಲಿಯವರೆಗೆ ಕನಿಷ್ಟರಾಗಿರುತ್ತೀರಿ. ಮನುಷ್ಯರಿಗೆ ತಮ್ಮ ಪದವಿಯ ಎಷ್ಟೊಂದು ಅಭಿಮಾನವಿರುತ್ತದೆ,
ಅವರಿಗೆ ತಿಳಿಸಿಕೊಡುವುದರಲ್ಲಿ ಬಹಳ ಕಷ್ಟವಾಗುತ್ತದೆ. ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ
ಎಷ್ಟೊಂದು ಪರಿಶ್ರಮವಾಗುತ್ತದೆ. ಅದು ಬಾಹುಬಲ, ಇದು ಯೋಗಬಲವಾಗಿದೆ. ಈ ಮಾತುಗಳು
ಶಾಸ್ತ್ರಗಳಲ್ಲಿಲ್ಲ. ವಾಸ್ತವದಲ್ಲಿ ನೀವು ಯಾವುದೇ ಶಾಸ್ತ್ರ ಮೊದಲಾದುವುಗಳನ್ನು ಓದುವುದಿಲ್ಲ.
ಒಂದುವೇಳೆ ನೀವು ಶಾಸ್ತ್ರಗಳನ್ನು ಒಪ್ಪುತ್ತೀರಾ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ ತಿಳಿಸಿ -
ಹೌದು, ಇವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಈಗ ನಾವು ಜ್ಞಾನಮಾರ್ಗದಲ್ಲಿ ನಡೆಯುತ್ತಿದ್ದೇವೆ.
ಜ್ಞಾನವನ್ನು ಕೊಡುವ ಜ್ಞಾನಸಾಗರನು ಒಬ್ಬ ತಂದೆಯೇ ಆಗಿದ್ದಾರೆ, ಇದಕ್ಕೆ ಆತ್ಮೀಯ ಜ್ಞಾನವೆಂದು
ಹೇಳಲಾಗುತ್ತದೆ. ಆತ್ಮನೇ (ಪರಮಾತ್ಮ) ಆತ್ಮಗಳಿಗೆ ಕುಳಿತು ಜ್ಞಾನವನ್ನು ತಿಳಿಸುತ್ತಾರೆ. ಅಲ್ಲಿ
ಮನುಷ್ಯರು ಮನುಷ್ಯರಿಗೆ ತಿಳಿಸುತ್ತಾರೆ, ಮನುಷ್ಯರೆಂದು ಆಧ್ಯಾತ್ಮಿಕ ಜ್ಞಾನವನ್ನು ಕೊಡಲು
ಸಾಧ್ಯವಿಲ್ಲ, ಜ್ಞಾನಸಾಗರ, ಪತಿತ-ಪಾವನ, ಮುಕ್ತಿದಾತ, ಸದ್ಗತಿದಾತ ತಂದೆಯೊಬ್ಬರೇ ಆಗಿದ್ದಾರೆ.
ತಂದೆಯು ಹೀಗೀಗೆ ಮಾಡಿ
ಎಂದು ತಿಳಿಸುತ್ತಿರುತ್ತಾರೆ. ಈಗ ನೋಡೋಣ, ಶಿವಜಯಂತಿಯನ್ನು ಎಷ್ಟು ವಿಜೃಂಭಣೆಯಿಂದ ಆಚರಿಸುತ್ತೀರಿ?
ಟ್ರಾನ್ಸ್ ಲೈಟ್ ನ ಚಿತ್ರವು ಚಿಕ್ಕದಾದರೂ ಸರಿ, ಎಲ್ಲರಿಗೂ ಸಿಗಬೇಕು. ನಿಮ್ಮದು ಇದು ಹೊಸ
ಮಾತಾಗಿದೆ. ನಿಮ್ಮನ್ನು ಯಾರೂ ಅರಿತುಕೊಳ್ಳುವುದಿಲ್ಲ. ಪತ್ರಿಕೆಗಳಲ್ಲಿ ಹೆಚ್ಚಿನದಾಗಿ ಹಾಕಿಸಬೇಕು.
ಸಂದೇಶದ ಶಬ್ಧವನ್ನು ಹರಡಬೇಕು, ಸೇವಾಕೇಂದ್ರಗಳನ್ನು ತೆರೆಯುವವರೂ ಸಹ ಈ ರೀತಿಯಿರಬೇಕು. ಈಗಿನ್ನೂ
ನೀವು ಮಕ್ಕಳಿಗೇ ಇಷ್ಟು ನಶೆಯೇರಿಲ್ಲ. ನಂಬರ್ವಾರ್ ಪುರುಷಾರ್ಥದನುಸಾರ ತಿಳಿಸುತ್ತೀರಿ. ಇಷ್ಟೆಲ್ಲಾ
ಬ್ರಹ್ಮಾಕುಮಾರ-ಕುಮಾರಿಯರಿದ್ದೀರಿ. ಬ್ರಹ್ಮನ ಹೆಸರನ್ನು ತೆಗೆದು ಯಾರ ಹೆಸರಾದರೂ ಹಾಕಿ,
ರಾಧೆ-ಕೃಷ್ಣರ ಹೆಸರಾದರೂ ಹಾಕಿ ಅಂದಮೇಲೆ ಬ್ರಹ್ಮಾಕುಮಾರ-ಕುಮಾರಿಯರು ಎಲ್ಲಿಂದ ಬಂದರು?
ಬ್ರಹ್ಮನಂತೂ ಅವಶ್ಯವಾಗಿ ಬೇಕಲ್ಲವೆ! ಅವರಿಂದ ಮುಖವಂಶಾವಳಿ ಬ್ರಹ್ಮಾಕುಮಾರ-ಕುಮಾರಿಯರಾಗಬೇಕು.
ಮಕ್ಕಳು ಮುಂದೆಹೋದಂತೆ ಬಹಳ ತಿಳಿದುಕೊಳ್ಳುತ್ತಾರೆ, ಖರ್ಚಂತೂ ಮಾಡಲೇಬೇಕಾಗುತ್ತದೆ. ಚಿತ್ರಗಳು
ಬಹಳ ಸ್ಪಷ್ಟವಾಗಿದೆ, ಲಕ್ಷ್ಮಿ-ನಾರಾಯಣರ ಚಿತ್ರವು ಬಹಳ ಚೆನ್ನಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಬಹಳ ಕಾಲ
ಅಗಲಿ ಹೋಗಿ ಮರಳಿ ಸಿಕ್ಕಿರುವ ಸೇವಾಧಾರಿಗಳು, ಆಜ್ಞಾಕಾರಿಗಳು, ಪ್ರಾಮಾಣಿಕರು, ನಂಬರ್ವಾರ್
ಪುರುಷಾರ್ಥದನುಸಾರ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಕರ್ಮಾತೀತರಾಗಲು ತಂದೆಯನ್ನು ಸೂಕ್ಷ್ಮಬುದ್ಧಿಯಿಂದ ಅರಿತುಕೊಂಡು ಯಥಾರ್ಥವಾಗಿ ನೆನಪು ಮಾಡಬೇಕಾಗಿದೆ.
ವಿದ್ಯೆಯ ಜೊತೆಜೊತೆಗೆ ಯೋಗದ ಮೇಲೆ ಪೂರ್ಣಗಮನ ಕೊಡಬೇಕಾಗಿದೆ.
2. ಸ್ವಯಂನ್ನು ಮಾಯೆಯ
ಮೋಸದಿಂದ ಪಾರು ಮಾಡಿಕೊಳ್ಳಬೇಕಾಗಿದೆ. ಯಾರದೇ ದೇಹದೊಂದಿಗೆ ಸೆಳೆತವನ್ನಿಡಬಾರದು. ಒಬ್ಬ
ತಂದೆಯೊಂದಿಗೇ ಸತ್ಯವಾದ ಪ್ರೀತಿಯನ್ನಿಟ್ಟುಕೊಳ್ಳಬೇಕಾಗಿದೆ. ದೇಹದ ಅಭಿಮಾನದಲ್ಲಿ ಬರಬಾರದಾಗಿದೆ.
ವರದಾನ:
ಬ್ರಹ್ಮ
ಮೂಹರ್ತದ ಸಮಯ ತೆಗೆದುಕೊಳ್ಳುವುದು ಮತ್ತು ದಾನ ಕೊಡುವಂತಹ ತಂದೆ ಸಮಾನ ಿ, ಮಹಾದಾನಿ ಭವ
ಬ್ರಹ್ಮ ಮೂಹರ್ತದ ಸಮಯ
ವಿಶೇಷ ಬ್ರಹ್ಮಲೋಕದ ನಿವಾಸಿ ತಂದೆ ಜ್ಞಾನದ ಲೈಟ್ ಮತ್ತು ಮೈಟ್ನ ಕಿರಣಗಳು ವರದಾನ ರೂಪದಲ್ಲಿ
ಕೊಡುತ್ತಾರೆ. ಜೊತೆ ಜೊತೆ ಬ್ರಹ್ಮಾ ತಂದೆ ಭಾಗ್ಯ ವಿಧಾತಾನ ರೂಪದಲ್ಲಿ ಭಾಗ್ಯ ರೂಪಿ ಅಮೃತ
ಹಂಚುತ್ತಾರೆ ಕೇವಲ ಬುದ್ಧಿ ರೂಪಿ ಕಲಷ ಅಮೃತ ಧಾರಣೆ ಮಾಡುವ ಯೋಗ್ಯವಿರಲಿ. ಯಾವುದೇ ಪ್ರಕಾರದ
ವಿಘ್ನ ಅಥವಾ ಅಡೆತೊಡೆಗಳು ಇರದೇ ಇರಲಿ, ಇಡೀ ದಿನಕ್ಕಾಗಿ ಶ್ರೇಷ್ಠ ಸ್ಥಿತಿ ಅಥವಾ ಕರ್ಮದ ಮೂಹರ್ತ
ತೆಗೆಯಬಹುದು ಏಕೆಂದರೆ ಅಮೃತವೇಳೆಯ ವಾತಾವರಣವೇ ವೃತ್ತುಯನ್ನು ಬದಲಾಯಿಸುವಂತಹವರಾಗಿರುತ್ತಾರೆ
ಇದಕ್ಕಾಗಿ ಆ ಸಮಯ ವರದಾನ ತೆಗೆದುಕೊಳ್ಳುತ್ತಾ ದಾನ ಕೊಡಿ ಅರ್ಥಾತ್ ವರದಾನಿ ಮತ್ತು ಮಹಾದಾನಿಯಾಗಿ.
ಸ್ಲೋಗನ್:
ಕ್ರೋಧಿಯ
ಕೆಲಸವಾಗಿದೆ ಕ್ರೋಧ ಮಾಡುವುದು ಮತ್ತು ನಿಮ್ಮ ಕೆಲಸವಾಗಿದೆ ಸ್ನೇಹ ಕೊಡುವುದು.
ತಮ್ಮ ಶಕ್ತಿಶಾಲಿ ಮನಸ್ಸಾ
ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ
ಈಗ ಸ್ವ ಕಲ್ಯಾಣದ ಇಂತಹ
ಶ್ರೇಷ್ಠ ಪ್ಲಾನ್ ಮಾಡಿ ಯಾವುದರಿಂದ ವಿಶ್ವ ಸೇವೆಯಲ್ಲಿ ಸಕಾಶ ಸ್ವತಃ ಸಿಗುತ್ತಿರಲಿ. ಈಗ
ಉಮಂಗ-ಉತ್ಸಾಹದಿಂದ ತಮ್ಮ ಮನಸ್ಸಿನಲ್ಲಿ ಇದು ಪಕ್ಕಾ ಪ್ರಮಾಣ ಮಾಡಿ ನಾವು ತಂದೆಯ ಸಮಾನರಾಗಿಯೇ
ತೊರಿಸುತ್ತೇವೆ. ಬ್ರಹ್ಮಾ ತಂದೆಯದು ಮಕ್ಕಳೊಂದಿಗೆ ಅತೀ ಸ್ನೇಹವಿದೆ ಇದಕ್ಕಾಗಿ ಒಬ್ಬೊಬ್ಬ
ಮಕ್ಕಳಿಗೆ ಇಮರ್ಜ್ ಮಾಡಿ ವಿಶೇಷ ಸಮಾನರಾಗುವ ಸಕಾಶ ಕೊಡುತ್ತಿರುತ್ತಾರೆ.