09.02.25 Avyakt Bapdada
Kannada
Murli 18.01.2004 Om Shanti Madhuban
ವಿಶ್ವದ ಅಥಾರಿಟಿಯ
ಡೈರೆಕ್ಟ್ ಮಕ್ಕಳಾಗಿದ್ದೇವೆ-ಈ ಸ್ಮೃತಿಯನ್ನು ಇಮರ್ಜ್ ರೂಪದಲ್ಲಿ ಇಟ್ಟುಕೊಂಡು ಸರ್ವಶಕ್ತಿಗಳನ್ನು
ಆಜ್ಞೆಯ ಪ್ರಮಾಣ ನಡೆಸಿ
ಇಂದು ನಾಲ್ಕಾರು ಕಡೆಯ
ಎಲ್ಲಾ ಮಕ್ಕಳು ಸ್ನೇಹದ ಅಲೆಗಳಲ್ಲಿ ಸಮಾವೇಶವಾಗಿದ್ದಾರೆ. ಎಲ್ಲರ ಹೃದಯದಲ್ಲಿ ವಿಶೇಷವಾಗಿ ಬ್ರಹ್ಮಾ
ತಂದೆಯ ಸ್ಮೃತಿಯು ಇಮರ್ಜ್ ಆಗಿದೆ. ಅಮೃತವೇಳೆಯಿಂದ ಹಿಡಿದು ಸಾಕಾರ ಪಾಲನೆಯನ್ನು ಪಡೆದ ರತ್ನಗಳು
ಮತ್ತು ಜೊತೆಯಲ್ಲಿ ಅಲೌಕಿಕ ಪಾಲನೆಯಲ್ಲಿರುವ ಇಬ್ಬರ ಹೃದಯದ ನೆನಪಿನ ಮಾಲೆಗಳು ಬಾಪ್ದಾದಾರವರ ಬಳಿ
ತಲುಪಿದೆ. ಎಲ್ಲರ ಹೃದಯದಲ್ಲಿ ಬಾಪ್ದಾದಾರವರ ಸ್ಮೃತಿಯ ಚಿತ್ರವೇ ಕಾಣಿಸುತ್ತಿದೆ ಮತ್ತು ತಂದೆಯ
ಹೃದಯದಲ್ಲಿ ಎಲ್ಲಾ ಮಕ್ಕಳ ಸ್ನೇಹ ತುಂಬಿದ ಹೃದಯವು ಸಮಾವೇಶವಾಗಿದೆ. ಎಲ್ಲರ ಹೃದಯದಿಂದ ಒಂದೇ
ಸ್ನೇಹ ತುಂಬಿದ ಗೀತೆಯು ಮೊಳಗುತ್ತಿದೆ ನನ್ನ ಬಾಬಾ ಮತ್ತು ತಂದೆಯ ಹೃದಯದಿಂದಲೂ ಇದೇ ಗೀತೆಯು
ಮೊಳಗುತ್ತಿದೆ - ನನ್ನ ಮಧುರಾತಿ ಮಧುರ ಮಕ್ಕಳೇ. ತಾನಾಗಿಯೇ ಮೊಳಗುವ ಈ ಗೀತೆಯು ಎಷ್ಟು
ಪ್ರಿಯವಾಗಿದೆ! ಬಾಪ್ದಾದಾ ಎಲ್ಲಾ ಕಡೆಯ ಮಕ್ಕಳಿಗೆ ಸ್ನೇಹ ತುಂಬಿದ ಸ್ಮೃತಿಗೆ ಫಲವಾಗಿ ಹೃದಯದ
ಸ್ನೇಹ ತುಂಬಿದ ಪದಮದಷ್ಟು ಆಶೀರ್ವಾದಗಳನ್ನು ಕೊಡುತ್ತಿದ್ದಾರೆ.
ಬಾಪ್ದಾದಾರವರು
ನೋಡುತ್ತಿದ್ದರು - ಈಗಲೂ ಸಹ ದೇಶ- ವಿದೇಶದಲ್ಲಿ ಮಕ್ಕಳು ಸ್ನೇಹದ ಸಾಗರದಲ್ಲಿ ಲವಲೀನರಾಗಿದ್ದಾರೆ.
ಈ ಸ್ಮೃತಿ ದಿವಸವು ವಿಶೇಷವಾಗಿ ಎಲ್ಲಾ ಮಕ್ಕಳ ಪ್ರತಿ ಸಮರ್ಥರನ್ನಾಗಿ ಮಾಡುವ ದಿವಸವಾಗಿದೆ. ಇಂದಿನ
ದಿನವು ಮಕ್ಕಳಿಗೆ ಬ್ರಹ್ಮಾತಂದೆಯ ಮೂಲಕ ಕಿರೀಟ ಧಾರಣೆ ಆಗಿರುವ ದಿನವಾಗಿದೆ ಅಂದರೆ ಬ್ರಹ್ಮಾತಂದೆಯು
ನಿಮಿತ್ತ ಮಕ್ಕಳಿಗೆ ವಿಶ್ವಸೇವೆಯ ಜವಾಬ್ದಾರಿಯ ಕಿರೀಟವನ್ನು ಇಟ್ಟರು. ಸ್ವಯಂ ಗುಪ್ತರಾಗಿ
ಮಕ್ಕಳನ್ನು ಸಾಕಾರ ಸ್ವರೂಪದಲ್ಲಿ ನಿಮಿತ್ತರನ್ನಾಗಿ ಮಾಡಿ, ಸ್ಮೃತಿಯ ತಿಲಕವನ್ನು ಕೊಟ್ಟರು. ಸ್ವಯಂ
ಸಮಾನ ಅವ್ಯಕ್ತ ಫರಿಶ್ತಾ ಸ್ವರೂಪದ, ಪ್ರಕಾಶದ ಕಿರೀಟವನ್ನು ತೊಡಿಸಿದರು. ತಾವು ಮಾಡಿಸುವವರೂ ಆಗಿ
ಮಕ್ಕಳನ್ನು ಮಾಡಲು ಬಿಟ್ಟರು. ಆದ್ದರಿಂದ ಈ ದಿವಸವನ್ನು ಸ್ಮೃತಿ ದಿವಸ ಸೋ ಸಮರ್ಥ ದಿವಸ ಎಂದು
ಹೇಳಲಾಗುತ್ತದೆ. ಕೇವಲ ಸ್ಮೃತಿ ಅಲ್ಲ, ಸ್ಮೃತಿಯ ಜೊತೆ-ಜೊತೆಗೆ ಸರ್ವಸ್ಮೃತಿಗಳು ಮಕ್ಕಳಿಗೆ ವರದಾನ
ರೂಪದಲ್ಲಿ ಪ್ರಾಪ್ತಿಯಾಗಿದೆ. ಬಾಪ್ದಾದಾ ಎಲ್ಲಾ ಮಕ್ಕಳನ್ನು ಸರ್ವಸ್ಮೃತಿಗಳ ಸ್ವರೂಪದ ರೂಪದಲ್ಲಿ
ನೋಡುತ್ತಿದ್ದರು. ಮಾಸ್ಟರ್ ಸರ್ವಶಕ್ತಿವಂತರ ರೂಪದಲ್ಲಿ ನೋಡುತ್ತಿದ್ದರು. ಕೇವಲ ಶಕ್ತಿವಂತರಲ್ಲ,
ಸರ್ವಶಕ್ತಿವಂತರು. ಈ ಶಕ್ತಿಗಳು ತಂದೆಯ ಮೂಲಕ ಪ್ರತಿಯೊಂದು ಮಗುವಿಗೂ ವರದಾನದ ರೂಪದಲ್ಲಿ
ಪ್ರಾಪ್ತಿಯಾಗಿದೆ. ದಿವ್ಯಜನ್ಮವನ್ನು ಪಡೆಯುತ್ತಿದ್ದಂತೆಯೇ ಬಾಪ್ದಾದಾ ವರದಾನ ಕೊಟ್ಟರು -
ಸರ್ವಶಕ್ತಿವಾನ್ ಭವ! ಇದು ಪ್ರತಿಯೊಬ್ಬರ ಜನ್ಮ ದಿವಸದ ವರದಾನವಾಗಿದೆ. ಈ ಶಕ್ತಿಗಳನ್ನು ವರದಾನದ
ರೂಪದಲ್ಲಿ ಕಾರ್ಯದಲ್ಲಿ ತೊಡಗಿಸಿ. ಪ್ರತಿಯೊಬ್ಬ ಮಗುವಿಗೂ ಈ ವರದಾನ ಸಿಕ್ಕಿದೆ ಆದರೆ ಅದನ್ನು
ಕಾರ್ಯದಲ್ಲಿ ತೊಡಗಿಸುವುದರಲ್ಲಿ ನಂಬರ್ವಾರ್ ಆಗಿಬಿಡುತ್ತಾರೆ. ಪ್ರತಿಯೊಂದು ಶಕ್ತಿಯ ವರದಾನಕ್ಕೂ
ನೀವು ಸಮಯ ಪ್ರಮಾಣ ಆಜ್ಞೆ ಮಾಡಬಹುದು. ಒಂದುವೇಳೆ ವರದಾತನ ವರದಾನದ ಸ್ಮೃತಿಸ್ವರೂಪರಾಗಿ
ಸಮಯದನುಸಾರ ಯಾವುದೇ ಶಕ್ತಿಗೆ ಆಜ್ಞೆ ಮಾಡುತ್ತೀರೆಂದರೆ ಪ್ರತೀ ಶಕ್ತಿಯು ಅಲ್ಲಿ ಹಾಜರಾಗಲೇಬೇಕು.
ವರದಾನದ ಪ್ರಾಪ್ತಿಯ ಮಾಲೀಕರಾಗಿ ಸ್ಮೃತಿ ಸ್ವರೂಪದಲ್ಲಿ ಇದ್ದು ತಾವು ಆಜ್ಞೆ ಮಾಡಿ ಆಗ ಆ ಶಕ್ತಿಯು
ಸಮಯದಲ್ಲಿ, ಕಾರ್ಯದಲ್ಲಿ ಬರದೇ ಇರಲು ಸಾಧ್ಯವಿಲ್ಲ. ಆದರೆ ಮಾಲೀಕ ಹಾಗೂ ಮಾಸ್ಟರ್ ಸರ್ವಶಕ್ತಿವಂತನ
ಸ್ಮೃತಿಯ ಆಸನದಲ್ಲಿ ಸ್ಥಿತರಾಗಿ ಆಜ್ಞೆ ಮಾಡಿ. ಆ ಆಸನದಲ್ಲಿ ಸ್ಥಿತರಾಗದೇ ಮಾಡಿದರೆ ಅದನ್ನು ಆಜ್ಞೆ
ಎಂದು ಹೇಳಲಾಗುವುದಿಲ್ಲ. ಬಾಬಾ ನಾವು ತಮ್ಮನ್ನು ನೆನಪು ಮಾಡುತ್ತೇವೆ ಎಂದು ಯಾವಾಗ ಮಕ್ಕಳು
ಹೇಳುತ್ತೀರೋ ಆಗ ತಂದೆಯು ಹಾಜರ್ ಆಗಿಬಿಡುತ್ತಾರೆ. ಯಾವಾಗ ತಂದೆಯೇ ಅಲ್ಲಿ ಹಾಜರ್
ಆಗುತ್ತಾರೆಂದಮೇಲೆ ಶಕ್ತಿಗಳು ಏಕೆ ಹಾಜರಾಗುವುದಿಲ್ಲ! ಇದಕ್ಕೋಸ್ಕರ ಕೇವಲ ವಿಧಿಪೂರ್ವಕ ಮಾಲೀಕತನದ
ಅಧಿಕಾರದಿಂದ ಆರ್ಡರ್ ಮಾಡಿ ಈ ಸರ್ವಶಕ್ತಿಗಳು ವಿಶೇಷವಾಗಿ ಸಂಗಮಯುಗದ ಪರಮಾತ್ಮನ ಆಸ್ತಿಯಾಗಿದೆ.
ಆಸ್ತಿಯು ಯಾವಾಗಲೂ ಯಾರಿಗೋಸ್ಕರ ಇರುತ್ತದೆ? ಮಕ್ಕಳಿಗಾಗಿಯೇ ಆಸ್ತಿಯಿರುತ್ತದೆ ಅಂದಾಗ
ಅಧಿಕಾರದಿಂದ ಸ್ಮೃತಿ ಸ್ವರೂಪದ ಆಸನದಿಂದ ಆರ್ಡರ್ ಮಾಡಿ, ಶ್ರಮವನ್ನು ಏಕೆ ಪಡುತ್ತೀರಿ? ಕೇವಲ
ಆರ್ಡರ್ ಮಾಡಿ ಏಕೆಂದರೆ ತಾವು ವಿಶ್ವದ ಅಥಾರಿಟಿಯ ಡೈರೆಕ್ಟ್ ಮಕ್ಕಳಾಗಿದ್ದೀರಿ - ಈ ಸ್ಮೃತಿಯ
ನಶೆಯು ಸದಾ ಇಮರ್ಜ್ ಆಗಿರಲಿ.
ತಮ್ಮನ್ನು ತಾವು
ಪರಿಶೀಲನೆ ಮಾಡಿಕೊಳ್ಳಿ - ನಾನು ವಿಶ್ವದ ಆಲ್ಮೈಟಿ ಅಥಾರಿಟಿಯ ಅಧಿಕಾರಿ ಆತ್ಮನಾಗಿದ್ದೇನೆ, ಈ
ಸ್ಮೃತಿಯು ಸಹಜವಾಗಿ ಇರುತ್ತದೆಯೇ? ಇರುತ್ತದೆಯೇ ಅಥವಾ ಒಮ್ಮೊಮ್ಮೆ ಮಾತ್ರ ಇರುತ್ತದೆಯೇ?
ಇತ್ತೀಚಿನ ಸಮಯದಲ್ಲಂತೂ ಅಧಿಕಾರವನ್ನು ಪಡೆಯುವುದಕ್ಕೋಸ್ಕರವೇ ಜಗಳ- ಕಲಹಗಳು ಆಗುತ್ತಿವೆ ಆದರೆ
ತಮ್ಮೆಲ್ಲರಿಗೆ ಪರಮಾತ್ಮನ ಅಧಿಕಾರ, ಪರಮಾತ್ಮನ ಅಥಾರಿಟಿ ಜನ್ಮದಿಂದಲೇ ಪ್ರಾಪ್ತವಾಗಿದೆ ಅಂದಾಗ
ತನ್ನ ಅಧಿಕಾರದ ಸಮರ್ಥಸ್ವರೂಪದಲ್ಲಿ ಇರಿ. ತಾವೂ ಸಮರ್ಥರಾಗಿರಿ ಮತ್ತು ಸರ್ವಆತ್ಮಗಳಿಗೂ
ಸಮರ್ಥತೆಯನ್ನು ಕೊಡಿಸಿ. ಸರ್ವಆತ್ಮಗಳು ಈ ಸಮಯದಲ್ಲಿ ಸಮರ್ಥ ಅರ್ಥಾತ್ ಶಕ್ತಿಗಳ
ಭಿಕಾರಿಗಳಾಗಿದ್ದಾರೆ, ತಮ್ಮ ಜಡಚಿತ್ರಗಳ ಮುಂದೆ ಹೋಗಿ ಬೇಡುತ್ತಿರುತ್ತಾರೆ, ಆದ್ದರಿಂದ ತಂದೆಯು
ತಿಳಿಸುತ್ತಾರೆ - ಹೇ! ಸಮರ್ಥ ಆತ್ಮಗಳೇ ಸರ್ವ ಆತ್ಮಗಳಿಗೂ ಶಕ್ತಿಯನ್ನು ಕೊಡಿ, ಸಾಮಥ್ರ್ಯವನ್ನು
ಕೊಡಿ. ಇದಕ್ಕೋಸ್ಕರ ಪ್ರತಿಯೊಬ್ಬ ಮಗು ಕೇವಲ ಒಂದು ಮಾತಿನ ಮೇಲೆ ಗಮನ ಇಡುವ ಅವಶ್ಯಕತೆ ಇದೆ -
ಬಾಪ್ದಾದಾರವರು ಈ ಸೂಚನೆಯನ್ನು ಕೊಟ್ಟಿದ್ದರು ಮತ್ತು ಫಲಿತಾಂಶದಲ್ಲಿ ನೋಡಿದರು - ಬಹಳಷ್ಟು ಮಕ್ಕಳ
ಸಂಕಲ್ಪ ಮತ್ತು ಸಮಯ ವ್ಯರ್ಥವಾಗಿ ಹೋಗುತ್ತಿದೆ. ಹೇಗೆ ವಿದ್ಯುತ್ತಿನ ಕನೆಕ್ಷನ್ ಒಂದುವೇಳೆ
ಸ್ವಲ್ಪ ಸಡಿಲವಾದರೂ ಸಹ ಅಲ್ಲಿ ಲೈಟ್ ಸರಿಯಾಗಿ ಬರುವುದಿಲ್ಲ. ಅಂದಾಗ ಈ ವ್ಯರ್ಥದ ಲೀಕೇಜ್ (ಸೋರುವಿಕೆ)
ಸಮರ್ಥ ಸ್ಥಿತಿಯನ್ನು ಸದಾಕಾಲದ ಸ್ಮೃತಿಯನ್ನಾಗಿ ಮಾಡಿಕೊಳ್ಳಲು ಬಿಡುವುದಿಲ್ಲ. ಆದ್ದರಿಂದ
ವ್ಯರ್ಥವನ್ನು ಉಳಿತಾಯದಲ್ಲಿ ಪರಿವರ್ತನೆ ಮಾಡಿಕೊಳ್ಳಿ. ಉಳಿತಾಯದ ಯೋಜನೆ ಮಾಡಿ ಮತ್ತು ಅದರಿಂದ
ಪರ್ಸೆಂಟೇಜ್ ತೆಗೆಯಿರಿ ಇಡೀ ದಿನದಲ್ಲಿ ಎಷ್ಟು ವ್ಯರ್ಥವಾಯಿತು ಮತ್ತು ಎಷ್ಟು ಉಳಿತಾಯವಾಯಿತು?
ಒಂದುವೇಳೆ ತಿಳಿಯಿರಿ 40% ವ್ಯರ್ಥವಾಗುತ್ತಿದೆ ಅಥವಾ 20% ವ್ಯರ್ಥವಾಗಿ ಹೋಗುತ್ತಿದೆ ಎಂದರೆ
ಅದನ್ನು ಉಳಿತಾಯ ಮಾಡಿ. ಸ್ವಲ್ಪವೇ ವ್ಯರ್ಥವಾಗಿ ಹೋಗುತ್ತಿದೆ, ಉಳಿದಂತೆ ಇಡೀ ದಿನ
ಸರಿಯಾಗಿರುತ್ತದೆ ಎಂದು ತಿಳಿಯುವುದಲ್ಲ ಆದರೆ ಈ ವ್ಯರ್ಥದ ಅಭ್ಯಾಸವು ಬಹಳ ಸಮಯದ ಅಭ್ಯಾಸ ಆಗಿರುವ
ಕಾರಣ ಇದೇ ಅಂತಿವು ಘಳಿಗೆಯಲ್ಲಿ ಮೋಸಗೊಳಿಸಬಹುದು. ನಂಬರ್ವಾರಾಗಿ ಮಾಡಿಬಿಡುತ್ತದೆ. ನಂಬರ್ವನ್
ಆಗಲು ಬಿಡುವುದಿಲ್ಲ. ಹೇಗೆ ಪ್ರತಿನಿತ್ಯ ರಾತ್ರಿಯಲ್ಲಿ ಬ್ರಹ್ಮಾ ತಂದೆಯು ಆದಿಯಲ್ಲಿ ತಮ್ಮ
ಚೆಕಿಂಗ್ನ ಕಾರಣ ಪ್ರತಿನಿತ್ಯವು ದರ್ಬಾರನ್ನು ನಡೆಸುತ್ತಿದ್ದರು. ಯಾವ ದರ್ಬಾರ್? ಮಕ್ಕಳ
ದರ್ಬಾರಲ್ಲ. ತಮ್ಮದೇ ಕರ್ಮೇಂದ್ರಿಯಗಳ ದರ್ಬಾರನ್ನು ನಡೆಸುತ್ತಿದ್ದರು ಮತ್ತು ಆಜ್ಞೆ
ಮಾಡುತ್ತಿದ್ದರು - ಹೇ! ಮುಖ್ಯಮಂತ್ರಿಯಾದ ಮನಸ್ಸೇ ಈ ನಿನ್ನ ಚಲನೆಯು ಸರಿಯಾಗಿಲ್ಲ, ಆಜ್ಞೆಯಂತೇ
ನಡೆ. ಹೇ! ಸಂಸ್ಕಾರವೇ ಆಜ್ಞೆಯಂತೆ ನಡೆ. ಏಕೆ ಮೇಲೆ-ಕೆಳಗೆ ಆಯಿತು, ಕಾರಣವನ್ನು ತಿಳಿಸಿ, ನಿವಾರಣೆ
ಮಾಡಿಕೊಳ್ಳಿ. ಹೀಗೆ ಪ್ರತಿನಿತ್ಯವು ಅಫಿಶಿಯಲ್ ದರ್ಬಾರನ್ನು ನಡೆಸುತ್ತಿದ್ದರು. ಹಾಗೆಯೇ ತಾವು ಸಹ
ತಮ್ಮ ಸ್ವರಾಜ್ಯ ದರ್ಬಾರನ್ನು ನಡೆಸಿ. ಕೆಲವು ಮಕ್ಕಳು ಬಾಪ್ದಾದಾರವರೊಂದಿಗೆ ಮಧುರಾತಿ ಮಧುರ
ವಾರ್ತಾಲಾಪವನ್ನು ಮಾಡುತ್ತಾರೆ, ವೈಯಕ್ತಿಕ ವಾರ್ತಾಲಾಪವನ್ನು ಮಾಡುತ್ತಾರೆ, ತಿಳಿಸುವುದೇ. ಕೆಲವರು
ವೈಯಕ್ತಿಕ ವಾರ್ತಾಲಾಪ ಮಾಡುತ್ತಾ ಕೇಳುತ್ತಾರೆ, ಬಾಬಾ ನಾವು ಭವಿಷ್ಯದಲ್ಲಿ ಏನಾಗುತ್ತೇವೆ ಎಂದು
ನಮ್ಮ ಭವಿಷ್ಯದ ಚಿತ್ರವನ್ನು ತೋರಿಸಿ. ಹೇಗೆ ಆದಿರತ್ನಗಳಿಗೆ ನೆನಪು ಇರಬೇಕು ಜಗದಾಂಬಾ
ತಾಯಿಯೊಂದಿಗೂ ಸಹ ಎಲ್ಲಾ ಮಕ್ಕಳು ತಮ್ಮ ಚಿತ್ರವನ್ನು ಕೇಳುತ್ತಿದ್ದರು - ಮಮ್ಮಾ ನಾವು
ಭವಿಷ್ಯದಲ್ಲಿ ಹೇಗಿರುತ್ತೇವೆ ಎಂದು ತಾವು ನಮಗೆ ಚಿತ್ರವನ್ನು ತೋರಿಸಿ. ಹಾಗೆಯೇ
ಬಾಪ್ದಾದಾರವರೊಂದಿಗೆ ವಾರ್ತಾಲಾಪ ಮಾಡುತ್ತಾ ತಮ್ಮ ಚಿತ್ರವನ್ನು ಕೇಳುತ್ತಾರೆ. ನಮಗೂ ಚಿತ್ರವು
ಸಿಕ್ಕಿದರೆ ಒಳ್ಳೆಯದೆಂಬ ಬಯಕೆಯು ತಮ್ಮೆಲ್ಲರಿಗೂ ಇರಬಹುದು ಆದರೆ ಬಾಪ್ದಾದಾ ತಿಳಿಸುತ್ತಾರೆ -
ಬಾಪ್ದಾದಾ ಪ್ರತಿಯೊಬ್ಬ ಮಗುವಿಗೂ ಒಂದು ವಿಚಿತ್ರ ದರ್ಪಣವನ್ನು ಕೊಟ್ಟಿದ್ದಾರೆ, ಆ ದರ್ಪಣ ಯಾವುದು?
ವರ್ತಮಾನ ಸಮಯದಲ್ಲಿ ತಾವು ಸ್ವರಾಜ್ಯಾಧಿಕಾರಿಗಳಾಗಿದ್ದೀರಲ್ಲವೇ! ಆಗಿದ್ದೀರಾ?
ಸ್ವರಾಜ್ಯಾಧಿಕಾರಿಗಳಾಗಿದ್ದೀರಾ? ಆಗಿದ್ದರೆ ಕೈ ಎತ್ತಿ. ಸ್ವರಾಜ್ಯ, ಅಧಿಕಾರಿಗಳಾಗಿದ್ದೀರಾ?
ಒಳ್ಳೆಯದು. ಕೆಲ-ಕೆಲವರು ಕೈ ಎತ್ತುತ್ತಿಲ್ಲ. ಸ್ವಲ್ಪ- ಸ್ವಲ್ಪ ಆಗಿದ್ದೀರೇನು? ಒಳ್ಳೆಯದು.
ಸ್ವರಾಜ್ಯಾಧಿಕಾರಿಗಳಾಗಿದ್ದೀರಿ, ಶುಭಾಶಯಗಳು. ಅಂದಾಗ ಸ್ವರಾಜ್ಯ ಅಧಿಕಾರದ ಚಾರ್ಟ್ ತಮಗೋಸ್ಕರ
ಭವಿಷ್ಯ ಪದವಿಯ ಚೆಹರೆಯನ್ನು ತೋರಿಸುವ ದರ್ಪಣವಾಗಿದೆ. ಈ ದರ್ಪಣವಿದೆಯೇ? ಎಲ್ಲರಿಗೂ
ಸಿಕ್ಕಿದೆಯಲ್ಲವೇ? ಸ್ಪಷ್ಟವಾಗಿದೆಯಲ್ಲವೇ? ಯಾವುದೇ ಇಂತಹ ಕಪ್ಪು ಕಲೆಯಂತೂ ಬಿದ್ದಿಲ್ಲ ತಾನೇ!
ಒಳ್ಳೆಯದು. ಕಪ್ಪು ಕಲೆಯಂತೂ ಇರುವುದಿಲ್ಲ ಆದರೆ ಕೆಲ-ಕೆಲವೊಮ್ಮೆ ಕನ್ನಡಿಯ ಮೇಲೆ ಹೇಗೆ
ಬಿಸಿನೀರಿನ ಆವಿಯ ತರಹ ಕನ್ನಡಿಯ ಮೇಲೆ ಬಂದುಬಿಡುತ್ತದೆ, ಹೇಗೆ ಹಿಮವಿದ್ದಾಗ ಕನ್ನಡಿಯ ಮೇಲೆ ಈ
ರೀತಿ ಆಗಿಬಿಡುತ್ತದೆ - ಅದರಲ್ಲಿ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಸ್ನಾನದ ಸಮಯದಲ್ಲಂತೂ ಎಲ್ಲರಿಗೂ
ಅನುಭವವಿರಬೇಕು ಅಂದಾಗ ಹೀಗೆಯೇ ಒಂದುವೇಳೆ ಯಾವ ಒಂದು ಕಮೇರ್ಂದ್ರಿಯವೂ ಇಲ್ಲಿಯವರೆಗೂ ತಮ್ಮ ಪೂರ್ಣ
ನಿಯಂತ್ರಣದಲ್ಲಿಲ್ಲ, ನಿಯಂತ್ರಣದಲ್ಲಿ ಇದೆ ಆದರೆ ಒಮ್ಮೊಮ್ಮೆ ಇರುವುದಿಲ್ಲ. ತಿಳಿಯಿರಿ ಒಂದುವೇಳೆ
ಯಾವುದೇ ಕರ್ಮೇಂದ್ರಿಯ, ಕಣ್ಣುಗಳಿರಬಹುದು, ಬಾಯಿ ಇರಬಹುದು, ಕಿವಿ, ಕಾಲುಗಳೂ ಸಹ ಕೆಟ್ಟ ಸಂಗದ ಕಡೆ
ಕೆಲ-ಕೆಲವೊಮ್ಮೆ ಹೊರಟುಹೋಗುತ್ತದೆ ಅಂದಮೇಲೆ ಕಾಲುಗಳೂ ಸಹ ನಿಯಂತ್ರಣದಲ್ಲಿ ಇಲ್ಲವೆಂದಾಯಿತಲ್ಲವೇ.
ಸಂಘಟನೆಯಲ್ಲಿ ಕುಳಿತುಬಿಡುತ್ತೀರಿ. ಉಲ್ಟಾ ರಾಮಾಯಣ ಮತ್ತು ಭಾಗವತ ಕಥೆಗಳನ್ನು ಕೇಳುತ್ತೀರಿ, ಅದು
ನಿಜವಂತೂ ಅಲ್ಲ ಅಥವಾ ಸತ್ಯವಂತೂ ಅಲ್ಲ. ಅಂದಾಗ ಯಾವುದೇ ಕರ್ಮೇಂದ್ರಿಯದ ಸಂಕಲ್ಪ, ಸಮಯ ಸಹಿತವಾಗಿ
ಒಂದುವೇಳೆ ನಿಯಂತ್ರಣದಲ್ಲಿ ಇಲ್ಲವೆಂದರೆ ಇದರಿಂದಲೇ ಪರಿಶೀಲನೆ ಮಾಡಿಕೊಳ್ಳಿ ಯಾವಾಗ
ಸ್ವರಾಜ್ಯದಲ್ಲಿಯೇ ನಿಯಂತ್ರಣಶಕ್ತಿ ಇಲ್ಲವೆಂದರೆ ವಿಶ್ವರಾಜ್ಯದಲ್ಲಿ ಏನು ರಾಜ್ಯಾಡಳಿತ
ಮಾಡುತ್ತೀರಿ! ಅಂದಾಗ ಹೇಗೆ ರಾಜರಾಗುತ್ತೀರಿ? ಅಲ್ಲಂತೂ ಎಲ್ಲವೂ ನಿಯಮಪೂರ್ವಕವಾಗಿ ಇರುತ್ತದೆ.
ನಿಯಂತ್ರಣಶಕ್ತಿ, ಆಡಳಿತಶಕ್ತಿ ಎಲ್ಲವೂ ಸ್ವತಃವಾಗಿಯೇ ಸಂಗಮಯುಗದ ಪುರುಷಾರ್ಥದ ಪ್ರಾಲಬ್ಧದ
ರೂಪದಲ್ಲಿಯೇ ನಡೆಯುತ್ತದೆ. ಅಂದಾಗ ಸಂಗಮಯುಗ ಅರ್ಥಾತ್ ವರ್ತಮಾನ ಸಮಯದಲ್ಲಿ ಒಂದುವೇಳೆ
ನಿಯಂತ್ರಣಾಶಕ್ತಿ ಅಥವಾ ಆಡಳಿತೆಯ ಶಕ್ತಿ ಕಡಿಮೆ ಇದೆ ಅಂದರೆ, ಪುರುಷಾರ್ಥವೇ ಕಡಿಮೆ ಅಂದಾಗ
ಪ್ರಾಲಬ್ಧವು ಏನಾಗುವುದು? ಲೆಕ್ಕ ಮಾಡುವುದರಲ್ಲಂತೂ ಬುದ್ಧಿವಂತ ರಾಗಿದ್ದೀರಲ್ಲವೇ! ಆದ್ದರಿಂದ ಈ
ದರ್ಪಣದಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳಿ. ತಮ್ಮ ಹಾವ-ಭಾವವನ್ನು ನೋಡಿಕೊಳ್ಳಿ. ನನ್ನ ಮುಖವು
ರಾಜನದಾಗಿದೆಯೇ, ರಾಯಲ್ ಪರಿವಾರದವರದಾಗಿದೆಯೇ, ರಾಯಲ್ ಪ್ರಜೆಗಳದಾಗಿದೆಯೇ, ಸಾಧಾರಣ ಪ್ರಜೆಗಳಲ್ಲಿ
ಬರುವಂತಹದಾಗಿದೆಯೇ, ಯಾವ ಮುಖವಾಗಿದೆ? ಅಂದಾಗ ಚಿತ್ರವು ಸಿಕ್ಕಿತೇ? ಈ ಚಿತ್ರದಿಂದ ಪರಿಶೀಲನೆ
ಮಾಡಿಕೊಳ್ಳಿ. ಪ್ರತಿನಿತ್ಯವೂ ಪರಿಶೀಲನೆ ಮಾಡಿಕೊಳ್ಳಿ ಏಕೆಂದರೆ ಬಹಳ ಕಾಲದ ಪುರುಷಾರ್ಥ, ಬಹಳಕಾಲದ
ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಸುತ್ತದೆ. ಒಂದುವೇಳೆ ತಾವು ಯೋಚನೆ ಮಾಡಿ - ಅಂತ್ಯದ ಸಮಯದಲ್ಲಿ
ಬೇಹದ್ದಿನ ವೈರಾಗ್ಯವಂತೂ ಬಂದೇ ಬರುತ್ತದೆ ಆದರೆ ಅಂತ್ಯದ ಸಮಯದಲ್ಲಿ ಬಂದರೆ ಅದು ಬಹಳಕಾಲದ
ವೈರಾಗ್ಯವಾಯಿತೇ ಅಥವಾ ಸ್ವಲ್ಪ ಕಾಲದ್ದಾಯಿತೇ? ಬಹಳ ಕಾಲದ್ದೆಂದು ಹೇಳುವುದಿಲ್ಲ ಅಲ್ಲವೇ! ಅಂದಮೇಲೆ
ಪೂರ್ಣ 21 ಜನ್ಮಗಳ ರಾಜ್ಯಾಧಿಕಾರಿಗಳಾದಿರಾ? ಭಲೆ ಸಿಂಹಾಸನದ ಮೇಲಂತೂ ಕುಳಿತುಕೊಂಡಿಲ್ಲ ಆದರೆ
ರಾಜ್ಯಾಧಿಕಾರಿಗಳಾಗಿದ್ದೀರಿ. ಇದು ಬಹಳ ಕಾಲದ ಪ್ರಾಲಬ್ಧದ ಸಂಬಂಧವಾಗಿದೆ. ಆದ್ದರಿಂದಲೇ
ಹುಡುಗಾಟಿಕೆಯಲ್ಲಿ ಬರಬೇಡಿ ಅರ್ಥಾತ್ ಆಲಸ್ಯದಲ್ಲಿ ಬರಬೇಡಿ. ಈಗಂತೂ ವಿನಾಶದ ದಿನಾಂಕವು
ನಿಗಧಿಯಾಗಿಲ್ಲ, ಗೊತ್ತೇ ಇಲ್ಲ. ಇನ್ನೂ 8 ವರ್ಷವಾದರೂ ಇರಬಹುದು, 10 ವರ್ಷವಾದರೂ ಇರಬಹುದು ಯಾವಾಗ
ಆಗುತ್ತದೆ ಎಂದು ಗೊತ್ತಿಲ್ಲ ಅಂದಾಗ ಬರುವ ಸಮಯದಲ್ಲಿ ಆಗಿಬಿಡುತ್ತದೆ ಎಂದಲ್ಲ. ವಿಶ್ವದ
ಅಂತ್ಯಕಾಲವನ್ನು ಯೋಚಿಸುವ ಮುಂಚೆ ತನ್ನ ಜನ್ಮದ ಅಂತ್ಯಕಾಲವನ್ನು ಯೋಚಿಸಿ, ತಮ್ಮ ಬಳಿ ದಿನಾಂಕವು
ನಿಗಧಿಯಾಗಿದೆಯೇ ಅಥವಾ ಈ ದಿನಾಂಕದಂದು ನನ್ನ ಮೃತ್ಯು ಆಗಲಿದೆ ಎಂದು 'ಯಾರ ಬಳಿಯಾದರೂ
ದಿನಾಂಕವಿದೆಯೇ? ಯಾರ ಬಳಿಯಾದರೂ ಇದೆಯೇ? ಇಲ್ಲ ಅಲ್ಲವೇ! ವಿಶ್ವದ ಅಂತ್ಯವಂತೂ ಆಗಲೇಬೇಕಾಗಿದೆ,
ಸಮಯದಲ್ಲಿ ಆಗಿಯೇ ಆಗುತ್ತದೆ. ಆದರೆ ಅದಕ್ಕೆ ಮುಂಚೆ ತನ್ನ ಅಂತ್ಯಕಾಲವನ್ನು ಯೋಚಿಸಿ ಮತ್ತು
ಜಗದಂಬಾರವರ ಘೋಷಣೆಯನ್ನು ನೆನಪು ಮಾಡಿಕೊಳ್ಳಿ. ಅದು ಯಾವ ಘೋಷಣೆ ಆಗಿತ್ತು? ಪ್ರತಿಘಳಿಗೆ ತನ್ನ
ಅಂತಿಮ ಘಳಿಗೆ ಎಂದು ತಿಳಿಯಿರಿ ಆಕಸ್ಮಿಕವಾಗಿ ಆಗುತ್ತದೆ, ದಿನಾಂಕವನ್ನಂತೂ ತಿಳಿಸಲಾಗುವುದಿಲ್ಲ.
ವಿಶ್ವದ್ದಾಗಲಿ, ತಮ್ಮ ಅಂತಿಮ ಘಳಿಗೆಯದ್ದಾಗಲಿ, ಸಮಯವನ್ನು ತಿಳಿಸಲಾಗುವುದಿಲ್ಲ. ಎಲ್ಲವೂ
ಆಕಸ್ಮಿಕವಾದ ಆಟವಾಗಿದೆ. ಆದ್ದರಿಂದ ದರ್ಬಾರನ್ನು ನಡೆಸಿ, ಹೇ! ರಾಜರೇ, ಸ್ವರಾಜ್ಯಾಧಿಕಾರಿ ರಾಜರೇ,
ತಮ್ಮ ದರ್ಬಾರನ್ನು ನಡೆಸಿ. ಆಜ್ಞೆಯಂತೇ ನಡೆಸಿ. ಏಕೆಂದರೆ ಭವಿಷ್ಯದ ಗಾಯನವಿದೆ - ಅಲ್ಲಿ
ನಿಯಮಬದ್ಧವಾಗಿ ಹಾಗೂ ಕಾನೂನುಬದ್ದವಾಗಿರುತ್ತದೆ. ಸ್ವತಃವಾಗಿಯೇ ಆಗುತ್ತದೆ. ಪ್ರೀತಿ ಮತ್ತು
ಕಾನೂನು (ಲವ್ ಅಂಡ್ ಲಾ), ಎರಡರ ಬ್ಯಾಲೆನ್ಸ್ ಇರುತ್ತದೆ, ಸ್ವಾಭಾವಿಕವಾಗಿರುತ್ತದೆ. ರಾಜರೇನು ಇದು
ಕಾನೂನು ಎಂದು ಹೇಳುವುದಿಲ್ಲ. ಹೇಗೆ ಇಂದಿನ ಕಾಲದಲ್ಲಿ ಕಾನೂನುಗಳನ್ನು ಮಾಡುತ್ತಿರುತ್ತಾರೆ.
ಇಂದಿನ ಪೆÇೀಲಿಸರೂ ಸಹ ಕಾನೂನನ್ನು ತೆಗೆದುಕೊಳ್ಳುತ್ತಾರೆ. ಆದರೆ ಸತ್ಯಯುಗದಲ್ಲಿ ಸ್ವಾಭಾವಿಕವಾಗಿ
ಪ್ರೀತಿ ಮತ್ತು ಕಾನೂನಿನ (ಲವ್ ಅಂಡ್ ಲಾ) ಸಮತೋಲನೆ ಇರುತ್ತದೆ.
ಅಂದಾಗ ಈಗ ಆಲ್ಮೈಟಿ
ಅಥಾರಿಟಿಯ ಆಸನದ ಮೇಲೆ ಸ್ಥಿತರಾಗಿ, ಆಗ ಈ ಕರ್ಮೇಂದ್ರಿಯಗಳು, ಶಕ್ತಿಗಳು, ಗುಣಗಳು ಎಲ್ಲವೂ ತಮ್ಮ
ಮುಂದೆ ಹಾಜರಾಗಿ ಹಾಜಿ ಎಂದು ಹೇಳುತ್ತವೆ, ಮೋಸಗೊಳಿಸುವುದಿಲ್ಲ. ನೀವು ಆಜ್ಞೆ ಮಾಡಿದ ತಕ್ಷಣ ಅಲ್ಲಿ
ಹಾಜರಿರುತ್ತವೆ ಎಂದಾಗ ಈಗ ಏನು ಮಾಡುತ್ತೀರಿ? ಬರುವ ಸ್ಮೃತಿದಿವಸದಂದು ಯಾವ ಸಮಾರೋಹವನ್ನು
ಆಚರಿಸುತ್ತೀರಿ? ಪ್ರತಿಯೊಂದು ಜೋನಿನವರು ಈ ಸಮಾರೋಹವನ್ನಂತೂ ಆಚರಿಸುತ್ತೀರಲ್ಲವೇ! ಸನ್ಮಾನ
ಸಮಾರೋಹ ಸಮಾರಂಭವನ್ನು ಬಹಳ ಆಚರಿಸಿದ್ದೀರಿ ಆದರೆ ಈಗ ಸದಾ ಪ್ರತಿ ಸಂಕಲ್ಪ ಮತ್ತು ಸಮಯದ
ಸಮಾರೋಹವನ್ನು ಆಚರಿಸಿ. ಇಂತಹ ಸಮಾರೋಹ ಸಮಾರಂಭವನ್ನು ಆಚರಿಸಿ. ವ್ಯರ್ಥವು ಸಮಾಪ್ತಿ ಆಗಲಿ ಏಕೆಂದರೆ
ತಾವು ಸಫಲತಾಮೂರ್ತಿಗಳಾಗುವುದರಿಂದ ಅನ್ಯ ಆತ್ಮಗಳಿಗೆ ತೃಪ್ತಿಯ ಸಫಲತೆಯು ಪ್ರಾಪ್ತಿಯಾಗುವುದು.
ನಾಲ್ಕಾರೂ ಕಡೆ ನಿರಾಸೆಯಿಂದ ಶುಭ ಆಸೆಗಳ ದೀಪಗಳು ಬೆಳಗುತ್ತದೆ. ಯಾವುದೇ ಸಫಲತೆ ಆಗುತ್ತದೆ ಎಂದರೆ
ದೀಪಗಳನ್ನು ಬೆಳಗಿಸುತ್ತಾರಲ್ಲವೇ. ಈಗ ವಿಶ್ವದಲ್ಲಿ ಆಶಾದೀಪವನ್ನು ಬೆಳಗಿಸಿ. ಪ್ರತಿಯೊಂದು
ಆತ್ಮನಲ್ಲಿಯೂ ಯಾವುದಾದರೊಂದು ನಿರಾಸೆಯು ಇದ್ದೇ ಇದೆ, ನಿರಾಸೆಗಳ ಕಾರಣವೇ ಆತಂಕದಲ್ಲಿ ಇದ್ದಾರೆ,
ಬೇಸರದಲ್ಲಿ ಇದ್ದಾರೆ. ಆದ್ದರಿಂದ ಹೇ! ಅವಿನಾಶಿ ದೀಪಗಳೇ, ಈಗ ಆಶಾದೀಪಗಳ ದೀಪಾವಳಿಯನ್ನು ಆಚರಿಸಿ.
ಮೊದಲು ಸ್ವಯಂ ನಂತರ ಸರ್ವರು. ಕೇಳಿದಿರಾ? ಬಾಕಿ ಬಾಪ್ದಾದಾರವರು ಮಕ್ಕಳ ಸ್ನೇಹವನ್ನು ನೋಡಿ ಖುಷಿ
ಆಗಿದ್ದಾರೆ. ಸ್ನೇಹದ ಸಬ್ಜೆಕ್ಟ್ನಲ್ಲಿ ಪರ್ಸೆಂಟೇಜ್ ಬಹಳ ಚೆನ್ನಾಗಿದೆ. ತಾವು ಇಷ್ಟೊಂದು
ಪರಿಶ್ರಮ ಪಟ್ಟು ಇಲ್ಲಿಗೆ ಏಕೆ ತಲುಪಿದ್ದೀರಿ, ತಮ್ಮನ್ನು ರೈಲು ಕರೆ ತಂದಿತೇ? ಅಥವಾ ವಿಮಾನ ಕರೆ
ತಂದಿತೇ? ಅಲ್ಲ ಸ್ನೇಹವು ಕರೆ ತಂದಿತು, ಸ್ನೇಹದ ವಿಮಾನದಲ್ಲಿ ಬಂದು ತಲುಪಿದ್ದೀರಿ. ಅಂದಾಗ
ಸ್ನೇಹದಲ್ಲಂತೂ ಪಾಸ್ ಆಗಿದ್ದೀರಿ. ಈಗ ಆಲ್ಮೈಟಿ ಅಥಾರಿಟಿಯಲ್ಲಿ ಮಾಸ್ಟರ್ ಆಗಿದ್ದೇವೆ
ಎನ್ನುವುದರಲ್ಲಿ ಪಾಸ್ ಆಗಿ. ಆಗ ಈ ಪ್ರಕೃತಿ, ಮಾಯೆ, ಸಂಸ್ಕಾರ ಎಲ್ಲವೂ ತಮಗೆ ದಾಸಿ ಆಗಿಬಿಡುತ್ತವೆ.
ಪ್ರತೀ ಘಳಿಗೆಯು ತಮಗೊಸ್ಕರ ಕಾಯುತ್ತದೆ - ಮಾಲೀಕರೇ ತಮ್ಮ ಆಜ್ಞೆ ಏನು ಎಂದು. ಬ್ರಹ್ಮಾ ತಂದೆಯೂ
ಸಹ ಮಾಲೀಕಣ್ಣಿಗೆ ಒಳಗಿಂದ ಒಳಗೆ ಇಂತಹ ಸೂಕ್ಷ್ಮ ಪುರುಷಾರ್ಥ ಮಾಡಿದರು. ಅದು ತಮಗೂ ತಿಳಿಯಿತು,
ಹೇಗೆ ಸಂಪನ್ನ ಆಗಿಬಿಟ್ಟರು. ಪಕ್ಷಿಯು ಹಾರಿಹೋಯಿತು, ಪಂಜರವು ತೆರೆಯಲ್ಪಟ್ಟಿತು. ಸಾಕಾರ ಪ್ರಪಂಚದ
ಲೆಕ್ಕಾಚಾರ, ಸಾಕಾರ ಶರೀರದ ಪಂಜರವು ತೆರೆಯಲ್ಪಟ್ಟಿತು, ಪಕ್ಷಿಯು ಹಾರಿಹೋಯಿತು. ಈಗ ಬ್ರಹ್ಮಾ
ತಂದೆಯೂ ಸಹ ಬಹಳ ಪ್ರೇಮದಿಂದ ಮಕ್ಕಳೇ! ಬೇಗ ಬನ್ನಿ ಬೇಗ ಬನ್ನಿ ಈಗ ಬಂದುಬಿಡಿ, ಈಗಲೇ ಬನ್ನಿ ಎಂದು
ಮಕ್ಕಳ ಆಹ್ವಾನ ಮಾಡುತ್ತಿದ್ದಾರೆ. ಅಂದಾಗ ರೆಕ್ಕೆಗಳಂತೂ ಸಿಕ್ಕಿಬಿಟ್ಟಿದೆಯಲ್ಲವೇ! ಈಗ ಒಂದು
ಸೆಕೆಂಡಿನಲ್ಲಿ ತಮ್ಮ ಮನಸ್ಸಿನಲ್ಲಿ ಈ ವ್ಯಾಯಾಮ (ಡ್ರಿಲ್) ಮಾಡಿ, ಈಗೀಗ ಮಾಡಿ. ಎಲ್ಲಾ
ಸಂಕಲ್ಪಗಳನ್ನು ಸಮಾಪ್ತಿ ಮಾಡಿ, ಇದೇ ಡ್ರಿಲ್ ಮಾಡಿ - ಓ ಬಾಬಾ, ಮಧುರ ಬಾಬಾ, ಪ್ರಿಯಬಾಬಾ ನಾವು
ತಮ್ಮ ಸಮಾನ ಅವ್ಯಕ್ತರೂಪಧಾರಿಗಳು ಆದೆವು ಅಂದರೆ ಆದೆವು. (ಡ್ರಿಲ್ ಮಾಡಿಸಿದರು)
ಒಳ್ಳೆಯದು. ನಾಲ್ಕಾರೂ
ಕಡೆಯ ಸ್ನೇಹಿ ಸೋ ಸಮರ್ಥ ಮಕ್ಕಳಿಗೆ, ನಾಲ್ಕಾರೂಕಡೆಯ ಸ್ವರಾಜ್ಯಾಧಿಕಾರಿ ಸೋ ವಿಶ್ವರಾಜ್ಯಾಧಿಕಾರಿ
ಮಕ್ಕಳಿಗೆ, ಎಲ್ಲಾ ಕಡೆಯ ಮಾಸ್ಟರ್ ಆಲ್ಮೈಟಿ ಅಥಾರಿಟಿಯ ಆಸನದ ಮೇಲೆ ಸ್ಥಿತರಾಗಿರುವಂತಹ ತೀವ್ರ
ಪುರುಷಾರ್ಥಿ ಮಕ್ಕಳಿಗೆ ಸದಾ ಮಾಲೀಕರಾಗಿ ಪ್ರಕೃತಿಗೆ, ಸಂಸ್ಕಾರಕ್ಕೆ, ಶಕ್ತಿಗಳಿಗೆ, ಗುಣಗಳಿಗೆ
ಆರ್ಡರ್ ಮಾಡುವಂತಹ ವಿಶ್ವರಾಜ್ಯಾಧಿಕಾರಿ ಮಕ್ಕಳಿಗೆ, ತಂದೆಯ ಸಮಾನ ಸಂಪೂರ್ಣತೆ - ಸಂಪನ್ನತೆಯನ್ನು
ಸಮೀಪ ತರುವಂತಹ ದೇಶ-ವಿದೇಶದ ಪ್ರತಿಯೊಂದು ಸ್ಥಾನದ ಮೂಲೆ-ಮೂಲೆಯಲ್ಲಿ ಇರುವ ಮಕ್ಕಳಿಗೆ
ಸಮರ್ಥದಿವಸದ, ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಈಗೀಗ ಬಾಪ್ ದಾದಾರವರಿಗೆ
ಯಾರ ನೆನಪು ಬರುತ್ತಿದೆ? ಜನಕ ಮಗು (ಜಾನಕಿ ದಾದಿ) ವಿಶೇಷವಾಗಿ ಸಂದೇಶವನ್ನು ಕಳುಹಿಸಿದರು - ಬಾಬಾ
ನಾನು ಸಭೆಯಲ್ಲಿ ಅವಶ್ಯವಾಗಿ ಹಾಜರಿರುತ್ತೇನೆ ಅಂದಾಗ ಲಂಡನ್ನಲ್ಲಿ ಇರಬಹುದು, ಭಲೆ ಅಮೆರಿಕಾ,
ಆಸ್ಟ್ರೇಲಿಯಾ, ಆಫ್ರಿಕಾ, ಏಶಿಯಾ ಮತ್ತು ಸರ್ವ ಭಾರತದ ಪ್ರತಿ ದೇಶದ ಮಕ್ಕಳಿಗೆ ಒಬ್ಬೊಬ್ಬರಿಗೂ ಸಹ
ಹೆಸರು ಮತ್ತು ವಿಶೇಷತೆಯ ಸಹಿತ ನೆನಪು-ಪ್ರೀತಿ, ತಮಗಂತೂ ಸಮ್ಮುಖದಲ್ಲಿ ನೆನಪು- ಪ್ರೀತಿ
ಸಿಗುತ್ತಿದೆಯಲ್ಲವೇ! ಒಳ್ಳೆಯದು.
ಇಂದು ಮಧುಬನದವರನ್ನು
ನೆನಪು ಮಾಡಿದೆವು. ಇವರು ಮುಂದೆ- ಮುಂದೆ ಕುಳಿತುಕೊಳ್ಳುತ್ತಾರಲ್ಲವೇ. ಮಧುಬನದವರು ಕೈ ಎತ್ತಿ.
ಎಲ್ಲರೂ ಮಧುಬನದ ಭುಜಗಳಾಗಿದ್ದೀರಿ. ಮಧುಬನದವರಿಗೆ ವಿಶೇಷವಾಗಿ ತ್ಯಾಗದ ಭಾಗ್ಯವು ಸೂಕ್ಷ್ಮದಲ್ಲಂತೂ
ಪ್ರಾಪ್ತಿ ಆಗುತ್ತದೆ ಏಕೆಂದರೆ ಪಾಂಡವಭವನದಲ್ಲಿ, ಮಧುಬನದಲ್ಲಿ, ಶಾಂತಿವನದಲ್ಲಿ ಇರಬಹುದು ಆದರೆ
ಮಿಲನ ಮಾಡುವವರಿಗೆ ಅವಕಾಶವು ಸಿಗುತ್ತದೆ. ಮಧುಬನದವರು ಸಾಕ್ಷಿಯಾಗಿ ನೋಡುತ್ತಿರುತ್ತಾರೆ. ಆದರೆ
ಹೃದಯದಲ್ಲಿ ಸದಾ ಮಧುಬನದವರ ನೆನಪು ಇದೆಯೇ? ಮಧುಬನದಿಂದ ವ್ಯರ್ಥದ ಹೆಸರು-ಗುರುತೂ ಸಹ ಸಮಾಪ್ತಿ
ಆಗಲಿ. ಸೇವೆಯಲ್ಲೂ, ಸ್ಥಿತಿಯಲ್ಲೂ ಎಲ್ಲದರಲ್ಲೂ ಮಹಾನ್, ಸರಿಯಲ್ಲವೇ. ಮಧುಬನದವರನ್ನು ಎಂದೂ
ಮರೆಯುವುದಿಲ್ಲ. ಮಧುಬನದವರಿಗೆ ತ್ಯಾಗದ ಅವಕಾಶವನ್ನು ಕೊಡುತ್ತೇವೆ. ಒಳ್ಳೆಯದು.
ವರದಾನ:
ಮಸ್ತಕದ ಮೂಲಕ
ಸಂತುಷ್ಠತೆಯ ಹೊಳಪಿನ ಬೆಳಕನ್ನು ತೋರಿಸುವಂತಹ ಸಾಕ್ಷಾತ್ಕಾರಮೂರ್ತಿ ಭವ
ಯಾರು ಸದಾ
ಸಂತುಷ್ಠರಾಗಿರುತ್ತಾರೆ, ಅವರ ಮಸ್ತಕದಿಂದ ಸಂತುಷ್ಠತೆಯ ಹೊಳಪು ಸದಾ ಬೆಳಗುತ್ತಿರುತ್ತದೆ,
ಒಂದುವೇಳೆ ಅವರನ್ನು ಯಾರೇ ಉದಾಸ ಆತ್ಮ ನೋಡಿದೊಡನೆ ಅವರೂ ಸಹ ಖುಶಿಯಾಗಿಬಿಡುತ್ತಾರೆ, ಅವರ ಉದಾಸತನ
ದೂರವಾಗಿಬಿಡುತ್ತದೆ. ಯಾರ ಬಳಿ ಸಂತುಷ್ಠ್ಠತೆಯ ಖುಶಿಯ ಖಜಾನೆಯಿರುತ್ತದೆ ಸ್ವತಃವಾಗಿ ಎಲ್ಲರೂ
ಅವರಿಗೆ ಆಕರ್ಷಿತರಾಗುತ್ತಾರೆ. ಅವರ ಖುಶಿಯ ಮುಖ ಚೈತನ್ಯ ಫಲಕವಾಗಿಬಿಡುವುದು ಯಾವುದು ಅನೇಕ
ಆತ್ಮರನ್ನು ಮಾಡಿದಂತಹವರ ಪರಿಚಯವನ್ನು ಕೊಡುತ್ತದೆ. ಈ ರೀತಿ ಸಂತುಷ್ಠವಾಗಿರುವ ಮತ್ತು ಸರ್ವರನ್ನೂ
ಸಂತುಷ್ಠ ಮಾಡುವಂತಹ ಸಂತುಷ್ಠ ಮಣಿಗಳಾಗಿ ಯಾರಿಂದ ಅನೇಕರಿಗೆ ಸಾಕ್ಷಾತ್ಕಾರವಾಗಲಿ.
ಸ್ಲೋಗನ್:
ನೋವನ್ನು
ಕೊಡುವವರ ಕೆಲಸವೇ ಆಗಿದೆ ನೋವನ್ನು ಕೊಡುವುದು ಮತ್ತು ನಿಮ್ಮ ಕೆಲಸವಾಗಿದೆ ನಿಮ್ಮನ್ನು
ರಕ್ಷಿಸಿಕೊಳ್ಳುವುದು.
ಅವ್ಯಕ್ತ ಸೂಚನೆ:
ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ
ಹೇಗೆ ತೆಂಗಿನಕಾಯಿಯನ್ನು
ಒಡೆದು ಉದ್ಘಾಟನೆ ಮಾಡುತ್ತೀರಿ, ರಿಬನ್ ಕತ್ತರಿಸಿ ಉದ್ಘಾಟನೆ ಮಾಡುತ್ತೀರಿ, ಹಾಗೆಯೇ ಏಕಮತ (ಒಂದೇ
ಮತ), ಏಕಬಲ (ಒಂದೇ ಬಲ), ಒಂದೇ ಭರವಸೆ ಮತ್ತು ಏಕತೆಯ ರಿಬನ್ ಕತ್ತರಿಸಿ ಮತ್ತು ನಂತರ ಸರ್ವರ
ಸಂತುಷ್ಟತೆಯ, ಪ್ರಸನ್ನತೆಯ ತೆಂಗಿನಕಾಯಿಯನ್ನು ಒಡೆಯಿರಿ. ಈ ನೀರು ಧರಣಿಯಲ್ಲಿ ಹಾಕಿ ನಂತರ ನೋಡಿ
ಸಫಲತೆ ಎಷ್ಟು ಆಗುತ್ತದೆ ಎಂದು.